text
stringlengths
0
61.5k
ಸರ್ಪ್ರೈಸಸ್ ಎಫ್, ಕನಿಷ್ಠ, ಇಲ್ಲ. ಮತ್ತು ಮುಖದ ಪ್ರೊಫೈಲ್ ಮೂಲಕ ತಪ್ಪಿಸಬಹುದಾಗಿರುತ್ತದೆ ನಮ್ಮ ಕೈಪಿಡಿ ಆರಂಭಿಸಿದರು. ನಿರೀಕ್ಷಿಸಿ ಇಲ್ಲ ಎಲ್ ಮುಚ್ಚಿ ಮತ್ತು ಸಹಾಯ ನಿಮ್ಮ ಆತ್ಮೀಯ ಎಸ್ ಟ್ರ್ಯಾಕ್ ಮೇಲೆ ಎಂದಿಗೂ. ಹೇಗೆ ಚಾಟ್ ಮತ್ತು ಡೇಟಿಂಗ್ ರಿಂದ ಪಾಲುದಾರರು ಶ್ರೀಮಂತ, ಬರ್ನೆ ಮತ್ತು ಇತರ ಭಾಗಗಳು ಮತ್ತು ಸ್ವಿಜರ್ಲ್ಯಾಂಡ್ ನೀವು ಕಲಿಯುವಿರಿ ಚಾಟ್, ಇಲ್ಲದೆ ನೋಂದಣಿ. ಉಚಿತ ಚಾಟ್ ಚಿತ್ರ...
ಅನೇಕ ಉಚಿತ ಚಾಟ್ ಒಂದು ಉತ್ತಮ ಆಯ್ಕೆಯಾಗಿದೆ
ಆದಾಗ್ಯೂ, ಅನೇಕ ನೀಡುವುದಿಲ್ಲ ಈ ಕಾರ್ಯ ಉಚಿತ. ಚಿತ್ರ ಸಂಪರ್ಕಗಳನ್ನು ವಿವಿಧ: ಇಲ್ಲಿ ನೀವು ಮಾತ್ರ ಉಚಿತ ನೋಂದಣಿ ಮತ್ತು ಉಚಿತ ಚಾಟ್ ಬಳಸಿ, ಆದರೆ ಎಲ್ಲಾ ಇತರ ಪ್ರಮುಖ ಸಂಪರ್ಕ ವೈಶಿಷ್ಟ್ಯಗಳು. ಡೇಟಿಂಗ್ ಇಂಟರ್ನೆಟ್ ಮಾಡುತ್ತದೆ ಇದು ನಿಜವಾಗಿಯೂ ವಿನೋದ. ಚಾಟ್ಗಳು ಕುವೆಂಪು ಮಾಡಲು ವೇಗವಾಗಿ, ಸುಲಭ ಮತ್ತು ಅನುಕೂಲಕರ ಮಾಡಲು ಹೊಸ ಪರಿಚಯಸ್ಥರನ್ನು. ಒಂದು ಚಾಟ್ ಹೊಂದಿದೆ ಎಂದು ಒಂದು ಹೆಚ್ಚುವ...
ಲೋಕಾಯುಕ್ತದಿಂದ ಸುಳ್ಯದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ | V4News
ನಿಯಮದ ಚೌಕಟ್ಟಿನ ಪ್ರಕಾರವಾಗಿ ಕೆಲಸ ಮಾಡದಿರುವುದು ಮತ್ತು ನಿಯಮದ ಚೌಕಟ್ಟಿನ ಹೊರತಾದ ಕೆಲಸಗಳನ್ನು ಮಾಡುವುದು ಎರಡೂ ಸರಿಯಲ್ಲ. ಇಂತಹ ಅಪರಾಧಗಳನ್ನು ಅಧಿಕಾರಿಗಳನ್ನು ಮಾಡಬಾರದು ಎಂದು ಲೋಕಾಯುಕ್ತ ಡಿವೈಎಸ್‍ಪಿ ವಿಜಯಪ್ರಸಾದ್ ಹೇಳಿದ್ದಾರೆ.
ಸಾರ್ವಜನಿಕರು ತಮ್ಮ ಅಗತ್ಯ ಕಾರಣಗಳಿಗಾಗಿ ಕಚೇರಿಗಳಿಗೆ ಬರುತ್ತಾರೆ. ಅಂತವರನ್ನು ಅಲೆದಾಡಿಸುವುದಾಗಲೀ, ಸತಾಯಿಸುವುದಾಗಲೀ ಮಾಡಬಾರದು ಎಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಅನಾವಶ್ಯಕವಾಗಿ ಕಡತಗಳನ್ನು ತಿರಸ್ಕರಿಸುವ ಕ್ರಮ ಸರಿಯಲ್ಲ . ಅನೇಕ ಕಚೇರಿಗಳಲ್ಲಿ ಕಡತಗಳ ನಿರ್ವಹಣೆಯೇ ಸಮಸ್ಯೆ. ಕಡತಗಳು ಲಭ್ಯವಿಲ್ಲ ಎಂಬ ಒಂದು ಮಾತಿನ ಷರಾ ಬರೆಯುತ್ತಾರೆ. ಇಂತಹ ಕಾರಣಗಳನ್ನು ಹೇಳಿದರೆ ಇದಕ್ಕ...
ಬಳಿಕ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತಲ್ಲದೆ ದೂರಿನ ಆಧಾರದಲ್ಲಿ 3 ಪ್ರಕರಣಗಳನ್ನು ದಾಖಲಿಸಲು ಇಲಾಖೆ ನಿರ್ಧರಿಸಿತು.
ಸುಳ್ಯ ನಗರ ಪಂಚಾಯತ್ ಆವರಣದಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡಿ ಸಮಸ್ಯೆ ಉಂಟಾಗಿದೆ ಎಂದು ಶಾರೀಕ್ ಹೇಳಿದರು. ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಜಾಗ ಇಲ್ಲದ ಕಾರಣ ಇಂತಹ ಸಮಸ್ಯೆ ಎದುರಾಗುತ್ತಿದೆ. ಆದರೂ ಈಗ ಸಮಸ್ಯೆ ಆಗದಂತೆ ನಿಗಾ ವಹಿಸಲಾಗಿದೆ ಎಂದು ಮುಖ್ಯಾಧಿಕಾರಿ ಮತ್ತಡಿ ಹೇಳಿದರು. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದೇವೆ. ಕಸವನ್ನು ಬರ್ನ್ ಮಾಡುವ ವ್ಯವಸ್ಥೆಗೆ ಒಪ್ಪಿಗ...
ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಕುರುಂಜಿ ವೆಂಕಟ್ರಮಣ ಗೌಡ ಪುತ್ಥಳಿ ಕುರಿತಂತೆ ಶಾರೀಕ್ ಅವರು ನೀಡಿದ ದೂರಿನ ಬಗ್ಗೆಯೂ ಪ್ರಸ್ತಾಪವಾಯಿತು. ಅನುಮತಿ ಪಡೆಯದಿದ್ದರೆ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಏನು ಕ್ರಮ ಕೈಗೊಂಡಿದ್ದೀರಿ ಎಂದು ಡಿವೈಎಸ್‍ಪಿ ಪ್ರಶ್ನಿಸಿದರು. ಇದಕ್ಕೆ ನ.ಪಂ.ನಿಂದ ಪರ್ಮಿಷನ್ ಪಡೆಯಲಾಗಿಲ್ಲ. ನಾವು ಎನ್‍ಒಸಿಯನ್ನಷ್ಟೇ ನೀಡಿದ್ದೇವೆ. ಇದು ರಾಷ...
