text
stringlengths
0
61.5k
degree first year exam two types answer sheets alleged
ಪದವಿ ಪ್ರಥಮ ವರ್ಷಕ್ಕೆ ಎರಡು ಮಾದರಿಯ ಉತ್ತರ ಪತ್ರಿಕೆಗಳ ಬಳಕೆ
ಸಂಧ್ಯಾ ಹೆಗಡೆ Updated: 30 ಏಪ್ರಿಲ್ 2022, 01:01 IST
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಪದವಿ ಪರೀಕ್ಷೆಗಳು ನಡೆಯುತ್ತಿದ್ದು, ಹೊಸ ಹಾಗೂ ಹಳೆ ಸ್ಕೀಮ್ ಉತ್ತರ ಪತ್ರಿಕೆಗಳ ಗೊಂದಲದಿಂದಾಗಿ, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.
ಎನ್‌ಇಪಿ ಅಡಿಯಲ್ಲಿ ಪದವಿ ಪ್ರಥಮ ವರ್ಷದ ಪರೀಕ್ಷೆಗಳು ನಡೆಯುತ್ತಿವೆ. ವಿಶ್ವವಿದ್ಯಾಲಯದ ಸುತ್ತೋಲೆ ಪ್ರಕಾರ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಳೆ ಸ್ಕೀಮ್ ಉತ್ತರ ಪತ್ರಿಕೆಗಳನ್ನು, ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹೊಸ ಸ್ಕೀಮ್ ಉತ್ತರ ಪತ್ರಿಕೆಗಳನ್ನು ಒದಗಿಸಬೇಕು. ಆದರೆ, ಪರೀಕ್ಷೆ ಪ್ರಾರಂಭವಾಗಿದ್ದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಉತ್ತರ ಪತ್ರಿಕೆಗಳ ಪೂರೈಕೆ ಆಗದ...
'ಎನ್‌ಇಪಿ ಅಡಿಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 12 ಅಂಕೆಗಳ ನೋಂದಣಿ ಸಂಖ್ಯೆ ನೀಡಲಾಗಿದೆ. ಹೊಸ ಸ್ಕೀಮ್ ಉತ್ತರ ಪತ್ರಿಕೆಗಳಲ್ಲಿ 9 ಅಂಕೆಗಳನ್ನು ಬರೆಯಲು ಮಾತ್ರ ಕಾಲಂಗಳಿದ್ದು, ಇನ್ನುಳಿದ ಮೂರು ಅಂಕೆಗಳನ್ನು ವಿದ್ಯಾರ್ಥಿಗಳೇ ಕಾಲಂ ಹಾಕಿ ಬರೆಯಬೇಕಾಗುತ್ತದೆ. ಕೆಲವು ವಿದ್ಯಾರ್ಥಿಗಳು ಇದನ್ನು ಬರೆಯುವಾಗ ಗೊಂದಲ ಮಾಡಿಕೊಳ್ಳುತ್ತಾರೆ, ಇನ್ನು ಕೆಲವರು ತಪ್ಪಾಗಿ ಬರೆಯುವ ಸಾಧ್ಯತೆ ಇರುತ...
'ಎರಡು ಮಾದರಿಯ ಉತ್ತರ ಪತ್ರಿಕೆಗಳಲ್ಲಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದರಿಂದ ಮೌಲ್ಯಮಾಪನದ ವೇಳೆ ಕೂಡ ಇದನ್ನು ಪ್ರತ್ಯೇಕಿಸುವಾಗ ಗೊಂದಲ ಸೃಷ್ಟಿಯಾಗಬಹುದು. ಅಲ್ಲದೆ, ಏ.18ರಿಂದ ಪರೀಕ್ಷೆಗಳು ಆರಂಭವಾಗಿದ್ದರೂ ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ದೊರೆತಿಲ್ಲ' ಎಂದು ಇನ್ನೊಬ್ಬ ಪ್ರಾಧ್ಯಾಪಕರು ಆತಂಕ ವ್ಯಕ್ತಪಡಿಸಿದರು.
'ಮೇ 9ಕ್ಕೆ ಎಲ್ಲ ಪರೀಕ್ಷೆಗಳು ಮುಗಿಯುತ್ತವೆ. ಮೇ 12ರಿಂದ ಮುಂದಿನ ಸೆಮಿಸ್ಟರ್ ತರಗತಿಗಳು ಪ್ರಾರಂಭವಾಗುತ್ತವೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ. ಪರೀಕ್ಷೆ ಪೂರ್ಣಗೊಂಡ ಮೇಲೆ ಎಂದಿನಂತೆ ರಜೆ ಇರುತ್ತದೆ ಎಂದು ಭಾವಿಸಿ, ಊರಿಗೆ ಹೋಗಲು
ರೈಲ್ವೆ ಟಿಕೆಟ್ ಬುಕ್ ಮಾಡಿದ್ದೆವು. ಆದರೆ, ಈಗ ಅನಿವಾರ್ಯವಾಗಿ ಟಿಕೆಟ್ ರದ್ದುಗೊಳಿಸಬೇಕಾಗಿದೆ' ಎಂದು ವಿದ್ಯಾರ್ಥಿನಿಯೊಬ್ಬರು ಬೇಸರಿಸಿದರು.
'ಗೊಂದಲ ಇಲ್ಲ: ಕಾಲೇಜಿಗೆ ಸೂಚನೆ'
ವಿಶ್ವವಿದ್ಯಾಲಯವು ಸಿಂಡಿಕೇಟ್ ಅನುಮತಿ ಪಡೆದೇ ಪರೀಕ್ಷೆ ನಡೆಸುತ್ತಿದೆ. ಪದವಿ ಪ್ರಥಮ ವರ್ಷದ ಉತ್ತರ ಪತ್ರಿಕೆಗಳಲ್ಲಿ ಯಾವುದೇ ಗೊಂದಲ ಇಲ್ಲ. ಈ ಹಿಂದಿನ ಎಂಯು ಲಿಂಕ್ಸ್ ಇರುವಾಗ ಇದ್ದ ಹಾಗೆ ಯಯುಸಿಎಂಎಸ್‌ನಲ್ಲಿ ಸ್ಕ್ಯಾನ್ ಮಾಡುವ ಪ್ರಮೇಯವಿಲ್ಲ. ಉತ್ತರ ಪತ್ರಿಕೆಯಲ್ಲಿ ಬಾಟಮ್ ಸ್ಲಿಪ್ ಹರಿಯುವುದೂ ಬೇಕಾಗುವುದಿಲ್ಲ. ಸರ್ಕಾರದ ನಿಯಮದಂತೆ ಪರೀಕ್ಷೆಗಳು ನಡೆಯುತ್ತಿವೆ ಎಂದು ಮಂಗಳೂರು ವಿಶ್ವವಿದ್ಯ...
'ಸರಿದೂಗಿಸಲು ಪ್ರಯತ್ನ'
ಮೌಲ್ಯಮಾಪನ ಆರಂಭವಾದರೆ ಅದು ಮುಗಿಯುವ ತನಕ ತರಗತಿ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ತರಗತಿ ವಿಳಂಬ ಮಾಡಿದರೆ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗುತ್ತದೆ. ಈಗಾಗಲೇ ಕೋವಿಡ್ ಕಾರಣಕ್ಕೆ ಕೊಂಚ
ವ್ಯತ್ಯಯವಾಗಿರುವ ವೇಳಾಪಟ್ಟಿ
ಯನ್ನು ಸರಿದೂಗಿಲು ಈ ಬಾರಿ ಪರೀಕ್ಷೆ ಪೂರ್ಣಗೊಳ್ಳುತ್ತಿದ್ದಂತೆ, ಮೇ 12ರಿಂದ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳ ಪರೀಕ್ಷೆ, ಅಸೈನ್‌ಮೆಂಟ್ ನೀಡಿ, ಕಾಲೇಜು ನಡೆಯುವ ನಡುವೆಯೇ ಹೊಂದಾಣಿಕೆ ಮಾಡಿಕೊಂಡು ಮೌಲ್ಯಮಾಪನ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.
'); $('#div-gpt-ad-932655-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-932655').addClass('inartprocessed'); } else $('#in-article-932655').hide(); } else { _taboola.push({article:'auto', url:'https://www.prajavani.net/district/dakshina-kannada/degree-f...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-932655 .field-name-body .field-items div.field-item > p'); if(x1 != null && x1.length != 0) { $('#node-932655 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-932655 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-932655'); }); } else { $('#in-article-mob-932655').hide(); $('#in-article-mob-3rd-932655').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಮೊನಾರ್ಕ್ ಚಿಟ್ಟೆ ಹಾಗೂ ಮಿಂಚುಳ: ಅಖಿಲೇಶ್ ಚಿಪ್ಪಳಿ - ಪಂಜು
ಮಲೆನಾಡಿನಲ್ಲಿ ಸತತ ಮೂರನೇ ವರ್ಷದ ಬರಗಾಲ ಧಾಂಗುಡಿಯಿಡುತ್ತಿದೆ. ನಿಜಕ್ಕೂ ಇದಕ್ಕೆ ಮರಗಾಲವೆಂದೇ ಕರೆಯಬೇಕು. ಪಶ್ಚಿಮಘಟ್ಟದ ಕಾಲಬುಡದಲ್ಲಿರುವ ನಮಗೆ ವಾಸ್ತವಿಕವಾಗಿ ಬರವೆಂಬ ಶಬ್ಧದ ಅರಿವೇ ಇರಬಾರದು. ಆದರೂ ಅದರ ಅರಿವಾಗುತ್ತಿದೆ, ನಿಧಾನಕ್ಕೆ ಇಲ್ಲಿಯ ಜನರ ಬದುಕನ್ನು ನುಂಗಲು ಹೊರಟಿರುವ ಈ ಮರದ ಅಭಾವದಿಂದಾಗುತ್ತಿರುವ ಈ ಪರಿಸ್ಥಿತಿಗೆ ಮರಗಾಲವೆಂದೇ ಹೇಳಬಹುದು. ಪಕ್ಕದ ಹೊಸನಗರದಲ್ಲಿ, ತೀರ್ಥಹಳ್...
ವಲಸೆ ಹೋಗುವ ಚಿಟ್ಟೆಗಳಲ್ಲಿ ಮುಖ್ಯವಾದದು ಮೊನಾರ್ಕ್ ಚಿಟ್ಟೆಗಳು ಪ್ರತಿವರ್ಷ ಇವು ಕೆನಡಾ ಹಾಗೂ ಅಮೆರಿಕಾದಿಂದ ಕ್ಯಾಲಿಫೋರ್ನಿಯಾ ಹಾಗೂ ಮೆಕ್ಸಿಕೋಗಳಿಗೆ ವಲಸೆ ಹೋಗುತ್ತವೆ. ಸಾವಿರಾರು ಸಂಖ್ಯೆಯ ಬಣ್ಣದ ಚಿಟ್ಟೆಗಳು ಒಟ್ಟು ಕ್ರಮಿಸುವ ದೂರ ಸುಮಾರು 6000 ಕಿ.ಮಿ. ಹಾಗಂತ ಹೊರಟ ಚಿಟ್ಟೆಯೇ ಗಮ್ಯವನ್ನು ತಲುಪುತ್ತದೆ ಎಂದು ತಿಳಿಯಬಾರದು, ಇವು ದಾರಿಯುದ್ದಕ್ಕು ಮೊಟ್ಟೆಯಿಡುತ್ತಾ ಸಾಗುತ್ತವೆ. ಇದೇ ಮೊ...
ಈ ವರ್ಷ ಆಗಿದ್ದು ಇದೇ. ಮೊನಾರ್ಕ್ ಚಿಟ್ಟೆಗಳಿಗೆ ಮೆಕ್ಸಿಕೊದ ದಕ್ಷಿಣ ಭಾಗದಲ್ಲಿ ಫಿರ್ ಮರಗಳಿರುವ ಅರಣ್ಯ ಪ್ರದೇಶ ಬೆಚ್ಚಗಿನ ವಾತಾವರಣವನ್ನು ನೀಡಿ, ಅಲ್ಲಿ ಸಂತಾನೋತ್ಪತ್ತಿಗೆ ಅವಕಾಶ ನೀಡುವ ಅಪರೂಪದ ಸ್ಥಳವಾಗಿದೆ. ಅಕ್ರಮವಾಗಿ ಕಡಿತಲೆಯಾಗುತ್ತಿರುವ ಈ ಫಿರ್ ಮರಗಳಿರುವ ಅರಣ್ಯ ಪ್ರದೇಶದಲ್ಲೀಗ ಚಿಟ್ಟೆಗಳಿಗೆ ಆವಾಸ್ಥಾನದ ಕೊರತೆಯಾಗಿದೆ ಅಲ್ಲದೇ ಚಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲದಂತಹ ಪರಿಸ...
ಅಂಕಿ-ಅಂಶಗಳ ಪ್ರಕಾರ 15 ವರ್ಷಗಳ ಹಿಂದೆ 1 ಕೋಟಿ ಚಿಟ್ಟೆಗಳು ವಲಸೆ ಹೋಗುವ ಪ್ರಕ್ರಿಯೆಯಲ್ಲಿ ತೊಡಗುತ್ತಿದ್ದವು. ಲಕ್ಷಾಂತರ ಎಕರೆ ಕಾಡು ನಾಶದಿಂದಾಗಿ ಇದೀಗ ಇವುಗಳ ಸಂಖ್ಯೆ 15 ರಿಂದ 20 ಲಕ್ಷಕ್ಕೆ ಬಂದು ನಿಂತಿದೆ. ಹಾಗಂತ ಅಲ್ಲಿನ ಪರಿಸರ ಸಂರಕ್ಷಕರು ಮೊನಾರ್ಕ್ ಚಿಟ್ಟೆಗಳನ್ನು ಉಳಿಸಲು ಹಲವು ತರಹದ ಪ್ರಯತ್ನಗಳನ್ನು ನಡೆಸಿದ್ದಾರೆ. ಅಲ್ಲಿನ ಪೈನ್ ಹಾಗೂ ಫಿರ್ ಮರಗಳ ಕಾಡುಗಳನ್ನು ಉಳಿಸುವ ನಿಟ್ಟ...
ಚಿಕ್ಕವರಿದ್ದಾಗ ಮಳೆಗಾಲ ಶುರುವಾಯಿತು ಅಂದರೆ, ಮನೆಯ ಸುತ್ತ-ಮುತ್ತ ಸಂಜೆಯ ಗಾಡಂಧಕಾರದಲ್ಲಿ ಮಿಣುಕು ಹುಳುಗಳು ಹಾರುತ್ತಿದ್ದವು. ಸಾವಿರಾರು ಸಂಖ್ಯೆಯಲ್ಲಿ ಹಾರುತ್ತಿದ್ದ ಇವು ಮಿಣುಕುವ ನಕ್ಷತ್ರಗಳೇ ಧರೆಗಿಳಿದು ಬಂದಂತೆ ತೋರುತ್ತಿದ್ದವು. ನೂರಾರು ಕೀಟಸಂತತಿಗಳ ವಿವಿಧ ತರಹದ ವಾದ್ಯಮೇಳಕ್ಕೆ ತಕ್ಕಂತೆ ತಾಳ ಹಾಕುತ್ತಾ ಕುಣಿಯುತ್ತಿವೆಯೇನೋ ಎಂಬಂತೆ ತಮ್ಮ ದೇಹದ ಹಿಂಭಾಗದಿಂದ ಬೆಳಕನ್ನು ಹೊರಡಿಸುತ್...
