text
stringlengths
0
182k
ಶಿವಮೊಗ್ಗ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ (ಸಂಪರ್ಕ : ೧೩.೫೬ ಉ ೭೫.೩೮ ಪೂ). ಇದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಿಂದ ೨೬೬ ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ. ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸ...
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋ...
ಜೋಗ ಅಥವಾ ಗೇರುಸೊಪ್ಪಿನ ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತ. ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಸ್ಥಳದಲ್ಲಿದೆ. ಜೋಗ ಜಲಪಾತವನ್ನು ವೀಕ್ಷಿಸುವ ತಾಣ ಜೋಗವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಒಂದು ಪ್ರಮುಖ ಪ್ರವಾಸಿ ತಾಣ. ಜೋಗ ಜಲಪಾತವು ಸುಮ...
ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ಯುಗದ ಕವಿ ಜಗದ ಕವಿ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿ...
ಟಿ.ಪಿ.ಕೈಲಾಸಂ ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ .ಕರ್ನಾಟಕ ಪ್ರಹಸನ ಪಿತಾಮಹ. ತಂಜಾವೂರು ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ಕನ್ನಡ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತ...
ಡಿ ವಿ ಜಿ(ಮಾರ್ಚ್ ೧೭, ೧೮೮೭ ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು. ಬಾಲ್ಯ ಜೀವನ ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನ...
ಕೂಡ್ಲಿ (ಕೂಡಲಿ) ಶಿವಮೊಗ್ಗ ಜಿಲ್ಲೆಯ ಒಂದು ಪುಟ್ಟ ಊರು. ಈ ಊರು ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರುತ್ತದೆ. ತುಂಗಾ ಮತ್ತು ಭದ್ರಾ ನದಿಗಳು, ಬೇರೆ ಬೇರೆಯಾಗಿ ಉಗಮಿಸಿ, ಕೂಡ್ಲಿ (ಕೂಡಲಿ) ಎಂಬಲ್ಲಿ ಈ ಜೀವನದಿಗಳ ಸಂಗಮವಾಗುತ್ತವೆ. ಈ ಊರು ತುಂಗಭದ್ರಾ ನದಿಗೆ ಜನ್ಮ ನೀಡುವ ಸ್ಥಳ. ಪ್ರಾಮುಖ್ಯತೆ ಆದಿ ಕಾಲದ ಸಂಗಮೇಶ್ವರ ದೇವಾಲಯ, ಸಂಗಮ ಹಾಗೂ ಪರಿಸರದ ವಿಹಂಗಮ ನೋಟ ಈ ಪ್ರದೇಶವನ್ನು ಸುಂದರಗೊಳಿಸ...
ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ. ಬೆಂಗಳೂರು ತಾಲೂಕು 392 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. 1956ರಲ್ಲಿ ಬೆಂಗಳೂರು 3 ತಾಲ್ಲೂಕುಗಳನ್ನು ಹೊಂದಿದ್ದು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಆನೇಕಲ್. 2020ರಲ್ಲಿ ಬೆಂಗಳೂರು 5 ತಾಲ್ಲೂಕು ಹೊಂದಿದ್ದು, ಬೆಂಗಳೂರು ತಾಲೂಕು...
ಇತಿಹಾಸ ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆ...
ಕನ್ನಡ ವಿಶ್ವಕೋಶವು ಮೀಡಿಯಾವಿಕಿಯನ್ನು ಬಳಸಿ ಕಟ್ಟಿರುವ ಸ್ವತಂತ್ರ ವಿಶ್ವಕೋಶ. ಈ ವಿಶ್ವಕೋಶ ಅನೇಕ ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ಜೂನ್ ೨೦೦೩ ರಲ್ಲಿ ಪ್ರಾರಂಭವಾಯಿತು. ಅನುವಾದಿಸಲು ಉತ್ಸಾಹವಿರುವವರು ಈ ಉಲ್ಲೇಖವನ್ನು ಓದಿಕೊಳ್ಳುವುದಾಗಿ ವಿನಂತಿ. ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಬಳಸಿಕೊಳ್ಳಬಹುದು. ಪೀಠಿಕೆ ಆಧುನಿಕ ಬದುಕಿ...
ಗಣಕೀಕರಣದಲ್ಲಿ ಯುನಿಕೋಡ್ ಎಂದರೆ ಒಂದು ಅಂತರರಾಷ್ಟ್ರೀಯ ನಿರ್ದಿಷ್ಟಮಾನ. ಇದರ ಧ್ಯೇಯ ಎಲ್ಲಾ ಮಾನವ ಭಾಷೆಗಳಲ್ಲಿ ಬೇಕಾಗುವ ಪ್ರತಿಯೊಂದು ಅಕ್ಷರಕ್ಕೂ ಆಕರದಲ್ಲಿ ಒಂದು ಅಪೂರ್ವ () ಇಂಟಿಜರ್ ಸಂಖ್ಯೆಯನ್ನು ಕೊಡುವುದು. ಈ ಕೋಡ್ ಸಂಖ್ಯೆಯನ್ನು ಕೋಡ್ ಪಾಯಿಂಟ್ ಎನ್ನುತ್ತಾರೆ. ಕೆಲವು ಟೀಕೆ, ಸಂಧಿಗ್ಧತೆ ಹಾಗೂ ತಾಂತ್ರಿಕ ತೊಂದರೆಗಳಿದ್ದರೂ ಸಹ ತಂತ್ರಾಂಶಗಳ ಅಂತರರಾಷ್ಟ್ರೀಯತೆಯಲ್ಲಿ () ಪ್ರಬಲ ಎನ್ಕ...
ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಅರಮನೆಗಳ ನಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ. ಮೈಸೂರನ್ನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯುತ್ತಾರ...
ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಪ್ರಾಚೀನ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಹಂಪೆ ಎಂದು ಕರೆಯಲ್ಪಡುವ ಈ ನಗರದ ಮಧ್ಯಭಾಗದಲ್ಲಿ ಪವಿತ್ರ ವಿರೂಪಾಕ್ಷ ದೇವಾಲಯವಿದೆ . ಸುತ್ತಲೂ ಇತರ ಪವಿತ್ರ ಸ್ಥಳಗಳು ಸಹ ಇವೆ ಸುಗ್ರೀವನ ಹುಟ್ಟೂರಾದ ಕಿಷ್ಕಿಂಧೆ ಇದ್ದ ಸ್ಥಳವೆಂದು ಹೇಳಲಾದ ಕ್ಷೇತ್ರವನ್ನು ಒಳಗೊಂಡಿವೆ. ಪ್ರಸ್ತು...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ...
ಇತಿವೃತ್ತ ಕನ್ನಡ ಬರವಣಿಗೆಯ ಪ್ರಪ್ರಥಮ ಉದಾಹರಣೆ ದೊರಕಿರುವುದು ತಾಳಗುಂದದ ಸಿಂಹಕಟಾಂಜನ ಶಾಸನ ದಲ್ಲಿ (ಸು. ಕ್ರಿ.ಶ೩೭೦ ರಿಂದ೪೫೦). ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ. ಉಪಲಬ್ಧವಾಗಿರುವ ಪ್ರಥಮ ಕನ್ನಡ ಪುಸ್ತಕವೆಂದರೆ ೯ ನೇ ಶತಮಾನದ ಅಮೋಘವರ್ಷ ನೃಪತುಂಗನ [[ಕವಿರಾಜಮಾರ್ಗ] ನೃಪತುಂಗನ ಆಸ್ಥಾನದ ಕವಿಯಾಗಿದ್ದ ಶ್ರೀವಿಜಯನ ಈ ಪುಸ್...
ಪಟ್ಟದಕಲ್ಲು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಪಟ್ಟಣಗಳಲ್ಲಿ ಒಂದು. ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ಪ್ರಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಗಳ ಗುಪಿಗೆ ಪಟ್ಟದಕಲ್ಲು ಪ್ರಸಿದ್ಧ. ಇಲ್ಲಿನ ಶಿಲ್ಪಕಲೆಯ ವಿಶಿಷ್ಟತೆ ದಕ್ಷಿಣಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿ ಎರಡನ್ನೂ ಇಲ್ಲಿ ಕಾಣಬಹುದು. ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವಶದ ರಾಜಧಾನಿಯಾಗಿತ್ತು . ಚ...
ವಿಜಯ ದಶಮಿ ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. ದಶ ಅಹರ್ > ದಶಹರ > ದಶರಾ > ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ...
ಟಿಪ್ಪು ಸುಲ್ತಾನನು (ಸುಲ್ತಾನ್ ಫತೇಹ್ ಅಲಿ ಸಾಹಬ್ ಟಿಪ್ಪು 1 ಡಿಸೆಂಬರ್ 1751 4 ಮೇ 1799), ಸಾಮಾನ್ಯವಾಗಿ ಶೇರ್ಎಮೈಸೂರ್ ಅಥವಾ ಮೈಸೂರು ಹುಲಿ ಎಂದು ಉಲ್ಲೇಖಿಸಲಾದವನು, ದಕ್ಷಿಣ ಭಾರತದ ಮೈಸೂರು ರಾಜ್ಯದ ಮುಸಲ್ಮಾನ ದೊರೆ. ಭಾರತ. ಅವನು ರಾಕೆಟ್ ಫಿರಂಗಿಗಳ ಪ್ರವರ್ತಕರಾಗಿದ್ದನು. ಅವನು ತನ್ನ ಆಡಳಿತದ ಅವಧಿಯಲ್ಲಿ ಹೊಸ ನಾಣ್ಯ ವ್ಯವಸ್ಥೆ ಮತ್ತು ಕ್ಯಾಲೆಂಡರ್, ಮತ್ತು ಹೊಸ ಭೂಕಂದಾಯ ವ್ಯವಸ್ಥೆಯನ...
ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಐತಿಹಾಸಿಕ ಸ್ಥಳ. ೧೩೩೬ರಿಂದ ೧೫೬೫ರವರೆಗೆ (13361565) ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪಿಯ ಮೊದಲನೆ ಹೆಸರು ಪಂಪಾ ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು ವಿಜಯನಗರ ಮತ್ತು ವಿರುಪಾಕ್ಷಪುರ ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ವಿಜಯನಗರ ಸಾಮ್ರಾಜ...
ಭಾರತದ ರಾಷ್ಟ್ರಗೀತೆ ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ. ಅವರು ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿ ಬರೆದ ಬ್ರಹ್ಮೋ ಮಂತ್ರದ ಮೊದಲ ೫ ಪ್ಯಾರಾಗಳನ್ನೇ ನಾವೀಗ ಹಾಡುತ್ತಿರುವುದು.ಈ ಗೀತೆಯನ್ನು ಜನವರಿ ೨೪, ೧೯೫೦ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು. ಇದಕ್ಕೆ ಸಂಗೀತ ಅಳವಡಿಸಿದ್ದು ರಾಮ್ ಸಿಂಗ್ ರಾಕೂರ್. ರಾಷ್ಟ್ರಗೀತೆಯನ್ನು ರಾಷ್ಟ್ರ ಧ್ವಜವನ್ನು ಹಾ...
ಪ್ರಜಾವಾಣಿ ಕರ್ನಾಟಕದ ಪ್ರಮುಖ ದಿನಪತ್ರಿಕೆ. ಪದ ಸಂಪದ, ಚಿನಕುರಳಿ ಮುಂತಾದ ಜನಪ್ರಿಯ ಅಂಕಣವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು. ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ. ಇತಿಹಾಸ ಸ್ವಾತಂತ್ರ್ಯಾನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿ ಪ್ರಮುಖವಾದುದು.೧೯೪೮ರಲ್ಲಿ ...
ಕೂಸೆ ಮುನಿಸ್ವಾಮಿ ವೀರಪ್ಪನ್ (ಜನವರಿ ೧೮, ೧೯೫೨ ಅಕ್ಟೋಬರ್ ೧೮, ೨೦೦೪) ಭಾರತದ ಕುಖ್ಯಾತ ದಂತಚೋರ, ನರಹಂತಕ. ತಮಿಳುನಾಡು ಹಾಗೂ ಕರ್ನಾಟಕದ ಮಧ್ಯೆ ಇರುವ ಸುಮಾರು ೬,೦೦೦ ಚದುರ ಕಿ.ಮೀ. ಕಾಡಿನಲ್ಲಿ ಜೀವನಪರ್ಯಂತ ವಾಸಿಸಿದ ಇವನು, ಅಲ್ಲಿಯೇ ತನ್ನ ಕಾರುಬಾರು ನೆಡೆಸುತ್ತಿದ್ದ. ಸುಮಾರು ೧೨೦ಕ್ಕೂ ಹೆಚ್ಚು ಜನರ ಕೊಲೆಗೆ ಕಾರಣವಾಗಿದ್ದ ಇವನು ಪೋಲಿಸರ ಕಣ್ಣಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಕಾಡಿನಲ್ಲ...
ಕನ್ನಡಕ್ಕೆ ವಿಕಿಮೀಡಿಯಾದ ತ್ರೈಮಾಸಿಕ ಸುದ್ದಿ ಪತ್ರವನ್ನು ಅನುವಾದಿಸಲಾಗುತ್ತಿದೆ. ಅನುವಾದ ಮಾಡಲು ಉತ್ಸಾಹ ಇರುವವರು ಈ ಪುಟವನ್ನು ವೀಕ್ಷಿಸಿರಿ. ಕನ್ನಡ ವಿಕಿಪೀಡಿಯಾಕ್ಕೆ ನಿರ್ವಾಹಕರಾಗುವ ಬಗ್ಗೆ ಮನವಿ ಸಲ್ಲಿಸಲು ವಿಕಿಪೀಡಿಯ:ನಿರ್ವಾಹಕ ಮನವಿ ಪುಟವನ್ನು ನೋಡಿ. ಪ್ರಚಲಿತ ಸುದ್ದಿಗಳನ್ನು ಸಂಪಾದಿಸಲು ಉತ್ಸಾಹವಿರುವವರು ಈ ಪುಟದ ಚರ್ಚೆ ಕಾಲಂನಲ್ಲಿ ಸಂದೇಶ ಬಿಡಬಹುದು. ಆಯ್ದ ದಿನಗಳ, ಪ್ರಮುಖ ದಿ...
ಚಾಲುಕ್ಯ ರಾಜವಂಶ ದಕ್ಷಿಣ ಭಾರತದಲ್ಲಿ ಕ್ರಿ.ಶ. ೫೫೦ ರಿಂದ ೭೫೦ ಮತ್ತು ಕ್ರಿ.ಶ. ೯೭೩ ರಿಂದ ೧೧೯೦ರ ವರೆಗೆ ಅಸ್ತಿತ್ವದಲ್ಲಿದ್ದ ರಾಜವಂಶ. ಬೆಳವಣಿಗೆ ಚಾಲುಕ್ಯ ವಂಶದ ಸ್ಥಾಪನೆ ಕ್ರಿ.ಶ. ೫೫೦ರಲ್ಲಿ ಮೊದಲನೆಯ ಪುಲಿಕೇಶಿಯಿಂದ ನಡೆಯಿತು.ಕೆಲವು ಇತಿಹಾಸಕಾರರ ಪ್ರಕಾರ ಚಾಲುಕ್ಯ ವಂಶದ ಪ್ರಥಮ ದೊರೆ ಜಯಸಿಂಹ ಎಂದೂ ಹೇಳಲಾಗುತ್ತದೆ. ಪುಲಿಕೇಶಿ ತನ್ನ ಆಡಳಿತಕ್ಕೆ ಆಗಿನ ಕಾಲದ ವಾತಾಪಿ (ಈಗ ಬಾದಾಮಿ, ಬಾಗಲ...
ಚಕ್ರವರ್ತಿ ಎಂದರೆ ಸಾರ್ವಭೌಮ, ಸಾಮ್ರಾಟ. ಒಂದು ರಾಜ್ಯದ ಅಧಿಪತಿ ರಾಜನೆನಿಸಿಕೊಂಡರೆ, ಅಂತಹ ರಾಜರುಗಳಿಗೆ ಅಧಿಪತಿಯಾದ ರಾಜಾಧಿರಾಜನಿಗೆ ಚಕ್ರವರ್ತಿ ಎಂದು ಕರೆಯಲಾಗುತ್ತಿತ್ತು. ಚಕ್ರವರ್ತಿ ಎನ್ನುವುದು ಪ್ರಾಚೀನ ಕಾಲದ ರಾಜರನ್ನುದ್ದೇಶಿಸಿ ಕೊಡುತ್ತಿದ್ದ ಬಿರುದು. ಬಹಳವಾಗಿ ದಂಡಯಾತ್ರೆಗಳಲ್ಲಿ ಯಶಸ್ವಿಯಾಗಿ ಹಲವು ಪ್ರಾಂತ್ಯಗಳನ್ನು ಗೆದ್ದು, ಏಕಚಕ್ರಾಧಿಪತ್ಯಕ್ಕೆ ಒಳಪಡಿಸುತ್ತಿದ್ದ, ಒಟ್ಟುಗೂಡಿ...
ಕುಮಾರವ್ಯಾಸ (ಕ್ರಿ.ಶ. ೧೩೫೦೧೪೦೦) ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. ಗದುಗಿನ ನಾರಾಯಣಪ್ಪ ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾ...
ರಾಹುಲ್ ಶರದ್ ದ್ರಾವಿಡ್ (ಜನನ: ಜನವರಿ ೧೧, ೧೯೭೩) ಇವರು ಭಾರತ ಕ್ರಿಕೆಟ್ ತಂಡದ ಆಟಗಾರರಲ್ಲೊಬ್ಬರು ಮತ್ತು ತಂಡದ ಮಾಜಿ ನಾಯಕ. ಮದ್ಯಪ್ರದೇಶ ಮೂಲದವರಾದ ದ್ರಾವಿಡ್ ಪೂರ್ಣ ಕನ್ನಡಿಗರು. ಟೆಸ್ಟ್ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸುವುದರಲ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಸ್ಥಾನ ಪಡೆದ ಭಾರತೀಯ. ಫೆಬ್ರುವರಿ ೧೪, ೨೦೦೭ ರಂದು ಅಂತರರಾಷ್ಟ್ರೀಯ...
ತುಂಗಾ ನದಿ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನದಿ. ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮೂಲಕ ಹರಿಯುತ್ತದೆ. ಸುಮಾರು 147 ಕಿ.ಮೀ. ದೂರದವರೆಗೆ ಹರಿದು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಭದ್ರಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಇದರ ನಂತರ ತುಂಗಭದ್ರಾ ಎಂಬ ಹೆಸರು ಪಡೆದು...
