text
stringlengths
0
61.5k
ನಾನೇ ಸ್ವದೇಶಿ ನೀನೇ ಪರದೇಶಿ
ಎಂದು ಹಾಡಿ ನಲಿದಿದ್ದಾರೆ.. ನಾವು ದೈವದ ಅವತಾರ ಎನ್ನುವ ಕೃಷ್ಣನನ್ನ ನಾವೇ ಬೆಣ್ಣೆ ಕಳ್ಳ, ಕಪಟಿ ಎನ್ನುತ್ತೇವೆ. ಯಾವ ದೈವವನ್ನೆ ನಂಬುವುದಿಲ್ಲ, ನಾಸ್ತಿಕ ಎಂದರೂ ಅವರಿಚ್ಚೆಗೆ ಬಿಡುತ್ತೇವೆ. ಇಲ್ಲಿ ದೈವದ ಅವತಾರಗಳು ಹೇಳಿದ ದಾರಿಯಲ್ಲೋ, ಸನ್ಯಾಸಿಗಳು ಕಂಡು ಕೊಂಡ ದಾರಿಯಲ್ಲೋ, ವೈದಿಕ ದಾರಿಯಲ್ಲೋ, ಅಥವಾ ನಾನೇ ದಾರಿ ಕಂಡುಕೊಳ್ಳುವೆ ಎಂದು ಹೇಳಿ ಹೊರಟರೆ ಅದಕ್ಕೂ ಅವಕಾಶವಿದೆ. ನನಗಾವ ಮುಕ್ತಿಯ ದ...
ಇನ್ನು ಅಪರಿಪೂರ್ಣ ಪರಿಕಲ್ಪನೆಗಳೆನಿದ ನಂಬಿಕೆಗಳಂತೂ ನಿಮಗೆ ಬೇಡ (ಅವು ಎಷ್ಟೇ ಆದರೂ ಸೋಲಿನ ಕಡೆಗೆ ಒಯ್ಯುವಂತಹುದು). ಖಂಡಿತ ನಿಮಗೆ ಶುಭ್ರತೆ ವಿಶ್ವಾಸ ಕಂಡ ನಂಬಿಕೆಯೇ ಸರಿ. ನನಗೆ ನಿಮ್ಮ ಆ ನಂಬಿಕೆಗಳು ನನ್ನನ್ನು ಸಂಪೂರ್ಣ ಸೆಳೆಯಲು ವಿಫಲವಾಯಿತು. ಅದಕ್ಕೆ ಅಹಂ ನಿಂದ ಹಿಡಿದು ಹಲವು ಕಾರಣಗಳಿರಬಹುದು., ನಿಜಕ್ಕೂ ನಮ್ಮೊಡನಿರುವ ದೈವ ನಮ್ಮ ಭ್ರಮೆಯಾಗಿದ್ದು, ದೈವ ಮೇಲೆ ಕುಳಿತು ಪರೀಕ್ಷೆಯನ್ನೇ ...
ಇನ್ನು ಸೌದಿಯ ಮುತಾವಾ ಇಕಾಮಾಗಳ ವಿಷಯ ನೀವು ವಿಶ್ಲೇಷಿಸುವುದು ಕಷ್ಟ, ಆದರೆ ಮುಸ್ಲಿಮನಾದ ಮೇಲೆ ನಮಾಜ್ ಮಾಡದಿರುವುದು ತಪ್ಪು, ಜವಾಬ್ದಾರಿಯುತ ಮನುಷ್ಯನಂತೆ ಹೇರಿಕೆ ಮಾಡಿಯಾದರೂ ಸರಿ ಸರಿಪಡಿಸಬೇಕು, ಆದ್ದರಿಂದ ಮುತಾವಾ ಇಕಾಮಾಗಳು ತಪ್ಪುಮಾಡುತ್ತಿಲ್ಲ ಎಂಬ ವಾದ ಮಂಡಿಸಿದ್ದೀರಿ.. ನಿಮ್ಮ ವಾದವನ್ನ ಒಪ್ಪಿದೆ.
# "ಇಸ್ಲಾಮಿಯಾ ಆಡಳಿತ ಇರುವ ರಾಜ್ಯದಲ್ಲಿ ಅಮುಸ್ಲಿಮರಿಗೆ ಹೆಚ್ಚಿನ ರಕ್ಷಣೆ, ಗೌರವ ಆದ್ಯತೆ ಕೊಡಬೇಕು. ಅವರೆಂದೂ ವಂಚಿಸಲ್ಪಟ್ಟವರೆಂಬ ಬಾವನೆಗೆ(ವಂಚಿಸಲ್ಪಡುವೂದು ದೂರದ ಮಾತು) ತುತ್ತಾಗ ಬಾರದು" ಇದು ಪ್ರವಾದಿಯರ(ಸ.ಅ) ಉಪದೇಶವಾಗಿತ್ತು.
ಪ್ರವಾದಿಯವರ ಸ್ವಂತ ನಾಡು ಸೌದಿಯಲ್ಲಂತೂ ಈ ಉಪದೇಶದ ಪಾಲನೆ ಕಾಣಲಿಲ್ಲ. ಅಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನ ಸೌದಿಯ ನೆಲದಲ್ಲಿ ಕಿತ್ತು ಕೊಂಡಿರುವ ಬಗ್ಗೆ, ಅವರ ಮೇಲೂ ಸೌದಿಯ ಆಗಸದಲ್ಲೇ ಬುರ್ಖಾ ಹೇರುವ ಬಗ್ಗೆ ನೀವು ಹೇಳಲಿಲ್ಲ.. ಆದರೆ ವಿಶ್ಲೇಷಿಸುವುದು ಕಷ್ಟ ಎಂದಿರುವುದರಿಂದ ಪರವಾಗಿಲ್ಲ.. ಬಹುಷಃ ಅವರು ಮಾಡುವುದು ಸರಿ.. ಇಲ್ಲದಿದ್ದರೆ ಇನ್ನೇನು ಆಗುತ್ತಿತ್ತೋ.. bhgteರವರು ಸಂವಾದದಲ್ಲ...
ಗಂಡು ಕಣ್ಣು, ಕಿವಿ, ಮನಸ್ಸುಗಳಿಂದ ಹೆಣ್ಣಿನ ಸೌಂದರ್ಯವನ್ನ ವ್ಯಭಿಚರಿಸುತ್ತಾನೆ, ಹೆಣ್ಣು ಆಕರ್ಷಕ, ಹಾಗಾಗಿ ಬುರ್ಖಾ ಎಂದಿರಿ, ಅದನ್ನ ರಕ್ಷಣೆ ಎಂದರೂ ಅದು ಗಂಡಿನ ಪಾಪಕ್ಕೆ ಹೆಣ್ಣಿಗೆ ಶಿಕ್ಷೆ ಎಂಬ ನನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಲಾಗುತ್ತಿಲ್ಲ...
ಹೆಣ್ಣು ಕಣ್ಣು, ಕಿವಿ, ಮನಸ್ಸುಗಳಿಂದ ಗಂಡನ್ನು ವ್ಯಭಿಚರಿಸಲಾರಳೇ?? ಆ ಹೆಣ್ಣಿನ ಪಾಪಕ್ಕೆ ಗಂಡಿಗೆ ಏನು ಶಿಕ್ಷೆ ಇದೆ?? ಅದಕ್ಕೂ ಶಿಕ್ಷೆ ಹೆಣ್ಣಿಗೇ ಎನ್ನುವಿರಾ, ಅವಳನ್ನ ಮನೆಯಲ್ಲೇ ಇಟ್ಟು, ತರಕಾರಿ ತರಲು ಹೋದರು ಲಿಖಿತ ಪರವಾನಗಿ ಪಡೆದು ಹೊರಬರಬೇಕಾದ ಸ್ಥಿತಿಯಲ್ಲಿ ಹೆಣ್ಣನ್ನಿಟ್ಟು, ಹೆಣ್ಣಿನ ಮಾನಸಿಕ ವ್ಯಭಿಚಾರದಿಂದ ಹೀಗೆ ಹೆಣ್ಣು ಗಂಡನ್ನ ದೂರ ಇಟ್ಟಿರುವುದು ಎಂಬ ವಾದವೇ??
bhgteರವರ ಮಾತು ಕೇಳಿದ ಮೇಲೆ ಹೆಣ್ಣು ಮಕ್ಕಳು ಅಲ್ಲಿ ಬುರ್ಖಾದೊಳಗೇ, ಇನ್ನೂ ಹೇಳಬೇಕೆಂದರೆ ಮನೆಯಿಂದ ಹೊರಬರದಿದ್ದರೇ ಹೆಚ್ಚು ಸುರಕ್ಷಿತ ಎಂದೆನಿಸುತ್ತಿದೆ. ಅಲ್ಲಿಗೆ ಆ ನಿಯಮ ಕೂಡ ಸರಿ ಎಂದೇ ಒಲ್ಲದ ಮನಸ್ಸಿನಿಂದ ಒಪ್ಪುವೆ.
ಯಾತ್ರಿಕ 27 June 2011 at 17:49
ನನ್ನ ಪ್ರೀತಿಯ ಸಹೋದರನಿಗೆ ನನ್ನ ನಮಸ್ಕಾರ. ನಿಮ್ಮಲ್ಲಿ ಇನ್ನೂ ಮನೆ ಮಾಡಿರುವ ಹಾರ್ಡ್‌ ಕೋಡ್‌ ಎಂಬ ಶೀರ್ಷಿಕೆ ಕಂಡಿತವಾಗಿಯೂ ತಪ್ಪು. ಹಾರ್ಡ್‌ ಕೋಡ್‌ ಎನ್ನ ಬೇಕಾದರೆ ಆ ಒಂದು ಕೋಡ್‌ ಯಾವುದೇ ಸನ್ನಿವೇಶದಲ್ಲೂ ಒಂದೇ ಆಗಿರಬೇಕು. ಈ ಒಂದು ಗುಣ ಇಸ್ಲಾಮಿನ ನಿಯಮಗಳಲ್ಲಿ ಕಾಣಲಾಗದು (ಕೆಲವೊಂದು ಹಾರ್ಡ್‌ ಆಗಲೇ ಬೇಕು, ಇಲ್ಲದಿದ್ದರೆ ಸಿಸ್ಟಮ್ ರನ್ ಆಗುವುದೇ ಇಲ್ಲ: ಆರಾಧ್ಯನೊಬ್ಬನೇ ಎಂಬಂತೆ). ಉದಾ...
