translation
dict
{ "Hindi": "मानवजाति की समस्याओं का समाधन समूह शक्ती संघ में गूहित है, अकेला मानव दुर्बल और स्वार्थी हो जाता है।", "Kannada": "ಮಾನವಜಾತಿಯ ಸಮಸ್ಯೆಗಳ ಪರಿಹಾರವು ಸಂಘದ ಶಕ್ತಿಯಲ್ಲಿ ಅಡಗಿದೆ, ಒಬ್ಬಂಟಿ ಮನುಷ್ಯನು ದುರ್ಬಲ ಮತ್ತು ಸ್ವಾರ್ಥಿಯಾಗುತ್ತಾನೆ.", "Sanskrit": "मानवजातेः समस्यानां समाधानं समूहशक्तौ किञ्च संघे गूहितं वर्तते, एकाकी मानवः दुर्बलः स्वार्थपरश्च सञ्जायते।" }
{ "Hindi": "यज्ञ का तात्पर्य त्याग होता है।", "Kannada": "ಯಜ್ಞದ ತಾತ್ಪರ್ಯವೇ ತ್ಯಾಗ.", "Sanskrit": "यज्ञस्य महत्‌ तात्पर्यं भवति त्यागः।" }
{ "Hindi": "अपना प्रिय पदार्थ अग्नि तथा वायु के माध्यम से सकल संसार के कल्याण के लिए यज्ञ के द्वारा बाँया जाता है।", "Kannada": "ತನ್ನ ಪ್ರಿಯ ಪದಾರ್ಥವನ್ನು ಅಗ್ನಿ ಮತ್ತು ವಾಯುವಿನ ಮೂಲಕ ಸಕಲ ಸಂಸಾರದ ಕಲ್ಯಾಣಕ್ಕಾಗಿ ಯಜ್ಞದ ಮೂಲಕ ವಿತರಿಸಲಾಗುವುದು.", "Sanskrit": "स्वस्य प्रियपदार्थादिकम्‌ अग्नेः तथा वायोः माध्यमेन सकलसंसारस्य कल्याणाय यज्ञद्वारा वितीर्यते।" }
{ "Hindi": "वायु के शोधनसे सभी के आरोग्य वर्धन का अवसर प्राप्त होता है।", "Kannada": "ವಾಯುಶುದ್ಧಿಯಿಂದ ಎಲ್ಲರ ಆರೋಗ್ಯವರ್ಧನೆಗೆ ಅವಕಾಶ ಲಭಿಸುವುದು.", "Sanskrit": "वायोः शोधनेन सर्वेषाम्‌ आरोग्यवर्धनस्य अवसरः प्राप्यते।" }
{ "Hindi": "आहूत वायु प्राणी मात्र का स्वास्थ्य वर्धन करती है, और रोग निवारण में सहायक होती है।", "Kannada": "ಆಹುತಿಯನ್ನು ಪಡೆದ ವಾಯುದೇವತೆಗಳು ಪ್ರಾಣಿಗಳೆಲ್ಲರ ಸ್ವಾಸ್ಥ್ಯವರ್ಧನೆ ಮಾಡುವರು, ರೋಗನಿವಾರಣೆಯಲ್ಲಿ ಸಹಾಯಕರಾಗುವರು.", "Sanskrit": "हूताः वायवः प्राणिमात्रस्य स्वास्थ्यवर्धनं कुर्वन्ति, रोगनिवारणे सहायकाश्च भवन्ति।" }
{ "Hindi": "यज्ञकाल में उच्चरित वेदमन्त्रों से लोगों के अंतःकरण में सात्त्विक शुद्धता उत्पन्न होती है।", "Kannada": "ಯಜ್ನಕಾಲದಲ್ಲಿ ಉಚ್ಚರಿಸುವ ವೇದಮಂತ್ರಗಳಿಂದ ಜನರ ಅಂತ:ಕರಣದಲ್ಲಿ ಸಾತ್ವಿಕವಾದ ಶುದ್ಧತೆಯು ಉಂಟಾಗುತ್ತದೆ.", "Sanskrit": "यज्ञकाले उच्चरितैः वेदमन्त्रैः जनानाम्‌ अंतःकरणे सात्त्विकी शुद्धता जायते।" }
{ "Hindi": "इस प्रकार स्वल्प प्रयास से ही लोगों का महान्‌ उपकार होता है।", "Kannada": "ಹೀಗೆ ಸ್ವಲ್ಪ ಪ್ರಯಾಸದಿಂದಲೇ ಜನರಿಗೆ ದೊಡ್ಡ ಉಪಕಾರ ಸಾಧ್ಯವಾಗುತ್ತದೆ.", "Sanskrit": "एवं प्रकारेण अल्पप्रयासेनैव जनानां महान्‌ उपकारः साध्यते।" }
{ "Hindi": "यदि माता अपने रक्त-मांस के एक भाग को एक नवजातक के निर्माण के लिए नही छोड़ती, प्रसव वेदना को सहन नहीं करती, नवजातक को दुग्ध नहीं पिलाती, पालन-पोषण आदि में यत्न नहीं करती, सब निःस्वार्थ भाव से नहीं करती, तो मनुष्यों का जीवन सम्भव नहीं है।", "Kannada": "ತಾಯಿಯಾದವಳು ತನ್ನ ದೇಹದ ರಕ್ತ-ಮಾಂಸದ ಒಂದು ಭಾಗವನ್ನು ಒಂದು ನವಜಾತಶಿಶುವಿಗೆ ಕೊಡದಿದ್ದರೆ, ಪ್ರಸವವೇದನೆಯನ್ನು ಸಹಿಸದಿದ್ದರೆ, ನವಜಾತಶಿಶುವಿಗೆ ಎದೆಹಾಲು ಕುಡಿಸದಿದ್ದರೆ, ಪಾಲನೆ-ಪೋಷಣೆಗಳಲ್ಲಿ ಆಯಾಸ ಪಡದಿದ್ದರೆ, ನಿಸ್ವಾರ್ಥಭಾವದಿಂದ ಈ ಎಲ್ಲವನ್ನೂ ಮಾಡದಿದ್ದರೆ, ಬಹುಷ: ಮನುಷ್ಯರ ಜೀವನವೇ (ಉತ್ಪತ್ತಿಯೇ) ಸಾಧ್ಯವಾಗಲಿಕ್ಕಿಲ್ಲ. ", "Sanskrit": "यदि माता स्वस्य रक्त-मांसेभ्यः भागम्‌ एकम्‌ एकस्य नवजातकस्य निर्माणाय न त्यजति, प्रसववेदनां न सहते, नवजातकं दुग्धं न पाययति, पालन-पोषणादिषु आयासं न करोति, सर्वं निःस्वार्थभावेन नैव करोति, तर्हि मनुष्याणां जीवनं नैव सम्भवति।" }
{ "Hindi": "यागों का सामान्य परिचय यागों के सामान्यतः पांच प्रकार देखे जाते हैं- होम, इष्टि, पशु, सोम, और सत्र।", "Kannada": "ಯಾಗವು ಸಾಮಾನ್ಯವಾಗಿ ಐದು ಪ್ರಕಾರವಾಗಿವೆ - ಹೋಮ, ಇಷ್ಟಿ, ಪಶು, ಸೋಮ, ಸತ್ರ ಎಂದು.", "Sanskrit": "यागानां सामान्यतः पञ्च प्रकाराः दृश्यन्ते - होमः, इष्टिः, पशुः, सोमः, सत्रः च।" }
