translation dict |
|---|
{
"Hindi": "बहुत से ब्राह्मण यागों में सोमयाग की विवृति देखी जाती है।",
"Kannada": "ಬಹುಬ್ರಾಹ್ಮಣಯಾಗದಲ್ಲಿ ಸೋಮಯಾಗದ ವಿವೃತಿಯನ್ನು ಕಾಣಬಹುದು.",
"Sanskrit": "बहुब्राह्मणयागे सोमयागस्य विवृतिः दृश्यते।"
} |
{
"Hindi": "ऐतरेयब्राह्मण में विशेषतः अग्निष्टोम याग का विवरण है।",
"Kannada": "ಐತರೇಯ ಬ್ರಾಹ್ಮಣದಲ್ಲಿ ವಿಶೇಷವಾಗಿ ಅಗ್ನಿಷ್ಟೋಮಯಾಗದ ವಿವರಣೆ ಇದೆ.",
"Sanskrit": "ऐतरेयब्राह्मणे विशेषतः अग्निष्टोमयागस्य विवरणं वर्तते।"
} |
{
"Hindi": "इस ब्राह्मण में चालीस अध्याय हैं।",
"Kannada": "ಈ ಬ್ರಾಹ್ಮಣದಲ್ಲಿ ನಲವತ್ತು ಅಧ್ಯಾಯಗಳಿವೆ.",
"Sanskrit": "अस्मिन् ब्राह्मणे चत्वारिंशत् अध्यायाः वर्तन्ते।"
} |
{
"Hindi": "वहाँ प्राम्भ के सोलह अध्यायों में अग्निष्टोम याग के ऋग्वेदीय पुरोहितों का कर्तव्य विहित है।",
"Kannada": "ಅಲ್ಲಿ ಮೊದಲಿನಿಂದ ಹದಿನಾರು ಅಧ್ಯಾಯಗಳಲ್ಲಿ ಅಗ್ನಿಷ್ಟೋಮಯಾಗದಲ್ಲಿ ಋಗ್ವೇದದ ಪುರೋಹಿತರ ಕರ್ತವ್ಯವನ್ನು ವಿಧಾನ ಮಾಡಲಾಗಿದೆ.",
"Sanskrit": "तत्र आदितः षोडशसु अध्यायेषु अग्निष्टोमयागे ऋग्वेदीयपुरोहितानां कर्तव्यं विहितं... |
{
"Hindi": "प्रति संवत्सर वसन्त-कऋतु में त्रैवर्णिक यजमान सपत्नीक इस याग का अनुष्ठान करें।",
"Kannada": "ಪ್ರತಿ ಸಂವತ್ಸರದಲ್ಲಿ ವಸಂತ ಋತುವಿನಲ್ಲಿ ತ್ರೈವರ್ಣಿಕ ಯಜಮಾನನು ಸಪತ್ನೀಕನಾಗಿ ಈ ಯಾಗದ ಅನುಷ್ಠಾನ ಮಾಡಬೇಕು.",
"Sanskrit": "प्रति संवत्सरं वसन्त-ऋतौ त्रैवर्णिकयजमानः सपत्नीकः अस्य यागस्य अनुष्ठानं कुर्यात्।"
} |
{
"Hindi": "बहुत दूर दुर्गम प्रदेश से सोमलता को लाकर यत्न से उसकी रक्षा की जाती थी।",
"Kannada": "ಬಹು ದೂರದಿಂದ ದುರ್ಗಮ ಪ್ರದೇಶದಿಂದ ಸೋಮಲತೆಯನ್ನು ತಂದು ಯತ್ನಪೂರ್ವಕವಾಗಿ ಇದರ ರಕ್ಷಣೆಯನ್ನು ಮಾಡುತ್ತಿದ್ದರು.",
"Sanskrit": "बहुदूरात् दुर्गमप्रदेशात् सोमलताम् आनीय यत्नेन तस्याः रक्षा क्रियते स्म।"
} |
{
"Hindi": "अब सोमलता दुष्प्राप्य हो गई।",
"Kannada": "ಈಗ ಸೋಮಲತೆಯು ದುಷ್ಪ್ರಾಪ್ಯವಾಗಿದೆ.",
"Sanskrit": "इदानीं सोमलता दुष्प्राप्या जाता।"
} |
{
"Hindi": "अतः उसके स्थान पर पूतिका-लता का विधान किया जाता है।",
"Kannada": "ಆದ್ದರಿಂದ, ಅದರ ಬದಲು ಪೂತಿಕಾ ಎಂಬ ಲತೆಯ ವಿಧಾನವನ್ನು ನೋಡಬಹುದು.",
"Sanskrit": "तस्मात् तस्याः स्थाने पूतिका इत्याख्यायाः लतायाः विधानं दृश्यते।"
} |
{
"Hindi": "वैदिक युग में ही सोमलता दुष्प्रा्य थी।",
"Kannada": "ವೈದಿಕಯುಗದಲ್ಲೇ ಸೋಮರಸವು ದುಷ್ಪ್ರಾಪ್ಯವಾಗಿತ್ತು.",
"Sanskrit": "वैदिकयुगे एव सोमलता दुष्प्राप्या आसीत्।"
} |
{
"Hindi": "शतपथ ब्राह्मण में कहा है कि यदि सोमलता प्राप्त नहीं होती, तो पूतिका से यज्ञ सम्पन करें।",
"Kannada": "ಸೋಮಲತೆಯು ಸಿಗದಿದ್ದರೆ ಪೂತಿಕೆಯಿಂದ ಯಜ್ಞ ಮಾಡಬೇಕೆಂದು ಶತಪಥಬ್ರಾಹ್ಮಣದಲ್ಲಿ ಹೇಳಿದೆ.",
"Sanskrit": "शतपथब्राह्मणे उक्तं यत् यदि सोमलता न प्राप्यते, तर्हि पूतिकया यज्ञं कुर्यात् इति।"
} |
{
"Hindi": "इस याग में सोलह पुरोहित अर्थात् सभी अपेक्षित हैं।",
"Kannada": "ಈ ಯಾಗದಲ್ಲಿ ಎಲ್ಲ ಹನ್ನೆರಡು ಪುರೋಹಿತರೂ ಅಪೇಕ್ಷಿತರೇ.",
"Sanskrit": "अस्मिन् यागे षोडश पुरोहिताः अर्थात् सर्वे अपेक्षिताः।"
} |
{
"Hindi": "यजमान और ब्राह्मण मिलकर कुल सत्तरह लोग होते हैं।",
"Kannada": "ಯಜಮಾನನ ಜೊತೆ ಬ್ರಾಹ್ಮಣರು ಸೇರಿ ಹದಿನೇಳು ಜನರಾಗುತ್ತಾರೆ.",
"Sanskrit": "यजमानः ब्राह्मणाः च मिलित्वा साकल्येन सप्तदश जनाः भवन्ति।"
} |
{
"Hindi": "किसी वेदग्रन्थ में देखा जाता है कि - `सदस्य' - नामक पुरोहित सत्तरह संख्या का परिपूरक होता है।",
"Kannada": "ಕೆಲವೊಂದು ವೇದಗ್ರಂಥಗಳಲ್ಲಿ - 'ಸದಸ್ಯ' ಎಂಬ ಪುರೋಹಿತನು ಹದಿನೇಳನೆಯವರಾಗಿ ಪರಿಪೂರಕರಾಗುವರು.",
"Sanskrit": "कस्मिंश्चित् वेदग्रन्थे दृश्यते यत् - 'सदस्यः' - इत्याख्यः पुरोहितः सप्तदशसंख्यायाः परिपूरको भवति।... |
{
