text
stringlengths
0
61.5k
ಪ್ರತಿನಿತ್ಯ ಮುಡಾರು ಹಾಗೂ ನಲ್ಲೂರು ಗ್ರಾಮ ಪಂಚಾಯ್ತಿಯ 500 ಮನೆಗಳಿಂದ, 200 ಅಂಗಡಿಗಳಿಂದ ಹಸಿ–ಒಣಕಸ ಸಂಗ್ರಹಿಸಲಾಗುತ್ತಿದೆ. ಬೆಳಿಗ್ಗೆ ತಂದ ಕಸವನ್ನೆಲ್ಲ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಬೇರ್ಪಡಿಸಲಾಗುತ್ತದೆ. 'ಒಂದೊಂದು ಬಗೆಯ ಪ್ಲಾಸ್ಟಿಕ್‌ಗೂ ಒಂದೊಂದು ದರವಿದ್ದು, ಗುಜರಿ ಹಾಗೂ ಖಾಸಗಿ ಸಂಸ್ಥೆಗಳು ಘಟಕಕ್ಕೇ ಬಂದು ಖರೀದಿ ಮಾಡುತ್ತವೆ. ಇದರಿಂದ ಒಂದಷ್ಟು ಹಣ ಸಿಗುತ್ತದೆ. ಹಸಿ ಕಸವನ್ನು ಕಾಂಪೊಸ್ಟ್‌ ಗೊಬ್ಬರ ತಯಾರಿಸಿ ರೈತರಿಗೆ ನೀಡಲಾಗುತ್ತದೆ' ಎಂದು ವಿವರಿಸಿದರು ಮಾಧವಿ.
ಪ್ರತಿ ತಿಂಗಳು ಮನೆಗಳಿಂದ ₹10,000, ಅಂಗಡಿಗಳಿಂದ ₹28,000 ಸಂಗ್ರಹವಾಗುತ್ತದೆ. ಸಿಬ್ಬಂದಿ ವೇತನ, ಘಟಕದ ನಿರ್ವಹಣೆಗೆ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಗ್ರಾಮ ಪಂಚಾಯ್ತಿಯಿಂದಲೂ ಆರ್ಥಿಕ ನೆರವು ಸಿಗುತ್ತಿದೆ. 'ಆರಂಭದಲ್ಲಿ ಕಸ ಕೊಡಲು ಹಿಂದೇಟು ಹಾಕುತ್ತಿದ್ದವರು ಈಗ ಕಸ, ಹಣ ಎರಡನ್ನೂ ಕೊಡುತ್ತಿದ್ದಾರೆ. ಆರಂಭದಲ್ಲಿ ಹೇಳಿದಂತೆ ಜನರ ಮನಸ್ಥಿತಿ ಬದಲಾದರೆ ಸ್ವಚ್ಛ ಭಾರತ ನಿರ್ಮಾಣವಾದಂತೆ' ಎಂದು ಮತ್ತೊಮ್ಮೆ ಆತ್ಮವಿಶ್ವಾಸದಿಂದ ಹೇಳಿದರು ಮಾಧವಿ.
ವಿಶಾಲಾಕ್ಷಿಯವರ ಸ್ವಚ್ಛ ಗ್ರಾಮದ ಕನಸು
ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್‌ ಪುತ್ರನ್, ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗೆ ಹೆಚ್ಚು ಒತ್ತು ನೀಡಿದ್ದಾರೆ. ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಸದಸ್ಯರಾಗಿರುವ ಇವರು, ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದು, ಹೆಜಮಾಡಿಯಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ. ನಿಯಮಿತವಾಗಿ ಗ್ರಾಮಸಭೆಗಳನ್ನು ನಡೆಸುತ್ತಾ, ಸ್ವಚ್ಛತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದಾರೆ. ಹೆಜಮಾಡಿಯನ್ನು ಸಂಪೂರ್ಣ ಕಸಮಕ್ತಗೊಳಿಸುವುದು ಅವರ ಗುರಿ.
ಪಕ್ಷದ ಹಣಕಾಸಿನ ಸ್ಥಿತಿ ಸುಧಾರಿಸಲು ಆನ್‌ಲೈನ್‌ ದೇಣಿಗೆಗೆ ಮೊರೆಹೋದ ಕಾಂಗ್ರೆಸ್ | Prajavani
Published: 25 ಮೇ 2018, 15:33 IST
Updated: 25 ಮೇ 2018, 15:40 IST
ನವದೆಹಲಿ: ಕಾಂಗ್ರೆಸ್‌ನ ಹಣಕಾಸಿನ ಮುಗ್ಗಟ್ಟನ್ನು ನಿವಾರಿಸಲು ಪಕ್ಷದ ಮುಖಂಡ ಶಶಿ ತರೂರ್‌ ತೋರಿದ ದೇಣಿಗೆ ಸಂಗ್ರಹಿಸುವ ಮಾರ್ಗವನ್ನು ಪಕ್ಷ ಅನುಸರಿಸಿದೆ.
ಶಶಿ ತರೂರ್‌ ಬುಧವಾರ ನೀಡಿದ ಹೇಳಿಕೆ ತರುವಾಯ ಜನರಿಂದ ಆನ್‌ಲೈನ್‌ ಮೂಲಕ ದೇಣಿಗೆ ಸಂಗ್ರಹಿಸಲು(ಕ್ರೌಡ್‌ ಫಂಡಿಂಗ್‌) ಮುಂದಾಗಿದೆ. ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ, 'ಕಾಂಗ್ರೆಸ್‌ಗೆ ನಿಮ್ಮ ಬೆಂಬಲ ಮತ್ತು ಸಹಾಯ ಬೇಕಿದೆ. 70 ವರ್ಷಗಳಿಂದ ಹೆಮ್ಮೆಯಿಂದ ವಿಕಸನವಾಗುತ್ತ ಬಂದಿರುವ ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ದೇಣಿಗೆ ನೀಡುವ ಮೂಲಕ ಸಹಕರಿಸಿ' ಎಂದು ಕರೆ ನೀಡಲಾಗಿದೆ. ಅದರೊಂದಿಗೆ ಆನ್‌ಲೈನ್‌ ಮೂಲಕ ದೇಣಿಗೆ ನೀಡುವ ಲಿಂಕ್‌ ಸಹ ಲಗತ್ತಿಸಲಾಗಿದೆ.
ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ಪಕ್ಷದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂಬ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ, 'ಬಿಜೆಪಿ ಖಜಾನೆಯನ್ನು ಎದುರಿಸಲು ಪಕ್ಷದ ಮೇಲೆ ಕಾಳಜಿ ಇರುವ ಜನರ ಸಹಾಯ ಪಡೆಯಬೇಕಿದೆ' ಎಂದು ಶಶಿ ತರೂರ್‌ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು.
ಕಾಂಗ್ರೆಸ್‌ಗೆ ಕಾರ್ಪೊರೇಟ್‌ ವಲಯದಿಂದ ಬರುವ ದೇಣಿಗೆ ಕಡಿಮೆ ಆಗುತ್ತಿದೆ. ಕೇಂದ್ರದಲ್ಲಿ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ ಹಲವಾರು ವಿಧಾನಸಭಾ ಚುನಾವಣೆಗಳಲ್ಲಿ ಸೋತಿದೆ. 13 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಇಂದು ಪಂಜಾಬ್‌, ಮಿಜೊರಾಂ ಮತ್ತು ಕರ್ನಾಟಕದಲ್ಲಿ ಮಾತ್ರ ಆಡಳಿತದಲ್ಲಿದೆ ಎಂದು ಆ ಮಾಧ್ಯಮ ವರದಿಯಲ್ಲಿದೆ.
ಅಸೊಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ 2016–17 ಸಾಲಿನಲ್ಲಿ ಕಾಂಗ್ರೆಸ್‌ ₹ 225.36 ಕೋಟಿ ಪಕ್ಷನಿಧಿ ಹೊಂದಿತ್ತು. ₹ 1,034 ಕೋಟಿ ಹೊಂದಿರುವ ಬಿಜೆಪಿ ದೇಶದ ಶ್ರೀಮಂತ ಪಕ್ಷವೆಂಬ ಪಟ್ಟ ಧರಿಸಿದೆ.
