text stringlengths 0 61.5k |
|---|
ರೇಷನ್ ಕಾರ್ಡ್ ಪಡಿತರಿಗೆ ಪ್ರತಿ ತಿಂಗಳಿಗೊಮ್ಮೆ ಹೊಸ ಹೊಸ ನಿಯಮಗಳು ಹಾಗೂ ಹೊಸದಾಗಿ ಬದಲಾವಣೆಗಳನ್ನು ಮಾಡುತ್ತಾರೆ. ಇನ್ನೂ ಈ ತಿಂಗಳಿನಲ್ಲಿ ಮಹತ್ವದ ಆದೇಶವನ್ನು ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಲ್ಲಾ ಗ್ರಾಹಕರಿಗೆ ಅಂದರೆ ರೇಷನ್ ಕಾರ್ಡ್ ಗ್ರಾಹಕರಿಗೆ ನೀಡಿದ್ದಾರೆ. ರಾಜ್ಯದ ಎಲ್ಲಾ ಜನಸಾಮಾನ್ಯರು ಇನ್ನು ಮುಂದೆ ರೇಷನ್ ಕಾರ್ಡ್ ಪಡೆಯಲು ತಪ್ಪದೇ ಈ ಕೆಲಸವನ್ನು ಮಾಡಲೇಬೇಕು. ಹೌದು... |
ಈ ಕೆವೈಸಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ನಿಮ್ಮ ವಲಯಕ್ಕೆ ಬರುವಂತಹ ನ್ಯಾಯಬೆಲೆ ಅಂಗಡಿಗೆ ಹೋಗಿ ಆಧಾರ್ ಕಾರ್ಡ್ ಸಮೇತವಾಗಿ ಈ ಕೆವೈಸಿಯನ್ನು ಮಾಡಿಸಿಕೊಳ್ಳಬೇಕು. ಈ ಕೆವೈಸಿಯನ್ನು ಮಾಡಿಕೊಂಡ ನಂತರ ನಿಮಗೆ ರೇಷನ್ ಸಿಗಲಿದೆ ಇಲ್ಲವಾದಲ್ಲಿ ನಿಮಗೆ ಅಕ್ಕಿ ವಿತರಣೆ ಮಾಡಲಾಗುವುದಿಲ್ಲ. |
ಈ ಕೆವೈಸಿಯನ್ನು ಏಕೆ ಮಾಡಿಕೊಳ್ಳಬೇಕು ಎಂದರೆ ಕೆಲವೊಂದು ಬಿಪಿಎಲ್ ಕುಟುಂಬಗಳು ಮೃತರ ಹೆಸರಿನಲ್ಲಿ ರೇಷನ್ ಪಡೆಯುತ್ತಿದ್ದಾರೆ ಹಾಗೂ ಇನ್ನೂ ಕೆಲ ಕುಟುಂಬಗಳಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳ ಹೆಸರಿನ ಮೇಲೆ ಈಗಾಗಲೇ ರೇಷನ್ ಪಡೆಯುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರ ಗಮನಿಸಿದೆ. |
ಹೀಗಾಗಿ ಕುಟುಂಬದ ಪ್ರತಿ ಯೊಬ್ಬ ಸದಸ್ಯರೂ ಈ ಕೆವೈಸಿಯನ್ನು ಮಾಡಿಸಿಕೊಳ್ಳಬೇಕಾಗಿರುವುದು ಕಡ್ಡಾಯ. ಈಗಾಗಲೇ ಈ ಹಿಂದೆ ಹಲವು ಕುಟುಂಬಗಳು ಈ ಕೆವೈಸಿಯನ್ನು ಮಾಡಿಸಿಕೊಂಡಿದೆ ಇನ್ನೂ ಕೆಲವೊಂದು ಕುಟುಂಬಗಳು ಇಲ್ಲಿಯತನಕ ಮಾಡಿಸಿಕೊಂಡಿಲ್ಲ. ಹಾಗಾಗಿ ನೀವು ಕೂಡ ಈ ಕೆವೈಸಿಯನ್ನು ಮಾಡಿಕೊಳ್ಳಬೇಕಾಗಿರುವುದು ಕಡ್ಡಾಯವಾಗಿದೆ. |
ಲೋಕಸಭೆ ಚುನಾವಣೆ ಹಿನ್ನೆಲೆ ರೌಡಿಶೀಟರ್ ಪೆರೇಡ್ - Anekal News |
ಆನೇಕಲ್ ; ಲೋಕಸಭೆ ಚುನಾವಣೆಗೆ ಮೂಹೂರ್ತ ಫಿಕ್ಸ್ ಆದ ಹಿನ್ನೆಲೆ ಎಲ್ಲಾ ಕಡೆ ಚುನಾವಣಾ ಸಿದ್ದತೆ ಭರದಿಂದ ಸಾಗುತ್ತಿದೆ. ಇದರ ಜೊತೆ ಅಪರಾಧ ಪ್ರಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೌಡಿಶೀಟರ್ ಪೆರೇಡ್ ಸಹ ನಡೆಸುವ ಮೂಲಕ ಪುಡಿ ರೌಡಿಗಳಿಗೆ ಎಚ್ಚರಿಕೆ ಸಹ ನೀಡಲಾಗುತ್ತಿದೆ. ಇಂದು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಆನೇಕಲ್ ಉಪ ವಿಭಾಗದ ೭ ಠಾಣೆಗಳ ವ್ಯಾಪ್ತಿಯ 180 ಕ್ಕೂ ಹೆಚ್ಚು ರೌಡಿಗಳನ್ನ ಕ... |
ಬಾಲಾಜಿ, ಜಗಧೀಶ್, ಮೋಹನ್ ಹಾಗೂ ಎಸ್ ಐ ಹೇಮಂತ್, ಮುರುಳಿ, ಮಂಜುನಾಥ್ ರೆಡ್ಡಿ ಹಾಗೂ ಪ್ರೀತಂ ಗೌಡ ಸಹ ಪೆರೆಡ್‍ನಲ್ಲಿ ಉಪಸ್ಥಿತರಿದ್ದರು. |
ಭಾರತೀಯ ಸೇನೆಗೆ ಗೌರವ ಸೂಚಿಸಲು 5 ಕೀಮೀ ಮ್ಯಾರಾಥಾನ್. |
ದೇಶದ ವೀರ ಯೋಧರಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ 5 ಕೀ.ಮೀ ಮ್ಯಾರಾಥಾನ್ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಆನೇಕಲ್‍ನ ಬುಕ್ಕಸಾಗರ ಗ್ರಾಮದ ಎಂಡ್ಯೂವರ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪೊಷಕರು ಭಾಗವಹಿಸುವ ಮೂಲಕ ಸೈನಿಕರಿಗೆ ಗೌರವ ಸೂಚಿಸಿದರು, ಸೇನೆ ಕ್ಯಾಪ್ ತೊಟ್ಟು ಹಳ್ಳಿಗಾಡಿನ ರಸ್ತೆಯಲ್ಲಿ 5 ಕೀಮೀ ಓಡುವ ಮೂಲಕ ದೇಶ ಪ... |
ಬನ್ನೇರುಘಟ್ಟ – ಡಿಕೆ ಸುರೇಶ್ ಪ್ರಚಾರ, ರೋಡ್ ಶೋ |
ಬನ್ನೇರುಘಟ್ಟ: ಬಿಜೆಪಿ ಪಕ್ಷಕ್ಕೆ ಚುನಾವಣೆ ಬಂದಾಗ ಮಾತ್ರ ರಾಮನ ನೆನಪಾಗುತ್ತದೆ. ಬಳಿಕ ರಾಮನನ್ನು ಕಾಡಿಗೆ ವಾಪಸ್ ಕಳುಹಿಸಿ ಬಿಡುತ್ತಾರೆ. ಎಂದು ಡಿ ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬನ್ನೇರಘಟ್ಟ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಡಿಕೆ ಸುರೇಶ್ ಬಿಜೆಪಿ ರಾಮನನ್ನ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಕಟ್ಟಿದ್ದ ಅಡ... |
ಆನೇಕಲ್: ಲೋಕಸಭೆ ಚುನಾವಣೆಗೆ ಸಿದ್ದತೆ |
ಲೋಕಸಭೆ ಚುನಾವಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಚುನಾವಣೆಗೆ ಎಲ್ಲಾ ರೀತಿ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ, ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಮಸ್ಟರಿಂಗ್ ಸೆಂಟರ್ ನಿರ್ಮಾಣ ಮಾಡಲಾಗಿದ್ದು ತಾಲ್ಲೂಕಿನ 368 ಮತಗಟ್ಟೆಗಳಿಗೆ ಇಲ್ಲಿಂದಲೇ ವಿದ್... |
ವಿಶ್ವ ಕನ್ನಡ ಸಮ್ಮೇಳನಕ್ಕೆ ಗಡಿಬಿಡಿ ಸಿದ್ಧತೆ | Prajavani |
ವಿಶ್ವ ಕನ್ನಡ ಸಮ್ಮೇಳನಕ್ಕೆ ಗಡಿಬಿಡಿ ಸಿದ್ಧತೆ |
Published: 01 ಮಾರ್ಚ್ 2011, 00:55 IST |
Updated: 01 ಮಾರ್ಚ್ 2011, 00:55 IST |
ಬೆಳಗಾವಿ: ಐತಿಹಾಸಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಹತ್ತು ದಿನಗಳು ಮಾತ್ರ ಬಾಕಿ ಇವೆ. ಈ ಹಿಂದೆ ಪ್ರಕಟಿಸಿದಂತೆ ಫೆಬ್ರುವರಿ ಅಂತ್ಯಕ್ಕೆ ಏನಾಗಬೇಕಿತ್ತೋ ಆ ಎಲ್ಲ ಕಾರ್ಯಗಳು ನಿಗದಿಯಂತೆ ನಡೆದಿಲ್ಲ. |
ಮುಖ್ಯವಾಗಿ ಸಮ್ಮೇಳನವನ್ನು ಯಾರು ಉದ್ಘಾಟಿಸಬೇಕು ಎಂಬ ಗೊಂದಲ ಬಗೆಹರಿದಿಲ್ಲ. ಹೀಗಾಗಿ ಆಮಂತ್ರಣ ಪತ್ರಿಕೆಯೂ ಹೊರಬಂದಿಲ್ಲ. ಆಮಂತ್ರಣ ಪತ್ರಿಕೆಗೆ ಇನ್ನೂ ಮೂರ್ನಾಲ್ಕು ದಿನ ತಡವಾಗಬಹುದು ಎನ್ನಲಾಗುತ್ತಿದೆ. |
ಈ ಮಧ್ಯೆ ಬೆಳಗಾವಿ ನಗರದ ಅಕ್ರಮ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲು ಸ್ಥಳೀಯ ಆಡಳಿತ ಮುಂದಾಗಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ. ಡಬ್ಬಾ ಅಂಗಡಿ ಮಾಲೀಕರ ಹಿತರಕ್ಷಣಾ ಸಮಿತಿ ಜತೆಗೆ ಎಂಇಎಸ್ ಮುಖಂಡರು ಪರೋಕ್ಷವಾಗಿ ಕೈ ಜೋಡಿಸಿದ್ದಾರೆ. ಈ ಮೊದಲು ಸುಮ್ಮನಿದ್ದ ಸ್ಥಳೀಯ ಶಾಸಕರೊಬ್ಬರು ಅವರ ಪರವಾಗಿ ನಿಂತಿದ್ದಾರೆ. |
ಈ ನಡುವೆ 'ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಬೆಳಗಾವಿ ಬಂದ್ ಆಚರಿಸಲಾಗುತ್ತದೆ' ಎಂಬ ಬೆದರಿಕೆಯನ್ನೂ ಒಡ್ಡಲಾಗಿದೆ. ಹೀಗಾಗಿ ಡಬ್ಬಾ ಅಂಗಡಿ ಮಾಲೀಕರ ಪರವಾಗಿ 'ರಾಜಕೀಯ' ಮಾಡುತ್ತಿರುವವರನ್ನು ಸಮಾಧಾನಗೊಳಿಸಬೇಕಾದ ಹೊಸ ಜವಾಬ್ದಾರಿ ಸಮ್ಮೇಳನ ಸಮಿತಿಯ ಮೇಲೆ ಬಿದ್ದಿದೆ. ಡಬ್ಬಾ ಅಂಗಡಿ ಮಾಲೀಕರ ಜತೆಗೆ ನಿರಂತರ ಸಭೆಗಳೂ ನಡೆಯುತ್ತಿವೆ. |
ಇಂತಹ ಹೆಚ್ಚುವರಿ ಗೊಂದಲಗಳ ಮಧ್ಯೆ ಸಮ್ಮೇಳನದ ಸಿದ್ಧತೆಗಳನ್ನು ಅವಧಿಯೊಳಗೆ ಹೇಗೆ ಮುಗಿಸಬೇಕು? ಗಡಿಬಿಡಿಯೂ ಹೆಚ್ಚಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯವೇದಿಕೆಯ ನಿರ್ಮಾಣ ನಡೆಯುತ್ತಿದೆ. |
ಅದರ ಪ್ಲಾಟ್‌ಫಾರಂ ಮಾತ್ರ ಮುಗಿದಿದ್ದು, ಮುಂದಿನ ದಿನಗಳಲ್ಲಿ ವಿನ್ಯಾಸ, ಕ್ರೀಡಾಂಗಣದ ಸಮತಟ್ಟು ಮೊದಲಾದ ಕಾರ್ಯಗಳು ನಡೆಯಬೇಕಿದೆ. ಅದೇ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವೂ ಚಾಲ್ತಿಯಲ್ಲಿದ್ದು, ಹೆಚ್ಚುವರಿ ಸಮಸ್ಯೆಗಳನ್ನು ಹುಟ್ಟುಹಾಕಿದೆ. |
ಈ ನಡುವೆ ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ರಸ್ತೆಗಳನ್ನು ಅಗಲಗೊಳಿಸುವುದು, ಡಾಂಬರೀಕರಣ ನಡೆಯುತ್ತಿದೆ. ಕೆಲ ಕಡೆಗಳಲ್ಲಿ ಹೊಸ ರಸ್ತೆ ನಿರ್ಮಾಣವೂ ಆರಂಭಗೊಂಡಿದೆ. ಜತೆಗೆ ಅಲ್ಲಲ್ಲಿ ಹಳೆಯ ರಸ್ತೆ ವಿಭಜಕಗಳನ್ನು ಒಡೆದುಹಾಕಿ ಹೊಸ ವಿಭಜಕಗಳನ್ನೂ ನಿರ್ಮಿಸುವ ಕಾಮಗಾರಿ ಆಶ್ಚರ್ಯ ಹುಟ್ಟಿಸಿದೆ. |
