text
stringlengths
0
61.5k
ದರೋಡೆಕೋರ ಮತ್ತು ಇತರ ಪೆರಿಲ್ಸ್ (ವಿಭಾಗ 2):ಈ ವಿಭಾಗವು ವಿಭಾಗ 1 ರಲ್ಲಿ ಹೊಂದಿರುವ ,ಕಳ್ಳತನ ,ಕನ್ನ ಕಳ್ಳತನ ,ದರೋಡೆ , ದೋಚುವುದು ಅಂಶಗಳನ್ನು ಒಳಗೊಂಡಿದೆ.
ಮೆಷಿನರಿ ಕೆಟ್ಟು ಸ್ಥಗಿತವಾಗುವುದು (ಸೆಕ್ಷನ್ 3 ಎ):ಈ ವಿಭಾಗವು ನಿಮ್ಮ ಆವರಣದಲ್ಲಿ ಸ್ಥಾಪನೆಯಾದ ನಿಮ್ಮಸ್ಥಿರ ಯಂತ್ರ ಮತ್ತು ಯಂತ್ರಾಗಾರ ಗಳ ಹಠಾತ್ ಮತ್ತು ಅನಿರೀಕ್ಷಿತ ವಿದ್ಯುತ್ತಿನ ಅಥವಾ ಯಾಂತ್ರಿಕ ಕೆಟ್ಟು ಸ್ಥಗಿತವಾಗುವುದನ್ನು ಒಳಗೊಳ್ಳುತ್ತದೆ.
ಬಾಯ್ಲರ್ ಮತ್ತು ಪ್ರೆಶರ್ ಪ್ಲಾಂಟ್ (ಸೆಕ್ಷನ್ 3 ಬಿ): ಈ ವಿಭಾಗ ನಿಮ್ಮ ಬಾಯ್ಲರ್ ಮತ್ತು ಪ್ರೆಶರ್ ಪ್ಲಾಂಟ್ಗೆ ಸ್ಫೋಟ ಅಥವಾ ಕುಸಿತದಿಂದ ಉಂಟಾಗುವ ಹಾನಿಗೆ (ಬೆಂಕಿಯಿಂದ ಹೊರತುಪಡಿಸಿ) ಒಳಗೊಳ್ಳುತ್ತದೆ.
"ಎಲೆಕ್ಟ್ರಾನಿಕ್ ಸಲಕರಣೆ (ವಿಭಾಗ 4): ಈ ವಿಭಾಗವು ನಿಮ್ಮ ಆವರಣದಲ್ಲಿ ಸ್ಥಾಪಿತವಾದ ಕಂಪ್ಯೂಟರ್ಗಳು, ಫ್ಯಾಕ್ಸ್ ಯಂತ್ರಗಳು, ಬಿಡಿಭಾಗಗಳು ಮುಂತಾದ ಎಲೆಕ್ಟ್ರಾನಿಕ್ ಸಾಧನಗಳಿಗೆ ಆಗುವ ನಷ್ಟವನ್ನು ಒಳಗೊಳ್ಳುತ್ತದೆ."
"ಪೋರ್ಟಬಲ್ ಕಂಪ್ಯೂಟರ್ ಮತ್ತು ಮೊಬೈಲ್ ಉಪಕರಣಗಳು (ಸೆಕ್ಷನ್ 5): ಈ ವಿಭಾಗವು ನಿಮ್ಮ ಪೋರ್ಟಬಲ್ ಕಂಪ್ಯೂಟರ್ಗಳಿಗೆ ಮತ್ತು ಇತರ ಮೊಬೈಲ್ ಸಾಧನಗಳಿಗೆ ಜಗತ್ತಿನ ಎಲ್ಲೆಡೆ ತೆಗೆದುಕೊಂಡು ಹೋಗಿರುವಾಗ ಹಾಗಬಹುದಾದ ಹಾನಿ ಅಥವಾ ನಷ್ಟವನ್ನು ಒಳಗೊಳ್ಳುತ್ತದೆ."
ಹಣ (ವಿಭಾಗ 6):ಈ ವಿಭಾಗವು ಆವರಣದಲ್ಲಿ ಹಣದ ನಷ್ಟವನ್ನು,ಬಲಾತ್ಕಾರಪ್ರಯೋಗ , ಕಳ್ಳತನ ,ಕನ್ನ ಕಳ್ಳತನ ,ದರೋಡೆ , ದೋಚುವುದು ಅಥವಾ ಸಂಚಾರ ಸಮಯದಲ್ಲಿ ಯಾಗುವ ಅಪಘಾತ ಅಥವಾ ದೌರ್ಬಾಗ್ಯ ದಿಂದಾಗುವ ಹಾನಿಯನ್ನು ಒಳಗೊಳ್ಳುತ್ತದ.ಯಾವುದೇ ಹೆಚ್ಚುವರಿ ವೆಚ್ಚ ವಿಲ್ಲದೆ ನಾವು ಅದೇ ಕಾರಣಗಳಿಂದ ಉಂಟಾಗುವ ಹಣದ ಸಾಗಣೆಯಲ್ಲಿ ಬಳಸಲಾಗುವ ಸುರಕ್ಷಿತ, ಬಲವಾದ ಕೋಣೆ, ಉಕ್ಕಿನ ಅಲ್ಮಿರಾ ಮತ್ತು ನಗದು, ಚೀಲ ಇತ್ಯ...
ಫಿಡೆಲಿಟಿ ಗ್ಯಾರಂಟಿ (ಸೆಕ್ಷನ್ 7): ಈ ವಿಭಾಗವು ನಿಮ್ಮ ಸಂಬಳದ ನೌಕರರು ಮಾಡಿದ ವಂಚನೆ ಅಥವಾ ಅಪ್ರಾಮಾಣಿಕತೆಯಿಂದ ಉಂಟಾದ ನೇರ ಹಣದ ನಷ್ಟವನ್ನು ಒಳಗೊಂಡಿದೆ.