ಮುಂದಿನ ಐಪ್ಯಾಡ್ ಏರ್ ಯುಎಸ್ಬಿ-ಸಿ ಪೋರ್ಟ್ | ಅನ್ನು ಸ್ವಾಗತಿಸಬಹುದು ಐಫೋನ್ ಸುದ್ದಿ
ಮುಂದಿನ ಐಪ್ಯಾಡ್ ಏರ್ ಯುಎಸ್ಬಿ-ಸಿ ಪೋರ್ಟ್ ಅನ್ನು ಸ್ವಾಗತಿಸಬಹುದು
ಇಗ್ನಾಸಿಯೊ ಸಲಾ | | ಐಪ್ಯಾಡ್ ಏರ್, ಸುದ್ದಿ
2018 ರಲ್ಲಿ ಐಪ್ಯಾಡ್ ಪ್ರೊ ಬಿಡುಗಡೆಯೊಂದಿಗೆ, ಆಪಲ್ ಮೊದಲು ಯುಎಸ್ಬಿ-ಸಿ ಪೋರ್ಟ್ ಅನ್ನು ಪರಿಚಯಿಸಿತು ಐಒಎಸ್ ನಿರ್ವಹಿಸಿದ ಸಾಧನದಲ್ಲಿ. ಯುಎಸ್‌ಬಿ-ಸಿ ಪೋರ್ಟ್‌ನ ಪರಿಚಯಕ್ಕೆ ಧನ್ಯವಾದಗಳು, ಐಪ್ಯಾಡ್ ಪ್ರೊನ ಸಾಧ್ಯತೆಗಳು ತುಂಬಾ ಹೆಚ್ಚಾಗಿದ್ದು, ನೀವು ಬ್ಲೂಟೂತ್ ಕೀಬೋರ್ಡ್ ಮತ್ತು ಮೌಸ್ ಅನ್ನು ಸೇರಿಸುವವರೆಗೂ ಈ ಐಪ್ಯಾಡ್ ಮಾದರಿಯನ್ನು ಲ್ಯಾಪ್‌ಟಾಪ್‌ಗೆ ಸೂಕ್ತವಾದ ಬದಲಿಯಾಗಿ ಪರಿಗಣಿಸಲು ಅವು ನಮ್ಮನ್ನು ಕರೆದೊಯ್ಯುತ್ತವೆ.
2018 ರ ಐಪ್ಯಾಡ್ ಪ್ರೊನಲ್ಲಿ ಆಪಲ್ ಇದನ್ನು ಜಾರಿಗೆ ತಂದಾಗಿನಿಂದ ಐಫೋನ್ ಪ್ರಸ್ತುತ ಬೆಳಕಿನ ಸಂಪರ್ಕವನ್ನು ಯುಎಸ್ಬಿ-ಸಿ ಸಂಪರ್ಕಕ್ಕೆ ಬದಲಾಯಿಸುವ ವದಂತಿಗಳು ನಿರಂತರವಾಗಿವೆ, ಆದಾಗ್ಯೂ, ಈ ಸಂಪರ್ಕವನ್ನು ಸಂಯೋಜಿಸುವ ಮುಂದಿನ ಐಒಎಸ್ ಸಾಧನವೆಂದರೆ ಐಪ್ಯಾಡ್ ಏರ್, ಜಪಾನಿನ ಮಾಧ್ಯಮ ಮ್ಯಾಕ್ ಒಟಕಾರಾ ಪ್ರಕಾರ.
ಚೀನಾದ ಮಾರಾಟಗಾರರ ಮೂಲಗಳನ್ನು ಉಲ್ಲೇಖಿಸಿ, ಮುಂದಿನ ಪೀಳಿಗೆಯ ಐಪ್ಯಾಡ್ ಏರ್, ಐಪ್ಯಾಡ್ ಮತ್ತು ಐಪ್ಯಾಡ್ ಪ್ರೊ ನಡುವೆ ಇರುತ್ತದೆ, ಮುಂದಿನ ಪೀಳಿಗೆಯ ಆಪಲ್ ಬಿಡುಗಡೆಗಳಲ್ಲಿ ಯುಎಸ್‌ಬಿ-ಸಿ ಪೋರ್ಟ್ ಅನ್ನು ಜಾರಿಗೆ ತರಲಿದೆ ಎಂದು ಮ್ಯಾಕ್ ಒಟಕಾರ ಹೇಳಿಕೊಂಡಿದ್ದಾರೆ. ನಮಗೆ ಒಂದೇ ರೀತಿಯ ವಿನ್ಯಾಸವನ್ನು ತೋರಿಸುತ್ತದೆ ಇದನ್ನು ನಾವು ಪ್ರಸ್ತುತ 11 ಇಂಚಿನ ಐಪ್ಯಾಡ್ ಪ್ರೊನಲ್ಲಿ ಕಾಣಬಹುದು.
ವರ್ಷದ ಆರಂಭದಲ್ಲಿ, ಆಪಲ್ 11 ಇಂಚಿನ ಐಪ್ಯಾಡ್ ಏರ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು 2020 ರ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗೆ ಬರಬಹುದೆಂದು ವಿವಿಧ ವದಂತಿಗಳು ಸೂಚಿಸಿವೆ. ಮಿಂಗ್-ಚಿ ಕುವೊ ಇತ್ತೀಚೆಗೆ ಇದನ್ನು ಹೇಳಿದ್ದಾರೆ ಆಪಲ್ 10,8 ಇಂಚಿನ ಐಪ್ಯಾಡ್‌ನಲ್ಲಿ ಕಾರ್ಯನಿರ್ವಹಿಸುತ್ತಿತ್ತು, ಇದು ಏರ್ ಮಾದರಿ ಎಂದು ನಮೂದಿಸಬಾರದು, ಆದ್ದರಿಂದ ಈ ಮಾಹಿತಿಯು ಆಪಲ್ನ ಉದ್ದೇಶಗಳನ್ನು ಮಾತ್ರ ಖಚಿತಪಡಿಸುತ್ತದೆ.
ಮಿನಿ-ಎಲ್ಇಡಿ ತಂತ್ರಜ್ಞಾನ ಹೊಂದಿರುವ ಪರದೆಗಳ ಬಗ್ಗೆ ಹೆಚ್ಚಿನದನ್ನು ಹೇಳಲಾಗುತ್ತಿದೆ, ಅದು ಒಂದು ಪರದೆಯಾಗಿದೆ ಆರಂಭದಲ್ಲಿ 12,9-ಇಂಚಿನ ಐಪ್ಯಾಡ್ ಪ್ರೊನಲ್ಲಿ ಮಾತ್ರ ಲಭ್ಯವಿದೆಕೆಲವು ವದಂತಿಗಳು ಇತ್ತೀಚಿನ ವರ್ಷಗಳಲ್ಲಿ ಆಪಲ್ ಹೊಂದಿರುವ ಈ ಹೊಸ ಪರದೆಯ ಸಮಯದ ಗುಣಮಟ್ಟವನ್ನು ಆನಂದಿಸುವ ಸಾಧನಗಳ ಸಂಖ್ಯೆಯನ್ನು ವಿಸ್ತರಿಸಲು ಪ್ರಾರಂಭಿಸಿವೆ.
