text
stringlengths
0
61.5k
ಸಾಮಾಜಿಕ ಮಾಧ್ಯಮಗಳ ಮೂಲಕ ಹಬ್ಬುತ್ತಿರುವ ಭಯದ ವೈರಸ್ಸನ್ನು ನಿಯಂತ್ರಿಸಲು ಯೂಟ್ಯೂಬ್, ಟ್ವಿಟರ್, ಫೇಸ್‍ಬುಕ್ ಮುಂತಾದ ಜಾಲಕಟ್ಟೆಗಳು ಅಹೋರಾತ್ರಿ ಹೆಣಗುತ್ತಿವೆ. ಬುರುಡೆ ಸುದ್ದಿಗಳನ್ನೂ ಸಾರಾಯಿ ಚಿಕಿತ್ಸೆ, ಸೆಗಣಿಚಿಕಿತ್ಸೆಯಂಥ ತರಲೆಗಳನ್ನೂ ಅವು ಕಿತ್ತು ಹಾಕುತ್ತಿವೆ. ಸುದ್ದಿಯೊಂದು ವೈರಲ್ ಆಗುವಂತೆ ತಾವೇ ಸೃಷ್ಟಿಸಿಕೊಂಡಿರುವ ಅಲ್ಗೊರಿದಮ್ ವಿರುದ್ಧ ಅವು ಸೆಣಸುತ್ತಿವೆ. ಆದರೂ ತರಲೆಸುದ್ದಿ...
ಹದಿನೇಳು ವರ್ಷಗಳ ಹಿಂದೆ, ಸಾರ್ಸ್ ಸಂದರ್ಭದಲ್ಲಿ ಇದೇ ಅಂಕಣದಲ್ಲಿ ಕೊರೊನಾ ವೈರಸ್ ಬಗ್ಗೆ ಬರೆದಿದ್ದ ಮಾತುಗಳು ಈಗಲೂ ಇಲ್ಲಿ ಪ್ರಸ್ತುತವೆನ್ನಿಸಬಹುದು: ಮಂಗನಕಾಯಿಲೆ ಬಂತೆಂದು ಅಥವಾ ಕ್ಷಯ ಇದೆಯೆಂದು ಯಾರೂ ಮುಖವಾಡವನ್ನು ಧರಿಸುವುದಿಲ್ಲ. ಹಾಗಾಗಿ ಅವುಗಳ ಬಗ್ಗೆ ನಮಗೆ ಚಿಂತೆಯಿಲ್ಲ. ಈ ಕಾಯಿಲೆ ನಮ್ಮ ಜನರಿಗೆ ತೊಡಿಸುತ್ತಿರುವ ಮುಖವಾಡವೇ ನಮ್ಮಲ್ಲಿ ಭಯವನ್ನು ಹಬ್ಬಿಸುತ್ತಿದೆ.
ಕೈಯ ಮಹತ್ವವನ್ನು ಕಡೆಗಣಿಸಿದರೆ ಮುಖವಾಡದಿಂದಲೇ ಅಪಾಯ ಬಂದೀತು!
'); $('#div-gpt-ad-711615-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-711615').addClass('inartprocessed'); } else $('#in-article-711615').hide(); } else { window._taboola = window._taboola || []; _taboola.push({ mode: 'thumbnails-e', container: 'taboo...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-711615 .field-name-body .field-items div.field-item > p'); if(x1 != null && x1.length != 0) { $('#node-711615 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-711615 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-711615'); }); } else { $('#in-article-mob-711615').hide(); $('#in-article-mob-3rd-711615').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಜಿಲ್ಲಾಧಿಕಾರಿ ವಿರುದ್ಧ ಈಶ್ವರಪ್ಪ ಸಿಡಿಮಿಡಿ | Prajavani
ಜಿಲ್ಲಾಧಿಕಾರಿ ವಿರುದ್ಧ ಈಶ್ವರಪ್ಪ ಸಿಡಿಮಿಡಿ
ನಗರಸಭೆಯಿಂದ ಉಚಿತ ಆಟೊ ಮೀಟರ್ ಅಳವಡಿಕೆಗೆ ಜಿಲ್ಲಾಡಳಿತ ತಡೆ ವಿಚಾರ
Published: 02 ಆಗಸ್ಟ್ 2013, 16:10 IST
Updated: 02 ಆಗಸ್ಟ್ 2013, 16:10 IST
ಶಿವಮೊಗ್ಗ: ನಗರಸಭೆಯಿಂದ ಆಟೊಗಳಿಗೆ ಉಚಿತವಾಗಿ ಮೀಟರ್ ಅಳವಡಿಕೆಗೆ ತಡೆ ಹಾಕಿರುವ ಜಿಲ್ಲಾಡಳಿತದ ನಿರ್ಧಾರ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತು.
ಕೆ.ಎಸ್.ಈಶ್ವರಪ್ಪ ಮಾತನಾಡಿ, ಹಿಂದೆ ಚನ್ನಬಸಪ್ಪ ನಗರಸಭೆ ಅಧ್ಯಕ್ಷರಾಗಿದ್ದ ವೇಳೆ ಆಟೊಚಾಲಕರಿಗೆ ಮೀಟರ್ ಅಳವಡಿಕೆ ಮಾಡಿಕೊಳ್ಳಲು ಸಹಾಯ ಧನ ನೀಡಲು ನಿರ್ಧರಿಸಲಾಗಿತ್ತು. ಇದಕ್ಕಾಗಿಯೇ ರೂ50 ಲಕ್ಷ ಮೀಸಲಿಡಲಾಗಿತ್ತು. ಇದೀಗ ಮೀಟರ್ ಅಳವಡಿಕೆಗೆ ಸಹಾಯಧನ ನೀಡುವುದಿಲ್ಲ ಎಂದು ಹೇಳಿರುವ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಪುಲ್ ಬನ್ಸಲ್, ಈಗಾಗಲೇ ನಗರಸಭೆಯ ಸಹಾಯಧನ ಅಡಿ ಕೆಲ ಆಟೊಗಳಿಗೆ ಮೀಟರ್ ಅಳವಡಿಸಲಾಗಿದೆ. ಪ್ರಸ್ತುತ ಹಣವಿಲ್ಲದ ಕಾರಣ ಉಚಿತವಾಗಿ ಮೀಟರ್ ನೀಡದಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಉಚಿತವಾಗಿ ಮೀಟರ್ ಅಳವಡಿಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬೇರೆ ಯಾವ ಜಿಲ್ಲೆಯಲ್ಲೂ ಈ ರೀತಿಯ ಸೌಲಭ್ಯ ನೀಡುತ್ತಿಲ್ಲ. ಈ ಹಿಂದೆ ಸಾಕಷ್ಟು ಸಮಯಾವಕಾಶ ನೀಡಿದ್ದರೂ ಕೆಲ ಆಟೊ ಚಾಲಕರು ಮೀಟರ್ ಅಳವಡಿಸಿಕೊಂಡಿಲ್ಲ ಎಂದರು.
