text
stringlengths
0
61.5k
ಗೇರುಸೊಪ್ಪೆ ಗೇರುಸೊಪ್ಪೆ ಜಲಪಾತಕ್ಕೂ ಹೊನ್ನಾವರಕ್ಕೂ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಒಂದು ಹಳ್ಳಿ. ಶರಾವತಿಯ ಎಡದಂಡೆಯ ಮೇಲೆ, ತೆಂಗಿನ ತೋಪುಗಳ ಮಧ್ಯೆ, ಜಲಪಾತದಿಂದ 29 ಕಿಮೀ ದೂರದಲ್ಲೂ ಹೊನ್ನಾವರದಿಂದ 28 ಕಿಮೀ ದೂರದಲ್ಲೂ ಇದೆ.
ಗೊಮ್ಮಟ ಸ್ತುತಿ ಎಂದು ಕರೆಯಲಾಗುವ ಒಂದು ಶಾಸನ ಶ್ರವಣಬೆಳಗೊಳದಲ್ಲಿದೆ. ಬೊಪ್ಪಣ ಪಂಡಿತ ಎಂಬಾತ ಈ ಶಾಸನದ ಕರ್ತೃ. ಇದರ ಕಾಲ ಕ್ರಿ.ಶ. ಸುಮಾರು ೭೦೦. ಇದನ್ನು ಮೊದಲಿಗೆ ಓದಿದವರು ಬಿ.ಎಲ್.ರೈಸ್. ನಂದಿಸೇನ ಮುನಿಯು ಇಹಲೋಕದ ಸುಖ ವೈಭವಗಳು ಚಂಚಲ ಎಂಬುದನ್ನು ಮನಗಂಡು ವೈರಾಗ್ಯದಿಂದ ಸಂನ್ಯಾಸ ಹಿಡಿದು ದೇವಲೋಕ ...
ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ ೧೯೮೦ರ ದಶಕದಲ್ಲಿ ನಡೆದ ಒಂದು ಚಳವಳಿ/ಆಂದೋಲನವೇ ಗೋಕಾಕ್ ಚಳವಳಿ ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕು ಎನ್ನವಂತಹ ಹಲವಾರು ಬೇಡಿಕೆಗಳನ್ನೊಳಗೊಂಡ ವರದಿಯೊಂದನ್ನು ಕ ...
ಚಾವುಂಡರಾಯ ೧೦ ನೇ ಶತಮಾನದ ವೀರಪರಂಪರೆಯನ್ನು ಅನುಸರಿಸಿ ಕವಿ ಹಾಗೂ ಕಲಿ ಎರಡೂ ಆಗಿದ್ದ ಸವ್ಯಸಾಚಿ. ತಾಯಿ ಕಾಳಲಾದೇವಿ. ಇವನಿಗೆ ನಾಗವರ್ಮನೆಂಬ ತಮ್ಮನಿದ್ದ. ಇವನ ಮಗ ಜಿನದೇವ. ಚಾಮುಂಡರಾಯ ನು ಪಶ್ಚಿಮ ಗಂಗರ ಆಧಿಪತ್ಯದ ಗಂಗವಾಡಿ ಸೀಮೆಯ ರಾಜ ೨ನೇ ಮಾರಸಿಂಹ ಇವನ ಹಿರಿಯಮಗ ೪ ನೇ ರಾಚಮಲ್ಲ ಮತ್ತು ಅವನ ತಮ್ಮ ...
ನೊಳಂಬ - ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿ ...
{{#if:| ಬಳ್ಳಿಗಾವೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ. ದಕ್ಷಿಣದ ಕೇದಾರನಾಥವೆಂದು ಕರೆಯಲ್ಪಡುತ್ತದೆ. ಶಿಕಾರಿಪುರ ಪಟ್ಟಣದಿಂದ ಸುಮಾರು ೨೧ ಕಿ.ಮೀ ದೂರವಿರುವ ಈ ಪುಟ್ಟ ಹಳ್ಳಿ ಆಲ್ಲಮಪ್ರಭುಗಳ ಜನ್ಮಸ್ಥಳವೂ ಹೌದು. ಹೊಯ್ಸಳರ ವಿಷ್ಣುವರ್ಧನನ ರಾಣಿ ಶಾಂತಲಾದೇವಿಯ ...
ಲೆಫ್ಟಿನೆಂಟ್ ಜನರಲ್ ಸರ್ ಮಾರ್ಕ್ ಕಬ್ಬನ್ ಆರ್ಡರ್ ಆಫ್ ದಿ ಬಾತ್ ಬಿರುದುಈಸ್ಟ್‌ಇಂಡಿಯ ಕಂಪೆನಿಯ ಬ್ರಿಟಿಷ್ ಸೇನಾಧಿಕಾರಿಯಾಗಿದ್ದರು. ಅವರು 1834ರಲ್ಲಿ ಮೈಸೂರು ರಾಜ್ಯದ ಬ್ರಿಟಿಷ್ ಕಮೀಷನರ್ ಆಗಿದ್ದರು. ಅವರು 1860ರವರೆಗೆ ಈ ಹುದ್ದೆಯಲ್ಲಿದ್ದರು. ಮೈಸೂರಿನಿಂದ ಬೆಂಗಳೂರಿಗೆ ಅವರು ರಾಜಧಾನಿಯನ್ನು ಬದಲ ...
ಮೈಸೂರು ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಇದು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಮೈಸೂರು ಅನೇಕ ಶತಮಾನಗಳ ಮೈಸೂರು ಸಂಸ್ಥಾನ ಆಳಿದ ಒಡೆಯರ್ ರಾಜರ ರಾಜಧಾನಿಯಾಗಿತ್ತು. ಒಡೆಯರ್ಗಳು ಕಲೆ ಮತ್ತು ಸಂಗೀತದ ಮಹಾನ್ ಆಶ್ರಯದಾತರು ಹಾಗೂ ಮೈಸೂರನ್ನು ಸಾಂಸ್ಕೃತಿಕ ಕೇಂದ್ರ ಮಾಡಲು ಬೆಳ ...
ಯಾರೂ ಇರಲಿಲ್ಲ ೧೮೩೪ - ೧೮೩೮ ಬಾಬು ರಾವ್ ಮತ್ತೊಮ್ಮೆ ೧೮೨೦ - ೧೮೨೧ ಕೊಲ ಕ್ರಿಷ್ನಮ ನಾಡು ೧೮೪೪ - ೧೮೫೮ ಸಿದ್ಧರಾಜ್ ಅರಸ್ ೧೮೧೮ - ೧೮೨೦ ಲಿಂಗರಾಜ್ ಅರಸ್ ೧೮೨೧ - ೧೮೨೨ ಪೂರ್ಣಯ್ಯ ೧೭೯೯ - ೧೮೧೧ ಕೊಲ್ಲಮ್ ವೆಂಕಟ ರಾವ್ ೧೮೪೦ - ೧೮೪೪ ಬಾಬು ರಾವ್ ಮತ್ತೊಮ್ಮೆ ೧೮೩೨ - ೧೮೩೪ ಬರ್ಗೀರ್ ಬಕ್ಷಿ ಬಾಲಾಜಿ ರ ...
ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. ದಂತಿದುರ್ಗನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ ಮಾನ್ಯಖೇಟದಿಂದ ಆಳ್ವಿಕೆ ನಡೆಸಿದರು. ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ. ಈ ಅರ್ಥದಲ್ಲಿ ಇದು ಅಶೋಕನ ಕಾಲದಿಂದ ರಾಜಕೀಯ ವ್ ...
ವಿಜಯನಗರ ಸಾಮ್ರಾಜ್ಯ: ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ ವೀರ ರಾಜಕುಮಾರನಾದ ಕುಮಾರರಾಮ ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ...
ಸುಮಾರು ಕ್ರಿ.ಶ 1000 ದಿಂದ ಕ್ರಿ.ಶ 1346 ದಕ್ಷಿಣ ಭಾರತದಲ್ಲಿ ಆಳ್ವಿಕೆ ಮಾಡಿದವರು ಹೋಯ್ಸಳ ವಂಶದವರು.ಹೋಯ್ಸಳರಲ್ಲಿ ಅತಿ ಪ್ರಮುಖರಾದವನು ವಿಷ್ಣುವರ್ಧನ ಅವನ ನಂತರ ಹೆಸರು ಪಡೆದವನು ಇಮ್ಮಡಿ ವೀರಬಲ್ಲಾಳ.ಇವನ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲೇ ಅತ್ಯಂತ ಬಲಿಷ್ಟವಾದ ರಾಜ್ಯವೆಂದು ಪಡೆ ...
ಹರಿಹರ I 1336-1356 CE ಹಕ್ಕ ಮತ್ತು ವೀರ ಹರಿಹರ I ಎಂದೂ ಕರೆಯಲ್ಪಡುವ ವಿಜಯನಗರ ಸಾಮ್ರಾಜ್ಯದ ಸ್ಥಾಪಕರು. ಭಾವನ ಸಂಗಮರ ಹಿರಿಯ ಮಗ ಮತ್ತು ಸಂಗಮ ರಾಜವಂಶದ ಸ್ಥಾಪಕರಾಗಿದ್ದರು. ಸಂಗಮ ರಾಜವಂಶವು ವಿಜಯನಗರವನ್ನು ಆಳಿದ ನಾಲ್ಕು ರಾಜವಂಶಗಳಲ್ಲಿ ಮೊದಲನೆಯದು. ಹಕ್ಕ ಮತ್ತು ಅವನ ಸಹೋದರ ಬುಕ್ಕನ ಆರಂಭಿಕ ಜೀವ ...