ವೈಯಕ್ತಿಕ ಅಪಘಾತ (ಸೆಕ್ಷನ್ 8):ಈ ವಿಭಾಗವು ನಿಮ್ಮ ವ್ಯಾಪಾರದೊಂದಿಗೆ ಸಂಪರ್ಕ ಹೊಂದಿದ ಮತ್ತು ಇತರ ಹೆಸರಿಸಿದ ವ್ಯಕ್ತಿಗಳನ್ನು ,ಆಕಸ್ಮಿಕ ಅಪಘಾತ ಗಳಿಂದಾದಾ ದೈಹಿಕ ವಿಕಲತೆ (ಶಾಶ್ವತ ಅಥವಾ ತಾತ್ಕಾಲಿಕವಾಗಿ) ಅಥವಾ ಮರಣ ಮತ್ತು ಅದರೊಂದಿಗೆ ಇತರೆ ಹೆಚ್ಚುವರಿ ಅನುಕೂಲ ಗಳಾದ ಬಟ್ಟೆಗೆ ಹಾನಿ ,ಮೃತ ದೇಹದ ಸಾಗಾಣಿಕೆ ವೆಚ್ಚ ,ಅಂಬ್ಯುಲೇನ್ಸ್ ಶುಲ್ಕ, ಉದ್ಯೋಗ ಪಲಾನುಭವದ ನಷ್ಟ,.ಮಕ್ಕಳ ಶಿಕ್ಷಣ ನಿಧಿ...
ವ್ಯವಹಾರ ಅಡಚಣೆ (ಸೆಕ್ಷನ್ 9): ಈ ವಿಭಾಗವು ಸೆಕ್ಷನ್ 1 ರ ವ್ಯಾಪ್ತಿಗೆ ಒಳಗಾಗುವ ವಿಮೆ ಮಾಡಿದ ಅಸ್ತಿ ಗಾದ ಹಾನಿಯಿಂದಾಗಿ ವ್ಯಾಪಾರಕ್ಕೆ ಅಡ್ಡಿಯಾದ ಪರಿಣಾಮದಿಂದಾಗಿ ಉಂಟಾದ ಒಟ್ಟು ನಷ್ಟದ ಹಾನಿ, ಕೆಲಸದ ಮತ್ತು ಲೆಕ್ಕಪರಿಶೋಧಕ ಶುಲ್ಕವನ್ನು ಒಳಗೊಂಡಿರುತ್ತದೆ .
ಹೊಣೆಗಾರಿಕೆ (ಸೆಕ್ಷನ್ 10 ಎ / ಬಿ): ಈ ವಿಭಾಗವು ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಭವಿಸಿದ ಸಾರ್ವಜನಿಕರಿಗೆ ಹೊಣೆಗಾರರಾಗುವ ಅಪಘಾತಗಳಿಂದ ಉಂಟಾಗುವ ಸಾವು, ದೈಹಿಕ ಗಾಯ ಅಥವಾ ಆಸ್ತಿ ಹಾನಿಯಿಂದಾಗಿ ಲ್ಲದೆ ನಿಮ್ಮ ಉದ್ಯೋಗಿಗಳಿಗೆ ನಿಮ್ಮ ಉದ್ಯೋಗದಲ್ಲಿ ಮತ್ತು ನಿಮ್ಮಲ್ಲಿ ಉದ್ಯೋಗದಲ್ಲಿದ್ದಾಗ ಆಗುವ ಗಯಾ ಅಥವಾ ಮರಣಕ್ಕೆ ಕಾರ್ಮಿಕನಷ್ಟ ಪರಿಹಾರ ಕಾಯ್ದೆ ಯಡಿ ಕೊಡಬೇಕಾದ ಹೊಣೆಗಾರಿಕೆ ಯನ್ನು...
ನೀವು ಯಾವ ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು
ನಾಮಮಾತ್ರ ಹೆಚ್ಚುವರಿ ಪ್ರೀಮಿಯಂನ ಪಾವತಿಯ ಮೇಲೆ, ನಮ್ಮ ವೈಯಕ್ತಿಕ ಅಪಘಾತ ವಿಮಾ ಪಾಲಿಸಿ ಕೂಡ ಸಂಪೂರ್ಣ ವ್ಯಾಪ್ತಿಯ ಹೆಚ್ಚುವರಿ ವ್ಯಾಪ್ತಿಗಳನ್ನು ಒದಗಿಸಲು ವಿಸ್ತರಿಸಬಹುದು.
10 ವಿಭಾಗಗಳಲ್ಲಿ 4 ರೊಳಗೆ ಕನಿಷ್ಟ ಮೊತ್ತವನ್ನು ಕಳೆಯಬೇಕು.
5 ಅಥವಾ ಅದಕ್ಕಿಂತ ಹೆಚ್ಚು ವಿಭಾಗಗಳನ್ನು ನೀವು ಆವರಿಸಿದ್ದರೆ ಪ್ರೀಮಿಯಂ ರಿಯಾಯಿತಿಗಾಗಿ ಒಂದು ಅವಕಾಶವಿದೆ.
1,2,3,4,5,ಮತ್ತು 5 ರ ವಿಭಾಗದಲ್ಲಿ, ವಿಮೆ ಮರುಸ್ಥಾಪನೆ ಮೌಲ್ಯದ ಆಧಾರದ ಮೇಲೆ (ಅಂದರೆ ಹಳೆಯದಕ್ಕೆ ಹೊಸದಾಗಿ) ವಿಮ ಮೊತ್ತವು ವಿಮಾದಾರನ ಹೊಸದಾಗಿ ಸೇರಿದ ಸರಕಿನ ಮೌಲ್ಯ, ರವಾನೆ ಶುಲ್ಕ , ಶುಲ್ಕಗಳು ಇತರೆ ಸೇರಿರಬೇಕು
ಈ ನೀತಿಯ ಅಡಿಯಲ್ಲಿ ವಿವಿಧ ವಿಭಾಗದ ವಿಮೆ ಮೊತ್ತದ ಗರಿಷ್ಠ ಮಿತಿಯು ಕೆಳಗಿರುತ್ತದೆ:
ವಿಭಾಗ 1 ರೂ. 50 ಕೋಟಿ *
ವಿಭಾಗ 2 ರೂ. 50 ಕೋಟಿ
ವಿಭಾಗ 3 ಎ ರೂ. 20 ಕೋಟಿ
ವಿಭಾಗ 3 ಬಿ ರೂ. 20 ಕೋಟಿ
ವಿಭಾಗ 4 ರೂ. 20 ಕೋಟಿ
ವಿಭಾಗ 5 ರೂ. 1 ಕೋಟಿ
ವಿಭಾಗ 6 ರೂ 5 ಕೋಟಿ (ಸುರಕ್ಷಿತ) ಮತ್ತು ರೂ. 1 ಕೋಟಿ (ಟ್ರಾನ್ಸಿಟ್) ವಿಭಾಗ 7 ರೂ. 1 ಕೋಟಿ
ವಿಭಾಗ 8 ರೂ. 25 ಲಕ್ಷಗಳು (ಪ್ರತಿ ವ್ಯಕ್ತಿಗೆ)
ವಿಭಾಗ 9 ರೂ. 50 ಕೋಟಿ *
ವಿಭಾಗ 10 ಎ ರೂ. 2 ಕೋಟಿ
ವಿಭಾಗ 1 ಮತ್ತು 9 ರ ಸಂಯುಕ್ತ /ಒಟ್ಟು ವಿಮೆ ಮೊತ್ತ ಗರಿಷ್ಟ ಮಿತಿಯು ರೂ 50 ಕೋಟಿ .