ಅಧಿಕಾರಿಗಳ ಮಾತಿನಿಂದ ಕೊಂಚ ಸಿಡಿಮಿಡಿಗೊಂಡ ಈಶ್ವರಪ್ಪ, `ಮೀಟರ್ ಅಳವಡಿಕೆಗೆ ನಿರ್ಣಯ ಕೈಗೊಂಡು ರೂ50 ಲಕ್ಷ ಅನುದಾನವನ್ನು ನಗರಸಭೆ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಬಜೆಟ್‌ನಲ್ಲಿ ಘೋಷಿಸಿದ ಹಣವನ್ನು ಬಳಕೆ ಮಾಡಬೇಡಿ ಎಂದು ಹೇಳುವುದಕ್ಕೆ ನಿಮಗೆ ಅಧಿಕಾರವಿಲ್ಲ. ಈ ಹಿಂದಿನ ನಿರ್ಧಾರದಂತೆ ಆಟೋ ಚಾಲಕರಿಗೆ ಉಚಿತವಾಗಿ ಮೀಟರ್ ಅಳವಡಿಕೆ ಮಾಡಿ. ಮೀಟರ್ ಅಳವಡಿಕೆಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಎಷ್ಟು...
ಮೀಟರ್ ಅಳವಡಿಕೆಗೆ ನಗರಸಭೆ ಮೀಸಲಿರಿಸಿದ್ದ ರೂ50 ಲಕ್ಷದಲ್ಲಿ ಇದುವರೆಗೂ ಸುಮಾರು ರೂ27 ಲಕ್ಷ ಖರ್ಚಾಗಿದೆ ಎಂದು ನಗರಸಭೆ ಎಂಜಿನಿಯರ್ ಗಣೇಶ್ ಪ್ರತಿಕ್ರಿಯಿಸಿದರು.
ವಿಪುಲ್ ಬನ್ಸಲ್ ಮಾತನಾಡಿ, `ಬಾಕಿ ಅನುದಾನದಲ್ಲಿ ಮೀಟರ್ ಅಳವಡಿಕೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ. ಆದರೆ, ಮೀಟರ್ ಅಳವಡಿಕೆಗೆ ಸಹಾಯಧನ ನೀಡಬೇಕೇ? ಬೇಡವೇ? ಎಂಬ ನಿರ್ಧಾರವನ್ನು ನಗರಸಭೆಯ ನೂತನ ಆಡಳಿತ ನಿರ್ಧಾರ ಕೈಗೊಳುತ್ತದೆ. ಸದ್ಯಕ್ಕೆ ಆಟೊ ಚಾಲಕರಿಗೆ ಮೀಟರ್ ಅಳವಡಿಕೆಗೆ ಸಂಬಂಧಿಸಿದಂತೆ ಅರ್ಜಿ ನೀಡಲಾಗುವುದು' ಎಂದು ಹೇಳಿದರು.
ಭಾರತ ತಂಡಕ್ಕೆ ಪ್ರಶಸ್ತಿಯ ಗರಿ | Prajavani
ಭಾರತ ತಂಡಕ್ಕೆ ಪ್ರಶಸ್ತಿಯ ಗರಿ
ಕ್ರಿಕೆಟ್: 19 ವರ್ಷ ವಯಸ್ಸಿನೊಳಗಿನವರ ಟೂರ್ನಿ
ಡಾರ್ವಿನ್, ಆಸ್ಟ್ರೇಲಿಯಾ (ಪಿಟಿಐ): ಬೌಲರ್‌ಗಳ ಸಮರ್ಥ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತ ತಂಡದವರು 19 ವರ್ಷ ವಯಸ್ಸಿನೊಳಗಿನವರ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಕಿರೀಟ ಮುಡಿಗೇರಿಸಿಕೊಂಡರು.
ಮರಾರಾ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್‌ನಲ್ಲಿ ವಿಜಯ್ ಜೋಲ್ ಬಳಗ ಎಂಟು ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ ಭಾರತದ ಶಿಸ್ತಿನ ಬೌಲಿಂಗ್ ಮುಂದೆ ಪರದಾಟ ನಡೆಸಿ 24.4 ಓವರ್‌ಗಳಲ್ಲಿ ಕೇವಲ 75 ರನ್‌ಗಳಿಗೆ ಆಲೌಟಾಯಿತು.
ಭಾರತ 15.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 76 ರನ್ ಗಳಿಸಿ ಜಯ ಸಾಧಿಸಿತು. ಸುಲಭ ಗುರಿಯನ್ನು ಬೆನ್ನಟ್ಟಿದ ತಂಡ ಅಖಿಲ್ ಹೆರ್ವಾಡ್ಕರ್ (0) ಮತ್ತು ಜೋಲ್ (9) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಅಂಕುಶ್ ಬೈನ್ಸ್ (40) ಹಾಗೂ ಸಂಜು ಸ್ಯಾಮ್ಸನ್ (20) ಅಜೇಯ ಆಟದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 24.4 ಓವರ್‌ಗಳಲ್ಲಿ 75 (ಮ್ಯಾಥ್ಯೂ ಶಾರ್ಟ್ 25, ದೀಪಕ್ ಹೂಡಾ 33ಕ್ಕೆ 2, ಅಭಿಮನ್ಯು ಲಂಬಾ 28ಕ್ಕೆ 2, ಕುಲದೀಪ್ ಯಾದವ್ 4ಕ್ಕೆ 2) ಭಾರತ: 15.3 ಓವರ್‌ಗಳಲ್ಲಿ 2 ವಿಕೆಟ್‌ಗೆ 76 (ಅಂಕುಶ್ ಬೈನ್ಸ್ ಔಟಾಗದೆ 40, ಸಂಜು ಸ್ಯಾಮ್ಸನ್ ಔಟಾಗದೆ 20, ಗಾಬ್ ಬೆಲ್ 15ಕ್ಕೆ 1) ಫಲಿತಾಂಶ: ಭಾರತಕ್ಕೆ 8 ವಿಕೆಟ್ ಗೆಲುವು
ಸ್ವಾವಲಂಬಿಯಾಗಿ ಮಹಿಳೆಯರು ಮುಂದೆ ಬರಲು ಸಚಿವ ನಿರಾಣಿ ಕರೆ - kalpa.news
ಸ್ವಾವಲಂಬಿಯಾಗಿ ಮಹಿಳೆಯರು ಮುಂದೆ ಬರಲು ಸಚಿವ ನಿರಾಣಿ ಕರೆ
ನವೆಂಬರ್ 18, 2021 ರಂದು ಅಂತಾರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ಕಾರ್ಯಕ್ರಮ
ಮಹಿಳೆಯರು ‌ಸ್ವಂತ ಉದ್ಯಮಗಳನ್ನು ‌ಆರಂಭಿಸಲು ಮುಂದಾದರೆ ಸರ್ಕಾರದಿಂದ ‌ಎಲ್ಲಾ ‌ರೀತಿಯ ನೆರವು ‌ನೀಡಲು‌ ಸಿದ್ದ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ‌ಸಚಿವ ಮುರುಗೇಶ್‌ ಆರ್ ನಿರಾಣಿ‌ ಅವರು ಆಶ್ವಾಸನೆ ‌ನೀಡಿದರು.