ಗಂಗ್ನಿಹೆಸ್ಸೊ ಸಾಂಪ್ರದಾಯಿಕ ದಹೊಮಿಯ ಹನ್ನೆರಡು ರಾಜರು ಗಳಲ್ಲಿ ಮೊದಲನೆಯವ. ಇವನ ರಾಜ್ಯಭಾರ ಸುಮಾರು ೧೬೨೦ರಲ್ಲಿ ನಡೆದಿರಬಹುದು. ಇವನ ಲಾಂಛನಗಳು ಒಂದು ಗಂಗ್ನಿಹೆಸ್ಸೊ ಪಕ್ಷಿ (ಈ ಪಕ್ಷಿ ಅವನ ಹೆಸರನ್ನು ಸೂಚಿಸುತ್ತಿತ್ತು), ಒಂದು ಡೋಲು, ಹಾಗೂ ಎಸೆಯುವಶಿಕಾರಿ ಮಾಡುವ ಕೋಲುಗಳು. ಇವನು ನಿಜವಾಗಿಯೂ ರಾಜನಾಗಿ ಕಾರ್ಯನಿರ್ವಹಿಸಿದ್ದು ಐತಿಹಾಸಿಕವಾಗಿ ಸ್ಪಷ್ಟವಿಲ್ಲ. ಆದರೆ ಇವನು ತನ್ನ ತಮ್ಮ ಡಾಕೊಡ...
ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦ ಬೆಂಗಳೂರಿನಲ್ಲಿ) ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ. ಕುಂಬ್ಳೆ ಲೆಗ್ ಸ್ಪಿನ್ನರ್. ಇವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ. ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು ಇದು ಅವರಿಗೆ ಕೊಡುಗೆ ಎಂಬಂತೆ ವೇ...
ಮದ್ರಾಸ್ ಇಲ್ಲಿಗೆ ಪುನರ್ನಿರ್ದೇಶಿಸುತ್ತದೆ. ಇತರ ಬಳಕೆಗಳಿಗಾಗಿ, ಮದ್ರಾಸ್ (ದ್ವಂದ್ವ ನಿವಾರಣೆ) ನೋಡಿ. ಚೆನ್ನೈ ಬಂದರು ಚೆನ್ನೈ ತಮಿಳುನಾಡಿನ ರಾಜಧಾನಿ. ಸಮುದ್ರ ತಟದಲ್ಲಿರುವ ಈ ಊರನ್ನು ಮದರಾಸು ಎಂದು ಕರೆಯಲಾಗುತ್ತಿತ್ತು. ಬ್ರಿಟಿಷರಿಂದ ಬಂದ ಈ ಹೆಸರನ್ನು ತಮಿಳುನಾಡು ಸರ್ಕಾರ ಚೆನ್ನೈ ಎಂದು ಬದಲಾಯಿಸಿತು. ಚೆನೈ ಉಚ್ಚಾರಣೆ ( ಬಗ್ಗೆ?) (), ಹಿಂದೆ ಮದ್ರಾಸ್ ಉಚ್ಚಾರಣೆ ಎಂದು ತಮಿಳುನಾಡು ರಾ...
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ...
ದಾವಣಗೆರೆ ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಅಲ್ಲದೆ, ಬೆಣ್ಣೆದೋಸೆಗೆ ದಾವಣಗೆರೆ ಪ್ರಸಿದ್ಧವಾಗಿದೆ. ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿಭತ್ತ, ಮತ್ತು ಇತರ ಪ್ರಮುಖ ವಾಣಿ...
ಜಯದೇವಪ್ಪ ಹಾಲಪ್ಪ ಪಟೇಲ್ (೧೯೩೦ ೨೦೦೦) ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರು. ಇವರು ಕರ್ನಾಟಕ ಸಂಯುಕ್ತ ಜನತಾ ದಳದ ಅಧ್ಯಕ್ಷರಾಗಿದ್ದು, ದೇವೇಗೌಡರ ನಂತರ ಮುಖ್ಯಮಂತ್ರಿ ಸ್ಥಾನವನ್ನು ಪಡೆದರು. ಸಮಾಜವಾದಿ ಚಳುವಳಿಯಲ್ಲಿ ಗೋಪಾಲ ಗೌಡರ ಜೊತೆಗೆ ಬಾಗವಹಿಸಿದವರಲ್ಲಿ ಇವರೂ ಒಬ್ಬರು. ಇವರು ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದ ನಾಯಕರಲ್ಲಿ ಒಬ್ಬರು. ಹೊರಗಿನ ಸಂಪರ್ಕಗಳು ಸ್ಮರಣಾರ್ಥ ಅಂತರಜಾ...
ಮೈಸೂರು ವಿಶ್ವವಿದ್ಯಾಲಯವು ಭಾರತದ ಒಂದು ಪ್ರಮುಖ ವಿಶ್ವವಿದ್ಯಾಲಯ. ಮೈಸೂರು ವಿಶ್ವವಿದ್ಯಾಲಯ ೩೯ ಇಲಾಖೆಗಳನ್ನು ಹೊಂದಿದೆ. ಒಟ್ಟು ೬೫ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿ.ಎಚ್.ಡಿ ಪದವಿಗಳನ್ನು ಇಲ್ಲಿ ಪಡೆಯಬಹುದಾಗಿದೆ. ಇತಿಹಾಸ ಮೈಸೂರು ವಿಶ್ವವಿದ್ಯಾಲಯವು ೧೯೧೬ರ ಜುಲೈ ೧೭ರಂದು ಮೈಸೂರಿನ ಆಗಿನ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಪ್ರಾರಂಭ ವಾದದ್ದು. ಥ...
ಶ್ರೀ ಮಧ್ವಾಚಾರ್ಯರು (೧೨೩೮೧೩೧೭) ದ್ವೈತಮತದ ಸ್ಥಾಪಕರು ಮತ್ತು ತತ್ವಜ್ಞಾನಿಗಳು. ಮಧ್ವಾಚಾರ್ಯರ ಜೀವನ ಶ್ರೀ ಮಧ್ವಾಚಾರ್ಯರು ಉಡುಪಿಯ ಹತ್ತಿರದಲ್ಲಿರುವ ಪಾಜಕ ಗ್ರಾಮದಲ್ಲಿ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿಗೆ ಜನಿಸಿದರು. ತಂದೆ ತಾಯಿ ವಾಸುದೇವನೆಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೆ ಅಸಾಧಾರಣ ಪ್ರತಿಭೆ ತೋರಿದ ವಾಸುದೇವ, ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ವಿಧ್ಯಾಭ್ಯಾಸ ಮತ್ತು ವೇದ...
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿ...
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ....
ಮಾಸ್ತಿ ವೆಂಕಟೇಶ ಅಯ್ಯಂಗಾರರು (ಜೂನ್ ೬ ೧೮೯೧ ಜೂನ್ ೬ ೧೯೮೬)ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವರು. ಇವರು ಶ್ರೀನಿವಾಸ್ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು.ಮಾಸ್ತಿ ಕನ್ನಡದ ಆಸ್ತಿ ಎಂದು ಪ್ರಖ್ಯಾತಿ ಹೊಂದಿದರು.ಇವರು ಸಣ್ಣ ಕಥೆಗಳ ಜನಕ ಎಂದು ಕರೆಯುತ್ತಾರೆ. ಬಾಲ್ಯ ಜೀವನ ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತ...
ಲಾಲ್ ಬಹಾದುರ್ ಶಾಸ್ತ್ರಿ (ಅಕ್ಟೋಬರ್ ೦೨, ೧೯೦೪ ಜನವರಿ ೧೧, ೧೯೬೬) ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು. ಜೀವನ ಲಾಲ್ ಬಹಾದ್ದೂರ್ ಮೊಘಲ್ ಸಾರಾಯ್ನಲ್ಲಿ ಜನಿಸಿದ್ದು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. ೧೯೨೬ ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರು...
ಜಾರ್ಜ್ ವಾಕರ್ ಬುಷ್ (ಜನನ: ಜುಲೈ ೬, ೧೯೪೬) ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಸಕ್ತ ಹಾಗೂ ೪೩ನೆಯ ಅಧ್ಯಕ್ಷರು. ಅವರ ಮೊದಲ ನಾಲ್ಕು ವರ್ಷಗಳ ಅಧ್ಯಕ್ಷತಾ ಅವಧಿ ಪ್ರಾರ೦ಭವಾದದ್ದು ಜನವರಿ ೨೦, ೨೦೦೧ ರಂದು. ತೀವ್ರವಾದ ಚುನಾವಣೆಯ ನಂತರ ಇನ್ನೊಂದು ಅವಧಿಗೆ ಅವರು ನವೆಂಬರ್ ೩, ೨೦೦೪ ರಂದು ಪ್ರಮುಖ ಎದುರಾಳಿ ಜಾನ್ ಕೆರಿ ಅವರನ್ನು ಸೋಲಿಸಿ ಪುನರಾಯ್ಕೆಯಾದರು. ಅವರ ಎರಡನೆಯ ಅಧ್ಯಕ್ಷತಾ ಅವಧಿ ಕೊನೆಗೊಳ...
