text
stringlengths
0
61.5k
ಊಟಮುಗಿಸಿದ ಸಂತೃಪ್ತ ಹೊಟ್ಟೆಯಲ್ಲಿ ಭಟ್ಟರನ್ನು ಮನದಲ್ಲೇ ಅಭಿನಂದಿಸುತ್ತಾ ಗಲ್ಲಾದ ಹತ್ತಿರ ಬಂದ ಈತನನ್ನು ಮತ್ತೆ ಹಿಡಿದುಕೊಂಡರು ಭಟ್ಟರು. " ಹೇಯ್ ನಿಲ್ಲಯ್ಯಾ, ಆಣೆ ಎಂದರೇನು ಗೊತ್ತೇನಯ್ಯಾ ನಿಂಗೆ? ನಿನ್ನ ಬಲಗೈಕೊಡು, ನನ್ನ ತಲೆಯಮೇಲೆ ಇಡು ಹೇಳು ಇವತ್ತಿನಿಂದ ಊಟವಿರದ ದಿನ ನಮ್ಮಲ್ಲಿಗೆ ಬಂದು ಊಟಮಾಡದೇ ಹೋದರೆ ಮಹಾಬಲೇಶ್ವರ ಭಟ್ಟರಮೇಲಾಣೆ. " ಒಂಥರಾ ಹೆದರಿಕೆಯಿಂದ ಹುಡುಗ ಹೇಳಿಕೊಟ್ಟಂತೇ ಮಾ...
ಇನ್ನೊಂದು ವಿಧದ ಬಗ್ಗೆ ಮಾತಾಡೋಣ. ಅದು ರಾಜಕೀಯದ ರುಶುವತ್ತು. ಇಂದು ಎಲ್ಲವೂ ಲಂಚಪ್ರಪಂಚ ! ಲಂಚಾವತಾರ ! ಲಂಚವಿಲ್ಲದೇ ಯಾವುದೂ ನಡೆಯುವುದಿಲ್ಲ ಎಂಬಷ್ಟು ಹಾಸುಹೊಕ್ಕಾಗಿದೆ ಲಂಚದ ಇರವು. ಬ್ರಷ್ಟಾಚಾರ ನಿರ್ಮೂಲನೆಯ ಕಾರ್ಯಕ್ರಮ ಉದ್ಘಾಟನೆಗೆ ಬಂದ ರಾಜಕಾರಣಿಗೆ ಮರಳುವಾಗ ಅಲ್ಲೇ ಸಿಕ್ಕು ಯಾವುದೋ ಕೆಲಸಮಾಡಿಸಿಕೊಳ್ಳಲು ಲಂಚ. ನೌಕರಿ ಗಿಟ್ಟಿಸಲು, ಸಿಕ್ಕಿದ ನೌಕರಿಯಲ್ಲಿ ಮುಂಬಡ್ತಿಪಡೆಯಲು, ಬೇಕಾದ ಜ...
ನಮ್ಮ ಊರಲ್ಲೆಲ್ಲಾ ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಊಟಮಾಡುವಾಗ ಮದುವೆಮನೆಯವರು ಬಂದು ಊಟದ ಜಾಗಕ್ಕೆ ಕರೆಯಬೇಕಿತ್ತು. ಬದಲಾದ ರೀತಿಯಲ್ಲಿ ಇಂದು ನಾವು ತಟ್ಟೆಹಿಡಿದು ಬೇಡಿ ತಿನ್ನುವ 'ಬಫೆ' ಯನ್ನು ಸ್ವೀಕರಿಸಿದ್ದೇವೆ. ಜಾಗ ಜಾಸ್ತಿ ಇಲ್ಲದ ಜಾಗದಲ್ಲಿ ಅದು ಅನುಕೂಲವೇ ಆದರೂ ನಮ್ಮ ಆಯುರ್ವೇದ ಸಾರುವುದು ನಿಂತು ಏನನ್ನೂ ತಿಂದು-ಕುಡಿದು ಮಾಡಬೇಡಿ ಎಂಬುದಾಗಿ. ಆದರೆ ಅದನ್ನೆಲ್ಲಾ ಕೇಳುವವರಾರು? ನಿ...
ಬದುಕಿನಲ್ಲಿ ಏನಾದರೂ ಅನುಸರಿಸುವುದಿದ್ದರೆ ಅದನ್ನು ಕಾರಂತ, ಬೇಂದ್ರೆ ಮತ್ತು ಡೀವಿಜಿಯವರಿಂದ ಕಲಿಯಬೇಕಾಗಿತ್ತು. ಇಂದಿಗೆ ಅವರು ಅಮರರು ಹೀಗಾಗಿ ಅವರ ಕೃತಿಗಳಲ್ಲಿ ಅವರ ಜೀವನಚರಿತ್ರೆಗಳಲ್ಲಿ ಆದಷ್ಟೂ ನೋಡಿ ತಿಳಿದುಕೊಳ್ಳುವುದು ಬಹಳ ಇದೆಯೆನಿಸುತ್ತದೆ. ಮೀಸಾ ಕಾಯಿದೆಯನ್ನು ಜಾರಿಗೆತಂದ ಸಮಯದಲ್ಲಿ ಕೇಂದ್ರ ಸರಕಾರ ಕೊಟ್ಟ ಪುರಸ್ಕಾರವನ್ನು ನೇರವಾಗಿ ಶ್ರೀಮತಿ ಇಂದಿರಾಗಂಧಿಯವರಿಗೆ ಬಿಸಾಕಿದ ಹೆಗ್ಗಳ...
ಆದರೆ ಈಗ ಎಲ್ಲವೂ ತಂತ್ರ-ಪ್ರತಿತಂತ್ರ-ಕುತಂತ್ರ ರಾಜಕಾರಣಿಗಳ ತಹಬಂದಿಯಲ್ಲಿ ಲಂಚದ ಮೂಲಕವೇ ನಡೆಯುವ ಕೆಲಸಗಳು ಹಲವು. ಪ್ರಶಸ್ತಿಗಾಗಿ ಅರ್ಜಿ ಸ್ವೀಕರಿಸುವುದು ಎಂಥಾ ನಾಚಿಕೆಗೇಡು! ಹಾಗೆ ಅರ್ಜಿ ಕೊಡುವ ಜನರಿಗಾದರೂ ಮಾನ ಮರ್ಯಾದೆ ಬೇಡವೇ ? ತನಗೆ ರಾಜ್ಯೋತ್ಸವ ಪ್ರಶಸ್ತಿಕೊಡಿ ತನಗೂ ಕೊಡಿ ಎಂದು ೩೫೦೦ ಜನ ಅರ್ಜಿಹಾಕಿದ್ದರಂತೆ. ಅದರಲ್ಲಿ ಕೆಲವನ್ನು ಆರಿಸಲಾಯಿತಂತೆ. ಸರಕಾರ ಆಯ್ಕೆಗಾಗಿ ಲಾಬಿಮಾಡದ, ...
ಇನ್ನು ಕಾಣದ ಲೋಕದಿಂದ ರಂಭೆ, ಮೇನಕೆ, ಊರ್ವಶಿ, ತಿಲೋತ್ತಮೆ ಇವರೆಲ್ಲಾ ಧರೆಗೆ ಬಂದಂತೇ ಯಾವುದೋ ಕಣ್ಣಿಗೇ ಕಾಣದ ದೂರದೇಶದಲ್ಲಿರುವ ವಿಶ್ವವಿದ್ಯಾಲಯವೊಂದೆರಡು ನಮ್ಮ ರಜಕಾರಣಿಗಳಿಗೆ ನಮ್ಮ ಸಿನಿಮಾತಾರೆಯರಿಗೆ ರಾತ್ರೋರಾತ್ರಿ ಗೌರವ ಡಾಕ್ಟರೇಟ್ ಕೊಟ್ಟುಬಿಡುತ್ತಾರೆ! ಅವರ ದೇಶದಲ್ಲಿ ಅಲ್ಲಿನ ಪ್ರಜೆಗಳು ಪ್ರಾಯಶಃ ಈ ವ್ಯಕ್ತಿಗಳ ಹೇಸರನ್ನೇ ಕೇಳಿರುವುದಿಲ್ಲ! ಇನ್ನು ಜಾಗತಿಕ ಮಟ್ಟದಲ್ಲಿ ಇವರು ಮಾಡಿರ...
