text stringlengths 0 61.5k |
|---|
Read more about: ಮನೆ ನಿರ್ವಹಣೆ ಸೀರೆ saree home maintenance |
Ways To Reuse Old Silk Sarees |
Sarees, no doubt, are always elegant and beautiful. It is one of India's rich tradition and cannot be forsaken for anything. Bored of wearing same old sarees? So if we give you the basic idea on the ways to reuse old sarees, you can keep widening your thoughts and extend the list. |
ಹಲಸಿನ ಹಣ್ಣಿಂದ ಸೋಪ್: ಮಂಗಳೂರಿನ ಅಪರ್ಣಾ ಹರೀಶ್ ಸಂಶೋಧನೆ |
Vijaya Karnataka| Jun 19, 2019, 09.13 AM IST |
ಮಹೇಶ್ ಪಟ್ಟಾಜೆ ಮಂಗಳೂರು |
ಈಗ ಹಲಸಿನ ಹಣ್ಣಿನ ಸೋಪು ತಯಾರಾಗಿದೆ. ಹಲಸಿನ ತೊಳೆ, ಕ್ಯಾಲಮಿನ್ ಪೌಡರ್, ತೆಂಗಿನೆಣ್ಣೆ, ಹರಳೆಣ್ಣೆಯನ್ನು ಬೆರಸಿ ತಯಾರಿಸಿರುವ ಈ ಸೋಪಿನಲ್ಲಿ ವಿಟಮಿನ್ ಸಿ ಮತ್ತು ಡಿ ಅಂಶಗಳಿವೆ. |
ಹಲಸಿನ ಮೌಲ್ಯವರ್ಧನೆ ಹಾಗೂ ಸಂರಕ್ಷಣೆಗಾಗಿ ಕೆಲವು ವರ್ಷಗಳಿಂದ ಹೊಸ ಹೊಸ ಆವಿಷ್ಕಾರ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಮೂಲತಃ ಬಂಟ್ವಾಳ ತಾಲೂಕಿನ ವಿಟ್ಲದ ಅಪರ್ಣಾ ಹರೀಶ್ ಅವರು ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ. ಅಪರ್ಣಾ ಪ್ರಸ್ತುತ ಚೆನ್ನೈಯಲ್ಲಿ ನೆಲೆಸಿದ್ದಾರೆ. |
ಹಲಸಿನ ಹಣ್ಣಿನ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ , ಜಲತಜ್ಞ ಶ್ರೀಪಡ್ರೆ ಅವರ ಮಾರ್ಗದರ್ಶನ, ಪ್ರೋತ್ಸಾಹದಿಂದ ಅಪರ್ಣಾ ಅವರು ಈ ಪ್ರಯೋಗ ನಡೆಸಿದ್ದಾರೆ. |
ತಾವು ತಯಾರಿಸಿದ ಸೋಪ್‌ಗೆ 'ಝ್ಯ' ಎಂದು ಹೆಸರಿಟ್ಟಿದ್ದಾರೆ. ಹಲಸಿನ ಹಣ್ಣಿನ ಶ್ಯಾಂಪೂ ಯಾವ ರೀತಿ ಕೂದಲಿನ ಸೌಂದರ‍್ಯ ಇಮ್ಮಡಿಗೊಳಿಸಲು ನೆರವಾಗುತ್ತದೆ ಎಂಬ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅದಾದ ಬಳಿಕ ಟಾಲ್ಕಂ ಪೌಡರ್ ಆವಿಷ್ಕಾರ ಮಾಡುವತ್ತ ಮುನ್ನಡೆಯಲಿದ್ದಾರೆ. ''ಸೋರಿಯಾಸಿಸ್ ಅಥವಾ ಚರ್ಮದ ಕಾಯಿಲೆ ವಾಸಿಗೆ ಹಲಸು ಕೂಡ ಅತ್ಯುತ್ತಮ ಮದ್ದು ,'' ಎನ್ನುತ್ತಾರೆ ಅಪರ್ಣಾ. |
ಹಲಸಿನ ಹಣ್ಣಿನ ಶ್ಯಾಂಪೂ, ಪೌಡರ್ ಮಾಡಬೇಕು ಎಂಬ ಇರಾದೆ ವ್ಯಕ್ತಪಡಿಸಿದ ಅಪರ್ಣಾ, ಚರ್ಮದ ಸೌಂದರ್ಯಕ್ಕಾಗಿ ಕೆಲವೊಂದು ಸೌಂದರ್ಯವರ್ಧಕ ಉತ್ಪನ್ನ ತಯಾರಿಸುವಲ್ಲಿ ನಿರತರಾಗಿದ್ದಾರೆ. |
ಹಲಸಿನ ಹಣ್ಣಿನ ಐಸ್‌ಕ್ರೀಂ, ಐಸ್ ಕ್ಯಾಂಡಿ, ಹೋಳಿಗೆ, ಹಲಸಿನ ಹಣ್ಣಿನ ಹಲ್ವ, ಚಾಟ್ಸ್, ಗುಜ್ಜೆ ಮಂಚೂರಿ, ಕಬಾಬ್, ಹಲಸು ರೋಸ್ಟ್, ಪಲಾವ್, ಪೋಡಿ, ಹಲಸಿನ ಬೀಜದ ಅಂಬೊಡೆ, ಹಲಸಿನಕಾಯಿ ಅಂಬೊಡೆ, ಹಲಸಿನ ಬೀಜದ ಜಾಮೂನ್, ಹಲಸಿನ ಬೀಜದ ಬಿಸ್ಕೆಟ್, ಇನ್ಟಂಟ್ ರಸಂ ಪೌಡರ್, ಹಲಸಿನ ಹಣ್ಣಿನ ಕೇಸರಿಬಾತ್, ಕಲರ್ ರಹಿತ ಹಲಸಿನ ಹಪ್ಪಳ, ಹಲಸಿನ ಮಾಂಬಲ, ತೆಂಗಿನ ಎಣ್ಣೆಯಲ್ಲಿ ಕರಿದ ಹಲಸಿನ ಚಿಫ್... |
ಜನಾಂಗೀಯವಾಗಿ ನಿಂದಿಸುವ ಟ್ರಂಪ್: ಶ್ವೇತಭವನದ ಮಾಜಿ ಉದ್ಯೋಗಿಯ ಆರೋಪ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Aug 11, 2018, 10:01 PM IST |
ವಾಶಿಂಗ್ಟನ್, ಆ. 11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಾಂಗೀಯ ನಿಂದನೆಯ ಭಾಷೆಯನ್ನು ಬಳಸಿದ ಹಲವಾರು ಉದಾಹರಣೆಗಳಿವೆ ಎಂದು ಶ್ವೇತಭವನದ ಮಾಜಿ ಮಹಿಳಾ ಉದ್ಯೋಗಿ ಒಮರೊಸಾ ಮ್ಯಾನಿಗಾಲ್ಟ್ ನ್ಯೂಮನ್ ತನ್ನ ಹೊಸ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. |