ನಾನಕ್ಯಾಮಿಪ್ಲಾ ಎಂಬುದೊಂದು ಅಲ್ಲಿಯ ಹಳ್ಳಿಯ ಹೆಸರು. ಈ ಹಳ್ಳಿಯಲ್ಲಿ ಸರ್ಕಾರಕ್ಕೆ ಸೇರಿದ ಒಂದು ಪಾರ್ಕ್ ಇದೆ. ನಮ್ಮಲ್ಲಿ ಹೋಂ ಸ್ಟೇ ತರಹದ ತಂಗುಕೋಣೆಗಳು ಅಲ್ಲಿವೆ. ಸರ್ಕಾರ ಹಾಗೂ ಹಳ್ಳಿಯ ಮಧ್ಯೆ ಆಗಿರುವ ಒಡಂಬಡಿಕೆಯಂತೆ ಸಹಕಾರಿ ತತ್ವದಲ್ಲಿ ಅಲ್ಲಿನ ಈ ಪಾರ್ಕ್‍ನ ಮೇಲ್ವಿಚಾರಣೆ ನಡೆಯುತ್ತದೆ. ಬಂದ ಪಾಲಿನಲ್ಲಿ ಈ ಹಳ್ಳಿಗರಿಗೂ ಪಾಲುಂಟು. ಇಂತಹ ಹಳ್ಳಿಗೆ, ಪಟ್ಟಣ ಒತ್ತಡದ ಜೀವನದಿಂದ ಪಾರಾಗಲು ...
ಹಾಗೂ 2011ರಲ್ಲೆ ಈ ಯೋಜನೆ ಜಾರಿಗೆ ಬಂತು. ವರ್ಷಕ್ಕೆ 50 ಸಾವಿರ ಮರಗಳನ್ನು ಕಡಿಯುತ್ತಿದ್ದ ಹಳ್ಳಿಯಲ್ಲೀಗ 50 ಸಾವಿರ ಗಿಡಗಳನ್ನು ನೆಡುವ ಪರಿಪಾಠ ಪ್ರಾರಂಭವಾಗಿದೆ. 1530 ಎಕರೆಯ ಸಮೃದ್ಧ ಅರಣ್ಯವನ್ನು ಕಾಯ್ದಿಟ್ಟುಕೊಂಡ ಆ ಹಳ್ಳಿಯೀಗ ಆರ್ಥಿಕವಾಗಿ ಸಬಲವಾಗುತ್ತಿದೆ. ಬೆಳೆಯುವ ಬೆಳೆಗಳಿಗೆ ಅಲ್ಲಿ ಯಾರೂ ರಾಸಾಯನಿಕವನ್ನು ಸಿಂಪರಣೆ ಮಾಡುತ್ತಿಲ್ಲ. ಮರಕಡಿತಲೆಯ ಪ್ರಮಾಣ ಶೇ.70ರಷ್ಟು ಕಡಿಮೆಯಾಗಿದೆ....
ಜೂನ್ 21ರಂದು ಡೆಹ್ರಾಡೂನ್‌ನಲ್ಲಿ 50 ಸಾವಿರ ಮಂದಿಯೊಂದಿಗೆ ಮೋದಿ ಯೋಗ | News13
News13 > ಸುದ್ದಿಗಳು > ರಾಷ್ಟ್ರೀಯ > ಜೂನ್ 21ರಂದು ಡೆಹ್ರಾಡೂನ್‌ನಲ್ಲಿ 50 ಸಾವಿರ ಮಂದಿಯೊಂದಿಗೆ ಮೋದಿ ಯೋಗ
ಡೆಹ್ರಾಡೂನ್: ಜೂನ್ 21ರಂದು ನಡೆಯಲಿರುವ ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಬೃಹತ್ ಯೋಗ ಸಮಾವೇಶವನ್ನು ಆಯೋಜನೆಗೊಳಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ 50 ಸಾವಿರ ಮಂದಿಯ ಜೊತೆಗೂಡಿ ಯೋಗಾಭ್ಯಾಸ ನಡೆಸಲಿದ್ದಾರೆ.
ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಈ ಬೃಹತ್ ಯೋಗ ಸಮಾವೇಶ ನಡೆಯಲಿದೆ. ಈಗಾಗಲೇ ಇದಕ್ಕಾಗಿ ಅಂತಿಮ ಹಂತದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಆವರಣದೊಳಗಿರುವ ಮಂಗ, ಹಾವು ಇತ್ಯಾದಿ ಪ್ರಾಣಿಗಳನ್ನು ಖಾಲಿ ಮಾಡುವ ಕಾರ್ಯವೂ ನಡೆಯುತ್ತಿದೆ.
ಅರಣ್ಯ ಸಂಶೋಧನಾ ಸಂಸ್ಥೆ ಸುಮಾರು 450 ಎಕರೆ ವಿಸ್ತಾರದಲ್ಲಿ ಇದ್ದು, ಸುತ್ತಮುತ್ತ ದಟ್ಟ ಅರಣ್ಯ ಇದೆ. ಹೀಗಾಗಿ ಇಲ್ಲಿ ವನ್ಯಜೀವಿಗಳ ಓಡಾಟ ಸಾಮಾನ್ಯವಾಗಿದೆ.
ಜಾತಿ-ಧರ್ಮದ ಸಂಘರ್ಷ ಹೆಚ್ಚುತ್ತಿದೆ: ರಂಭಾಪುರಿ ಶ್ರೀ ವಿಷಾದ | Udayavani – ಉದಯವಾಣಿ
Monday, 25 Oct 2021 | UPDATED: 07:51 PM IST
ಜಾತಿ-ಧರ್ಮದ ಸಂಘರ್ಷ ಹೆಚ್ಚುತ್ತಿದೆ: ರಂಭಾಪುರಿ ಶ್ರೀ ವಿಷಾದ
Team Udayavani, Aug 18, 2017, 2:24 PM IST
ಕಡೂರು: ಧರ್ಮ ಮತ್ತು ಜಾತಿಗಳ ಮಧ್ಯೆ ಇಂದು ಸಂಘರ್ಷ ಹೆಚ್ಚುತ್ತಿದೆ ಎಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಸಾಣೆಹಳ್ಳಿ ಆರಾಧ್ಯರವರ ಮನೆಯಲ್ಲಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಧರ್ಮ,ಜಾತಿಗಳ ಮಧ್ಯೆ ನಡೆಯುತ್ತಿರುವ ಸಂಘರ್ಷದಿಂದ ಎಲ್ಲರೂ ಹೊರ ಬರಬೇಕು. ಶಾಂ...