ಲೇಖನಕ್ಕೆ ಪೂರ್ಣ ಮಾರ್ಗ: ಐಫೋನ್ ಸುದ್ದಿ » ಐಪ್ಯಾಡ್ » ಐಪ್ಯಾಡ್ ಏರ್ » ಮುಂದಿನ ಐಪ್ಯಾಡ್ ಏರ್ ಯುಎಸ್ಬಿ-ಸಿ ಪೋರ್ಟ್ ಅನ್ನು ಸ್ವಾಗತಿಸಬಹುದು
ಕಾರ್ಯಕ್ರಮಗಳು Archives - VIVIDLIPI
Category: ಕಾರ್ಯಕ್ರಮಗಳು
ಕನ್ನಡ ಸಾಹಿತ್ಯದ ಮಹಾನ್ ವ್ಯಕ್ತಿಗಳ ಪರಿಚಯ – ಡಾ. ಕಮಲಾ ಹಂಪನಾ ಅವರಿಂದ " ದಾನಚಿಂತಾಮಣಿ ಅತ್ತಿಮಬ್ಬೆ ಪರಿಚಯ" ಕಾರ್ಯಕ್ರಮ
ಅತ್ತಿಮಬ್ಬೆಯು ಪ್ರಾಚೀನ ಕರ್ನಾಟಕದ ಪ್ರಸಿದ್ಧ ಮಹಿಳೆ, ಅವರ ಕನ್ನಡ ಸಾಹಿತ್ಯದ ಸೇವೆ ಮಹತ್ತರವಾದ್ದದ್ದು. ಅತ್ತಿಮಬ್ಬೆಯು ಹತ್ತನೆಯ ಶತಮಾದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದಳು. ಆಕೆಯ ಆಶ್ರಿತರಲ್ಲಿ ಒಬ್ಬನಾದ ಮಹಾಕವಿ ರನ್ನನು ತನ್ನ 'ಅಜಿತಪುರಾಣ'ದಲ್ಲಿ ಅತ್ತಿಮಬ್ಬೆಯನ್ನು ತುಂಬು ಮನಸ್ಸಿನಿಂದ […]
"ಬಿಂಬ— ಆ ತೊಂಬತ್ತು ನಿಮಿಷಗಳು"
ಕಾರ್ಯಕ್ರಮ: "ಬಿಂಬ— ಆ ತೊಂಬತ್ತು ನಿಮಿಷಗಳು" ಚಲನಚಿತ್ರ ಪ್ರದರ್ಶನ ಮತ್ತು ಶ್ರೀನಿವಾಸ್ ಪ್ರಭು ಅವರೊಡನೆ ಮಾತುಕತೆ ದಿನಾಂಕ: ೧೮ ಏಪ್ರಿಲ್ ೨೦೨೦, ಶನಿವಾರ ಸಮಯ: ಯು ಕೆ ಸಮಯ ಮಧ್ಯಾಹ್ನ ೧.೩೦ – ೪.೦೦ ಗಂಟೆಗೆ , ಭಾರತೀಯ ಸಮಯ ಸಾಯಂಕಾಲ […]
ವಾಲಿ ವಧೆ
ಯಥೋ ಭಾವೊಸ್ತತೋ ರಸಃ ; ಅಶ್ವಘೋಷ ಥಿಯೇಟರ್ ಟ್ರಸ್ಟ್ ; ಶ್ರೀ ಗಜಾನನ ಯುವಕ ಮಂಡಳಿ:- ಶೇಷಗಿರಿ ಹಾನಗಲ್ ತಾ | | ಅಭಿನಯಿಸುವ ಕುವೆಂಪು ವಿರಚಿತ ' ಶ್ರೀ ರಾಮಾಯಣ ದರ್ಶನಂ ' ಆಧಾರಿತ ನಾಟಕ;- […]
ಕಿತ್ತೂರು ಸಂಸ್ಥಾನ : ದಾಖಲೆಗಳು ಸಂಪುಟ – ೧ ಬಿಡುಗಡೆ ಸಮಾರಂಭ
ಬಸವರಾಜ ಕಟ್ಟಿಮನಿ , ಪ್ರತಿಷ್ಠಾನ , ಬೆಳಗಾವಿ:-ಕಿತ್ತೂರು ಸಂಸ್ಥಾನ ದಾಖಲೆಗಳ ಶೋಧ – ಅನುವಾದ – ಪ್ರಕಟಣ ಯೋಜನೆ- ಸಹಯೋಗ ಕರ್ನಾಟಕ ವಿದ್ಯಾವರ್ಧಕ ಸಂಘ , ಧಾರವಾಡ ಕಿತ್ತೂರು ಸಂಸ್ಥಾನ : ದಾಖಲೆಗಳು ಸಂಪುಟ – ೧ ಬಿಡುಗಡೆ ಸಮಾರಂಭ ಗ್ರಂಥ […]
ಪಲ್ಲವ ಪ್ರಕಾಶನ- ಬಯಲು ಬಳಗ :- ನಟರಾಜ್ ಹುಳಿಯಾರ್ ಅವರ ಪುಸ್ತಕಗಳ ಬಿಡುಗಡೆ:- ಮುಂದಣ ಕಥನ- ನಾಟಕ ; ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು ಕಥಾ ಸಂಕಲನ – ಮರು ಮುದ್ರಣ ; ಮತ್ತೊಬ್ಬ ಸರ್ವಾಧಿಕಾರಿ ಕಥಾ ಸಂಕಲನ – ಮರು […]
ವಿಶ್ವಪಥ ಕಲಾ ಸಂಗಮ ( ರಿ ):- ಡಾ . ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ ರಂಗಪ್ರಯೋಗ:- "ಜೀಕೆ ಮಾಸ್ತರರ ಪ್ರಣಯ ಪ್ರಸಂಗ" . . an age bar love story ರಂಗರೂಪ – ವಿನ್ಯಾಸ – ನಿರ್ದೇಶನ ಭಾಸ್ಕರ್ […]
ಐದು ಪುಸ್ತಕಗಳ ಲೋಕಾರ್ಪಣೆ ಮತ್ತು ಕಾವ್ಯ ಸಂಧ್ಯಾ ಕಾರ್ಯಕ್ರಮ
ರೋಟರಿ ಸಂಸ್ಥೆ ಹೊಸಪೇಟೆ, ಮತ್ತು ಕರ್ನಾಟಕ ಕಲಾಭಿಮಾನಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹೊಸಪೇಟೆ ಯಾಜಿ ಪ್ರಕಾಶನವು ಪ್ರಕಟಿಸಿರುವ ಐದು ಪುಸ್ತಕಗಳ ಲೋಕಾರ್ಪಣೆ ಮತ್ತು ' ಕಾವ್ಯ ಸಂಧ್ಯಾ ' ಕಾರ್ಯಕ್ರಮ:- ಪುಸ್ತಕ ಲೋಕಾರ್ಪಣೆ : ಡಾ . ಎಚ್ . ಎಸ್ […]
ವಸಂತ ವ್ಯಾಖ್ಯಾನ ಮಾಲೆ – ೪
ಸ್ನೇಹ ಪ್ರತಿಷ್ಠಾನ , ಧಾರವಾಡ:- ವಸಂತ ವ್ಯಾಖ್ಯಾನ ಮಾಲೆ – ೪ ಮಾನ್ಯರೆ . ವಂದನೆಗಳು . ಗುರುವಾರ , ದಿನಾಂಕ ೫ನೇ ಮಾರ್ಚ೨೦೨೦ ರಂದು – " ಬಸವೇಶ್ವರರು " ಶುಕ್ರವಾರ , ದಿನಾಂಕ […]
ಕುಸ್ತಿ: ಯುದ್ಧವೀರ ಭಾರತ ಕೇಸರಿ | Prajavani
ಕುಸ್ತಿ: ಯುದ್ಧವೀರ ಭಾರತ ಕೇಸರಿ
ಜಮಖಂಡಿ: ತಾಲ್ಲೂಕಿನ ಆಲಗೂರ ಗ್ರಾಮದ ಜೈ ಹನುಮಾನ್ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕುಸ್ತಿ ಟೂರ್ನಿಯಲ್ಲಿ ಪುಣೆಯ ಭಾರತೀಯ ಸೇನೆಯ ಯುದ್ಧವೀರ `ಭಾರತ ಕೇಸರಿ~ ಪ್ರಶಸ್ತಿಯನ್ನು ಬಾಚಿಕೊಂಡು ಬೆಳ್ಳಿಗದೆಯನ್ನು ತಮ್ಮ ಹೆಗಲಿಗೇರಿಸಿಕೊಂಡರು.