ಒಂದುಕಡೆ ಬಡತನದಿಂದ ಕಷ್ಟಪಟ್ಟು ಮೇಲೆಬಂದ ಅರ್ಹತೆಯುಳ್ಳ ಜನ, ಇನ್ನೊಂದು ಕಡೆ ಹಣದಿಂದ ಅರ್ಹತೆಯಿಲ್ಲದ್ದನ್ನೂ ಖರೀದಿಮಾಡುವ ಜನ-ಈ ಎರಡು ಸಮುದಾಯಗಳ ನಡುವೆ ಯಾರು ಹಿತವರು ನಿಮಗೆ -ನಮಗೆ? ನಾಳಿನ ನಮ್ಮ ರಾಜ್ಯ-ದೇಶದಲ್ಲಿ ನಾಡು-ನುಡಿ-ಸಂಸ್ಕೃತಿ ಉಳಿಯಬೇಕೆಂದರೆ ನಿಜವಾಗಿ ಅರ್ಹತೆಯುಳ್ಳವರಿಗೆ ಮಾನ-ಸನ್ಮಾನ ನಡೆಯಲಿ, ಅದು ಬಿಟ್ಟು ಯಾರು ಎಷ್ಟನ್ನು ಕೊಡುತ್ತಾರೆ, ಯಾರಮೂಲಕ ಲಾಬಿ ಮಾಡಿದ್ದಾರೆ ಎಂಬುದನ...
Posted by V.R.BHAT at 4:08 AM
ಕ್ಷಣ... ಚಿಂತನೆ... bhchandru November 2, 2010 at 4:41 AM
ಭಟ್ ಸರ್‍, ಲೇಖನ ಓದಿದೆ. ಮಾರ್ಮಿಕವಾದ, ಸಕಾಲಿಕ ಬರಹ. ಇದನ್ನೇ ಸ್ವಾಮಿ ಪುರುಷೋತ್ತಮಾನಂದಜಿಯವರು ತಮ್ಮ ಒಂದು ಕಿರುಪುಸ್ತಕ ವಿದ್ಯಾರ್ಥಿಗಳಿಗಾಗಿ (ಹೆಸರು ಸರಿಯಾಗಿ ನೆನಪಿಲ್ಲ) ಎಂಬ ಕಿರುಪುಸ್ತಕದಲ್ಲಿ ಅರ್ಹತೆಯಿಲ್ಲದಿದ್ದರೂ ಯೋಗ್ಯತಾ ಪತ್ರವನ್ನು ಪಡೆಯಬಹುದು. ಆದರೆ ಯೋಗ್ಯತೆಯನ್ನು ಅಲ್ಲ' ಎಂದು ಸೂಚಿಸಿದ್ದಾರೆ.
umesh desai November 2, 2010 at 7:33 AM
ನಿಜ ಭಟ್ರೇ ನಿಮ್ಮ ಲೇಖನ ಕಣ್ಣುತೆರೆಸುವಂತಿದೆ. ನಮ್ಮ ರಾಜ್ಯೋತ್ಸವ ಪ್ರಶಸ್ತಿಗಳನ್ನೇ ನೋಡಿ ಅದೆಷ್ಟು ಲಾಬಿ, ವಶೀಲಿ ನಿಜಕ್ಕೂ ಅಸಹ್ಯ ಬರುತ್ತದೆ
kusu Muliyala November 2, 2010 at 7:54 AM
ಸಕಾಲಿಕವಾದ ಸಾ೦ದರ್ಬಿಕ ಲೇಖನಕ್ಕೆ ಅಭಿನ೦ದನೆ.ಈಗೀಗ ಪ್ರಶಸ್ತಿ ಪಡೆಯುವುದಲ್ಲ,ಗಿಟ್ಟಿಸಿಕೊಳ್ಳುವುದು.
sunaath November 2, 2010 at 8:03 AM
ಮತ್ತೂರು ಕೃಷ್ಣಮೂರ್ತಿಯವರು ಒಂದು ಕಾಲಕ್ಕೆ ವಾರಾನ್ನದ ಹುಡುಗರಾಗಿದ್ದರು ಎಂದು ಗೊತ್ತಿರಲಿಲ್ಲ ಅವರಿಗೆ ಮತ್ತು ಮಹಾಬಲೇಶ್ವರ ಭಟ್ಟರಿಗೆ ನನ್ನ ಸಾವಿರ ನಮಸ್ಕಾರಗಳು.
PARAANJAPE K.N. November 2, 2010 at 8:53 PM
ಸಮಯಾಭಾವದ ಕಾರಣ ನಿಮ್ಮ ಸುದೀರ್ಘ ಲೇಖನವನ್ನು ಕ೦ತಿನಲ್ಲಿ ಓದಿ ಮುಗಿಸಿದೆ. ಕಟುಸತ್ಯವನ್ನು ಮಾರ್ಮಿಕವಾಗಿ ಹೇಳಿದ್ದೀರಿ. ಹೌದು, ಇ೦ದು ಸಮಾಜದಲ್ಲಿ ನಿಜವಾದ ಪ್ರತಿಭೆಗೆ ಬೆಲೆ ಕಮ್ಮಿಯಾಗಿ, ಢೋ೦ಗಿಗಳಿಗೆ , ಅವಕಾಶವಾದಿಗಳಿಗೆ ಎಲ್ಲೆಡೆ ಮಣೆ ಹಾಕುವ ಪ್ರವೃತ್ತಿ ಕಾಣುತ್ತಿದೆ. ಮತ್ತೂರು ಕೃಷ್ಣಮೂರ್ತಿಯವರು ವಾರಾನ್ನ ಮಾಡಿಕೊ೦ಡಿದ್ದ ಬಗ್ಗೆ ನನಗೂ ಗೊತ್ತಿರಲಿಲ್ಲ. ತು೦ಬಾ ಮಾಹಿತಿ ನೀಡಿದ್ದೀರಿ. ಅರ್ಜ...
ಜನನಾಯಕರ ಕಾಲ ಮುಗಿಯಿತು, ಈಗ ಧನನಾಯಕರ ಕಾಲ: ಪಕ್ಷಾಂತರ ಸೋಲಲಿ, ಜನತಂತ್ರ ಗೆಲ್ಲಲಿ | Prajavani
Karnataka Political Analysis Defection Must Defeat
ಜನನಾಯಕರ ಕಾಲ ಮುಗಿಯಿತು, ಈಗ ಧನನಾಯಕರ ಕಾಲ: ಪಕ್ಷಾಂತರ ಸೋಲಲಿ, ಜನತಂತ್ರ ಗೆಲ್ಲಲಿ
ಸೈದ್ಧಾಂತಿಕ ರಾಜಕಾರಣ, ಹೋರಾಟದ ಹಿನ್ನೆಲೆಯ ಸಂಸದೀಯಪಟುತ್ವ, ಜನಪರ ಕಾಳಜಿಯ ವ್ಯಕ್ತಿತ್ವ ಎಂಬ ಪದಗಳು ರಾಜಕೀಯ ವ್ಯವಸ್ಥೆಯೊಳಗೆ ಹಳಸಿಹೋಗಿವೆ. ನೈತಿಕತೆ– ಅನೈತಿಕತೆಯ ಮಧ್ಯೆ ಢಾಳಾಗಿ ಕಾಣಿಸುವಂತೆ ಇದ್ದ ದೊಡ್ಡ ಅಂತರ ಮರೆಯಾಗಿದ್ದು, ತೆಳುವಾದ ನಾಟಕೀಯ ಪರದೆಯೊಂದು ಇಳಿಬಿಟ್ಟುಕೊಂಡಿದೆ. ಹಣ– ಅಂತಸ್ತಿನ ಸುಡುಗಾಳಿಗೆ ಈ ಪರದೆ ಅತ್ತಿಂದಿತ್ತ ಸರಿದಾಡುತ್ತಲೇ ಇದ್ದು, ಅಲ್ಲಿರುವವರು ಇಲ್ಲಿ, ಇಲ್ಲಿರ...
ಪ್ರಜಾತಂತ್ರಕ್ಕೆ ಮಾರಕವಾದ ಬೆಳವಣಿಗೆ.
ಸರಿಸುಮಾರು ಒಂದೂವರೆ ವರ್ಷದಿಂದ ಕರ್ನಾಟಕದ ಏರಿಳಿತದ ರಾಜಕಾರಣ, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಅಪ್ರಜಾತಾಂತ್ರಿಕ ನಡೆಗಳು ಅಸಹ್ಯ ಹುಟ್ಟಿಸುವಂತಿವೆ. ನಾಯಕರ ಪ್ರವೃತ್ತಿ ಮತ್ತು ನಡಾವಳಿಗಳು ಸಂವಿಧಾನದ ಆಶಯ, ಬಹುಪಕ್ಷೀಯ ಪದ್ಧತಿ, ನೈಜ ಪ್ರಜಾತಂತ್ರದ ಬೇರುಗಳನ್ನೇ ಬುಡಮೇಲಾಗಿಸುವ ದಿಕ್ಕಿನಲ್ಲಿ ಸಾಗುತ್ತಿರುವುದರ ದ್ಯೋತಕದಂತಿವೆ. ಅಧಿಕಾರಸ್ಥರು ಹಾಗೂ ಗದ್ದುಗೆಯ ಆಕಾಂಕ್ಷಿಗಳಲ್ಲಿ ತಾ...
ಅಧಕಾರ– ಹಣದ ಅಮಲು, ಅವಕಾಶವಾದಿತನವು ಪ್ರಜಾತಂತ್ರ ವ್ಯವಸ್ಥೆಯ ಕೆನೆಪದರದಂತಿರುವ
ರಾಜಕಾರಣಿಗಳನ್ನು ನಖಶಿಖಾಂತ ಮುಳುಗಿಸಿಬಿಟ್ಟಿವೆ. ಹೀಗಾಗಿ, ಪಕ್ಷಾಂತರ ಹಾಗೂ ಸೈದ್ಧಾಂತಿಕ ವಿಸ್ಮೃತಿ ಎಂಬುದು ಸಹಜ ಎನ್ನುವಂತಾಗಿದೆ. ಈ ವಿಷಯದೊಳಗೆ ಪಕ್ಷಭೇದವಿಲ್ಲ.
2018ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸರಳ ಬಹುಮತ ಸಿಗಲಿಲ್ಲ. ಆದರೆ, ಅತಿಹೆಚ್ಚು ಸಂಖ್ಯಾಬಲ ಹೊಂದಿದ ಪಕ್ಷವಾಗಿ ಅದು ಹೊರಹೊಮ್ಮಿತು. ಹೇಗಾದರೂ ಬಹುಮತ ಗಳಿಸುವ ಅಪರಿಮಿತ ವಿಶ್ವಾಸದಲ್ಲಿದ್ದ ಬಿ.ಎಸ್‌. ಯಡಿಯೂರಪ್ಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆ ಹೊತ್ತಿನಲ್ಲೇ ನಡೆಸಿದ್ದ 'ಆಪರೇಷನ್ ಕಮಲ'ಕ್ಕೆ ಯಶಸ್ಸು ದಕ್ಕಲಿಲ್ಲ; 'ಉತ್ತರ ಕುಮಾರ'ನಂತೆ ಯಡಿಯೂರಪ್ಪ ಓಡಿಹ...
ಚುನಾವಣೆಯಲ್ಲಿ ಎದಿರುಬದಿರು ನಿಂತು, ಪರಸ್ಪರ ಹೀಯಾಳಿಸಿಕೊಂಡು ಚುನಾವಣೆ ಎದುರಿಸಿದ್ದ ಜೆಡಿಎಸ್‌– ಕಾಂಗ್ರೆಸ್ ನಾಯಕರು ಅವಕಾಶವಾದಿ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚಿಸಿಬಿಟ್ಟರು. ಒಲ್ಲದ ಮದುವೆಯ ಸಂಸಾರ ಬಹುಕಾಲ ಬಾಳಲಿಲ್ಲ; ಬಾಳಲು ಅತ್ತ ಬಿಜೆಪಿಯವರು, ಇತ್ತ ಸಿದ್ದರಾಮಯ್ಯ ಬಿಡಲಿಲ್ಲ. ಮೈತ್ರಿ ಸರ್ಕಾರ ಸರಿಯಿಲ್ಲ; ಅಭಿವೃದ್ಧಿ ವಿಷಯದಲ್ಲಿ ವಂಚನೆ ಮಾಡಲಾಯಿತು ಎಂದೆಲ್ಲ ಪುಕಾರು– ತಕರಾರು ...
ಹಾಗಂತ ಪಕ್ಷಾಂತರ ಎಂಬುದು ಇಂದು ನಿನ್ನೆಯ ಕಥೆಯಲ್ಲ; ಕರ್ನಾಟಕದಲ್ಲಿ ದೊಡ್ಡಮಟ್ಟದ ಪಕ್ಷಾಂತರ ಪ್ರವೃತ್ತಿಯನ್ನು ಹುಟ್ಟುಹಾಕಿದ ಅಪಕೀರ್ತಿ ಎಸ್.ಎಂ. ಕೃಷ್ಣ ಅವರಿಗೆ ಸಲ್ಲಬೇಕು. ಎಂಟು ಬಿಜೆಪಿ ಶಾಸಕರು ಅಂದು ಕಾಂಗ್ರೆಸ್ ಸೇರಿದ್ದರು. ಆದರೆ, ಅದು ಚುನಾವಣೆ ಹೊತ್ತಿಗೆ ನಡೆದಿತ್ತು. ಆ ವೇಳೆ ಪಕ್ಷಾಂತರಿಗೆ ಮಣೆ ಹಾಕಬೇಕೇ ಬೇಡವೇ? ಅವರ ಒಲವು–ನಿಲುವೇನು ಎಂದು ನಿಷ್ಕರ್ಷೆ ಮಾಡಿ ತೀರ್ಪು ನೀಡುವ ಅಧಿಕ...
'ಆಪರೇಷನ್‌' ಎಂಬ ಪಕ್ಷಾಂತರದ ಪೆಡಂಭೂತವನ್ನು ಧರೆಗಿಳಿಸಿದವರು ಯಡಿಯೂರಪ್ಪ. ದಶಕದ ಹಿಂದೆ ಬಿಜೆಪಿ ಇಂತಹುದೇ ಸಂದಿಗ್ಧ ಸ್ಥಿತಿಯಲ್ಲಿತ್ತು. 110 ಶಾಸಕರು ಗೆದ್ದಿದ್ದರೂ ಪಕ್ಷೇತರರಾಗಿ ಗೆದ್ದವರನ್ನೇ ಸರ್ಕಾರ ರಚಿಸಲು ಅಂದು ನೆಚ್ಚಿಕೊಳ್ಳಲಾಗಿತ್ತು. ಆ ಹೊತ್ತಿನಲ್ಲಿ ಸಚಿವ ಸ್ಥಾನದ ಆಮಿಷ ತೋರಿ 14 ಶಾಸಕರನ್ನು ಜೆಡಿಎಸ್‌– ಕಾಂಗ್ರೆಸ್‌ನಿಂದ ಕರೆತರಲಾಯಿತು. 'ಅನೈತಿಕ' ರಾಜಕಾರಣದ ನಿಜಪರ್ವ ಆರಂಭವಾ...