{ "Hindi": "वैदिक याग प्रकृति और विकृति के भेद से दो प्रकार के हैं।", "Kannada": "ವೈದಿಕಯಾಗವು ಪ್ರಕೃತಿ ಮತ್ತು ವಿಕೃತಿ ಎಂದು ಎರಡು ಪ್ರಕಾರವಾಗಿದೆ.", "Sanskrit": "वैदिकयागः प्रकृतिविकृतिभेदेन द्विविधः।" }
{ "Hindi": "प्रकृतियाग प्रधानयाग कहलाते हें।", "Kannada": "ಪ್ರಕೃತಿಯಾಗವನ್ನು ಪ್ರಧಾನಯಾಗ ಎಂದು ಕರೆಯುವರು.", "Sanskrit": "प्रकृतियागः प्रधानयागः इत्युच्यते।" }
{ "Hindi": "प्रत्येक प्रकृतियाग की बहुत सी विकृतियाँ हैं।", "Kannada": "ಪ್ರತ್ಯೇಕ ಪ್ರಕೃತಿಯಾಗಗಳಿಗೆ ಅನೇಕ ವಿಕೃತಿಗಳಿವೆ.", "Sanskrit": "प्रत्येकं प्रकृतियागस्य बह्व्यः विकृतयः सन्ति।" }
{ "Hindi": "समान जातीय यागों का मूल स्वरूप प्रकृति याग कहलाता है।", "Kannada": "ಸಮಾನಜಾತೀಯ ಯಾಗಗಳ ಮೂಲಸ್ವರೂಪವನ್ನು ಪ್ರಕೃತಿಯಾಗ ಎಂದು ಕರೆಯುತ್ತಾರೆ.", "Sanskrit": "समानजातीययागानां मूलं स्वरूपं प्रकृतिः यागः इत्युच्यते।" }
{ "Hindi": "उसी प्रकृतियाग के आश्रय में विकृतियाग अनुष्ठीत होते हैं।", "Kannada": "ಇದೇ ಪ್ರಕೃತಿಯಾಗವನ್ನು ಆಶ್ರಯಿಸಿ ವಿಕೃತಿಯಾಗಗಳನ್ನು ಅನುಷ್ಠಾನ ಮಾಡುತ್ತಾರೆ.", "Sanskrit": "तमेव प्रकृतियागम्‌ आश्रित्य विकृतियागाः अनुष्ठीयन्ते।" }
{ "Hindi": "विकृतिया का दूसरा नाम अङऱगयाग है।", "Kannada": "ವಿಕೃತಿಯಾಗದ ಇನ್ನೊಂದು ಹೆಸರು ಅಂಗಯಾಗ.", "Sanskrit": "विकृतियागस्य अपरं नाम अङ्गयागः।" }
{ "Hindi": "प्रकृतियाग अगी है।", "Kannada": "ಪ್ರಕೃತಿಯಾಗವು ಅಂಗೀ.", "Sanskrit": "प्रकृतियागः अङ्गी।" }
{ "Hindi": "पांच प्रकार के प्रकृतियागों की प्रकृति यहाँ दिखाई गयी है।", "Kannada": "ಐದು ವಿಧವಾದ ಪ್ರಕೃತಿಯಾಗಗಳ ಪ್ರಕೃತಿಯನ್ನು ಇಲ್ಲಿ ಪ್ರದರ್ಶಿಸುತ್ತಾರೆ.", "Sanskrit": "पञ्चविधानां प्रकृतियागानां प्रकृतिः अत्र प्रदर्श्यते।" }
{ "Hindi": "होम याग दर्वीहोम कहलाता है।", "Kannada": "ಹೋಮವನ್ನು, ಯಾಗವನ್ನು ದರ್ವೀಹೋಮವೆಂದು ಕರೆಯುತ್ತಾರೆ.", "Sanskrit": "होमः यागः दर्वीहोमः इति कथ्यते।" }
{ "Hindi": "इस याग में प्रतिदिन प्रातः काल और सायंकाल गृहस्थ के अग्निकुण्ड में दूध, दही, पुरोडाश आदि की आहुति दी जाती है।", "Kannada": "ಈ ಯಾಗದಲ್ಲಿ ಪ್ರತಿದಿನವೂ ಬೆಳಗ್ಗೆ ಮತ್ತು ಸಂಜೆ ಅಗ್ನಿಕುಂಡದಲ್ಲಿ ಹಾಲು, ಮೊಸರು, ಪುರೋಡಾಶ ಇತ್ಯಾದಿಗಳನ್ನು ಆಹುತಿ ನೀಡಲಾಗುತ್ತದೆ.", "Sanskrit": "अस्मिन्‌ यागे प्रतिदिनं प्रातःकाले सायंकाले च गृहस्थस्य अग्निकुण्डे दुग्धदधिपुरोडाशादीनां आहुतिः प्रदीयते।" }
{ "Hindi": "सूर्य और अग्नि इस होमयाग के देवता हैं।", "Kannada": "ಸೂರ್ಯ ಮತ್ತು ಅಗ್ನಿಯು ಈ ಹೋಮಯಾಗದ ದೇವತೆಗಳು.", "Sanskrit": "सूर्यः अग्निश्च अस्य होमयागस्य देवता।" }
{ "Hindi": "प्रातः सूर्य को तथा सायं को अग्नि उद्देश्य करके मन्त्रपाठ आहुति दी जाती है।", "Kannada": "ಬೆಳಗ್ಗೆ ಸೂರ್ಯನನ್ನು ಉದ್ದೇಶಿಸಿ, ಸಂಜೆ ಅಗ್ನಿಯನ್ನು ಉದ್ದೇಶಿಸಿ ಮಂತ್ರಪಾಠ ಮತ್ತು ಆಹುತಿಯನ್ನು ನೀಡಲಾಗುತ್ತದೆ.", "Sanskrit": "प्रातः सूर्यम्‌ उद्दिश्य सायं च अग्निम्‌ उद्दिश्य मन्त्रपाठः आहुतिश्च क्रियते।" }
{ "Hindi": "क्योंकि दर्वी के अग्निकुण्ड में आहुति दी जाती है।", "Kannada": "ಏಕೆಂದರೆ, ದರ್ವಿಯ ಅಗ್ನಿಕುಂಡದಲ್ಲಿ ಆಹುತಿಯನ್ನು ನೀಡಲಾಗುವುದು.", "Sanskrit": "यतः दर्व्या अग्निकुण्डे आहुतिः प्रदीयते।" }
{ "Hindi": "अतः इसे दर्वीहोम भी कहते हैं।", "Kannada": "ಆದ್ದರಿಂದ ಇದನ್ನು ದರ್ವೀಹೋಮ ಎಂದೂ ಕರೆಯುವರು.", "Sanskrit": "अतः अयं दर्वीहोमः इत्यपि उच्यते।" }
{ "Hindi": "होमजातीय यागों की प्रकृति अग्निहोत्र है।", "Kannada": "ಹೋಮಜಾತೀಯ ಯಾಗಗಳ ಪ್ರಕೃತಿಯು ಅಗ್ನಿಹೋತ್ರವಾಗಿದೆ.", "Sanskrit": "होमजातीययागानां प्रकृतिः अग्निहोत्रः।" }
{ "Hindi": "वैदिक काल में ब्राह्मण-क्षत्रिय-वैश्य के लिए प्रतिदिन अग्निहोत्र अनिवार्य था।", "Kannada": "ವೈದಿಕ ಕಾಲದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ಪ್ರತಿದಿನ ಅಗ್ನಿಹೋತ್ರವನ್ನು ಅನುಷ್ಠಾನ ಮಾಡಬೇಕಿತ್ತು.", "Sanskrit": "वैदिककाले ब्राह्मण-क्षत्रिय-वैश्यैः प्रत्यहम्‌ अग्निहोत्रम् अनुष्ठेयम् आसीत्‌।" }
