text
stringlengths
0
61.5k
ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ಹೃದಯ ಆರೋಗ್ಯಕರವಾಗಿರುತ್ತದೆ. ತಜ್ಞರ ಪ್ರಕಾರ, ಆರೋಗ್ಯವಾಗಿರಲು ಪ್ಲಾಸ್ಟಿಕ್ ಬಾಟಲಿಯ ಬದಲು, ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯಬೇಕು. ಇದು ಹೃದಯವನ್ನು ಆರೋಗ್ಯವಾಗಿಡುವಲ್ಲಿ ನೆರವಾಗುತ್ತದೆ. ಮತ್ತು ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ.
ಇನ್ನು ಬಿದಿರು ದೇಹಕ್ಕೆ ಅನೇಕ ರೀತಿಯಲ್ಲಿ ಉಪಯುಕ್ತವಾದದ್ದು, ನಿರ್ದಿಷ್ಟವಾಗಿ ಹೇಳುವುದಾದರೆ, ಹೃದಯವನ್ನು ಆರೋಗ್ಯವಾಗಿಡಲು, ಉಸಿರಾಟದ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಹೊಟ್ಟೆಯ ತೊಂದರೆಗಳನ್ನು ನಿವಾರಿಸಲು ಬಿದಿರು ಬಹಳ ಮುಖ್ಯ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಮತ್ತು ಹೊಟ್ಟೆಯ ಹುಣ್ಣನ್ನು ತಡೆಗಟ್ಟುತ್ತದೆ.
ಈ ಕಾರಣಗಳಿಗಾಗಿಯೇ ಬಿದಿರು ಅತ್ಯುತ್ತಮ ಆಯ್ಕೆ.. ಏಕೆ?
ಬಿದಿರು ನೈಸರ್ಗಿಕವಾಗಿ ಬ್ಯಾಕ್ಟೇರಿಯಾ, ಶೀಲಿಂದ್ರ ವಿರೋಧಿ
ಬಿದಿರು ತುಂಬಾ ಪ್ರಬಲವಾಗಿರುತ್ತದೆ
3-5 ವರ್ಷಗಳಲ್ಲಿ ಬಿದಿರು ಕೊಯ್ಲು ಮಾಡಲು ಸಿಧ್ದವಾಗುತ್ತದೆ.
ಬಿದಿರಿನಲ್ಲಿ ನೀರು ಕುಡಿದರೆ ಹೆಚ್ಚು ಉಪಯುಕ್ತ.
ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ವಿಟಮಿನ್ ಬಿ 6 , ಪೊಟ್ಯಾಶಿಯಂ , ತಾಮ್ರ, ಮ್ಯಂಗನೀಸ್ , ಸತು, ವಿಟಮಿನ್ ಬಿ2 , ಪ್ರೋಟೀನ್ , ಕಬ್ಬಿಣದಂತಹ ಪೋಷಕಾಂಶಗಳು ದೊರೆಯುತ್ತವೆ. ಬಿದಿರು ಶತಮಾನಗಳಿಂದಲೂ ಶುದ್ಧತೆಯನ್ನು ಕಾಪಾಡಿಕೊಂಡು ಬಂದಿದೆ. ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಯಾವುದೇ ರೀತಿಯ ಸೋಂಕು ಉಂಟಾಗುವುದಿಲ್ಲ.
ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ…!
ಬಿದಿರಿನ ಬಾಟಲಿಯಲ್ಲಿ ನೀರನ್ನು ಕುಡಿಯುವುದರಿಂದ ಮಹಿಳೆಯರು ದೀರ್ಘಕಾಲ ಯಂಗ್ ಆಗಿ ಕಾಣಬಹುದು. ಏಕೆಂದರೆ ಬಿದಿರು ಸಾಕಷ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಈ ಅಂಶಗಳು ನಮ್ಮ ಚರ್ಮಕ್ಕೆ ತಾರುಣ್ಯವನ್ನು ಹೆಚ್ಚಿಸುತ್ತವೆ. ಬಿದಿರಿನ ಬಾಟಲಿಯಲ್ಲಿ ಇರಿಸಿದ ನೀರನ್ನು ಮುಖ ತೊಳೆಯಲು ಉಪಯೋಗಿಸಿದರೆ ಮುಖದ ಸೌಂದರ್ಯ ಹೆಚ್ಚುತ್ತದೆ.
ಆರೋಗ್ಯಕ್ಕೂ ಬೆಸ್ಟ್..!
ಬಿದಿರಿನ ಬಾಟಲಿಗಳಲ್ಲಿ ಸಂಗ್ರಹವಾಗಿರುವ ನೀರಿನ ಬಳಕೆಯಿಂದ ದೇಹದಲ್ಲಿ ಕಾಲಜನ್ ಉತ್ಪಾದನೆ ಹೆಚ್ಚುತ್ತದೆ. ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಅಂಶ ಬಹಳ ಮುಖ್ಯ, ವಾಸ್ತವವಾಗಿ, ಅದರಲ್ಲಿ ಸಿಲಿಕಾ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ.
ಮೂಳೆಗಳು ಬಲಗೊಳ್ಳಲು ಬಿದಿರು!
ಮೂಳೆಗಳು ದುರ್ಬಲಕೊಳ್ಳುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಾಗಿ ಮೂಳೆ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಮೊಣಕಾಲು ನೋವು, ಬೆನ್ನು ನೋವು, ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಆದ್ರೆ ಬಿದಿರಿನ ಬಾಟಲಿಯಲ್ಲಿ ನೀರು ಕುಡಿದರೆ, ದೇಹದ ಮೂಳೆಗಳು ಬಲಗೊಳ್ಳುತ್ತವೆ. ಬಿದಿರಿನಲ್ಲಿರುವ ಸಿಲಿಕಾ ಅಂಶ ಮೂಳೆಗಳನ್ನು ...
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.
