text
stringlengths
0
61.5k
ಮಂಜೇಶ್ವರ, ಅ.10: ಸೈನ್ಯದ ತರಬೇತಿಗಾಗಿ ಜಾಗಿಂಗ್ ಮಾಡುತ್ತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆ ಉಪ್ಪಳದಲ್ಲಿ ನಡೆದಿದೆ.
ಉಪ್ಪಳ ಸಮೀಪದ ಪತ್ವಾಡಿಯ ಜಯರಾಮ್ ಭಂಡಾರಿ ಎಂಬವರ ಪುತ್ರ ಪ್ರಣಾಮ್ ಶೆಟ್ಟಿ (26) ಎಂಬಾತ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ.
ಇಂದು ಬೆಳಗಿನ ಜಾವ ಜಾಗಿಂಗ್ ಗೆ ಹೋದ ಸಂದರ್ಭ ಪ್ರಣಾಮ್ ಶೆಟ್ಟಿ ಮೇಲೆ ಬೈಕ್ ನಲ್ಲಿ ಬಂದ ಮೂವರ ತಂಡ ಹಲ್ಲೆ ನಡೆಸಿ ಪರಾರಿಯಾಗಿದೆ ಎನ್ನಲಾಗಿದೆ. ಗಾಯಗೊಂಡ ಪ್ರಣಾಮ್ ಶೆಟ್ಟಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಳು ಎನ್‌ಸಿಸಿ ಕೆಡೆಟ್‌ಗಳಿಗೆ ಗಾಯ | Prajavani
ಏಳು ಎನ್‌ಸಿಸಿ ಕೆಡೆಟ್‌ಗಳಿಗೆ ಗಾಯ
ಕವಿವಿ ಶಾಲ್ಮಲಾ ಹಾಸ್ಟೆಲ್‌ನಲ್ಲಿ ಕುಸಿದ ನೀರಿನ ತೊಟ್ಟಿ
Published: 25 ಡಿಸೆಂಬರ್ 2012, 11:49 IST
Updated: 25 ಡಿಸೆಂಬರ್ 2012, 11:49 IST
ಧಾರವಾಡ: ಸುಮಾರು 44 ವರ್ಷಗಳ ಹಿಂದೆ ನಿರ್ಮಿಸಲಾದ ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಹಾಸ್ಟೆಲ್‌ನ ನೀರು ಸಂಗ್ರಹಾಗಾರದ ತೊಟ್ಟಿಯ ಮೇಲೆ ಹತ್ತಾರು ಎನ್‌ಸಿಸಿ ಕೆಡೆಟ್‌ಗಳು ನಿಂತುಕೊಂಡ ಪರಿಣಾಮ ತೊಟ್ಟಿಯ ಮೇಲ್ಭಾಗವು ಕುಸಿದು ಕೆಡೆಟ್‌ಗಳು ಅದರಲ್ಲಿಯೇ ಬಿದ್ದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಘಟನೆಯಲ್ಲಿ ಏಳು ಜನರಿಗೆ ಗಾಯವಾಗಿದೆ. ಸಿಮೆಂಟ್ ಜೊತೆ ಇದ್ದ ಕಬ್ಬಿಣದ ರಾಡ್‌ಗಳು ತರುಚಿದ ಪರಿಣಾಮ ಕೈ ಕಾಲುಗಳಿಗೆ ತರುಚಿದ ಗಾಯಗಳಾಗಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ವಿಶ್ವವಿದ್ಯಾಲಯದ ಆವರಣದಲ್ಲಿ ಕೆಲ ದಿನಗಳಿಂದ ಎನ್‌ಸಿಸಿ ತರಬೇತಿ ಶಿಬಿರ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಿದ 100 ವಿದ್ಯಾರ್ಥಿಗಳಿಗೆ ಈ ಹಾಸ್ಟೆಲ್‌ನಲ್ಲಿ ವಾಸ್ತವ್ಯಕ್ಕೆ ಅನುಮತಿ ನೀಡಲಾಗಿತ್ತು. ಬೆಳಿಗ್ಗೆ ಸರದಿಯಲ್ಲಿ ನಿಂತು ಎನ್‌ಸಿಸಿ ಕೆಡೆಟ್‌ಗಳು ಉಪಹಾರ ಹಾಕಿಸಿಕೊಳ್ಳುತ್ತಿದ್ದರು. ಕೆಲವರು ತಳಮಟ್ಟದಲ್ಲಿರುವ ಈ ಸಂಗ್ರಾಹಾಗಾರದ ಮೇಲೆ ನಿಂತಿದ್ದರು. ಮೊದಲೇ ಶಿಥಿಲಾವಸ್ಥೆ ತಲುಪಿದ್ದ ಇದು ಆ ವಿದ್ಯಾರ್ಥಿಗಳ ಭಾರವನ್ನು ತಡೆದುಕೊಳ್ಳಲಾರದೇ 6-7 ಅಡಿಗಳಷ್ಟು ಅಗಲ ಬಿರುಕು ಬಿಟ್ಟು ಕುಸಿದು ಬಿತ್ತು.
ಸಂಜೆ ಸ್ಥಳಕ್ಕೆ ಭೇಟಿ ನೀಡಿದ ವಿ.ವಿ.ಯ ಸ್ಥಾನಿಕ ಎಂಜಿನಿಯರ್ ಎಸ್.ಪಿ.ಬಗಲಿ, ವಾರ್ಡನ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ವಿದ್ಯಾರ್ಥಿಗಳನ್ನು ಇಲ್ಲಿಂದ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು. ತಕ್ಷಣವೇ ತೊಟ್ಟಿಯ ಮೇಲ್ಭಾಗವನ್ನು ಕಬ್ಬಿಣದ ಸರಳುಗಳಿಂದ ಮುಚ್ಚಲಾಯಿತು.
ಭಜನಾ ಸ್ಪರ್ಧೆ ಇಂದು
ನವಲಗುಂದ: ತಾಲ್ಲೂಕಿನ ಯಮನೂರ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಯುವಕ ಮಂಡಳದ ವತಿಯಿಂದ ಸವಾಲ್ ಜವಾಬ್ ಭಜನಾ ಸ್ಪರ್ಧೆಯನ್ನು ಇದೇ 25 ರಂದು ರಾತ್ರಿ 9.30 ಕ್ಕೆ ಬಸ್ ನಿಲ್ದಾಣದ ಹತ್ತಿರ ಹಮ್ಮಿಕೊಳ್ಳಲಾಗಿದೆ.
ಸವಣೂರಿನ ಚಿಕ್ಕಮರಳಿಹಳ್ಳಿ ಗ್ರಾಮದ ಮಾರುತಿ ಸೇವಾಭಾಯಿ ಭಜನಾ ಸಂಘ ಹಾಗೂ ಕಣವಿ ಹೊನ್ನಾಪುರದ ಮಾರುತಿ ಭಜನಾ ಸಂಘ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ.
ಭಾರತದಲ್ಲಿ ಕರೋನಾಗೆ ಮೊದಲ ಬಲಿ..! ಸತ್ಯ ಒಪ್ಪಿಕೊಳ್ಳಲು ಯಾಕಿಷ್ಟು ತಡ?
ನೆಗಡಿ, ಶೀತ, ಜ್ವರದಿಂದ ಬಳಲುತ್ತಿದ್ದರೆ ಅದು ಕರೋನಾ ಸೋಂಕಿನ ಮುಖ್ಯ ಲಕ್ಷಣಎಂದು ಎಲ್ಲಾ ಮಾಧ್ಯಮಗಳಲ್ಲೂ ಬಿತ್ತರ ಆಗುತ್ತಿದ್ದರೂ ಆ ವೈದ್ಯರು ಆದಷ್ಟು ಬೇಗನೇ ಆಸ್ಪತ್ರೆಗೆ ಸೇರಿಸಲು ಮನಸ್ಸು ಮಾಡಲಿಲ್ಲ ಯಾಕೆ..? ಮಾರ್ಚ್ 9ರಂದುಶಂಕಿತ ಕರೋನಾ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆಗೆ ಒಳಗಾದರೆ, ಮೂರು ದಿನಗಳಾದರೂ ವರದಿ ಬರುವುದಿಲ್ಲ ಎಂದರೆ, ನಮ್ಮಲ್ಲಿರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಆಕ್ರೋಶ ಹೊರಹಾಕುವುದು ಸಾಮಾನ್ಯ.