{ "Hindi": "उनको स्वयं ही यह यज्ञ करना होता था, पुरोहित के द्वारा इसे करने की विधि नहीं थी।", "Kannada": "ಅವರು ಸ್ವಯಂ ಈ ಕಾರ್ಯವನ್ನು ಮಾಡಬೇಕಿತ್ತು, ಪುರೋಹಿತರ ಮೂಲಕ ಅದನ್ನು ಮಾಡುವ ವಿಧಿಯು ಇಲ್ಲ.", "Sanskrit": "तैः स्वयम्‌ एव इदं करणीयम्‌ आसीत्‌, पुरोहितद्वारा तत्करणस्य विधिः नासीत्‌।" }
{ "Hindi": "क्षत्रिय और वैश्य तो पुरोहित से करवाते थे।", "Kannada": "ಕ್ಷತ್ರಿಯ ಮತ್ತು ವೈಶ್ಯನು ಪುರೋಹಿತನಿಂದ ಇದನ್ನು ಸಾಧಿಸುತ್ತಾರೆ.", "Sanskrit": "क्षत्रियवैश्यौ तु पुरोहितेन इदं साधयतः स्म।" }
{ "Hindi": "लेकिन ब्राह्मण को प्रतिदिन स्वयं अग्निहोत्र करना होता था।", "Kannada": "ಬ್ರಾಹ್ಮಣರು ಪ್ರತಿದಿನ ಅಗ್ನಿಹೋತ್ರವನ್ನು ಸ್ವಯಂ ಅನುಷ್ಠಾನ ಮಾಡಬೇಕಿತ್ತು.", "Sanskrit": "ब्राह्मणैः तु प्रत्यहं स्वयम् अग्रिहोत्रम् अनुष्ठेयम् आसीत्‌।" }
{ "Hindi": "ब्राह्मण प्रतिदिन अग्निहोत्र करे “ब्राह्मणोऽहरहः अग्निहोत्रं जुहुयात्‌” यह श्रुति प्रमाण है।", "Kannada": "ಬ್ರಾಹ್ಮಣರು ಪ್ರತಿದಿನ ಅಗ್ನಿಹೋತ್ರವನ್ನು ಅನುಷ್ಠಾನ ಮಾಡಬೇಕು, \"ಬ್ರಾಹ್ಮಣಃ ಅಹರಹಃ ಅಗ್ನಿಹೋತ್ರಂ ಜುಹುಯಾತ್\" ಎಂಬ ಶ್ರುತಿಯು ಪ್ರಮಾಣ.", "Sanskrit": "ब्राह्मणः प्रत्यहम्‌ अग्निहोत्रं कुर्यात्‌ तत्र \"ब्राह्मणोऽहरहः अग्निहोत्रं जुहुयात्‌\" इति श्रुतिः प्रमाणम्‌।" }
{ "Hindi": "शतपथ ब्राह्मण की उक्ति है “एतद्वै जरामर्य॑सत्रं जरया ह्येवास्मात्‌ मुच्यते मृत्युना वा” अर्थात्‌ अग्रिहोत्र ही जरामर्यसत्र कहा जाता है।", "Kannada": "ಶತಪಥಬ್ರಾಹ್ಣಣದ ವಚನವಿದೆ, \"ಏತದ್ವೈ ಜರಾಮರ್ಯಂ ಸತ್ರಂ ಜರಯಾ ಹ್ಯೋವಾಸ್ಮಾತ್ ಮುಚ್ಯತೇ ಮೃತ್ಯುನಾ ವಾ\" ಅರ್ಥಾತ್ ಅಗ್ನಿಹೋತ್ರವನ್ನೇ ಜರಾಮರ್ಯಸತ್ರ ಎನ್ನುತ್ತಾರೆ.", "Sanskrit": "शतपथब्राह्मणस्य उक्तिः \"एतद्वै जरामर्यं सत्रं जरया ह्येवास्मात्‌ मुच्यते मृत्युना वा\" अर्थात्‌ अग्रिहोत्रमेव एव जरामर्यसत्रम् इत्युच्यते।" }
{ "Hindi": "इसी कारण मृत्यु के बीना इस याग के नित्यानुष्ठान से ब्राह्मण की निष्कृति नहीं है।", "Kannada": "ಮೃತ್ಯುವನ್ನು ಹೊರತುಪಡಿಸಿ ಈ ಯಾಗದ ನಿತ್ಯಾನುಷ್ಟಾನದಿಂದ ಬ್ರಾಹ್ಮಣನ ನಿಷ್ಕೃತಿಯು ಇಲ್ಲದಿರುವುದೇ ಕಾರಣ.", "Sanskrit": "कारणं हि मृत्युं विना अस्य यागस्य नित्यानुष्ठानात्‌ ब्राह्मणस्य निष्कृतिः नास्ति।" }
{ "Hindi": "यह ब्राह्मण का नित्य कर्म है।", "Kannada": "ಬ್ರಾಹ್ಮಣನಿಗೆ ಇದು ನಿತ್ಯಕರ್ಮ.", "Sanskrit": "ब्राह्मणस्य इदं नित्यं कर्म।" }
{ "Hindi": "आज भी दाक्षिणात्य और महाराष्ट्र में बहुत से अग्निहोत्रकारी ब्राह्मण दिखते हैं।", "Kannada": "ಈಗಲೂ ದಾಕ್ಷಿಣಾತ್ಯದಲ್ಲಿ ಮಹಾರಾಷ್ಟ್ರದಲ್ಲಿ ಅನೇಕ ಅಗ್ನಿಹೋತ್ರಿಗಳಾದ ಬ್ರಾಹ್ಮಣರನ್ನು ಕಾಣಬಹುದು.", "Sanskrit": "अद्यापि दाक्षिणात्ये महाराष्ट्रे च बहवः अग्निहोत्रकर्तारः ब्राह्मणाः दृश्यन्ते।" }
{ "Hindi": "इस याग में प्रातः सूर्य तथा सायं अग्नि को उद्दे्य मानकर आहुति दी जाती है।", "Kannada": "ಈ ಯಾಗದಲ್ಲಿ ಬೆಳಗ್ಗೆ ಸೂರ್ಯನನ್ನು ಉದ್ದೇಶಿಸಿ ಮತ್ತು ಸಂಜೆ ಅಗ್ನಿಯನ್ನು ಉದ್ದೇಶಿಸಿ ಆಹುತಿಯನ್ನು ನೀಡಲಾಗುತ್ತದೆ.", "Sanskrit": "अस्मिन्‌ यागे प्रातः सूर्यमुद्दिश्य सायं च अग्निमुद्दिश्य आहुतिः प्रदीयते।" }
{ "Hindi": "एक ही मन्त्र प्रातः और सायं दोनों समय पढ़ा जाता है।", "Kannada": "ಒಂದೇ ಮಂತ್ರವನ್ನು ಬೆಳಗ್ಗೆ ಮತ್ತು ಸಂಜೆ ಪಠಿಸಲಾಗುತ್ತದೆ.", "Sanskrit": "एक एव मन्त्रः प्रातः सायं च पठ्यते।" }
{ "Hindi": "प्रातः केवल “सूर्यो ज्योतिर्ज्योतिः सूर्यः” तथा सायं सूर्य शब्द के स्थान पर अग्नि शब्द का प्रयोग करके “अग्निर्ज्योतिः ज्योतिरग्निः'” ऐसा पढ़ा जाता है।", "Kannada": "ಬೆಳಗ್ಗೆ ಕೇವಲ \"ಸೂರ್ಯೋ ಜ್ಯೋತಿರ್ಜೋತಿಃ ಸೂರ್ಯಃ\" ಎಂದು, ಸಂಜೆ ಸೂರ್ಯಶಬ್ದದ ಸ್ಥಾನದಲ್ಲಿ ಅಗ್ನಿಪದವನ್ನು ಬಳಸಿ \"ಅಗ್ನಿರ್ಜೋತಿಃ ಜ್ಯೋತಿರಗ್ನಿಃ\" ಎಂದು ಪಠಿಸಲಾಗುತ್ತದೆ.", "Sanskrit": "प्रातः केवलं \"सूर्यो ज्योतिर्ज्योतिः सूर्यः\" इति, सायं च सूर्यशब्दस्य स्थाने अग्निशब्दं प्रयुज्य \"अग्निर्ज्योतिः ज्योतिरग्निः\" इति पठ्यते।" }