ಪಾಲಿಸಿಯಡಿರುವ ಪ್ರಮುಖ ಕೆಲವು ಬಹಿಷ್ಕಾರಗಳು ಹೀಗಿವೆ:
"ಯುದ್ಧದ ಪರಿಣಾಮವಾಗಿ, ಆಕ್ರಮಣ, ವಿದೇಶಿ ಶತ್ರುಗಳ ಕಾರ್ಯ, ಯುದ್ಧಗಳು (ಯುದ್ಧವನ್ನು ಘೋಷಿಸಲಿ ಅಥವಾ ಇಲ್ಲವೋ), ಅಂತರ್ ಯುದ್ಧ, ದಂಗೆ, ಕ್ರಾಂತಿ ಇತ್ಯಾದಿ."
"ಯಾವುದೇ ಸರಕಾರ ಅಥವಾ ಕಾನೂನುಬದ್ಧವಾಗಿ ಸ್ಥಾಪಿತವಾದ ಪ್ರಾಧಿಕಾರದ ಆದೇಶದ ಮೂಲಕ ವಶಪಡಿಸಿಕೊಳ್ಳುವಿಕೆ, ಕಮಾಂಡರ್, ಕೋರಿಕೆ ಅಥವಾ ನಾಶದಿಂದ ಯಾವುದೇ ಹಾನಿ."
ಅಯಾನೀಕರಿಸುವ ವಿಕಿರಣದಿಂದ ಅಥವಾ ವಿಕಿರಣದ ಮೂಲಕ ಮಾಲಿನ್ಯದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಉಂಟಾಗುವ ಅಥವಾ ಪರಿಣಾಮದಿಂದಾದ ಯಾವುದೇ ಹಾನಿ.
ಯಾವುದೇ ರೀತಿಯ ಮಾಲಿನ್ಯದಿಂದಾಗಿ ಆಸ್ತಿ ಮತ್ತು ಅದರ ಒಳಗಿರುವ ವಸ್ತುಗಳಿಗಾದ ಹಾನಿ.
ಇವುಗಳಲ್ಲದೆ, ಪಾಲಿಸಿಯ ನಿರ್ದಿಷ್ಟ ಪರಿಚ್ಛೇದಗಳಿಗೆ ನಿರ್ದಿಷ್ಟವಾಗಿರುವ ಕೆಲವು ಇತರ ಬಹಿಷ್ಕಾರಗಳು ಇವೆ.
ಈ ಪಾಲಸಿಗೆ ಯಾರು ಅರ್ಜಿ ಸಲ್ಲಿಸಬಹುದು?
ಈ ನೀತಿಯು ಒಂದು ಪ್ಯಾಕೇಜ್ ಪಾಲಿಸಿ ಅಡಿಯಲ್ಲಿ ಸಮಗ್ರ ವಿಮಾ ರಕ್ಷಣೆಯನ್ನು ತೆಗೆದುಕೊಳ್ಳಲು ಬಯಸುವ ಎಸ್ಎಂಇ ವಲಯದಲ್ಲಿ ಕೈಗಾರಿಕಾ, ಉತ್ಪಾದನೆ ಮತ್ತು ಶೇಖರಣಾ ಘಟಕಗಳಿಗೆ ಸೂಕ್ತವಾಗಿದೆ.
ಪಂಚಭಾಷೆಗಳಲ್ಲೂ ಸಕ್ಸಸ್ ಕಂಡ 'ಪುಷ್ಪ' ಹಾಡುಗಳು : ಸಂಗೀತ ಪ್ರಿಯರಿಗೆ ಧನ್ಯವಾದ ಅರ್ಪಿಸಿದ ದೇವಿಶ್ರೀ ಪ್ರಸಾದ್‌..! - Saaksha TV
ಪಂಚಭಾಷೆಗಳಲ್ಲೂ ಸಕ್ಸಸ್ ಕಂಡ 'ಪುಷ್ಪ' ಹಾಡುಗಳು : ಸಂಗೀತ ಪ್ರಿಯರಿಗೆ ಧನ್ಯವಾದ ಅರ್ಪಿಸಿದ ದೇವಿಶ್ರೀ ಪ್ರಸಾದ್‌..!
ಹೈದ್ರಾಬಾದ್ : ಅಲ್ಲು ಅರ್ಜುನ್ ಸಖತ್ ವಿಭಿನ್ನವಾಗಿ ಕಾಣಿಸಿಕೊಳ್ತಾಯಿರುವ ಬಹುನಿರೀಕ್ಷೆ ಪ್ಯಾನ್ ಇಂಡಿಯಾ ಚಿತ್ರ ಪುಷ್ಪ ಈಗಾಗಲೇ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ.. ಬಾಹುಬಲಿ , ಕೆಜಿಎಫ್ ಹಾದಿಯಲ್ಲಿ ಸಾಗಿರುವ ಚಿತ್ರ 2 ಸರಣಿಗಳಲ್ಲಿ ತೆರೆಕಾಣಲಿದೆ..
ಈ ನಡುವೆ ಸಿನಿಮಾದ ಹಾಡುಗಳು ಸಖತ್ ಸೌಂಡ್ ಮಾಡ್ತಿವೆ.. ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿವೆ.. ಶ್ರೀವಲ್ಲಿ ಇರಬಹುದು, ಜೋಕೆ ಜೋಕೆ , ಸಾಮಿ ಸಾಮಿ ಇರಬಹುದು ಮೂರೂ ಹಾಡುಗಳೂ ಕೂಡ ಐದೂ ಭಾಷೆಗಳಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿದೆ. ಹಾಡುಗಳು ಈಗಾಗಲೇ 250 ಮಿಲಿಯನ್‌ ವೀವ್ಸ್‌ ಪಡೆದು ಮುನ್ನುಗುತ್ತಿವೆ.
ಅರವಿಂದ್ ಕೈಯಿಂದ ಪ್ರಶಸ್ತಿ ಪಡೆದ ದಿವ್ಯಾ ಉರುಡುಗ..!
ಹಾಡುಗಳು ಸೂಪರ್ ಹಿಟ್ ಆಗಿರುವ ಖುಷಿಯಲ್ಲಿ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ ಸಂಗೀತಪ್ರಿಯರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. 2021 ನೇ ವರ್ಷ ತನಗೆ ಯಶಸ್ವಿ ವರ್ಷವಾಗಿದೆ ಎಂದಿದ್ದಾರೆ.