ಕೊಲೆಸ್ಟ್ರಾಲ್ ಏರಿಳಿತದಿಂದಾಗಿ ಅಥವಾ ಕೊಲೆಸ್ಟ್ರಾಲ್ ಮಟ್ಟವು ತುಂಬಾ ಹೆಚ್ಚಿರುವವರಿಗೆ ಬಿದಿರು ಪ್ರಯೋಜನಕಾರಿಯಾಗಬಲ್ಲದ್ದು. ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಹೃದಯಘಾತ ಸಮಸ್ಯೆ ಸೇರಿದಂತೆ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ…
ಆಗಾಗ್ಲೆ, ಹವಾಮಾನದಲ್ಲಾಗುವ ಬದಲಾವಣೆಯಿಂದಾಗಿ ಮಹಿಳೆಯರು ವಿವಿಧ ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಬಿದಿರಿನ ಬಾಟಲಿಯಲ್ಲಿ ಇಟ್ಟಿರುವ ನೀರನ್ನು ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಬಿದಿರು ಶೀತದಿಂದಾಗುವ ಸಮಸ್ಯೆಗಳಿಂದ ದೇಹವನ್ನು ರಕ್ಷಿಸುತ್ತದೆ.
ನಿಮ್ಮ ಒಮ್ಮೆಯಾದರೂ ಬಿದಿರಿನ ಬಾಟಲಿಯಲ್ಲಿ ನೀರು ಕುಡಿಯಲು ಪ್ರಯತ್ನಿಸಬಹುದು. ದೈನಂದಿನ ಜೀವನದಲ್ಲಿ ಆರೋಗ್ಯವಾಗಿರಲು ಬಯಸಿದರೆ ಬಿದಿರು ನಿಮಗೂ ಉಪಯೋಗವಾಗಬಲ್ಲದ್ದು.
ಬಿದಿರಿನ ಇತರ ಉಪಯೋಗಗಳು..!
ಕಾಗದದ ತಯಾರಿಕೆಯಲ್ಲಿ ಹಾಗೂ ರಯಾನ್ ಬಟ್ಟೆಯ ತಯಾರಿಕೆಯನ್ನು ಬಿದಿರನ್ನು ಉಪಯೋಗಿಸಲಾಗುತ್ತದೆ
ಮನೆಗಳ ನಿರ್ಮಾಣದಲ್ಲಿ ಬಳಕೆ
ತೆಪ್ಪ, ದೋಣಿ,. ದೀಪದ ಕಂಬ, ಏಣಿ, ತೊಟ್ಟಿಲು, ಕೊಳಲುವಾದನದ ತಯಾರಿಕೆಯಲ್ಲಿ
ಕೃಷಿಯಲ್ಲಿ ಬಳಸುವ ವಿವಿಧ ಉಪಕರಣಗಳಲ್ಲಿ
ಪಿಠೋಪಕರಣ ತಯಾರಿಕೆಯಲ್ಲಿ ಕುರ್ಚಿ, ಮೇಜು, ಚಾಪೆ ಮತ್ತು ಬುಟ್ಟಿ. ಮಂಕರಿ , ಬೀಸಣಿಕೆಯಲ್ಲಿ
ಬಿದಿರಿನ ಚಿಗುರೆಲೆಯನ್ನು ಜಜ್ಜಿ, ಗಾಯ ಹಾಗೂ ಊತ ಉಂಟಾಗದರೆ ಲೇಪನ ಮಾಡಲಾಗುತ್ತದೆ. ಪಿತ್ತ ರಕ್ಷಕ, ಚರ್ಮರೋಗ , ವಾಂತಿ , ಅತಿಸಾರ ಸಾಮಾನ್ಯ ದೌರ್ಬಲ್ಯ, ಮೂತ್ರ ಸಮಸ್ಯೆ, ಜ್ವರಕ್ಕೆ ದಿವ್ಯಾಷಧಿ ಎಂದೇ ಹೇಳಬಹುದು.
'ನೀರಸಾಗರ'ಕ್ಕೆ ಹರಿದುಬರುತ್ತಿದೆ ನೀರು | Prajavani
ಈ ಬಾರಿಯಾದರೂ ಭರ್ತಿಯಾಗುವುದೇ ಜಲಾಶಯ?
'ನೀರಸಾಗರ'ಕ್ಕೆ ಹರಿದುಬರುತ್ತಿದೆ ನೀರು
Published: 15 ಜೂನ್ 2018, 17:36 IST
Updated: 15 ಜೂನ್ 2018, 17:36 IST
ಹುಬ್ಬಳ್ಳಿ: ಸತತ ಮೂರು ವರ್ಷಗಳ ಬರದಿಂದ ಸಂಪೂರ್ಣ ಬತ್ತಿಹೋಗಿದ್ದ ಕಲಘಟಗಿ ತಾಲ್ಲೂಕಿನ 'ನೀರಸಾಗರ' ಜಲಾಶಯಕ್ಕೆ ಮುಂಗಾರು ಮಳೆಯಿಂದಾಗಿ ಒಂದು ಅಡಿಗೂ ಹೆಚ್ಚು ನೀರು ಹರಿದುಬಂದಿದೆ.
2010ರಲ್ಲಿ ಜಲಾಶಯ ಭರ್ತಿಯಾಗಿತ್ತು. ನಂತರ ಕಳೆದ ಎಂಟು ವರ್ಷಗಳಲ್ಲಿ ಭರ್ತಿಯಾಗಿಲ್ಲ. ಪ್ರಸ್ತುತ ನೀರಸಾಗರ ಜಲಾನಯನ ಪ್ರದೇಶವಾದ ಅಳ್ನಾವರ ಮತ್ತು ಕಲಘಟಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣ ಗಮನಿಸಿದರೆ ಈ ವರ್ಷ ಜಲಾಶಯ ಭರ್ತಿಯಾಗಬಹುದು ಎಂಬ ಆಸೆ ಜನರಲ್ಲಿ ಚಿಗುರೊಡೆದಿದೆ.
ಹಳೇ ಹುಬ್ಬಳ್ಳಿ, ಗೋಕುಲ ರೋಡ್‌ ವ್ಯಾಪ್ತಿಯ ಶೇ 30ರಷ್ಟು ನಗರ ಪ್ರದೇಶಕ್ಕೆ ನಿತ್ಯ 35–40 ಎಂಎಲ್‌ಡಿ ಕುಡಿಯುವ ನೀರು ಪೂರೈಸುವ 'ನೀರಸಾಗರ' ಜಲಾಶಯ ಬತ್ತಿಹೋಗಿದ್ದರಿಂದ ಮೂರು ವರ್ಷಗಳಿಂದ ನೀರು ಪೂರೈಕೆ ಸ್ಥಗಿತವಾಗಿತ್ತು. ಮುಂಗಾರು ಆರಂಭದಲ್ಲೇ ನೀರು ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಈ ವರ್ಷವಾದರೂ ಪರಿಹಾರ ಸಿಗಬಹುದು ಎಂಬ ನ...
