text stringlengths 0 61.5k |
|---|
ತಾನು ಮತ್ತು ಇದಿರನ್ನು ಶಾಶ್ವತ ಭಾವಗಳೆಂದು |
ವಾದಿಸುವವರು (ಬುದ್ಧನ) ಉಪದೇಶವನ್ನು |
ಅರಿತಿದ್ದಾರೆಂದು ನಾನು ಭಾವಿಸುವುದಿಲ್ಲ |
(ಕಾರಿಕೆ ೧೬ ಅಧ್ಯಾಯ ೧೦) |
೮. ಅನಾಗಮಂ – ಅನಿರ್ಗಮಂ |
ಹೊದದೊಂದರ ಅಗಮನ ಸಾಧ್ಯವಿಲ್ಲ. ಇರುವ ಯಾವುದರ ನಿರ್ಗಮನವೂ ಸಾಧ್ಯವಿಲ್ಲ. ಪದಾರ್ಥಗಳಿಗೆ ರೂಪಾಂತರ ಸಾಧವೇ ಹೊರತು ವಿನಾಶವಲ್ಲ. ಆದರೆ ಬದಲಾವಣೆಯನ್ನೇ ನಾವು ವಿವಿಧ ಹಂತಗಳೆಂದು ಗುರುತಿಸಿಕೊಳ್ಳುತ್ತೇವೆ ಮತ್ತು ಆ ಹಂತಗಳನ್ನು ಶಾಶ್ವತದ ರೀತಿಯಲ್ಲಿ ಗ್ರಹಿಸುತ್ತೇವೆ. |
ನಾಗಾರ್ಜುನ ಲೋಕವಿವರಣೆಗಾಗಿ ಬಳಸಿಕೊಂಡಿರುವ ಈ ಎಂಟು ನಿರಾಕರಣೆಗಳು ಯಾವುಗಳನ್ನು ನಿರಾಕರಿಸುತ್ತಿವೆಯೋ ಅವು ಸಾಮಾನ್ಯ ಮತಿಗೆ ದೃಢವಾದ ಸಂರಚನೆಗಳಾಗಿ ಲೋಕಾನುಸಂಧಾನಕ್ಕೆ ಅಡ್ಡಿಯನ್ನುಂಟು ಮಾಡುತ್ತೇವೆ. ಇಂತಹ ಸಂರಚನೆಗಳನ್ನು ಗುಡಿಸಿ ಸ್ವಚ್ಛಗೊಳಿಸಿದ ಮೇಲಷ್ಟೇ ಪ್ರತೀತ್ಯ ಸಮುತ್ಪಾದದ ಮಹಾಯಾನ ಸಾಧ್ಯವಾಗುವುದು ಅದನ್ನು ಅಲ್ಲಮ ಹೀಗೆ ನುಡಿಯುತ್ತಾನೆ. |
ಆದಿಯಾಧಾರವಿಲ್ಲದಂದು |
ಹಮ್ಮುಬಿಮ್ಮುಗಳಿಲ್ಲದಂದು |
ಸುರಾಳ ನಿರಾಳವಿಲ್ಲದಂದು |
ಸಚರಾಚರವೆಲ್ಲ ರಚನೆಗೆ ಬಾರದಂದು |
ಗುಹೇಶ್ವರ, ನಿಮ್ಮ ಶರಣನದಯಿಸಿದನಂದು |
By kanaja|2015-06-25T22:27:01+05:30June 25, 2015|ವಿಶ್ಲೇಷಣೆ ಮತ್ತು ಸಂಶೋಧನೆ, ವ್ಯಕ್ತಿಸಾಹಿತ್ಯ, ಸಾಹಿತ್ಯ|0 Comments |
ತುಳು ಜಾನಪದ ವೈದ್ಯ-ಮರುಚಿಂತನೆ ಕಾರ್ಯಕ್ರಮ : ದೇರಳಕಟ್ಟೆ ನಿಟ್ಟೆ ಸಭಾಂಗಣದಲ್ಲಿ ಆಯೋಜನೆ | V4News |
ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಿಟ್ಟೆ ಗುಲಾಬಿ ಶೆಟ್ಟಿ ಔಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯ ತುಳು ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ತುಳು ಜಾನಪದ ವೈದ್ಯ-ಮರುಚಿಂತನೆ ಹಾಗೂ ಅಂತರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯಲ್ಲಿ ನಾಟಿ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮವು ನಿಟ್ಟೆ ಸಭಾಂಗಣದಲ್ಲಿ ನಡೆಯಿತು. |
ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಭಾಷಾ ಮತ್ತು ತೌಲನಿಕ ಸಾಹಿತ್ಯ ಅಧ್ಯಯನ ನಿಕಾಯದ ಶೈಕ್ಷಣಿಕ ಸಂಯೋಜಕ ಹಾಗೂ ಪ್ರಾದ್ಯಾಪಕ ಡಾ| ಬಿ. ಶಿವರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದೇಹದಲ್ಲಿ ಆಗುವ ಏರುಪೇರುಗಳನ್ನು ರೋಗವನ್ನಾಗಿ ಗ್ರಹಿಸದೆ ದೇಹವನ್ನು ಪ್ರಕೃತಿಯನ್ನಾಗಿ ಗ್ರಹಿಸಿ ಮದ್ದನ್ನು ಆಹಾರ ರೂಪದಲ್ಲಿ ನೀಡುವ ಸಂಸ್ಕೃತಿ ಜನಪದ ವೈದ್ಯ ಪದ್ಧತಿಯಾಗಿದ್ದು, ಈ ವೈದ್ಯ... |
ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಲೋಪಥಿ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಕಾರ್ಯಗಳಾಗಿವೆ. ಮಹಾಮಾರಿಯಂತಹ ರೋಗಗಳನ್ನು ನಿಯಂತ್ರಿಸುವಲ್ಲಿ ಅಲೋಪಥಿ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಅಲೋಪಥಿಯೊಂದಿಗೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯ ವಿಚಾರದಲ್ಲಿ ಜ್ಞಾನ ಮೂಡಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ನಾಟಿ ವೈದ್ಯರೊಂದಿಗೆ ಸಂವ... |
