text stringlengths 0 61.5k |
|---|
ಗತಪ್ರತ್ಯಾಗತ . |
೧.ಶಾಂತಿ ಪುರಾಣ -ಇದಕ್ಕೆ 'ಪುರಾಣ ನಾಮ ಚೂಡಾಮಣಿ'ಎಂಬ ಪರ್ಯಾಯನಾಮವಿದೆ.೧೨ ಆಶ್ವಾಸಗಳಲ್ಲಿ ರಚನೆಯಾಗಿರುವ ಈ ಚಂಪೂ ಕಾವ್ಯ ೧೬ನೆಯ ತೀರ್ಥಂಕರನಾದ ಶಾಂತಿನಾಥನನ್ನು ಕುರಿತದ್ದು.ಈ ಕಾವ್ಯದಲ್ಲಿ ಪೊನ್ನನ ವಿದ್ವತ್ತು,ಪ್ರೌಢಿಮೆ,ಭಾಷೆ,ಛಂದಸ್ಸುಗಳ ಮೇಲೆ ಇರುವ ಹಿಡಿತ ಎದ್ದು ಕಾಣುತ್ತದೆ.ತೀರ್ಥಂಕರನಾಗಲಿರುವವನು ೬ನೆಯ ಜನ್ಮದಲ್ಲಿ 'ಅಪರಾಜಿತ'ನಾಗಿ ಹುಟ್ಟಿದಂದಿನಿಂದ ಕಥೆ ಆರಂಭವಾಗಿ,ಕೊನೆಯ ೩(೧೦-೧೨) ... |
೨.ಜಿನಾಕ್ಷರಮಾಲೆ-೩೯ ಕಂದಪದ್ಯಗಳಿರುವ ಕೃತಿ.'ಕ'ಕಾರದಿಂದ ಹಿಡಿದು 'ಳ'ಕಾರದವರೆಗೂ ಕ್ರಮವಾಗಿ ಒಂದೊಂದು ಪದ್ಯಾಕ್ಷರ ಆರಂಭವಾಗುತ್ತದೆ. |
೩.ಭುವನೈಕ ರಾಮಾಭ್ಯುದಯ-ಇದು ೧೪ ಆಶ್ವಾಸಗಳ ಚಂಪೂ ಕಾವ್ಯ.ಈ ಗ್ರಂಥವು ಲಭ್ಯವಿಲ್ಲವಾದ್ದರಿಂದ ಇದರ ಕಥಾವಸ್ತು ಚಕ್ರವರ್ತಿ ಕೃಷ್ಣನ ಸಾಮಂತರಾಜ ಶಂಕರಗಂಡನ ಕುರಿತುದೊ,ಅಥವಾ ರಾಮಕಥೆಯನ್ನು ಕುರಿತುದೊ,ಇಲ್ಲವೇ ತನ್ನನ್ನು 'ಕೋದಂಡರಾಮ'ನೆಂದು ಕರೆದುಕೊಳ್ಳುತ್ತಿದ್ದ ಚೋಳರಾಜ ರಾಜಾದಿತ್ಯನ ಮೇಲೆ ಮುಮ್ಮಡಿಕೃಷ್ನ ತಕ್ಕೋಲದಲ್ಲಿ ವಿಜಯ ಸಾಧಿಸಿದ ಕಥೆಯೋ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.ಮಲ್ಲಪನ ಮಗಳಾದ 'ದ... |
ಆದಾಯ: Latest ಆದಾಯ News & Updates, Photos & Images, Videos | Vijaya Karnataka - Page 3 |
October,17,2019, 06:44:12 |
ಎರಡನೇ ದಿನವೂ ಮುಂದುವರಿದ ಐಟಿ ಶೋಧ |
ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಸೋದರ ಅಳಿಯ ಜಿ.ಎಚ್.ನಾಗರಾಜು ಅವರ ಚಿಕ್ಕಬಳ್ಳಾಪುರದ ಮನೆಯ ಮೇಲೆ ದಾಳಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎರಡನೇ ದಿನವಾದ ಶುಕ್ರವಾರವೂ ದಾಳಿ ನಡೆಸಿ ತನಿಖೆ ಮುಂದುವರೆಸಿದ್ದಾರೆ. |
'ಸ್ವಂತ ಉದ್ದಿಮೆ ತೆರೆದು ಸ್ವಾವಲಂಬಿಗಳಾಗಿ' |
Oct 12, 2019, 03.57 PM |
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶ ದಿಂದಲೇ ಸ್ವಂತ ಉದ್ಯೋಗದ ತರಬೇತಿಗಳನ್ನು ನೀಡುತ್ತಿದೆ ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕರಾದ ವಿ. ಕಾಮತ್ ಹೇಳಿದರು. |
'ಪರಮಾ'ಪ್ತ ಸಹಾಯಕ ರಮೇಶ್ ಕೂಡ ಸಿರಿವಂತ? |
ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಶರಣಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜತೆಗೆ ಪರಮೇಶ್ವರ್ ಆಪ್ತ ಸಹಾಯಕನ ಆಸ್ತಿ ಬಗ್ಗೆ ಎಲ್ಲಡೆ ಚರ್ಚೆಯಾಗುತ್ತಿದೆ. |
ಪ್ರಸ್ತುತ ಪ್ರವಾದಿ ನಿಂದನೆ: ಭುಗಿಲೆದ್ದ ಜಾಗತಿಕ ಆಕ್ರೋಶ – Prasthutha |
✍️ಇಲ್ಯಾಸ್ ಮುಹಮ್ಮದ್ |
►ವಿಶ್ವದ ಮುಂದೆ ಕುಗ್ಗಿದ ಭಾರತ |
ಜಗತ್ತಿನ ಮುಂದೆ ಭಾರತದ ಮಾನ ಮೂರಾಬಟ್ಟೆಯಾಗಿರುವುದು ಇಂದು ಹೊಸತೇನಲ್ಲ. ಈ ಹಿಂದೆ ಗಾಂಧೀಜಿಯವರನ್ನು ಕೊಂದಾಗ, ಬಾಬರಿ ಮಸ್ಜಿದ್ ಧ್ವಂಸಗೊಳಿಸಿದಾಗ, ದೆಹಲಿಯ ರಸ್ತೆಗಳಲ್ಲಿ ಸಿಖ್ಖರನ್ನು ಬೆಂಬತ್ತಿ ಹತ್ಯಾಕಾಂಡ ನಡೆಸಿದಾಗ, ಗುಜರಾತಿನಲ್ಲಿ ಸಾವಿರಾರು ಮುಸ್ಲಿಮರ ನರಮೇಧ ನಡೆಸಿದಾಗ ವಿಶ್ವದಾದ್ಯಂತ ಭಾರತವು ಛೀಮಾರಿ ಎದುರಿಸಿ ತಲೆತಗ್ಗಿಸಿ ನಿಂತಿತ್ತು. ಅದೇ ಹಾದಿಯಲ್ಲಿ ಭಾರತ ಇಂದು ಅಪಮಾನಕ್ಕೊಳಗಾಗ... |
'ಜೀವ ಬೇಕಾದರೂ ತ್ಯಾಗ ಮಾಡಬಲ್ಲೆವು. ಆದರೆ ಪ್ರವಾದಿ ನಿಂದನೆ ಮಾತ್ರ ಯಾವ ಕಾರಣಕ್ಕೂ ಕ್ಷಮಾರ್ಹವಲ್ಲ !' ಇದು ಜಗತ್ತಿನ ಎಲ್ಲ ಮುಸ್ಲಿಮರ ಗಟ್ಟಿ ನಿಲುವು. ಮುಸ್ಲಿಮರು ಪ್ರವಾದಿ ಮುಹಮ್ಮದ್ (ಸ)ರವರನ್ನು ತಮ್ಮ ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಾರೆ. ತಮ್ಮ ದಿನನಿತ್ಯದ ಪ್ರಾರ್ಥನೆಯಲ್ಲಿ ಪ್ರವಾದಿ ಮುಹಮ್ಮದ್(ಸ)ರವರಿಗೆ ರಕ್ಷೆಯನ್ನು (ಸ್ವಲಾತ್) ಹೇಳುತ್ತಾರೆ. ಅವರ ನರನಾಡಿಗಳಲ್ಲಿ ಪ್ರವಾದಿ ... |