ಪ್ರಶಸ್ತಿಗಾಗಿ ನಡೆದ ಫೈನಲ್ ಪಂದ್ಯದಲ್ಲಿ ಯುದ್ಧವೀರ ಅವರು ಹರಿಯಾಣಣದ ಸತ್ಯವ್ರತ ಅವರನ್ನು ಮಣಿಸಿ ಪ್ರಶಸ್ತಿಗೆ ಲಗ್ಗೆ ಹಾಕಿದರು. ಪಂದ್ಯದ 15 ನಿಮಿಷಗಳ ಮೊದಲ ಸುತ್ತಿನಲ್ಲಿ ಇಬ್ಬರೂ ಪೈಲ್ವಾನರು ಯಾವುದೇ ಅಂಕ ಗಳಿಸದೇ ಸಮಬಲ ಪ್ರದರ್ಶಿಸಿದ್ದರು. ಆದರೆ 6 ನಿಮಿಷಗಳ ಎರಡನೇ ಸುತ್ತಿನಲ್ಲಿ ಯುದ್ಧವೀರ 2 ಅಂಕ ಪಡೆದು ಮೇಲುಗೈ ಸಾಧಿಸುವ ಮನ್ಸೂಚನೆ ನೀಡಿದರು. ಆರು ನಿಮಿಷಗಳ ಮೂರನೇ ಸುತ್ತಿನ ಪಂದ್ಯದಲ್ಲಿ ಮತ್ತೆ 2 ಅಂಕ ಗಳಿಸಿದ ಯುದ್ಧವೀರ ಪ್ರಶಸ್ತಿಗೆ ಭಾಜನರಾದರು. ಸತ್ಯವ್ರತ ಕೇವಲ 2 ಅಂಕ ಪಡೆಯುವಲ್ಲಿ ಯಶಸ್ವಿಯಾದರು.
ಜೈ ಹನುಮಾನ್ ಕೇಸರಿ ಪ್ರಶಸ್ತಿಗಾಗಿ ನಡೆದ ಪುರುಷರ 74 ಕೆಜಿ ವಿಭಾಗದ ರಾಜ್ಯ ಮಟ್ಟದ ಕುಸ್ತಿಯಲ್ಲಿ ಎಸ್‌ಟಿಸಿ ಧಾರವಾಡದ ಸಂದೀಪ ಕಾಟೆ ಅವರು ಕೆಎಸ್‌ಪಿ ದಾವಣಗೆರೆಯ ಲೋಕೇಶ ಯಲಶೆಟ್ಟಿ ಅವರನ್ನು ಪರಭಾವಗೊಳಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
60 ಕೆಜಿ ವಿಭಾಗ: ನಾಗರಾಜ (ಧಾರವಾಡ ಎಸ್‌ಟಿಸಿ)-1, ಶರೀಫ ಜಮಾದಾರ (ಹಳಿಯಾಳ)-2, ಚಂದ್ರಶೇಖರ (ದಾವಣಗೆರೆ ಕ್ರೀಡಾಶಾಲೆ)-3, ಎಂ.ಎಲ್.ದೊಂಡಿ(ಮುಧೋಳ)-3, 66 ಕೆಜಿ ವಿಭಾಗ: ನಿಶಾಂತ ಪಾಟೀಲ (ಬೆಳಗಾವಿ ಕ್ರೀಡಾಶಾಲೆ)-1, ಸುರೇಶ ಬ್ಯಾಕೋಡ (ಧಾರವಾಡ ಎಸ್‌ಟಿಸಿ)-2, ಮನೋಜ ಬಂಡಿ (ಜಮಖಂಡಿ)-3, ರಮೇಶ ಫಳಕೆ (ಆಲಗೂರ)-3
74 ಕೆಜಿ ವಿಭಾಗ: ಸಂದೀಪ ಕಾಟೆ (ಧಾರವಾಡ ಎಸ್‌ಟಿಸಿ)-1, ಲೋಕೇಶ ಯಲಶೆಟ್ಟಿ (ದಾವಣಗೆರೆ ಕೆಎಸ್ಪಿ)-2, ಆನಂದ ಫಳಕೆ (ಆಲಗೂರ)-3, ಕಾರ್ತಿಕ ಕಾಟೆ (ದಾವಣಗೆರೆ ಕ್ರಿಡಾಶಾಲೆ)-3, ರಾಷ್ಟ್ರ ಮಟ್ಟದ ಭಾರತ ಕೇಸರಿ ಪ್ರಶಸ್ತಿ: ಯುದ್ಧವೀರ (ಪುಣೆ)-1, ಸತ್ಯವೃತ (ಹರ‌್ಯಾಣ)-2, ಮಲ್ಲಪ್ಪ ಪಾಟೀಲ (ದಾವಣಗೆರೆ)-3, ವಿಕ್ರಾಂತ ಜಾಧವ (ಪುಣೆ)-3.
ಎತ್ತರಕ್ಕೆ ಬೆಳೆದರು ಹುಟ್ಟೂರು ಮರೆಯಲ್ಲ: ಐ.ಪಿ.ಎಸ್.ಅಧಿಕಾರಿ ಸಿಂಗೆ | Sanjevani
Home ಜಿಲ್ಲೆ ಕಲಬುರಗಿ ಎತ್ತರಕ್ಕೆ ಬೆಳೆದರು ಹುಟ್ಟೂರು ಮರೆಯಲ್ಲ: ಐ.ಪಿ.ಎಸ್.ಅಧಿಕಾರಿ ಸಿಂಗೆ
ಎತ್ತರಕ್ಕೆ ಬೆಳೆದರು ಹುಟ್ಟೂರು ಮರೆಯಲ್ಲ: ಐ.ಪಿ.ಎಸ್.ಅಧಿಕಾರಿ ಸಿಂಗೆ
ಅಫಜಲಪುರ: ನ.4: ತಾವು ಎತ್ತರಕ್ಕೆ ಬೆಳೆಯಬೇಕಾದರೆ ತಮ್ಮ ಹುಟ್ಟೂರಿನ ಜನತೆಯೆ ಸ್ಪೂರ್ತಿ ಹೀಗಾಗಿ ತಮ್ಮ ಹುಟ್ಟೂರು ಹಾಗೂ ಜನ್ಮ ಕೊಟ್ಟ ತಂದೆ ತಾಯಿ ವಿದ್ಯಾ ಕಲಿಸಿದ ಗುರುಗಳನ್ನು ಯಾವತ್ತು ಮರೆಯಬಾರದು ಅಲ್ಲದೆ ಈ ಭಾಗದಲ್ಲಿ ಪ್ರತಿಯೊಬ್ಬ ಯುವಕರು ಶಿಕ್ಷಣವಂತರಾಗಿ, ಉನ್ನತ ಅಧಿಕಾರಿಗಳಾಗಿ ಮುಂದೆ ಬರಬೇಕು ಎಂದು ಐ.ಪಿ.ಎಸ್ ಅಧಿಕಾರಿ ಮಂಜುನಾಥ ಸಿಂಗೆ ಅವರು ಯುವಕರಿಗೆ ಕಿವಿ ಮಾತು ಹೇಳಿದರು.
ಮಹಾರಾಷ್ಟ್ರÀ ಕಿ ಶಾನ್ ಪ್ರಶಸ್ತಿಗೆ ಭಾಜನಾರಾದ ಮೇಲೆ ಪ್ರಥಮ ಭಾರಿಗೆ ಹುಟ್ಟೂರಾದ ಅಫಜಲಪುರ ತಾಲೂಕಿನ ಗೌರ(ಬಿ) ಗ್ರಾಮಕ್ಕೆ ಸೋಮವಾರದಂದು ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಜೀವನದಲ್ಲಿ ನಿರಂತರ ಪ್ರಯತ್ನ ಹಾಗೂ ಸ್ಪಷ್ಟ ಗುರಿ, ಗುರುಗಳ ಮಾರ್ಗದರ್ಶನ ಇದ್ದಾಗ ಗುರಿ ತಲಪಲು ಸಾಧ್ಯವಿದೆ ಎಂದ ಅವರು ಈ ಭಾಗದಲ್ಲಿ ಬಡ ವಿದ್ಯಾರ್ಥಿಗಳಿಗೆ ತಾವು ಎಲ್ಲಾ ರೀತಿಯಿಂದ ಸಹಾಯ ಸಹಕಾರ ಮಾಡುವುದಾಗಿ ತಿಳಿಸಿದರು.