ಸುಕುಮಾರ್‌ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದ್ದು ರಶ್ಮಿಕಾ ಅಲ್ಲುಗೆ ನಾಯಕಿಯಾಗಿದ್ದಾರೆ. ಹಾಡುಗಳಲ್ಲಿ ಅಲ್ಲು ಡಡ್ಯಾನ್ಸ್ ಹೈಲೇಟ್ ಅನ್ನಬಹುದು.. ವಿಭಿನ್ನ ಶೈಲಿಯ ಸ್ಟೆಪ್ಸ್ ಜನರನ್ನ ಆಕರ್ಷಿಸಿದೆ.. ಪುಷ್ಪ ಚಿತ್ರ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್‌ 17ಕ್ಕೆ ಬಿಡುಗಡೆಯಾಗಲಿದೆ..
ಹನುಮ ಜಯಂತಿ 2021: ಪವನಪುತ್ರನ ಜನನದ ಹಿಂದಿದೆ ಈ ಕಥೆ | Hanuman Jayanti 2021: Birth Story of Lord Hanuman In Kannada - Kannada BoldSky
33 min ago 2022ರಲ್ಲಿ ಹಜ್‌ ಯಾತ್ರೆ ಯಾವಾಗ? ಮೆಕ್ಕಾದ ಕಾಬಾದ ವಿಶೇಷತೆಯೇನು?
| Updated: Monday, April 26, 2021, 9:52 [IST]
ಕೇಸರಿ ಮತ್ತು ಅಂಜನಾ ದಂಪತಿಯ ಪುತ್ರ ಪವನಪುತ್ರ ಹನುಮ. ಈತ ರಾಮನ ಬಗ್ಗೆ ಹೋಲಿಸಲಾಗದ ಭಕ್ತಿಯನ್ನು ಹೊಂದಿದ್ದ. ತನ್ನ ನಿಸ್ವಾರ್ಥ ಸೇವೆ ಮತ್ತು ಭಕ್ತಿಯಿಂದ, ರಾಮ ಮತ್ತು ಅವರ ಕುಟುಂಬದ ಪ್ರೀತಿಯನ್ನು ಗೆದ್ದಿದ್ದ ಹನುಮ. ಅಂತಹ ಹನುಮ ಹುಟ್ಟಿದ ದಿನವನ್ನು ಹನುಮಾನ್ ಜಯಂತಿ ಎಂದು ಆಚರಣೆ ಮಾಡಲಾಗುತ್ತದೆ. ಈ ವರ್ಷ ಹನುಮ ಜಯಂತಿಯನ್ನು ಇದೇ ತಿಂಗಳ 27ರಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹನುಮನ...
ರಾಮಭಕ್ತ ಹನುಮನ ಜನ್ಮ ಕಥೆಯನ್ನು ಈ ಕೆಳಗೆ ನೀಡಲಾಗಿದೆ:
ಒಂದು ಕಾಲದಲ್ಲಿ, ಮೇರು ಪರ್ವತಗಳಲ್ಲಿ ಗೌತಮ ಎಂಬ ಮಹಾನ್ ಋಷಿ ಇದ್ದನು. ಕೇಸರಿ ಮತ್ತು ಅಂಜನಾ ಎಂಬ ಮಂಗ ದಂಪತಿಗಳು ಆಶ್ರಮದ ಬಳಿ ವಾಸಿಸುತ್ತಿದ್ದರು. ಅಂಜನಾ ಒಂದು ಕಾಲದಲ್ಲಿ ಸ್ವರ್ಗೀಯ ಕನ್ಯೆಯಾಗಿದ್ದು, ಶಾಪಗ್ರಸ್ತಳಾಗಿ ಕೋತಿ ಮಹಿಳೆಯಾಗಿ ರೂಪಾಂತರಗೊಂಡಿದ್ದಳು. ಅವಳು ಶಿವನ ಅವತಾರಕ್ಕೆ ಜನ್ಮ ನೀಡಿದರೆ ಮಾತ್ರ ಅವಳು ಈ ಶಾಪದಿಂದ ಮುಕ್ತಳಾಗುತ್ತಾಳೆ.
ಅಂಜನಾ ಶಾಪಕ್ಕೆ ಕಾರಣ:
ಒಮ್ಮೆ ಅವಳು ಭೂಮಿಯ ಮೇಲೆ ಅಲೆದಾಡುತ್ತಿದ್ದಾಗ, ಕೋತಿಯೊಂದು ಕಾಡಿನಲ್ಲಿ ಆಳವಾಗಿ ಧ್ಯಾನಿಸುತ್ತಿರುವುದನ್ನು ಅವಳು ನೋಡಿದಳು. ಕ್ಷಣಾರ್ಧದಲ್ಲಿ ಕೋತಿ ಪವಿತ್ರ ಋಷಿಯಂತೆ ವರ್ತಿಸುತ್ತಿರುವುದನ್ನು ನೋಡಿದಳು. ಅದನ್ನು ನೋಡಿದ ಅವಳಿಗೆ ನಗೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅವಳು ಕೋತಿಯನ್ನು ಗೇಲಿ ಮಾಡಿದಳು. ಆದರೆ ಕೋತಿ ಅವಳ ಮೂರ್ಖ ನಡವಳಿಕೆಯನ್ನು ನಿರ್ಲಕ್ಷಿಸಿತು. ಅವಳು ತನ್ನ ನಗೆಯನ್ನು ಮ...
ಅಂಜನಾ ಮಗನಾಗಿ ಹನುಮನ ಜನನ:
ಯಾವುದೇ ಆಹಾರ ಅಥವಾ ನೀರಿಲ್ಲದೆ ಅಂಜನಾಳ ಸಮರ್ಪಿತ ಪ್ರಾರ್ಥನೆ ಮತ್ತು ಶಿವನ ಧ್ಯಾನ ಮಾಡಿರುವುದರಿಂದ ಶೀಘ್ರದಲ್ಲೇ ಅವಳಿಗೆ ಫಲಪ್ರದವಾಯಿತು. ಶಿವನು ಆಕೆಯ ಪ್ರಾರ್ಥನೆಯಿಂದ ಪ್ರಭಾವಿತನಾಗಿ, ಅಮರನಾಗಿರುವ ಮಗನನ್ನು ಆಶೀರ್ವದಿಸಿದನು.
ಮತ್ತೊಂದೆಡೆ, ದೂರದ ರಾಜ್ಯದಲ್ಲಿ ಅಯೋಧ್ಯೆಯ ರಾಜ ದಶರಥ, ಅಗ್ನಿಯಿಂದ ದೈವಿಕ ಸಿಹಿಯಿಂದ ಆಶೀರ್ವದಿಸಲ್ಪಟ್ಟ ಮಕ್ಕಳನ್ನು ಪಡೆಯಲು ಧಾರ್ಮಿಕ ಅಶ್ವಮೇಧ ಯಜ್ಞವನ್ನು ಮಾಡುತ್ತಿದ್ದನು. ಆ ಸಿಹಿಯನ್ನು ಅವನ ಮೂವರು ಹೆಂಡತಿಯರಲ್ಲಿ ಹಂಚಿಕೊಳ್ಳಬೇಕಾಗಿತ್ತು. ಆದರೆ ವಾಯು ಮತ್ತು ಶಿವನ ಸೂಚನೆಯ ಮೇರೆಗೆ ಸಿಹಿಯ ಒಂದು ಭಾಗವನ್ನು ಅಂಜನಾನಿಗೆ ಕೊಟ್ಟು ಆಶೀರ್ವದಿಸಿದನು. ಅಂಜನಾ ಶೀಘ್ರದಲ್ಲೇ ದೈವಿಕ ಸಿಹಿ ತಿಂ...
ಶೀಘ್ರದಲ್ಲೇ ಅಂಜನಾ ಮಂಗ ಮುಖದ ಮಗುವಿಗೆ ಜನ್ಮ ನೀಡಿದಳು ಮತ್ತು ಅವನಿಗೆ ಅಂಜನೇಯ ಎಂದು ಹೆಸರಿಟ್ಟರು (ಇದರರ್ಥ 'ಅಂಜನನ ಮಗ'). ಶೀಘ್ರದಲ್ಲೇ ಅಂಜನಾ ತನ್ನ ಶಾಪದಿಂದ ಬಿಡುಗಡೆಯಾದಳು ಮತ್ತು ಸ್ವರ್ಗಕ್ಕೆ ಮರಳಲು ಬಯಸಿದನು. ಹನುಮನ ತಂದೆ ಅಂಜನೇಯನನ್ನು ನೋಡಿಕೊಂಡರು. ಅವನು ಬಲವಾದ ಆದರೆ ಚೇಷ್ಟೆಯ ಚಿಕ್ಕ ಹುಡುಗನಾಗಿ ಬೆಳೆದನು.
ಟಿಪ್ಪು ಸುಲ್ತಾನ್ ಪಠ್ಯ ಕೈ ಬಿಟ್ಟ ರಾಜ್ಯ ಸರ್ಕಾರ - Power TV News
Home ರಾಜ್ಯ ಟಿಪ್ಪು ಸುಲ್ತಾನ್ ಪಠ್ಯ ಕೈ ಬಿಟ್ಟ ರಾಜ್ಯ ಸರ್ಕಾರ
ಟಿಪ್ಪು ಸುಲ್ತಾನ್ ಪಠ್ಯ ಕೈ ಬಿಟ್ಟ ರಾಜ್ಯ ಸರ್ಕಾರ
ಬೆಂಗಳೂರು : ರಾಜ್ಯ ಸರ್ಕಾರ 7 ನೇ ತರಗತಿಯಲ್ಲಿದ್ದ ಟಿಪ್ಪು ಸುಲ್ತಾನ್​ ಕುರಿತ ಪಠ್ಯವನ್ನು ತೆಗೆದು ಹಾಕಿದೆ. ಕೊವಿಡ್ ನೆಪದಲ್ಲಿ ಟಿಪ್ಪು ಪಠ್ಯಕ್ಕೆ ಶಿಕ್ಷಣ ಇಲಾಖೆ ಕತ್ತರಿ ಹಾಕಿದೆ.
ಕೊರೋನಾ ಹಿನ್ನೆಲೆಯಲ್ಲಿ ಶೇ 30ರಷ್ಟು ಪಠ್ಯವನ್ನು ಕೈ ಬಿಡಲಾಗುತ್ತಿದೆ. ಶೈಕ್ಷಣಿಕ ಅವಧಿ 120 ದಿನಕ್ಕೆ ಲೆಕ್ಕಹಾಕಿ ಸರ್ಕಾರ ಪಠ್ಯಗಳನ್ನು ಕಡಿತಗೊಳಿಸಿದೆ. ಪ್ರಾಥಮಿಕ ಶಿಕ್ಷಣದಲ್ಲಿ 6 ಮತ್ತು 7ನೇ ತರಗತಿ ಎರಡಲ್ಲೂ ಟಿಪ್ಪು ಪಠ್ಯ ಇತ್ತು. ಇದೀಗ 7ನೇ ತರಗತಿಯಲ್ಲಿದ್ದ ಟಿಪ್ಪು ಪಠ್ಯ ತೆಗೆದು ಹಾಕಲಾಗಿದ್ದು, 6 ನೇ ತರಗತಿ ಮತ್ತು ಪ್ರೌಢಶಾಲೆಯಲ್ಲಿ 10ನೇ ತರಗತಿಗೆ ಟಿಪ್ಪು ಕುರಿತ ಪಠ್ಯ ಮುಂದುವರಿ...
ಈ ಹಿಂದೆ ಟಿಪ್ಪು ಪಠ್ಯ ತೆಗೆಯಲು ಸರ್ಕಾರ ತೀರ್ಮಾನ ಮಾಡಿತ್ತು. ಬಳಿಕ ಸಮಿತಿ ರಚನೆ ಮಾಡಿ ಈ ಬಗ್ಗೆ ಸರ್ಕಾರ ವರದಿ ಪಡೆದಿತ್ತು.
ತಜ್ಞರ ಸಮಿತಿ ಟಿಪ್ಪು ಪಠ್ಯ ಉಳಿಸಿಕೊಳ್ಳೋದು ಸೂಕ್ತ ಎಂದು ಹೇಳಿತ್ತು. ನಂತರ ಪಠ್ಯ ಕೈಬಿಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿತ್ತು. ಈಗ ಕೊವಿಡ್ ಕಾರಣದಿಂದ 7ನೇ ತರಗತಿ ಟಿಪ್ಪು ಪಠ್ಯ ತೆಗೆಯಲಾಗಿದೆ.
Previous articleನಿರ್ಮಾಣವಾಗಿ ಎರಡೇ ಎರಡು ವರ್ಷಕ್ಕೇ ಫ್ಲೈಓವರ್ ತುಂಬೆಲ್ಲಾ ಹೊಂಡ-ಗುಂಡಿ! ಇದು ಜೀವಕ್ಕೆ ಕುತ್ತು ತರ್ತಿರೋ ಮೇಲ್ಸೇತುವೆ..!