ಬೆಂಗಳೂರಿನ ‌ಅರಮನೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವತಿಯಿಂದ ನಡೆದ 'ಕೈಗಾರಿಕಾ ‌ಆದಾಲತ್' ಕಾರ್ಯಕ್ರಮದ ವೇಳೆ ‌ನವೆಂಬರ್ 18 ರಂದು ಅಂತರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನದಂದು ನಡೆಯಲಿರುವ 'ಟುಗೆದರ್ ವಿ ಗ್ರೋ' ಕಾರ್ಯಕ್ರಮದ 'ಕೈಪೀಡಿ' ಬಿಡುಗಡೆ ಮಾಡುವ ಮೂಲಕ ಮಹಿಳಾ ಉದ್ಯಮಿಗಳಿಗೆ ಸಚಿವರು ಭರವಸೆ ನೀಡಿದರು.
ಪ್ರತಿಯೊಬ್ಬ ಮಹಿಳಾ ಉದ್ಯಮಿಗಳು ಸ್ವಾವಲಂಬನೆಯಾಗಬೇಕು ಎಂಬುದು ‌ನಮ್ಮ‌ ಸರ್ಕಾರದ ಮುಖ್ಯ ‌ಗುರಿಯಾಗಿದೆ. ಕೇಂದ್ರ ಮತ್ತು ‌ರಾಜ್ಯಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ‌ಮಹಿಳಾ ಉದ್ಯಮಿಗಳ ಸಂಘಗಳ (UBUNTU) ಒಕ್ಕೂಟದ ನಿಯೋಗದೊಂದಿಗೆ ಸಂವಾದ ನಡೆಸಿದ ಸಚಿವ ನಿರಾಣಿ ಅವರು, ಮಹಿಳಾ ಉದ್ಯಮಿಗಳಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ನಿಮ್ಮ ಉದ್ಯಮಕ್ಕೆ ‌ನಮ್ಮ ಇಲಾಖೆಯಿಂದ ‌ಏನೇನು ನೆರವು ಬೇಕೋ ಎಲ್ಲವನ್ನೂ ‌ಒದಗಿಸಲು‌ ಸಿದ್ದ ಎಂದು ‌ವಾಗ್ದನ‌ ಮಾಡಿದರು.
"ನಮ್ಮ ಸರ್ಕಾರವು ಮಹಿಳೆಯರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಪ್ರೋತ್ಸಾಹಿಸಲು ಬದ್ಧವಾಗಿದೆ. ನಾವು ಮಹಿಳಾ ಉದ್ಯಮಿಗಳಿಗೆ ಸಹಕಾರ ಮತ್ತು ಬೆಂಬಲವನ್ನು ನೀಡುತ್ತೇವೆ.ಜೊತೆಗೆ ಅಗತ್ಯ ಮಾರ್ಗದರ್ಶನ ಮತ್ತು ಸಹಾಯವನ್ನು ನೀಡುತ್ತೇವೆ. ಮಹಿಳೆಯರನ್ನು ಸಬಲೀಕರಣಗೊಳಿಸುವುದು ಎಂದರೆ,ನಮ್ಮ ಸಮಾಜವನ್ನು ಬಲಗೊಳಿಸಿದಂತೆ ಎಂದು ನಾವು ಭಾವಿಸುತ್ತೇವೆ" ಎಂದರು.
ಮಹಿಳಾ ಉದ್ದಿಮೆದಾರರ ಸಂಘಗಳ UBUNTU ಒಕ್ಕೂಟವು ‌ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯ ಮಾಡುತ್ತೀರುವುದಕ್ಕೆ‌ ಯಶಸ್ವಿ ಕೈಗಾರಿಕೋದ್ಯಮಿಯೂ ಆಗಿರುವ ಸಚಿವ ಮುರುಗೇಶ್ ನಿರಾಣಿ, ರಾಜ್ಯವು ಅತ್ಯುತ್ತಮ ಅವಕಾಶಗಳನ್ನು ನೀಡುತ್ತದೆ. ಇದು ಉಪಯೋಗವಾದರೆ ಮಾತ್ರ ಸಾರ್ಥಕವಾಗುತ್ತದೆ ಎಂದು ‌ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ನೇತೃತ್ವದ UBUNTU ಅನ್ನು ನಾನು ಅಭಿನಂದಿಸುತ್ತೇನೆ, ಮಹಿಳೆಯರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಪ್ರೋತ್ಸಾಹಿಸಿದ್ದಕ್ಕಾಗಿ, ಅವರು ಯಶಸ್ಸನ್ನು ಸಾಧಿಸಲು ಸಹಾಯ ಮಾಡಿದ್ದಾರೆ. ಕರ್ನಾಟಕವು ಮಹಿಳಾ ಉದ್ಯಮಿಗಳಿಗೆ ಅತ್ಯುತ್ತಮ ಅವಕಾಶಗಳನ್ನು ನೀಡುತ್ತದೆ ಎಂದು ‌ತಿಳಿಸಿದರು.
ನಮ್ಮ ಸರ್ಕಾರವು ಕೈಗಾರಿಕೆಗಳನ್ನು ಉತ್ತೇಜಿಸಲು ಸಬ್ಸಿಡಿಗಳು ಮತ್ತು ಪ್ರೋತ್ಸಾಹಕಗಳನ್ನು ಒಳಗೊಂಡಂತೆ ಅನೇಕ ರಿಯಾಯಿತಿಗಳನ್ನು ನೀಡುತ್ತದೆ. ನಾವು ಮಹಿಳಾ ಉದ್ಯಮಿಗಳಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ಬದ್ಧರಾಗಿದ್ದೇವೆ ಎಂದು ಸಚಿವೆ ನಿರಾಣಿ ಭರವಸೆ ನೀಡಿದರು.
'ಟುಗೆದರ್ ವಿ ಗ್ರೋ ಕಾರ್ಯಕ್ರಮ' ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ, ಮಹಿಳಾ ಉದ್ಯಮಿಗಳ ಒಕ್ಕೂಟದ UBUNTU ಒಕ್ಕೂಟದ ಅಧ್ಯಕ್ಷರು ಇತ್ತೀಚೆಗೆ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಮಹಿಳಾ ಉದ್ಯಮಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದರು. ಅವರು ನವೆಂಬರ್ 18, 2021 ರಂದು ಅಂತಾರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನದಂದು ಇಲ್ಲಿ ಹೋಟೆಲ್ ಲಲಿತ್ ಅಶೋಕ್‌ನಲ...
ಮಹಿಳಾ ಉದ್ಯಮಿಗಳನ್ನು ಪೋಷಿಸಲು 30 ಕ್ಕೂ ಹೆಚ್ಚು ಸಂಘಗಳು ಮತ್ತು ಅವುಗಳ 13,000 ಸದಸ್ಯರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.