ಶ್ರೀ ರಂಭಾಪುರಿ ಪೀಠದ ಪರಂಪರೆಯಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವ ವಿಶೇಷ ಪ್ರಾಧಾನ್ಯತೆ ಪಡೆದಿದೆ. 9 ದಿನಗಳ ಕಾಲ ಶಕ್ತಿಯ ಆರಾಧನೆ ನೆರವೇರಿಸಿ ಕೊನೆಯ ದಿನ ವಿಜಯದಶಮಿ ಹಬ್ಬದ ಆಚರಣೆ ನಡೆಯಲಿದೆ. 10 ದಿನಗಳ ಕಾಲ ಧಾರ್ಮಿಕ, ಸಾಮಾಜಿಕ, ರಚನಾತ್ಮಕ ಚಿಂತನೆಗಳು ನಡೆಯಲಿದ್ದು, ವಿದ್ವಾಂಸರು, ವಾಗ್ಮಿಗಳು, ಗುರುಗಳು, ಕವಿಗಳು, ರಾಜಕಾರಣಿಗಳು ಪಾಲ್ಗೊಳ್ಳುವರು. ಕೊನೆಯ ದಿನ ಜಗದ್ಗುರುಗಳ ಶುಭಾಶಿರ್ವ...
1992ರಲಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ನಿಡಗುಂದಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರಕಿದ್ದು, ಅಂದಿನಿಂದ ಇಲ್ಲಿಯವರೆಗೆ ಪ್ರತಿವರ್ಷ ದಸರಾ ಮಹೋತ್ಸವವನ್ನು ಭಕ್ತರು ನಡೆಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು. ಕಡೂರು ಪಟ್ಟಣದಲ್ಲಿ ( ಸೆ.21 ರಿಂದ 30ರವರೆವಿಗೆ ) 26 ನೇ ದಸರಾ ಮಹೋತ್ಸವ ನಡೆಯಲಿದೆ. ಮಹೋತ್ಸವವು ಜಾತ್ಯತೀತವಾಗಿ, ಪಕ್ಷಾತೀತವಾಗಿ ನಡೆಯುವಂತೆ ಸಮಾಜದ ಎಲ್ಲ ವರ್ಗದವರು, ಸಮ...
ಶಿವನಿಲ್ಲದ ಶಕ್ತಿಯಾಗಲು, ಶಕ್ತಿಇಲ್ಲದ ಶಿವನಾಗಲು ಯಾರು ಬಯಸುವುದಿಲ್ಲ "ಶಿವಶಕ್ತಿ' ಯಿಂದ ಜಗತ್ತು ನಿರ್ಮಾಣಗೊಂಡಿದೆ. ಆಧುನಿಕ, ವೈಚಾರಿಕತೆಯ ಯುಗದಲ್ಲಿ ಸಂಪ್ರದಾಯ ಪರಂಪರೆ ಉಳಿಸಿಬೆಳೆಸುವ ಜವಾಬ್ದಾರಿ ಪೀಠಕ್ಕೆ ಸೇರಿದೆ. ಆದ್ದರಿಂದ ಶಾಂತಿ ನೆಮ್ಮದಿಯ
ಬದುಕಿಗೆ ಆಧ್ಯಾತ್ಮದ ಹಸಿವು ಇಲ್ಲದೆ ಹೋದರೆ ಜೀವನ ನಿರರ್ಥಕ. ಜೀವನ ವಿಕಾಸಕ್ಕೆ ಧರ್ಮ ದಿಕ್ಸೂಚಿಯಾಗಿದ್ದು ಸನ್ಮಾರ್ಗದಲ್ಲಿ ಕರೆದೊಯ್ಯುವ ಪಥವಾಗಿದೆ. ವೀರಶೈವ ಧರ್ಮ ಆಚಾರ ವಿಚಾರ ಪ್ರಧಾನ ಧರ್ಮವಾಗಿದ್ದು ಸಾಮಾಜಿಕ ಸಂವಿಧಾನಶೀಲ ವ್ಯಕ್ತಿತ್ವವನ್ನು ಒಳಗೊಂಡಿರುತ್ತದೆ.
ಶ್ರೀ ಜಗದ್ಗುರು ರೇಣುಕಚಾರ್ಯರು ಭೋದಿಸಿದ ತತ್ವಸಿದ್ದಾಂತಗಳನ್ನು ಇಂದಿಗೆ ಅಷ್ಟೆ ಅಲ್ಲ ಮುಂದಿನ ಭವಿಷ್ಯತ್ತಿಗೂ ಕೂಡ ದಾರಿ ದೀಪವಾಗಿದೆ. ಸಕಲ ಜೀವಾತ್ಮದ ಒಳಿತನ್ನು ಮಾಡುವುದು ವೀರಶೈವ ಧರ್ಮದ ಗುರಿಯಾಗಿದೆ ಎಂದರು. ಕಡೂರು ಪಟ್ಟಣದಲ್ಲಿ ನಡೆಯಲಿರುವ 26 ನೇ ದಸರಾ ಮಹೋತ್ಸವವು ಈ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಯಶಸ್ವಿಯಾಗಲಿ ಎಂಬ ಆತ್ಮವಿಶ್ವಾಸದಿಂದ ದಸರಾ ಮಹೋತ್ಸವ ಸಮಿತಿಯ ಎಲ್ಲ ಪದಾಧಿಕಾರಿಗ...
ಗರ್ಭಿಣಿಯರಿಗೆ ಯಾಕೆ ವಾಕರಿಕೆ ಬರುತ್ತೆ ಗೊತ್ತಾ? | Satwadhara News
Home Health ಗರ್ಭಿಣಿಯರಿಗೆ ಯಾಕೆ ವಾಕರಿಕೆ ಬರುತ್ತೆ ಗೊತ್ತಾ?
ಗರ್ಭಿಣಿಯರಿಗೆ ಯಾಕೆ ವಾಕರಿಕೆ ಬರುತ್ತೆ ಗೊತ್ತಾ?
ಬಹುತೇಕ ಗರ್ಭಿಣಿಯರು ತಮ್ಮ ಪ್ರಥಮ ಗರ್ಭಾವಸ್ಥೆಯಲ್ಲಿ ವಾಕರಿಕೆ ಅಥವಾ ವಾಂತಿಯಿಂದ ಬಳಲುತ್ತಾರೆ. ಅತಿಯಾದ ತೊಂದರೆಗೆ ಒಳಪಡಿಸದೆ, ಚಿಕಿತ್ಸೆಯ ಆವಶ್ಯಕತೆ ಇಲ್ಲದೆ ಕ್ರಮೇಣ ಕಡಿಮೆಯಾಗುವ ಈ ಲಕ್ಷಣವು ಕೆಲವರಲ್ಲಿ ಮಾತ್ರ ಹೆಚ್ಚಾದ ವಾಂತಿಯ ವೇಗದಿಂದಾಗಿ ವಿಶೇಷ ಚಿಕಿತ್ಸೆ ಪಡೆಯುವಂತೆ ಮಾಡುತ್ತದೆ. ಅತಿಯಾದ ವಾಂತಿಯಿಂದಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ದೈಹಿಕವಾಗಿ ಬಳಲಬೇಕಾಗುತ್ತದೆ.
ಇದು ಯಾಕಾಗಿ?: ಗರ್ಭಾವಸ್ಥೆಯ ಮೊದಲ ಕೆಲವು ತಿಂಗಳುಗಳಲ್ಲಿ ವಾಕರಿಕೆಯ ಮನೋಭಾವ, ಸುಸ್ತು, ಹೊಟ್ಟೆನೋವು, ಆಹಾರಸೇವನೆಯ ಮೇಲೆ ನಿರಾಸಕ್ತಿ, ರುಚಿ ಇಲ್ಲದಿರುವುದು ಹಾಗೂ ವಾಂತಿಯಿಂದ ಗರ್ಭಿಣಿ ಬಳಲುತ್ತಾಳೆ. ಗರ್ಭಾವಸ್ಥೆಯಲ್ಲಿನ ಸಹಜ ಕ್ರಿಯೆಯಾದ ಇದಕ್ಕೆ ಮಾರ್ನಿಂಗ್ ಸಿಕ್​ನೆಸ್ ಎನ್ನಲಾಗುವುದು. ಬೆಳಗ್ಗೆ ಮಾತ್ರವಲ್ಲದೆ ದಿನದ ಯಾವುದೇ ಸಮಯದಲ್ಲೂ ಬರಬಹುದಾದ ಈ ಲಕ್ಷಣಗಳು ಹೆಚ್ಚಿನವರಲ್ಲಿ ಒಂದರಿಂದ...