"Hindi": "यज्ञ के प्रथम दिन ही यजमान पुरोहितों का अभिनन्दन करता है तथा दक्षिणा की प्रतिश्रुति देकर यज्ञ का नियोजन करता है।",
"Kannada": "ಯಜ್ಞದ ಪ್ರಥಮದಿನದಲ್ಲೇ ಯಜಮಾನನು ಪುರೋಹಿತರನ್ನು ಅಭಿನಂದಿಸುತ್ತಾನೆ, ಹಾಗೆಯೇ ದಕ್ಷಿಣೆಯ ಪ್ರತಿಶ್ರುತಿಯನ್ನು ನೀಡಿ ಯಜ್ಞದಲ್ಲಿ ನಿಯೋಜಿಸುತ್ತಾನೆ.",
"Sanskrit": "यज्ञस्य प्रथमदिवसे एव यजमानः पुरोहितान... |
{
"Hindi": "यह रीति ऋात्विजवरण कहलाती है।",
"Kannada": "ಈ ರೀತಿಯನ್ನು ಋತ್ವಿಗ್ವರಣ ಎನ್ನುತ್ತಾರೆ.",
"Sanskrit": "इयं रीतिः ऋत्विग्वरणम् इत्युच्यते।"
} |
{
"Hindi": "तदनन्तर दीक्षणीय-इष्टी का अनुष्ठान होता है।",
"Kannada": "ತದನಂತರ, ದೀಕ್ಷಣೀಯ-ಇಷ್ಟಿಯ ಅನುಷ್ಠಾನ ನಡೆಯುತ್ತದೆ.",
"Sanskrit": "तदनन्तरं दीक्षणीय-इष्टेः अनुष्ठानं भवति।"
} |
{
"Hindi": "यजमान और उसकी पत्नी यज्ञ में दीक्षित होते हैं, इस प्रकार दीक्षा से उन दोनों का नया जन्म अर्थात् आध्यात्मिक जन्म होता है।",
"Kannada": "ಯಜಮಾನನು ಪತ್ನಿಯೊಂದಿಗೆ ಯಜ್ಞದಲ್ಲಿ ದೀಕ್ಷಿತರಾಗುವರು, ಹೀಗೆ ದೀಕ್ಷಿತರಾದ ದಂಪತಿಗಳು ಹೊಸ ಜನ್ಮ ಅರ್ಥಾತ್ ಆಧ್ಯಾತ್ಮಿಕಜನ್ನ ಪಡೆಯುವರು.",
"Sanskrit": "यजमानः तत्पत्नी च यज्ञे दीक्षिते भवतः... |
{
"Hindi": "दूसरे दिन प्रातः प्रायणीय-इष्टी का अनुष्ठान विहित है।",
"Kannada": "ದ್ವಿತೀಯ ದಿನದ ಪ್ರಾತಃಕಾಲದಲ್ಲಿ ಪ್ರಾಯಣೀಯ-ಇಷ್ಟಿಯ ಅನುಷ್ಠಾನವನ್ನು ವಿಧಾನ ಮಾಡಲಾಗಿದೆ.",
"Sanskrit": "द्वितीयदिवसे प्रातः प्रायणीय-इष्टेः अनुष्ठानं विहितं वर्तते।"
} |
{
"Hindi": "जिससे इष्ट् यज्ञ का आरम्भ होता है वह प्रायणीय इष्टि कहलाती है।",
"Kannada": "ಯಾವ ಇಷ್ಟಿಯಿಂದ ಯಜ್ಞದ ಆರಂಭವಾಗುವುದೋ, ಆ ಇಷ್ಟಿಯನ್ನು ಪ್ರಾಯಣೀಯ-ಇಷ್ಟಿ ಎನ್ನುತ್ತಾರೆ.",
"Sanskrit": "यया इष्ट्या यज्ञस्य आरम्भः भवति सा प्रायणीयः इष्टिः इति उच्यते।"
} |
{
"Hindi": "इस इष्टी में पथ्यास्वति, अग्नि, सोम, सविता, और अदिति इन पांच देवाओं का आह्वान किया जाता है।",
"Kannada": "ಈ ಇಷ್ಟಿಯಲ್ಲಿ ಪಥ್ಯಾಸ್ವಸ್ತಿ, ಅಗ್ನಿ, ಸೋಮ, ಸವಿತಾ, ಅದಿತಿ ಎಂಬ ಐದು ದೇವತೆಗಳನ್ನು ಆಹ್ವಾನಿಸಲಾಗುವುದು.",
"Sanskrit": "अस्याम् इष्टौ पथ्यास्वतिः, अग्निः, सोमः, सविता, अदितिः च एतेषां पञ्चानां देवानाम् आह्वानं... |
{
"Hindi": "अदिति पुरोडाश तथा अन्य चार देवओं के लिए तेज घृत व आज्य आहुति त्व का विधान है।",
"Kannada": "ಅದಿತಿಗೆ ಪುರೋಡಾಶ, ಆದರೆ ಉಳಿದ ನಾಲ್ಕು ದೇವತೆಗಳಿಗೆ ಘೃತ ಅಥವಾ ಆಜ್ಯವನ್ನು ಆಹುತಿಯಾಗಿ ವಿಧಾನ ಮಾಡಲಾಗಿದೆ.",
"Sanskrit": "अदितये पुरोडाशः किञ्च अन्येभ्यः चतुर्भ्यः देवेभ्यः द्रुतं घृतम् आज्यं वा आहुतित्वेन विहितं वर्तते।"
} |
{
"Hindi": "याज्ञिक परिभाषा में घृत यदि तरल हो तो वह आज्य कहा जाता है, किन्तु पीण्डिभूत हो तो घृत कहलाता है।",
"Kannada": "ಯಾಜ್ಞಿಕ ಪರಿಭಾಷೆಯಲ್ಲಿ ದ್ರವರೂಪದ ಘೃತವನ್ನು ಆಜ್ಯ ಎನ್ನುವರು, ಆದರೆ ಘನರೂಪದಲ್ಲಿದ್ದರೆ ಘೃತವೆನ್ನುವರು.",
"Sanskrit": "याज्ञिकपरिभाषायां घृतम् द्रुतं चेत् तत् आज्यम् उच्यते, किञ्च पिण्डीभूतं चेत् घृतम्... |
{
"Hindi": "“हविर्विलीनमाज्यं स्याद् घनीभूतं घृतं विदुः यह श्रुति है।",
"Kannada": "\"ಹವಿರ್ವಿಲೀನಮ್ ಆಜ್ಯಂ ಸ್ಯಾತ್ ಘನೀಭೂತಂ ಘೃತಂ ವಿದುಃ\" ಎಂದು ಶ್ರುತಿ ಇದೆ.",
"Sanskrit": "\"हविर्विलीनमाज्यं स्याद् घनीभूतं घृतं विदुः\" इति श्रुतिः वर्तते।"
} |
{
"Hindi": "प्रायणीय इष्टी के बाद सोमलता क्रयण का अनुष्ठान देखा जाता है।",
"Kannada": "ಪ್ರಾಯಣೀಯ ಇಷ್ಟಿಯ ನಂತರ, ಸೋಮಲತಾ ಕ್ರಯಣದ ಅನುಷ್ಠಾನವನ್ನು ನೋಡಬಹುದು.",
"Sanskrit": "प्रायणीयेष्टेः परं सोमलताक्रयणस्य अनुष्ठानं दृश्यते।"
} |
{
"Hindi": "यह सोमक्रय कहलाता है।",
"Kannada": "ಇದನ್ನು ಸೋಮಕ್ರಯ ಎನ್ನುತ್ತಾರೆ.",
"Sanskrit": "एषः सोमक्रयः इत्युच्यते।"
} |
{
"Hindi": "दशद्रव्यों के विनिमय से किसी छोटी सोमलता का क्रय किया जाता है।",
"Kannada": "ದಶದ್ರವ್ಯಗಳ ವಿನಿಮಯದೊಂದಿಗೆ ಒಬ್ಬ ಶೂದ್ರನಿಂದ ಸೋಮಲತೆಯ ಕ್ರಯವನ್ನು ಹೇಳಲಾಗಿದೆ.",