ಯಾತ್ರಿಕ 27 June 2011 at 17:50
ನಾವು ನಂಬುವೆವು ನಮ್ಮನ್ನು ಸೃಷ್ಟಿಸಿರುವುದು ಆರಾಧ್ಯನಿಗೆ ಆರಾಧನೆ ಅರ್ಪಿಸಲು. ಇಲ್ಲಿ ಇನ್ನೊಂದು ವಿಷಯ ತಿಳಿದಿರಲಿ. ತನ್ನ ಮಗನಿಗೊಂದು ಅಕ್ಷರ ಕಲಿಸುವುದು, ದಾರಿಯಲ್ಲಿ ಬಿದ್ದ ಮುಳ್ಳ ಎತ್ತಿ ದಾರಿ ಶುದ್ದ ಗೊಳಿಸುವುದು... ಎಲ್ಲವೂ ಈ ಆರಾಧನೆಯಲ್ಲಿ ಸೇರುತ್ತದೆ. ಬರೀ ನಮಾಜ್ ಮಾತ್ರ ಆರಾಧನೆ ಅಲ್ಲ. ಒಟ್ಟಿನಲ್ಲಿ ಹೇಳ ಬೇಕೆಂದರೆ ಶುಬ್ರವಾದ ಜೀವನವೇ ಆರಾಧನೆ, ಅಲ್ಲಿ ನಮಾಜು, ಉಪವಾಸ ಎಂಬಂತೆ ಕೆಲ...
ಇನ್ನು ನಿಮ್ಮ ದೈವ ವಿಡಂಬನೆಯ ಸ್ವಾತಂತ್ರ್ಯ!!! ಹುಲ್ಲು ತಿನಿಸಿದರೂ ಸರಿಯೆ, ಕಲ್ಲು ತಿನಿಸಿದರೂ ಸರಿಯೆ, ಮೃಷ್ಟಾನ್ನ ಕೊಟ್ಟರು ಸರಿಯೆ ನನ್ನ ಸೃಷ್ಟಿಕರ್ತ ಕೊಡುವುದೆಲ್ಲವೂ ಒಳಿತೇ ಎನ್ನುವ ಅಚಂಚಲ ವಿಶ್ವಾಸದ, ಭಕ್ತಿಯ ಮುಂದೆ ನಿಮ್ಮಿ ವಾದಕ್ಕೆ ಹುಲು ಮಾನವನ ಅಜ್ಞಾನ ಎನ್ನುವೆ ಅಷ್ಟೆ. ಯೋಚಿಸಲೂ ಸಾದ್ಯವಿಲ್ಲದಷ್ಟು ತೃಣಮಾತ್ರವಾದ ಮನುಷ್ಯನಿಗೆ ಅವನಂತದೇ ಒಡೆಯನಿರಬೇಕೆನ್ನುವುದು ಎಷ್ಟು ಸರಿ! ಅವನ...
ಇನ್ನು ಗಂಡು ಹೆಣ್ಣಿನ ತಾರತಮ್ಯ ಎನ್ನುವ ನೀವು ಮೊದಲು ಅರ್ಥೈಸಿಕೊಳ್ಳಬೇಕಾದುದು ಮಾನವನ ಪೂರ್ಣತೆ ಒಂದು ಗಂಡು ಒಂದು ಹೆಣ್ಣು ಸೇರಿದಾಗ ಮಾತ್ರ. ಅದಕ್ಕನುಸಾರವಾಗಿ ಸೃಷ್ಟಿ ನಿಯಮಗಳು ಅವೆರಡನ್ನೂ ಒಂದಕ್ಕೊಂದರಂತೆ ಪೋಣಿಸಿವೆ. ಗುಲಾಬಿ ಪ್ರಿಯನು ಆತನ ಪ್ರೀತಿಯ ಮನಸಿನಾಳದಲ್ಲಿಟ್ಟು ಸಾಗುತ್ತಾನೆ, ಎಂದಾದರೂ ಗುಲಾಬಿಯು ಅವನಿಗೆ ಕಾಣಿಸಿದರೆ, ಹಾತೊರೆಯುವನು ಅದನ್ನ ಪಡೆಯುವುದಕ್ಕಾಗಿ. ಆ ಗುಲಾಬಿ ಎಷ್ಟು...
ರಾಜಿ 1 July 2011 at 21:28
ಪ್ರಿಯ ಆಲೀಫ್, ನಿಮ್ಮ ಬರಹ ನನಗೆ ಒಂದೇ ಹೊಡೆತದಲ್ಲಿ ಓದಿಸಿಕೊಂಡು ಹೋಯಿತು. ಪ್ರತಿ ಸಾಲು, ಪ್ರತಿ ಅಕ್ಷರ, ಪ್ರತಿ ಮಾತೂ ಕಣ್ಣರಳಿಸಿದವು. ನೀವು ಹೇಳಿದ ಪ್ರೀತಿಯ ನಿಯಮಗಳ ಬಗ್ಗೆ ನನ್ನ ಮನಸೋತಿದ್ದು ಬರೆದಿದ್ದೆ. ಶುಭ್ರತೆಯ ನಿಯಮಗಳೂ, ಅದರ exception clause ಗಳೂ ಮೆಚ್ಚುವಂತಹುದೇ. ನಾ ಹೇಳುತ್ತಿದ್ದ ಹಾರ್ಡ್‌ಕೋಡ್, ಹಾರ್ಡ್‌ಕೋಡ್ ಅಲ್ಲವೇ ಅಲ್ಲ ಎಂಬ ನಿಮ್ಮ ವಾದಕ್ಕೆ ನಿಜವಾಗಲೂ ನನ್ನ ಬಳಿ ಪ್...
ಹಾರ್ಡ್‌ಕೋಡ್ ಎಂಬ ಪದವನ್ನ ನಾನು ಬಳಸುತ್ತಿರುವುದು, ಬದಲಿಸಲಾರದ, ಬದಲಿಸಲು ಯೋಚಿಸಬಾರದ, ಸತ್ಯವೇ ಇದು ಎಂದು ಒಪ್ಪಬೇಕಾದ ವಿಷಯಗಳ ಬಗ್ಗೆ, ಮಾನವ ವಿಕಾಸದ ಬದಲು ಆದಾಮ್-ಹವ್ವಾ (ಆಡಂ-ಈವ್) ಕಥೆಯನ್ನ ಒಪ್ಪಬೇಕಾದ, ಏಳು ದಿನಗಳಲ್ಲಿ ಭಗವಂತ ಜಗತ್ತನ್ನ ಸೃಷ್ಠಿಸಿದ ಎಂಬ ಮಾತುಗಳನ್ನ ಒಪ್ಪಬೇಕಾದ ಸ್ಥಿತಿಯನ್ನ. ನಮ್ಮಲ್ಲೂ ಅಂಥದ್ದೇ ಒಂದು ಕಥೆ ಪುರಾಣಗಳಲ್ಲಿ ಬರುತ್ತದೆ, (ಮನು-ಶತರೂಪಾ ಕಥೆ.) ಆದರೆ ಮಾ...
ದೈವಕ್ಕೆ ನಾವು ಆರೋಪಿಸುವ ವಿಗ್ರಹ, ರೂಪಗಳು, ಗಂಡ ಹೆಂಡತಿ, ವಾಹನ ಇವುಗಳ ಬಗ್ಗೆ ಹೇಳಿದ್ದೀರಿ, ನಮ್ಮ ಹಿಂದಿನ ಚರ್ಚೆಯಲ್ಲೇ ನಾನು ವಿವರವಾಗಿ ಬರೆದಿದ್ದೇನೆ. ಆ ಚರ್ಚೆ ಈಗ ಭಾಗಗಳಲ್ಲಿ ಹಾಕುತಿದ್ದೇನೆ, ಇನ್ನೂ ಆ ಭಾಗ ಬಂದಿಲ್ಲ.. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ದೈವಕ್ಕೆ ಆ ರೂಪಗಳನ್ನ ಆರೋಪಿಸಲೇ ಬೇಕೆಂಬ ನಿಯಮವಿಲ್ಲ. ಮನಸ್ಸಿನ ತೃಪ್ತಿಗಾಗಿ, ನಾನಗಲೇ ಹೇಳಿದಂತೆ ದೈವ ನಮ್ಮೊಳಗೆ ಒಂದು ಎಂದು ನಂ...
ನನ್ನ ಮುಸ್ಲಿಂ ಗೆಳೆಯ ಕಲೀಂನಿಗೆ (ಆತ MBA ಸ್ನಾತಕ) ಬ್ಯಾಂಕ್‌ಗಳಲ್ಲಿ ಕೆಲಸ ಸಿಕ್ಕಿದರೂ ಹೋಗುತ್ತಿರಲ್ಲಿಲ್ಲ. ಇಸ್ಲಾಂ ಬಡ್ಡಿ ವ್ಯವಹಾರವನ್ನ ನಿಷೇದಿಸಿದೆ (ಇಸ್ಲಾಂನಲ್ಲಿ ನನಗೆ ಮೆಚ್ಚುಗೆಯ ಮತ್ತೊಂದು ನಿಯಮವಿದು), ಬಡ್ಡಿ ವ್ಯವಹಾರ ಮಾಡುವ ಬ್ಯಾಂಕ್‌ನ ಕೆಲಸ ಒಪ್ಪಿದರೆ, ನೇರವಾಗಿ ಅಲ್ಲದ್ದಿದ್ದರೂ ನಿಷೇದಿತ ಕೆಲಸದಲ್ಲಿ ಭಾಗಿಯಾದಂತೆ ಎನ್ನುತ್ತಿದ್ದ. ಬೇರೆ ಎಲ್ಲಿಯೂ ಕೆಲಸ ಸಿಗುತ್ತಿರಲಿಲ್ಲ. ...