ಆದರೆ ಕೆಲವರಲ್ಲಿ ಸತತ, ದೀರ್ಘಕಾಲಿಕ ಹಾಗೂ ಅತಿಯಾದ ವಾಂತಿಯಿಂದಾಗಿ ದೇಹವು ಸುಸ್ತಾಗುತ್ತದೆ. ನಿರ್ಜಲೀಕರಣಕ್ಕೂ ಕಾರಣವಾಗುತ್ತದೆ. ಗರ್ಭಾವಸ್ಥೆಯ ಒಂಭತ್ತು ವಾರಗಳ ಮೊದಲು ವಾಂತಿಯೊಂದಿಗೆ ಸುಸ್ತು ವ್ಯಕ್ತವಾಗುತ್ತದೆ. ಹತ್ತರಲ್ಲಿ ಒಂಭತ್ತು ಸ್ತ್ರೀಯರಲ್ಲಿ ಈ ಎಲ್ಲ ಲಕ್ಷಣಗಳು 16 ವಾರದೊಳಗೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಆದರೆ ಕೆಲವು ಸ್ತ್ರೀಯರಲ್ಲಿ ಮಾತ್ರ ಗರ್ಭಾವಸ್ಥೆಯ ಪರ್ಯಂತ ಈ ಲಕ್ಷಣಗ...
ಅತಿಯಾದ ವಾಂತಿಯ ಪರಿಣಾಮ: ನೂರರಲ್ಲಿ ಒಬ್ಬ ಗರ್ಭಿಣಿಯಲ್ಲಿ ಅತಿಯಾದ ಸುಸ್ತು, ವಾಂತಿ (ದಿನದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ) ಬಹಳ ದಿನಗಳ ಕಾಲ ಇರುವುದರಿಂದ ದೇಹದಲ್ಲಿನ ನೀರಿನಾಂಶದ ಕೊರತೆ ಉಂಟಾಗಿ ದೇಹದ ತೂಕ ಕಡಿಮೆಯಾಗುತ್ತದೆ. ಜೀವಸತ್ವಗಳ ಕೊರತೆಯೂ ಉಂಟಾಗಬಹುದು. ಸರಿಯಾಗಿ ಆಹಾರ ಸೇವಿಸದ ಪರಿಣಾಮ ದೇಹವು ಶೇಖರಿತ ಕೊಬ್ಬಿನಾಂಶವನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಇದರಿಂದಾಗಿ ದೇಹವು ಕೀಟೋನ...
ನಿರ್ದಿಷ್ಟ ಕಾರಣ ಇಲ್ಲವಾದರೂ ಗರ್ಭಿಣಿಯಲ್ಲಿ ಆಗುವ ಹಲವು ಹಾಮೋನ್​ಗಳ ಬದಲಾವಣೆಯಿಂದಾಗಿ ಆಗಬಹುದು. ಕೆಲವೊಂದು ಅವಸ್ಥೆಯಲ್ಲಿ ಹಲವಾರು ಕಾರಣಗಳಿಂದಾಗಿ ವಾಂತಿಯ ವೇಗ ಹೆಚ್ಚಾಗಬಹುದು. ಚೊಚ್ಚಲ ಗರ್ಭದಲ್ಲಿ, ಅವಳಿ ಗರ್ಭವಾಗಿದ್ದಲ್ಲಿ, ಸ್ತ್ರೀಯು ಮೈಗ್ರೇನ್ ರೋಗದಿಂದ ಬಳಲುತ್ತಿದ್ದಲ್ಲಿ, ಗರ್ಭಾವಸ್ಥೆಯಲ್ಲಿನ ವಾಂತಿ ಹೆಚ್ಚಾಗುತ್ತದೆ. ಅಲ್ಲದೆ ಅತಿಯಾದ ಮಾನಸಿಕ ಒತ್ತಡ, ಚಿಕ್ಕ ವಯಸ್ಸಿನಲ್ಲಿ ಗರ್ಭ ...
ಮಗುವಿನ ಮೇಲೆ ದುಷ್ಪರಿಣಾಮ ಆಗಬಹುದೆ?
ಮಗುವಿನ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಮಗುವಿನ ಪೋಷಕಾಂಶವು ತಾಯಿಯ ಶೇಖರಿತ ಪೋಷಕಾಂಶಗಳಿಂದ ಲಭ್ಯವಾಗುವುದರಿಂದ ವಾಂತಿ ಮಾಡುವ ಪ್ರಕ್ರಿಯೆ ಅಥವಾ ಕಷ್ಟಪಟ್ಟು ಆಗುವ ವಾಂತಿಯ ಪ್ರವೃತ್ತಿಯಿಂದ ಗರ್ಭಕ್ಕೆ ಯಾವುದೇ ಪರಿಣಾಮವಾಗದು. ಹಲವು ಅಧ್ಯಯನಗಳ ಪ್ರಕಾರ ಪ್ರಥಮ ಅವಧಿಯಲ್ಲಾಗುವ ವಾಂತಿಯು ಆರೋಗ್ಯಕರ ಗರ್ಭದ ಸೂಚಕ ಎಂದು ತಿಳಿದುಬಂದಿದೆ. ಆದರೆ ನಿರಂತರವಾಗಿ ವಾಂತಿಯು ಹೆಚ್ಚಾಗಿ ಹೈಪರ್ ಎಮಿಸಿ...
ವ್ಯವಸ್ಥಿತ ರೀತಿಯಲ್ಲಿ ಗ್ರಾಮಸಭೆ ನಡೆಸಲು ಅನುವುಮಾಡಿಕೊಟ್ಟ ಗ್ರಾಮಸ್ಥರಿಗೆ ಅಭಿನಂದನೆ: ರವೀಂದ್ರ ಪೂಜಾರಿ | ಸುದ್ದಿ ಬೆಳ್ತಂಗಡಿ
in: ಅಧಿಕಾರಿಗಳ ಕಾರ್ಯಕ್ರಮ, ಗ್ರಾಮ ಸಭೆ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಕಟಣೆ, ಪ್ರಚಲಿತ, ಬಿಸಿ ಬಿಸಿ, ಮಾಹಿತಿ, ವರದಿ, ವಿಶೇಷ ಸುದ್ದಿ, ಸಾಮಾನ್ಯ
ಮನೆಕಟ್ಟಲು ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯಿಂದ ಪರವಾನಿಗೆ.
ಉದ್ಯೋಗಖಾತರಿ ಮೊತ್ತ ಶೀಘ್ರ ಬಿಡುಗಡೆ ನೀರಿನ ಪೈಪ್‌ಲೈನ್ ಅಳವಡಿಕೆ ಮನೆ ರಿಪೇರಿಗೆ ಸಹಾಯಧನ. ಕಾಡುಪ್ರಾಣಿಗಳಿಗೆ (ಕಾಡುಕೋಣ) ತಡೆಬೇಲಿ, ಕೋತಿಗಳ ತೊಂದರೆ ತಪ್ಪಿಸುವುದು.