ಯುವ ಬರಹಗಾರ ಬಸವರಾಜ ನಿಂಬರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲ್ಯಾಣ ಕರ್ನಾಟಕದ ಹಿಂದುಳಿದ ಭಾಗದ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಉನ್ನತ ಅಧಿಕಾರಿಯಾಗಿ ಇಂದು ಮಹಾರಾಷ್ಟದ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಸಿಂಗೆ ಅವರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ, ಅಷ್ಟೇ ಅಲ್ಲದೇ ಜೀವನದ ಏಳು ಬೀಳುಗಳೊಂದಿಗೆ ಜೀವನದ ಗುರಿ ತಲುಪಿ ಗ್ರಾಮದ ಕೀರ್ತಿ ಹಾಗೂ ತಾಲೂಕಿನ ಮತ್ತು ಜಿಲ್ಲೆಯ ಕೀರ್ತಿ ರಾಷ್ಟ್ರ ಮಟ್ಟದಲ್ಲಿ ತಂದಿದ್ದು, ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘಿಸಿದರು. ಡಾ.ಸಂಗಣ್ಣ ಸಿಂಗೆ ಮಾತನಾಡಿದರು. ಐ.ಪಿ.ಎಸ್. ಅಧಿಕಾರಿ ಮಂಜುನಾಥ ಸಿಂಗೆ ಅವರ ಧರ್ಮ ಪತ್ನಿ ಮೇಘಶ್ರೀ ಅವರು ಇತ್ತೀಚಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ ಅಲ್ಲದೇ ಗೌರ(ಬಿ) ಗ್ರಾಮದ ಪ್ರವೀಣ ಘಂಟೆ ಅವರು ಇತ್ತೀಚಿಗೆ ಪರೀಕ್ಷೆ ಬರೆದು ಪಿ.ಎಸ್.ಐ ಹುದ್ದೆಗೆ ನೇಮಕವಾದ ಪ್ರಯುಕ್ತ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಜೆ.ಎಂ.ಕೊರಬು, ಪಪ್ಪು ಪಟೇಲ, ದಯಾನಂದ ದೊಡ್ಮನಿ, ಮಲ್ಲಿಕಾರ್ಜುನ ಸಿಂಗೆ, ಶ್ರೀಶೈಲ ಪಾಟೀಲ, ಗೌತಮ ಸಕ್ಕರಗಿ, ಭಾಗಪ್ಪ ಕೊಳ್ಳಿ, ಶ್ರೀಶೈಲ ಸಿಂಗೆ, ಅಫಜಲಪುರ ಸಿಪಿಐ ಮಹಾದೇವ ಪಂಚಮುಖಿ ಸೇರಿದಂತೆ ಗ್ರಾಮಸ್ಥರು ಸನ್ಮಾನಿಸಿ ಶುಭ ಹಾರೈಸಿದರು.
ಆಶೋಕ್ ನಾಮಪತ್ರ ಸಲ್ಲಿಕೆ | Prajavani
ಆಶೋಕ್ ನಾಮಪತ್ರ ಸಲ್ಲಿಕೆ
ಬೆಂಗಳೂರು: ಪದ್ಮನಾಭನಗರ ಕ್ಷೇತ್ರದಲ್ಲಿ ಪಕ್ಷೇತರರು ಅಧಿಕ ಸಂಖ್ಯೆಯಲ್ಲಿ ಕಣದಲ್ಲಿದ್ದಾರೆ. ಅವರಿಂದ ಈ ಬಾರಿ ಹೆಚ್ಚಿನ ಸ್ಪರ್ಧೆ ಎದುರಾಗಬಹುದು ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ ವಿಶ್ಲೇಷಿಸಿದರು.
ಪಕ್ಷದ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಅವರು ಮಾತನಾಡಿ, ಉಳಿದ ಪಕ್ಷದ ಅಭ್ಯರ್ಥಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಇನ್ನಷ್ಟೇ ತಿಳಿದುಕೊಳ್ಳಬೇಕಿದೆ. ಕ್ಷೇತ್ರದಾದ್ಯಂತ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀ ರಕ್ಷೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಅಧಿಕಾರದ ಚುಕ್ಕಾಣಿ ಖಚಿತ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ ಬಂಡಾಯದಿಂದ ಕಂಗಾಲಾಗಿದೆ. ಎಲ್ಲ ಕಡೆಗಳಲ್ಲಿ ಬಿಜೆಪಿ ಅಲೆ ಇದೆ ಎಂದರು.
ಬಿಜೆಪಿ ಮುಖಂಡ ಅನಂತ ಕುಮಾರ್ ಮಾತನಾಡಿ, ಕಾಂಗ್ರೆಸ್ ಬಿಕ್ಕಟ್ಟು ಎದುರಿಸುತ್ತಿದೆ. ಜೆಡಿಎಸ್ ಇಕ್ಕಟ್ಟಿನಲ್ಲಿದೆ. ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಈ ಬಾರಿ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವಿ.ಸೋಮಣ್ಣ, ಎಲ್.ಎ. ರವಿಸುಬ್ರಹ್ಮಣ್ಯ ಮತ್ತಿತರರು ಇದ್ದರು.
ಬಿಹಾರದಲ್ಲಿ ಜಡ್ಜ್‌ ಕೊಲೆ ಆರೋಪಿಗಳ ಮೇಲೆ ಚಾರ್ಜ್‌ಶೀಟ್ - ಕಾರಣ ಬಹಿರಂಗಪಡಿಸದ ಸಿಬಿಐ!
Home ಮುಖಪುಟ ಬಿಹಾರದಲ್ಲಿ ಜಡ್ಜ್‌ ಕೊಲೆ ಆರೋಪಿಗಳ ಮೇಲೆ ಚಾರ್ಜ್‌ಶೀಟ್ – ಕಾರಣ ಬಹಿರಂಗಪಡಿಸದ ಸಿಬಿಐ!
ಬಿಹಾರದಲ್ಲಿ ಜಡ್ಜ್‌ ಕೊಲೆ ಆರೋಪಿಗಳ ಮೇಲೆ ಚಾರ್ಜ್‌ಶೀಟ್ – ಕಾರಣ ಬಹಿರಂಗಪಡಿಸದ ಸಿಬಿಐ!
ಜುಲೈ 28 ರಂದು ಜಾರ್ಖಂಡ್ ರಾಜ್ಯದ ಧನಬಾದ್‌ನ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಉತ್ತಮ್ ಆನಂದ್‌ರವರಿಗೆ ಆಟೋದಲ್ಲಿ ಗುದ್ದಿ ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಅಕ್ಟೋಬರ್ 20 ರಂದು ಚಾರ್ಜ್ ಶೀಟ್‌ ಸಲ್ಲಿಸಿರುವ ಸಿಬಿಐ, ಕೊಲೆಯ ಪ್ರಧಾನ ಆರೋಪಿಯಾದ ರಾಹುಲ್ ಕುಮಾರ್ ಓರ್ವ ವೃತ್ತಿಪರ ಕಳ್ಳನಾಗಿದ್ದಾನೆ. ಆತ ಯಾವಾಗಲೂ ದುರ್ಬಲ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದ. ಆತನ ಸಹವರ್ತಿ ಕಳ್ಳ ಲಖನ್ ವರ್ಮಾ ತನ್ನ ಯೋಜನೆಯನ್ನು ಜಾರಿಗೊಳಿಸಲು ಸಮಯಕ್ಕಾಗಿ ಕಾಯುತ್ತಿದ್ದ ಎಂದು ಸಿಬಿಐ ತಿಳಿಸಿದೆ. ಆದರೆ ಆ ಯೋಜನೆ ಏನು ಮತ್ತು ಕೊಲೆಯ ಹಿಂದಿನ ಉದ್ದೇಶವೇನು ಎಂಬುದರ ಕುರಿತು ಸಿಬಿಐ ಏನನ್ನೂ ಹೇಳಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಉದ್ದೇಶಪೂರ್ವಕವಾಗಿ ತೀವ್ರ ದೈಹಿಕ ಗಾಯಗಳನ್ನು ಉಂಟು ಮಾಡಿದ್ದಾರೆ. ತೀವ್ರ ದೈಹಿಕ ಹಲ್ಲೆಯಿಂದಾಗಿ ನ್ಯಾಯಾಧೀಶರು ಸಾವನಪ್ಪಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ಸಿಬಿಐ ಸ್ಪಷ್ಟವಾಗಿ ವಿಚಾರಣೆ ನಡೆಸುತ್ತಿಲ್ಲ ಎಂದು ಈ ಹಿಂದೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಇಬ್ಬರೂ ಆರೋಪಿಗಳು ಆಟೋವೊಂದನ್ನು ಕದ್ದು ಬಲಿಯಾಪುರ ಕಡೆ ಚಲಾಯಿಸಿದ್ದರು. ಹಿಂದಿನ ನಂಬರ್ ಪ್ಲೇಟ್‌ ಅನ್ನು ಬದಲಿಸಿದ್ದರು ಮತ್ತು ಮುಂದಿನದ್ದನ್ನು ಕಾಣದ ಹಾಗೆ ತಿರುಚಿದ್ದರು. ಕೆಲ ಸಮಯ ಸುಮ್ಮನೆ ಅಡ್ಡಾಡಿ ಸಮಯ ಕಳೆದಿದ್ದರು ಎಂದು ಸಿಬಿಐ ಹೇಳಿದೆ.