ಈ ಸಂದರ್ಭ ತಹಶೀಲ್ದಾರ್ ಕುಂಞ ಅಹ್ಮದ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹಾದೇವ್, ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿದ್ದರು.
ನೀವೇನಾದ್ರು ಈ ರಾಶಿಯಲ್ಲಿ ಹುಟ್ಟಿದ್ದೀರಾ.. ಹೌದು ಈ ರಾಶಿಯಲ್ಲಿ ಹುಟ್ಟಿದವರು ಯಾವಾಗಲೂ ರಾಜಯೋಗವನ್ನು ಪಡೆದುಕೊಂಡು ಹುಟ್ಟಿರುತ್ತಾರೆ ….!!! – Nan Magand
ನೀವೇನಾದ್ರು ಈ ರಾಶಿಯಲ್ಲಿ ಹುಟ್ಟಿದ್ದೀರಾ.. ಹೌದು ಈ ರಾಶಿಯಲ್ಲಿ ಹುಟ್ಟಿದವರು ಯಾವಾಗಲೂ ರಾಜಯೋಗವನ್ನು ಪಡೆದುಕೊಂಡು ಹುಟ್ಟಿರುತ್ತಾರೆ ….!!!
November 18, 2021 ನನ್ ಮಗಂದ್Leave a Comment on ನೀವೇನಾದ್ರು ಈ ರಾಶಿಯಲ್ಲಿ ಹುಟ್ಟಿದ್ದೀರಾ.. ಹೌದು ಈ ರಾಶಿಯಲ್ಲಿ ಹುಟ್ಟಿದವರು ಯಾವಾಗಲೂ ರಾಜಯೋಗವನ್ನು ಪಡೆದುಕೊಂಡು ಹುಟ್ಟಿರುತ್ತಾರೆ ….!!!
ನಮಸ್ಕಾರ ಸ್ನೇಹಿತರೆ ,ನಾವು ನಿಮಗೆ ಎಂದು ಹೇಳುವ ಈ ಮಾಹಿತಿಯಲ್ಲಿ ಕೆಲವೊಂದು ರಾಶಿಗಳು ಹುಟ್ಟಿನಿಂದಲೇ ರಾಜಯೋಗವನ್ನು ಪಡೆದುಕೊಂಡು ಬಂದಿರುತ್ತಾರೆ.ಈ ರೀತಿಯಾಗಿ ಹುಟ್ಟಿನಿಂದಲೇ ರಾಜಯೋಗವನ್ನು ಪಡೆದುಕೊಂಡಂತಹ ಬಂದಿರುವಂತಹ ರಾಶಿಗಳು ಯಾವುವು ಹಾಗೂ ಅವುಗಳ ಗುಣಲಕ್ಷಣಗಳು ಏನು ಎನ್ನುವ ಮಾಹಿತಿಯನ್ನು ನಿಮಗೆ ನಾನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯ...
ಮೊದಲನೇದಾಗಿ ವೃಷಭ ರಾಶಿ ಈ ರಾಶಿಯವರು ತುಂಬ ಅದೃಷ್ಟವಂತ ರಾಶಿಯಾಗಿದ್ದು ಹುಟ್ಟಿನಿಂದಲೇ ರಾಜಯೋಗವನ್ನು ಹಾಗೂ ಅದೃಷ್ಟವನ್ನು ಪಡೆದುಕೊಂಡು ಬಂದಿರುತ್ತಾರೆ.ಸಾಮಾನ್ಯವಾಗಿ ಇವರು ಯೋಗ ಪುರುಷರು ಇವರು ಬಯಸಿದ್ದೆಲ್ಲ ಇವರಿಗೆ ಶೀಘ್ರವಾಗಿ ಸಿಗುತ್ತದೆ ಹಾಗೂ ಇವರು ಉದ್ಯೋಗದಲ್ಲಿ ಇಂಜಿನಿಯರ್ ಹಾಗೂ ಡಾಕ್ಟರುಗಳು ಆಗಿರುತ್ತಾರೆ ಇವರು ವ್ಯವಸಾಯದಲ್ಲಿ ಬಹಳ ಪರಿಣತರೂ ಕೂಡ ಆಗಿರುತ್ತಾರೆ.ಇವರಿಗೆ ಸರಿಯಾದ ಸ...
ಇನ್ನು ಎರಡನೇ ಅದೃಷ್ಟವಂತ ರಾಶಿ ಯಾವುದೆಂದರೆ ಅದು ಮಕರ ರಾಶಿ ಹೌದು ಈ ರಾಶಿಯವರು ಯಾವಾಗಲೂ ಧರ್ಮವನ್ನು ಇಷ್ಟಪಡುವಂತಹ ರಾಶಿಯವರಾಗಿರುತ್ತಾರೆ.ಹಾಗೂ ಇವರು ಗಣ್ಯರಲ್ಲಿ ವಿರೋಧ ಕಟ್ಟಿಕೊಳ್ಳುತ್ತಾರೆ. ಇವರು ಧರ್ಮ ಮತ್ತು ಭಕ್ತಿಯಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ರಾಶಿಯಲ್ಲಿ ತುಲಾ ಲಗ್ನದಲ್ಲಿ ಹುಟ್ಟಿದವರು ಸುದೀರ್ಘ ಆಯಸ್ಸನ್ನು ಹೊಂದಿರುತ್ತಾರೆ.ದೇಹವು ಸುಂದರವಾಗಿರುತ್ತದೆ ಹಾಗೂ ಕೆಲಸದಲ್ಲಿ...
ಅಂದುಕೊಂಡ ಕೆಲಸ ಆಗುವವರೆಗೂ ಹಾಗೂ ಮಾತು ಕೊಟ್ಟದ್ದನ್ನು ಉಳಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ಆಲೋಚನೆ ಮಾಡಿ ಯಾವುದೇ ಒಂದು ಕೆಲಸವನ್ನು ಮಾಡುತ್ತಾರೆ ಹಾಗೂ ಪರೋಪಕಾರಿ ಆಗಿರುತ್ತಾರೆ ಯಾವುದೇ ರೀತಿಯಾದಂತಹ ತ್ಯಾಗಕ್ಕೆ ಕೂಡ ಇವರು ಸಿದ್ಧರಾಗಿರುತ್ತಾರೆ. ಈ ಲಗ್ನದವರು ಬಹಳ ಅಂದ-ಚಂದದ ಉಡುಪುಗಳನ್ನು ಧರಿಸುತ್ತಾರೆ.ಯಾವಾಗಲೂ ಕೂಡ ಸುಗಂಧ ದ್ರವ್ಯಗಳನ್ನು ಉಪಯೋಗಿಸುತ್ತಾರೆ. ಅಭರ...
ಇನ್ನು ಈ ರಾಶಿಯವರಿಗೆ ನದಿ, ಸರೋವರಗಳು ತುಂಬಾನೇ ಪ್ರಿಯ ವಾದಂತಹ ತಾಣಗಳ ಆಗಿರುತ್ತವೆ. ಇವರು ಅಂದುಕೊಂಡಿದ್ದನ್ನು ಸಾಧಿಸಿಬಿಡುತ್ತಾರೆ ಈ ರಾಶಿಯವರು ತುಂಬಾನೇ ಅದೃಷ್ಟ ರಾಶಿಯವರಾಗಿರುತ್ತಾರೆ.ನೋಡಿದ್ರಲ್ಲ ಸ್ನೇಹಿತರೆ ಈ ನಾಲ್ಕು ರಾಶಿಗಳ ತುಂಬಾನೇ ಅದೃಷ್ಟವಂತ ರಾಶಿಗಳ ಆಗಿರುತ್ತಾರೆ ಹಾಗೂ ಅಂದುಕೊಂಡಿದ್ದನ್ನು ಚಿತ್ರದಲ್ಲೇ ಪಡೆಯುತ್ತಾರೆ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ...
