text stringlengths 0 61.5k |
|---|
3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು | Govt school teachers will go hunger strike before Gandhi Jayanti - Kannada Oneindia |
ಮೂರು ವರ್ಷಗಳಿಂದ ವರ್ಗಾವಣೆ ಸ್ಥಗಿತ, ಉಪವಾಸಕ್ಕೆ ಮುಂದಾದ ಶಿಕ್ಷಕರು | Oneindia Kannada |
ಬೆಂಗಳೂರು, ಸೆ.28: ಕಡ್ಡಾಯ ಮತ್ತು ಕೋರಿಕೆ ಶಿಕ್ಷಕರ ವರ್ಗಾವಣೆಯನ್ನು ಸ್ಥಗಿತಗೊಳಿಸಿರುವ ಸರ್ಕಾರದ ಕ್ರಮ ವಿರೋಧಿಸಿ ಅ.1ರಂದು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ಶಿಕ್ಷಕರ ವರ್ಗಾವಣೆ ಹೋರಾಟ ಸಮಿತಿ ಮುಂದಾಗಿದೆ. |
ಅ.ರಂದು ಶಿಕ್ಷಣ ಇಲಾಖೆ ಎದುರು ಹೋರಾಟ ನಡೆಸಲು ನಿರ್ಧರಿಸಿದೆ, ಅಂದು ಬೆಳಗ್ಗೆ 10 ಗಂಟೆಗೆ ಹೋರಾಟ ಆರಂಭಿಸಲಿದ್ದಾರೆ, ಎಲ್ಲಾ ಶಿಕ್ಷಕರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾನೂನಿನ ಪ್ರಕಾರ ಶಿಕ್ಷಕರ ವರ್ಗಾವಣೆಯನ್ನು ನಡೆಸುವಲ್ಲಿ ಇಲಾಖೆ ವಿಫಲವಾಗಿದೆ.ಇದರಿಂದ ಸಿ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಅನ್ಯಾಯವಾಗುತ್ತಿದೆ ಎಂಬುದು ಶಿಕ್ಷಕರ ವಾದ. |
ಈಗಾಗಲೇ ಕೌನ್ಸೆಲಿಂಗ್ ಪೂರ್ಣಗೊಂಡು ವರ್ಗಾವಣೆ ಆದೇಶ ಪಡೆದಿರುವ ಪ್ರೌಢಶಾಲಾ ಮುಖ್ಯಶಿಕ್ಷಕರು, ತಮ್ಮ ವರ್ಗಾವಣೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಹೊರಡಿಸಿರುವ ಆದೇಶ ತಮಗೂ ಅನ್ವಯವಾಗಲಿದೆ. |
ಹಾಗಾಗಿ ತಮ್ಮ ವರ್ಗಾವಣೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಶಿಕ್ಷಣ ಸಚಿವರು ಹೊರಡಿಸಿರುವ ಆದೇಶ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ, ಆದ್ದರಿಂದ ವರ್ಗಾವಣೆ ಆದೇಶ ಪಡೆದಿರುವ ಪ್ರೌಢಶಾಲಾ ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಸೇವೆಯಿಂದ ಬಿಡುಗಡೆಹೊಂದಬೇಕು ಎಂದು ತಿಳಿಸಲಾಗಿದೆ. |
karnataka teacher strike transfer ಕರ್ನಾಟಕ ಶಿಕ್ಷಕರು ಪ್ರತಿಭಟನೆ ವರ್ಗಾವಣೆ |
Hundreds of primary school teachers will start indefinite hunger strike from October first opposing cancelation of transfer counseling for the consecutive third year. |
ಸಮುದ್ರದಲ್ಲಿನ 500 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಬ್ ಮೆರಿನ್ ಗಳ ನಿರ್ಮಾಣ! – Karavali Kirana |
ಸಮುದ್ರದಲ್ಲಿನ 500 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಬ್ ಮೆರಿನ್ ಗಳ ನಿರ್ಮಾಣ! |
ನವದೆಹಲಿ: ಇತ್ತೀಚೆಗಷ್ಟೇ ನೌಕಾದಳ 48 ವರ್ಷಗಳ ಬಳಿಕ ಅಮೆರಿಕಾದ ಅತ್ಯಾಧುನಿಕ MH-60R ಹೆಲಿಕಾಪ್ಟರ್ ಗಳ ಸೇರ್ಪಡೆಗೆ ಅಂಕಿತ ಹಾಕಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ನೌಕಾದಳ, ಸಮುದ್ರದದಲ್ಲಿನ 500 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಬ್ ಮೆರಿನ್ ಗಳ ನಿರ್ಮಾಣಕ್ಕೆ ಮುಂದಾಗಿದೆ. |
ಹೌದು.. ನೌಕಾಸೇನೆಯ ಮತ್ತೊಂದು ಬಹುದೊಡ್ಡ ಪ್ರಾಜೆಕ್ಟ್ ಗೆ ಚಾಲನೆ ನೀಡಲಾಗಿದ್ದು, ನೌಕಾಸೇನೆಯು ತನ್ನ ಬತ್ತಳಿಕೆಗಾಗಿ ಆರು ಮಾರಣಾಂತಿಕ, ಅತ್ಯಾಧುನಿಕ ಜಲಾಂತರ್ಗಾಮಿಗಳ ನಿರ್ಮಾಣ ಮಾಡುವ ಯೋಜನೆಗೆ ಕೈಹಾಕಿದೆ. ಮೂಲಗಳ ಪ್ರಕಾರ ಸೇನೆಯು ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಇದಕ್ಕಾಗಿ ಟೆಂಡರ್ ಕರೆಯಲಾಗಿದ್ದ... |
ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ -75ನ ಅಡಿಯಲ್ಲಿ, 6 ಡೀಸೆಲ್-ವಿದ್ಯುತ್ ಜಲಾಂತರ್ಗಾಮಿಗಳನ್ನು ಉತ್ಪಾದಿಸಬೇಕೆಂಬ ಗುರಿ ಹೊಂದಲಾಗಿದೆ. ಈಗಾಗಲೇ ಮುಂಬೈನಲ್ಲಿ ನಿರ್ಮಾಣ ಆಗುತ್ತಿರುವ ಸ್ಕಾರ್ಪಿಯನ್ ಕ್ಲಾಸ್ ಸಬ್ ಮೆರಿನ್ ಗಳಿಗಿಂತ 50 ಪಟ್ಟು ಈ ಯೋಜನೆ ದೊಡ್ಡದಾಗಿದೆ. ನೌಕಾಪಡೆಯು 500 ಕಿಮೀ ವ್ಯಾಪ್ತಿಯ ಕ್ಷಿಪಣಿಗಳನ್ನು ಜಲಾಂತರ್ಗಾಮಿಗಳಿಗೆ ಹೊಂದಿಸಲು ಉದ್ದೇಶಿಸಿದೆ ಎಂದು ತಿಳಿದು ಬಂದಿದೆ. |
ಸಬ್ ಮರಿನ್ ತಯಾರು ಮಾಡಲು ಸಿದ್ಧ ಇರುವ ಎಲ್ಲಾ ವಿದೇಶಿಗರಿಗೆ ಹಾಗೂ ಭಾರತೀಯರಿಗೆ ಪ್ರಾಜೆಕ್ಟ್ ನ ಡ್ರಾಫ್ಟ್ ಬಗ್ಗೆ ಮಾಹಿತಿ ನೀಡಲಾಗಿದೆ. ಜೊತೆಗೆ ದೇಶದ ಪಾಲುದಾರರು ಕೂಡ ಸಲಹೆ ಸೂಚನೆಗಳನ್ನ ನೀಡುವಂತೆಯೂ ಮನವಿ ಮಾಡಲಾಗಿದೆ. ಹೆವಿ ಡ್ಯೂಟಿಯ ಫೈರ್ ಪವರ್ ಹೊಂದಿರುವುದರ ಜೊತೆಗೆ, 12 ಲ್ಯಾಂಡ್ ಅಟ್ಯಾಕ್ ಕ್ರೂಸ್ ಕ್ಷಿಪಣಿ (LACM) ಆ್ಯಂಟಿ-ಶಿಪ್ ಕ್ರೂಸ್ ಮಿಸೈಲ್ (ASCM) ಹೊಂದಿರಲು ಬಯಸಿದೆ... |
ಇನ್ನು ಭಾರತದ ಬಳಿ 100 ಸಬ್ ಮೆರಿನ್ ಗಳಿದ್ದು, ಪಾಕಿಸ್ತಾನ ಸೇನೆಯ ಬಳಿ 20 ಸಬ್ ಮೆರಿನ್ ಗಳಿವೆ. ಭಾರತದ ಸಬ್ ಮೆರಿನ್ ಯೋಜನೆಗಳ ಮೇಲೆ ಚೀನಾ ಕಣ್ಣಿಟ್ಟಿದ್ದು, ಎಲ್ಲಿ ತನ್ನ ಪ್ರಾಬಲ್ಯಕ್ಕೆ ಭಾರತ ಕುತ್ತು ತರುತ್ತದೆಯೋ ಎಂದು ಕಳವಳದಿಂದ ನೋಡುತ್ತಿದೆ. |
ಕನ್ನಡ ಬಳಕೆಗೆ ಮುಜುಗರ ಬೇಡ | Prajavani |
ಕನ್ನಡ ಬಳಕೆಗೆ ಮುಜುಗರ ಬೇಡ |
Published: 20 ಡಿಸೆಂಬರ್ 2017, 14:53 IST |
Updated: 20 ಡಿಸೆಂಬರ್ 2017, 14:53 IST |
ಕೋಲಾರ: 'ಕನ್ನಡ ಮಾತೃ ಭಾಷೆ ಮಾತ್ರವಲ್ಲ, ನಮ್ಮ ಆಡಳಿತ ಭಾಷೆ. ಅದನ್ನು ಬಳಸಲು ಮುಜುಗರ ಬೇಡ' ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಸಲಹೆ ನೀಡಿದರು. ನಗರದ ಟಿ.ಚನ್ನಯ್ಯ ರಂಗಮಂದಿರದ 'ಭೂತಾಯಿ ನೆನೆದೇನಾ' ವೇದಿಕೆಯಲ್ಲಿ ಮಂಗಳವಾರ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡದ ಸಂಸ್ಕೃತಿ ಶ್ರೀಮಂತವಾಗಿದೆ. ಅದನ್ನು ಉಳಿಸಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು. |
ಕನ್ನಡಿಗರು ಶಾಂತಿ ಪ್ರಿಯರು ಮತ್ತು ಹೃದಯವಂತರು ಎಂಬುದಕ್ಕೆ ಬೆಂಗಳೂರಿನ ಬೆಳವಣಿಗೆಯೇ ಸಾಕ್ಷಿ. ದೇಶದ ವಿವಿಧ ರಾಜ್ಯಗಳ ಜನ ಬೆಂಗಳೂರಿಗೆ ಬಂದು ಬದುಕುತ್ತಿದ್ದಾರೆ. ಆದರೆ, ಅವರು ತಮ್ಮದೇ ಭಾಷೆ ಬೆಳೆಸುವ ಕೆಲಸ ಮಾಡುತ್ತಾರೆ. ಅಂತಹವರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು. ದೆಹಲಿಯಲ್ಲಿ ಸ್ಥಳೀಯರು ಹಿಂದಿ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ. ಆದರೆ, ಕನ್ನಡಿಗರು ಅದಕ್ಕೆ ವ್ಯತಿರಿಕ್ತ ಎಂದು ವಿಷಾ... |
ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಿದೆ. ಅಲ್ಲಿ ಕನ್ನಡಿಗರು ಎಲ್ಲಿದ್ದಾರೆ ಎಂಬುದನ್ನು ಹುಡುಕುವ ಪರಿಸ್ಥಿತಿ ಇದೆ. ತೆಲುಗು, ತಮಿಳು ಭಾಷಿಕರ ಸಂಖ್ಯೆ ಹೆಚ್ಚಿರುವ ಈ ಜಿಲ್ಲೆಯಲ್ಲಿ ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಕನ್ನಡಪರ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಸಲಹೆ ನೀಡಿದರು. |
ಕುತ್ತು ಬಂದಿಲ್ಲ: ಲೇಖಕ ಮಲ್ಲಿಕಾರ್ಜುನ ವಿಜಯಪುರ ಅವರ ರಚನೆಯ 'ಪಾರ್ವತಿ ಕಲ್ಯಾಣ' ಕೃತಿ ಬಿಡುಗಡೆ ಮಾಡಿ ಮಾತನಾಡಿದ ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್.ಗೋಪಾಲಕೃಷ್ಣ, 'ಜಿಲ್ಲೆಯಲ್ಲಿ ತೆಲುಗು ಮತ್ತು ತಮಿಳು ಭಾಷೆಯ ಪ್ರಭಾವ ಹೆಚ್ಚಿದ್ದರೂ ಭಾಷಾ ಸಾಮರಸ್ಯಕ್ಕೆ ಕುತ್ತು ಬಂದಿಲ್ಲ' ಎಂದರು. |
'ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ನಾಡು ನುಡಿಯ ಬೆಳವಣಿಗೆಗೆ ಸಹಕಾರ ನೀಡುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಗೆ ಸ್ವಂತ ಕಟ್ಟಡಗಳಿವೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಕಟ್ಟಡವಿಲ್ಲ. ಜಿಲ್ಲಾಡಳಿತವು ನಿವೇಶನ ನೀಡಿದರೆ ಕಟ್ಟಡ ನಿರ್ಮಿಸಲಾಗುತ್ತದೆ' ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಜಿಲ್ಲಾಧ... |
ವಿಜ್ಞಾನಿ ಮುನಿವೆಂಕಟಪ್ಪ ಸಂಜಪ್ಪ, ಸಾಹಿತಿ ವಿ.ಎಸ್.ಎಸ್.ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನಾಧ್ಯಕ್ಷರಾದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅವರ ಪತ್ನಿ ಸುಲೋಚನಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಸಲಹೆಗಾರ ಗೋಕುಲ ನಾರಾಯಣಸ್ವಾಮಿ, ನಿಕಟ ಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಸ್.ಮುನಿಯಪ... |
ಭಾಗ - ೨೩ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ ಅರ್ಥಾತ್ ದೈವಬಲವೋ ಪುರುಷಪ್ರಯತ್ನವೋ! | ಸಂಪದ |
ಭಾಗ ೨೩ ಭೀಷ್ಮ ಯುಧಿಷ್ಠಿರ ಸಂವಾದ ವಶಿಷ್ಠ ಬ್ರಹ್ಮ ಸಂವಾದ ಅರ್ಥಾತ್ ದೈವಬಲವೋ ಪುರುಷಪ್ರಯತ್ನವೋ |
Submitted by makara on Fri, 10/26/2018 - 11:54 |
ದೈವಪೌರುಷಗಳಲ್ಲಿ (Pre-Destination and Free-Will ಅಥವಾ ವಿಧಿಲಿಖಿತ ಹಾಗು ಸ್ವಯಂಶಕ್ತಿ) ಯಾವುದು ಮಹತ್ತರವಾದುದು ಎನ್ನುವ ವಶಿಷ್ಠರ ಪ್ರಶ್ನೆಗೆ ಬ್ರಹ್ಮನು ಈ ವಿಧವಾಗಿ ಉತ್ತರಿಸಿದನು - "ಮುನಿವರ್ಯನೇ! ಬೀಜವು ಮೊಳಕೆಯೊಡೆದು ವೃಕ್ಷವಾಗುತ್ತದೆ. ಆ ವೃಕ್ಷವು ಹೂ, ಹಣ್ಣುಗಳನ್ನು ಕೊಡುತ್ತದೆ. ಆ ಹಣ್ಣುಗಳಲ್ಲಿ ಪುನಃ ಬೀಜವು ಇರುತ್ತದೆ. ಆದ್ದರಿಂದ ಬೀಜವು ಯಾವುದೇ ಕಾಲದಲ್ಲಿ ನಿಷ್ಪ್ರಯೋಜನಕಾರ... |
"ಕೃಷಿಕನು ಹೊಲದಲ್ಲಿ ಬೀಜಗಳನ್ನು ಬಿತ್ತಿದರೆ ಬೆಳೆಯು ಕೈಗೆ ಬರುತ್ತದೆ. ಬೀಜಗಳನ್ನು ಬಿತ್ತದೇ ಹೋದಲ್ಲಿ ಫಸಲಾದರೂ ಎಲ್ಲಿಂದ ಬರಬೇಕು?" |
"ಆದ್ದರಿಂದ ಪುರುಷಪ್ರಯತ್ನವಿಲ್ಲದೇ ದೈವವಾದರೂ ಯಾವ ವಿಧವಾಗಿ ಸಹಾಯಮಾಡಬಲ್ಲುದು?" |
"ಲೋಕದಲ್ಲಿ ಧನ-ಕನಕಾದಿಗಳು, ಮಿತ್ರರು, ಐಶ್ವರ್ಯ, ಅಧಿಕಾರ, ವಾಹನಾದಿಗಳು.... ಯಾವುದನ್ನೇ ಆಗಲಿ ಪಡೆಯಬೇಕೆಂದರೆ, ಅದಕ್ಕೆ ಪುರುಷ ಪ್ರಯತ್ನವು ಅತ್ಯಾವಶ್ಯಕ. ಅವರವರ ಮನೋಭಾವ ಹಾಗು ಶಕ್ತಿಸಾಮರ್ಥ್ಯಗಳಿಗೆ ಅನುಗುಣವಾಗಿ ಪ್ರತಿಯೊಬ್ಬರೂ ಕಾರ್ಯಶೀಲರಾಗಬೇಕು. ಕೆಲವರು ತಪಸ್ಸಿನ ಮೂಲಕ, ಕೆಲವರು ಪರಾಕ್ರಮವನ್ನು ಪ್ರದರ್ಶಿಸುವ ಮೂಲಕ, ಕೆಲವರು ವ್ಯಾಪಾರದ ಮೂಲಕ, ಇನ್ನೂ ಕೆಲವರು ಸೇವಾ ಕಾರ್ಯಗಳನ್ನು ಮಾ... |
"ಮಾಡಿದ ಕೆಲಸಕ್ಕೆ ಪ್ರತಿಫಲವುಂಟಾಗದು ಎಂದು ಹೇಳಿದರೆ, ಎಲ್ಲರೂ ತಮ್ಮ ವಿಧಿಲಿಖಿತವನ್ನು ನಂಬಿಕೊಂಡು ಯಾವುದೇ ಕೆಲಸವನ್ನು ಮಾಡದೇ ಉದಾಸೀನರಾಗಿ ಕೈಕಟ್ಟಿ ಕುಳಿತುಕೊಳ್ಳುತ್ತಾರೆ. ಆಗ ಅವರ ಕೆಲಸವು ನಪುಂಸಕನನ್ನು ಗಂಡನಾಗಿ ಪಡೆದ ಸ್ತ್ರೀಯ ಸ್ಥಿತಿಯಂತೆಯೇ ಇರುತ್ತದೆ." |
"ಪುರುಷ ಪ್ರಯತ್ನವನ್ನು ಮಾಡುವವನಿಗೆ ಭಾಗ್ಯವು ಉಂಟಾಗುತ್ತದೆ, ದೈವವು ಅನುಕೂಲಿಸುತ್ತದೆ." |
"ಪೂರ್ವದಲ್ಲಿ ಯಯಾತಿಯು ಸ್ವರ್ಗಭ್ರಷ್ಟನಾದ ನಂತರ ಅವನ 'ದೌಹಿತ್ರ'ನ (ಹೆಣ್ಣುಮೊಮ್ಮಗ) ಕರ್ಮದಿಂದಾಗಿ ಅವನಿಗೆ ಪುನಃ ಸ್ವರ್ಗಪ್ರಾಪ್ತಿಯಾಯಿತು." |
