NLP_Assignment_1 / Kenda Sampige /article_112.txt
CoolCoder44's picture
Upload folder using huggingface_hub
7f4117a verified
raw
history blame
14 kB
byಸಂಜೋತಾ ಪುರೋಹಿತ|Apr 25, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment
‘ಸಂಗಮ’ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಕತೆಗಳಿಗೆ ಆಯ್ದುಕೊಂಡಿರುವ ಶೀರ್ಷಿಕೆಗಳು. ಓದಿದ ತಕ್ಷಣ ಕತೆಯ ಬಗ್ಗೆ ಯಾವ ತರಹದ ಸುಳಿವನ್ನೂ ಬಿಟ್ಟು ಕೊಡುವುದಿಲ್ಲ ಅವು. ಆ ಶೀರ್ಷಿಕೆ ಯಾಕೆ ಎಂದು ತಿಳಿಯಬೇಕಿದ್ದರೆ ನೀವು ಇಡೀ ಕತೆಯನ್ನು ಓದಬೇಕು. ಉದಾಹರಣೆಗೆ ಎರಡನೇಯ ಕತೆ ‘ಮೈ ದಾಸ್’ ಅನ್ನೇ ತೆಗೆದುಕೊಳ್ಳಿ. ಊಹುಂ.. ನೀವು ಗೆಸ್ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಮುಟ್ಟಿದೆಲ್ಲವೂ ಚಿನ್ನ ಎಂಬ ಗಾದೆ ಮಾತಿದೆಯಲ್ವ.. ಅದನ್ನು ನಿಜವಾಗಿಯೂ ಸಾಧ್ಯವಾಗಿಸಲು ಯತ್ನಿಸುವ ವೈಜ್ಞಾನಿಕ ಸಂಶೋಧಕನ ಕತೆ.ರಾಜಲಕ್ಷ್ಮಿ ಎನ್.‌ ರಾವ್‌ ಅವರ “ಸಂಗಮ” ಕಥಾಸಂಕಲನದ ಕುರಿತು ಸಂಜೋತಾ ಪುರೋಹಿತ್‌ ಬರಹ
byಕೆಂಡಸಂಪಿಗೆ|Apr 18, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments
ಎರಡು ಮೂರು ದಶಕಗಳ ಹಿಂದೆ ವಿದೇಶಗಳ ಬಗ್ಗೆ ಇದ್ದಷ್ಟು ಕುತೂಹಲ ಈಗ ಭಾರತದಲ್ಲಾಗಲಿ, ಮೂರನೆ ಜಗತ್ತಿನ ದೇಶಗಳಲ್ಲಾಗಲಿ ಇಲ್ಲ. ಜಾಗತೀಕರಣವೂ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ, ಉದ್ಯೋಗ, ವ್ಯಾಪಾರ, ಪ್ರವಾಸಗಳಿಗೆ ಬೇರೆ ದೇಶಗಳಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಅವಕಾಶಗಳು ಕೂಡ ತೆರೆದಿವೆ. ಉದಾಹರಣೆಗೆ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಕನಿಷ್ಠ ಹತ್ತು ಕುಟುಂಬಗಳ ಸದಸ್ಯರಾದರೂ, ಬಂಧುಗಳಾದರೂ ಈಗ ಹೊರದೇಶಗಳೊಡನೆ ಬೇರೆ ಬೇರೆ ರೀತಿಯಲ್ಲಿ ಸಂಪರ್ಕ, ಒಡನಾಟ ಇಟ್ಟುಕೊಂಡಿರುತ್ತಾರೆ.