ಈ ವಾಸ್ತವವನ್ನು ವಿಶ್ವದಲ್ಲಿ ಸರ್ವ ಧರ್ಮೀಯ ಬಾಂಧವರು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಹಾಗಿರುವಾಗ ಪ್ರವಾದಿ ನಿಂದನೆ ಮಾಡುತ್ತಿರುವವರು ಹಾಗೇ ಮಾಡುತ್ತಿರುವುದು ದ್ವೇಷ ಸಾಧನೆಗೇ ಹೊರತು ಬೇರೆ ಕಾರಣಕ್ಕಲ್ಲ. ಇಸ್ಲಾಮ್ ಧರ್ಮದ ಅವಹೇಳನ ಮಾಡುವುದರಿಂದ ಮುಸ್ಲಿಮರ ಸ್ವಾಭಿಮಾನವನ್ನು ಧ್ವಂಸಗೊಳಿಸುವುದು ಅಥವಾ ಆತ್ಮಸ್ಥೈರ್ಯವನ್ನು ಕುಗ್ಗಿಸಬಹುದು ಎಂಬುದೇ ಇಂತಹ ನಿಂದನೆಯ ಉದ್ದೇಶ. |
ಪ್ರವಾದಿ(ಸ)ರನ್ನು ನಿಂದಿಸಿದ ನೂಪುರ್ ಶರ್ಮಾ ಬಿಜೆಪಿಯ ಓರ್ವ ಸಾಮಾನ್ಯ ಕಾರ್ಯಕರ್ತಳೇನಲ್ಲ. ಆಕೆ ಬಿಜೆಪಿ ರಾಷ್ಟ್ರೀಯ ವಕ್ತಾರೆ. ಅದೇ ರೀತಿ ಟ್ವೀಟ್ ಮೂಲಕ ಪ್ರವಾದಿ (ಸ)ರನ್ನು ನಿಂದಿಸಿದ ನವೀನ್ ಜಿಂದಲ್ ಕೂಡಾ ಒಬ್ಬ ತಿರುಬೋಕಿ ಬಿಜೆಪಿಯ ಕಾರ್ಯಕರ್ತನಲ್ಲ, ಆತ ಬಿಜೆಪಿ ಪಕ್ಷದ ಮಾಧ್ಯಮ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ. ಇವರಿಬ್ಬರ ನಿಂದನೆಯ ಬಗ್ಗೆ ದೇಶಾದ್ಯಂತ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾದ... |
ಬಿಜೆಪಿ ಪಕ್ಷವು ಹೇಳಿಕೆಯೊಂದನ್ನು ಹೊರಡಿಸಿ, ಸಾವಿರಾರು ವರ್ಷಗಳಿಂದ ಸಮನ್ವಯ – ಸಹಯೋಗದೊಂದಿಗೆ ಜೀವಿಸುತ್ತಿರುವ ಭಾರತದಲ್ಲಿ ಸರ್ವಧರ್ಮೀಯರಿಗೆ ಸಮಾನ ಗೌರವವನ್ನು ನೀಡಲಾಗುತ್ತಿದೆ. ಅದು ಇಂದೂ, ಎಂದೂ ಮುಂದುವರೆಯುತ್ತದೆ ಎಂದಿತು. ಅಲ್ಲದೆ, ಆ ಇಬ್ಬರು ರಾಷ್ಟ್ರೀಯ ಮುಖಂಡರನ್ನು ಫ್ರಿಂಜ್( ಅಂಚು) ಎಂದು ಘೋಷಿಸಿತು. ವಿಷಯ ಇರುವುದೇ ಇಲ್ಲಿ. ಆ ಇಬ್ಬರು ಫ್ರಿಂಜ್ ಎಂದಾದರೆ ಬಿಜೆಪಿಯಲ್ಲಿ ಫ್ರಿಂಜ್ ... |
ಹಲವು ಕಾರ್ಯಕ್ರಮಗಳಲ್ಲಿ ಆರೆಸೆಸ್ಸ್ ನ ನಾಯಕರು ಇಸ್ಲಾಮ್ ಧರ್ಮವನ್ನೇ ಭಾರತದಿಂದ ನಿರ್ಮೂಲನೆಗೊಳಿಸಬೇಕೆಂದು ಕರೆ ಕೊಟ್ಟ ಭಾಷಣಗಳು ಜನರ ಮುಂದಿವೆ. ಸ್ವತಃ ಗೃಹಮಂತ್ರಿ ಅಮಿತ್ ಶಾ ಮುಸ್ಲಿಮರನ್ನು 'ಗೆದ್ದಲುಗಳು' ಎಂದಿದ್ದಾರೆ. ಗಲಭೆಕೋರರನ್ನು ಅವರ ಬಟ್ಟೆಗಳ ಮೂಲಕ ಯಾವ ಧರ್ಮದವರೆಂದು ಗುರುತು ಹಿಡಿಯಬಹುದು ಎಂದು ಸ್ವತಃ ಪ್ರಧಾನಿಯೇ ಹೇಳಿದ್ದಾರೆ. ಸಂಸದೆ ಪ್ರಜ್ಞಾ ಸಿಂಗ್, ಗಾಂಧೀಜಿಯನ್ನು ಕೊಂದ ಗ... |
ಬಾಬರಿ ಮಸ್ಜಿದನ್ನು ಧ್ವಂಸಗೊಳಿಸಿದ ಅದೇ ಬಿಜೆಪಿ, ಆರೆಸ್ಸೆಸ್ ಇಂದು ದೇಶದಲ್ಲಿ ಮಂದಿರ-ಮಸೀದಿ ವಿವಾದಗಳನ್ನು ಹುಟ್ಟು ಹಾಕಿ ದ್ವೇಷವನ್ನು ಹರಿಯ ಬಿಟ್ಟಿರುವುದು. ಪ್ರಧಾನಿಯೊಬ್ಬರು ಸಂಘಿ ಪ್ರಾಯೋಜಿತ ರಾಮಮಂದಿರ ಭೂಮಿ ಪೂಜೆಗೆ ಶಿಲಾನ್ಯಾಸ ಮಾಡುತ್ತಿರುವುದು ಬಾಬರಿ ಮಸ್ಜಿದ್ ಭೂಮಿ ಮೇಲೆ ಈ ಮಂದಿರ ಸ್ಥಾಪನೆ ಎಂದು ಗೊತ್ತಿದ್ದರೂ ಅದರಲ್ಲಿ ಪಾಲ್ಗೊಳ್ಳುತ್ತಿರುವುದು 'ಮುಸ್ಲಿಮರನ್ನು ಸೋಲಿಸಿ ಮಂದಿರ... |
ಅವೆಷ್ಟು ಚರ್ಚುಗಳ ಮೇಲೆ ಭಾರತದಲ್ಲಿ ಸಂಘಿಗಳು ದಾಳಿ ಮಾಡಿಲ್ಲ. 2020ರಲ್ಲಿ ದೇಶದಲ್ಲಿ 426 ಚರ್ಚ್ ಮತ್ತು ಕ್ರೈಸ್ತರ ಗುರುಗಳ ಮೇಲೆ ದಾಳಿ ನಡೆದಿದೆ ಎಂದು ಸರಕಾರಿ ಅಂಕಿಅಂಶಗಳೇ ಹೇಳುತ್ತಿವೆ. ಕ್ರೈಸ್ತರ ಪ್ರಾರ್ಥನಾ ಸಭೆಗಳ ಮೇಲೆ ದಾಳಿಗಳನ್ನು ನಡೆಸಿದ ಸಂಘಪರಿವಾರದ ಮೇಲೆ ಕಾನೂನು ಕ್ರಮಗಳನ್ನು ಕೈಗೊಂಡಿರುವುದಾಗಲೀ, ಬಂಧಿಸಿ ಜೈಲಿಗೆ ತಳ್ಳುವುದಾಗಲೀ ಎಲ್ಲೂ ಕಂಡುಬಂದಿಲ್ಲ. ಬದಲಿಗೆ ತುಳಿತಕ್ಕೊಳ... |
ಗಲ್ಫ್ ರಾಷ್ಟ್ರಗಳಿಂದ ವ್ಯಕ್ತವಾದ ಪ್ರತಿಕೂಲ ವಿರೋಧಗಳಿಂದ ಬೆದರಿದ ಒಕ್ಕೂಟ ಸರಕಾರ, ಕೇವಲ ಇಬ್ಬರು ನಾಯಕರನ್ನು ಉಚ್ಚಾಟಿಸಿದರೆ ಅದು ತಕ್ಕುದಾದ ಶಿಸ್ತುಕ್ರಮ ಹೇಗಾದೀತು? ಅವರಿಬ್ಬರನ್ನು ಬಂಧಿಸಿ ಜೈಲಿಗೆ ಕಳಿಸಬೇಕಿತ್ತಲ್ಲವೇ? ಬಿಜೆಪಿಯ ಸುಮಾರು 53 ವಕ್ತಾರರಿಗೆ ಇನ್ನು ಮುಂದೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕೆಂದು ಆದೇಶ ನೀಡುವುದರಿಂದ ಬಿಜೆಪಿಯ ಮುಸ್ಲಿಮ್, ಕ್ರೈಸ್ತ ವಿರೋಧಿ ತತ್ವಗಳು ಇಲ್ಲವ... |
ಸರ್ವಧರ್ಮದವರೂ ಇದೀಗ ಬಹಳ ಅನ್ಯೋನ್ಯತೆಯಿಂದ ಭಾರತದಲ್ಲಿ ಜೀವಿಸುತ್ತಿದ್ದಾರೆ ಎನ್ನುವುದು ಕಡು ಸುಳ್ಳು ಎನ್ನುವುದು ಅಷ್ಟೇ ಸತ್ಯ. ದೇಶದ ನಗರಗಳಲ್ಲಿ ಮುಸ್ಲಿಮರಿಗೆ ಪ್ಲ್ಯಾಟ್ ನೀಡಲಾಗದು, ಮುಸ್ಲಿಮರಿಗೆ ಭೂಮಿ ಮಾರಲಾಗದು, ಮುಸ್ಲಿಮರ ಅಂಗಡಿ, ವ್ಯಾಪಾರಗಳಿಗೆ ಹೋಗಬಾರದು ಎನ್ನುವ ನಿಷೇಧ, ಬಹಿಷ್ಕಾರ ವ್ಯಾಪಕವಾಗಿ ಕಂಡುಬರುತ್ತಿದೆ. ರಾಮನವಮಿ, ವಿಜಯದಶಮಿ ಮುಂತಾದ ಹಬ್ಬದ ಸಂದರ್ಭಗಳಲ್ಲಿ ಸಂಘಪರಿವಾರ... |
