text stringlengths 0 61.5k |
|---|
ಪ್ರಪಂಚ ಹಾಗೂ ಭಾರತದ ಭೂಪಟಗಳ ಬಾಹ್ಯ ರೇಖಾ ನಕ್ಷೆಗಳನ್ನು ಸಂಗ್ರಹಿಸಿ. ಉಣ್ಣೆಯನ್ನು ಉತ್ಪಾದಿಸುವ ಪ್ರಾಣಿಗಳು ಯಾವ ಪ್ರದೇಶದಲ್ಲಿ ಕಾಣಸಿಗುತ್ತವೆ ಎಂದು ತಿಳಿದು ಆ ಸ್ಥಳಗಳನ್ನು ನಕ್ಷೆಯ ಮೇಲೆ ಗುರುತು ಮಾಡಿ. ಬೇರೆ ಬೇರೆ ವಿಧದ ಉಣ್ಣೆಯನ್ನು ಉತ್ಪಾದಿಸುವ ಪ್ರಾಣಿಗಳಿರುವ ಪ್ರದೇಶಗಳನ್ನು ಸೂಚಿಸಲು ಬೇರೆ ಬೇರೆ ಬಣ್ಣಗಳನ್ನು ಬಳಕೆ ಮಾಡಿ. |
ಎಳೆಯಿಂದ ಉಣ್ಣೆ |
ಉಣ್ಣೆಯನ್ನು ಪಡೆಯಲು ಕುರಿಗಳನ್ನು ಸಾಕುವರು. ಅವುಗಳ ಕೂದಲನ್ನು ಕತ್ತರಿಸಿ ಉಣ್ಣೆಯಾಗಿ ಸಂಸ್ಕರಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ನಾವು ತಿಳಿಯೋಣ. |
ಕುರಿಗಳ ಸಾಕಣೆ ಮತ್ತು ತಳಿ ಅಭಿವೃದ್ಧಿ : ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಮ್‍ನ ಬೆಟ್ಟಗಳು ಅಥವಾ ಹರಿಯಾಣ, ಪಂಜಾಬ್, ರಾಜಸ್ಥಾನ್ ಮತ್ತು ಗುಜರಾತ್‍ನ ಮೈದಾನಗಳ ಕಡೆಗೆ ಪ್ರಯಾಣಿಸಿದರೆ, ಕುರಿಗಾಹಿಗಳು ತಮ್ಮ ಕುರಿ ಮಂದೆಗಳನ್ನು ಮೇಯಿಸಲು ಕರೆದೊಯ್ಯುವುದನ್ನು ನೀವು ನೋಡಬಹುದು. ಕುರಿಗಳು ಸಸ್ಯಹಾರಿಗಳು, ಮುಖ್ಯವಾಗಿ ಹುಲ್ಲು ಮತ್ತು ಎಲೆಗಳ... |
ನಮ್ಮ ದೇಶದ ಅನೇಕ ಭಾಗಗಳಲ್ಲಿ ಕುರಿಗಳನ್ನು ಉಣ್ಣೆಗಾಗಿ ಸಾಕುತ್ತಾರೆ. ಉಣ್ಣೆಯನ್ನು ಉತ್ಪಾದಿಸುವುದಕ್ಕೋಸ್ಕರ ನಮ್ಮ ದೇಶದಲ್ಲಿ ಸಾಕುವ ಕುರಿಯ ಕೆಲವು ತಳಿಗಳ ಹೆಸರುಗಳು ಕೋಷ್ಟಕ 3.1 ರಲ್ಲಿವೆ. ಅವುಗಳಿಂದ ದೊರೆಯುವ ಉಣ್ಣೆಯ ಎಳೆಗಳ ಗುಣಮಟ್ಟ ಮತ್ತು ಎಳೆ ಜೋಡಣಾ ವಿನ್ಯಾಸ (texture) ವನ್ನು ಕೂಡಾ ಈ ಕೋಷ್ಟಕದಲ್ಲಿ ಸೂಚಿಸಲಾಗಿದೆ. |
ಕುರಿಯ ಕೆಲವು ತಳಿಗಳು ತಮ್ಮ ದೇಹದ ಮೇಲೆ ದಟ್ಟ ಕೂದಲಿನ ಹೊದಿಕೆಯುಳ್ಳವು. ಅವುಗಳು ಉತ್ತಮ ಗುಣಮಟ್ಟದ ಉಣ್ಣೆಯನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುತ್ತವೆ. ಈಗಾಗಲೆ ತಿಳಿಸಿದಂತೆ ಈ ಕುರಿಗಳು ಉತ್ತಮ ತಳಿಯ ಪೋಷಕ ಕುರಿಗಳಿಂದ ಆಯ್ಕೆಯ ತಳೀಕರಣ ಮಾಡಿದವುಗಳಾಗಿವೆ. |
ಸಾಕಿದ ಕುರಿಗಳ ಮೈಮೇಲೆ ದಟ್ಟವಾದ ಕೂದಲು ಬೆಳೆಯುತ್ತಿದ್ದಂತೆ, ಉಣ್ಣೆಯನ್ನು ಪಡೆಯುವುದಕ್ಕೊಸ್ಕರ ಅವುಗಳ ಮೈಮೇಲಿನ ಕೂದಲನ್ನು ಕತ್ತರಿಸಲಾಗುತ್ತದೆ. |
ಎಳೆಗಳನ್ನು ಉಣ್ಣೆಯಾಗಿ ಸಂಸ್ಕರಿಸುವುದು |
ಸ್ವೆಟರ್ ಗಳನ್ನು ಹೆಣೆಯಲು ಅಥವಾ ಶಾಲುಗಳನ್ನು ನೇಯಲು ಬಳಸುವ ಉಣ್ಣೆಯು, ಈ ಕೆಳಗಿನ ಹಂತಗಳನ್ನೊಳಗೊಂಡ ದೀರ್ಘ ಪ್ರಕ್ರಿಯೆಯ ಅಂತಿಮ ಉತ್ಪನ್ನ. |