ಈ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯರಾದ ಪದ್ಯಾಣ ಶಂಕರಿ ಅಮ್ಮ, ತೋಕೂರು ಗುತ್ತು ವಾರಿಜಾಕ್ಷಿ ಶೆಟ್ಟಿ, ಮೀನಾಕ್ಷಿ ನಾರಾಯಣ ಆಚಾರ್ಯ ಬಿ.ಸಿ.ರೋಡ್, ಬಾಲಕೃಷ್ಣ ರೈ, ಈಶ್ವರಪ್ಪಯ್ಯ ಬೈರಿಕಟ್ಟೆ, ಪ್ರೇಮ ಧರೆಗುಡ್ಡೆ, ಸುಶೀಲ ದಿನೇಶ್ ರೈ ಚೆಂಡುಕಲ, ಜಗನ್ನಾಥ ಪಕ್ಕಳ ಇರಾ, ಹರಿಣಾಕ್ಷಿ ಶೆಟ್ಟಿ, ಬಿಲ್ಲಂಪದವು ನಾರಾಯಣ ಭಟ್, ರಮಣಿ ಕೊಣಾಜೆ ಅವರನ್ನು ಸನ್ಮಾನಿಸಲಾಯಿತು. |
ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವೆ ಅಲ್ಕಾ ಕುಲಕರ್ಣಿ, ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಸಿ.ಎಸ್ ಶಾಸ್ತ್ರಿ, ನಿಟ್ಟೆ ವಿಶ್ವವಿದ್ಯಾನಿಲಯ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥೆ ಡಾ| ಸಾಯಿಗೀತಾ ಉಪಸ್ಥಿತರಿದ್ದರು. |
ಜಪಾನಿನ ಕೊಕೇಶಿ ಗೊಂಬೆಗಳು – ಹೊನಲು |
ಕೊಕೇಶಿ ಗೊಂಬೆಗಳು ಜಪಾನಿನ ಸಾಂಪ್ರದಾಯಿಕ ಮರದ ಗೊಂಬೆಗಳು. ಇವುಗಳನ್ನು ಮಕ್ಕಳಿಗಾಗಿ ತಯಾರಿಸಲಾಗುತ್ತದೆ. ಮೂಲತಹ ಕೊಕೇಶಿ ಗೊಂಬೆಗಳು 1600 -1868ರ ಜಪಾನಿನ ಇಡೋ ಅವದಿಯ ಕೊನೆಯ ಕಾಲದ್ದೆಂದು ಹೇಳಲಾಗುತ್ತದೆ. ಜಪಾನಿನ ತೊಹೊಕು ಪ್ರದೇಶದಲ್ಲಿನ ಬಿಸಿ ನೀರಿನ ಬುಗ್ಗೆಯನ್ನು ನೋಡಲು ಬರುವ ಪ್ರವಾಸಿಗರಿಗೆ ಇದನ್ನು ಮಾರಲಾಗುತ್ತಿತ್ತು. ಚಳಿಗಾಲದಲ್ಲಿ ಪ್ರವಾಸಿಗರ ಸಂಕ್ಯೆ ಇಳಿಮುಕವಾದಾಗ, ಕೆಲಸಗಾರರನ್ನ... |
ಕೊಕೇಶಿ ಗೊಂಬೆಯ ತಯಾರಿಕೆ ಈಗ ಜಪಾನ್ ದೇಶದ ಅತ್ಯಂತ ರೋಮಾಂಚಕ ಜಾನಪದ ಕಲೆಗಳಲ್ಲಿ ಒಂದಾಗಿದೆ. ಸಾಂಪ್ರದಾಯಿಕವಾಗಿ ಸಪೂರ ದೇಹ ಮತ್ತು ದಪ್ಪನೆಯ ತಲೆಯನ್ನು ಒಳಗೊಂಡಿರುವ ಈ ಬೊಂಬೆಗಳಿಗೆ ತೆಳುವಾದ ಬಣ್ಣದ ಗೆರೆಗಳಿಂದ ಅಲಂಕಾರ ಮಾಡಲಾಗುತ್ತದೆ. ದಿನಗಳೆದಂತೆ ಕೊಕೇಶಿ ಬೊಂಬೆಗಳ ವಿನ್ಯಾಸ ಹೆಚ್ಚು ಸಂಕೀರ‍್ಣ ಹಾಗೂ ವೈವಿದ್ಯಮಯವಾಗಿ, ಮಾನವನ ರೂಪಕ್ಕೆ ಹೊಂದಿಕೊಂಡಂತೆ ಬದಲಾಯಿತು. ಇದರ ಪರಿಣಾಮವೇ ಇಂದು ಕ... |
ಸಮಕಾಲೀನ ಕೊಕೇಶಿ ಗೊಂಬೆಗಳು ಸಾಂಪ್ರದಾಯಿಕ ಪ್ರತಿರೂಪಗಳಿಗಿಂತ ಹೆಚ್ಚು ದುಂಡಾದ ಆಕಾರವನ್ನು ಹೊಂದಿವೆ. ಇದರಲ್ಲಿ ಅಲಂಕಾರಕ್ಕಾಗಿ ಬಳಸುವ ಉತ್ಕ್ರುಶ್ಟ ಬಣ್ಣ ಹಾಗೂ ಮುಕದ ವೈಶಿಶ್ಟ್ಯಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಿಶೇಶ ಸಂದರ‍್ಬಗಳನ್ನು ಆಚರಿಸಲು, ವ್ರುತ್ತಿಯನ್ನು ಪ್ರತಿಬಿಂಬಿಸಲು ಅತವಾ ಕೆಲವು ಕಾಲ್ಪನಿಕ ಪಾತ್ರಗಳನ್ನು ಅನುಕರಿಸಲು ಹಾಗೂ ವಿಶೇಶ ಉಡುಗೊರೆಯಾಗಿ ಕೊಕೇಶಿ ಗೊಂಬೆಗಳ ಬಳಸಲಾಗುತ... |
ಜಪಾನಿನ ನಗರ ನರುಕೋದಲ್ಲಿ ಪ್ರತಿ ವರ‍್ಶ ಸೆಪ್ಟೆಂಬರ್ ತಿಂಗಳಿನಲ್ಲಿ ಕೊಕೇಶಿ ಉತ್ಸವವನ್ನು ಅಯೋಜಿಸಲಾಗುತ್ತದೆ. ಈ ಉತ್ಸವದಲ್ಲಿ ಅನುಪಯುಕ್ತ ಹಾಗೂ ಅನಗತ್ಯವಾದ ಕೊಕೇಶಿ ಗೊಂಬೆಗಳನ್ನು ಉರುವಲಿನಲ್ಲಿ ಹಾಕಿ ಸುಡಲಾಗುತ್ತದೆ. ಮನಕಲಕುವ ಈ ದ್ರುಶ್ಯವನ್ನು ಅನೇಕ ಪ್ರವಾಸಿಗರು ಬೇಸರದಿಂದ ವೀಕ್ಶಿಸುತ್ತಾರೆ. |