ನಗರದಾದ್ಯಂತ ವಿಶ್ವ ಕನ್ನಡ ಸಮ್ಮೇಳನದ ಬ್ಯಾನರ್‌ಗಳನ್ನು ಕಟ್ಟಲಾಗುತ್ತಿದೆ. ಸಮ್ಮೇಳನದ ಮೆರುಗು ಹೆಚ್ಚಿಸುವ ಉದ್ದೇಶದಿಂದ ಬೆಳಗಾವಿ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳ ಗೋಡೆ ಮೇಲೆ ಈ ಭಾಗದ ವೈಶಿಷ್ಟ್ಯ, ಪ್ರಕೃತಿ ಸೌಂದರ್ಯ, ಐತಿಹಾಸಿಕ ತಾಣಗಳು, ಆಟೋಟಗಳ ಕುರಿತು ದೊಡ್ಡ, ದೊಡ್ಡ ಚಿತ್ರಗಳನ್ನು ಬರೆಯುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಸುಮಾರು 90ಸಾವಿರ ಚದರ ಅಡಿ ಗೋಡೆಗಳ ಮೇಲೆ ಅಂತಹ ಚಿತ್ರಗಳನ್ನು... |
ಈ ಎಲ್ಲ ಗಡಿಬಿಡಿಯ 'ಲಾಭ' ಮಾಡಿಕೊಳ್ಳಲು ಗುತ್ತಿಗೆದಾರರು, ವಿವಿಧ ಕುಶಲಕರ್ಮಿಗಳು ಮುಂದಾಗಿದ್ದಾರೆ. ನಿಗದಿತ ಅವಧಿಯೊಳಗೆ ಕೆಲಸ ಮುಗಿಸಬೇಕಿದ್ದರೆ ಹೆಚ್ಚುವರಿ ಹಣ ನೀಡಬೇಕು ಎಂಬ ಹೊಸ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. |
ಜತೆಗೆ ಬೆಳಗಾವಿ, ಬೈಲಹೊಂಗಲ, ಖಾನಾಪುರ ಭಾಗದ ಸರ್ಕಾರಿ ಪ್ರೌಢ ಶಾಲೆಗಳ ಒಟ್ಟು 34 ಚಿತ್ರಕಲಾ ಶಿಕ್ಷಕರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳ ಲಾಗುತ್ತದೆ. |
ಅವರಿಗೆಲ್ಲ ಅಗತ್ಯ ಪರಿಕರಗಳನ್ನು ಸಮ್ಮೇಳನ ಸಮಿತಿಯ ವತಿಯಿಂದ ಒದಗಿಸಲಾಗುತ್ತಿದೆ. ಆದರೆ ಅವರೆಲ್ಲ 'ಸರ್ಕಾರಿ' ಶಿಕ್ಷಕರಾಗಿರುವ ಕಾರಣಕ್ಕೆ ಅಲ್ಲೂ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದೆ. |
ಅತಿಥಿಗಳಿಗೆ ವಸತಿ ಸೌಕರ್ಯ ಉದ್ದೇಶದಿಂದ ವಿವಿಧ ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳ ನಿರ್ಮಾಣವೂ ಗಡಿಬಿಡಿಯಲ್ಲಿ ನಡೆಯುತ್ತಿದೆ. ಈ ಎಲ್ಲ 'ತುರ್ತು' ಕಾಮಗಾರಿಗಳ ಗುಣಮಟ್ಟದ ಬಗ್ಗೆಯೂ ಮಾತನಾಡಿಕೊಳ್ಳುವಂತಾಗಿದೆ. |
ಈ ಗಡಿಬಿಡಿ, ಗೊಂದಲಗಳ ಕುರಿತು ಸಮ್ಮೇಳನ ಸಮಿತಿಯ ಅಧ್ಯಕ್ಷ ಸಚಿವ ಉಮೇಶ ಕತ್ತಿ ಅವರನ್ನು ಸಂಪರ್ಕಿಸಿದರೆ 'ಸಡಗರದಲ್ಲಿ ಗಡಿಬಿಡಿ ಸಾಮಾನ್ಯ' ಎಂದರು. |
ಕೊಟ್ಟೆ ರೊಟ್ಟಿ – ಶ್ರಾವಣ |
Date: 05/07/2021Author: Ravishankar G 2 Comments |
ಕರಾವಳಿ ಜಿಲ್ಲೆಯ ಸಾಂಪ್ರದಾಯಿಕ ತಿಂಡಿಗಳಲ್ಲಿ ಕೊಟ್ಟೆರೊಟ್ಟಿ ತನ್ನದೇ ಆದ ಸ್ಥಾನ ಪಡೆದಿದೆ, ಕೆಲ ಹಬ್ಬ ಹರಿದಿನಗಳಲ್ಲಿ ಈ ತಿಂಡಿಯನ್ನು ಬಡವ ಬಲ್ಲಿದರೆಂಬ ಭೇದ ಭಾವವಿಲ್ಲದೇ ತೆಳು ಬೆಲ್ಲ ಮತ್ತು ಕಾಯಿ ಹಾಲಿನೊಂದಿಗೆ ತಿಂದು ಖುಷಿಪಡು ವರು. ಹಸಿ ಹಲಸಿನ ಎಲೆಗಳನ್ನು ಲೋಟದಾಕಾ ರವಾಗಿ ತಯಾರಿಸಿ (ಈ ಪ್ರಕ್ರಿಯೆಗೆ ಕೊಟ್ಟೆ ಶೆಡುವುದು ಎನ್ನುವರು) ಅದರಲ್ಲಿ ಇಡ್ಲಿಗೆ ಬೇಕಾ ದ ಹಿಟ್ಟನ್ನು ಹಾಕಿ, ಕೊಟ... |
ಕುಮಟಾ ಕ್ಷೇತ್ರದ ಅಂದಿನ ಎಂಎಲ್ಎ ದಿ.ಎನ್ ಎಚ್ ಗೌಡರು ಮೊದಲು ಬಂಕಿಕೊಡ್ಲ ಹೈಸ್ಕೂಲಿ ನಲ್ಲಿ ಶಿಕ್ಷಕರಾಗಿದ್ದರು. ಆ ಸಂದರ್ಭದಲ್ಲಿ ಹಬ್ಬ ಬಂತೆಂದರೆ ಬಂಕಿಕೊಡ್ಲದಿಂದ ಅವರ ಮೂಲ ಮನೆ ಗೊನೇಹಳ್ಳಿಗೆ ದಂಪತಿ ಸಮೇತ ನಡೆದೇ ಹೋಗುವಾಗ ಅವರ ನೂರು ಅಡಿ ಮುಂದೆ ಹಲಸಿನ ಎಲೆಯಿಂದ ತಯಾರಿಸಿದ ಖಾಲಿ ಕೊಟ್ಟೆ ಗಳನ್ನು ಒಬ್ಬ ಹೊತ್ತೊಯ್ಯುತ್ತಿದ್ದ, ಆಗಲೇ ನಮಗೆ ನಾಳೆ ಯಾವುದೋ ಹಬ್ಬವಿದೆ ಅಂತ ನೆನಪಾಗುತ್ತಿತ್ತು.... |
✍️ಪ್ರಕಾಶ ಕಡಮೆ. ನಾಗಸುಧೆ, |
Previous Previous post: ಪುಣ್ಯಕೋಟಿ(ಶ್ರೀಧರ ಗಸ್ತಿ) |
Next Next post: ಸಂಗಾತಿಯಂತರಂಗ |
2 thoughts on "ಕೊಟ್ಟೆ ರೊಟ್ಟಿ" |
ಕೊಟ್ಟಿರೊಟ್ಟಿ ನಿಜವಾಗಲೂ ತಿನ್ನಲು ಯೋಗ್ಯವಾದ ಹಾಗೂ ಸತ್ವಭರಿತ. ತಿಂಡಿ.ಹಲಸಿನೆಲೆಯ ಬಳಸಿ ಮಾಡುವ ರುಚಿಕರವಾದ ತಿಂಡಿ..ಖುಷಿಯಾಯಿತು ಸರ್ |
ಸ್ಟಾರ್ ನಟರನ್ನು ನಿಖಿಲ್ ಮೀರಿಸ್ತಿರೋದೆಲ್ಲಿ ಗೊತ್ತಾ?! ಇದು ಯುವರಾಜನ ಹವಾ! – Samagra Suddi |
ಸ್ಟಾರ್ ನಟರನ್ನು ನಿಖಿಲ್ ಮೀರಿಸ್ತಿರೋದೆಲ್ಲಿ ಗೊತ್ತಾ?! ಇದು ಯುವರಾಜನ ಹವಾ! |