"ಕೌರವರು ಪಾಂಡವರ ರಾಜ್ಯವನ್ನು ಅಪಹರಿಸಿದರು. ಆದರೆ ಪಾಂಡವರು, ತಮ್ಮ ಬಾಹುಬಲದಿಂದ ಅದನ್ನು ಪುನಃ ಸಂಪಾದಿಸಿಕೊಂಡರು. ತಾವು ದುರದೃಷ್ಟವಂತರೆಂದೂ, ದೈವಬಲವಿಲ್ಲದವರೆಂದೂ ದುಃಖಿಸುತ್ತಾ ಅವರು ಕೂರಲಿಲ್ಲ. ಪ್ರಯತ್ನವನ್ನು ಆರಂಭಿಸಿದ ಕೂಡಲೇ ಅವರಿಗೆ ದೈವಾನುಗ್ರಹವೂ (ಕೃಷ್ಣನ ರೂಪದಲ್ಲಿ) ಲಭಿಸಿತು." |
"ತಪೋನಿರತರಾದ ಮುನೀಶ್ವರರು ಶಾಪವನ್ನು ಕೊಡಬಲ್ಲ ಶಕ್ತಿಯನ್ನು ಹೊಂದಿರುತ್ತಾರೆ. ಅವರಿಗೆ ಪುರುಷ ಪ್ರಯತ್ನದಿಂದಲೇ ಆ ಶಕ್ತಿಯು ಉಂಟಾಗುತ್ತದೆಯೇ ಹೊರತು ದೈವಬಲದಿಂದಲ್ಲ" |
"ಒಂದು ಬೆಂಕಿಯ ಕಿಡಿಯು ಚಿಕ್ಕದಾಗಿದ್ದರೂ ಸಹ ಅದಕ್ಕೆ ದೈವಬಲವು ಜೊತೆಯಾದರೆ ಅದು ದಾವಾನಲವಾಗಿ ಬದಲಾಗಬಲ್ಲದು. ಅದೇ ವಿಧವಾಗಿ ಪುರುಷಪ್ರಯತ್ನವು ಚಿಕ್ಕದೇ ಆದರೂ ಸಹ ಅದಕ್ಕೆ ದೈವಬಲವು ಜೊತೆಯಾದರೆ ಅದು ಅದ್ಭುತಗಳನ್ನು ಸಾಧಿಸಬಲ್ಲುದು." |
"ಎಣ್ಣೆ ಮುಗಿದ ನಂತರ ದೀಪವು ಆರಿಹೋಗುತ್ತದೆ. ಅದೇ ವಿಧವಾಗಿ ಪುರುಷಪ್ರಯತ್ನವು ಮುಗಿದ ಕೂಡಲೇ ದೈವವೂ ಸಹ ತನ್ನ ಕಾರ್ಯದಿಂದ ವಿಮುಖವಾಗುತ್ತದೆ." |
"ಪ್ರಯತ್ನಶೂನ್ಯನಾದ ವ್ಯಕ್ತಿಯು ಧನವಿದ್ದರೂ ಸಹ ಅನುಭವಿಸಲಾರ. ಅಧಿಕಾರವಿದ್ದರೂ ಸಹ ಪರಿಪಾಲಿಸಲಾರ. ಆದರೆ ಪ್ರಯತ್ನಶೀಲನಾದವನು ಅಸಂಭವವಾದುದನ್ನೂ ಸಹ ಸಂಭವವಾಗುವಂತೆ ಮಾಡಬಲ್ಲ. ದೈವವಶಾತ್ ಅವನು ಧನ ಅಥವಾ ಅಧಿಕಾರವನ್ನು ಕಳೆದುಕೊಂಡರೂ ಸಹ ಅವುಗಳನ್ನು ಅವನು ಪುನಃ ಗಳಿಸಿಕೊಳ್ಳಬಲ್ಲ. ಅಂತಹವನು ಶ್ರೀರಾಮಚಂದ್ರನಂತೆ - 'ದೈವಸಂಪಾದಿತೋ ದೋಷೋ ಮಾನುಷೇಣ ಮಯಾಜಿತಃ - ದೈವವು ಉಂಟು ಮಾಡಿದ ದೋಷಗಳನ್ನು ನ... |
"ಆದ್ದರಿಂದ ಯುಧಿಷ್ಠಿರಾ! ಪುರುಷ ಪ್ರಯತ್ನವೇ ದೈವಬಲವನ್ನು ಅನುಕೂಲಕರವಾಗಿ ಮಾರ್ಪಡಿಸಿಕೊಳ್ಳಬಲ್ಲುದು" |
ಹಿಂದಿನ ಲೇಖನ ಭಾಗ - ೨೨ ಭೀಷ್ಮ ಯುಧಿಷ್ಠಿರ ಸಂವಾದ: ಇಂದ್ರ ಶುಕ ಸಂವಾದ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A8-... |
Tue, 11/06/2018 - 06:36 |
ಉ: ಭಾಗ - ೨೩ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ... |
ಈ ಲೇಖನದ ಮುಂದಿನ ಭಾಗ - ೨೪ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ ಅರ್ಥಾತ್ ದೈವಬಲವೋ ಪುರುಷಪ್ರಯತ್ನವೋ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%AA-... |
In reply to ಉ: ಭಾಗ - ೨೩ ಭೀಷ್ಮ ಯುಧಿಷ್ಠಿರ ಸಂವಾದ: ವಶಿಷ್ಠ ಬ್ರಹ್ಮ ಸಂವಾದ... by makara |
ಮೇಲಿನ ಪ್ರತಿಕ್ರಿಯೆಯಲ್ಲಿರುವ ಕೊಂಡಿಯಲ್ಲಿರುವುದು ಭಾಗ - ೨೪ ಭೀಷ್ಮ ಯುಧಿಷ್ಠಿರ ಸಂವಾದ: ಭಂಗಾಸ್ವನನ ಉಪಾಖ್ಯಾನ ಅಥವಾ ಸಂಸಾರ ಸುಖ ಯಾರಿಗೆ ಹೆಚ್ಚು? ಅಚಾತುರ್ಯಕ್ಕಾಗಿ ಕ್ಷಮೆಯಿರಲಿ ಮಿತ್ರರೆ :) |
ಸುಧೀಂದ್ರ ಹಾಲ್ದೊಡ್ಡೇರಿ ಬರಹ | ರೊದ್ದಂ ನರಸಿಂಹ ಎಂಬ ಅಭಿಜಾತ ಪ್ರತಿಭೆ | TV9 Kannada |
Home » ವಿಶೇಷ » ಸುಧೀಂದ್ರ ಹಾಲ್ದೊಡ್ಡೇರಿ ಬರಹ | ರೊದ್ದಂ ನರಸಿಂಹ ಎಂಬ ಅಭಿಜಾತ ಪ್ರತಿಭೆ |
ವೈಮಾಂತರಿಕ್ಷ ಮತ್ತು ಹವಾಮಾನ ಕ್ಷೇತ್ರಗಳಲ್ಲಿ ರೊದ್ದಂ ನರಸಿಂಹ ಅವರು ದೇಶಕ್ಕೆ ಕೊಟ್ಟ ಕೊಡುಗೆ ಅಮೂಲ್ಯ ಎನ್ನುತ್ತಾರೆ ಡಿಆರ್ಡಿಒ ಮತ್ತು ಎಚ್ಎಎಎಲ್ಗಳಲ್ಲಿ ಸೇವೆ ಸಲ್ಲಿಸಿದ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ. ರೊದ್ದಂ ನರಸಿಂಹ ಅವರ ಜೀವನ ಮತ್ತು ಸಾಧನೆಯನ್ನು ವಿಜ್ಞಾನಿಯ ಕಣ್ಣೋಟದಲ್ಲಿ ನೆನಪಿಸಿಕೊಳ್ಳುವ ಯತ್ನ ಈ ಬರಹದಲ್ಲಿದೆ. |