ಕೊಕೇಶಿ ಗೊಂಬೆಗಳ ತಯಾರಿಕೆ ಸಹ ಒಂದು ರೋಚಕವಾದ ಕೆಲಸ. ಸಾಮಾನ್ಯವಾಗಿ ಅತ್ಯಂತ ಹಳೆಯದಾದ ಚೆರ‍್ರಿ ಅತವಾ ಮಿಜುಕಿ ಮರವನ್ನು ಇದರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಮೊದಲು ಮರವನ್ನು ಕೊಕೇಶಿ ಗೊಂಬೆಗಳ ತಯಾರಿಕೆಗೆ ಅವಶ್ಯವಿರುವ ಅಳತೆಗೆ ಕತ್ತರಿಸಿಕೊಳ್ಳಲಾಗುತ್ತದೆ. ನಂತರ ಅದರ ಅಂಚುಗಳನ್ನು ದುಂಡಗೆ ಮಾಡಿ, ಲೇತ್ ಯಂತ್ರ ಬಳಕೆಯಿಂದ ಮೊದಲು ದೊಡ್ಡದಾದ ನಂತರ ಸಣ್ಣದರ ಆಕಾರಕ್ಕೆ ಕತ್ತರಿಸಲಾಗುತ್ತದೆ. ಕ... |
ಕೊಕೇಶಿ ಗೊಂಬೆ ಜಪಾನಿನ ಸಂಸ್ಕ್ರುತಿಯ ಅತ್ಯಂತ ಪೂಜನೀಯ ಸಂಕೇತ. ಇದರ ಅಂಗವಾಗಿ ಜಪಾನ್ ರಾಶ್ಟ್ರೀಯ ಕೊಕೇಶಿ ಗೊಂಬೆಗಳ ಸ್ಪರ‍್ದೆ ಸಹ ಅಯೋಜಿಸಲಾಗುತ್ತದೆ. ಜವೋ ಪರ‍್ವತದ ಬುಡದಲ್ಲಿ ಕೊಕೇಶಿ ಗೊಂಬೆಗಳ ವಸ್ತುಸಂಗ್ರಹಾಲಯವಿದೆ. ಈ ವಸ್ತು ಸಂಗ್ರಹಾಲಯದಲ್ಲಿ 5000ಕ್ಕೂ ಹೆಚ್ಚು ಸಾಂಪ್ರದಾಯಿಕ ಹಾಗೂ ಸಮಕಾಲೀನ ಕೊಕೇಶಿ ಗೊಂಬೆಗಳ ಸಂಗ್ರಹವಿದೆ. ಎರಡು ಶತಮಾನದಶ್ಟು ಹಳೆಯ ಕೊಕೇಶಿ ಗೊಂಬೆಗಳ ಸಂಗ್ರಹ ಗೊಂಬೆ... |
(ಮಾಹಿತಿ ಮತ್ತು ಚಿತ್ರ ಸೆಲೆ: pixabay.com, thejapaneseshop.co.uk, mymodernmet.com, coco-papaya.com, booksandbao.com ) |
ಟ್ಯಾಗ್‌ಗಳು: :: ಕೆ.ವಿ.ಶಶಿದರ ::Barbie DolldollDollsJapanJapaneseKokeshiಗೊಂಬೆಗಳುಚನ್ನಪಟ್ಟಣದ ಗೊಂಬೆಗಳುಜಪಾನ್ಸೋಜಿಗದ ಸಂಗತಿ |
ಬಿದನೂರು: ಮಲೆನಾಡ ಸ್ವಾತಿ ಮುತ್ತು : ವಿದೇಶದಲ್ಲೂ ಮಿಂಚಿದ ಗ್ರಾಮೀಣ ಅಥ್ಲೆಟಿಕ್ ಪ್ರತಿಭೆ |
ಮಲೆನಾಡ ಸ್ವಾತಿ ಮುತ್ತು : ವಿದೇಶದಲ್ಲೂ ಮಿಂಚಿದ ಗ್ರಾಮೀಣ ಅಥ್ಲೆಟಿಕ್ ಪ್ರತಿಭೆ |
ಗ್ರಾಮೀಣ ಭಾಗದ ಅಥ್ಲೆಟಿಕ್ ಪ್ರತಿಭೆ ಕಿರುಗುಳಿಗೆ ಸ್ವಾತಿ |
ಇತ್ತೀಚೆಗೆ ಹರ್ಯಾಣದ ರೋಹಟಕ್ನಲ್ಲಿ ನಡೆದ 35 ನೇ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಶಿಪ್ 2015 ರ 40 ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ಹ್ಯಾಮರ್ ಥ್ರೋ, ಡಿಸ್ಕಸ್ ಥ್ರೋ, ಷಾಟ್ಫುಟ್ ಎಸೆತದಲ್ಲಿ ಪ್ರಥಮ ಸ್ಥಾನವನ್ನು , ಜಾವೆಲಿನ್ ಎಸೆತದಲ್ಲಿ ತೃತೀಯ ಸ್ಥಾನವನ್ನು ಪಡೆದು ನಮ್ಮ ರಾಜ್ಯಕ್ಕೆ ಕೀರ್ತಿ ತಂದ ಶ್ರೀಮತಿ ಸ್ವಾತಿ ಕೆ. ಆರ್. ರವರು ಹೊಸನಗರ ತಾಲ್ಲೂಕಿನ ನಗರ ಹೋಬಳಿ ಕಿರುಗುಳಿಗೆ ಗ್ರಾಮದ... |
ನಗರದ ಹೆಮ್ಮೆ: |
ಮೂಲತಃ ನಗರ ಹೋಬಳಿ ನಿಲ್ಸ್ ಕಲ್ ನವರಾದ ಇವರು ಮುಳುಗಡೆಯ ನಂತರ ಹುಂಚದ ಹತ್ತಿರದ ಹೊನ್ನೇಬೈಲ್ ನಲ್ಲಿ ವಾಸವಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಬಿಲ್ಲೇಶ್ವರದಲ್ಲಿಯೂ ಪ್ರೌಢ ಶಿಕ್ಷಣವನ್ನು ಹುಂಚದಲ್ಲೂ ಪೂರೈಸಿದರು. ಬಾಲ್ಯದಿಂದಲೇ ಆಟೋಟಗಳಲ್ಲಿ ಆಸಕ್ತಿಯಿದ್ದ ಇವರು ಶಾಲಾ ಕ್ರೀಡಾಕೂಟಗಳಲ್ಲಿ ಪ್ರತಿ ವರ್ಷವೂ ಭಾಗವಹಿಸಿ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದವರೆಗೂ ಹೋಗಿ ಪದಕಗಳನ್ನು ಪಡೆದಿರುತ್ತಾರೆ... |