ಚುನಾವಣೆ ಹೊತ್ತಿಗೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವುದು ಸಾಮಾನ್ಯ. ಅದಕ್ಕೆ ಮತದಾರ ಮಾನ್ಯ– ಅಮಾನ್ಯದ ಮುದ್ರೆ ಒತ್ತಿಬಿಡುತ್ತಾನೆ. ಒಂದು ಪಕ್ಷದ ಹೆಸರು, ಚಿಹ್ನೆ ಹಾಗೂ ಆ ಪಕ್ಷ ಪ್ರತಿಪಾದಿಸುವ ಸಿದ್ಧಾಂತವನ್ನು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದವರು ಆರೇಳು ತಿಂಗಳಲ್ಲಿ–ವರ್ಷದೊಪ್ಪತ್ತಿನಲ್ಲಿ ವಿರುದ್ಧ ದಡಕ್ಕೆ ನೆಗೆಯುವುದು ಸರಿಯಾದ ಕ್ರಮವಲ್ಲ. ರಾಜಕಾರಣವೇ ಬೇಡವೆಂದು, ಕಾಯಿಲ...
ಯಂತಹ ಲಾಭಕಟ್ಟಿನ ಹುದ್ದೆಗಾಗಿಯೋ ಜಿಗಿಯುವುದು ಗೆಲ್ಲಿಸಿದ ಮತದಾರನ ನಂಬಿಕೆಗೆ ವಿರುದ್ಧವಾದ ನಡೆ.
ಹೋರಾಟದ ಭೂಮಿಕೆಯಿಂದ ರಾಜಕಾರಣಕ್ಕೆ ಬರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ. ಜನ
ನಾಯಕರ ಬದಲಿಗೆ ಧನನಾಯಕರ ಕಾಲ ಬಂದು ವರ್ಷಗಳೇ ಸಂದಿವೆ. ಪಕ್ಷಾಂತರ ಎಂಬುದು ಈಗ ಅಪಸವ್ಯವಾಗಿ ಉಳಿದಿಲ್ಲ. ಹುಲ್ಲುಗಾವಲು ಇರುವ ಕಡೆ ದನಗಳು ಹೋಗುವಂತೆ, ಅಧಿಕಾರ ಇರುವ ಕಡೆ ವಲಸೆ ಹೋಗುವುದು ರಾಜಕಾರಣಿಗಳ ಜಾಯಮಾನವೇ ಆಗಿಬಿಟ್ಟಿದೆ.
'ಕಾಂಗ್ರೆಸ್‌ಮುಕ್ತ ಭಾರತ'ದ ಸಂಕಲ್ಪ ಮಾಡಿಕೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಕೂಡ ಇಂತಹ ನಡೆಗಳಿಗೆ ಪರೋಕ್ಷ ಬೆಂಬಲ ನೀಡುತ್ತಿದೆ. ಲೋಕಸಭೆ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತೃಣಮೂಲ ಕಾಂಗ್ರೆಸ್‌ನ 40 ಶಾಸಕರು ಚುನಾವಣೆ ಬಳಿಕ ಆ ಪಕ್ಷ ತೊರೆಯಲಿದ್ದಾರೆ ಎಂದಿದ್ದರು. ಜನರು ಮತ ಹಾಕುತ್ತಿದ್ದುದು ಲೋಕಸಭೆಗೆ ಎಂದು ಗೊತ್ತಿದ್...
ಪಕ್ಷಾಂತರವೆಂಬ ಹುತ್ತದೊಳಗೆ ಸೇರಿಕೊಳ್ಳುವ ಹಾವುಗಳನ್ನು ಬಡಿಯಬಹುದಾಗಿದ್ದ ಸುಪ್ರೀಂ ಕೋರ್ಟ್‌, ಹುತ್ತವನ್ನಷ್ಟೇ ಬಡಿದು ಸುಮ್ಮನಾಯಿತು. ಪಕ್ಷಾಂತರವೆಂಬ ಪ್ರಜಾಸತ್ತಾತ್ಮಕವಲ್ಲದ ನಡೆಯನ್ನು ತಡೆಯಬೇಕಾದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಪೀಠವು ಕೇಂದ್ರಕ್ಕೆ ಸಲಹೆ ನೀಡಿ ಸುಮ್ಮನಾಯಿತು. ಪಕ್ಷಾಂತರ ಎಂಬ ದೊಡ್ಡರೋಗಕ್ಕೆ ಶಸ್ತ್ರಚಿಕಿತ್ಸೆ ಮಾಡುವ ಅಧಿಕಾರ ಇದ್ದ ನ್ಯಾಯಮೂರ್ತಿಗಳು, ಕಠಿಣ ಕಾನೂನು...
ನಿರ್ವಹಿಸಲಿಲ್ಲ. ಹೀಗಾಗಿ, ನ್ಯಾಯಾಂಗದ ಕೋಲು ಮುರಿಯಿತೇ ವಿನಾ ಹಾವು ಸಾಯಲಿಲ್ಲ.
'); $('#div-gpt-ad-683255-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-683255').addClass('inartprocessed'); } else $('#in-article-683255').hide(); } else { _taboola.push({article:'auto', url:'https://www.prajavani.net/columns/gathibimba/karnataka-polit...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-683255 .field-name-body .field-items div.field-item > p'); if(x1 != null && x1.length != 0) { $('#node-683255 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-683255 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-683255'); }); } else { $('#in-article-mob-683255').hide(); $('#in-article-mob-3rd-683255').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಗೋವಾ ಚಿತ್ರೋತ್ಸವ : ನಾನಾ ಪಾಟೇಕರ್, ಮಾಸ್ಟರ್ ಕ್ಲಾಸ್ ಇತ್ಯಾದಿ – ಸಾಂಗತ್ಯ
ಗೋವಾ ಚಿತ್ರೋತ್ಸವ : ನಾನಾ ಪಾಟೇಕರ್, ಮಾಸ್ಟರ್ ಕ್ಲಾಸ್ ಇತ್ಯಾದಿ
ಪಣಜಿ : ಮಂಗಳವಾರ ಚಿತ್ರೋತ್ಸವದಲ್ಲಿ ಸಿಕ್ಕಾಪಟ್ಟೆ ಚಟುವಟಿಕೆಗಳ ದಿನ. ಮಾಸ್ಟರ್ ಕ್ಲಾಸ್ ಗಳು, ಚಿತ್ರಗಳು, ಓಪನ್ ಫೋರಂ, ಎಲ್ಲ ಥಿಯೇಟರ್ ಗಳ ಎದುರೂ ಜನರ ಸಾಲು, ನಾನಾ ಪಾಟೇಕರ್ ಆಗಮಿಸಿದ್ದು, ವಿವಿಧ ನಿರ್ದೇಶಕರ ಪತ್ರಿಕಾಗೋಷ್ಠಿಗಳು ಇತ್ಯಾದಿ ಒಟ್ಟೂ ಚಿತ್ರೋತ್ಸವಕ್ಕೆ ಇನ್ನು 5 ದಿನ ಇರುವಾಗ ರಂಗೇರುತ್ತಿದೆ.
"ಕ್ರಾಂತಿವೀರ್" ಮತ್ತು "ಪ್ರಹಾರ್" ಚಿತ್ರಗಳಲ್ಲಿನ ಡೈಲಾಗ್ ಡಿಲಿವರಿ (ಸಂಭಾಷಣೆ) ಮತ್ತು ನಟನೆಯಿಂದ ಖ್ಯಾತರಾಗಿದ್ದ ನಾನಾ ಪಾಟೇಕರ್ ಮಂಗಳವಾರ ಚಿತ್ರೋತ್ಸವದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, "ಮರ್ಯಾದಾ ಹತ್ಯೆ ಮತ್ತು ಜಾತೀಯತೆ ಇನ್ನೂ ನಮ್ಮನ್ನು ಕಾಡುತ್ತಿದೆ. ಇದು ಕೊನೆಗಾಣಬೇಕೆಂಬುದು ಎಲ್ಲರ ಧ್ಯೇಯವಾಗಬೇಕು. ಅಂಥ ಒಳ್ಳೆಯ ದಿನ ಬಂದೇ ಬರುತ್ತದೆ. ಅಲ್ಲಿಯವರೆಗೆ ಕಾಯಬೇಕು" ಎಂದು ಆಶಾವಾದ ವ್ಯಕ್ತಪಡಿಸಿದರು.