೨ನೆಯ ಹರಿಹರ ವಿಜಯನಗರ ಸಾಮ್ರಾಜ್ಯದ, ಸಂಗಮ ರಾಜವಂಶದ ಚಕ್ರವರ್ತಿ. ಜೈನ ಕನ್ನಡ ಕವಿ ಮಧುರ ಈತನ ಆಸ್ಥಾನ ಕವಿ. ವೇದಗಳ ಪ್ರಮುಖ ಕೆಲಸ ಈತನ ಸಮಯದಲ್ಲಿ ಪೂರ್ಣಗೊಂಡಿತು. ವೈದಿಕ ಮಾರ್ಗ ಸ್ಥಾಪನಾಚರ್ಯ ಮತ್ತು ವೇದಮಾರ್ಗ ಪ್ರವರ್ತಕ ೨ನೆಯ ಹರಿಹರನ ಬಿರುದುಗಳು.
{{#if:| ಹಲ್ಮಿಡಿ ಕರ್ನಾಟಕದ ಹಾಸನ ಜಿಲ್ಲೆಯ ಒಂದು ಹಳ್ಳಿ. ಇಲ್ಲಿ ಕನ್ನಡದ ಮೊಟ್ಟಮೊದಲ ಶಾಸನ ಕ್ರಿ.ಶ.೪೫೦ರಲ್ಲಿ ದೊರಕಿದೆ. ಕದಂಬರ ಅರಸ ಕಾಕುಸ್ಥವರ್ಮ ಬರೆಸಿದ ಶಾಸನ ಇದಾಗಿದೆ.ಹಲ್ಮಿಡಿ ಎಂಬುದು ಒಂದು ಊರಿನ ಹೆಸರಾಗಿದ್ದು, ಈ ಊರು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿದೆ. ಹಾಸನ-ಬೇಲೂರು-ಚಿಕ್ಕಮಗಳ ...
ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ, ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗ ...
ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು ವಿಷ್ಣುವರ್ಧನ. ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗ ...
ಹೆಚ್ಚುವರಿ ಬಸ್ ಓಡಿಸದೆ ಲಾಕ್‍ಡೌನ್ ಘೋಷಿಸಿದ್ಯಾಕೆ..?: ಯುವತಿ ಅಸಮಾಧಾನ - Public TV
ಉಡುಪಿ: ಲಾಕ್‍ಡೌನ್ ಗೆ ಭಯಗೊಂಡು ಜನ ಉಡುಪಿ ಬಿಡುತ್ತಿದ್ದಾರೆ. ಉತ್ತರ ಕರ್ನಾಟಕದ ಕೂಲಿಕಾರ್ಮಿಕರು ರಾಜ್ಯದ ವಿವಿಧ ಭಾಗದ ಉದ್ಯೋಗಿಗಳು ವಿದ್ಯಾರ್ಥಿಗಳು ತಮ್ಮ ಊರಿನ ಹೊರಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ಕೊಪ್ಪಳ ಬಿಜಾಪುರದ ಸಾವಿರಾರು ಜನ ಉಡುಪಿಗೆ ಕೂಲಿ ಅರಸಿ ಬರುತ್ತಾರೆ. ರಾಜ್ಯ ಸರ್ಕಾರ 14 ದಿನ ಜನತಾ ಕಫ್ರ್ಯೂ ಘೋಷಿಸಿರುವುದರಿಂದ ಜನರು ಗಾಯಗೊಂಡಿದ್ದಾರೆ. ಲಾಕ್‍ಡೌನ್ ಮತ್ತೆ ಒಂದು ತಿಂಗಳುಗಳ ಕಾಲ ವಿಸ್ತರಿಸುವ ಸಾಧ್ಯತೆ ಇದೆ ಎಂದು ಭೀತರಾಗಿ ತಮ್ಮ ಊರುಗಳಿಗೆ ಸೇರುತ್ತಿದ್ದಾರೆ.
ಗಂಟು ಮೂಟೆ ಬ್ಯಾಗ್ ಗೋಣಿಚೀಲ ಹೊತ್ತು ಸಾಗುವ ದೃಶ್ಯ ಉಡುಪಿಯ ಪ್ರಮುಖ ರಸ್ತೆಗಳಲ್ಲಿ ಕಂಡುಬರುತ್ತಿದೆ. ಹೊರ ಜಿಲ್ಲೆಗೆ ಹೋಗುವ ಖಾಸಗಿ ಸರ್ಕಾರಿ ಬಸ್ಸುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಏಕಾಏಕಿ ಲಾಕ್‍ಡೌನ್ ಮಾಡಿ ಸೂಕ್ತ ಸಾರಿಗೆ ವ್ಯವಸ್ಥೆಗಳನ್ನು ಸರ್ಕಾರ ಮಾಡಿಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಕೌಂಟೆಂಟ್ ಉದ್ಯೋಗಿ ನಾಗರತ್ನ, ನಾನು ಗೀತಾಂಜಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಉದ್ಯೋಗಿ. ಶಿರಸಿಗೆ ಹೊರಟಿದ್ದೇನೆ. ಬಸ್ಸಿನಲ್ಲಿ ಐವತ್ತು ಜನ ಮಾತ್ರ ಹಾಕಿ ಅಂತ ಹೇಳುತ್ತಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳು ಇಲ್ಲ. ಬಸ್ ವ್ಯವಸ್ಥೆ ಮಾಡದೆ ಲಾಕ್‍ಡೌನ್ ಘೋಷಿಸಿರುವುದು ಸರಿಯಾ? ಇದೇ ಬಸ್ಸನ್ನು ಕೊನೆಯ ಬಸ್ಸು ಅಂತ ಹೇಳುತ್ತಿದ್ದಾರೆ. ನಾವು ಟಿಕ...
ಕರ್ಫ್ಯೂ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರದಿಂದ ತೀರ್ಮಾನ: ಸದಾನಂದ ಗೌಡ | Udayavani – ಉದಯವಾಣಿ
Wednesday, 18 May 2022 | UPDATED: 08:07 AM IST
ಕರ್ಫ್ಯೂ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರದಿಂದ ತೀರ್ಮಾನ: ಸದಾನಂದ ಗೌಡ
ಬೆಂಗಳೂರು: ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಯಶಸ್ವಿಯಾಗಿದೆ. ಇದರ ಫಲಿತಾಂಶ 10 ರಿಂದ 14 ದಿನಗಳ ನಂತರ ಗೊತ್ತಾಗಲಿದೆ. ವೀಕೆಂಡ್ ಕರ್ಫ್ಯೂ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.
ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕೋವಿಡ್ ಸೋಂಕು ನಿಯಂತ್ರಣವನ್ನು ಯಶಸ್ವಿಯಾಗಿ ಮಾಡುತ್ತಿದೆ. ಆದರೆ, ಬೆಂಗಳೂರಿನಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ನಾವು ತುಂಬಾ ಜಾಗರೂಕತೆಯಿಂದ ಇರಬೇಕು ಎಂದರು.
ಇದನ್ನೂ ಓದಿ:ಕೆ.ಸಿ ಜನರಲ್ ಆಸ್ಪತ್ರೆಯ ಕೋವಿಡ್ ವಾರ್ಡ್ ಗೆ ತೆರಳಿ ಸೋಂಕಿತರ ಯೋಗಕ್ಷೇಮ ವಿಚಾರಿಸಿದ ಡಿಸಿಎಂ
ಕೋವಿಡ್ ನಿಯಂತ್ರಿಸಲು ರಾಜ್ಯಕ್ಕೆಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೇಂದ್ರ ಸರಕಾರ ಒಗದಿಸಿಕೊಡಲು ಸಿದ್ದವಿದೆ ಎಂದರು.
ಕೇಂದ್ರದಿಂದ ಎಲ್ಲಾ ನೆರವು ರಾಜ್ಯಕ್ಕೆ ನೀಡುತ್ತೇವೆ. ಮುಂದಿನ 10 ದಿನ ಕಠಿಣ ಇರಬಹುದು. ನಂತರ ಕಡಿಮೆಯಾಗುವ ಸಾಧ್ಯತೆ ಇದೆ. ಮೂರನೇ ಅಲೆಗೆ ಹೋಗಬಾರದು ಎಂದರೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಅದು ಎಲ್ಲರ ಜವಾಬ್ದಾರಿ. ಹಾಗೆಯೇ ಎಲ್ಲರಿಗೂ ಲಸಿಕೆ ಹಾಕುವುದು ನಮ್ಮ ಜವಾಬ್ದಾರಿ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.
'ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗಕ್ಕೆ ಅಧಿಕ ಜವಾಬ್ಧಾರಿ' | Vivekananda College Puttur 'ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗಕ್ಕೆ ಅಧಿಕ ಜವಾಬ್ಧಾರಿ' – Vivekananda College Puttur
Home > News and Events > 'ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗಕ್ಕೆ ಅಧಿಕ ಜವಾಬ್ಧಾರಿ'
'ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗಕ್ಕೆ ಅಧಿಕ ಜವಾಬ್ಧಾರಿ'
ಪುತ್ತೂರು: ಇಂದು ಜಾಗತೀಕರಣದ ಪರಿಣಾಮದಿಂದಾಗಿ ಇಡೀ ವಿಶ್ವವೇ ಔದ್ಯೋಗಿಕ ಕ್ಷೇತ್ರದ ಮೂಲವಾಗಿ ಪರಿಣಮಿಸಿದ್ದು, ಯಾವುದೇ ಸಂಸ್ಥೆಗಳಲ್ಲಿ ವಿವಿಧ ದೇಶದ ಮಂದಿ ಅವಕಾಶ ಪಡೆಯುವುದಕ್ಕೆ ಸಾಧ್ಯವಾಗುತ್ತಿದೆ. ಹೀಗೆ ನಾನಾ ರಾಷ್ಟ್ರಗಳಿಂದ, ನಾನಾ ಸಂಸ್ಕೃತಿಗಳಿಂದ ಬಂದ ಮಂದಿಯನ್ನು ಒಂದೇ ಸೂರಿನಡಿ, ಒಂದೇ ತೆರನಾಗಿ ಮುನ್ನಡೆಸಿಕೊಂಡು ಹೋಗುವುದು ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಜವಾಬ್ಧಾರಿಯಾಗಿದೆ ಎಂ...
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ಶಾಸ್ತ್ರ ಹಾಗೂ ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಮರ್ಜಿಂಗ್ ಟ್ರೆಂಡ್ಸ್ ಇನ್ ಎಚ್.ಆರ್.ಎಂ ಎಂಬ ವಿಷಯದ ಬಗೆಗೆ ಮಾತನಾಡಿದರು.
ಮಾನವ ಸಂಪನ್ಮೂಲ ವಿಭಾಗವು ಸಂಸ್ಥೆಯ ವಿವಿಧ ವಿಷಯಗಳ ಬಗೆಗೆ ತೀರ್ಮಾನ ಕೈಗೊಳ್ಳುವಾಗ ಉದ್ಯೋಗಿಗಳನ್ನೂ ಒಳಗೊಂಡು ಕಾರ್ಯನಿರ್ವಹಿಸಬೇಕು. ಆಗ ನಿರ್ವಹಣೆ ಸುಲಭ ಸಾಧ್ಯವಾಗುತ್ತದೆ. ಅಲ್ಲದೆ ಉದ್ಯೋಗಿಗಳ ಬಗೆಗೆ ಅತ್ಯಂತ ಹೆಚ್ಚು ಕಾಳಜಿಯನ್ನು ಹೊಂದಿರಬೇಕು. ಪ್ರತಿಯೊಬ್ಬನ ಬಗೆಗೂ ಕ್ಷೇಮಾಭಿವೃದ್ಧಿಯ ಯೋಚನೆ ಹೊಂದಿರಬೇಕು. ಆಗ ಮಾತ್ರ ಸಂಸ್ಥೆ ಸುಸ್ಥಿರವಾಗಿ ಸಾಗಲು ಸಾಧ್ಯ ಎಂದು ನುಡಿದರು.
ಯಾಔಉದೇ ಸಂಸ್ಥೆಯಲ್ಲಿ ಅಭಿಪ್ರಾಯ ಸಂಗ್ರಹ ವ್ಯವಸ್ಥೆ ಇರುವುದು ಒಳ್ಳೆಯದು. ಕಾಲಕಾಲಕ್ಕೆ ಉದ್ಯೋಗಿಗಳ ಅಭಿಪ್ರಾಯವನ್ನು ಕೇಳುವುದರಿಂದ ಸಂಸ್ಥೆಯ ಬೆಳವಣಿಗೆಗೆ ಸಹಾಯವಾಗುತ್ತದೆ. ಆಧುನಿಕ ದಿನಗಳ ತಾಂತ್ರಿಕ ಬೆಳವಣಿಗೆಯಿಂದಾಗಿ ಕಡಿಮೆ ಜನರು ಹಾಗೂ ಅಧಿಕ ಕೆಲಸ ಸಾಧ್ಯವಾಗುತ್ತಿದೆ. ಹೀಗಿರುವಾಗ ನಿರ್ವಹಣೆ ಸುಲಭವೆನಿಸುತ್ತಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ವಹಿಸಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗ ಹಾಗೂ ವ್ಯವಹಾರ ನಿರ್ವಹಣಾ ವಿಭಾಗಗಳ ಮುಖ್ಯಸ್ಥರುಗಳಾದ ಪ್ರೊ.ಆನಂದ ಹಾಗೂ ಪ್ರೊ.ವೆಂಕಟರಮಣ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಅನೂಷಾ ಸ್ವಾಗತಿಸಿ, ಸೌಜನ್ಯ ವಂದಿಸಿದರು. ಉಪನ್ಯಾಸಕ ಅತುಲ್ ಶೆಣೈ ಹಾಗೂ ಉಪನ್ಯಾಸಕಿ ಅಂಕಿತ ಕಾರ್ಯಕ್ರಮ ನಿರ್ವಹಿಸಿದರು.
ಸಂಪ್ಯ ಮಖಾಂ ಉರೂಸಿಗೆ ಚಾಲನೆ, ದ್ವಜಾರೋಹಣ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506
ಸಂಪ್ಯ ಮಖಾಂ ಉರೂಸಿಗೆ ಚಾಲನೆ, ದ್ವಜಾರೋಹಣ
ಧರ್ಮ ಮಾರ್ಗದಲ್ಲಿ ನಡೆದರೆ ಅಲ್ಲಾಹನ ಇಷ್ಟದಾಸನಾಗಲು ಸಾಧ್ಯ: ಸಯ್ಯದ್ ಇಸ್ಮಾಯಿಲ್ ಅಲ್‌ಬುಖಾರಿ
ಪುತ್ತೂರು: ಸಂಪ್ಯ ಮುಹಿಯುದ್ದೀನ್ ಜುಮಾಅತ್ ಕಮಿಟಿ ಅಧೀನದಲ್ಲಿ ಸಂಪ್ಯ ಸಾದಾತ್ ನಗರದಲ್ಲಿ ಜ.1 ರಿಂದ9 ರತನಕ ಒಂಬತ್ತು ದಿನಗಳ ಕಾಲ ನಡೆಯಲಿರುವ ಉರೂಸ್ ಕಾರ್ಯಕ್ರಮಕ್ಕೆ ಉರೂಸ್ ಕಮಿಟಿಯ ಗೌರವಾಧ್ಯಕ್ಷ ಸಯ್ಯದ್ ಇಸ್ಮಾಯಿಲ್ ತಂಙಳ್ ಅಲ್‌ಬುಖಾರಿ ಕೆ ಎಸ್ ಕೋಯಕುಟ್ಟಿ ತಂಙಳ್ ಮಾಡಾವುರವರು ದುವಾ ನೆರವೇರಿಸಿ ದ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಮನೆ ನೀಡಿ ಮಾತನಾಡಿದ ತಂಙಳ್‌ರವರು ನಾವು ಪ್ರತೀಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆಯುವವರಾಗಬೇಕು, ಅಲ್ಲಾಹನು ನಿಷೇಧಿಸಿದ ಕಾರ್ಯಗಳಿಂದ ದೂರವಿರುದ್ದ ಅವನಿಗೆ ಇಷ್ಟವಾದ ಆರಾಧನೆಗಳನ್ನು ಮಾಡುವ ಮೂಲಕ ನಾವು ಜೀವನದಲ್ಲಿ ಸತ್ಕರ್ಮಗಳನ್ನು ಮಾಡುವುದರಿಂದ ನಾವು ಉತ್ತಮವಾದ ಅಲ್ಲಾಹನ ದಾಸರಾಗಲು ಸಾಧ್ಯವಿದೆ. ಅಲ್ಲಾಹನು ಗೌರವಿಸಿದ ವ್ಯಕ್ತಿಗಳನ್ನು ನಾವು ಗೌರವಿಸಬೇಕು, ಪ್ರವಾದಿಯವರ ಸು...
ಸಂಪ್ಯ ಮುಹಿಯುದ್ದೀನ್ ಜಮಾತ್ ಕಮಿಟಿ ಅಧ್ಯಕ್ಷ ಎಸ್ ಅಬ್ದುಲ್ ಜಲೀಲ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸಂಪ್ಯ ಜುಮಾ ಮಸೀದಿ ಖತೀಬರಾದ ಅಬ್ದುಲ್ ಹಮೀದ್ ದಾರಿಮಿ ಸ್ವಾಗತ ಭಾಷಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂಪ್ಯ ಜಮಾತ್ ಕಮಿಟಿ ಉಪಾಧ್ಯಕ್ಷರುಗಳಾದ ಹಮಿದಾಲಿಸ್ ಸಂಟ್ಯಾರ್,ಎಸ್ ಅಬೂಬಕ್ಕರ್ ಸಂಪ್ಯ,ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ,ಕೋಶಾಧಿಕಾರಿ ಹಾಜಿ ಇಬ್ರಾಹಿಂ ಇಡಬೆಟ್ಟು,ಅಬೂಬಕ್ಕರ್ ಕಲ್ಲ...