{ "Hindi": "सायंकाल में सूर्य उसका तेज अग्नि में प्रतिष्ठापित करके अस्त हो जाता है, अतः सूर्य के स्थान पर अग्नि का पाठ विहित है।", "Kannada": "ಸಾಯಂಕಾಲದಲ್ಲಿ ಸೂರ್ಯನು ತನ್ನ ತೇಜಸ್ಸನ್ನು ಅಗ್ನಿಯಲ್ಲಿ ಪ್ರತಿಷ್ಠಾಪಿಸಿ ಅಸ್ತನಾಗುತ್ತಾನೆ, ಆದ್ದರಿಂದ ಸೂರ್ಯನ ಸ್ಥಾನದಲ್ಲಿ ಅಗ್ನಿಯ ಪಾಠವನ್ನು ವಿಧಾನಮಾಡಲಾಗಿದೆ.", "Sanskrit": "सायंकाले सूर्यः तस्य तेजः अग्नौ प्रतिष्ठाप्य अस्तं गच्छति, अतः सूर्यस्य स्थाने अग्नेः पाठः विहितः।" }
{ "Hindi": "प्रातःकालीन आहुति सूर्योदय से पूर्व तथा, सायंकालीन आहुति सूर्य क॑ अस्तगमन के बाद देनी चाहिए इस विषय में ब्राह्मण ग्रन्थों में ऐसा विचार है।", "Kannada": "ಸೂರ್ಯೋದಯಕ್ಕಿಂತ ಮುಂಚೆ ಬೆಳಗಿನ ಆಹುತಿ, ಆದರೆ ಸಾಯಂಕಾಲೀನ ಆಹುತಿಯನ್ನು ಸೂರ್ಯಾಸ್ತದ ನಂತರ ನೀಡಬೇಕು ಎಂಬ ವಿಷಯದಲ್ಲಿ ಬ್ರಾಹ್ಮಣಗ್ರಂಥದಲ್ಲಿ ವಿಚಾರ ಮಾಡಲಾಗಿದೆ.", "Sanskrit": "प्रातःकालीना आहुतिः सूर्योदयात्‌ पूर्वम्‌, किञ्च सायंकालीना आहुतिः सूर्यस्य अस्तगमनात्‌ परं विधेया इति विषये ब्राह्मणग्रन्थे विचारः विद्यते।" }
{ "Hindi": "एक पक्ष में प्रातः सूर्योदय से पूर्व होम का विधान है, उनके मत में यदि ऐसा नहीं करते तो आदित्य आहुति को स्वीकार नहीं करता है।", "Kannada": "ಒಂದು ಮತದಂತೆ ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲು ಹೋಮ ಮಾಡಬೇಕು, ಅವರ ಪ್ರಕಾರ ಹಾಗೆ ಮಾಡದಿದ್ದಲ್ಲಿ ಆದಿತ್ಯನು ಅದನ್ನು ಸ್ವೀಕರಿಸುವುದಿಲ್ಲ.", "Sanskrit": "एकस्मिन्‌ पक्षे प्रातः सूर्योदयात्‌ प्राक्‌ होमः विधेयः, तेषां नये तथा न क्रियते चेत्‌ आदित्यः आहुतिं न स्वीकरोति।" }
{ "Hindi": "सूअर उस आहुति को स्वीकार करता है।", "Kannada": "ವರಾಹವು ಆ ಆಹುತಿಯನ್ನು ಸ್ವೀಕರಿಸುತ್ತದೆ.", "Sanskrit": "शूकरः तामाहुतिं स्वीकरोति।" }
{ "Hindi": "दूसरे पक्ष में इसके विपरीत मतं प्रदर्शित किया गया है।", "Kannada": "ಮತ್ತೊಂದು ವಿಚಾರದಲ್ಲಿ ವಿರುದ್ಧವಾದ ವಾದವನ್ನು ಪ್ರದರ್ಶಿಸುತ್ತಾರೆ.", "Sanskrit": "अपरस्मिन्‌ पक्षे विपरीतं मतं प्रदर्श्यते।" }
{ "Hindi": "सूर्योदय होने पर आहुति का दान निष्फल होता है।", "Kannada": "ಸೂರ್ಯೋದಯವಾಗದಿದ್ದರೆ ಆಹುತಿಯು ನಿಷ್ಫಲವಾಗುವುದು.", "Sanskrit": "असति सूर्योदये आहुतिदानं निष्फलं भवति।" }
{ "Hindi": "इस प्रकार दोनों पक्षों के मतानुसार आहुति प्रदान करनी होती है।", "Kannada": "ಹೀಗೆಯೇ ಎರಡೂ ಪ್ರಕಾರಗಳ ವಿಚಾರವಾಗಿ ಆಹುತಿಯನ್ನು ಪ್ರದಾನ ಮಾಡಬೇಕು.", "Sanskrit": "एवमेव पक्षद्वयस्य मतानुसारम्‌ आहुतिप्रदानं कर्तव्यं भवति।" }
{ "Hindi": "श्रौत सूत्र में इस विवाद का समाधान विहित है।", "Kannada": "ಶ್ರೌತಸೂತ್ರದಲ್ಲಿ ಈ ವಿವಾದದ ಸಮಾಧಾನವನ್ನು ಹೇಳುತ್ತಾರೆ.", "Sanskrit": "श्रौतसूत्रैः अस्य विवादस्य समाधानं विहितम्‌ अस्ति।" }
{ "Hindi": "वेद के शाखा भेद के अनुसार ही आहुति के समय का भी भेद किया गया है।", "Kannada": "ವೇದದ ಶಾಖಾಭೇದಾನುಸಾರವಾಗಿ ಆಹುತಿಯ ಸಮಯದ ಭೇದವನ್ನು ಮಾಡಲಾಗಿದೆ.", "Sanskrit": "वेदस्य शाखाभेदानुसारम्‌ आहुतेः समयस्य भेदः कृतः वर्तते।" }
{ "Hindi": "जैसे- बह्वृच-छन्दोमय शाखा के द्विजातिगण सूर्योदय से पूर्व होम करें।", "Kannada": "ಉದಾಹರಣೆಗೆ - ಬಹ್ವೃಚ-ಛಂದೋಮಯ ಶಾಖದ ದ್ವಿಜಾತಿಗಣಗಳು ಸೂರ್ಯೋದಯಕ್ಕಿಂತ ಮೊದಲು ಹೋಮವನ್ನು ಮಾಡುವುದು.", "Sanskrit": "यथा बह्वृच्-छन्दोमयशाखयोः द्विजातिगणाः सूर्योदयात्‌ पूर्वं होमं कुर्युः।" }
{ "Hindi": "इस कारण वे अनुदित होमी कहलाते हैं।", "Kannada": "ಆ ಕಾರಣದಿಂದ ಅವರನ್ನು ಅನುದಿತಹೋಮಿ ಎನ್ನುವರು.", "Sanskrit": "तत्कारणात्‌ ते अनुदितहोमिनः इत्युच्यन्ते।" }
