NLP_Assignment_1 / BKMurli /page_10.txt
CoolCoder44's picture
Upload 100 files
b947e47 verified
raw
history blame
33.9 kB
ಏಕವ್ರತದವರಾಗಿ ಪವಿತ್ರತೆಯ ಧಾರಣೆಯ ಮುಖಾಂತರ ಆತ್ಮೀಯತೆಯಲ್ಲಿದ್ದು ಮನಸ್ಸಾ ಸೇವೆ ಮಾಡಿರಿ
ಇಂದು ಆತ್ಮೀಯ ತಂದೆ ನಾಲ್ಕಾರು ಕಡೆಯ ಆತ್ಮೀಯ ಮಕ್ಕಳ ಆತ್ಮೀಯತೆಯನ್ನು ನೋಡುತ್ತಿದ್ದರು. ಪ್ರತಿಯೊಬ್ಬ ಮಕ್ಕಳಲ್ಲಿ ಆತ್ಮೀಯತೆಯ ಹೊಳಪು ಎಷ್ಟಿದೆ? ಆತ್ಮೀಯತೆ ನಯನಗಳಿಂದ ಪ್ರತ್ಯಕ್ಷವಾಗುತ್ತದೆ. ಆತ್ಮೀಯತೆಯ ಶಕ್ತಿಯಿರುವ ಆತ್ಮ ಸದಾ ನಯನಗಳಿಂದ ಅನ್ಯರಿಗೂ ಸಹ ಆತ್ಮೀಯತೆಯ ಶಕ್ತಿಯನ್ನು ನೀಡುತ್ತಾರೆ. ಆತ್ಮೀಯತೆಯ ಮುಗುಳ್ಳಗೆ ಅನ್ಯರಿಗೂ ಸಹ ಖುಷಿಯ ಅನುಭವವನ್ನು ಮಾಡಿಸುತ್ತದೆ. ಅವರ ಚಲನೆ, ಮುಖಪುಟವು ಫರಿಸ್ಥೆಗಳ ಸಮಾನ ಡಬ್ಬಲ್ ಲೈಟ್ ರೂಪದಲ್ಲಿ ಕಾಣಿಸುತ್ತದೆ. ಈ ರೂಪದ ಆತ್ಮೀಯತೆಗೆ ಅಧಾರವಾಗಿದೆ ಪವಿತ್ರತೆ ಎಷ್ಟು-ಎಷ್ಟು ಮನ, ವಚನ, ಕರ್ಮದಲ್ಲಿ ಕಾಣಿಸುತ್ತದೆ, ಅಷ್ಟು ಆತ್ಮೀಯತೆ ಕಂಡುಬರುತ್ತದೆ. ಪವಿತ್ರತೆ ಬ್ರಾಹ್ಮಣ ಜೀವನದ ಶೃಂಗಾರವಾಗಿದೆ. ಪವಿತ್ರತೆ ಬ್ರಾಹ್ಮಣ ಜೀವನದ ಮರ್ಯಾದೆಯಾಗಿದೆ. ಆದ್ದರಿಂದ ಬಾಪ್ದಾದಾ ಪ್ರತಿಯೊಬ್ಬ ಮಗುವಿನ ಪವಿತ್ರತೆಯ ಆಧಾರದಿಂದ ಕೂಡಿದ ಆತ್ಮೀಯತೆಯನ್ನು ನೋಡುತ್ತಿದ್ದರು. ಆತ್ಮೀಯತೆಯ ಶಕ್ತಿಯಿರುವ ಆತ್ಮ ಈ ಲೋಕದಲ್ಲಿ ಅಲೌಕಿಕ ಫರಿಸ್ಥೆಗಳಂತೆ ಕಾಣುತ್ತಾರೆ.
ಆದ್ದರಿಂದ ತನ್ನನ್ನು ತಾವೇ ನೋಡಿಕೊಳ್ಳಿರಿ, ಚೆಕ್ ಮಾಡಿಕೊಳ್ಳಿ-ನನ್ನ ಸಂಕಲ್ಪ, ಮಾತಿನಲ್ಲಿ ಎಷ್ಟು ಆತ್ಮೀಯತೆಯಿದೆ? ಆತ್ಮೀಯತೆಯ ಸಂಕಲ್ಪ ತನ್ನಲ್ಲಿಯೂ ಶಕ್ತಿ ತುಂಬುವಂತಹದ್ದಾಗಿದೆ ಮತ್ತು ಅನ್ಯರಿಗೂ ಶಕ್ತಿಯನ್ನು ನೀಡುತ್ತದೆ. ಇದನ್ನೇ ಬೇರೆ ಶಬ್ದಗಳಲ್ಲಿ ಹೇಳಲಾಗುತ್ತದೆ - ಆತ್ಮೀಯತೆಯ ಸಂಕಲ್ಪ ಮನಸ್ಸಾ ಸೇವೆಗೆ ನಿಮಿತ್ತವಾಗುತ್ತದೆ. ಆತ್ಮೀಯ ಮಾತು ಸ್ವಯಂಗೆ ಮತ್ತು ಅನ್ಯರಿಗೆ ಸುಖದ ಅನುಭವವನ್ನು ಮಾಡಿಸುತ್ತದೆ. ಶಾಂತಿಯ ಅನುಭವವನ್ನು ಮಾಡಿಸುತ್ತದೆ. ಒಂದು ಆತ್ಮೀಯ ಮಾತು ಅನ್ಯ ಆತ್ಮಗಳ ಜೀವನದಲ್ಲಿ ಮುಂದುವರೆಯಲ್ಲಿಕ್ಕೆ ಆಧಾರವಾಗುತ್ತದೆ. ಆತ್ಮೀಯ ಮಾತನ್ನಾಡುವವರು ವರದಾನಿ ಆತ್ಮಗಳಾಗುತ್ತಾರೆ. ಆತ್ಮೀಯ ಕರ್ಮ ಸಹಜವಾಗಿ ಸ್ವಯಂಗೆ ಕರ್ಮಯೋಗಿ ಸ್ಥಿತಿಯನ್ನು ಅನುಭವ ಮಾಡಿಸುತ್ತದೆ ಮತ್ತು ಅನ್ಯರಿಗು ಕರ್ಮಯೋಗಿಗಳಾಗುವಂತಹ ಸ್ಯಾಂಪಲ್ (ಮಾದರಿ) ಆಗುತ್ತಾರೆ. ಆದರೆ ಆತ್ಮೀಯತೆಯ ಬೀಜವಾಗಿದೆ ಪವಿತ್ರತೆ ಪವಿತ್ರತೆ ಸ್ವಪ್ನದಲ್ಲಿಯೂ ಭಂಗ ಆಗಬಾರದು, ಆಗ ಆತ್ಮೀಯತೆಯ ಶಕ್ತಿಯು ಕಂಡುಬರುತ್ತದೆ. ಪವಿತ್ರತೆ ಕೇವಲ ಬ್ರಹ್ಮಚರ್ಯ ಮಾತ್ರವಲ್ಲ, ಆದರೆ ಪ್ರತಿ ಮಾತಿನಲ್ಲಿ, ಪ್ರತಿ ಸಂಕಲ್ಪದಲ್ಲಿ, ಪ್ರತಿ ಕರ್ಮದಲ್ಲಿ ಬ್ರಹ್ಮಾಚಾರಿಗಳು. ಹೇಗೆ ಲೌಕಿಕದಲ್ಲಿ ಕೆಲವು-ಕೆಲವು ಮಕ್ಕಳ ಮುಖವು ತಂದೆಯಂತೆ ಇರುತ್ತದೆ. ಆಗ ಹೇಳುತ್ತಾರೆ ಇವರಲ್ಲಿ ಆ ತಂದೆಯು ಕಾಣುತ್ತಾರೆ. ಅದೇ ರೀತಿ ಬ್ರಹ್ಮಾಚಾರಿ ಬ್ರಾಹ್ಮಣ ಆತ್ಮಗಳ ಮುಖದಿಂದ ಆತ್ಮೀಯತೆಯ ಆಧಾರದಿಂದ ಬ್ರಹ್ಮಾತಂದೆ ಸಮಾನ ಅನುಭವವಾಗಲಿ, ಸಂಪರ್ಕದಲ್ಲಿ ಬರುವ ಆತ್ಮಗಳು ಅನುಭವ ಮಾಡಲಿ - ಇವರು ತಂದೆಯ ಸಮಾನರಾಗಿದ್ದಾರೆ. ಆದರೆ ನೂರು ಪ್ರತಿಶತ (%) ಇಲ್ಲದಿದ್ದರೂ ಸಮಯ ಅನುಸಾರ ಎಷ್ಟು ಪ್ರತಿಶತ (%) ಕಂಡುಬರುತ್ತಿದೆ? ಎಲ್ಲಿಯವರೆಗು ತಲುಪಿದ್ದೀರಾ? 75%, 80%, 90% ಎಲ್ಲಿಯವರೆಗು ಮರ ತಲುಪಿದ್ದೀರಾ? ಮುಂದೆ ಕುಳಿತಿರುವವರು ತಿಳಿಸಿ, ನೋಡಿ ಕುಳಿತುಕೊಳ್ಳಲು ಮುಂದಿನ ಲೈನ್ ಪಡೆದಿದ್ದೀರಿ, ಅದೇ ರೀತಿ ಬ್ರಹ್ಮಾಚಾರಿಗಳಾಗುವುದರಲ್ಲಿಯೂ ಮುಂದಿನ ನಂಬರ್ ಪಡೆಯುತ್ತೀರಲ್ಲವೇ! ಮುಂದಿನ ನಂಬರ್ ಪಡೆಯುತ್ತೀರಿ ತಾನೆ?
ಬಾಪ್ದಾದಾ ಪ್ರತಿ ಮಕ್ಕಳ ಪವಿತ್ರತೆಯ ಆಧಾರದ ಮೇಲೆ ಆತ್ಮೀಯತೆಯನ್ನು ನೋಡಲು ಬಯಸುತ್ತಾರೆ. ಬಾಪ್ದಾದಾರವರ ಬಳಿ ಎಲ್ಲರ ಚಾಟರ್ಂತೂ ಇದೆ. ತಿಳಿಸುವುದಿಲ್ಲ. ಆದರೆ ಚಾರ್ಟ್ ಇದೆ, ಏನೇನು ಮಾಡುತ್ತೀರಾ? ಹೇಗೆ ಮಾಡುತ್ತೀರಾ, ಎಲ್ಲರದು ಚಾರ್ಟ್ ಬಾಪ್ದಾದಾರವರ ಬಳಿ ಇದೆ. ಪವಿತ್ರತೆಯಲ್ಲಿ ಈಗಲೂ ಕೆಲವು-ಕೆಲವು ಮಕ್ಕಳಲ್ಲಿ ತುಂಬಾ ಕಡಿಮೆ % ಇದೆ. ಸಮಯದ ಅನುಸಾರ ವಿಶ್ವದ ಆತ್ಮಗಳು ನೀವು ಆತ್ಮಗಳ ಆತ್ಮೀಯತೆಯ ಉದಾಹರಣೆ ನೋಡಲು ಬಯಸುತ್ತಾರೆ. ಇದರ ಸಹಜ ಸಾಧನೆ ಆಗಿದೆ ಒಂದೇ ಒಂದು ಶಬ್ದದ ಬಗ್ಗೆ ಗಮನ ಇಡುವುದು. ಪದೇ-ಪದೇ ಈ ಒಂದು ಶಬ್ದವನ್ನು ತನಗೆ ತಾನೇ ಅಂಡರ್ಲೈನ್ ಮಾಡಿಕೊಳ್ಳುವುದು, ಆ ಒಂದು ಶಬ್ದವಾಗಿದೆ ಏಕವ್ರತಾ ಭವ ಎಲ್ಲಿ ಒಂದಿದೆ ಅಲ್ಲಿ. ಏಕಾಗ್ರತೆ ಸ್ವತಃವಾಗಿ ಬರುತ್ತದೆ. ಅಚಲ, ಅಡೋಲರು ಸ್ವತಃವಾಗಿ ಆಗುತ್ತೇವೆ. ಏಕವ್ರತ ಆಗುವುದರಿಂದ ಏಕಮತದಲ್ಲಿಯೇ ನಡೆಯುವುದು ಸಹಜವಾಗುತ್ತದೆ. ಇರುವುದೇ ಒಂದೇ ವ್ರತ, ಹಾಗಾಗೆ ಒಂದೇ ಮತದಿಂದ ಸದ್ಗತಿ ಸಹಜವಾಗುತ್ತದೆ. ಏಕರಸ ಸ್ಥಿತಿ ಸ್ವತಹವಾಗಿ ಆಗುತ್ತದೆ. ಆದ್ದರಿಂದ ಚೆಕ್ ಮಾಡಿಕೊಳ್ಳಿ - ಏಕವ್ರತ ಇದೆಯೇ? ಇಡೀ ದಿನದಲ್ಲಿ ಮನಸ್ಸು, ಬುದ್ಧಿಯಲ್ಲಿ ಏಕವ್ರತ ಇರುತ್ತದೆಯೇ? ಲೆಕ್ಕಾಚಾರದಲ್ಲಿಯೂ ಆದಿಯ ಲೆಕ್ಕಾಚಾರ ಒಂದರಿಂದ ಶುರುವಾಗುತ್ತದೆ. ಒಂದು ಬಿಂದು ಮತ್ತು ಒಂದು ಒಂದು ಶಬ್ದ, ಒಂದರ ಮುಂದೆ ಸೊನ್ನೆ ಹಾಕುತ್ತಾ ಹೋಗಿ, ಎಷ್ಟು ಹೆಚ್ಚುತ್ತಾ ಹೋಗುತ್ತದೆ. ಬೇರೆ ಏನೂ ನೆನಪಿರದಿದ್ದರೂ ಒಂದು ಶಬ್ದ ನೆನಪಿರುತ್ತದೆ ಅಲ್ಲವೇ! ಸಮಯ, ಆತ್ಮಗಳು, ನಾವು ಏಕವ್ರತಾ ಆತ್ಮಗಳನ್ನು ಕೂಗುತ್ತಿದ್ದಾರೆ. ಸಮಯದ ಕೂಗು, ಆತ್ಮಗಳ ಕೂಗು - ಹೇ ದೇವಾತ್ಮಗಳೇ ಎಂಬ ಕೂಗು ಕೇಳಿಸುವುದಿಲ್ಲವೇ? ಪ್ರಕೃತಿಯೂ ಸಹ ತಾವು ಪ್ರಕೃತಿಪತಿಯರನ್ನು ನೋಡಿ-ನೋಡಿ ಕರೆಯುತ್ತಿದೆ - ಹೇ! ಪ್ರಕೃತಿ ಪತಿ ಆತ್ಮಗಳೇ ಈಗಲೇ ಪರಿವರ್ತನೆ ಮಾಡಿ. ಇದಂತೂ ಮಧ್ಯ-ಮಧ್ಯದಲ್ಲಿ ಚಿಕ್ಕ-ಚಿಕ್ಕ ವಿಕೋಪಗಳು ಆಗುತ್ತಿರುತ್ತವೆ. ಇದರಿಂದ ಆತ್ಮಗಳಿಗೆ ಮತ್ತೆ-ಮತ್ತೆ ದುಃಖ, ಭಯಭೀತರನ್ನಾಗಿ ಮಾಡಬೇಡಿ. ನೀವು ಮುಕ್ತಿಯನ್ನು ನೀಡುವಂತಹ ಮಾಸ್ಟರ್ ಮುಕ್ತಿದಾತ ಆತ್ಮರು ಯಾವಾಗ ಈ ಎಲ್ಲಾ ಆತ್ಮರಿಗೆ - ಮುಕ್ತಿಯನ್ನು ನೀಡುತ್ತೀರಿ? ಮನಸ್ಸಿನಲ್ಲಿ ದಯೆ ಬರುವುದಿಲ್ಲವೇನು? ಸಮಾಚಾರವನ್ನು ಕೇಳಿ, ಆಗಿಹೋಯಿತೆಂದು ಸುಮ್ಮನಾಗಿಬಿಡುತ್ತೀರೇನು? ಅದ್ದರಿಂದ ಬಾಪ್ದಾದಾ ಪ್ರತಿಯೊಬ್ಬ ಮಗುವಿನ ದಯಾ ಸ್ವರೂಪವನ್ನು ನೋಡಲು ಬಯಸುತ್ತಾರೆ. ತಮ್ಮ ಹದ್ದಿನ ಮಾತನ್ನು ಬಿಟ್ಟುಬಿಡಿ. ದಯಾಹೃದಯಿಗಳಾಗಿ ಮನಸ್ಸಾ ಸೇವೆಯಲ್ಲಿ ತೊಡಗಿರಿ. ಸಕಾಶ, ಶಾಂತಿ ಆಶ್ರಯ ನೀಡಿ. ದಯಾಹೃದಯಿಗಳಾಗಿ ಅನ್ಯರಿಗೆ ಆಶ್ರಯ ಕೊಡುವುದರಲ್ಲಿ ತತ್ಪರರಾಗಿದ್ದಾರೆ, ಹದ್ದಿನ ಆಕರ್ಷಣೆಗಳಿಂದ, ಹದ್ದಿನ ಮಾತುಗಳಿಂದ ಸ್ವಯಂ ದೂರವಾಗಿರುತ್ತೀರಿ. ಶ್ರಮ ಪಡುವುದರಿಂದ ಮುಕ್ತರಾಗುತ್ತೀರಿ. ವಾಣಿಯ ಸೇವೆಯಲ್ಲಿ ಬಹಳ ಸಮಯ ನೀಡಿದ್ದೀರಿ, ಸಮಯ ಸಫಲಗೊಳಿಸಿದ್ದಿರಿ, ಸಂದೇಶ ನೀಡಿದ್ದೀರಿ. ಆತ್ಮಗಳಿಗೆ ಸಂಬಂಧ-ಸಂಪರ್ಕದಲ್ಲಿ ತಂದಿದ್ದೀರಿ. ಏನು ನಾಟಕನುಸಾರ ಮಾಡಿದ್ದೀರಿ ಅದು ಬಹಳ ಚೆನ್ನಾಗಿ ಮಾಡಿದ್ದೀರಿ. ಆದರೆ ಈಗ ವಾಣಿಯ ಜೊತೆಗೆ ಮನಸ್ಸಾ ಸೇವೆಯ ಆವಶ್ಯಕತೆ ಬಹಳ ಇದೆ. ಮತ್ತು ಈ ಮನಸ್ಸಾ ಸೇವೆಯನ್ನು ಪ್ರತಿಯೊಬ್ಬ ಹೊಸ ಮಕ್ಕಳು, ಹಳೆಯ ಮಕ್ಕಳು, ಮಹಾರಥಿಗಳು, ಕುದರೆ ಸವಾರರು, ಕಾಲಾಳುಗಳು ಎಲ್ಲರೂ ಮಾಡಬಹುದಾಗಿದೆ. ಇದನ್ನು ದೊಡ್ಡವರು ಮಾಡುತ್ತಾರೆ, ನಾವಂತೂ ಚಿಕ್ಕವರು, ನಾವು ರೋಗಿಗಳು, ನಾವು ಸಾಧನೆವುಳ್ಳವರಲ್ಲ, ಇಂತಹ ಯಾವುದೇ ಆಧಾರ ಬೇಕಾಗಿಲ್ಲ. ಮನಸ್ಸಾ ಸೇವೆಯನ್ನು ಚಿಕ್ಕ-ಚಿಕ್ಕ ಮಕ್ಕಳೂ ಸಹ ಮಾಡಬಹುದಾಗಿದೆ. ಮಕ್ಕಳೇ ಮಾಡಬಹುದಲ್ಲವೇ? (ಹೌದು) ಮನಸ್ಸಾ ಸೇವೆಯನ್ನು ಮಾಡಬಹುದಲ್ಲವೇ. ಆದ್ದರಿಂದ ಈಗ ಮಾತು ಮತ್ತು ಮನಸ್ಸಾ ಸೇವೆಯ ಸಮತೋಲನ ಇರಲಿ ಮನಸ್ಸಾ ಸೇವೆ ಮಾಡುವವರಿಗೂ ಸಹ ಬಹಳ ಲಾಭವಿದೆ. ಏಕೆ? ಯಾವ ಅತ್ಮಗಳಿಗೆ ಮನಸ್ಸಾ ಸೇವೆ ಅರ್ಥಾತ್ ಸಂಕಲ್ಪದ ಮೂಲಕ ಶಕ್ತಿ ಮತ್ತು ಸಕಾಶವನ್ನು ಕೊಡುತ್ತೀರಿ ಆ ಆತ್ಮ ತಮಗೆ ಆಶೀರ್ವಾದ ನೀಡುತ್ತದೆ. ಹಾಗೂ ತಮ್ಮ ಖಾತೆಯಲ್ಲಿ ಸ್ವಯಂನ ಪುರುಷಾರ್ಥವಂತೂ ಇದ್ದೇ ಇದೆ. ಜೊತೆಗೆ ಆಶೀರ್ವಾದದ ಖಾತೆಯು ಜಮಾ ಆಗುತ್ತವೆ. ಇದರಿಂದ ತಮ್ಮ ಜಮಾದ ಖಾತೆ ಡಬಲ್ ರೀತಿಯಲ್ಲಿ ಹೆಚ್ಚುತ್ತಾ ಹೋಗುತ್ತದೆ. ಆದುದರಿಂದ ಹೊಸ ಮಕ್ಕಳೇ ಆಗಲಿ, ಹಳೆಯ ಮಕ್ಕಳೇ ಆಗಲಿ, ಏಕೆಂದರೆ ಬಹಳ ಹೊಸ ಮಕ್ಕಳೇ ಬಂದಿದ್ದೀರಲ್ಲವೇ! ಹೊಸ ಮಕ್ಕಳು ಯಾರು ಮೊದಲನೇ ಬಾರಿಗೆ ಬಂದಿದ್ದೀರಿ, ಅವರು ಕೈ ಎತ್ತಿರಿ. ಮೊದಲನೇ ಬಾರಿ ಬಂದಿರುವ ಮಕ್ಕಳೊಂದಿಗೂ ಸಹ ಬಾಪ್ದಾದಾ ಕೇಳುತ್ತಾರೆ. ತಾವು ಆತ್ಮಗಳು ಮನಸ್ಸು ಸೇವೆಯನ್ನು ಮಾಡಬಹುದಲ್ಲವೇ? (ಬಾಪ್ದಾದಾ ಪಾಂಡವರೊಂದಿಗೆ, ಮಾತೆಯರೊಂದಿಗೆ - ನಿಮಗೂ ಸಹ ಮನಸ್ಸಾ ಸೇವೆಯನ್ನು ಮಾಡಲು ಸಾಧ್ಯವಿದೆಯೇ?) ಎಲ್ಲರೂ ಬಹಳ ಚೆನ್ನಾಗಿ ಕೈ ಎತ್ತಿದ್ದೀರಿ. ಈಗ ಬಾಪ್ದಾದಾ ಟಿ.ವಿಯಲ್ಲಿ ನೋಡುತ್ತಿರುವವರಿಗೆ ಮತ್ತು ಸಮ್ಮುಖದಲ್ಲಿ ಕೇಳುತ್ತಿರುವವರಿಗೆ, ಎಲ್ಲಾ ಮಕ್ಕಳಿಗೂ ಜವಾಬ್ದಾರಿ ಕೊಡುತ್ತಾರೆ, ಏನೆಂದರೆ ಇಡೀ ದಿನದಲ್ಲಿ ಎಷ್ಟು ಗಂಟೆಗಳು ಮನಸ್ಸು ಸೇವೆಯನ್ನು ಯಥಾರ್ಥ ರೀತಿಯಿಂದ ಮಾಡಿದಿರಿ. ಕೇವಲ ಮಾಡಿದೆವೆಂದು ಹೇಳಬಾರದು. ಯಥಾರ್ಥ ರೂಪದಲ್ಲಿ ಎಷ್ಟು ಗಂಟೆಗಳು ಮನಸ್ಸಾ ಸೇವೆಯನ್ನು ಮಾಡಿದಿರಿ? ಇದರ ಚಾರ್ಟ್ನ್ನು ಪ್ರತಿಯೊಬ್ಬರೂ ತಮ್ಮ ಬಳಿ ಇಟ್ಟುಕೊಳ್ಳಬೇಕಾಗಿದೆ. ನಂತರ ಬಾಪ್ದಾದಾ ಅಚಾನಕ ಚಾರ್ಟ್ ಕೇಳುತ್ತಾರೆ. ಇವರ ದಿನಾಂಕ ತಿಳಿಸುವುದಿಲ್ಲ. ಅಚಾನಕ ಕೇಳುತ್ತಾರೆ, ನೋಡೋಣ ಜವಾಬ್ದಾರಿಯ ಕಿರೀಟ ತೊಟ್ಟುಕೊಳ್ಳುವವರೋ ಅಥವಾ ಅಲುಗಾಡುತ್ತಿರುತ್ತದೆಯೋ? ಜವಾಬ್ದಾರಿಯ ಕಿರೀಟ ತೊಟ್ಟುಕೊಳ್ಳಬೇಕಲ್ಲವೇ! ಶಿಕ್ಷಕಿಯರು ಜವಾಬ್ದಾರಿಯ ಕಿರೀಟ ತೊಟ್ಟುಕೊಂಡಿದ್ದೀರಲ್ಲವೇ! ಈಗ ಅದರಲ್ಲಿ ಇದನ್ನು ಸೇರಿಸಿಕೊಳ್ಳಿ. ಸರಿಯಲ್ಲವೇ! ಡಬ್ಬಲ್ ವಿದೇಶದವರು ಕೈ ಎತ್ತಿ. ಈ ಜವಾಬ್ದಾರಿಯ ಕಿರೀಟ ಚೆನ್ನಾಗಿದೆಯಲ್ಲವೇ? ಆದ್ದರಿಂದ ಚಾರ್ಟ್ ಇಡುತ್ತೀರಲ್ಲವೇ? ಒಳ್ಳೆಯದು ಬಾಪ್ದಾದಾ ಆಚಾನಕ್ ಒಂದು ದಿವಸ ಕೇಳುತ್ತಾರೆ, ತಮ್ಮ ತಮ್ಮ ಚಾರ್ಟ್ ಬರೆದು ಕಳುಹಿಸಿ ಎಂದು, ನಂತರ ನೋಡುತ್ತಾರೆ. ಏಕೆಂದರೆ ವರ್ತಮಾನ ಸಮಯ ಬಹಳ ಅವಶ್ಯಕತೆ ಇದೆ. ತಮ್ಮದೇ ಪರಿವಾರದ ದುಃಖವನ್ನು ಈ ನೋಡುತ್ತಿದ್ದೀರಲ್ಲವೇ! ನೋಡಬಹುದಲ್ಲವೇ? ದುಃಖಿ ಆತ್ಮಗಳಿಗೆ ಆಶ್ರಯವನ್ನು ನೀಡಿ. ಒಂದು ಹನಿಗಾಗಿ ಬಾಯಾರಿದ್ದೇವೆ ನಾವು ಎಂದು ಯಾವ ಗೀತೆ ಇದೆ, ಅದರ ಅರ್ಥ ಈಗಿನ ಸಮಯದಲ್ಲಿ ಸುಖ, ಶಾಂತಿಯ ಒಂದು ಹನಿಗೋಸ್ಕರ ಆತ್ಮಗಳು ಬಾಯಾರಿದ್ದಾರೆ ಎಂದು. ಒಂದು ಸುಖ, ಶಾಂತಿಯ ಅಮೃತದ ಹನಿ ಸಿಗುವುದರಿಂದ ಖುಷಿಯಾಗುತ್ತಾರೆ. ಬಾಪ್ದಾದಾ ಪದೇ-ಪದೇ - ತಿಳಿಸುತ್ತಾರೆ ಸಮಯ ನಿಮ್ಮನ್ನು ಕಾಯುತ್ತಿದೆ. ಬ್ರಹ್ಮಾ ತಂದೆ ನಮ್ಮ ಮನೆಯ ಬಾಗಿಲು ತೆರೆಯಲು ಕಾಯುತ್ತಿದ್ದಾರೆ. ಪ್ರಕೃತಿ ತೀವ್ರಗತಿಯಿಂದ ಸ್ವಚ್ಚ ಮಾಡಲು ಕಾಯುತ್ತಿದೆ. ಹೇ! ಫರಿಸ್ತೆಗಳೇ ಈಗ ನಿಮ್ಮ ಡಬಲ್ ಲೈಟ್ನ ಮುಖಾಂತರ ಕಾಯುವುದನ್ನು ಸಮಾಪ್ತಿ ಮಾಡಿ. ಎವರ್ರೆಡಿ ಎನ್ನುವ ಶಬ್ದವನ್ನು ಎಲ್ಲರೂ ಹೇಳುತ್ತಾರೆ, ಆದರೆ ಸಂಪನ್ನ ಮತ್ತು ಸಂಪೂರ್ಣ ಆಗುವುದರಲ್ಲಿ ಎವರ್ರೆಡಿ ಆಗಿದ್ದೀರಾ? ಶರೀರವನ್ನು ಬಿಡುವುದರಲ್ಲಿ ಮಾತ್ರ ಎವರ್ರೆಡಿ ಆಗುವುದಿಲ್ಲ, ಆದರೆ ತಂದೆಯ ಸಮಾನವಾಗಿ ಹೋಗುವುದರಲ್ಲಿ ಎವರ್ರೆಡಿ ಆಗಬೇಕಾಗಿದೆ.
ಇಲ್ಲಿ ಮಧುಬನದಲ್ಲಿ ಎಲ್ಲರೂ ಮುಂದೆ, ಮುಂದುವರೆಯುತ್ತಾರೆ, ಒಳ್ಳೆಯದು. ಸೇವೆಯನ್ನು ಚೆನ್ನಾಗಿ ಮಾಡುತ್ತೀರಿ. ಮಧುಬನದವರು ಎವರ್ರೆಡಿ ಆಗಿದ್ದೀರಾ? ಮುಗುಳ್ನಗುತ್ತಿದ್ದರು, ಭಲೇ ಮೊದಲನೆಯ ಸಾಲಿನಲ್ಲಿ ಕುಳಿತಿರುವ ಮಹಾರಥಿಗಳೇ ಎವರ್ರೆಡಿ ಆಗಿದ್ದೀರಾ? ತಂದೆಯ ಸಮಾನವಾಗುವುದರಲ್ಲಿ ಎವರ್ರೆಡಿ ಆಗಿದ್ದೀರಾ? ಈ ರೀತಿ ತಿಳಿದರೆ ಅಡ್ವಾನ್ಸ್ ಪಾರ್ಟಿಯಲ್ಲಿ ಹೋಗುತ್ತೀರಿ. ಅಡ್ವಾನ್ಸ್ ಪಾರ್ಟಿ ಬಯಸದ್ದಿದ್ದರೂ ಹೆಚ್ಚುತ್ತದೆ. ಹಾಗಾದರೆ ಇದರಲ್ಲಿ ತತ್ಪರ (ಬಿಜಿ) ಆಗುತ್ತೀರಲ್ಲವೇ! ವಾಣಿ ಮತ್ತು ಮನಸ್ಸಾ ಸೇವೆಯಲ್ಲಿ ಸಮತೋಲನ ಇದ್ದರೆ ಆಶೀರ್ವಾದ ಸಿಗುತ್ತದೆ. ಡಬ್ಬಲ್ ಖಾತೆ ಜಮಾ ಆಗುತ್ತದೆ. ಪುರುಷಾರ್ಥ ಮತ್ತು ಆಶೀರ್ವಾದದ ಸಂಕಲ್ಪ, ಮಾತು, ವಾಣಿ, ಕರ್ಮ, ಸಂಬಂಧ ಮತ್ತು ಸಂಪರ್ಕದ ಮುಖಾಂತರ ಆಶೀರ್ವಾದ ನೀಡಿ ಮತ್ತು ಆಶೀರ್ವಾದ ಪಡೆಯಿರಿ. ಒಂದೇ ವಿಚಾರ ಇರಲಿ - ಆಶೀರ್ವಾದ ನೀಡುವುದು. ಭಲೆ ನಿಮಗೆ ಶಾಪವನ್ನು ಹಾಕಲಿ ಆದರೆ ಅವರಿಗೂ ಸಹ ಆಶೀರ್ವಾದವನ್ನೇ ನೀಡಿ. ಏಕೆಂದರೆ ನೀವು ಆಶೀರ್ವಾದದ ಸಾಗರನ ಮಕ್ಕಳು ಬೇರೆಯವರು ಮುನಿಸಿಕೊಂಡರೂ ಸಹ ನೀವು ಮುನಿಸಿಕೊಳ್ಳಬೇಡಿ. ನೀವು ರಹಸ್ಯ ಯುಕ್ತರಾಗಿರಲು ಸಾಧ್ಯವೇ? ಆಗುತ್ತದೆಯೇ? ಆಗುತ್ತದೆಯೇ? ಎರಡೆನೆಯ ಸಾಲಿನಲ್ಲಿ ಕುಳಿತಿರುವವರಿಗೆ ಆಗುತ್ತದೆಯೇ? ನೋಡುತ್ತೀರಿ ಈಗ ಇನ್ನು ಹೆಚ್ಚು ಬೇಜಾರು ಪಡೆಸುತ್ತಾರೆ! ಪರೀಕ್ಷೆಗಳು ಇನ್ನೂ ಅನೇಕ ಬರಲಿದೆ. ಮಾಯೆ ಕೇಳಿಸಿಕೊಳ್ಳುತ್ತಿದೆ! ಈಗ ಪತ್ರ ತೆಗೆದುಕೊಳ್ಳಿ. ದೃಢ ಸಂಕಲ್ಪ ಮಾಡಿ ನಾನು ಆಶೀರ್ವಾದವನ್ನೇ ನೀಡಿ ಮತ್ತು ಆಶೀರ್ವಾದವನ್ನೇ ಪಡೆಯಬೇಕಾಗಿದೆ ಆಗುತ್ತದೆಯೇ? ಮಾಯೆಯು ಭಲೆ ಬೇಜಾರು ಪಡೆಸಿದರೂ ನೀವು ರಹಸ್ಯಯುಕ್ತರಾಗಿರುತ್ತೀರಲ್ಲವೇ? ಬೇಜಾರಾಗಬಾರದು ಹಾಗೂ ಬೇರೆಯವರನ್ನು ಪಡೆಸಬಾರದು - ಇದು ಒಂದೇ ಕಾರ್ಯವನ್ನು ಮಾಡಿ. ಬೇರೆಯವರು ಭಲೆ ಬೇಜಾರಾದರೂ ತಾವು ಆಗಬಾರದು. ನಾವು ಬೇಜಾರು ಮಾಡದಿದ್ದರೂ ನಾವು ಬೇಜಾರು ಆಗಬಾರದು. ಪ್ರತಿಯೊಬ್ಬರು ಈ ಜವಾಬ್ದಾರಿ ತೆಗೆದುಕೊಳ್ಳಿ. ಬೇರೆಯವರನ್ನು ನೋಡಬೇಡಿ. ಅವರು ಮಾಡುತ್ತಾರೆ, ಇವರು ಮಾಡುತ್ತಾರೆ, ನಾವು ಸಾಕ್ಷಿಯಾಗಿದ್ದು ಆಟವನ್ನು ನೋಡಬೇಕಾಗಿದೆ. ಕೇವಲ ರಹಸ್ಯಯುಕ್ತ ಆಟವನ್ನೇ ನೋಡುತ್ತೀರಾ, ಬೇಜಾರು ಪಡೆಸುವಂತಹ ಆಟವನ್ನು ಮಧ್ಯ-ಮಧ್ಯ ನೋಡಿ, ಆದರೆ ಪ್ರತಿಯೊಬ್ಬರು ತಮಗೆ ತಾವೇ ರಾಜಿ ಮಾಡಿಕೊಳ್ಳಿ.
ಹೇ! ಮಾತೆಯರೇ ಆಗುತ್ತದೆಯೇ? ಪಾಂಡವರೇ ಆಗುತ್ತದೆಯೇ? ಬಾಪ್ದಾದಾ ನಕ್ಷೆಯನ್ನು ನೋಡುತ್ತಾರೆ. ಬಾಪ್ದಾದಾರವರ ಬಳಿ ತುಂಬಾ ದೊಡ್ಡದಾದ ಟಿ.ವಿ ಇದೆ. ಪ್ರತಿಯೊಬ್ಬರನ್ನು ನೋಡಬಹುದಾಗಿದೆ. ಯಾವುದೇ ಸಮಯದಲ್ಲಿ ಯಾರೇ ಆದರೂ ಏನೇ ಮಾಡುತ್ತಿದ್ದರೂ ಬಾಪ್ದಾದಾ ನೋಡುತ್ತಾರೆ. ಆದರೆ ಏನೇನು ಮಾಡುತ್ತೀರಿ ಅದನ್ನೂ ಸಹ ನೋಡುತ್ತಾರೆ. ಮಕ್ಕಳೂ ಸಹ ಬಹಳ ಬುದ್ಧಿವಂತಿಕೆಯನ್ನು ತೋರಿಸುತ್ತಾರೆ. ಒಂದುವೇಳೆ ನಿಮ್ಮ ಚಲಾಕಿತನವನ್ನು ಬಾಪ್ದಾದಾ ಹೇಳಿದರೆ ನೀವು ಕೇಳಿ ಸ್ವಲ್ಪ ಚಿಂತಿತರಾಗುತ್ತೀರಾ! ನಿಮ್ಮನ್ನು ಏಕೆ ಚಿಂತಿತಗೊಳಿಸಲಿ. ಆದರೆ ಬಹಳ ಬುದ್ಧಿವಂತಿಕೆಯಿಂದ ಮಾಡುತ್ತೀರಿ. ಒಂದುವೇಳೆ ಬುದ್ಧಿವಂತಿಕೆಯನ್ನು ನೋಡಬೇಕೆಂದರೆ ಬ್ರಾಹ್ಮಣರಲ್ಲಿಯೇ ನೋಡಿ. ಆದರೆ ಈಗ ಯಾವುದರಲ್ಲಿ ಬುದ್ಧಿವಂತರಾಗಬೇಕಾಗಿದೆ? ಮನಸ್ಸಾ ಸೇವೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಿರಿ. ಹಿಂದೆ ಬೀಳಬೇಡಿರಿ. ಇದಕ್ಕೆ - ಸಮಯ ಸಿಗುವುದಿಲ್ಲ, ಅವಕಾಶ ಸಿಗುವುದಿಲ್ಲ, ಆರೋಗ್ಯ ಸರಿಯಿರುವುದಿಲ್ಲ, ಯಾರೂ ಕೇಳಲೇಯಿಲ್ಲ, ಇತ್ಯಾದಿ ಯಾವ ನೆಪಹೇಳಬೇಡಿ, ಎಲ್ಲರೂ ಮಾಡಬೇಕಾಗಿದೆ. ಮಕ್ಕಳು ಓಡುವ ಆಟವನ್ನು ಆಡಿದ್ದೀರಲ್ಲವೇ! ಈಗ ಮನಸ್ಸಾ ಸೇವೆಯಲ್ಲಿ ಓಡಬೇಕಾಗಿದೆ. ಒಳ್ಳೆಯದು.