ವಿಶ್ವವ್ಯಾಪಿ ತನ್ನ ಆರ್ಭಟ ನಡೆಸುತ್ತಿರುವ ಕರೋನಾ ವೈರಸ್ ಭಾರತದಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ಅದರಲ್ಲೂ ನಮ್ಮ ಕರ್ನಾಟಕದ ಕಲಬುರಗಿ ಜಿಲ್ಲೆಯ ವೃದ್ಧರೊಬ್ಬರು ಮಾರಕ ಕರೋನಾ ವೈರಸ್ ದಾಳಿಗೆ ಬಲಿಯಾಗಿದ್ದಾರೆ. ಮುಸ್ಲಿಂ ಸಮುದಾಯದ ಧಾರ್ಮಿಕ ಕೇಂದ್ರಗಳಾದ ಮೆಕ್ಕಾ, ಮದೀನಕ್ಕೆ ತೆರಳಿದ್ದರು. ಜನವರಿ 29ಕ್ಕೆ ಸೌದಿಗೆ ತೆರಳಿದ್ದ 76 ವರ್ಷದ ವೃದ್ಧ ಫೆಬ್ರವರಿ 29ಕ್ಕೆ ಭಾರತಕ್ಕೆ ವಾಪಸ್ ಆಗಿದ್ದರು. ಹೈದ್ರಾಬಾದ್ ವಿಮಾನ ನಿಲ್ದಾಣದ ಮೂಲಕ ಆಗಮಿಸಿದ್ದ ಇವರಿಗೆ ಏರ್ಪೋರ್ಟ್‌ನಲ್ಲಿ ಸ್ಕ್ರೀನಿಂಗ್ ಮಾಡಲಾಗಿತ್ತು. ಶನಿವಾರ ವಾಪಸ್ ಆದ ಬಳಿಕ ಮಾರ್ಚ್ 6ರ ವೇಳೆಗೆ ನೆಗಡಿ, ಶೀತ, ಜ್ವರ ಕಾಣಿಸಿಕೊಂಡಿತ್ತು. ಕುಟುಂಬದ ವೈದ್ಯರಿಂದ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಯಾವಾಗ ರೋಗ ನಿಯಂತ್ರಣಕ್ಕೆ ಬಾರದೆ ಹೋಯಿತು, ಆಗ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು.
ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಲಾಗಿತ್ತು. ಆದರೆ ಪ್ರವಾಸದ ಬಗ್ಗೆ ಮಾಹಿತಿ ಪಡೆದುಕೊಂಡ ವೈದ್ಯರು, ಚಿಕಿತ್ಸೆ ನೀಡಲು ನಿರಾಕರಿಸಿ, ಹೈದ್ರಾಬಾದ್‌ಗೆ ರವಾನೆ ಮಾಡಿದ್ದರು. ಅಲ್ಲಿಯೂ ಸರಿಯಾದ ಚಿಕಿತ್ಸೆ ಸಿಗದೆ ಕಾರಣ ಪರದಾಡಿದ ಕುಟುಂಬಸ್ಥರನ್ನು, ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಸಂಪರ್ಕಿಸಿ ಜಿಮ್ಸ್‌ನಲ್ಲಿ ದಾಖಲು ಮಾಡುವಂತೆ ಸೂಚಿಸಿದರು. ಮಾರ್ಚ್ 11ರ ಬೆಳಗಿನ ಜಾವ ಜಿಮ್ಸ್ ಆಸ್ಪತ್ರೆಗೆ ವಾಪಸ್ ಬರಲಾಯ್ತು. ಅಷ್ಟರಲ್ಲಿ ವಯೋವೃದ್ಧ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದರು.
ಕಲಬುರಗಿಯಲ್ಲಿ 76 ವರ್ಷದ ವಯೋವೃದ್ಧ ಸಾವನ್ನಪ್ಪಿದ್ದ ವಿಚಾರ ಮಾರ್ಚ್ 11ರ ಮಧ್ಯಾಹ್ನದ ವೇಳೆಗೆ ಗೊತ್ತಾಗಿತ್ತು. ಮಾಹಿತಿ ಬಹಿರಂಗ ಆಗಲು ಕಾರಣ ಜಿಲ್ಲಾಧಿಕಾರಿಗಳು ತೆಗೆದುಕೊಂಡಿದ್ದ ಮುಂಜಾಗ್ರತಾ ಕ್ರಮ.ಕರೋನಾ ವೈರಸ್ ಶಂಕೆ ವ್ಯಕ್ತವಾಗಿದ್ದು, ಪರೀಕ್ಷೆಗಾಗಿ ಗಂಟಲ ದ್ರಾವಣವನ್ನು ಪರೀಕ್ಷಾಲಯಕ್ಕೆ ರವಾನೆ ಮಾಡಲಾಗಿದೆ ಎನ್ನುತ್ತಿದ್ದಂತೆ ಸೂಚನೆ ರವಾನಿಸಿದ ಜಿಲ್ಲಾಧಿಕಾರಿ, ಶಂಕಿತ ವ್ಯಕ್ತಿಯ ಅಂತಿಮ ವಿಧಿವಿಧಾನ ಮುಕ್ತಾಯವಾಗುವ ತನಕ ತಾಲೂಕು ವೈದ್ಯಾಧಿಕಾರಿ ಸ್ಥಳದಲ್ಲೇ ಇರಬೇಕೆಂದು ಆದೇಶ ಮಾಡಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದ ಹಾಗೆ ಉಲ್ಟಾ ಹೊಡೆದ ರಾಜ್ಯ ಸರ್ಕಾರ, 76 ವರ್ಷದ ವಯೋವೃದ್ಧ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅಸ್ತಮಾ ಕೂಡ ಅವರನ್ನು ಬಾಧಿಸುತ್ತಿತ್ತು. ಆ ಕಾರಣದಿಂದ ಸಾವನ್ನಪ್ಪಿದ್ದಾರೆ. ಅವರು ಸೌದಿಯಿಂದ ವಾಪಸ್ ಆಗಿದ್ದ ಕಾರಣಕ್ಕೆ ಶಂಕಿತ ಎಂದು ಗುರುತಿಸಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ನೋಡೋಣ ಎಂದು ಹೇಳಿಕೆ ನೀಡಿದ್ದರು. ಅಂತ್ಯಕ್ರಿಯೆಯಲ್ಲಿ ಅಧಿಕಾರಿಗಳೇ ಮುಂದೆ ನಿಂತು 10 ರಿಂದ 12 ಅಡಿ ಆಳದ ಗುಂಡಿ ತೋಡಿಸಿ (ಸಾಮಾನ್ಯವಾಗಿ 6 - 7 ಅಡಿ ಮಾತ್ರ) ಮೃತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲಾಗಿದೆ.