ಮಿಸ್ ಆಗಿ ಕಾಲ್ ಹೋಗಿದ್ದಕ್ಕೆ ಅಪ್ಪು ಅವರು ಶೈನ್ ಶೆಟ್ಟಿ ಅವರಿಗೆ ಯಾವ ರೀತಿ ಮೆಸೇಜ್ ಮಾಡಿದ್ದರಂತೆ ಗೊತ್ತ ಇಷ್ಟೊಂದು ಸರಳ ಗುಣ ಹೊಂದಿರುವ ವ್ಯಕ್ತಿ ಇನ್ನೆಲ್ಲೂ ಸಿಗಲ್ಲ ಕಣ್ರೀ ….!!!
ಮಹಿಳೆಯರ ಕಾಲಿನ ಈ ಬೆರಳುಗಳಲ್ಲಿ ಈ ಬೆರಳು ಉದ್ದ ಇದ್ದರೆ ಅವರಷ್ಟು ಅದೃಷ್ಟವಂತರು ಇನ್ಯಾರು ಇರಲ್ಲ ….!!!
ತಿಗಣೆಗಳ ಕಾಟದಿಂದ ಬೇಸತ್ತಿದ್ದೀರಾ ಹಾಗಾದ್ರೆ ಹೀಗೆ ಮಾಡಿ ಸಾಕು ಜನುಮದಲ್ಲಿ ತಿಗಣೆಗಳು ನಿಮ್ಮ ಮನೆ ಬಳಿ ಸುಳಿಯಲ್ಲ ….!!!
November 16, 2021 ನನ್ ಮಗಂದ್
ಅಡುಗೆ ಮನೆಯಲ್ಲಿ ನೀವು ಕಸದ ಬುಟ್ಟಿಗೆ ಹಾಕುವ ಕಸವನ್ನು ಮನೆಯಲ್ಲಿ ಗೊಬ್ಬರ ಮಾಡಿ ಮತ್ತೆ ಉಪಯೋಗಿಸಬಹುದು ಹೇಗೆ ಗೊತ್ತ …!!!
ರಾಜ್ಯದ ಸಲಹೆಗೆ ಒಪ್ಪದ ತಮಿಳು | ವಾರ್ತೆ
September 29, 20160112
ಕಾವೇರಿ ವಿವಾದ ಸಂಬಂಧ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆದ ಸಭೆ ಮುಕ್ತಾಯವಾಗಿದೆ. ಕೇಂದ್ರ ಸಚಿವೆ ಉಮಾಭಾರತಿ ಜತೆ ಸಿಎಂ ಸಿದ್ದರಾಮಯ್ಯ ಸಭೆ ಮುಕ್ತಾಯವಾಗಿದೆ. ಈ ಸಭೆಯಲ್ಲಿ ಯಾವುದೇ ರೀತಿಯ ನಿರ್ಣಯಕ ತೀರ್ಮಾನ ಕೈಗೊಳ್ಳಲಿಲ್ಲ. ಇಂದಿನ ಸಂಧಾನ ಸಭೆ ಅಪೂರ್ಣವಾಗಿದೆ.
ಸಭೆ ನಂತರ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಗೋಷ್ಟಿಯಲ್ಲಿ ಮಾತನಾಡಿದ ಸಚಿವೆ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದ ಅಭಿಪ್ರಾಯ ಕೇಳಿದ್ದೇವೆ. ಸುಪ್ರೀಂಕೋರ್ಟ್ ಸಲಹೆಯಂತೆ ಸಂಧಾನ ನಡೆಸಿದ್ದೇವೆ. ನಾವು ಚರ್ಚೆಯ ಮಾಹಿತಿಯನ್ನು ಸುಪ್ರೀಂಕೋರ್ಟ್ ಗೆ ತಲುಪಿಸುತ್ತೇವೆ ಎಂದಿದ್ದಾರೆ.
ಸಭೆಯಲ್ಲಿ ತಮಿಳುನಾಡು, ಕರ್ನಾಟಕ ಸರ್ಕಾರದ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಕೋರ್ಟ್ ನಿಂದ ಹೊರಗಡೆ ಸಂಧಾನದ ಪ್ರಯತ್ನ ನಡೆದಿದೆ. ರಾಜ್ಯಗಳ ಜನರ ಹಿತದೃಷ್ಠಿಯಿಂದ ಸಮಸ್ಯೆ ಬಗೆಹರಿಸಬೇಕು. ನೀರಿನ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ. ಎರಡು ರಾಜ್ಯಗಳ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅಟಾರ್ನಿ ಜನರಲ್ ಮೂಲಕ ಸಭೆಯ ಮಾಹಿತಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಲಿದೆ. ಒಕ್ಕೂಟ ವ್ಯವಸ್ಥೆಯಲ್...
ಕರ್ನಾಟಕದ ಸಲಹೆಗೆ ತಮಿಳುನಾಡು ಒಪ್ಪಿಗೆ ನೀಡಿಲ್ಲ. ಕರ್ನಾಟಕ, ತಮಿಳುನಾಡಿಗೆ ತಜ್ಞರ ತಂಡ ಕಳುಹಿಸಲು ಕರ್ನಾಟಕ ಮನವಿ ಮಾಡಿದೆ. ಆದರೆ ತಜ್ಞರ ತಂಡ ಕಳುಹಿಸುವ ಸಲಹಗೆ ತಮಿಳುನಾಡು ಒಪ್ಪಿಲ್ಲ ಎಂದು ಕೇಂದ್ರ ಸಚಿವೆ ವಿವರಿಸಿದ್ದಾರೆ.
Hey Buddy!, I found this information for you: "ರಾಜ್ಯದ ಸಲಹೆಗೆ ಒಪ್ಪದ ತಮಿಳು". Here is the website link: https://vaarte.com/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6-%e0%b2%b8%e0%b2%b2%e0%b2%b9%e0%b3%86%e0%b2%97%e0%b3%86-%e0%b2%92%e0%b2%aa%e0%b3%8d%e0%b2%aa%e0%b2%a6-%e0%b2%a4%e0%b2%ae%e0%b2%bf%e0%b2%b3/. Thank...
'ರಫೇಲ್'ನಿಂದಲೇ ಮೋದಿ ಮತ್ತೆ ಪ್ರಧಾನಿ: ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ | Prajavani
'ರಫೇಲ್'ನಿಂದಲೇ ಮೋದಿ ಮತ್ತೆ ಪ್ರಧಾನಿ: ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ
ಚಿಂತಕರ ಚಾವಡಿ ವೇದಿಕೆ ಆಯೋಜಿಸಿದ್ಧ ಅನೌಪಚಾರಿಕ ಸಂವಾದ
Published: 14 ಏಪ್ರಿಲ್ 2019, 20:38 IST
Updated: 14 ಏಪ್ರಿಲ್ 2019, 20:38 IST
ತುಮಕೂರು: 'ಬೋಫೋರ್ಸ್ ಪ್ರಕರಣ ಕಾಂಗ್ರೆಸ್‌ ಕಳಂಕಿತವಾಗಿ ಅಧಿಕಾರ ಕಳೆದುಕೊಂಡರೆ 'ರಫೇಲ್ ' ಯುದ್ಧ ವಿಮಾನ ಖರೀದಿ ತೀರ್ಮಾನದಿಂದ ನರೇಂದ್ರ ಮೋದಿ ಮತ್ತೆ ಈ ದೇಶದ ಪ್ರಧಾನಿಯಾಗುತ್ತಾರೆ' ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ನಗರದ ಎಸ್‌.ಐ.ಟಿ. ಬಿರ್ಲಾ ಸಭಾಂಗಣದಲ್ಲಿ ಚಿಂತಕರ ಚಾವಡಿ ವೇದಿಕೆಯು ಆಯೋಜಿಸಿದ್ಧ 'ಅನೌಪಚಾರಿಕ ಸಂವಾದ' ಕಾರ್ಯಕ್ರಮದಲ್ಲಿ ಮಾತನಾಡಿದರು.
