NLP_Assignment_1 / BKMurli /page_103.txt
CoolCoder44's picture
Upload 100 files
b947e47 verified
raw
history blame
20.4 kB
ಓಂ ಶಾಂತಿ. ಹೇಗೆ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆ ಪ್ರಿಯವಾಗಿರುವಂತೆ ಆತ್ಮಿಕ ತಂದೆಗೆ ಆತ್ಮಿಕ ಮಕ್ಕಳೂ ಪ್ರಿಯವಾಗಿರುತ್ತಾರೆ ಏಕೆಂದರೆ ಶ್ರೀಮತದನುಸಾರ ಇಡೀ ವಿಶ್ವದ ಕಲ್ಯಾಣ ಮಾಡುತ್ತಿದ್ದೀರಿ ಕಲ್ಯಾಣಕಾರಿ ಗಳೆಲ್ಲರೂ ಪ್ರಿಯರಾಗುತ್ತಾರೆ. ನೀವೂ ಸಹ ಪರಸ್ಪರ ಸಹೋದರ ಸಹೋದರರಾಗಿದ್ದೀರಿ ಅಂದಾಗ ಅವಶ್ಯವಾಗಿ ನೀವು ಒಬ್ಬರು ಇನ್ನೊಬ್ಬರಿಗೆ ಪ್ರಿಯರಾಗುತ್ತೀರಿ. ಎಷ್ಟು ಈ ತಂದೆಯ ಮಕ್ಕಳಲ್ಲಿ ಪರಸ್ಪರ ಪ್ರೀತಿ ಇರುವುದೋ ಅಷ್ಟು ಹೊರಗಿನವರೊಂದಿಗೆ ಇರುವುದಿಲ್ಲ. ನಿಮ್ಮಲ್ಲಿಯೂ ಪರಸ್ಪರ ಬಹಳ ಪ್ರೀತಿಯಿರಬೇಕು. ಒಂದು ವೇಳೆ ಸಹೋದರ ಸಹೋದರರೇ ಇಲ್ಲಿ ಹೊಡೆದಾಡಿದರೆ, ಜಗಳವಾಡಿದರೆ, ಅಥವಾ ಪ್ರೀತಿ ಮಾಡದಿದ್ದರೆ ಅವರು ಸಹೋದರರೇ ಅಲ್ಲ. ನಿಮ್ಮಲ್ಲಿ ಪರಸ್ಪರ ಪ್ರೀತಿ ಇರಬೇಕು. ತಂದೆಗೆ ಆತ್ಮಗಳ ಜೊತೆ ಪ್ರೀತಿಯಿದೆಯಲ್ಲವೆ! ಅಂದಮೇಲೆ ನೀವಾತ್ಮರಿಗೆ ಪರಸ್ಪರ ಬಹಳ ಪ್ರೀತಿಯಿರಬೇಕು. ಸತ್ಯಯುಗದಲ್ಲಿ ಎಲ್ಲ ಆತ್ಮಗಳು ಒಬ್ಬರು ಇನ್ನೊಬ್ಬರಿಗೆ ಪ್ರಿಯವಾಗಿರುತ್ತಾರೆ ಏಕೆಂದರೆ ಶರೀರದ ಅಭಿಮಾನವಿರುವುದಿಲ್ಲ. ನೀವು ಸಹೋದರ ಸಹೋದರರು ಒಬ್ಬ ತಂದೆಯ ನೆನಪಿನಿಂದ ಇಡೀ ವಿಶ್ವದ ಕಲ್ಯಾಣ ಮಾಡುತ್ತೀರಿ, ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುತ್ತೀರಿ ಅಂದ ಮೇಲೆ ನಿಮ್ಮ ಸಹೋದರರ ಕಲ್ಯಾಣ ಮಾಡಬೇಕು. ಆದ್ದರಿಂದ ತಂದೆಯು ದೇಹಾಭಿಮಾನದಿಂದ ದೇಹೀ ಅಭಿಮಾನಿಯನ್ನಾಗಿ ಮಾಡುತ್ತಿದ್ದಾರೆ. ಆ ಲೌಕಿಕ ಸಹೋದರಂತೂ ಪರಸ್ಪರ ಹಣಕ್ಕಾಗಿ, ಪಾಲಿಗಾಗಿ ಹೊಡೆದಾಡುತ್ತಾರೆ. ಆದರೆ ಇಲ್ಲಿ ಹೊಡೆದಾಡುವ ಜಗಳವಾಡುವ ಮಾತಿಲ್ಲ, ಪ್ರತಿಯೊಬ್ಬರೂ ನೇರ ಸಂಬಂಧವನ್ನಿಟ್ಟುಕೊಳ್ಳಬೇಕಾಗುತ್ತದೆ. ಇದು ಬೇಹದ್ದಿನ ಮಾತಾಗಿದೆ. ಯೋಗಬಲದಿಂದ ತಂದೆಯಿಂದ ಆಸ್ತಿಯನ್ನು ಪಡೆಯಬೇಕು. ಹೇಗೆ ಲೌಕಿಕ ತಂದೆಯಿಂದ ಸ್ಥೂಲ ಆಸ್ತಿಯನ್ನು ಪಡೆಯುತ್ತಾರೆ, ಇದಂತೂ ಆತ್ಮಿಕ ತಂದೆಯಿಂದ ಆತ್ಮಿಕ ಮಕ್ಕಳಿಗೆ ಆತ್ಮಿಕಆಸ್ತಿಯಾಗಿದೆ. ಪ್ರತಿಯೊಬ್ಬರೂ ನೇರವಾಗಿ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಎಷ್ಟೆಷ್ಟು ವ್ಯಕ್ತಿಗತವಾಗಿ ತಂದೆಯನ್ನು ನೆನಪು ಮಾಡುತ್ತೀರಿ ಅಷ್ಟು ಆಸ್ತಿಯು ಸಿಗುವುದು. ತಂದೆಯು ನೋಡುತ್ತಾರೆ - ಪರಸ್ಪರ ಹೊಡೆದಾಡಿದರೆ ತಂದೆಯು ಹೇಳುತ್ತಾರೆ ನೀವು ನಿರ್ಧನಿಕರೇನು? ಆತ್ಮೀಯ ಸಹೋದರರು ಜಗಳಾಡಬಾರದು, ಒಂದು ವೇಳೆ ಸಹೋದರರಾಗಿಯೂ ಜಗಳವಾಡಿದರೆ, ಪ್ರೀತಿಯಿಲ್ಲವೆಂದರೆ ರಾವಣನ ಮಕ್ಕಳಾದಂತೆ. ಅವರೆಲ್ಲರೂ ಆಸುರೀ ಸಂತಾನರು, ಮತ್ತೆ ದೈವೀ ಸಂತಾನರಲ್ಲಿ ಮತ್ತು ಆಸುರೀ ಸಂತಾನರಲ್ಲಿ ವ್ಯತ್ಯಾಸವೇ ಇಲ್ಲದಂತಾಗುತ್ತದೆ ಏಕೆಂದರೆ ದೇಹಾಭಿಮಾನಿಯಾಗುವುದರಿಂದಲೇ ಹೊಡೆದಾಡುತ್ತಾರೆ. ಆತ್ಮವು ಆತ್ಮನೊಂದಿಗೆ ಹೊಡೆದಾಡುವುದಿಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಪರಸ್ಪರ ಉಪ್ಪುನೀರಾಗಬೇಡಿ. ಆಗುತ್ತಾರೆ ಆದ್ದರಿಂದಲೇ ತಿಳಿಸುತ್ತಾರೆ - ಅಂತಹವರಿಗೆ ತಂದೆಯೂ ಹೇಳುತ್ತಾರೆ - ಇವರು ದೇಹಾಭಿಮಾನಿ ಮಕ್ಕಳಾಗಿದ್ದಾರೆ, ರಾವಣನ ಮಕ್ಕಳಾಗಿದ್ದಾರೆ ನನ್ನ ಮಕ್ಕಳಂತೂ ಅಲ್ಲ ಏಕೆಂದರೆ ಪರಸ್ಪರ ಉಪ್ಪು