ಅಗತ್ಯ ಸಿದ್ಧತೆ: ಜಲಾಶಯದಲ್ಲಿ ಸದ್ಯ ಡೆಡ್‌ಸ್ಟೋರೇಜ್‌ ಸೇರಿದಂತೆ 7 ಅಡಿ ನೀರು ಇದೆ. ಕನಿಷ್ಠ 15 ಅಡಿ ನೀರು ಸಂಗ್ರಹವಾದ ಬಳಿಕ ನಗರಕ್ಕೆ ನೀರು ಪೂರೈಕೆ ಆರಂಭಿಸಲಾಗುವುದು. ಮೂರು ವರ್ಷಗಳಿಂದ ಪಂಪಿಂಗ್ ಕಾರ್ಯಾಚರಣೆ ಇಲ್ಲದ್ದರಿಂದ ಯಂತ್ರಗಳ ಸುಸ್ಥಿತಿಯಲ್ಲಿಲ್ಲ. ಅವುಗಳನ್ನು ದುರಸ್ತಿ ಮಾಡಲಾಗುವುದು ಹಾಗೂ ಪೈಪ್‌ಲೈನ್‌ ಸ್ವಚ್ಛಗೊಳಿಸಲಾಗುವುದು ' ಎಂದು ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಎ...
ಹಳ್ಳಿಗಳಿಗೂ ಆಧಾರ: ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ನೀರಸಾಗರ ಜಲಾಶಯ ಕೇವಲ ಹುಬ್ಬಳ್ಳಿ ನಗರಕ್ಕೆ ಮಾತ್ರವಲ್ಲದೇ ಕಲಘಟಗಿ ತಾಲ್ಲೂಕಿನ ಹತ್ತಾರು ಹಳ್ಳಿಗಳ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲವಾಗಿದೆ. ಜೊತೆಗೆ ಕೃಷಿ ಚಟುವಟಿಕೆಗೂ ಆಧಾರವಾಗಿದೆ.
1955ರಲ್ಲಿ ಜಲಾಶಯ ನಿರ್ಮಾಣ
ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಸಂಬಂಧ 1955ರಲ್ಲಿ ಮೊದಲ ಹಂತದಲ್ಲಿ ಬೇಡ್ತಿ ಹಳ್ಳಕ್ಕೆ ಕಲಘಟಗಿ ತಾಲ್ಲೂಕಿನ ನೀರಸಾಗರ ಗ್ರಾಮದ ಬಳಿ ಜಲಾಶಯ ನಿರ್ಮಾಣವಾಯಿತು. ಬಳಿಕ 1969ರಲ್ಲಿ ಎರಡನೇ ಹಂತದ ಯೋಜನೆ ಕೈಗೊಳ್ಳುವ ಮೂಲಕ ಜಲಾಶಯದ ಎತ್ತರ ಹೆಚ್ಚಿಸಲಾಯಿತು.
ಬೇಡ್ತಿ ಹಳ್ಳವು ನೀರಿನ ಪ್ರಮುಖ ಮೂಲವಾಗಿದ್ದು, 181 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. ನೀರಸಾಗರ ಸಮೀಪವೇ ಜಲಾಗಾರವಿದೆ. 2002ರಲ್ಲಿ ಜಲಾಶಯದಲ್ಲಿ ಹೂಳೆತ್ತುವ ಮೂಲಕ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲಾಗಿತ್ತು. ಪ್ರಸ್ತುತ 1.02 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
ಮರೀಚಿಕೆಯಾದ ಅಭಿವೃದ್ಧಿ
ನೀರಸಾಗರ ಜಲಾಶಯಕ್ಕೆ ಹೊಂದಿ ಕೊಂಡಂತೆ 110 ಎಕರೆ ಜಮೀನು ಇದ್ದು, ಇಲ್ಲಿ ಉದ್ಯಾನ ನಿರ್ಮಿಸುವ ಮೂಲಕ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿಸುವ ಪ್ರಸ್ತಾವ ಹತ್ತಾರು ವರ್ಷಗಳಿಂದಲೂ ಇದೆ.
ದರ್ಪಣ್‌ ಜೈನ್‌ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಯೋಜನೆಗೆ ಚಾಲನೆ ಸಿಕ್ಕಿತ್ತು. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿದ್ದರು. ಆದರೆ, ಹಣ ಬಿಡುಗಡೆಯಾಗಿಲ್ಲ. ಅಭಿವೃದ್ಧಿಯೂ ಆಗಲಿಲ್ಲ. ಸದ್ಯ ಕಾಂಪೌಂಡ್ ಬಿಟ್ಟರೆ ಉಳಿದ ಯಾವ ಸೌಲಭ್ಯವನ್ನು ಜಿಲ್ಲಾಡಳಿತ ಕಲ್ಪಿಸಿಲ್ಲ.
ಪತ್ರಿಕೆಗಳು ಗ್ರಾಮೀಣ ಪತ್ರಿಕೋದ್ಯಮಕ್ಕೆ ಒತ್ತು ನೀಡಬೇಕು: ಗಂಗಾಧರ ಮುದಲಿಯಾರ್‌ - Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ
ಪತ್ರಿಕೆಗಳು ಗ್ರಾಮೀಣ ಪತ್ರಿಕೋದ್ಯಮಕ್ಕೆ ಒತ್ತು ನೀಡಬೇಕು: ಗಂಗಾಧರ ಮುದಲಿಯಾರ್‌
ಕುಂದಾಪುರ: ಪತ್ರಿಕೋದ್ಯಮದ ಹುಸಿ ಸಂಸ್ಕೃತಿಯಲ್ಲಿ ಬದುಕುತ್ತಿರುವ ನಾವು ನಗರ ಹಾಗೂ ಸೈಬರ್‌ ಪತ್ರಿಕೋದ್ಯಮದ ನಡುವೆ ಗ್ರಾಮೀಣ ಪತ್ರಿಕೋದ್ಯಮವನ್ನು ಮರೆತು ಬಿಟ್ಟಿದ್ದೇವೆ. ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿ ಪ್ರವಾಹ ರೂಪದಲ್ಲಿ ನುಗ್ಗುತ್ತಾ ಇರುವ ದಿನಗಳಲ್ಲಿ ಈ ಕ್ಷೇತ್ರ ಅಡ್ಡದಾರಿಯತ್ತ ಸಾಗಲು ಕಾರಣ ಏನು ಎನ್ನುವುದನ್ನು ವಿಶ್ಲೇಷಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ...