ನೋಟು ಅಮಾನ್ಯೀಕರಣ ನಿರ್ಧಾರ, ರಫೇಲ್ ಯುದ್ಧ ವಿಮಾನ ಖರೀದಿ, ಪುಲ್ವಾಮಾ ದಾಳಿ, ಕಾಂಗ್ರೆಸ್ ಪ್ರಣಾಳಿಕೆ , ಉದ್ಯೋಗ ಸೃಷ್ಟಿ ಹೀಗೆ ಹಲವು ವಿಷಯಕ್ಕೆ ಸಂಬಂಧಪಟ್ಟಂತೆ 600ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಭಿಕರು ನೋಂದಣಿ ಮಾಡಿಸಿದ್ದರು. ಸಂಘಟಕರು ಕ್ರೋಢೀಕರಿಸಿದ 12 ಪ್ರಶ್ನೆಗಳಿಗೆ ಸಚಿವೆ ಉತ್ತರಿಸಿದರು.
ರಫೇಲ್ ಯುದ್ಧ ವಿಮಾನ ಖರೀದಿಯು ಈ ದೇಶದ ರಕ್ಷಣೆ ಹಿತ ದೃಷ್ಟಿಯಿಂದ ಕೈಗೊಂಡ ಮಹತ್ವದ ತೀರ್ಮಾನವಾಗಿದೆ. ಇದರಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಹಗರಣ ಇನ್ನೆಲ್ಲಿ ಬಂತು ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಪಕ್ಷ ಸೇರಿದಂತೆ ಕೆಲವು ಪಕ್ಷ, ಮುಖಂಡರ ಟೀಕೆ ಅರ್ಥವಿಲ್ಲದ್ದು ಎಂದು ಪ್ರತಿಕ್ರಿಯಿಸಿದರು.
ಸುಸೈಡ್ ಬಾಂಬರ್ ಗೂ ಮುಖ್ಯಮಂತ್ರಿಗೂ ವ್ಯತ್ಯಾಸವಿಲ್ಲ
ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷಗಳ ಹಿಂದೆಯೇ ತಮಗೆ ವಿಷಯ ಗೊತ್ತಿತ್ತು ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ರಕ್ಷಣಾ ಇಲಾಖೆಗೆ ಈ ಸಂಗತಿ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆಗೆ ಸಚಿವೆ ಒಂದು ಕ್ಷಣ ಬೆರಗಾದರು.
ಯಾರು ಮುಖ್ಯಮಂತ್ರಿ ಹಾಗೆ ಹೇಳಿದ್ದಾರೆಯೆ? ಮುಖ್ಯಮಂತ್ರಿ ಹಾಗೆ ಹೇಳಿದ್ದಾರೆ ಎಂದರೆ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಮುಖ್ಯಮಂತ್ರಿಗೆ ಎರಡು ವರ್ಷಗಳ ಹಿಂದೆಯೇ ದಾಳಿ ಬಗ್ಗೆ ಗೊತ್ತಿದ್ದರೆ ದೇಶದ ರಕ್ಷಣೆ ದೃಷ್ಟಿಯಿಂದ ಗಮನಕ್ಕೆ ತರಬಹುದಿತ್ತು. ಎರಡು ವರ್ಷ ಸುಮ್ಮನೆ ಇದ್ದರು ಎಂದರೆ ಸುಸೈಡ್ ಬಾಂಬರ್‌ ಗೂ ಇಲ್ಲಿನ ಮುಖ್ಯಮಂತ್ರಿಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ 'ನ್ಯಾಯ' ಯೋಜನೆ ಮೂಲಕ ದೇಶದ ಬಡತನ ನಿರ್ಮೂಲನೆ ಮಾಡುವುದಾಗಿ ಪ್ರತಿಪಾದಿಸಿದೆ. ಇಂದಿರಾಗಾಂದಿ ಇದ್ದಾಗ ಗರೀಬಿ ಹಠಾವೊ ಎಂದರು. ರಾಜೀವ್ ಗಾಂಧಿ ಇದ್ದಾಗ ಬಡತನ ನಿರ್ಮೂಲನೆ ಎಂದು ಯೋಜನೆ ರೂಪಿಸಿದ್ದರು. ಆದಾಗ್ಯೂ ದೇಶದಲ್ಲಿನ ಬಡತನ ನಿರ್ಮೂಲನೆ ಆಗಿಲ್ಲ. ಅಂದರೆ ಅರ್ಥ ಬಡತನ ನಿರ್ಮೂಲನೆ ಮಾಡುವುದು ಕಾಂಗ್ರೆಸ್‌ ನ...
ಕಾಂಗ್ರೆಸ್ ಪಕ್ಷದ ಗುರು ಎಂದೇ ಕರೆಯಲ್ಪಡುವ ಸ್ಯಾಮ್ ಪಿಥ್ರೋಡಾ ಅವರು ನ್ಯಾಯ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನ್ಯಾಯ ಯೋಜನೆಯಿಂದ ಬಡತನ ಹೋಗಲಾಡಿಸಬಹುದು. ಆದರೆ, ಮಧ್ಯಮ ವರ್ಗದ ಮೇಲೆ ತೆರಿಗೆ ಹೆಚ್ಚಳ ಅವಶ್ಯಕವಾಗಿ ಮಾಡಬೇಕು ಎಂದು ಹೇಳಿದ್ದಾರೆ. ಅಂದರೆ ಏನರ್ಥ. ಮಧ್ಯಮ ವರ್ಗದ ಮೇಲೆ ತೆರಿಗೆ ಹೆಚ್ಚಳ ಮಾಡಿ ನೀವು ಬಡತನ ನಿರ್ಮೂಲನೆ ಮಾಡುತ್ತಿರೋ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿದ ಮುದ್ರಾ ಯೋಜನೆ, ಸ್ವಯಂ ಉದ್ಯೋಗ ಪ್ರೋತ್ಸಾಹ ಯೋಜನೆ ಸೇರಿದಂತೆ ಹಲವು ಯೋಜನೆಗಳು ವಾಸ್ತವಿಕವಾಗಿ ದೇಶದ ಬಡತನ ನಿರ್ಮೂಲನೆಗೆ ಸಹಕಾರಿಯಾಗಿವೆ ಎಂದು ಹೇಳಿದರು.
ಜಗತ್ತಿಗೆ ಭಾರತದ ಶಕ್ತಿ ದರ್ಶನ
ಉರಿ, ಪುಲ್ವಾಮಾ ದಾಳಿಗೆ ಭಾರತ ನಡೆಸಿದ ಪ್ರತೀಕಾರದ ದಾಳಿಗೆ, ರಕ್ಷಣೆಗೆ ಕೈಗೊಂಡ ಕ್ರಮಗಳು ಜಗತ್ತಿನ ರಾಷ್ಟ್ರಗಳಿಗೆ ಭಾರತದ ಶಕ್ತಿ ಏನು ಎಂಬುದು ಅರ್ಥವಾಗಿದೆ. ೆರಡೂ ಪ್ರತೀಕಾರದ ದಾಳಿಯಲ್ಲಿ ನಾಗರಿಕರ ಜೀವಕ್ಕೆ ಅಪಾಯ ಆಗಿಲ್ಲ. ಉಗ್ರರ ನೆಲೆಗಳನ್ನು ನಮ್ಮ ಸೇನೆ ಬಗ್ಗು ಬಡಿದಿವೆ. ಜಗತ್ತಿನ ಒಂದೇ ಒಂದು ರಾಷ್ಟ್ರ ಭಾರತ ನಡೆಸಿದ ಪ್ರತೀಕಾರದ ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ. ಆದರೆ, ನಮ್ಮ ಕಾಂಗ್ರ...