1995 ರಲ್ಲಿ ಕಿರುಗುಳಿಗೆಯ ಕೆ. ಎಸ್. ರವಿಯವರನ್ನು ವಿವಾಹವಾಗಿ ಸಾಂಸಾರಿಕ ಜೀವನಕ್ಕೆ ಆದ್ಯತೆ ನೀಡಿ, ಸುಮಾರು 17 ವರ್ಷಗಳ ಕಾಲ ಆಟ ಆಡುವ ಅವಕಾಶದಿಂದ ದೂರವುಳಿದಿದ್ದರು. ಪತಿ ಕೆ. ಎಸ್. ರವಿಯವರೂ ಕೂಡಾ ಉತ್ತಮ ಕ್ರೀಡಾ ಪಟುವಾಗಿದ್ದು , ನಿರಂತರ ಪ್ರೋತ್ಸಾಹ ಹಾಗೂ ಒತ್ತಾಸೆಯ ಮೇರೆಗೆ ಪುನಃ ಗ್ರಾಮೀಣ ಹಾಗೂ ಇತರೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ಈಗ್ಗೆ 4 ವರ್ಷಗಳಿಂದ ಸತತವಾಗಿ ದಸರಾ ಕ್ರೀಡಾಕೂಟದ... |
ವಿದೇಶದಲ್ಲೂ ಸಾಧನೆ: |
ಮಂಗಳೂರಿನಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸಿದ 30 ವರ್ಷ ಮೇಲ್ಪಟ್ಟ ಮಹಿಳೆಯರ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ, ಶಾಟ್ ಫುಟ್, ಡಿಸ್ಕಸ್ ಥ್ರೋ, ಜಾವೆಲಿನ್ ಎಸೆತದಲ್ಲಿ ಪ್ರಥಮ ಬಹುಮಾನ ಗಳಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು. ನಂತರ ಕಳೆದ ಅಕ್ಟೋಬರ್ನಲ್ಲಿ ಶ್ರೀಲಂಕಾದಲ್ಲಿ ನಡೆದ ಇಂಟರ್ ನ್ಯಾಶನಲ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಮ್ಮ ದೇಶದ ಪ್ರತಿನಿಧಿಯಾಗಿ ಭಾಗ... |
ಯಾವುದೇ ವಿಶೇಷ ತರಬೇತಿ ಇಲ್ಲದೇ ಸ್ವತಃ ತಾವೇ ಅಭ್ಯಾಸ ಮಾಡಿ, ತನ್ನ ಸ್ವಂತ ಪರಿಶ್ರಮ, ಗುರಿಯೆಡೆಗಿನ ಲಕ್ಷ್ಯ ಹಾಗೂ ವಿಶೇಷವಾಗಿ ಪತಿಯ ಪ್ರೋತ್ಸಾಹ, ಮಕ್ಕಳಲ್ಲಿರುವ ಕ್ರೀಡಾ ಆಸಕ್ತಿ ಇವುಗಳಿಂದಲೇ ತನ್ನೊಳಗಿರುವ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ, ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಕೀರ್ತಿ ತಂದಿರುತ್ತಾರೆ. ಸಂಸಾರ, ಮನೆ, ಮಕ್ಕಳು, ಕೃಷಿ ಚಟುವಟಿಕೆ ಇತ್ಯಾದಿಗಳನ್ನು ನಿರ್ಲಕ್ಷಿಸದೇ, ... |
ಇನ್ನು ಮುಂದೆಯೂ ಕ್ರೀಡಾ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳು ಸಿಗಲಿ ಹಾಗೂ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಕನ್ನಡ ಸಾಹಿತ್ಯ ಪರಿಷತ್, ನಗರ ಹೋಬಳಿ ಘಟಕ, ಪಂಚಮುಖಿ ಬ್ಯಾಡ್ಮಿಂಟನ್ ಕ್ಲಬ್, ನಗರ, ಸರ್ವಸಿದ್ಧಿ ಸ್ವಸಹಾಯ ಸಂಘ, ಶ್ರೀ ವಿಘ್ನೇಶ್ವರ ಸಾವಯವ ಸ್ವಸಹಾಯ ಸಂಘ, ಬ್ರಾಹ್ಮಣತರುವೆ ಹಾಗೂ ಇತರ ಸಂಘ ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ. |
ವಿಡಿಯೋ, ಆಡಿಯೋ ಕ್ಯಾಸೆಟ್ ಭರಾಟೆ | Another India-related film to hit French theatres soon - Kannada Oneindia |
ವಿಡಿಯೋ, ಆಡಿಯೋ ಕ್ಯಾಸೆಟ್ ಭರಾಟೆ |
ಇಲ್ಲಿ ಈಗ ವಿಡಿಯೋ, ಆಡಿಯೋ ಸೇರಿದಂತೆ ವಿಸಿಡಿಗಳೂ ಅಂಗಡಿಗಳಲ್ಲಿ ಸಿಗುತ್ತಿವೆ. ಹೃತಿಕ್‌ನ ಇತ್ತೀಚಿನ ಹಿಂದಿಚಿತ್ರ ಫಿಜಾದ 40 ವಿಸಿಡಿ ಕಾಪಿಗಳು ಪ್ಯಾರಿಸ್ ತಲುಪಿವೆ ಎಂದು ಭಾರತೀಯ ಮೂಲದ ಅಂಗಡಿ ಮಾಲೀಕನೊಬ್ಬ ಹೇಳುತ್ತಾನೆ. ಇಷ್ಟಲ್ಲದೆ ನುಸ್ರಫ್ ಫತೇ ಆಲೀಖಾನ್ ಸಂಗೀತವಿರುವ ಕ್ಯಾಸೆಟ್‌ಗಳನ್ನೂ ಫ್ರಾನ್ಸ್ ನಾಗರಿಕರೂ ಮುಗಿಬಿದ್ದು ಕೊಳ್ಳುತ್ತಿದ್ದಾರೆ. |
ದಿವಾನೆ, ಧಡಕನ್ ಚಿತ್ರಗಳೂ ಬೇಡಿಕೆಯ ಪಟ್ಟಿಯಲ್ಲಿವೆ. ಇಲ್ಲಿಯೂ ಜನಪ್ರಿಯತೆಯಲ್ಲಿ ಹೃತಿಕ್ ರೋಷನ್‌ದೇ ಸವಾರಿ. ನಂತರದ ಸ್ಥಾನಗಳಲ್ಲಿ ಶಾರುಖ್‌ಖಾನ್, ಗೋವಿಂದ ಇದ್ದಾರೆ. ಸತ್ಯಜಿತ್‌ರಾಯ್, ಆಡೂರ್ ಗೋಪಾಲಕೃಷ್ಣನ್, ಹೃತ್ವಿಕ್ ಘಟಕ್ ಪ್ರಸಿದ್ಧ ನಿರ್ದೇಶಕರು. ಶಬನಾ ಅಜ್ಮಿ, ಶರ್ಮಿಳಾ ಟಾಗೂರ್ ಕೂಡಾ ಜನಪ್ರಿಯರು. |
