text
stringlengths
0
61.5k
ಫೀಚರ್ ಗಳ ವಿಷಯದಲ್ಲಿ, GT ಲೈನ್ ಅಮೆಯೋ ದಲ್ಲಿ ಟಾಪ್ ಸ್ಪೆಕ್ ಹೈ ಲೈನ್ ಪ್ಲಸ್ ನಲ್ಲಿ ದೊರೆಯುವ ಸಲಕರೆಣೆಗಳನ್ನು ಕೊಡಲಾಗಿದೆ. ಇದರಲ್ಲಿ ಕ್ರೂಸ್ ಕಂಟ್ರೋಲ್, ಆಟೋ ಡಿಮಿಂಗ್ IRVM, ಆಟೋ AC, ರೇರ್ AC ವೆಂಟ್ ಗಳು, ರೈನ್ ಸೆನ್ಸಿಂಗ್ ವೈಪರ್ ಗಳು, ರೇರ್ ಪಾರ್ಕಿಂಗ್ ಕ್ಯಾಮೆರಾ ಮತ್ತು 7-ಇನ್ಫೋಟೈನ್ಮೆಂಟ್ ಸೇರಿದೆ.
ಅಮೆಯೋ GT ಲೈನ್ ನ 1.5-ಲೀಟರ್ ಡೀಸೆಲ್ ಎಂಜಿನ್ 110PS ಪವರ್ ಮತ್ತು 250Nm ತಾರ್ಕ್ ಕೊಡುತ್ತದೆ. ಸದ್ಯಕ್ಕೆ ಅದು ಕೇವಲ DSG ಒಂದಿಗೆ ದೊರೆಯುತ್ತದೆ. ವೋಕ್ಸ್ವ್ಯಾಗನ್ ನವರು ಮಾನ್ಯುಯಲ್ ಆವೃತ್ತಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಬಹುದು. ವೋಕ್ಸ್ವ್ಯಾಗನ್ ನವರು GTಲೈನ್ ವೇರಿಯೆಂಟ್ ಅನ್ನು ಸಾಂಪ್ರದಾಯಿಕ ಹೈ ಲೈನ್ ಪ್ಲಸ್ ವೇರಿಯೆಂಟ್ ಬೆಲೆ ಪಟ್ಟಿ ಯಲ್ಲಿ ಸೇರಿಸಿದ್ದಾರೆ. ಹೊಸ GT ಲೈನ್...
ಎಸ್‌ಐಟಿ ಟಾಪರ್‌ಗೆ ಅಮೆರಿಕದಲ್ಲಿ ಓದುವ ಕನಸು | Prajavani
ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ 10ನೇ ವರ್ಷದ ಪದವಿ ಪ್ರದಾನ ಸಮಾರಂಭ
ಎಸ್‌ಐಟಿ ಟಾಪರ್‌ಗೆ ಅಮೆರಿಕದಲ್ಲಿ ಓದುವ ಕನಸು
ತುಮಕೂರು: ಅಲ್ಲಿ ಸೇರಿದ್ದ ವಿದ್ಯಾರ್ಥಿ ಸಮೂಹದಲ್ಲಿ ಹರ್ಷ ಮನೆಮಾಡಿತ್ತು. ಆಪ್ತ ಬಳಗವನ್ನು ಅಗಲುತ್ತಿರುವ ನೋವಿನ ಎಳೆಯು ಕಾಣುತ್ತಿತ್ತು. ತಮ್ಮ ವಿಭಾಗದ ಹೆಸರು ಕೂಗಿದಾಗ, ಗೆಳೆಯ–ಗೆಳತಿಯರು ವೇದಿಕೆ ಮೇಲೆ ಪದಕಗಳನ್ನು ಸ್ವೀಕರಿಸಿದಾಗ ಅವರ ಹರ್ಷೋದ್ಗಾರದ ಕೇಕೆ ಮುಗಿಲು ಮುಟ್ಟುತ್ತಿತ್ತು.
ಈ ಎಲ್ಲ ಸನ್ನಿವೇಶಗಳು ಕಂಡಿದ್ದು ಭಾನುವಾರ ಆಯೋಜಿಸಿದ್ದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ 10ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ.
ವಿವಿಧ ಕೋರ್ಸ್‌ಗಳ ಅಧ್ಯಯನ ಪೂರೈಸಿ ಶೈಕ್ಷಣಿಕ ಸಾಧನೆ ಮಾಡಿದ 34 ವಿದ್ಯಾರ್ಥಿಗಳು ಬಂಗಾರದ ಪದಕಗಳನ್ನು ಕೊರಳಿಗೇರಿಸಿಕೊಂಡರು. ಅದರಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಎಸ್‌.ವಿಶಾಲ್‌ ಅವರು 7 ಚಿನ್ನದ ಪದಕಗಳೊಂದಿಗೆ ಸಂಸ್ಥೆಯ ಟಾಪರ್‌ ಸ್ಥಾನದ ಸನ್ಮಾನಕ್ಕೆ ಭಾಜನರಾದರು.
ಬಿ.ಇ. ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ ಆರ್‌.ಕನ್ನಿಕಾ ಹಾಗೂ ಕೆಮಿಕಲ್‌ ಎಂಜಿನಿಯರಿಂಗ್‌ನ ಪಿ.ಬಿ.ಸುಶ್ರುತಾ ಅವರು ತಲಾ 6 ಚಿನ್ನದ ಪದಕಗಳನ್ನು ಬಾಚಿಕೊಂಡರು. ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌ನ ಯು.ಪವಿತ್ರಾ ಅವರ ಶ್ರಮಕ್ಕೂ 5 ಪದಕಗಳು ದಕ್ಕಿದವು.