ಇನ್ನು ಆ ವ್ಯಕ್ತಿ ಜೊತೆ ಸಂಪರ್ಕ ಹೊಂದಿದ್ದ ಬರೋಬ್ಬರಿ 43 ಜನರನ್ನು ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಿ ತಪಾಸಣೆ ಮಾಡಲಾಗ್ತಿದೆ. ಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ ಬರೋಬ್ಬರಿ 400 ಬೆಡ್ ಐಸೋಲೇಟೆಡ್ ವಾರ್ಡ್ ಸ್ಥಾಪಿಸಲಾಗಿದೆ. ಆದರೂ ಸರ್ಕಾರ ಮಾತ್ರ ವರದಿ ಬಂದಿಲ್ಲ ಎನ್ನುವ ಏಕೈಕ ಕಾರಣಕ್ಕೆ ಕೋವಿಡ್ - 19ನಿಂದ ಸಾವನಪ್ಪಿದ ವೃದ್ಧನ ಬಗ್ಗೆ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಮಾರ್ಚ್ 11ರ ಮಧ್ಯಾಹ್ನ ಕೋವಿಡ್ 19ನಿಂದ ಕಲಬುರಗಿಯಲ್ಲಿ ವೃದ್ಧನೊಬ್ಬ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಹೊರ ಬೀಳುತ್ತಲೇ ರಾಜ್ಯ ಸರ್ಕಾರ 1 ವರ್ಷದ ಅವಧಿಗೆ ಹೊಸ ಕಾನೂನು ಜಾರಿ ಮಾಡಿದ್ದು (karnataka Epidemic Diseases, COVID-19 Regulations, 2020) ಕರ್ನಾಟಕ ಸಾಂಕ್ರಾಮಿಕ ರೋಗ ಕೋವಿಡ್ - 19 ನಿಯಂತ್ರಣ ಕಾಯ್ದೆ ಜಾರಿ ಮಾಡಲಾಗಿದೆ. ಒಂದು ವೇಳೆ ಕೋವಿಡ್ - 19 ಶಂಕಿತ ವ್ಯಕ್ತಿ ಚಿಕಿತ್ಸೆಗೆ ನಿರಾಕರಿಸಿದರೆ ಬಂಧಿಸಿ, ಚಿಕಿತ್ಸೆ ನೀಡುವುದು, ಸೋಂಕಿತ ವ್ಯಕ್ತಿ ವಾಸ ಮಾಡುವ ಇಡೀ ವಾರ್ಡ್, ಏರಿಯಾ, ಪಟ್ಟಣಕ್ಕೆ ದಿಗ್ಬಂಧನ ಹಾಕುವುದು ಸೇರಿದಂತೆ 13 ಅಂಶಗಳು ಸೇರಿಸಲಾಗಿದೆ. ಇದೆಲ್ಲವನ್ನೂ ನೋಡಿದರೆ, ಸರ್ಕಾರಕ್ಕೆ ಕೋವಿಡ್ 19ನಿಂದ ಸಾವನ್ನಪ್ಪಿರುವುದು ಖಚಿತವಾಗಿತ್ತಾ..? ಆದರೂ ಸರ್ಕಾರ ಬಹಿರಂಗವಾಗಿ ಒಪ್ಪಿಕೊಳ್ಳಲು ತಡಮಾಡಿದ್ದು ಯಾಕೆ..? ಎನ್ನುವ ಅನುಮಾನ ಕಾಡುತ್ತಿದೆ.
ಫೆಬ್ರವರಿ 29ರಂದು ಹೈದ್ರಾಬಾದ್ ಏರ್ಪೋರ್ಟ್ಗೆ ಬಂದು ಇಳಿದ ಬಳಿಕ ಕುಟುಂಬಸ್ಥರು ತೆರಳಿರುತ್ತಾರೆ. ಮನೆಗೆ ಕರೆದುಕೊಂಡು ಬರುವ ವೇಳೆ ಅದೆಷ್ಟು ಜನರನ್ನು ಭೇಟಿಯಾಗಿದ್ದರೋ ಈ ವೃದ್ಧ..? ಬಲ್ಲವರು ಯಾರು. ಸೌದಿಯಿಂದ ಬರುವಾಗ ಸೋಂಕು ಇರಲಿಲ್ಲ ಎಂದು ಒಪ್ಪಿಕೊಳ್ಳೋಣ. ಆದರೆ ಮಾರ್ಚ್ ಮೊದಲ ವಾರದಲ್ಲಿ ಕರೋನಾ ಆರ್ಭಟ ಜೋರಾಗಿತ್ತು. ವಿದೇಶದಿಂದ ವಾಪಸ್ ಆದವರ ಮೇಲೆ ನಾವು ನಿಗಾ ಇಡುತ್ತೇವೆ ಎಂದಿದ್ದರು. ಆದರೆ ಕಲಬುರಗಿಯ ಈ ವ್ಯಕ್ತಿ ಮೇಲೆ ಯಾಕೆ ನಿಗಾ ಇಟ್ಟಿರಲಿಲ್ಲ ಎನ್ನುವ ಪ್ರಶ್ನೆಯೂ ಉದ್ಬವವಾಗುತ್ತದೆ. ಮಾರ್ಚ್ 6ರಂದು ಫ್ಯಾಮಿಲಿ ಡಾಕ್ಟರ್ ಕರೆದುಕೊಂಡು ಬಂದು ತೋರಿಸಿದ್ದಾರೆ ಎನ್ನಲಾಗಿದೆ.
ನೆಗಡಿ, ಶೀತ, ಜ್ವರದಿಂದ ಬಳಲುತ್ತಿದ್ದರೆ ಅದು ಕರೋನಾ ಸೋಂಕಿನ ಮುಖ್ಯ ಲಕ್ಷಣ ಎಂದು ಎಲ್ಲಾ ಮಾಧ್ಯಮಗಳಲ್ಲೂ ಬಿತ್ತರ ಆಗುತ್ತಿದ್ದರೂ ಆ ವೈದ್ಯರು ಆದಷ್ಟು ಬೇಗನೇ ಆಸ್ಪತ್ರೆಗೆ ಸೇರಿಸಲು ಮನಸ್ಸು ಮಾಡಲಿಲ್ಲ ಯಾಕೆ..? ಅಷ್ಟೇ ಅಲ್ಲದೆ ಈಗ ಮೃತಪಟ್ಟಿರುವ ವ್ಯಕ್ತಿ ಜನಸಾಮಾನ್ಯ ಅಷ್ಟೇ ಅಲ್ಲ. ಮಸೀದಿಗಳ ಖಾಜಿಗಳ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮುಸ್ಲಿಂ ಧಾರ್ಮಿಕ ಕೇಂದ್ರವಾದ ಮೆಕ್ಕಾ, ಮದೀನಾಗೆ ಹೋಗಿ ಬಂದ ಬಳಿಕ ಅದೆಷ್ಟು ಮಂದಿ ಇವರನ್ನು ಮಾತನಾಡಿಸಲು ಆಗಮಿಸಿದ್ದು..? ಅವರಿಗೆಲ್ಲಾ ನಿಧಾನವಾಗಿ ಕರೋನಾ ದಾಳಿ ಎದುರಾದರೆ ಎದುರಿಸಲು ಸರ್ಕಾರ ಸಿದ್ಧವಾಗಿದೆಯೇ..? ಮಾರ್ಚ್ 9ರಂದು ಶಂಕಿತ ಕರೋನಾ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆಗೆ ಒಳಗಾದರೆ, ಮೂರು ದಿನಗಳಾದರೂ ಪರೀಕ್ಷಾ ವರದಿ ಬರುವುದಿಲ್ಲ ಎಂದರೆ, ನಮ್ಮಲ್ಲಿರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಆಕ್ರೋಶ ಹೊರಹಾಕುವುದು ಸಾಮಾನ್ಯವಾಗುತ್ತದೆ. 76 ವರ್ಷದ ವೃದ್ಧ ಕರೋನಾಗೆ ಬಲಿಯಾಗಿರುವುದು ಮುಗಿದ ಅಧ್ಯಾಯ. ಆದರೆ ಈ ವ್ಯಕ್ತಿ ಅದೆಷ್ಟು ಜನರನ್ನು ಭೇಟಿ ಮಾಡಿದ್ದರು..? ಯಾರಿಗೆಲ್ಲಾ ಕರೋನಾ ದಾಳಿ ಆಗಿರಬಹುದು ಎನ್ನುವ ಆತಂಕ ಎದುರಾಗಿದೆ. ಸರ್ಕಾರ ಸತ್ತ ದಿನವೇ ಶಂಕಿತನ ಸಾವು ಎಂಬುದನ್ನು ಘೋಷಣೆ ಮಾಡಿದ್ದರೆ, ಯಾವುದೇ ಅನುಮಾನ ಇರಲಿಲ್ಲ. ಆದ್ರೆ, ಇದೀಗ 3 ದಿನದ ಬಳಿಕ ಘೋಷಣೆ ಮಾಡಿರುವುದು ಸರ್ಕಾರದ ಕರೊನಾ ತಡೆಗಟ್ಟಲು ಯಾವ ರೀತಿ ತಂತ್ರಗಾರಿಕೆ ನಡೆಸಿದೆ ಎಂಬುದರ ಮೇಲೆ ಶಂಕೆ ಮೂಡುವಂತೆ ಮಾಡುತ್ತಿದೆ.
ಸ್ತ್ರೀ ರೂಪದ ಹನುಮನನ್ನು ಎಲ್ಲಾದರೂ ಕಂಡಿದ್ದೀರಾ? | ಸ್ತ್ರೀ ರೂಪದ ಹನುಮನನ್ನು ಎಲ್ಲಾದರೂ ಕಂಡಿದ್ದೀರಾ? Temple where Hanuman is worshipped in a female form - Kannada Nativeplanet
»ಸ್ತ್ರೀ ರೂಪದ ಹನುಮನನ್ನು ಎಲ್ಲಾದರೂ ಕಂಡಿದ್ದೀರಾ?