{ "Hindi": "दूसरी जगह कठ-तैत्तरीय-मैत्रायण शाखा के ब्राह्मण उदय के बाद में ही होम करें ऐसा विधान हेै।", "Kannada": "ಇನ್ನೊಂದೆಡೆ ಕಠ-ತೈತ್ತಿರೀಯ-ಮೈತ್ರಾಯಣಶಾಖೆಯಲ್ಲಿ ಬ್ರಾಹ್ಮಣದ ಉದಯವಾದ ನಂತರವೇ ಹೋಮವನ್ನು ಮಾಡಬೇಕು.", "Sanskrit": "अपरत्र कठ-तैत्तिरीय-मैत्रायणशाखानां ब्राह्मणाः उदयात्‌ परमेव होमं कुर्युः।" }
{ "Hindi": "इसलिए वे उदित होमी कहलाते हैं।", "Kannada": "ಆದ್ದರಿಂದ ಅವರನ್ನು ಉದಿತಹೋಮೀ ಎನ್ನುವರು.", "Sanskrit": "तस्मात्‌ ते उदितहोमिनः उच्यन्ते ।" }
{ "Hindi": "किन्तु दोनों ही सूर्योदय से पूर्व ही गार्ह पत्याग्नि का चयन करके होम कुण्ड का प्रज्वालन करें।", "Kannada": "ಆದರೆ ಎರಡರಲ್ಲಿಯೂ ಕೂಡ ಸೂರ್ಯೋದಯಕ್ಕಿಂತ ಪೂರ್ವದಲ್ಲಿ ಗಾರ್ಹಪತ್ಯಾಗ್ನಿಯ ಚಯನವನ್ನು ಮಾಡಿ ಹೋಮಕುಂಡದ ಪ್ರಜ್ವಾಲನೆಯನ್ನು ಮಾಡಬೇಕು.", "Sanskrit": "किन्तु उभाभ्याम्‌ एव सूर्योदयात्‌ पूर्वमेव गार्हपत्याग्नेः चयनं कृत्वा होमकुण्डस्य प्रज्वालनं कर्तव्यम्‌|" }
{ "Hindi": "अग्निहोत्र का प्रधान आहुति द्रव्य दुग्ध है, इसलिए यजमान एक गाय का पालन करता है।", "Kannada": "ಅಗ್ನಿಹೋತ್ರದ ಪ್ರಧಾನ ಆಹುತಿದ್ರವ್ಯವೇ ಕ್ಷೀರ, ಆದ್ದರಿಂದ ಯಜಮಾನನು ಒಂದು ಗೋವನ್ನು ಪಾಲನೆ ಮಾಡಬೇಕು.", "Sanskrit": "अग्निहोत्रस्य प्रधानम्‌ आहुतिद्रव्यं हि दुग्धम्‌, तस्मात्‌ यजमानेन पृथग्‌ एका गौः पालनीया।" }
{ "Hindi": "वह अग्निहोत्री गाय कहलाती है।", "Kannada": "ಆ ಅಗ್ನಿಹೋತ್ರಿಯನ್ನು ಗೋವು ಎನ್ನಲಾಗಿದೆ.", "Sanskrit": "सा अग्निहोत्री गौरित्युच्यते।" }
{ "Hindi": "यज्ञवेत्ता मृदा के एक पात्र से दुग्ध गर्म करता है।", "Kannada": "ಯಜ್ಞವೇದಿಯಲ್ಲಿ ಮೃತ್ಪಾತ್ರೆಯೊಂದರಲ್ಲಿ ಹಾಲನ್ನು ಕಾಯಿಸಲಾಗುತ್ತದೆ.", "Sanskrit": "यज्ञवेद्यां मृत्पात्रेण एकेन दुग्धम्‌ उष्णीक्रियते।" }
{ "Hindi": "वह उष्ण दूध अग्निहोत्रवनी इस नाम से दर्वय अग्नि में आहूत किया जाता है।", "Kannada": "ಆ ಉಷ್ಣವಾದ ಹಾಲು ಅಗ್ನಿಹೋತ್ರವನೀ ಎಂಬ ಹೆಸರಿನಿಂದ ದರ್ವಿಯಿಂದ ಅಗ್ನಿಯನ್ನು ಆಹ್ವಾನಿಸಲಾಗುವುದು.", "Sanskrit": "तच्च उष्णं दुग्धम्‌ अग्निहोत्रवनी इति नामिकया दर्व्या अग्नौ आहूयते।" }
{ "Hindi": "प्रातः दो आहुति एक सूर्य, और दूसरी प्रजापति को उद्दे्य करके दी जाती है।", "Kannada": "ಪ್ರಾತಃ ಎರಡು ಆಹುತಿಗಳ ಮಧ್ಯದಲ್ಲಿ ಸೂರ್ಯ ಮತ್ತು ಪ್ರಜಾಪತಿಯನ್ನು ಉದ್ದೇಶಿಸಿ ನೀಡಲಾಗುವುದು.", "Sanskrit": "प्रातः आहुतिद्वयोः मध्ये एका सूर्याय, अपरा च प्रजापतिम्‌ उद्दिश्य प्रदीयते।" }
{ "Hindi": "जिस दिन अग्निहोत्र आरम्भ किया जाता है।", "Kannada": "ಯಾವ ದಿನದಲ್ಲಿ ಅಗ್ನಿಹೋತ್ರವನ್ನು ಆರಂಭಿಸಲಾಗುವುದು.", "Sanskrit": "यस्मिन्‌ दिवसे अग्निहोत्रम्‌ आरभ्यते।" }
{ "Hindi": "उसी दिन सायंकाल में भी अग्निहोत्र करना होता है।", "Kannada": "ಆ ದಿನ ಸಾಯಂಕಾಲದಲ್ಲಿ ಅಗ್ನಿಹೋತ್ರವನ್ನು ಮಾಡಬೇಕು.", "Sanskrit": "तस्मिन्‌ दिवसे सायंकाले अग्निहोत्रं करणीयं भवति।" }
{ "Hindi": "उसी कारण यह अग्निहोत्र नाम से प्रसिद्ध होता है स्तम्भ श्रौत सूत्र के मत में।", "Kannada": "ಇದೇ ಕಾರಣದಿಂದ ಇದು ಆಪಸ್ತಂಭದ ಶ್ರೌತಸೂತ್ರದಲ್ಲಿ ಅಗ್ನಿಹೋತ್ರಂ ಎಂದು ಪ್ರಸಿದ್ಧವಾಗಿದೆ. ", "Sanskrit": "तस्मात्‌ कारणात्‌ इदम् अग्निहोत्रम्‌ इति प्रसिद्धिः आपस्तम्भस्य श्रौतसूत्रमते।" }
{ "Hindi": "पहले ही कहा गया है कि ब्राह्मण को स्वयम्‌ ही यह करना होता है।", "Kannada": "ಮೊದಲೇ ಹೇಳಿದಂತೆ ಬ್ರಾಹ್ಮಣನೇ ಸ್ವತ: ಇದನ್ನು ಮಾಡಬೇಕು.", "Sanskrit": "पूर्वमेव उक्तं यत्‌ ब्राह्मणेन स्वयमेव इदं कर्तव्यम्‌।" }