# ನಾವು ನಂಬುವೆವು ನಮ್ಮನ್ನು ಸೃಷ್ಟಿಸಿರುವುದು ಆರಾಧ್ಯನಿಗೆ ಆರಾಧನೆ ಅರ್ಪಿಸಲು. ಇಲ್ಲಿ ಇನ್ನೊಂದು ವಿಷಯ ತಿಳಿದಿರಲಿ. ತನ್ನ ಮಗನಿಗೊಂದು ಅಕ್ಷರ ಕಲಿಸುವುದು, ದಾರಿಯಲ್ಲಿ ಬಿದ್ದ ಮುಳ್ಳ ಎತ್ತಿ ದಾರಿ ಶುದ್ದ ಗೊಳಿಸುವುದು... ಎಲ್ಲವೂ ಈ ಆರಾಧನೆಯಲ್ಲಿ ಸೇರುತ್ತದೆ. ಬರೀ ನಮಾಜ್ ಮಾತ್ರ ಆರಾಧನೆ ಅಲ್ಲ. ಒಟ್ಟಿನಲ್ಲಿ ಹೇಳ ಬೇಕೆಂದರೆ ಶುಬ್ರವಾದ ಜೀವನವೇ ಆರಾಧನೆ, ಅಲ್ಲಿ ನಮಾಜು, ಉಪವಾಸ ಎಂಬಂತೆ ಕ...
ಇವುಗಳಿಗೂ ನನ್ನ ಮನ ಸೋತೆ... ಇಸ್ಲಾಂ ಒಳ್ಳೆಯ ethics ಹೇಳಿಕೊಡುತ್ತಿದೆ.. ಕೆಲವು ಸ್ಪಷ್ಟ ಆರಾಧನೆಗಳು ಇಸ್ಲಾಂ ಪರಿಧಿಯ ಹೊರಗಿರುವ ನನ್ನಂಥವರಿಗೆ ಹೇರಿಕೆ ಎನಿಸಬಹುದು. ಆದರೆ ಇಸ್ಲಾಂ ಒಪ್ಪಿದವರಿಗೆ ಹೇರಿಕೆ ಎನಿಸದಿರುವಾಗ, ಭಕ್ತಿ, ಪ್ರೀತಿಯಿಂದ ಅನುಸರಿಸುತ್ತಿರುವಾಗ ಅವರು ಧನ್ಯರೇ ಹೊರತು ಭಾಧಿತರಲ್ಲ..
# ಇಸ್ಲಾಮಿನ ಹೇಳಿಕೆ "ಮನುಷ್ಯನು ಆರಾದಿಸಲಿಕ್ಕಾಗಿಯೇ ಸೃಷ್ಟಿಸಲ್ಪಟ್ಟವನು, ಲೋಕವೇ ಮಾನವನಿಗಾಗಿ ಸಂವೃದ್ದಿಗೊಳಿಸಲ್ಪಟ್ಟಿದೆ, ಅಣು ಮಾತ್ರ ಒಳಿತಿಗೂ, ಅಣುಮಾತ್ರ ತಪ್ಪಿಗೂ ತಕ್ಕುದಾದ ಪ್ರತಿಫಲ ನ್ಯಾಯ ತೀರ್ಮಾನದ ದಿನ ಸಿಗುತ್ತದೆ, ಅದರ ನಂತರ ಸಾಶ್ವತ ಜೀವನವಿದೆ"
ಆರಾಧನೆ ಪದಕ್ಕೆ ನಿಮ್ಮ ವ್ಯಾಖ್ಯಾನ ಕಂಡ ಮೇಲೆ "ಆರಾಧಿಸಲಿಕ್ಕೆಂದೇ ಸೃಷ್ಟಿಸಲ್ಪಟ್ಟವನು" ಎಂಬ ಮಾತಿಗೆ ಅಭ್ಯಂತರವೇನೂ ಇಲ್ಲ. ಆದರೆ "ಲೋಕವೇ ಮಾನವನಿಗಾಗಿ ಸಂವೃದ್ದಿಗೊಳಿಸಲ್ಪಟ್ಟಿದೆ" ಎಂಬ ಮಾತನ್ನ ಒಪ್ಪುವುದು ಕಷ್ಟ. ಮಾನವ ಬುದ್ದಿವಂತ ಜೀವಿ ಮತ್ತು ಲೋಕವನ್ನೇ ಆಕ್ರಮಿಸಿಕೊಂಡಿದ್ದಾನೆ.. ಆದರೆ ಮಾನವನ ಹೊರತಾಗಿ ಅಸಂಖ್ಯ ಜೀವ ಸಂಕುಲಗಳು, ಮಾನವನ ಉಗಮಕ್ಕೆ ಮೊದಲಿನಿಂದಲೂ ಭೂಲೋಕದಲ್ಲಿವೆ, ಮಾನವನ ...
ಇನ್ನು ಒಳಿತು ಕೆಡುಕುಗಳಿಗೆ ನ್ಯಾಯತೀರ್ಮಾನದ ದಿನದ ಬಗ್ಗೆ ಹೇಳಿದ್ದೀರಿ.. ನೀವದನ್ನ ನಂಬುತ್ತೀರಿ, (ನಾಸ್ತಿಕರನ್ನುಳಿದು) ನಾವೂ ಅದನ್ನ ನಂಬುತ್ತೇವೆ. ಆದರೆ ನಮಗೆ ಸ್ವರ್ಗ, ನರಕ, ಮರ್ತ್ಯವೆಂಬ 3 ಲೋಕಗಳಿದ್ದರೆ, ನಿಮಗೆ ಸ್ವರ್ಗ ನರಕಗಳೆರಡೇ ಲೋಕ. ಇದೊಂದು ನಂಬಿಕೆಯ ಪ್ರಶ್ನೆ ಅಷ್ಟೇ. ಆ
ನಮ್ಮ ಪುನರ್ಜನ್ಮ ಸಿದ್ದಾಂತ ಮತ್ತು ನಿಮ್ಮ ನ್ಯಾಯನಿರ್ಣಯ ದಿನದ ಸಿದ್ದಾಂತ ಎರಡೂ ಇರುವುದು ನೀವು ಹೇಳುವ ಮಧ್ಯಮರಿಗಾಗಿ ಅಷ್ಟೇ ಎಂದು ನನ್ನ ಅಭಿಮತ.. ನ್ಯಾಯ ನೀತಿಯಲ್ಲಿ ಬದುಕಬಲ್ಲ ಸಾತ್ವಿಕನಿಗೆ ಸ್ವರ್ಗದ ಆಸೆ, ಅಥವಾ ಮುಂದಿನ ಜನ್ಮದಲ್ಲಿ ಒಳ್ಳೆಯ ಜೀವನದ ಆಸೆ ಎರಡರ ಆಮಿಷವೂ ಬೇಕಿಲ್ಲ, ಕಳ್ಳನಿಗೆ ನರಕದ ಭಯ, ದುರ್ಬರ ಬದುಕು ಎರಡೂ ಕಾಡಿಸುವುದಿಲ್ಲ.. ಮಧ್ಯಮರು ಯೋಚಿಸಲಾರರು, ಅವರಿಗೊಂದು ಗೈಡ್ ಬ...
ಯಾತ್ರಿಕ 4 July 2011 at 18:06
ಸಂತೋಷ, ನಿಮ್ಮಂತೆ ಕೆಲವರಾದರೂ ಇಸ್ಲಾಮಿನ ಪ್ರೀತಿಯ ನಿಯಮಗಳನ್ನ ಅರಿತು ಇನ್ನಾದರೂ ಇಸ್ಲಾಮನ್ನು ದೂಷಿಸುವುದು ನಿಲ್ಲಿಸಲಿ ಎಂಬ ಮನದಾಳದ ಬಯಕೆ ನನ್ನದು. ಅದೇ ರೀತಿ ಇತರ ಧರ್ಮ ಧೂಷಕರು ಕೂಡಾ. ಕಾರಣ ತಪ್ಪಿಲ್ಲದವನ ಮೇಲೆ ತಪ್ಪು ಆಪಾದಿಸಿದಾಗ ಉಂಟಾಗುವ ವೇದನೆ ಅನುಬವಿಸಿದವನಿಗೆ ಮಾತ್ರ ಗೊತ್ತು. ಬಾರತೀಯನಾದ ಪ್ರತಿಯೊಬ್ಬನೂ ಧರ್ಮ ಜಾತಿ ಮರೆತು ಕೈ ಕೈ ಹಿಡಿದು ದುಷ್ಟರ ವಿರುದ್ದ ಸಮರ ಸಾರುವ, ಈ ಭಾರ...
ಅದೇ ನಿಮ್ಮ ಆ ಕಟ್ಟಿ ಹಾಕಲ್ಪಟ್ಟ ಮನ ನನ್ನ ಮುಂದೆ ಕಾಣುತ್ತಿದೆ, ಅದೇಕೋ ನಾನರಿಯೆ, ತಿಳಿದವನೆಂಬ ಮನಸ್ತಿತಿಯೋ, ಬೇಡವೆಂಬ ನಿರಾಕರಣೆಯೋ, ಎಲ್ಲೋ ಜಾರುವೆನೆಂಬ ಭಯವೋ. ಎಷ್ಟೊಂದು ಚಿಕ್ಕ ವಿಚಾರಗಳೂ ನಿಮ್ಮ ವಾದದಲ್ಲಿ ತಿಳಿಯದವನ ವಾದದಂತೆ ಮುಂದೆ ಬರುತಿದೆ. ಹೇಗೆಂದರೆ ಸಾವಿರ ವರ್ಷಗಳ ಹಿಂದೆ ಭೂಮಿಯ ಸ್ವರೂಪದ ಬಗ್ಗೆ ಇಸ್ಲಾಮ್ ಹೇಳಿದಾಗ ಕೇಳಿದ ಅದೇ ವಾದವಿದು, ಅಂದು ಭೂಮಿ ಸಮತಟ್ಟಾಗಿದೆ ಎಂದು ನಂಬಿ...
ಒಬ್ಬ ಪ್ರಜ್ಞಾವಂತನಿಗೆ ತಾನೊಬ್ಬ ಸರಿಯಾದರೆ ಸಾಕು ಎಂಬ ತರ್ಕ ಇರಲಾರದು, ಆದರಿಂದ ನಿಮಗರ್ಥವಾದರೂ ಅರಾದ್ಯನನ್ನು ನಿಮ್ಮೊಳಗೇ ಬೇಕೆನ್ನುವ ಹಠ ಇತರರನ್ನು ಸಂಕುಚಿತಗೊಳಿಸುವುದೇ ವಿನಃ ಇನ್ನಾವುದೇ ಪ್ರಯೋಜನ ನಿಮಗೋ ಅವರಿಗೋ ಇಲ್ಲ. ನೈಜತೆಯನ್ನು ಮರೆತು ಹೊಗುವಷ್ಟು ಸಂಕುಚಿತತೆ ಬೇಕೇ? ನನಗೆ ತಿಳಿದಂತೆ ಆ ಆರೋಪಗಳು ಅವುಗಳನ್ನು ದೈವ ಎನ್ನುವುದಕ್ಕೆ, ಕಾರಣ ಅದರ ಮೂಲಕ ಅನೇಕರಿಗೆ ಸರಿಯಾದ ದೈವವನ್ನು ಮರ...