ಜ.೧ ರಿಂದ ೯ ರತನಕ ಉರೂಸ್ ಕಾರ್ಯಕ್ರಮ ನಡೆಯಲಿದ್ದು ೯ ದಿನಗಳಲ್ಲಿ ವಿಶ್ವ ವಿಖ್ಯಾತ ಧಾರ್ಮಿಕ ಉಲಮಾಗಳಿಂದ ಪ್ರವಚನಗಳು ನಡೆಯಲಿದ್ದು, ಪ್ರಸಿದ್ದ ಇಸ್ಲಾಂ ಧಾರ್ಮಿಕ ವಿದ್ವಾಂಸರುಗಳು ಉರೂಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ದುವಾ ನೆರವೇರಿಸಲಿದ್ದಾರೆ. ಇಂದು ರಾತ್ರಿ ೭.೩೦ ಕ್ಕೆ ಪ್ರವಚನ ಆರಂಭವಾಗಲಿದ್ದು ಕೀಚೇರಿ ಅಬ್ದುಲ್ ಗಫೂರ್ ಮೌಳವಿಯವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ.
Previous : ಸಿಂಹವನ-ಪಂಜಳ: ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ಕೊರಗ ತನಿಯ ಅಜ್ಜ ದೈವದ ಪುನಃ ಪ್ರತಿಷ್ಠೆ-ಆಮಂತ್ರಣ ಪತ್ರಿಕೆ ಬಿಡುಗಡೆ
Next : ಮದ್ರಸ ಮಕ್ಕಳ ಕಲಾ ಸಾಹಿತ್ಯ ಸ್ಫರ್ದೆಯಲ್ಲಿ ರನ್ನರ್‍ಸ್ ಸ್ಥಾನ ಪಡೆದ ಕಟ್ಟತ್ತಾರು ಮದ್ರಸ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಡಿಸೆಂಬರ್​ವರೆಗೂ ಶಾಲೆಗಳ ಪುನಾರಂಭ ಇಲ್ಲ: ತಾಂತ್ರಿಕ ಸಮಿತಿ ಸಲಹೆ ಸ್ವೀಕರಿಸಿದ ರಾಜ್ಯ ಸರ್ಕಾರ | State government decides not to open school until December– News18 Kannada
ಡಿಸೆಂಬರ್​ನಲ್ಲಿ ಕೋವಿಡ್-19 ರೋಗದ ಎರಡನೇ ಅಲೆಯ ಸೋಂಕು ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಅಲ್ಲಿಯವರೆಗೆ ಶಾಲೆಗಳನ್ನ ತೆರೆಯುವುದು ಸೂಕ್ತವಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ಶಿಫಾರಸನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.
Last Updated : November 23, 2020, 13:41 IST
ಬೆಂಗಳೂರು(ನ. 23): ಡಿಸೆಂಬರ್​ವರೆಗೂ ಶಾಲೆಗಳನ್ನ ಪ್ರಾರಂಭಿಸುವುದು ಸೂಕ್ತ ಅಲ್ಲ ಎಂದು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಮಾಡಿದ ಶಿಫಾರಸನ್ನು ಸರ್ಕಾರ ಸ್ವೀಕರಿಸಿದ್ದು, ಡಿಸೆಂಬರ್​ವರೆಗೂ ಶಾಲೆ ಮರುಪ್ರಾರಂಭ ಮಾಡದಿರಲು ನಿರ್ಧರಿಸಿದೆ. ವಿಧಾನಸೌಧದಲ್ಲಿ ಇಂದು ಸೋಮವಾರ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಎಂಟು ಇಲಾಖೆಗಳ ಕಾರ್ಯದರ್ಶಿ ಹಾಗೂ ತಜ್ಞರು ಸಭೆಯಲ್ಲಿ ಭಾಗ...
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಡಿಸೆಂಬರ್​ವರೆಗೂ ಶಾಲೆ ಆರಂಭಿಸದಿರಲು ಈ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದೇವೆ. ಡಿಸೆಂಬರ್ ನಂತರ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ತರಗತಿಗಳನ್ನ ಪ್ರಾರಂಭ ಮಾಡುವ ಬಗ್ಗೆ ಮತ್ತೊಂದು ಸಭೆ ಮಾಡಲಾಗುವುದು ಎಂದಿದ್ಧಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಶಾಲೆ ಪ್ರಾರಂಭಿಸದಿರುವ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿದ್ದು, ಸೂಕ್ತ ಕ್ರಮಗಳನ್ನ ಇಲಾಖೆ ವತಿಯಿಂದ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ನಮಗೆ ಈ ವರ್ಷ ಒಂದರಿಂದ ಎಂಟನೇ ತರಗತಿಗಳನ್ನ ತೆರೆಯುವ ಯೋಚನೆ ಇರಲಿಲ್ಲ. ಆದರೆ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ 9, 10 ಮತ್ತು ಪಿಯುಸಿ ತರಗತಿ ತೆರೆಯುವ ಬಗ್ಗೆ ಮಾತ್ರ ನಮ್ಮ ಯೋಚನೆ ಇದ್ದದ್ದು. ಮಕ್ಕಳ ಜೀವ ಮುಖ್ಯ ಎಂದು ಹೇಳಿರುವ ಆರೋಗ್ಯ ಇಲಾಖೆ ಮಾತಿಗೆ ನಾವು ಮನ್ನಣೆ ನೀಡಿದ್ದೇವೆ. ಸಿಎಂ ನಿರ್ಧಾರವೇ ಅಂತಿಮ. ಮಕ್ಕಳ ಯೋಗ ಕ್ಷೇಮವೇ ನಮ್ಮ ಆದ್ಯತೆ. ಡಿಸೆಂಬರ್ ನಂತರ ಈ ನಾಲ್ಕು ತರಗತಿ...
ಇದನ್ನೂ ಓದಿ: ಡಿಸೆಂಬರ್​ನಲ್ಲೂ ಶಾಲೆಗಳನ್ನ ತೆರೆಯದಿರಿ: ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು
ವಿದ್ಯಾಗಮ ಕಾರ್ಯಕ್ರಮ ಪುನಾರಂಭ ಸದ್ಯಕ್ಕೆ ಇಲ್ಲ. ಶಾಲೆಗಳು ಪ್ರಾರಂಭವಾಗದಿದ್ದರೂ ಚಂದನ ವಾಹಿನಿಯಲ್ಲಿ ಸಂವೇದನಾ ಮೂಲಕ ಶಿಕ್ಷಣ ಕಾರ್ಯಕ್ರಮ ಮುಂದುವರಿಯುತ್ತದೆ. ಯೂಟ್ಯೂಬ್​ನಲ್ಲಿ ಪಾಠಗಳನ್ನ ಡೌನ್​ಲೋಡ್ ಮಾಡಿಕೊಳ್ಳಬಹುದು. ಜಿಯೋ ಟಿವಿಯವರು ಉಚಿತ ಪಠ್ಯ ಬೋಧನೆಗೆ ಮುಂದೆ ಬಂದಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಟಿವಿ ಮೂಲಕ ಶಿಕ್ಷಣ ಕೊಡುತ್ತೇವೆ ಎಂದಿದ್ದಾರೆ.
ಈ ವರ್ಷ 10ನೇ ತರಗತಿಯಲ್ಲಿ 9,59,566 ಮಕ್ಕಳು ಇದ್ದಾರೆ. ದ್ವಿತೀಯ ಪಿಯುಸಿಯಲ್ಲಿ 5,70,126 ಮಕ್ಕಳು ಇದ್ದಾರೆ. ಸದ್ಯದಲ್ಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವೇಳಾಪಟ್ಟಿ ಪ್ರಕಟ ಮಾಡುತ್ತೇವೆ. ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ವೇಳಾಪಟ್ಟಿ ಇರಲಿದೆ. ವಿದ್ಯಾಗಮ ಯೋಜನೆಯನ್ನ ಸದ್ಯಕ್ಕೆ ಪುನಾರಂಭಿಸುವುದಿಲ್ಲ ಎಂದು ಸುರೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ಧಾರೆ.
ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದ್ದೇನು?
"ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಮಾಣ ಕಡಿಮೆಯಾಗುತ್ತಿದೆ. ಈಗ ನಿತ್ಯ 1,700 ಪ್ರಕರಣಗಳು ಹಾಗೂ 20 ಸಾವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳೆದ ಎಂಟು ತಿಂಗಳಲ್ಲಿ ಬಹಳ ಶ್ರಮ ವಹಿಸಿ ಕೋವಿಡ್ ಅನ್ನು ನಿಯಂತ್ರಣಕ್ಕೆ ತರಲಾಗಿದೆ. ದೆಹಲಿ, ಹರಿಯಾಣ, ಗುಜರಾತ್, ರಾಜಸ್ಥಾನ್ ಮೊದಲಾದ ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ಮತ್ತೊಂದೆ ಅಲೆ ಎದ್ದಿದೆ. ಜೊತೆಗೆ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಳಿ ಹೆ...
ಡಾ. ಎಂ ಕೆ ಸುದರ್ಶನ್ ಅಧ್ಯಕ್ಷತೆಯ ಈ ತಾಂತ್ರಿಕ ಸಲಹಾ ಸಮಿತಿಯಲ್ಲಿ ವಿವಿಧ ವೈದ್ಯಕೀಯ ತಜ್ಞರಿದ್ದಾರೆ. ಕಳೆದ ಏಳೆಂಟು ತಿಂಗಳಲ್ಲಿ 40ಕ್ಕೂ ಹೆಚ್ಚು ಸಭೆಗಳನ್ನ ನಡೆಸಿ ಕಾಲಾನುಕಾಲಕ್ಕೆ ಪರಿಸ್ಥಿತಿಯನ್ನು ಅವಲೋಕಿಸಿ ಸರ್ಕಾರಕ್ಕೆ ಸಲಹೆ ನೀಡುವ ಕೆಲಸ ಮಾಡುತ್ತಾ ಬರುತ್ತಿದೆ. ಸಮಿತಿಯ ಶಿಫಾರಸುಗಳನ್ನ ಒಪ್ಪಿಕೊಳ್ಳುವುದು ಬಿಡುವುದು ಈಗ ಸರ್ಕಾರದ ಕೈಯಲ್ಲಿದೆ.