ಕೆ. ಸತ್ಯನಾರಾಯಣ ಪ್ರವಾಸ ಕಥನ “ಅಮೆರಿಕದಲ್ಲಿ ಬಸವನಗುಡಿ”ಯ ಒಂದು ಬರಹ ನಿಮ್ಮ ಓದಿಗೆ
byಕೆಂಡಸಂಪಿಗೆ|Apr 17, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment
ಚಾಂದಿನಿಯವರ ಈ ಕವಿತೆಗಳ ಮುಖ್ಯ ಧಾಟಿ ಬಿಗುಮಾನವಿಲ್ಲದ ನಿವೇದನೆಯದು, ಅವರ ಅನುಭವಜನ್ಯ ಕವಿತೆಗಳಾದ “ಕ್ಲಾಸ್ ರೂಂ”, “ಅವನಾರು”, “ನನ್ನ ಬಾಲ್ಯ”, “ಅಣ್ಣ ಬರಲಿಲ್ಲ”-ಗಳ ಜೀವಂತಿಕೆ ಅನುಭವ ಮೂಲದಿಂದಲೇ ಬರುತ್ತದೆ. ಮುಂದಿನ ಸಾಲಿನ ಮತ್ತು ಹಿಂದಿನ ಸಾಲಿನ ಖಾಲಿ ಬೆಂಚುಗಳ ಲಕ್ಷಣಗಳು “ಕ್ಲಾಸ್ ರೂಂ” ಕವಿತೆಯನ್ನು ರೂಪಿಸಿದ ರೀತಿ, ಬಾಲ್ಯದ ಅನುಭವಗಳು ಹೊಳೆಯಲ್ಲಿ ಹಿಡಿದು ಅಲ್ಲೇ ಸುಟ್ಟು ತಿಂದ ಏಡಿಯಷ್ಟೆ ತಾಜಾ ಆಗಿ ಬರುವ ರೀತಿ ಆಪ್ತವಾಗಿದೆ. “ಅಣ್ಣ ಬರಲಿಲ್ಲ” ಕವಿತೆಗೆ ತಂತಾನೆ ಬಂದಂತಿರುವ ಜನಪದೀಯ ಗುಣ ಅದರ ವಿಷಾದಕ್ಕೆ, ಆತ್ಮಮರುಕವನ್ನು ಮೀರುವ ಸ್ಪರ್ಶವನ್ನು ಕೊಟ್ಟಿದೆ.ಚಾಂದಿನಿ ಖಲೀದ್‌ ಕವನ ಸಂಕಲನ “ಸೂಜಿಮೊಗದ ಸುಂದರಿ”ಕ್ಕೆ ಜಯಂತ ಕಾಯ್ಕಿಣಿ ಬರೆದ ಮುನ್ನುಡಿ
byಕೆಂಡಸಂಪಿಗೆ|Apr 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment
ವಿಹಾರ’ಕ್ಕಿಂತ ‘ಹದ್ದು ಹಾರುವ ಹೊತ್ತು’ ಇನ್ನೂ ವಿಸ್ತಾರವಾದ ಕ್ಯಾನ್ವಾಸ್ ಹೊಂದಿರುವ ಕತೆ. ಊರಿಗೆ ಹೊಸತಾಗಿ ಬಂದು ಹೊರವಲಯದಲ್ಲಿ ಬಾಡಿಗೆ ಮನೆ ಮಾಡಿರುವ ಈ ಕತೆಯ ನಿರೂಪಕನು ಬಡಾವಣೆಯ ಪರಿಸರವನ್ನು ತಿಳಿದುಕೊಳ್ಳುವ ಹವಣಿಕೆಯಲ್ಲಿ ಕೇಳಿಸಿಕೊಂಡಿದ್ದೆಲ್ಲ ಕತೆಯ ಪ್ರಥಮಾರ್ಧವಾದರೆ ಉತ್ತರಾರ್ಧದ ಘಟನೆಗಳಿಗೆ ಆತ ಸಾಕ್ಷಿಯಾಗುತ್ತಾನೆ. ಹೀಗೆ ಹೊರಗಿನವನಾದ, ಆದರೆ ಒಂದು ಮಟ್ಟದಲ್ಲಿ ಭಾಗಿಯೂ ಆಗಿರುವ ನಿರೂಪಕನಿಗೆ ಎಲ್ಲಾ ಪಾತ್ರ ಮತ್ತು ಘಟನೆಗಳನ್ನು ಸನಿಹದಿಂದ, ಆದರೆ ವಸ್ತುನಿಷ್ಠವಾಗಿ, ನಿರೀಕ್ಷಿಸುವ ಅನುಕೂಲತೆ ಇದೆ.ಎ.ಎನ್. ಪ್ರಸನ್ನ ಕಥಾ ಸಂಕಲನ “ದಾಸವಾಳ”ಕ್ಕೆ ಎಂ. ಜಿ. ಹೆಗಡೆ ಬರೆದ ಮುನ್ನುಡಿ
byಕೆ. ಎನ್. ಲಾವಣ್ಯ ಪ್ರಭಾ|Apr 12, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments
ಕ್ಯಾನ್ಸರ್ ಸುʼನ ದೇಹವನ್ನು ತಿಂದುಹಾಕುವಾಗ ಬಹಳಷ್ಟು ಕೃಶನಾಗುವುದಲ್ಲದೇ ಅಂತಹ ತೀವ್ರ ಗಂಭೀರ ಸ್ಥಿತಿಯಲ್ಲೂ ಸಹಾ “ತಾನು ಯಾರು? ಇಲ್ಲಿ ಯಾಕಿದ್ದೇನೆ?” ಎಂಬ ಆತ್ಮವಿಮರ್ಶೆಗೆ ತೊಡಗಿಕೊಂಡು ಕೊನೆಗೆ ತಾನು ಇಡೀ ವಿಶ್ವಕ್ಕೆ ಸೇರಿದವ, ಬ್ರಹ್ಮಾಂಡದ ಅವಿಭಾಜ್ಯ ಅಂಗ. ಬ್ರಹ್ಮಾಂಡವನ್ನು ನಿಯಂತ್ರಿಸುವ ಶಕ್ತಿಯೇ ನನ್ನನ್ನೂ ನಿಯಂತ್ರಿಸುತ್ತಿದೆ ಎಂಬಂತಹ ಆಲೋಚನೆಗಳು ಉಪನಿಷತ್ತಿನಲ್ಲಿ ಬರುವ “ಯಾವ ಒಂದೇ ದಾರದ ಎಳೆಗಳಿಂದ ಬಟ್ಟೆಗಳು ತಯಾರಾಗುತ್ತದೋ ಅದೇ ತರಹ ಒಂದೇ ಶಕ್ತಿ ಇಡೀ ಸೃಷ್ಟಿಯ ಚರಾಚರದಲ್ಲೂ ಇದೆ” ಎಂಬಂತಹ ಬೌದ್ಧಿಕ ಸ್ತರದಲ್ಲಿ ತನ್ನಾತ್ಮವನ್ನು ವಿಶ್ವಾತ್ಮದೊಂದಿಗೆ ಬೆಸೆದುಕೊಳ್ಳುವ ಚಿಂತನೆಗಳು ಅವನನ್ನು ದಾರ್ಶನಿಕನೆನಿಸುತ್ತದೆ.ಡಾ. ಪ್ರಸನ್ನ ಸಂತೇಕಡೂರು ಕಾದಂಬರಿ “ಸು” ಕುರಿತು ಕೆ.ಎನ್. ಲಾವಣ್ಯ ಪ್ರಭಾ ಬರಹ
byಸಂಗೀತ ರವಿರಾಜ್‌ ಚೆಂಬು|Apr 11, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments
ಸ್ತ್ರೀ ಬದುಕಿನ ಅಗಾಧತೆ ಮತ್ತು ಸ್ತ್ರೀಯ ಇತಿಮಿತಿಯೊಳಗಿನ ಬದುಕು ಅನಾವರಣಗೊಳ್ಳುವ ಕವಿತೆಗಳಾದ ಹೂವಿಡುವಷ್ಟೆ ನಿಧಾನವಾಗಿ, ನಾವು ಸ್ವಲ್ಪ ಹೀಗೆ, ಆಸೀಫಾ, ಅವಳು, ಅಡುಗೆಯಾಟದ ಹುಡುಗಿ ಮುಂತಾದ ಕವಿತೆಗಳು ಮಹಿಳೆಯ ಅಂತರಂಗವನ್ನು ಬಿಂಬಿಸುತ್ತವೆ. ಕವಯತ್ರಿ ಆಶಾ ಅಭಿಮಾನದಿಂದ ಅಭಿವ್ಯಕ್ತಿ ಪಡಿಸಿದ ಸ್ತ್ರೀಯ ಬಗೆಗಿನ ಈ ಸಾಲು ಪ್ರತಿ ಹೆಂಗಳೆಯರ ಹೆಮ್ಮೆ. “ಹೋಗಲಿ ಬಿಡಿ ನೀವವಳನ್ನು ಆಪಾದ ಮಸ್ತಕವೇ/ ನೋಡಿದುದು ಸರಿಯೇ ಏಕೆಂದರೆ/ ದೇವತೆಯನ್ನು ಹಾಗೆಯೇ ನೋಡಬೇಕಂತೆ”ಆಶಾ ಜಗದೀಶ್‌ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕುರಿತು ಸಂಗೀತ ರವಿರಾಜ್‌ ಚೆಂಬು ಬರಹ
byಮಮತಾ ಆರ್.|Apr 7, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment
ಇವರೆಲ್ಲರೂ ಹಳೆಕಾಲದ ಟ್ರಂಕಿನೊಳಗೆ ಘಾತುಕ ರಹಸ್ಯವನ್ನು ತಣ್ಣಗೆ ಮಡಚಿಡಬಲ್ಲರು. ಹಾಗೆಯೇ ಮಡಿಲಿನಲ್ಲಿ ಮಲಗಿರುವ ಬೆಕ್ಕಿನ ಮರಿಯನ್ನು ಅತಿ ಅನೌಪಚಾರಿಕವಾಗಿ ಕೆಳಗಿಳಿಸುವಂತೆ ಗುಟ್ಟು ಬಿಟ್ಟುಕೊಡಬಲ್ಲವರು. ರಾಜಕಿಶೋರ, ಸರಳ, ಸುಗುಣೇಶ, ಮಾಧವ ಎಂಬ ಚುಕ್ಕಿಪಾತ್ರಗಳೆಲ್ಲ ಇವನನ್ನು ಸುಳಿಯ ಇನ್ನಷ್ಟು ಒಳಗೆ ಸೆಳೆಯಬಲ್ಲವರು. ಇವರೆಲ್ಲರಿಂದ ಸುತ್ತುವರೆದಿರುವ ಕಥಾನಾಯಕನಿಗೆ ಸಾವಯವ ಸಂಬಂಧದ ತಾದ್ಯಾತ್ಮ ಸಾಧ್ಯವಾಗುವುದು ‘ಒಂದು ಸುತ್ತು ಕಡಿಮೆ’ ಇರುವ ವಿಮಲಾಳೊಂದಿಗೆ. ನಾಣ್ಯ ಅವರ ನಡುವಿನ ಸಂವಾದದ ಭಾಷೆ.ಇಂದ್ರಕುಮಾರ್ ಎಚ್.ಬಿ. ಯವರ “ಎತ್ತರ” ಕಾದಂಬರಿಯ ಕುರಿತು ಮಮತಾ ಆರ್. ಬರಹ
byಪ.ನಾ.ಹಳ್ಳಿ ಹರೀಶ್ ಕುಮಾರ್|Apr 5, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments
ಬಾಲಕಿಯಾಗಿ ಏನೊಂದನ್ನೂ ಅರಿಯುವ ಮುನ್ನವೇ ಚಿಕ್ಕಾವಲ್ಲಪ್ಪನನ್ನು ಮದುವೆಯಾಗಿ ಸ್ವಂತ ಅತ್ತೆಯ ಮನೆಗೆ ಬರುವ ಪುಟ್ಟಮ್ಮ ಮನೆ ಹಾಗೂ ಹೊಲದ ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತ ಮುಂದೆ ಕನ್ಯೆಯಾಗಿಯೂ ಗಂಡನೊಂದಿಗೆ ಸೇರಲು ಅವಕಾಶವಿರದೆ ವಯೋಸಹಜ ಕಾಮನೆಗಳನ್ನು ಹತ್ತಿಕ್ಕಿಕೊಂಡು ಸುಮಾರು ಎರೆಡು ದಶಕಗಳ ಕಾಲ ಬಂಜೆ ಎಂಬ ಹಣೆಪಟ್ಟಿ ಹೊತ್ತು ಮುಂದೊಮ್ಮೆ ತಾಯಿಯಾಗುವುದು, ಕೆಳಜಾತಿಯ ಕೆಲಸಗಾರರೊಂದಿಗೆ ಸಲುಗೆಯಿಂದ ಬೆರೆತು ಅಂದಿನ ಆಚರಣೆಯಾದ ವರ್ಣಸಂಘರ್ಷವನ್ನು ನೈತಿಕವಾಗಿ ವಿರೋಧಿಸುವುದು. ಜವಾಬ್ದಾರಿಯುತ ಸೋದರಿಯಾಗಿ ತಮ್ಮನನ್ನು ವಿದ್ಯಾವಂತನನ್ನಾಗಿ ಮಾಡುವುದು.ಪ್ರೊ. ಕಟಾವೀರನಹಳ್ಳಿ ನಾಗರಾಜು ಬರೆದ ಕಾದಂಬರಿ “ಪುಟ್ಟಮ್ಮಯ್ಯ” ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ
byಸದಾನಂದ ನಾರಾವಿ|Mar 29, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments
ಮಹಾತ್ಮಾ ಗಾಂಧೀಜಿಯವರು ಕೂಡಾ ಮಾತೃಭಾಷೆಯ ಶಿಕ್ಷಣವೇ ಹೆಚ್ಚು ಪರಿಣಾಮಕಾರಿ ಎಂಬುದನ್ನು ಒತ್ತಿ ಹೇಳಿದ್ದಾರೆ. ಆದರೆ ಸರಕಾರ ಕೂಡಾ ಒಂದೆಡೆಯಿಂದ ಕನ್ನಡದ ಉದ್ಧಾರದ ಮಾತುಗಳನ್ನಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುತ್ತಾ ಕನ್ನಡ ಶಾಲೆಗಳನ್ನು ಮುಚ್ಚುವಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದೆ. ಇಂತಹ ದಿನಮಾನದಲ್ಲಿ ದಟ್ಟ ಕಾನನದ ಮಧ್ಯೆ ಇರುವ ಪುಟ್ಟ ಗ್ರಾಮದ ಸರಕಾರಿ ಶಾಲೆಯೊಂದರ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು ತನ್ನ ಶಾಲೆ ಮತ್ತು ಮಕ್ಕಳ ಕತೆಯನ್ನು ಹೇಳುವುದರ ಜೊತೆಗೆ ಆ ಪ್ರದೇಶದ ಪ್ರಕೃತಿಯ ಮನೋಹರ ನೋಟವನ್ನೂ, ಅಲ್ಲಿನ ಜನಜೀವನವನ್ನೂ ನಮ್ಮ ಕಣ್ಣಿಗೆ ಕಟ್ಟುವಂತೆ ತಮ್ಮ ‘ಇಸ್ಕೂಲು’ ಕೃತಿಯಲ್ಲಿ ಸೊಗಸಾಗಿ ಓದುಗರ ಮುಂದಿಟ್ಟಿದ್ದಾರೆ.ಅಕ್ಷತಾ ಕೃಷ್ಣಮೂರ್ತಿಯವರ “ಇಸ್ಕೂಲು” ಕೃತಿಯ ಕುರಿತು ಸದಾನಂದ ನಾರಾವಿ ಬರಹ