ಅಮೆರಿಕದ ಟೆಕ್ಸಾಸ್‌, ಮಿಚಿಗನ್‌ ವಿ.ವಿ.ಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಬಯಕೆಯಿದೆ. ಆ ಅವಕಾಶ ಗಿಟ್ಟಿಸಲು ಐಐಎಸ್ಸಿ ಸಂಸ್ಥೆಯ ಸಹಕಾರದೊಂದಿಗೆ ಸಂಶೋಧನಾ ವಿಷಯ ಮಂಡಿಸುತ್ತಿದ್ದೇನೆ ಎಂದು 7 ಚಿನ್ನದ ಗಳಿಸಿದ ಎಸ್‌.ವಿಶಾಲ್‌ ಅವರು 'ಪ್ರಜಾವಾಣಿ'ಗೆ ತಿಳಿಸಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮೈಕ್ರೊ ಎಲೆಕ್ಟ್ರಾನಿಕ್ಸ್‌ ಡಿವೈಸೆಸ್‌ ಆ್ಯಂಡ್‌ ಕಂಪ್ಯೂಟೆಷನಲ್‌ ಸಿಸ್ಟಮ್ಸ್‌ ವಿಭಾಗದ ಪ್ರಧಾನ ನಿರ್ದೇಶಕ ಸುಧೀರ್‌ ಕಾಮತ್‌, ಪದವಿ ಪಡೆಯುವುದು ವಿದ್ಯಾರ್ಥಿ ಜೀವನದ ಮೈಲಿಗಲ್ಲು. ಮುಂದೆ ಉದ್ಯೋಗಿಗಳಾಗಿ, ಉದ್ಯಮಿಗಳಾಗಿ, ಜಬಾಬ್ದಾರಿಯುತ ನಾಗಕರಿಕರಾಗಿ ಶಕ್ತಿಯುತ ರಾಷ್ಟ್ರ ಕಟ್ಟುವ ಹೊಣೆ ನಿಮ್ಮದು' ಎಂದು ಹೇಳಿದರು.
ಬಾಹ್ಯಕಾಶ ಕ್ಷೇತ್ರ ಅಥವಾ ರಕ್ಷಣಾ ಇಲಾಖೆಯ ಪ್ರತಿಯೊಂದು ಯೋಜನೆ ಸಫಲವಾಗಲು ಸಿವಿಲ್‌, ಸ್ಟ್ರಕ್ಚರಲ್‌, ಥರ್ಮಲ್‌, ಮೆಕ್ಯಾನಿಕಲ್‌ ಎಂಜಿನಿಯರ್‌ಗಳೆಲ್ಲದರ ಸಹಭಾಗಿತ್ವ ಬೇಕು. ಎಲ್ಲ ಎಂಜಿನಿಯರ್ ಕ್ಷೇತ್ರಗಳಿಗೂ ಆದ್ಯತೆ ಇದೆ. ಅವಕಾಶಗಳು ಇವೆ ಎಂದು ತಿಳಿಸಿದರು.
ಶುರುವಾಗಿದೆ ಅಂತರಿಕ್ಷ ಯುದ್ಧ: 18ನೇ ಶತಮಾನದ ವರೆಗೂ ನೆಲದ ಮೇಲಿನ ಯುದ್ದವೇ ಪ್ರಧಾನವಾಗಿತ್ತು. ತದನಂತರ ನೌಕಾಸೇನೆ, ವಾಯುಸೇನೆಗಳ ಬಲ ಹೆಚ್ಚಿಸಿಕೊಳ್ಳಲು ದೇಶಗಳು ಮುಂದಾದವು. ಮೊದಲ ಮಹಾಯುದ್ಧದಲ್ಲಿ ವಾಯುಸೇನೆಯನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬಂದಿತ್ತು. ರೆಡಾರ್ ತಂತ್ರಜ್ಞಾನ ಶೋಧನೆ ಬಳಿಕ ವಾಯುಸೇನೆ ಮತ್ತಷ್ಟು ಬಲಗೊಳ್ಳತೊಡಗಿತು ಎಂದು ಸುಧೀರ್‌ ಕಾಮತ್‌ ತಿಳಿಸಿದರು.
ಈಗ ನೆಲ, ಜಲ, ಆಗಸದಲ್ಲಿನ ಯುದ್ಧದೊಂದಿಗೆ ಆಂತರಿಕ ಸಂಘರ್ಷಗಳು ಹೆಚ್ಚುತ್ತಿವೆ. ಅದರಲ್ಲಿ ಭಯೋತ್ಪಾದನೆ, ಅಕ್ರಮ ನುಸುಳುಕೋರರ ಸಮಸ್ಯೆಗಳು ಸೇರಿವೆ. ಅದನ್ನು ಸದೆ ಬಡಿಯಲು ಸೇನೆಯೊಂದಿಗೆ ಅರೆಸೇನಾ ಪಡೆಗಳು ಸಹ ಕೈ ಜೋಡಿಸುತ್ತಿವೆ ಎಂದರು ಹೇಳಿದರು.