ಧರಮ್ ಸಿಂಗ್ ಭಾರತದ ಕರ್ನಾಟಕ ರಾಜ್ಯದ ೧೭ನೆ ಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು . ಗುಲ್ಬರ್ಗ ಜಿಲ್ಲೆಯ, ಜೇವರಗಿ ತಾಲೂಕಿನ, ನೇಲೋಗಿ ಗ್ರಾಮದಲ್ಲಿ ೧೯೩೬ ರಲ್ಲಿ ಜನಿಸಿದ ಧರಂ ಸಿಂಗ್, ಹೈದರಾಬಾದ್ ನ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಹಾಗು ಎಲ್.ಎಲ್.ಬಿ. ಪದವಿಗಳನ್ನು ಪಡೆದಿದ್ದಾರೆ. ವಕೀಲರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ ಮೇಲೆ ೬೦ ರ ದಶಕದಲ್ಲಿ ಕಾಂಗ್ರೆಸ್...
ಸರ್ದಾರ್ ವಲ್ಲಭಭಾಯಿ ಪಟೇಲ್ (ಅಕ್ಟೋಬರ್ ೩೧, ೧೮೭೫ ಡಿಸೆಂಬರ್ ೧೫, ೧೯೫೦), ಸರ್ದಾರ್ ಪಟೇಲ್ ಎಂದೇ ಕರೆಯಲಾಗುವ, ಭಾರತದ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲೊಬ್ಬರು. ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಹಾಗೂ ಗೃಹಸಚಿವರಾಗಿದ್ದರು. ಅವರೊಬ್ಬ ವಕೀಲ(ಬ್ಯಾರಿಸ್ಟರ್) ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ಮುಖಂಡರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ...
ರಾಜಧಾನಿ (ಆಂಗ್ಲದಲ್ಲಿ ), ದೇಶದ ಅಥವಾ ರಾಜ್ಯದ ರಾಜಕೀಯ ಕೇಂದ್ರವನ್ನುದ್ದೇಶಿಸಿ ಹೇಳುವ ಹೆಸರು. ಹಿಂದಿನ ಕಾಲದಲ್ಲಿ ಸಂಸ್ಥಾನಗಳ ನಿಯಂತ್ರಣಕ್ಕೆ ಕೇಂದ್ರವಾಗಿದ್ದ ಊರುಗಳಿಗೂ ರಾಜಧಾನಿ ಎನ್ನುವ ಬಳಕೆಯುಂಟು. ಪ್ರಮುಖ ದೇಶಗಳ ರಾಜಧಾನಿಗಳ ಪಟ್ಟಿ ಭಾರತ ನವದೆಹಲಿ ಶ್ರೀಲಂಕಾ ಕೊಲಂಬೊ ಪಾಕಿಸ್ತಾನ ಇಸ್ಲಾಮಾಬಾದ್ ಅಮೇರಿಕ ವಾಷಿಂಗ್ಟನ್ ರಶ್ಶಿಯಾ ಮಾಸ್ಕೊ ಫ್ರಾನ್ಸ್ ಪ್ಯಾರಿಸ್ ಕೆನಡಾ ಒಟ್ಟಾವ ಇಟಲಿ ರೋಮ...
ಪ್ಯಾರಿಸ್ ಫ್ರಾನ್ಸ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಫ್ರಾನ್ಸ್ನ ಉತ್ತರ ಭಾಗದಲ್ಲಿರುವ ಸೈನ್ ನದಿಯ ತೀರದಲ್ಲಿ ಸ್ಥಿತವಾಗಿದೆ. ಕನ್ನಡ ಸಿನೆಮಾದಲ್ಲಿ ಪ್ಯಾರಿಸ್ ಇತ್ತೀಚೆಗೆ ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶಿಸಿದ ಸಿನೆಮಾ ಪ್ಯಾರಿಸ್ ಪ್ರಣಯ ಹೊರಬಂದಿತ್ತು. ಇದರ ಕಥೆ ಪ್ಯಾರಿಸ್ ಸುತ್ತ ಹೆಣೆಯಲಾಗಿದ್ದು, ಪ್ಯಾರಿಸ್ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ಯಾರಿಸ್ ಪ್ರ...
ಹಾಸನವು ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ಕಾರ್ಯಸ್ಥಾನ. ದಕ್ಷಿಣ ಭಾರತದ ವಿಸ್ತಾರದ ಆಳ್ವಿಕೆಯನ್ನೊಳಗೊಂಡ ಮತ್ತು ಬಲಿಷ್ಠ ಸಾಮ್ರಾಜ್ಯಗಳಲ್ಲಿ ಒಂದಾದ ಹೊಯ್ಸಳರು ತಮ್ಮ ಆಳ್ವಿಕೆಯ ಉತ್ತುಂಗದಲ್ಲಿ ಹಾಸನ ಜಿಲ್ಲೆಯನ್ನು ತಮ್ಮ ಆಡಳಿತದ ಕೇಂದ್ರ ಸ್ಥಾನವನ್ನಾಗಿಸಿಕೊಂಡಿದ್ದರು. ಹಾಸನ ಜಿಲ್ಲೆಯ ಬೇಲೂರು ಅವರ ರಾಜಧಾನಿಯಾಗಿತ್ತು. ಮುಂದೆ ಅವರು ೧೦೦೦ ೧೩೩೪ರ ಕಾಲದಲ್ಲಿ ತಮ್ಮ ರಾಜಧಾನಿಯನ್ನು ಹಳೇಬೀಡಿಗೆ...
ಹಿನ್ನೆಲೆ ನಮ್ಮ ಕರ್ನಾಟಕ ರಾಜ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಅವರ ಸುಗಮ ಆಡಳಿತದ ಕಾರಣಕ್ಕಾಗಿ ವಿವಿಧ ಜಿಲ್ಲೆಗಳನ್ನು ರಚಿಸಲಾಯಿತು. ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರಗಳು ಬದಲಾಗಿವೆ. ಕೆಲವು ಜಿಲ್ಲೆಗಳು ಚಿಕ್ಕದಾಗಿದ್ದು, ಕೆಲವು ವಿಸ್ತಾರಗೊಂಡಿವೆ. ಕೆಲವೊಂದು ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಎರಡು ಜಿಲ್ಲೆಗಳನ್ನು ರಚಿಸಲಾಗಿದೆ. ಈ ಜಿಲ್ಲೆಗಳ ...
ದಕ್ಷಿಣ ಕನ್ನಡ (ತುಳು: ಕುಡ್ಲ) ಕರ್ನಾಟಕ ರಾಜ್ಯದ ಒಂದು ಕರಾವಳಿ ಜಿಲ್ಲೆ. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ ೨೦,೮೯,೬೪೯ ಆಗಿದ್ದು ಇದರಲ್ಲಿ ಪುರುಷರು ೧೦,೩೪,೭೧೪ ಹಾಗೂ ಮಹಿಳೆಯರು ೧೦,೫೪,೯೩೫ (೨೦೧೧ರ ಜನಗಣತಿಯಂತೆ) . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿವೆ. ಅವೆಂದರೆ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಬೆಳ್ತಂಗಡ...
ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲ ಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸಿದಂತ ಹಲವಾರು ಸ್ಥಳಗಳು ಕೋಲಾರದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿವೆ ಅದರಲ್ಲೂ ಮುಖ್ಯವಾಗಿ...
ಕೊಡಗು ಜಿಲ್ಲೆ (ಕೊಡಗನ್ನು ಕೊಡವ ನಾಡ್ ಎಂದು ಕರೆಯಲಾಗುತ್ತದೆ), ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ. ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ...
ಧಾರವಾಡ ಕರ್ನಾಟಕ ರಾಜ್ಯದ ಒಂದು ನಗರ ಧಾರವಾಡ ನಗರ ಧಾರವಾಡ ಜಿಲ್ಲೆಯ ಕೇಂದ್ರಸ್ಥಳ. ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ...
ಚಾಮರಾಜನಗರ ದಕ್ಷಿಣ ಕರ್ನಾಟಕದಲ್ಲಿರುವ ಒಂದು ಜಿಲ್ಲೆ. ಮೊದಲಿಗೆ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ. ಈ ಜಿಲ್ಲೆಯ ಕೇಂದ್ರ ಅದೇ ಹೆಸರಿನ ಪಟ್ಟಣ. ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕುಗಳು ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ. ಇತ್ತೀಚೆಗೆ ಹನೂರು ತಾಲೂಕು ರಚನೆಯಾಯಿತು. ಇತಿವೃತ್ತ ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಪ...
ಗದಗ () () ಉತ್ತರ ಕರ್ನಾಟಕದ ಒಂದು ಜಿಲ್ಲೆ. ಗದಗ ಪಟ್ಟಣ ಈ ಜಿಲ್ಲೆಯ ಕೇಂದ್ರ. ಕೆಲವು ವರ್ಷಗಳ ಹಿಂದಿನವರೆಗೂ ಗದಗ, ಧಾರವಾಡ ಜಿಲ್ಲೆಯ ಭಾಗವಾಗಿದ್ದಿತು. ಈ ಜಿಲ್ಲೆಯ ಜನಸಂಖ್ಯೆ ಸುಮಾರು ೧೦ ಲಕ್ಷ. ಇತಿವೃತ್ತ ಗದಗ ಜಿಲ್ಲೆಯು ಪುರಾತನ ಕವಿಗಳಿಗೆ ಪ್ರಸಿದ್ಧ. ಕುಮಾರವ್ಯಾಸ, ಪಂಪ, ಲಕ್ಷ್ಮೀಶ ಮೂಲತಃ ಗದಗದವರು. ಆಧುನಿಕ ಕವಿಗಳಾದ ಆಲೂರು ವೆಂಕಟರಾಯ, ಚೆನ್ನವೀರ ಕಣವಿ ಕೂಡ ಇದೇ ಜಿಲ್ಲೆಗೆ ಸೇರಿದವರು...