ಭಾರತೀಯ ಹಬ್ಬಗಳು: ಗಣೇಶೋತ್ಸವ ಸೇರಿದಂತೆ ಅನೇಕ ಭಾರತೀಯ ಹಬ್ಬಗಳಿಗೆ ಪ್ಯಾರಿಸ್‌ನ ಬೀದಿಗಳು ತೆರೆದುಕೊಂಡಿರುವುದನ್ನು ಈಗಾಗಲೇ ಅನೇಕ ವರದಿಗಳು ಹೇಳಿವೆ. ಈಗ ಪ್ಯಾರಿಸ್‌ನಲ್ಲಿ ದಿಪಾವಳಿ ಭರಾಟೆ ನಡೆಯುತ್ತಿದೆ. ಈ ಬಾರಿ ಶಬನಾ ಅಜ್ಮಿ, ಶರ್ಮಿಳಾ ಟಾಗೂರ್ ಅವರಿಗೆ ದೀಪಾವಳಿ ಅಂಗವಾಗಿ ಸನ್ಮಾನ ಸಮಾರಂಭವೂ ಏರ್ಪಾಡಾಗಿದೆ. |
ಲಂಡನ್ ರಹದಾರಿ: ಎಲ್ಲ ವಿಧದ ಕ್ಯಾಸೆಟ್‌ಗಳೂ ಲಂಡನ್ ಮೂಲಕ ಬರುತ್ತವೆ. ಇದರಲ್ಲಿ ಕಳ್ಳಸಾಗಣೆಯೂ ಉಂಟೆಂದು ಅನೇಕ ವ್ಯಾಪಾರಿಗಳು ಒಪ್ಪಿಕೊಳ್ಳುತ್ತಾರೆ. ಕೆಲವರು ಸ್ಥಳೀಯವಾಗಿ ಕೇಬಲ್ ಜಾಲವನ್ನೂ ಹುಟ್ಟುಹಾಕಿದ್ದಾರೆ. |
ಹೆಚ್ಚುತ್ತಿರುವ ಜನಪ್ರಿಯತೆ: ಜಪಾನ್‌ನಲ್ಲಿ ಅದ್ಬುತ ಯಶಸ್ಸು ಕಂಡ ರಜನೀಕಾಂತ್, ಮೀನಾ ಅಭಿನಯದ ತಮಿಳಿನ ಇನ್ನೊಂದು ಚಿತ್ರ ಮುತ್ತು , ಇತಿಹಾಸ ನಿರ್ಮಿಸಿದೆ. ಬ್ರಿಟನ್, ಅಮೆರಿಕಾಗಳಲ್ಲೂ ಕೂಡಾ ಭಾರತೀಯ ಚಿತ್ರಗಳ ಬೇಡಿಕೆ ಹೆಚ್ಚುತ್ತಿದೆ. |
ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಆಗ್ರಹ | Kannadamma |
Home ಬೆಳಗಾವಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಆಗ್ರಹ |
ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಆಗ್ರಹ |
ಕನ್ನಡಮ್ಮ ಸುದ್ದಿ-ಬೆಳಗಾವಿ: ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ರಾಜ್ಯ ಹೆದ್ದಾರಿ 31ರ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರೀಯೆಯನ್ನು ಕೈಬಿಡುವಂತೆ ಆಗ್ರಹಿಸಿ ಗ್ರಾಮ ರೈತರು ಹಾಗೂ ದಲಿತ ಸಮುದಾಯ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. |
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಅಭಿವೃದ್ಧಿ ಪಡಿಸುತ್ತಿರುವ ಜಿಲ್ಲೆಯ ಹೀರೆಬಾಗೇವಾಡಿ ಬೈಲಹೊಂಗಲ ಸವದತ್ತಿ ರಾಜ್ಯ ಹೆದ್ದಾರಿ 31 ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಂಪಗಾಂವ ಗ್ರಾಮದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಈ ಭಾಗದ ಭೂಮಿಯು ಫಲವತ್ತಾದ ಏರಿ ನೀರಾವರಿ ಜಮೀನಾಗಿದ್ದು, ಇದನ್ನು ಸ್ವಾಧೀನ ಪಡಿಸಿಕೊಳ್ಳುವುದರಿಂದ ಈ ಭಾಗದ ರೈತರಿಗೆ ತೊಂದರೆ ಉಂಟಾಗುತ್ತದೆ. ರಾಜ... |
ಪ್ರತಿಭಟನೆಯಲ್ಲಿ ಮಂಜುನಾಥ ಶಿಡ್ಲೆವಗೋಳ, ಅರ್ಜುನ ದಾಂಡಿಗ್ಯಾಗೋಳ, ಶಿವಲಿಂಗಪ್ಪ ಶೆಟ್ಟರ್, ಅಭಯ ಅವಲಕ್ಕಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. |
ಪುರಂದರ ಸಾಹಿತ್ಯ ಅಧ್ಯಯನ: ೭. ವಿಡಂಬನೆ – ಕಣಜ |
ಪುರಂದರ ಸಾಹಿತ್ಯ ಅಧ್ಯಯನ: ೭. ವಿಡಂಬನೆ |
Home/ವಿಶ್ಲೇಷಣೆ ಮತ್ತು ಸಂಶೋಧನೆ, ಸಮುದಾಯ ಸಾಹಿತ್ಯ, ಸಾಹಿತ್ಯ/ಪುರಂದರ ಸಾಹಿತ್ಯ ಅಧ್ಯಯನ: ೭. ವಿಡಂಬನೆ |
ಪುರಂದರದಾಸರ 'ಕೀರ್ತನೆ'ಗಳನ್ನು ಬಾಲ್ಯದಿಂದಲೂ 'ಪದ'ಗಳೆಂದು ಕೇಳಿದ್ದೇನೆ ಮತ್ತು ನಮ್ಮ ಪರಿಸರದ ಜನಮಾನಸದಲ್ಲಿ ಈ ಪದಗಳೂ, ಪದಗಳ ಸಾಲುಗಳೂ ಸಾಂದರ್ಭಿಕವಾಗಿ ಬೇರೆ ಬೇರೆ ಅರ್ಥ-ಆಯಾಮಗಳಲ್ಲಿ ಬಳಕೆಗೊಳ್ಳುತ್ತಿದ್ದುದ್ದನ್ನೂ ಅನುಭವಿಸಿದ್ದು ಉಂಟು. ಆದಾಗ್ಯೂ ಈ ಸಾಹಿತ್ಯವನ್ನು ಕುರಿತಂತೆ ನಾನು ವಿಶೇಷ ಆಸಕ್ತಿ ತಳೆದು ಅಧ್ಯಯನ ನಡೆಸಿದ್ದು ಇಲ್ಲ. ಇಂಥ ಹೊತ್ತಿನಲ್ಲಿ ಈ ವಿಷಯವನ್ನು ಕುರಿತು ಉಪನ್ಯಾಸ ... |