Tags: BangaloreKannada NewsKannada News LiveKannada News OnlineKannada News WebsiteKannada WebsiteLatest News KannadaMinister Murugesh NiraniNews in KannadaNews KannadaState Newsಬೆಂಗಳೂರುಸಚಿವ ಮುರುಗೇಶ್ ನಿರಾಣಿ
ಬಿಗ್ ಬಾಸ್ ನ ವಿಜೇತ ಬಹುಮಾನದ 50 ಲಕ್ಷ ರೂಪಾಯಿಗಳನ್ನು ಯಾರು ಪಡೆಯುತ್ತಾರೆ ಗೊತ್ತಾ?? - ಕರುನಾಡ ವಾಣಿ
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕಾರ್ಯಕ್ರಮ ಕಾರಣಾಂತರಗಳಿಂದ ಇದೀಗ ಇನ್ನು 4 ವಾರಗಳು ಬಾಕಿ ಇರುವಾಗ ಮುಗಿದು ಹೋಗಿದೆ. ಹೊರ ಜಗತ್ತಿನ ಪ್ರಪಂಚದ ಸ್ಥಿತಿಗತಿಗಳನ್ನು ತೋರಿಸಿ ಎಲ್ಲ ಸದಸ್ಯ ರನ್ನು ಮನೆಯಿಂದ ಹೊರ ಬರುವಂತೆ ಆದೇಶ ನೀಡಿ ಪ್ರತಿಯೊಬ್ಬರೂ ಮನೆಯ ಸದಸ್ಯರನ್ನು ಕ್ಷೇಮವಾಗಿ ಅವರವರ ಮನೆಗೆ ಬಿಡಲಾಗುತ್ತದೆ. ಇನ್ನು ಹೀಗೆ ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ನಿಂತಿರುವ ಕಾರಣ ಯಾವುದೇ ಸ್ಪರ...
ಇನ್ನು ಈ ಕಾರ್ಯಕ್ರಮವನ್ನು ಮತ್ತೆ ಅದೇ ಸದಸ್ಯರೊಂದಿಗೆ ಮುಂದುವರೆಸುವ ಯಾವುದೇ ಸಾಧ್ಯತೆಗಳು ಕೂಡ ಕಾಣಿಸುತ್ತಿಲ್ಲ. ಹಾಗಿದ್ದರೆ ಇಷ್ಟು ದಿವಸ ಮನೆಯಲ್ಲಿ ಇದ್ದ ಸ್ಪರ್ದಿಗಳಿಗೆ ಕೇವಲ ಸಂಭಾವನೆ ಮಾತ್ರ ಸಿಗುತ್ತದೆಯೇ?? ಅಥವಾ ವಿಜೇತರನ್ನು ಘೋಷಣೆ ಮಾಡಿ ಹಣ ನೀಡಲಾಗುತ್ತದೆಯಾ?? ಈ ಎಲ್ಲ ಪ್ರಶ್ನೆಗಳು ಎಲ್ಲರ ಮನದಲ್ಲಿಯೂ ಕೂಡ ಉಳಿದು ಕೊಂಡಿವೆ.
ಹೌದು ಸ್ನೇಹಿತರೇ, ಈ ರೀತಿಯ ಪ್ರಶ್ನೆಗಳು ಎಲ್ಲರ ಮನದಲ್ಲಿಯೂ ಕೂಡ ಮೂಡಿರುವುದು ಸುಳ್ಳಲ್ಲ, ಆದರೆ ಇದೇ ಸಮಯದಲ್ಲಿ ಪ್ರೇಕ್ಷಕರು ಈ ಹಣದಿಂದ ಸಾಧ್ಯವಾದಷ್ಟು ಬಡವರಿಗೆ ಸಹಾಯ ಮಾಡಿ, ಮನೆಯಿಂದ ಬೆಡ್ ಹಾಕಿ ಚಿಕಿತ್ಸೆ ನೀಡಿ ಹೀಗೆ ಹಲವಾರು ರೀತಿಯಲ್ಲಿ ಮನವಿ ಮಾಡಿದ್ದಾರೆ. ಆದರೆ ಈ ವಿಜೇತ ಹಣವನ್ನು ಏನು ಮಾಡಲಾಗುತ್ತದೆ ಎಂಬುದರ ಕುರಿತು ಅಲ್ಲಲ್ಲಿ ಚರ್ಚೆ ನಡೆಯುತ್ತಿದ್ದು, ತೆಲುಗಿನ ಸಾಕ್ಷಿ ಪತ್ರಿಕ...
ಸಿದ್ದರಾಮಯ್ಯನವರು ಈಗ ಸುಲ್ತಾನ್ ಸಿದ್ದರಾಮಯ್ಯ: ಪ್ರತಾಪ್ ಸಿಂಹ - Kannada Today - ಕನ್ನಡ ಟುಡೇ - Digital News
ಸಿದ್ದರಾಮಯ್ಯನವರು ಈಗ ಸುಲ್ತಾನ್ ಸಿದ್ದರಾಮಯ್ಯ: ಪ್ರತಾಪ್ ಸಿಂಹ
ಮಂಗಳೂರು: ಮಂಗಳೂರು ಚಲೋ ಹಿನ್ನೆಲೆಯಲ್ಲಿ ನಗರದ ಜ್ಯೋತಿ ಸರ್ಕಲ್‌ನಲ್ಲಿ ಹಾಕಿದ್ದ ವೇದಿಕೆಯಲ್ಲಿ ಮಾತಾಡಿದ ಪ್ರತಾಪ್ ಸಿಂಹ ಅವರು, 'ಸಿದ್ದರಾಮಯ್ಯನವರು ಇಂದು 'ಸುಲ್ತಾನ್' ಸಿದ್ದರಾಮಯ್ಯ ಆಗಿದ್ದಾರೆ. ರಮಾನಾಥ ರೈ ರಮಝಾನ್ ರೈ ಆಗಿದ್ದಾರೆ' ಎಂದು ಹೇಳಿದರು.
ಜಿಲ್ಲೆಯಲ್ಲಿ ಪಿಎಫ್‌ಐ, ಎಸ್‌ಡಿಪಿಐನಂಥ ಉಗ್ರ ಸಂಘಟನೆಗಳು ಜಿಲ್ಲೆಯಲ್ಲಿ ಬಲವಾಗಿ ಬೇರೂರುತ್ತಿವೆ. ರಾಜ್ಯದೆಲ್ಲೆಡೆ ನಡೆಯುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಲ್ಲಿ ಈ ಸಂಘಟನೆಗಳ ಕಾರ್ಯಕರ್ತರೇ ಸಿಕ್ಕಿಬೀಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯರ ನೇತೃತ್ವದ ರಾಜ್ಯ ಸರಕಾರ ಈ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಕೇಸ್‌ಗಳನ್ನು ವಾಪಸ್ ಪಡೆಯುವ ಮೂಲಕ ಬಹುಸಂಖ್ಯಾತ ಹಿಂದೂಗಳನ್ನು ತುಳಿಯುವ...
'ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಅಹಿತಕರ ಘಟನೆಗಳಿಗೆ ಮುಖ್ಯಮಂತ್ರಿಯವರೇ ನೇರ ಕಾರಣ. ಸರಕಾರ ಇಂದು ಮಂಗಳೂರಿನಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಕಾರ್ಯಕರ್ತರ ಬಳಿ ಯಾವುದೇ ಶಸ್ತ್ರಾಸ್ತ್ರವಿರದಿದ್ದರೂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿರುವವರನ್ನು ಬಂಧಿಸುವ ಮೂಲಕ ಹೇಡಿತನವನ್ನು ಸರಕಾರ ಪ್ರದರ್ಶಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದ ಕೈಲಾಗದ ಸರಕಾರ ಕೇವಲ ಒಂದು ಬೈಕ್ ರ್‍ಯಾಲಿಗೆ ಹೆದರಿ ಅವಕಾಶ ನಿರಾಕರಿಸಿದೆ.