ಅಂಗನವಾಡಿ ಕೇಂದ್ರಕ್ಕೆ ಅವಧಿ ಮುಗಿದ ಪೌಷ್ಟಿಕ ಆಹಾರ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ | Expired Nutritious Food Supply in Kushtagi Taluk in Koppal District
ಅವಧಿ ಮುಗಿದ ಪೌಷ್ಟಿಕ ಆಹಾರ ಪೂರೈಕೆ: ಬಳಸಲು ತಾಯಂದಿರ ಹಿಂದೇಟು
Bengaluru, First Published Jan 25, 2020, 8:37 AM IST
ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಅವಧಿ ಮೀರಿದ ಪೌಷ್ಟಿಕ ಆಹಾರ ಪೂರೈಕೆ| ಬಳಸಲು ತಾಯಂದಿರ ಹಿಂದೇಟು| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಾನಾ ಗ್ರಾಮಗಳಿಗೆ ಪೂರೈಕೆಯಾದ ಅವಧಿ ಮೀರಿದ ಪೌಷ್ಟಿಕ ಆಹಾರ|
ಹನುಮಸಾಗರ(ಜ.25): ತಾಲೂಕಿನ ನಾನಾ ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಈ ಬಾರಿ ಅವಧಿ ಮೀರಿದ ಪೌಷ್ಟಿಕ ಆಹಾರ ಪೂರೈಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮಕ್ಕಳಿಗೆ ಪೌಷ್ಟಿಕ ಆಹಾರದ ರೂಪದಲ್ಲಿಯ ಪುಷ್ಟಿ ಹೆಸರಿನ ಆಹಾರ ಪ್ಯಾಕೆಟ್ ದಿನಾಂಕ ಮುಕ್ತಾಯವಾಗಿರುವುದರಿಂದ ತಾಯಂದಿರು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಲ್ಲಿ 6 ತಿಂಗಳ ಶಿಶುವಿನಿಂದ 3 ವರ್ಷದ ಮಗುವಿನ ವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಹೆಸರುಬೇಳೆ, ಅಕ್ಕಿ ರವಾ, ಗೋದಿ ರವಾ, ಸಕ್ಕರೆ, ರಾಗಿ ಹಿಟ್ಟು ಒಗ್ಗೂಡಿಸಿ ಪುಷ್ಟಿ ಎಂಬ ಆ...
ತಾಯಂದಿರು ಪ್ರತಿ ತಿಂಗಳು ಅದನ್ನು ಪಡೆದು ತಮ್ಮ ಮಕ್ಕಳಿಗೆ ಬೇಯಿಸಿ ಉಣಬಡಿಸುತ್ತಾರೆ. ಆದರೆ ಈ ತಿಂಗಳು ಪೂರೈಕೆಯಾಗಿರುವ ಪುಷ್ಟಿ ಪ್ಯಾಕೆಟ್ ಮೇಲೆ ಸಿದ್ಧಗೊಂಡಿರುವ ದಿನಾಂಕ ಅಕ್ಟೋಬರ್ 2019 ಹಾಗೂ ಉಪಯೋಗಿಸುವ ಮುಕ್ತಾಯದ ದಿನಾಂಕ ನ. 30 ಇದೆ. ಇದರಿಂದಾಗಿ ಇದನ್ನು ಉಪಯೋಗಿಸಬೇಕೋ, ಬೇಡವೋ ಎಂಬ ಅನುಮಾನ ಕಾಡುತ್ತಿದೆ. ಇದನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡುವ ಆಹಾರ ಸೇವನೆ ಮತ್ತು ಸಂಸ್ಕರ...
ಇದರ ಬಗ್ಗೆ ಮಾಹಿತಿ ಇರಲಿಲ್ಲ. ಸದ್ಯಕ್ಕೆ ಎಲ್ಲ ಮೇಲ್ವಿಚಾರಕರಿಗೆ ಮಾಹಿತಿ ನೀಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರೈಕೆ ಮಾಡದಂತೆ ತಿಳಿಸಲಾಗುವುದು. ಕುಷ್ಟಗಿಯ ಎಂಎಸ್‌ಪಿ ಘಟಕಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಕುಷ್ಟಗಿ ಸಿಡಿಪಿಒ ವೀರೇಂದ್ರ ನಾವದಗಿ ಅವರು ಹೇಳಿದ್ದಾರೆ.
ಪುಷ್ಟಿ ಆಹಾರದ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ಅತಿಸಾರ ಆಗಿದ್ದರಿಂದ ಮಗನಿಗೆ ಖಾಸಗಿ ವೈದ್ಯರ ಹತ್ತಿರ ಚಿಕಿತ್ಸೆ ಕೊಡಿಸಲಾಗಿದೆ ಎಂದು ಯರಗೇರಿ ಗ್ರಾಮಸ್ಥ ಬಸವರಾಜ ಬಂಡರಗಲ್ ಹೇಳಿದ್ದಾರೆ.
ಶ್ರೀ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ - Samskruti-udayavani
Home ಧಾರ್ಮಿಕ ಕಾರ್ಯಕ್ರಮ ಶ್ರೀ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ
ಸುಳ್ಯ : ಇಲ್ಲಿನ ಬೃಂದಾವನ ಚಾರಿಟೆಬಲ್‌ ಟ್ರಸ್ಟ್‌ ಆಶ್ರಯದಲ್ಲಿ ಪಯಸ್ವಿನಿ ತಟದ ಶ್ರೀ ಚೆನ್ನಕೇಶವ ದೇವರ ಜಳಕದ ಕಟ್ಟೆ ಬಳಿ ನಿರ್ಮಾಣಗೊಂಡ ನೂತನ ಶ್ರೀ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ಮಹೋತ್ಸವ ದೇರೆಬೈಲು ತಂತ್ರಿಗಳಾದ ಮುಕ್ಕೂರು ರಾಘವೇಂದ್ರಪ್ರಸಾದ್‌ ಶಾಸ್ತ್ರೀ ಅವರ ಉಪಸ್ಥಿತಿಯಲ್ಲಿ ಗುರುವಾರ ಆರಂಭಗೊಂಡಿತು.
ಪೂರ್ವಾಹ್ನ ಮಹಾಸಂಕಲ್ಪ, ಸ್ವಸ್ತಿ ಪುಣ್ಯಾಹವಾಚನ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ದೇವನಾಂದಿ ಸಮಾರಾಧನೆ, ಮಹಾಗಣಪತಿ ಹೋಮ, ತುಳಸಿ ಪ್ರತಿಷ್ಠೆ, ಸಪ್ತಶುದ್ಧಿ ಪ್ರಕ್ರಿಯೆಗಳು, ಪ್ರಸಾದ ವಿತರಣೆ, ರಾತ್ರಿ 7ರಿಂದ ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ. ವಾಸ್ತು ಪೂಜಾ ಬಲಿ, ದಿಕ್ಪಾಲಕ ಬಲಿ, ಪ್ರಸಾದ ವಿತರಣೆ ನಡೆಯಿತು.