ಕರ್ನಾಟಕದ ಸೇವಾಧಾರಿಯೊಂದಿಗೆ: ಕರ್ನಾಟಕದವರು ಯಾರು ಸೇವೆಯಲ್ಲಿ ಬಂದಿದ್ದೀರಿ ಎದ್ದು ನಿಲ್ಲಿರಿ. ಇಷ್ಟೊಂದು ಜನರು ಸೇವೆಯಲ್ಲಿ ಬಂದಿದ್ದೀರಾ, ಪಾರ್ಟಿಯಲ್ಲಿ ಬಂದಿರುವವರಲ್ಲ, ಸೇವಾಧಾರಿಯಾಗಿ ಬಂದಿರುವವರು. ಒಳ್ಳೆಯದು, ಇದೂ ಸಹ ಸಹಜವಾಗಿ ಶ್ರೇಷ್ಠ ಪುಣ್ಯವನ್ನು ಜಮಾ ಮಾಡಿಕೊಳ್ಳುವ ಸುವರ್ಣವಕಾಶ ಸಿಕ್ಕಿದೆ. ಭಕ್ತಿಯಲ್ಲಿ ಹೇಳಲಾಗುತ್ತದೆ, ಒಬ್ಬ ಬ್ರಾಹ್ಮಣರ ಸೇವೆಯನ್ನು ಮಾಡುವುದರಿಂದ ಬಹಳ ಪುಣ್ಯ ಪ್ರಾಪ್ತಿಯಾಗುತ್ತದೆ. ಇಲ್ಲಿ ಎಷ್ಟೊಂದು ಶ್ರೇಷ್ಠ ಸತ್ಯ ಬ್ರಾಹ್ಮಣರ ಸೇವೆಯನ್ನು ಮಾಡುತ್ತೀರಿ. ಇಂತಹ ಒಳ್ಳೆಯ ಚಾನ್ಸ್ ಸಿಗುತ್ತದೆಯಲ್ಲವೇ! ಚೆನ್ನಾಗಿದೆಯೇ, ಧಣಿವಾಯಿತೇ? ಧಣಿವಾಗಲಿಲ್ಲವೇ! ಮಜಾ ಇದೆಯೇ! ಒಂದುವೇಳೆ ಸತ್ಯ ಹೃದಯದಿಂದ ಪುಣ್ಯ ಎಂದು ತಿಳಿದು ಸೇವೆ ಮಾಡಿದರೆ ಅದರ ಪ್ರತ್ಯೇಕ ಫಲ ಧಣಿವಾಗುವುದಿಲ್ಲ, ಖುಷಿಯಾಗುತ್ತದೆ. ಈ ಪ್ರತ್ಯೇಕ ಫಲ ಪುಣ್ಯದ ಜಮಾದ ಅನುಭವ ಮಾಡಿಸುತ್ತದೆ. ಆದರೆ ಸ್ವಲ್ಪವೂ ಯಾವುದೇ ಕಾರಣದಿಂದ ಸುಸ್ತಾದರೇ ಅಥವಾ ಸ್ವಲ್ಪ ಮಾತ್ರವೂ ಅನುಭವಾದರೆ ತಿಳಿದುಕೊಳ್ಳಿ, ಸತ್ಯಹೃದಯದಿಂದ ಸೇವೆ ಮಾಡಲಿಲ್ಲ. ಸೇವೆಯೆಂದರೆ ಪ್ರತ್ಯೇಕ ಫಲ - ಮೇವಾ. ಸೇವೆ ಮಾಡುವುದಿಲ್ಲ ಆದರೆ ಫಲ ತಿನ್ನುತ್ತಾರೆ. ಆದರೆ ಕರ್ನಾಟಕದ ಸರ್ವ ಸೇವಾಧಾರಿಗಳು ತಮ್ಮ ಒಳ್ಳೆಯ ಸೇವೆಯ ಪಾತ್ರ ಮಾಡಿದಿರಿ. ಹಾಗೂ ಸೇವೆಯ ಫಲವನ್ನು ತಿಂದಿರಿ.
ಒಳ್ಳೆಯದು ಎಲ್ಲಾ ಶಿಕ್ಷಕಿಯರು ಚೆನ್ನಾಗಿದ್ದೀರಾ? ಶಿಕ್ಷಕಿಯರಿಗಂತೂ ಅನೇಕ ಬಾರಿ ತಂದೆಯ ಮಿಲನದ ಅವಕಾಶ ಸಿಗುತ್ತದೆ. ಇದೂ ಸಹ ಭಾಗ್ಯದ ಗುರುತಾಗಿದೆ. ಈಗ ಶಿಕ್ಷಕಿಯರು ಮನಸ್ಸಾ ಸೇವೆಯಲ್ಲಿ ರೇಸ್ ಮಾಡಬೇಕಾಗಿದೆ. ಮನಸ್ಸಾ ಸೇವೆ ಮಾಡುತ್ತಿದ್ದೇನೆಂದು ಇಡೀ ದಿವಸ ಅದರಲ್ಲೇ ಕುಳಿತುಬಿಡುವುದಿಲ್ಲ. ಯಾರಾದರು ಕೋರ್ಸ್ಗೆ ಬಂದಾಗ ನಾನು ಮನಸ್ಸಾ ಸೇವೆ ಮಾಡುತ್ತಿದ್ದೇನೆಂದು ಕಳುಹಿಸಿಬೇಡಿರಿ. ಏನಾದರೂ ಕರ್ಮಯೋಗದ ಸಮಯ ಬಂದಾಗ ನಾನು ಮನಸ್ಸಾ ಸೇವೆ ಮಾಡುತ್ತಿದ್ದೇನೆಂದು ಹೇಳುವುದು ಸರಿಯಲ್ಲ. ಸಮತೋಲನ ಇರಬೇಕು. ಕೆಲವರಿಗೆ ಹೆಚ್ಚು ನಶೆ ಏರಿಬಿಡುತ್ತದೆಯಲ್ಲವೇ! ಈ ರೀತಿಯ ನಶೆಯನ್ನು ಏರಿಸಿಕೊಳ್ಳಬಾರದು. ಸಮತೋಲನದಲ್ಲಿ ಆಶೀರ್ವಾದ ಇದೆ. ಸಮತೋಲನೆ ಇಲ್ಲವೆಂದರೆ ಆಶೀರ್ವಾದ ಇಲ್ಲ. ಒಳ್ಳೆಯದು.
ಈಗ ಒಂದು ಸೆಕೆಂಡಿನಲ್ಲಿ ಎಲ್ಲರೂ ಮನಸ್ಸಾ ಸೇವೆಯ ಅನುಭವವನ್ನು ಮಾಡಿ. ಆತ್ಮಗಳಿಗೆ ಶಾಂತಿ ಮತ್ತು ಶಕ್ತಿಯ ದಾನವನ್ನು ನೀಡಿ. ಒಳ್ಳೆಯದು ನಾಲ್ಕೂ ಕಡೆಯ ಸರ್ವ ಶ್ರೇಷ್ಠ ಆತ್ಮೀಯತೆಯ ಅನುಭವ ಮಾಡಿಸುವಂತಹ ಆತ್ಮಗಳಿಗೆ, ಸರ್ವ ಸಂಕಲ್ಪ ಮತ್ತು ಸ್ನೇಹದಲ್ಲಿಯೂ ಸಹ ಪವಿತ್ರತೆಯ ಪಾಠವನ್ನು ಕಲಿಯುವಂತಹ ಬ್ರಹ್ಮಾಚಾರಿ ಮಕ್ಕಳಿಗೆ, ಎಲ್ಲಾ ದೃಢ ಸಂಕಲ್ಪಧಾರಿ, ಮನಸ್ಸಾ ಸೇವಾಧಾರಿ, ತೀವ್ರ ಪುರುಷಾರ್ಥಿ ಆತ್ಮಗಳಿಗೆ, ಸದಾ ಆಶೀರ್ವಾದವನ್ನು ನೀಡಿ ಮತ್ತು ಆಶೀರ್ವಾದವನ್ನು ಪಡೆಯುವಂತಹ ಪುಣ್ಯ ಆತ್ಮಗಳಿಗೆ ಬಾಪ್ದಾದಾರವರ ಹೃದಯರಾಮ ತಂದೆಯ ಅತೀ ಪ್ರೀತಿಯ ನೆನಪು ಪ್ರೀತಿ ಹಾಗೂ ನಮಸ್ತೆ.
