| : ಪವಿತ್ರಗೌಡ ಜೈಲುಪಾಲು, ದರ್ಶನ್ ಪೊಲೀಸ್ ಕಸ್ಟಡಿಗೆ | |
| ಬೆಂಗಳೂರು,ಜೂ.20 -ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣಕ್ಕೆ ಸಂಭಂದಿಸಿದಂತೆ ಆರೋಪಿಗಳಾದ ಎ.1 ಪವಿತ್ರಗೌಡ,ಎ.3 ಪವನ್,ಎ.4 ರಾಘವೇಂದ್ರ ಎ.5 ನಂದೀಶ್,ಎ.6.ಜಗದೀಶ್,ಎ.7 ಅನುಕುಮಾರ್ ಹಾಗು ಎ.8 ರವಿ ಶಂಕರ್, ನಾಗರಾಜ್ ಹಾಗು ಲಕ್ಷ್ಮಣ್ ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ಆದೇಶಿಸಿದರು. | |
| 10 ದಿನದ ಪೊಲೀಸ್ ಕಸ್ಟಡಿ ಅವದಿ ಮುಗಿದ ಹಿನ್ನಲೆಯಲಿ ಪ್ರಕರಣದ ವಿಚಾರಣೆಗಾಗಿ ಇಂದು ಸಂಜೆ 24 ನೇ ಎಸಿಎಂಎಂ ನ್ಯಾಯಾಲಯಕ್ಕೆ ಕರೆ ತಂದ ವಿಜಯನಗರ ಉಪವಿಭಾಗದ ಪೊಲೀಸರು ದರ್ಶನ್ ಸೇರಿದಂತೆ 13 ಆರೋಪಿಗಳನ್ನು ನ್ಯಾಯಾದೀಶರ ಮುಂದೆ ಹಾಜರುಪಡಿಸಿದರು. | |
| ಪೊಲೀಸರ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕರು ಇನ್ನು ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದೆ.ಹೆಚ್ಚಿನ ವಿಚಾರಣೆ ಅಗತ್ಯವಿದೆ ಅದಕ್ಕಾಗಿ ಆರೋಪಿಗಳನ್ನು ಪೊಲೀಸರ ಕಸ್ಟಡಿಗೆ ವಹಿಸಬೇಕೆಂದು ವಾದ ಮಂಡಿಸಿದರು.ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. | |
| ವಾದ ಆಲಿಸಿದ ನ್ಯಾಯಾದೀಶರು ಪವಿತ್ರಗೌಡ ಸೇರಿ 7ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು ಮೂಲಕ ಇವರೆಲ್ಲ ಪರಪ್ಪನ ಅಗ್ರಹಾರ ಜೈಲು ಸೇರಿದಂತಾಗಿದೆ. ಆರೋಪಿಗಳಾದ ನಟ ದರ್ಶನ್,ವಿನಯ್ ,ಧನರಾಜ್,ಪ್ರದೋಶ್,ಅವರನ್ನು ಮತ್ತೆ ಎರಡು ದಿನ ಪೊಲೀಸ್ ಕಸ್ಟಡಿ ನೀಡಲಾಗಿದೆ. | |