Published: Tuesday, April 3, 2018, 9:45 [IST]
ಚತ್ತೀಸ್‌ಗಡದ ರತನ್‌ಪುರ್‌ನಲ್ಲಿರುವ ಹನುಮಾನ್ ಮಂದಿರದಲ್ಲಿ ಹನುಮಾನ್‌ನ್ನು ಸ್ತ್ರೀ ರೂಪದಲ್ಲಿ ಪೂಜಿಸಲಾಗುತ್ತಿದೆ. ವಿಶ್ವದಲ್ಲೇ ಹನುಮಾನ್‌ನನ್ನು ಸ್ತ್ರೀ ರೂಪದಲ್ಲಿ ಪೂಜಿಸಲಾಗುವ ಏಕೈಕ ಮಂದಿರ ಇದಾಗಿದೆ.
ಮೂರ್ತಿಯ ಸ್ಥಾಪನೆಗೆ ಸಂಬಂಧಿಸಿದ ಕಥೆ
PC:Singhonkarnath
ಈ ಮಂದಿರದಲ್ಲಿ ಹನುಮಾನ್ ಸ್ರ್ತೀಯ ರೂಪದಲ್ಲಿ ಪೂಜಿಸಲ್ಪಡುವುದರ ಹಿಂದೆ . ಪ್ರಾಚೀನ ಕಾಲದಲ್ಲಿ ರತನ್‌ಪುರದಲ್ಲಿ ಒಬ್ಬ ಪ್ರಥ್ವಿ ದೇವಜ್ ಎನ್ನುವ ರಾಜನಿದ್ದ. ಆತ ಹನುಮಾನ್ ಭಕ್ತನಾಗಿದ್ದ. ರಾಜನಿಗೆ ಕುಷ್ಠರೋಗ ಕಾಣಿಸಿಕೊಳ್ಳುತ್ತದೆ. ಜೀವನದಲ್ಲಿ ನಿರಾಶನಾಗಿದ್ದ. ಆತನ ಕನಸಿನಲ್ಲಿ ಹನುಮಾನ್ ಬಂದು ತನಗೆ ಒಂದು ಮಂದಿರ ಕಟ್ಟಿಸುವ ಂತೆ ಹೇಳುತ್ತಾನೆ. ರಾಜ ಅದರಂತೆ ಮಂದಿರ ನಿರ್ಮಿಸುತ್ತಾನೆ.
ನಾರಿ ರೂಪದ ಪ್ರತಿಮೆ
ನಂತರ ಮತ್ತೆ ರಾಜನ ಕನಸಿನಲ್ಲಿ ಬಂದ ತನ್ನ ಪ್ರತಿಮೆಯನ್ನು ಮಹಾಮಾಯ ಕುಂಡದಿಂದ ತೆಗೆದು ಮಂದಿರದಲ್ಲಿ ಪ್ರತಿಷ್ಠಾಪಿಸುವಂತೆ ಹೇಳುತ್ತದೆ. ರಾಜ ಮಹಾಮಾಯ ಕುಂಡದಲ್ಲಿ ಹನುಮಾನ್‌ನ ಪ್ರತಿಮೆ ನೋಡಿದಾಗ ಆಶ್ಚರ್ಯ ಕಾದಿತ್ತು. ಆ ಪ್ರತಿಮೆ ನಾರಿ ರೂಪದಲ್ಲಿತ್ತು. ರಾಜ ಹನುಮಾನ್‌ನ ಆದೇಶದಂತೆ ಆ ನಾರಿ ರೂಪದ ಪ್ರತಿಮೆಯನ್ನು ಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾನೆ.
ಇಲ್ಲಿಯ ಮೂರ್ತಿ ಹೇಗಿದೆ?
ಹನುಮಾನ್‌ನ ಪ್ರತಿಮೆ ದಕ್ಷಿಣಮುಖಿಯಾಗಿದೆ. ಅವರ ಬಲ ಬದಿಯಲ್ಲಿ ಶ್ರೀ ರಾಮ ಹಾಗೂ ಎಡ ಬದಿಯಲ್ಲಿ ಲಕ್ಷ್ಮಣನ ಮೂರ್ತಿ ಇದೆ. ಹನುಮಾನ್‌ನ ಕಾಲ ಬಳಿ ಎರಡು ರಾಕ್ಷಸರಿದ್ದಾರೆ. ಈ ಪ್ರತಿಮೆಯನ್ನು ಸ್ಥಾಪನೆ ಮಾಡಿದ ನಂತರ ರಾಜ ತನ್ನ ರೋಗ ವಾಸಿಯಾಗುವಂತೆ ಹಾಗೂ ಪ್ರಜೆಗಳ ಮನೋಕಾಮನೆ ಈಡೇರಿಸುವಂತೆ ಕೋರುತ್ತಾನೆ. ಅದರಂತೆ ರಾಜನ ರೋಗ ವಾಸಿಯಾಯಿತು. ರಾಜನ ಇನ್ನೊಂದು ಬೇಡಿಕೆಯ ಈಡೇರಿಕೆಗಾಗಿ ಇಂದಿಗೂ ಈ ಹನುಮ ಭಕ್ತರ ಮನೋಕಾಮನೆಯನ್ನು ಈಡೇರಿಸುತ್ತಿದ್ದಾನೆ ಎನ್ನಲಾಗುತ್ತದೆ.
ರತನ್‌ಪುರ ತಲುಪುವುದು ಹೇಗೆ?
ಚತ್ತೀಸ್‌ಗಡ್ ಬಂದು ಅಲ್ಲಿಂದ ರತನ್‌ಪುರದಿಂದ ಸುಮಾರು 25 ಕಿ.ಮೀ ದೂರದಲ್ಲಿ ಬಿಲಾಸ್‌ಪುರವಿದೆ. ಇಲ್ಲಿಗೆ ಎಲ್ಲಾ ಪ್ರದೇಶಗಳಿಂದ ಸಾಕಷ್ಟು ರೈಲು, ಬಸ್ ದೊರೆಯುತ್ತದೆ.
ಸಮೀಪ ಇರುವ ಮಂದಿರಗಳು
ಈ ಮಂದಿರದ ಸಮೀಪ ಕಾಲ ಬೈರವ ಮಂದಿರವಿದೆ. ಇಲ್ಲಿನದ್ದು ಸುಮಾರು 9 ಫೀಟ್ ಎತ್ತರದ ಪ್ರತಿಮೆ. ಬಾಬಾ ಜ್ಞಾನಗಿರಿ ಈ ಮಂದಿರದ ನಿರ್ಮಾಣ ಮಾಡಿದ್ದರು. ಶ್ರೀ ಲಕ್ಷ್ಮೀ ದೇವಿ ಮಂದಿರವಿದೆ. ಇದೊಂದು ಐತಿಹಾಸಿಕ ಮಂದಿರವಾಗಿದೆ.