ರಾನ್‌ಜಿ – ಕಣಜ
ರಾನ್‌ಜಿ
Home/ವ್ಯಕ್ತಿ ಪರಿಚಯ/ರಾನ್‌ಜಿ
ನಮ್ಮ ದೇಶದಲ್ಲಿ ಕ್ರಿಕೆಟ್ ಆಡುವವರ ಸಂಖ್ಯೆ ಕಡಿಮೆಯೇನಲ್ಲ. ಪ್ರತಿಯೊಂದು ಶಾಲೆ, ಕಾಲೇಜು, ಬ್ಯಾಂಕು, ಕಾರ್ಖಾನೆ, ಕಛೇರಿಯಲ್ಲೂ ಪ್ರತಿಯೊಂದು ಊರು, ಬಡಾವಣೆಯಲ್ಲೂ ಖಾಸಗಿ ಟೀಮುಗಳಿರುತ್ತವೆ. ಪರದೇಶಗಳಿಂದ ಟೀಮುಗಳು ಬಂದಾಗ ಜನ ಜಾತ್ರೆಗೆ ನೆರೆದ ಹಾಗೆ ನೆರೆಯುತ್ತಾರೆ. ನೋಡುವುದಕ್ಕೆ ಹೋಗಲಾಗದವರು ಮನೆಯಲ್ಲೇ ಕುರ್ಚಿಗಳಿಗೆ ಅಂಟಿಕೊಂಡು ಕುಳಿತು ರೇಡಿಯೋದಲ್ಲಿ ಬರುವ ವೀಕ್ಷಕ ವಿವರಣೆಯನ್ನು ಕೇಳುತ್...
ನಮ್ಮ ಜನ ಕ್ರೀಡಾಪ್ರಿಯರು ಎನ್ನುವುದಕ್ಕೆ ಕ್ರಿಕೆಟ್ ಒಂದೇ ನಿದರ್ಶನವಲ್ಲ. ಹಾಕಿ, ಫುಟ್‌ಬಾಲ್, ಟೆನ್ನಿಸ್, ಬ್ಯಾಂಡ್ ಮಿಂಟನ್ ಮೊದಲಾದ ಆಟಗಳಲ್ಲೂ ನಮಗೆ ಇಷ್ಟೇ ಆಸಕ್ತಿ ಇದೆ. ಈ ಆಟಗಳ ಅನೇಕ ಪಟುಗಳು ಜಗದ್ವಿಖ್ಯಾತರಾಗಿದ್ದಾರೆ. ಇಂತ ನೂರಾರು ಜನರಲ್ಲಿ ಅತ್ಯಂತ ಹಿರಿಯ ವ್ಯಕ್ತಿ ಎಂದರೆ ರಾನ್‌ಜಿ, ಕಾಲಕ್ರಮದಲ್ಲಿ ಮೊದಲನೆಯವರು ಮಾತ್ರವಲ್ಲ, ಎಲ್ಲ ರೀತಿಯಲ್ಲೂ ಅಗ್ರಗಣ್ಯರು. ರಾನ್‌ಜಿ ಎಂಬ ಶಬ್ದ ಕ...
ಇವರೇ ಮೊದಲನೆಯವರು
ಇವತ್ತಿನ ದಿನ, ಕ್ರಿಕೆಟ್‌ನಲ್ಲಿ ದೊಡ್ಡ ಆಟಗಾರನಾಗಬೇಕು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸಬೇಕು ಎಂಬ ದೊಡ್ಡ ಆಸೆ ನಮ್ಮ ಯುವಕರಲ್ಲಿ ಅನೇಕರಿಗಿದೆ. ಅವರು ನಮ್ಮ ದೇಶದಲ್ಲೆ ಅಭ್ಯಾಸ ಮಾಡಿ ತಮ್ಮ ಆಸೆಯನ್ನು ಕೈಗೂಡಿಸಿಕೊಳ್ಳುವುದಕ್ಕೆ ಇಲ್ಲೇ ಬೇಕಾದಷ್ಟು ಅವಕಾಶಗಳಿವೆ. ಇಂಗ್ಲೆಂಡ್, ಆಸ್ಟ್ರೇಲಿಯ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಟೀಮುಗಳು ಇಲ್ಲಿಗೆ ಬರುತ್ತೆ. ಅವುಗಳ ಮೇಲೆ ಟೆಸ್ಟ್ ಪಂ...
ದೊಡ್ಡ ಕ್ರೀಡೆಯ ಸಾರ್ವಭೌಮ
ನಮ್ಮ ದೇಶದಲ್ಲಿ ಪ್ರತಿ ವರ್ಷವೂ ಅನೇಕ ಕ್ರಿಕೆಟ್ ಪಂದ್ಯಗಳೂ ನಡೆಯುತ್ತವೆ-ಕೂಚ್‌ಬಿಹಾರ್ ಪಾರಿತೋಷಕದ ಪಂದ್ಯಗಳು ರೋಹಿನ್‌ಟನ್-ಬಾರಿಯ ಪಾರಿತೋಷಕದ ಪಂದ್ಯಗಳು, ದುಲೀಪ್ ಪಾರಿತೋಷಕದ ಪಂದ್ಯಗಳು, ರಾನ್‌ಜಿ ಪಾರಿತೋಷಕದ ಪಂದ್ಯಗಳು-ಇತ್ಯಾದಿಯಾಗಿ. ಇವುಗಳಲ್ಲೆಲ್ಲ ಅತ್ಯಂತ ಮುಖ್ಯವಾದದ್ದು ರಾನ್‌ಜಿ ಪಾರಿತೋಷಕದ ಪಂದ್ಯಗಳ ಸರಣೆ. ಈ ಪಂದ್ಯಗಳು ಭಾರತದ ವಿವಿಧ ರಾಜ್ಯಗಳ ಮಧ್ಯೆ ನಡೆಯುತ್ತವೆ. ಈ ಪಾರಿತೋಷಕ...
ನಮ್ಮ ದೇಶ ಗಣರಾಜ್ಯವಾಗುವುದಕ್ಕೆ ಮೊದಲು, ಬ್ರಿಟಿಷರ ಕಾಲದಲ್ಲಿ ಇದ್ದ ನೂರಾರು ರಾಜ್ಯಗಳಲ್ಲಿ ನವಾನಗರ್ ಎನ್ನುವುದು ಒಂದು, ನವಾನಗರ್ ಗುಜರಾತ್ ಪ್ರಾಂತದ ಕಾಥಿಯಾವಾಡ ವಿಭಾಗದಲ್ಲಿದ್ದ ಒಂದು ಚಿಕ್ಕ ರಾಜ್ಯ. ಈ ರಾಜ್ಯದಲ್ಲಿ ಸಾರೋದಾರ್ ಎನ್ನುವ ಒಂದು ಸಣ್ಣ ಹಳ್ಳಿ. ನವಾನಗರ್ ರಾಜಮನೆತನದ ಒಂದು ಶಾಖೆ ಈ ಹಳ್ಳಿಯಲ್ಲಿ ನೆಲೆಸಿತ್ತು. ಈ ಶಾಖೆಯಲ್ಲಿ ೧೮೭೨ರಲ್ಲಿ ರಣಜಿತ್‌ಸಿನ್ಹಜಿಯ ಜನನವಾಯಿತು.
ರಣಜಿತ್‌ಸಿನ್ಹಜಿಯ ಬಾಲ್ಯ ಸಾರೋದಾರ್‌ನಲ್ಲಿ ಕಳೆಯಿತು. ಆಮೇಲೆ ವಿದ್ಯಾಭ್ಯಾಸಕ್ಕಾಗಿ ರಾಜಕೋಟ್ ಪಟ್ಟಣಕ್ಕೆ ಹೋದನು. ಅಲ್ಲಿ ರಾಜಕುಮಾರ್ ಕಾಲೇಜು ಎನ್ನುವ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವಾಗಲೇ ರಾನ್‌ಜಿ ಕ್ರಿಕೆಟ್‌ನ ಅಭ್ಯಾಸವನ್ನೂ ಪ್ರಾರಂಭಿಸಿದ. ಕಾಲಕ್ರಮದಲ್ಲಿ ಆ ಆಟವನ್ನು ರೂಢಿಸಿಕೊಂಡು, ಮುಂದೆ ಸಮಯದಲ್ಲಿ ಉಪಯುಕ್ತ ಬೋಲರ್ ಆದರೂ, ರಾನ್‌ಜಿ ಬ್ಯಾಟಿಂಗ್ ಮೇಲೆ ಪೂರ್ಣ ಪ್ರಭುತ್ವವನ್ನು ಸ್ಥಾ...