ಸಾಮಾಜಿಕ ಜಾಲತಾಣದಲ್ಲಿ ಸಿಎಂ ಪುತ್ರ ಹಾಗೂ ಯುವರಾಜ ಖ್ಯಾತಿಯ ನಿಖಿಲ್ ಕುಮಾರಸ್ವಾಮಿ ಫ್ಯಾನ್ಸ್ ಸಂಖ್ಯೆ ಹೆಚ್ಚುತ್ತಲೆ ಇದೆ. ಇದಕ್ಕೆ ಸಾಕ್ಷಿಯಾಗ್ತಿದೆ ನಿಖಿಲ್ ಚಿತ್ರಗಳು. ಹೌದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಬಿಡುಗಡೆಗೊಂಡ ಎರಡನೇ ದಿನದಲ್ಲಿ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ. |
ಗುಳಿಕೆನ್ನೆಯ ಚೆಲುವೆ ರಚಿತಾರಾಮ್ ನಾಯಕಿಯಾಗಿರುವ ಈ ಚಿತ್ರಕ್ಕಾಗಿ ನಿಖಿಲ್ ಕುಮಾರಸ್ವಾಮಿ ಸಾಕಷ್ಟಯ ಸ್ಟಂಟ್ಗಳನ್ನು ಕೂಡ ಅಭ್ಯಾಸ ಮಾಡಿದ್ದರು. ಇದೀಗ ಬಿಡುಗಡೆಯಾದ ಎರಡನೇ ದಿನಕ್ಕೆ ಸೀತಾರಾಮ ಕಲ್ಯಾಣ ಸ್ಟಾರ್ ನಟರ ಚಿತ್ರಗಳ ಹಾಡನ್ನು ಹಿಂದಿಕ್ಕಿ ಮುಂದೇ ಸಾಗುತ್ತಿದೆ. |
ಸ್ಟಾರ್ ನಟರಾದ ಶಿವರಾಜಕುಮಾರ್ ಮತ್ತು ಸುದೀಪ್ ಅಭಿಯನದ ದಿ ವಿಲನ್ ಚಿತ್ರದ ಹಾಡುಗಳು ಇದುವರೆಗೂ ಯೂ ಟ್ಯೂಬ್ನಲ್ಲಿ ಹೆಚ್ಚು ಸದ್ದು ಮಾಡಿತ್ತು. ಆದರೇ ಸೀತಾರಾಮ ಕಲ್ಯಾಣ ಟೀಸರ್ ಒಂದೇ ದಿನದಲ್ಲಿ ಈ ದಾಖಲೆಗಳನ್ನು ಹಿಂದಿಕ್ಕಿ ಸಾಗುತ್ತಿದೆ. |
ದಿ ವಿಲನ್ ಚಿತ್ರದ ಟಿಕ್ ಟಿಕ್ ಹಾಡು ಬಿಡುಗಡೆಯಾದ ವಾರದಲ್ಲೇ 26.3 ಲಕ್ಷ ವಿವ್ಸ್ಗಳನ್ನು ಪಡೆದಿದ್ದರೇ ಇದೀಗ ಸೀತಾರಾಮ ಕಲ್ಯಾಣ ಟೀಸರ್ ಎರಡು ದಿನದಲ್ಲಿ ವೀವ್ಸ್ 32.5 ಲಕ್ಷ ಜನರ ವಿವ್ಸ್ ಪಡೆದುಕೊಂಡಿದೆ. ದಿ ವಿಲನ್ ಹಾಡು ಜುಲೈ 13 ರಂದು ರಿಲೀಸ್ ಆಗಿದ್ದು, ಇದುವರೆಗೂ ಒಟ್ಟು 47 ಲಕ್ಷ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೇ ಯುವರಾಜ ಎಂದೆ ಕರೆಸಿಕೊಳ್ಳುವ ನಿಖಿಲ್ ಕುಮಾರಸ್ವಾಮಿ... |
ಕೇವಲ ಸೀತಾರಾಮ ಕಲ್ಯಾಣ ಮಾತ್ರವಲ್ಲ, ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯುವಾಗಿ ನಟಿಸಿರುವ ನಿಖಿಲಗಾಗಿ ವಿಶೇಷವಾದ ಟೀಸರ್ ವೊಂದನ್ನೇ ಸಿದ್ದಪಡಿಸಲಾಗಿತ್ತು. ಇದು ಕೂಡ ಸಖತ್ ಮೆಚ್ಚುಗೆ ಪಡೆದುಕೊಂಡಿದ್ದು, ದರ್ಶನ ವಿಡಿಯೋ ದಾಖಲೆಯನ್ನೇ ಮೀರಿಸಿದ್ದನ್ನು ನಾವಿಲ್ಲಿ ನೆನಪಿಸಬಹುದು. |
ರಾಯರ 349 ನೇ ಆರಾಧನೆಗೆ ಭಕ್ತರಿಗೆ ಪ್ರವೇಶವಿಲ್ಲ – ಜನಮಿತ್ರ |
ರಾಯರ 349 ನೇ ಆರಾಧನೆಗೆ ಭಕ್ತರಿಗೆ ಪ್ರವೇಶವಿಲ್ಲ |
– ಮಂತ್ರಾಲಯ ವಾಹಿನಿಯಲ್ಲಿ ನೇರಪ್ರಸಾರ |
ರಾಯಚೂರು: ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವ ಆಗಸ್ಟ್ 2 ರಿಂದ 8 ರವರೆಗೆ ನಡೆಯಲಿದೆ. ಆದ್ರೆ ಕೊರೊನಾ ಬಾಧೆ ಹಿನ್ನೆಲೆ ಈ ಬಾರಿ ಮಂತ್ರಾಲಯ ಮಠಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ. ಹೀಗಾಗಿ ಮಠದ ಆಡಳಿದ ಮಂಡಳಿ ಆರಾಧನಾ ಸಪ್ತರಾತ್ರೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನ ಮಠದ ಅಧಿಕೃತ ಯೂ ಟ್ಯೂಬ್ ಚಾನಲ್ "ಮಂತ್ರಾಲಯ ವಾಹಿನಿ"ಯಲ್ಲಿ ನೇರಪ್ರಸಾರ ಮಾಡಲು ನಿರ್ಧರಿ... |
ಆರಾಧನಾ ಮಹೋತ್ಸವಕ್ಕೆ ಮಠದಲ್ಲಿ 50 ಕ್ಕಿಂತ ಕಡಿಮೆ ಜನರಿಗೆ ಮಾತ್ರ ಅವಕಾಶ ಇರುವುದರಿಂದ ಯಾವುದೇ ಭಕ್ತರು ಮಠಕ್ಕೆ ಬರುವುದು ಬೇಡ. ಅಲ್ಲದೆ ನಾನಾ ರಾಜ್ಯಗಳಲ್ಲಿ ಕೊರೊನಾ ಹಿನ್ನೆಲೆ ಅಂತರರಾಜ್ಯ ಓಡಾಟಕ್ಕೆ ನಿರ್ಭಂದ ಹೇರಿವೆ. ಹೀಗಾಗಿ ಖಾಸಗಿ ವಾಹನ, ಸ್ವಂತ ವಾಹನ, ಪಾದಯಾತ್ರೆ ಸೇರಿದಂತೆ ಯಾವುದೇ ರೀತಿಯಲ್ಲಿ ಭಕ್ತರು ಮಠಕ್ಕೆ ಬರುವುದು ಬೇಡ. ಇದ್ದ ಜಾಗದಲ್ಲೇ ರಾಯರನ್ನ ಸ್ಮರಿಸಿ ಆರಾಧನೆ ಮಾಡಬೇಕು... |
ಮಂತ್ರಾಲಯ ಮಠದ ಪ್ರಾಕಾರದಲ್ಲಿ ಮಾತ್ರ ಕಾರ್ಯಕ್ರಮಗಳು ನಡೆಯುತ್ತಿದ್ದು ಧಾರ್ಮಿಕ, ಆಧ್ಯಾತ್ಮಿಕ, ಉತ್ಸವ, ಪ್ರವಚನ ಸೇರಿ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರ ಮಾಡಲಾಗುವುದು. ಒಂದು ವೇಳೆ ಭಕ್ತರು ಮಠಕ್ಕೆ ಬಂದರೆ ಇಲ್ಲಿ ವಸತಿ ವ್ಯವಸ್ಥೆಯೂ ಇಲ್ಲಾ, ದರ್ಶನಕ್ಕೂ ಅವಕಾಶವಿಲ್ಲ. ಕೊರೊನಾ ಮುಗಿದ ಬಳಿಕ ಭಕ್ತರಿಗಾಗಿ ಆರಾಧನಾ ಸಂಸ್ಮರಣೋತ್ಸವ ಕಾರ್ಯಕ್ರಮವನ್ನ ಆಯೋಜಿಸಲಾಗುವುದು ಇದರಲ್ಲಿ ಎಲ್ಲಾ ಭಕ್ತರು... |