ದೇಶದ್ರೋಹಿಗಳ ಸದೆ ಬಡೆಯಿರಿ ·
ದೇಶದ್ರೋಹಿಗಳ ಸದೆ ಬಡೆಯಿರಿ
Chikkaballapur February 22, 2019 3:01 AM
ಶಿಡ್ಲಘಟ್ಟ: ಕಾಶ್ಮೀರದ ಪುಲ್ವಾಮಾದಲ್ಲಿ ಸ್ಪೋಟಕಗಳೊಂದಿಗೆ ಸಿಆರ್​ಪಿಎಫ್ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಹಲವು ಯೋಧರ ಹತ್ಯೆಗೆ ಕಾರಣವಾಗಿರುವ ಭಯೋತ್ಪಾದಕ ಕೃತ್ಯವನ್ನು ವಿರೋಧಿಸಿ ನಗರದ ವಿವಿಧ ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಕೊಹಿನೂರ್ ಟಿಪ್ಪು ತಾಲೀಂ ಮೈನಾರಿಟಿ ವೆಲ್​ಫೇರ್ ಟ್ರಸ್ಟ್​ನ ಅಂಜದ್ ಮಾತನಾಡಿ, ಸಿಆರ್​ಪಿಎಫ್ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಹಲವಾರು ಯೋಧರ ಹತ್ಯೆಗೆ ಕಾರಣವಾಗಿರುವ ಪಾಕಿಸ್ತಾನದ ಜೈಷ್ ಉಗ್ರ ಸಂಘಟನೆಯ ಭಯೋತ್ಪಾದಕ ಕೃತ್ಯ ಖಂಡನೀಯ. ಹುತಾತ್ಮ ಯೋಧ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ, ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಸಿಲ್ ಸಿಲಾ ಫೌಂಡೇಷನ್ ಅಧ್ಯಕ್ಷ ಮಹಮದ್ ಅಸದ್ ಮಾತನಾಡಿ, ದೇಶದೊಳಗೆ ಭಯೋತ್ಪಾದಕರನ್ನು ತಯಾರು ಮಾಡಿ ದೇಶದ ಏಕತೆ, ಸಾರ್ವಭೌಮತೆ ಮತ್ತು ಅಖಂಡತೆಗೆ ಸವಾಲು ಎಸಗಿ ದೇಶವನ್ನು ಒಡೆಯಲು ಯತ್ನಿಸುವ ದೇಶದ್ರೋಹಿಗಳನ್ನು ಸದೆ ಬಡೆಯಬೇಕು. ಸರ್ಕಾರದಿಂದ ಯೋಧರ ಕುಟುಂಬಗಳಿಗೆ ತಲಾ 5 ಕೋಟಿ ರೂ.ಯಂತೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸ್ ನಿಲ್ದಾಣ ಬಳಿ ಮಾನವ ಸರಪಳಿ ನಿರ್ವಿುಸಿ ಭಯೋತ್ಪಾದಕರ ವಿರುದ್ಧ ಘೊಷಣೆ ಕೂಗಿದರು. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು. ತಹಸೀಲ್ದಾರ್ ಎಸ್.ಅಜಿತ್​ಕುಮಾರ್ ರೈಗೆ ಮನವಿ ಸಲ್ಲಿಸಲಾಯಿತು. ಮದೀನಾ ಮಸೀದಿ ಅಧ್ಯಕ್ಷ ಎಚ್.ಎಸ್.ಫಯಾಜ್​ಸಾಬ್, ಜಾಮೀಯಾ ಮಸೀದಿ ಕಾರ್ಯದರ್ಶಿ ಹೈದರಲಿ, ಮುಖಂಡರಾದ ಅನ್ಸರ್​ಖಾನ್, ಅಕ್ರಂ ಮತ್ತಿತರರಿದ್ದರು.
pulvamaShidlaGhattaTerroristಶಿಡ್ಲಘಟ್ಟ
Previous Previous post: ತಾಪಂ ಸಭೆಗೆ 16 ಅಧಿಕಾರಿಗಳು ಗೈರು!
Next Next post: ಮತದಾನ ಸಂವಿಧಾನ ನೀಡಿರುವ ಹಕ್ಕು
ಈ ಆರುತಿಂಗಳ ಗರ್ಭಿಣಿಗೆ ಮಗಳನ್ನೂ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೋವು ಏನಿತ್ತು? 3,608 views
ಎಸ್​ಐ ದೇಹದಾರ್ಢ್ಯಕ್ಕೆ ಡಿಸಿಪಿ ಅಣ್ಣಾಮಲೈ ಫಿದಾ 3,395 views
ಫಾರಿನ್ ಸ್ಟಾರ್ಸ್ ನಿರ್ಗಮನ, ಐಪಿಎಲ್​ಗೆ ಸಂಕಟ!: ರಾಯಲ್ಸ್, ಸನ್​ರೈಸರ್ಸ್​ಗೆ ಹೆಚ್ಚಿನ ಸಂಕಷ್ಟ 2,589 views
ನಿಮ್ಮ ಪತ್ನಿ ಕೋಪವನ್ನೆಲ್ಲ ನನ್ನ ಮೇಲೆ ತೀರಿಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಿರಬೇಕಲ್ಲವೇ ಎಂದು ಕಿಲಾಡಿಯ ಕಾಲೆಳೆದ ಪ್ರಧಾನಿ 2,087 views
ಏನಿದು ನಾನ್​ಸೆನ್ಸ್​, ಸುಳ್ಳು ಸುದ್ದಿ ಹರಡಿ ಮಾನನಷ್ಟ ಪ್ರಕರಣ ದಾಖಲಿಸುವಂತೆ ಪ್ರೇರೇಪಿಸಬೇಡಿ 1,783 views
ದ್ವಿಶತಕ ಬಾರಿಸಿದ ಮೊದಲ ಬಾಂಗ್ಲಾ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾದ ಸೌಮ್ಯ ಸರ್ಕಾರ್​ 1,691 views
ನಿಮ್ಮ ವಿದೇಶಿ ಬೈಕ್​ ಜತೆ ಸೆಲ್ಫಿ ತೆಗೆದುಕೊಳ್ಳಲಾ ಎಂದು ಕೇಳಿದವರಿಗೆ ಒಪ್ಪಿಗೆ ನೀಡಿದ ಮಾಲೀಕ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ… 1,675 views
ಡ್ರೈವರ್ ಜೊತೆ ಓ-ಡೋಗಿ ಮದುವೆ,ಅ-ವಾoತರ ಮಾಡಿಕೊಂಡ ಕನ್ನಡ ನಟಿಯ ಮಗಳು!ಯಾರು ಗೊತ್ತಾ - indianspost.com
ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದು ಪುಟ್ನಂಜ. ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿ ಮೀನ ಮುಖ್ಯ ಪಾತ್ರಗಳಲ್ಲಿ ನಟಿಸಿ, ಪೋಷಕ ಪಾತ್ರಗಳಲ್ಲಿ ಹೆಸರಾಂತ ನಟ ಗೆಂಡೆತಿಮ್ಮ ಲೋಕೇಶ್, ನಟಿ ಉಮಾಶ್ರೀ, ನಟಿ ಕವಿತಾ, ಪೂಜಾ ಲೋಕೇಶ್ ಮುಂತಾದವರು ನಟಿಸಿದ್ದರು. ಈ ಸಿನಿಮಾದಲ್ಲಿ ಉಮಾಶ್ರೀ ಅವರ ಪುಟ್ಮಲ್ಲಿ ಪಾತ್ರ ಬಹಳ ಜನಪ್ರಿಯತೆ ಗಳಿಸಿತ್ತು. ಜೊತೆಗೆ ನಾಯಕಿಯ ತಾಯಿ ಪಾತ್ರದಲ್ಲಿ ನಟಿ ಕವಿತಾ ಅವರ ನೆ-ಗಟಿವ್ ಶೇಡ್ ಪಾತ್ರವನ್ನು ಕೂಡ ಎಲ್ಲರೂ ಬಹಳ ಇಷ್ಟಪಟ್ಟಿದ್ದರು. ನಟಿ ಕವಿತಾ ದಕ್ಷಿಣ ಭಾರತ ಪ್ರಮುಖ ನಟಿಯರಲ್ಲಿ ಒಬ್ಬರು. ತೆಲುಗು, ತಮಿಳು, ಕನ್ನಡ ಮತ್ತು ಕೆಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಮೂಲತಃ ಆಂಧ್ರ ಪ್ರದೇಶದವರು. ಕನ್ನಡದಲ್ಲಿ ಸಹೋದರರ ಸವಾಲ್, ಕಿಲಾಡಿ ಕಿಟ್ಟು, ಮಕ್ಕಳೆ ದೇವರು, ಪುಟ್ನಂಜ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಗೌರವಾನ್ವಿತ ನಟಿ ಎನಿಸಿಕೊಂಡಿದ್ದಾರೆ. ಆದರೆ ಇವರ ವೈಯಕ್ತಿಕ ಜೀವನದಲ್ಲಿ ಕವಿತಾ ಅವರ ಮಗಳು ಮಾಡಿದ ಒಂದು ಕೆಲಸವನ್ನ ಇಂದಿಗೂ ಈ ನಟಿ ಮರೆಯಲು ಸಾಧ್ಯವಿಲ್ಲ. ಕವಿತಾ ಅವರ ಮಗಳು ಮಾಡಿದ್ದೇನು ತಿಳಿಯಲು ಮುಂದೆ ಓದಿ…
ಕವಿತಾ ಅವರಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಮೊದಲ ಮಗಳು ಮಾಧುರ್ಯ, ಎರಡನೇ ಮಗಳು ಶ್ರಾವಂತಿ ಮತ್ತು ಮಗನ ಹೆಸರು ಸಾಯಿ ರೂಪ್. ಇವರ ಮೊದಲ ಮಗಳು ಮಾಧುರ್ಯ ತಾಯಿಗೆ ತಿಳಿಯದಂತೆ ಅವರ ಮನೆಯ ಕಾರ್ ಡ್ರೈವರ್ ರಾಜು ಜೊತೆ ಪ್ರೇಮಪಾಶದಲ್ಲಿ ಬಿ-ದ್ದು, ತಾಯಿಗೆ ಇಷ್ಟವಿಲ್ಲದಿದ್ದರೂ, ಓಡಿಹೋಗಿ ಡ್ರೈವರ್ ರಾಜು ಜೊತೆ ಕರೀಮ್ ನಗರದಲ್ಲಿ ಮದುವೆಯಾದರು. ತಮಗೆ ಇಷ್ಟವಿಲ್ಲದಿದ್ದರೂ ತಮ್ಮ ಮೊದಲ ಮಗಳು ಡ್ರೈವರ್ ಅನ್ನು ಮದುವೆಯಾದ ನೋವನ್ನು ನಟಿ ಕವಿತಾ ಎಂದಿಗೂ ಮರೆಯಲು ಸಾಧ್ಯವಿಲ್ಲ. ಮದುವೆಯಾದ ನಂತರ ಅವರ ಮಗಳ ಜೀವನ ಏನಾಯಿತು ಗೊತ್ತಾ.. ಮುಂದೆ ಓದಿ..