ಶ್ರದ್ಧೆಯ ಅಭ್ಯಾಸ
ರಾನ್‌ಜಿ ಹೆಚ್ಚಿನ ಶಿಕ್ಷಣಗಾಗಿ ೧೮೯೨ರಲ್ಲಿ ಇಂಗ್ಲೆಂಡಿಗೆ ಹಡಗು ಹತ್ತಿ ಪ್ರಯಾಣ ಮಾಡಿದ. ಆಗ ಅವನಿಗೆ ಇಪ್ಪತ್ತು ವರ್ಷ ವಯಸ್ಸು ಇಂಗ್ಲೆಂಡಿನಲ್ಲಿ. ಅಲ್ಲಿಯ ನಿಬಂಧನೆಗಳ ಪ್ರಕಾರ, ಒಂದು ವರ್ಷ ಮಾಲ್‌ವೆರ್ನ್ ಕಾಲೇಜ್ ಎಂಬ ಶಾಲೆಯಲ್ಲಿ ಓದಿದ. ಮುಂದಿನ ವರ್ಷ ಕೇಂಬ್ರಿಜ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ. ರಾಜ್‌ಕೋಟ್‌ನಲ್ಲಿರುವಾಗಲೇ ಬ್ಯಾಟಿಂಗ್ ಕಲೆಯಲ್ಲಿ ಪರಿಣತನಾಗಬೇಕೆಂದು ನಿರ್ಧರಿಸಿದ್ದ ರ...
ಕೆಲವರಿಗೆ ಯಾವುದಾದರೊಂದು ಕಲೆಯಲ್ಲಿ ಸಹಜ ಶಕ್ತಿ ಇರುತ್ತದೆ. ಆದರೆ ಆ ಶಕ್ತಿ ಬೆಳೆಯಬೇಕಾದರೆ ಅಭ್ಯಾಸ ಮಾಡಬೇಕು. ಕಷ್ಟಪಟ್ಟು ಶಿಕ್ಷಣವನ್ನು ಪಡೆಯಬೇಕು. ಇಲ್ಲದಿದ್ದರೆ ಆ ಶಕ್ತಿ ಬರಬರುತ್ತ ಕ್ಷೀಣವಾಗಿ ನಶಿಸಿ ಹೋಗುತ್ತದೆ. ರಾನ್‌ಜಿ ಹುಟ್ಟು ಕ್ರಿಕೆಟ್ ಆಟಗಾರ. ಆದರೆ ಶ್ರದ್ಧೆಯಿಂದ ಅಭ್ಯಾಸ ಮಾಡುವುದರ ಅಗತ್ಯವನ್ನು ಚೆನ್ನಾಗಿ ತಿಳಿದುಕೊಂಡಿದ್ದ. ಆದುದರಿಂದ ಕೇಂಬ್ರಿಜ್‌ನಲ್ಲಿರವಾಗಲೂ ಆಮೇಲೆ ಕೆ...
ಇಂಗ್ಲೆಂಡಿನಲ್ಲಿ ಕ್ರಿಕೆಟನ್ನು ಬೇಸಿಗೆಯಲ್ಲಿ ಜೂನ್ ತಿಂಗಳಿಂದ ಸೆಪ್ಟಂಬರ್‌ವರೆಗೂ ಆಡುತ್ತಾರೆ. ಅಷ್ಟುಹೊತ್ತಿಗೆ ಹಿಮಗಾಲ ಮುಗಿದು, ಹಿತವಾದ ಬಿಸಿಲು ಬೆಳಗುತ್ತಿರುತ್ತದೆ. ಆದಷ್ಟು ಹೊತ್ತು ಬಿಸಿಲು ಕಾಯಿಸಿಕೊಳ್ಳುವುದಕ್ಕೆ ಜನ ಹಾತೊರೆಯುತ್ತಾರೆ. ಕ್ರಿಕೆಟ್ ಇದಕ್ಕೆ ಅನುಕೂಲವಾಗಿದೆ.
ಕ್ರಿಕೆಟ್ ಆಟದ ಬೇಸಿಗೆ ಪ್ರಾರಂಭವಾಗುವುದಕ್ಕೆ ಮುಂಚೆಯೇ, ಅಂದರೆ ವಸಂತ ಕಾಲದಲ್ಲಿಯೆ, ರಾನ್‌ಜಿ ಅತ್ಯಂತ ಶ್ರೇಷ್ಠರಾದ ಬೋಲರುಗಳನ್ನು ಸಂಬಳಕ್ಕೆ ಗೊತ್ತು ಮಾಡಿಕೊಂಡು ಪ್ರತಿ ದಿನವೂ ಗಂಟೆಗಟ್ಟಲೆ ಬ್ಯಾಟ್ ಮಾಡುತ್ತಿದ್ದ ರಾನ್‌ಜಿಗೆ ಕೆಲವು ಗುಣಗಳು ಸ್ವಾಭಾವಿಕವಾಗಿ ಬಂದಿದವು. ಎಂತ ಬಾಲ್ ಅನ್ನು ಹೇಗೆ ಆಡಬೇಕು ಎಂದು ತಕ್ಷಣ ನಿರ್ಧರಿಸುವ ಬುದ್ಧಿಶಕ್ತಿ. ಲಘುವಾದ ಬಲವಾದ ಮೈಕಟ್ಟು ತೀಕ್ಷ್ಣವಾದ ದೃಷ...
ಇಂಗ್ಲಿಷರನ್ನು ಬೆರಗುಗೊಳಿಸಿದ ಕಂದುಬಣ್ಣದ ಆಟಗಾರ
ಆ ಕಾಲದಲ್ಲಿ ಬ್ರಿಟಿಷರು ತಿಳಿದಿದ್ದಕ್ಕಿಂತಲೂ ಹೆಚ್ಚು ಜನ ಭಾರತದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಆದರೆ ದೊಡ್ಡ ಪಂದ್ಯಗಳಿಗೆ ಅವಕಾಶ ಇರಲಿಲ್ಲ. ಅಗತ್ಯವಾದ ತರಬೇತಿ ಕೇಂದ್ರಗಳಿರಲಿಲ್ಲ. ಇಂಗ್ಲೆಂಡಿಗೆ ಹೋದ ಮೇಲೆಯೇ ರಾನ್‌ಜಿಗೆ ಅವಕಾಶವೂ ತರಬೇತಿಯೂ ಸಿಕ್ಕಿದ್ದು. ಅವನು ಆ ದೇಶದಲ್ಲಿ ಕ್ರಿಕೆಟ್ ಆಡುವುದಕ್ಕೆ ಪ್ರಾರಂಭಿಸಿದ ಕಾಲದಲ್ಲಿ ಅವನಿಗೆ ಒಂದು ಅನುಕೂಲವಿತ್ತು. ಕಂದು ಬಣ್ಣದ ಭಾರತೀಯನೊಬ್ಬ ...
ರಾನ್‌ಜಿ ಇಂಗ್ಲೆಂಡಿನಲ್ಲಿ ಪ್ರಥಮ ದರ್ಜೆಯ ಕ್ರಿಕೆಟ್ ಆಡಿದರು. ಅದು ೧೮೯೩ರಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಮುಂದೆ ೧೯೧೨ರವರೆಗೂ ಹೆಚ್ಚು ಕಡಿಮೆ ಪ್ರತಿವರ್ಷವೂ ಅಲ್ಲಿ ಕ್ರಿಕೆಟ್ ಆಡುತ್ತಿದ್ದ ಎಂಟು ವರ್ಷಗಳ ವಿರಾಮದ ನಂತರ ಕಡೆಯ ಸಲ ಆಡಿದ್ದು ೧೯೨೦ರಲ್ಲಿ.
ರಾನ್‌ಜಿಗೆ ಕ್ರಿಕೆಟ್‌ನಲ್ಲಿ ಅಪಾರ ಪ್ರೀತಿ, ಆಸಕ್ತಿ ಇದ್ದವು. ಆಟಗಾರರ ಅಗ್ರಶ್ರೇಣಿಯಲ್ಲಿ ಇರಬೇಕೆಂಬ ಹೆಬ್ಬಯಕೆ ಇತ್ತು. ಅಲ್ಲಿಯ ಜನತೆಗಂತೂ ರಾನ್‌ಜಿ ಪ್ರಿಯವಾಗಿಬಿಟ್ಟಿದ್ದ. ಈ ಕಾರಣಗಳಿಂದ ರಾನ್‌ಜಿ ಇಂಗ್ಲೆಂಡಿನಲ್ಲಿ ಮನೆ ಮಾಡಿ ಕೊಂಡಿದ್ದ. ಚಳಿಗಾಲದಲ್ಲಿ ನಾಲ್ಕು ತಿಂಗಳು ಭಾರತಕ್ಕೆ ಬಂದು ತೌರೂರಾದ ಸಾರೋದಾರ್‌ನಲ್ಲಿ ಕಳೆಯುತ್ತಿದ್ದ. ಹಣಕ್ಕೆ ಯಾವ ಕೊರತೆಯೂ ಇರಲಿಲ್ಲ. ಯಾವ ತರಹದ ಚಿಂತೆಯೂ...
ನವಾನಗರದ ಮಹಾರಾಜ
೧೯೦೭ರಲ್ಲಿ ರಾನ್‌ಜಿಯ ಜೀವನದಲ್ಲಿ ದೊಡ್ಡ ಘಟನೆಯಾಯಿತು. ಆ ವರ್ಷ ನವಾನಗರದ ಮಹಾರಾಜನಾಗಿ ಅಧಿಕಾರವನ್ನು ವಹಿಸಿಕೊಂಡ. ನವಾನಗರದ ಮಹಾರಾಜನಿಗೆ ಜಾಮ್‌ಸಾಹೇಬ್ ಎಂಬ ಬಿರುದು. ರಾನ್‌ಜಿ ನವಾನಗರದ ಜಾಮ್‌ಸಾಹೇಬನಾದ.