ಅವರು ಕುಂದಾಪುರದ ರೋಟರಿ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ಕುಂದಪ್ರಭ ಆಶ್ರಯದಲ್ಲಿ ನಡೆದ ಕೋ.ಮ. ಕಾರಂತ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸ್ಫರ್ದೆಗೆ ಇಳಿದಿವೆ. ಟಿ.ವಿ. ಮಾಧ್ಯಮ ಇದಕ್ಕೆ ಹೊರತಾಗಿಲ್ಲ. ಟಿ.ವಿ. ಮಾಧ್ಯಮ ಅಜ್ಞಾನ ಹಾಗೂ ಮನುಷ್ಯ-ಮನುಷ್ಯನ ನಡುವೆ ವಿರಸದ ಬೀಜ ಬಿತ್ತುತ್ತಾ ಟಿ.ಆರ್‌.ಪಿ. ಹೆಚ್ಚಿಸಿಕೊಳ್ಳುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ ಸಾಹಿತ್ಯಕ ನೆಲಗಟ್ಟಿದೆ. ಕರ್ನಾಟಕ ಪತ್ರಿಕೋದ್ಯಮಕ್ಕೆ ಉತ್ತಮ ಸಂಸ್ಕೃತಿ ಬೇರು ಇದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪತ್ರಿಕೋದ್ಯಮಕ್ಕ...
ಬೆಂಗಳೂರಿನ ಸೆಲ್ಕೋ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಡಾ| ಹರೀಶ್‌ ಹಂದೆ ಅವರಿಗೆ ಕೋ.ಮ. ಕಾರಂತ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಉಪ್ಪುಂದ ಸೀತಾರಾಮ ಶೆಟ್ಟಿ ಶುಭಾಸಂಶನೆಗೈದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ದತ್ತಾನಂದ ಗಂಗೊಳ್ಳಿ ಉಪಸ್ಥಿತರಿದ್ದರು.
ಕುಂದಪ್ರಭದ ಯು.ಎಸ್‌. ಶೆಣೈ ಸ್ವಾಗತಿಸಿದರು. ಪ್ರಾಧ್ಯಾಪಕ ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದರು. ಕೋ.ಶಿ. ಕಾರಂತ ಸಮ್ಮಾನ ಪ್ರಶಸ್ತಿ ಪತ್ರ ವಾಚಿಸಿದರು.
ಹಿಂದು ಧರ್ಮ ನಾಶ ಅಸಾಧ್ಯ ·
ಹಿಂದು ಧರ್ಮ ನಾಶ ಅಸಾಧ್ಯ
Uttara Kannada December 16, 2018 12:01 PM
ಗೋಕರ್ಣ: ಹಿಂದು ಧರ್ಮ ಉಳಿದ ಧರ್ಮಗಳಂತೆ ಮಾನವ ನಿರ್ವಿುತವಲ್ಲ. ಅದು ಅಪೌರುಷೇಯವಾದುದು. ಇದರಿಂದಾಗಿಯೇ ಅದನ್ನು ಹೊರಗಿನ ಯಾವ ಶಕ್ತಿಗಳೂ ನಾಶ ಮಾಡಲಾರವು ಎಂದು ಹಿರಿಯ ಧಾರ್ವಿುಕ ಚಿಂತಕ ಡಾ. ಕೆ.ಎಸ್. ನಾರಾಯಣಾಚಾರ್ಯ ಹೇಳಿದರು.
ವೇದವ್ಯಾಸ ಪ್ರತಿಷ್ಠಾನ ವತಿಯಿಂದ ಶನಿವಾರ ಕವಳೇಮಠ ಸಭಾಂಗಣದಲ್ಲಿ ಪ್ರಾರಂಭವಾದ ಮಹಾಭಾರತ ಉಪನ್ಯಾಸ ಮಾಲಿಕೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಮಾಯಣ ಮಹಾಭಾರತದ ಬಗ್ಗೆ ಹಗುರವಾಗಿ ಮಾತನಾಡುವವರಿದ್ದಾರೆ. ಆದರೆ ಇವುಗಳು ಹುಡುಗಾಟವಲ್ಲ. ಇವುಗಳ ಅಸ್ತಿತ್ವದ ಬಗ್ಗೆ ಬೇಕಾದಷ್ಟು ದಾಖಲೆಗಳಿವೆ. ಇತ್ತೀಚಿನ ದಿನಗಳಲ್ಲಿ ಬೌದ್ಧಿಕ ವಾದಿಗಳು ಎಂದು ಕರೆದುಕೊಳ್ಳುವ ಕೆಲವರು ರಾಮನ ಬದಲು ರಾವಣನ ಪೂಜೆಗೆ ಮುಂದಾಗಿದ್ದಾರೆ. ರಕ್ಕಸ ಮಹಿಷಾಸುರನ ಜಯಂತಿ ಆಚರಿಸುವವರೂ ಇದ್ದಾರೆ. ಇದಕ್ಕೆಲ್ಲ ಪ್ರೇರಣೆ ಹಾರ್ವರ್ಡ್​ನಲ್ಲಿದೆ. ನಮ್ಮ ಸನಾತನ ವಿಚಾರ ಧಾರೆಯ ಒ...