ಕವಿತಾ ಅವರ ಮಗಳು ಮಾಧುರ್ಯ ತಾಯಿಯ ಮಾತಿಗೆ ವಿರೋಧಿಸಿ ಡ್ರೈವರ್ ರಾಜು ಜೊತೆ ಮದುವೆಯಾದಳು, ಆಕೆ ಸುಖವಾಗಿಯಾದರು ಇದ್ದಾಳಾ ? ಇಲ್ಲ.. ಮದುವೆಯಾದ ನಂತರ ರಾಜುವಿನ ನಿಜ ಸ್ವರೂಪ ಬಯಲಾಯಿತು. ಆತನಿಗೆ ಮೊದಲೇ ಒಂದು ಮದುವೆಯಾಗಿ ಮಗು ಕೂಡ ಇತ್ತು. ಎರಡನೇ ಮದುವೆ ಆದ ನಂತರ, ಆತನ ಮೊದಲ ಹೆಂಡತಿ ಪೊಲೀಸ್ ಠಾಣೆಯಲ್ಲಿ ಆತನ ನಿಜ ರೂಪವನ್ನು ಬಯಲು ಮಾಡಿದಳು. ನಂತರ ತನ್ನ ತಪ್ಪಿನ ಅರಿವಾಗಿ ಮಾಧುರ್ಯ ತಾಯಿಯ ಬಳಿ ಮರಳಿ ಬಂದರು. ಮತ್ತೆ ಬಂದ ಮಗಳ ತಪ್ಪನ್ನು ಕ್ಷಮಿಸಿ ಮಗಳನ್ನು ಒಪ್ಪಿಕೊಂಡರು ನಟಿ ಕವಿತಾ. ಏನೇ ಆದರೂ ತಾಯಿ ಹೃದಯ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ.
ಇದಕ್ಕೆ ಹೇಳುವುದು, ತಂದೆ ತಾಯಿ ಹೇಳಿದ ಮಾತಿಗೆ ಎದುರಾಡಬಾರದು, ತಂದೆ ತಾಯಿ ಹೇಳುವುದು ಮಕ್ಕಳ ಒಳ್ಳೆಯದಕ್ಕೆ. ಅವರು ಮಾತು ನಮಗೆ ಕೆಲವೊಮ್ಮೆ ಇಷ್ಟವಾಗದೆ ಹೋಗಬಹುದು ಆದರೆ ದೊಡ್ಡವರು ಹೇಳುವುದು ನಮ್ಮ ಒಳ್ಳೆಯದಕ್ಕೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಸದ್ಯ ಹಿರಿಯ ನಟಿ ಕವಿತಾ ಅವರು ಕೆಲವು ತೆಲುಗು ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಾ ಬ್ಯುಸಿ ಆಗಿದ್ದಾರೆ. ಇದಲ್ಲದೆ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಬೇರೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.
ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಮುನ್ನ ಈ ಸುದ್ದಿ ಓದಿ | Dress code to be mandatory for entering sanctum of Varanasi's Kashi Vishwanath Temple - Kannada Oneindia
| Published: Monday, January 13, 2020, 11:19 [IST]
ವಾರಾಣಸಿ, ಜನವರಿ 13: ಉತ್ತರ ಪ್ರದೇಶದ ಶಾಲೆ, ಕಾಲೇಜುಗಳಲ್ಲಿ ಜೀನ್ಸ್, ಟೈಟ್ ಪ್ಯಾಂಟ್, ಟೀ ಶರ್ಟ್ ಧರಿಸುವುದನ್ನು ನಿರ್ಬಂಧಿಸಿರುವ ಸುದ್ದಿ ಗೊತ್ತಿರಬಹುದು. ಇತಿಹಾಸ ಪ್ರಸಿದ್ಧ ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಭಕ್ತರಿಗೆ ಮತ್ತೊಮ್ಮೆ ವಸ್ತ್ರಸಂಹಿತೆ ಹೇರಲಾಗಿದೆ.
ಮೈ ತೋರಿಸುವ ಬಟ್ಟೆ ಧರಿಸುವ ದೇಶಿ ಅಥವಾ ವಿದೇಶಿ ಮಹಿಳೆಯರಿಗೆ ಇನ್ನು ವಿಶ್ವನಾಥನ ದರ್ಶನಕ್ಕೆ ಪ್ರವೇಶವಿಲ್ಲ ಎಂದಷ್ಟೇ ದೇಗುಲದ ಪ್ರಕಟಣೆಯಲ್ಲಿ ಹೇಳಲಾಗಿದೆ. ಆದರೆ, ಸೀರೆ ಕಡ್ಡಾಯ ಎಂದು ಹೇಳಿಲ್ಲ. ಸಭ್ಯವಾದ ಡ್ರೆಸ್ ಧರಿಸಿ ದೇಗುಲ ಪ್ರವೇಶಿಸಬಹುದು ಎಂದು ಶ್ರೀಕಾಶಿ ವಿಶ್ವನಾಥ್ ಮಂದಿರ ನ್ಯಾಸ್ ಪರಿಷತ್ ನ ಮುಖ್ಯಸ್ಥ ಅಶೋಕ್ ದ್ವಿವೇದಿ ಈ ಹಿಂದೆ ಹೇಳಿದ್ದರು. ಆದರೆ, ಈಗ ಸೀರೆ ಕಡ್ಡಾಯಗೊಳಿಸಲಾಗಿದೆ ಎಂದು ಡಿಎನ್​ಎ ವರದಿ ಮಾಡಿದೆ.
ವಸ್ತ್ರ ಸಂಹಿತೆ, ಸಮವಸ್ತ್ರ ನೀತಿ ಜಾರಿ ಮಾಡಲು ಇದೇನು ಶಾಲೆ ಅಥವಾ ಕಾಲೇಜಲ್ಲ. ಇಲ್ಲಿನ ಸಂಸ್ಕೃತಿಗೆ ಅನುಗುಣವಾಗಿ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆ ಬರದಂಥ ಯಾವುದೇ ವಸ್ತ್ರವನ್ನಾದರೂ ಮಹಿಳೆಯರು ಹಾಗೂ ಪುರುಷರು ಧರಿಸಬಹುದು ಎಂದಿದ್ದಾರೆ.
ತಿರುಪತಿ ದೇವಾಲಯದಲ್ಲಿರುವಂತೆ ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಧೋತಿ ಕುರ್ತಾದ ವಸ್ತ್ರಸಂಹಿತೆ ಜಾರಿ ಮಾಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಅನೇಕ ಪ್ರಮುಖ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ಬಂದಿತು. ದೇಗುಲದ ಬಳಿ ವಸ್ತ್ರ ಬದಲಾವಣೆಗೆ ಸ್ಥಳಗಳನ್ನು ಗುರುತಿಸಿದ್ದು, ಆಸಕ್ತರು ಸೀರೆಯುಟ್ಟು ಬರಬಹುದು.ಇಲ್ಲದಿದ್ದರೆ ಯಾವುದೇ ಸಭ್ಯ ವಸ್ತ್ರ ಧರಿಸಿ ದೇಗುಲ ಪ್ರವೇಶಿಸಬಹುದು ಎಂದು ದೇಗುಲದ ಹೆಚ್ಚುವತಿ ಸಿಇಒ ಪಿಎನ್ ದ್ವಿವೇದಿ ತಿಳಿಸಿದ್ದಾರೆ.