ಇತ್ತೀಚೆಗೆ ಅಂತರಿಕ್ಷ ಯುದ್ಧವೂ ಶುರುವಾಗಿದೆ. ಮಾಹಿತಿ ತಂತ್ರಜ್ಞಾನದಿಂದ 'ಸೈಬರ್‌ ವಾರ್‌' ಸಾರಲಾಗುತ್ತಿದೆ. ಇದು ರಾಷ್ಟ್ರವನ್ನು ಗುಪ್ತವಾಗಿಯೇ ಮುಗಿಸಿ, ದೊಡ್ಡ ನಷ್ಟ ಉಂಟು ಮಾಡುತ್ತದೆ. ಅದನ್ನು ಎದುರಿಸಲು ನಮ್ಮ ದೇಶದ ಇಸ್ರೊ, ಡಿಆರ್‌ಡಿಒ ಶ್ರಮಿಸುತ್ತಿವೆ ಎಂದರು.
ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ವೃತ್ತಿ ಬದುಕಿನ ದೊಡ್ಡ ಪ್ರಯಾಣ ನಿಮ್ಮ ಮುಂದಿದೆ. ಹಣ ಗಳಿಕೆಯೇ ಸಾಧನೆಯಲ್ಲ. ನೈತಿಕ ಜೀವನ ನಡೆಸುತ್ತ ಉತ್ತಮ ಪ್ರಜೆಗಳಾಗಿ ಬಾಳಿ. ಕೊನೆಯವರೆಗೂ ಕಲಿಯುತ್ತಲೇ ಇರಿ. ಮೂಢನಂಬಿಕೆಗಳನ್ನು ತಿರಸ್ಕರಿಸಿ, ನಮ್ಮ ಸಂಸ್ಥೆಯ ರಾಯಭಾರಿಗಳಾಗಿ ವೈಜ್ಞಾನಿಕ ಮನೋಭಾವವನ್ನು ಎಲ್ಲಡೆಯೂ ಹರಡಿ' ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಎಸ್‌ಐಟಿ ಸಿಇಒ ಶಿವಕುಮಾರಯ್ಯ, ನಿರ್ದೇಶಕ ಎಂ.ಎನ್‌.ಚನ್ನಬಸಪ್ಪ, ಕಾರ್ಯದರ್ಶಿ ಟಿ.ಕೆ.ನಂಜುಡಪ್ಪ ಇದ್ದರು.
ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಎಎಸ್‌ ಅಧಿಕಾರಿಯಾಗುವ ಗುರಿಯಿದೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಹೋಗಲು ತಯಾರಿ ನಡೆಸಿದ್ದೇನೆ.
ಆರ್‌.ಕನ್ನಿಕಾ, ಬಿ.ಇ., 6 ಚಿನ್ನದ ಪದಕ
ಸಿಮನ್ಸ್‌ ಸಾಫ್ಟವೇರ್‌ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಜಿಎಟಿಇ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದೇನೆ. ಸಂಶೋಧನಾ ರಂಗದಲ್ಲಿ ಬೆಳೆಯಬೇಕೆಂಬ ಗುರಿಯಿದೆ.
ಯು.ಪವಿತ್ರಾ, ಬಿ.ಇ., 6 ಚಿನ್ನದ ಪದಕ
'); $('#div-gpt-ad-655842-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-655842').addClass('inartprocessed'); } else $('#in-article-655842').hide(); } else { _taboola.push({article:'auto', url:'https://www.prajavani.net/district/tumakuru/sit-graduation-c...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-655842 .field-name-body .field-items div.field-item > p'); if(x1 != null && x1.length != 0) { $('#node-655842 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-655842 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-655842'); }); } else { $('#in-article-mob-655842').hide(); $('#in-article-mob-3rd-655842').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಮೂಲ್ಕಿ; ರಾಷ್ಟ್ರೀಯ ಬಿಲ್ಲವರ ಮಹಾಮಂಡಲದಿಂದ ತಾಲೂಕಿನ ಪತ್ರಕರ್ತರಿಗೆ ಸನ್ಮಾನ | ಸುದ್ದಿ ಬೆಳ್ತಂಗಡಿ
in: ಕಾರ್ಯಕ್ರಮಗಳು, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಶಸ್ತಿ ಪುರಸ್ಕಾರ
ಬೆಳ್ತಂಗಡಿ: ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ವತಿಯಿಂದ ಬಿಲ್ಲವ ಸಮಾಜದ ವಿವಿಧ ಮಾದ್ಯಮಗಳ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಫೆ. 28ರಂದುನಡೆಯಿತು.
ಮಹಾಮಂಡಲದ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಸುದ್ದಿ ಬಿಡುಗಡೆಯ ಜಾರಪ್ಪ ಪೂಜಾರಿ ಬೆಳಾಲು, ಸಂತೋಷ್ ಕೋಟ್ಯಾನ್ ಬಳಂಜ, ವಿಜಯವಾಣಿಯ ಮನೋಹರ್ ಬಳಂಜ , ಪ್ರಜಾವಾಣಿಯ ಗಣೇಶ್ ಶಿರ್ಲಾಲು, ಪತ್ರಕರ್ತರಾದ ಪ್ರಶಾಂತ್ ಪಾದೆ, ಸುದೀಪ್ ಸವಣಾಲು ಇವರನ್ನು ಸನ್ಮಾನಿಲಾಯಿತು.
ಈ ಸಂದರ್ಭ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ರಾಷ್ಟೀಯ ಬಿಲ್ಲವರ ಮಹಾಮಂಡಲದ ಪದಾಧಿಕಾರಿಯಾದ ಚಂದ್ರಶೇಖರ್ ಸುವರ್ಣ, ಗಣೇಶ್ ಪೂಜಾರಿ, ಯೋಗೀಶ್ ಕೋಟ್ಯಾನ್, ಗಂಗಾಧರ ಪೂಜಾರಿ, ಜೆ. ಕುಲಾಲ್ ಕುಬೆವೂರು, ಶಿವಾಜಿ ಸುವರ್ಣ ಉಪಸ್ಥಿತರಿದ್ದರು.