ಪತ್ನಿ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ರಿಲ್ಲದೆ ಭಾಗವಹಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಟ್ರಂಪ್ 'ಸಂಕಲೆಯಿಂದ ತಪ್ಪಿಸಿಕೊಂಡ ನಾಯಿ'ಯಂತೆ ವರ್ತಿಸಿರುವುದನ್ನು ತಾನು ನೋಡಿದ್ದೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ. |
ತನ್ನ ನೂತನ ಪುಸ್ತಕ 'ಅನ್‌ಹಿಂಜ್ಡ್'ನಲ್ಲಿ ಅವರು ಇನ್ನೂ ಹಲವಾರು ವಿವಾದಾತ್ಮಕ ವಿಷಯಗಳನ್ನು ಹೇಳಿದ್ದಾರೆ. ಪುಸ್ತಕವು ಆಗಸ್ಟ್ 14ರಂದು ಬಿಡುಗಡೆಯಾಗಲಿದೆ. |
ಅದೇ ವೇಳೆ, ಇದು ಸುಳ್ಳುಗಳು ಮತ್ತು ಸುಳ್ಳು ಆರೋಪಗಳನ್ನು ಹೊಂದಿದ ಪುಸ್ತಕವಾಗಿದೆ ಎಂಬುದಾಗಿ ಪುಸ್ತಕದ ಬಗ್ಗೆ ಶ್ವೇತಭವನ ಕಿಡಿಕಾರಿದೆ. |
ಪುಸ್ತಕದ ಲೇಖಕಿಯು ಟ್ರಂಪ್‌ರ 'ದ ಅಪ್ರೆಂಟಿಸ್' ರಿಯಾಲಿಟಿ ಶೋನಲ್ಲಿ ಓರ್ವ ಸ್ಪರ್ಧಿಯಾಗಿದ್ದರು ಹಾಗೂ ಬಳಿಕ ಅವರು ಅಧ್ಯಕ್ಷರ ಹಿರಿಯ ಸಲಹಾಗಾರ್ತಿಯಾಗಿ ಸೇವೆ ಸಲ್ಲಿಸಿದ್ದರು. |
ಅವರು ತನ್ನ ಪುಸ್ತಕದಲ್ಲಿ ಅಧ್ಯಕ್ಷರನ್ನು ಏಕಾಗ್ರತೆಯಿಲ್ಲದ, ತನ್ನ ಬಗ್ಗೆಯೇ ಚಿಂತಿಸುವ, ಮಹಿಳೆಯರನ್ನು ದ್ವೇಷಿಸುವ ಹಾಗೂ ಅಭದ್ರತೆಯ ಭಾವನೆ ಹೊಂದಿರುವ ವ್ಯಕ್ತಿ ಎಂಬುದಾಗಿ ಚಿತ್ರಿಸಿದ್ದಾರೆ ಹಾಗೂ ಸರಣಿ ಆರೋಪಗಳನ್ನು ಹೊರಿಸಿದ್ದಾರೆ. |
ಟ್ರಂಪ್ ಅಸಹಿಷ್ಣು |
''ಟ್ರಂಪ್‌ರನ್ನು ವರ್ಷಗಳಿಂದ ಸಮರ್ಥಿಸಿಕೊಂಡ ಬಳಿಕ, ಅವರೊಬ್ಬ ಅಸಹಿಷ್ಣು ಎಂಬ ನಿರ್ಧಾರಕ್ಕೆ ನಾನು ಬರಬೇಕಾಯಿತು'' ಎಂದು ಅವರು ಹೇಳಿದ್ದಾರೆ. |
''ಆರಂಭದಲ್ಲಿ ಟ್ರಂಪ್ ಓರ್ವ ಅಸಹಿಷ್ಣು ಎಂಬುದಾಗಿ ಜನರು ಹೇಳಿದಾಗ ನಾನು ನಂಬಿರಲಿಲ್ಲ. ಅವರ ಬಗ್ಗೆ ಜನರು ಹೇಳುತ್ತಿರುವುದನ್ನು ನಾನು ತಿರಸ್ಕರಿಸಿದೆ. ಯಾಕೆಂದರೆ ಟ್ರಂಪ್ ಬಗ್ಗೆ ನನಗೆ ಗೊತ್ತಿರುವಷ್ಟು ಅವರಿಗೆ ಗೊತ್ತಿಲ್ಲ ಎಂದು ನಾನು ಭಾವಿಸಿದೆ. ಆದರೆ, ಬಳಿಕ ಅವರ ಜನಾಂಗೀಯ ನಿಂದನೆಯ ಸ್ವಭಾವವನ್ನು ನನ್ನ ಕಣ್ಣಾರೆ ನೋಡುವ ಹಾಗೂ ನಿಂದನೆಯ ಮಾತುಗಳನ್ನು ಕಿವಿಯಾರೆ ಕೇಳುವ ಸಂದರ್ಭಗಳು ಬಂದವು. ... |
ಮಾತನಾಡದಂತೆ ತಡೆಯಲು ಯತ್ನಿಸಿದ್ದರು |
ಡೊನಾಲ್ಡ್ ಟ್ರಂಪ್ ಜನಾಂಗೀಯ ನಿಂದನೆಯ ಮಾತುಗಳನ್ನು ಆಡುತ್ತಾರೆ ಎನ್ನುವುದನ್ನು ಯಾರಿಗೂ ಹೇಳಬಾರದು ಎಂಬ ನಿಟ್ಟಿನಲ್ಲಿ ಅಧ್ಯಕ್ಷರ ಜನರು ತನಗೆ ಆಮಿಷ ಒಡ್ಡಿದ್ದರು ಎಂಬುದಾಗಿ ಲೇಖಕಿ ಒಮರೊಸಾ ಮ್ಯಾನಿಗಾಲ್ಟ್ ನ್ಯೂಮನ್ ಆರೋಪಿಸಿದ್ದಾರೆ. |
ಶ್ವೇತಭವನದಿಂದ ತಾನು ಹೊರ ಬರುವಾಗ, ಟ್ರಂಪ್‌ರ 2020ರ ಚುನಾವಣಾ ಪ್ರಚಾರ ತಂಡದಲ್ಲಿ 'ಹಿರಿಯ ಹುದ್ದೆ'ಯೊಂದನ್ನು ನೀಡಿ ತಿಂಗಳಿಗೆ 15,000 ಡಾಲರ್ (ಸುಮಾರು 10.36 ಲಕ್ಷ ರೂಪಾಯಿ) ವೇತನ ನೀಡುವ ಪ್ರಸ್ತಾಪವನ್ನು ಮುಂದಿಡಲಾಯಿತು ಎಂದು ಅವರು ಹೇಳಿದ್ದಾರೆ. |
ಆದರೆ, ಅದರ ಜೊತೆಗೆ ಮಾಹಿತಿ ಬಹಿರಂಗಪಡಿಸದಿರುವ ಕಠಿಣ ಒಪ್ಪಂದವೊಂದಕ್ಕೆ ತಾನು ಸಹಿಹಾಕಬೇಕಾಗಿತ್ತು ಹಾಗೂ ಅದು ತಾನು ಟೆಲಿವಿಶನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ನೋಡಿದ್ದ ಒಪ್ಪಂದದಷ್ಟೇ ಕಠಿಣ ಹಾಗೂ ನಿರ್ಬಂಧಕಾರಿಯಾಗಿತ್ತು ಎಂದಿದ್ದಾರೆ. |
ಸುಲಭ Archives - Page 2 of 17 - Hebbar's Kitchen |
ಮುಖಪುಟ ಟ್ಯಾಗ್ಗಳು ಸುಲಭ |
ಟ್ಯಾಗ್: ಸುಲಭ |
Hebbars Kitchen - March 17, 2021 0 |
ಬಾಳೆಹಣ್ಣು ಸ್ಮೂದಿ ಪಾಕವಿಧಾನ | ಖರ್ಜೂರ ಮತ್ತು ಚಾಕೊಲೇಟ್ ಸ್ಮೂದಿ | ತೂಕ ಇಳಿಸುವ ಪಾಕವಿಧಾನಗಳ ಹಂತ ಹಂತದ ಫೋಟೋ ಮತ್ತು ವೀಡಿಯೊ. ಸಾಂಪ್ರದಾಯಿಕವಾಗಿ ಸ್ಮೂದಿ ಪಾಕವಿಧಾನಗಳನ್ನು ಐಸ್, ಹಾಲು, ಹಣ್ಣಿನ ಜ್ಯೂಸು ಮತ್ತು ಸಿಹಿಕಾರಕಗಳೊಂದಿಗೆ ಕಚ್ಚಾ ಹಣ್ಣನ್ನು ರುಬ್ಬುವುದರಿಂದ ತಯಾರಿಸಲಾಗುತ್ತದೆ. ಬಾಳೆಹಣ್ಣು ಸ್ಮೂದಿ ಪಾಕವಿಧಾನ ಅಂತಹ ದಪ್ಪ ಪಾನೀಯವಾಗಿದ್ದು ಇದನ್ನು ಮಾಗಿದ ಬಾಳೆಹಣ್ಣು ಮತ್ತು ... |
Hebbars Kitchen - March 16, 2021 0 |
ಮಸಾಲ ವಡಾ ಪಾಕವಿಧಾನ | ಮಸಾಲ ವಡೈ | ಪರುಪ್ಪು ವಡೈ | ಚಟ್ಟಂಬಡೆಯ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಮಸಾಲಾ ವಡಾ, ಇದನ್ನು ಚಟ್ಟಂಬಡೆ ಅಥವಾ ಚನಾ ದಾಲ್ ವಡಾ ಎಂದೂ ಕರೆಯುತ್ತಾರೆ, ಇದು ಉಡುಪಿ ಮತ್ತು ಮಂಗಳೂರು ಪ್ರದೇಶದ ಜನಪ್ರಿಯ ಡೀಪ್ ಫ್ರೈಡ್ ಪನಿಯಾಣವಾಗಿದೆ. ಮೂಲತಃ, ನೆನೆಸಿದ ಕಡಲೆ ಬೇಳೆ ಅಥವಾ ಬೆಂಗಾಲ್ ಗ್ರಾಂ ಮತ್ತು ಕಪ್ಪು ಗ್ರಾಂ ಮಸೂರವನ್ನು ಒರಟಾಗಿ ರುಬ್ಬಿ ನಂತರ ಮೆಣಸಿನಕಾ... |
ಬ್ರೆಡ್ ಕಟ್ಲೆಟ್ ರೆಸಿಪಿ | ಕುರುಕುಲಾದ ತರಕಾರಿ ಬ್ರೆಡ್ ಕಟ್ಲೆಟ್ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಮೂಲತಃ ಇದು ಇತರ ಕಟ್ಲೆಟ್ ಪಾಕವಿಧಾನಗಳಿಗೆ ಹೋಲುತ್ತದೆ ಆದರೆ ಬ್ರೆಡ್ ಸ್ಲೈಸ್ ಗಳನ್ನು ಮುಖ್ಯ ಘಟಕಾಂಶವಾಗಿ ತಯಾರಿಸಲಾಗುತ್ತದೆ. ಕಟ್ಲೆಟ್‌ಗಳನ್ನು ಆಳವಾಗಿ ಹುರಿಯುವ ಅಥವಾ ಶಾಲೋ ಫ್ರೈ ನ ಮೂಲಕ ತಯಾರಿಸಬಹುದು. ಆದಾಗ್ಯೂ ಈ ಪೋಸ್ಟ್ನಲ್ಲಿ ರುಚಿಕರವಾದ ಮತ್ತು ಗರಿಗರಿಯಾದ ಡೀಪ್ ಫ್ರ... |
Hebbars Kitchen - March 2, 2021 0 |
ಬ್ರೆಡ್ ಉಪ್ಮಾ ಪಾಕವಿಧಾನ | ದಕ್ಷಿಣ ಭಾರತೀಯ ಬ್ರೆಡ್ ಉಪ್ಮಾದ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಈ ಸರಳದಕ್ಷಿಣ ಭಾರತದ ಉಪ್ಮಾ ಪಾಕವಿಧಾನವನ್ನು ಸ್ಯಾಂಡ್‌ವಿಚ್ ಬ್ರೆಡ್‌ಗಳಿಂದ ತಯಾರಿಸಲಾಗುತ್ತದೆ, ಇದನ್ನು ಟೊಮೆಟೊ ಕೆಚಪ್‌ನೊಂದಿಗೆ ಸಹ ನೀಡಬಹುದು. ಈ ತ್ವರಿತ ಉಪ್ಮಾ ನಿಮ್ಮ ಮುಂದಿನ ಕಿಟ್ಟಿ ಪಾರ್ಟಿಯಲ್ಲಿ ಹಿಟ್ ಆಗಬಹುದು ಮತ್ತು ಖಂಡಿತವಾಗಿಯೂ ಮಕ್ಕಳು ಮತ್ತು ವಯಸ್ಕರು ಇದನ್ನು ಪ್ರ... |
Hebbars Kitchen - March 1, 2021 0 |
ಆಲೂ ಕರಿ ಪಾಕವಿಧಾನ | ಆಲೂಗೆಡ್ಡೆ ಕರಿ ಪಾಕವಿಧಾನ | ಆಲೂ ಕಿ ಸಬ್ಜಿಯ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಬಹುಶಃ ಆಲೂಗೆಡ್ಡೆ ಆಧಾರಿತ ಮೇಲೋಗರಗಳು ಅನೇಕ ಭಾರತೀಯ ಮನೆಗಳಲ್ಲಿ ತಯಾರಿಸಲಾದ ಸಾಮಾನ್ಯ ಮೂಲ ಮೇಲೋಗರಗಳಾಗಿವೆ. ಅದು ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಭೋಜನಕ್ಕೆ ಮತ್ತು ರೋಟಿಗಾಗಿ ಅಥವಾ ಅನ್ನಕ್ಕೆ ಇರಲಿ, ಆಲೂ ಕರಿ ಅತ್ಯಂತ ಸಾಮಾನ್ಯ ಮತ್ತು ಆದ್ಯತೆಯ ಮೇಲೋಗರವಾಗಿದೆ. ಬಹುಶ... |
Hebbars Kitchen - February 28, 2021 0 |
ತೆಂಗಿನಕಾಯಿ ಅನ್ನ ಪಾಕವಿಧಾನ | ನಾರಿಯಲ್ ಚಾವಲ್ | ದಕ್ಷಿಣ ಭಾರತದ ತೆಂಗಿನಕಾಯಿ ರೈಸ್ ನ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಆಗ್ನೇಯ ಏಷ್ಯಾದ ದೇಶಗಳಲ್ಲಿಯೂ ಜನಪ್ರಿಯವಾಗಿರುವ ಅಕ್ಕಿ ಪಾಕವಿಧಾನಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ, ತೆಂಗಿನ ಅನ್ನವನ್ನು ಮುಖ್ಯವಾಗಿ ತೆಂಗಿನ ಹಾಲಿನೊಂದಿಗೆ ಅನೇಕ ಪ್ರದೇಶಗಳಲ್ಲಿ ತಯಾರಿಸಲಾಗುತ್ತದೆ. ಆದರೆ ಸರಳತೆಗಾಗಿ... |
ಕಸ್ಟರ್ಡ್ ಐಸ್ ಕ್ರೀಮ್ | custard ice cream in kannada | ಕಸ್ಟರ್ಡ್ ಪಾಪ್ಸಿಕಲ್ |
Hebbars Kitchen - February 27, 2021 0 |