ಧನಬಾದ್ ಪೊಲೀಸರು ಆರಂಭದಲ್ಲಿ ತನಿಖೆ ನಡೆಸಿ ನಂತರ ಸಿಬಿಐಗೆ ಒಪ್ಪಿಸಿದ್ದರು. ಆರೋಪಿಗಳು ಉದ್ದೇಶಪೂರ್ವಕವಾಗಿ ಜಡ್ಜ್‌ ಮೇಲೆ ಆಟೋ ಹರಿಸಿದ್ದಾರೆ. ನಂತರ ನಿಲ್ಲಿಸದೇ ಅದೇ ವೇಗದಲ್ಲಿ ಮುಂದುವರೆದಿದ್ದಾರೆ. ಮುಂದೆ ಒಬ್ಬ ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಆತನಿಗೆ ಗುದ್ದದೆ ಬಲಕ್ಕೆ ಆಟೋ ಚಲಾಯಿಸಿದ್ದಾರೆ. ಅಂದರೆ ಅವರು ಮಾನಸಿಕವಾಗಿ ಸ್ಥಿಮಿತದಲ್ಲಿದ್ದಾರೆ ಮತ್ತು ಬೇಕಂತಲೇ ಈ ಕೃತ್ಯ ಎಸಗಿಸಿದ್ದಾರೆ ಎಂದು ಸಿಬಿಐ ಹೇಳಿದೆ. ಆದರೆ ಯಾವ ಕಾರಣಕ್ಕಾಗಿ ಕೊಂದರು ಎಂಬುದನ್ನು ಬಹಿರಂಗಪಡಿಸಿಲ್ಲ.
ಈ ಮೊದಲು ಜಾಮೀನು ನಿರಾಕರಿಸಿದ ಕಾರಣಕ್ಕೆ ನ್ಯಾಯಾಧೀಶರ ಕೊಲೆಯಾಗಿದೆ ಎಂದು ಶಂಕಿಸಲಾಗಿತ್ತು. ಸುಪ್ರೀಂ ಕೋರ್ಟ್ ಸುಮೋಟೊ ಪ್ರಕರಣ ದಾಖಲಿಸಿತ್ತು.
ಸಡಗರ, ಸಂಭ್ರಮ, ಸಂಪ್ರದಾಯದ ತ್ರಿವೇಣಿ ಸಂಗಮವೇ ಮೈಸೂರು ದಸರಾ | Mysuru Dasara 2020: Colourful Lighting In Mysuru City - Kannada Oneindia
11 min ago ಡಿ.ಜೆ.ಹಳ್ಳಿ ಗಲಭೆ: ಐದು ದಿನಗಳ ಸಿಸಿಬಿ ಪೊಲೀಸರ ವಶಕ್ಕೆ ಮಾಜಿ ಕಾರ್ಪೋರೇಟರ್ ಜಾಕೀರ್ !
20 min ago ಕರ್ನಾಟಕದಲ್ಲಿ ಈವರೆಗೂ 853461 ಕೊವಿಡ್-19 ಸೋಂಕಿತರು ಗುಣಮುಖ
22 min ago ಚೀನಾದ ಮೇಲೆ ಪಾಕಿಸ್ತಾನದ ಅವಲಂಬನೆ: ರಾಜನಾಥ್ ಸಿಂಗ್ ವ್ಯಂಗ್ಯ
| Updated: Sunday, October 25, 2020, 9:46 [IST]
ಮೈಸೂರು, ಅಕ್ಟೋಬರ್ 25: ಮೈಸೂರು ದಸರಾ ಎಂದರೆ ಅದು ಸಡಗರ-ಸಂಭ್ರಮ, ಸಂಪ್ರದಾಯದ ತ್ರಿವೇಣಿ ಸಂಗಮ. ವರ್ಷಪೂರ್ತಿ ತಮ್ಮದೇ ಆದ ಜಂಜಾಟದಲ್ಲಿ ಮುಳುಗಿ ಹೋದವರು ಎಲ್ಲವನ್ನು ಬದಿಗೊತ್ತಿ ತಮ್ಮವರೊಂದಿಗೆ ಬೆರೆತು ಖುಷಿಪಡುವ ಸಮಯ.
ಈ ಬಾರಿಯ ದಸರಾದ ಕೊನೆಯ ಘಟ್ಟವಾದ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದರೆ, ಇತ್ತ ನವರಾತ್ರಿಯ ಸಡಗರವೂ ಮನೆಮನವನ್ನು ತುಂಬಿದೆ. ಅರಮನೆ ಸೇರಿದಂತೆ ಇಡೀ ಮೈಸೂರು ರಾತ್ರಿಯಾಗುತ್ತಿದ್ದಂತೆಯೇ ವಿದ್ಯುದ್ದೀಪದಲ್ಲಿ ಬೆಳಗುತ್ತಿದ್ದು, ದೇವೇಂದ್ರನ ಅಮರಾವತಿಯೇ ಧರೆಗಿಳಿದು ಬಂದಿದೆಯಾ ಎಂಬಂತೆ ಭಾಸವಾಗುತ್ತಿದೆ. ಆಚರಣೆಯಲ್ಲಿ ಅದ್ಧೂರಿತನವಿಲ್ಲದೆ ಸರಳವಾಗಿದ್ದರೂ ಸಂಪ್ರದಾಯದಂತೆ ದಸರಾ ನಡೆಯುತ್ತಿದೆ. ಸರಳ ದಸರಾದ ಕೊರಗನ್ನು ದೀಪಾಲಂಕಾರ ಹೋಗಲಾಡಿಸಿದೆ. ಹೀಗಾಗಿ ನಗರದಲ್ಲಿ ಒಂದಷ್ಟು ಮಂದಿ ಬೆಳಕಿನ ದಸರಾದಲ್ಲಿ ಮಿಂದೇಳುತ್ತಿದ್ದಾರೆ.
ಜಂಬೂಸವಾರಿಗೆ ದಿನಗಣನೆ ಆರಂಭ
ದಸರಾ ದಿನಗಳಲ್ಲಿ ವಿದ್ಯುತ್ ದೀಪದ ಬೆಳಕಿನಲ್ಲಿ ಮಿನುಗುವ ಮೈಸೂರು ನಗರಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅಷ್ಟೇ ಅಲ್ಲ ಈ ನೋಟ ಎಲ್ಲರ ಮೈಮನವನ್ನು ಪುಳಕಗೊಳಿಸುತ್ತಿದೆ. ಇನ್ನೊಂದೆಡೆ ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ಅರಮನೆ ಆವರಣದಲ್ಲಿ ಸರಳವಾಗಿ ಜಂಬೂಸವಾರಿ ನಡೆಯುತ್ತಿದ್ದು, ಇದೀಗ ಜಂಬೂಸವಾರಿಯ ಅಂತಿಮ ತಾಲೀಮು ಕೂಡ ಮುಗಿದಿದೆ. ಅಂಬಾರಿ ಹೊರಲು ಅಭಿಮನ್ಯು ಸಿದ್ಧನಾಗಿದ್ದಾನೆ. ಈತನಿಗೆ ಕುಮ್ಕಿ ಆನೆಗಳಾಗಿ ವಿಜಯ ಮತ್ತು ಕಾವೇರಿ ಜತೆಗೆ ಹೆಜ್ಜೆ ಹಾಕಿದರೆ, ನಿಶಾನೆ ಆನೆಯಾಗಿ ಗೋಪಿ ಹೆಜ್ಜೆ ಹಾಕಿದರೆ ಅರಮನೆಯ ಪಟ್ಟದ ಆನೆಯಾಗಿ ಧಾರ್ಮಿಕ ಕೈಂಕರ್ಯಗಳನ್ನು ವಿಕ್ರಮ ನಡೆಸಿಕೊಡಲಿದ್ದಾನೆ.