ತಮ್ಮ ನಟನೆಯ ಮರಾಠಿ ಚಿತ್ರ "ಡಾ. ಪ್ರಕಾಶ್ ಆಮ್ಟೆ-ದಿ ರಿಯಲ್ ಹೀರೋ", ಒಂದು ಒಳ್ಳೆಯ ಚಿತ್ರ. ಪ್ರಕಾಶ್ ಆಮ್ಟೆ ದಂಪತಿಗಳ ಸಮಾಜ ಸೇವೆಯನ್ನು ಜನರಿಗೆ ತಿಳಿಸುವ ಸಲುವಾಗಿಯೇ ಇದನ್ನು ರೂಪಿಸಿದ್ದೇವೆ. ಜನರಿಗೆ ಒಳ್ಳೆಯ ಕೆಲಸವೂ ನಡೆಯುತ್ತಿದೆ ಎಂಬುದೂ ತಿಳಿಯಬೇಕು. ಆಗ ಮಾತ್ರ ಆಶಾವಾದ ಮೂಡಲು ಸಾಧ್ಯ ಎಂದರು. ಚಿತ್ರ ನಿರ್ಮಾಪಕರಾದ ನಿಖಿಲ್ ಸಾಣೆ, ನಟಿ ಸೋನಾಲಿ ಕುಲಕರ್ಣಿ, ನಿರ್ದೇಶಕಿ ಸಮೃದ್ಧಿ ಪೋರೆ...
ಇದಲ್ಲದೇ, ಕಲಾ ಅಕಾಡೆಮಿಯ ಬ್ಲ್ಯಾಕ್ ಬಾಕ್ಸ್ ನಲ್ಲಿ ಇಂಡಿಯನ್ ಡಾಕ್ಯುಮೆಂಟರಿ ಪ್ರೊಡ್ಯೂಷರ್ಸ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾಗಿರುವ ಡಿಜಿಟಲ್ ಕ್ಯಾಮೆರಾ ಟೆಕ್ನಾಲಜಿ ಕುರಿತ ಕಾರ್ಯಾಗಾರದಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕ ನಂದನ್ ಸಕ್ಸೇನಾ ಮಾತನಾಡಿದರು. ಹಾಗೆಯೇ ಮಾಸ್ಟರ್ ಕ್ಲಾಸ್ ನಲ್ಲಿ ಅಸ್ಸಾಂನ ಚಿತ್ರ ನಿರ್ದೇಶಕ ಜಹ್ನು ಬರುವಾ, "ಕಡಿಮೆ ವೆಚ್ಚದಲ್ಲಿ ಚಿತ್ರಗಳ ನಿರ್ಮಾಣ" ಕುರಿತು ಅಭಿಪ್...
'ಓಪನ್ ಫೋರಂ' ನಲ್ಲಿ ಚಿತ್ರ ನಿರ್ದೇಶಕರಾದ ಷಾಜಿ ಕರುಣ್, ಇಸ್ರೇಲಿನ ಡಾನ್ ವೋಲ್ಮನ್, ಮೆಕ್ಸಿಕಾದ ಇಸ್ರಾಲ್ ಕೆಡನ್ಸ್, ಕೆನಡಾದ ಆನಂದ್ ರಮಯ್ಯ ಮತ್ತಿತರರು, ಅಂತಾರಾಷ್ಟ್ರೀಯ ಸಹ ನಿರ್ಮಾಣದಲ್ಲಿ ಚಿತ್ರ ನಿರ್ಮಿಸುವುದರ ಕುರಿತು ಚರ್ಚಿಸಿದರು. ಒಟ್ಟೂ ವ್ಯಕ್ತವಾದ ಅಭಿಪ್ರಾಯವೆಂದರೆ, "ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹ ನಿರ್ಮಾಣ ಕೈಗೊಳ್ಳುವ ಕನಸು ಮತ್ತು ಯೋಚನೆ ಬಹಳ ಆಕರ್ಷಕವಾದದ್ದೇ. ಆದರೆ ಸಮಸ್ಯ...
ಸಾಕಾಗದು
ದಿನೇ ದಿನೇ ಬೆಳೆಯುತ್ತಿರುವ ಗೋವಾ ಚಿತ್ರೋತ್ಸವಕ್ಕೆ ಮತ್ತಷ್ಟು ಸ್ಥಳಾವಕಾಶ ಬೇಕು. ಯಾವುದಕ್ಕೆಂದರೆ ಸಿನಿಮಾ ನೋಡಲು ಸ್ಕ್ರೀನ್ ಗಳು ಹೆಚ್ಚಾಗಬೇಕು.
ಚಿತ್ರೋತ್ಸವ ನಿರ್ದೇಶಕ ಶಂಕರ್ ಮೋಹನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ 13, 700 ಮಂದಿ ಪ್ರತಿನಿಧಿಗಳು ನೋಂದಾಯಿಸಿದ್ದಾರೆ. ಆದರೆ, ನಮಗೆ 2, 500 ಮಂದಿಯ ಚಿತ್ರ ವೀಕ್ಷಣೆಗಷ್ಟೇ ಸದ್ಯ ಅವಕಾಶವಿದೆ. ಮುಂದಿನ ದಿನಗಳಲ್ಲಿ ಕನಿಷ್ಠ 5 ಸಾವಿರ ಮಂದಿಗಾದರೂ ಸ್ಥಳಾವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ' ಎಂದರು.
ಗೌಪ್ಯತಾ ನೀತಿ - ಬಾಯ್ ಲೇಬಲ್
ತಮ್ಮ ಗೌಪ್ಯತೆ ಗುರುತಿಸುವಂತಹ ಮಾಹಿತಿಯನ್ನು (ಪಿಐಐ) ಆನ್ಲೈನ್ನಲ್ಲಿ ಹೇಗೆ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸುವವರಿಗೆ ಈ ಗೌಪ್ಯತಾ ನೀತಿಯನ್ನು ಸಂಗ್ರಹಿಸಲಾಗಿದೆ. ಯು.ಎಸ್ ಗೌಪ್ಯತೆ ಕಾನೂನು ಮತ್ತು ಮಾಹಿತಿ ಭದ್ರತೆಗಳಲ್ಲಿ ವಿವರಿಸಿದಂತೆ PII, ಒಂದು ವ್ಯಕ್ತಿಗೆ ಗುರುತಿಸಲು, ಸಂಪರ್ಕಿಸಲು ಅಥವಾ ಗುರುತಿಸಲು ಅಥವಾ ಅದರಲ್ಲಿ ಒಬ್ಬ ವ್ಯಕ್ತಿಯನ್ನು ಗುರುತಿಸಲು ಇತರ ಮಾಹಿತಿಯನ್...
ನಮ್ಮ ಸೈಟ್ನಲ್ಲಿ ಆದೇಶಿಸುವ ಅಥವಾ ನೋಂದಾಯಿಸುವಾಗ, ನಿಮ್ಮ ಅನುಭವ, ನಿಮಗೆ ಸಹಾಯ ಮಾಡಲು ನಿಮ್ಮ ಹೆಸರು, ಇಮೇಲ್ ವಿಳಾಸ, ಮೇಲಿಂಗ್ ವಿಳಾಸ, ದೂರವಾಣಿ ಸಂಖ್ಯೆ ಅಥವಾ ಇತರ ವಿವರಗಳನ್ನು ನಮೂದಿಸಲು ನಿಮ್ಮನ್ನು ಕೇಳಬಹುದು.