ಕಸ್ಟರ್ಡ್ ಐಸ್ ಕ್ರೀಮ್ ಪಾಕವಿಧಾನ | ಕಸ್ಟರ್ಡ್ ಪಾಪ್ಸಿಕಲ್ ರೆಸಿಪಿ | ಕಸ್ಟರ್ಡ್ ಕ್ಯಾಂಡಿಯ ಹಂತ ಹಂತದ ಫೋಟೋ ಮತ್ತು ವೀಡಿಯೊ ಪಾಕವಿಧಾನ. ಸಾಮಾನ್ಯವಾಗಿ ಪಾಪ್ಸಿಕಲ್ ಅನ್ನು ಹಣ್ಣಿನ ಸಾರ ಅಥವಾ ಹಣ್ಣಿನ ಜ್ಯೂಸಿನಿಂದ ತಯಾರಿಸಲಾಗುತ್ತದೆ, ಇದು ಘನೀಕರಿಸಿದ ನಂತರ ಗಟ್ಟಿಯಾಗುತ್ತದೆ. ಇದಲ್ಲದೆ ಇದು ಹಣ್ಣಿನ ರಸವಾಗಿದ್ದು, ಹಣ್ಣಿನ ಚೂರುಗಳೊಂದಿಗೆ ಬೆರೆಸಿ ಅವುಗಳನ್ನು ಹೆಚ್ಚುವರಿ ಆಕರ್ಷಕ ಮತ್ತು ರ... |
Hebbars Kitchen - February 21, 2021 0 |
ಮಿಲ್ಕ್‌ಮೇಡ್‌ನೊಂದಿಗೆ ತೆಂಗಿನಕಾಯಿ ಬರ್ಫಿ ಪಾಕವಿಧಾನ | ಟ್ರೈ ಕಲರ್ ತೆಂಗಿನಕಾಯಿ ಬರ್ಫಿ ಅಥವಾ ನಾರಿಯಲ್ ಬರ್ಫಿಯ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ತೆಂಗಿನಕಾಯಿ ಆಧಾರಿತ ಸಿಹಿತಿಂಡಿಗಳು ದಕ್ಷಿಣ ಭಾರತದಲ್ಲಿ ಬಹಳ ಸಾಮಾನ್ಯವಾಗಿದೆ ಮತ್ತು ಇದನ್ನು ಮುಖ್ಯವಾಗಿ ಆಚರಣೆಗಳು ಮತ್ತು ಸಂದರ್ಭಗಳಿಗಾಗಿ ತಯಾರಿಸಲಾಗುತ್ತದೆ. ಆದರೆ ತೆಂಗಿನಕಾಯಿ ಬರ್ಫಿ ಪಾಕವಿಧಾನ ಬಹುಶಃ ತೆಂಗಿನಕಾಯಿಯಿಂದ ಅ... |
Hebbars Kitchen - February 19, 2021 0 |
ಕಾರ್ನ್ ಪಕೋಡಾ ಪಾಕವಿಧಾನ | ಸಿಹಿ ಕಾರ್ನ್ ಪಕೋರಾ | ಕಾರ್ನ್ ಭಜಿಯಾದ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಸಿಹಿ ಕಾರ್ನ್ ಪಕೋರಾ ಪಾಕವಿಧಾನವು ಇತರ ಪಕೋಡಾ ಪಾಕವಿಧಾನಕ್ಕೆ ಹೋಲುತ್ತದೆ. ಇದು ಜೋಳ ಮತ್ತು ಈರುಳ್ಳಿಯನ್ನು ಬೆರೆಸುವ ಅದೇ ಪ್ರಕ್ರಿಯೆಯನ್ನು ಅನುಸರಿಸುತ್ತದೆ, ನಂತರ ಅದನ್ನು ಒಣಗಿದ ಮಸಾಲೆ ಪುಡಿಗಳೊಂದಿಗೆ ಮಸಾಲೆಯುಕ್ತ ಬೇಸನ್ ಮತ್ತು ಅಕ್ಕಿ ಹಿಟ್ಟಿನೊಂದಿಗೆ ಬೆರೆಸಲಾಗುತ್ತದ... |
ಚೀಸ್ ಮಸಾಲಾ ಟೋಸ್ಟ್ ರೆಸಿಪಿ | ಸ್ಪೈಸಿ ಮಸಾಲಾ ಟೋಸ್ಟ್ ನ ಹಂತ ಹಂತದ ಫೋಟೋ ಮತ್ತು ವಿಡಿಯೋ ಪಾಕವಿಧಾನ. ಟೋಸ್ಟ್ ಪಾಕವಿಧಾನಗಳು ಭಾರತದಲ್ಲಿ ಬಹಳ ಸಾಮಾನ್ಯವಾದ ಪಾಕವಿಧಾನವಾಗಿದೆ ಮತ್ತು ಇದು ಪ್ರದೇಶ ಮತ್ತು ರುಚಿಯ ಆದ್ಯತೆಗೆ ಅನುಗುಣವಾಗಿ ವ್ಯತ್ಯಾಸಕ್ಕೆ ಒಳಪಟ್ಟಿರುತ್ತದೆ. ಈ ನಿರ್ದಿಷ್ಟ ಮಸಾಲೆಯುಕ್ತ ಮತ್ತು ಚೀಸ್ ಆಧಾರಿತ ಟೋಸ್ಟ್ ಮುಂಬೈ ಬೀದಿ ಆಹಾರದ ಸಿಹಿ ಮತ್ತು ಮಸಾಲೆಗಳ ಸಂಯೋಜನೆಯನ್ನು ... |
ಹರ್ಷ ಕೊಲೆ ಆರೋಪಿಗಳನ್ನ ಶಿವಮೊಗ್ಗ ಜೈಲಿನಲ್ಲಿ ಇರಿಸುವುದು ಡೌಟ್..! ರಾಜ್ಯದ ಇತರೆ ಸೆಲ್ ಗಳಲ್ಲಿಡಲು ಚಿಂತನೆ |
ಶಿವಮೊಗ್ಗ: ಸಿಗೇಹಟ್ಟಿಯ ಹರ್ಷನ ಕೊಲೆ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಇವತ್ತಿಗೆ ಅಂತ್ಯಗೊಳ್ಳುತ್ತದೆ. ಅವರನ್ನ ಕೋರ್ಟ್ ಮುಂದೆ ಹಾಜರುಪಡಿಸಿ ಬಳಿಕ, ಪೊಲೀಸರು ಮತ್ತೆ ವಶಕ್ಕೆ ಕೇಳುವ ಸಾದ್ಯತೆ ಇದೆ. ಇಲ್ಲವಾದರೆ ನ್ಯಾಯಾಂಗ ಬಂಧನಕ್ಕೆ ಒಳಪಡುತ್ತಾ ರೆ.ಈ ನಡುವೆ ಆರೋಪಿಗಳನ್ನ ಶಿವಮೊಗ್ಗ ಕಾರಾಗೃಹವಲ್ಲದೆ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವುದು ಒಳ್ಳೆಯದು ಎಂಬ ಮಾತು ಕೇಳಿ ಬರುತ್ತಿದೆ. |
ಶಿವಮೊಗ್ಗ ಜೈಲಿನಲ್ಲಿ ಆರೋಪಿಗಳನ್ನ ಇಟ್ಟರೇ, ಅಲ್ಲಿನ ಕೈದಿಗಳ ಜೊತೆ ಸಂಘರ್ಷ ಏರ್ಪಡುವ ಸಾಧ್ಯತೆಗಳಿವೆ. ಈ ಹಿಂದೇ ನಡೆದ ಘಟನೆಗಳು ಇದಕ್ಕೆ ಸಾಕ್ಷಿಯಾಗಿದ್ದು, ಆರೋಪಿಗಳ ಸುರಕ್ಷತೆಯ ದೃಷ್ಟಿಯಿಂದಲೂ ಅವರುಗಳನ್ನ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾ ಡುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. |