ಇಂಥ ಪರಿಸ್ಥಿತಿಯಲ್ಲಿ ಬಿಜೆಪಿ, ಸಂಘಟನೆಗಳ ಕಾರ್ಯಕರ್ತರು ಎದೆಗುಂದುವ ಪ್ರಶ್ನೆಯೇ ಇಲ್ಲ. ಸರಕಾರದ ವಿರುದ್ಧ ನಿತಂತರ ಹೋರಾಟ ಮುಂದುವರಿಯಲಿದೆ' ಎಂದು
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ತೀರಾ ಹದಗೆಟ್ಟ ಪರಿಸ್ಥಿತಿಯಲ್ಲೂ ನಿದ್ದೆಗೆ ಶರಣಾಗಿದ್ದಾರೆ. ಅವರನ್ನು ಎದ್ದೇಳು ನಿದ್ರಾಮಯ್ಯ ಎಂದು ಎಬ್ಬಿಸಲು ಜನರೇ ಮುಂದಾಗಬೇಕಿದೆ. ರಾಜ್ಯಾದ್ಯಂತ ಹಿಂದೂ ಸಂಘಟನೆಗಳ ನಾಯಕರ ಹತ್ಯೆಯಾಗುತ್ತಿದ್ದರೂ ಸರಕಾರ ಕೈಕಟ್ಟಿ ಕೂತಿದೆ. ಬೈಕ್ ರ್‍ಯಾಲಿಗೆ ಅವಕಾಶ ನಿರಾಕರಿಸುವ ಮೂಲಕ ಸರಕಾರ ಬಹುಸಂಖ್ಯಾತ ಹಿಂದೂಗಳನ್ನು ಕೊಲೆಗೈಯಲು ಪ...
ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಉಪಾಧ್ಯಕ್ಷೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್, ಜಗದೀಶ್ ಶೆಟ್ಟರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಈಶ್ವರಪ್ಪ, ಆರ್.ಅಶೋಕ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಬಿ.ಟಿ. ರಂಜನ್ - ಗಲ್ಪ್ ಕನ್ನಡಿಗ -->
Home › Uncategories › ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಬಿ.ಟಿ. ರಂಜನ್
ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಬಿ.ಟಿ. ರಂಜನ್
ಪುತ್ತೂರಿನ ಪತ್ರಕರ್ತರಲ್ಲಿ ಅಗ್ರಪಂಕ್ತಿಯ ಹೆಸರುಗಳಲ್ಲಿ ಬಿ.ಟಿ. ರಂಜನ್ ಹೆಸರು ಮುಂಚೂಣಿಯಲ್ಲಿ ಇರುತ್ತದೆ. ಕಳೆದ 25 ವರ್ಷಗಳಿಂದ ಅವರು ಪತ್ರಿಕೋದ್ಯಮದಲ್ಲಿ ಜನಸೇವೆಯನ್ನು ಕಂಡವರು.
ನಾಡಿನ ಸಮಸ್ಯೆಗಳಿಂದ ಹಿಡಿದು ಅಭಿವೃದ್ಧಿ, ರಾಜಕಾರಣ, ಸಾಹಿತ್ಯ ಹೀಗೆ ಎಲ್ಲ ಕ್ಷೇತ್ರಗಳ ಡೊಂಕುಗಳನ್ನು ಅಕ್ಷರಕ್ಕಿಳಿಸಿ ಸಾಧನೆಗಳನ್ನು ಗುರುತಿಸಿ ಎಲ್ಲರಿಂದಲೂ ಭೇಷ್ ಅನಿಸಿಕೊಂಡರು.
ಪತ್ರಿಕೋದ್ಯಮಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ 2020ನೇ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯ ಬಗ್ಗೆ ಅವರ ಪ್ರತಿಕ್ರಿಯೆ ಹೀಗಿದೆ:
ಪುತ್ತೂರು ಸೀಮೆಯ ಒಡೆಯನಿಗೆ ಶರಣು
ಕಳೆದ 33 ವರ್ಷಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವ ನನ್ನ ಸೇವೆಯನ್ನು ಗುರುತಿಸಿ ಸರಕಾರ ಮತ್ತು ಸಮಾಜ ನನಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗುರುತಿಸಿದೆ. ಪತ್ರಿಕೋದ್ಯಮದಲ್ಲಿ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಯುವಂತೆ ಅನುಗ್ರಹಿಸಿದ ಪುತ್ತೂರು ಸೀಮೆಯ ಒಡೆಯ ಮಹಾಮಹಿಮ ಶ್ರೀ ಮಹಾಲಿಂಗೇಶ್ವರ ದೇವರಿಗೆ ನಾನು ತಲೆ ತಗ್ಗಿಸಿ ಶರಣಾಗಿದ್ದೇನೆ.
ನನ್ನ ಪತ್ರಿಕೋದ್ಯಮದ ಮರುಯಾನವನ್ನು ಆರಂಭಿಸಲು ನನಗೆ ಅವಕಾಶ ನೀಡಿದ `ಹೊಸ ದಿಗಂತ' ದಿನ ಪತ್ರಿಕೆಯ ನನ್ನ ಎಲ್ಲಾ ಗೌರವಾನ್ವಿತ ಸಹೋದ್ಯೋಗಿಗಳಿಗೆ ಹಾಗೂ ಪತ್ರಿಕಾ ಆಡಳಿತ ಮಂಡಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಾನು ಕಳೆದ 25 ವರ್ಷಗಳಿಂದ ಸದಸ್ಯನಾಗಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಸಂದ ಗೌರವ ಇದು ಎಂದು ನಾನು ಅತ್ಯಂತ ಅಭಿಮಾನದಿಂದ ಹೇಳುತ್ತಿದ್ದೇನೆ.
ನನ್ನ ಪತ್ರಿಕೋದ್ಯಮ ಜೀವನವನ್ನು ಬಲ್ಲ ಎಲ್ಲಾ ಆತ್ಮೀಯ ಬಂಧುಗಳು, ನನ್ನ ಹಿತೈಷಿಗಳು ನನಗೆ ಅಭಿನಂದನೆಗಳನ್ನು ನೀಡಿ ಗೌರವಿಸಿದ್ದಾರೆ. ಇವರೆಲ್ಲರಿಗೂ ನಾನು ಚಿರಋಣಿ. ಪತ್ರಿಕೋದ್ಯಮದಲ್ಲಿ ನಿಜದ ನೇರಕ್ಕೆ ನಡೆದಿದ್ದೇನೆ. ಯಾವ ಟೀಕೆ ಟಿಪ್ಪಣಿಗಳಿಗೂ ಬಗ್ಗದೆ-ಜಗ್ಗದೆ ಸಮಾಜದ ಹಿತಕ್ಕಾಗಿ ಕೆಲಸ ಮಾಡಿದ್ದೇನೆ. ನನಗೆ ಶ್ರೀ ದೇವರ ಅನುಗ್ರಹ ಮತ್ತು ಸಮಾಜದ ಬೆಂಬಲ ನಿರಂತರ ಸಿಕ್ಕಿದೆ. ನಾನು ಪತ್ರಿಕೋದ್ಯಮ...
ಕಷ್ಟಗಳ ವಿರುದ್ಧ ಹೋರಾಟ...! | Prajavani
ಕಷ್ಟಗಳ ವಿರುದ್ಧ ಹೋರಾಟ...!
ಕೊಲಂಬೊ: ಕಾಡುವ ಕೊರತೆಗಳನ್ನು ಲೆಕ್ಕ ಮಾಡಲಾಗದು. ಅವೇ ಬಾಣ ಮೊನೆ ಚುಚ್ಚಿದಂತಾಗಿ ಮನದ ತುಂಬಾ ನೋವು. ಕಷ್ಟ ಕೋಟಲೆಗಳು ಅದೆಷ್ಟೊಂದು ಎದುರಾಗಿ ಬಂದವು. ಆದರೂ ಹೋರಾಟ ನಿಲ್ಲಲಿಲ್ಲ. ಈಗ ಮಾಡು-ಇಲ್ಲವೆ ಮಡಿ ಎನ್ನುವ ಹಂತದಲ್ಲಿ ಬಂದು ನಿಂತಾಗಿದೆ. ಗೆದ್ದರೆ ವಿಶ್ವಕಪ್ ವಿಜಯದ ಸನಿಹಕ್ಕೆ ಇನ್ನೊಂದು ಅಡಿ ಹತ್ತಿರ. ಸೋತರೆ ಮಹಾ ಬುದ್ಧಿವಂತರಾದ ಇಂಗ್ಲೆಂಡಿನ ಕ್ರಿಕೆಟ್ ಪಂಡಿತರ ಟೀಕೆಗಳ ನಡುವೆ ಸಿಲುಕಿ...
ಇಂಗ್ಲೆಂಡ್ ತಂಡದ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಮುಂದಿರುವ ವಾಸ್ತವವಿದು. ವಿಶ್ವಕಪ್ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ಶನಿವಾರ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಬೇಕು. ಲೀಗ್ ಹಂತದಲ್ಲಿ ಒಂದು ಪಂದ್ಯದಲ್ಲಿ ಮಾಡಿದ ತಪ್ಪನ್ನು ಇನ್ನೊಂದರಲ್ಲಿ ಸರಿದೂಗಿಸಿಕೊಂಡು ಹೋಗಲು ಅವಕಾಶವಿತ್ತು. ಆದರೆ ಮುಂದಿರುವುದು 'ನಾಕ್‌ಔಟ್'. ಎಡವಿದರೆ ಬೀಳುವುದು ನೇರವಾಗಿ ನಿರಾಸೆಯ ಮಡುವಿನೊಳಗೆ.
ಸಿಂಹಳೀಯರ ನಾಡಿನಲ್ಲಿ ಆಡಬೇಕಾದ ಮಹತ್ವದ ಪಂದ್ಯದಲ್ಲಿ ಆತಿಥೇಯರ ಕಡೆಗೇ ತಕ್ಕಡಿಯು ತೂಗುವ ಭಾರ ಹೆಚ್ಚು. ಆದ್ದರಿಂದಲೇ ಇಂಗ್ಲೆಂಡ್ ಗೆಲುವಿನ ಸಾಧ್ಯತೆ ಅಧಿಕವೆಂದು ಹೇಳುವುದಕ್ಕೆ ಕ್ರಿಕೆಟ್ ಪಂಡಿತರಿಗೂ ಅನುಮಾನ. ಇದು ಈಗಿನ ಪರಿಸ್ಥಿತಿ. ಆದರೂ ಇಂಗ್ಲೆಂಡ್ ಬೆಂಬಲಕ್ಕೆ ಇತಿಹಾಸದ ಪುಟಗಳಲ್ಲಿ ಲೆಕ್ಕಾಚಾರವಂತೂ ಇದೆ. ಲಂಕಾ ಎದುರು ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಅಂಕಿ-ಅಂಶವನ್ನೇ ಪ್ರೇರಣೆಯಾಗಿ ...
ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ಎದುರಾಗಿದ್ದು 44 ಬಾರಿ. ಸೋಲು-ಗೆಲುವಿನ ಆಧಾರದಲ್ಲಿ ತೂಗಿ ನೋಡಿದಾಗ ಇಂಗ್ಲೆಂಡ್ ಪರ ಎರಡು ಹೆಚ್ಚು ಗೆಲುವಿನ ಬಲ. ವಿಜಯದ ಸವಿ 23ರಲ್ಲಿ ಸೋಲಿನ ಕಹಿ 21 ಪಂದ್ಯಗಳಲ್ಲಿ. ಆದರೆ ಇದನ್ನೇ ಉಭಯ ಕ್ರಿಕೆಟ್ ಪಡೆಗಳ ಸಾಮರ್ಥ್ಯ ಅಳೆಯುವ ಮಾನದಂಡವಾಗಿಸಲು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿ ಹಾಗೂ ಈಗ ಎದುರಾಗುವ ಎರಡೂ ತಂಡಗಳ ಆಟಗಾರರ ಸತ್ವ ಹಾಗೂ ಶಕ್...
ಹಿಂದಿನ ಅಂಕಿ-ಸಂಖ್ಯೆಗಳು ನಿರ್ಣಾಯಕ ಅಲ್ಲ ಎನ್ನುವ ಅರಿವಿದ್ದರೂ, ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದವರು ಲಂಕಾ ಎದುರು ಪಡೆದಿರುವ ಯಶಸ್ಸಿನ ಇತಿಹಾಸ ಗಮನ ಸೆಳೆಯುವುದಂತೂ ನಿಜ. ಏಕದಿನ ಕ್ರಿಕೆಟ್‌ನ ಮಹಾಉತ್ಸವದಲ್ಲಿ ಲಂಕಾದವರಿಗಿಂತ ಇಂಗ್ಲೆಂಡ್ ಹೆಚ್ಚುಬಾರಿ ವಿಜಯೋತ್ಸವ ಆಚರಿಸಿದೆ. ವಿಶ್ವಕಪ್ ವೇದಿಕೆಯಲ್ಲಿ ಮುಖಾ-ಮುಖಿ ಆಗಿದ್ದು ಎಂಟು ಬಾರಿ. ಇಂಗ್ಲೆಂಡ್ ಗೆಲುವು ಆರು; ಸೋಲು ಕೇವಲ...
ಲೀಗ್ ಹಂತದಲ್ಲಿ ಐರ್ಲೆಂಡ್ ಹಾಗೂ ಬಾಂಗ್ಲಾದೇಶದಂಥ ತಂಡಗಳಿಗೆ ತಲೆಬಾಗಿದ ಆ್ಯಂಡ್ರ್ಯೂ ಸ್ಟ್ರಾಸ್ ನೇತೃತ್ವದ ಪಡೆಯು ಲಂಕಾ ಎದುರು ಗೆಲುವಿನ ಕಡೆಗೆ ನಡೆಯುವುದು ಕಷ್ಟ ಎನ್ನುವುದು ಸ್ಪಷ್ಟ. ಇಂಗ್ಲೆಂಡ್ ತಾನಾಡಿದ 'ಬಿ' ಗುಂಪಿನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾದಂಥ ಬಲಾಢ್ಯ ತಂಡಗಳಿಗೆ ನಿಕಟ ಪೈಪೋಟಿ ನೀಡಿದ್ದರೂ, ಬೌಲಿಂಗ್ ದಾಳಿಯಲ್ಲಿ ಬಲವಾಗಿರುವ ಕುಮಾರ ಸಂಗಕ್ಕಾರ ಬಳಗಕ್ಕೆ ಸೋಲಿನ ಆಘಾತ ನೀಡಲ...