ಹಂತ-1 : ಕುರಿಯ ಮೈಯಿಂದ ತುಪ್ಪಳವನ್ನು ಅತ್ಯಂತ ತೆಳುವಾದ ಚರ್ಮದೊಂದಿಗೆ ಬೇರ್ಪಡಿಸಲಾಗುತ್ತದೆ. ಈ ಕ್ರಿಯೆಯನ್ನು ಕತ್ತರಿಸುವಿಕೆ ((shearing) ಎನ್ನುವರು. ಇಲ್ಲಿ ಕೂದಲನ್ನು ಬೋಳಿಸಲು ಕ್ಷೌರಿಕರು ಬಳಸುವಂತಹ ಯಂತ್ರಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಸೆಖೆಯ ಹವಾಮಾನವಿರುವಾಗ ಕೂದಲನ್ನು ತೆಗೆಯಲಾಗುತ್ತದೆ. ಇದರಿಂದಾಗಿ ಕೂದಲಿನ ರಕ್ಷಣಾ ಹೊದಿಕೆ ಇಲ್ಲದಿದ್ದರೂ, ಕುರಿಗಳು ಬದುಕಬಲ್ಲವು. ಕೂದ... |
ಕೂದಲು ಕತ್ತರಿಸುವ ಯಂತ್ರ |
ಹಂತ-2 : ಕತ್ತರಿಸಿದ ತೆಳು ಚರ್ಮದೊಂದಿಗಿನ ಕೂದಲನ್ನು ನೀರಿನ ತೊಟ್ಟಿಗಳಲ್ಲಿ ಹಾಕಿ ಚೆನ್ನಾಗಿ ತೊಳೆದು, ಅವುಗಳಲ್ಲಿರುವ ಜಿಡ್ಡು, ಧೂಳು ಹಾಗೂ ಕೊಳೆಯನ್ನು ತೆಗೆಯಲಾಗುತ್ತದೆ ಇದನ್ನು ಉಜ್ಜಿ ಶುಭ್ರಗೊಳಿಸುವಿಕೆ (scouring) ಎನ್ನುವರು. ಇತ್ತೀಚಿನ ದಿನಗಳಲ್ಲಿ ಉಜ್ಜಿ ಶುಭ್ರಗೊಳಿಸಲು ಯಂತ್ರಗಳನ್ನು ಬಳಸಲಾಗುವುದು. |
ಉಜ್ಜಿ ಶುಭ್ರಗೊಳಿಸುವಿಕೆ (scouring) |
ಹಂತ-3 : ಉಜ್ಜಿ ಶುಭ್ರಗೊಳಿಸಿದ ನಂತರ ವಿಂಗಡಣೆ (sorting) ಮಾಡುವರು. ಚರ್ಮದೊಂದಿಗಿನ ಕೂದಲನ್ನು ಕಾರ್ಖಾನೆಗಳಿಗೆ ಸಾಗಿಸಲಾಗುತ್ತದೆ. ಅಲ್ಲಿ ಬೇರೆ ಬೇರೆ ಎಳೆಜೋಡಣಾ ವಿನ್ಯಾಸದ ಕೂದಲುಗಳನ್ನು ಬೇರ್ಪಡಿಸಲಾಗುತ್ತದೆ. |
ಉಜ್ಜಿ ಶುಭ್ರಗೊಳಿಸಿದ ನಂತರ ವಿಂಗಡಣೆ (sorting) ಮಾಡುವರು. |
ಹಂತ-4 : ಪುರುಳೆಗಳು (burrs) ಎಂದು ಕರೆಯಲ್ಪಡುವ ನಯವಾದ ಕೂದಲಿನ ಸಣ್ಣ ಎಳೆಗಳನ್ನು ಹೆಕ್ಕಿ ತೆಗೆಯಲಾಗುತ್ತದೆ. ಇವು ಕೆಲವೊಮ್ಮೆ ನಿಮ್ಮ ಸ್ವೆಟರ್‍ಗಳಲ್ಲಿ ಕಂಡುಬರುವ ಪುರುಳೆಗಳೇ ಆಗಿವೆ. ಈ ಎಳೆಗಳನ್ನು ಇನ್ನೊಮ್ಮೆ ಉಜ್ಜಿ ತೊಳೆದು ಒಣಗಿಸಲಾಗುತ್ತದೆ. ಇದು ಎಳೆಗಳನ್ನು ಬೇರ್ಪಡಿಸಲು ಸಿದ್ಧವಾದ ಉಣ್ಣೆ. |
ಪುರುಳೆಗಳು (burrs) |
ಹಂತ-5 : ಕುರಿ ಮತ್ತು ಮೇಕೆಗಳ ನೈಸರ್ಗಿಕ ತುಪ್ಪಳವು ಕಪ್ಪು, ಕಂದು ಅಥವಾ ಬಿಳಿಯ ಬಣ್ಣದ್ದಾಗಿರುವುದರಿಂದ, ಈ ಎಳೆಗಳಿಗೆ ವೈವಿಧ್ಯಮಯ ಬಣ್ಣಗಳನ್ನು ನೀಡಲಾಗುತ್ತದೆ. |
ಎಳೆಗಳಿಗೆ ವೈವಿಧ್ಯಮಯ ಬಣ್ಣಗಳನ್ನು ನೀಡಲಾಗುತ್ತದೆ. |
ಹಂತ-6 : ಈ ಎಳೆಗಳನ್ನು ನೇರಗೊಳಿಸಿ, ಬಾಚಿ ಸಿಕ್ಕು ಬಿಡಿಸಿ ನಂತರ ನೂಲಾಗಿ ಸುತ್ತಲಾಗುತ್ತದೆ. ಉದ್ದವಾದ ಎಳೆಗಳನ್ನು ಸ್ವೆಟರ್ಗಳಿಗೆ ಬೇಕಾದ ಉಣ್ಣೆಯಾಗಿ ಮಾಡುತ್ತಾರೆ. ತುಂಡಾದ ಎಳೆಗಳನ್ನು ಹೊಸೆದು, ನಂತರ ಉಣ್ಣೆ ಬಟ್ಟೆಯಾಗಿ ನೇಯಲಾಗುತ್ತದೆ. |
ನಾರನ್ನು ಉಣ್ಣೆಯಾಗಿ ಸಂಸ್ಕರಿಸುವ ಪ್ರಕ್ರಿಯೆಯನ್ನು ಈ ಕೆಳಗಿನಂತೆ ಪ್ರತಿನಿಧಿಸಬಹುದು. |
ಕತ್ತರಿಸುವಿಕೆ → ಉಜ್ಜಿ ಶುಭ್ರಗೊಳಿಸುವಿಕೆ → ವಿಂಗಡಿಸುವಿಕೆ → ಪುರುಳೆಗಳನ್ನು ಸ್ವಚ್ಛಗೊಳಿಸುವಿಕೆ → ಬಣ್ಣ ನೀಡುವಿಕೆ → ಸುತ್ತುವಿಕೆ |