ಅಂತೂ ಈ ನಿಟ್ಟಿನಲ್ಲಿ ಪುರಂದರದಾಸರನ್ನು ಕುರಿತು ಯೋಚಿಸುವಂತಾದಾಗ ನನಗೆ ಥಟ್ಟನೆ ನೆನಪಾದುದು ಜೈನ ಕಥಾನಕಗಳಲ್ಲಿ ಬರುವ ಮಹಾಪುರುಷರ ಜೀವನ. ಭೋಗದ ತುತ್ತತುದಿಯಲ್ಲಿ ಇರುವವರಿಗೆ, ಹಠಾತ್ತನೇ ಯಾವುದೊ ಗಳಿಗೆ ಯಾವುದೊ ಒಂದು ನೆವದಿಂದ ವೈರಾಗ್ಯ ಉಂಟಾಗಿ ಸರ್ವ ಸಂಗ ಪರಿತ್ಯಾಗಿಗಳಾಗಿ ಕಾಡಿಗೆ ಹೊರಡುತ್ತಾರಲ್ಲ. "ಅಸಾರಂ ಈ ಸಂಸಾರ" ಅಂತ, ಅದು! ಪುರಂದರದಾಸರದೂ ಸರಿಸುಮಾರು ಅದೇ ಕಥೆ. ಆದರೆ ಇವರು ಮಾತ್... |
ಇಂತಹ ಪುರಂದರರಿಗೆ ಪತ್ನಿಯೆ ಕಾರಣವಾಗಿ ವೈರಾಗ್ಯ ಒದಗಿ ಇದುವರೆಗೆ ವ್ಯಾಮೋಹದಿಂದ ನಿಷ್ಕರುಣೆಯಿಂದ ಗಳಿಸಿದ್ದನ್ನೆಲ್ಲ ಹಠಾತ್ತನೆ 'ಕೃಷ್ಣಾರ್ಪಣ' ಮಾಡಿ 'ದಾಸದೀಕ್ಷೆ' ತೊಟ್ಟು ಮಧುಕರ ವೃತ್ತಿಯನ್ನು ಹಿಡಿದರು. ಇದು 'ನಾಟಕೀಯ'ವೆನ್ನಿಸಿದರೂ ಅಂತರಂಗದಲ್ಲಿ ಮಾತ್ರ ಅದ್ಭುತ ಪರಿವರ್ತನೆಯೇ ಆಗಿರಬೇಕು. ಆಂತರ್ಯದ ಈ ಸ್ಥಿತ್ಯಂತರ ಅನಾದೃಶ್ಯ ಅಸಾಮಾನ್ಯವೇ ಸರಿ. ನವರತ್ನ ವ್ಯಾಪಾರದ, ನವಕೋಟಿ ನಾರಾಯಣ ಎಂ... |
ಪುರಂದರರ ಕೀರ್ತನೆಗಳು ವಸ್ತು ವೈವಿಧ್ಯ-ಲೋಕದರ್ಶನ ಮತ್ತು ಚಿಂತನಾ ಲಹರಿಗಳ ನೆಲೆಯಲ್ಲಿ ಬಹುಮುಖವಾಗಿವೆ. ಅವರ ಹಾಡುಗಳು ಸಾಂದರ್ಬಿಕ ಅಥವಾ ಆ ಕ್ಷಣದ ಮನಸ್ಥಿತಿಯ ಪ್ರತಿಕ್ರಿಯೆ ಎಂಬಂತೆ ತೋರಿದರೂ ಅವುಗಳ ಹಿಂದಿನ ಮನಸ್ಸು ಒಂದೇ. ಆದುದರಿಂದ ಒಂದೊಂದು ಪದವೂ ಸ್ವಯಂಪೂರ್ಣವಾಗಿದ್ದರೂ ಅವೆಲ್ಲವುಗಳ ನಡುವೆ ಪರಸ್ಪರ ಸೂಕ್ಷ್ಮ ಸಂಬಂಧವಿದೆ. ಈ ದೃಷ್ಟಿಯಿಂದಲೇ ನಾವು ಅವುಗಳನ್ನು ವಿಶ್ಞೇಷಿಸಬೇಕಾಗುತ್ತದೆ. |
ಧರ್ಮ-ಭಕ್ತಿ ಮತ್ತು ಅನುಭಾವಗಳು ಮುಪ್ಪುರಿಗೊಂಡು ಈ ಕೀರ್ತನೆಯಲ್ಲಿ ಪ್ರಕಟವಾಗಿವೆ. ಈ ಒಂದೊಂದು ನೆಲೆಯಲ್ಲೂ ಅವರು ರಚಿಸಿದ ಕೀರ್ತನೆಗಳು ಇದ್ದು ಒಂದೊಂದು ಸಲ ಅವುಗಳ ಮಧ್ಯೆ ಪರಸ್ಪರ ವಿರೋಧ ಕಂಡು ಬಂದರೂ ಆ Paradoxನ ಮೂಲಕವೆ ಅನೇಕ ಸಂದರ್ಭಗಳಲ್ಲಿ ದಾಸರ ಆಶಯವು ವ್ಯಕ್ತವಾಗುತ್ತದೆ. |
ಅಂತೂ ಒಟ್ಟು ತಮ್ಮ ಅನುಭವವನ್ನೋ, ಭಕ್ತಿಯನ್ನೊ ಪ್ರಕಟಗೊಳಿಸುವಲ್ಲಿ ದಾಸರು ಅಭಿವ್ಯಕ್ತಿಯ ತಂತ್ರಗಳನ್ನು ವಿಷಯಾನುಸಾರಿಯಾಗಿ ಕಂಡುಕೊಂಡರು. ಅಷ್ಟಕ್ಕೂ ಅಭಿವ್ಯಕ್ತಿಯ ತಂತ್ರವೆನ್ನುವುದು ಹೊರಗಿನದಲ್ಲ. ಬೇಂದ್ರೆಯವರು ಹೇಳಿದಂತೆ ಇದು ಪಾಡನ್ನು ಹಾಡಾಗಿದುವ ಪ್ರಕ್ರಿಯೆ, ಅಥವಾ ವ್ಯಕ್ತಿನಿಷ್ಠ ಅನುಭವವನ್ನು ಸಾಧಾರಣೀಕರಣಗೊಳಿಸುವ ವೈಖರಿ. ಅಂತೂ ಹೀಗೆ ಪುರಂದರರು ಕಂಡುಕೊಂಡ ಅಭಿವ್ಯಕ್ತಿ ತಂತ್ರದಲ್ಲಿ... |
ದಾಸರಲ್ಲಿ ಧರ್ಮ-ಭಕ್ತಿ-ಅನುಭಾವಗಳ ಮುಪ್ಪುರಿ ಇದ್ದರೂ ಪ್ರಧಾನವಾಗಿ ಭಕ್ತಿ-ಅನುಭಾವಗಳೇ ಅವರ ಬಹುಪಾಲು ರಚನೆಗಳನ್ನು ರೂಪಿಸಿವೆ. ಆದ್ದರಿಂದಲೇ ದಾಸರಲ್ಲಿ ಮೊಟ್ಟ ಮೊದಲು ಕಾಣಿಸಿಕೊಳ್ಳುವುದು ಆತ್ಮ ನಿರೀಕ್ಷಣಾ ರೂಪದ ವಿಡಂಬನೆ. ನಂತರ ಅದರ ವಲಯ ವಿಸ್ತಾರಗೊಳ್ಳುತ್ತ ಹೋಗುತ್ತದೆ. ಇಲ್ಲಿ ವಿಡಂಬನೆ ಎಂಬುದು ಸಂಕುಚಿತಾರ್ಥದಲ್ಲಿ ನಾವು ವಿಡಂಬನ ಸಾಹಿತ್ಯ ಎಂದು ಗುರುತಿಸುತ್ತೇವಲ್ಲ ಅದು ಅಲ್ಲ. ಬದಲಾಗಿ... |