Previous : ಗುರುವಾಯನಕೆರೆ ಎಕ್ಸೆಲ್ ಕಾಲೇಜು ವಿದ್ಯಾರ್ಥಿ ಅಮೋಘ ರಿಗೆ ವಿಜ್ಞಾನ ಮತ್ತು ಸಂಶೋಧನ ಕ್ಷೇತ್ರದ ಸಾಧಕ ಪ್ರಶಸ್ತಿ
ಪ್ರಯೋಗದ ಮೂಲಕ ವಿಜ್ಞಾನ ಕಲಿಕೆ | Prajavani
ಪ್ರಯೋಗದ ಮೂಲಕ ವಿಜ್ಞಾನ ಕಲಿಕೆ
Published: 27 ಡಿಸೆಂಬರ್ 2012, 14:05 IST
ಗುಲ್ಬರ್ಗ: ವಿಜ್ಞಾನವನ್ನು ಪ್ರಯೋಗದ ಮೂಲಕ ಕಲಿಸಬೇಕಾದ ಹೊಣೆ ವಿಜ್ಞಾನ ಶಿಕ್ಷಕರ ಮೇಲೆ ಇದೆ ಎಂದು ಎಂದು ರಾಜ್ಯಸಭೆ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.
ಇಲ್ಲಿನ ಚಂದ್ರಕಾಂತ ಪಾಟೀಲ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ `ವಿದ್ಯಾರ್ಥಿ- ವಿಜ್ಞಾನಿ' ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, "ಪ್ರಯೋಗವಿಲ್ಲದ ವಿಜ್ಞಾನ ಬೋಧನೆಯಿಂದ ಮಕ್ಕಳು ವಿಜ್ಞಾನದ ವಿದ್ಯಾರ್ಥಿಗಳಾಗುತ್ತಿದ್ದಾರೆಯೇ ವಿನಃ ವಿಜ್ಞಾನಿಗಳಾಗುತ್ತಿಲ್ಲ" ಎಂದು ವಿಷಾದಿಸಿದರು.
ವಿದ್ಯಾರ್ಥಿಗಳಲ್ಲಿ ಅಗಾಧ ಪ್ರಮಾಣದ ಬುದ್ಧಿಶಕ್ತಿ ಇದೆ. ಮಕ್ಕಳಿಗೆ ಚಟುವಟಿಕೆ ಮತ್ತು ಪ್ರಯೋಗದ ಮೂಲಕ ವಿಜ್ಞಾನ ಕಲಿಸುವ ಕೆಲಸ ಆಗಬೇಕಾಗಿದೆ ಎಂದ ಅವರು, ವಿಜ್ಞಾನದಲ್ಲಿ ಅಪಾರ ಸಾಮರ್ಥ್ಯವಿದ್ದು ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಚಿಂತನೆ ನಡೆಯಬೇಕು ಎಂದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ವಿಜ್ಞಾನಿ ಡಾ. ಜೆ.ಆರ್.ಮದಕವಿ ಮಾತನಾಡಿ, ಪಠ್ಯಪುಸ್ತಕದಲ್ಲಿ ವಿಜ್ಞಾನಿಗಳ ಬದುಕಿನ ಪಾಠವನ್ನು ಸೇರ್ಪಡೆ ಮಾಡುವ ಕೆಲಸವಾಗುತ್ತಿಲ್ಲ ಎಂದು ವಿಷಾದಿಸಿದರು. ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಡಾ. ಟಿ.ಪಿ.ಕೃಷ್ಣಕಾಂತ, ವಿಜಾಪುರದ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಜಿ.ಆರ್.ನಾಯಕ ವೇದಿಕೆಯಲ್ಲಿ ಇದ್ದರು. ಎಸ್.ಬಿ.ಪಾಟೀಲ ಗ್ರೂಪ್ಸ್ ಆ...
ಶ್ರೀಶೈಲ ಘೂಳಿ ಸ್ವಾಗತಿಸಿದರು. ಗಿರೀಶ ಕಡ್ಲೇವಾಡ ಪ್ರಾಸ್ತಾವಿಕ ಮಾತನಾಡಿದರು. ಡಾ. ಎಸ್.ಎಸ್.ಗುಬ್ಬಿ ವಂದಿಸಿದರು. ಚಂದ್ರಕಾಂತ ಕ್ಷೀರಸಾಗರ ನಿರೂಪಿಸಿದರು. ಜಿಲ್ಲೆಯ ವಿವಿಧ ಪ್ರೌಢ, ಪದವಿಪೂರ್ವ ಕಾಲೇಜಿನಿಂದ 300ಕ್ಕೂ ಹೆಚ್ಚು ಬಾಲವಿಜ್ಞಾನಿಗಳು ಭಾಗವಹಿಸಿದ್ದರು. ನಂತರ ನಡೆದ ಗೋಷ್ಠಿಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಸಂವಾದ ನಡೆಯಿತು. 27ರಂದು ಸಂಜೆ 4ಕ್ಕೆ ಕಾರ್ಯಕ್ರಮದ ಸಮಾರೋಪ ನಡೆಯಲಿದೆ.