ಎರಡೇ ಎರಡು ಸ್ತಬ್ಧ ಚಿತ್ರ
ಇನ್ನು ಜಂಬೂಸವಾರಿಯ ಮೆರವಣಿಯಲ್ಲಿ ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅರಮನೆ ವೈಭವದ ಸ್ತಬ್ಧಚಿತ್ರ ಮತ್ತು ಆರೋಗ್ಯ ಇಲಾಖೆಯಿಂದ ಕೋವಿಡ್-19 ಜಾಗೃತಿ ಸ್ತಬ್ಧ ಚಿತ್ರ ಹೀಗೆ ಕೇವಲ ಎರಡು ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಇದಲ್ಲದೆ ಎಂದಿನಂತೆ ಅಶ್ವರೋಹಿದಳ, ಪೊಲೀಸ್ ಬ್ಯಾಂಡ್, ಪೊಲೀಸ್ ಕವಾಯತ್ ಮತ್ತು ಸೀಮಿತ ಕಲಾತಂಡದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಆದರೆ ಈ ಜಂಬೂಸವಾರಿ ವೀಕ್ಷಿಸಲು ಅರಮನೆ ಆವರಣಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ನೇರ ಪ್ರಸಾರದಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಹಿಂದಿನ ದಸರಾದ ಸಂಭ್ರಮ ಕಾಣುತ್ತಿಲ್ಲ
ಹಿಂದಿನ ವರ್ಷಗಳಲ್ಲಿದ್ದ ದಸರಾದ ಯಾವ ಸಂಭ್ರಮವೂ ಈ ಸಲ ಕಾಣುತ್ತಿಲ್ಲ. ಸಾಮಾನ್ಯವಾಗಿ ಮೈಸೂರು ದಸರಾ ಎಂದರೆ ಸಡಗರ, ಸಂಭ್ರಮ ಮನೆ ಮಾಡುತ್ತಿತ್ತು. ರೈತರು, ಮಹಿಳೆಯರು, ಯುವಕರು, ಯುವತಿಯರು ಹೀಗೆ ಎಲ್ಲರಿಗೂ ದಸರಾದಲ್ಲಿ ಪಾಲ್ಗೊಳ್ಳುವ, ಮಿಂಚುವ ಮಹಾ ಸಡಗರದಲ್ಲಿರುತ್ತಿದ್ದರು. ಒಂದು ಕಡೆ ಯುವ ಮನಸ್ಸುಗಳಿಗೆ ಲಗ್ಗೆಯಿಡುವ ಯುವ ದಸರಾ ಮನ ತಣಿಸುತ್ತಿತ್ತು. ಮತ್ತೊಂದೆಡೆ ಬೋಜನ ಪ್ರಿಯರಿಗೆ ವಿವಿಧ ಖಾದ್ಯಗಳನ್ನು ಉಣಬಡಿಸುತ್ತಾ ಬಾಯಿ ಚಪ್ಪರಿಸುವಂತೆ ಆಹಾರ ಮೇಳ ನಡೆಯುತ್ತಿತ್ತು. ಇದಲ್ಲದೆ, ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಮಾಡುತ್ತಿತ್ತು. ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆಯುತ್ತಿದ್ದವು.
ಎಲ್ಲೆಂದರಲ್ಲಿ ಅಡ್ಡಾಡಲು ಕೊರೊನಾ ಭಯ
ನವರಾತ್ರಿಯ ದಿನಗಳಲ್ಲಿ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರುತ್ತಿದ್ದ ಜನ ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಂಡು ಹೋಗುತ್ತಿದ್ದರು. ಈ ಬಾರಿ ಅದ್ಯಾವುದು ಇಲ್ಲ. ಎಲ್ಲೆಂದರಲ್ಲಿ ತಿನ್ನುವಂತಿಲ್ಲ, ಕುಡಿಯುವಂತಿಲ್ಲ. ಜತೆಗೆ ಜನರ ಮಧ್ಯೆ ಓಡಾಡಲೂ ಭಯವಾಗುತ್ತಿದೆ. ಕಾರಣ ಕೊರೊನಾ ಮಹಾಮಾರಿ ಇನ್ನಿಲ್ಲದೆ ಕಾಡುತ್ತಿದೆ. ಒಂದಷ್ಟು ತಿಳಿದವರು ಈ ಬಾರಿಯ ದಸರಾದ ಸಹವಾಸವೇ ಬೇಡವೆಂದು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕೆಲವರು ಎಚ್ಚರಿಕೆ ವಹಿಸಿಕೊಂಡು, ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡು ದಸರಾ ಬೆಳಕು ನೋಡಲು ಬರುತ್ತಿದ್ದರೆ ಮತ್ತೆ ಕೆಲವರು ಎಲ್ಲವನ್ನು ಮರೆತು ಅಡ್ಡಾಡುತ್ತಿದ್ದಾರೆ.
mysuru dasara mysuru palace lighting jamboo savari mysuru ಮೈಸೂರು ದಸರಾ ಮೈಸೂರು ಅರಮನೆ ಬೆಳಕು ಮೈಸೂರು
The whole of Mysore, including the palace, was illuminating by the lighting and felt like Devendra's Amaravthi
ಸಟ್ವಾಡಿ: ನಿವೇಶನಕ್ಕಾಗಿ ದಲಿತರ ಹಕ್ಕೊತ್ತಾಯ | Prajavani
ಸಟ್ವಾಡಿ: ನಿವೇಶನಕ್ಕಾಗಿ ದಲಿತರ ಹಕ್ಕೊತ್ತಾಯ
Published: 06 ಅಕ್ಟೋಬರ್ 2017, 14:15 IST
Updated: 06 ಅಕ್ಟೋಬರ್ 2017, 14:15 IST
ಕುಂದಾಪುರ: ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ಎರಡು ಗುಂಪಿನ ನಡುವೆ ನಡೆದ ಹಕ್ಕೊತ್ತಾಯದ ಚರ್ಚೆ ವಿಕೋಪಕ್ಕೆ ತಿರುಗುವುದನ್ನು ತಡೆಯಲು ಮುಂದಾದ ಕಂದಾಯ ಹಾಗೂ ಪೊಲೀಸ್‌ ಇಲಾಖೆಗಳ ಪ್ರಯತ್ನದಿಂದ ಸಮಸ್ಯೆಗೆ ತಾತ್ಕಾಲಿಕ ವಿರಾಮ ದೊರಕಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಘಟನೆಯ ವಿವರ: ಇಲ್ಲಿಗೆ ಸಮೀಪದ ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಟ್ವಾಡಿ ಎಂಬಲ್ಲಿನ ಸರ್ವೇ ನಂಬರ್‌152/2ರಲ್ಲಿ ಇರುವ 24 ಎಕರೆ ಖಾಲಿ ಜಾಗದಲ್ಲಿ ನಿವೇಶನಕ್ಕೆ ಅವಕಾಶ ನೀಡಿ ಎಂದು ದಲಿತ ಸಮು ದಾಯದವರು ಬುಧವಾರ ಟೆಂಟ್‌ ನಿರ್ಮಿಸಿ ಭೂಮಿಗಾಗಿ ಹಕ್ಕೊತ್ತಾಯ ಮಾಡಿದ್ದರು.