ಪ್ರೇಮಿಗಳ ದಿನಾಚರಣೆಗೆ ಬಣ್ಣದ ವೇಷ! | Prajavani |
ಪ್ರೇಮಿಗಳ ದಿನಾಚರಣೆಗೆ ಬಣ್ಣದ ವೇಷ! |
Published: 15 ಫೆಬ್ರವರಿ 2012, 14:00 IST |
Updated: 15 ಫೆಬ್ರವರಿ 2012, 14:00 IST |
ಮಂಗಳೂರು: ಫೆಬ್ರುವರಿ 14 ಎಂದರೆ ಯುವಜನರಲ್ಲಿ ಅದೇನೋ ಉತ್ಸಾಹ. ಎಂದೂ ಇಲ್ಲದ ಕಾತುರ, ಆಕರ್ಷಣೆ ಯುವಜನರಲ್ಲಿ ಭುಗಿಲೇಳುತ್ತವೆ. |
ಪ್ರೇಮಿಗಳ ದಿನಾಚರಣೆ ಎಂದರೆ ಅದು ಯುವಕ-ಯುವತಿಯರದ್ದೇ ಹಬ್ಬ. ಪ್ರೀತಿಯನ್ನು ಆಚರಿಸುವ, ಹೊಸ ಪ್ರೀತಿಗೆ ಮುನ್ನುಡಿ ಹಾಡಲು ಸಂಭ್ರಮಿಸುವ ಈ ದಿನವನ್ನು ಮಂಗಳೂರಿನಲ್ಲೂ ಯುವಜನರು ಮಂಗಳವಾರ ಆಚರಿಸಲಾಯಿತು. |
ಆದರೆ ಪ್ರೇಮಿಗಳ ದಿನಕ್ಕೆ ಏಕೋ ಏನೋ ಕೊಂಚ ಉತ್ಸಾಹ ಕಡಿಮೆಯೇ ಇದ್ದಿತು. ಮಂಗಳವಾರ ಬೆಳಿಗ್ಗೆಯಾಗುತ್ತಲೂ ಪ್ರೇಮಿಗಳಿಗೆ ತಮ್ಮ ಸಂಗಾತಿಯೊಂದಿಗೆ ಪ್ರೇಮದಿನ ಆಚರಿಸುವ ಸಂಭ್ರಮವೇನೋ ಇದ್ದಂತೆ ಕಂಡಿತು. ಆದರೆ ಆಚರಿಸುವವರ ಸಂಖ್ಯೆ ಮಾತ್ರ ಅತಿ ವಿರಳವಾಗಿತ್ತು. ಪ್ರೇಮಿಗಳ ಫೇವರೇಟ್ ಸ್ಪಾಟ್ ಆದ ಎಂಪೈರ್ ಮಾಲ್‌ನ ಅಮೀಬಾ, ಸಿಟಿ ಸೆಂಟರ್‌ನ ಫುಟ್ ಕೋರ್ಟ್, ಬಿಗ್ ಬಜಾರ್ ಸೇರಿದಂತೆ ನಗರದ ಅನೇಕ ಕಾಫಿ ಡೇ ಕ... |
ಬಣ್ಣ ಬಣ್ಣಕ್ಕೂ ಅರ್ಥ..!: ಪ್ರೇಮಿಗಳ ದಿನದ ಜೋಷ್‌ನಲ್ಲಿ ರಂಗುರಂಗಿನ ಬಟ್ಟೆಗಳನ್ನು ತೊಟ್ಟಿದ್ದ ಪ್ರೇಮಿಗಳು ಗಮನ ಸೆಳೆದರು. ಈಗಾಗಲೇ ಪ್ರೇಮಿಗಳಾಗಿರುವವರು ಕೆಂಪು ಬಟ್ಟೆ ತೊಟ್ಟರೆ, ಪ್ರೇಮಕ್ಕಾಗಿ ಹಾತೊ ರೆಯುತ್ತಿರುವವರು ಹಸಿರು ಬಟ್ಟೆ ತೊಟ್ಟಿದ್ದರು. ಪ್ರೇಮ ಬಯಸದೇ ಸ್ನೇಹವನ್ನು ಮಾತ್ರ ಬಯಸುವವರು ಹಳದಿ ವಸ್ತ್ರ ಧರಿಸಿ ಗಮನ ಸೆಳೆದರು. |
ಎಂಪೈರ್ ಮಾಲ್‌ನ ಅಮೀಬಾದಲ್ಲಿ ಸಿಕ್ಕ, ಬಿಜೈನ ಯುವ ಜೋಡಿ ಕ್ಲಾರಾ ಮತ್ತು ಜಫರ್‌ಸನ್ `ಪ್ರಜಾವಾಣಿ~ ಯೊಂದಿಗೆ ಈ `ಬಣ್ಣದ ಬಟ್ಟೆ~ ವಿಚಾರ ಹಂಚಿಕೊಂಡವರು. ಈ ಜೋಡಿ ಕೆಂಪು ಮೇಲಂಗಿ ತೊಟ್ಟಿದ್ದಿತು. |
`ಕಳೆದ 3 ವರ್ಷದಿಂದ ಪ್ರೇಮಿಸುತ್ತಿದ್ದೇವೆ. ಇದೇ ವರ್ಷ ಮದುವೆಯಾಗಲಿದ್ದೇವೆ. ನಮ್ಮ ಪ್ರೀತಿಗೆ ಶಾಶ್ವತ ಆಯಸ್ಸು ನೀಡಲು ನಮಗೆ ಮದುವೆಯೇ ಆಧಾರ~ ಎಂದು ತಮ್ಮ ಭಾವನೆ ಹಂಚಿಕೊಂಡರು. |
`ಆದರೆ, ನಮಗೆ ವ್ಯಾಲೆಂಟೇನ್ಸ್ ಡೇ ಕೇವಲ ಸಾಂಕೇತಿಕ ಅಷ್ಟೇ. ನಮ್ಮ ಪ್ರೀತಿ ಶುರುವಾಗಿದ್ದು, ಈ ದಿನದಂದು ಅಲ್ಲವೇ ಅಲ್ಲ. ಆದರೆ ನಮ್ಮ ಪ್ರೀತಿಯನ್ನು ಈ ದಿನದಂದು ಆಚರಿಸುತ್ತೇ ವಷ್ಟೇ. ಇದು ನಮಗೆ ಪವಿತ್ರ ಸೇಂಟ್ ವ್ಯಾಲೆಂಟೇನ್ ಅವರ ಹುಟ್ಟುಹಬ್ಬದ ದಿನವೂ ಹೌದು. ಇದನ್ನು ನಾವು ಕುಟುಂಬ ಸಮೇತವೂ ಆಚರಿಸುತ್ತೇವೆ. ಈ ದಿನ ಕೇವಲ ಪ್ರೇಮಿ ಗಳಿಗೇನು ಮೀಸಲಲ್ಲ. ಪ್ರೀತಿ ಇರುವ ಯಾರು ಬೇಕಾದರೂ ವ್ಯಾಲೆಂಟೇ... |
ಬಲ್ಮಠ ರಸ್ತೆಯ ಕಾಫಿ ಡೇನಲ್ಲಿ ಕೇಕ್ ಕತ್ತರಿಸಿ ಹಂಚಿ ತಿಂದ ಪ್ರೇಮಿಗಳಾದ ಅನುಪಮಾ ಹಾಗೂ ದಿನೇಶ್ ಜೋಡಿ, ಪ್ರೇಮಿಗಳ ದಿನವನ್ನು ಸಂಭ್ರಮದಿಂದಲೇ ಆಚರಿಸಿದರು. ಪತ್ರಿಕೆ ಜತೆ ಮಾತನಾಡಿದ ದಿನೇಶ್, `ಪ್ರೇಮಿಗಳ ದಿನಾಚರಣೆ ಎಂದರೆ ಇದು ನಮ್ಮ ದಿನ. ವರ್ಷಕ್ಕೆ ಒಮ್ಮೆ ನಮಗೆ ಮುಕ್ತವಾಗಿ ಪ್ರೇಮ ಆಚರಿಸುವ ಸ್ವಾತಂತ್ರ್ಯ ಇಂದೇ ಸಿಗುವುದು. ಆದರೆ ನಮ್ಮ ಪ್ರೀತಿ ಇಂದಿಗೇ ಸೀಮಿತವೇನಲ್ಲ. ವರ್ಷ ಪೂರ್ತಿ ಆಚರಿ... |
`ಇದು ನಮ್ಮಿಬ್ಬರಿಗೂ ಸಂಭ್ರಮದ ದಿನ. ನಮ್ಮ ಮನೆಯಲ್ಲೂ ನಮ್ಮ ಪ್ರೇಮದ ಬಗ್ಗೆ ಅರಿವಿದೆ. ಪ್ರೇಮಿಗಳ ದಿನವನ್ನು ಯಾರೂ ಕದ್ದು ಮುಚ್ಚಿ ಆಚರಿಸಬಾರದು~ ಎಂದು ಹರ್ಷ ವ್ಯಕ್ತಪಡಿಸಿದರು ಅನುಪಮಾ. |
ಸಿಟಿ ಸೆಂಟರ್‌ನಲ್ಲಿ ಜೋಡಿಗಳೇ ಇರಲಿಲ್ಲ ಎನ್ನುವಷ್ಟು ನೀರಸ ಪ್ರತಿಕ್ರಿಯೆಯಿತ್ತು. ಇಲ್ಲಿನ ಫುಡ್ ಕೋರ್ಟ್‌ನಲ್ಲಿ ಸಿಕ್ಕ ಜೋಡಿ ಶ್ವೇತಾ ಮತ್ತು ಶಶಿಧರ್ ಮಾತಿಗೆ ಸಿಕ್ಕರು. ಶ್ವೇತ ಮಾತನಾಡಿ, `ನಮ್ಮದು ಅಂತರಜಾತಿ ಪ್ರೇಮ. ನನ್ನ `ಶ್ಯಾಶ್~ (ಶಶಿಧರ್) ಮಾತ್ರ ನನಗೆ ಮುಖ್ಯ. ನಮ್ಮಿಬ್ಬರಿಗೂ ಜಾತಿ ಗೊತ್ತಿಲ್ಲ. ಪ್ರೀತಿ ಜಾತಿಗಳನ್ನು ಮರೆಸಬೇಕು. ಪ್ರೀತಿಸಿ ಮದುವೆಯಾದರೆ ಮಾತ್ರ ಒಬ್ಬರನ್ನೊಬ್ಬರು ಅ... |