ವೈದಿಕ ಕಾರ್ಯಕ್ರಮದ ತಂತ್ರಿಗಳಾದ ದೇರೆಬೈಲು ರಾಘವೇಂದ್ರಪ್ರಸಾದ್‌ ಶಾಸ್ತ್ರಿ ಮುಕ್ಕೂರು ಅವರನ್ನು ಪೂರ್ಣ ಕುಂಭ ದೊಂದಿಗೆ ಸ್ವಾಗತಿಸಲಾಯಿತು.
ಎ. 20ರಂದು ಬೆಳಗ್ಗೆ 8ರಿಂದ ವೈದಿಕ ಕಾರ್ಯಕ್ರಮ, ಮಹಾಗಣಪತಿ ಹೋಮ, ಪವಮಾನ ಪ್ರಾಯಶ್ಚಿತ್ತ ಹೋಮ, ನವಗ್ರಹ ಪೂಜೆ, ನವಗ್ರಹ ಶಾಂತಿ, ದಾನಾದಿಗಳು, ಪ್ರಸಾದ ವಿತರಣೆ,ರಾತ್ರಿ 7ರಿಂದ ಭೂವರಾಹ ಹೋಮ, ದುರ್ಗಾ ನಮಸ್ಕಾರ ಪೂಜೆ, ಮಹಾ ಸುದರ್ಶನ ಹೋಮ ನಡೆಯಲಿದೆ.
ಅಪರಾಹ್ನ 4ರಿಂದ ಸುಳ್ಯ ಮಹಿಳಾ ಪರಿಷತ್‌ ಸದಸ್ಯರಿಂದ ಭಜನೆ, ಪುತ್ತೂರು ವಿದುಷಿ ರೂಪಶ್ರೀ ಮತ್ತು ಸಂಹಿತಾ ಬಳಗದವರಿಂದ ಭಕ್ತಿ ಸಂಗೀತ, ಸುಳ್ಯ ಶಿವಳ್ಳಿ ಸಂಪನ್ನದ ವಿದ್ಯಾರ್ಥಿಗಳಿಂದ ವೇದಘೋಷ, ರಾತ್ರಿ 7ರಿಂದ ರಾಘವೇಂದ್ರ ಮಠ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮುರಳಿಕೃಷ್ಣ ಡಿ.ಆರ್‌. ಅಧ್ಯಕ್ಷತೆ ಯಲ್ಲಿ ಧಾರ್ಮಿಕ ಸಭೆ ಜರಗಲಿದೆ.
ತೂಕ ಇಳಿಸಲು ಸಹಕಾರಿ ಈ ಟೀ ವೆರೈಟಿ | Best Teas for Weight Loss and Fat Burning
Bangalore, First Published Apr 23, 2020, 5:57 PM IST
ತೂಕ ಇಳಿಸಲು ಕಸರತ್ತು ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ. ತೂಕ ಇಳಿಸಲು ಹೊಸ ಹೊಸ ದಾರಿಗಳನ್ನು ಜನ ಕಂಡುಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೊಂದು ಸೋಡಾ ಸೇವನೆ ಬಿಟ್ಟು ಗ್ರೀನ್ ಟೀಯಂಥ ಆರೋಗ್ಯಕರ ಪೇಯಗಳ ಮೊರೆ ಹೋಗುವುದು. ಆದರೆ ತೂಕ ಇಳಿಸಲು ಕೇವಲ ಗ್ರೀನ್ ಟೀ ಅಲ್ಲ, ಇನ್ನೂ ಹಲವಾರು ರೀತಿಯ ಟೀಗಳು ಸಹಾಯಕ್ಕೆ ಬರುತ್ತವೆ. ಲಾಕ್‌ಡೌನ್‌ನ ಈ ಸಮಯದಲ್ಲಿ ಟೀಯ ಹೊಸ ಹೊಸ ರುಚಿಗಳನ್ನು ಸವಿಯುತ್ತಲೇ ತೂ...
ಇಷ್ಟಕ್ಕೂ ಟೀ ಕೇವಲ ತೂಕ ಇಳಿಸಲು ಸಹಾಯ ಮಾಡುವುದಷ್ಟೇ ಅಲ್ಲ, ಹಲವಾರು ಆರೋಗ್ಯ ಲಾಭಗಳನ್ನು ತಂದುಕೊಡುತ್ತದೆ. ಹೊಟ್ಟೆಯ ಫ್ಯಾಟ್ ಕರಗಿಸುವುದರಿಂದ ಹಿಡಿದು ರಾತ್ರಿಯ ನಿದ್ರೆ ನಿಯಮಿತವಾಗುವಂತೆ ಮಾಡುವವರೆಗೆ ಚಹಾದ ಪ್ರಯೋಜನಗಳು ಬಹಳಷ್ಟು. ನಿಮ್ಮ ಅಗತ್ಯ ಹಾಗೂ ರುಚಿಗೆ ತಕ್ಕಂತೆ ಯಾವ ಟೀ ನಿಮಗೆ ಹೆಚ್ಚು ಸೂಟ್ ಆಗುತ್ತದೆ ಎಂದು ಪ್ರಯೋಗಿಸಿ ನೋಡಿ.
ಸಲ್ಮಾನ್ ಖಾನಿಂದ ಪ್ರಿಯಾಂಕಾ ಚೋಪ್ರಾವರೆಗೂ ಖ್ಯಾತರೆಲ್ಲ ಎಗ್ ವೈಟ್ ತಿನ ...
ತಾನು ಕೊಡುವ ಆರೋಗ್ಯ ಲಾಭಗಳಿಂದಾಗಿ ಗ್ರೀನ್ ಟೀ ಅತ್ಯುತ್ತಮ ಪೇಯ. ಬಹುತೇಕ ತೂಕ ಇಳಿಸುವ ಪ್ರಾಡಕ್ಟ್‌ಗಳಲ್ಲಿ ಗ್ರೀನ್ ಟೀಯನ್ನು ಬಳಸಲಾಗಿರುತ್ತದೆ. ಪ್ರತಿದಿನ ಗ್ರೀನ್ ಟೀ ಸೇವಿಸುವುದರಿಂದ ಮೆಟಾಬಾಲಿಸಂ ಹೆಚ್ಚಿ ತೂಕ ಇಳಿಸಬಹುದು ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಗ್ರೀನ್ ಟೀ ಕುಡಿವವರು ಕುಡಿಯದವರಿಗಿಂತ ಒಂದೇ ಅವಧಿಯಲ್ಲಿ ಮೂರೂವರೆ ಕೆಜಿಗಳಷ್ಟು ಹೆಚ್ಚು ತೂಕವನ್ನು ಇಳಿಸುತ್ತಾರೆ ಎಂದ...
ಸಂಶೋಧನೆಗಳ ಪ್ರಕಾರ, ಗ್ರೀನ್ ಟೀಯು ದೇಹದ ಫ್ಯಾಟ್ ಕೋಶಗಳಿಗೆ ಫ್ಯಾಟ್ ಬಿಡುಗಡೆ ಮಾಡುವಂತೆ, ಅದನ್ನು ಎನರ್ಜಿಯಾಗಿ ಕನ್ವರ್ಟ್ ಮಾಡುವಂತೆ ಸಿಗ್ನಲ್ ನೀಡುತ್ತವಂತೆ. ವರ್ಕೌಟ್‌ಗೂ ಮುನ್ನ ಗ್ರೀನ್ ಟೀ ಕುಡಿಯುವುದು ಉತ್ತಮ ಅಭ್ಯಾಸ.