ಮಂಡ್ಯ ಕರ್ನಾಟಕದ ಒಂದು ಜಿಲ್ಲೆ ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯವು ಮೈಸೂರು ಮತ್ತು ಬೆಂಗಳೂರು ನಗರಗಳ ನಡುವೆ ಇದೆ. ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ. ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೧೧ ರ ಜನಗಣತಿಯಂತೆ ಇಲ್ಲಿನ ಮಂದಿಎಣಿಕೆ ೧೭,೬೧,೭೧೮(೮೮೭೩೦೭ ಗಂಡಸರು, ೮೭೪೪೧೧ ಹೆಂಗಸರು). ಇಲ್ಲಿಯ ಮಂದಿ ಪ್ರಮುಖ ಕಸುಬು ಆರಂಬ. ಜಿಲ್ಲೆಯ ಪ್...
ರಾಯಚೂರು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ, ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆ. ರಾಯಚೂರು ಜಿಲ್ಲೆಯ ಜನಸಂಖ್ಯೆ ೨೦೦೧ ರ ಜನಗಣತಿಯಂತೆ ೧೬,೪೮,೨೧೨. ರಾಯಚೂರು ಜಿಲ್ಲೆಯಲ್ಲಿ ೭ ತಾಲೂಕುಗಳಿವೆ: ರಾಯಚೂರು, ದೇವದುರ್ಗ, ಸಿಂಧನೂರು, ಮಾನವಿ,, ಲಿಂಗಸುಗೂರು, ಮಸ್ಕಿ , ಸಿರವಾರ . ಜಿಲ್ಲಾಕೇಂದ್ರ ರಾಯಚೂರು ನಗರ. ಇದು ಬೆಂಗಳೂರಿನಿಂದ ೪೦೯ ಕಿ. ಮೀ. ದೂರದಲ್ಲಿದೆ. ಇತಿಹಾಸ ಸಾಮ್ರಾಟ್ ಅಶೋಕನ...
ವಿಜಯನಗರದ ಕರ್ನಾಟಕ ರಾಜ್ಯದ ಒಂದು ಪ್ರಮುಖ ಜಿಲ್ಲೆ ಇದೇ ಹೆಸರಿನ ನಗರ ಜಿಲ್ಲೆಯ ರಾಜಧಾನಿ. ಇಲ್ಲಿನ ಪ್ರಸಿದ್ಧ ಸ್ಥಳಗ ಳಲ್ಲಿ ಹಂಪೆ ಮತ್ತು ಅಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ ಹೊಸಪೇಟೆ ಇಲ್ಲಿರುವ ತುಂಗಭದ್ರಾ ಅಣೆಕಟ್ಟು ಕೃಷಿಗೆ ನೀರನ್ನು ಒದಗಿಸುತ್ತದೆ.ಬಳ್ಳಾರಿ ಜಿಲ್ಲೆಯು 1956 ಕ್ಕಿಂತ ಮುಂಚೆ ಮದ್ರಾಸ್ ಪ್ರಾಂತ್...
ಡಾ. ಸಿ. ವಿ. ರಾಮನ್ (ಸರ್ ಸಿ.ವಿ. ರಾಮನ್) (ನೋಬೆಲ್ ಪ್ರಶಸ್ತಿ ವಿಜೇತರು) ಡಾ. ಜಗದೀಶ್ಚಂದ್ರ ಬೋಸ್ (ಸರ್ ಜೆ. ಸಿ. ಬೋಸ್) ಸತ್ಯೇಂದ್ರನಾಥ ಬೋಸ್ ಮೇಘನಾದ ಸಾಹ ಜೆ. ಬಿ. ಎಸ್. ಹಾಲ್ಡೇನ್ (ಹುಟ್ಟಿನಿಂದ ಅಂಗ್ಲೇಯರಾದರೂ ನಂತರ ಭಾರತದಲ್ಲಿ ನೆಲಸಿ ಭಾರತದ ಪೌರರಾದವರು) ಶ್ರೀನಿವಾಸ ರಾಮಾನುಜನ್ ಹೋಮಿ ಜಹಂಗೀರ್ ಭಾಬ ವಿಕ್ರಮ್ ಸಾರಾಭಾಯಿ ಹರಗೋಬಿಂದ ಖುರಾನ (ನೋಬೆಲ್ ಪ್ರಶಸ್ತಿ ವಿಜೇತರು) ಸುಬ್ರಮಣ್...
ಸರ್ ಸಿ.ವಿ.ರಾಮನ್ ( ..) ಎಂದು ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ, ಚಂದ್ರಶೇಖರ ವೆಂಕಟರಾಮನ್ ರವರು ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ. ಅಷ್ಟೇ ಏಕೆ, ಏಷ್ಯದಲ್ಲೇ ಮೊತ್ತಮೊದಲ ಬಾರಿಗೆ ನೊಬೆಲ್ ಪಾರಿತೋಷಿಕ ಪಡೆದ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ ರಾಮನ್ ಎಫೆಕ್ಟ್ ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆ...
ಸರ್ ಜಗದೀಶ್ಚಂದ್ರ ಬೋಸ್, ಸಿಎಸ್ಐ, ಸಿಐಈ, ಎಫ್ಆರ್ಎಸ್ (ನವೆಂಬರ್ ೩೦, ೧೮೫೮ ನವೆಂಬರ್ ೨೩, ೧೯೩೭) ಒಬ್ಬ ಬಹುಮುಖ ಪ್ರತಿಭೆಯ ಬಂಗಾಲಿ ಮೂಲದ ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನಡೆಸಿದ್ದ ಬೋಸರು ಅವರ ಕಾಲದ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾಗಿದ್ದರು. ಬೋಸರು ಸಸ್ಯಗಳು ಸಹ ಪ್...
ಚಿತ್ರದುರ್ಗ ನಗರ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕೇಂದ್ರ ನಗರ. ಈ ನಗರವು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 200ಕಿಮೀ ದೂರದಲ್ಲಿದೆ. ಹೆಸರಿನ ಮೂಲ ಚಿತ್ರದುರ್ಗ ನಗರವು ಪುರಾಣದ ಪ್ರಕಾರ ಶ್ರೀಕೃಷ್ಣ ಜಾಂಬವತಿಯ ಪುತ್ರನಾದ ಚಿತ್ರಕೇತು ಆಳ್ವಿಕೆ ಮಾಡಿದ ಪ್ರದೇಶ. ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲುಬೆಟ್ಟಗಳಿಂದ ಹಾಗೂ ಹುಲ್ಲುಗಾವಲು ಗಳಿಂದ ಕೂಡಿದ ದುರ್ಗಮ ...
ಸುಗ್ರೀವ ರಾಮಾಯಣದಲ್ಲಿ ರಾಮನಿಗೆ ರಾವಣನನ್ನು ತಲುಪಲು ಸಹಾಯ ಮಾಡುವ ವಾನರ ರಾಜ. ಇವನ ಊರು ಪುರಾಣದಲ್ಲಿ ಕಿಷ್ಕಿಂಧ. ಇವನು ರಾಮನ ಸಹಾಯ ಪಡೆದು ತನ್ನ ಅಣ್ಣನಾದ ವಾಲಿಯನ್ನು ಸದೆಬಡಿಯುತ್ತಾನೆ. ವಾನರ ಸೈನ್ಯವನ್ನು ಲಂಕೆಯೆಡೆಗೆ ಹೊರಡಿಸಿ ರಾಮನಿಗೊಪ್ಪಿಸಿ, ರಾಮಾಯಣದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ. ಪುರಾಣ ವಿಜಯನಗರ[ಹ೦ಪಿ] ಸುಗ್ರೀವನ ಗುಹೆ ವಿಜಯನಗರದ ಸುಗ್ರೀವನ ಗುಹೆ ಒಂದು ಪ್ರಾಕೃತಿಕ ಗುಹೆ, ...
ಉಡುಪಿ () ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಶುದ್ಧವಾದ ವೈಷ್ಣವಮತ ಪ್ರತಿಪಾದಿಸಿದ ತ್ರೈಲೋಕ್ಯಾಚಾರ್ಯರಾದ ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿಯೇ. ಶ್ರೀ ವ್ಯಾಸತೀರ್ಥರು, ಶ್ರೀಮದ್ ವಾದಿರಾಜ ತೀರ್ಥರು, ಶ್ರೀರಾಘವೇಂದ್ರ ತೀರ್ಥ ಗುರುರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು ಈ ಎಲ್ಲ ಮಹನೀಯರೂ ಸಹ ಶ್ರೀಮನ್ ಮಧ್ವಾಚಾರ್ಯರನ್ನು ...