ಅಕ್ರಮ ಕಲ್ಲು ಕ್ವಾರಿಗೆ ದಾಳಿ ·
< ಜಿಲೆಟಿನ್ ಕಡ್ಡಿ ಸಹಿತ ಅಪಾರ ಪ್ರಮಾಣದ ಸ್ಫೋಟಕ ಪತ್ತೆ >
ಕುಂದಾಪುರ: ಶಂಕರನಾರಾಯಣ ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ನೇತೃತ್ವದಲ್ಲಿ ಪೊಲೀಸರು ಸೋಮವಾರ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸ್ಫೋಟಕ, ಕೆಂಪುಕಲ್ಲು, ವಶಕ್ಕೆ ಪಡೆಯಲಾಗಿದೆ.
ಬೆಳ್ವೆ ಗ್ರಾಮ ಸೂರ್ಗೋಳಿ ಬಳಿ ಸರ್ಕಾರಿ ಜಾಗದಲ್ಲಿ ನಡೆಯುತ್ತಿರುವ ಕೆಂಪುಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿದ ಪೊಲೀಸ್ ತಂಡ ಕಲ್ಲು ಕೊರೆಯುವ ಯಂತ್ರ, ಲಾರಿ, ಕಲ್ಲು, ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಮೂವರ ಪಾಲುದಾರಿಕೆಯಲ್ಲಿ ಕ್ವಾರಿ ನಡೆಯುತ್ತಿದ್ದು, ಒಬ್ಬನ ಸಹಿತ ಕಾರ್ಮಿಕರನ್ನು ವಶಕ್ಕೆ ಪಡೆಯಲಾಗಿದೆ.
ಶಿಲೆಕಲ್ಲು ಕ್ವಾರಿ ಮೇಲೆ ದಾಳಿ: ಕೋಟ ಠಾಣೆ ವ್ಯಾಪ್ತಿ ನೆಂಚಾರು ಬಳಿ ನಡೆಯುತ್ತಿದ್ದ ಶಿಲೆಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸ್ಫೋಟಕ ಹಾಗೂ 32 ಜೆಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭ ಕ್ವಾರಿಗೆ ಪರವಾನಗಿ ಇದೆ ಎಂದು ಗಣಿ ನಡೆಸುವವರು ವಾದಿಸಿದ್ದು, ಪರಿಶೀಲನೆ ಬಳಿಕ ಪರವಾನಗಿ ಇಲ್ಲದಿರುವುದು ದೃಢಪಟ್ಟಿದೆ. ಮುಂಜಾಗರೂಕತೆ ಇಲ್ಲದೆ, ಸ್ಫೋಟ ತಜ್ಞರ...
ಅಣ್ಣಿಗೇರಿ ಪುರಸಭೆ ಚುನಾವಣೆಗೆ ಮಹೂರ್ತ ಫಿಕ್ಸ್. » eNews Land
by eNewsLand Team ನವೆಂಬರ್ 29, 2021 0127
ಇಎನ್ಎಲ್ ಅಣ್ಣಿಗೇರಿ : ಕಳೆದ 3 ವರ್ಷಗಳಿಂದ ಪುರಸಭೆ ಚುನಾವಣೆ ಜರುಗದೇ, ಜಿಲ್ಲಾಡಳಿತದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಡಿದ್ದವು. ತಾಲೂಕಿನ ಅಭಿವೃದ್ದಿ ಕಾರ್ಯಗಳು ಸಾರ್ವಜನಿಕರ ಬೇಡಿಕೆ ಅನ್ವಯ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿತ್ತು. ಸದ್ಯಕ್ಕೆ ಪುರಸಭೆ ಚುನಾವಣೆ ಜರುಗುತ್ತಿರೋದು ಸಾರ್ವಜನಿಕ ವಲಯದಲ್ಲಿ ಸಂತಸ ತಂದಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಪಕ್ಷೇತ...
ಡಿ.08 ರಂದು ಜಿಲ್ಲಾಧಿಕಾರಿಗಳು ಚುನಾವಣೆ ಆಧಿಸೂಚನೆಯನ್ನು ಹೊರಡಿಸಲಿದ್ದು. ಅಭ್ಯರ್ಥಿಗಳ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಡಿ.15 ಹಾಗೂ ಡಿ.16 ರಂದು ನಾಮಪತ್ರ ಪರಿಶೀಲಿಸುವುದು. ಡಿ.18 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿರುತ್ತದೆ. ಡಿ.27 ರಂದು ಬೆಳಿಗ್ಗೆ 7-೦೦ ರಿಂದ ಸಂಜೆ 5-೦೦ ಗಂಟೆಯವರೆಗೆ ಮತದಾನ ನಡೆಯಲಿದೆ. ಡಿ.29 ರಂದು ಮರುಮತದಾನ ಅವಶ್ಯವಿದ್ದರೆ ಬೆಳಿ...
ನಲ್ಮೆಯಿ೦ದ ನಟರಾಜು : ನಮ್ಮೂರಿನ ಕಿಂದರಿ ಜೋಗಿ | | ಅವಧಿ । AVADHI
ನಲ್ಮೆಯಿ೦ದ ನಟರಾಜು : ನಮ್ಮೂರಿನ ಕಿಂದರಿ ಜೋಗಿ
ನಮ್ಮೂರಿನ ಕಿಂದರಿ ಜೋಗಿ
ಒಂದು ಸಂಜೆ ನನ್ನ ಹುಡುಕಿಕೊಂಡು ಯಾರೋ ಬಂದಿದ್ದಾರೆ ಎಂದು ನಮ್ಮ ಹಾಸ್ಟೆಲ್ ನ ಗೇಟ್ ಕೀಪರ್ ಬಂದು ಹೇಳಿದ್ದ. ನಾನಾಗ 9 ನೇ ತರಗತಿಯಲ್ಲಿದ್ದೆ. ಕೈಯಲ್ಲಿ ಹೆಲ್ಮೆಟ್ ಹಿಡಿದು ಬಂದಿದ್ದ ಆ ಅಂಕಲ್ "ನಾನು ಸಂತೋಷನ ಫ್ರೆಂಡ್ ನ ತಂದೆ." ಎಂದಿದ್ದರು. ಸಂತೋಷ್ ನನ್ನ ರೂಮ್ ಮೇಟ್ ಆಗಿದ್ದ. ಜೊತೆಗೆ ನನ್ನೂರಿನವರು. ನನ್ನ ಚೆಡ್ಡಿ ದೋಸ್ತ್ ನ ತಮ್ಮ. ಅವನು ಎರಡು ದಿನಗಳಿಂದ ಹಾಸ್ಟೆಲ್ ಗೆ ಬಂದಿರಲಿಲ್ಲ. ಅವನ...