ಇನ್ನೂ ಇದೇ ಅಭಿಪ್ರಾಯ ಶಿವಮೊಗ್ಗದಲ್ಲಿ ಕೆಲಸ ಮಾಡಿರುವ ಅಧಿಕಾರಿಗಳ ವಲಯದಲ್ಲಿಯು ಕೇಳಿಬರುತ್ತಿದೆ. ಹೀಗಾಗಿ ಆರೋಪಿಗಳನ್ನ ಬೇರೆ ಕಾರಾಗೃಹಗಳಿಗೆ ವರ್ಗಾಯಿಸುವ ಸಾಧ್ಯತೆಗಳು ದಟ್ಟವಾಗಿದೆ.ಸದ್ಯ ಕೇಸ್ನ ಆರೋಪಿಗಳ ವಿರುದ್ಧ ಯುಎಪಿಎ ಆಕ್ಟ್ ಕೂಡ ಅನ್ವಯಿಸಲಾಗಿದೆ. ಪೊಲೀಸರು ಹಲವು ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸ್ತಿದ್ದು, ಸದ್ಯದಲ್ಲಿಯೇ ಘಟನೆಯ ಸತ್ಯಾಸತ್ಯತೆ ತಿಳಿದುಬರಲಿದೆ. |
Tagged prajaatvkannadaprajaatvkannada/prajaatvkannadaಹರ್ಷ ಕೊಲೆ ಆರೋಪಿಗಳನ್ನ ಶಿವಮೊಗ್ಗ ಜೈಲಿನಲ್ಲಿ ಇರಿಸುವುದು ಡೌಟ್..! ರಾಜ್ಯದ ಇತರೆ ಸೆಲ್ ಗಳಲ್ಲಿಡಲು ಚಿಂತನೆ |
ತರಬೇತಿ ಪಡೆದಾಗಲೇ ಕಲೆಯು ಬಲಿಷ್ಟವಾಗುವುದು - ವಂ. ವಿಲ್ಪ್ರೆಡ್ ಪ್ರಕಾಶ್ ಡಿಸೋಜ - Mangalorean.com |
Home Mangalorean News Kannada News ತರಬೇತಿ ಪಡೆದಾಗಲೇ ಕಲೆಯು ಬಲಿಷ್ಟವಾಗುವುದು – ವಂ. ವಿಲ್ಪ್ರೆಡ್ ಪ್ರಕಾಶ್ ಡಿಸೋಜ |
ತರಬೇತಿ ಪಡೆದಾಗಲೇ ಕಲೆಯು ಬಲಿಷ್ಟವಾಗುವುದು – ವಂ. ವಿಲ್ಪ್ರೆಡ್ ಪ್ರಕಾಶ್ ಡಿಸೋಜ |
* ಕಲಾಕುಲ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ಹೊಸ ತಂಡದ ಘೋಷಣೆ |
* ಮನೀಶ್ ಪಿಂಟೊಗೆ ಶ್ರೇಷ್ಟ ಕಲಾಕುಲ್ ವಿದ್ಯಾರ್ಥಿ ಪುರಸ್ಕಾರ |
* 213 ನೇ ತಿಂಗಳ ವೇದಿಕೆಯಲ್ಲಿ `ಹಾಂವ್ ಕೊಣಾಚಿಂ?' ನಾಟಕ ಪ್ರದರ್ಶನ. |
"ಇಂದಿನ ಮೊಬೈಲ್ ಯುಗದಲ್ಲೂ ಈ ಯುವಜನರು ರಂಗಭೂಮಿಯ ತರಬೇತಿ ಪಡೆದು, ಕೊಂಕಣಿ ನಾಟಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದಾರೆ. ಮಾಂಡ್ ಸೊಭಾಣ್ ಕಲೆ ಸಂಸ್ಕøತಿಯ ಬೆಳವಣಿಗೆಗೆ ಮಹತ್ವದ ಯೋಗದಾನ ನೀಡುತ್ತಿದೆ. ಯಾವುದೇ ಕಲೆಯು ತರಬೇತಿ ಪಡೆದಾಗಲೇ ಬಲಿಷ್ಟವಾಗುವುದು. ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ'' ಎಂದು ವಾಮಂಜೂರು ಸಂತ ಜೊಸೆಫ್ ಇಂಜಿನಿಯರಿಂಗ್ ಕಾಲೇಜಿನ ನ... |
ಅವರು ಶಕ್ತಿನಗರದ ಕಲಾಂಗಣದಲ್ಲಿ ಭಾನುವಾರ, 01.09.2019 ರಂದು ತಿಂಗಳ ವೇದಿಕೆ ಸರಣಿಯ 213 ನೇ ಕಾರ್ಯಕ್ರಮದಲ್ಲಿ, 2018-19 ಸಾಲಿನ, ಕೊಂಕಣಿ ನಾಟಕ ರೆಪರ್ಟರಿ, ಕಲಾಕುಲ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. |
ಶ್ರೇಷ್ಟ ಕಲಾಕುಲ್ ವಿದ್ಯಾರ್ಥಿಯಾಗಿ ಮನೀಶ್ ಪಿಂಟೊ ರೂ. 3000/- ಬಹುಮಾನ ಪಡೆದರೆ ಆಮ್ರಿನ್, ಸವಿತಾ ಹಾಗೂ ಸುಶ್ಮಿತಾ 1000/- ರೂಪಾಯಿಯೊಡನೆ ಶ್ರೇಷ್ಟ ಕೆಲಸಗಾರ ಗೌರವ ಪಡೆದರು. ತಮ್ಮ ವರ್ಷದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಸುಶ್ಮಿತಾ ತಾವ್ರೊ, ಸವಿತಾ ಸಲ್ಡಾನ್ಹಾ, ಆ್ಯಮ್ರಿನ್ ಡಿಸೋಜ, ಮನೀಶ್ ಪಿಂಟೊ ಹಾಗೂ ಫ್ಲಾವಿಯಾ ಮಸ್ಕರೇನ್ಹಸ್ ಇವರಿಗೆ ರಂಗಭೂಮಿ ಪದವಿ ನೀಡಿ ಗೌರವಿಸಲಾಯಿತು. 2019-... |
ವೇದಿಕೆಯಲ್ಲಿ ಕಲಾಕುಲ್ 2019 ಅವಧಿಯ ಕಲಾಕುಲ್ ಪೋಷಕರಾದ ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜ ಇವರ ಪರವಾಗಿ ಗಿಲ್ಬರ್ಟ್ ಡಿಸೋಜ, ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. |
ವಿಕಾಸ್ ಕಲಾಕುಲ್ ವಾರ್ಷಿಕ ವರದಿಯನ್ನು ಮಂಡಿಸಿದರು. ಅರುಣ್ ರಾಜ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ `ಹಾಂವ್ ಕೊಣಾಚಿಂ?' ಹೊಸ ಕೊಂಕಣಿ ನಾಟಕ ಪ್ರದರ್ಶನಗೊಂಡಿತು. |
ಮಹಿಳಾ ಟಿ-20ಗೆ ವೇದಿಕೆ ಸಜ್ಜು - ಯುಇಎನಲ್ಲಿ ಅಬ್ಬರಿಸಲಿದ್ದಾರೆ ಭಾರತೀಯ ನಾರಿಯರು - Public TV |
ಮಹಿಳಾ ಟಿ-20ಗೆ ವೇದಿಕೆ ಸಜ್ಜು – ಯುಇಎನಲ್ಲಿ ಅಬ್ಬರಿಸಲಿದ್ದಾರೆ ಭಾರತೀಯ ನಾರಿಯರು |
ಮಹಿಳಾ ಟಿ-20ಗೆ ವೇದಿಕೆ ಸಜ್ಜು - ಯುಇಎನಲ್ಲಿ ಅಬ್ಬರಿಸಲಿದ್ದಾರೆ ಭಾರತೀಯ ನಾರಿಯರು |