ಗೋಲ್ಡನ್ ಟೀ
ಪ್ರಕೃತಿ ನೀಡಿದ ಅತ್ಯುತ್ತಮ ಔಷಧೀಯ ವಸ್ತುಗಳಲ್ಲಿ ಅರಿಶಿನವೂ ಒಂದು. ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಮೈಕ್ರೋಬಿಯಲ್ ಹಾಗೂ ಥರ್ಮೋಜೆನಿಕ್ ಗುಣಗಳನ್ನು ಹೊಂದಿರುವ ಅರಿಶಿನ ಅನೇಕ ಕಾಯಿಲೆಗಲಿಗೆ ಮದ್ದು. ಜೊತೆಗೆ, ಇದರಲ್ಲಿರುವ ಕುರ್ಕುಮಿನ್ ವೇಗವಾಗಿ ತೂಕ ಇಳಿಯುವಂತೆ ಮಾಡುತ್ತದೆ. ಹಾಗಾಗಿ ಅರಿಶಿನ ಬಳಸಿ ತಯಾರಿಸುವ ಗೋಲ್ಡನ್ ಟೀ ತೂಕ ಇಳಿಕೆಗೆ ಸಹಕಾರಿ. ಕರಿಮೆಣಸಿನ ಜೊತೆ ಸೇವಿಸಿದಾಗ ಕುರ್ಕುಮಿನ್ನ...
ಕೊಂಬುಚಾ ಟೀ
ಬ್ಯಾಕ್ಟೀರಿಯಾ ಹಾಗೂ ಯೀಸ್ಟ್ ಬಳಸಿ ಹುದುಗು ಬರಿಸುವ ವಿಧಾನದ ಮೂಲಕ ತಯಾರಿಸುವ ಟೀ ಇದು. ಇದರ ಬಹಳಷ್ಟು ಆರೋಗ್ಯ ಲಾಭಗಳಲ್ಲಿ ಬಿ ವಿಟಮಿನ್ಸ್, ಗ್ಲುಕುರೋನಿಕ್ ಆ್ಯಸಿಡ್ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಕೆಲಸ ಮಾಡುತ್ತವೆ. ಕೊಂಬುಚದಲ್ಲಿರುವ ಪ್ರೊಬಯೋಟಿಕ್ ಬ್ಯಾಕ್ಟೀರಿಯಾ ಹಾಗೂ ಅಸಿಟಿಕ್ ಆ್ಯಸಿಡ್ ದೇಹದಲ್ಲಿ ಹಸಿವನ್ನು ಕಡಿಮೆ ಮಾಡುವ ಹಾರ್ಮೋನ್‌ಗಳ ಬಿಡುಗಡೆ ಮಾಡಿಸುವ ಜೊತೆಗೆ, ಹೊಟ್ಟೆಯಲ್ಲಿ ಹ...
ಪೆಪ್ಪರ್‌ಮಿಂಟ್ ಟೀ
ತೂಕ ನಿಯಂತ್ರಿಸಲು ಅಡ್ಡಿ ಬರುವುದೇ ಆಗಾಗ ಸ್ಟೀಟ್, ಉಪ್ಪು, ಫ್ಯಾಟಿ ಆಹಾರ ತಿನ್ನುವ ಬಯಕೆ. ಇಂಥ ಕ್ರೇವಿಂಗ್‌ಗಳನ್ನು ಗುಡಿಸಿ ಹಾಕುತ್ತದೆ ಪೆಪ್ಪರ್‌ಮಿಂಟ್ ಟೀ. ಇದರ ಪರಿಮಳವೇ ಜಂಕ್ ಫುಡ್ ಕ್ರೇವಿಂಗ್ಸ್ ಇಳಿಸಬಲ್ಲದು ಎನ್ನುತ್ತವೆ ಅಧ್ಯಯನಗಳು. ತೂಕ ಇಳಿಸುವ ಜೊತೆಗೆ ಪೆಪ್ಪರ್‌ಮಿಂಟ್ ಆತಂಕ ಹಾಗೂ ಒತ್ತಡ ಮಣಿಸಲೂ ಸಹಾಯಕ.
ಬ್ಲ್ಯಾಕ್ ಡ್ರಾಗನ್ ಟೀ ಎಂದೂ ಕರೆಸಿಕೊಳ್ಳುವ ಇದು ಗ್ರೀನ್ ಟೀಯಲ್ಲಿರುವ ಕ್ಯಾಟಿಚಿನ್ ಹೊಂದಿದೆ. ಇವು ದೇಹವು ಫ್ಯಾಟ್ ಬ್ರೇಕ್ ಮಾಡಲು ಸೂಚನೆ ನೀಡುತ್ತವೆ. ಇದರಿಂದ ಎನರ್ಜಿ ಮಟ್ಟ ಹೆಚ್ಚಾಗುತ್ತದೆ ಹಾಗೆಯೇ ಫ್ಯಾಟ್ ಕರಗುವ ವೇಗ ಕೂಡಾ.
ಇತರೆ ಟೀಗಳಂಥಲ್ಲದೆ ವೈಟ್ ಟೀಯನ್ನು ಕೊಯ್ದ ಬಳಿಕ ಸೂರ್ಯನ ಬಿಸಿಲಲ್ಲಿ ಒಣಗಿಸಲಾಗುತ್ತದೆ. ನಂತರವಷ್ಟೇ ಪ್ಯಾಕ್ ಮಾಡಲಾಗುತ್ತದೆ. ಹಾಗಾಗಿ, ಇದರಲ್ಲಿ ಇತರೆಲ್ಲ ಪ್ರೋಸೆಸ್ಡ್ ಟೀಗಳಿಗಿಂತ ಹೆಚ್ಚು ಕ್ಯಾಟೆಚಿನ್ ಹಾಗೂ ಪಾಲಿಫಿನಾಲ್ ಇರುತ್ತವೆ. ಇವು ದೇಹದಲ್ಲಿ ಹೊಸ ಫ್ಯಾಟ್ ಸೆಲ್ ಉತ್ಪತ್ತಿಯಾಗದಂತೆ ನೋಡಿಕೊಳ್ಳುತ್ತವೆ. ಇದರೊಂದಿಗೆ ಮೆಟಾಬಾಲಿಸಂ ಕೂಡಾ ವೇಗಗೊಳಿಸುತ್ತದೆ. ಹಾಗಾಗಿ, ತೂಕ ಇಳಿಕೆ ಬಹುಬ...
ಒಂದೇ ದಿನದಲ್ಲಿ ಎಲ್ಲವೂ ಉಲ್ಟಾ-ಪಲ್ಟಾ: ವೀಕ್ಷಕರ ಮನಗೆದ್ದ ಜಸ್ಲೀನ್.! | Bigg Boss 12 Contestant Jasleen Matharu impresses Viewers - Kannada Filmibeat
5 min ago ಗೆಳೆಯನಿಗೆ ಕೊಟ್ಟಿದ್ದ ಮಾತು ಉಳಿಸಿಕೊಂಡ ಸುಶಾಂತ್ ಸಿಂಗ್ ರಜಪೂತ್
ಕೇವಲ 24 ಗಂಟೆಗಳ ಹಿಂದಕ್ಕೆ ಹೋದರೆ... 28 ರ ಹರೆಯದ ಜಸ್ಲೀನ್ ಮಥಾರು ಕಂಡ್ರೆ 'ಬಿಗ್ ಬಾಸ್-12' ವೀಕ್ಷಕರು ಮೂತಿ ತಿರುಗಿಸುತ್ತಿದ್ದರು. ಜಸ್ಲೀನ್-ಅನೂಪ್ 'ವಿಚಿತ್ರ' ಪ್ರೇಮ ಕಥೆ ಕಂಡು ವೀಕ್ಷಕರು ಅಕ್ಷರಶಃ ಸುಸ್ತಾಗಿದ್ದರು. ಆದ್ರೀಗ, ವೀಕ್ಷಕರ ಮನದಲ್ಲಿ ಅದೇ ಅಭಿಪ್ರಾಯ ಇಲ್ಲ.!