ನೀವು ನಮ್ಮ ಸೈಟ್ನಲ್ಲಿ ಆದೇಶವನ್ನು ನೀಡಿದಾಗ ಅಥವಾ ಮಾಹಿತಿಯನ್ನು ನಮೂದಿಸಿದಾಗ ನಾವು ನಿಮ್ಮಿಂದ ಮಾಹಿತಿಯನ್ನು ಸಂಗ್ರಹಿಸುತ್ತೇವೆ.
• ನಿಮ್ಮ ವ್ಯವಹಾರಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲು.
ನಾವು ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಸಂಗ್ರಹಿಸುತ್ತೇವೆ, ಆದರೆ ಪಿಸಿಐ ಕಂಪ್ಲೈಂಟ್ ಸ್ಕ್ಯಾನ್ಗಳು ಈಗ ಅಗತ್ಯವಿರುವುದಿಲ್ಲ ಎಂಬುದು ತಿಳಿದಿಲ್ಲ.
ನಾವು ನಿಯಮಿತ ಮಾಲ್ವೇರ್ ಸ್ಕ್ಯಾನಿಂಗ್ ಅನ್ನು ಬಳಸುತ್ತೇವೆ.
ಬಳಕೆದಾರನು ನಿಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆಯನ್ನು ಕಾಪಾಡುವ ಆದೇಶವನ್ನು ಇರಿಸಿದಾಗ ನಾವು ಹಲವಾರು ಭದ್ರತಾ ಕ್ರಮಗಳನ್ನು ಜಾರಿಗೊಳಿಸುತ್ತೇವೆ.
ನಿಮ್ಮ ಅನುಕೂಲಕ್ಕಾಗಿ ಭವಿಷ್ಯದ ಆದೇಶಗಳನ್ನು ತ್ವರಿತಗೊಳಿಸಲು ಮತ್ತು ಬಿಲ್ಲಿಂಗ್ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು 60 ದಿನಗಳಿಗಿಂತ ಹೆಚ್ಚು ಕಾಲ ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಾವು ಇರಿಸಿಕೊಳ್ಳಬಹುದು.
ಹೌದು. ನಿಮ್ಮ ಬ್ರೌಸರ್ ಅನ್ನು ಗುರುತಿಸಲು ಮತ್ತು ಕೆಲವು ಮಾಹಿತಿಯನ್ನು ಸೆರೆಹಿಡಿಯಲು ಮತ್ತು ನೆನಪಿಟ್ಟುಕೊಳ್ಳಲು ಸೈಟ್ನ ಅಥವಾ ಸೇವೆ ಒದಗಿಸುವವರ ಸಿಸ್ಟಮ್ಗಳನ್ನು ಸಕ್ರಿಯಗೊಳಿಸುವ ನಿಮ್ಮ ವೆಬ್ ಬ್ರೌಸರ್ ಮೂಲಕ (ನೀವು ಅನುಮತಿಸಿದರೆ) ಮೂಲಕ ನಿಮ್ಮ ಕಂಪ್ಯೂಟರ್ನ ಹಾರ್ಡ್ ಡ್ರೈವ್ಗೆ ಸೈಟ್ ಅಥವಾ ಅದರ ಸೇವಾ ಪೂರೈಕೆದಾರರು ವರ್ಗಾವಣೆ ಮಾಡುವ ಸಣ್ಣ ಫೈಲ್ಗಳು ಕುಕೀಗಳಾಗಿವೆ. ಉದಾಹರಣೆಗೆ, ನಿಮ್ಮ ಶ...
• ಶಾಪಿಂಗ್ ಕಾರ್ಟ್ನಲ್ಲಿರುವ ವಸ್ತುಗಳನ್ನು ನೆನಪಿಟ್ಟು ಮತ್ತು ಪ್ರಕ್ರಿಯೆಗೊಳಿಸಲು ಸಹಾಯ ಮಾಡಿ.
• ಭವಿಷ್ಯದ ಭೇಟಿಗಳಿಗಾಗಿ ಬಳಕೆದಾರರ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಉಳಿಸಿ.
• ಜಾಹಿರಾತುಗಳ ಜಾಡನ್ನು ಇರಿಸಿ.
• ಭವಿಷ್ಯದಲ್ಲಿ ಉತ್ತಮ ಸೈಟ್ ಅನುಭವಗಳು ಮತ್ತು ಉಪಕರಣಗಳನ್ನು ನೀಡಲು ಸೈಟ್ ಟ್ರಾಫಿಕ್ ಮತ್ತು ಸೈಟ್ ಪರಸ್ಪರ ಕ್ರಿಯೆಗಳ ಬಗ್ಗೆ ಒಟ್ಟು ಡೇಟಾವನ್ನು ಕಂಪೈಲ್ ಮಾಡಿ. ನಮ್ಮ ಪರವಾಗಿ ಈ ಮಾಹಿತಿಯನ್ನು ಟ್ರ್ಯಾಕ್ ಮಾಡುವ ವಿಶ್ವಾಸಾರ್ಹ ತೃತೀಯ ಸೇವೆಗಳನ್ನು ನಾವು ಬಳಸಬಹುದು.
ಕುಕಿ ಕಳುಹಿಸಲ್ಪಡುವ ಪ್ರತಿ ಬಾರಿ ನಿಮ್ಮ ಗಣಕವನ್ನು ಎಚ್ಚರಿಸಬೇಕೆಂದು ನೀವು ಆಯ್ಕೆ ಮಾಡಬಹುದು, ಅಥವಾ ನೀವು ಎಲ್ಲಾ ಕುಕೀಗಳನ್ನು ಆಫ್ ಮಾಡಲು ಆಯ್ಕೆ ಮಾಡಬಹುದು. ನಿಮ್ಮ ಬ್ರೌಸರ್ ಸೆಟ್ಟಿಂಗ್ಗಳ ಮೂಲಕ ನೀವು ಇದನ್ನು ಮಾಡುತ್ತೀರಿ. ಬ್ರೌಸರ್ ಸ್ವಲ್ಪ ಭಿನ್ನವಾಗಿರುವುದರಿಂದ, ನಿಮ್ಮ ಕುಕೀಗಳನ್ನು ಮಾರ್ಪಡಿಸಲು ಸರಿಯಾದ ಮಾರ್ಗವನ್ನು ತಿಳಿಯಲು ನಿಮ್ಮ ಬ್ರೌಸರ್ನ ಸಹಾಯ ಮೆನುವನ್ನು ನೋಡಿ.
ನೀವು ಕುಕೀಗಳನ್ನು ಆಫ್ ಮಾಡಿದರೆ, ಕೆಲವು ವೈಶಿಷ್ಟ್ಯಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇದು ನಿಮ್ಮ ಸೈಟ್ ಅನುಭವವನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಬಳಕೆದಾರರ ಅನುಭವದ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹುದು.
ಆದಾಗ್ಯೂ, ನೀವು ಇನ್ನೂ ಆದೇಶಗಳನ್ನು ಇರಿಸಿಕೊಳ್ಳಲು ಸಾಧ್ಯವಾಗುತ್ತದೆ.
ನಾವು ಬಳಕೆದಾರರಿಗೆ ಮುಂಚಿತವಾಗಿ ಸೂಚನೆ ನೀಡದ ಹೊರತು ನಾವು ಮಾರಾಟ, ವ್ಯಾಪಾರ, ಅಥವಾ ಹೊರಗಿನ ವ್ಯಕ್ತಿಗಳಿಗೆ ನಿಮ್ಮ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ವರ್ಗಾಯಿಸುವುದಿಲ್ಲ. ಈ ವೆಬ್ಸೈಟ್ ಗೌಪ್ಯತೆ ಇರಿಸಿಕೊಳ್ಳಲು ಒಪ್ಪಿಕೊಳ್ಳುವವರೆಗೆ ನಮ್ಮ ವೆಬ್ಸೈಟ್ ಅನ್ನು ನಿರ್ವಹಿಸಲು, ನಮ್ಮ ವ್ಯವಹಾರ ನಡೆಸಲು ಅಥವಾ ನಮ್ಮ ಬಳಕೆದಾರರಿಗೆ ಸೇವೆ ಮಾಡುವಲ್ಲಿ ಸಹಾಯ ಮಾಡುವ ವೆಬ್ಸೈಟ್ ಹೋಸ್ಟಿಂ...