111 ಅಡಿ ಕನ್ನಡ ಧ್ವಜ : ಸಂಭ್ರಮದ 111 ಅಡಿ ಕನ್ನಡ ಧ್ವಜ ಮೆರವಣಿಗೆ - 111-foot kannada flag parade | Vijaya Karnataka
111-foot kannada flag parade
ಯಾದಗಿರಿ:ಕನ್ನಡ ರಾಜ್ಯೋತ್ಸವ ಅಂಗವಾಗಿ ಸೃಷ್ಟಿ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ 111 ಅಡಿ ಉದ್ದದ ಕರುನಾಡ ಕನ್ನಡ ಧ್ವಜದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿವಿಜೃಂಭಣೆಯಿಂದ ಇತ್ತೀಚೆಗೆ ನಡೆಯಿತು.
ನಗರದ ಸರಕಾರಿ ಪದವಿಪೂರ್ವ ಕಾಲೇಜು ಆವರಣದಿಂದ ಆರಂಭಗೊಂಡ ಧ್ವಜ ಮೆರವಣಿಗೆಗೆ ಪ್ರಥಮ ದರ್ಜೆ ಗುತ್ತಿಗೆದಾರ ಬಸ್ಸುಗೌಡ ಬಿಳ್ಹಾರ ಚಾಲನೆ ನೀಡಿದರು. ನಂತರ ಮೆರವಣಿಗೆಯು ಕನಕ ವೃತ್ತ, ಗ್ರಾಮೀಣ ಠಾಣೆ, ಸರಕಾರಿ ಪದವಿ ಮಹಾವಿದ್ಯಾಲಯ, ವಾಲ್ಮೀಕಿ ವೃತ್ತ, ಚಿತ್ತಾಪೂರ ರಸ್ತೆ, ನೇತಾಜಿ ಸುಭಾಶ್ಚಂದ್ರ ಬೋಸ್‌ ವೃತ್ತ, ಲಾಲ್‌ ಬಹಾದ್ದೂರ ಶಾಸ್ತ್ರಿ ವೃತ್ತ, ಜಿಲ್ಲಾಧಿಕಾರಿಗಳ ನಿವಾಸ, ತಹಸೀಲ ಕಚೇರಿ, ಜಿಲ್...
ನಂತರ ಚರ್ಚಹಾಲ್‌ ನಡೆದ ಕಾರ್ಯಕ್ರಮವನ್ನು ಹೆಡಗಿಮುದ್ರಾ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ತಾಯಿ ಭಾಷೆ ಈ ಭಾಷೆಯ ಪ್ರೇಮವನ್ನು ಕನ್ನಡ ನಾಡಿನಲ್ಲಿಬದುಕುವ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ತಾಯಿಯ ಋುಣ ತೀರಿಸಬೇಕೆಂದು ಹೇಳಿದರು.
ಗಡಿ ಪ್ರದೇಶದಲ್ಲಿರುವ ನೆರೆ ರಾಜ್ಯಗಳ ಭಾಷೆಯನ್ನು ರಾಜ್ಯದಲ್ಲಿಹೇರಿಕೆ ಮಾಡಲಾಗುತ್ತಿದೆ. ಇದಕ್ಕೆ ಕನ್ನಡಿಗರಾದವರು ಆಸ್ಪದ ಕೊಡದೇ ಕನ್ನಡ ನಾಡು ನುಡಿ ನೆಲ ಜಲ ರಕ್ಷಣೆಗೆ ಪಣ ತೊಡಬೇಕೆಂದು ಸಲಹೆ ನೀಡಿದರು. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಬರೆದಂತೆ ದೇಶಕ್ಕೆ ಒಂದೇ ಧ್ವಜ ನಾಡಿಗೆ ಹಲವು ಧ್ವಜಗಳಿವೆ ಇವುಗಳನ್ನು ನಮ್ಮ ಒಗ್ಗಟ್ಟಿಗಾಗಿ ಬಳಸಿಕೊಳ್ಳಬೇಕೆಂದು ಅವರು ಕಿವಿಮಾತು ಹೇಳಿದರು.
ಸೃಷ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಬೀರೇಶ ಚಿರತೆನೋರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿನಬೆಳಗಾದರೆ ಆಂಗ್ಲಭಾಷೆಯ ಗುಡ್‌ ಮಾರ್ನಿಂಗ್‌ ಗುಡ್‌ ಇವ್ನಿಂಗ್‌ ಪದ ಬಳಸುವುದು ಅನ್ಯ ಭಾಷೆಗಳನ್ನು ಮಾತನಾಡುವುದು ಮಾಡುವುದರಿಂದ ತಾಯಿ ಭಾಷೆ ಕನ್ನಡವನ್ನು ಹತ್ಯ ಮಾಡಿದಂತೆ ಆಗುತ್ತದೆ ಎಂಬುದನ್ನು ಪ್ರತಿಯೊಬ್ಬ ಕನ್ನಡಿಗನು ಅರಿಯಬೇಕೆಂದು ಹೇಳಿದರು. ಈ ಜಾಗೃತಿ ಮೂಡಿಸುವ ಸಲುವಾಗಿ 111 ಅಡಿ ಕನ್ನಡ ...
ಡಿಡಿಯು ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಭೀಮಣ್ಣ ಮೇಟಿ, ಸುಭಾಷರೆಡ್ಡಿ ನಾಯ್ಕಲ್‌, ಗಿರಿಮಲ್ಲಪ್ಪ, ನಾಗರೆಡ್ಡಿ ಕಣೇಕಲ್‌, ಚುಟುಕು ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ. ಸಿದ್ದರಾಜರೆಡ್ಡಿ, ಮಲ್ಲಿಕಾರ್ಜುನ ಕೊತ್ತೆ, ಶಿವಕುಮಾರ ಬೆಂಕಿ, ಮಾಳಿಂಗರಾಯ ಹೊರಟೂರ, ಸೈದಪ್ಪ ಕಣಜಿಕರ್‌, ಮರೆಪ್ಪ, ನಿತೇಶ್‌, ಅರುಣ, ಮಲ್ಲುಸೇರಿದಂತೆ ಇನ್ನಿತರರಿದ್ದರು.