ತುಮಕೂರು ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ತುಮ್ಮೆಗೂರು. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬೆಂಗಳೂರಿನಿಂದ ೭೦ ಕಿ.ಮಿ. ದೂರದಲ್ಲಿದೆ.ಈ ತುಮಕೂರು ಜಿಲ್ಲೆ ರಚನೆಯಾದ ವರ್ಷ 1111956 ಇದರ ವಿಸ್ತೀರ್ಣ10,597 ಚ.ಕೀ.ಮೀ ತುಮಕೂರು ಜಿಲ್ಲೆ 1832 ರಲ್ಲಿ ಅಸ್ತಿತ್ವಕ್ಕೆ ಬಂದಿತು ದಕ್ಷಿಣ ಕರ್ನಾಟಕ ರಾಜ್ಯದಲ್ಲಿರುವ ಪ್ರಮುಖ ನಗರವಾಗಿದೆ ತುಮಕೂರು ಜಿಲ್ಲೆ ಅ...
ಬೆಳಗಾವಿಯು ಕರ್ನಾಟಕದ ವಾಯುವ್ಯ ಭಾಗದಲ್ಲಿ ಇರುವ ನಗರ ಮತ್ತು ಜಿಲ್ಲೆ. ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಹಾಗು ಪ್ರಮುಖ ನಗರಗಳಲ್ಲೊಂದು. ಇಂಡಾಲ್ (ಭಾರತೀಯ ಅಲ್ಯೂಮಿನಿಯಮ್ ಕಂಪನಿ) ಬೆಳಗಾವಿಯಲ್ಲಿದೆ. ಇದಲ್ಲದೆ ಭಾರತೀಯ ಸೇನಾ ಪಡೆಗಳಿಗೆ ಸಂಬಂಧಪಟ್ಟ ಕೆಲವು ತರಬೇತಿ ಶಿಬಿರಗಳು ಮತ್ತು ಭಾರತೀಯ ವಾಯುಸೇನೆಯ ಒಂದು ವಿಮಾನ ನಿಲ್ದಾಣ ಬೆಳಗಾವಿಯಲ್ಲಿವೆ. ಚರಿತ್ರೆ ಬೆಳಗಾವಿಯ ಪುರಾತನ ಹೆಸರು ವೇಣುಗ್ರಾಮ...
ಬಾಗಲಕೋಟೆ ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಈ ಜಿಲ್ಲೆ ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು ಹಾಗೂ ಬಿಜಾಪುರಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ ಕರ್ನಾಟಕ ಸರ್ಕಾರದ ಪ್ರಕಟಣೆ ಆರ್ಡಿ ೪೨ ಎಲ್ಆರ್ಡಿ ೮೭ ಭಾಗ ೩ ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಜ...
ಬೀದರ್ (ಕನ್ನಡ: ಬೀದರ, ಉರ್ದು: ) ಒಂದು ಡೆಕ್ಕನ್ ಪ್ರಸ್ಥಭೂಮಿಯಲ್ಲಿರುವ, ಬೆಟ್ಟದ ತುದಿಯಲ್ಲಿರುವ ನಗರ. ಇದು ಭಾರತದ ಕರ್ನಾಟಕ ರಾಜ್ಯದ ಪೂರ್ವಭಾಗದಲ್ಲಿದೆ. ಇದು ಬೀದರ್ ಜಿಲ್ಲೆಯ ಜಿಲ್ಲಾಕೇಂದ್ರ. ಬೀದರ್ ಜಿಲ್ಲೆ ಮಹಾರಾಷ್ಟ್ರ ಮತ್ತು ತೆಲಂಗಾಣದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ ಮತ್ತು ಇದು ಬೀದರ್ ಮಹಾನಗರ ವಲಯಕ್ಕೆ ಸೇರುತ್ತದೆ. ...
ಚಿಕ್ಕಮಗಳೂರು ಭಾರತ ದೇಶದ, ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಎಂದು ಸಹ ಕರೆಯಲ್ಪಡುತ್ತದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ದತ್ತಗಿರಿ ಚಂದ್ರದ್ರೋಣ ಪರ್ವತ ಭಾಗಗಳಲ್ಲಿ ಬೆಳೆಯಲಾಯಿತು. ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು, ತುಂಗಾ ಮತ್ತು ಭದ್ರಾ ನದಿಗಳ ಮೂಲಸ್ಥಾನವಾಗಿದೆ. ಕರ್ನಾಟಕದ ಅತ್ಯಂತ ಎತ್...
ಅಜೆರ್ಬೈಜಾನ್ನ ಹಳ್ಳಿಗಾಗಿ, ಹೋವರಿ ನೋಡಿ . ಹಾವೇರಿ ಭಾರತದ ಕರ್ನಾಟಕದ ಒಂದು ನಗರ, ಇದು ಹಾವೇರಿ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ಹಾವೇರಿ ಎಂಬ ಹೆಸರು ಹಾವು ಮತ್ತು ಕೇರಿ ಎಂಬ ಕನ್ನಡ ಪದಗಳಿಂದ ಬಂದಿದೆ, ಇದರರ್ಥ ಹಾವುಗಳ ಸ್ಥಳ . ಏಲಕ್ಕಿ ಹೂಮಾಲೆಗಳಿಗೆ ಹಾವೇರಿ ಪ್ರಸಿದ್ಧವಾಗಿದೆ. ಪ್ರಾಚೀನ ದಿನಗಳಲ್ಲಿ ಹಾವೇರಿಯಲ್ಲಿ ಸುಮಾರು 1000 ಮಠಗಳು (ಪವಿತ್ರ ಧಾರ್ಮಿಕ ಸ್ಥಳಗಳು ಕನ್ನಡ ಥಾಥ್) ಇದ್ದವು...
ಕೊಪ್ಪಳ ಜಿಲ್ಲೆ ೧೪೧೯೯೮ ರಂದು ಆರಂಭವಾದ ಕರ್ನಾಟಕ ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದೆ. ೭೧೯೦ ಚ.ಕಿಮಿ ವಿಸ್ತೀರ್ಣ ಮತ್ತು ೨೦೧೧ ರ ಜನಗಣತಿಯ ಪ್ರಕಾರ ೧೩.೮೯ ಲಕ್ಷ ಜನಸಂಖ್ಯೆ ಕೊಪ್ಪಳ ಜಿಲ್ಲೆ ಹೊಂದಿರುತ್ತದೆ. ಗಂಗಾವತಿ, ಕೊಪ್ಪಳ,ಯಲಬುರ್ಗಾ, ಕುಷ್ಟಗಿ ಮತ್ತು ೨೦೧೭ರಲ್ಲಿ ಹೊಸದಾಗಿ ಘೋಷಣೆಯಾದ ಕುಕನೂರು, ಕನಕಗಿರಿ ಹಾಗು ಕಾರಟಗಿ ಈ ಜಿಲ್ಲೆಯಲ್ಲಿರುವ ತಾಲೂಕುಗಳು. ಐತಿಹಾಸಿಕವಾಗಿ, ಸಾಂಸ್ಕ್ರ...
ಉತ್ತರ ಕನ್ನಡ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆ ಗೋವಾ ರಾಜ್ಯ, ಬೆಳಗಾವಿ, ಧಾರವಾಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಪಶ್ಚಿಮಕ್ಕೆ ಅರಬ್ಬೀ ಸಮುದ್ರ ವಿದೆ. ಬಹುತೇಕ ಅರಣ್ಯಪ್ರದೇಶದಿಂದ ಕೂಡಿರುವ ಉತ್ತರಕನ್ನಡ ಜಿಲ್ಲೆ, ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಸುಂದರ ಜಲಪಾತಗಳಿವೆ. ಕರ್ನಾಟಕದ ಪ್ರಖ್ಯಾತ ಜಾ...
ಈ ಲೇಖನ ಶೋಧನೆಯನ್ನೂ, ಶೋಧಕರನ್ನೂ (ಯಾರ ಹೆಸರಿಂದ ಆ ಶೋಧನೆ ಕರೆಯಲ್ಪಡುತ್ತದೋ ಅವರನ್ನು) ಪಟ್ಟಿ ಮಾಡುತ್ತದೆ. ಆರ್ಕಿಮಿಡೀಸ್ನ ಸ್ಕ್ರೂ ಆರ್ಕಿಮಿಡೀಸ್ ಆರ್ಮ್ಸ್ಟ್ರಾಂಗ್ ಪಿಸ್ತೂಲು ವಿಲ್ಲಿಯಮ್ ಜಾರ್ಜ್ ಆರ್ಮ್ಸ್ಟ್ರಾಂಗ್ ಬೇಕಲೈಟ್ ಲಿಯೋ ಬೇಕಲ್ಯಾಂಡ್ ಬಾರ್ಬೀ ಬೊಂಬೆ ಬಾರ್ಬರಾ ರುತ್ ಹ್ಯಾಂಡ್ಲರ್ನ ಮಗಳು, ಬಾರ್ಬಿಯ ಸೃಷ್ಟಿಕರ್ತೆ. ಬೆಸ್ಸಿಮರ್ ಪರಿವರ್ತಕ ಹೆನ್ರಿ ಬೆಸ್ಸಿಮರ್ ಬಿರೊ, (ಬಾಲ್ಪಾಯಿಂ...