Google ನ ಜಾಹೀರಾತು ಅವಶ್ಯಕತೆಗಳನ್ನು Google ನ ಜಾಹೀರಾತು ತತ್ವಗಳಿಂದ ಸಂಗ್ರಹಿಸಲಾಗುತ್ತದೆ. ಬಳಕೆದಾರರಿಗೆ ಧನಾತ್ಮಕ ಅನುಭವವನ್ನು ಒದಗಿಸಲು ಅವುಗಳನ್ನು ಸ್ಥಳದಲ್ಲಿ ಇರಿಸಲಾಗುತ್ತದೆ. https://support.google.com/adwordspolicy/answer/1316548?hl=en
Google, ಮೂರನೇ-ಪಕ್ಷದ ಮಾರಾಟಗಾರರಾಗಿ, ನಮ್ಮ ಸೈಟ್ನಲ್ಲಿ ಜಾಹೀರಾತುಗಳನ್ನು ಒದಗಿಸಲು ಕುಕೀಗಳನ್ನು ಬಳಸುತ್ತದೆ. DART ಕುಕೀಯನ್ನು Google ನ ಬಳಕೆ ನಮ್ಮ ಸೈಟ್ ಮತ್ತು ಇತರ ಸೈಟ್ಗಳಿಗೆ ಹಿಂದಿನ ಭೇಟಿಗಳನ್ನು ಆಧರಿಸಿ ನಮ್ಮ ಬಳಕೆದಾರರಿಗೆ ಜಾಹೀರಾತುಗಳನ್ನು ಒದಗಿಸಲು ಶಕ್ತಗೊಳಿಸುತ್ತದೆ. ಬಳಕೆದಾರರು ಗೂಗಲ್ ಜಾಹೀರಾತು ಮತ್ತು ವಿಷಯ ನೆಟ್ವರ್ಕ್ ಗೌಪ್ಯತಾ ನೀತಿಗೆ ಭೇಟಿ ನೀಡುವ ಮೂಲಕ ಡಾರ್ಟ್ ಕ...
• ಗೂಗಲ್ ಆಡ್ಸೆನ್ಸ್ ಜೊತೆ ರೀಮಾರ್ಕೆಟಿಂಗ್
• ಗೂಗಲ್ ಪ್ರದರ್ಶನ ನೆಟ್ವರ್ಕ್ ಇಂಪ್ರೆಶನ್ ರಿಪೋರ್ಟಿಂಗ್
• ಡಬಲ್ಕ್ಲಿಕ್ ಪ್ಲಾಟ್ಫಾರ್ಮ್ ಇಂಟಿಗ್ರೇಷನ್
13 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳ ವೈಯಕ್ತಿಕ ಮಾಹಿತಿಯ ಸಂಗ್ರಹಕ್ಕೆ ಬಂದಾಗ, ಮಕ್ಕಳ ಆನ್ಲೈನ್ ​​ಗೌಪ್ಯತೆ ಪ್ರೊಟೆಕ್ಷನ್ ಆಕ್ಟ್ (COPPA) ಪೋಷಕರನ್ನು ನಿಯಂತ್ರಣದಲ್ಲಿಡುತ್ತದೆ. ಫೆಡರಲ್ ಟ್ರೇಡ್ ಕಮಿಷನ್, ಯುನೈಟೆಡ್ ಸ್ಟೇಟ್ಸ್ನ ಗ್ರಾಹಕರ ರಕ್ಷಣೆ ಸಂಸ್ಥೆ, COPPA ನಿಯಮವನ್ನು ಜಾರಿಗೆ ತರುತ್ತದೆ, ಇದು ವೆಬ್ಸೈಟ್ಗಳ ಮತ್ತು ಆನ್ಲೈನ್ ​​ಸೇವೆಗಳ ನಿರ್ವಾಹಕರು ಮಕ್ಕಳ ಗೌಪ್ಯತೆ ಮತ್ತು ಆನ...
• ಮಾಹಿತಿಯನ್ನು ಕಳುಹಿಸಿ, ವಿಚಾರಣೆಗೆ ಪ್ರತಿಕ್ರಿಯಿಸಿ, ಮತ್ತು / ಅಥವಾ ಇತರ ವಿನಂತಿಗಳು ಅಥವಾ ಪ್ರಶ್ನೆಗಳನ್ನು
• ಪ್ರಕ್ರಿಯೆ ಆದೇಶಗಳು ಮತ್ತು ಆದೇಶಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ನವೀಕರಣಗಳನ್ನು ಕಳುಹಿಸಲು.
• ನಿಮ್ಮ ಉತ್ಪನ್ನ ಮತ್ತು / ಅಥವಾ ಸೇವೆಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ನಿಮಗೆ ಕಳುಹಿಸಿ
• ನಮ್ಮ ಮೇಲಿಂಗ್ ಪಟ್ಟಿಗೆ ಮಾರುಕಟ್ಟೆ ಅಥವಾ ಮೂಲ ವ್ಯವಹಾರ ಸಂಭವಿಸಿದ ನಂತರ ನಮ್ಮ ಗ್ರಾಹಕರಿಗೆ ಇಮೇಲ್ಗಳನ್ನು ಕಳುಹಿಸುವುದನ್ನು ಮುಂದುವರಿಸಿ.
• ಸುಳ್ಳು ಅಥವಾ ತಪ್ಪುದಾರಿಗೆಳೆಯುವ ವಿಷಯ ಅಥವಾ ಇಮೇಲ್ ವಿಳಾಸಗಳನ್ನು ಬಳಸಬೇಡಿ.
• ಸಂದೇಶವನ್ನು ಒಂದು ಜಾಹಿರಾತು ಎಂದು ಕೆಲವು ನೈಜ ರೀತಿಯಲ್ಲಿ ಗುರುತಿಸಿ.
• ಹಾನರ್ ಆಯ್ಕೆಯಿಂದ ಹೊರಗುಳಿಯುವುದು / ತ್ವರಿತವಾಗಿ ಅನ್ಸಬ್ಸ್ಕ್ರೈಬ್ ವಿನಂತಿಗಳು.
• ಪ್ರತಿ ಇಮೇಲ್ನ ಕೆಳಭಾಗದಲ್ಲಿರುವ ಲಿಂಕ್ ಅನ್ನು ಬಳಸಿಕೊಂಡು ಅನ್ಸಬ್ಸ್ಕ್ರೈಬ್ ಮಾಡಲು ಬಳಕೆದಾರರನ್ನು ಅನುಮತಿಸಿ.
• ಪ್ರತಿ ಇ-ಮೇಲ್ನ ಕೆಳಗಿರುವ ಸೂಚನೆಗಳನ್ನು ಅನುಸರಿಸಿ.
ಮತ್ತು ನಾವು ನಿಮ್ಮನ್ನು ಪ್ರಾಮಾಣಿಕವಾಗಿ ತೆಗೆದುಹಾಕುತ್ತೇವೆ ಎಲ್ಲಾ ಪತ್ರವ್ಯವಹಾರಗಳು.
ಈ ಗೌಪ್ಯತಾ ನೀತಿ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗಿನ ಮಾಹಿತಿಯನ್ನು ಬಳಸಿಕೊಂಡು ನೀವು ನಮ್ಮನ್ನು ಸಂಪರ್ಕಿಸಬಹುದು.