ಲೆಕ್ಕಾಚಾರದಲ್ಲಿ ದಾಸರ ಪದಗಳು ಶುದ್ಧ ಸಾಹಿತ್ಯಿಕ ಅಲ್ಲ; ಸಂಗೀತ-ನೃತ್ಯಕ್ಕೆ ಪೂರಕವಾಗಿ ಅವು ಆಶುಕವಿತೆಗಳಾಗಿ ಬಳಕೆಗೊಂಡಿವೆ ಎಂಬುದೊಂದು ಸಿದ್ಧಾಂತವಿದೆ. ಇದು ದಾಸರ ಕೀರ್ತನೆಗಳ ಹೆಗ್ಗಳಿಕೆಯಂತೆ ಮಿತಿಯೂ ಹೌದು! ಇದರೊಟ್ಟಿಗೆ ಕೀರ್ತನೆಗಳು ಒಂದು ನಿರ್ದಿಷ್ಟ ಧಾರ್ಮಿಕ ಪರಂಪರೆಯ ವ್ಯಾಖ್ಯಾನವೆಂಬ ಧೋರಣೆ ಕೂಡ ಈ 'ಕೀರ್ತನೆ'ಗಳ ಸ್ವರೂಪವನ್ನು ನಿರ್ಧರಿಸುವ 'ಕಟ್ಟು' ಆಗಿ ಕೆಲಸ ಮಾಡಿತು. ಆದರೆ ಆ '... |
ಆದಾಗ್ಯೂ ಪ್ರಸ್ತುತ ವಿಡಂಬನೆಯ ವಿಚಾರಕ್ಕೆ ಬಂದಾಗ ದಾಸರ ಅಭಿವ್ಯಕ್ತಿಯ ಭಿನ್ನ ಸಾಧ್ಯತೆಗಳು ಅರಿವಿಗೆ ಬರುತ್ತವೆ. ಉದಾರಣೆಗೆ 'ಸತ್ತವರ ನೆರಳು' ನಾಟಕಕ್ಕಾಗಿ ವಿಡಂಬನ ಧಾಟಿಯಲ್ಲಿ ಕೀರ್ತನೆಗಳನ್ನು ಬಳಸಿಕೊಂಡ ಪರಿ ಇದು ಒಂದು ಸಾಧ್ಯತೆಯಷ್ಟೇ. ಹಾಗೆಯೆ ಶ್ರೀರಂಗರ ಅನೇಕ ನಾಟಕಗಳ ಶೀರ್ಷಿಕೆ ಕೂಡ ಈ 'ಪದಗಳ' ವಿಡಂಬನಾ ಸಾಮರ್ಥ್ಯವನ್ನೂ ಧ್ವನಿಸುತ್ತವೆ. ಅಂತೂ ಪುರಂದರದಾಸರ 'ಪದ'ಗಳನ್ನು ಬೇರೆ ಬೇರೆ ಆ... |
'ಅವರ ಮೊದಲನೆಯದೆನ್ನವಾದ ಪದ |
ಆದದ್ದೆಲ್ಲ ಒಳಿತೇ ಆಯಿತು ನಮ್ಮ |
ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು || |
ಮಂಡೆ ಬಾಗಿ ನಾಚುತ್ತಿದ್ದೆ |
ದಂಡಿಗೆ ಬೆತ್ತ ಹಿಡಿಸಿದಳಯ್ಯ' |
ಇಡೀ ಕೀರ್ತನೆಯ ಧಾಟಿಯು ಆತ್ಮವಿಮರ್ಶೆಯ ಲಘು ವೈನೋದಿಕಕ್ಕೆ ಉತ್ತಮವಾದ ಉದಾಹರಣೆಯಾಗಿದೆ. ಇಲ್ಲಿ ಬಳಸಿದ ಪದಗಳು ಸ್ಥಿತ್ಯಂತರ ಮತ್ತು ಆತ್ಮವಿಕಾಸ ಸಂದರ್ಭದ ಮನೋಸ್ಥಿತಿಯನ್ನು ಸೂಚಿಸುತ್ತವೆ. ಹಾಗೆಯೇ ಈ ಕೀರ್ತನೆಗಳ ಜೊತೆಗೇನೆ ಹೆಂಡತಿಯನ್ನು ಕುರಿತು ಅವರು ಹಾಡಿದ ಇತರ ಕೀರ್ತನೆಗಳನ್ನೂ ಜೊತೆಗಿಟ್ಟು ನೊಡಿದಾಗ ಉಂಟಾಗುವ Paradox ಅನ್ನೂ ಗಮನಿಸಬಹುದು. |
ಅಂತೂ ದಾಸರು ತಾವು ಗಳಿಸಿದ ಸಂಪತ್ತನ್ನು ತ್ಯಜಿಸಿ ಉಳಿಸಿಕೊಂಡಿದ್ದ ಆಚಾರ, ವಿಚಾರ, ಧರ್ಮ ಶ್ರದ್ಧೆಗಳ ಬಲದಿಂದ ಬಯಲಿಗೆ ಬಂದರೆ ಕಾಣುವುದೇನು ? ಆ ತತ್ವಗಳು, ಆಚಾರ-ವಿಚಾರಗಳು ಅಪಮೌಲ್ಯಗೊಳ್ಳುತ್ತವೆ. ಅಥವಾ ಡಾಂಭಿಕಗೊಳ್ಳುತ್ತಿವೆ, ದುರುಪಯೋಗಗೊಳ್ಳುತ್ತಿವೆ. ಆದರ್ಶ-ವಾಸ್ತವಗಳ ನಡುವೆ, ವಿಚಾರ-ಆಚಾರಗಳ ನಡುವೆ ಅಪಾರ ಅಂತರವಿದೆ. ಇದು ಪುರಂದರದಾಸರನ್ನು ತೀವ್ರ ತಲ್ಲಣಗೊಳಿಸಿರಬೇಕು. ಇದು ಸಾವು ನಂಬ... |
'ಮಾಯಾದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು |
ತೋಯಜಾಕ್ಷನ ದಯ ನಮಗೀಗ ದೊರಕಿತು ಇನ್ನೇನಿನ್ನೇನು' |
ಈ ಕೀರ್ತನೆಯಲ್ಲಿ ಮುಂದೆ ಬರುವ ಭಾವಿಸಿದ್ದೆಲ್ಲವು ಭೂಮಿ ಪಾಲಾದದ್ದು' ಸೇವಿಸಿದ ಗಣಪ ಮಂಗನಾದದ್ದು' ಒತ್ತಿ ಹಿಡಿದ ಕಂಬ ವ್ಯರ್ಥವಾದುದು 'ತೋಡುವ ಬಾವಿ ಬೇತಾಳ ಹೊರಟಿದ್ದು' ಇತ್ಯಾದಿ ಪದಗಳ ಜೊತೆಗೆ ಹಾಡಿನ ಉದ್ದಕ್ಕೂ ಮಂತ್ರದೋಪಾದಿ ಬರುವ ಇನ್ನೇನಿನ್ನೇನು ಇವು ಈ ಧಾಟಿಯನ್ನು ಅಪೂರ್ವವಾಗಿ ರೂಪಿಸಿವೆ. |
ಅದೇ ಬಗೆಯಲ್ಲಿ |
೧. ಸುಮ್ಮನೆ ವೈಷ್ಣವನೆಂಬಿರೆ–ಪರಿ |
ಬ್ರಹ್ಮ ಸುಜ್ಞಾನವರಿಯದ ಮನುಜನ |
೨. ಎಲ್ಲವನು ಬಲ್ಲೆನೆನ್ನುವಿರಲ್ಲ |
ಸಲ್ಲದ ಗುಣ ಬಿಡಲಿಲ್ಲ |
೩. ಪಿಂಡಾಂಪದೊಳಗಿನ ಗಂಡನ ಕಾಣದೆ |
ಮುಂಡೆಯರಾದರು ಪಂಡಿತರೆಲ್ಲ |
ದೇಹ-ಜೀವಗಳ ನಡುವೆ ನಡೆಯುವ ಆಪ್ತ ಸಂಭಾಷಣೆಯ 'ಜೀವ ಸಂಬೋಧನೆ' |
ಅನುದಿನದಿ ಬಮದು ತನುವ ಸ್ನೇಹವ ಮಾಡಿ |