ನೀರಾಗಿ ಇರುತ್ತಾರೆ. ನೀವು 21 ಜನ್ಮಗಳಲ್ಲಿ ಕ್ಷೀರಖಂಡವಾಗಿ ಇರುತ್ತೀರಿ, ಅಂದಾಗ ಈ ಸಮಯದಲ್ಲಿ ದೇಹೀ ಅಭಿಮಾನಿಗಳಾಗಿರಿ. ಒಂದು ವೇಳೆ ಪರಸ್ಪರ ಆಗುವುದಿಲ್ಲವೆಂದರೆ ಆ ಸಮಯದಲ್ಲಿ ನಾವು ರಾವಣನ ಸಂಪ್ರದಾಯದವರೆಂದು ತಿಳಿಯಬೇಕು. ಪರಸ್ಪರ ಉಪ್ಪು ನೀರಾಗಿರುವುದರಿಂದ ತಂದೆಯ ಗೌರವ ಕಳೆಯುತ್ತಾರೆ. ಈಶ್ವರೀಯ ಸಂತಾನರೆಂದು ಹೇಳಿಕೊಂಡರೂ ಅವರಲ್ಲಿ ಆಸುರೀ ಗುಣಗಳಿದ್ದರೆ ಅವರು ದೇಹಾಭಿಮಾನಿಗಳು ಎಂದರ್ಥ. ದೇಹೀ ಅಭಿಮಾನಿಗಳಲ್ಲಿ ಈಶ್ವರೀಯ ಗುಣಗಳಿರುತ್ತವೆ. ಇಲ್ಲಿ ನೀವು ಈಶ್ವರೀಯ ಗುಣಗಳನ್ನು ಧಾರಣೆ ಮಾಡಿದಾಗಲೇ ತಂದೆಯ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಮತ್ತೆ ಅದೇ ಸಂಸ್ಕಾರವು ಜೊತೆಯಲ್ಲಿ ಇರುತ್ತದೆ. ತಂದೆಗೆ ತಿಳಿಯುತ್ತದೆ - ಮಕ್ಕಳು ದೇಹಾಭಿಮಾನದಲ್ಲಿ ಬಂದು ಉಪ್ಪು ನೀರಾಗುತ್ತಾರೆ ಅಂತಹವರು ಈಶ್ವರನ ಮಕ್ಕಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ತಮಗೆ ಎಷ್ಟೊಂದು ನಷ್ಟ ಮಾಡಿಕೊಳ್ಳುತ್ತಾರೆ, ಮಾಯೆಗೆ ವಶರಾಗುತ್ತಾರೆ, ಪರಸ್ಪರ ಉಪ್ಪು ನೀರಾಗುತ್ತಾರೆ(ಮತಭೇದ). ಹಾಗೆ ಹೇಳುವುದಾದರೆ ಇಡೀ ಪ್ರಪಂಚವೇ ಉಪ್ಪು ನೀರಾಗಿದೆ ಆದರೆ ಒಂದು ವೇಳೆ ಈಶ್ವರೀಯ ಸಂತಾನರೂ ಸಹ ಉಪ್ಪು ನೀರಾದರೆ ವ್ಯತ್ಯಾಸವೇನಾಯಿತು? ಅವರಂತೂ ತಂದೆಯ ನಿಂದನೆ ಮಾಡಿಸುತ್ತಾರೆ. ತಂದೆಯ ನಿಂದನೆ ಮಾಡಿಸುವವರು, ಉಪ್ಪು ನೀರಾಗಿ ವರ್ತಿಸುವವರು, ಪದವಿ ಪಡೆಯಲು ಸಾಧ್ಯವಿಲ್ಲ. ಅವರನ್ನು ನಾಸ್ತಿಕರು ಎಂದು ಹೇಳಬಹುದು. ಆಸ್ತಿಕರಾಗುವ ಮಕ್ಕಳು ಎಂದೂ ಹೊಡೆದಾಡುವುದಿಲ್ಲ. ನೀವು ಪರಸ್ಪರ ಜಗಳವಾಡಬಾರದು. ಪ್ರೇಮದಿಂದ ಇರುವುದನ್ನು ಇಲ್ಲಿಂದಲೇ ಕಲಿಯಬೇಕು. ಇದರಿಂದ ಮುಂದೆ 21 ಜನ್ಮಗಳು ಪರಸ್ಪರ ಪ್ರೇಮ ಇರುತ್ತದೆ. ತಂದೆಯ ಮಕ್ಕಳು ಎಂದು ಕರೆಸಿಕೊಂಡ ಮೇಲೂ ಸಹೋದರ ಸಹೋದರಾಗುವುದಿಲ್ಲವೆಂದರೆ ಅವರು ಆಸುರೀ ಸಂತಾನರು. ತಂದೆಯು ಮಕ್ಕಳಿಗೆ ತಿಳಿಸಲು ಮುರಳಿ ನುಡಿಸುತ್ತಾರೆ ಆದರೆ ದೇಹಾಭಿಮಾನದ ಕಾರಣ ಬಾಬಾ ನಮಗೋಸ್ಕರ ಹೇಳುತ್ತಾರೆ ಎನ್ನುವುದೂ ತಿಳಿಯುವುದಿಲ್ಲ. ಮಾಯೆ ಬಹಳ ತೀಕ್ಷ್ಣವಾಗಿದೆ ಹೇಗೆ ಇಲಿ ಕಚ್ಚಿದಾಗ ಗೊತ್ತಾಗುವುದಿಲ್ಲ ಹಾಗೆ ಮಾಯೆಯೂ ಸಹ ಬಹಳ ಮಧುರವಾಗಿ ಕಚ್ಚುತ್ತದೆ ಅದು ಗೊತ್ತಾಗುವುದೇ ಇಲ್ಲ. ಪರಸ್ಪರ ಮುನಿಸಿಕೊಳ್ಳುವುದು ಆಸುರೀ ಸಂಪ್ರದಾಯದವರ ಕೆಲಸವಾಗಿದೆ. ಬಹಳ ಸೇವಾಕೇಂದ್ರಗಳಲ್ಲಿ ಉಪ್ಪು ನೀರಾಗಿ ವರ್ತಿಸುತ್ತಾರೆ, ಇನ್ನೂ ಯಾರೂ ಸಂಪೂರ್ಣರಾಗಿಲ್ಲ. ಮಾಯೆ ಯುದ್ಧ ಮಾಡುತ್ತಿರುತ್ತದೆ. ಮಾಯೆ ಹೀಗೆ ತಲೆ ತಿರುಗಿಸುತ್ತದೆ, ಅದು ತಿಳಿಯುವುದೇ ಇಲ್ಲ. ತಮ್ಮ ಹೃದಯದೊಂದಿಗೆ ಕೇಳಿಕೊಳ್ಳಿ - ನಮ್ಮಲ್ಲಿ ಪರಸ್ಪರ ಪ್ರೇಮವಿದೆಯೇ ಅಥವಾ ಇಲ್ಲವೆ? ಪ್ರೇಮ ಸಾಗರನ ಮಕ್ಕಳಾಗಿದ್ದೀರಿ ಅಂದ ಮೇಲೆ ಪ್ರೇಮದಿಂದ ತುಂಬಿದ ಗಂಗೆಯಾಗಿರಬೇಕು. ಹೊಡೆದಾಡುವುದು- ಜಗಳಾಡುವುದು, ಅಲ್ಲ ಸಲ್ಲದ ಮಾತನಾಡುವುದುದಕ್ಕಿಂತ ಮಾತನಾಡದಿರುವುದು ಒಳ್ಳೆಯದು. ಕೆಟ್ಟದ್ದನ್ನು ಕೇಳಬೇಡಿ. . . . ಒಂದು ವೇಳೆ ಯಾರಲ್ಲಿಯಾದರೂ ಕ್ರೋಧದ ಅಂಶವಿದ್ದರೆ ಆ ಪ್ರೀತಿಯಿರುವುದಿಲ್ಲ. ಆದ್ದರಿಂದ ತಂದೆ ತಿಳಿಸುತ್ತಾರೆ - ಪ್ರತಿನಿತ್ಯವೂ ತಮ್ಮ ಚಾರ್ಟ್ನ್ನು ನೋಡಿಕೊಳ್ಳಿ. ಆಸುರೀ ಚಲನೆಯು ಸುಧಾರಣೆಯಾಗದಿದ್ದರೆ ಮತ್ತೆ ಅದೃಷ್ಟವೇನಾಗಬಹುದು? ಯಾವ ಪದವಿಯನ್ನು ಪಡೆಯುತ್ತೀರಿ? ತಂದೆ ತಿಳಿಸುತ್ತಾರೆ ಏನೂ ಸೇವೆ ಮಾಡದಿದ್ದರೆ ಅವರ ಸ್ಥಿತಿಯೇನಾಗಬಹುದು? ಪದವಿ ಕಡಿಮೆಯಾಗುವುದು. ಸಕ್ಷಾತ್ಕಾರವಂತೂ ಎಲ್ಲರಿಗೂ ಆಗಲೇ ಬೇಕು. ನಿಮಗೂ ನಿಮ್ಮ ವಿದ್ಯಾಭ್ಯಾಸದ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಾತ್ಕಾರವಾದ ನಂತರವೇ ನೀವು ವರ್ಗಾವಣೆಯಾಗುತ್ತೀರಿ. ವರ್ಗವಾಗಿ ನೀವು ಹೊಸ ಪ್ರಪಂಚದಲ್ಲಿ ಬರುತ್ತೀರಿ. ಅಂತ್ಯದಲ್ಲಿ ಯಾರು ಎಷ್ಟು ಅಂಕಗಳಿಂದ ತೇರ್ಗಡೆ ಆಗಿದ್ದಾರೆಂದು ಸಾಕ್ಷಾತ್ಕಾರ ಆಗುತ್ತದೆ. ಆ ಸಮಯದಲ್ಲಿ ಅಳುತ್ತಾರೆ, ದುಃಖಿಸುತ್ತಾರೆ, ಶಿಕ್ಷೆಯನ್ನೂ ಅನುಭವಿಸುತ್ತಾರೆ. ನಾವು ತಂದೆ ಹೇಳಿದ್ದನ್ನು ಪಾಲಿಸಲಿಲ್ಲವೆಂದು ಪಶ್ಚಾತ್ತಾಪ ಪಡುತ್ತಾರೆ. ತಂದೆಯಂತೂ ಪದೇ ಪದೇ ತಿಳಿಸುತ್ತಾರೆ - ಮಕ್ಕಳೇ, ಯಾವುದೇ ಆಸುರೀ ಗುಣವಿರಬಾರದು. ಯಾರಲ್ಲಿ ದೈವೀ ಗುಣಗಳಿವೆ ಅವರು ತಮ್ಮ ಸಮಾನ ಮಾಡಿಕೊಳ್ಳಬೇಕು. ತಂದೆಯನ್ನು ನೆನಪು ಮಾಡುವುದಂತೂ ಬಹಳ ಸಹಜ. ಅಲ್ಫ್ ಮತ್ತು ಬೇ. ಅಲ್ಫ್ ಎಂದರೆ ತಂದೆ ಮತ್ತು ಬೇ ಅಂದರೆ ಬಾದಶಾಹಿ. ಅಂದಾಗ ಮಕ್ಕಳಿಗೆ ನಶೆಯಿರಬೇಕು. ಒಂದು ವೇಳೆ ಪರಸ್ಪರ ಉಪ್ಪು ನೀರಾದರೆ ಈಶ್ವರೀಯ ಸಂತಾನರೆಂದು ಹೇಗೆ ತಿಳಿಯುತ್ತೀರಿ! ಇವರು ಆಸುರೀ ಸಂತಾನರು, ಮಾಯೆ ಇವರ ಮೂಗು ಹಿಡಿದುಕೊಂಡಿದೆ ಎಂದು ತಂದೆಯು ತಿಳಿಯುತ್ತಾರೆ. ಇದು ಅವರಿಗೆ ತಿಳಿಯುವುದಿಲ್ಲ. ಅವರ ಸ್ಥಿತಿಯೇ ಏರುಪೇರಾಗುತ್ತದೆ, ಪದವಿಯೂ ಕಡಿಮೆಯಾಗುತ್ತದೆ. ನೀವು ಮಕ್ಕಳು ಅಂತಹವರಿಗೆ ಪ್ರೇಮದಿಂದ ಕಲಿಸಲು ಪ್ರಯತ್ನ ಮಾಡಬೇಕು. ಪ್ರೇಮದ ದೃಷ್ಟಿಯಿರಬೇಕು. ತಂದೆಯು ಪ್ರೇಮದಸಾಗರ ಆಗಿದ್ದಾರೆ ಆದ್ದರಿಂದ ಮಕ್ಕಳನ್ನು ಸೆಳೆಯುತ್ತಾರಲ್ಲವೆ ಅಂದಾಗ ನೀವೂ ಸಹ ಪ್ರೇಮದ ಸಾಗರರಾಗಬೇಕು.