ಎಲ್ಲಾ ಪಿಂಚಣಿದಾರರು ಕಡ್ಡಾಯ ಆಧಾರ್ ಜೋಡನೆ.
ಅರಣ್ಯ ಇಲಾಖೆಯಿಂದ ಸಸಿಗಳಿಗೆ ಪ್ರೋತ್ಸಾಹ ಧನ.
ಮಿಶ್ರತಳಿ, ಕರುಸಾಕಣೆ, ಆಡು ಸಾಕಣೆ ಸಹಾಯಧನ.
ಕೃಷಿ ಇಲಾಖೆಯಿಂದ ಶೇ.50% ಸುಣ್ಣ, ಹುಲ್ಲು ಕಟಾವು ಯಂತ್ರ (ಸಬ್ಸಿಡಿ ದರದಲ್ಲಿ), 100% ಸಹಾಯಧನದಲ್ಲಿ ದ್ವಿದಳದಾನ್ಯ ಬಿತ್ತನೆ ಬೀಜ.
ಆರ್‌ಟಿಇ ಉಚಿತ ಶಿಕ್ಷಣ ನೊಂದಾವಣೆ.
ನವೋದಯ ಶಾಲೆಯಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ.
ಆರೋಗ್ಯ ಇಲಾಖೆಯಿಂದ ಜನನಿ ಸುರಕ್ಷ ಯೋಜನೆ, ತಾಯಿಭಾಗ್ಯ, ನಗು-ಮಗು ಯೋಜನೆ, ಆರೋಗ್ಯ ಕಾರ್ಡು.
ನಾರಾವಿ: ಯಾವುದೇ ಸಮಸ್ಯೆಗಳು ಇದ್ದಲ್ಲಿ ಗ್ರಾಮಸಭೆಯಲ್ಲಿ ಮನವರಿಕೆ ಮಾಡಿದಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ. ಜನಪ್ರತಿನಿಧಿಗಳಾದ ನಾವು ನಿಮ್ಮ ಯಾವುದೇ ರೀತಿಯ ಬೇಡಿಕೆಗಳು ಇದ್ದಲ್ಲಿ ಅದನ್ನು ಕಾರ್ಯರೂಪಕ್ಕೆ ತರಲು ಸದಾ ಸಿದ್ದರಿದ್ದೇವೆ ಎಂದರು ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು ಹೇಳಿದರು.
ಅವರು ಮಾ.13ರಂದು ನಾರಾವಿ ಗ್ರಾ.ಪಂ. ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿ ವ್ಯವಸ್ಥಿತ ರೀತಿಯಲ್ಲಿ ಗ್ರಾಮಸಭೆ ನಡೆಸಲು ಸರ್ವರು ಸಹಕರಿಸಿದರೆ ಗ್ರಾಮದ ಅಭಿವೃದ್ಧಿಯಾಗಲು ಸಾಧ್ಯ ಎಂದು ಗ್ರಾಮಸಭೆ ನಡೆಸಲು ಉತ್ತಮ ರೀತಿಯಲ್ಲಿ ಸ್ಪಂದಿಸಿದಕ್ಕೆ ಅಭಿನಂದನೆ ಸಲ್ಲಿಸಿದರು. ಕೇವಲ ಅರ್ಜಿಗಳನ್ನು ಕೊಟ್ಟರೆ ಸಾಲದು ಅದು ಏನು ಆಗಿದೆ ಎಂಬುದು ಆಗಾಗ ಪಂಚಾಯತ್‌ಗೆ ಭೇಟಿ ಕೊಟ್ಟು ಪರಿಷ್ಕರಿಸುವುದು ಗ...
ಜಿ.ಪಂ. ಸದಸ್ಯರಾದ ಧರಣೇಂದ್ರ ಕುಮಾರ್ ಮಾತನಾಡಿ ಇದು ನಮ್ಮ ವಿಧಾನಸಭೆ ಇದ್ದ ಹಾಗೆ, ಗ್ರಾಮ ಸಭೆಯಲ್ಲಿ ನಿಮ್ಮ ದೂರು, ಬೇಡಿಕೆಗಳನ್ನು ನೀಡುವ ಸಭೆಯೇ ಗ್ರಾಮಸಭೆ. ಅಭಿವೃದ್ಧಿ ಬಗ್ಗೆ ಚರ್ಚಿಸಲು ಗ್ರಾಮಸಭೆಯಲ್ಲಿ ಅವಕಾಶವಿದೆ ಎಂದರು. ಜಿಲ್ಲಾ ಪಂಚಾಯತ್ ಅನುದಾನದಿಂದ ಸಿಗುವ ಅನುದಾನವನ್ನು ಒದಗಿಸುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಾರಾವಿ ಮರೋಡಿ ರಸ್ತೆ ಅಭಿವೃದ್ಧಿ, ಕುತ್ಲೂರ...
ನೆರೆ ಹಾವಳಿಯಿಂದ ಕರ್ನಾಟಕ ನಲುಗಿ ಹೋದರೂ ಸರಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ: ಸಿದ್ದು | Udayavani – ಉದಯವಾಣಿ
Team Udayavani, Oct 17, 2020, 8:27 PM IST
ಬೆಂಗಳೂರು : ನೆರೆ ಹಾವಳಿಯಿಂದಾಗಿ ಕಲ್ಯಾಣ ಕರ್ನಾಟಕ ನಲುಗಿ ಹೋಗಿದ್ದರೂ ಸಂತ್ರಸ್ತರ ಮೊರೆ ಆಲಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಹದಿಂದ ಕಲ್ಯಾಣ ಕರ್ನಾಟಕ ಕೊಚ್ಚಿ ಹೋಗುತ್ತಿದೆ. ಜನ ತಮ್ಮ ಜೀವ ಉಳಿದರೆ ಸಾಕು ಎಂದು ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತ್ರರ ಮೊರೆ ಆಲಿಸಬೇಕಾದ, ಅವರಿಗೆ ಸಾಂತ್ವನ ಹೇಳಬೇಕಾದ ಸಚಿವರುಗಳು ನಾಪತ್ತೆಯಾಗಿದ್ದಾರೆ. ಕೆಲ ಸಚಿವರು ಉಪ ಚುನಾವಣೆಯಲ್ಲಿ ಮುಳುಗಿ ಹೋಗಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿ ಪ್ರವಾಹದ ಬಗ್ಗೆ ಮೈ ಮರೆತಿದೆ ಎಂದು ಅವರು ಟೀಕಿಸಿದ್ದಾರೆ.
ಇಂದು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ಇನ್ನಾದರೂ ಸರ್ಕಾರ ಪ್ರವಾಹ ಸಂತ್ರಸ್ತ್ರರನ್ನು ಕಣ್ತೆರೆದು ನೋಡಲಿ. ಕೂಡಲೇ ಅವರ ನೆರವಿಗೆ ಧಾವಿಸಲಿ. ಕೊರೊನಾ ನೆಪ ಹೇಳಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಬೆಂಗಳೂರಿನಲ್ಲಿ ಸಭೆಗಳನ್ನು ನಡೆಸುವುದನ್ನು ಬಿಟ್ಟು ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಟ್ಟು ನೊಂದವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ...