– ತಂಡ, ಆಟಗಾರರು, ನಾಯಕಿಯರನ್ನು ಘೋಷಿಸಿದ ಬಿಸಿಸಿಐ |
ನವದೆಹಲಿ: ಮಹಿಳಾ ಟಿ-20 ಚಾಲೆಂಜ್ ಟೂರ್ನಿಗೆ ವೇದಿಕೆ ಸಜ್ಜಾಗಿದ್ದು, ಈ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಪಟ್ಟಿ ಮತ್ತು ಅವುಗಳ ನಾಯಕಿಯರನ್ನು ಬಿಸಿಸಿಐ ಇಂದು ಘೋಷಣೆ ಮಾಡಿದೆ. |
ಈ ಮಹಿಳಾ ಟಿ-20 ಲೀಗ್ ಯುಎಇಯಲ್ಲಿ ನವೆಂಬರ್ 4 ರಿಂದ 9ರ ತನಕ ನಡೆಯಲಿದ್ದು, ಆರಂಭಿಕ ಪಂದ್ಯವು ನವೆಂಬರ್ 4 ರಂದು ಸೂಪರ್ನೋವಾಸ್ ಮತ್ತು ವೆಲಾಸಿಟಿ ನಡುವೆ ನಡೆಯಲಿದೆ. ಮೊದಲ ಮಹಿಳಾ ಟಿ-20 ಲೀಗ್ 2018ರಲ್ಲಿ ಆರಂಭವಾಗಿದ್ದು, ಮೂರನೇ ಮಹಿಳಾ ಟೂರ್ನಿಯೂ ಯುಎಇಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. |
ಈ ಬಾರಿಯೂ ಕೂಡ ಎಂದಿನಂತೆ ಮೂರು ಮಹಿಳಾ ತಂಡಗಳು ಟ್ರೋಫಿಗಾಗಿ ಸೆಣೆಸಾಡಲಿವೆ. ಇದರಲ್ಲಿ ಆಡುವ ಆಟಗಾರರ ಪಟ್ಟಿ ಮತ್ತು ತಂಡಗಳ ನಾಯಕಿಯರ ಪಟ್ಟಿಯನ್ನು ಕೂಡ ಬಿಸಿಸಿಐ ಬಿಡಗಡೆ ಮಾಡಿದೆ. ಭಾರತ ಮಾಜಿ ನಾಯಕಿ ಮಿಥಾಲಿ ರಾಜ್ ಅವರು ವೆಲಾಸಿಟಿ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದರೆ, ಹರ್ಮನ್‍ಪ್ರೀತ್ ಕೌರ್ ಸೂಪರ್ನೋವಾಸ್ ತಂಡಕ್ಕೆ ಸ್ಮೃತಿ ಮಂಧಾನ ಟ್ರೈಲ್‍ಬ್ಲೇಜರ್ಸ್ ತಂಡಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ... |
ಬಿಸಿಸಿಐ ಈ ಬಗ್ಗೆ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಬಾರಿಯ ಮಹಿಳಾ ಟಿ-20 ಟೂರ್ನಿಯಲ್ಲಿ ನಾಲ್ಕು ಪಂದ್ಯ ನಡೆಯಲಿವೆ. ಈ ಪಂದ್ಯಗಳಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‍ನ ಹಲವಾರು ಪ್ರತಿಭಾವಂತ ಆಟಗಾರ್ತಿಯರು ಭಾಗಿಯಾಗಲಿದ್ದಾರೆ. ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿ ಮೂರು ತಂಡಗಳನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದೆ. |
ಈ ಹಿಂದೆ ಬಿಸಿಸಿಐ ಸಭೆಯಲ್ಲಿ ಮಾತನಾಡಿದ್ದ ಅಧ್ಯಕ್ಷ ಸೌರವ್ ಗಂಗೂಲಿಯವರು ಈ ಭಾರಿಯೂ ಕೂಡ ಮಹಿಳಾ ಟಿ-20 ಟೂರ್ನಿಯನ್ನು ಆಡಿಸುತ್ತೇವೆ. ಇದರಿಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದರು. ಅದರಂತೆ ಬಿಸಿಸಿಐ ಈ ಬಾರಿ ಟೂರ್ನಿಯನ್ನು ಕೊರೊನಾದ ನಡುವೆಯೂ ಯುಎಇಯಲ್ಲಿ ಆಯೋಜನೆ ಮಾಡಿದೆ. |
ಸೂಪರ್ನೋವಾಸ್: ಹರ್ಮನ್‍ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್ (ಉಪನಾಯಕಿ), ಚಮರಿ ಅಟಪಟ್ಟು, ಪ್ರಿಯಾ ಪುನಿಯಾ, ಅನುಜಾ ಪಾಟೀಲ್, ರಾಧಾ ಯಾದವ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಶಿಕಲಾ ಸಿರಿವರ್ಧನೆ, ಪೂನಮ್ ಯಾದವ್, ಶಕೇರಾ ಸೆಲ್ಮನ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕರ್, ಆಯುಶಿ ಸೋನಿ, ಅಯಬೊಂಗಾ ಖಾಕ, ಮುಸ್ಕನ್ ಮಲಿಕ್ |
ಟ್ರೈಲ್‍ಬ್ಲೇಜರ್‍ಗಳು: ಸ್ಮೃತಿ ಮಂಧಾನ (ನಾಯಕಿ), ದೀಪ್ತಿ ಶರ್ಮಾ (ಉಪನಾಯಕಿ), ಪುನಮ್ ರೌತ್, ರಿಚಾ ಘೋಷ್, ಡಿ.ಹೇಮಲತಾ, ನುಜಾತ್ ಪಾರ್ವೀನ್ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಹರ್ಲೀನ್ ಡಿಯೋಲ್, ಜುಲಾನ್ ಗೋಸ್ವಾಮಿ, ಸಿಮರನ್ ದಿಲ್ ಬಹದ್ದೂರ್, ಸಲ್ಮಾ ಖತುನ್, ಸೋಫಿ ಎಕ್ಲೆಸ್ಟೋನ್, ನಥಕನ್ ಚಾಂಥಮ್, ದಿಯಾಂಡ್ರಾ ಡೊಟಿನ್, ಕಾಶ್ವೀ ಗೌತಮ್ |
ವೆಲಾಸಿಟಿ: ಮಿಥಾಲಿ ರಾಜ್ (ನಾಯಕಿ), ವೇದಾ ಕೃಷ್ಣಮೂರ್ತಿ (ಉಪನಾಯಕಿ), ಶಫಾಲಿ ವರ್ಮಾ, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಏಕ್ತಾ ಬಿಶ್ತ್, ಮಾನ್ಸಿ ಜೋಶಿ, ಶಿಖಾ ಪಾಂಡೆ, ದೇವಿಕಾ ವೈದ್ಯ, ಸುಶ್ರೀ ದಿಬ್ಯದರ್ಶಿನಿ, ಮನಾಲಿ ದಕ್ಷಿಣಿ, ಲೇ ಕಾಸ್ಪೆರೆಕ್, ಡೇನಿಯಲ್ ವ್ಯಾಟ್, ಸುನೆ ಲೂಸ್, ಜಹನಾರಾ ಆಲಂ, ಎಂ. ಅನಘಾ |