ಯಾತ್ರಿಕ 4 July 2011 at 18:18
ಕೇರ್‌ ಟೇಕರ್ ಎಂಬುದರ ಬಗ್ಗೆ ಹೇಳುವ ಮೊದಲು ಮಾನವ ಸಮೂಹದ ಸಂಘಜೀವನ, ಅದರ ಕೊಂಡಿಗಳ ಬಗ್ಗೆ ಅರಿತಿರಬೇಕು. ಬಡ್ಡಿಯಿಂದಾಗಿ ಪಾತಳಕ್ಕೆ ತಳ್ಳಲ್ಪಡುವವರು ಬಡವರು, ಅವರರೆಂದೂ ಮೇಲೆ ಬರಲಾಗದೆ ತೊಳಲಾಡುವಂತಾಗಿದೆ. ಧನಿಕರು ಮತ್ತೆ ಮತ್ತೆ ಉನ್ನತಿಯತ್ತ ದಾಪುಗಲಿಡುತ್ತಾ ಸಾಗುವರು. ಇಂತದೊಂದು ನೀಚ ಪ್ರವೃತಿ ನಿಮ್ಮ ಜೊತೆಗಿರಲೇ ಬಾರದು ಎಂಬುದೇ ಇಸ್ಲಾಮಿನ ಈ ನಿಯಮದ ಸಾರ. ಇದೊಂದು ಸೂಕ್ಷ್ಮ ವಿಚಾರ, ನೈಜತ...
"ಆದರೆ ಅಲ್ಲಾಹನೇ ವಿಮೆ ಎಂಬುದನ್ನ ಜನರ ಬಳಿ ಬರುವಂತೆ ಮಾಡುತ್ತಿದ್ದಾನೆ ಎಂಬ ಮನಸ್ಥಿತಿಯೂ ಬಾರದಂತೆ ಮನಸ್ಸನ್ನ ಕಟ್ಟಿಬಿಡುತದ್ದಲ್ಲ" ಎಂಬ ನಿಮ್ಮ ಮಾತು ಹೇಳಿತು, ನಿಜವಾಗಿಯೂ ನೀವೆಂತ ಸ್ವಾರ್ಥಿ! ಇದನ್ನು ಸೃಷ್ಟಿಕರ್ತನ ಮೇಲೆ ಹಾಕಿಬಿಡುವುದೇ!!! ಯಾಕೆ ವಿಮೆ? ಯಾರು ಯಾರಿಗಾಗಿ ಪ್ರಾರಂಬಿಸಿದರು? ಯೊಚಿಸಿ.. ನೀವು ಕೇಳಬಹುದು ಎಲ್ಲವೂ ರಾರಾಜಿಸುತ್ತಿರುವ ಈ ಲೊಕದಲ್ಲೇಕೆ ಈ ರೀತಿಯ ನಿಯಮಗಳ ಪೀಡನೆ ...
"ಲೋಕವೇ ಮಾನವನಿಗಾಗಿ ಸಂವೃದ್ದಿಗೊಳಿಸಲ್ಪಟ್ಟಿದೆ" ಎಂಬ ಮಾತು ನಿಮಗಿಷ್ಟವಾಗಲಿಲ್ಲವೋ ಅಥವಾ ತಪ್ಪೆನಿಸಿದೆಯೋ! ಏನೇ ಆದರೂ ತಪ್ಪಂತೂ ಅಲ್ಲವೇ ಅಲ್ಲ. ಈ ಮಾತಿನ ಅರ್ಥ ನೀವು ನ್ಯಾಯ ನೀತಿ ಕರುಣೆ ಇಲ್ಲದಂತೆ ಲೋಕವನ್ನು ಲೂಟಿ ಹೊಡೆಯಿರಿ ಎಂದಲ್ಲ. ಹೊರತು ಮಾನವನಿಗೆ ಬೇಕಾದವುಗಳೆಲ್ಲವೂ ಇಲ್ಲಿ ಇದೆ, ಅದರಲ್ಲಿ ಒಳಿತು ಕೆಡುಕುಗಳೂ ಇವೆ. ನಾನಾಗಲೇ ಹೇಳಿರುವೆ, ಇರುವೆಗಳ ಗುಂಪ ಬೇರ್ಪಡಿಸುವುದು ಕೂಡ ಇಸ್ಲಾ...
ನಿಮ್ಮ ಬಗ್ಗೆ ನೀವೇನು ಭಾವಿಸಿರುವಿರೋ ನಾ ಕಾಣೆ. ಮದ್ಯಮರಿಗೆ ನಿಯಮಗಳ ಹೇರಿ ಎಲ್ಲೂ ಹೋಗ ಬೇಡಿ, ಕಾರಣ ಅವರಿಗೆ ಅನುಕರಿಸಲು ಆದರ್ಶರು ಬೇಕು, ನಿಯಮಗಳ ಎದೆಗೇರಿಸಿ ಒಳಿತನ್ನು ಸಾರುವ ಸಜ್ಜನರ ಅವಶ್ಯಕತೆ ಇದೆ, ಆದರಿಂದ ಅವರಿಗೆ ಮಾತ್ರ ಸೀಮಿತವಲ್ಲ ನಿಯಮಗಳು. ಕೆಟ್ಟವರಿಗೆ ಬೇಕೇ ಬೇಕು, ಅಲ್ಪವಾದರೂ ಸರಿಯಾದರೆ!!! ಮದ್ಯಮರಿಗೆ ದಾರಿದೀಪವೂ ದುರ್ಜನರಿಗೆ ಆಶಾಕಿರಣವೂ ಆಗಿ ಸಜ್ಜನರ ಇರುವಿಕೆ ಅಗತ್ಯ.ಅದೆ...
ರಾಜಿ 13 July 2011 at 00:53
ನನ್ನ ಪ್ರತಿಕ್ರಿಯೆ ತಡವಾಯಿತು ಕ್ಷಮಿಯಿರಲಿ ಸೋದರ,
#ವಿಜ್ಞಾನ ಎನ್ನುವುದು ಮಾನವ ನಿರ್ಮಿತ, ಅದು ಅವನ ಜ್ಞಾನ ಪರಿಧಿಯೊಳಗೆ ಸುತ್ತುತಿರುತ್ತದೆ, ಒಂದೊಂದು ಅನ್ವೇಷಣೆಯೂ ಅದರದೇ ಆದ ಇತಿ ಮಿತಿಗಳನ್ನೊಳಗೊಂಡಿರುತ್ತದೆ. ಇಂದು ಕಂಡುಕೊಂಡದ್ದು ನಾಳೆ ತಪ್ಪಗುತ್ತಾ, ನಾಳಿನದು ನಾಡಿದ್ದು ತಪ್ಪಾಗಿ ಸಾಗುತ್ತದೆ. ಎಂದೂ ಅದು ಉತ್ತುಂಗಕ್ಕೆ ಏರುವುದೇ ಇಲ್ಲ.
ನಿಜ, ಹಾಗಾಗಿರುವುದುಂಟು. ಇಂದು ಕಂಡು ಕೊಂಡದ್ದು ನಾಳೆ ತಪ್ಪು, ನಾಳಿನದು ನಾಡಿದ್ದು ತಪ್ಪಾಗಿದ್ದುಂಟು.. ಸತ್ಯದಲ್ಲಿ ತತ್ಕಾಲೀನ ಸತ್ಯ ಮತ್ತು ಸಾರ್ವಕಾಲಿಕ ಸತ್ಯ ಎಂಬ ಎರಡು ಬಗೆಗಳಿವೆ.. ಭೂಮಿ ಸಮತಟ್ಟು ಎಂಬ ಸತ್ಯ, ನಂತರ ಅದು ಗೋಳ ಎಂಬ ಸತ್ಯ, ನಂತರ ಇಲ್ಲ ಅದು ಕಿತ್ತಳೆ ಹಣ್ಣಿನಂತೆ ನಡುವೆ ಗೋಳ ಮತ್ತು ಧ್ರುವ ಪ್ರದೇಶದಲ್ಲಿ (Poler Regions) ಸಮತಟ್ಟು ಎಂಬ ವಾದಗಳು ಬಂದು ತತ್ಕಾಲೀನ ಸತ್ಯಗಳ...
ಅಂತೆಯೇ 2+2=4 ಎಂಬುದು ಸಾರ್ವಕಾಲಿಕ ಸತ್ಯ.. ಅದು ದಿನ, ಕಾಲ, ಸ್ಥಳಗಳಿಗನುಸಾರವಾಗಿ ಬದಲಾಗದು. ದಿನಕ್ಕೆ 24ಗಂಟೆಗಳ ವಿಂಗಡಣೆ ನಮ್ಮ ಅನುಕೂಲವಷ್ಟೆ… ದಿನ ರಾತ್ರಿಗಳು ಭೂಮಿ ಸೂರ್ಯ ಚಂದ್ರರಿರುವರೆಗೂ ಇರುವ ಸತ್ಯ.. ಅಂದರೆ ದಿನ-ರಾತ್ರಿಗಳನ್ನ ಲೆಕ್ಕ ಹಾಕುವುದು ಸೂರ್ಯನ ಸುತ್ತ ಭ್ರಮಿಸುತ್ತಾ ಪರಿಭ್ರಮಿಸುವ ಭೂಮಿಯ ಒಂದು ಭ್ರಮಣಕ್ಕೆ ಒಂದು ದಿನವೆಂದು ಹೆಸರು… (ಒಂದು ಪರಿಭ್ರಮಣಕ್ಕೆ = 1 ವರ್ಷ.) ...