ಸ್ಟ್ರಾಸ್ ಬಳಗದವರು ಒತ್ತಡದಲ್ಲಿ ಸಿಲುಕಿ ತೊಳಲಾಡುತ್ತಿದ್ದಾರೆ ಎನ್ನುವುದೂ ನಿಜ. ಅದಕ್ಕೆ ಮೈಕಲ್ ಯಾರ್ಡಿ ಪ್ರಕರಣವೇ ಸಾಕ್ಷಿ. ಅವರು ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದಂಥ ಮನೋದೌರ್ಬಲ್ಯದಿಂದ ತಂಡವನ್ನು ತೊರೆದರು. ಪ್ರದರ್ಶನದಲ್ಲಿ ಗುಣಮಟ್ಟ ತೋರದ ಕಾರಣ ಅವರನ್ನು ತಂಡದಿಂದ ಕೈಬಿಟ್ಟಿರಬಹುದು ಎಂದು ತೆರೆ ಮರೆಯಲ್ಲಿನ ಕಾರಣವನ್ನು ಕೆಲವರು ಬಹಿರಂಗಗೊಳಿಸಿದ್ದಾರೆ. ಅದು ಏನೇ ಇರಲಿ; ಇಂಗ್ಲೆಂಡ್...
ಆದರೂ ತಂಡದ ಆಟಗಾರರ ಮನದಲ್ಲಿ ವಿಶ್ವಕಪ್ ಗೆಲ್ಲಬೇಕು ಎನ್ನುವ ಆಸೆಯ ಚಿಲುಮೆ ಇನ್ನೂ ಚಿಮ್ಮುತ್ತಿದೆ. 'ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆದ ದಕ್ಷಿಣ ಆಫ್ರಿಕಾವನ್ನು ಸೋಲಿಸಿರುವ ತಾವು ಶ್ರೀಲಂಕಾವನ್ನು ಸೋಲಿನ ಪೆಟ್ಟಿಗೆಯಲ್ಲಿ ಸೇರಿಸಿ ಮೊಳೆ ಹೊಡೆಯುವುದು ಕಷ್ಟವೇನಲ್ಲವೆಂದು ಇಂಗ್ಲೆಂಡ್ ಆಟಗಾರರು ಯೋಚಿಸುತ್ತಿದ್ದಾರೆ. ಇಂಥದೊಂದು ಸಕಾರಾತ್ಮಕ ಯೋಚನೆಯೇ ಸ್ಟ್ರಾಸ್ ನಾಯಕತ್ವದ ತಂಡಕ್ಕೆ ಚೈತನ್ಯ ನೀ...
ಸಿಂಹಳೀಯರು ತಮ್ಮ ನಾಡಿನಲ್ಲಿ ಆಡುವಾಗ ಭಾರಿ ಅಪಾಯಕಾರಿ ಎನ್ನುವುದನ್ನು ಸ್ಟ್ರಾಸ್ ಕೂಡ ಅಲ್ಲಗಳೆಯಲಿಲ್ಲ. ಆದರೆ ಸೂಕ್ತ ಯೋಚನೆ ಹಾಗೂ ಯೋಜನೆಯೊಂದಿಗೆ ಆಡಿದರೆ ಆರ್.ಪ್ರೇಮದಾಸಾ ಕ್ರೀಡಾಂಗಣದಲ್ಲಿ ಗೆಲುವು ತಮ್ಮದಾಗುತ್ತದೆ ಎಂದರು. ಆಡಿದ ಮಾತಿನಂತೆ ಸರಿಯಾದ ಯೋಚನೆ-ಯೋಜನೆಯೊಂದಿಗೆ ಹೋರಾಡಿ ಇಂಗ್ಲೆಂಡ್ ಗೆದ್ದರೆ ಅದೊಂದು ಅನಿರೀಕ್ಷಿತ ಫಲಿತಾಂಶವೆಂದು ಖಂಡಿತ ಒಪ್ಪಬಹುದು!
'); $('#div-gpt-ad-13435-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-13435').addClass('inartprocessed'); } else $('#in-article-13435').hide(); } else { _taboola.push({article:'auto', url:'https://www.prajavani.net/article/ಕಷ್ಟಗಳ-ವಿರುದ್ಧ-ಹೋರಾಟ'}); win...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-13435 .field-name-body .field-items div.field-item > p'); if(x1 != null && x1.length != 0) { $('#node-13435 .field-name-body ....
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-13435 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-13435'); }); } else { $('#in-article-mob-13435').hide(); $('#in-article-mob-3rd-13435').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ | Prajavani
ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ
ಕೊಣಾಜೆ (ಮಂಗಳೂರು): ಈ ಸಾಲಿನ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿಯಲ್ಲಿ ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ ಜಾರಿಗೊಳಿಸಲು ಮಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.
ವಿವಿಯ ಆಡಳಿತ ಸೌಧದ ಹೊಸ ಸೆನೆಟ್ ಸಭಾಂಗಣದಲ್ಲಿ ಗುರುವಾರ ನಡೆದ ಶೈಕ್ಷಣಿಕ ಮಂಡಳಿಯ 2011-2012ನೇ ಸಾಲಿನ ಪ್ರಥಮ ಸಾಮಾನ್ಯ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಮಾತನಾಡಿ, ಈ ಪದ್ಧತಿ ವಿದ್ಯಾರ್ಥಿಗಳಿಗೆ ಕಡ್ಡಾಯ. ಮೂರು ವರ್ಷದ ಎಂಸಿಎ ವಿಭಾಗಕ್ಕೆ ವಿನಾಯಿತಿ ನೀಡಲಾಗಿದೆ. ಮುಂದಿನ ವರ್ಷದಿಂದ ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ ಜಾರಿಗೆ ತರಬೇಕು ಎಂದು ಕಳೆದ ವರ್ಷ ಅಕಾಡೆಮಿಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸರ್ಕಾರದಿಂದ ಬುಧವಾರ ಇದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದರು.
ನಾಲ್ಕು ಸೆಮಿಸ್ಟರ್ ಇರುವ ಎರಡು ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ವಿವಿ ಕ್ಯಾಂಪಸ್ ಹಾಗೂ ಸ್ನಾತಕೋತ್ತರ ಪದವಿ ಇರುವ 21 ಕಾಲೇಜುಗಳಲ್ಲಿ ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ ಅನುಷ್ಠಾನಕ್ಕೆ ಬರಲಿದೆ ಎಂದರು.