ಜನಸಮುದಾಯ ಸಂಪುಟ: ಬುಡಬುಡಿಕಿ – ಕಣಜ
ಜನಸಮುದಾಯ ಸಂಪುಟ: ಬುಡಬುಡಿಕಿ
Home/ಇತಿಹಾಸ, ಕರ್ನಾಟಕ ಇತಿಹಾಸ, ಧರ್ಮ, ಸಮಾಜ ಮತ್ತು ಅಭಿವೃದ್ಧಿ, ಸಮುದಾಯ ಸಾಹಿತ್ಯ, ಸಾಹಿತ್ಯ/ಜನಸಮುದಾಯ ಸಂಪುಟ: ಬುಡಬುಡಿಕಿ
ಬುಡಬುಡಿಕಿ ಕಣಿ ಹೇಳುವ ಒಂದು ಸಮುದಾಯ. ಇವರು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಸಿಗುತ್ತಾರೆ. ಬುಡಬುಡಿಕಿ ಎನ್ನುವ ಪದ ಭಿಕ್ಷೆ ಬೇಡುವಾಗ ಬಳಸುವ ಬುಡುಬುಡು ಎಂದು ಶಬ್ದ ಮಾಡುವ ಸಾಧನದಿಂದ ಬಂದಿರಬಹುದು. ಆಂಧ್ರಪ್ರದೇಶದಲ್ಲಿ ಇವರನ್ನು 'ಬುಡು ಬುಡಿಕ್ಕಿ' ಎಂದು ಉಚ್ಚರಿಸುತ್ತಾರೆ. ಥರ್ಸ್ಟನ್ (೧೯೦೯) ಇವರನ್ನು ಅಲೆಮಾರಿಗಳು, ಭಿಕ್ಷೆ ಬೇಡುವವರು ಹಾಗೂ ಕಣಿ ಹೇಳುವವರೆಂದು ಹೇಳು...
ಈ ಸಮುದಾಯದಲ್ಲಿ ಅನೇಕ ದಂತ ಕಥೆಗಳನ್ನು ಹೊಂದಿದೆ. ಒಂದು ದಂತ ಕಥೆ ಪ್ರಕಾರ, ಶಿವನು ದಕ್ಷ ಬ್ರಹ್ಮನ ದಂಡನ್ನು ಸಂಪೂರ್ಣವಾಗಿ ನಾಶ ಮಾಡಿದಾಗ ಪಾರ್ವತಿದೇವಿಯು "ಸ್ವಾಮಿ, ನನ್ನ ವಂಶ ಸರ್ವನಾಶವಾಗದಂತೆ ಮಾತೊಂದು ನಡೆಸಿಕೊಂಡಬೇಕೆಂದು" ಎಂದು ಬೇಡಿದಳಂತೆ. ಆಗ ಶಿವನು ದಕ್ಷಬ್ರಹ್ಮನ ರಕ್ತದಿಂದ ಒಬ್ಬನನ್ನು ಸೃಷ್ಟಿಸಿದನೆಂದೂ ಅವನು ಮೇಲೇಳುವಾಗ ಬಡಬಡಿಸುತ್ತಾ ಎದ್ದು ಕುಳಿತನೆಂದೂ, ಆಗ ಅವನಿಗೆ ಶಿವನು ತ...
ತಲೆಗೆ ಬಣ್ಣದ ಪೇಟ, ಉದ್ದನೆಯ ನಿಲುವಂಗಿ, ಕೋಟು, ಕಚ್ಚೆಪಂಚೆ, ಸೊಂಟಕ್ಕೆ ವಸ್ತ್ರ, ಬಗಲಿಗೆ ಇಳಿಬಿದ್ದಿರುವ ಎರಡು ಮೂರು ಜೋಳಿಗೆ, ಹೆಬ್ಬೆಟ್ಟಿನಲ್ಲಿ ಗಗ್ಗರ, ಕೈಗೆ ಕಡಗ, ಉದ್ದನೆಯ ನಾಮ ಇವು ಬುಡಬುಡಿಕೆ ಜನರ ವೇಷ ಭೂಷಣಗಳು. ಸೂರ್ಯೋದಯದ ಮುನ್ನ ಎದ್ದು, ದೇವರನ್ನು ಪೂಜಿಸಿ, ವೇಷಧರಿಸಿ ಹಳ್ಳಿ ಹಳ್ಳಿಗೆ ಹೋಗಿ ಶಕುನ ನುಡಿಯುತ್ತಾರೆ. ಇದನ್ನು 'ಹಾಲಕ್ಕಿ ಶಾಸ್ತ್ರ' ಎಂದು ಹೇಳುತ್ತಾರೆ. ಈ ಶಾಸ್ತ್...
ಸಾಂಪ್ರದಾಯಿಕ ವೇಷದಲ್ಲಿ ಬುಡಬುಡಕಿ
ಭವಿಷ್ಯ ಹೇಳುವುದು ಇವರ ಸಾಂಪ್ರದಾಯಿಕ ವೃತ್ತಿ. ಶಕುನ ನುಡಿಯುವ ಹಾಲಕ್ಕಿಯ ಭಾಷೆ ಬುಡುಬಡಿಕಿಯವರಿಗೆ ಮಾತ್ರ ಅರ್ಥವಾಗುತ್ತದೆ ಎಂಬುದು ಇತರ ಜನರ ನಂಬಿಕೆಯಾಗಿದೆ. ಈ ಸಮುದಾಯದಲ್ಲಿ ತಮ್ಮ ಕುಲಗಳನ್ನೇ ಮನೆತನದ ಹೆಸರುಗಳಾಗಿ ಇಟ್ಟುಕೊಳ್ಳುತ್ತಾರೆ. ಉದಾಹರಣೆಗೆ ವಾಷ್ಟರ, ದೋಸಿ, ಗಾಯಕ್ವಾಡ, ಪಾಟಂಜ್, ಬಾವೆ, ಜಾಧವ, ಲಿಂಬಲ ಕರ ಹಾಗೂ ಭಾಗವತ. ತಮ್ಮ ಸಮುದಾಯದಲ್ಲಿ ಒಳಬಾಂಧವ್ಯ ಹಾಗೂ ಕುಲದ ಮಟ್ಟದಲ್ಲಿ ...
ಸಾಂಪ್ರದಾಯಿಕ ವೃತ್ತಿಯನ್ನು ಬಿಟ್ಟು ಇವರು ಪಾತ್ರೆ ಮಾರುವ ವೃತ್ತಿಗೆ ಬದಲಾಗಿದ್ದಾರೆ. ಇವರ ಇತ್ತೀಚಿನ ವೃತ್ತಿ ಎಂದರೆ ಜೋತಿಷ್ಯ ಹೇಳುವುದು. ಹೆಂಗಸರು ಕೌದಿಗಳನ್ನು ಹೊಲೆಯುತ್ತಾರೆ ಮತ್ತು ವ್ಯವಸಾಯದ ಕೂಲಿಗಳಾಗಿಯೂ ದುಡಿಯುತ್ತಾರೆ. ಊರಿಂದೂರಿಗೆ ಅಲೆಯುವ ಈ ಸಮುದಾಯದ ಬದುಕು ನಿಜಕ್ಕೂ ಶೋಚನೀಯ. ಅಂಬಾ ಭವಾನಿ, ಯಲ್ಲಮ್ಮ, ಮಹಾಲಕ್ಷ್ಮಿ, ಇವರು ಪೂಜಿಸುವ ದೇವರುಗಳು. ಆಧುನಿಕ ವಿದ್ಯಾಭ್ಯಾಸ, ಹಾಗೂ ...
By kanaja|2016-10-23T01:33:54+05:30June 18, 2015|ಇತಿಹಾಸ, ಕರ್ನಾಟಕ ಇತಿಹಾಸ, ಧರ್ಮ, ಸಮಾಜ ಮತ್ತು ಅಭಿವೃದ್ಧಿ, ಸಮುದಾಯ ಸಾಹಿತ್ಯ, ಸಾಹಿತ್ಯ|0 Comments