ಪ್ರಶ್ನೆ ಇರುವುದು ಹಾಗೆ ಏಳು ದಿನಗಳ ಸೃಷ್ಠಿಕಾರ್ಯದಲ್ಲಿ ಭಗವಂತ ಶಕ್ತನೋ ಅಲ್ಲವೋ ಎಂಬುದರಲ್ಲಲ್ಲ… ಆ ಪರಾಶಕ್ತಿ ಕ್ಷಣ ಮಾತ್ರದಲ್ಲಿ ಸೃಷ್ಠಿಕಾರ್ಯವನ್ನ ನಡೆಸಿತು ಎಂದರೂ ನನಗೆ ತಕರಾರಿಲ್ಲ.… ಆದರೆ ಸೂರ್ಯನ ಅಸ್ತಿತ್ವದಲ್ಲಿ ಇರದಿದ್ದಾಗ ದಿನ ರಾತ್ರಿಗಳ ಲೆಕ್ಕ ಹಾಕುವುದು ಅಸಂಬದ್ದ ಎನ್ನುವುದು ನನ್ನ ನಂಬಿಕೆ. ಏಕೋ ನನ್ನ ವಿಚಾರಶಕ್ತಿ ಅದನ್ನ ಒಪ್ಪಲು ಬಿಡುತ್ತಿಲ್ಲ.. ಒಪ್ಪದಿರಲು ನನಗೇನೋ ಸ್ವಾತ...
ರಾಜಿ 13 July 2011 at 00:54
ಇನ್ನು ಬಡ್ಡಿ ವ್ಯವಹಾರದ ಬಗ್ಗೆ ನಾನಾಗಲೇ ಹೇಳಿದೆ… ನಾನು ಬಹುವಾಗಿ ಮೆಚ್ಚಿದ ಇಸ್ಲಾಂನ ನಿಯಮವದು. ಅದನ್ನ ಇಡಿ ಇಡಿಯಾಗಿ ಚಂದದಲ್ಲಿ ವಿಮರ್ಶಿಸಿ ಬರೆದಿದ್ದೀರಿ… ಬರವಣಿಗೆ ನನ್ನ ಮನಸೂರೆ ಹೊಡೆಯಿತು…
ಆದರೆ ಒಂದು ವಿಚಾರ; ನನ್ನ ಗೆಳೆಯ, ದೈವ ನಮ್ಮ ಕುಟುಂಬದ ಕೇರ್ ಟೇಕರ್ ಆದ್ದರಿಂದ ವಿಮೆ (Insurance) ಮಾಡಿಸುವುದು ದೈವದ ಮೇಲೆ ಅಪನಂಬಿಕೆಯಿದ್ದಂತೆ ಎಂದು ಅದಕ್ಕೊಂದು "ಎಲೆ ತಿಂದು ಹೊಟ್ಟೆ ನೋವು ತೀರಿಸಿಕೊಳ್ಳಲ್ಲು ಪ್ರಯತ್ನಿಸಿದ ಪ್ರವಾದಿಯೊಬ್ಬರ ಕಥೆ" ಹೇಳಿದ್ದು ಏಕೋ ಮನದಾಳಕ್ಕೆ ಇಳಿಯುತ್ತಿಲ್ಲ. ನೀವೂ ಮದರಸದಲ್ಲಿ ಆ ಕಥೆ ಕೇಳಿರಬಹುದು, ನಾನೂ ಆ ಕಥೆಯನ್ನ ನನ್ನ ಹಿಂದಿನ ಪ್ರತಿಕ್ರಿಯೆಯಲ್ಲಿ ...
ವಿಮೆ (Insurance) ಮಾಡಿಸುವುದು ನಮ್ಮ ದುರ್ಮರಣವೇನಾದರೂ ಸಂಭವಿಸಿದರೆ, ಅಥವಾ ನಾವು ಕುಟುಂಬ ನಿರ್ವಹಣೆ ಮಾಡಲಾಗದ ಸ್ಥಿತಿ ತಲುಪಿದರೆ ನಮ್ಮನ್ನು ನಂಬಿದ ಕುಟುಂಬ ಬೀದಿಪಾಲಾಗದಿರಲಿ. ಸ್ವಲ್ಪ ಆರ್ಥಿಕವಾಗಿ ಚೇತರಿಸಿಕೊಳ್ಳಲಿ ಎಂದು… ನಿಜ, ನೀವು ಹೇಳಿದಂತೆ "ಸಾವಿರಾರು ಜನ ಒಂದು ಹೊತ್ತಿನ ಊಟ ಇಲ್ಲದೆ ನೀರು ಕುಡಿದು(ಅದು ಇಲ್ಲದವರಿದ್ದಾರೆ) ಬದುಕುವಾಗ ಈ ಸ್ವಾರ್ಥಿಗಳಿಗೆ ತನ್ನ ನಾಳೆಯ ಚಿಂತೆ!!!" ...
#ಒಂದು ಗಿಡ ನಡುವವನಿಗಿರುವ ಒಳಿತನ್ನು ಇಸ್ಲಾಮಿನಲ್ಲಿ ಹೇಳಿದ ರೀತಿ, ಆ ಮರದಿಂದಾಗುವ ಪ್ರತಿ ಅಣುಮಾತ್ರದ ಉಪಯೋಗಕ್ಕೂ ಈ ಬೆಳೆಗಾರನಿಗೆ ದಾನದ ಪ್ರತಿಫಲ.
ಎಂತಹಾ ಅದ್ಭುತ ವಿಚಾರಧಾರೆ… ನಾನಂತೂ ಮಾರು ಹೋದೆ… ನಿಜ, ಯಾವ ಪರಿಸರವಾದಿಯೂ ಈ ಮಟ್ಟಕ್ಕೆ ಮಾತನ್ನ ಹೇಳಲಾರ. (ಪರಿಸರವಾದಿ ಧಾರ್ಮಿಕ ನಾಯಕನಲ್ಲದ್ದಿರಿಂದ ದಾನದ ಪ್ರತಿಫಲ, ಪುಣ್ಯ ಮೊದಲಾದ ವಿಷಯಗಳು ಅವನಿಗೆ ಅತೀತ ಎಂಬ ಮಾರ್ಜಿನ್ ಅವನಿಗೆ ಕೊಡಬಹುದಾದರೂ ನಾನು ಈ ಬಗ್ಗೆ ಹೀಗೆ ಯೋಚಿಸಿದ ಮಹಾ ಮಸ್ತಿಷ್ಕಕ್ಕೆ ಬೆರಗಾದೆ) ನಿಜಕ್ಕೂ ನೀವು ಪ್ರತಿಬಾರಿ ಬರೆದಾಗಲೂ ಒಂದಲ್ಲಾ ಒಂದು ಈ ರೀತಿಯ ಮಾತುಗಳಿಂದ ಮ...
ನಿಮ್ಮ ಅನಿಸಿಕೆಯ ಕೊನೆಯ ಪ್ಯಾರವನ್ನ ಅದೆಷ್ಟು ಸಲ ಓದಿದೆನೋ ಲೆಕ್ಕವಿಲ್ಲ… ಪ್ರತಿ ಪದ ಮುತ್ತಿನ ಹಾರ, ಅದಕ್ಕೆ ಬದಲಿ ಹೇಳುವ ಜ್ಞಾನವಾಗಲೀ, ಬುದ್ದಿಯಾಗಲೀ ನನಗಿಲ್ಲವೇ ಇಲ್ಲ… ನೀವು ನನ್ನ ಮೇಲೆ ಆರೋಪಿಸುವ ಯುಕ್ತವಾದ ಕಣ್ಣು ಮುಚ್ಚಿ ನಿಮ್ಮ ಆ ಮಾತುಗಳಿಗೂ ಒಪ್ಪಿಗೆ ಸೂಚಿಸಿತು.
ಯಾತ್ರಿಕ 20 July 2011 at 19:16
ನನಗೇನೋ ಸಂತಸ, ಸಾರ್ಥಕತೆ. ಶೇ 50 ರಷ್ಟಾದರೂ ನೀವು ಅರ್ಥಮಾಡಿಕೊಳ್ಳುತ್ತಿದ್ದೀರ ಎಂದು. ಸ್ಪಷ್ಟವಾದ ಒಳಿತನ್ನು ಸ್ವೀಕರಿಸುವ ನಿಮ್ಮ ಗುಣಕ್ಕೆ ಧನ್ಯವಾದಗಳು. ಕ್ಲಿಷ್ಟವಾದ ಒಳಿತನ್ನು ಅರಿಯುವವರಾಗುವಿರ ಎಂಬ ನಂಬಿಕೆ, ಹಾರೈಕೆ.
ನೀವೆಷ್ಟು ವಿರುದ್ದವಾಗಿ ಯೊಚಿಸುವಿರ ಎಂಬುದು ನಿಮ್ಮ "ಭೂಮಿ-ಸೂರ್ಯ ಹುಟ್ಟಿದ ನಂತರವಷ್ಟೇ ದಿನಮಾನಗಳ ಲೆಕ್ಕ. ದೈವ ಸೃಷ್ಠಿ 7 ದಿನಗಳಲ್ಲಿ ನಡೆದಿದ್ದರೆ ಆಗಿನ್ನೂ ಸೂರ್ಯನ ಸೃಷ್ಠಿಯೇ ಆಗಿರಲಿಲ್ಲ. ದಿನ ರಾತ್ರಿಗಳ ಗಣನೆ ಹೇಗೆ" ಎಂಬ ಪ್ರಶ್ನೆ ಹೇಳಿತು. ಮಾನವನಿಗದು ಸರಿ, ಆದರೆ ಸೃಷ್ಟಿಕರ್ತನಿಗೆ ಅದು ಬಾದಕವಲ್ಲ ಪ್ರಿಯ ಸಹೋದರ. ಸ್ರುಷ್ಟಿಸುವಾತನಿಗೆ ಅವನ ಸೃಷ್ಟಿಯ ಬಗ್ಗೆ ಅರಿವಿರುವುದಿಲ್ಲವೇ. ಆದ...