'ಬಿಗ್ ಬಾಸ್-12' ವೀಕ್ಷಕರಿಗೆ ಒಂದೇ ದಿನಕ್ಕೆ ಜಸ್ಲೀನ್ ಮಥಾರು ಬಗ್ಗೆ ಒಳ್ಳೆ ಅಭಿಪ್ರಾಯ ಮೂಡಿದೆ. ಅದಕ್ಕೆ ಸಾಕ್ಷಿ ನಿನ್ನೆ ಪ್ರಸಾರವಾದ ಸಂಚಿಕೆ.
'ಬಿಗ್ ಬಾಸ್-12' ಕಾರ್ಯಕ್ರಮದ ಮೊದಲ ಚಟುವಟಿಕೆಯಲ್ಲಿ ಎಲ್ಲರ ಮುಂದೆ 65 ವರ್ಷದ ಅನೂಪ್ ಜಲೋಟ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಜಸ್ಲೀನ್ ಮಾತನಾಡಿದ ರೀತಿಗೆ ವೀಕ್ಷಕರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಎದುರಾದ ಪ್ರಶ್ನೆಗಳನ್ನು ಜಸ್ಲೀನ್ ಹ್ಯಾಂಡಲ್ ಮಾಡಿದ ರೀತಿಗೆ ವಿಶೇಷ ಅತಿಥಿಗಳಾದ ಹೀನಾ ಖಾನ್ ಹಾಗೂ ಹಿತೇನ್ ತೇಜ್ವಾನಿ ಕೂಡ ಇಂಪ್ರೆಸ್ ಆದರು.
ಒಂದು ದಿನದ ಹಿಂದೆಯಷ್ಟೇ ಜಸ್ಲೀನ್ ಮಥಾರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಈಗ ಅದೇ ಜಸ್ಲೀನ್ ರನ್ನ ವೀಕ್ಷಕರೇ ಹೊಗಳುತ್ತಿದ್ದಾರೆ. ಬೇಕಾದ್ರೆ, ನೀವೇ ಕೆಲ ಟ್ವೀಟ್ ಗಳನ್ನ ನೋಡಿ....
'ಬಿಗ್ ಬಾಸ್' ಶೋನಲ್ಲಿ ಜಸ್ಲೀನ್ ಹೇಳಿದ್ದೇನು.?
''ನಾವು ಜೋಡಿಯಾಗಿ 'ಬಿಗ್ ಬಾಸ್' ಮನೆಗೆ ಬಂದಿದ್ದೀವಿ ನಿಜ. ಹಾಗಂದ ಮಾತ್ರಕ್ಕೆ ನಾವು ಯಾವಾಗಲೂ ಒಟ್ಟಿಗೆ ಇರಬೇಕು, ಒಟ್ಟಿಗೆ ಕೂರಬೇಕು, ಕೈಕೈ ಹಿಡಿದುಕೊಳ್ಳಬೇಕು ಅಂತೇನಿಲ್ಲ. ನಮ್ಮಿಬ್ಬರ ಮಧ್ಯೆ ಇರುವ ಸಂಬಂಧ ನಮಗೆ ಬಿಟ್ಟಿದ್ದು. ಇದು ಡೇಟಿಂಗ್ ಶೋ ಅಲ್ಲ. ಇದು ಮಕ್ಕಳ ಸಂಬಂಧ ಅಲ್ಲ. ಅದಕ್ಕೂ ಮೀರಿದ್ದು'' - ಎಂದು ಜಸ್ಲೀನ್ ಹೇಳಿದರು.
— Calotropic1234 🌸🌸 (@calotropic1234) September 17, 2018
ಜಸ್ಲೀನ್ ನ ಹೊಗಳುತ್ತಿರುವ ವೀಕ್ಷಕರು
''ಜಸ್ಲೀನ್ ಮಥಾರು ತುಂಬಾ ಮೆಚ್ಯೂರ್ ಆಗಿರುವ ಯುವತಿ. ಯಾವುದೇ ಸನ್ನಿವೇಶವನ್ನು ಎದುರಿಸುವ ಶಕ್ತಿ ಹಾಗೂ ಜಾಣ್ಮೆ ಆಕೆಯಲ್ಲಿ ಇದೆ. ಅನೂಪ್ ಹಾಗೂ ಜಸ್ಲೀನ್ ನಡುವೆ ಉತ್ತಮ ಅನುಬಂಧ ಹಾಗೂ ಹೊಂದಾಣಿಕೆ ಇರುವ ಹಾಗೆ ಕಾಣುತ್ತದೆ'' ಅಂತ ವೀಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.
ಇಷ್ಟವಾಗುತ್ತಿರುವ ಜಸ್ಲೀನ್
''ಜಸ್ಲೀನ್ ಮಥಾರು ಯಾರಿಗೂ ಹೆದರುವ ಹಾಗೆ ಕಾಣುತ್ತಿಲ್ಲ. ಆಕೆ ಈಗೀಗ ಇಷ್ಟವಾಗುತ್ತಿದ್ದಾಳೆ. ಆದ್ರೆ, ಇಷ್ಟು ಬೇಗ ಒಬ್ಬರ ಬಗ್ಗೆ ತೀರ್ಮಾನಕ್ಕೆ ಬರಲು ಆಗಲ್ಲ'' ಅಂತಿದ್ದಾರೆ ವೀಕ್ಷಕರು.
#JasleenMatharu is fair enough 😬😬#BB12 #BiggBoss12 #BiggBoss
— X 💥 (@mai_hu_naa) September 17, 2018
ನ್ಯಾಯ ಇದೆ
''ಜಸ್ಲೀನ್ ಆಡಿರುವ ಮಾತುಗಳಲ್ಲಿ ನ್ಯಾಯ ಇದೆ'' ಅಂತ ವೀಕ್ಷಕರು ಟ್ವೀಟ್ ಮಾಡಿದ್ದಾರೆ.
ಬ್ಯೂಟಿ ವಿತ್ ಬ್ರೇನ್
''ಜಸ್ಲೀನ್ ಮಥಾರು ಬ್ಯೂಟಿ ವಿತ್ ಬ್ರೇನ್. ನಾನು ಇವರನ್ನೇ ಸಪೋರ್ಟ್ ಮಾಡುವೆ'' ಎನ್ನುತ್ತಿದ್ದಾರೆ ವೀಕ್ಷಕರು.
ನೇರವಾಗಿ ಮಾತಾಡುವ ಹುಡುಗಿ
''ನೇರವಾಗಿ ಮಾತಾಡುವ ಹುಡುಗಿ ಜಸ್ಲೀನ್ ಕಂಡ್ರೆ ನನಗೆ ಇಷ್ಟ. 'ಬಿಗ್ ಬಾಸ್' ಪ್ರೀಮಿಯರ್ ನಲ್ಲಿಯೇ ಆಕೆಯ ಇಮೇಜ್ ಡ್ಯಾಮೇಜ್ ಆಯ್ತು. ಆದರೂ, ಈಕೆ ಶೋನಲ್ಲಿ ತುಂಬಾ ದಿನ ಇರುತ್ತಾರೆ'' ಎಂದು ವೀಕ್ಷಕರು ಭಾವಿಸಿದ್ದಾರೆ.
ಮೌಂಟ್ Akhun - ಪ್ರಕೃತಿಯ ಒಂದು ಅನನ್ಯ ಆಶ್ಚರ್ಯ