ನಾವು ಹಾಗೆ ಮಾತನಾಡುತ್ತಾ ಕುಳಿತ್ತಿರುವಾಗ ಅವನ ಅಣ್ಣ ಬಂದವನೇ ಅವನನ್ನು ಅವನ ಮಾವನವರ ಮನೆಗೆ ಕರೆದೊಯ್ದಿದ್ದ. ಅಂದು ಅವನ ಜೊತೆ ಭೇಟಿಯಾದ ಮೇಲೆ ಮತ್ತೆ ಎಷ್ಟೋ ದಿನ ಭೇಟಿಯಾಗಲು ಸಾಧ್ಯವಾಗಲಿಲ್ಲ. ಅವನ ಜ್ವರ ಕಡಿಮೆಯಾಗಿ ಉಷಾರಾದ ಮೇಲೆ ಅವನನ್ನು ಊರಿಗೆ ಕರೆದುಕೊಂಡು ಹೋಗಿದ್ದರು. ಸ್ಕೂಲಿಗೆ ಮೂರ್ನಾಲ್ಕು ತಿಂಗಳು ಗೈರು ಹಾಜರಾಗಿದ್ದುದರಿಂದ ಅವನು ಆ ವರ್ಷದ ಪರೀಕ್ಷೆ ಬರೆಯಲಾಗಲಿಲ್ಲ. ಮುಂದಿನ ವರ್...
← ಹಿಂದಿನದು: ಬೊಳುವಾರರಿಗೆ ಒ೦ದು ಪತ್ರ ಮುಂದಿನದು: ಮತ್ತೆ ಬ್ಲಾಗಿಗರು.. →
Badarinath Palavalli on August 29, 2012 at 10:58 AM
ಇಂತ ಯುವ ಪಡೆಯ ಅಹರ್ನಿಶಿ ದುಡಿಮೆಯಿಂದಲೇ ನಮ್ಮ ಹಳ್ಳಿಗಾಡುಗಳೂ ಅಕ್ಷರದ ಶಕ್ತಿಯನ್ನು ಅರಿತುಕೊಂಡಿರುವುದು. ಒಳ್ಳೆಯ ನೆನಪಿನ ಓಲೆ.
Santhosh on August 29, 2012 at 1:01 PM
@ನಟ್ಟು ಸಂತೋಷ ಅನ್ನುವವರೆಲ್ಲ ಹಾಗೆಯೇ, ಹಹಹ!! 😉
ತಮಾಷೆ ಒತ್ತಟ್ಟಿಗಿರಲಿ.
ಕಲ್ಪಿಸಿ ಬರೆದ ಕತೆಯ ರೀತಿಯ ಓಘ ನಿಮ್ಮ ಈ ನಿಜ ಜೀವನದ ಗೆಳೆಯನ ಕತೆಗಿದೆ.
ಬಹುಶಃ ನೀವು ನಿಮ್ಮ ಗೆಳೆಯನನ್ನು "ಎಲೆ ಮಲೆ ಕಾಯಿ" ಅಂಕಣಕ್ಕೆ ಎಳೆತರಬೇಕಿತ್ತು ಅನಿಸುತ್ತದೆ.
ಅತೀ ಚಿಕ್ಕ ವಯಸ್ಸಿನಲ್ಲೇ ದೊಡ್ಡವರ ಹಾಗೆ ಯೋಚಿಸುವ ಮತ್ತು ಜೀವನದಲ್ಲಿ ಇತರರಿಗೆ ಮಾದರಿಯಾಗುವ ಈ ರೀತಿಯ ವ್ಯಕ್ತಿಗಳು ಸಮಾಜದಲ್ಲಿ ಹೆಚ್ಚಬೇಕಿದೆ.
shivakumar c on August 30, 2012 at 11:55 AM
Nice one nattu
chinmay on August 30, 2012 at 5:21 PM
Sensational one..!! it has brought me to your long ago days, i roamed like any thing in the avenue of your memorable lines with friend Mr Santhosh. Thank you All The Very Best Friend..!!!