ಬಡ್ಡಿಯ ವಿಷಯ ಒಪ್ಪಿರುವ ನಿಮಗೆ ಒಳಿತಾಗಲಿ. ಹಾಗೆಯೇ ಯೋಚಿಸಿ, ವಿಮಾ ಹಣ ಎಲ್ಲಿ ಹೊಗುತ್ತದೆಂದು, ಹೆಚ್ಚಿನದು ಬಡ್ಡಿಯ ಕಡೆಯಲ್ಲವೇ? ಹಾಗೆಯೇ ನೀವು ಒಂದು ಸ್ವೀಕರಿಸಿ ಇನ್ನೊಂದ ನಿರಾಕರಿಸುವಾಗ ಉಂಟಾಗುವ ಕಲರವವೇ ಇದು. ಇಲ್ಲಿ ನಾನು ಕಂಡದ್ದು ನಿಮ್ಮ ಸಂಕುಚಿತತೆ, ಯಾರು ಏನೇ ಆದರೂ ನನ್ನವರು ಸುಕವಾಗಿರಬೇಕು ಎಂಬ ಮನಸ್ಸು! ಅದು ಇರಬೇಕು ಆದರೆ ಅದು "ಬೆಂಕಿ‌ ಹಿಡಿದ ಗಡ್ಡದಿಂದ ಬೀಡಿ ಹೊತ್ತಿಸಿದಂತಿರ...
ಇಲ್ಲೇ ನಿಮ್ಮ ಒಂದು ಕಾಮೆಂಟ್ ಬಗ್ಗೆ ಬರೆದು ಬಿಡುವೆ ಏಕೆಂದರೆ ನನಗತ್ತಿರ ಇರುವವರ ತಪ್ಪ ಕಂಡು ಸುಮ್ಮನಿರಲು ಆಗುತಿಲ್ಲ. ಯಮುನೆಗೆ ದಕ್ಕದ ಬಾಗ್ಯ ದಕ್ಕಿದ ಹೆಣ್ಣಿನ ವಾರ್ತೆ ನಿಮಗೆಷ್ಟು ಸಂತೋಷ ತಂದಿದೆಯೋ ತಿಳಿಯದು! ಆದರೆ ಅದರ ಸುತ್ತಲಿರುವ ಆರು ದಿಕ್ಕುಗಳ ಯೋಚನೆ ಇರಲಿ ಸಹೋದರ. ಹೀಗಾದಲ್ಲಿ ರಕ್ಷಕ ಬಕ್ಶಕರೆಂಬ ಬೇದವಿಲ್ಲ! ನಿಜ ನಿಮ್ಮ ವಿಸ್ತೃತ ಮನಸ್ಸು(ಬ್ರಾಡ್‌ ಮೈಂಡ್) ಇದನ್ನೆಲ್ಲ ಮಾನವನ ಮೂ...
ರಾಜಿ 26 July 2011 at 17:52
ಪ್ರಿಯ ಆಲಿಫ್, ನನಗೆ ಆರಾಧ್ಯನಲ್ಲಿ ನಂಬಿಕೆ ಇದೆ. ನಾನಾಗಲೇ ಬರೆದಿದ್ದೆ. "ಆ ಪರಾಶಕ್ತಿ ಕ್ಷಣ ಮಾತ್ರದಲ್ಲಿ ಸೃಷ್ಠಿಕಾರ್ಯವನ್ನ ನಡೆಸಿತು ಎಂದರೂ ನನಗೆ ತಕರಾರಿಲ್ಲ.… ಆದರೆ ಸೂರ್ಯನ ಅಸ್ತಿತ್ವದಲ್ಲಿ ಇರದಿದ್ದಾಗ ದಿನ ರಾತ್ರಿಗಳ ಲೆಕ್ಕ ಹಾಕುವುದು ಅಸಂಬದ್ದ ಎನ್ನುವುದು ನನ್ನ ನಂಬಿಕೆ." ಎಂದು.
ಆ ಏಳು ದಿನಗಳು ಕೇವಲ ಮಾನವ ಅರ್ಥ ಮಾಡಿಕೊಳ್ಳಲು ಮಾನವನ ಲೆಕ್ಕಾಚಾರದ ಆಳತೆಯಲ್ಲಿ ಎಂದು ಮಾತ್ರವಾದರೆ ಸರಿಯೇ.. ಆಗ ಒಂದು ಧರ್ಮದ(faith) ನಂಬಿಕೆಯಾಗಿ ಅದನ್ನ ಗೌರವಿಸುವೆ. ಆದರೆ ಸೃಷ್ಠಿಮೂಲವನ್ನ ಹುಡುಕ ಹೊರಟ ಹಲವಾರು ಸಂಸ್ಕೃತಿಗಳು ಹುಡುಕಾಡಿದ ದಾರಿಗಳಲ್ಲಿ ಅರಬಸ್ತಾನದ ಜನರು (ಬೈಬಲ್‌ನ ಹಳೆ ಒಂಡಬಂಡಿಕೆ ಇಂದ ಕುರಾನ್‌ವರೆಗೆ ದೈವವಾಣಿಯೆಂದು) ಕಂಡುಕೊಂಡ, ನಂಬಿದ ಸತ್ಯವದು. (ಸಾರ್ವಕಾಲಿಕವೋ, ತ...
#ಇನ್ನು ವಿಶ್ವಾಸ ಎಂಬ ಲೆಕ್ಕಕ್ಕೆ ಬಂದರೆ 1+1=3 ಎಂದರೂ (ಉದಾಹರಣೆಯಷ್ಟೆ, ಎಂದೂ ಸತ್ಯಮಾತ್ರವಿರುವುದು) ವಿಶ್ವಾಸ ಇಡುವವನೇ ವಿಶ್ವಾಸಿ
ಹೌದು ನನ್ನ ಗೆಳೆಯ ಕಲೀಂ ಕೂಡ ಇದನ್ನೇ ಬಾರಿ ಬಾರಿ ಹೇಳುತ್ತಾನೆ. ಅವನೊಡನೆಯ ಸಂಭಾಷಣೆಯ ತುಣುಕೊಂದು ನಿಮ್ಮ ಮುಂದೆ ಪ್ರಸ್ತುತ ಪಡಿಸುವೆ..
ಕಲೀಂ: ವಿಶ್ವಾಸ ಇಡಬೇಕು. ಹೇಳಿದಂತೆ ನಡೆಯಬೇಕು, ಪ್ರತಿಯೊಂದಕ್ಕೂ ನಿಯಮವಿದೆ. ಕುಳಿತೇ ನೀರು ಕುಡಿಯಬೇಕು, ಮೂರು ಗುಟುಕಿನಲ್ಲಿ ನೀರು ಕುಡಿಯಬೇಕು. ಸೀನಿದಾಗ "ಅಲ್ ಹಮ್ ದುಲಿಲ್ಲಾ " ಹೇಳಬೇಕು. ಹೀಗೆ ಪ್ರತಿಯೊಂದಕ್ಕೂ ನಿಯಮವಿದೆ. ನಮ್ಮ ಒಳ್ಳೆಯದಕ್ಕೇ ನಿಯಮ. ಪ್ರಶ್ನಿಸದೇ ಪಾಲಿಸಿದರೆ ಸರಿ. ಪ್ರಶ್ನಿಸಿ, ತಿಳಿದು ನಂತರ ಅನುಸರಿಸಿದರೆ ನಂಬಿಕೆಗೆ ಬೆಲೆ ಎಲ್ಲಿ???
ಕುಳಿತು ನೀರು ಕುಡಿಯಬೇಕು, ತಕರಾರಿಲ್ಲ.. ಒಳ್ಳೆಯದಕ್ಕೇ ಹೇಳಿರಬಹುದು. ಮೂರು ಗುಟುಕಿನಲ್ಲಿ ಕುಡಿಯಬೇಕು, ಏನೋ, ಮಕ್ಕಳಿಗೆ ಹೇಳಿದಂತೆ ಆಯಿತು.. ಆದರೂ ಪರವಾಗಿಲ್ಲ.. ಏನೋ ಒಟ್ಟಿಗೆ ಗಟಗಟ ಕುಡಿದು ನೆತ್ತಿಗೆ ಹತ್ತದಿರಲಿ ಎಂದಿರಬೇಕು. ನೀರು ಹೆಚ್ಚಿಗೆ ಬೇಕಾದರೋ?! ಹೋಗಲಿ ಆ ಪ್ರಶ್ನೆ ಬೇಡ… ನನ್ನದು ಅಧಿಕ ಪ್ರಸಂಗ ಎನಿಸಿಕೊಳ್ಳುತ್ತದೆ. (ನೀರು ಹೇಗೆ ಕುಡಿಯಬೇಕು ಎಂದು ಧರ್ಮಗ್ರಂಥದ ಮೂಲಕ ಹೇಳಿಸಿದ...
ಕಲೀಂ: ಭಗವಂತನಿಗೆ ಧನ್ಯವಾದ ಎಂದಂತೆ.
ನಾನು: ಸೀನಿದಾಗ ಏಕೆ ಹೇಳಬೇಕು? ಭಗವಂತನಿಗೆ ಧನ್ಯವಾದ ಹೇಳುವಂತಹುದು ಏನಿದೆ ಅದರಲ್ಲಿ..??
ಕಲೀಂ: ಇದನ್ನೇ ನಂಬಿಕೆ ಎನ್ನುವುದು. ನಿಯಮವಿದೆ. ಹೇಳಬೇಕು. ಅಷ್ಟೇ…
ನಾನು: ಕಾರಣ ತಿಳಿಯದೇ ಏಕೆ ಹೇಳಬೇಕು??? ನಿಯಮ ಮಾಡಿದ ಮಸ್ತಿಷ್ಕಕ್ಕೇನೋ ಕಾರಣವಿರಬೇಕು. ಕಾರಣ ತಿಳಿಯದೆ ಪಾಲಿಸಿದರೆ ಮೂರ್ಖತೆ ಎನಿಸುತ್ತದೆ.
ಕಲೀಂ: ಕಾರಣ ತಿಳಿಯದೆಯೂ ಪಾಲಿಸುವುದು ನಂಬಿಕೆ, ನಿನ್ನ ಪ್ರಶ್ನೆಗೆ ಉತ್ತರಿಸಲೇ ನಾನು ಈ ವಿಚಾರವೆಳೆದೆ. ಸೀನುವುದು ಒಳ್ಳೆಯ ಸುಖಕರವಾದ ಅನುಭೂತಿಯೇನೂ ಅಲ್ಲ ಹಾಗಿರುವಾಗ ಅದಕ್ಕೆ ಭಗವಂತನಿಗೆ ಧನ್ಯವಾದ ಏಕೆ ಹೇಳಬೇಕು. ಇದು ಬಹಳ ಜನರಿಗೆ ಗೊತ್ತಿಲ್ಲ. ಒಬ್ಬ ಸರ್ಜನ್ ಊಹೆ ನಿನ್ನ ಮುಂದಿಡುತ್ತಿದ್ದೇನೆ. ಸೀನಿದಾಗ ಹೃದಯ ನಿಂತು ಬಿಡುತ್ತದೆ ಎಂದು ಗೊತ್ತಿರಬಹುದು. ಆ ಸರ್ಜನ್ ಒಂದು ತೆರೆದೆ ಹೃದಯದ ಶಸ...