ಅಧಿಕಾರ ಬಂದಿತು. ಅದರ ಜೊತೆಗೆ ಭಾರವೂ ಹೆಗಲ ಮೇಲೆ ಬಿತ್ತು. ಆದರೆ ಇದು ಯಾವುದೂ ತಮ್ಮ ಕ್ರಿಕೆಟ್‌ಗೆ ಅಡಚಣೆಯಾಗುವುದಕ್ಕೆ ರಾನ್‌ಜಿ ಬಿಡಲಿಲ್ಲ. ಬೇಸಿಗೆ ಬಂದಾಗಲೆಲ್ಲ ಎಂದಿನಂತೆ ಇಂಗ್ಲೆಂಡಿಗೆ ಹೋಗಿ ಆಡುತ್ತಿದ್ದರು. ಚಳಿಗಾಲದಲ್ಲಿ ಭಾರತಕ್ಕೆ ಬಂದು ತಮ್ಮ ರಾಜ್ಯದ ಸ್ಥಿತಿ-ಗತಿಗಳನ್ನು ಪ್ರತ್ಯಕ್ಷವಾಗಿ ವಿಚಾರಿಸಿಕೊಳ್ಳುತ್ತಿದ್ದರು.
ರಾನ್‌ಜಿ ತಮ್ಮ ಯೌವನವನ್ನು ಬರಿ ಕ್ರಿಕೆಟ್ ಆಡುವುದರಲ್ಲೇ ಕಳೆದರು ಎಂದು ಹೇಳಿದರೆ ತಪ್ಪಾಗುತ್ತದೆ. ರಾಜಕುಮಾರ ರಾನ್‌ಜಿ ಜನಸಾಮಾನ್ಯರ ಪರಿಚಯವನ್ನು ಮಾಡಿಕೊಳ್ಳುವುದಕ್ಕೆ ಕ್ರಿಕೆಟ್ ಒಂದು ಸಾಧನವಾಯಿತು. ಕ್ರಿಕೆಟ್ ಮೂಲಕ ಬೇರೆ ಬೇರೆ ದೇಶಗಳ ಸಾಧಾರಣ ಜನರ ಮತ್ತು ಗಣ್ಯ ವ್ಯಕ್ತಿಗಳ ಸ್ನೇಹವಾಯಿತು. ಇದರಿಂದಾಗಿ ಸಾಮಾನ್ಯರ ಆಸೆ, ಆಕಾಂಕ್ಷೆ ಸಮಸ್ಯೆಗಳನ್ನೂ ಬೇರೆ ಬೇರೆ ರಾಷ್ಟ್ರಗಳ, ಸರ್ಕಾರಗಳ ರೀತಿ...
೧೯೧೪ರ ಆಗಸ್ಟ್ ತಿಂಗಳಲ್ಲಿ ಮೊದಲನೆಯ ಮಹಾಯುದ್ಧ ಪ್ರಾರಂಭವಾಯಿತು. ಮುಂದಿನ ಐದು ವರ್ಷ ಇಂಗ್ಲೆಂಡ್‌ನಲ್ಲಿ ಕೌಂಟಿ (ಕೌಂಟಿ ಎಂದರೆ ನಮ್ಮ ದೇಶದ ಜಿಲ್ಲೆಯಂತೆ) ಕ್ರಿಕೆಟ್ ಪಂದ್ಯಗಳೂ ಟೆಸ್ಟ್ ಪಂದ್ಯಗಳೂ ನಿಂತು ಹೋದವು. ನಮ್ಮ ದೇಶದಿಂದಲೂ ಸೈನ್ಯಗಳು ಹೋಗಿ ಹೋರಾಟದಲ್ಲಿ ಭಾಗವಹಿಸಿದವು. ರಾನ್‌ಜಿ ಕಸುಬಿನಲ್ಲಿ ಸೈನಿಕರಲ್ಲ. ಆದರೆ ತಾವೇ ಮುಂದೆ ಬಂದು ಯುದ್ಧರಂಗದಲ್ಲಿ ಸೇವೆ ಸಲ್ಲಿಸಿದರು.
ಮೊದಲನೆಯ ಮಹಾಯುದ್ದ ಭೀಕರವಾಗಿತ್ತು. ಇಂಥ ಯುದ್ಧದ ಮತ್ತೆ ಆಗಕೂಡದು; ಅಲ್ಲದೆ, ಮಾನವನ ಕ್ಷೇಮಕ್ಕೆ, ಮಾನವನ ಏಳಿಗೆಗೆ ಶಾಂತಿ ಅತ್ಯಗತ್ಯ ಎಂಬ ತತ್ವವನ್ನು ಯುದ್ಧದಲ್ಲಿ ನೆರೆದಿದ್ದ ರಾಷ್ಟ್ರಗಳ ನಾಯಕರು ಮನಗಂಡರು. ಆದ್ದರಿಂದ ಅವರೆಲ್ಲ ಸೇರಿ 'ಲೀಗ್ ಆಫ್ ನೇಷನ್ಸ್' ಎಂಬ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಿದರು. ವಿಶ್ವಶಾಂತಿಯನ್ನು ಕಾಪಾಡಿಸಿಕೊಂಡು ಬರುವುದು ಈ ಸಂಸ್ಥೆಯ ಜವಾಬ್ದಾರಿಯಾಗಿತ್ತ...
ರಾಜ ಮಹಾರಾಜರ ಸಂಘದಲ್ಲಿ
ಹದಿನೆಂಟನೆಯ ಶತಮಾನದಿಂದ ನಮ್ಮ ದೇಶದಲ್ಲಿ ಬ್ರಿಟಿಷರ ಆಡಳಿತದ ವಿರುದ್ಧವಾಗಿ ಒಂದಲ್ಲ ಒಂದು ರೀತಿಯ ಚಳವಳಿ ನಡೆಯುತ್ತಲೇ ಇದ್ದಿತು. ಮೊದಲನೆಯ ಮಹಾಯುದ್ಧ ಮುಗಿದ ಮೇಲೆ ಚಳವಳಿಗಳು ಇನ್ನೂ ತೀವ್ರವಾದವು. ಮಹಾತ್ಮಾ ಗಾಂಧಿಯವರು ಜನತೆಯನ್ನು ಒಟ್ಟು ಗೂಡಿಸಿ, ಹುರಿದುಂಬಿಸಿದರು. ರಾನ ಒಗ್ಗಟ್ಟಿನಿಂದಲೂ ದೃಢ ನಿಶ್ಚಯದಿಂದಲೂ ಸತ್ಯಾಗ್ರಹಗಳಲ್ಲಿ ಲಕ್ಷಗಟ್ಟಲೆ ಭಾಗವಹಿಸಿದರು. ಭಾರತಕ್ಕೆ ಸ್ವಾತಂತ್ರ್ಯವನ್ನ...
ಭಾರತವು ಗಣರಾಜ್ಯವಾಗುವುದಕ್ಕೆ ಮುಂಚೆ ಇಲ್ಲಿ ನೂರಾರು ದೊಡ್ಡ-ಸಣ್ಣ ಸಂಸ್ಥಾನಗಳಿದ್ದವು ಎಂದು ಹಿಂದೆಯೇ ಹೇಳಿದೆ. ಈ ಸಂಸ್ಥಾನಗಳ ಅರಸರು ಅನೇಕ ವಿಧದಲ್ಲಿ ಭ್ರಿಟಿಷ್ ಸರ್ಕಾರಕ್ಕೆ ಸಹಾಯ ಮಾಡಿದ್ದರು. ಆದ್ದರಿಂದ ಬ್ರಿಟಿಷರು ಈ ಸಂಸ್ಥಾನಿಕರ ವಿಚಾರದಲ್ಲಿ ತಮ್ಮ ಹೊಣೆಗಾರಿಕೆ ಇದೆ ಎಂದು ನಂಬಿದ್ದರು. ಭಾರತಕ್ಕೆ ಎಷ್ಟು ಪ್ರಮಾಣದ ಸ್ವತಂತ್ರ್ಯವನ್ನು ಕೊಡಬೇಕು? ಯಾವಾಗ ಕೊಡಬೇಕು? ಸ್ವತಂತ್ರ ಭಾರತದಲ್ಲ...
ಹೀಗೆ ರಾನ್‌ಜಿ ಕ್ರಿಕೆಟ್ ಪ್ರಪಂಚದಲ್ಲಿ ಎಂಥ ಮರ್ಯಾದೆ, ವಿಶ್ವಾಸಗಳನ್ನು ಸಂಪಾದಿಸಿದ್ದರೋ, ಅಂಥ ಮರ್ಯಾದೆ ವಿಶ್ವಾಸಗಳನ್ನು ರಾಜಕೀಯ ಪ್ರಪಂಚದಲ್ಲೂ ಸಂಪಾದಿಸಿದ್ದರು. ತಾವು ಕ್ರಿಕೆಟ್ ಆಡುವ ವಯಸ್ಸು ಮೀರಿದ ಮೇಲೆ ರಾನ್‌ಜಿ ಕಿರಿಯ ಕ್ರಿಕೆಟ್ ಆಟಗಾರರ, ಅದರಲ್ಲೂ ಮುಖ್ಯವಾಗಿ ಅವರ ತಮ್ಮನ ಮಗನಾದ ದುಲೀಪ್ ಸಿನ್ಹಜಿಯ, ಪ್ರಗತಿಯಲ್ಲಿ ತುಂಬ ಆಸಕ್ತಿ ವಹಿಸಿದರು. ಅವರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್...