{ "Hindi": "यदि ब्राह्मण अस्वास्थ्य के कारण अक्षम हो तो वह कार्य उसके पुत्र को, और पुत्राभाव में पुरोहित करे।", "Kannada": "ಒಂದು ವೇಳೆ ಬ್ರಾಹ್ಮಣನಿಗೆ ಅನಾರೋಗ್ಯವಿದ್ದು ಮಾಡಲು ಸಾಧ್ಯವಾಗದಿದ್ದರೆ, ಆಗ ಆ ಕಾರ್ಯವನ್ನು ಅವನ ಮಗನು, ಮಗನಿಲ್ಲದಿದ್ದಲ್ಲಿ ಪುರೋಹಿತನೂ ಮಾಡಬೇಕಾಗುತ್ತದೆ.", "Sanskrit": "यदि ब्राह्मणः अस्वास्थ्यकारणात्‌ अक्षमः भवति तदा तत्कार्यं पुत्रेण, पुत्राभावे च पुरोहितेन कर्तव्यं भवति।" }
{ "Hindi": "किन्तु पूर्णिमा तथा अमावास्या पर अस्वस्थ होते हुए भी ब्राह्मण को ही करना चाहिए।", "Kannada": "ಆದರೆ ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನ ಅಸ್ವಸ್ಥನಾಗಿದ್ದರೂ ಬ್ರಾಹ್ಮಣನೇ ಮಾಡಬೇಕಾಗುತ್ತದೆ.", "Sanskrit": "किन्तु पूर्णिमायाम्‌ अमावास्यायाञ्च अस्वस्थतासत्त्वे अपि ब्राह्मणेनैव करणीयं भवति।" }
{ "Hindi": "अविवाहित को अग्निहोत्र का अधिकार नहीं है।", "Kannada": "ಅವಿವಾಹಿತನಿಗೆ ಅಗ್ನಿಹೋತ್ರದಲ್ಲಿ ಅಧಿಕಾರವಿಲ್ಲ.", "Sanskrit": "अविवाहितस्य अग्निहोत्रे अधिकारः नास्ति।" }
{ "Hindi": "विवाहित है किन्तु जो विपत्नीक हो गया, उसको भी अधिकार नहीं है।", "Kannada": "ವಿವಾಹಿತನಾಗಿದ್ದರೂ ವಿಪತ್ನೀಕನಾಗಿದ್ದರೆ ಅವನಿಗೆ ಅಧಿಕಾರವಿರುವುದಿಲ್ಲ.", "Sanskrit": "विवाहितः किन्तु विपत्नीकः जातः, तस्यापि अधिकारः नास्ति।" }
{ "Hindi": "अतः पुनर्विवाह करना होता है।", "Kannada": "ಅವನು ಮತ್ತೆ ವಿವಾಹವಾಗಬೇಕಾಗುತ್ತದೆ.", "Sanskrit": "तेन पुनः दारपरिग्रहः कर्तव्यो भवति।" }
{ "Hindi": "ऐतरेयब्राह्मण में लिखा है कि यदि उसकी पत्नी मर चुकी है तो पुनर्विवाह करना चाहिए अथवा श्रद्धा को पत्नी रूप में कल्पित करके ब्राह्मण अग्निहोत्र करे।", "Kannada": "ಒಮ್ಮೆ ಪತ್ನಿ ತೀರಿಕೊಂಡಿದ್ದರೆ ಅವನು ಮತ್ತೆ ಮದುವೆಯಾಗೇಕೆಂದು ಐತರೇಯ ಬ್ರಾಹ್ಮಣದಲ್ಲಿ ಬರೆಯಲ್ಪಟ್ಟಿದೆ, ಅಥವಾ ಶ್ರದ್ಧೆಯನ್ನು ಪತ್ನಿಯ ರೂಪದಲ್ಲಿ ಕಲ್ಪಿಸಿಕೊಂಡು ಅಗ್ನಿಹೋತ್ರವನ್ನು ಮಾಡಬೇಕಾಗುತ್ತದೆ.", "Sanskrit": "ऐतरेयब्राह्मणे लिखितमस्ति यद्‌ यदि पत्नी विगता स्यात्‌ तर्हि पुनः विवाहः कार्यः नो चेत्‌ श्रद्धां पत्नीरूपेण कल्पयित्वा ब्राह्मणः अग्निहोत्रं कुर्यात्‌ इति।" }
{ "Hindi": "होमयाग का दूसरा नाम क्या है?", "Kannada": "ಹೋಮಯಾಗದ ಇನ್ನೊಂದು ಹೆಸರೇನು?", "Sanskrit": "होमयागस्य अपरं नाम किम्‌ ?" }
{ "Hindi": "होमयाग की प्रकृति क्या है?", "Kannada": "ಹೋಮಯಾಗದ ಪ್ರಕೃತಿ ಯಾವುದು?", "Sanskrit": "होमयागस्य प्रकृतिः का ?" }
{ "Hindi": "किनके लिए अग्निहोत्र आवश्यक था?", "Kannada": "ಯಾರಿಗೆ ಅಗ್ನಿಹೋತ್ರವು ಆವಶ್ಯಕವಾಗಿತ್ತು?", "Sanskrit": "केषां कृते अग्निहोत्रम् आवश्यकम् आसीत्‌ ?" }
{ "Hindi": "विपत्नीक अग्निहोत्री क्या करे?", "Kannada": "ವಿಪತ್ನೀಕನಾದ ಅಗ್ನಿಹೋತ್ರನು ಏನು ಮಾಡಬೇಕು?", "Sanskrit": "विपत्नीकः अग्निहोत्री किं कुर्यात्‌ ?" }
{ "Hindi": "इष्टि याग की प्रकृति दर्श पूर्णमास है।", "Kannada": "ದರ್ಶಪೂರ್ಣಮಾಸವು ಇಷ್ಟಿಯಾಗದ ಪ್ರಕೃತಿಯಾಗಿದೆ.", "Sanskrit": "इष्टियागस्य प्रकृतिः भवति दर्शपूर्णमासः।" }
{ "Hindi": "दर्शशब्द का अर्थ सूर्यन्द सङ्गम अर्थात्‌ अमावस्या है।", "Kannada": "ದರ್ಶಶಬ್ದದ ಅರ್ಥ ಸೂರ್ಯಚಂದ್ರರ ಸಮಾಗಮ ಅಂದರೆ ಅಮಾವಾಸ್ಯೆ.", "Sanskrit": "दर्शशब्दस्य अर्थः सूर्येन्दुसङ्गमः अर्थात्‌ अमावस्या।" }
{ "Hindi": "पौर्णमासी अर्थात्‌ पूर्णिमा।", "Kannada": "ಪೌರ್ಣಮಾಸೀ ಎಂದರೆ ಪೂರ್ಣಿಮೆ.", "Sanskrit": "पौर्णमासी अर्थात्‌ पूर्णिमा।" }
{ "Hindi": "यह यज्ञ पूर्णिमा और अमावास्या को किया जाता है।", "Kannada": "ಈ ಯಾಗವನ್ನು ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಮಾಡಬೇಕು.", "Sanskrit": "पूर्णिमायाम्‌ अमावास्यायाञ्च अयं यागः क्रियते।" }
{ "Hindi": "विवाहित, सस्त्रीक आहिताग्नि ब्राह्मण तथा क्षत्रिय अथवा शूद्र भी इस याग के अधिकारी हैं।", "Kannada": "ವಿವಾಹಿತನಾದ, ಸಪತ್ನೀಕನಾದ, ಆಹಿತಾಗ್ನಿಯಾದ ಬ್ರಾಹ್ಮಣ, ಕ್ಷತ್ರಿಯ ಅಥವಾ ಶೂದ್ರನು ಈ ಯಾಗದ ಅಧಿಕಾರಿಯು.", "Sanskrit": "विवाहितः, सपत्नीकः, आहिताग्निः ब्राह्मणः क्षत्रियो वा शूद्रो वा अस्य यागस्य अधिकारी।" }