"Sanskrit": "दशद्रव्याणां विनिमयेन कस्माच्चित् शूद्रात् सोमलतायाः क्रयणं क्रियते।"
} |
{
"Hindi": "वे दश द्रव्य एकवर्षीय गोवत्स, सुवर्ण, एक बकरा, एक दूध देने वाली गाय और उसका बछडा, एक सांड, शकट वहन के लिए एक बैल, एक छोटा सांड, एक गोवत्स, और एक वस्त्र।",
"Kannada": "ಒಂದು ವರ್ಷದ ಕರು, ಬಂಗಾರ, ಒಂದು ಮೇಕೆ, ಒಂದು ಹಾಲು ನೀಡುವ ಹಸು ಮತ್ತು ಅದರ ಕರು, ಒಂದು ವೃಷಭ, ಗಾಡಿಯನ್ನು ಹೊರಲು ಒಂದು ಎತ್ತು, ಒಂದು ಎಮ್ಮೆಯ ಕರು, ಒಂದು ಹಸುವಿನ ... |
{
"Hindi": "सोम देवताओं तथा ब्राह्मणों के राजा हैं।",
"Kannada": "ಸೋಮನು ದೇವತೆಗಳಿಗೆ ಮತ್ತು ಬ್ರಾಹ್ಮಣರಿಗೆ ರಾಜ.",
"Sanskrit": "सोमः देवतानां ब्राह्मणानां च राजा।"
} |
{
"Hindi": "अतः राजकीय सम्मान सहित सोम का वहन किया जाता है।",
"Kannada": "ಆದ್ದರಿಂದ, ರಾಜಕೀಯ ಗೌರವಗಳೊಂದಿಗೆ ಸೋಮವನ್ನು ಮೆರವಣಿಗೆ ಮಾಡಲಾಗುವುದು.",
"Sanskrit": "तदर्थं राजकीयसम्मानसहितं सोमस्य वहनं क्रियते।"
} |
{
"Hindi": "पुरोहित गणों के द्वारा चालित दो बैलों के द्वारा वाहित दो शकटों से सोम यज्ञ स्थल पर लाया जाता है।",
"Kannada": "ಪುರೋಹಿತಗಣವು ಎರಡು ಎತ್ತುಗಳಿಂದ ಎಳೆಯಲ್ಪಟ್ಟ ಎತ್ತಿನಗಾಡಿಯಲ್ಲಿ ಸೋಮರಸವನ್ನು ಯಜ್ಞಸ್ಥಳಕ್ಕೆ ತೆಗೆದುಕೊಂಡು ಹೋಗುವರು.",
"Sanskrit": "पुरोहितगणैः चालिताभ्यां बलीवर्दद्वयेन वाहिताभ्यां द्वाभ्यां शकटाभ्यां सोमः य... |
{
"Hindi": "राजा सोम यजमानों के मान्य अतिथि हैं।",
"Kannada": "ರಾಜ ಸೋಮನು ಯಜಮಾನರಿಂದ ಸಮ್ಮಾನಿತ ಅತಿಥಿಯಾಗಿದ್ದಾನೆ.",
"Sanskrit": "राजा सोमः यजमानानां मान्यः अतिथिः वर्तते।"
} |
{
"Hindi": "सोम के लिए आतिथ्येष्टि नामक इष्टी का विधान है यहाँ इस इष्टी में नौ मृत्क-पाल विष्णु को उद्देश्य करके पुरोडाश को अर्पण किये जाते हैं।",
"Kannada": "ಸೋಮನಿಗೆ ಆತಿಥ್ಯೇಷ್ಟಿ ಹೆಸರಿನ ಇಷ್ಟಿಯನ್ನು ವಿಧಾನ ಮಾಡಲಾಗಿದೆ, ಈ ಸ್ಥಳದಲ್ಲಿ ಈ ಇಷ್ಟಿಯಲ್ಲಿ ಒಂಭತ್ತು ಮೃತ್ಕಪಾಲಗಳಲ್ಲಿ ವಿಷ್ಣುವನ್ನು ಉದ್ದೇಶಿಸಿ ಪುರೋಡಾಶವನ್ನು ಸಮರ್ಪಿಸಲಾಗುವುದು.",
... |
{
"Hindi": "आतिथ्येष्टी के बाद प्रवर्ग्य नामक अनुष्ठान, और तदनन्तर उपसत्-इष्टी का अनुष्ठान किया जाता है।",
"Kannada": "ಆತಿಥ್ಯೇಷ್ಟಿಯ ಅನಂತರ ಪ್ರವರ್ಗ್ಯವೆಂಬ ಹೆಸರಿನ ಅನುಷ್ಠಾನ, ತದನಂತರ ಉಪಸದಿಷ್ಟಿಯ ಅನುಷ್ಠಾನವನ್ನು ಮಾಡುತ್ತಾರೆ.",
"Sanskrit": "आतिथ्येष्टेः अनन्तरं प्रवर्ग्यनामकम् अनुष्ठानम्, तदनन्तरं च उपसत्-इष्टेः अनुष्ठानं... |
{
"Hindi": "तीसरे दिन यज्ञ स्थल की पूर्व दिशा में प्राग्वंश-नाम का महावेदी का निर्माण किया जाता है।",
"Kannada": "ಮೂರನೇ ದಿನ, ಯಜ್ಞಸ್ಥಳದ ಪೂರ್ವದಿಕ್ಕಿಗೆ ಪ್ರಾಗ್ವಂಶ ಹೆಸರಿನ ಮಹಾದೇವಿಯನ್ನು ನಿರ್ಮಿಸಲಾಗುತ್ತದೆ.",
"Sanskrit": "तृतीयदिवसे यज्ञस्थलस्य पूर्वदिशि प्राग्वंश-नामिका महावेदी निर्मीयते।"
} |
{
"Hindi": "चौथे दिन निरूठ पशुबन्धयाग की प्रक्रियानुसार अग्नि और सोम को उद्देश्य करके एक पशुयाग विहित है।",
"Kannada": "ನಾಲ್ಕನೇ ದಿನ, ನಿರೂಠ ಪಶುಬಂಧಯಾಗದ ಪ್ರಕ್ರಿಯಾನುಸಾರವಾಗಿ, ಅಗ್ನಿ ಮತ್ತು ಸೋಮರನ್ನು ಉದ್ದೇಶಿಸಿ ಒಂದು ಪಶುಯಾಗವನ್ನು ಮಾಡುತ್ತಾರೆ.",
"Sanskrit": "चतुर्थदिवसे निरूठपशुबन्धयागस्य प्रक्रियानुसारम् अग्निं सोमं च उद्दिश... |
{
"Hindi": "इस दिन दक्षिणस्थ दिशा में हविर्विधन वेदी में सोम ले जाया जाता है।",
"Kannada": "ಈ ದಿನ ದಕ್ಷಿಣ ದಿಕ್ಕಿನಲ್ಲಿ ಹವಿರ್ವಿಧಾನ ವೇದಿಯಲ್ಲಿ ಸೋಮವನ್ನು ಸ್ಥಾಪಿಸುತ್ತಾರೆ.",
"Sanskrit": "अस्मिन् दिवसे दक्षिणस्थदिशि हविर्विधानवेद्यां सोमः नीयते।"
} |
{
"Hindi": "यह अनुष्ठान हविर्विधन प्रणयन कहलाता है।",
"Kannada": "ಈ ಅನುಷ್ಠಾನವನ್ನು ಹವಿರ್ವಿಧಾನ ಪ್ರಣಯನ ಎನ್ನುತ್ತಾರೆ.",
"Sanskrit": "इदं च अनुष्ठानं हविर्विधानप्रणयनम् इति अभिधीयते।"
} |
{
"Hindi": "माध्यन्दिन सवन में पशुमांस और पुरोडाश की आहुति निर्दिष्ट है, सायन्तन अर्थात् तीसरेसवन में पशु के नाना-अङग आहुति के रूप में दिए जाते हैं।",