ಬಿಗ್ ಸಿನಿಮಾದಲ್ಲಿ ಭಲೇ ಜೋಡಿ!: `ಪ್ರೇಮಿಗಳಿಗೆ ಪ್ರೇಮಿಸಲು ಮುಕ್ತ ಜಾಗ ಸಿಗುವುದು ಸಿನಿಮಾ ಹಾಲ್. ಅದಕ್ಕೇ ನಾವು `ಏಕ್ ಮೇ ಔರ್ ಏಕ್ ತು~ ಸಿನಿಮಾ ನೋಡಲು ಬಂದಿದ್ದೇವೆ. ಜನ ಕಡಿಮೆಯಿರುವುದು ಖುಷಿಯೇ ಆಗಿದೆ~ ಎಂದು ತುಂಟ ನಗೆ ಬೀರಿದವರು ಸ್ವರ್ಣ ಮತ್ತು ಸುರೇಶ್ ಜೋಡಿ. ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಈ ಜೋಡಿಯ ಪ್ರೀತಿ ಶುರುವಾಗಿ ಆರು ತಿಂಗಳು ಆಗಿದೆಯಂತೆ! |
ಮಣಿಪುರದಲ್ಲಿ ಆಪರೇಷನ್ ಹಸ್ತಕ್ಕೆ ತಡೆಯೊಡ್ಡಲು CBI ಅಸ್ತ್ರ ಬಳಸಿತೇ BJP? |
Home ಮುಖಪುಟ ಮಣಿಪುರದಲ್ಲಿ ಆಪರೇಷನ್ ಹಸ್ತ: ಸರ್ಕಾರ ಉಳಿಸಿಕೊಳ್ಳಲು CBI ಅಸ್ತ್ರ ಬಳಸಿತೇ BJP? |
ಮಣಿಪುರದಲ್ಲಿ ಆಪರೇಷನ್ ಹಸ್ತ: ಸರ್ಕಾರ ಉಳಿಸಿಕೊಳ್ಳಲು CBI ಅಸ್ತ್ರ ಬಳಸಿತೇ BJP? |
ಬಿಜೆಪಿಗೆ ಆತಂಕವಿದೆ ಎಂಬುದು ಸ್ಪಷ್ಟವಾಗಿದೆ. ಪಕ್ಷವು ಹಿಮಂತ ಬಿಸ್ವಾ ಶರ್ಮಾ ಅವರನ್ನು ಕಳುಹಿಸಿದ್ದು ಮಾತ್ರವಲ್ಲ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಕೂಡ ಇಂಫಾಲ್ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. |
24 June 2020, 9:21 AM |
ಮಣಿಪುರದಲ್ಲಿ ಮೂವರು BJP ಶಾಸಕರು ಸೇರಿದಂತೆ ಒಂಭತ್ತು ಶಾಸಕರು ಬಿರೆನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ನಂತರ ಉಂಟಾಗಿದ್ದ ಅಸ್ಥಿರತೆ ಇನ್ನೂ ಮುಂದುವರೆದಿದೆ. ಅವರನ್ನು ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಂಡು ಸೆಕ್ಯುಲರ್ ಪ್ರೋಗ್ರೆಸ್ಸಿವ್ ಫ್ರಂಟ್ (ಎಸ್‌ಪಿಎಫ್) ಎಂದು ಕರೆಯಲ್ಪಡುವ ಕಾಂಗ್ರೆಸ್ ನೇತೃತ್ವದ ಹೊಸ ಒಕ್ಕೂಟ ರಚಿಸಿದೆ. ಆ ಮೂಲಕ ರಾಜ್ಯಪಾಲರ ಬಳಿ... |
ಸರ್ಕಾರ ಬಿದ್ದುಹೋಗುವ ಅಪಾಯ ಅರಿತ BJP ಹಲವು ಕಸರತ್ತುಗಳಿಗೆ ಮುಂದಾಗಿದೆ. ಮೊದಲನೇ ಹಂತವಾಗಿ ಬೆಂಬಲ ಹಿಂತೆಗೆದುಕೊಂಡ ನ್ಯಾಷನಲ್ ಪೀಪಲ್ಸ್ ಪಾರ್ಟಿಯು (ಎನ್‌ಪಿಪಿ)ಯ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರ ಶಾಸಕರನ್ನು ಬಿಜೆಪಿಯ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿಸುವುದಕ್ಕಾಗಿ ಇಂದು ಗುವಾಹಟಿಗೆ ಕರೆತಂದಿದೆ. |
ಎರಡನೇ ಹೆಜ್ಜೆಯಾಗಿ ಆಪರೇಷನ್ ಹಸ್ತದ ನಾಯಕತ್ವ ವಹಿಸಿರುವ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಒಕ್ರಮ್ ಇಬೋಬಿ ಸಿಂಗ್ ಅವರನ್ನು ಪ್ರಶ್ನಿಸಲು ಸಿಬಿಐ ತಂಡ ಇಂಫಾಲ್‌ಗೆ ಬಂದಿಳಿದಿದೆ. 332 ಕೋಟಿ ರೂ.ಗಳ ಹಗರಣದ ಆರೋಪವನ್ನು ಈಗ ತನಿಖೆ ನಡೆಸಲು ಸಿಬಿಐ ಮುಂದಾಗಿದೆ. ಅವರು ನಾಲ್ಕು ದಿನಗಳ ಹಿಂದಷ್ಟೇ ಬಿಜೆಪಿಯ ಮೂವರು ಸೇರಿದಂತೆ ಒಂಬತ್ತು ಶಾಸಕರು ಮುಖ್ಯಮಂತ್ರಿ ಬಿರೆನ್ ಸಿಂಗ್ ಅವರಿಗೆ ನೀ... |
ಈ ಎರಡೂ ಕ್ರಮಗಳ ಮೂಲಕ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಬಿಜೆಪಿಯ ಕೇಂದ್ರ ನಾಯಕತ್ವ ಅದರ ಜಬಾಬ್ದಾರಿ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. |
ಈಶಾನ್ಯದಲ್ಲಿ BJP ಯ ಮುಖ್ಯ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಸಚಿವ ಹಿಮಂತ ಬಿಸ್ವಾ ಶರ್ಮಾ ಎನ್‌ಪಿಪಿ ಶಾಸಕರೊಂದಿಗಿನ ಮಾತುಕತೆಗೆ ಮುಂದಾಗಿದ್ದಾರೆ. ಅಗತ್ಯಬಿದ್ದರೆ ಆ ನಾಲ್ವರು ಶಾಸಕರನ್ನು ಮಾತುಕತೆಗೆ ದೆಹಲಿಗೆ ಕರೆದೊಯ್ಯುವುದಾಗಿ ತಿಳಿಸಿದ್ದಾರೆ. |