{ "Hindi": "आहिताग्नि शब्द का अर्थ जिसने गार्ह पत्याग्नि को प्रतिष्ठित किया है।", "Kannada": "ಆಹಿತಾಗ್ನಿ ಶಬ್ದದ ಅರ್ಥವೆಂದರೆ ಯಾರಿಂದ ಗಾರ್ಹಪತ್ಯಾಗ್ನಿಯು ಪ್ರತಿಷ್ಠಾಪಿಸಲ್ಪಟ್ಟಿದೆಯೋ ಅವನು. ", "Sanskrit": "आहिताग्निशब्दस्य अर्थो हि येन गार्हपत्याग्निः प्रतिष्ठितो वर्तते।" }
{ "Hindi": "अमावास्या पर दो दिन तथा पूर्णिमा पर दो दिन इस याग का अनुष्ठान करना चाहिए।", "Kannada": "ಅಮಾವಾಸ್ಯೆಯ ಎರಡು ದಿನ ಮತ್ತು ಹುಣ್ಣಿಮೆಯ ಎರಡು ದಿನ ಈ ಯಾಗದ ಅನುಷ್ಠಾನವನ್ನು ಮಾಡಬೇಕು.", "Sanskrit": "अमावास्यायां दिनद्वयं पूर्णिमायां च दिनद्वयम् अस्य यागस्य अनुष्ठानं कर्तव्यम्‌।" }
{ "Hindi": "यह याग पूर्णिमा की प्रातः आरम्भ होता है तथा दुसरे दिन अर्थात्‌ प्रतिपदा के मध्याह्न में समाप्त होता है।", "Kannada": "ಈ ಯಾಗವು ಹುಣ್ಣಿಮೆಯ ದಿನ ಬೆಳಿಗ್ಗೆ ಪ್ರಾರಂಭವಾಗಿ ಮರುದಿನ ಅಂದರೆ ಪಾಡ್ಯದ ದಿನ ಮಧ್ಯಾಹ್ನದಂದು ಮುಗಿಯುತ್ತದೆ.", "Sanskrit": "अयं यागः पूर्णिमायां प्रातः आरभ्य परस्मिन्‌ दिवसे अर्थात्‌ प्रतिपदि मध्याह्णे समाप्तो भवति।" }
{ "Hindi": "अमावास्या पर भी इसी प्रकार का अनुष्ठान विहित है।", "Kannada": "ಅಮಾವಾಸ್ಯೆಯ ದಿನವೂ ಕೂಡ ಇದೇ ರೀತಿಯ ಅನುಷ್ಠಾನವು ವಿಹಿತವಾಗಿದೆ.", "Sanskrit": "अमावास्यायामपि एवमेव अनुष्ठानं विहितम्‌।" }
{ "Hindi": "इस याग का प्रथम दिवस पूर्णिमा हो।", "Kannada": "ಈ ಯಾಗದ ಪ್ರಥಮ ದಿನವು ಹುಣ್ಣಿಮೆಯಾಗಿರಬೇಕು.", "Sanskrit": "अस्य यागस्य प्रथमदिनं पूर्णिमा भवेत्‌।" }
{ "Hindi": "अर्थात्‌ अमावास्या पर इसका आरम्भ न करें।", "Kannada": "ಅಂದರೆ ಅಮಾವಾಸ್ಯೆಯಂದು ಪ್ರಾರಂಭವಾಗಕೂಡದು.", "Sanskrit": "अर्थात्‌ अमावास्यायाम्‌ आरम्भो न भवेत्‌।" }
{ "Hindi": "इस याग में चार पुरोहित होते हैं - होता, अधवर्यु, अग्नीश्र, और ब्रह्मा।", "Kannada": "ಈ ಯಾಗದಲ್ಲಿ ನಾಲ್ವರು ಪುರೋಹಿತರು ಅಪೇಕ್ಷಿತರು-ಹೋತಾ, ಅಧ್ವರ್ಯು, ಅಗ್ನೀಧ್ರ ಮತ್ತು ಬ್ರಹ್ಮ.", "Sanskrit": "अस्मिन्‌ यागे चत्वारः पुरोहिताः अपेक्षन्ते - होता, अध्वर्युः, अग्नीध्रः,ब्रह्मा चेति।" }
{ "Hindi": "पुरोहितों में तारतम्य नहीं है।", "Kannada": "ಪುರೋಹಿತರಲ್ಲಿ ತಾರತಮ್ಯವಿಲ್ಲ.", "Sanskrit": "पुरोहितेषु तारतम्यं नास्ति।" }
{ "Hindi": "सोमयाग में ब्रह्मा सर्वश्रेष्ठ होता है।", "Kannada": "ಸೋಮಯಾಗದಲ್ಲಿ ಬ್ರಹ್ಮನು ಸರ್ವಶ್ರೇಷ್ಠನು.", "Sanskrit": "सोमयागे ब्रह्मा सर्वश्रेष्ठः भवति।" }
{ "Hindi": "सभी उसके प्रति सम्मान प्रदर्शित करते हैं।", "Kannada": "ಎಲ್ಲರೂ ಅವನಿಗೆ ಗೌರವವನ್ನು ತೋರಿಸುತ್ತಾರೆ.", "Sanskrit": "सर्वे तं प्रति सम्मानं प्रदर्शयन्ति।" }
{ "Hindi": "किन्तु इष्टियाग में सभी पुरोहितों का अधिकार समान होता है।", "Kannada": "ಆದರೆ ಇಷ್ಟಿಯಾಗದಲ್ಲಿ ಎಲ್ಲ ಪುರೋಹಿತರ ಅಧಿಕಾರ ಸಮಾನವಾಗಿರುತ್ತದೆ.", "Sanskrit": "किन्तु इष्टियागे सर्वेषां पुरोहितानाम्‌ अधिकारः समानो वर्तते।" }
{ "Hindi": "यद्यपि विविध गौण आहुतियाँ तथा देवताओं के नाम इष्टियाग में होते हैं, तथापि उसमें आहुति ही मुख्य होती है।", "Kannada": "ವಿವಿಧ ಗೌಣಾಹುತಿಗಳು ಮತ್ತು ದೇವತೆಗಳ ಹೆಸರುಗಳು ಇಷ್ಟಿಯಾಗದಲ್ಲಿ ಕೇಳಲ್ಪಟ್ಟರೂ ಇಲ್ಲಿ ಆಹುತಿಯೇ ಮುಖ್ಯವಾಗಿರುತ್ತದೆ.", "Sanskrit": "यद्यपि विविधाः गौणाहुतयः देवतानामानि च इष्टियागे श्रूयन्ते, तथापि तत्र आहुतिरेव मुख्या।" }
{ "Hindi": "पहली आहुति अग्नि को उद्देश्य करके पुरोडाश की दी जाती है।", "Kannada": "ಮೊದಲನೆಯ ಆಹುತಿಯಲ್ಲಿ ಅಗ್ನಿಯನ್ನು ಕುರಿತು ಪುರೋಡಾಶವು ನೀಡಲ್ಪಡುತ್ತದೆ. ", "Sanskrit": "प्रथमायाम्‌ आहुतौ अग्निम्‌ उद्दिश्य पुरोडाशः प्रदीयते।" }
{ "Hindi": "दूसरी आहुति उपांशु के रूप में प्रसिद्ध है।", "Kannada": "ಎರಡನೆಯ ಆಹುತಿಯು ಉಪಾಂಶುರೂಪದಿಂದ ಪ್ರಸಿದ್ಧವಾಗಿದೆ.", "Sanskrit": "द्वितीया आहुतिः उपांशुरूपेण प्रसिद्धा।" }