ಅನುರಾಗ್ ಠಾಕೂರ್ 'ಸಾಲೋಂಕೋ ಗೋಲಿ ಮಾರೋ' ಎಂದು ನಗು ನಗುತ್ತಾ ಹೇಳಿದ್ದಾರೆ, ಅದು ಪ್ರಕರಣದ ತನಿಖೆಗೆ ಅರ್ಹವಲ್ಲ ಎಂದಿರುವ ನ್ಯಾಯಾಧೀಶರು ಯಾವ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ. |
1925ರಲ್ಲೇ ಆರೆಸ್ಸೆಸ್ ಒಂದು ಗುರಿಯೊಂದಿಗೆ ಹೊರಟಿದೆ. ಅದುವೇ ಹಿಂದೂ ರಾಷ್ಟ್ರದ ಗುರಿ. ಅಂದರೆ 'ಮನುವಾದೀ ರಾಷ್ಟ್ರ' ಗುರಿ. ಆರೆಸ್ಸೆಸ್ ನ ಸರಸಂಘಚಾಲಕ ಗೋಳ್ವಾಲ್ಕರ್ ಬರೆದ ಪುಸ್ತಕದಲ್ಲೇ ಆ ಗುರಿಯ ವ್ಯಾಖ್ಯಾನ ಬರೆಯಲಾಗಿದೆ. ಹಿಂದೂ ರಾಷ್ಟ್ರದಲ್ಲಿ ಮುಸ್ಲಿಮ್, ಕ್ರೈಸ್ತ ಹಾಗೂ ಪ್ರಗತಿಪರರಿಗೆ ಜಾಗವಿಲ್ಲ. ಅವರು ದೇಶದಿಂದ ತೆರಳಬೇಕು. ಇಲ್ಲದಿದ್ದರೆ ಎರಡನೇ ದರ್ಜೆಗೆ ಇಳಿಯಬೇಕು ಮತ್ತು ಜರ್ಮನಿಯ... |
ಭಾರತವು ಪರಂಪರೆಯಲ್ಲಿ ಸೌಹಾರ್ದ ರಾಷ್ಟ್ರ ಹೌದು. ಆದರೆ ಇದೀಗ ದ್ವೇಷ, ಅಸೂಯೆ, ವಿತಂಡವಾದ, ಮತಾಂಧತೆ, ಕ್ರೌರ್ಯ, ಅತ್ಯಾಚಾರಗಳಂತಹ ಕ್ಷುದ್ರತೆಯ ಕೇಂದ್ರವಾಗಿ ಮಾರ್ಪಾಡಾಗಿರುವುದನ್ನು ಅಲ್ಲಗಳೆಯಲಾಗದು. ಹಾಗೆಂದ ಮಾತ್ರಕ್ಕೆ ಎಲ್ಲವೂ ಎಲ್ಲರೂ, ಎಲ್ಲೆಲ್ಲಿಯೂ ಹಾಗಿದೆಯೆಂದಲ್ಲ. ವಿಚಾರವಂತರೂ, ಸೌಹಾರ್ದಯುತರೂ, ಜಾತ್ಯತೀತರೂ ಇದ್ದಾರೆ. ಆದರೆ ಅವರ ಶಕ್ತಿ ಕ್ಷೀಣವಾಗುತ್ತಾ ಸಾಗುತ್ತಿದೆ. ಹಾಗೆ ದಮನಕ್... |
ಜಾತ್ಯತೀತ ಎಂದರೆ ಅದು ತೋರಿಕೆಗೆ ಮಾತ್ರ. ಜಾತ್ಯತೀತತೆಯನ್ನು ಸೋಗಿನಂತೆ ಬಳಸಿಕೊಂಡು ಕೋಮುವಾದದ ಕಹಲ ಪ್ರಿಯತೆಯ ಹಾದಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪೈಪೋಟಿಯಿಂದ ಸಾಗುತ್ತಿರುವ ರಾಜಕೀಯ ದೇಶದಲ್ಲಿ ಟ್ರೆಂಡ್ ಆಗಿರುವಾಗ ಸೌಹಾರ್ದ ಪರಂಪರೆ ಎಂಬ ಮಾತು ಅರ್ಥ ಕಳೆದುಕೊಳ್ಳುತ್ತಿದೆ. |
ಮಕ್ಕಳಾಗೋ ಟೈಂ ಬಂದ್ರೂ ಮಕ್ಕಳಾಟ ಬಿಟ್ಟಿಲ್ಲ….! ನಿವೇದಿತಾ ಗೌಡ ಪೋಸ್ಟ್ ಗೆ ಬೇಕಾಬಿಟ್ಟಿ ಕಮೆಂಟ್….! ಟ್ರೋಲ್..!! - Breaking |
ಬಿಗ್ ಬಾಸ್ ಮೂಲಕ ಬೆಳಕಿಗೆ ಬಂದ ಪ್ರತಿಭೆಗಳಲ್ಲಿ ಮೈಸೂರಿನ ನಟಿ ಹಾಗೂ ಟಿಕ್ ಟಾಕ್ ಸ್ಟಾರ್ ನಿವೇದಿತಾ ಗೌಡ ಕೂಡ ಒಬ್ಬರು. ಹಾಲಿನಂತ ಬಿಳುಪು ಕನ್ನಡವನ್ನು ಇಂಗ್ಲೀಷ್ ಆಕ್ಸೆಂಟ್ ಮಾತನಾಡೋ ಚೆಲುವೆಯ ಉದ್ದನೇಯ ಕೇಶ ರಾಶಿ ಆಕೆಗೆ ಬಾರ್ಬಿ ಗೊಂಬೆ ಅನ್ನೋ ಟೈಟಲ್ ಕೂಡ ತಂದುಕೊಟ್ಟಿದೆ. ಆದರೆ ಅದ್ಯಾಕೋ ಗೊತ್ತಿಲ್ಲ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಆಕೆ ಪ್ರತಿಪೋಸ್ಟ್ ಗೂ ಟೀಕೆ ಹಾಗೂ ಟ್ರೋಲ್ ಗೆ ಒಳಗಾಗು... |
ಸದ್ಯ ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿರುವ ನಿವೇದಿತಾ ಗೌಡ ಇತ್ತೀಚಿಗೆ ತಮ್ಮ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ನಿವೇದಿತಾ ಹಲವು ಟಿಕ್ ಟಾಕ್ ಆಡಿಯೋಗಳನ್ನು ಮತ್ತೆ ಶೇರ್ ಮಾಡಿದ್ದಾರೆ. ಆದರೆ ಈ ವಿಡಿಯೋಗಳನ್ನು ನೋಡಿದ ಜನರು ಮನಬಂದಂತೆ ಕಮೆಂಟ್ ಮಾಡಿದ್ದಾರೆ. |
ಚೈಲ್ಡ್ ತರ ಆಡಬೇಡಿ ಅಂತ ಕೆಲವರು ಕಮೆಂಟ್ ಮಾಡಿದ್ದರೇ, ಇನ್ನು ಕೆಲವರು ಮಕ್ಕಳಾಗೋ ಕಾಲ ಬಂದರೂ ಮಕ್ಕಳಾಟ ಬಿಟ್ಟಿಲ್ಲವಾ ಎಂದು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಆದರೆ ಈ ಕಮೆಂಟ್ ಗಳಿಗೆ ನಿವೇಧಿತಾ ಏನು ಉತ್ತರ ನೀಡಿಲ್ಲ. |
ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳು ತಮ್ಮ ಪೋಟೋ, ವಿಡಿಯೋ ಹಂಚಿಕೊಳ್ಳೋದು ಕಾಮನ್. ಆದರೆ ಇತ್ತೀಚಿಗೆ ಅಂಥ ಪೋಟೋಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡೋ ಪ್ರವೃತ್ತಿ ಹುಟ್ಟಿ ಕೊಳ್ಳುತ್ತಿದೆ. ಮೊದಲು ನಿವೇಧಿತಾ ತಮ್ಮ ಬಟ್ಟೆ ಹಾಗೂ ಡ್ರೆಸ್ ಕಾರಣಕ್ಕೆ ಟ್ರೋಲ್ ಗೆ ಒಳಗಾಗಿದ್ದರು. |
ಆದರೆ ಈಗ ಮಾತ್ರ ಪರ್ಸನಲ್ ವಿಚಾರಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರೋ ನಿವೇಧಿತಾ ಅಭಿಮಾನಿಗಳು, ಮದುವೆ ಆದ ಮಾತ್ರಕ್ಕೆ, ಸೆಲೆಬ್ರೆಟಿ ಗಳಾದ ಮಾತ್ರಕ್ಕೆ ಅವರೊಳಗಿನ ಭಾವನೆಗಳನ್ನು ವ್ಯಕ್ತಪಡಿಸೋ ಹಕ್ಕಿಲ್ಲವೇ ಅಂತ ಪ್ರಶ್ನಿಸುತ್ತಿದ್ದಾರೆ. |
ಬಿಗ್ ಬಾಸ್ ಬಳಿಕ ಹಲವು ಜಾಹೀರಾತು ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಸಾಂಗ್ ಗಳಲ್ಲಿ ನಟಿಸಿದ ನಿವೇದಿತಾ ಬಳಿಕ ಚಂದನ್ ಶೆಟ್ಟಿ ಜೊತೆ ದಾಂಪತ್ಯಕ್ಕೆ ಕಾಲಿರಿಸಿದ್ದರು. |