ನನಗೂ ಅವನ ಮಾತು ಚಂದ ಎನಿಸಿತು. ಆದರೆ ಒಪ್ಪಿಕೊಳ್ಳಲಾಗಲಿಲ್ಲ.. ನಾ ಬೆಳೆದ ಸಂಸ್ಕೃತಿಯಲ್ಲಿ ಪ್ರಶ್ನಿಸುವುದನ್ನ ಪ್ರೋತ್ಸಾಹಿಸಲಾಗುತ್ತದೆ.. ರಾಮಾಯಣ ಮಹಾಭಾರತಗಳಲ್ಲಿ ಕಥೆ ಮುಖ್ಯವಲ್ಲ.. ಅಲ್ಲಿ ನಡೆಯುವ ಪ್ರಶ್ನೋತ್ತರ sessions, (ಯಕ್ಷ ಪ್ರಶ್ನೆ, ಅಜಗರನ ಕಥೆ, ವಸ್ತ್ರಾಪಹರಣದ ವಿಫಲ ಯತ್ನದ ನಂತರ ದ್ರೌಪದಿಯ ಪ್ರಶ್ನೆ, ಅಗ್ನಿಪರೀಕ್ಷೆಯಲ್ಲಿ ಸೀತೆಯ ಮಾತುಗಳು) ಅವುಗಳಿಗಾಗಿ ಕಥೆ ಅಷ್ಟೇ.. ಆ ಗ್...
ರಾಜಿ 26 July 2011 at 18:02
ವಿಮೆಯ ಬಗ್ಗೆ ವಿಮೆಯ ಹಣ ಹೋಗುವುದರ ಬಗ್ಗೆ ನಿಮ್ಮ ತಾರ್ಕಿಕ ನೆಲೆಗಟ್ಟನ್ನ ವಿವರಿಸಿದ್ದೀರಿ.. ವಿಮೆಗೆ ಹಣ ಹಾಕಿದರೆ ಬಡ್ಡಿ ವ್ಯವಹಾರಕ್ಕೇ ಹೋಗುತ್ತದೆ, ಆ ಕಾರಣ ಪರೋಕ್ಷವಾಗಿ ಬಡ್ಡಿ ವ್ಯವಹಾರಕ್ಕೆ ಪ್ರೋತ್ಸಾಹಿಸಿದಂತೆ , "#ಬೆಂಕಿ‌ ಹಿಡಿದ ಗಡ್ಡದಿಂದ ಬೀಡಿ ಹೊತ್ತಿಸಿದಂತಿರಬಾರದು", ಎಂಬ ಮಾತು ಮನ ತಟ್ಟಿತು. ಆದರೆ ನೀವು ತೋರಿದ ಆ ಚಂದದ ಕನಸಿನ ಲೋಕ ನಿಜವಾಗುವವರೆಗೂ ವಿಮೆ ನಾವು ನಮ್ಮವರಿಗೆ ತೋ...
ಇನ್ನು ಯಮುನೆಯ ಕಥೆ. ನಾನು ಯಮಿ ಸೋತಳು, ಆದರೆ ಇವಳು ಗೆದ್ದಳು ಎಂದು ಬರೆದದ್ದು ವ್ಯಂಗ್ಯವಾಗಿ. ನನಗೆ ನೆನಪಾಯಿತಷ್ಟೇ, ನಾನು ಸಮರ್ಥಿಸ ಹೋಗಲಿಲ್ಲ.. ಸಗೋತ್ರ ವಿವಾಹವನ್ನೇ ಖಂಡತುಂಡ ವಿರೋಧಿಸುವ ನಾನು ಇದನ್ನ ಸಮರ್ಥಿಸುವುದಿಲ್ಲ. ಪುರಾಣದ ಆ ಕಥೆಯಲ್ಲಿ ಯಮ ಯಮಿಯರ ನಡುವೆ ಒಂದು ವಾಗ್ವಾದವೇ ಇದೆ. (ಯಮ-ಯಮಿಯರ ವಾಗ್ವಾದದ ಪೂರ್ಣಪಾಠವನ್ನ ಇನ್ನೂ ಹುಡುಕುತ್ತಿದ್ದೇನೆ…) ಅದೊಂದು ಹೃದಯ ವಿದ್ರಾವಕ ಕಥೆ...
ಇಂಥದ್ದೇ ಇನ್ನೊಂದು ಕಥೆ ಇತಿಹಾಸದ್ದು… ಕ್ಲಿಯೋಪಾತ್ರ, ಈಜಿಪ್ಟಿನ ಸಾಮ್ರಾಜ್ಞಿ. ಅವಳ ಮೊದಲ ಗಂಡ ಅವಳ ಸ್ವಂತ ಆಣ್ಣನೇ ಆಗಿದ್ದ.. ಅಲ್ಲಿನ ಅಂದಿನ ಸಂಸ್ಕೃತಿಯಲ್ಲಿ ಅದು ಊರ್ಜಿತವೂ ಸಹ ಆಗಿತ್ತು. (ನಂತರ ತನ್ನ ಗಂಡ (ಅಣ್ಣ)ನನ್ನ ಕೊಲ್ಲಿಸಿದಳು/ಅಥವಾ ಇನ್ಯಾವುದೋ ಪಿತೂರಿಯಲ್ಲಿ ಅವನು ಸತ್ತ, ನಂತರ ಒಂದು ರಾಜತಾಂತ್ರಿಕ ನಿರ್ಧಾರದಲ್ಲಿ ಜೂಲಿಯಸ್ ಸೀಸರ್‌ನನ್ನ ಮದುವೆಯಾದಳು, ಅವನ ಕೊಲೆಯ ನಂತರ ಆಂಟೋನ...
ಖಂಡಿತವಾಗಿಯೂ ನಾನು ಯಮ-ಯಮಿಯ ವೈವಾಹಿಕ ಸಂಬಂಧವನ್ನ ಸಮರ್ಥಿಸಲಿಲ್ಲ. ನಮಗೂ ಪ್ರಾಣಿಗಳಿಗೂ ವ್ಯತ್ಯಾಸವಿರಬೇಕು… ದೈವಕ್ಕಾಗಿ, ಧರ್ಮಕ್ಕಾಗಿ ಅಲ್ಲದಿದ್ದರೂ, ಮಾನವೀಯತೆ ನಾಗರೀಕತೆಗಳಿಗಾಗಿ…
hilll 1 September 2011 at 13:37
ಸೊಗಸಾದ ಚರ್ಚೆಗಳು...
ರಾಜಿ 2 September 2011 at 22:13
ಧನ್ಯವಾದಗಳು hilll, ಅನಘ ಮಾನಸಕ್ಕೆ ಭೇಟಿ ಕೊಡುತ್ತಿರಿ.. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಹಂಚಿಕೊಳ್ಳಿ. ತಪ್ಪುಗಳನ್ನು ತಿದ್ದಿ. ಸರಿಯೆನಿಸಿದ್ದನ್ನ ಪ್ರೋತ್ಸಾಹಿಸಿ.
Anonymous 29 October 2011 at 23:56
Nanage ondu doubt ide... Lingayataru Hindugale? Athava avara swamigalu helidante BASAVA Dharama Bereye ondu dharmave. Adannu poshisuva Lingayata nayakarugalu entavaru?
Anonymous 30 October 2011 at 00:00
Naanu Hindu... Aadre ondu visya antu naavu tilkobeku, Jagattinalli Muslimaru namaginta tumbaa Jasti iddare...Ellara devaroo onde, Naanu Neevu namma devare shreshta ennuvudu tappaguttade.
ರಾಜಿ 30 October 2011 at 22:34
ಪ್ರಿಯ Anonymous, ಮೊದಲು ನಿಮ್ಮ ಲಿಂಗಾಯತರು ಹಿಂದೂಗಳೇ ಪ್ರಶ್ನೆಯನ್ನ ನೋಡಿಬಿಡೋಣ, ಲಿಂಗಾಯತರೂ ಹಿಂದೂಗಳೇ ಎಂದು ನನ್ನ ಅಭಿಪ್ರಾಯ. ಕಾರಣವಿಷ್ಟೇ. ಹಿಂದೂ ಎನ್ನುವುದು ಮತವಲ್ಲ... ಒಂದು ಜೀವನ ವಿಧಾನ. ಹಲವಾರು ಪರಂಪರೆ ಮತ್ತು ಸಂಸ್ಕೃತಿಗಳ ಸಮುದಾಯ. ಹಿಂದೂಗಳು ಮೂರ್ತಿ ಪೂಜೆ ಮಾಡುತ್ತಾರೆ, ಮತ್ತು ಮಾಡದಿರುವವರನ್ನೂ ಮಾನ್ಯ ಮಾಡುತ್ತಾರೆ. ಸಾಕಾರ ಮತ್ತು ನಿರಾಕಾರಗಳೆರಡೂ ಪರಂಪರೆಗಳೂ ಇಲ್ಲಿ ಮಾ...
ದೇವನಿಲ್ಲ ಎಂಬ ಚಾರ್ವಾಕ (ನಾಸ್ತಿಕ) ಸಿದ್ದಾಂತವನ್ನ ಮಂಡಿಸಿದವನು ದೇವರಾಜನೆಂದು ಪುರಾಣಗಳಲ್ಲಿ ಬಣ್ಣಿಸಲ್ಪಟ್ಟ ಇಂದ್ರ ಎಂಬ ಹೇಳಿಕೆಯೂ ಇದೆ. ಬಸವ ಧರ್ಮ ಬೇರೆಯಾಗಿ ಕಾಣುವುದು, ವರ್ಣಾಶ್ರಮ ಸಿದ್ದಾಂತವನ್ನ ಒಪ್ಪಲಿಲ್ಲ, ಮನುಜರೆಲ್ಲಾ ಒಂದೇ ಎಂಬ ತತ್ವವನ್ನ ಸಾರಿತು, ಬಸವಣ್ಣನವರು ಅಂತರ್ಜಾತಿ ವಿವಾಹಗಳನ್ನು ಮಾಡಿಸಿ ಜಾತಿ ನಿರ್ಮೂಲನೆಗೆ ಪ್ರಯತ್ನಿಸಿದರು ಎಂಬ ಕಾರಣಕ್ಕಿರಬಹುದು. ಆದರೆ ಗಮನಿಸಿ, ವ...