ರಾನ್‌ಜಿ ೧೮೩೩ನೇ ಇಸವಿಯ ಏಪ್ರಿಲ್ ತಿಂಗಳ ಎರಡನೇ ತಾರೀಖು ಜಾಮ್‌ನಗರದಲ್ಲಿ ದೈವಾಧೀನರಾದರು. ಆಗ ಇವರಿಗೆ ಅರವತ್ತೊಂದು ವರ್ಷ. ಅವರ ಮರಣದಿಂದ ಭಾರತ ದೇಶದ ರಾಜಕಾರಣಕ್ಕೆ ದೊಡ್ಡ ನಷ್ಟವುಂಟಾಯಿತು. ಅವರ ಸಾವಿನ ವಾರ್ತೆ ಒಟ್ಟು ಕ್ರಿಕೆಟ್ ಪ್ರಪಂಚಕ್ಕೇ ದೊಡ್ಡ ಆಘಾತದಂತೆ ಎರಗಿತು.
ದಾಖಲೆಗಳ ಮಾಲೆ
೧೮೯೩, ೧೮೯೪ನೇ ವರ್ಷಗಳಲ್ಲಿ ರಾನ್‌ಜಿ ಕೇಂಬ್ರಿಜ್‌ನಲ್ಲಿ ಓದುತ್ತಿದ್ದಾಗ, ಆ ವಿಶ್ವವಿದ್ಯಾಲಯದ ಕ್ರಿಕೆಟ್ ಟೀಮಿನ ಆಟಗಾರರಾಗಿ, ಕೇಂಬ್ರಿಜ್ ಮತ್ತು ಆಕ್ಸ್‌ಫರ್ಡ್‌ಗಳ ನಡುವೆ ನಡೆಯುವ ಪಂದ್ಯದಲ್ಲಿ ಆಡಿದರು. ಪ್ರತಿ ವರ್ಷವೂ ಈ ಎರಡು ಪುರಾತನ ವಿಶ್ವವಿದ್ಯಾಲಯಗಳಿಗೆ ಪಂದ್ಯ ನಡೆಯುತ್ತದೆ. ಈ ಪಂದ್ಯಕ್ಕೆ ಇಂಗ್ಲೆಂಡಿನಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆ ಇದೆ. ಇಂಗ್ಲೆಂಡಿನ ಎಲ್ಲ ಪತ್ರಿಕೆಗಳೂ ಈ ಪಂದ್ಯ...
೧೮೯೫ರಲ್ಲಿ ರಾನ್‌ಜಿ ಸಸೆಕ್ಸ್ ಕೌಂಟಿಗೆ ಆಡುವುದಕ್ಕೆ ಪ್ರಾರಂಭಿಸಿದರು. ಕೆಲವೇ ವರ್ಷಗಳ ನಂತರ, ಅಂದರೆ ೧೮೯೯ರಲ್ಲಿ ಸಸೆಕ್ಸ್ ಟೀಮಿನ ಕ್ಯಾಪ್ಟನ್ ಆದರು. ೧೮೯೯ ರಿಂದ ೧೯೦೪ರ ಪೂರ್ತಿ ಆ ಕೌಂಟಿ ಟೀಮಿನ ಕ್ಯಾಪ್ಟನ್ ಆಗಿದ್ದರು. ಇಂಗ್ಲೆಂಡಿನವನಲ್ಲದ ಆಟಗಾರನೊಬ್ಬ ಇಂಗ್ಲಿಷ್ ಕೌಂಟಿ ಟೀಮೊಂದರ ಕ್ಯಾಪ್ಟನ್ ಆಗುವುದರಲ್ಲೂ ರಾನ್‌ಜಿಯವರದೇ ಮೊದಲನೆಯ ದಾಖಲೆ(ರೆಕಾರ್ಡ್).
'ಬ್ಯಾಟ್ಸ್‌ಮನ್' ಆಗಿ ರಾನ್‌ಜಿಯ ಪ್ರಗತಿ ಎಷ್ಟು ತ್ವರಿತವಾಗಿತ್ತು. ಎಂದರೆ, ೧೮೯೬ರಲ್ಲಿ ಇಂಗ್ಲೆಂಡಿನಲ್ಲಿ ಪ್ರವಾಸ ಮಾಡುತ್ತಿದ್ದ ಆಸ್ಟ್ರೇಲಿಯ ಟೀಮಿನ ಮೇಲೆ ಆಡುವ ಇಂಗ್ಲೆಂಡಿನ ಟೆಸ್ಟ್ ಟೀಮಿಗೆ ರಾನ್‌ಜಿ ಆಯ್ಕೆಯಾದರು. ಇದು ಆಂಗ್ಲರಲ್ಲದ ರಾನ್‌ಜಿ ಸ್ಥಾಪಿಸಿದ ಇನ್ನೊಂದು ದಾಖಲೆ. ಆಡೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟೀಮು ಮೊದಲನೆಯ ಇನ್ನಿಂಗ್ಸ್‌ನಲ್ಲಿ ಒಟ್ಟು ೨೩೧ರನ್‌ಗಳನ್ನು ಮಾಡಿತು. ಅದರಲ...
ರಾನ್‌ಜಿ ಹೆಸರು ಗಳಿಸಿದ್ದು ಜನರ ಮನಸ್ಸನ್ನು ಸೂರೆಗೊಂಡಿದ್ದು ಬ್ಯಾಟ್ಸ್‌ಮನ್ನಾಗಿ, ಆದರೆ ಅವರು ಬರೀ ಬ್ಯಾಟ್ಸ್‌ಮನ್ನಾಗಿರಲಿಲ್ಲ. ಅವಶ್ಯ ಬಿದ್ದಾಗ ಕೆಲವು ಓವರ್ ಬೋಲ್ ಮಾಡುತ್ತಿದ್ದರು. ಆದರೆ ಇವರ ವೈಶಿಷ್ಟ್ಯ ಬ್ಯಾಟಿಂಗ್.
೧೮೯೬ರ ನಾಲ್ಕು ತಿಂಗಳ 'ಸೀಸನ್'ನಲ್ಲಿ ಸರಾಸರಿ ೫೦ ರಂತೆ ೨೭೮೦ ರನ್‌ಗಳನ್ನು ಮಾಡಿ ದಾಖಲೆ ಸ್ಥಾಪಿಸಿದರು. ಇಂಗ್ಲೆಂಡಿನಲ್ಲಿ 'ಪಂಚ್' ಎಂಬ ವಾರಪತ್ರಿಕೆ ಆಗಿನ ಕಾಲದಿಂದಲೂ ಇದೆ. ಇದು ವಿನೋದಕ್ಕೆ ಮೀಸಲಾದ ಪತ್ರಿಕೆ. ಆ ವರ್ಷದಲ್ಲಿ ರಣಜಿತ್ ಸಿನ್ಹಜಿಯ ಬ್ಯಾಟಿಂಗ್ ಬಗ್ಗೆ ತನ್ನ ಮೆಚ್ಚಿಕೆಯನ್ನು ತೋರಿಸುವುದಕ್ಕಾಗಿ ಅವರು ಬ್ಯಾಟ್ ಮಾಡುತ್ತಿರುವ ನಿಲುವಿನ ವ್ಯಂಗ್ಯಚಿತ್ರವೊಂದನ್ನು ಅಚ್ಚುಹಾಕಿ, ಅದರ...
'ನೋಡು, ಹೀಗೆ ಚೆಂಡನ್ನು ಬಾರಿಸಬೇಕು' ರಾನ್‌ಜಿ ದುಲೀಪ್‌ಗೆ ಶಿಕ್ಷಣ ಕೊಡುತ್ತಿರುವುದು
ಆಸ್ಟ್ರೇಲಿಯದಲ್ಲಿ ದುರದೃಷ್ಟ
೧೮೯೭ರ ಕೊನೆಯಲ್ಲಿ ೧೮೯೮ರ ಮೊದಲಲ್ಲಿ ಒಟ್ಟು ನಾಲ್ಕು ತಿಂಗಳ ಕಾಲ, ಎ.ಇ ಸ್ಟಾಡರ್ಟ್ ಎಂಬಾತನ ನೇತೃತ್ವದಲ್ಲಿ ಇಂಗ್ಲಿಷ್ ಕ್ರಿಕೆಟ್ ಟೀಮೊಂದು ಆಸ್ಟ್ರೇಲಿಯದಲ್ಲಿ ಪ್ರವಾಸ ಮಾಡಿತು. ರಾನ್‌ಜಿ ಈ ಟೀಮಿನ ಆಟಗಾರರಲ್ಲೊಬ್ಬರಾಗಿದ್ದರು. ಪಾಪ! ಪ್ರವಾಸದುದ್ದಕ್ಕೂ ಅನಾರೋಗ್ಯವು ರಾನ್‌ಜಿಯ ಬೆನ್ನು ಹತ್ತಿ ಕಾಡಿತು. ಆದರೂ ಅವರು ಆಡಿದ ಪಂದ್ಯಗಳಲ್ಲಿ ಧೈರ್ಯಗೆಡದೆ ಪಟ್ಟು ಹಿಡಿದು ಆಡಿದರು. ಕಾಯಿಲೆಯಾಗಿದ್ದ...