ಹಿಮಂತ ಬಿಸ್ವಾ ಶರ್ಮಾ ಮಣಿಪುರದ ಪರಿಸ್ಥಿತಿಯನ್ನು "ನಿಯಂತ್ರಣದಲ್ಲಿದೆ" ಎಂದು ಬಣ್ಣಿಸಿದ್ದಾರೆ. ಸಮಸ್ಯೆಯನ್ನು ಪರಿಹರಿಸಲಾಗುವುದು. ಎಲ್ಲಾ ಚರ್ಚೆಗಳು ಸಕಾರಾತ್ಮಕ ವಾತಾವರಣದಲ್ಲಿ ನಡೆಯುತ್ತಿವೆ ಮತ್ತು ಎರಡು ಅಥವಾ ಮೂರು ದಿನಗಳಲ್ಲಿ ಸಕಾರಾತ್ಮಕ ಫಲಿತಾಂಶವು ಹೊರಹೊಮ್ಮುತ್ತದೆ ಎಂದು ಅವರು ಹೇಳಿದ್ದಾರೆ. |
ಅಸ್ಸಾಂನ ರಾಜ್ಯಸಭಾ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿತು. ಆದರೆ ಇದು ಅನರ್ಹತೆಯನ್ನು ಎದುರಿಸುತ್ತಿರುವ ಮೂವರು ಕಾಂಗ್ರೆಸ್ ಶಾಸಕರಿಗೆ ಮತ ಚಲಾಯಿಸಲು ಅವಕಾಶ ನೀಡುವ ಸ್ಪೀಕರ್ ಅವರ ಕೊನೆಯ ನಿಮಿಷದ ನಿರ್ಧಾರದಿಂದ ಅವರ ವಿಜಯವಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. |
2017 ರ ವಿಧಾನಸಭಾ ಚುನಾವಣೆಯಲ್ಲಿ, 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ 28 ಸ್ಥಾನಗಳೊಂದಿಗೆ ಕಾಂಗ್ರೆಸ್ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಿಜೆಪಿಗೆ 21 ಸ್ಥಾನಗಳು ದೊರೆತಿದ್ದವು. ಆದರೆ ನಾಲ್ಕು ಎನ್‌ಪಿಪಿ, ನಾಲ್ಕು ಎನ್‌ಪಿಎಫ್, ಒಂದು ಎಲ್‌ಜೆಪಿ, ಒಂದು ಟಿಎಂಸಿ, ಒಬ್ಬ ಸ್ವತಂತ್ರ ಸದಸ್ಯ ಮತ್ತು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯ ಬೆಂಬಲ ಪಡೆಯುವ ಮೂಲಕ ಬಿಜೆಪಿ ಸರ್ಕಾರ ರಚಿಸಲ... |
ಕಾಂಗ್ರೆಸ್ ತನ್ನದೇ ಆದ 20 ಶಾಸಕರನ್ನು ಹೊಂದಿದೆ. ಒಬ್ಬ ಸದಸ್ಯನನ್ನು ಅನರ್ಹಗೊಳಿಸಲಾಗಿದೆ ಮತ್ತು ಏಳು ಪಕ್ಷಾಂತರಿಗಳನ್ನು ನಿರ್ಬಂಧಿಸಲಾಗಿದೆ. ಬಿರೆನ್ ಸಿಂಗ್ ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಂಡ ಒಂಬತ್ತು ಶಾಸಕರು ಕಾಂಗ್ರೆಸ್ ಬೆಂಬಲ ಘೋಷಿಸಿದ್ದಾರೆ. ಹಾಗಾಗಿ ಸದ್ಯಕ್ಕೆ 29 ಶಾಸಕರ ಬೆಂಬಲದಿಂದ ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿದೆ. |
ಈ ಮಧ್ಯೆ, ಮಣಿಪುರ ಡೆವಲಪ್‌ಮೆಂಟ್ ಸೊಸೈಟಿ ಹಗರಣದಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್ ಅವರನ್ನು ಪ್ರಶ್ನಿಸಲು ಸಿಬಿಐ ಮುಂದಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾರಂಭವಾದ ತನಿಖೆಯ ಭಾಗವೇ ಈ ಪ್ರಶ್ನಿಸುವುದಾಗಿದೆ ಎಂದು ಕೆಲವು ಮೂಲಗಳು ಹೇಳುತ್ತವೆ. ಇಷ್ಟು ದಿನ ಸುಮ್ಮನಿದ್ದ ಸಿಬಿಐ ಈಗ ಬಿಜೆಪಿ ಸರ್ಕಾರ ಕುಸಿತದಲ್ಲಿರುವುದರಿಂದ ಅಧಿಕಾರ ಬಳಸಲು ಮುಂದಾ... |
ಇನ್ನಷ್ಟು ಸುದ್ದಿಗಳು: ಮಣಿಪುರದ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ: ಕಾಂಗ್ರೆಸ್‌ಗೆ ಮತ್ತೆ ಅಧಿಕಾರದ ಸಾಧ್ಯತೆ |
ಜಮ್ತಾದಲ್ಲಿ ಭಾರತ ಜಯಭೇರಿ | Prajavani |
ಜಮ್ತಾದಲ್ಲಿ ಭಾರತ ಜಯಭೇರಿ |
ಕ್ರಿಕೆಟ್: ವಿರಾಟ್ ಕೊಹ್ಲಿ 40ನೇ ಶತಕ; ಆಸ್ಟ್ರೇಲಿಯಾಕ್ಕೆ ಸೋಲು |
Published: 06 ಮಾರ್ಚ್ 2019, 00:57 IST |
Updated: 06 ಮಾರ್ಚ್ 2019, 00:58 IST |
ನಾಗಪುರ: ನಿರ್ಣಾಯಕ ಹಂತದಲ್ಲಿ ಬೌಲರ್‌ಗಳು ತೋರಿದ ಛಲದಿಂದ ಭಾರತ ತಂಡ ಜಯಭೇರಿ ಮೊಳ ಗಿಸಿತು. ಇಲ್ಲಿನ ಜಮ್ತಾ ಕ್ರೀಡಾಂಗಣ ದಲ್ಲಿ ಮಂಗಳವಾರ ರಾತ್ರಿ ನಡೆದ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಎಂಟು ರನ್‌ಗಳಿಂದ ಗೆದ್ದು ಸರಣಿಯಲ್ಲಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿತು. |
251 ರನ್‌ಗಳ ಜಯದ ಗುರಿಯನ್ನು ಬೆನ್ನತ್ತಿದ ಪ್ರವಾಸಿ ತಂಡದವರು 45ನೇ ಓವರ್‌ವರೆಗೂ ಗೆಲುವಿನ ಹಾದಿಯಲ್ಲಿ ಹೆಜ್ಜೆ ಹಾಕಿತ್ತು. ಈ ಸಂದರ್ಭದಲ್ಲಿ ಬೂಮ್ರಾ ಪರಿಣಾಮಕಾರಿ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸಿ ದರು. ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿ ಯಾದ ಜಯಕ್ಕೆ 11 ರನ್ ಬೇಕಾಗಿತ್ತು. ವಿಜಯಶಂಕರ್ ಮೂರು ಎಸೆತಗಳಲ್ಲಿ ಕೊನೆಯ ಎರಡು ವಿಕೆಟ್‌ಗಳನ್ನು ಕಬ ಳಿಸಿ ಭಾರತದ ಪಾಳಯದಲ್ಲಿ ಸಂಭ್ರಮದ ಹೊಳ... |