ಸೀರೆಯಿಲ್ಲದೆ ಬಂದ ಭಕ್ತರಿಗೆ ದೇವಸ್ಥಾನದಿಂದಲೇ 100 ರೂ.ಗೆ ಸೀರೆಯನ್ನು ನೀಡಲಾಗುತ್ತದೆ. ದೇವಸ್ಥಾನದ ಬಳಿ ಇರುವ ರೂಂನಲ್ಲಿ ಉಡುಪು ಬದಲಾಯಿಸಿಕೊಂಡು ಭಕ್ತರು ದೇವರ ದರ್ಶನ ಪಡೆಯಬಹುದು. ಮಹಾಬಲೇಶ್ವರ ದೇವಸ್ಥಾನದಲ್ಲಿ ಪುರುಷರು ಜೀನ್ಸ್, ಬರ್ಮುಡಾ ಧರಿಸಿ ದೇವಾಲಯದೊಳಗೆ ಬರುವಂತಿಲ್ಲ, ಹೀಗೆ ಕೇರಳದ ಅನೇಕ ದೇಗುಲಗಳಲ್ಲೂ ವಸ್ತ್ರ ಸಂಹಿತೆ ಜಾರಿಯಲ್ಲಿದೆ.
dress code varanasi hindu temple ವಸ್ತ್ರ ಸಂಹಿತೆ ವಾರಣಾಸಿ ಹಿಂದೂ ದೇಗುಲ
Devotees visiting the Kashi Vishwanath Temple in Uttar Pradesh's Varanasi will now have to follow a dress code to enter the sanctum of the temple. Applicable for both men and women, the new rule makes it mandatory for men.
ಜಗನ್ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಆಗದಂತೆ ಸಕತ್ ಪ್ಲಾನ್ – Sri Tv Karnataka
May 25, 2021 May 25, 2021 Web DeskLeave a Comment on ಜಗನ್ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಆಗದಂತೆ ಸಕತ್ ಪ್ಲಾನ್
ಭಾರತದಲ್ಲಿ ಈಗ ಕೊರೊನಾದ ಎರಡನೇ ಅಲೆ ತೀವ್ರವಾಗಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಯಾವಾಗ ಕುಸಿತವಾಗುತ್ತದೆ ಎನ್ನುವ ಬಗ್ಗೆ ಅಂಕಿಅಂಶಗಳ ತಜ್ಞರು, ವಿಜ್ಞಾನಿಗಳು ಅಧ್ಯಯನ ನಡೆಸಿ ಮಾಹಿತಿ ನೀಡಿದ್ದಾರೆ. ಇನ್ನು ಭಾರತದಲ್ಲಿ ಕೊರೋನಾ 2ನೇ ಅಲೆಗೆ ಕಾರಣವಾಗಿರುವ ರೂಪಾಂತರಿ ಕೊರೊನಾ ವೈರಸ್‌ ಈ ಹಿಂದೆ ಪತ್ತೆ ಆದ ಕೊರೋನಾ ಪ್ರಭೇದಕ್ಕಿಂತ ಎರಡೂವರೆ ಪಟ್ಟು ಅಧಿಕ ವೇಗದಲ್ಲಿ ಸೋಂಕನ್ನು ಹರಡಲು ಕಾರಣವಾಗುತ್ತಿದೆ. ಒಬ್ಬ ವ್ಯಕ್ತಿಯಿಂದ ಮೂವರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ಸಂದರ್ಭದಲ್ಲಿ ಆಂಧ್ರಪ್ರದೇಶದಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗದಂತೆ ಜಗನ್ ಮೋಹನ್ ರೆಡ್ಡಿ ಅವರು ಅಲ್ಲಿನ ಜನತೆಗಾಗಿ ಉತ್ತಮ ಉಪಾಯ ಮಾಡಿದ್ದಾರೆ. ಜನಹಿತಕ್ಕಾಗಿ ಜಗನ್ ಮೋಹನ್ ರೆಡ್ಡಿ ತೆಗೆದುಕೊಂಡ ಆ ನಿರ್ಧಾರ ಏನು? ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ದೇಶದಾದ್ಯಂತ ಕೊರೊನಾ ಸೋಂಕು ಏರಿಕೆ ಬೆನ್ನಲ್ಲೇ ಆಕ್ಸಿಜನ್ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್​ಮೋಹನ್ ರೆಡ್ಡಿ ಖಡಕ್ ಆದೇಶವೊಂದನ್ನ ಹೊರಡಿಸಿದ್ದಾರೆ. ಜಗನ್ ಮೋಹನ್ ರೆಡ್ಡಿ ತನ್ನ ತಂದೆ ವೈಎಸ್ಆರ್ ಮರಣದ ನಂತರ ಕೂಡಾ ಜನಪರ ಕಾರ್ಯದಲ್ಲಿ ತನ್ನನ್ನು ತಾವು ತೊಡಗಿಸಿಕೊಂಡಿದ್ದರು. ತನ್ನ ತಂದೆಯ ಮರಣದ ಆರು ತಿಂಗಳ ನಂತರ ಅವರು ತಮ್ಮ ತಂದೆಯ ಮರಣದ ಸುದ್ದಿಯಿಂದ ಆತ್ಮಹತ್ಯೆ ಮಾಡಿಕೊಂಡ ಅಥವಾ ಅನಾರೋಗ್ಯಕ್ಕೆ ಒಳಗಾದವರ ಕುಟುಂಬಗಳಿಗೆ ಸಾಂತ್ವಾನ ಹೇಳಲು ಓದಾರ್ಪು ಯಾತ್ರೆ ಪ್ರಾರಂಭಿಸಿದ್ದನ್ನು ಮರೆಯುವ ಹಾಗಿಲ್ಲ. ಅದರಂತೆ ಈಗ ಜಗನ್ ಮೋಹನ್ ರೆಡ್ಡಿ ಮತ್ತೆ ಅಂದ್ರದ ಮುಖ್ಯಮಂತ್ರಿ ಆಗಿ ಅಲ್ಲಿನ ಜನತೆಗೆ ಸಾಕಶ್ಟು ರೀತಿಯ ಜನಪರ ಕಾರ್ಯಗಳನ್ನು ಮಾಡಿದ್ದಾರೆ.