'ಮೂಡ್ಲಕಟ್ಟೆ ರೈಲ್ವೆ ಸ್ಟೇಶನ್ ಬಳಿ ಇರುವ ಈ ಜಾಗಕ್ಕಾಗಿ ಆಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದೇವೆ' ಎನ್ನುವ ಕೆಲವರು ಈ ಕ್ರಮದ ಕುರಿತು ಆಕ್ಷೇಪ ವ್ಯಕ್ತಪಡಿ ಸಿದ್ದರು. ಬುಧವಾರ ಮಧ್ಯಾಹ್ನದ ಬಳಿಕ ಎರಡು ಕಡೆಯವರ ನಡುವೆ ಹಕ್ಕೊತ್ತಾಯದ ಕುರಿತು ನಡೆದ ಚರ್ಚೆ ಹಾಗೂ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಿಳಿದ ಕುಂದಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದರು.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಡಿವೈಎಸ್‌ಪಿ ಪ್ರವೀಣ್‌ ಎಚ್‌. ನಾಯಕ್‌ ಅವರ ಸೂಚನೆಯಂತೆ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ರಾತ್ರಿ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಜಿ.ಎಂ.ಬೋರ್ಕರ್‌ ಎರಡು ಕಡೆಯವರ ಅಹವಾಲು ಆಲಿಸಿ ಸಮಸ್ಯೆಯ ಕುರಿತು ಪರಿಹಾರ ನೀಡುವ ಭರವಸೆ ವ್ಯಕ್ತಪಡಿಸಿ, ಯಥಾ ಸ್ಥಿತಿ ಕಾಯ್ದುಕೊಳ್ಳಲು ಮನವೂಲಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ.
ಪೊಲೀಸ್‌ ಇಲಾಖೆ ಮುಂಜಾ ಗ್ರತ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್‌ ಪಹರೆ ನಿಯೋಜಿಸಿದೆ. ಕೆಲ ದಿನಗಳ ಹಿಂದೆ ಈ ಸರ್ಕಾರಿ ಈ ಜಾಗದಲ್ಲಿ ದಲಿತರು ಬಂದು ಕೂರುತ್ತಾರೆ ಎನ್ನುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿಗಳು ತೆಂಗು, ಬಾಳೆ ನಾಟಿ ಮಾಡಿದ್ದರು. ಹಕ್ಕೊತ್ತಾಯಕ್ಕಾಗಿ ಬಂದಿದ್ದವರು ಈ ಸ್ಥಳದಲ್ಲಿಯೇ ಶೆಡ್ ನಿರ್ಮಿಸಿದ್ದರು.
ಹಿಂದೆ ಕೋಣಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಇದ್ದ ಈ ಜಾಗದಲ್ಲಿ ನಿವೇಶನಕ್ಕಾಗಿ ಸಾಕಷ್ಟು ಜನ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂ ಡಿರಲಿಲ್ಲ. ಹೊಸದಾಗಿ ಉದಯಿಸಿದ ಕಂದಾವರ ಪಂಚಾಯಿತಿ ವ್ಯಾಪ್ತಿಗೆ ಈ ಜಾಗ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕೆಲ ದಿನದ ಹಿಂದೆ 70 ಜನ ನಿವೇಶನ ರಹಿತರು ಕಂದಾವರ ಗ್ರಾಮ ಪಂಚಾ ಯಿತಿಗೆ ಅರ್ಜಿ ಸಲ್ಲಿಸಿದ್ದರು.
'ತಲೆತಲಾಂತರದಿಂದ ಜೀತದಾಳು ಗಳಾಗಿ ದುಡಿಯುತ್ತಿದ್ದ ದಲಿತ ವರ್ಗಕ್ಕೆ ಸ್ವಂತ ಜಾಗವಿಲ್ಲ. ವ್ಯವಸ್ಥೆ ಉಳ್ಳವರ ಪರವಾಗಿ ನಿಲ್ಲುತ್ತದೆ. ಸರ್ಕಾರಿ ಖಾಲಿ ಭೂಮಿಯಲ್ಲಿ ನಿವೇಶನ ನೀಡಲು ಅರ್ಜಿ ಸಲ್ಲಿಸಿದ್ದರೂ, ಸಕಾಲಿಕ ಕ್ರಮ ವಾಗದ ಹಿನ್ನೆಲೆಯಲ್ಲಿ ದಲಿತರು ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡಿ ಕೂರು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಹೇಳಿದ್ದಾರೆ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ)ಯ ಸಂಚಾಲಕ ಉದಯ್‌ ಕುಮಾರ ತಲ್ಲೂರ್‌. 'ಅಧಿಕಾರಿಗಳು ಸರ್ಕಾರಿ ಜಾಗದಲ್ಲಿ ಸೈಟ್‌ ಮಾಡಿ ವಿತರಣೆ ಮಾಡುವ ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ' ಎಂದು ಅವರು ಹೇಳಿದ್ದಾರೆ.
ಪೊಲೀಸರ ಕೈಯಲ್ಲಿ ಲಾಠಿ ಬದಲು ಪೊರಕೆಯಿಂದ ಪರಿಸರ ಸ್ವಚ್ಛತಾ ಕಾರ್ಯ - Public Tv
ಯಾದಗಿರಿ: ಖಾಕಿ ಬಟ್ಟೆ ಧರಿಸಿ ಕೈಯಲ್ಲಿ ಲಾಠಿ ಹಿಡಿದುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಖಾಕಿ ಪಡೆ ಇಂದು ಪೊರಕೆ ಹಿಡಿದು ಸ್ವಚ್ಛತಾ ಕಾಳಜಿ ಮೆರೆದಿದ್ದಾರೆ.
ಹೌದು, ಯಾದಗಿರಿ ನಗರದ ವಿವಿಧೆಡೆ ಪೊಲೀಸರು ಕೈಯಲ್ಲಿ ಪೊರಕೆ ಹಿಡಿದು ಚರಂಡಿ, ರಸ್ತೆ ಮೇಲಿದ್ದ ರಾಶಿ ರಾಶಿ ಕಸವನ್ನು ತೆಗೆದು ನಗರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಅಷ್ಟೇ ಅಲ್ಲದೇ ನಗರದ ಜನರಿಗೆ, ಸ್ವಚ್ಛತೆ ಕಾಳಜಿ ಪ್ರತಿಯೊಬ್ಬರು ತೊರಬೇಕು, ಪ್ರತಿಯೊಬ್ಬರು ಸ್ವಚ್ಛತಾ ಕಾಳಜಿ ವಹಿಸಿದರೆ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯವೆಂದು ಸಂದೇಶ ಸಾರಿದರು.
ನಿತ್ಯವು ಆರೋಪಿಗಳನ್ನು ಹುಡುಕುವುದು, ಭದ್ರತೆಗೆಂದು ಲಾಠಿ ಹಿಡಿದುಕೊಂಡು ಖಾಕಿ ಪಡೆಗಳು ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಇಂದು ಕರ್ತವ್ಯದ ಜಂಜಾಟ ಬಿಟ್ಟು ಪೊಲೀಸರು ಬೆಳ್ಳಂಬೆಳಗ್ಗೆ ಪೊರಕೆ ಹಿಡಿದು ಚರಂಡಿ ಸ್ವಚ್ಛತೆ ಮಾಡಿದರು. ಯಾದಗಿರಿಯ ಎಸ್‍ಪಿ ಯಡಾ ಮಾರ್ಟಿನ್ ನೇತೃತ್ವದಲ್ಲಿ ಈ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ಯಾದಗಿರಿ ಎಸ್ಪಿ ಯಡಾ ಮಾರ್ಟಿನ್, ಡಿವೈಎಸ್ಪಿ ಪಾಂಡುರಂಗ, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ವೈದ್ಯರು ಕೂಡ ಖಾಕಿ ಪಡೆಗಳ ಜೊತೆ ಕೈಜೋಡಿಸಿದರು. ನಗರದ ಸುಭಾಷ್ ವೃತ್ತ, ಚಿತ್ತಾಪುರ ರಸ್ತೆ, ಹಳೆ ಬಸ್ ನಿಲ್ದಾಣ ಹಾಗೂ ಮೊದಲಾದ ಕಡೆ ಸ್ವಚ್ಛ ಮಾಡಿದರು. ಖುದ್ದು ಎಸ್ಪಿ ಯಡಾ ಮಾರ್ಟಿನ್ ಅವರು ಚರಂಡಿ ಹಾಗೂ ರಸ್ತೆ ಬದಿ ಇದ್ದ ತ್ಯಾಜ್ಯವನ್ನು ಕೈಯಿಂದ ತೆಗೆದರು.
ಇಗೋ,ಇದರಲ್ಲಿ ಮುಂದಿದೆ… | ನಿಲುಮೆ