ಪಿಎಂ ಕೇರ್ಸ್ ಫಂಡ್ನಲ್ಲಿ ಮೋಸ ನಡೆಯಿತಾ? ಮಾತಾಡಿ ಪ್ಲೀಸ್..! - ARE WE STUPID..? - Tv5 Kannada |
ಪಿಎಂ ಕೇರ್ಸ್ ಫಂಡ್ನಲ್ಲಿ ಮೋಸ ನಡೆಯಿತಾ? ಮಾತಾಡಿ ಪ್ಲೀಸ್..! – ARE WE STUPID..? |
ಬುರ್ಝ್ ಖಲಿಫಾದಲ್ಲಿ ತೆಲಂಗಾಣ ಹಬ್ಬ ನೋಡಿ ಸಂಭ್ರಮಿಸಿದ ಜನ |
ಜಮ್ಮು-ಕಾಶ್ಮೀರದೊಳಗೆ ನುಸುಳಲು 250 ಉಗ್ರರು ಕಾಯುತ್ತಿರುವುದಾಗಿ ಗುಪ್ತಚರ ಇಲಾಖೆಗೆ ಮಾಹಿತಿ..! |
ಭಾರತದ ಬಳಿ ತೈಲ ಖರೀದಿಗೆ ಸಾಲ ಕೇಳಿದೆ ಶ್ರೀಲಂಕಾ! |
ಪ್ರವಾಸಿಗರಿಗೆ ಬಿಸಿ ತುಪ್ಪವಾದ ಮಲ್ಪೆ ಸೈಂಟ್ ಮೇರಿಸ್ ದ್ವೀಪ |
ದೇಶದಲ್ಲಿ ಕೋವಿಡ್ ಕೊಟ್ಟ ಕಷ್ಟಗಳು ಸಾಲದೆಂಬಂತೆ ಬೆಲೆ ಏರಿಕೆ ಕಷ್ಟಗಳಿಂದಲೂ ಜನ ಹೈರಾಣಾಗಿದ್ದಾರೆ. |
ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ, ಅಡುಗೆ ಎಣ್ಣೆ , ದಿನಸಿ ಪದಾರ್ಥಗಳ ಬೆಲೆ ಎರಡು ಮೂರು ಪಟ್ಟು ಹೆಚ್ಚಾಗಿದೆ. ಮನುಷ್ಯನಿಗೆ ತಾನು ದುಡಿಯುತ್ತಿರುವ ಹಣ ಅವತ್ತಿನ ಊಟಕ್ಕಾದರೆ ಅದೇ ಹೆಚ್ಚು ಎನ್ನುವಂತಾಗಿದೆ. ಇಂತಹ ಸನ್ನಿವೇಶದಲ್ಲಿಯೂ ಇದೇ ಪಿಎಂ ಕೇರ್ಸ್ ಫಂಡ್ಗೆ ಅನೇಕರು ದಾನವಾಗಿ ಹಣ ಕೊಟ್ಟಿದ್ದಾರೆ. ದೇಶದ ಪ್ರಧಾನಿಗಳು ಇದನ್ನ ಕೋವಿಡ್ ವಿರುದ್ಧದ ಹೋರಾಟಕ್ಕೆ ಬಳಸುತ್ತಾರೆ ಎಂಬ ನಂಬಿಕೆಯಿ... |
ದೇಶದ ಪ್ರಧಾನ ಮಂತ್ರಿಗಳ ಈ ನಡೆ ನಿಜಕ್ಕೂ ಆಘಾತಕಾರಿಯಲ್ಲವೇ? ಜನಗಳ ದಾನದ ಹಣವನ್ನ , ಜನಗಳ ಕಷ್ಟಗಳಿಗೆ ಬಳಸದೇ ತಮ್ಮ ಖಾಸಗಿ ಉದ್ದೇಶಕ್ಕೆ ವರ್ಗಾಯಿಸಿಕೊಂಡರೆ ಯಾರಾದರೂ ಮೆಚ್ಚುವ ಕೆಲಸವೇ ಇದು. ಇಂತಹ ಪ್ರಕರಣವನ್ನ ದೇಶ ಎಂದಾದರೂ ಕಂಡಿತ್ತಾ? ಕೇಳಿತ್ತಾ? ನೀವೇ ಹೇಳಿ. ಸ್ವಾಮಿ ಪ್ರಧಾನಿಯವರೇ ಈ ದೇಶ ನಿಮಗೆ ಏನು ಕಡಿಮೆ ಮಾಡಿತ್ತು? ಜನಪ್ರತಿನಿಧಿಗಳ ಜನಪ್ರತಿನಿಧಿ ನೀವು. ದೇಶದ ಹೆಮ್ಮೆಯ ಪ್ರಧಾನ ಮ... |
Also read: 9 ವರ್ಷಗಳಾದ್ರೂ ಮುಗಿಯದ ಎತ್ತಿನಹೊಳೆ ಯೋಜನೆ..! ₹12,900 ಕೋಟಿಯಿಂದ ₹26 ಸಾವಿರ ಕೋಟಿಗೆ ವೆಚ್ಚ ಹೆಚ್ಚಳ..! |
ದೇಶದ ಸುಪ್ರೀಂ ಕೋರ್ಟ್ ಇದೇ ವಿಚಾರಕ್ಕೆ ಒಂದು ಸು ಮೋಟೋ ಕೇಸ್ ದಾಖಲಿಸಿಕೊಂಡು ಒಂದು ತನಿಖೆ ನಡೆಸಲು ಮನಸು ಮಾಡಬಾರದೇ? ದೇಶದ ಜನಗಳ ದುಡ್ಡು ಖಾಸಗಿ ಟ್ರಸ್ಟ್ಗೆ ಹೋಗಿದ್ದರೆ ಅದು ಹಗರಣವಲ್ಲವೇ? ಕನಿಷ್ಠ ಮೋಸವಲ್ಲವೇ? ಆಕ್ಸಿಜನ್, ವ್ಯಾಕ್ಸಿನ್, ಸಾವಿನ ಪರಿಹಾರ, ಅನಾಥ ಮಕ್ಕಳ ಶಿಕ್ಷಣ ಎಲ್ಲ ವಿಷಯದಲ್ಲಿಯೂ ಸುಪ್ರೀಂ ಕೋರ್ಟ್ನ ಮಧ್ಯಸ್ಥಿಕೆಯಿಂದಲೇ ನ್ಯಾಯ ಸಿಕ್ಕಿದೆ. ಪಿಎಂ ಕೇರ್ಸ್ ಫಂಡ್ ... |
ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 - Leo Yearly Horoscope 2022 in Kannada |
ಸಿಂಹ ರಾಶಿ ಭವಿಷ್ಯ 2022 |
A Year Of Stabilization And Reshufflings |
ಗಮನಾರ್ಹವಾದ ರಾಶಿಚಕ್ರದ ಪುರುಷರು ಮತ್ತು ಮಹಿಳೆಯರಿಗೆ ಹೊಸ ವರ್ಷ 2022, ನೀವು ಈಗಾಗಲೇ ಹೊಂದಿರುವುದನ್ನು ಇನ್ನಷ್ಟು ಸುಧಾರಿಸುವ ಕುಶಲತೆಯನ್ನು ಹೊಂದಿರುತ್ತದೆ. ಇಷ್ಟೇ ಅಲ್ಲ ನಿಮ್ಮ ಜೀವನದಲ್ಲಿ ದೊಡ್ಡ ಸಮತೋಲನವನ್ನು ಕಾಪಾಡಿಕೊಳ್ಳಲು ಸಹ ವರ್ಷವು ನಿಮಗೆ ಸಹಾಯ ಮಾಡಲಿದೆ. ಸಿಂಹ ವಾರ್ಷಿಕ ರಾಶಿ ಭಾವಿಷ್ಯ 2022ರ ಪ್ರಕಾರ, ನಿಮ್ಮ ಆದ್ಯತೆಗಳನ್ನು ಸಂಘಟಿಸುವುದು ಮತ್ತು ನಿರ್ವಹಿಸುವುದು ಈ ವರ್ಷ ... |
ಇದಲ್ಲದೆ ಸಿಂಹ ರಾಶಿಚಕ್ರದ ಜನರು ತಮ್ಮ ಜೀವನವನ್ನು ಒಂದು ಸಾಲಿನಲ್ಲಿ ನಿರ್ವಹಿಸಲು ನೀವು ಕೆಲವು ಕಠಿಣ ನಿರ್ಧಾರಗಳನ್ನು ತೆಗದುಕೊಳ್ಳಬೇಕು, ಆದರೆ ಅದು ವರ್ಷದ ಅಂತ್ಯದ ವೇಳೆಗೆ ನಿಮ್ಮ ಪರವಾಗಿರುತ್ತದೆ ಎಂದು ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ಹೇಳುತ್ತದೆ. ಇದಲ್ಲದೆ ವರ್ಷದ ಮಧ್ಯ ತಿಂಗಳುಗಳಲ್ಲಿ ನೀವು ಕೆಲವು ಅಸಾಧಾರಣವಾದ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಅದೇ ಸಮಯದಲ್ಲಿ ಮತ್ತೊಂದ... |
ಸಿಂಹ ಆರ್ಥಿಕ ರಾಶಿ ಭವಿಷ್ಯ 2022 - Leo Finance Horoscope 2022 in Kannada |