ದಾದೀಜಿ, ಜಾನಕಿ ದಾದೀಜಿಯವರೊಂದಿಗೆ ವ್ಯಕ್ತಿಗತ ಮಿಲನ:- ಬಾಪ್ದಾದಾ ತ್ರಿಮೂರ್ತಿ ಬ್ರಹ್ಮನ ದೃಶ್ಯವನ್ನು ತೋರಿಸಿದರು. ನೀವೆಲ್ಲರೂ ನೋಡಿದಿರಲ್ಲವೇ? ಏಕೆಂದರೆ ತಂದೆ ಸಮಾನ ತಂದೆಯ ಪ್ರತಿ ಕಾರ್ಯದಲ್ಲಿ ಜೊತೆಗಾರರಲ್ಲವೇ! ಆದುದರಿಂದ ಈ ದೃಶ್ಯವನ್ನು ತೋರಿಸಲಾಯಿತು. ಬಾಪ್ದಾದಾ ನೀವಿಬ್ಬರಿಗೂ ವಿಶೇಷ ಶಕ್ತಿಗಳನ್ನು ವಿಲ್ ಮಾಡಿದ್ದಾರೆ. ವಿಲ್ ಪವರ್ನ್ನೂ ಸಹ ಕೊಟ್ಟಿದ್ದಾರೆ ಹಾಗೂ ಎಲ್ಲಾ ಶಕ್ತಿಗಳನ್ನು ವಿಲ್ ಮಾಡಿದ್ದೇವೆ ಆದುದರಿಂದ ಆ ಎಲ್ಲಾ ಶಕ್ತಿಗಳು ತಮ್ಮ ಕೆಲಸವನ್ನು ಮಾಡುತ್ತಿವೆ. ಮಾಡಿ ಮಾಡಿಸುವವರು ಮಾಡಿಸುತ್ತಿದ್ದಾರೆ ಹಾಗೂ ನಿಮಿತ್ತರಾಗಿ ಮಾಡುತ್ತಿದ್ದೀರಿ ಆ ಈ ರೀತಿ ಮಾಡಲು ಮಜಾ ಅನಿಸುತ್ತದೆಯಲ್ಲವೇ! ಮಾಡಿ ಮಾಡಿಸುವವರ ಮಾಡಿಸುತ್ತಿದ್ದಾರೆ. ಆದುದರಿಂದ ಮಾಡಿ ಮಾಡಿಸುವವರು ಮಾಡಿಸುತ್ತಿರುವ ಕಾರಣ ನೀವು ನಿಶ್ಚಿಂತರಾಗಿ ಮಾಡುತ್ತಿದ್ದೀರಿ. ಚಿಂತೆ ಇರುವುದಿಲ್ಲವಲ್ಲವೇ! - ನೀವು ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ. ಮಾಸ್ಟರ್ ಡಿಗ್ರಿಯನ್ನು ಆರ್ಥಾತ್ - ತಂದೆ ಸಮಾನ ಸ್ಥಾನವನ್ನು ಪಾಸ್ ಮಾಡಿದ್ದೀರಿ, ಕೇವಲ ಈಗ ಪುನರಾವರ್ತನೆ ಮಾಡಬೇಕು. ಪುನರಾವರ್ತನೆ ಮಾಡುವಾಗ ಕಷ್ಟವಾಗುವುದಿಲ್ಲ. ಇಲ್ಲವಾದರೆ ಮಾಸ್ಟರ್ ಡಿಗ್ರಿಯನ್ನು ಯಾರು ತೆಗೆದುಕೊಳ್ಳುತ್ತಿದ್ದರು! ಬೇರೆ ಮಾಸ್ಟರ್ ಡಿಗ್ರಿ ತೆಗೆದುಕೊಳ್ಳುವವರೂ ಸಹ ನಿಮ್ಮ ಜೊತೆಗಾರರಾಗಿರುತ್ತಾರೆ. ಜೊತಗಾರರೂ ಬೇಕಲ್ಲವೇ! ಆದರೆ ಆಗಲೇಬೇಕಾಗಿದೆ. ಅರ್ಥಾತ್ ನೀವು ತೇರ್ಗಡೆ ಆಗಿಯೇ ಇದ್ದೀರಿ. ತೇರ್ಗಡೆ ಆಗಿಲ್ಲವೇ! ಎಷ್ಟೊಂದು ಸಾರಿ ತೇರ್ಗಡೆ ಆಗಿದ್ದೀರಿ.....! ಎಷ್ಟೊಂದು ಸಾರಿ ತೇರ್ಗಡೆ ಆಗಿದ್ದೀರಿ.....! (ಅನೇಕ ಸಾರಿ) ಅನೇಕ ಸಾರಿ ಮಾಡಿರುವ ಕಾರಣ ಅದು ಆಗಿಯೇ ಇದೆ. ಒಳ್ಳೆಯದು. ಆರೋಗ್ಯವನ್ನು ಕುರಿತು ಜ್ಞಾನಪೂರ್ಣರಾಗಿರಬೇಕು. ಸ್ವಲ್ಪ ಏರು-ಪೇರು ಆಗುತ್ತದೆ. ಇದರಲ್ಲಿಯೂ ನಾಲೆಡ್ಜ್ಫುಲ್ ಆಗಬೇಕಾಗುತ್ತದೆ. ಏಕೆಂದರೆ ಇನ್ನೂ ಬಹಳ ಸೇವೆ ಮಾಡಬೇಕಾಗಿದೆ. ಹೀಗೆ ಆರೋಗ್ಯವೂ ಸಹಯೋಗ ಕೊಡುತ್ತದೆ. ಈ ರೀತಿ ಡಬಲ್ ನಾಲೆಡ್ಜ್ಫುಲ್ ಆಗಿದ್ದೀರಿ. ಒಳ್ಳೆಯದು.