"Kannada": "ಮಾಧ್ಯಂದಿನ ಸವನದಲ್ಲಿ ಪಶುಮಾಂಸದ ಮತ್ತು ಪುರೋಡಾಶದ ಆಹುತಿಯನ್ನು ನಿರ್ದೇಶಿಸಲಾಗಿದೆ, ಸಾಯಂತನದಲ್ಲಿ ಅರ್ಥಾತ್ ತೃತೀಯಸವನದಲ್ಲಿ ಪಶುವಿನ ನಾನಾ ಅಂಗಗಳನ್ನು ಆಹುತಿಯಾಗಿ ನೀಡಲಾಗುತ್ತದೆ.",... |
{
"Hindi": "एतदनन्तर पत्नीसंयाज अनुष्ठित है।",
"Kannada": "ಇದರ ಅನಂತರ, ಪತ್ನೀಸಂಯಾಜವನ್ನು ಅನುಷ್ಠಾನ ಮಾಡುತ್ತಾರೆ.",
"Sanskrit": "एतदनन्तरं पत्नीसंयाजः अनुष्ठितः वर्तते।"
} |
{
"Hindi": "पुरोहित इस दिन प्रत्यूषा पूत सलिल में अवगाहन करके सोम सवन करते हैं।",
"Kannada": "ಪುರೋಹಿತರು ಈ ದಿನದಲ್ಲಿ ಮುಂಜಾವಿನಲ್ಲಿ ಪವಿತ್ರ ವಸ್ತ್ರದಲ್ಲಿ ಅವಗಾಹನೆ ಮಾಡಿ ಸೋಮಸವನವನ್ನು ಮಾಡುತ್ತಾರೆ.",
"Sanskrit": "पुरोहिताः अस्मिन् दिवसे प्रत्युषसि पूतसलिले अवगाहनं कृत्वा सोमसवनं कुर्वन्ति।"
} |
{
"Hindi": "विहङ्ग काकली के आरम्भ से पूर्व होता प्रातः अनुवाक पढ़ता है।",
"Kannada": "ವಿಹಂಗ ಕಾಕಲಿಯ ಆರಂಭಕ್ಕೆ ಮುಂಚೆ ಹೋತೃವು ಬೆಳಗ್ಗೆ ಅನುವಾಕವನ್ನು ಪಠಿಸುತ್ತಾನೆ.",
"Sanskrit": "विहङ्गकाकल्याः आरम्भात् पूर्वं होता प्रातः अनुवाकं पठति।"
} |
{
"Hindi": "एक प्रस्तर खण्ड पर सोमलता को स्थापित करके उसके ऊपर 'वसतीवरी' नामक जल का सिञ्चन करते हैं।",
"Kannada": "ಒಂದು ಪ್ರಸ್ತರಖಂಡದಲ್ಲಿ ಸೋಮರಸವನ್ನು ಇಟ್ಟು, ಅದರ ಮೇಲೆ, 'ವಸತೀವರೀ' ಎಂಬ ನೀರಿನ್ನು ಸಿಂಪಡಿಸುತ್ತಾರೆ.",
"Sanskrit": "एकस्मिन् प्रस्तरखण्डे सोमलतां संस्थाप्य तदुपरि 'वसतीवरी' इति नामकस्य जलस्य सिञ्चनं करणीयम्।"
} |
{
"Hindi": "दूसरे पत्थर पर सोमलता के पेषण से रस निकाला जाता है।",
"Kannada": "ಮತ್ತೊಂದು ಪ್ರಸ್ತರಖಂಡದಲ್ಲಿ ಸೋಮರಸದ ಲೇಪನದಿಂದ ರಸವನ್ನು ತೆಗೆಯುತ್ತಾರೆ.",
"Sanskrit": "अपरस्मिन् प्रस्तरखण्डे सोमलतायाः पेषणेन रसः निष्कास्यते।"
} |
{
"Hindi": "ग्रह नामक पात्र में निष्काशित सोमरस स्थापित किया जाता है, बकरे के चर्म से निर्मित 'दशापवित्र' नामक तित उसे उसका परिशोधन किया जाता है।",
"Kannada": "ಸಂಗ್ರಹಿಸಿದ ಸೋಮರಸವನ್ನು ಗ್ರಹವೆಂಬ ಪಾತ್ರೆಯಲ್ಲಿ ಇಡಲಾಗುತ್ತದೆ, ಅಜದ ಚರ್ಮದಿಂದ ನಿರ್ಮಿಸಲ್ಪಟ್ಟ 'ದಶಾಪವಿತ್ರ' ಎಂಬ ಹೆಸರಿನ ತಿತಉವಿನ ಪರಿಶೋಧನವನ್ನು ಮಾಡುತ್ತಾರೆ. ",
"Sanskrit": ... |
{
"Hindi": "द्रोणकलश नामक पात्र में विशुद्ध रस स्थापित किया जाता है।",
"Kannada": "ದ್ರೋಣಕಲಶವೆಂಬ ಪಾತ್ರೆಯಲ್ಲಿ ವಿಶುದ್ಧರಸವನ್ನು ಇಡಲಾಗುತ್ತದೆ.",
"Sanskrit": "द्रोणकलशनामके पात्रे विशुद्धरसः संस्थाप्यते।"
} |
{
"Hindi": "प्रत्येक दिन तीन बार सोमरस के निष्काशन का विधान है, प्रातः मध्याह्यण और सायंकाल।",
"Kannada": "ಪ್ರತಿದಿವವೂ ಮೂರು ಬಾರಿ ಸೋಮರಸದ ಸಂಗ್ರಹವನ್ನು ವಿಧಿಸಲಾಗಿದೆ, ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ.",
"Sanskrit": "प्रत्यहं वारत्रयं सोमरसस्य निष्कासनं विहितं वर्तते, प्रातः मध्याह्णे सायं च।"
} |
{
"Hindi": "इन तीनों सवनों का नाम यथाक्रम प्रातःसवन, माध्यन्दिनसवन, तृतीयसवन है।",
"Kannada": "ಈ ಸವನಗಳ ಹೆಸರು ಯಥಾಕ್ರಮವಾಗಿ, ಪ್ರಾತಃಸವನ, ಮಾಧ್ಯಂದಿನ ಸವನ ಮತ್ತು ಸಾಯಂ ಸವನ.",
"Sanskrit": "एतेषां त्रयाणां सवनानां नाम यथाक्रमं हि प्रातःसवनम्, माध्यन्दिनसवनं, तृतीयसवनं चेति।"
} |
{
"Hindi": "आहुति के अवशिष्ट सोमरस का चमस से पुरोहितगण और यजमान को पान कराया जाता है।",
"Kannada": "ಆಹುತಿಯ ಉಳಿದ ಸೋಮರಸವನ್ನು ಚಮಸದಿಂದ ಪುರೋಹಿತಗಣ ಮತ್ತು ಯಜಮಾನರು ಪಾನ ಮಾಡುತ್ತಾರೆ.",
"Sanskrit": "आहुतेः अवशिष्टः सोमरसः चमसेन पुरोहितगणाय यजमानाय च पानं कार्यते।"
} |
{
"Hindi": "माध्यन्दिन सवन के बाद पुरोहितगण को दक्षिणा दी जाती है।",
"Kannada": "ಮಾಧ್ಯಂದಿನ ಸವನದ ಅನಂತರ, ಪುರೋಹಿತಗಣಕ್ಕೆ ದಕ್ಷಿಣೆಯನ್ನು ನೀಡಲಾಗುವುದು.",
"Sanskrit": "माध्यन्दिनसवनात् पुरोहितगणाय दक्षिणा दीयते।"
} |
{
"Hindi": "गौ, अश्व, गधा, बकरा, भैसा, तिल, दाल मांस धन्य और जौ दक्षिणा के रूप में दीये जाते हैं।",