ಹೌದು, ನೀವು ಹಣಕಾಸು ಮತ್ತು ಆದರೆ ನಿರ್ವಹಣೆಯ ವಿಷಯದಲ್ಲಿ ಎಲ್ಲವನ್ನೂ ತಿಳಿದಿರುವಿರಿ. ಹಣವನ್ನು ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡಬೇಕು ಅಥವಾ ಖರ್ಚು ಮಾಡಬೇಕು ಎಂಬ ಜ್ಞಾನದಿಂದ ಹೇಗೆ ಮತ್ತು ಏನನ್ನು ಗಳಿಸಬೇಕು ಎಂಬುದು ನಿಮಗೆ ತಿಳಿದಿದೆ. ಆದ್ದರಿಂದ ಈ ವರ್ಷವಿಡೀ ನಿಮ್ಮ ಹಣವನ್ನು ನೀವು ಆನಂದಿಸುವಿರಿ ಎಂದು ಸಿಂಹ ಆರ್ಥಿಕ ರಾಶಿ ಭವಿಷ್ಯ 2022 ಹೇಳುತ್ತಿದೆ. ಇದರೊಂದಿಗೆ ವರ್ಷದ ಆರಂಭಿಕ ತಿಂಗ... |
ಹೂಡಿಕೆಗಳ ಬಗ್ಗೆ ಮಾತನಾಡಿದರೆ, ವರ್ಷದ ಮೊದಲಾರ್ಧದಲ್ಲಿ ಯಾವುದೇ ರೀತಿಯ ಆಸ್ತಿಯ ಮೇಲೆ ಹೂಡಿಕೆ ಮಾಡುವುದನ್ನು ತಪ್ಪಿಸಲು ನಿಮ್ಮನ್ನು ಸಿಂಹ ಆರ್ಥಿಕ ರಾಶಿ ಭವಿಷ್ಯ 2022 ಎಚ್ಚರಿಸುತ್ತದೆ. ನೀವು ಉದ್ಯಮಿಯಾಗಿದ್ದರೆ, ನಿಮ್ಮ ಹೂಡಿಕೆಗಳು ವರ್ಷದ ಮೊದಲ ತ್ರೈಮಾಸಿಕದಲ್ಲಿ ಫಲಿತಾಂಶಗಳನ್ನು ನೀಡದಿರಬಹುದು. ಆದ್ದರಿಂದ ನೀವು ಸಾಧ್ಯವಾದಷ್ಟು ಯಾವುದನ್ನೂ ಮಾಡುವುದನ್ನು ತಪ್ಪಿಸಬೇಕೆಂದು ಸೂಚಿಸಲಾಗುತ್ತ... |
2022 ರಲ್ಲಿ, ಮನೆಯ ಅಲಂಕಾರ, ವಿವಾಹ ಯೋಜನೆ ಅಥವಾ ಛಾಯಾಗ್ರಹಣಕ್ಕೆ ಸಂಬಂಧಿಸಿದ ಯಾವುದೇ ವ್ಯಾಪಾರಕ್ಕಾಗಿ ಸಿಂಹ ರಾಶಿಚಕ್ರದ ಸ್ಥಳೀಯರ ಉತ್ತಮ ಆಲೋಚನೆಗಳನ್ನು ಹೊಂದಿರುತ್ತಾರೆ. ನೀವು ಅರೆಕಾಲಿಕ ಆಧಾರದ ಮೇಲೆ ಈ ವಿಷಯಗಳಲ್ಲಿ ಹೂಡಿಕೆ ಮಾಡಿದರೂ ಸಹ, 2022 ರಲ್ಲಿ ನೀವು ಖಂಡಿತವಾಗಿಯೂ ಈ ಕ್ಷೇತ್ರಗಳಲ್ಲಿ ಉತ್ಕೃಷ್ಟರಾಗುತ್ತೀರಿ. ಏಪ್ರಿಲ್ ತಿಂಗಳ ನಂತರ ಗುರು ಗ್ರಹವು ನಿಮ್ಮ ಎಂಟನೇ ಮನೆಗೆ ಪ್ರವೇಶ... |
ಸಿಂಹ ಆರ್ಥಿಕ ರಾಶಿ ಭವಿಷ್ಯ 2022 ರ ಪ್ರಕಾರ, ಆಗಸ್ಟ್ ತಿಂಗಳಿನಿಂದ ಬುಧ ಗ್ರಹವು ಹಣಕಾಸಿನ ಎರಡನೇ ಮನೆಗೆ ಸಾಗಿದಾಗ, ಸೇವಾ ವಲಯದಲ್ಲಿ ನಿಮಗೆ ಗಣನೀಯ ಲಾಭವನ್ನು ನೀಡಲಿದೆ. ಕುತೂಹಲಕಾರಿಯಾಗಿ ಈ ಅವಧಿಯು ವ್ಯಾಪಾರಸ್ಥರಿಗೂ ಅನುಕೂಲಕರವಾಗಿರಲಿದೆ. ಯಾವುದೇ ಪ್ರಮುಖ ಹೂಡಿಕೆಗಳನ್ನು ಮಾಡಲು ಅವಕಾಶಗಳು ಮತ್ತು ಮಾರ್ಕೆಟ್ ಸಾಕಷ್ಟು ಉತ್ತಮವಾಗಿರಲಿದೆ. ಕೆಲವು ವ್ಯವಹಾರಗಳಲ್ಲಿ ಹಣವನ್ನು ಹೂಡಿಕೆನ್ ಮಾಡ... |
ಸಿಂಹ ವೃತ್ತಿ ಜೀವನ ರಾಶಿ ಭವಿಷ್ಯ 2022 - Leo Career Horoscope 2022 in Kannada |
ಸಿಂಹ ವೃತ್ತಿ ಜೀವನ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷವಿಡೀ ನೀವು ಉತ್ತಮ ಸಮಯವನ್ನು ನಿರೀಕ್ಷಿಸಬಹುದು. ನಿಮ್ಮ ದೌರ್ಬಲ್ಯಗಳು ಸುಧಾರಣೆಯ ಹಾದಿಯಲ್ಲಿ ಸಾಗುತ್ತಿರುವಾಗ ನಿಮ್ಮ ಗುಣಗಳು ಹೆಚ್ಚಾಗುತ್ತವೆ. ಆದಾಗ್ಯೂ ಅಂತ್ಯದ ಕೆಲವು ತಿಂಗಳುಗಳು ಸವಾಲುಗಳಿಂದ ತುಂಬಿರುವ ಸಾಧ್ಯತೆ ಇದೆ. ಉದ್ಯೋಗ ಮಾಡುತ್ತಿರುವ ಸಿಂಹ ರಾಶಿಚಕ್ರದ ಪುರುಷರು ಮತ್ತು ಮಹಿಳೆಯರು ಕಚೇರಿಯ ರಾಜಕೀಯದಿಂದ ದೂರವಿರಬೇಕು ... |
ಸಿಂಹ ರಾಶಿಚಕ್ರದ ವ್ಯಾಪಾರಸ್ಥರಿಗೆ ವರ್ಷ 2022 ರಲ್ಲಿ ಸಮಯವು ಮಾಧ್ಯಮವಾಗಿರುತ್ತದೆ. ವಿಶೇಷವಾಗಿ ವರ್ಷದ ಆರಂಭಿಕ ತಿಂಗಳುಗಳಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗಿನ ಸಮಯದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು, ಆದರೆ ಅವಧಿಯು ತಾತ್ಕಾಲಿಕವಾಗಿರುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ನೀವು ಸುಲಭವಾಗಿ ತೊಡೆದುಹಾಕುವಿರಿ. ಸಿಂಹ ವ... |
ಯುವ ವೃತ್ತಿಪರರು ಮತ್ತು ಕೆಲಸದ ಜಗತ್ತಿನಲ್ಲಿ ತಾಜಾ ಸಿದ್ಧರಾಗಿರಿ! ಅಂತಿಮವಾಗಿ ನಿಮ್ಮ ವರ್ಷ ಬಂದಿದೆ. ಸಿಂಹ ವೃತ್ತಿ ರಾಶಿ ಭವಿಷ್ಯ 2022 ರ ಪ್ರಕಾರ, ಉತ್ತಮ ಅವಕಾಶಗಳು ಮತ್ತು ಅಪಾರ ಯಶಸ್ಸು ನಿಮ್ಮ ಬಾಗಿಲು ತಟ್ಟಲಿದೆ. ಇದನ್ನು ಪಡೆದುಕೊಳ್ಳಲು ನೀವು ನಿಮ್ಮನ್ನು ಮುಂದಕ್ಕೆ ತಳ್ಳಿರಿ. ಈಗಾಗಲೇ ಉದ್ಯೋಗದಲ್ಲಿರುವ ಜನರು ತಮ್ಮ ಕೈಯಲ್ಲಿ ಉತ್ತಮ ಯೋಜನೆಗಳ ಗುಂಪನ್ನು ಹೊಂದಿರುತ್ತಾರೆ. ಇದು ನಿಮ್... |
ಶಿಕ್ಷಣತಜ್ಞರಿಗೆ ಸಂಬಂಧಿಸಿದಂತೆ, ಯಾವ ವಿಷಯವನ್ನು ಆರಿಸಬೇಕು ಮತ್ತು ಮತ್ತು ಯಾವುದನ್ನೂ ಬಿಡಬೇಕು ಎಂಬುದೇ ದೊಡ್ಡ ಸಂದಿಗ್ಧತೆ. ಆದ್ದರಿಂದ ಈಗಾಗಲೇ ನಿಮ್ಮ ಈ ಹಂತದ ಮೂಲಕ ಹಾದುಹೋಗಿರುವ ಜನರಿಂದ ಸ್ವಲ್ಪ ಮಾರ್ಗದರ್ಶನವನ್ನು ತೆಗೆದುಕೊಳ್ಳುವುದು ನಿಮಗೆ ಉತ್ತಮ. ನಿಮ್ಮ ಜೀವನವನ್ನು ಕಲೆ ಮತ್ತು ವಿನ್ಯಾಸದ ಸುತ್ತ ರೂಪಿಸಲು ಇದು ಸೂಕ್ತ ಸಮಯ ಎಂದು ಸಿಂಹ ಶೈಕ್ಷಣಿಕ ರಾಶಿ ಭವಿಷ್ಯ 2022 ಹೇಳುತ್ತದೆ... |