Utham danihalli on August 31, 2012 at 9:51 PM
Enthaha hudugaru prathi halliyalu eruthare natanna adre avrge prothsahakintha hechu bayavane thumbthare jana
Enthaha hudugarige prothsaha sikki uru bellaguvanthagali
Nimm lekanada udhesha ederali shubhavagali gellaya
Nataraju S M on September 1, 2012 at 1:36 PM
ಒಮ್ಮೊಮ್ಮೆ ಬ್ಲಾಗ್ ಲೇಖಕನ ಸ್ಥಿತಿ ಫಿಲಂ ರಿಲೀಸ್ ಮಾಡಿ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾಯೋ ನಿರ್ಮಾಪಕನ ಹಾಗೆ ಇರುತ್ತದೆ. ಆ ಸ್ಥಿತಿಯನ್ನು ಎಲ್ಲಾ ಲೇಖಕರಲ್ಲದಿದ್ದರೂ ಕೆಲವರಾದರೂ ಅನುಭವಿಸುತ್ತಾರೆ. ಆ ಕೆಲವರಲ್ಲಿ ನಾನೂ ಒಬ್ಬ. ನಿಮ್ಮ ಪ್ರೀತಿ ಪ್ರೋತ್ಸಾಹ ಎಂದಿಗೂ ಬತ್ತದಿರಲಿ.. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಳಿಗೆ..
ಫೈನಲ್‌ಗೆ ವಿಜಯಾ ಬ್ಯಾಂಕ್‌ | Prajavani
ಫೈನಲ್‌ಗೆ ವಿಜಯಾ ಬ್ಯಾಂಕ್‌
ಜಮಖಂಡಿ: ಬೆಂಗಳೂರಿನ ವಿಜಯಾ ಬ್ಯಾಂಕ್‌ ಮತ್ತು ಮುಂಬೈನ ಮಹೀಂದ್ರಾ ಅಂಡ್ ಮಹೀಂದ್ರಾ ತಂಡಗಳು ನಿರಾಣಿ ಫೌಂಡೇಷನ್‌ ಆಶ್ರಯದಲ್ಲಿ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಆಹ್ವಾನಿತ 'ಎ' ಗ್ರೇಡ್‌ ಕಬಡ್ಡಿ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿವೆ.
ಪುರುಷರ ವಿಭಾಗದಲ್ಲಿ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮಹೀಂದ್ರಾ ತಂಡ 39–17ರಲ್ಲಿ ಬೆಂಗಳೂರಿನ ರೈಲು ಗಾಲಿ ಕಾರ್ಖಾನೆ ಎದುರು ಗೆದ್ದಿತು. ವಿಜಯಿ ತಂಡ ಮೊದಲರ್ಧದ ಆಟ ಮುಗಿದಾಗ 20–10ರಲ್ಲಿ ಮುನ್ನಡೆ ಹೊಂದಿತ್ತು. ಎರಡನೇ ಅವಧಿಯಲ್ಲಿಯೂ ಚುರುಕಿನ ಆಟವಾಡಿ ಜಯದ ಅಂತರ ಹೆಚ್ಚಿಸಿಕೊಂಡಿತು.
ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ವಿಜಯಾ ಬ್ಯಾಂಕ್‌ 48–18 ಪಾಯಿಂಟ್ಸ್‌ನಿಂದ ಎಎಸ್‌ಸಿ ತಂಡವನ್ನು ಪರಾಭವಗೊಳಿಸಿತು. ಮೊದಲರ್ಧದ ಆಟ ಮುಗಿದಾಗ ವಿಜಯಾ ಬ್ಯಾಂಕ್‌ 31–7ರಲ್ಲಿ ಮುನ್ನಡೆಯಲ್ಲಿತ್ತು.
ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್‌ ಪಂದ್ಯಗಳಲ್ಲಿ ಸೇಲಂನ ಎಸ್‌ಎಂಸಿ ತಂಡ 29–17ರಲ್ಲಿ ಬೆಂಗಳೂರಿನ ಕೆಎಸ್‌ಪಿ ತಂಡದ ವಿರುದ್ಧ, ಬಾಚಣಿಯ ಜೈಹನುಮಾನ ತಂಡ 28–21ರಲ್ಲಿ ಸೋನೆಪತ್‌ನ ಗುರುಕುಲ ತಂಡದ ಮೇಲೂ, ಮುಂಬೈನ ವೆಸ್ಟರ್ನ್‌ ರೈಲ್ವೆ ತಂಡ 21–1 ಅಂಕಗಳಿಂದ ಬೆಂಗಳೂರಿನ ಕೇಶವ ತಂಡದ ವಿರುದ್ಧವೂ, ಮಹಾರಾಷ್ಟ್ರ ಪೊಲೀಸ್‌ ತಂಡ 31–21ರಲ್ಲಿ ಪುಣೆಯ ಜಾಗೃತಿ ತಂಡದ ಮೇಲೂ ಜಯಿಸಿದವು.
ಮಂಗಳೂರಿನ ಜೆಪ್ಪು ಮಾರ್ಕೆಟ್ ಬಳಿ ಸಿಲಿಂಡರ್ ಸ್ಪೋಟ
ಮಂಗಳೂರು: ಗ್ಯಾಸ್ ಸಿಲಿಂಡರ್ ರಿಪೇರಿ ಮಾಡುವ ಅಂಗಡಿಯಲ್ಲಿ ಸಿಲಿಂಡರ್​​ ಸ್ಪೋಟಿಸಿದ ಘಟನೆ ನಡೆದಿದೆ.
ಮಂಗಳೂರಿನ ಜಪ್ಪು ಮಾರ್ಕೆಟ್ ಬಳಿ ಈ ಘಟನೆ ನಡೆದಿದೆ.