ಪೆರುವಾಜೆ ಗ್ರಾಮ ಪಂಚಾಯತ್ : ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಆಚರಣೆ – ಪೂರ್ವಭಾವಿ ಸಭೆ | ಸುದ್ದಿ ಸುಳ್ಯ
ಸಾರ್ವಜನಿಕರಿಗೆ ಗಾಂಧಿವೇಷ ಸ್ಪರ್ಧೆ
ಗ್ರಾಮದವರಿಗೆ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಧಾರ
ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಆಚರಣೆ ಬಗ್ಗೆ ವಿವಿಧ ಸಂಘಸಂಸ್ಥೆಗಳ ಪೂರ್ವಭಾವಿ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರುರವರ ಅಧ್ಯಕ್ಷತೆಯಲ್ಲಿ ಜು.27 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಆಗಸ್ಟ್ 15 ರಂದು 75 ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ವಿವಿಧ ಸ್ಪರ್ಧೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಕಾರ್ಯಕ್ರಮ ಮತ್ತು ಸ್ವಾತಂತ್ರ್ಯೋತ್ಸವ ನಡಿಗೆ, ಗಾಂಧಿ ವೇಷ ಸ್ಪರ್ಧೆ ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ವಿಜೃಂಭಣೆಯಿಂದ ಆಚರಿಸುವಂತೆ ನಿರ್ಣಯಿಸಲಾಯಿತು.
ಸಭೆಯಲ್ಲಿ ಸೇರಿದವರೆಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ ಇಟ್ರಾಡಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಸ್ವಾಗತಿಸಿದರು, ವಂದಿಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಶೆಟ್ಟಿ, ಸಚಿನ್ ರಾಜ್ ಶೆಟ್ಟಿ, ಮಾಧವ ಮುಂಡಾಜೆ, ರೇವತಿ ಮಠತ್ತಡ್ಕ, ಗುಲಾಬಿ ಮುಕ್ಕೂರು, ಶಹಿನಾಜ್ ಪೆಲತ್ತಡ್ಕ ಉಪಸ್ಥಿತರಿದ್ದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಯಾಕರ ಆಳ್ವ, ಪೆರುವಾಜೆ ಡ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಘವ ಎನ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಅನುಸೂಯ ಪೆರುವಾಜೆ,ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಮಾಜಿ ಸದಸ್ಯ ಉಮೇಶ್ ಕೆ.ಎಂ.ಬಿ, ಮಂಜಪ್ಪ ರೈ, ಭಾವೈಕ್ಯ ಯುವಕ ಮಂಡಲದ ಅಧ್ಯಕ್ಷ ವಾಸುದೇವ ಆಚಾರ್ಯ, ಪೆರುವಾಜೆ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಉದಯಗಣೇಶ್ ಅ...
ವೀರಶೈವ ಪರ ಹೇಳಿಕೆ- ಎಚ್ಡಿಕೆ ಮೊಸಳೆ ಕಣ್ಣೀರು | HD Kumaraswamy Veerashaiva | Zilla Panchayat Election | Veerashaiva Seers Politics | ಎಚ್ ಡಿ ಕುಮಾರಸ್ವಾಮಿ ವೀರಶೈವ| ಜಿಲ್ಲಾ ಪಂಚಾಯತಿ ಚುನಾವಣೆ| ವೀರಶೈವ ಸ್ವಾಮಿಜೀಗಳು ರಾಜಕೀಯ | - Kannada Oneindia
ವೀರಶೈವ ಪರ ಹೇಳಿಕೆ- ಎಚ್ಡಿಕೆ ಮೊಸಳೆ ಕಣ್ಣೀರು
| Published: Tuesday, December 14, 2010, 17:43 [IST]
ಶಿವಮೊಗ್ಗ, ಡಿ.14: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ನಾನು ವೀರಶೈವ ವಿರೋಧಿಯಲ್ಲ ಎಂದು ಇತ್ತೀಚೆಗೆ ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಖಂಡನೆ ವ್ಯಕ್ತಪಡಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ರಾಜ್ಯಕಾರ್ಯದರ್ಶಿ ಹೆಚ್.ಎಂ.ಚಂದ್ರಶೇಖರಪ್ಪ ಮಾತನಾಡಿ, ಕುಮಾರಸ್ವಾಮಿ ವೀರಶೈವ ಜನಾಂಗದ ಬಗ್ಗೆ ಮೊಸಳೆ ಕಣ್ಣೀರಿನ ಹೇಳಿಕೆ ನೀಡಿರುವುದಕ್ಕೆ ವಿರೋಧವಿದೆ. ವೀರಶೈವ ಧರ್ಮ ಜೆಡಿಎಸ್-ಕಾಂಗ್ರೆಸ್-ಬಿಜೆಪಿಗೆ ಸೀಮಿತವಲ್ಲ. ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕ್ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ವೀರಶೈವ ಜನಾಂಗವನ್ನು ಮರುಳು ಮಾಡಿ, ವೀರಶೈವರ ಮತ ಪಡೆಯುವ ಹುನ್ನಾರದ...
ಇವರ ಈ ನಡವಳಿಕೆ ನೀತಿಸಂಹಿತೆಯ ಉಲ್ಲಂಘನೆಯಾಗಿದ್ದು, ಕೂಡಲೇ ಚುನಾವಣಾ ಆಯೋಗ ಜೆಡಿಎಸ್‌ನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಇಂತಹ ಹೇಳಿಕೆಗಳಿಗೆ ಸಮಾಜಬಾಂಧವರು ಮರುಳಾಗುವುದಿಲ್ಲ ಎಂಬುದನ್ನು ಕುಮಾರಸ್ವಾಮಿಯವರು ಅರಿತುಕೊಳ್ಳಬೇಕು. ಈ ಹಿಂದೆ ಸಿದ್ದರಾಮಯ್ಯ ಮತ್ತು ಎಂ.ಪಿ.ಪ್ರಕಾಶ್‌ರವರಿಗೂ ಮುಖ್ಯಮಂತ್ರಿ ಮಾಡುವುದಾಗಿ ನಂಬಿಸಿ ಈ ಹಿಂದ...
ಈಗ ಚುನಾವಣೆಯ ಸಂದರ್ಭದಲ್ಲಿ ಕುಮಾರಸ್ವಾಮಿಯವರಿಗೆ ಜಾತಿಯ ಬಗ್ಗೆ ಅನುಕಂಪ ಮೂಡಿದ್ದು, ಈ ರೀತಿ ಯಾವ ಪಕ್ಷದವರೂ ಮಾಡಬಾರದು. ಯಾವ ಪಕ್ಷದ ಮುಖಂಡರೂ ಇಂಥ ಬೇಜವಾಬ್ದಾರಿ ಹೇಳಿಕೆ ಕೊಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ ಸ್ವಾಮಿಗಳು ಈ ಹಿಂದೆ ಮುಖ್ಯಮಂತ್ರಿಯ ಪರ ಪ್ರತಿಭಟನೆ ನಡೆಸಿದ್ದರಲ್ಲಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಸ್ವಾಮಿಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಅವರು ಬಸವಣ್ಣನವರ ತತ್ವಗಳನ್ನು ಪ್ರಚಾರ ಮಾಡಲಿ. ರಾಜಕೀಯದಲ್ಲಿ ಸ್ವಾಮೀಜಿಗಳಿಗೆ ಆಸಕ್ತಿಯಿದ್ದಲ್ಲಿ ಕಾವಿ ಬಟ್ಟೆಯನ್ನು ಕಳಚಿ, ಖಾದಿ ಬಟ್ಟೆಯನ್ನು ಹಾಕಿಕೊಳ್ಳಲಿ. ಸ್ವಾಮೀಜಿಯಾಗಿ ಯಾರು ಬೇಕಾದರೂ ಆಗಬಹುದು. ಸ್...