ಇದನ್ನೂ ಓದಿ:ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ನಿರ್ಮಾಣವಾಗುತ್ತಿದೆ : ಡಿಕೆಶಿ
ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು :
ಅತಿವೃಷ್ಟಿಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 10-15 ಸಾವಿರ ಕೋಟಿ ರೂ. ನಷ್ಟವಾಗಿದೆ. ಈ ರೀತಿಯ ದಪ್ಪ ಚರ್ಮದ ಸರ್ಕಾರವನ್ನು ಎಂದೂ ನೋಡಿಲ್ಲ. ಪ್ರವಾಹದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಮೊದಲೇ ಹೇಳಿದ್ದರೂ ಸರ್ಕಾರ ಕಿವಿಗೊಡಲಿಲ್ಲ. ನಮ್ಮ ಸಲಹೆಗಳನ್ನು ಗಂಭೀರವಾಗಿಯೂ ಪರಿಗಣಿಸುವುದಿಲ್ಲ. ಎಷ್ಟೇ ಪತ್ರ ಬರೆದರೂ ಉತ್ತರ ನೀಡುವುದಿಲ್ಲ.
ಮಂತ್ರಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಹಣ ಮಾಡುವುದರಲ್ಲಿಯೇ ಅವರು ಮಗ್ನರಾಗಿರುವುದರಿಂದ ಮಳೆಯಲ್ಲಿ ಕೊಚ್ಚಿ ಹೋಗುತ್ತಿರುವ ಜನರ ಕಡೆಗೆ ಕಣ್ಣೆತ್ತಿ ನೋಡುತ್ತಿಲ್ಲ. ಚುನಾವಣೆ ಬಂದಾಗ ಹಣ ಖರ್ಚು ಮಾಡಿ ಗೆಲ್ಲಬಹುದು ಎಂಬ ಭಾವನೆಯಲ್ಲಿ ಜನರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ನಟಿ ಕಂಗನಾ ಹಾಗೂ ಸಹೋದರಿ ರಂಗೋಲಿ ಚಾಂಡೆಲ್ ವಿರುದ್ಧ FIR ದಾಖಲು
ಈಗ ಚುನಾವಣೆ ಅವರಿಗೆ ಮುಖ್ಯ. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ. ಗೆದ್ದರೆ ಪ್ರತಿಪಕ್ಷಗಳು ಎಷ್ಟೇ ಆರೋಪ ಮಾಡಿದರೂ ನಾವು ಗೆಲ್ಲಲಿಲ್ಲವೇ ಎಂದು ಹೇಳುತ್ತಾರೆ. ಆದರೆ ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
ಪ್ರವಾಹದಿಂದ ಕಲ್ಯಾಣ ಕರ್ನಾಟಕದ ಜನ ತೀವ್ರ ತೊಂದರೆಗೆ ಸಿಲುಕಿದ್ದರೂ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಬಿಜೆಪಿಯ 25 ಸಂಸದರು ನೆರವು ಒದಗಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತಿಲ್ಲ. ಪ್ರಧಾನಿಯವರನ್ನು ಭೇಟಿಯಾಗಿ ಜನರ ಕಷ್ಟ ಮನವರಿಕೆ ಮಾಡಿಕೊಡುತ್ತಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸು ಅನ್ವಯ ರಾಜ್ಯಕ್ಕೆ ಹಣಕಾಸು ಒದಗಿಸುವಲ್ಲಿಯೂ ಅನ್ಯಾಯವಾಗಿದೆ. ಆ ಬಗ್ಗೆಯೂ ಸಂಸದರು ಚಕಾರ ಎತ್ತುತ್ತಿಲ್ಲ....
ಇದನ್ನೂ ಓದಿ:ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆ ಪ್ರಯೋಗಕ್ಕೆ ಕೊನೆಗೂ ಅನುಮತಿ
ಕನ್ನಡದಲ್ಲಿ ಟ್ವೀಟ್ ಮಾಡಿದ ತಕ್ಷಣ ಪ್ರಧಾನಿಯವರು ಕನ್ನಡಿಗರ ಪರ ಇದ್ದಾರೆ ಎಂದರ್ಥವಲ್ಲ. ನೆರೆ ಪೀಡಿತ ಸ್ಥಳಗಳಿಗೆ ನಾನು ಭೇಟಿ ನೀಡುತ್ತೇನೆ.
ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಘಟನೆ ಕುರಿತು ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರು ಸಂಪತ್ ರಾಜ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸುತ್ತೇನೆ. ಬಿಜೆಪಿಯವರ ತಪ್ಪಿನಿಂದ, ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ನಾನು ವಿಧಾನಸಭೆಯಲ್ಲಿ ಹೇಳಿದ್ದೇನೆ. ಆ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ.
ದೂರು ಕೊಟ್ಟ ತಕ್ಷಣ ನವೀನ್ ನನ್ನು ಬಂಧಿಸಿದ್ದರೆ ಗಲಭೆ ಸಂಭವಿಸುತ್ತಿರಲಿಲ್ಲ. ನವೀನ್ ಬಂಧನಕ್ಕೆ ಪೊಲೀಸರು ವಿಳಂಬ ಮಾಡಲು ಕಾರಣ ಏನು ? ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಪೊಲೀಸರ ವೈಫಲ್ಯ ಸಾಕಷ್ಟಿದೆ. ಘಟನೆ ಹಿಂದೆ ಎಸ್‍ಡಿಪಿಐ ಕೈವಾಡ ಇದೆ ಎಂದು ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಅಶೋಕ್ ಹೇಳಿದ್ದರು. ಈಗ ಅವರು ಏನು ಹೇಳುತ್ತಿದ್ದಾರೆ. ನಾವು ಯಾವುದನ್ನು ನಂಬಬೇಕು ಎಂದು ಹೇಳಿದರು.
ಇದನ್ನೂ ಓದಿ:ಐಪೋನ್-12 ಸರಣಿಯ 5G ಪೋನ್ ಗಳ ಬ್ಯಾಟರಿ ಸಾಮರ್ಥ್ಯ ಎಷ್ಟು ? ಇಲ್ಲಿದೆ ಮಾಹಿತಿ
ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಮ್ಮ ಅಭ್ಯರ್ಥಿ ಕುಸುಮಾ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಸುಳ್ಳು ಕೇಸು ದಾಖಲು ಮಾಡಿದ್ದಾರೆ. ಪೊಲೀಸರನ್ನು ತಳ್ಳಿ ನಾನು ಮತ್ತು ಅಭ್ಯರ್ಥಿ ಚುನಾವಣಾಧಿಕಾರಿಗಳ ಕಚೇರಿ ಒಳಗೆ ಹೋಗಿರುವುದಾಗಿ ಎಫ್ ಐ ಆರ್ ನಲ್ಲಿ ತಿಳಿಸಲಾಗಿದೆ. ಈ ಘಟನೆ 11.15 ರಲ್ಲಿ ನಡೆದಿದೆ ಎಂದಿದ್ದಾರೆ. ನಾನು ...
ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ. ಹೀಗಾಗಿ ಸಚಿವರುಗಳು ನನ್ನ ಬಗ್ಗೆ ಏನೇ ಟೀಕೆ ಮಾಡಿದರೂ ಐ ಡೋಂಟ್ ಕೇರ್.
ಬಡವರು ಮತ್ತು ಕೂಲಿ, ಕಾರ್ಮಿಕರಿಗೆ ಕಡಿಮೆ ದರದಲ್ಲಿ ಆಹಾರ ಸಿಗಬೇಕು ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಬಡವರು, ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ ಸರ್ಕಾರ ಕ್ಯಾಂಟೀನ್‍ಗಳನ್ನು ನಡೆಸಲಿ. ಕ್ಯಾಂಟೀನ್‍ಗಳನ್ನು ನಡೆಸಲು ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಲಿ. ಕೈಯ್ಯಲ್ಲಿ ಆಗದಿದ್ದರೆ ಸರ್ಕಾರ ಬಿಟ್ಟು ಹೋಗಲಿ. ಅಳವುದು, ಅಸಹಾಯಕತೆ ವ್ಯಕ್ತಪಡಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶ...