ಬೆಂಕಿ ಕಂಡ ತಕ್ಷಣ ಅಂಗಡಿಯೊಳಗಿದ್ದ ಸಿಬ್ಬಂದಿಗಳು ಸಿಲಿಂಡರನ್ನು ಹೊರಗಡೆ ಎಸೆದ ಪರಿಣಾಮ ಸಿಲಿಂಡರ್ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಫೋಟದ ತೀವ್ರತೆಗೆ ಸಿಲಿಂಡರ್​​ನ ತುಂಡುಗಳು ಸುಮಾರು 50 ಮೀಟರ್ ದೂರಕ್ಕೆ ಚಿಮ್ಮಿದೆ. ಒಂದು ತುಂಡು ಜಪ್ಪು ಮೀನು ಮಾರುಕಟ್ಟೆಯ ಒಳಗೆ ಬಿದ್ದಿದೆ. ಅಲ್ಲದೆ ಸಿಲಿಂಡರ್ ಭಾಗಗಳು ಸ್ಫೋಟಗೊಂಡು ಸಿಡಿದ ಪರಿಣಾಮ ಅಲ್ಲೇ ಪಕ್ಕದ ಅಂಗಡಿಯ ಶೆಟರ್ ಗೆ ಹಾನಿಯಾಗಿದೆ‌.
ಕೂಡಿ ಬಾಳಲು ಕಲಿಯುವುದು :೧೫. ಉದ್ಯಮ-ಶೀಲತೆ – ಕಣಜ
ಕೂಡಿ ಬಾಳಲು ಕಲಿಯುವುದು :೧೫. ಉದ್ಯಮ-ಶೀಲತೆ
Home/ಕನ್ನಡ, ಪುಸ್ತಕಗಳಿಂದ, ವಿಕಾಸ : ಜೀವನ-ಕೌಶಲ ಪಠ್ಯ, ಸಾಹಿತ್ಯ/ಕೂಡಿ ಬಾಳಲು ಕಲಿಯುವುದು :೧೫. ಉದ್ಯಮ-ಶೀಲತೆ
(ಮೂಲ – National Entrepreneurship Network (NEN) Source: An Initiative of Wadhwani Foundation
ಈ ಭಾರತೀಯ ಉದ್ಯಮಿಗಳನ್ನು ಗುರುತಿಸಬಲ್ಲಿರೇನು? (ಉತ್ತರಗಳು ಅಧ್ಯಾಯದ ಕೊನೆಯ ಪುಟದಲ್ಲಿ)
ಇವರು ತಮ್ಮ ಉದ್ಯಮ-ಸಾಮ್ರಾಜ್ಯವನ್ನು ಪ್ರಾರಂಭಿಸಿ, ಮುಂದುವರೆಸಿ ಯಶಸ್ಸನ್ನು ಕಂಡ ವಿವರಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿ.
ಅಧ್ಯಾಯದ ಕಲಿಕೆಯ ಧ್ಯೇಯಗಳು
ಉದ್ಯಮಶೀಲತೆಯ ಮೂಲಭೂತ ವಿಚಾರಗಳ ತಿಳುವಳಿಕೆ.
ವ್ಯವಹಾರದಲ್ಲಿನ ದೃಷ್ಟಿಕೋನಗಳು ಮತ್ತು ವ್ಯಾವಹಾರಿಕ ಪ್ರಯೋಗಗಳಲ್ಲಿನ ಸವಾಲುಗಳು.
ಸರಳ ವ್ಯವಹಾರ-ಪ್ರಯೋಗಗಳ ಮೂಲಕ ಸೃಜನಶೀಲ ಕಲಿಕೆ.
ಬದಲಾಗುತ್ತಿರುವ ಪ್ರಪಂಚದಲ್ಲಿ ಅಧಿಕ ಅವಕಾಶಗಳು ಉಂಟಾಗುತ್ತಿವೆ, ಜೊತೆಗೆ ಸತತ ಬದಲಾಗುವ ಪರಿಸರಕ್ಕೆ ಹೊಂದಿಕೊಂಡು ಉತ್ತಮವಾಗಿ ಕಾರ್ಯಕೌಶಲವನ್ನು ಪ್ರದರ್ಶಿಸಬೇಕಾದ ಒತ್ತಡವೂ ಹೆಚ್ಚುತ್ತಿದೆ. ಉದ್ಯಮ-ಶೀಲತೆ (entrepreneurship) ಎನ್ನುವುದು 'ಇರುವ ಅವಕಾಶಗಳನ್ನು ಸಾಧ್ಯವಾದಷ್ಟು ಚೆನ್ನಾಗಿ ಬಳಸಿಕೊಳ್ಳುವ ಕಲೆ'. ಹೊಸ ವ್ಯವಹಾರವನ್ನು ಪ್ರಾರಂಭಿಸುವುದಕ್ಕಾಗಲಿ ಅಥವಾ ಇರುವ ವ್ಯವಹಾರವನ್ನೇ ಯಶಸ್...
ಉದ್ಯಮ–ಶೀಲತೆಯನ್ನು ವಿವರಿಸುವ ಪ್ರಮುಖ ಕೌಶಲಗಳನ್ನು ಸಾರವಾಗಿ ಹೇಳುವುದಾದರೆ, ಅದು ಈ ಕೆಳಕಂಡ ಸಾಮರ್ಥ್ಯಗಳ ಮೂಲಕ ವ್ಯಕ್ತವಾಗುತ್ತದೆ:
ಅನೇಕ ಹೊಸ ಉಪಾಯಗಳನ್ನು ಆವಿಷ್ಕರಿಸುವುದು.
ಅವಕಾಶಗಳನ್ನು ವಿಶ್ಲೇಶಿಸುವುದು, ಅಥವಾ ಉಪಾಯಗಳನ್ನು ವಿವೇಚಿಸಿ ಅತ್ಯಂತ ಸತ್ವಯುತವಾದುದು ಯಾವುದು ಎಂದು ಗುರುತಿಸುವುದು.