ಹೊಸ ಪಠ್ಯಕ್ರಮ ಸಿದ್ಧಗೊಂಡಿದ್ದು, ಆಯ್ಕೆ ಆಧಾರಿತ ಪಠ್ಯ ವಿಷಯಗಳನ್ನು ಗುರುತಿಸಲಾಗಿದೆ. ಮಾಹಿತಿ ಪುಸ್ತಕವನ್ನೂ ತಯಾರಿಸಲಾಗಿದೆ. ಮೂರನೇ ಸೆಮಿಸ್ಟರ್‌ನ ಮೊದಲನೆಯ ಅಥವಾ ಕೊನೆಯ ಪತ್ರಿಕೆ ಆಯ್ಕೆ ಆಧಾರಿತ ಆಗಿರುತ್ತದೆ. ಪ್ರತಿ ಶನಿವಾರ ಆಧಾರಿತ ಪಠ್ಯಕ್ರಮದ ತರಗತಿ ಇರುತ್ತದೆ. ವಿದ್ಯಾರ್ಥಿಗಳಿಗೆ ಈ ಪದ್ಧತಿ ಕಡ್ಡಾಯ. ಎಲ್ಲರಿಗೂ ಒಂದೇ ದಿನ ಪರೀಕ್ಷೆ ನಡೆಯಲಿದೆ ಎಂದರು.
2008ರಲ್ಲಿ ಮೈಸೂರು ವಿವಿ ಈ ಪದ್ಧತಿ ಜಾರಿಗೆ ತಂದಿದೆ. ಅಲ್ಲಿ ಪ್ರಸ್ತುತ ನಾಲ್ಕು ವಿಷಯಗಳಲ್ಲಿ ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿಗಳು ಇವೆ. ಮಂಗಳೂರು ವಿವಿ, ತುಮಕೂರು ವಿವಿ ಹಾಗೂ ಕುವೆಂಪು ವಿವಿಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಈ ಪದ್ಧತಿ ಜಾರಿಗೆ ಬರುತ್ತಿದೆ ಎಂದರು.
ಕಾನೂನು- ಶಿಸ್ತು ಪಾಲಿಸಿ: ವಿವಿ ವ್ಯಾಪ್ತಿಯ ಸಂಯುಕ್ತ ಕಾಲೇಜುಗಳಲ್ಲಿ ಈ ವರ್ಷ ಬಿಬಿಎಂ ಹಾಗೂ ಬಿಕಾಂಗೆ ಒತ್ತಡ ಹೆಚ್ಚಿದೆ. ಹೆಚ್ಚು ವಿದ್ಯಾರ್ಥಿಗಳ ಪ್ರವೇಶಾವಕಾಶಕ್ಕೆ ಕಾಲೇಜುಗಳ ವಿನಂತಿಸಿವೆ. ಶೇ 10ರಷ್ಟು ಹೆಚ್ಚುವರಿ ಸೇರ್ಪಡೆಗೆ ತಾವು ಅವಕಾಶ ನೀಡಬಹುದು. ಅದಕ್ಕೂ ಹೆಚ್ಚು ಬೇಕಿದ್ದರೆ ಕಾಲೇಜುಗಳಿಗೆ ಸಮಿತಿ ಕಳುಹಿಸಿ ಅಲ್ಲಿನ ಮೂಲಸೌಕರ್ಯ, ಉಪನ್ಯಾಸಕರ ಲಭ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗ...
ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚುವರಿ ವಿಭಾಗ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕೆಲವು ಕಾಲೇಜುಗಳಲ್ಲಿ ಅಧ್ಯಾಪಕರ ಹಾಗೂ ಕೊಠಡಿ ಕೊರತೆ ಇದೆ. ಈ ಬಗ್ಗೆ ಸಮಿತಿ ಕಳುಹಿಸಿ ಪರಿಶೀಲನೆ ನಡೆಸಲಾಗುವುದು. ಅಲ್ಲಿ ವ್ಯವಸ್ಥೆ ಇದ್ದರೆ ಹೆಚ್ಚುವರಿ ವಿಭಾಗ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಮಂಗಳೂರು ವಿವಿಯ ಎರಡು ಘಟಕ ಕಾಲೇಜುಗಳಾದ ಮಂಗಳೂರು ವಿವಿ ಕಾಲೇಜಿನಲ್ಲಿ ಈ ವರ್ಷದಿಂದ ಎಂಎಸ್‌ಸಿ ರಸಾಯನಶಾಸ್ತ್ರ, ಮುಂದಿನ ವರ್ಷದಿಂದ ಬಿ.ಎ. ಎಲೆಕ್ಟ್ರಾನಿಕ್ಸ್ ವಿಭಾಗ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಈ ವರ್ಷದಿಂದ ಬಿ.ಎ. ಟೂರಿಸಂ ಮ್ಯಾನೇಜ್‌ಮೆಂಟ್, ಡಿಪ್ಲೊಮಾ ಇನ್ ಆನಿಮೇಷನ್ ವಿಭಾಗ ಆರಂಭಿಸಲಾಗುತ್ತಿದೆ ಎಂದರು.ಕುಲಸಚಿವ ಪ್ರೊ. ಚಿನ್ನಪ್ಪ ಗೌಡ, ಪರೀಕ್ಷಾಂಗ ಕುಲಸಚಿವ ...
ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ ಪ್ರಕಾರ ಕಲಾವಿಭಾಗದ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಾಣಿಜ್ಯ ಅಥವಾ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಬಹುದು. ಉದಾಹರಣೆಗೆ ಕಲಾ ವಿಭಾಗದ ಆಧುನಿಕ ಕನ್ನಡ ಸಾಹಿತ್ಯ ಪಠ್ಯವನ್ನು ವಿಜ್ಞಾನ ವಿದ್ಯಾರ್ಥಿಗಳೂ, ವಿಜ್ಞಾನ ವಿಭಾಗದ ಸಾಮಾನ್ಯ ಭೌತಶಾಸ್ತ್ರ ಪಠ್ಯವನ್ನು ಯಾವುದೇ ಕಲಾ ವಿದ್ಯಾರ್ಥಿಗಳು ಕಲಿಯಬಹುದು. ಮಂಗಳೂರು ವಿವಿ ಕ್ಯಾಂಪಸ್‌ನ ಸ್ನಾತಕೋತ್ತರ ವಿ...
20ರೊಳಗೆ ಪದವಿ ಫಲಿತಾಂಶ
ಮಂಗಳೂರು ವಿವಿಯ ಎಲ್ಲಾ ಪದವಿಯ ಫಲಿತಾಂಶ ಇದೇ 20ರೊಳಗೆ ಪ್ರಕಟಗೊಳ್ಳಲಿದೆ ಎಂದು ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ತಿಳಿಸಿದರು.
ಬಿಎ, ಬಿಎಸ್‌ಸಿ, ಬಿಎಡ್ ಫಲಿತಾಂಶ ಬುಧವಾರ, ಗುರುವಾರ ಎಲ್‌ಎಲ್‌ಬಿ, ಬಿಸಿಎ, ಬಿಎಸ್‌ಡಬ್ಲ್ಯೂ, ಶುಕ್ರವಾರ ಬಿಕಾಂ, 20ರಂದು ಬಿಬಿಎಂನ ಆರನೇ ಸೆಮಿಸ್ಟರ್ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. 2 ಮತ್ತು 4ನೇ ಸೆಮಿಸ್ಟರ್‌ನ ಫಲಿತಾಂಶ 21 ಮತ್ತು 22ರಂದು ಪ್ರಕಟಿಸಲಾಗುವುದು ಎಂದರು.