ಸಿಂಹ ಪ್ರೀತಿ ರಾಶಿ ಭವಿಷ್ಯ 2022 - Leo Love Horoscope 2022 in Kannada |
ನಿಮ್ಮ ಪ್ರೀತಿ ಜೀವನವು ಇಲ್ಲಿಯವರೆಗೆ ಸುಗಮವಾಗಿ ಸಾಗುತ್ತಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಇನ್ನಷ್ಟು ಪ್ರಣಯದ ಜೀವನವನ್ನು ನೀವು ಆನಂದಿಸುವಿರಿ ಎಂದು ಸಿಂಹ ಪ್ರೀತಿ ರಾಶಿ ಭವಿಷ್ಯ 2022 ಸೂಚಿಸುತ್ತದೆ. ಹೊಸ ಜನರೊಂದಿಗೆ ಡೇಟಿಂಗ್ ಮಾಡಲು ಯೋಜಿಸುತ್ತಿರುವವರು ಸೂಕ್ತವಾದ ಸಂಗಾತಿಯನ್ನು ಕಂಡುಕೊಳ್ಳುವ ಸಾಧ್ಯತೆ ಇದೆ ಮತ್ತು ಆ ವಕ್ತಿಯು ನಿಮ್ಮೊಂದಿಗೆ ಅದ್ಭುತವಾಗಿ ಹೊಂದಿಕೊಳ್ಳುತ್ತಾರೆ. ಇದಲ್... |
ಸಿಂಹ ಪ್ರೀತಿ ರಾಶಿ ಭವಿಷ್ಯ 2022 ಪ್ರಕಾರ, ಈ ಹಿಂದೆ ತಮ್ಮ ಹೃದಯವನ್ನು ಮುರಿದುಕೊಂಡಿರುವ ಸಿಂಹ ರಾಶಿಚಕ್ರದ ಜನರು ಈ ವರ್ಷ ತಮ್ಮ ಆದರ್ಶ ಹೊಂದಾಣಿಕೆಯನ್ನು ಕಂಡುಕೊಳ್ಳುವ ಸಾಧ್ಯತೆ ಇದೆ. ಆದರೆ ಯಾವುದೇ ಸಂಬಂಧದಲ್ಲಿ ಹೂಡಿಕೆ ಮಾಡುವ ಮೊದಲು, ನೀವು ಬದ್ಧತೆಯ ಸ್ಥಳದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ. ಇದಕ್ಕಾಗಿ ಸಮಯವನ್ನು ತೆಗೆದುಕೊಳ್ಳಿ ಮತ್ತು ನೀವು ಯಾರೊಂದಿಗಾದರ... |
ವರ್ಷದ ಕೆಲವು ತಿಂಗಳುಗಳು ನಿಮ್ಮ ಮತ್ತು ನಿಮ್ಮ ಪ್ರೇಮಿಯ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಒಳಗೊಂಡಿರಬಹುದು, ಆದರೆ ನೀವು ಸ್ವಲ್ಪ ಪ್ರಯತ್ನದಿಂದ ವಿಂಗಡಿಸಲು ಸಾಧ್ಯವಾಗುವುದಿಲ್ಲ. ಒಮ್ಮೆ ನೀವು ಈ ಕೆಟ್ಟ ಹಂತದಿಂದ ಹೊರಬಂದರೆ, ನಿಮಗಾಗಿ ಸಂತೋಷವನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಗುರುವಿನ ಸಾಗಣೆಗೆ ಧನ್ಯವಾದಗಳು! ಏಪ್ರಿಲ್ ತಿಂಗಳ ಮಧ್ಯದ ನಂತರ ನಿಮ್ಮ ಸುಧಾರಿಸುತ್ತದೆ... |
ಒಂಟಿಯಾಗಿರುವ ಸಿಂಹ ರಾಶಿಚಕ್ರದ ಸ್ಥಳೀಯರು ಗುಣವಾಗಲು ಸಮಯ ತೆಗೆದುಕೊಂಡ ನಂತರ ಮಾತ್ರ, ತೆರೆದ ತೋಳುಗಳಿಂದ ಪ್ರೀತಿಯನ್ನು ಸ್ವಾಗತಿಸಬೇಕು. ಏಪ್ರಿಲ್ ತಿಂಗಳಲ್ಲಿ ಶನಿ ಸಂಚಾರವು ನಿಮ್ಮ ಪ್ರೇಮಿಯನ್ನು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ನೀವು ಸಂಪರ್ಕಿಸಬಹುದು ಎಂದು ಖಚಿತಪಡಿಸುತ್ತದೆ. ಇದರಿಂದಾಗಿ ನಿಮ್ಮ ಚಿಂತೆ ಮತ್ತು ಆತಂಕಗಳ ಬಗ್ಗೆ ಅವರಿಗೆ ತಿಳಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ನೀವಿಬ... |
ಸಿಂಹ ವೈವಾಹಿಕ ರಾಶಿ ಭವಿಷ್ಯ 2022 - Leo Marriage Horoscope 2022 in Kannada |
ಸಿಂಹ ವೈವಾಹಿಕ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ಸಂಗಾತಿಯೊಂದಿಗೆ ನಿಮ್ಮ ವೈವಾಹಿಕ ಜೀವನವನ್ನು ಹೇಗೆ ನಿರ್ವಹಿಸುತ್ತೀರಿ ಮತ್ತು ನಿಮ್ಮ ಕೆಲಸವನ್ನು ಸಮಾನಾಂತರವಾಗಿ ಹೇಗೆ ನಿರ್ವಹಿಸುತ್ತೀರಿ ಎಂಬುದು ಸಂಪೂರ್ಣವಾಗಿ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ನೀವು ಈಗಾಗಲೇ ವಿವಾಹಿತರಾಗಿದ್ದರೆ, ನಿಮ್ಮ ಮುಂದೆ ಕೆಲವು ಮಿಶ್ರ ಸಾಧ್ಯತೆಗಳು ಉಂಟಾಗಬಹುದು. ಆದಾಗ್ಯೂ, ನೀವು ಸೂಕ್ತವಾದ ಸಂಗಾತಿಯನ್... |
ಈಗಾಗಲೇ ಸಂಬಂಧದಲ್ಲಿರುವ ಜೋಡಿಗಳು ಮದುವೆಯ ವಿಷಯವನ್ನು ತಮ್ಮ ಪೋಷಕರಿಗೆ ವೈಶಸ್ವಿಯಾಗಿ ಮನವರಿಕೆ ಮಾಡುತ್ತಾರೆ. ನಿಮ್ಮ ನಡುವೆ ಕೆಲವು ಬಿಸಿಯಾದ ವಿವಾದಗಳು ಉದ್ಭವಿಸಬಹುದು ಆದರೆ ಅದು ತಾತ್ಕಾಲಿಕವಾಗಿರುತ್ತದೆ ಮತ್ತು ನಿಮ್ಮ ನಿರ್ಧಾರದಲ್ಲಿ ನೀವು ದೃಢವಾಗಿದ್ದರೆ, ಕೊನೆಯಲ್ಲಿ ಅವರು ಒಪ್ಪುಕೊಳ್ಳುತ್ತಾರೆ ಎಂದು ಸಿಂಹ ವೈವಾಹಿಕ ರಾಶಿ ಭವಿಷ್ಯ 2022 ಹೇಳುತ್ತದೆ. ಮದುವೆ ವರ್ಷಾಂತ್ಯದ ವೇಳೆಗೆ ಸಂಭ... |
ವ್ಯಕ್ತಿಯನ್ನು ಮದುವೆಯಾಗಲು ಆತುರಪಡಬೇಡಿ. ಮದುವೆಯ ವಿಷಯಗಳಲ್ಲಿ ಸ್ವಲ್ಪ ತಡೆಯಲು ನಿಮಗೆ ಸಲಹೆ ನೀಡಲಾಗುತ್ತದೆ. ಈ ವರ್ಷ ನೀವು ಬಯಸುತ್ತಿರುವ ವ್ಯಕ್ತಿಯನ್ನು ಪಡೆಯುವ ಸಾಧ್ಯತೆ ಇದೆ. ಇದಲ್ಲದೆ ಕೆಲವು ಸಾಮಾಜಿಕ ಅಥವಾ ವ್ಯಾಪಾರ ಕೂಟದಲ್ಲಿ ನೀವು ಅವಳು/ಅವನನ್ನು ಭೇಟಿಯಾಗುತ್ತೀರಿ ಎಂದು ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ಊಹಿಸುತ್ತದೆ. ನೀವಿಬ್ಬರು ಸಿದ್ಧಾಂತಗಳು ಮತ್ತು ಆಲೋಚನಾ ಪ್ರಕ್ರಿಯೆಗಳ... |