ಕಸುಬಿನ ಹಾನಿಗಳು |
ನಮ್ಮ ದೇಶಲ್ಲಿ ಅನೇಕ ಜನರಿಗೆ ಉಣ್ಣೆ ಉದ್ಯಮ ಒಂದು ಪ್ರಮುಖ ಜೀವನೋಪಾಯವಾಗಿದೆ. ಆದರೆ ಉಣ್ಣೆಯನ್ನು ಬೇರ್ಪಡಿಸುವ ವೃತ್ತಿಯು ಅಪಾಯಕಾರಿ. ಕೆಲವೊಮ್ಮೆ ಸಾರ್ಟರ್ಸ್ ಡಿಸೀಸ್ ಎಂದು ಕರೆಯಲ್ಪಡುವ ಪ್ರಾಣಾಂತಿಕವಾದ ರಕ್ತ ಸಂಬಂಧಿ ಕಾಯಿಲೆಯನ್ನು ಉಂಟು ಮಾಡುವ ಅಂತ್ರಾಕ್ಸ್ ಬ್ಯಾಕ್ಟೀರಿಯಾದ ಸೋಂಕಿಗೆ ತುತ್ತಾಗುವುದೇ ಇದಕ್ಕೆ ಕಾರಣ. ಕಸುಬೊಂದರಲ್ಲಿ ಹೀಗೆ ಎದುರಾಗುವ ಗಂಡಾಂತರಗಳನ್ನು ಕಸುಬಿನ ಹಾನಿಗಳು ಎನ... |
ರೇಷ್ಮೆ ಎಳೆಗಳು ಕೂಡಾ ಪ್ರಾಣಿ ಎಳೆಗಳು. ರೇಷ್ಮೆ ಎಳೆಗಳನ್ನು ರೇಷ್ಮೆ ಹುಳುಗಳು ಉತ್ಪಾದಿಸುತ್ತವೆ. ರೇಷ್ಮೆಗಾಗಿ ರೇಷ್ಮೆಹುಳುಗಳನ್ನು ಸಾಕುವುದನ್ನು ರೇಷ್ಮೆಕೃಷಿ (sericulture) ಎನ್ನುವರು. ನಿಮ್ಮ ಅಮ್ಮ/ ಚಿಕ್ಕಮ್ಮ/ಅಜ್ಜಿ ಇವರುಗಳ ಬಳಿ ಇರುವ ರೇಷ್ಮೆ ಸೀರೆಗಳ ವಿಧಗಳ ಬಗ್ಗೆ ತಿಳಿದುಕೊಳ್ಳಿ. ರೇಷ್ಮೆಯ ವಿಧಗಳನ್ನು ಪಟ್ಟಿಮಾಡಿ. |
ರೇಷ್ಮೆಯ ವಿಧಗಳು |
ರೇಷ್ಮೆಯನ್ನು ಪಡೆಯುವ ಪ್ರಕ್ರಿಯೆಯ ಬಗ್ಗೆ ಚರ್ಚಿಸುವ ಮೊದಲು ರೇಷ್ಮೆ ಪತಂಗದ ಆಸಕ್ತಿದಾಯಕ ಜೀವನ ಚರಿತ್ರೆಯನ್ನು ತಿಳಿದುಕೊಳ್ಳುವುದು ಅವಶ್ಯಕ. |
ರೇಷ್ಮೆ ಪತಂಗದ ಜೀವನ ಚರಿತೆ |
ಹೆಣ್ಣು ರೇಷ್ಮೆ ಪತಂಗವು ಮೊಟ್ಟೆಗಳನ್ನು ಇಡುತ್ತದೆ. ಈ ಮೊಟ್ಟೆಗಳು ಒಡೆದು, ಕಂಬಳಿಹುಳುಗಳು ಅಥವಾ ರೇಷ್ಮೆಹುಳುಗಳು ಎಂದು ಕರೆಯಲ್ಪಡುವ ಲಾರ್ವಗಳು ಹೊರಬರುತ್ತವೆ. ಇವುಗಳು ಬೆಳೆದು ಗಾತ್ರದಲ್ಲಿ ಹೆಚ್ಚಳವಾಗಿ ತಮ್ಮ ಜೀವನ ಚರಿತ್ರೆಯ ಮುಂದಿನ ಹಂತವಾದ ಕೋಶಾವಸ್ಥೆ (pupa) ಯನ್ನು ಪ್ರವೇಶಿಸುವಾಗ, ತಮ್ಮನ್ನು ಹಿಡಿದಿಟ್ಟುಕೊಳ್ಳಲು ಮೊದಲು ಬಲೆಯನ್ನು ನೇಯುತ್ತವೆ. ಅನಂತರ ಅವು ತಮ್ಮ ತಲೆಯನ್ನು ಸಂಖ್... |
ರೇಷ್ಮೆಹುಳು ಶೀಘ್ರವಾಗಿ ತನ್ನನ್ನು ತಾನು ರೇಷ್ಮೆ ಎಳೆಗಳಿಂದ ಸಂಪೂರ್ಣವಾಗಿ ಆವರಿಸಿಕೊಂಡು ಕೋಶವಾಗಿ ಬದಲಾಗುತ್ತದೆ. ಇದನ್ನು ರೇಷ್ಮೆಗೂಡು (cocoon) ಎನ್ನುವರು. ಅನಂತರ ಕೋಶಾವಸ್ಥೆಯಿಂದ ಪತಂಗವಾಗುವ ಬೆಳವಣಿಗೆಯು ಗೂಡಿನೊಳಗೆ ಮುಂದುವರಿಯುತ್ತದೆ. ರೇಷ್ಮೆ ಬಟ್ಟೆಯನ್ನು ನೇಯಲು ರೇಷ್ಮೆ ಎಳೆಗಳನ್ನು ಬಳಸುವರು. |
ರೇಷ್ಮೆನೂಲು ರೇಷ್ಮೆಪತಂಗದ ಗೂಡಿನಿಂದ ದೊರೆಯುತ್ತದೆ. ಒಂದಕ್ಕಿಂತ ಮತ್ತೊಂದು ಭಿನ್ನವಾಗಿ ಕಾಣುವ ರೇಷ್ಮೆಪತಂಗಗಳಿವೆ ಮತ್ತು ಅವುಗಳು ಬೇರೆ ಬೇರೆ ಎಳೆಜೋಡಣಾ ವಿನ್ಯಾಸದ ರೇಷ್ಮೆನೂಲುಗಳನ್ನು ಉತ್ಪತ್ತಿ ಮಾಡುತ್ತವೆ (ಒರಟು, ನಯ, ಹೊಳಪು ಇತ್ಯಾದಿ). ಹೀಗೆ ಬೇರೆ ಬೇರೆ ವಿಧದ ಪತಂಗಗಳು ಹೆಣೆದ ಗೂಡುಗಳಿಂದ ಟಸ್ಸರ್ ರೇಷ್ಮೆ, ಮೂಗಾ ರೇಷ್ಮೆ, ಕೋಸಾರೇಷ್ಮೆ ಇತ್ಯಾದಿಗಳು ದೊರೆಯುತ್ತವೆ. ಹಿಪ್ಪು ನೇರಳೆ ... |