{ "Hindi": "वह विष्णु-प्रजापति-अग्नि-सोम आदि के लिए निवेदन की जाती है।", "Kannada": "ಅದು ವಿಷ್ಣು-ಪ್ರಜಾಪತಿ-ಅಗ್ನಿ ಮತ್ತು ಸೋಮ(ಚಂದ್ರ)ರಿಗಾಗಿ ಇರುತ್ತದೆ.", "Sanskrit": "सा च विष्णु-प्रजापति-अग्नि-सोमानां कृते निवेद्यते।" }
{ "Hindi": "तीसरी आहुति अग्नि और सोम को उद्देश्य करके पुरोडाश को अर्पित की जाती है।", "Kannada": "ಮೂರನೆಯ ಆಹುತಿಯಲ್ಲಿ ಅಗ್ನಿ ಮತ್ತು ಸೋಮರನ್ನು ಕುರಿತು ಪುರೋಡಾಶವು ಅರ್ಪಿಸಲ್ಪಡುತ್ತದೆ.", "Sanskrit": "तृतीयाहुतौ अग्नीषोमौ उद्दिश्य पुरोडाशः अर्प्यते।" }
{ "Hindi": "अमावस्या पर तो पुरोडाश निष्ठ पहली आहुति अग्नि के लिए इष्ट होती है।", "Kannada": "ಅಮಾವಾಸ್ಯೆಯಲ್ಲಿ ಪುರೋಡಾಶನಿಷ್ಠವಾದ ಪ್ರಥಮಾಹುತಿಯು ಅಗ್ನಿಗೆ ಇಷ್ಟವಾಗುತ್ತದೆ.", "Sanskrit": "अमावस्यायां तु पुरोडाशनिष्ठा प्रथमाहुतिः अग्नेः इष्टा भवति।" }
{ "Hindi": "और दूसरी आदि आहुतियों का देवता इन्द्र होता है।", "Kannada": "ದ್ವಿತೀಯಾದಿಗಳಲ್ಲಿ ಆಹುತಿಯ ದೇವತೆಯು ಇಂದ್ರನಾಗುತ್ತಾನೆ.", "Sanskrit": "द्वितीयादिषु च आहुतेः देवता भवति इन्द्रः।" }
{ "Hindi": "और हव्य द्रव्य यथा क्रम दही और दृध हैं।", "Kannada": "ಹವ್ಯದ್ರವ್ಯವು ಯಥಾಕ್ರಮವಾಗಿ ಮೊಸರು ಮತ್ತು ಕ್ಷೀರ.", "Sanskrit": "हव्यद्रव्यं च यथाक्रमं दधि दुग्धं च।" }
{ "Hindi": "इष्टियाग की समाप्ति पर अग्नि स्विष्टकृत्‌ आहुति अग्नि के लिए अर्पित की जाती है।", "Kannada": "ಇಷ್ಟಿಯಾಗದ ಸಮಾಪ್ತಿಯಲ್ಲಿ ಅಗ್ನಿಸ್ವಿಷ್ಟಕೃತ್ ಹೆಸರಿನ ಆಹುತಿಯನ್ನು ಅಗ್ನಿಗೆ ಅರ್ಪಿಸಲಾಗುವುದು.", "Sanskrit": "इष्टियागस्य समाप्तौ अग्निस्विष्टकृन्नामिका आहुतिः अग्नये अर्प्यते।" }
{ "Hindi": "इसके बाद पुरोहित यज्ञ की आहुति का अवशिष्ट अंश प्रसाद के रूप में ग्रहण करते है, और वह ईडा भक्षण कहलाता है।", "Kannada": "ತದನಂತರ, ಪುರೋಹಿತರು ಯಜ್ಞಾಹುತಿಯ ಅವಶಿಷ್ಟ ಅಂಶವನ್ನು ಪ್ರಸಾದರೂಪವಾಗಿ ಸ್ವೀಕರಿಸುತ್ತಾರೆ, ಅದನ್ನು ಇಡಾಭಕ್ಷಣ ಎನ್ನುವರು.", "Sanskrit": "अतःपरं पुरोहिताः यज्ञाहुतेः अवशिष्टम्‌ अंशं प्रसादरूपेण गृह्णन्ति, तच्च इडाभक्षणम्‌ इत्युच्यते।" }
{ "Hindi": "सभी हव्य द्रव्यों के मिश्रण से ईडा प्रस्तूत किया जाता है।", "Kannada": "ಎಲ್ಲ ಹವ್ಯದ್ರವ್ಯದ ಮಿಶ್ರಣದಿಂದ ಇಡಾ ಎಂಬುದರ ಪ್ರಸ್ತಾಪನೆಯಿದೆ.", "Sanskrit": "सर्वेषां हव्यद्रव्याणां मिश्रणेन इडा प्रस्तूयते।" }
{ "Hindi": "अनुयाज और पत्नीयाज के बाद यजमान के प्रतीक रूप में कुश निर्मित मूर्ति को अग्नि में निक्षिप्त की जाती है।", "Kannada": "ಅನುಯಾಜ ಮತ್ತು ಪತ್ನೀಯಾಜದ ನಂತರ ಯಜಮಾನನ ಪ್ರತೀಕವಾಗಿ ಕುಶನಿರ್ಮಿತ ಮೂರ್ತಿಯನ್ನು ಅಗ್ನಿಯಲ್ಲಿ ಸಮರ್ಪಿಸಲಾಗುವುದು.", "Sanskrit": "अनुयाजात्‌ पत्नीयाजात्‌ अनन्तरं यजमानस्य प्रतीकत्वेन कुशनिर्मिता मूर्तिः अग्नौ निक्षिप्यते।" }
{ "Hindi": "वह कुशमूर्ति कुश पत्थर कही जाती है।", "Kannada": "ಆ ಕುಶಮೂರ್ತಿಯು ಕುಶಪ್ರಸ್ತರವೆಂದು ಕರೆಯಲ್ಪಡುತ್ತದೆ.", "Sanskrit": "सा कुशमूर्तिः कुशप्रस्तरः इत्युच्यते।" }
{ "Hindi": "वह मूर्ति जब अग्नि में दग्ध होकर भस्मसात्‌ होती है, तब यजमान इस प्रकार चिन्तन करता है कि उसका पार्थिव शरीर दग्ध हो गया।", "Kannada": "ಯಾವಾಗ ಆ ಮೂರ್ತಿಯು ಅಗ್ನಿಯಲ್ಲಿ ಭಸ್ಮವಾಗುವುದೋ, ಆಗ ಯಜಮಾನನು ತನ್ನ ಪಾರ್ಥಿವ ಶರೀರವು ಬೂದಿಯಾಯಿತೆಂದು ಭಾವಿಸುತ್ತಾನೆ.", "Sanskrit": "सा मूर्तिः यदा अग्नौ दग्धा सती भस्मसात्‌ भवति, तदा यजमानः एवं चिन्तयति यत्‌ तस्य पार्थिवशरीरं दग्धम्‌ अभूत्‌।" }
{ "Hindi": "तथा यज्ञ के द्वारा उसकी आत्मा ने विष्णु सायुज्य प्राप्त कर लिया।", "Kannada": "ಆದರೆ ಯಜ್ಞದ ಮೂಲಕ ಅವನ ಆತ್ಮ ವಿಷ್ಣುವಿನ ಸಾಯುಜ್ಯವನ್ನು ಹೊಂದುತ್ತದೆ.", "Sanskrit": "किञ्च यज्ञद्वारा तस्य आत्मा विष्णुसायुज्यम्‌ प्राप्तवान्‌।" }