"Kannada": "ಗೋವು, ಕುದುರೆ, ಕತ್ತೆ, ಮೇಕೆ, ಎತ್ತು, ಎಳ್ಳು, ದ್ವಿದಳಧಾನ್ಯ, ಮಾಂಸ, ಧಾನ್ಯ, ಬಾರ್ಲಿಯನ್ನು ದಕ್ಷಿಣೆಯ ರೂಪದಲ್ಲಿ ನೀಡಲಾಗುವುದು.",
"Sanskrit": "गौः अश्वः गर्दभः छागः महिषः तिलं द्विदलं मांसं धान्यं यवः च दक्षिणात्वेन दीयन... |
{
"Hindi": "तृतीयसवन के बाद अवभृथ स्नान का अनुष्ठान किया जाता है।",
"Kannada": "ತೃತೀಯ ಸವನದ ನಂತರ, ಅವಭೃತಸ್ನಾನದ ಅನುಷ್ಠಾನವನ್ನು ಮಾಡುವರು.",
"Sanskrit": "तृतीयसवनात् परम् अवभृथस्नानस्य अनुष्ठानं क्रियते।"
} |
{
"Hindi": "और यह अनुष्ठान अवभृथ-इष्टिनाम से जाना जाता है।",
"Kannada": "ಈ ಅನುಷ್ಠಾನವನ್ನು ಅವಭೃಥೇಷ್ಟಿ ಎನ್ನುತ್ತಾರೆ.",
"Sanskrit": "इदं च अनुष्ठानम् अवभृथ-इष्टिः इत्यभिधीयते।"
} |
{
"Hindi": "यजमान और अन्य सभी पुरोहित अवभृथ स्नान के लिए जलाशय को जाते हैं।",
"Kannada": "ಯಜಮಾನ ಮತ್ತು ಉಳಿದ ಪುರೋಹಿತರು ಅವಭೃಥಸ್ನಾನಕ್ಕಾಗಿ ಜಲಾಶಯಕ್ಕೆ ಹೋಗುವರು.",
"Sanskrit": "यजमानः अन्ये सर्वे पुरोहिताः च अवभृथस्नानाय जलाशयं गच्छन्ति।"
} |
{
"Hindi": "यह अवभृथ-इष्टि ही अग्निष्टोम का अन्तिम अनुष्ठान है।",
"Kannada": "ಈ ಅವಭೃಥೇಷ್ಟಿಯೇ ಅಗ್ನಿಷ್ಟೋಮದ ಅಂತಿಮ ಅನುಷ್ಠಾನ.",
"Sanskrit": "इयम् अवभृथ-इष्टिः एव अग्निष्टोमस्य अन्तिमम् अनुष्ठानम्।"
} |
{
"Hindi": "वरुण और अग्नि इसके इष्ट देवता हैं।",
"Kannada": "ವರುಣ ಮತ್ತು ಅಗ್ನಿಯು ಈ ಇಷ್ಟಿಯ ದೇವತೆಗಳು.",
"Sanskrit": "वरुणः अग्निः च अस्याः इष्टेः देवते।"
} |
{
"Hindi": "चार प्रयाजों और दो अनुयाजों का अनुष्ठान विहित है।",
"Kannada": "ನಾಲ್ಕು ಪ್ರಯಾಜ ಮತ್ತು ಎರಡು ಅನುಯಾಜಗಳ ಅನುಷ್ಠಾನವನ್ನು ವಿಧಾನ ಮಾಡಲಾಗಿದೆ.",
"Sanskrit": "चतुर्णा प्रयाजानां द्वयोः अनुयाजयोः च अनुष्ठानं विहितम्।"
} |
{
"Hindi": "वरुण को उद्दे्य करके एक पुरोडाश अर्पण करते हैं।",
"Kannada": "ವರುಣನನ್ನು ಉದ್ದೇಶಿಸಿ ಒಂದು ಪುರೋಡಾಶವನ್ನು ಅರ್ಪಿಸಲಾಗುತ್ತದೆ.",
"Sanskrit": "वरुणम् उद्दिश्य एकः पुरोडाशः अर्प्यते।"
} |
{
"Hindi": "अवभृथ-इष्टी में सभी आहुतियाँ जल में ही दी जाती हैं, न की अग्नि में।",
"Kannada": "ಅವಭೃಥೇಷ್ಟಿಯಲ್ಲಿ ಎಲ್ಲ ಆಹಿತಿಗಳನ್ನು ನೀರಿನಲ್ಲಿ ಕೊಡುತ್ತಾರೆ, ಅಗ್ನಿಯಲ್ಲಿ ಅಲ್ಲ.",
"Sanskrit": "अवभृथ-इष्टौ सर्वाः आहुतयः एव जले दीयन्ते, न तु अग्नै।"
} |
{
"Hindi": "यजमान अवगाहन रत पुरोहितों के शिर पर जल सिञ्चता है।",
"Kannada": "ಯಜಮಾನನು ಸ್ನಾನಮಾಡುತ್ತಿರುವ ಪುರೋಹಿತರ ಶಿರದ ಮೇಲೆ ನೀರನ್ನು ಪ್ರೋಕ್ಷಣೆ ಮಾಡುತ್ತಾನೆ.",
"Sanskrit": "यजमानः अवगाहनरतानां पुरोहितानां शिरसि जलं सिञ्चति।"
} |
{
"Hindi": "दीक्षणीय-इष्टिकाल में यजमान और उसकी पत्नी पांच दिन तक परिधृत वस्त्र अवभृथ स्नान के अनन्तर छोड़ कर उन्नेता नामक पुरोहित द्वारा प्रदत्त नवीन वस्त्र का परिधान करते हैं।",
"Kannada": "ದೀಕ್ಷಣೀಯ-ಇಷ್ಟಿಕಾಲದಲ್ಲಿ ಯಜಮಾನನು ತನ್ನ ಪತ್ನಿಯೊಡನೆ, ಐದು ದಿನಗಳಲ್ಲಿ ಅವಭೃಥಸ್ನಾನದ ಅನಂತರ ಪರಿಧಾನ ವಸ್ತ್ರವನ್ನು ತೊರೆದು, ಉನ್ನೇತಾ ಎಂಬ ಪುರೋಹ... |
{
"Hindi": "जलाशय से यज्ञ स्थल की और प्रत्यागमन के समय में यजमान उदयनीय नामक अन्तिम अनुष्ठान का आचरण करता है।",
"Kannada": "ಜಲಾಶಯದಿಂದ ಯಜ್ಞಸ್ಥಳಕ್ಕೆ ಹಿಂತಿರುಗುವಾಗ, ಉದಯನೀಯ ಎಂಬ ಅಂತಿಮ ಅನುಷ್ಠಾನವನ್ನು ಯಜಮಾನನು ಆಚರಿಸುತ್ತಾನೆ.",
"Sanskrit": "जलाशयाद् यज्ञस्थलं प्रति प्रत्यावर्तनसमये यजमानः उदयनीय इति नामकम् अन्तिमम् अनुष्ठ... |
{
"Hindi": "उदयनीय-इष्टी में दूध-मधु-दही-श्करा-आदि के मिश्रण से निर्मित चरु आहुति के रूपमें दी जाती है।",
"Kannada": "ಉದಯನೀಯೇಷ್ಟಿಯಲ್ಲಿ ಹಾಲು-ಜೇನು-ಮೊಸರು-ಸಕ್ಕರೆ ಮುಂತಾದವುಗಳ ಮಿಶ್ರಣದಿಂದ ನಿರ್ಮಿಸಿದ ಚರುವನ್ನು ಆಹುತಿಯಾಗಿ ನೀಡುತ್ತಾರೆ.",
"Sanskrit": "उदयनीय-इष्टौ दुग्ध-मधु-दधि-शर्करा-प्रभृतीनां मिश्रणेन निर्मितं चरु आहुतिरूपेण ... |
{
"Hindi": "अग्निष्टोम का दूसरा नाम क्या है?",
"Kannada": "ಅಗ್ನಿಷ್ಟೋಮದ ಮತ್ತೊಂದು ಹೆಸರೇನು?",
"Sanskrit": "अग्निष्टोमस्य अपरं नाम किम् ?"