ರೇಷ್ಮೆಕೃಷಿ ಅಥವಾ ರೇಷ್ಮೆಹುಳುಗಳ ಸಾಕಣೆಯು ಭಾರತದಲ್ಲಿ ಬಹಳ ಹಿಂದಿನ ಒಂದು ಕಸುಬು. ಭಾರತದಲ್ಲಿ ರೇಷ್ಮೆಯನ್ನು ವಾಣಿಜ್ಯಕ್ಕಾಗಿ ಹೇರಳ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. |
ಚಟುವಟಿಕೆ 3.5 |
ಅನೇಕ ವಿಧದ ರೇಷ್ಮೆ ಬಟ್ಟೆಯ ಚೂರುಗಳನ್ನು ಸಂಗ್ರಹಿಸಿ ಮತ್ತು ಅವುಗಳನ್ನು ನಿಮ್ಮ ಯೋಜನಾ ಪುಸ್ತಕದಲ್ಲಿ ಅಂಟಿಸಿ. ಅವುಗಳನ್ನು ದರ್ಜಿಯ ಅಂಗಡಿಯಲ್ಲಿ ಕತ್ತರಿಸಿ ಬಿಸಾಡಿದ ತ್ಯಾಜ್ಯದ ರಾಶಿಯಿಂದ ನೀವು ಸಂಗ್ರಹಿಸಬಹುದು. ನಿಮ್ಮ ತಾಯಿ, ಚಿಕ್ಕಮ್ಮ ಅಥವಾ ಶಿಕ್ಷಕರ ಸಹಾಯವನ್ನು ಪಡೆದು ಅವುಗಳನ್ನು ಹಿಪ್ಪುನೇರಳೆ ರೇಷ್ಮೆ, ಟಸ್ಸರ್ ರೇಷ್ಮೆ, ಎರಿ ರೇಷ್ಮೆ, ಮೂಗಾ ರೇಷ್ಮೆ ಇತ್ಯಾದಿ ರೇಷ್ಮೆಯ ವಿಧಗಳಾಗಿ ... |
ಹಿಪ್ಪುನೇರಳೆ ರೇಷ್ಮೆ |
ಟಸ್ಸರ್ ರೇಷ್ಮೆ |
ಎರಿ ರೇಷ್ಮೆ |
ಮೂಗಾ ರೇಷ್ಮೆ |
ಅನೇಕ ವಿಧದ ರೇಷ್ಮೆ ಬಟ್ಟೆ |
ಚಟುವಟಿಕೆ 3.6 |
ಒಂದು ಕೃತಕ (ಸಂಶ್ಲೇಷಿತ) ರೇಷ್ಮೆದಾರ, ಮತ್ತೊಂದು ಶುದ್ಧ ರೇಷ್ಮೆದಾರವನ್ನು ತೆಗೆದುಕೊಳ್ಳಿ. ಈ ದಾರಗಳನ್ನು ಎಚ್ಚರಿಕೆಯಿಂದ ದಹಿಸಿ. ದಹಿಸುತ್ತಿರುವಾಗ ವಾಸನೆಯಲ್ಲಿ ಯಾವುದೇ ವ್ಯತ್ಯಾಸವನ್ನು ಗಮನಿಸಿದಿರ? ಈಗ ಉಣ್ಣೆ ಎಳೆಯನ್ನು ಎಚ್ಚರಿಕೆಯಿಂದ ದಹಿಸಿರಿ. ಇದರ ವಾಸನೆಯು ಕೃತಕ ರೇಷ್ಮೆಯನ್ನು ದಹಿಸುವಾಗಿನ ವಾಸನೆಯಂತಿತ್ತೆ? ಅಥವಾ ಶುದ್ಧ ರೇಷ್ಮೆ ದಹಿಸುವಾಗಿನ ವಾಸನೆಯಂತಿತ್ತೆ? ಏಕೆಂದು ನೀವು ವಿ... |
ಚಟುವಟಿಕೆ 3.7 |
ಚಿತ್ರ 3.9ರ ಛಾಯಾಚಿತ್ರವನ್ನು ತೆಗೆದುಕೊಳ್ಳಿ. ರೇಷ್ಮೆ ಪತಂಗದ ಜೀವನ ಚರಿತ್ರೆಯ ವಿವಿಧ ಹಂತಗಳ ಚಿತ್ರಗಳನ್ನು ಕತ್ತರಿಸಿ, ಅವುಗಳನ್ನು ರಟ್ಟಿನ ತುಂಡುಗಳ ಮೇಲೆ ಅಥವಾ ಚಾರ್ಟ್ ಹಾಳೆಯ ಮೇಲೆ ಅಂಟಿಸಿ. ಅವುಗಳನ್ನು ಅಸ್ತವ್ಯಸ್ತವಾಗಿ ಹರಡಿ. ಈಗ ಈ ಹಂತಗಳನ್ನು ಸರಿಯಾದ ಶ್ರೇಣಿಯಲ್ಲಿ ಚಕ್ರೀಯವಾಗಿ ಬರುವಂತೆ ಜೋಡಿಸಲು ಪ್ರಯತ್ನಿಸಿ. ಯಾರು ಇದನ್ನು ವೇಗವಾಗಿ ಮಾಡುತ್ತಾರೋ ಅವರು ಗೆಲ್ಲುತ್ತಾರೆ. |
ಭಾರತದಲ್ಲಿ ಮಹಿಳೆಯರು ರೇಷ್ಮೆ ಉತ್ಪಾದನೆಗೆ ಸಂಬಂಧಿಸಿದ ಅನೇಕ ವಿಧದ ಉದ್ಯಮಗಳಲ್ಲಿ ಗಣನೀಯವಾಗಿ ತೊಡಗಿಸಿಕೊಂಡಿದ್ದಾರೆ. ಅವುಗಳೆಂದರೆ ರೇಷ್ಮೆಹುಳು ಸಾಕಣೆ, ರೇಷ್ಮೆಗೂಡಿನಿಂದ ರೇಷ್ಮೆಯನ್ನು ಸುತ್ತುವುದು ಮತ್ತು ಕಚ್ಚಾ ರೇಷ್ಮೆಯನ್ನು ವಸ್ತ್ರವಾಗಿ ಸಂಸ್ಕರಿಸುವುದು. ಇವರು ತಮ್ಮ ಉದ್ಯಮಶೀಲತೆಯಿಂದ ದೇಶದ ಆರ್ಥಿಕತೆಗೆ ಕೊಡುಗೆಯನ್ನು ನೀಡುತ್ತಾರೆ. ರೇಷ್ಮೆ ಉತ್ಪಾದನೆಯಲ್ಲಿ ಚೀನಾ ದೇಶವು ಪ್ರಪಂಚದ... |