ಲಿಂಗಾಯತರು ಅನುಸರಿಸುವ ಜೀವನ ವಿಧಾನ ಹಿಂದೂ,
ಹಿಂದೂಗಳಲ್ಲೇ ಅದ್ವೈತಿ (ಶಂಕರಾಚಾರ್ಯರ ಅನುಯಾಯಿಗಳು), ದ್ವೈತಿಗಳು (ಮಧ್ವರ ಅನುಯಾಯಿಗಳು), ವಿಶಿಷ್ಟಾದ್ವೈತಿಗಳು (ರಾಮಾನುಜರ ಅನುಯಾಯಿಗಳು), ಹೀಗೆ ಹಲವು ಮತಗಳಿವೆ. ಬಸವ ಮತವೂ ಇವುಗಳಲ್ಲಿ ಒಂದು.
ಗಾಣಪತ್ಯರು (ಗಣಪತಿಯೇ ಮೂಲ ದೈವವೆಂದು ನಂಬಿದವರು), ಶಾಕ್ತರು (ಶಕ್ತಿ ಮಾತೆ ದುರ್ಗೆಯೇ ಮೂಲ ದೈವವೆನ್ನುವವರು), ಶೈವರು, ವೈಷ್ಣವರು, ಮೊದಲೇ ಹೇಳಿದ ಚಾರ್ವಾಕರು (ನಾಸ್ತಿಕರು) ಎಲ್ಲರೂ ಒಂದಲ್ಲಾ ಒಂದು ರೀತಿಯಿಂದ ಈ ಜೀವನ ವಿಧಾನಕ್ಕೆ ಬೆಸೆದುಕೊಂಡವರೇ.. ಆ ಜೀವನ ವಿಧಾನದ ತತ್ವವೆಂದರೆ, ನಿನ್ನ ನಂಬುಗೆಯನ್ನ ಹೊರಗಿನವರ ಮೇಲೆ ಹೇರದಿರು ಎಂದು. ಅದೂ ಯಾರೂ ಹೇಳಿದ್ದಲ್ಲ.. ಯಾವ ಗ್ರಂಥದ ಹೇರಿಕೆಯೂ ಅಲ...
ಈಗಲೂ ಸಾಯಿಬಾಬನೇ ದೈವವೆಂದು ನಂಬಿದವರೋ, ಕಲ್ಕಿಯ ಭಕ್ತರೋ, ನೀವು ನೋಡಿರಬಹುದು, ಅವರೆಲ್ಲರೂ ನಂಬುಗೆಯಲ್ಲಿ ಅವರ ಅನುಸಾರಿಗಳು, ಆದರೆ ಜೀವನ ವಿಧಾನದಲ್ಲಿ ಹಿಂದೂಗಳು.
ಇನ್ನು ಸಂಖ್ಯೆ, ಸಂಖ್ಯೆಯಿಂದ ಏನಾಗಾಬೇಕಿದೆ. ಯಹೂದಿಗಳಿರುವುದು ಬೆರಳಿಣಿಕೆಯಷ್ಟು, ಅಮೆರಿಕ ಅವರ ಕೈಯಲ್ಲಿ ಆಡುತ್ತದೆ. ಪಾರ್ಸಿಗಳ ಜನಸಂಖ್ಯೆ ಬಹಳ ಕಡಿಮೆ, ಅವರ ಖ್ಯಾತಿಯಲ್ಲ. ಮೇಲಾಗಿ ೭೦೦ ಕೋಟಿ ವಿಶ್ವದ ಜನಸಂಖ್ಯೆಯಲ್ಲಿ ೧೦೦ ಕೋಟಿಗೂ ಮೇಲೆ ಹಿಂದುಗಳು, ಹಿಂದೂ ಧರ್ಮದ ಶಾಖೆಯೇ ಆಗಿ ಹುಟ್ಟಿದ ಜೈನ, ಬೌದ್ದ ಸಿಖ್ ಮೊದಲಾದ ಪೌರಾತ್ಯ ಮತಗಳೆಲ್ಲಾ ರಾಜಕೀಯ ಕಾರಣಗಳಿಂದ ಬೇರೆಯವೆನಿಸದರೂ ಎಲ್ಲದರ ಜೀವಾ...
ನಿಮ್ಮ ದೇವರು ದೇವರಲ್ಲ ಎಂಬ ಮಾತನಾಡುವವರಿಗೆ ಉತ್ತರಕೊಡಲಷ್ಟೇ ಹೊರಡುವೆ. ಖಂಡಿತವಾಗಿಯೂ ಈಶ್ವರನೋ ಅಲ್ಲಾಹನೋ, xyz ಏನಾದರೂ ಹೆಸರಿಡಿ. ಆ ಶಕ್ತಿ ಒಂದೆ. ಇಲ್ಲವೆಂದರೆ ತಪ್ಪಾಗುತ್ತೆ.
Kotian 12 January 2012 at 11:03
ನಮಸ್ಕಾರ ರಾಜೇಶ್...
ಹೇಗಿದ್ದೀರಿ..
ಒಂದು ವಿಚಾರ ಸ್ಪಷ್ಟವಾಯಿತು... ಅಂದು ಮೊದಲಾದ ಓಘ ಇಂದಿಗೂ ನಿಂತಿಲ್ಲವೆಂದಾಯ್ತು... ನಡೆಯಲಿ.. ನಡೆಯಲಿ... ಎಲ್ಲಿಗೆ ಮುಟ್ಟಬೇಕೆಂದಿದೆಯೋ ಮುಟ್ಟಲಿ..
ಅಲೀಫ್,
ನೀವಂದಿಗೆ ಏನೇನು ಪ್ರತಿಪಾದಿಸಿದ್ದೀರೋ ಆ ಪ್ರತಿಪಾದನೆಗೇ ಇಂದಿಗೂ ಅಂಟಿಕೊಂಡೇ ಇದ್ದೀರಿ.. ನಿಮ್ಮ ಬಿಗ್ಗಬಿಗಿ ನಿಲುವಿಗೆ ಧನ್ಯೋಸ್ಮಿ... ಆದರೆ.. ಅಲೀಫ್.. ಮಾನವಾಲೋಚನೆಯ ಹಂತವನ್ನು ದಾಟಿ ಬಂದು ನಿಂತು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಒಮ್ಮೆ ಅವಲೋಕಿಸಿ ನೋಡಿದರೆ... ಆಗ ಅವು ತುಂಬಾ "ಗೌಣ" ಅನಿಸಿಬಿಡುತ್ತವೆ.. ಏಕೆಂದರೆ...
Human Interpretationನಿಂದ ನೀವು ಹೇಳಿದ ಅಷ್ಟೂ ವಿಷಯಗಳು ಮಹತ್ವದ್ದೇ... ಆದರೆ... ಭೂಮಿಗೆ ಮಾತ್ರ ಸೀಮಿತವಾದ ಈ ವಾದ ಸರ್ವಲೋಕಗಳಲ್ಲೂ acceptable ಅಲ್ಲ... Soul Levelನಲ್ಲಿ ಬೇರೆಯದೇ ಅರ್ಥ... bodylessness level ಅಥವಾ God Levelನಲ್ಲಿ ಬೇರೆಯದೇ ಅರ್ಥ... ಮತ್ತು ಕಟ್ಟಕಡೆಯದಾಗಿ Supreme Consciousness Levelನಲ್ಲಿ ಅರ್ಥಹೀನ ವಾದವಾಗಿ ಮಾರ್ಪಡುತ್ತವೆ..
ಇಡೀ ಜಗತ್ತು ಆ Supreme Consciousnessನ "ಆಲೋಚನಾ ಲಹರಿ" ಅಷ್ಟೇ... ಅಷ್ಟೇ..
ನಾವು ಘೋರ ಕನಸೊಂದನ್ನು ಕಂಡು ಬೆಚ್ಚಿಬಿದ್ದು ನಿದ್ರೆಯಿಂದ ಏಳುವಂತೆ... ಜೀವಾತ್ಮ ಕೂಡಾ ದೇಹವನ್ನು ತೊರೆದಾಕ್ಷಣ ಇದೇ ರೀತಿಯ ಅನುಭವವನ್ನು ಹೊಂದುತ್ತದೆ.. ಹಾಗೆಂದು ಅರಿತ ಮರುಕ್ಷಣ ನಾನು ನಾನಾಗಿರಲಿಲ್ಲ.. ನನ್ನೊಳು ಬದುಕಿನೆಡೆಗೆ ಒಂದು ಅಮೋಘ ಪರಿಕಲ್ಪನೆಯನ್ನು ಉಂಟುಮಾಡಿದ ಕ್ಷಣವದು...
ಅಂದು.. ಈ ಎಳೆಯಲ್ಲಿ ನಾನು, ನೀವು, pkbys, bhgte, crusadeರವರು ಮಾಡಿದ ವಾದಗಳೆಲ್ಲವೂ ನಿರರ್ಥಕ ಎಂದೆನ್ನಿಸಿಬಿಟ್ಟಿತ್ತು... ಎಲ್ಲೋ ಒಂದು ಕಡೆ... ಅರಿವಿನ ಪಥದಲ್ಲಿ ಸಾಗುತ್ತಿರುವವರಿಗೆ ಸಣ್ಣ ಊರುಗೋಲು ಅಷ್ಟೇ... ಆ ಸಂವಾದಗಳು... ನಮ್ಮ ಹಿಂದೆ ಬರುತ್ತಿರುವ.. ನಮ್ಮನ್ನು ಅನುಸರಿಸುತ್ತಿರುವ ಆ ಪೀಳಿಗೆಗೆ ನಾವು ಬಿಟ್ಟು ಹೋಗಬಹುದಾದ ಸಣ್ಣೇಸಣ್ಣ ಮಾಹಿತಿ...
ಇರಲಿ...
ಪಾರವಿಲ್ಲದ ಸಂತಸ ಸದಾ ನಿಮ್ಮದಾಗಲಿ.. ಎಂಬುದು ನನ್ನ ಹಾರೈಕೆ...