() ಮಕ್ಕಳ ದಿನಾಚರಣೆಯು ಮಕ್ಕಳ ಗೌರವಾರ್ಥವಾಗಿ ವಾರ್ಷಿಕವಾಗಿ ಆಚರಿಸಲಾಗುವ ಸ್ಮರಣಾರ್ಥ ದಿನಾಂಕವಾಗಿದೆ, ಅವರ ಆಚರಣೆಯ ದಿನಾಂಕವು ದೇಶದಿಂದ ಬದಲಾಗುತ್ತದೆ.೧೯೨೫ ರಲ್ಲಿ, ಜಿನೀವಾದಲ್ಲಿ ಮಕ್ಕಳ ಕಲ್ಯಾಣ ಕುರಿತ ವಿಶ್ವ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಮಕ್ಕಳ ದಿನವನ್ನು ಮೊದಲು ಘೋಷಿಸಲಾಯಿತು.೧೯೫೦ರಿಂದ, ಹೆಚ್ಚಿನ ಕಮ್ಯುನಿಸ್ಟ್ ಮತ್ತು ನಂತರದ ಕಮ್ಯುನಿಸ್ಟ್ ದೇಶಗಳಲ್ಲಿ ಇದನ್ನು ಜೂನ್ 1 ರಂದು ಆಚ...
ಯಾಸಿರ್ ಅರಾಫತ್ (ಅರಬಿಕ್: : ) (ಜನನ: ಆಗಸ್ಟ್ ೧೯೨೯)ಪ್ಯಾಲಿಸ್ಟೈನ್ ಪ್ರಾಧಿಕಾರದ ಅಧ್ಯಕ್ಷರು(೧೯೯೩ ರಿಂದ, ೧೯೯೬ ರಲ್ಲಿ ಈ ಸ್ಥಾನಕ್ಕೆ ಚುನಾಯಿತರಾದರು). ಫತಾ ದ ನಾಯಕರು ಮತ್ತು ೧೯೬೯ ರಿಂದ ಪ್ಯಾಲೆಸ್ಟೈನ್ ವಿಮೋಚನಾ ಸಂಸ್ಥೆಯ (ಪಿಎಲ್ಒ) ಅಧ್ಯಕ್ಷರು. ೧೯೯೪ ರ ಶಾಂತಿ ನೊಬೆಲ್ ಬಹುಮಾನವನ್ನು ಪಡೆದವರಲ್ಲಿ ಒಬ್ಬರು. ಸಾಕಷ್ಟು ವಿವಾದವನ್ನು ಸೃಷ್ಟಿಸಿರುವ ಅರಾಫತ್ ಕೆಲವರ ದೃಷ್ಟಿಯಲ್ಲಿ ಭಯೋತ್ಪಾ...
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ ಏಪ್ರಿಲ್ ೫ ೨೦೦೭) ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂ...
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾ...
ಕೋಟಾ ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨ಸೆಪ್ಟೆಂಬರ್ ೧೨, ೧೯೯೭) ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿ...
ಗೋಕಾಕ್ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಜಿಲ್ಲೆಯಲ್ಲಿ ಸುಪ್ರಸಿದ್ಧ ಗೋಕಾಕ ಜಲಪಾತವಿದೆ. ಈ ಜಲಪಾತದಡಿಯಲ್ಲಿ ವಿದ್ಯುತ್ಚಕ್ತಿಯನ್ನು ಉತ್ಪಾದಿಸಲಾಗುತ್ತದೆ.ಗೋಕಾಕ ನಗರವು ಮೂಲತ: ಒಂದು ವಾಣಿಜ್ಯ ನಗರವಾಗಿದೆ. ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯು ಬೆಲ್ಲ , ಗೋವಿನ ಜೊಳ ಮತ್ತು ಹತ್ತಿಯ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ಇತ್ತಿಚಿಗೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕೈಗಾರಿಕಾ...
ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ಅವರು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದರು ಮತ್ತು ನವ ಚಳುವಳಿಯ ಪ್ರವರ್ತಕರಲ್ಲಿ ಒ...
ಗಿರೀಶ್ ಕಾರ್ನಾಡ್ (೧೯ ಮೇ ೧೯೩೮ ೧೦ ಜೂನ್ ೨೦೧೯) ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ. ಜೀವನ ಗಿರೀಶ ಕಾರ್ನಾಡ್ರು ೧೯೩೮ ಮೇ ೧೯ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ...
ಎಂ. ಗೋಪಾಲಕೃಷ್ಣ ಅಡಿಗ : (೧೮ ಫೆಬ್ರುವರಿ ೧೯೧೮ ೧೪ ನವೆಂಬರ ೧೯೯೨) ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರೂರು. ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರ...
ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷ...
ಎಸ್ ಎಮ್ ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ) (ಜನನ೧೯೩೨) ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. ೧೯೯೯ ರಿಂದ ೨೦೦೪ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ...
ಆಂಗ್ಲರ ಆಳ್ವಿಕೆಯ ಸಂದರ್ಭ ಕನ್ನಡಕ್ಕೆ ಸಿಕ್ಕುತ್ತಿದ್ದ ಅಷ್ಟಿಷ್ಟು ಗೌರವದ ಜೊತೆಗೆ ಸಾಹಿತ್ಯ ದಿಗ್ಗಜರು ಭಾಷಾ ಪ್ರೇಮ, ಸಾಹಿತ್ಯ ಸಂಸ್ಕೃತಿ ಬಗ್ಗೆ ಆಳವಾದ ಚಿಂತನೆಗೆ ತೊಡಗಿದ್ದರು. ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ಹಲವು ಸಾಹಿತಿಗಳು ಸ್ವಾತಂತ್ರ ಹೋರಾಟದಲ್ಲಿ ನೇರಭಾಗವಹಿಸಿದ್ದರು. ಕಾವ್ಯ, ಕತೆ, ಲೇಖನಗಳ ಮೂಲಕ ಜನಜಾಗೃತಿಗೆ ತೊಡಗಿದರು. ಆದರ್ಶದ ಬೆನ್ನು ಹತ್ತಿ ನಾಡುನುಡಿಗೆ ಚಿಂತನೆ ನಡೆಸಿದ...
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.ಇವರಿಗೆ ಭಾರತ ಸರ್ಕಾರವು ೨೦೨೩ನೇ ಸಾಲಿನಲ್ಲಿ ಪ...
ಜೀವನ ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ತಂದೆ ವರದಪ್ಪನಾಯಕ, ತಾಯಿ ರುಕ್ಮಿಣಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇವರು ನಾಯಕ ಜನಾಂಗದವರಿಂದಲೇ ಅವರು ಮಗನಿಗೆ ಶ್ರೀನಿವಾಸ ನಾಯಕ ಎಂದು ಹೆಸರಿಟ್ಟರಂತೆ. ಜನ್ಮ ಸ್ಥಳ ಆರಗ, ತೀರ್ಥಹಳ್ಳ...
ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ಮಣ್ಣಿನ ಮಗ ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು. ಜೀವನ ದೇವೇಗೌಡರು ಮೇ ೧೮, ೧೯೩೩ ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ದೇವ...
ಕರ್ನಾಟಕ ಸಂಗೀತ (ಸಂಸ್ಕೃತ: ) ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ. ಭಾರತದ ಶಾಸ್ತ್ರೀಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ ಹಿಂದುಸ್ತಾನಿ ಸಂಗೀತದಿಂದ ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನೂ ಬಿಗಿಯಾದ ನಿಯಮಗಳ ಅಸ್ತಿತ್ವ. ಕರ್ನಾಟಕ ಸಂಗೀತ ಹೆಚ್ಚುಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವಾದದ್ದು. ರಚನೆಗಳು ಸಾಮಾನ್ಯವಾಗಿ ಹಿಂದೂ ದೇವದೇವತೆಗಳನ...
ಮೈಸೂರು ದೊರೆಸ್ವಾಮಿ ಅಯ್ಯಂಗಾರ್ (ಅಕ್ಟೋಬರ್ ೨೪, ೧೯೨೦ ಅಕ್ಟೋಬರ್, ೧೯೯೭) ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ವೈಣಿಕರು. ಅವರು ವೀಣಾ ದೊರೆಸ್ವಾಮಿ ಅಯ್ಯಂಗಾರ್ ಎಂದೇ ಪ್ರಸಿದ್ದರಾಗಿದ್ದು ಪದ್ಮವಿಭೂಷಣ ಗೌರವ ಸಮ್ಮಾನಿತರು. ಜೀವನ ಅಕ್ಟೋಬರ್ ೨೪, ೧೯೨೦ ದೊರೆಸ್ವಾಮಿ ಅಯ್ಯಂಗಾರ್ ಅವರು ಹುಟ್ಟಿದ ದಿನ. ಮೈಸೂರಿನ ವೀಣೆಗೆ ಕರ್ನಾಟಕ ಸಂಗೀತದಲ್ಲಿ ಮಹತ್ವದ ಸ್ಥಾನವಿದ್ದು, ಹಲವಾರು ಪರಿಣಿತರನ್ನ...
ಕದ್ರಿ ಗೋಪಾಲನಾಥ್ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕರು. ಸ್ಯಾಕ್ಸೊಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದವರಾಗಿದ್ದಾರೆ. ಜೀವನ ಗೋಪಾಲನಾಥರು ೧೯೪೯ ಡಿಸೆಂಬರ್ ೬ ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಮೂಡ ಊರಿನಲ್ಲಿ ಜನಿಸಿದರು. ತಂದೆ ತನಿಯಪ್ಪನವರು ನಾಗಸ್ವರ ವಿದ್ವಾಂಸರಾಗಿದ್ದರಿಂದ ಸಂಗೀತವೆಂಬುದು ಗೋಪಾಲನಾಥರ ದಿ...