ರೇಷ್ಮೆಗೂಡಿನಿಂದ ರೇಷ್ಮೆಯವರೆಗೆ |
ರೇಷ್ಮೆಯನ್ನು ಪಡೆಯಬೇಕಾದರೆ, ಪತಂಗಗಳನ್ನು ಸಾಕಬೇಕು ಮತ್ತು ರೇಷ್ಮೆದಾರವನ್ನು ಪಡೆಯಲು ಅವುಗಳ ಗೂಡುಗಳನ್ನು ಸಂಗ್ರಹಿಸಬೇಕು. |
ರೇಷ್ಮೆಹುಳುಗಳ ಸಾಕಣೆ : ಹೆಣ್ಣು ರೇಷ್ಮೆ ಪತಂಗವು ಒಂದು ಬಾರಿಗೆ ನೂರಾರು ಮೊಟ್ಟೆಗಳನ್ನು ಇಡುತ್ತದೆ. ಇವುಗಳನ್ನು ಬಟ್ಟೆ ಅಥವಾ ಕಾಗದದ ಪಟ್ಟಿಗಳಲ್ಲಿ ಎಚ್ಚರಿಕೆಯಿಂದ ಸಂಗ್ರಹಿಸಿ, ರೇಷ್ಮೆಹುಳುಗಳನ್ನು ಸಾಕುವ ರೈತರಿಗೆ ಮಾರಲಾಗುತ್ತದೆ. ರೈತರು ಈ ಮೊಟ್ಟೆಗಳನ್ನು ಸ್ವಚ್ಛವಾದ ಹಾಗೂ ಸೂಕ್ತ ತಾಪ ಮತ್ತು ತೇವಾಂಶದ ಪರಿಸರದಲ್ಲಿ ಇಡುತ್ತಾರೆ. |
ಈ ಮೊಟ್ಟೆಗಳು ಒಡೆದು ಲಾರ್ವಗಳು ಹೊರ ಬರಲು ಅವುಗಳನ್ನು ಸೂಕ್ತ ತಾಪಕ್ಕೆ ಬಿಸಿ ಮಾಡಲಾಗುತ್ತದೆ. ಇದನ್ನು ಹಿಪ್ಪುನೇರಳೆ ಗಿಡಗಳಲ್ಲಿ ತಾಜಾ ಎಲೆಗಳು ಬೆಳೆಯುವಾಗ ಮಾಡಲಾಗುತ್ತದೆ. ಕಂಬಳಿಹುಳು ಅಥವಾ ರೇಷ್ಮೆಹುಳುಗಳು ಎಂದು ಕರೆಯಲಾಗುವ ಲಾರ್ವಗಳು ಹಗಲೂ-ರಾತ್ರಿ ಹಿಪ್ಪುನೇರಳೆಯನ್ನು ತಿಂದು, ಗಾತ್ರದಲ್ಲಿ ತುಂಬಾ ದೊಡ್ಡದಾಗುತ್ತವೆ. |
ಕತ್ತರಿಸಿದ ತಾಜಾ ಹಿಪ್ಪುನೇರಳೆ ಎಲೆಗಳೊಂದಿಗೆ ಸ್ವಚ್ಛವಾದ ಬಿದಿರಿನ ತಟ್ಟೆ (ಚಂದ್ರಿಕೆ) ಗಳಲ್ಲಿ ಈ ಲಾರ್ವಗಳನ್ನು ಇಡಲಾಗುತ್ತದೆ. 25 ರಿಂದ 30 ದಿನಗಳ ನಂತರ ಈ ಹುಳುಗಳು ತಿನ್ನುವುದನ್ನು ನಿಲ್ಲಿಸುತ್ತವೆ ಮತ್ತು ಗೂಡನ್ನು ಸುತ್ತಿಕೊಳ್ಳುವುದಕ್ಕಾಗಿ ತಟ್ಟೆಯಲ್ಲಿನ ಬಿದಿರಿನ ಚಿಕ್ಕ ಸಂದುಗಳೊಳಗೆ ಚಲಿಸುತ್ತವೆ. ಗೂಡುಗಳು ಅಂಟಿಕೊಳ್ಳುವುದಕ್ಕಾಗಿ ತಟ್ಟೆಗಳಲ್ಲಿ ಚಿಕ್ಕ ಅಟ್ಟಣಿಗೆಗಳು ಅಥವಾ ಸಣ್ಣ... |
ರೇಷ್ಮೆಯ ಆವಿಷ್ಕಾರ |
ರೇಷ್ಮೆಯ ಆವಿಷ್ಕಾರದ ಸರಿಯಾದ ಕಾಲ ಬಹುಷಃ ತಿಳಿದು ಬಂದಿಲ್ಲ. ಒಂದು ಹಳೆಯ ಚೀನೀ ದಂತಕಥೆಯ ಪ್ರಕಾರ, ಸಾಮ್ರಾಟ್ ಹುವಾಂಗ್-ಟಿ ತನ್ನ ಸಾಮ್ರಾಜ್ಞಿ ಸಿ-ಲುಂಗ್-ಶಿ ಗೆ ಅವರ ಉದ್ಯಾನವನದಲ್ಲಿ ಬೆಳೆದಿದ್ದ ಹಿಪ್ಪುನೇರಳೆ ಗಿಡದ ಎಲೆಗಳಿಗೆ ಉಂಟಾದ ಹಾನಿಗೆ ಕಾರಣವನ್ನು ಕಂಡುಹಿಡಿಯಲು ಹೇಳಿದನು. ಸಾಮ್ರಾಜ್ಞಿಯು ಹಿಪ್ಪುನೇರಳೆ ಎಲೆಗಳನ್ನು ಬಿಳಿಬಣ್ಣದ ಹುಳುಗಳು ತಿನ್ನುತ್ತಿರುವುದನ್ನು ಕಂಡಳು. ಅವುಗಳು ತಮ... |
ರೇಷ್ಮೆ ಸಂಸ್ಕರಣೆ : ರೇಷ್ಮೆ ಎಳೆಗಳನ್ನು ಪಡೆಯಲು ಗೂಡುಗಳ ರಾಶಿಯನ್ನೇ ಬಳಸುತ್ತಾರೆ. ಈ ಗೂಡುಗಳನ್ನು ಸೂರ್ಯನ ಬಿಸಿಲಿಗೆ ತೆರೆದಿಡುತ್ತಾರೆ ಅಥವಾ ನೀರಿನಲ್ಲಿ ಕುದಿಸುತ್ತಾರೆ ಅಥವಾ ಹಬೆಗೆ ಒಡ್ಡುತ್ತಾರೆ. ಇದರಿಂದ ರೇಷ್ಮೆ ಎಳೆಗಳು ಬೇರ್ಪಡುತ್ತವೆ. ರೇಷ್ಮೆಯಾಗಿ ಬಳಸುವುದಕ್ಕೋಸ್ಕರ ಗೂಡಿನಿಂದ ದಾರವನ್ನು ಹೊರ ತೆಗೆಯುವ ವಿಧಾನಕ್ಕೆ ರೇಷ್ಮೆಯ ನೂಲು ಸುತ್ತುವಿಕೆ (reeling the silk) ಎನ್ನುವರು... |