ಎಚ್ ಡಿ ಕುಮಾರಸ್ವಾಮಿ ವೀರಶೈವ ಜಿಲ್ಲಾ ಪಂಚಾಯತಿ ಚುನಾವಣೆ hd kumaraswamy veerashaiva zilla panchayat election
Akhila Bharata Veerashaiva Mahasabha claims HD Kumaraswamy statement of backing up Veerhaiva community is just an public drama to gain votes of Veerashaiva community during upcoming Zilla Panchayat election. Seers supporting politicians is also illegal said Mahasabha chief HM Chandrashekarappa in Shimoga.
ಅಣ್ಣಾ ಹೋರಾಟಕ್ಕೆ ಹೆಂಡದ ದೊರೆ ಮಲ್ಯ ಕೊಂಕು | Anna Hazareji should not accuse UPA Government of fooling him Vijay Mallya, ಅಣ್ಣಾ ಹೋರಾಟಕ್ಕೆ ಹೆಂಡದ ದೊರೆ ಮಲ್ಯ ಕೊಂಕು - Kannada Oneindia
3 min ago ರಾಜ್ಯದ ಹಲವೆಡೆ ಕಿದ್ವಾಯಿ ಆಸ್ಪತ್ರೆಯ ವಿಭಾಗೀಯ ಕೇಂದ್ರ: ಸುಧಾಕರ್
20 min ago ಹರ್ಷಿತಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು
49 min ago ದೆಹಲಿಯಲ್ಲಿ ಶಾಹಿನ್ ಬಾಗ್ ಬೆನ್ನಲ್ಲೇ ಮೆಟ್ರೋ ಸ್ಟೇಷನ್ ಬಂದ್!
| Published: Monday, December 19, 2011, 9:32 [IST]
ಬೆಂಗಳೂರು, ಡಿ. 19: ಜಾಗತಿಕ ಚಿಂತಕ, ಭ್ರಷ್ಟಾಚಾರ ವಿರೋಧಿ ಹಿರಿಯಣ್ಣ ಹಜಾರೆ ಬಗ್ಗೆ ಹೆಂಡದ ದೊರೆ, ಅಗ್ರಮಾನ್ಯ ಸಾಲಗಾರ ಕಿಂಗ್ ಫಿಷರ್ ಏರ್ ಲೈನ್ಸ್ ಮಾಲೀಕ ವಿಜಯ್ ಮಲ್ಯ ಕಿಡಿಕಾರಿದ್ದಾರೆ. ತಮ್ಮ 56ನೇ ಹುಟ್ಟುಹಬ್ಬದಂದು (ಡಿ.18) ಮಲ್ಯ ಸಾಹೇಬರು ಈ ಮಾತುಗಳನ್ನಾಡಿದ್ದಾರೆ.
ಹಿರಿಯಣ್ಣ ಹಜಾರೆಯ ಭ್ರಷ್ಟಾಚಾರ ವಿರೋಧಿ ಬಗ್ಗೆ ಮಲ್ಯ ಲಘುವಾಗಿ ಮಾತನಾಡಿದ್ದಾರೆ. ಯುಪಿಎ ಸರಕಾರ ಮತ್ತು ಲೋಕಪಾಲ ಅಣ್ಣಾ ತಂಡದ ಮಧ್ಯೆ ಆಗಾಗ್ಗೆ ಸಂಭವಿಸುತ್ತಿರುವ ಸಂಘರ್ಷಗಳ ಬಗ್ಗೆ ಕಟುವಾಗಿ ವ್ಯಾಖ್ಯಾನಿಸಿದ್ದಾರೆ.
ಜನ ಲೋಕಪಾಲ ಮಸೂದೆ ಜಾರಿ ವಿಷಯದಲ್ಲಿ ಸರಕಾರ ತಮ್ಮನ್ನು ಅನೇಕ ಬಾರಿ ಮೂರ್ಖರನ್ನಾಗಿಸಿದೆ. ಇನ್ನು ಇದನ್ನು ಸಹಿಸಲಾಗದು ಎಂದು ಅಂತಿಮ ಎಚ್ಚರಿಕೆ ನೀಡಿರುವ ಅಣ್ಣಾ ಸದ್ಯದಲ್ಲೇ ಮತ್ತೆ ಉಪವಾಸ ನಡೆಸುವುದಾಘಿ ಕೇಂದ್ರಕ್ಕೆ ಎಚ್ಚರಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಟ್ವಿಟ್ಟರ್ ಮೂಲಕ ಅಣ್ಣಾ ಪ್ರಯುತ್ನಗಳ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಲ್ಯ, ಸರಕಾರ ತಮ್ಮನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಅಣ್ಣಾಜಿ ದೂರುವಂತಿಲ್ಲ. ಏಕೆಂದರೆ ಸ್ವತಃ ಅಣ್ಣಾ ಅವರೇ ದೇಶವನ್ನು ಎಷ್ಟು ಬಾರಿ ಮೂರ್ಖರನ್ನಾಗಿಸಿದ್ದಾರೆ ಎಂಬುದನ್ನು ಲೆಕ್ಕ ಹಾಕಲಿ ಎಂದು ಭಾನುವಾರ ರಜಾ ಮೂಡಿನಲ್ಲಿ ವಿವಾದಕ್ಕೆ ಕಿಚ್ಚು ಹಚ್ಚಿದ್ದಾರೆ.
ವಿಜಯ್ ಮಲ್ಯ ಅಣ್ಣಾ ಹಜಾರೆ ಟ್ವಿಟ್ಟರ್ ಹುಟ್ಟುಹಬ್ಬ ಉಪವಾಸ ಅಮೆರಿಕ ಜನ ಲೋಕಪಾಲ ಮಸೂದೆ twitter vijay mallya anna hazare jan lokpal bill fast birth day