ಪತ್ರಕರ್ತ ವಿನಾಯಕ ಭಟ್ಟ ಮೂರೂರು ಮಾತನಾಡಿ, ರಾಮಾಯಣ ಮಹಾಭಾರತವನ್ನು ಹೇಳುವವರು ಮತ್ತು ಕೇಳುವವರು ಇಂದು ಕಡಿಮೆಯಾಗುತ್ತಿದ್ದಾರೆ. ಇವುಗಳು ಪರಂಪರೆಯಿಂದ ನಮಗೆ ಕೊಟ್ಟ ಮೌಲ್ಯಗಳು ಯಾರಿಗೂ ಬೇಕಿಲ್ಲ. ಇಂದಿನದನ್ನು ಕಳೆದರೆ ಸಾಕು. ಅದೇ ಬದುಕು ಎಂಬ ಪ್ರಜ್ಞೆಯತ್ತ ಸಮಾಜ ಸಾಗುತ್ತಿರುವುದು ವಿಷಾದನೀಯ ಎಂದರು.
ಕುಮಾರಿ ಅರುಧತಿ ಶಾಸ್ತ್ರಿ ಆಚಾರ್ಯರಿಗೆ ಮಾಲಾರ್ಪಣೆ ಮಾಡಿದಳು. ಪ್ರತಿಷ್ಠಾನದ ವೇ. ಶ್ರೀಧರ ಭಟ್ಟ, ಯಕ್ಷಗಾನದ ಹಿರಿಯ ಕಲಾವಿದ ಅನಂತ ಹಾವಗೋಡಿ, ಡಾ.ಮಹಾಬಲಮೂರ್ತಿ ಶಾಸ್ತ್ರಿ, ಮಹೇಶ ಹಿರೇಗಂಗೆ ಇತರರು ಇದ್ದರು.
ರಾಜ್ಯದಲ್ಲಿ ಬರೋಬ್ಬರಿ 82 ಸಾವಿರ ಮಕ್ಕಳು ಶಾಲೆಯಿಂದ ಹೊರಗೆ! ಇದೇನಿದು? | 82K children quit schools this year - Kannada Oneindia
| Published: Monday, November 5, 2018, 9:37 [IST]
ಕರ್ನಾಟಕದಲ್ಲಿ ಬರೋಬ್ಬರಿ 82 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ | Oneindia Kannada
ಬೆಂಗಳೂರು, ನವೆಂಬರ್ 5: ಕರ್ನಾಟಕದಲ್ಲಿ ಸುಮಾರು 82 ಸಾವಿರ ಮಕ್ಕಳು ಶಾಲೆಯಿಂದ ಹೊರಗೆ ಇದೇನಿದು ವಿಚಿತ್ರ ಅಂತೀರಾ ಈ ಮಕ್ಕಳು ಶಾಲೆಯ ಶಿಕ್ಷಣದಿಂದ ದೂರ ಇದ್ದಾರೆ.
ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತರಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.ಹೀಗಾಗಿ ಬಲವಾದ ಕಾರಣ ಏನೆಂದು ಅರಿಯಲು ನಿರ್ಧರಿಸಿದೆ.
ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಕುರಿತು ನಿರ್ದಿಷ್ಟವಾದ ಅಂಕಿ ಅಂಶ ಲಭ್ಯವಾಗುತ್ತಿಲ್ಲ. ಈ ಕುರಿತು ದತ್ತಾಂಶ ಸಂಗ್ರಹಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಹೊಸ ಸಮೀಕ್ಷೆ ನಡೆಸಲು ನಿರ್ಧರಿಸಿದೆ.
ಈ ಕುರಿತು ಚರ್ಚೆ ನಡೆಸಲು ನವೆಂಬರ್ 14ರಂದು ಗ್ರಾಮ ಸಭೆ ನಡೆಸಲು ಚಿಂತನೆ ನಡೆದಿದೆ. ಎಸ್‌ಎಟಿಎಸ್ ಮೂಲಕ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯೇನೋ ಇದೆ ಆದರೆ ಎಸ್‌ಎಟಿಎಸ್ ವ್ಯವಸ್ಥೆಯಲ್ಲಿ ನಮೂದಿಸಲಾಗುವ ವಿದ್ಯಾರ್ಥಿಗಳ ಸಂಖ್ಯೆ, ಕೇಣದ್ರ ಮಾನವ ಸಂಪನ್ಮೂಲ ಸಚಿವಾಲಯದ ಬಳಿ ಇರುವ ಅಂಕಿ ಅಂಶಗಳಿಗೂ ಭಾರಿ ವ್ಯತ್ಯಾಸ ಕಂಡುಬಂದಿರುವ ಕಾರಣ ಹೊಸದಾಗಿ ಸಮೀಕ್ಷೆ ನಡೆಸಲು ಸಿದ್ಧತೆ ನಡೆದಿದೆ.
ಒಟ್ಟು 82 ಸಾವಿರ ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗೆ
2018-19ನೇ ಸಾಲಿನಲ್ಲಿ 6ರಿಂದ 16 ವರ್ಷದ ಸುಮಾರು 82 ಸಾವಿರ ವಿದ್ಯಾರ್ಥಿಗಳು ಶಾಲೆಗಳಿಂದ ಹೊರಗುಳಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಪ್ರತಿಯೊಬ್ಬರನ್ನೂ ಶಿಕ್ಷಿತರನ್ನಾಗಿ ಮಾಡಬೇಕೆಂಬ ಗುರಿಹೊಂದಿದ್ದಾರೆ. ಹಿರಿಯ ನಾಗರಿಕರಿಗೂ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ ಮಕ್ಕಳೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಸಮೀಕ್ಷೆಯಲ್ಲಿ ಯಾರ್ಯಾರಿರ್ತಾರೆ?
ಶಾಲಾ ವಿದ್ಯಾರ್ಥಿಗಳ ವಿಸ್ತೃತ ಮತ್ತು ಪರಿಣಾಮಕಾರಿಯಾದ ಸಮೀಕ್ಷೆ ನಡೆಸುವ ಅಗತ್ಯವಿದ್ದು, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಕಾರ್ಮಿಕ, ನಗರಾಭಿವೃದ್ಧಿ ಮತ್ತು ಮಕ್ಕಳ ಅಭಿವೃದ್ಧಿ ಆರೋಗ್ಯ ಇಲಾಖೆಯಗಳ ಸಮನ್ವಯದೊಂದಿಗೆ ಗ್ರಾಮ ಪಂಚಾಯ್ತಿ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಎನ್‌ಎಸ್‌ಎಸ್ ಸೇರಿದಂತೆ ಇತರೆ ಸ್ವಯಂ ಸೇವಕರ ತಂಡ ರಚಿಸಿ ಸಮೀಕ್ಷೆ ನಡೆಸುವಂತೆ...