ಎನ್ನ ಬಿಟ್ಟು ಹೋಗುತಿಯಾ ಜೀವವೆ |
ಹುಟ್ಟಿದ್ದು ಹೊಲೆಯೂರು ಬೆಳೆದದ್ದು ಮೊಲೆಯೂರು |
ಇಟ್ಟಿದ್ದು ಕಾಡೂರಾಯಿತಲ್ಲೊ ಜೀವವೆ |
ಈ ಕೀರ್ತನೆಯ ಪದರಚನಾ ವೈಖರಿ ಮತ್ತು ಉತ್ಕರ್ಷದ ಗೀತಶಕ್ತಿ ಇವು ಪುರಂದರರ ಕಾವ್ಯ ದೀಪ್ತಿಗೆ ಸಾಕ್ಷಿಯಾಗಿವೆ. ಇದೇ ಬಗೆಯಲ್ಲಿ 'ಪಿಳ್ಳಂಗೋವಿಯ ಚೆಲ್ವಕೃಷ್ಣನ ಎಲ್ಲಿ ನೋಡಿದಿರಿ! ರಂಗನ ಎಲ್ಲಿ ನೋಡಿದಿರಿ ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರು' ಈ ಕೀರ್ತನೆಯನ್ನು ಬಗೆಯ ಬೇಕು ಇಲ್ಲಿ ಹುದುಗಿರುವ ವ್ಯಂಗ್ಯದ ಸ್ವಾರಸ್ಯವನ್ನು ಡಾ. ಎಚ್. ಎನ್. ಮುರಳೀಧರ ಅವರು ತಮ್ಮ 'ತಂಬೂರಿ ಮೀಟಿದವ... |
ಆದರೆ ಈಗಾಗಲೇ ನಾವು ಗುರುತಿಸಿದಂತೆ ಎಲ್ಲ ಸಂದರ್ಭದಲ್ಲೂ ಒಂದೇ ಧ್ವನಿ ಕೇಳಿಸುವುದಿಲ್ಲ. ಕೇಳುವವರು ಯಾರು ಎಂಬುದೂ ಮತ್ತು ಬೀರತಕ್ಕ ಪರಿಣಾಮವೂ ಎಂಥದ್ದು ಎಂಬುದು ಮುಖ್ಯವಾಗುತ್ತದೆ. ಅದಕ್ಕೆ ತಕ್ಕಂತೆ ಧಾಟಿಯೂ ಬದಲಾಗುತ್ತದೆ. ಅಲ್ಲೆಲ್ಲ ಅವರು ನೇರವಾದ ವಿಮರ್ಶೆಗೆ ಇಳಿಯುತ್ತಾರೆ.ಈ ದೃಷ್ಟಿಯಿಂದ ರಚನೆಗೊಂಡ ಅನೇಕ ಪದಗಳಿವೆ. 'ಉದರವೈರಾಗ್ಯವಿದು…..' ಮಡಿಮಡಿಯೆಂದಡಿಗಡಿಗ್ಹಾರುತಿ…" 'ನಗೆಯು ಬರುತಿ... |
ಇನ್ನು ಕೆಲವು ಸಂದರ್ಭಗಳಲ್ಲಂತೂ ದಾಸರ ವಿಡಂಬನಾತ್ಮಕ ಪ್ರತಿಕ್ರಿಯೆ ಅತ್ಯಂತ ತೀಕ್ಷ್ಣ, ಕಠೋರ,ಉಗ್ರ ಆಗುವುದಿದೆ. |
'ಗೂಡನಾಮವ ಹೊಡೆದು ಗುಂಡು ತಂಬಿಗೆ ಹಿಡಿದು |
ಗೋಟಂಚು ಧೋತರ ಮಡಿಯನುಟ್ಟು |
ದಾಟು ಕಾಲಿಡುತ ನಾ ಧರೆಯೊಳು ಬರಲೆನ್ನ |
ಬೂಟಕತನ ನೋಡಿ ಭ್ರಮಿಸದಿರಿ ಜನರೆ |
ಇಂಥ ತುಡುಗು ಮುಂಡೇಗಂಡರಿಗಿನ್ನು ವೈಷ್ಣವ ಸಲ್ಲುವುದೆ? |
ಗಡ್ಡ ಮೀಸೆ ಬೋಳಿಸಿಕೊಂಡು ಗೊಡ್ಡು ನಾಮವ ತೀಡಿಕೊಂಡು |
ಅಡ್ಡಾದಿಡ್ಡಿ ಮುದ್ರೆಗಳ ಬಡಿದುಕೊಂಡಿನ್ನು |
ದೊಡ್ಡ ದೊಡ್ಡ ಮಾತುಗಳಾಡಿ ದೊಡ್ಡವರೆಂದ್ಹೇಳಿಕೊಂಬ |
ಬಡ್ಡೀ ಧಗಡೀ ಮಕ್ಕಳಿಗಿನ್ನು ವೈಷ್ಣವ ಸಲ್ಲುವುದೆ ? |
ಈ ಎರಡೂ ಹಾಡುಗಳಲ್ಲಿ ಅನುಪ್ರಾಸವೂ ಭಾವಪುಷ್ಟಿಗೆ ಪೂರಕವಾಗಿದೆ. ಇಲ್ಲೆಲ್ಲ ಮುಖ್ಯವಾಗಿ ತೋರಿಕೆಗೂ ವಾಸ್ತವಕ್ಕೂ ಇರುವ ಅಂತರ ಅವರನ್ನು ಕೆರಳಿಸುತ್ತದೆ. ಅಂದರೆ ತಾವು ನಂಬಿದ ತತ್ವಕ್ಕೆ ಇಂತು ಅಪಚಾರ ಬಗೆಯುವವರನ್ನು ಕಂಡು ಕೆರಳುತ್ತಾರೆ. ಇದನ್ನೆಲ್ಲ ನೋಡಿದರೆ ಪುರಂದರದಾಸರು ಒಬ್ಬ Critical insider ಆಗಿ ಕಾಣುವರು. ತಮ್ಮ ಮತದ ಬಗ್ಗೆ ಒಂದು ಖಾಚಿತ್ಯ ಮತ್ತು ನಿಷ್ಠೆ ಇದ್ದು ಅಂಥ ಅನೇಕ ಕೀರ್ತನೆ... |
ಈ ಕೆಲವು ಅಂಶಗಳ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಪುರಂದರದಾಸರ ಲೋಕದೃಷ್ಟಿ ಕಾವ್ಯದೃಷ್ಟಿ ಏನೆಂಬುದು ನಿಚ್ಚಳವಾಗುತ್ತದೆ. ಅವರಲ್ಲಿ ಇವೆರಡೂ ಅವಿನಾಭಾವಿಯಾಗಿದ್ದು ಭಗವಂತನ ಸಾಕ್ಷಾತ್ಕಾರಕ್ಕಾಗಿಯೆ ತೆರೆದ ದೃಷ್ಟಿಗಳಿವು. ಆದ್ದರಿಂದ ಒಟ್ಟು ಜೀವನ ಧೋರಣೆ ಮಾನವ ಜನ್ಮವನ್ನು ಸಾರ್ಥಕಗೊಳಿಸುವ ದೃಷ್ಟಿಯನ್ನೇ ಹೊಂದಿದ್ದು,ಈ ಕೀರ್ತನೆಗಳಲ್ಲಿ ವ್ಯಕ್ತಗೊಂಡ ವಿಡಂಬನೆಯ ನೆಲೆಯೂ ಅದೇ ಆಗಿದೆ. |
Subsets and Splits
No community queries yet
The top public SQL queries from the community will appear here once available.