ರೇಷ್ಮೆಯ ನೂಲು ಸುತ್ತುವಿಕೆ (reeling the silk) |
ಸುತ್ತುವಿಕೆ |
ಉಜ್ಜಿ ಶುಭ್ರಗೊಳಿಸುವಿಕೆ |
ರೇಷ್ಮೆಕೃಷಿ |
ರೇಷ್ಮೆಪತಂಗ |
ವಿಂಗಡಿಸುವುದು |
• ರೇಷ್ಮೆಯು ರೇಷ್ಮೆಹುಳುಗಳಿಂದ ದೊರೆಯುತ್ತದೆ ಮತ್ತು ಉಣ್ಣೆಯು ಕುರಿ, ಮೇಕೆ ಮತ್ತು ಯಾಕ್‍ಗಳಿಂದ ದೊರೆಯುತ್ತದೆ. ಆದ್ದರಿಂದ ರೇಷ್ಮೆ ಮತ್ತು ಉಣ್ಣೆ ಪ್ರಾಣಿ ಜನ್ಯ ಎಳೆಗಳು. |
• ಒಂಟೆ, ಲಾಮಾ ಮತ್ತು ಅಲ್ಪಾಕಾಗಳ ಕೂದಲುಗಳನ್ನು ಕೂಡಾ ಉಣ್ಣೆಯನ್ನು ಉತ್ಪಾದಿಸಲು ಸಂಸ್ಕರಿಸಲಾಗುತ್ತದೆ. |
• ಭಾರತದಲ್ಲಿ ಉಣ್ಣೆಯನ್ನು ಪಡೆಯಲು ಹೆಚ್ಚು ಪ್ರಮಾಣದಲ್ಲಿ ಕುರಿಗಳನ್ನು ಸಾಕುತ್ತಾರೆ. |
• ಉಣ್ಣೆಯನ್ನು ಉತ್ಪಾದಿಸಲು, ಕುರಿಯ ಮೈಮೇಲಿನ ಕೂದಲುಗಳನ್ನು ಕತ್ತರಿಸಿ, ಉಜ್ಜಿ ಶುಭ್ರಗೊಳಿಸಿ, ವಿಂಗಡಿಸಿ, ಒಣಗಿಸಿ, ಬಣ್ಣ ನೀಡಿ, ಹೊಸೆದು ನಂತರ ನೇಯಲಾಗುತ್ತದೆ. |
• ರೇಷ್ಮೆಹುಳುಗಳು ರೇಷ್ಮೆ ಪತಂಗದ ಕಂಬಳಿಹುಳುಗಳು. |
• ರೇಷ್ಮೆಹುಳುಗಳು ತಮ್ಮ ಜೀವನ ಚಕ್ರದಲ್ಲಿ, ರೇಷ್ಮೆ ಎಳೆಗಳ ಗೂಡುಗಳನ್ನು ಸುತ್ತಿಕೊಳ್ಳುತ್ತವೆ. |
• ರೇಷ್ಮೆ ಎಳೆಗಳು ಒಂದು ವಿಧದ ಪ್ರೊಟೀನ್ ನಿಂದ ತಯಾರಾಗಿವೆ. |
• ಗೂಡುಗಳಿಂದ ರೇಷ್ಮೆ ಎಳೆಗಳನ್ನು ಬೇರ್ಪಡಿಸಿ, ಅನಂತರ ರೇಷ್ಮೆ ದಾರವಾಗಿ ಸುತ್ತಲಾಗುತ್ತದೆ. |
• ನೇಕಾರರು ರೇಷ್ಮೆ ದಾರಗಳನ್ನು ರೇಷ್ಮೆ ಬಟ್ಟೆಯಾಗಿ ನೇಯುತ್ತಾರೆ. |
7th Class | Science | ಎಳೆಯಿಂದ ಬಟ್ಟೆ | ಭಾಗ – 1 |
KSEEB Solutions for Class 7 Science Chapter 3 Eleyinda Batte |
https://www.kseebsolutions.com/kseeb-solutions-for-class-7-science-chapter-3-in-kannada/ |
ಈ ಪಾಠದ ಪ್ರಶ್ನೋತ್ತರಗಳಿಗಾಗಿ ಕ್ಲಿಕ್ ಮಾಡಿ. |
ಒಂದು ಗೂಡಿನಿಂದ ಪಡೆಯಬಹುದಾದ ತುಂಡಾಗದ ರೇಷ್ಮೆದಾರದ ಗರಿಷ್ಠ ಉದ್ದವನ್ನು ತಿಳಿಯಲು ಪಹೇಲಿ ಇಚ್ಛಿಸುತ್ತಾಳೆ.ಅವಳಿಗಾಗಿ ಕಂಡುಹಿಡಿಯಿರಿ. |
How Silk is Made | Making of Silk thread from silkworm cocoons |
Spinning Silk Thread from Silkworm Cocoons |
2) ರೇಷ್ಮೆಹುಳುಗಳು ದೊಡ್ಡದಾಗಿ ಬೆಳೆದಾಗ ಅವುಗಳು ಚರ್ಮವನ್ನು ವಿಸರ್ಜಿಸುವ ಅವಶ್ಯಕತೆ ಇದೆ. ಆದರೆ ಮನುಷ್ಯರಿಗೆ ಹೀಗೇಕೆ ಇಲ್ಲ? ಎಂದು ತಿಳಿಯಲು ಬೂಝೊ ಇಚ್ಛಿಸುತ್ತಾನೆ. ನಿಮಗೇನಾದರೂ ಗೊತ್ತಿದೆಯೆ? |