ನಾಯಕನ ಶತಕ ವೈಭವ: ಬ್ಯಾಟಿಂಗ್‌ಗೆ ಸವಾಲೆಸೆದಿದ್ದ ಪಿಚ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ಆತಿಥೇಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಭಾರತದ ಆರಂಭ ನೀರಸವಾಗಿತ್ತು. ಆದರೆ ವಿರಾಟ್ ಕೊಹ್ಲಿ (116; 120 ಎಸೆತ, 10 ಬೌಂಡರಿ) ಅವರ ಶತಕದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. |
ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆಫ್ ಸ್ಟಂಪ್‌ನಿಂದ ಆಚೆ ಹೋಗುತ್ತಿದ್ದ ಎಸೆತವನ್ನು ಸ್ಲಾಪ್ ಮಾಡಿದ ರೋಹಿತ್ ಡೀಪ್ ಥರ್ಡ್ ಮ್ಯಾನ್‌ನಲ್ಲಿದ್ದ ಜಂಪಾಗೆ ಕ್ಯಾಚ್ ನೀಡಿದರು. ಆಗ ತಂಡ ಇನ್ನೂ ಖಾತೆ ತೆರೆದಿರಲಿಲ್ಲ. |
ಒಂಬತ್ತನೇ ಓವರ್‌ನಲ್ಲಿ ಶಿಖರ್ ಧವನ್ ಕೂಡ ಔಟಾದರು. ಆಫ್ ಸ್ಪಿನ್ನರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಎಸೆತದ ಗತಿ ನಿರ್ಧರಿಸಲು ವಿಫಲರಾದ ಶಿಖರ್ ಧವನ್ ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿದರು. ವಿರಾಟ್ ಕೊಹ್ಲಿ ಅವರ ಜೊತೆಗೂಡಿದ ಅಂಬಟಿ ರಾಯುಡು ಅವರಿಗೆ 37 ರನ್‌ಗಳನ್ನು ಸೇರಿಸಲಷ್ಟೇ ಸಾಧ್ಯವಾಯಿತು. |
ಕೊಹ್ಲಿ–ವಿಜಯಶಂಕರ್ ಜೊತೆಯಾಟದ ರಂಗು: 75 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದಾಗ ವಿರಾಟ್ ಕೊಹ್ಲಿ ಅವರ ಜೊತೆಗೂಡಿದ ಯುವ ಬ್ಯಾಟ್ಸ್‌ಮನ್ ವಿಜಯಶಂಕರ್ 81 ರನ್‌ಗಳನ್ನು ಸೇರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. |
ವಿಕೆಟ್‌ಗಳು ಉರುಳುತ್ತಿದ್ದಂತೆ ಪ್ರತಿ ದಾಳಿಗೆ ಇಳಿದ ವಿರಾಟ್ ಕೊಹ್ಲಿ ಮೋಹಕ ಬ್ಯಾಟಿಂಗ್ ಮೂಲಕ ರಂಜಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ವಿರಾಟ್ 18ನೇ ಓವರ್‌ನಲ್ಲಿ ಸತತ ಎರಡು ಬೌಂಡರಿಗಳನ್ನು ಸಿಡಿಸಿ ಆಕ್ರಮಣಕ್ಕೆ ಮುಂದಾದರು. ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಚೆಂಡನ್ನು ಅಟ್ಟಿ ಬೌಂಡರಿ ಗಳಿಸುವ ಮೂಲಕ 40ನೇ ಶತಕ ಸಿಡಿಸಿದ ಅವರು 48ನೇ ಓವರ್‌ನ... |
ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಮಹೇಂದ್ರ ಸಿಂಗ್ ಧೋನಿ ಮಂಗಳವಾರ ಶೂನ್ಯಕ್ಕೆ ಔಟಾದರು. ಕೇದಾರ್ ಜಾಧವ್ ಅವರಿಗೂ ಮಿಂಚಲು ಸಾಧ್ಯವಾಗಲಿಲ್ಲ. ರವೀಂದ್ರ ಜಡೇಜ ಅಲ್ಪ ಪ್ರತಿರೋಧ ಒಡ್ಡಿದ್ದರಿಂದ ಸ್ಪರ್ಧಾತ್ಮಕ ಮೊತ್ತ ಗಳಿಸಲು ತಂಡಕ್ಕೆ ಸಾಧ್ಯವಾಯಿತು. |
ಪಾಂಟಿಂಗ್ ಹಿಂದಿಕ್ಕಿದ ಕೊಹ್ಲಿ |
ಮಂಗಳವಾರ ವಿರಾಟ್ ಕೊಹ್ಲಿ ನಾಯಕನಾಗಿ ವೇಗದ ಒಂಬತ್ತು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆ ಮುರಿದರು. |
ವಿರಾಟ್ ಕೊಹ್ಲಿ 159ನೇ ಪಂದ್ಯದಲ್ಲಿ ಈ ಮೈಲುಗಲ್ಲು ದಾಟಿದರು. ರಿಕಿ ಪಾಂಟಿಂಗ್ 203 ಪಂದ್ಯಗಳಲ್ಲಿ ಒಂಬತ್ತು ಸಾವಿರ ರನ್ ಪೂರೈಸಿದ್ದರು. ವಿರಾಟ್ ಕೊಹ್ಲಿ, ನಾಯಕನಾಗಿ ಒಂಬತ್ತು ಸಹಸ್ರ ರನ್ ಮಾಡಿದ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಗ್ರೇಮ್ ಸ್ಮಿತ್ (220ನೇ ಇನಿಂಗ್ಸ್), ಮಹೇಂದ್ರ ಸಿಂಗ್ ಧೋನಿ (253), ಅಲನ್ ಬಾರ್ಡರ್ (257) ಮತ್ತು ಸ್ಟೀಫನ್ ಫ್ಲೆಮಿಂಗ್ (272) ಪಟ್ಟಿಯಲ್ಲಿರುವ ... |
ಸ್ಯಾಂಡಲ್‌ವುಡ್ ಕಲಾವಿದರಿಗೆ ಡ್ರಗ್ಸ್ ನಂಟು ಸಾಬೀತಾದರೆ ಕಠಿನ ಕ್ರಮ : ಸಾ.ರಾ ಗೋವಿಂದು | The News 24 Kannada |
Subsets and Splits
No community queries yet
The top public SQL queries from the community will appear here once available.