Related Topics:bccicricketindiaPublic TVuaeWomen's T20 Tournamentಕ್ರಿಕೆಟ್ಪಬ್ಲಿಕ್ ಟಿವಿಬಿಸಿಸಿಐಭಾರತಮಹಿಳಾ ಟಿ-20 ಟೂರ್ನಿಯುಎಇ |
ಸೋಮವಾರದವರೆಗೂ`ಅನಲಾಗ್' ಪ್ರಸಾರ | Prajavani |
ಸೋಮವಾರದವರೆಗೂ`ಅನಲಾಗ್' ಪ್ರಸಾರ |
ಬೆಂಗಳೂರು:ಉಪಗ್ರಹ ವಾಹಿನಿಗಳ `ಅನಲಾಗ್' ಮಾದರಿಯ ಸಿಗ್ನಲ್ ಪ್ರಸಾರವನ್ನು ಇದೇ 8ರವರೆಗೆ (ಸೋಮವಾರ) ಸ್ಥಗಿತಗೊಳಿಸದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. |
ಕರ್ನಾಟಕ ಕೇಬಲ್ ಆಪರೇಟರ್‌ಗಳ ಸಂಘ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಶುಕ್ರವಾರ ನಡೆಯಬೇಕಿತ್ತು. ಆದರೆ ಬೇರೆ ಪ್ರಕರಣಗಳ ವಿಚಾರಣೆ ನಂತರ, ದಿನದ ಕಲಾಪದ ಅಂತ್ಯದಲ್ಲಿ, ಸಂಘ ಸಲ್ಲಿಸಿದ ಅರ್ಜಿ ವಿಚಾರಣೆಗೆ ಬಂತು. |
ಕೇಬಲ್ ಸಂಪರ್ಕ ಪಡೆದುಕೊಂಡವರು ಮಾರ್ಚ್ 31ರ ನಂತರ ಚಾನೆಲ್‌ಗಳನ್ನು ವೀಕ್ಷಿಸಲು ಸೆಟ್‌ಟಾಪ್ ಬಾಕ್ಸ್ ಖರೀದಿಸಬೇಕು, ಅನಲಾಗ್ ಮಾದರಿಯ ಸಿಗ್ನಲ್ ಪ್ರಸಾರ ನಿಲ್ಲಿಸಿ, ಡಿಜಿಟಲ್ ಮಾದರಿಯ ಸಿಗ್ನಲ್ ಮಾತ್ರ ಪ್ರಸಾರ ಮಾಡಬೇಕು ಎಂದು ಕೇಂದ್ರ ಸರ್ಕಾರ ನಿಯಮ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಸೆಟ್‌ಟಾಪ್ ಬಾಕ್ಸ್ ಅಳವಡಿಕೆಗೆ ಹೆಚ್ಚಿನ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದೆ. |
ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್, ಅಲ್ಲಿಯವರೆಗೆ ಸಿಗ್ನಲ್ ಸ್ಥಗಿತಗೊಳಿಸಬಾರದು ಎಂದು ನಿರ್ದೇಶನ ನೀಡಿದರು. |
ಕೆಜೆಪಿ ವಿವಾದ- ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ |
ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಂದು ಕೇಂದ್ರ ಚುನಾವಣಾ ಆಯೋಗ ನೀಡಿರುವ ಆದೇಶ ರದ್ದು ಕೋರಿ ಪದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. |
`ಅರ್ಜಿ ಕುರಿತು ನ್ಯಾಯಾಲಯ ಅಂತಿಮ ಆದೇಶ ನೀಡುವವರೆಗೆ, ಕೆಜೆಪಿ ಅಭ್ಯರ್ಥಿಗಳಿಗೆ ಬಿ ಫಾರಂ ನೀಡದಂತೆ ತಡೆಯಾಜ್ಞೆ ನೀಡಬೇಕು' ಎಂದು ಕೋರಿ ಪದ್ಮನಾಭ ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ನಡೆಸಿದರು. |
ಕೇಂದ್ರ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ವಕೀಲ ಕೃಷ್ಣ ದೀಕ್ಷಿತ್, `ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ವಿವಾದಗಳಲ್ಲಿ, ಚುನಾವಣಾ ಆಯೋಗ ನೀಡುವ ಆದೇಶ ಅಂತಿಮ. ಕೆಜೆಪಿ ಅಧ್ಯಕ್ಷ ಯಾರು ಎಂಬ ಪ್ರಶ್ನೆಗೂ, ಆಯೋಗ ನೀಡಿರುವ ಆದೇಶವೇ (ಯಡಿಯೂರಪ್ಪ ಅವರೇ ಕೆಜೆಪಿ ಅಧ್ಯಕ್ಷ ಎಂದು) ಉತ್ತರವಾಗುತ್ತದೆ' ಎಂಬ ಹೇಳಿಕೆ ಸಲ್ಲಿಸಿದರು. |
ವಿಡಿಯೋ ಸ್ಟೋರಿ | ಏಳೂರ ಕರಿಹರಿಯುವ ಹಬ್ಬ ಕಾರ ಹುಣ್ಣಿಮೆ |
ರೈತ ತನ್ನೆರಡು ಕಂಗಳಂತೆ ಪ್ರೀತಿಸುವ ಎತ್ತುಗಳನ್ನು ಕರಿ ಹರಿಸುವುದು ಅಥವಾ ಎತ್ತಿಗೆ ಸಿಂಗಾರ ಮಾಡಿ ಊರು ತುಂಬಾ ಓಡಿಸುವುದೇ ಕಾರ ಹುಣ್ಣಿಮೆ ರೈತರ ಹಬ್ಬ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ರೀತಿಯಲ್ಲಿ ಕಾಖಂಡಗಿ ಗ್ರಾಮದಲ್ಲಿ ಎತ್ತುಗಳನ್ನು ಓಡಿಸಲಾಗುತ್ತದೆ |