ನವೆಂಬರ್ 14ರಂದು ವಿದ್ಯಾರ್ಥಿಗಳ ಸಮೀಕ್ಷೆ
ನವೆಂಬರ್ 14ರಂದು ಗ್ರಾಮ ಸಭೆ ನಡೆಯಲಿದೆ, ಶಿಕ್ಷಕರು ಶಾಲೆಯಿಂದ ಹೊರಗುಳಿದಿರುವ ಮತ್ತು ಎಸ್‌ಎಟಿಎಸ್ ತಂತ್ರಾಂಶದ್ಲಿ ಅಪ್‌ಡೇಟ್ ಆಗ ಮಕ್ಕಳ ಮಾಹಿತಿಯನ್ನು ನೀಡಲಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಪತ್ತೆ ಹಚ್ಚಲಿದ್ದಾರೆ. ನವೆಂಬರ್ 17ರಿಂದ 28ರವರೆಗೆ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಇತರೆ ತಂದದೊಂದಿಗೆ ಸಮೀಕ್ಷೆ ಕೈಗೊಳ್ಳಲಿದ್ದಾರೆ.
ಸಮೀಕ್ಷೆಗೆ ಮೂರು ತಂಡ ರಚನೆ
ಸಮೀಕ್ಷೆಯ ಮೇಲ್ವಿಚಾರಣೆಗೆ ರಾಜ್ಯ ಮತ್ತು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಮೂರು ಸಮಿತಿ ರಚನೆ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಈ ಸಮಿತಿಗೆ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
bengaluru school students survey ಬೆಂಗಳೂರು ಶಾಲೆ ವಿದ್ಯಾರ್ಥಿಗಳು ಸಮೀಕ್ಷೆ
Even after implementing several programs to make children come to school, 82,713 children dropped out of school this year. says data released by the department of public instructions.
ತಾಯಿ-ಮಗಳ ಸಂಘರ್ಷದಿಂದ ನಿರ್ಲಕ್ಷ್ಯಕ್ಕೊಳಗಾದ ಯುವತಿಯರಲ್ಲಿ ಆತ್ಮಹತ್ಯೆಯ ಚಿಂತನೆ ಹೆಚ್ಚು! | Mother-daughter conflict ups suicide risk in abused teen girls | Kannadaprabha.com
Monday, June 17, 2019 10:41 AM IST
ತಾಯಿ-ಮಗಳ ಸಂಘರ್ಷದಿಂದ ನಿರ್ಲಕ್ಷ್ಯಕ್ಕೊಳಗಾದ ಯುವತಿಯರಲ್ಲಿ ಆತ್ಮಹತ್ಯೆಯ ಚಿಂತನೆ ಹೆಚ್ಚು!
Published: 25 Oct 2018 04:19 PM IST | Updated: 25 Oct 2018 04:20 PM IST
ನ್ಯೂಯಾರ್ಕ್ : ಬಾಲ್ಯದಲ್ಲಿ ಹಿಂಸೆ ಅನುಭವಿಸಿದ್ದ ಯುವತಿಯರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ತಾಯಿ ಜೊತೆಗೆ ಉತ್ತಮ ಸಂಬಂಧ ವಿಲ್ಲದೆ ಸಂಘರ್ಷ ಎದುರಿಸುತ್ತಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಹೆಚ್ಚಿನ ಚಿಂತನೆ ನಡೆಸುತ್ತಾರೆ ಎಂಬುದು ತಿಳಿದುಬಂದಿದೆ.
ಬಾಲ್ಯದಲ್ಲಿ ಮಾನಸಿಕ, ದೈಹಿಕ, ಮತ್ತಿತರ ಕಿರುಕುಳ ಅನುಭವಿಸಿದವರು ಹದಿಹರೆಯದ ವಯಸ್ಸಿನಲ್ಲಿ ತಾಯಿ ಜೊತೆಗೆ ಉತ್ತಮ ಸಂಬಂಧ ಇರದಿದ್ದಾಗ ಆತ್ಮಹತ್ಯೆಯಂತಹ ಚಿಂತನೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ತಾಯಿ- ಮಗಳ ಸಂಬಂಧ ಸರಿ ಇಲ್ಲದಿದ್ದರೆ ಹಾಗೂ ಬಾಲ್ಯದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದರೆ ಅಂತಹವರು ಹದಿಹರೆಯಕ್ಕೆ ಬಂದಾಗ ಆತ್ಮಹತ್ಯೆಗೆ ಯೋಚಿಸುತ್ತಾರೆ ಎಂಬುದು ತಮ್ಮ ಸಂಶೋಧನೆಯಿಂದ ತಿಳಿದುಬಂದಿದೆ ಎಂದು ರೋಚೆಸ್ಟಾರ್ ವಿಶ್ವವಿದ್ಯಾಲಯದ ಸಹಾಯಕ ಪ್ರೋಫೆಸರ್ ಏಲಿಜಬೆತ್ ಹ್ಯಾಂಡ್ಲಿ ಹೇಳಿದ್ದಾರೆ.
ಆರೋಗ್ಯ ಅಭಿವೃದ್ದಿ ನಿಟ್ಟಿನಲ್ಲಿ ತಾಯಿ ಹಾಗೂ ಮಕ್ಕಳ ಸ್ಥಿರ, ಸಂಬಂಧ, ಪೋಷಣೆ, ಕುರಿತಂತೆ ದಶಕಗಳ ಕಾಲ ಸಂಶೋಧನೆ ನಡೆಸಲಾಗಿದ್ದು, ಯುವತಿಯರು ಹೆಚ್ಚಿನ ಸಮಯವನ್ನು ತಮ್ಮ ಸ್ನೇಹಿತರೊಂದಿಗೆ ಹಾಗೂ ಕುಟುಂಬದ ಜೊತೆಯಲ್ಲಿ ಕಡಿಮೆ ಸಮಯ ಕಳೆಯುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಆರ್ಥಿಕವಾಗಿ ಅನಾನುಕೂಲವಿರುವ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಖಿನ್ನತೆಗೊಳಗಾದ 164 ಯುವತಿಯರು ಹಾಗೂ ಅವರ ತಾಯಂದಿರು ಸೇರಿದಂತೆ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನ ಆತ್ಮಹತ್ಯೆ ಮತ್ತು ಜೀವನ ಬೆದರಿಕೆ ವರ್ತನೆ ಜರ್ನಲ್ ನಲ್ಲಿ ಪ್ರಕಟವಾಗಿದೆ.
ತಾಯಿ- ಮಗಳ ಗುಣಮಟ್ಟದ ಸಂಬಂಧ, ತಾಯಿ- ಮಗಳ ಸಂಘರ್ಷ, ಹಾಗೂ ಹದಿಹರೆಯದ ಯುವತಿಯರ ಖಿನ್ನತೆಗೆ ಕಾರಣಗಳನ್ನು ಈ ತಂಡ ಪರಿಕ್ಷೀಸಿದ್ದು, ಬಾಲ್ಯದಲ್ಲಿ ನಿಂದನೆಗೆ ಗುರಿಯಾಗಿದ್ದ ಶೇ. 51.8 ರಷ್ಟು ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ಸಾಯಬೇಕು ಎಂದು ಯೋಚಿಸುವುದು ಕಂಡುಬಂದರೆ, ಬಾಲ್ಯದಲ್ಲಿ ನಿಂದನೆಗೆ ಗುರಿಯಾಗದ ಶೇ, 11.7 ರಷ್ಟು ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಯೋಚನೆ ಮಾಡಿರುವು...
ಬರಲಿದೆ ಪುನೀತ್ ರಾಜಕುಮಾರ್ ಅವರ ಬಿಗ್ ಮೂವೀಸ್ : ಅಪ್ಪು ಗೆ ಸೂರಿ ,ಸಂತೋಷ್ ಡೈರೆಕ್ಸನ್ : ಈ ಸುದ್ದಿ ನೋಡಿ. - Suddi Mane
Home Suddi Mane ಬರಲಿದೆ ಪುನೀತ್ ರಾಜಕುಮಾರ್ ಅವರ ಬಿಗ್ ಮೂವೀಸ್ : ಅಪ್ಪು ಗೆ ಸೂರಿ ,ಸಂತೋಷ್ ಡೈರೆಕ್ಸನ್...
ಬರಲಿದೆ ಪುನೀತ್ ರಾಜಕುಮಾರ್ ಅವರ ಬಿಗ್ ಮೂವೀಸ್ : ಅಪ್ಪು ಗೆ ಸೂರಿ ,ಸಂತೋಷ್ ಡೈರೆಕ್ಸನ್ : ಈ ಸುದ್ದಿ ನೋಡಿ.
ಜಾಕಿ, ಅಣ್ಣಾ ಬಾಂಡ್, ದೊಡ್ಮನೆ ಹುಡುಗದಂತಹ ಅದ್ಬುತ ಚಿತ್ರಗಳನ್ನು ನೀಡಿದ ಜೋಡಿ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ನಿರ್ದೇಶಕ ಸೂರಿ. ಈಗ ಇವರಿಬ್ಬರು ಕಾಂಬಿನೇಷನ್ ನಲ್ಲಿ ಒಂದು ಹೊಸ ಚಿತ್ರ ಸೆಟ್ಟೇರಲಿದೆ ಎಂದರೆ, ಎಲ್ಲರ ಚಿತ್ತ ಆ ಕಡೆ ಹರಿಯುತ್ತದೆ. ಮುಹೂರ್ತದಿಂದಲೇ ಚಿತ್ರದ ಬಗ್ಗೆ ಸಿನಿ ರಸಿಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ಬಹಳಷ್ಟು ಕುತೂಹಲ ಮನೆ ಮಾಡುತ್ತದೆ. ಈಗ ನಿಜವಾಗಿಯೂ ಅಂತ...
ಹೀಗೊಂದು ಸುದ್ದಿ ಗಾಂಧಿ ನಗರದಲ್ಲಿ ಈಗಾಗಲೇ ಹರಡಿದ್ದು, ಸೂರಿ ಹಾಗೂ ಪುನೀತ್ ಅವರ ಕಾಂಬಿನೇಷನ್ ನಲ್ಲಿ ಚಿತ್ರವೊಂದು ಸೆಟ್ಟೇರುವ ಬಹುತೇಕ ಸೂಚನೆಗಳು ಲಭ್ಯವಾಗಿವೆ. ಡಾ.ಶಿವರಾಜಕುಮಾರ್ ಅವರ ಜೊತೆ ಟಗರು ನಂತಹ ಬ್ಲಾಕ್‌ಬಸ್ಟರ್ ಸಿನಿಮಾ ಮಾಡಿದ ನಂತರ ಪ್ರಸ್ತುತ ನಿರ್ದೇಶಕ ಸೂರಿ ಅವರು ತಮ್ಮ ಬಹು ವಿಶೇಷ ಹೆಸರಿನಿಂದಲೇ ಜನರನ್ನು ಸೆಳೆಯುತ್ತಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ತೊಡಗಿಕೊಂ...
ವಿಶೇಷವೆಂದರೆ ಅದು ಪುನೀತ್ ರಾಜ್‍ಕುಮಾರ್ ಅವರ ಅಭಿನಯದ 30 ನೇ‌ ಚಿತ್ರವಾಗಿದೆ. ಆದ್ದರಿಂದಲೇ ನಿರೀಕ್ಷೆ ಕೂಡಾ ಭಾರೀ ಪ್ರಮಾಣದಲ್ಲಿದೆ. ನಿರ್ದೇಶಕ ಸೂರಿ ಅವರಿಗೆ ಪುನೀತ್ ರಾಜ್‍ಕುಮಾರ್ ಅವರ ನೆಚ್ಚಿನ ನಟರಾಗಿದ್ದು , ಅವರ ಜೊತೆ ಕೆಲಸ ಮಾಡುವುದು ತನಗೆ ಇಷ್ಟವೆಂದು, ಪುನೀತ್ ಅವರು ಪಾತ್ರಕ್ಕೆ ತಕ್ಕಂತೆ ನಟಿಸಿ , ನಿರ್ದೇಶಕನ ಕನಸನ್ನು ನನಸು ಮಾಡುತ್ತಾರೆಂದು ಹೇಳಿದ್ದಾರೆ. ಅಲ್ಲದೆ ಟಗರು ೨ ರ ಬಗ...