} |
{
"Hindi": "अग्निष्टोम में मुख्य आहुति कौन सी है?",
"Kannada": "ಅಗ್ನಿಷ್ಟೋಮದ ಮುಖ್ಯ ಆಹುತಿ ಯಾವುದು?",
"Sanskrit": "अग्निष्टोमे मुख्या आहुतिः का ?"
} |
{
"Hindi": "किस ब्राह्मण में अग्निष्टोम का विवरण विस्तृत रूप से है?",
"Kannada": "ಯಾವ ಬ್ರಾಹ್ಮಣದಲ್ಲಿ ಅಗ್ನಿಷ್ಟೋಮದ ವಿಸ್ತೃತ ವಿವರಣೆ ಇದೆ?",
"Sanskrit": "कस्मिन् ब्राह्मणे अग्निष्टोमस्य विवरणं विस्तृततया वर्तते ?"
} |
{
"Hindi": "देवता और ब्राह्मणों का राजा कौन है?",
"Kannada": "ದೇವತೆಗಳ ಮತ್ತು ಬ್ರಾಹ್ಮಣರ ರಾಜನಾರು?",
"Sanskrit": "देवतानां ब्राह्मणानां च राजा कः ?"
} |
{
"Hindi": "याज्ञिक परिभाषा में द्रुत घृत का क्या नाम?",
"Kannada": "ಯಾಜ್ಞಿಕ ಪರಿಭಾಷೆಯಲ್ಲಿ ದ್ರವರೂಪದ ಘೃತವನ್ನು ಏನೆನ್ನುವರು?",
"Sanskrit": "याज्ञिकपरिभाषायां द्रुतघृतस्य नाम किम् ?"
} |
{
"Hindi": "सोमयाग के लिए कितने दिन अपेक्षित हैं?",
"Kannada": "ಸೋಮಯಾಗಕ್ಕೆ ಎಷ್ಟು ದಿನ ಬೇಕು?",
"Sanskrit": "सोमयागस्य कृते कति दिनानि अपेक्षितानि ?"
} |
{
"Hindi": "प्रतिदिन कितनी बार सोमरस के निष्काशन का विधान है?",
"Kannada": "ಪ್ರತಿದಿವವೂ ಎಷ್ಟು ಬಾರಿ ಸೋಮರಸದ ಸಂಗ್ರಹವನ್ನು ವಿಧಿಸಲಾಗಿದೆ?",
"Sanskrit": "प्रत्यहं कतिवारं सोमरसनिष्कासनस्य विधानं वर्तते।"
} |
{
"Hindi": "अग्निष्टोम का अन्तिम अनुष्ठान क्या हे?",
"Kannada": "ಅಗ್ನಿಷ್ಟೋಮದ ಅಂತಿಮ ಅನುಷ್ಠಾನ ಯಾವುದು?",
"Sanskrit": "अग्निष्टोमस्य अन्तिमम् अनुष्ठानं किम् ?"
} |
{
"Hindi": "हमारी लौकिक संस्कृती में बहुत से याग हमारे द्वारा परिलक्षित तथा पालित हैं।",
"Kannada": "ನಮ್ಮ ಲೌಕಿಕ ಸಂಸ್ಕೃತಿಯಲ್ಲಿ ಹಲವು ಯಾಗಗಳನ್ನು ನಾವು ಪರಿರಕ್ಷಿಸಿದ್ದೇವೆ, ಪಾಲಿಸಿದ್ದೇವೆ ಕೂಡ.",
"Sanskrit": "अस्माकं लौकिकसंस्कृतौ बहवः यागाः अस्माभिः परिलक्ष्यन्ते किञ्च पाल्यन्ते अपि।"
} |
{
"Hindi": "वस्तुतः तो वैदिकों के लिए याग बहुत पुण्य प्रदायक हैं।",
"Kannada": "ವಾಸ್ತವಿಕವಾಗಿ ವೈದಿಕರಿಗೆ ಯಾಗವು ಬಹು ಪುಣ್ಯದಾಯಕವಾಗಿವೆ.",
"Sanskrit": "वस्तुतस्तु वैदिकानां कृते यागाः बहु पुण्यप्रदायकाः सन्ति।"
} |
{
"Hindi": "हम यहाँ बहुत से यागों के विषय में जान सकते हैं।",
"Kannada": "ನಾವಿಲ್ಲಿ ಅನೇಕ ಯಾಗಗಳ ವಿಷಯವಾಗಿ ತಿಳಿದುಕೊಳ್ಳಲಿದ್ದೇವೆ.",
"Sanskrit": "वयम् अत्र बहूनां यागानां विषये ज्ञातुं शक्नुमः।"
} |
{
"Hindi": "हम जान सकते हैं कि कौन सा याग कितने दिनों में समाप्त होता है, किस प्रकार उन यागों का अनुष्ठान करना चाहिए इत्यादि।",
"Kannada": "ಯಾವ ಯಾಗವು ಎಷ್ಟು ದಿನಗಳಲ್ಲಿ ಮುಗಿಯುತ್ತದೆ, ಹೇಗೆ ಆ ಯಾಗಗಳ ಅನುಷ್ಠಾನ ಮಾಡಬೇಕೆಂದು ನಾವಿಲ್ಲಿ ತಿಳಿಯಲಿದ್ದೇವೆ.",
"Sanskrit": "वयं ज्ञातुं शक्नुमः कः यागः कतिषु दिनेषु समाप्यते, कथं वा तेषां... |
{
"Hindi": "सत्र याग की प्रकृति गवामयन नामक यज्ञ है।",
"Kannada": "ಸತ್ರಯಾಗದ ಪ್ರಕೃತಿಯು ಗವಾಮಯನ ಎಂಬ ಯಜ್ಞವಾಗಿದೆ.",
"Sanskrit": "सत्रयागस्य प्रकृतिः हि गवामयननामकयज्ञः।"
} |
{
"Hindi": "गवामयन याग सोमयाग के अन्तर्गत आता है।",
"Kannada": "ಗವಾಮಯನ ಯಾಗವು ಸೋಮಯಾಗದಲ್ಲಿ ಅಂತರ್ಗತವಾಗಿದೆ.",
"Sanskrit": "गवामयनयागो हि सोमयागे अन्तर्गतः।"
} |
{
"Hindi": "अतः गवामयन की प्रकृति अग्निष्टोम है।",
"Kannada": "ಆದ್ದರಿಂದ ಗವಾಮಯನದ ಪ್ರಕೃತಿಯು ಅಗ್ನಿಷ್ಟೋಮ.",
"Sanskrit": "अतः गवामयनस्य प्रकृतिः हि अग्निष्टोमः।"