ರೈತರಿಗೆ ಕಾರಹುಣ್ಣಿಮೆ ದೊಡ್ಡ ಹಬ್ಬ. ಇದು ಅನ್ನದಾತರ ಹಬ್ಬ. ಉತ್ತರ ಕರ್ನಾಟಕದ ಭಾಗದಲ್ಲಿ ಇದರ ಆಚರಣೆ ಬಲುಜೋರಾಗಿರುತ್ತದೆ. ಹಬ್ಬಗಳಿಗೆ ಬಾಗಿಲು ತೆಗೆಯುವ ಹಬ್ಬ ಎಂದು ಇದನ್ನು ಕರೆಯಲಾಗುತ್ತದೆ. ರೈತ ತನ್ನೆರಡು ಕಂಗಳಂತೆ ಪ್ರೀತಿಸುವ ಎತ್ತುಗಳನ್ನು ಕರಿ ಹರಿಸುವುದು ಅಥವಾ ಎತ್ತಿಗೆ ಸಿಂಗಾರ ಮಾಡಿ ಊರು ತುಂಬಾ ಓಡಿಸುವುದನ್ನು ಕಾರ ಹುಣ್ಣಿಮೆ ಎನ್ನಲಾಗುತ್ತಿದೆ. ಈ ಹಬ್ಬ ಬೇರೆ ಬೇರೆ ಜಿಲ್ಲೆಗಳಲ... |
ತಮಿಳುನಾಡಿನಲ್ಲಿ ಜಲ್ಲಿಕಟ್ಟು ರೀತಿಯಲ್ಲಿ ಕಾಖಂಡಗಿ ಗ್ರಾಮದಲ್ಲಿ ಎತ್ತುಗಳನ್ನು ಓಡಿಸಲಾಗುತ್ತದೆ. ಇಡೀ ಕರ್ನಾಟಕದಲ್ಲಿಯೇ ಅತ್ಯಂತ ವಿಶೇಷವಾಗಿ ನಡೆಯುವ ಕಾಖಂಡಕಿ ಕರಿಹರಿಯುವ ಹಬ್ಬ ರೈತರ ಹಬ್ಬವಾಗಿದೆ. ರಾಜ್ಯಾದ್ಯಂತ ಕಾರಹುಣ್ಣಿಮೆ ಆದ ಏಳನೇ ದಿನಕ್ಕೆ ನಡೆಯುವ ಕರಿ ಹರಿಯುವ ಉತ್ಸವದಲ್ಲಿ ಒಂದೊಂದು ಎತ್ತಿಗೆ ಎಂಟರಿಂದ ಹತ್ತು ಹಗ್ಗಗಳನ್ನು ಕಟ್ಟಿ ಎತ್ತನ್ನು ಎಳೆಯಲಾಗುತ್ತದೆ. ಇದಕ್ಕೂ ಮೊದಲು ಯು... |
ನಾನು ಹಲವು ವರ್ಷಗಳಿಂದ ಇಲ್ಲಿ ಎತ್ತುಗಳ ಓಟವನ್ನು ನೋಡಲು ಬರುತ್ತೇನೆ. ಗ್ರಾಮದ ಯುವಕರು ಮದವೇರಿದ ಎತ್ತುಗಳನ್ನು ಹಿಡಿಯುವುದನ್ನು ನೋಡಿದರೆ ಭಯವಾಗುತ್ತದೆ. ಗ್ರಾಮದ ಬಹುತೇಕ ಯುವಕರು, ಹಿರಿಯರು ಎತ್ತುಗಳನ್ನು ಹಿಡಿಯುವ ಸಾಹಸ ಮೆಚ್ಚುವಂತದ್ದು. ಆದರೆ ಸ್ವಲ್ಪ ಮೈಮರೆತರೆ ಅಪಾಯ ಗ್ಯಾರಂಟಿ. |
ಅಪ್ಪುಗೌಡ, ಎತ್ತಿನ ಓಟ ನೋಡಲು ಬಂದ ಮಹಾರಾಷ್ಟ್ರ ನಿವಾಸಿ |
ಇದನ್ನೂ ಓದಿ : ವಿಡಿಯೋ ಸ್ಟೋರಿ | ರಥದ ಮೇಲಿಂದ ಪುಟ್ಟ ಮಕ್ಕಳನ್ನು ಕೆಳಗೆಸೆಯುವ ಜಾತ್ರೆ! |
ಕಾಖಂಡಕಿ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಕರಿ ಹರಿಯುವ ಆಟಕ್ಕೂ ಒಂದು ಇತಿಹಾಸವಿದೆ. ಜನಪದರು ಹೇಳುವ ಪ್ರಕಾರ, ಹಿಂದೆ ಗ್ರಾಮದ ಯುವಕನೊಬ್ಬ ಕಾರ ಹುಣ್ಣಿಮೆ ದಿನ ಮನೆಯಲ್ಲಿ ಊಟಕ್ಕೆ ಕುಳಿತಾಗ ತಾಯಿಗೆ "ಬೇಗ ಊಟ ಕೊಡು" ಎಂದು ಹೇಳುತ್ತಾನಂತೆ. ಈ ವೇಳೆ ತಾಯಿ "ಇಷ್ಟು ಅವಸರ ಮಾಡ್ತಿಯಲ್ಲ, ನೀ ಏನ್ ಏಳೂರು ಕರಿ ಹರಿದು ಬಂದಿಯೇನು" ಎಂದು ತಾಯಿ ಕೇಳುತ್ತಾಳಂತೆ. ಅದರಿಂದ ಕುಪಿ... |
ಇಲ್ಲಿ ಎತ್ತುಗಳನ್ನು ರೊಚ್ಚಿಗೆಬ್ಬಿಸಿ ಅವುಗಳನ್ನು ಓಡಾಡಿಸುವುದನ್ನು ನೋಡಲೆಂದೇ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಿಂದ ಜನರು ಬಂದಿರುತ್ತಾರೆ. ಕರಿ ಹರಿಯುವ ಆಟದಲ್ಲಿ 40ಕ್ಕೂ ಹೆಚ್ಚು ಎತ್ತುಗಳೊಂದಿಗೆ ಯುವಕರು ಭಾಗವಹಿಸಿರುತ್ತಾರೆ. ಕಾರಹುಣ್ಣಿಮೆ ಆಚರಿಸಲು ಇನ್ನೊಂದು ವಿಶೇಷವೂ ಇದೆ. ಮುಂಗಾರು ಆರಂಭವಾಗುವ ವೇಳೆ ಎತ್ತುಗಳಿಗೆ ಶೃಂಗಾರ ಮಾಡಿ ಓಡಿಸಲಾಗುತ್ತದೆ. ರೈ... |
ಈ ಎತ್ತುಗಳ ಓಟದಲ್ಲಿ ರೈತಾಪಿ ವರ್ಗದಲ್ಲಿ ವಿಶಿಷ್ಟವಾದ ನಂಬಿಕೆಯೊಂದು ಇದೆ. ಒಂದಕ್ಕೆ ಮುಂಗಾರಿ ಇನ್ನೊಂದಕ್ಕೆ ಹಿಂಗಾರಿ ಎಂದು ಹೆಸರಿಟ್ಟು ಊರ ಗೌಡರು ತೆಂಗಿನಕಾಯಿ ಎಸೆದು ಓಟಕ್ಕೆ ಚಾಲನೆ ನೀಡುತ್ತಾರೆ. ಯಾವ ಎತ್ತು ಮೊದಲು ಕರಿ ಹರಿಯುತ್ತದೆಯೋ ಆ ಬೆಳೆ ಚೆನ್ನಾಗಿ ಬರುತ್ತದೆ ಎಂಬುದು ರೈತರ ಬಲವಾದ ನಂಬಿಕೆ. ಓಡುವ ಎತ್ತುಗಳನ್ನು ನೂರಾರು ಸಂಖ್ಯೆಯಲ್ಲಿ ಸೇರಿದ ಜನ ಹುರಿದುಂಬಿಸುತ್ತಾರೆ. ಕರಿ ಹರಿ... |
ನಮ್ಮ ಗ್ರಾಮದಲ್ಲಿ ಎತ್ತುಗಳ ಓಟದಲ್ಲಿ ಹಲವು ಜನರು ಗಾಯಗೊಂಡಿದ್ದಾರೆ. ಆದರೆ ಯಾರು ಅದಕ್ಕೆ ಭಯ ಪಡುವುದಿಲ್ಲ. ಇದು ನಮ್ಮ ಗ್ರಾಮದ ಐತಿಹಾಸಿಕ ಕ್ರೀಡೆ. ಪ್ರತಿವರ್ಷ ನಾನು ಎಲ್ಲೇ ಇದ್ದರೂ ತಪ್ಪದೆ ಈ ದಿನ ನಮ್ಮೂರಿಗೆ ವಾಪಸ್ ಬಂದು ಎತ್ತುಗಳನ್ನು ಹಿಡಿಯುತ್ತೇನೆ. |
ಮಲ್ಲಿಕಾರ್ಜುನ, ಗ್ರಾಮಸ್ಥರು |
Subsets and Splits
No community queries yet
The top public SQL queries from the community will appear here once available.