ಹೊಸದಾಗಿ ಮದುವೆಯಾಗಿರುವ ದಂಪತಿಗಳು ಈ ವರ್ಷ ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು. ಒಂದೆಡೆ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲಗೊಂಡರೆ, ಮತ್ತೊಂದೆಡೆ, ನೀವಿಬ್ಬರು ವಿವಾದಗಳಿಗೆ ಒಳಗಾಗುವಂತಹ ಸನ್ನಿವೇಶಗಳು ಸಹ ಉದ್ಭವಿಸಲಿವೆ. ಸಣ್ಣ ಭಿನ್ನಾಭಿಪ್ರಾಯಗಳನ್ನು ತಪ್ಪಿಸುವುದು ಮತ್ತು ಕುಟುಂಬದ ಯೋಗಕ್ಷೇಮವನ್ನು ಎಲ್ಲಾ ವಿಧಾನಗಳು ಮತ್ತು ನಡವಳಿಕೆಗಳಲ್ಲಿ ಕಾಪಾಡಿಕೊಳ್ಳಲು ಆಸ್ಟ್ರೋಟಾಕ್ ಜ್... |
ಸಿಂಹ ಅರೋಗ್ಯ ರಾಶಿ ಭವಿಷ್ಯ 2022 - Leo Health Horoscope 2022 in Kannada |
ಸಿಂಹ ಅರೋಗ್ಯ ರಾಶಿ ಭವಿಷ್ಯ 2022 ರ ಪ್ರಕಾರ, ದೀರ್ಘಕಾಲದಿಂದ ನೀವು ಕೆಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಆದಾಗ್ಯೂ 2022 ರ ಹೊಸ ವರ್ಷವು ಅದನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡಬಹುದು. ನಿಮ್ಮ ಆರೋಗ್ಯದ ಕಡೆಗೆ ನೀವು ಪ್ರಯತ್ನಗಳನ್ನು ಕಡಿಮೆ ಮಾಡಬಹುದು. ಆದರೆ ಯಾವುದೇ ಕೆಟ್ಟ ಅಭ್ಯಾಸವನ್ನು ಬಿಡಲು ಯೊಶಿಸುತ್ತಿರುವ ಜನರು ಯಶಸ್ವಿಯಾಗುತ್ತಾರೆ. ಈ ವರ್ಷ ನಿಮ್ಮ ಎಲ್ಲಾ ಕೆಟ್ಟ... |
ತಮ್ಮ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿರುವವರು ಸ್ವಲ್ಪ ಜಾಗರೂಕರಾಗಿರಬೇಕು. ಸಿಂಹ ಅರೋಗ್ಯ ರಾಶಿ ಭವಿಷ್ಯ 2022 ರ ಪ್ರಕಾರ, ಇದು ನಿಮ್ಮ ಕಾಯಿಲೆಯನ್ನು ಹೆಚ್ಚಿಸಬಹುದು ಮತ್ತು ನೀವು ಈಗಾಗಲೇ ಬಳಲುತ್ತಿರುವುದಕ್ಕಿಂತ ಸ್ವಲ್ಪ ಹೆಚ್ಚು ತೊಂದರೆ ನೀಡಬಹುದು ಎಂದು ಸೂಚಿಸುತ್ತದೆ. ಇದಲ್ಲದೆ ಈ ಸಮಯದಲ್ಲಿ ನೀವು ಹೆಚ್ಚು ಪೌಷ್ಟಿಕಾಂಶದ ಆಯ್ಕೆಗಳನ್ನು ಹುಡುಕಬೇಕು ಮತ್ತು ವರ್ಷದಲ್ಲಿ ಚಿಂತೆ... |
ಉತ್ತಮ ಆರೋಗ್ಯವನ್ನು ಆನಂದಿಸಲು ನಿಮ್ಮ ದಿನಚರಿಯಲ್ಲಿ ನೀವು ಸಮತೋಲಿತ ಆಹಾರ ಮತ್ತು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ವರ್ಷದ ಮಧ್ಯ ತಿಂಗಳುಗಳಲ್ಲಿ ನೀವು ತಂಪು ಪಾನೀಯಗಳು ಮತ್ತು ಕಾಕ್ಟೈಲ್‌ಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುವ ಸಂಪೂರ್ಣ ಸಾಧ್ಯತೆ ಇದೆ. ನಿಮ್ಮನ್ನು ನೀವು ಬಯಸುವ ಆಕಾರದಲ್ಲಿ ಉಳಿಸಿಕೊಳ್ಳಲು ಆರೋಗ್ಯಕರ ಆಹಾರ ಮತ್ತು ವ್... |
ಅಂತಿಮವಾಗಿ, ನೀವು ಅದನ್ನು ಅನುಸರಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಉತ್ತಮ ಆಹಾರವನ್ನು ಸೇವಿಸಿ, ಕೆಲಸ ಮಾಡಿ, ಸಂಪೂರ್ಣ ನಿದ್ರೆ ಮಾಡಿ, ಚಾರ್ಟ್ ಅನ್ನು ಪುನರಾವರ್ತಿಸಿ. ಇದು ನಿಮ್ಮ ವರ್ಷವಾಗಿರುವುದರಿಂದ "ಯಾವುದೇ ರೋಗಲಕ್ಷಣಗಳು ಅಥವಾ ಕಾಯಿಲೆಗಳಿಲ್ಲ." ಹೀಗಾಗಿ, ನೀವು ಏನು ಬೇಕಾದರೂ ಮಾಡಬಹುದು. ನಿಮ್ಮನ್ನು ಯಾವುದೇ ವೈದ್ಯಕೀಯ ಸಮಸ್ಯೆಗಳಿಗೆ ಕರೆದೊಯ್ಯುವ ವಿಷಯಗಳಿಂದ ದೂರವಿರಿ ಮತ್... |
ದೇವಸ್ಥಾನದಲ್ಲಿಯೇ ಮದ್ಯದ ಬಾಟಲಿ ಹಂಚಿದ ಬಿಜೆಪಿ ನಾಯಕನ ಮಗ | uttar pradesh hardoi liquor bottles distributed at temple event organised by bjp leader - Kannada Oneindia |
ದೇವಸ್ಥಾನದಲ್ಲಿಯೇ ಮದ್ಯದ ಬಾಟಲಿ ಹಂಚಿದ ಬಿಜೆಪಿ ನಾಯಕನ ಮಗ |
| Published: Tuesday, January 8, 2019, 13:15 [IST] |
ಹರ್ದೋಯ್ (ಉತ್ತರ ಪ್ರದೇಶ) ಜನವರಿ 8: ದೇವಸ್ಥಾನವೊಂದರಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಬಿಜೆಪಿ ಮುಖಂಡರೊಬ್ಬರ ಮಗ ಅಲ್ಲಿಯೇ ಆಹಾರದೊಂದಿಗೆ ಮದ್ಯದ ಬಾಟಲಿಗಳನ್ನು ಹಂಚಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. |
ಬಿಜೆಪಿ ಮುಖಂಡ ನರೇಶ್ ಅಗರವಾಲ್ ಅವರ ಮಗ ನಿತಿನ್, ಪಾಸಿ ಸಮುದಾಯದ ಜನರಿಗಾಗಿ ಹರ್ದೋಯ್‌ನ ಶ್ರವಣದೇವಿ ದೇವಸ್ಥಾನದಲ್ಲಿ ಸಮ್ಮೇಳನವೊಂದನ್ನು ಆಯೋಜಿಸಿದ್ದರು. |
ಕಾರ್ಯಕ್ರಮದ ಬಳಿಕ ಗ್ರಾಮದ ಮುಖ್ಯಸ್ಥನಿಗೆ ಆಹಾರದ ಪೊಟ್ಟಣಗಳನ್ನು ನೀಡಲಾಗಿದ್ದು, ಆತ ಎಲ್ಲರಿಗೂ ಹಂಚಿಕೆ ಮಾಡಲಿದ್ದಾನೆ ಎಂದು ನಿತಿನ್ ಅಗರವಾಲ್ ವೇದಿಕೆ ಮೇಲಿಂದ ಪ್ರಕಟಿಸಿದ್ದರು. |