ಸಂತೋಷ್ ಆನಂದ್ ರಾಮ್ ನಿರ್ದೇಶನದ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರದ ಟೈಟಲ್ ಲಾಂಚ್ ನವೆಂಬರ್ ಒಂದನೇ ತಾರೀಖು ಅಫಿಷಿಯಲ್ ಆಗಿ ಅನೌನ್ಸ್ ಆಗಲಿದ್ದು ನವೆಂಬ ಒಂದರಂದು ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಿಂದಲೇ ಈ ಹೊಸ ಚಿತ್ರದ ಟೈಟಲ್ ಲಾಂಚ್ ಆಗಲಿದೆ. ಇನ್ನು ಇಂಡಸ್ಟ್ರಿ ಹಿಟ್ ಹಾಗಿದ್ದ ರಾಜಕುಮಾರ ಚಿತ್ರದ ನಂತರ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದರಾಮ್ ಮತ್...
ಇನ್ನು ಪುನೀತ್ ರಾಜ್‍ಕುಮಾರ್ ಅವರ ಅಭಿನಯದ 29 ನೇ ಚಿತ್ರಕ್ಕೆ ಜ್ವಾಲಾಮುಖಿ ಎಂಬ ಹೆಸರನ್ನು ಇಡಲಾಗಿದೆ ಎಂದು ಕೇಳಿಬಂದಿದ್ದು, ಇದು ಡಾ.ರಾಜ್‍ಕುಮಾರ್ ಅವರು ನಟಿಸಿದ್ದ ಸೂಪರ್ ಹಿಟ್ ಚಿತ್ರದ ಹೆಸರಾಗಿದೆ. ಈ ಹಿಂದೆ ದೇವತಾ ಮನುಷ್ಯ ಹಾಗೂ ಪರಶುರಾಮ್ ಎಂಬ ಹೆಸರು ಕೂಡಾ ಕೇಳಿ ಬಂದಿತ್ತಾದರೂ, ಈಗ ಜ್ವಾಲಾಮುಖಿ ಎಂದು ಇಡಲಾಗಿದೆ ಎನ್ನಲಾಗಿದೆ. ಈ ಹೊಸ ಚಿತ್ರವು ಪುನೀತ್ ರಾಜ್‍ಕುಮಾರ್ ಹಾಗೂ ಸಂತೋಷ್ ಆ...
ಮುಜರಾಯಿ ಇಲಾಖೆ ಎಂದರೆ ಸರ್ಕಾರಕ್ಕೆ ತಾತ್ಸಾರ ಏಕೆ ? - News13
News13 > ಅಂಕಣಗಳು > ಪ್ರಚಲಿತ > ಮುಜರಾಯಿ ಇಲಾಖೆ ಎಂದರೆ ಸರ್ಕಾರಕ್ಕೆ ತಾತ್ಸಾರ ಏಕೆ ?
Thursday, March 16th, 2017 ಹನುಮಂತ ಮ. ದೇಶಕುಲಕರ್ಣಿ
ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ದೇವಸ್ಥಾನಗಳ ಪೈಕಿ 'ಎ' ದರ್ಜೆಯಲ್ಲಿರುವ ದೇವಸ್ಥಾನಗಳ ಆದಾಯ ಕೋಟಿಗೂ ಅಧಿಕವಾಗಿರುತ್ತದೆ. 'ಬಿ' ದರ್ಜೆಯಲ್ಲಿರುವ ದೇವಸ್ಥಾನಗಳಿಂದ ಸರಕಾರಕ್ಕೆ ಇದೆ. ಅದೇ ಮಾತು 'ಸಿ' ವರ್ಗದ ಅಧಿಸೂಚಿತ ಸಂಸ್ಥೆಗಳಿಗೆ ಆದಾಯ ಮೂಲವೂ ಇಲ್ಲ, ಬರೀ ಮಂಗಳಾರತಿ ತಟ್ಟೆಯಲ್ಲಿಯ ಆದಾಯವನ್ನೂ ಸಹ ತೋರಿಸಬೇಕಾದ ದೇವಸ್ಥಾನಗಳ ಪರಿಸ್ಥಿತಿ ವಿಭಿನ್ನವಾಗಿದೆ.
ಈ ಮಾತು ಏಕೆಂದರೆ 12ನೇ ಬಾರಿಗೆ ದಾಖಲೆ ಬಜೆಟ್ ಮಂಡಿಸಿದ ಹಣಕಾಸು ಖಾತೆಯನ್ನೂ ಹೊಂದಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಳೆದ ಬಾರಿಯಂತೆ ಈ ಬಾರಿಯು ಮುಜರಾಯಿ ಇಲಾಖೆಗೆ ಅನುದಾನ ನೀಡಿಲ್ಲ. ಸರಕಾರಕ್ಕೆ ಮುಜರಾಯಿ ಧಾರ್ಮಿಕ ಕ್ಷೇತ್ರಗಳ ಬಗ್ಗೆ ತಾತ್ಸಾರಭಾವನೆ ಏಕೆ ಎಂಬ ಪ್ರಶ್ನೆ ಮೂಡುತ್ತದೆ.
ಕೆಲ ತಿಂಗಳುಗಳ ಹಿಂದೆ ಮುಜರಾಯಿ ಸಚಿವರಾದ ರುದ್ರಪ್ಪ ಲಮಾಣಿಯವರು ಈ ವರ್ಷದ ಬಜೆಟ್‌ನಲ್ಲಿ ಇಲಾಖೆಗೆ ರೂ. 100ಕೋಟಿ ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿಯವರಿಗೆ ಬೇಡಿಕೆ ಮನವಿ ಸಲ್ಲಿಸಲಾಗಿದೆ ಎಂದು ಕಾರ್ಯಕ್ರಮದಲ್ಲಿ ವಿವರಿಸಿದ್ದರು.