ಗಿರೀಶ್ ಕಾಸರವಳ್ಳಿ,ಭಾರತದ ಅತ್ಯಂತ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಲ್ಲೊಬ್ಬರು.ಮಲೆನಾಡಿನ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕೆಸಲೂರಿನಲ್ಲಿ ೧೯೫೦ರಲ್ಲಿ ಜನಿಸಿದ ಇವರು ಮಣಿಪಾಲದಲ್ಲಿ ಬಿ,ಫಾರ್ಮ್ ಪದವಿ ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆ ಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಗಿರೀಶ್ ಕಾಸರವಳ್ಳಿಯವರು ತಮ್ಮ ೨೭ ವ...
ಪಂಡಿತ ಭೀಮಸೇನ ಗುರುರಾಜ ಜೋಷಿ ಹಿಂದುಸ್ತಾನಿ ಸಂಗೀತ(ಜನನ: ಫೆಬ್ರವರಿ ೪, ೧೯೨೨ಮರಣ:ಜನವರಿ ೨೪,೨೦೧೧ ) ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಇವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು. ಬಹುದೊಡ್ಡ ಪರಿವಾರದಲ್ಲಿ ಜನನ ಭೀಮಸೇನ ಜೋಷಿಯವರು, ೪, ಫೆಬ್ರವರಿ ,೧೯೨೨ ರಲ್ಲಿ, ರಥಸಪ್ತಮಿಯ ತಿಥಿಯಂದು,(ಹಿಂದೆ ಧಾರವಾಡ ಜಿಲ್ಲೆ) ಗದಗ ಜಿಲ್ಲೆಯ ರೋಣ ತಾಲೂ...
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚ...
ಹಿಂದುಸ್ತಾನಿ ಸಂಗೀತ ಭಾರತದ ಎರಡು ಮುಖ್ಯ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲಿ ಒಂದು ಉತ್ತರ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾಗಶಃ ಕರ್ನಾಟಕ ರಾಜ್ಯದಲ್ಲಿ ಪ್ರಚಲಿತವಾಗಿದೆ. ಭಾರತದಲ್ಲಿ ಶಾಸ್ತ್ರೀಯ ಸಂಗೀತ ಧಾರ್ಮಿಕ ಅಂಗವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು ಎಂದು ನಂಬಲಾಗಿದೆ. ೧೩೧೪ ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ದೆಹಲಿ ಸುಲ್ತಾನೇಟ್ ಮತ್ತು ಮೊಘಲ್ ಸಾಮ್ರಾಜ್ಯದ ಆಡಳಿತ ...
ಪಂಡಿತ್ ಜವಾಹರಲಾಲ್ ನೆಹರು (14 ನವೆಂಬರ್ 1889 27 ಮೇ 1964)((ನವೆಂಬರ್ ೧೪, ೧೮೮೯ ಮೇ ೨೭, ೧೯೬೪)) ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ಅವರು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು 1947ರಲ್ಲಿ ಭಾರತ...
ರಾಜ್ಯದ ಹಲವು ರಾಜಕೀಯ ವಿಭಾಗಗಳು ಹಾಗೂ ನಿರ್ವಹಣಾ ವಿಭಾಗಗಳಿಗೆ ಜಿಲ್ಲೆ ಎನ್ನುತ್ತಾರೆ. ಒಂದು ದೇಶವನ್ನು ಹಲವು ರಾಜ್ಯಗಳಾಗಿ ವಿಂಗಡಿಸಿದರೆ, ಒಂದು ರಾಜ್ಯವನ್ನು ಹಲವು ಜಿಲ್ಲೆಗಳಾಗಿ ವಿಂಗಡಿಸಲಾಗುತ್ತದೆ. ಆಡಳಿತ ವಿಕೇಂದ್ರೀಕರಣ, ಭೌಗೋಳಿಕ, ಭಾಷಿಕ ಮೊದಲಾದ ಅಂಶಗಳಿಗನುಗುಣವಾಗಿ, ಜಿಲ್ಲೆಗಳ ವಿಂಗಡಣೆ ನಡೆಯುತ್ತದೆ. ಒಂದು ಜಿಲ್ಲೆಯ ಭಾಗಗಳಾಗಿ ಅನೇಕ ತಾಲೂಕುಗಳು ಇರುತ್ತವೆ.<><ರಾಜ್ಯದ ಹಲವು ರಾಜ...
ಅಕ್ಟೋಬರ್ ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ಗಳಲ್ಲಿ ವರ್ಷದ ಹತ್ತನೇ ತಿಂಗಳು ಮತ್ತು ೩೧ ದಿನಗಳ ಉದ್ದವನ್ನು ಹೊಂದಿರುವ ಏಳು ತಿಂಗಳುಗಳಲ್ಲಿ ಆರನೇ ತಿಂಗಳು. ರೊಮುಲಸ್ನ ಹಳೆಯ ಕ್ಯಾಲೆಂಡರ್ನಲ್ಲಿ ಎಂಟನೇ ತಿಂಗಳು , ಅಕ್ಟೋಬರ್ ತನ್ನ ಹೆಸರನ್ನು ಈ ರೀತಿ ಬಳಸಿಕೊಂಡಿದೆ ( ಲ್ಯಾಟಿನ್ ಮತ್ತು ಗ್ರೀಕ್ನಿಂದ ಅಂದರೆ ಎಂಟು). ಜನವರಿ ಮತ್ತು ಫೆಬ್ರವರಿ ನಂತರ ಮೂಲತಃ ರೋಮನ್ನರು ರಚಿಸಿದ ಕ್ಯಾಲೆಂಡ...
ಭಾರತ ಗಣರಾಜ್ಯದಲ್ಲಿ ಮಾತನಾಡುವ ಭಾಷೆಗಳು ಹಲವಾರು ಭಾಷಾ ಕುಟುಂಬಗಳಿಗೆ ಸೇರಿದ್ದು, ಪ್ರಮುಖವಾದವುಗಳು 78.05% ಭಾರತೀಯರು ಮಾತನಾಡುವ ಇಂಡೋಆರ್ಯನ್ ಭಾಷೆಗಳು ಮತ್ತು 19.64% ಭಾರತೀಯರು ಮಾತನಾಡುವ ದ್ರಾವಿಡ ಭಾಷೆಗಳು, ಇವೆರಡೂ ಕುಟುಂಬಗಳು ಕೆಲವೊಮ್ಮೆ ಒಟ್ಟಿಗೆ ಇರುತ್ತವೆ. ಇವುಗಳನ್ನು ಭಾರತೀಯ ಭಾಷೆಗಳು ಎಂದು ಕರೆಯಲಾಗುತ್ತದೆ. ಜನಸಂಖ್ಯೆಯ ಉಳಿದ 2.31% ಜನರು ಮಾತನಾಡುವ ಭಾಷೆಗಳು ಆಸ್ಟ್ರೋಯಾಸಿ...
ದ್ರಾವಿಡ ಭಾಷೆಗಳು ಭಾರತೀಯ ಉಪಖಂಡದ ಒಂದು ಭಾಷಾ ಕುಟುಂಬವಾಗಿದೆ. ದ್ರಾವಿಡ ಭಾಷೆಗಳು ದಕ್ಷಿಣ ಭಾರತ, ಮಧ್ಯ ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿವೆ. ದ್ರಾವಿಡ ಭಾಷೆಗಳು ಯಾವುದೇ ಬೇರೆಯ ಭಾಷಾಕುಟುಂಬಕ್ಕೆ ಸೇರಿದೆಯೇ ಎಂದು ತಿಳಿದುಕೊಳ್ಳಲು ಬಹಳ ಸಂಶೋಧನೆಗಳು ನಡೆದಿವೆಯಾದರೂ, ಖಚಿತವಾದ ಸಂಬಂಧವು ಈವರೆಗೂ ದೊರೆತಿಲ್ಲ. ಹೀಗಾಗಿ ಇದನ್ನು ಒಂದು ಸ್ವತಂತ್ರ ಭಾಷಾ ಕುಟ...
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆಮಾದರಸ,ತಾಯಿಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ...
ಡಾ. ಬಿ. ಜಿ. ಎಲ್. ಸ್ವಾಮಿ (ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ) ಕರ್ನಾಟಕದ ಹಿರಿಯ ವಿಜ್ಞಾನಿ ಮತ್ತು ಸಾಹಿತಿ. ಹಿರಿಯ ವಿದ್ವಾಂಸ, ಚಿಂತನಶೀಲ ಬರಹಗಾರ. ಜೀವನ ಬಿ.ಜಿ.ಎಲ್.ಸ್ವಾಮಿಯವರು ಕನ್ನಡದ ಪ್ರಸಿದ್ಧ ಸಾಹಿತಿ ಡಿ. ವಿ. ಗುಂಡಪ್ಪನವರ ಏಕಮಾತ್ರ ಪುತ್ರರು. ಮನೆಯಲ್ಲಿ ಸಾಹಿತ್ಯ, ಸಂಗೀತ, ಚಿಂತನಶೀಲತೆ ಗಾಳಿಯಲ್ಲೇ ಬೆರೆತುಹೋಗಿದ್ದವು. ಆದರೆ ಹಣಕಾಸಿನ ಸ್ಥಿತಿ ಅಷ್ಟೇನೂ ಚೆನ್ನಾಗಿರ...