ಆದರೆ, ಆಹಾರದ ಪೊಟ್ಟಣ ಪಡೆದುಕೊಂಡ ಕೆಲವು ಗ್ರಾಮಸ್ಥರ ಸಂಭ್ರಮ ಮುಗಿಲು ಮುಟ್ಟಿತ್ತು. ಏಕೆಂದರೆ ಪೊಟ್ಟಣದಲ್ಲಿ ಆಹಾರದ ಜೊತೆಗೆ ಮದ್ಯವೂ ಇತ್ತು! |
ನಿತಿನ್ ಅಗರವಾಲ್ ಅವರು ಆಯೋಜಿಸಿದ್ದ ಕಾರ್ಯಕ್ರಮ ಇದು. ಕಾರ್ಯಕ್ರಮದಲ್ಲಿ ಆಹಾರದ ಜೊತೆಗೆ ಮದ್ಯವನ್ನೂ ಇರಿಸಿ ಕೊಟ್ಟಿದ್ದಾರೆ ಎಂದು ವ್ಯಕ್ತಿಯೊಬ್ಬರು ತಿಳಿಸಿದರು. |
ಆದರೆ, ಇದೇ ಪೊಟ್ಟಣಗಳನ್ನು ಅಪ್ರಾಪ್ತ ವಯಸ್ಸಿನ ಮಕ್ಕಳಿಗೂ ವಿತರಿಸಲಾಗಿದೆ. 'ಅಪ್ಪನ ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದೆ. ನನಗೂ ಇದನ್ನು ಕೊಟ್ಟಿದ್ದಾರೆ' ಎಂದು ಬಾಲಕನೊಬ್ಬ ಹೇಳಿದ್ದಾನೆ. |
ಈ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹರ್ದೋಯ್ ಬಿಜೆಪಿ ಸಂಸದ ಅನ್ಷುಲ್ ವರ್ಮಾ, ಅಗರವಾಲ್ ಅವರನ್ನು ಟೀಕಿಸಿದ್ದಾರೆ. ದೇವಸ್ಥಾನದ ಕಾರ್ಯಕ್ರಮದಲ್ಲಿ ಮದ್ಯ ಹಂಚಿಕೆ ಮಾಡಿದ ವಿಚಾರವನ್ನು ಪಕ್ಷದ ಮುಖಂಡರ ಬಳಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. |
'ಅಗರವಾಲ್ ಇತ್ತೀಚೆಗಷ್ಟೇ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ನಮ್ಮ ಧಾರ್ಮಿಕ ಸ್ಥಳವೊಂದರಲ್ಲಿ ಪಾಸಿ ಸಮ್ಮೇಳನ ಆಯೋಜಿಸಿದ್ದಾರೆ. ಇದನ್ನು ದುರದೃಷ್ಟಕರ ಕಾರ್ಯಕ್ರಮ ಎಂದು ಹೇಳುತ್ತೇನೆ. ಏಕೆಂದರೆ, ನಾವು ಪೆನ್ನು ಪುಸ್ತಕ ಕೊಡಬೇಕಾದ ಮಕ್ಕಳಿಗೆ ಅಗರವಾಲ್ ಮದ್ಯದ ಬಾಟಲಿಗಳನ್ನು ನೀಡಿದ್ದಾರೆ. |
ಇದಕ್ಕೆ ಹೇಗೆ ಅವಕಾಶ ನೀಡಲಾಯಿತು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆದು ಕೇಳುತ್ತೇನೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮದ್ಯ ಹಂಚಿಕೆ ಮಾಡಿದ್ದು ಅಬಕಾರಿ ಇಲಾಖೆಯ ಕಣ್ಣಿಗೆ ಹೇಗೆ ಬೀಳಲಿಲ್ಲ? ಈ ತಪ್ಪನ್ನು ತಿದ್ದಿಕೊಳ್ಳಲು ಬಿಜೆಪಿ ಮರುಚಿಂತನೆ ನಡೆಸಬೇಕಿದೆ' ಎಂದು ಅವರು ತಿಳಿಸಿದ್ದಾರೆ. |
ಸಮಾಜವಾದಿ ಪಕ್ಷದ ನಾಯಕರಾಗಿದ್ದ ನರೇಶ್ ಅಗರವಾಲ್ ಮಾರ್ಚ್ 2018ರಂದು ತಮ್ಮ ಮಗ ಹಾಗೂ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. |
uttar pradesh lucknow bjp liquor temple ಉತ್ತರ ಪ್ರದೇಶ ಲಕ್ನೋ ಬಿಜೆಪಿ ಮದ್ಯ ದೇವಸ್ಥಾನ |
Liquor bottles kept inside food pockets were distributed at Shravan Devi temple in a event organised by BJP leader Naresh Agarwal's son nitin at Uttar Pradesh's Hardoi. |
ಆರ್ ಸಿಯು ವಿದ್ಯಾಲಯದ ಮೇಲೆ ಕೊರೋನಾ ದಾಳಿ - News Belgaum |
ಆರ್ ಸಿಯು ವಿದ್ಯಾಲಯದ ಮೇಲೆ ಕೊರೋನಾ ದಾಳಿ |
ವಿದ್ಯಾರ್ಥಿಗಳೂ ಸೇರಿದಂತೆ 42 ಜನರಿಗೆ ಸೋಂಕು ದೃಢ |
By News Belgaum Kannada News On Feb 1, 2022 |
ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾ ತಗ್ಗಿದೇ ಎನ್ನುವರಷ್ಟರಲ್ಲಿ ಮತ್ತೆ ನುಸುಳುತ್ತಿದ್ದು, ಇದೀಗ ರಾಣಿ ಚೆನ್ನಮ್ಮ ವಿವಿಯ ವಿದ್ಯಾರ್ಥಿಗಳೂ ಸೇರಿದಂತೆ 42 ಜನರಿಗೆ ಸೋಂಕು ತಗುಲಿದೆ. |
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 32 ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ 42 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. |
ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಗೆ ಕೋವಿಡ್ ದೃಢಪಟ್ಟಿದ್ದು ಅವರು ರಜೆಯ ಮೇಲೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಯ ಹಾಸ್ಟೇಲ್ ವಿದ್ಯಾರ್ಥಿಗಳು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಗಂಟಲು ದ್ರವದ ಮಾದರಿ ಪಡೆದು ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ ಒಟ್ಟು 42 ಜನರಿಗೆ ಕೋವಿಡ್ ದೃಢಪಟ್ಟಿರುವುದಾಗಿ ತಿಳಿದುಬಂದಿದೆ.////// |
Subsets and Splits
No community queries yet
The top public SQL queries from the community will appear here once available.