Published On - 20:44 PM, 15 Dec 2020 |
ಪ್ರೊ.ರೊದ್ದಂ ನರಸಿಂಹ |
ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ಯಾಸಂಸ್ಥೆ ಭಾರತೀಯ ವಿಜ್ಞಾನ ಮಂದಿರ – ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್. ಇಲ್ಲಿನ ವೈಮಾಂತರಿಕ್ಷ ಎಂಜಿನಿಯರಿಂಗ್ ವಿಭಾಗದಲ್ಲಿ ಸುದೀರ್ಘ ಕಾಲ 'ಏರೋಡೈನಮಿಕ್ಸ್ – ವಾಯುಚಲನ ವಿಜ್ಞಾನ' ಬೋಧಿಸಿದ ವಿಜ್ಞಾನಿ ರೊದ್ದಂ ನರಸಿಂಹ. ಕೆಲ ಕಾಲ ಅವರು ಅಲ್ಲಿನ 'ವಾತಾವರಣ ವಿಜ್ಞಾನ ಅಧ್ಯಯನ ಕೇಂದ್ರ'ದ ಮುಖ್ಯಸ್ಥರೂ ಆಗಿದ್ದರು. ಹವಾಮಾನದಲ್ಲಿನ ಏರು... |
ಈ ಅಧ್ಯಯನದ ಮಹತ್ವವೇನು? ಎಂಬ ಪ್ರಶ್ನೆಗೆ ಆ ವರದಿಯ ಆರಂಭದಲ್ಲೇ ಉತ್ತರವಿದೆ. ಜಗತ್ತಿನ ಪ್ರಮುಖ ರಾಷ್ಟ್ರಗಳ ಮೇಲಿನ ಹವಾಮಾನದ ಕೂಲಂಕಷ ಅಧ್ಯಯನದಿಂದ 'ಅಂತಾರಾಷ್ಟ್ರೀಯ ಮಾನಕ ಹವಾಮಾನವನ್ನು – International Standard Atmosphere (ISA) ಈಗಾಗಲೇ ಗುರುತಿಸಲಾಗಿದೆ. ಇದರ ಪ್ರಕಾರ ಸಮುದ್ರ ಮಟ್ಟದಲ್ಲಿ 15 ಡಿಗ್ರಿ ಸೆಲ್ಶಿಯಸ್ ಇರುವ ತಾಪಮಾನವು ಪ್ರತಿ ಕಿಲೋಮೀಟರ್ ಎತ್ತರಕ್ಕೆ 6.5 (ಆರೂವರೆ) ಡಿ... |
ಇದನ್ನೂ ಓದಿ: ವಿಜ್ಞಾನಿ ರೊದ್ದಂ ನರಸಿಂಹ ನಿಧನ |
ಈ ನಂಬಿಕೆಗಳನ್ನು ಹುಸಿ ಮಾಡುವಂಥ ಅಧ್ಯಯನವೊಂದರ ನೇತೃತ್ವ ವಹಿಸಿದವರು ಪ್ರೊಫೆಸರ್ ರೊದ್ದಂ ನರಸಿಂಹ. ಪ್ರೊಫೆಸರ್ ಅನಂತಶಯನಂ ಅವರ ಸಹಯೋಗದೊಂದಿಗೆ ಹತ್ತಾರು ವರ್ಷಗಳ ಮಾಹಿತಿ ಸಂಗ್ರಹಣೆಯಲ್ಲಿ ವೇದ್ಯವಾದ ಅಂಶವೆಂದರೆ ಭಾರತವೂ ಸೇರಿದಂತೆ ಸಮಭಾಜಕ ವೃತ್ತದ ಆಸುಪಾಸಿನ ದೇಶಗಳ ಮೇಲಿನ ವಾತಾವರಣ ಅಂತಾರಾಷ್ಟ್ರೀಯ ಮಾನಕಕ್ಕಿಂತಲೂ ಭಿನ್ನವಾಗಿವೆ. ಮೊದಲಿದ್ದ ಕಲ್ಪನೆಯಂತೆ ಈ ಪ್ರದೇಶಗಳ ಮೇಲಿನ ವಾತಾವರಣದ ತ... |
ಹವಾಮಾನ ಮುನ್ಸೂಚನೆಗೆ ಬೇಕಾದ ಮೂಲ ಸೌಕರ್ಯಗಳನ್ನು ಅವರು ಎನ್ಎಎಲ್ ನಿರ್ದೇಶಕರಾಗಿದ್ದ ಸಮಯದಲ್ಲಿ ಕಲ್ಪಿಸಿದರು. ಅವರ ಒತ್ತಾಸೆಯಿಂದ ದೇಶದ ಪ್ರಥಮ 'ಪ್ಯಾರಲಲ್ ಕಂಪ್ಯೂಟರ್' ಎನ್ಎಎಲ್ನಲ್ಲಿ ಲಭ್ಯವಿದ್ದ ಪರಿಕರಗಳೊಂದಿಗೆ ಸ್ವದೇಶಿಯಾಗಿ ರೂಪುಗೊಂಡಿತು. ಅವರ ಕನಸಿನ ಕೂಸಾದ ಐಐಎಸ್ಸಿಯ 'ವಾತಾವರಣ ವಿಜ್ಞಾನ ಅಧ್ಯಯನ ಕೇಂದ್ರ'ದ ಸಹಯೋಗದೊಂದಿಗೆ ಎನ್ಎಎಲ್ ಭಾರತದ ಮುಂಗಾರು ಮಳೆ ಕುರಿತಂತೆ ಮುನ್ನೆಚ್ಚರ... |
ಬಾಹ್ಯಾಕಾಶ ವ್ಯವಸ್ಥೆಗಳ ಅಭಿವೃದ್ಧಿಗೆ ಸರ್ವ ಸ್ವತಂತ್ರ 'ಬಾಹ್ಯಾಕಾಶ ಆಯೋಗ' ಇರುವಂತೆ, ದೇಶದ ವೈಮಾನಿಕ ವ್ಯವಸ್ಥೆಗಳ ಅಭಿವೃದ್ಧಿಗೆ 'ವೈಮಾನಿಕ ಆಯೋಗ' ಇರಬೇಕೆಂದು ಬಲವಾಗಿ ಅವರು ಪ್ರತಿಪಾದಿಸಿದ್ದರು. ಅಧಿಕಾರಶಾಹಿಯ ನಿಧಾನಗತಿಯಿಂದಾಗಿ ದೇಶೀಯ ವಿಮಾನಗಳು ಅಭಿವೃದ್ಧಿಯಾಗುತ್ತಿಲ್ಲವೆಂಬ ಖೇದ ಅವರದಾಗಿತ್ತು. ಸ್ವದೇಶಿ ನಾಗರಿಕ ವಿಮಾನ ಅಭಿವೃದ್ಧಿ ಯೋಜನೆಯೊಂದನ್ನು ಅವರು ಹಮ್ಮಿಕೊಂಡಿದ್ದರು. ದೇಶದ... |
ಸ್ವದೇಶಿ ಯುದ್ಧ ವಿಮಾನ – ಎಲ್ಸಿಎ ನಿರ್ಮಾಣವಾಗುತ್ತಿದ್ದ ಸಮಯದಲ್ಲಿ ಅನೇಕ ಪ್ರಮುಖ ವ್ಯವಸ್ಥೆಗಳ ಸ್ವದೇಶಿ ಉತ್ಪಾದನೆಗೆ ಅವರು ಒತ್ತು ನೀಡಿದ್ದರು. ದೇಶೀಯ ಖಾಸಗಿ ಕಂಪನಿಗಳಿಗೆ ಸುಗಮವಾಗಿ ತಂತ್ರಜ್ಞಾನ ವರ್ಗಾವಣೆಯಾಗಲು ಮಾರ್ಗಸೂಚಿಯನ್ನು ರಚಿಸಿದ್ದರು. ಹವಾಮಾನ ಮುನ್ಸೂಚನೆಗೆ ನೆರವಾಗುವಂಥ ಉಪಗ್ರಹಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ್ದರು. ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯಲ್ಲಿನ... |