3) ರೇಷ್ಮೆಹುಳುಗಳನ್ನು ಬರಿಗೈಯಿಂದ ಏಕೆ ಸಂಗ್ರಹಿಸಬಾರದು ಎಂಬುದನ್ನು ತಿಳಿಯಲು ಬೂಝೊ ಇಚ್ಛಿಸುತ್ತಾನೆ. ಅವನಿಗೆ ಸಹಾಯ ಮಾಡುವಿರ? |
Why we should not touch caterpillar bare hand?क्यों कैटेरपिल्लर्स को बिना ग्लव्स के उठाना नहीं चाहिए |
4) ರೇಷ್ಮೆ ಫ್ರಾಕನ್ನು ಕೊಂಡುಕೊಳ್ಳಲು ಪಹೇಲಿ ಇಚ್ಚಿಸಿ, ಅವಳ ತಾಯಿಯೊಂದಿಗೆ ಮಾರುಕಟ್ಟೆಗೆ ಹೋದಳು. ಅಲ್ಲಿ ಅವರು ಕೃತಕ (ಸಂಶ್ಲೇಷಿತ) ರೇಷ್ಮೆಯು ತುಂಬಾ ಅಗ್ಗವಾಗಿರುವುದನ್ನು ತಿಳಿದರು. ಇದು ಹೀಗೇಕೆ ಎಂದು ತಿಳಿಯಲು ಇಚ್ಛಿಸಿದರು. ಏಕೆಂದು ನಿಮಗೆ ತಿಳಿದಿದೆಯೇ? |
ಕಂಡುಕೊಳ್ಳಿ. |
How to Identify Pure Silk Cloth | How to Tell Real Silk from Polyester |
5) ವಿಕುನ (vicuna) ಎಂಬ ಪ್ರಾಣಿಯು ಉಣ್ಣೆಯನ್ನು ನೀಡುತ್ತದೆ ಎಂದು ಪಹೇಲಿಗೆ ಒಬ್ಬರು ಹೇಳಿದರು. ಈ ಪ್ರಾಣಿಯು ಎಲ್ಲಿ ಕಂಡುಬರುತ್ತದೆ ಎಂಬುದನ್ನು ಅವಳಿಗೆ ನೀವು ಹೇಳಲು ಸಾಧ್ಯವೆ? ಶಬ್ದಕೋಶ (dictionary) ಅಥವಾ ವಿಶ್ವಕೋಶ (encyclopedia)ದಲ್ಲಿ ಹುಡುಕಿ. |
Vicuña | Vicuna | Amazing Animals |
6) ಕೈಮಗ್ಗದ ವಸ್ತ್ರಪ್ರದರ್ಶನಗಳು ಏರ್ಪಟ್ಟಾಗ, ಕೆಲವು ಮಳಿಗೆಗಳಲ್ಲಿ ಅನೇಕ ವಿಧದ ರೇಷ್ಮೆಯ ನಿಜವಾದ ಪತಂಗಗಳನ್ನು ಮತ್ತು ಅವುಗಳ ಜೀವನ ಚರಿತ್ರೆಗಳನ್ನು ಪ್ರದರ್ಶಿಸುತ್ತಾರೆ. ಇಂತಹ ಮಳಿಗೆಗಳಿಗೆ ನಿಮ್ಮ ಹಿರಿಯರೊಂದಿಗೆ ಅಥವಾ ಶಿಕ್ಷಕರೊಂದಿಗೆ ಭೇಟಿ ನೀಡಲು ಪ್ರಯತ್ನಿಸಿ ಹಾಗೂ ಈ ಪತಂಗಗಳು ಮತ್ತು ಅವುಗಳ ಜೀವನ ಚರಿತ್ರೆಯ ಹಂತಗಳನ್ನು ವೀಕ್ಷಿಸಿ. |
Complete Life Cycle of Silkworm| Silk making |
7) ನಿಮ್ಮ ಕೈತೋಟ ಅಥವಾ ಉದ್ಯಾನವನ ಅಥವಾ ತುಂಬಾ ಸಸ್ಯಗಳಿರುವ ಇನ್ನಾವುದೇ ಜಾಗದಲ್ಲಿ ಪತಂಗ ಅಥವಾ ಚಿಟ್ಟೆಗಳ ಮೊಟ್ಟೆಗಳನ್ನು ಹುಡುಕಿ. ಎಲೆಗಳ ಮೇಲೆ ಅವು ಚಿಕ್ಕ ಕಣಗಳ(ಚುಕ್ಕಿಗಳ) ಗುಂಪಿನಂತೆ ಕಾಣಿಸುತ್ತವೆ. ಮೊಟ್ಟೆಗಳಿರುವ ಎಲೆಗಳನ್ನು ಕಿತ್ತು ತೆಗೆದು ಅವುಗಳನ್ನು ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಇಡಿ. ಅದೇ ಸಸ್ಯದ ಅಥವಾ ಅದೇ ವಿಧದ ಇನ್ನೊಂದು ಸಸ್ಯದ ಕೆಲವು ಎಲೆಗಳನ್ನು ತೆಗೆದು, ಅವುಗಳನ್ನು ... |
ಪ್ರತಿದಿನ ಗಮನಿಸಿ, ಈ ಅಂಶಗಳನ್ನು ಗುರುತು ಹಾಕಿಕೊಳ್ಳಿ. |
(i) ಮೊಟ್ಟೆಯೊಡೆದು ಹುಳುವಾಗಲು ಬೇಕಾಗುವ ದಿನಗಳ ಸಂಖ್ಯೆ, |
(ii) ಗೂಡಿನ ಹಂತವನ್ನು ತಲುಪಲು ತೆಗೆದುಕೊಂಡ ದಿನಗಳ ಸಂಖ್ಯೆ, |