} |
{
"Hindi": "सत्र और गवामयन के मध्य श्रेणी विन्यास पर्यालोचना की जाती है।",
"Kannada": "ಸತ್ರ ಮತ್ತು ಗವಾಮಯನಗಳ ಮಧ್ಯದಲ್ಲಿ ಶ್ರೇಣೀವಿನ್ಯಾಸದ ಪರ್ಯಾಲೋಚನೆಯನ್ನು ಮಾಡಲಾಗುವುದು.",
"Sanskrit": "सत्रगवामयनयोः मध्ये श्रेणीविन्यासस्य पर्यालोचना क्रियते।"
} |
{
"Hindi": "अतः कहा जाता है कि - यज्ञ को जातिगत दुष्टी से देखें तो गवामयन याग सोमयाग के अन्तर्गत आता है परन्तु काल की दृष्टी से उनके स्वरूप वश श्रेणी विन्यास किया जाता है।",
"Kannada": "ಯಜ್ಞಗಳನ್ನು ಜಾತಿದೃಷ್ಟಿಯಿಂದ ಅವಲೋಕನೆ ಮಾಡಿದರೆ, ಗವಾಮಯನ ಯಾಗವು ಸೋಮಯಾಗದಲ್ಲಿ ಸೇರುತ್ತದೆ, ಆದರೆ ಕಾಲದ ದೃಷ್ಟಿಯಿಂದ ಅವುಗಳ ಸ್ವಸ್ವರೂಪದ ಕಾರಣದಿಂದ ಶ್ರೇ... |
{
"Hindi": "जो याग एक दिन समाप्त होता है वह एकाहयाग कहलाता है।",
"Kannada": "ಯಾವ ಯಾಗಗಳುು ಒಂದೇ ದಿನದಲ್ಲಿ ಸಂಪನ್ನವಾಗುವುವೋ, ಅವನ್ನು ಏಕಾಹಯಾಗಗಳು ಎನ್ನುತ್ತಾರೆ. ",
"Sanskrit": "ये यागाः एकस्मिन्नेव दिने समाप्यन्ते तर्हि एकाहयागाः।"
} |
{
"Hindi": "जो याग एकाधिक दिवसीय अथवा बारह दिनों से कम दिनों में सम्पन होते हैं वे अहीनयाग होते हैं।",
"Kannada": "ಯಾವ ಯಾಗಗಳು ಒಂದಕ್ಕಿಂತ ಹೆಚ್ಚು ಆದರೆ ಹನ್ನೆರಡಕ್ಕಿಂತ ಕಡಿಮೆ ದಿವಸಗಳಲ್ಲಿ ಅನುಷ್ಠಾನ ಮಾಡಲ್ಪಡುತ್ತವೆಯೋ, ಅವುಗಳನ್ನು ಅಹೀನಯಾಗಗಳು ಎಂದು ಕರೆಯುವರು.",
"Sanskrit": "ये यागाः एकाधिकदिवसीयाः किञ्च द्वादशदिवसेभ्यः न्युनदिवसीया... |
{
"Hindi": "बारह दिनों से अधिक दिन जिस याग में लगते हैं वह सत्रयाग कहलाता है।",
"Kannada": "ಹನ್ನೆರಡಕ್ಕಿಂತ ಹೆಚ್ಚಿನ ದಿನಗಳಲ್ಲಿ ಅನುಷ್ಠಾನ ಮಾಡುವ ಯಾಗಗಳನ್ನು ಸತ್ರಯಾಗವೆನ್ನುವರು.",
"Sanskrit": "द्वादशदिवसेभ्यः अधिकदिवसाः यस्मिन् यागे प्रयोजनं भवति तर्हि सत्रयागः।"
} |
{
"Hindi": "सामवेद के पञ्चविंश ब्राह्मण में विविध सत्र याग की विधि और अनुष्ठान का स्वरूप वर्णित है।",
"Kannada": "ಸಾಮವೇದದ ಪಂಚವಿಂಶತಿ ಬ್ರಾಹ್ಮಣದಲ್ಲಿ ವಿವಿಧ ಸತ್ರಯಾಗದ ವಿಧಿಯನ್ನು ಮತ್ತು ಅನುಷ್ಠಾನದ ಸ್ವರೂಪವನ್ನು ವರ್ಣಿಸಲಾಗಿದೆ.",
"Sanskrit": "सामवेदस्य पञ्चविंशब्राह्मणे विविधसत्रयागस्य विधिः अनुष्ठानस्वरूपं च वर्णितम्।"
} |
{
"Hindi": "गवामयन याग के सम्पादन के लिए एक वत्सर अपेक्षित है।",
"Kannada": "ಗವಾಮಯನ ಯಾಗದ ಸಂಪಾದನೆಗೆ ಏಕವತ್ಸ್ವರವು ಅಪೇಕ್ಷಿತ.",
"Sanskrit": "गवामयनयागस्य सम्पादनाय एकवत्सरः अपेक्ष्यते।"
} |
{
"Hindi": "अतः गवामयन याग सत्रयाग के अन्तर्गत आता है।",
"Kannada": "ಆದ್ದರಿಂದ ಗವಾಮಯನ ಯಾಗವು ಸತ್ರಯಾಗದಲ್ಲಿ ಅಂತರ್ಗತ.",
"Sanskrit": "अतः गवामयनयागः सत्रयागे अन्तर्गतः।"
} |
{
"Hindi": "सत्रयाग तीन भागों में विभक्त है - प्रथमार्ध में 180 दिन, द्वितीयार्थ में 180 दिन और तृतीयार्थ में 180 दिनों की अपेक्षा है।",
"Kannada": "ಸತ್ರಯಾಗವನ್ನು ಮೂರು ಭಾಗಗಳಾಗಿ ವಿಭಾಗಿಸುತ್ತಾರೆ - ಪ್ರಥಮಾರ್ಧದಲ್ಲಿ ೧೮೦ ದಿವಸಗಳು, ದ್ವಿತೀಯಾರ್ಧದಲ್ಲಿ ೧೮೦ ದಿವಸಗಳು ಮತ್ತು ತೃತೀಯಾರ್ಧದಲ್ಲಿ ೧೮೦ ದಿವಸಗಳು ಅಪೇಕ್ಷಿತವಾಗಿವೆ.",
"Sanskrit": "... |
{
"Hindi": "आदि के 180 दिनों के अनुष्ठान में प्रथमदिन में अतिरात्र और अन्तिम दिन में स्वर साम विहित हैं परन्तु अन्तिम 180 दिनों के अनुष्ठान में प्रथम दिन स्वर साम और अन्तिम दिन में अतिरात्र विहित है।",
"Kannada": "ಮೊದಲ ೧೮೦ ದಿವಸಗಳ ಅನುಷ್ಠಾನದಲ್ಲಿ ಪ್ರಥಮದಿನದಲ್ಲಿ ಅತಿರಾತ್ರ, ಮತ್ತು ಅಂತಿಮ ದಿನದಲ್ಲಿ ಸ್ವರಮಾಸವನ್ನು ವಿಧಾನ ಮಾಡಲಾಗಿದ... |