ತಮ್ಮ ಇಳಿ ವಯಸ್ಸಿನಲ್ಲೂ ಅನೇಕ ಸಂಶೋಧನಾಲಯಗಳ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿ, ಸಂಶೋಧಕರಿಗೆ ಸ್ಪೂರ್ತಿ ನೀಡುವುದರ ಜತೆಗೆ ಮೌಲ್ಯಯುತ ಪ್ರೌಢಪ್ರಬಂಧಗಳ ರಚನೆಯಲ್ಲೂ ತೊಡಗಿಕೊಂಡಿದ್ದರು. ಇಂಗ್ಲಿಷ್, ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಸಮಾನ ಪ್ರೌಢಿಮೆ ಪಡೆದಿದ್ದ ರೊದ್ದಂ ಅವರಿಗೆ ವಿಜ್ಞಾನದಷ್ಟೇ ಆಸಕ್ತಿ ವಿಜ್ಞಾನ ಇತಿಹಾಸದಲ್ಲಿ, ತತ್ವಜ್ಞಾನದಲ್ಲಿಯೂ ಇತ್ತು. ತಮ್ಮ ಪ್ರಿಯ ವಿಷಯ ದ್ರವಚಲನ ವ... |
ಒಳಚರಂಡಿ ಕಾಮಗಾರಿಗಳನ್ನು ಶೀಘ್ರವೇ ಪ್ರಾರಂಭಿಸುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಶಾಸಕ ಕಾಮತ್ ಸೂಚನೆ | KANNADIGA WORLD |
Home ಕನ್ನಡ ವಾರ್ತೆಗಳು ಕರಾವಳಿ ಒಳಚರಂಡಿ ಕಾಮಗಾರಿಗಳನ್ನು ಶೀಘ್ರವೇ ಪ್ರಾರಂಭಿಸುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಶಾಸಕ ಕಾಮತ್ ಸೂಚನೆ |
ಹೊಯ್ಗೆಬಜಾರ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರಿಂದ ಶಿಲಾನ್ಯಾಸ |
ಮಂಗಳೂರು : ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನ ಎಬಿಡಿ ಪ್ರದೇಶದ ವಲಯ 4 ಭಾಗ ಒಂದರಲ್ಲಿ ನಡೆಯಲಿರುವ ಒಳಚರಂಡಿ (ಡ್ರೈನೇಜ್) ಕಾಮಗಾರಿಗಳು ಶೀಘ್ರವೇ ಪ್ರಾರಂಭಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು. |
ಅದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಡಿಯಲ್ಲಿ (NCRMP), ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು 2.70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹೊಯ್ಗೆ ಬಜಾರ್ ರೈಲ್ವೇ ಕ್ರಾಸಿಂಗ್ ನಿಂದ ಬೋಳಾರ ಲೆವೆಲ್ ಸಂಪರ್ಕಿಸುವ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು. |
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕಾಮತ್ ಅವರು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಮಂಗಳೂರಿನ ಎಬಿಡಿ ಪ್ರದೇಶದ ವಲಯ 4 ಭಾಗ ಒಂದರಲ್ಲಿ ಸುಮಾರು 95 ಲಕ್ಷ ವೆಚ್ಚದಲ್ಲಿ 1.1 ಕಿಮೀ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ. |
ಇನ್ನು ಪ್ರಾಕೃತಿಕ ವಿಕೋಪದ ಸಂಧರ್ಭ ಎದುರಾದರೆ ಅದರಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅನುಷ್ಠಾನಕ್ಕೆ ತಂದಿರುವ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯ(NCRMP) ಅನುದಾನದ ಅಡಿಯಲ್ಲಿ,ಲೋಕೋಪಯೋಗಿ ಇಲಾಖೆಯಿಂದ 2.70 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಯಿಗೆ ಬಜಾರ್ ವಾರ್ಡಿನ ಮಾರಿಗುಡಿ ಮಾರ್ಗವಾಗಿ ಬೋಳಾರವನ್ನು ಸಂಪರ್ಕಿಸುವ ರಸ್ತೆಯ ಕಾಂಕ್ರೀಟಿಕರಣದ ಕಾಮಗಾರಿಯೂ ಶೀಘ್ರದಲ್... |
ಅನುದಾನ ತರುವಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಶ್ರಮಿಸಿದ್ದಾರೆ. ಅವರಿಗೆ ಇಲ್ಲಿನ ಸಮಸ್ತ ನಾಗರಿಕರ ಪರವಾಗಿ ಧನ್ಯವಾದ ಎಂದು ಶಾಸಕ ಕಾಮತ್ ತಿಳಿಸಿದರು.ಒಳ ಚರಂಡಿ ಮತ್ತು ರಸ್ತೆ ಕಾಮಗಾರಿಗಳು ನಡೆಯುವಾಗ ಸಾರ್ವಜನಿಕರಿಗೆ ಅಡಚಣೆಯಾಗಬಹುದು.ದಯವಿಟ್ಟು ಅಭಿವೃದ್ಧಿಯ ದೃಷ್ಠಿಯಿಂದ ಸಾರ್ವಜನಿಕರು ಸಹಕಾರಿಸಬೇಕು ಎಂದು ಶಾಸಕರು ಕೇಳಿ ಕೊಂಡಿದ್ದಾರೆ. |
ಶಾಸಕರೊಂದಿಗೆ ಬಿಜೆಪಿ ಹಿರಿಯ ಮುಖಂಡ ನಿತಿನ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್,ಮನಪಾ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ,ಮಂಗಳೂರು ನಗರ ದಕ್ಷಿಣ ಮಂಡಲ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಚಂದ್ರ ಶೆಟ್ಟಿ, ಮಂಡಲ ಕಾರ್ಯದರ್ಶಿ ದೀಪಕ್ ಪೈ,ಜಿಲ್ಲಾ ಕಾರ್ಯಕಾರಿಣಿ ಸದಸ್ಯ ನಾರಾಯಣ ಗಟ್ಟಿ,ಸ್ಲಂ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮುರಳೀಧರ್ ಬೊಳಾರ,ಮನಪಾ ಸದಸ್ಯರಾದ ದಿವಾಕರ್ ಪಾಂಡೇಶ... |
ಸ್ಥಾನ: ಮುಖಪುಟ » ಪೋಸ್ಟ್ ಮಾಡಲಾಗುತ್ತಿದೆ » ಪಾಕಶಾಲೆ » ಗ್ರೇಟೆಸ್ಟ್ ಸೀಫುಡ್ ಡಿಶ್: ಬಾರ್ಬಡೋಸ್‌ನಿಂದ ಫ್ಲೈಯಿಂಗ್ ಫಿಶ್ ಮತ್ತು ಕೂ ಕೂ |
ಅಡುಗೆ ಮತ್ತು ಕಾಕ್‌ಟೇಲ್‌ಗಳ ಚಿತ್ರ ಕೃಪೆ |
ಬಾರ್ಬಡೋಸ್‌ನ ರಾಷ್ಟ್ರೀಯ ಖಾದ್ಯವೆಂದು ಪರಿಗಣಿಸಲಾಗಿದೆ, ಫ್ಲೈಯಿಂಗ್ ಫಿಶ್ ಮತ್ತು ಕೌ ಕೌ ಸಮುದ್ರಾಹಾರ ಪ್ರಿಯರಿಗೆ ಪ್ರಯತ್ನಿಸಲು ಪರಿಪೂರ್ಣ ಪಾಕವಿಧಾನವಾಗಿದೆ. ರಸಭರಿತವಾದ, ಸಾಸಿ, ಮತ್ತು ಚೆನ್ನಾಗಿ ಮಸಾಲೆಯುಕ್ತ ಬಿಳಿ ಮೀನುಗಳನ್ನು ಕಾರ್ನ್‌ಮೀಲ್-ಆಧಾರಿತ ಬಾರ್ಬಡಿಯನ್ ಪ್ರಧಾನವಾದ ಕೂ ಕೂ ಜೊತೆ ನೀಡಲಾಗುತ್ತದೆ. ಈ ಬಾರ್ಬಡಿಯನ್ ಖಾದ್ಯವನ್ನು ಮನೆಯಲ್ಲಿ ಹೇಗೆ ತಯಾರಿಸಬೇಕೆಂದು ತಿಳಿಯಲು ಸಿದ... |
ಫ್ಲೈಯಿಂಗ್ ಫಿಶ್ ಮತ್ತು ಕೌ ಕೋ ಅನ್ನು ಹೇಗೆ ಮಾಡುವುದು? |
ಬಾರ್ಬಡೋಸ್‌ನ ಪಾಕಪದ್ಧತಿಯು ಅದ್ಭುತವಾದ, ವೈವಿಧ್ಯಮಯ ಭಕ್ಷ್ಯಗಳನ್ನು ರಚಿಸಲು ಇಂಗ್ಲೆಂಡ್, ಭಾರತ ಮತ್ತು ಆಫ್ರಿಕಾದ ಪ್ರಭಾವಗಳನ್ನು ಬೆರೆಸುವ ಸ್ಟ್ಯಾಂಡ್-ಔಟ್ ಸುವಾಸನೆಯ ಅದ್ಭುತ ಕರಗುವ ಮಡಕೆಯಾಗಿದೆ. |
ಬಜನ್ ಬಾಣಸಿಗರು ಪ್ರಪಂಚದ ಕೆಲವು ರುಚಿಕರವಾದ ಭಕ್ಷ್ಯಗಳನ್ನು ರಚಿಸಲು ತಾಜಾ ಸ್ಥಳೀಯ ಉತ್ಪನ್ನಗಳ ಸುಂದರವಾದ ಬೌಂಟಿಯನ್ನು ಬಳಸುತ್ತಾರೆ. ನೀವು ದ್ವೀಪದಲ್ಲಿ ಎದುರಿಸಬಹುದಾದ ವಿಶಿಷ್ಟವಾದ ಬಜಾನ್ ಭಕ್ಷ್ಯಗಳು ತಿಳಿಹಳದಿ ಪೈ, ಮೀನಿನ ಕೇಕ್, ಅಕ್ಕಿ ಮತ್ತು ಬಟಾಣಿ, ಕಂಕೀಸ್, ತೆಂಗಿನಕಾಯಿ ವಹಿವಾಟುಗಳು ಮತ್ತು ಬಾರ್ಬಡೋಸ್ ರಾಷ್ಟ್ರೀಯ ಖಾದ್ಯ ಫ್ಲೈಯಿಂಗ್ ಫಿಶ್ ಮತ್ತು ಕೋ ಕೌ. |
ಬಾರ್ಬಡೋಸ್‌ನಲ್ಲಿ ಅನೇಕ ಅದ್ಭುತ ಭಕ್ಷ್ಯಗಳ ಹೊರತಾಗಿಯೂ, ಇಂದು ನಾವು ಫ್ಲೈಯಿಂಗ್ ಫಿಶ್ ಮತ್ತು ಕೋ ಕೌ ರೆಸಿಪಿಗಳನ್ನು ಕುರಿತು ಮಾತನಾಡಲಿದ್ದೇವೆ ಏಕೆಂದರೆ ನೀವು ತಪ್ಪಿಸಿಕೊಳ್ಳಲು ಬಯಸದ ಒಂದು ಬಜನ್ ಖಾದ್ಯವಿದ್ದರೆ, ಅದು ಇಲ್ಲಿದೆ! |
ಬಾರ್ಬಡೋಸ್‌ನ ರಾಷ್ಟ್ರೀಯ ಭಕ್ಷ್ಯವು ಅಸಾಧಾರಣ ಊಟವಾಗಿದೆ ಮತ್ತು ಸ್ಥಳೀಯ ಜನರು ಸಾಕಷ್ಟು ಹೆಮ್ಮೆಪಡುತ್ತಾರೆ. |
ಕಾರ್ಯಕ್ರಮದ ನಕ್ಷತ್ರವು ಆವಿಯಲ್ಲಿ ಬೇಯಿಸಿದ ಅಥವಾ ಹುರಿದ ಹಾರುವ ಮೀನಿನ ಫಿಲೆಟ್ ಆಗಿದೆ, ಇದು ಕೋಯು ಕೋನ ಬದಿಯೊಂದಿಗೆ ಇರುತ್ತದೆ, ಇದು ಪಾಕಪದ್ಧತಿಯ ಪರಿಚಯವಿಲ್ಲದವರಿಗೆ ಪೊಲೆಂಟಾ ಅಥವಾ ಗ್ರಿಟ್ಸ್ ಅನ್ನು ನೆನಪಿಸುತ್ತದೆ. ನಿಂಬೆ ರಸ, ಮಸಾಲೆಗಳು ಮತ್ತು ತಾಜಾ ತರಕಾರಿಗಳು ಸುವಾಸನೆಯನ್ನು ಒಂದು ಹಂತಕ್ಕೆ ತೆಗೆದುಕೊಂಡು, ಅದ್ಭುತವಾದ, ಅಧಿಕೃತ ಬಜನ್ ಊಟವನ್ನು ರಚಿಸುತ್ತವೆ. |
ನೀವು ಶೀಘ್ರದಲ್ಲೇ ಬಾರ್ಬಡೋಸ್‌ಗೆ ಭೇಟಿ ನೀಡುತ್ತಿದ್ದರೆ, ನಿಮಗೆ ಹಸಿವನ್ನು ತರುವುದು ಉತ್ತಮ. ಕೆಲವು ಕ್ಷಣಗಳಲ್ಲಿ ನಾವು ನಿಮಗೆ ಖಾದ್ಯದ ಕುರಿತು ಹೆಚ್ಚಿನದನ್ನು ಹೇಳುತ್ತೇವೆ, ಆದರೆ ಮೊದಲು, ಇಲ್ಲಿ ಕೆಲವು ಹಿನ್ನೆಲೆ ಇದೆ. |
ಹಾರುವ ಮೀನು ಎಂದರೇನು? |
ಹಾರುವ ಮೀನು ಬಾರ್ಬಡೋಸ್ ದ್ವೀಪಕ್ಕೆ ಸ್ಥಳೀಯವಾದ ಒಂದು ರೀತಿಯ ಮೀನು. ವಾಸ್ತವವಾಗಿ, ಮೀನುಗಳು ಒಮ್ಮೆ ದ್ವೀಪದ ನೀರಿನಲ್ಲಿ ಎಷ್ಟು ಸಾಮಾನ್ಯವಾಗಿದ್ದವೆಂದರೆ ಬಾರ್ಬಡೋಸ್ ಅನ್ನು "ಹಾರುವ ಮೀನುಗಳ ನಾಡು" ಎಂದು ಕರೆಯಲಾಗುತ್ತದೆ. ಆದ್ದರಿಂದ, ಹಾರುವ ಮೀನುಗಳು ಬಜನ್ ರಾಷ್ಟ್ರೀಯ ಖಾದ್ಯದ ಮುಖ್ಯ ಅಂಶವಾಗಿದೆ ಎಂದು ಆಶ್ಚರ್ಯವೇನಿಲ್ಲ. |