(iii) ಜೀವನ ಚಕ್ರವನ್ನು ಪೂರ್ಣಗೊಳಿಸಲು ತೆಗೆದುಕೊಂಡ ದಿನಗಳ ಸಂಖ್ಯೆ |
ಗಮನಿಸಿದ ಅಂಶಗಳನ್ನು ನಿಮ್ಮ ನೋಟ್ ಪುಸ್ತಕದಲ್ಲಿ ದಾಖಲಿಸಿ. |
Silvery Checkerspot Butterfly Laying Eggs and Their Life Cycle |
Silk Worm Farming | Sericulture | ರೇಷ್ಮೆ ಕೃಷಿ | ರೇಷ್ಮೆ ಹುಳು ಸಾಕಾಣಿಕೆಯ ಬಗೆ ಮಾಹಿತಿ |
ಕುರಿಗಳ ಸಂಖ್ಯೆಯ ಆಧಾರದಲ್ಲಿ ಚೀನಾ ಮತ್ತು ಆಸ್ಟ್ರೇಲಿಯಾಗಳ ನಂತರ ಭಾರತವು ಮೂರನೇ ಸ್ಥಾನದಲ್ಲಿದೆ. ಆದರೆ ನ್ಯೂಜಿಲ್ಯಾಂಡ್‍ನ ಕುರಿಗಳು ಅತ್ಯುತ್ತಮ ಉಣ್ಣೆಯನ್ನು ನೀಡುತ್ತವೆ ಎಂದು ತಿಳಿದು ಬಂದಿದೆ. |
How to Harvesting Wool – Amazing Sheep Factory – Wool Processing Mill – Modern Sheep Shearing | ಎಳೆಗಳನ್ನು ಉಣ್ಣೆಯಾಗಿ ಸಂಸ್ಕರಿಸುವುದು | ಲಿಂಕ್ ಮೇಲೆ ಕ್ಲಿಕ್ ಮಾಡಿ. |
ನಿನೋಮ್ಮೆ ಬಂದು ನೋಡ ಹುಬ್ಬಳ್ಳಿ-ಧಾರವಾಡ | Kannadamma |
Home ಧಾರವಾಡ ಹುಬ್ಬಳ್ಳಿ ನಿನೋಮ್ಮೆ ಬಂದು ನೋಡ ಹುಬ್ಬಳ್ಳಿ-ಧಾರವಾಡ |
ನಿನೋಮ್ಮೆ ಬಂದು ನೋಡ ಹುಬ್ಬಳ್ಳಿ-ಧಾರವಾಡ |
ಹುಬ್ಬಳ್ಳಿ ಡಿ. 23. ಶಿ ನಿನೋಮ್ಮೆ ಬಂದು ನೋಡ ನಮ್ಮ ಹುಬ್ಬಳ್ಳಿ-ಧಾರವಾಡವ " ಎಂಬ ಸುಂದರ ಗೀತೆಯನ್ನು ಸ್ವತಃ ತಾವೇ ಹಾಡಿ ಕೋಲನ್ನು ಹಾಕುತ್ತಾ ಪುಟಾಣಿ ಮಕ್ಕಳು ನೀಡಿದ ಕೋಲಾಟ ನೃತ್ಯ ಪ್ರೇಕ್ಷಕರ ಮನ ಗೆದ್ದಿತು. ಧಾರವಾಡ ಉತ್ಸವದ ಅಂಗವಾಗಿ ನಡೆದ ಇಂದಿರಾ ಗಾಜಿನ ಮನೆಯಲ್ಲಿ ಇಂದು ನಡೆದ ಮಕ್ಕಳ ಸಾಂಸ್ಕ್ಕತಿಕ ಕಾರ್ಯಕ್ರಮ ನೆರೆದ ಶೋತೃಗಳು ಮನ ತುಂಬಿತು. ಯಾವುದೇ ಸಿಡಿ,ಕ್ಯಾಸಟ್ನ್ನು ಉಪಯೋಗಿಸದೇ ,... |
ಕರಾವಳಿಯ ಕಂಪು ನಮ್ಮ ಹುಬ್ಬಳ್ಳಿವರೆಗೂ ಹಬ್ಬಿತ್ತು. ಎಂಬುದು ಇನ್ನೊಂದು ವಿಶೇಷ. ದಕ್ಷಿಣ ಕನ್ನಡದ ಕರಾವಳಿ ಕೇಸರಿ ಅಬ್ಬಕ್ಕನ ವೀರ ಸಾಹಸದ ಕಥೆಯ ಕಿರುನಾಟಕ ಧಾರವಾಡದ ಬಿ.ಜೆ.ಎಸ್.ಪ್ರೌಢಶಾಲೆಯ ಮಕ್ಕಳಿಂದ ಪ್ರದರ್ಶನಗೊಂಡಿತು. ಬ್ರಿಟಿಷರ ವಿರುದ್ಧ ಹೋರಾಡಿದ ಅಬ್ಬಕ್ಕನ ನಾಟಕವನ್ನು ಶಿಕ್ಷಕಿ ಜಯಂತಿ.ಜೆ. ಅವರು ನಿರ್ದೇಶಿಸಿದ್ದಾರೆ. ಅಬ್ಬಕ್ಕನ ಪಾತ್ರಕ್ಕ್ನೆ ಚೈತ್ರಾ ಕಾಮಣ್ಣನವರು ಜೀವ ತುಂಬಿದರು. ... |
ಇಂದಿರಾ ಗಾಜಿನಮನೆಯಲ್ಲಿ ನಡೆದ ಸಾಂಸ್ಕ್ಕತಿಕ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿತ್ತು. ಚಳಿ ಮಧ್ಯವು ಪ್ರೇಕ್ಷಕರು ಮಕ್ಕಳ ಕಾರ್ಯಕ್ರಮದ ಸವಿ ಸವಿದರು. |
Subsets and Splits
No community queries yet
The top public SQL queries from the community will appear here once available.