ತಂದೆ ಮಕ್ಕಳಿಗೆ ಬಹಳ ಪ್ರೀತಿಯಿಂದ ತಿಳಿಸುತ್ತಾರೆ, ಒಳ್ಳೆಯ ಮತವನ್ನು ಕೊಡುತ್ತಾರೆ. ಈಶ್ವರೀಯ ಮತ ಸಿಗುವುದರಿಂದ ನೀವು ಹೂಗಳಾಗುತ್ತೀರಿ, ಎಲ್ಲ ಗುಣಗಳನ್ನು ಕೊಡುತ್ತಾರೆ. ದೇವತೆಗಳಲ್ಲಿ ಪ್ರೀತಿಯಿರುತ್ತದೆ ಅಲ್ಲವೆ, ಅಂದಾಗ ಆ ಸ್ಥಿತಿಯನ್ನು ನೀವು ಇಲ್ಲಿಯೇ ರೂಪಿಸಿಕೊಳ್ಳಬೇಕು. ಈ ಸಮಯದಲ್ಲಿನಿಮಗೆ ಜ್ಞಾನವಿದೆ, ನಂತರ ದೇವತೆಗಳಾದಿರೆಂದರೆ ಜ್ಞಾನವು ಇರುವುದಿಲ್ಲ, ಅಲ್ಲಿ ದೈವೀ ಪ್ರೀತಿಯಿರುತ್ತದೆ ಆದ್ದರಿಂದ ತಾವು ಮಕ್ಕಳು ದೈವೀ ಗುಣಗಳನ್ನು ಧಾರಣೆ ಮಾಡಬೇಕು. ಈಗ ನೀವು ಪೂಜ್ಯರಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ನೀವು ಮಕ್ಕಳೂ ಸಹ ನಂಬರ್ವಾರ್ ಪುರುಷಾರ್ಥನುಸಾರ ತಿಳಿದುಕೊಂಡಿದ್ದೀರಿ. ಯಾರು ತಿಳಿದುಕೊಂಡಿಲ್ಲವೋ ಅವರು ಅನ್ಯರಿಗೂ ತಿಳಿಸಲು ಆಗುವುದಿಲ್ಲ. ಮತ್ತು ಪದವಿಯೂ ಕಡಿಮೆಯಾಗುತದೆ. ಶಾಲೆಯಲ್ಲಿ ಓದುವವರಲ್ಲಿ ಕೆಲವರ ಚಲನೆ ಕೆಟ್ಟುಹೋಗುತ್ತದೆ, ಇನ್ನೂ ಕೆಲವರದು ಸದಾ ಒಳ್ಳೆಯ ನಡವಳಿಕೆಯಿರುತ್ತದೆ, ಕೆಲವರು ಹಾಜರಾದರೆ, ಕೆಲವರು ಗೈರುಹಾಜರಿಯಾಗಿರುತ್ತಾರೆ. ಇಲ್ಲಿ ಯಾರು ಸದಾ ತಂದೆಯನ್ನು ನೆನಪು ಮಾಡುತ್ತಾರೆ ಸ್ವದರ್ಶನ ಚಕ್ರತಿರುಗಿಸುತ್ತಾರೆ ಅವರ ಹಾಜರಿಯಿರುತ್ತದೆ. ತಂದೆ ತಿಳಿಸುತ್ತಾರೆ - ಏಳುತ್ತಾ-ಕುಳಿತುಕೊಳ್ಳುತ್ತಾ ತಮ್ಮನ್ನು ಸ್ವದರ್ಶನ ಚಕ್ರಧಾರಿ ಎಂದು ತಿಳಿಯಿರಿ. ಮರೆತರೆ ಗೈರುಹಾಜರಿಯಾಗುತ್ತದೆ. ಯಾವಾಗ ಸದಾ ಹಾಜರಿರುತ್ತೀರಿ ಆಗ ಶ್ರೇಷ್ಠ ಪದವಿ ಪಡೆಯುತ್ತೀರಿ. ಮರೆತರೆ ಕಡಿಮೆ ಪದವಿ ಪಡೆಯುತ್ತೀರಿ. ತಂದೆಗೆ ಗೊತ್ತಿದೆ, ಇನ್ನೂ ಸಮಯವಿದೆ, ಶ್ರೇಷ್ಠ ಪದವಿಯನ್ನು ಪಡೆಯುವವರ ಬುದ್ಧಿಯಲ್ಲಿ ಈ ಚಕ್ರವು ತಿರುಗುತ್ತಿರಬಹುದು. ಶಿವ ತಂದೆಯ ನೆನಪಿರಲಿ, ಮುಖದಲ್ಲಿ ಜ್ಞಾನಾಮೃತವಿರಲಿ ಆಗ ಪ್ರಾಣ ತನುವನ್ನು ಬಿಟ್ಟು ಹೋಗಲಿ ಎಂದು ಹೇಳುತ್ತಾರೆ. ಯಾವುದೇ ವಸ್ತುವಿನೊಂದಿಗೆ ಪ್ರೀತಿಯಿದ್ದರೆ ಅಂತ್ಯ ಕಾಲದಲ್ಲಿ ಅದೇ ನೆನಪಿಗೆ ಬರುತ್ತದೆ. ತಿನ್ನುವ ಲೋಭವಿದ್ದರೆ ಸಾಯುವ ಸಮಯುದಲ್ಲಿ ಅದನ್ನು ತಿನ್ನಬೇಕೆಂದು ಆ ಪದಾರ್ಥವೇ ನೆನಪಿಗೆ ಬರುತ್ತದೆ. ಮತ್ತೆ ಪದವಿಭ್ರಷ್ಟರಾಗುತ್ತಾರೆ. ತಂದೆಯಂತೂ ಹೇಳುತ್ತಾರೆ - ಮಕ್ಕಳೇ, ಸ್ವದರ್ಶನಚಕ್ರಧಾರಿಗಳಾಗಿ ಶರೀರ ಬಿಡಿ, ಮತ್ತೇನೂ ನೆನಪಿಗೆ ಬರಬಾರದು. ಯಾವುದೇ ಸಂಬಂಧವಿಲ್ಲದೆ ಹೇಗೆ ಆತ್ಮವು ಒಂಟಿಯಾಗಿ ಬಂದಿದೆಯೋ ಹಾಗೆಯೇ ಹೋಗಬೇಕು. ಲೋಭವೂ ಕಡಿಮೆಯಿಲ್ಲ. ಲೋಭವಿದ್ದರೆ ಅಂತಿಮ ಸಮಯದಲ್ಲಿ ಅದೇ ನೆನಪಿಗೆ ಬರುತ್ತದೆ. ಅದು ಸಿಗಲಿಲ್ಲವೆಂದರೆ ಅದರ ಆಸೆಯಲ್ಲಿಯೇ ಶರೀರ ಬಿಡುತ್ತಾರೆ. ಆದ್ದರಿಂದ ನೀವು ಮಕ್ಕಳಲ್ಲಿ ಲೋಭ ಇರಬಾರದು. ತಂದೆ ತಿಳಿಸುತ್ತಾರೆ - ಅನೇಕರಿದ್ದಾರೆ ಆದರೆ ಇದನ್ನು ತಿಳಿದುಕೊಳ್ಳುವವರೇ ತಿಳಿದುಕೊಳ್ಳುತ್ತಾರೆ. ತಂದೆಯ ನೆನಪನ್ನು ಹೃದಯದಲ್ಲಿಟ್ಟುಕೊಳ್ಳಿ - ಬಾಬಾ, ಓಹೋ ಬಾಬಾ! ಕೇವಲ ಮುಖದಿಂದ ಬಾಬಾ, ಬಾಬಾ ಎಂದು ಹೇಳುವುದಲ್ಲ ಅಜಪಾಜಪವಾಗಿ ನಡೆಯುತ್ತಿರಲಿ. ತಂದೆಯ ನೆನಪಿನಲ್ಲಿ, ಕರ್ಮಾತೀತ ಸ್ಥಿತಿಯಲ್ಲಿ ಶರೀರ ಬಿಟ್ಟರೆ ಆಗ ಶ್ರೇಷ್ಠ ಪದವಿಯನ್ನು ಪಡೆಯಬಹುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಪ್ರೇಮದಿಂದ ತುಂಬಿದ ಗಂಗೆಯಾಗಬೇಕು. ಎಲ್ಲರ ಪ್ರತಿ ಪ್ರೇಮದ ದೃಷಿ ಇಟ್ಟುಕೊಳ್ಳಬೇಕು. ಎಂದೂ ಬಾಯಿಂದ ಅಲ್ಲ ಸಲ್ಲದ ಮಾತುಗಳನ್ನುಆಡಬಾರದು.
2. ಯಾವುದೇ ಪದಾರ್ಥದಲ್ಲಿ ಲೋಭವನ್ನಿಡಬಾರದು. ಸ್ವದರ್ಶನ ಚಕ್ರಧಾರಿಯಾಗಿರಬೇಕು. ಅಭ್ಯಾಸ ಮಾಡಬೇಕು ಅಂತ್ಯದ ಸಮಯದಲ್ಲಿ ಯಾವುದೇ ಪದಾರ್ಥವು ನೆನಪಾಗಬಾರದು.