{
"Hindi": "अतः विपरीत अनुक्रमानुसरण वश दो की दर्पण प्रतिविम्ब से तुलना की जाती है।",
"Kannada": "ಆದ್ದರಿಂದ ವಿರುದ್ಧ ಅನುಕ್ರಮಗಳ ಅನುಸರಣೆಗಾಗಿ, ಎರಡರನ್ನು ದರ್ಪಣ ಪ್ರತಿಬಿಂಬದೊಂದಿಗೆ ಹೋಲಿಕೆ ಮಾಡಲಾಗಿದೆ.",
"Sanskrit": "अतः विपरीतानुक्रमानुसरणवशात् द्वयोः दर्पणप्रतिविम्बेन तुलना क्रियते।"
} |
{
"Hindi": "उपर्युक्त आवली में दोनों प्रकारों के षडह का उल्लेख दिखाई देता है, अभिप्लव षडह और पृष्ठ्य षडह।",
"Kannada": "ಮೇಲೆ ತಿಳಿಸಿದ ಸರಣಿಯಲ್ಲಿ ಎರಡು ಪ್ರಕಾರದ ಷಡಹದ ಉಲ್ಲೇಖವನ್ನು ನೋಡಬಹುದು, ಅಭಿಪ್ಲವ ಷಡಹ ಮತ್ತು ಪೃಷ್ಠ್ಯ ಷಡಹ.",
"Sanskrit": "उपर्युक्तायाम् आवल्यां प्रकारद्वयस्य षडहस्य उल्लेखो दृश्यते , अभिप्लवषडहः पृष्ठ्यषडह... |
{
"Hindi": "षडह याग छह दिनों में निष्पन्न होने वाला याग है।",
"Kannada": "ಷಡಹಯಾಗವನ್ನು ಆರು ದಿನಗಳಲ್ಲಿ ಮಾಡಲಾಗುವುದು.",
"Sanskrit": "षडहयागः षड्षु दिवसेषु क्रियमाणः यागः।"
} |
{
"Hindi": "अभिप्लव षडह के छः दिन - पहले दिन - ज्योतिष्टोम।",
"Kannada": "ಅಭಿಪ್ಲವ ಷಡಹದಲ್ಲಿ ಆರು ದಿವಸಗಳು - ಮೊದಲ ದಿನ ಜ್ಯೋತಿಷ್ಟೋಮ.",
"Sanskrit": "अभिप्लवषडहस्य षड् दिवसाः - प्रथमदिवसः- ज्योतिष्टोमः।"
} |
{
"Hindi": "दूसरे दिन - गोष्टोम।",
"Kannada": "ಎರಡನೇ ದಿನ - ಗೋಷ್ಟೋಮ.",
"Sanskrit": "द्वितीयदिवसः- गोष्टोमः।"
} |
{
"Hindi": "तीसरे दिन - आयुष्टोम।",
"Kannada": "ಮೂರನೇ ದಿನ - ಆಯುಷ್ಟೋಮ.",
"Sanskrit": "तृतीयदिवसः- आयुष्टोमः।"
} |
{
"Hindi": "चौथे दिन - गोष्टोम।",
"Kannada": "ನಾಲ್ಕನೇ ದಿನ - ಗೋಷ್ಟೋಮ.",
"Sanskrit": "चतुर्थदिवसः- गोष्टोमः।"
} |
{
"Hindi": "पांचवे दिन - आयुष्टोम।",
"Kannada": "ಐದನೇ ದಿನ - ಆಯುಷ್ಟೋಮ.",
"Sanskrit": "पञ्चमदिवसः- आयुष्टोमः।"
} |
{
"Hindi": "छठे दिन - ज्योतिष्टोम।",
"Kannada": "ಆರನೇ ದಿನ - ಜ್ಯೋತಿಷ್ಟೋಮ.",
"Sanskrit": "षष्ठदिवसः- ज्योतिष्टोमः।"
} |
{
"Hindi": "अभिप्लव षडह के प्रथमा दन तथा अन्तिम दिन ज्योतिष्टोम याग का विधान है।",
"Kannada": "ಅಭಿಪ್ಲವ ಷಡಹದಲ್ಲಿ ಮೊದಲದಿನ ಮತ್ತು ಅಂತಿಮದಿನ ಜ್ಯೋತಿಷ್ಟೋಮ ಯಾಗವನ್ನು ವಿಧಾನಮಾಡಲಾಗಿದೆ.",
"Sanskrit": "अभिप्लवषडहे प्रथमदिवसे अन्तिमदिवसे च ज्योतिष्टोमयागः विहितः।"
} |
{
"Hindi": "अतः कहा भी है - “उभयतो ज्योतिरभिप्लव षडहः।",
"Kannada": "ಆದ್ದರಿಂದ ಹೇಳುತ್ತಾರೆ - \"ಉಭಯತಃ ಜ್ಯೋತಿಃ ಅಭಿಪ್ಲವಷಡಹಃ\".",
"Sanskrit": "अतः उच्यते - \"उभयतो ज्योतिरभिप्लवषडहः\"।"
} |
{
"Hindi": "'' दोनों ज्योतिष्टोम यागों के मध्यस्थ दिन उक्थ्यनाम से जाने जाते हैं।",
"Kannada": "ಎರಡು ಜ್ಯೋತಿಷ್ಟೋಮ ಯಾಗಗಳ ಮಧ್ಯಸ್ಥದ ದಿನಗಳನ್ನು ಉಕ್ಥ್ಯ ಎನ್ನುತ್ತಾರೆ.",
"Sanskrit": "द्वयोः ज्योतिष्टोमयागयोः मध्यस्थाः दिवसाः उक्थ्यनाम्ना ज्ञायन्ते।"
} |
{
"Hindi": "परन्तु पृष्ठ्य षडह के प्रथमदिन ज्योतिष्टोम याग होने पर भी अन्तिमदिन उक्थ्ययाग विहित होता है, इस दिन ज्योतिष्टोम याग नहीं होता है।",
"Kannada": "ಆದರೆ ಪೃಷ್ಠ್ಯಷಡಹದ ಪ್ರಥಮದಿನದಲ್ಲಿ ಜ್ಯೋತಿಷ್ಟೋಮ ಯಾಗವಿದ್ದರೂ ಕೂಡ ಅಂತಿಮ ದಿನದಲ್ಲಿ ಉಕ್ಥ್ಯಯಾಗವನ್ನು ವಿಧಾನ ಮಾಡುತ್ತಾರೆ, ಆ ದಿನದಲ್ಲಿ ಜ್ಯೋತಿಷ್ಟೋಮ ಯಾಗವು ಇರುವುದಿಲ್ಲ.",
"Sanskrit... |
Subsets and Splits
No community queries yet
The top public SQL queries from the community will appear here once available.