ಹಾರುವ ಮೀನು ಬಜಾನ್ ಜನರಿಗೆ ತುಂಬಾ ಮುಖ್ಯವಾಗಿದೆ, ರಾಷ್ಟ್ರೀಯ ಕರೆನ್ಸಿಯಲ್ಲಿ ಹಾರುವ ಮೀನನ್ನು ಚಿತ್ರಿಸುವ ಚಿಹ್ನೆಯನ್ನು ನೀವು ನೋಡುತ್ತೀರಿ ಮತ್ತು ಇದು ಬಾರ್ಬಡೋಸ್ ಪ್ರವಾಸೋದ್ಯಮ ಪ್ರಾಧಿಕಾರದ ಲೋಗೋದಲ್ಲಿಯೂ ಸಹ ಕಾಣಿಸಿಕೊಂಡಿದೆ. |
ದ್ವೀಪದಾದ್ಯಂತ ರೆಸ್ಟೋರೆಂಟ್‌ಗಳಲ್ಲಿ ನೀವು ಇನ್ನೂ ಹಾರುವ ಮೀನುಗಳನ್ನು ಮೆನುಗಳಲ್ಲಿ ಕಾಣಬಹುದು. ಫ್ಲೈಯಿಂಗ್ ಮೀನಿನ ರುಚಿಯನ್ನು ಸರಳವಾಗಿ ಬೇಯಿಸಲಾಗುತ್ತದೆ, ಆಮ್ಲೀಯ ನಿಂಬೆ ರಸದೊಂದಿಗೆ ಆವಿಯಲ್ಲಿ ಬೇಯಿಸಲಾಗುತ್ತದೆ ಮತ್ತು ಇದು ಅದ್ಭುತವಾಗಿ ಹುರಿಯಲಾಗುತ್ತದೆ. ಸ್ಥಳೀಯರು ನೀಡುವ ಸಾಂಪ್ರದಾಯಿಕ ಫ್ಲೈಯಿಂಗ್ ಫಿಶ್ ರೆಸಿಪಿಯನ್ನು ಪ್ರಯತ್ನಿಸಲು ಬಜನ್ ಫಿಶ್ ಫ್ರೈಗೆ ಹೋಗಿ. |
Cou Cou ಎಂದರೇನು? |
Cou cou ನೀವು ಬಾರ್ಬಡೋಸ್‌ನಲ್ಲಿ ಬಹಳಷ್ಟು ಕಾಣುವ ಭಕ್ಷ್ಯವಾಗಿದೆ, ಆದರೆ ಇದು ಪ್ರಪಂಚದ ಉಳಿದ ಭಾಗಗಳಲ್ಲಿ ಹೆಚ್ಚು ಪ್ರಚಲಿತವಾಗಿಲ್ಲ. ನೀವು ಇದನ್ನು ಹಿಂದೆಂದೂ ಪ್ರಯತ್ನಿಸದಿದ್ದರೆ, ಪೊಲೆಂಟಾ ಅಥವಾ ಗ್ರಿಟ್‌ಗಳ ವಿನ್ಯಾಸವನ್ನು ಹೋಲುವದನ್ನು ಕಲ್ಪಿಸಿಕೊಳ್ಳಿ. |
ಇದನ್ನು ಜೋಳದ ಹಿಟ್ಟು ಮತ್ತು ಬೆಂಡೆಕಾಯಿಯ ಸಂಯೋಜನೆಯಿಂದ ತಯಾರಿಸಲಾಗುತ್ತದೆ. ಎರಡು ಪದಾರ್ಥಗಳು ಒಂದು ರೀತಿಯ ಖಾರದ ಗಂಜಿ ರೂಪಿಸಲು ಒಟ್ಟಿಗೆ ಗೊಂದಲಗೊಳ್ಳುತ್ತವೆ. ಬಾರ್ಬಡೋಸ್‌ನಲ್ಲಿನ ಕೌ ಕೌ ಬಿಸಿಮಾಡುವ ಮತ್ತು ಸಾಂತ್ವನ ನೀಡುವ ಖಾದ್ಯವಾಗಿದ್ದು ಅದು ಕೆಲವು ಮಸಾಲೆಯುಕ್ತ ಬಜನ್ ಭಕ್ಷ್ಯಗಳೊಂದಿಗೆ ಸಂಪೂರ್ಣವಾಗಿ ಹೋಗುತ್ತದೆ - ಹಾರುವ ಮೀನಿನಂತೆ! ಮಸಾಲೆಯುಕ್ತ ಸಾಸ್‌ಗಳೊಂದಿಗೆ ಇದು ಅದ್ಭುತವಾ... |
ಸಾಮಾನ್ಯವಾಗಿ, cou cou ಅನ್ನು ಸಾಂಪ್ರದಾಯಿಕ ರೀತಿಯಲ್ಲಿ ನೀಡಲಾಗುತ್ತದೆ, ಇದು ದಂತಕವಚ ಬೌಲ್ ಅನ್ನು ಬಳಸಿಕೊಂಡು ಅಂಡಾಕಾರದ ಆಕಾರದಲ್ಲಿ ರೂಪಿಸುವ ಮೂಲಕ. ಅಥವಾ, ನೀವು ನಿಜವಾಗಿಯೂ ಅಧಿಕೃತವಾಗಿರಲು ಬಯಸಿದರೆ, ಉಷ್ಣವಲಯ ಮತ್ತು ಅಮೆರಿಕಾದಲ್ಲಿ ಕಾಡಿನಲ್ಲಿ ಬೆಳೆಯುವ ಮರದ ಹಣ್ಣಿನಿಂದ ನೀವು ಕ್ಯಾಲಬಾಶ್ ಶೆಲ್ ಅನ್ನು ಬಳಸುತ್ತೀರಿ. Cou cou ಅನ್ನು ಬ್ರೆಡ್‌ಫ್ರೂಟ್, ಗೆಣಸು ಅಥವಾ ಹಸಿರು ಬಾಳೆಹ... |
ಫ್ಲೈಯಿಂಗ್ ಫಿಶ್ ಮತ್ತು ಕೂ ಕೂ ರೆಸಿಪಿ |
ಸಾಂಪ್ರದಾಯಿಕವಾಗಿ, ಬಜನ್ ಜನರು ಶುಕ್ರವಾರ ಅಥವಾ ಶನಿವಾರದಂದು ಈ ಪಾಕವಿಧಾನವನ್ನು ಬೇಯಿಸುತ್ತಾರೆ, ಆದರೆ ನೀವು ನಿಮ್ಮದೇ ಆದದನ್ನು ಮಾಡಲು ಕಲಿತರೆ ನೀವು ಬಯಸಿದಾಗ ಅದನ್ನು ಬಡಿಸಬಹುದು! ಉಷ್ಣವಲಯದ ಈ ರುಚಿಕರವಾದ ರುಚಿಯೊಂದಿಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಮೆಚ್ಚಿಸಿ. ಅದನ್ನು ಹೇಗೆ ತಯಾರಿಸುವುದು ಎಂಬುದು ಇಲ್ಲಿದೆ. |
ಮೀನುಗಳಿಗೆ: |
ಹಾರುವ ಮೀನುಗಳ 4 ಫಿಲೆಟ್ (ನೀವು ವಾಸಿಸುವ ಸ್ಥಳದಲ್ಲಿ ಇದು ಲಭ್ಯವಿಲ್ಲದಿದ್ದರೆ, ನೀವು ಸಮುದ್ರ ಬಾಸ್ ಅನ್ನು ಬದಲಿಸಬಹುದು) |
ಒಂದು ಸುಣ್ಣದ ರಸ |
ಬೆಳ್ಳುಳ್ಳಿ ಪುಡಿ ಪಿಂಚ್ |
3 ವಸಂತ ಈರುಳ್ಳಿ |
1 ಟೀಸ್ಪೂನ್ ತಾಜಾ ಶುಂಠಿ |
1 ಸ್ಕಾಚ್ ಬಾನೆಟ್ ಮೆಣಸಿನಕಾಯಿ |
1 tbsp ಥೈಮ್ ಎಲೆಗಳು |
1/2 ಟೀಸ್ಪೂನ್ ಮಿಶ್ರ ಮಸಾಲೆ |
1 ಸುಣ್ಣ |
100 ಮಿಲಿ ವಿನೆಗರ್ |
Subsets and Splits
No community queries yet
The top public SQL queries from the community will appear here once available.