ಇಲ್ಲಾ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಗಳಿಗೆ ಹೋಗಿ ಪ್ರವಾಹ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಿ. ಕೊರೊನಾ ಇದೆ ಎಂಬ ನೆಪ ಹೇಳಿ ಬೆಂಗಳೂರಿನಲ್ಲೇ ಕುಳಿತು ಸಭೆಗಳನ್ನು ನಡೆಸಿದರೆ ಹೇಗೆ ? ಇಲ್ಲಿ ಮಾಡುವ ಸಭೆಯನ್ನು ಪ್ರವಾಹಪೀಡಿತ ಪ್ರದೇಶಳಿಗೆ ಹೋಗಿಯೇ ಮಾಡಲಿ ಎಂದು ಗುಡುಗಿದ್ದಾರೆ.
ಚಿಲ್ಲರೆದರ ಹಣದುಬ್ಬರ ಶೇಕಡ 3.77ಕ್ಕೆ ಏರಿಕೆ, ಕೈಗಾರಿಕಾ ಉತ್ಪಾದನೆ ಕುಸಿತ
October 12, 2018 7:16 PM
ಶುಕ್ರವಾರ (ಅ.12) ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಚಿಲ್ಲರೆ ದರ ಹಣದುಬ್ಬರ ಶೇ.3.77ಕ್ಕೇರಿದೆ. ಆದರೆ, ರಿಸರ್ವ್ ಬ್ಯಾಂಕಿನ ಹಣದುಬ್ಬರ ಮಿತಿಯಾದ ಶೇ.4ಕ್ಕಿಂತ ಕೆಳಮಟ್ಟದಲ್ಲೇ ಇದೆ. ಇದು ಇತ್ತೀಚೆಗೆ ಆರ್‌ಬಿಐ ಬಡ್ಡಿದರ ಏರಿಕೆ ಮಾಡದಿರುವ ನಿರ್ಧಾರವನ್ನು ಸಮರ್ಥಿಸಿದಂತಾಗಿದೆ
ಸೆಪ್ಟೆಂಬರ್ ತಿಂಗಳ ಗ್ರಾಹಕದರ ಹಣದುಬ್ಬರವು ಶೇ.3.77ಕ್ಕೆ ಏರಿದೆ. ಆಗಸ್ಟ್ ತಿಂಗಳಲ್ಲಿ ಇದು ಶೇ.3.69ರಷ್ಟಿತ್ತು. ಬಹುತೇಕ ಆರ್ಥಿಕ ತಜ್ಞರು ಅಂದಾಜು ಮಾಡಿದ್ದ ಶೇ.4ಕ್ಕಿಂತಲೂ ಕಡಮೆ ಮಟ್ಟದಲ್ಲಿದೆ. ಅಕ್ಟೋಬರ್ 3-9ರ ನಡುವೆ ರಾಯ್ಟರ್ ಸುದ್ದಿಸಂಸ್ಧೆ ನಡೆಸಿದ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ 45 ಮಂದಿ ಆರ್ಥಿಕ ತಜ್ಞರು, ಚಿಲ್ಲರೆದರ (ಗ್ರಾಹಕದರ) ಹಣದುಬ್ಬರ ಶೇ.4ರಷ್ಟು ಆಗುತ್ತದೆಂದು ಅಂದಾಜಿಸಿದ್...
ಶುಕ್ರವಾರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಭಾರತೀಯ ರಿಸರ್ವ್ ಬ್ಯಾಂಕಿನ ಹಣದುಬ್ಬರ ಮಿತಿಯಾದ ಶೇ.4ಕ್ಕಿಂತ ಕೆಳಮಟ್ಟದಲ್ಲೇ ಇದೆ. ಇದು ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡದಿರುವ ನಿರ್ಧಾರವನ್ನು ಸಮರ್ಥಿಸಿದಂತಾಗಿದೆ. ಆರ್ಬಿಐ ಸಾಮಾನ್ಯವಾಗಿ ಬಡ್ಡಿದರ ಏರಿಸುವ ಅಥವಾ ಇಳಿಸುವ ನಿರ್ಧಾರವನ್ನು ಚಿಲ್ಲರೆದರ ಹಣದುಬ್ಬರ ಆಧರಿಸಿ ಮಾಡುತ್ತದೆ.
ಇದನ್ನೂ ಓದಿ : ಶೇಕಡ 5ಕ್ಕೇರಿದ ಚಿಲ್ಲರೆ ದರ ಹಣದುಬ್ಬರ, ತಗ್ಗಿದ ಕೈಗಾರಿಕಾ ಉತ್ಪನ್ನ
ಆಹಾರ ಪದಾರ್ಥಗಳ ಹಣದುಬ್ಬರವು ಆಗಸ್ಟ್‌ನಲ್ಲಿ 0.29ರಷ್ಟುಇದ್ದದ್ದು ಸೆಪ್ಟೆಂಬರ್‌ನಲ್ಲಿ ಶೇ.0.51ಕ್ಕೆ ಏರಿದೆ. ಆಗಸ್ಟ್ ತಿಂಗಳ ಚಿಲ್ಲರೆದರ ಹಣದುಬ್ಬರವು ಹತ್ತು ತಿಂಗಳಲ್ಲೇ ಕಡಿಮೆ ಮಟ್ಟಕ್ಕೆ ಅಂದರೆ, ಶೇ.3.69ಕ್ಕೆ ಇಳಿದಿತ್ತು. ಈ ಕಾರಣದಿಂದಾಗಿಯೇ ಅಕ್ಟೋಬರ್ ತಿಂಗಳ ಹಣಕಾಸು ನೀತಿ ಪರಾಮರ್ಶೆ ವೇಳೆ ಬಡ್ಡಿದರ ಏರಿಕೆ ಮಾಡದಿರಲು ಆರ್ಬಿಐ ನಿರ್ಧರಿಸಿತ್ತು. ಆದರೆ, ಆರ್ಬಿಐ ನಿರ್ಧಾರವು ಇಡೀ ಬಂಡವ...
ಈ ನಡುವೆ, ಸರ್ಕಾರ ಕೈಗಾರಿಕಾ ಉತ್ಪನ್ನ ಸೂಚ್ಯಂಕ (ಐಐಪಿ) ಅಂಕಿ-ಅಂಶ ಬಿಡುಗಡೆ ಮಾಡಿದ್ದು ಆಗಸ್ಟ್ ತಿಂಗಳಲ್ಲಿ ಶೇ.4.3ಕ್ಕೆ ಕುಸಿದಿದೆ. ಜುಲೈ ತಿಂಗಳಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.6.6ರಷ್ಟಿತ್ತು. ಕೈಗಾರಿಕಾ ಉತ್ಪಾದನೆ ಕುಸಿತವು ಆರ್ಥಿಕ ಅಭಿವೃದ್ಧಿಯು ನಿಧಾನಗತಿಯಲ್ಲಿ ಸಾಗಿರುವುದನ್ನು ಸೂಚಿಸುತ್ತದೆ.
ಅನಂತತಾನಂತವಾಗಿ.... ಅಗಲಿದ ನಾಯಕಗೆ ಗಣ್ಯರ ಅಶ್ರುತರ್ಪಣ | National leaders express their condolence to Ananth Kumar - Kannada Oneindia
| Updated: Monday, November 12, 2018, 10:16 [IST]