ಕೋರೋನ ಮಹಾಮಾರಿಯಿಂದಾಗಿ ತನ್ನ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾದ ರಾಜ್ಯದ ಪ್ರತಿಯೊಬ್ಬ ಮಗುವಿನ ಹೆಸರಲ್ಲೂ ಹತ್ತು ಲಕ್ಷ ರೂಪಾಯಿ ಠೇವಣಿ ಇಡುವಂತೆ ಸಿಎಂ ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೊರೋನದಿಂದಾಗಿ ತಂದೆ ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳ ನೆರವಿದೆ ದೆಹಲಿ ಹಾಗೂ ಮಧ್ಯಪ್ರದೇಶ ತೆಗೆದುಕೊಂಡ ನಿರ್ಧಾರ ಇಡೀ ದೇಶದ ಗಮನ ಸೆಳೆದಿತ್ತು. ಸದ್ಯ ಇದೇ ವಿಚಾರವಾಗಿ ಆಂಧ್ರ ಪ್ರದೇಶ ಸರ್ಕಾರವೂ ದಿಟ್ಟ ಹೆಜ್ಜೆ ಇಟ್ಟಿದ್ದು ಈ ವಿಚಾರ ಇತ್ತೀಚೆಗೆ ಅಷ್ಟೇ ಸಾಕಷ್ಟು ವೈರಲ್ ಆಗಿತ್ತು. ಇದೇ ಹಿನ್ನಲೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರು ಇನ್ನೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಆಕ್ಸಿಜನ್ ಸಮಸ್ಯೆ ಎದುರಿಸುತ್ತಾ ಇರುವ ಜನರಿಗೆ ಆಕ್ಸಿಜನ್ ಕೊರತೆ ಉಂಟಾಗದ ಹಾಗೆ ಮಾಡಲು ಒಂದು ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ 50 ಬೆಡ್​​ಗಳಿಗಿಂತ ಹೆಚ್ಚಿರುವ ಪ್ರತಿಯೊಂದು ಕೋವಿಡ್​ ಆಸ್ಪತ್ರೆಯಲ್ಲೂ ಸಹ ಆಕ್ಸಿಜನ್​ ವಿಚಾರದಲ್ಲಿ 4 ತಿಂಗಳ ಒಳಗೆ ಸ್ವಾವಲಂಬಿಯಾಗಬೇಕು. ಎಲ್ಲಾ ಆಸ್ಪತ್ರೆಗಳೂ ಸಹ ಆಕ್ಸಿಜನ್ ಜನರೇಟರ್​ಅನ್ನು ಹೊಂದಿರಬೇಕು. ಪ್ರತಿಯೊಂದು ಆಸ್ಪತ್ರೆ ತನಗೆ ಬೇಕಾದಷ್ಟು ಆಕ್ಸಿಜನ್​ಅನ್ನು ತಾವೇ ತಯಾರಿಸಿಕೊಳ್ಳುವಂತೆ ಆಗಬೇಕು ಎಂದು ಸಭೆಯಲ್ಲಿ ಖಡಕ್ ಆದೇಶವನ್ನು ಹೊರಡಿಸಿದ್ದಾರೆ. ಮುಂದುವರೆದು ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಈ ಸೌಲಭ್ಯವನ್ನು ನೀಡಲಿದ್ದು ಖಾಸಗಿ ಆಸ್ಪತ್ರೆಗಳಿಗೆ ಧನಸಹಾಯ ಮಾಡಲಾಗುವುದು ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಈ ಮೂಲಕ ಆಂಧ್ರಪ್ರದೇಶದಲ್ಲಿ ಇನ್ನು ಮುಂದೆ ಆಕ್ಸಿಜನ್ ಸಮಸ್ಯೆ ಎದುರಾಗದ ಹಾಗೆ ಮಾಡುವ ಯೋಜನೆ ಮಾಡಿಕೊಂಡಿದ್ದಾರೆ ಅಲ್ಲಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು.
ಮೌಲ್ಯ... ಜನತಂತ್ರದ ಅಂತಃಸತ್ವ | Prajavani
ವಿದ್ಯಾಧರ ರೈ ಎಂ.ಆರ್., ಐವನ್ ಎಫ್. ಲೋಬೊ
ರಾಜ್ಯವು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿದೆ. ಚುನಾವಣಾ ರಾಜಕೀಯ ರಂಗವನ್ನು ವಿವಿಧ ರಾಜಕೀಯ ಪಕ್ಷಗಳು ಭಿನ್ನ ನಡೆ-ನುಡಿಗಳಲ್ಲಿ ರಂಗೇರಿಸುತ್ತಿವೆ. ಯಾರು ಕಡು ಭ್ರಷ್ಟರು? ಯಾರು ಮತ- ಸಂಸ್ಕೃತಿ ವಿರೋಧಿಗಳು? ಯಾರು ಕೊಲೆಗಡುಕರು? ಯಾರು ಸಾಲಮನ್ನಾ ಮಾಡಿಸಿದವರು? ಯಾರು ಭಾಗ್ಯಗಳ ಸರಮಾಲೆ ಹರಿಸಿದವರು?... ಈ ಕುರಿತ ಏರು ಧ್ವನಿಗಳು ಪ್ರಚಾರದ ಮುನ್ನೆಲೆಗೆ ಪ್ರವೇಶಿಸುತ್ತಿವೆ. ತೆರೆಮರೆಯಲ್ಲಿ ಈ ತೆರನಾದ ಪ್ರಚಾರದ ಅಬ್ಬರಗಳನ್ನು ಗಮನಿಸುತ್ತಿರುವ ಮತದಾರರಲ್ಲಿ, ಸಾಂವಿಧಾನಿಕ ಆಶಯಗಳ ಜಾಗೃತಿಯನ್ನು ಮೂಡಿಸುವುದು ಈಗಿನ ಅಗತ್ಯವಾಗಿದೆ.
ಚುನಾವಣಾ ಪ್ರಜಾತಂತ್ರಕ್ಕೆ ತಾತ್ವಿಕ ಮತ್ತು ವಾಸ್ತವಿಕ ಆಯಾಮಗಳಿವೆ. ಚುನಾವಣಾ ಪ್ರಜಾತಂತ್ರದ ತಾತ್ವಿಕತೆಯು ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೌಲ್ಯಗಳಿಗೆ ಮತ್ತು ವಿಧಾನಗಳಿಗೆ ಸಂಬಂಧಿಸಿದೆ. ಜನಸಾಮಾನ್ಯರು ಕ್ಷಣಿಕ ಭಾವಾವೇಶಗಳ ಸುಳಿಯಲ್ಲಿ ಸಿಲುಕದೆ, ಪ್ರಜ್ಞಾವಂತ ತೀರ್ಪುಗಾರರಾಗಿ ಮತ ಚಲಾಯಿಸಬೇಕು ಎನ್ನುವುದು ಇದರ ಆಶಯ. ನಿಯಮಿತಚುನಾವಣೆಗಳಿಂದ ಜನರಿಗೆ ಆಡಳಿತ ವ್ಯವಸ್ಥೆಯಲ್ಲಿ ನಂಬಿಕೆ ಬೆಳೆದು ಸ್ವ–ಆಡಳಿತದ ಸಾಮರ್ಥ್ಯ ಬೆಳೆಯಬೇಕೆನ್ನುವುದು ಚುನಾವಣಾ ಪ್ರಜಾತಂತ್ರದ ಆದರ್ಶ.
ಆದರೆ ಚುನಾವಣಾ ಪ್ರಜಾತಂತ್ರದ ಈಗಿನ ವಸ್ತುಸ್ಥಿತಿ ಬೇರೆಯೇ ಆಗಿದೆ. ಪ್ರಬಲ ರಾಜಕೀಯ ಪಕ್ಷಗಳ ಹಿಂದೆ ಅದೃಶ್ಯ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಅವುಗಳಿಗೆ ತಮ್ಮ ಸ್ವಲಾಭದ ಸಾಮ್ರಾಜ್ಯಗಳನ್ನು ಬಲಪಡಿಸುವ, ಕಾರ್ಯಸೂಚಿಗಳನ್ನು ಸಾಧಿಸುವ ಹುನ್ನಾರಗಳಿವೆ. ಅವು ರಾಜಕೀಯ ಪಕ್ಷಗಳನ್ನು ತಮ್ಮ ಗುರಿ ಸಾಧನೆಗಾಗಿ ಬಳಸಿಕೊಳ್ಳುತ್ತವೆ. ಪಕ್ಷಗಳು ಜನಮತವನ್ನು ಒಲಿಸಿಕೊಳ್ಳುವುದು ಚುನಾವಣಾ ಪ್ರಜಾತಂತ್ರದ ವಿಧಾನ. ಇದು ಮೇಲಿನಿಂದ ಕೆಳಮುಖವಾಗಿ ಚಲಿಸುವ ಪ್ರಕ್ರಿಯೆ. ಅಗೋಚರ ಹಿತಾಸಕ್ತಿಗಳು ಇಲ್ಲಿ ಸೂತ್ರಧಾರಿಗಳಾದರೆ, ರಾಜಕೀಯ ಪಕ್ಷಗಳು ಪಾತ್ರಧಾರಿಗಳಾಗಿರುತ್ತವೆ.
ಮತದಾನ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುವ ಪ್ರಕ್ರಿಯೆ. ಮತದಾರರು ತಮ್ಮ ಮತಗಳನ್ನು ಬೆಂಬಲವಾಗಿ ಅಥವಾ ಪ್ರತಿರೋಧದ ಅಸ್ತ್ರಗಳಾಗಿ ಚಲಾಯಿಸುವ ಸ್ವಾಯತ್ತತೆಯನ್ನು ಪಡೆದಿರುತ್ತಾರೆ. ಈ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರು 'ಶಿಕ್ಷಣ, ಸಂಘಟನೆ, ಹೋರಾಟ' ಎಂಬ ಅನುಭವದ ಅರಿವನ್ನು ಬಹುಜನರಿಗೆ ಕಾಣಿಸಿರುವುದನ್ನು ನಾವು ಮನಗಾಣಬಹುದು. ಆಡಳಿತಾರೂಢರ ಅಧಿಕಾರದ ದುರುಪಯೋಗಕ್ಕೆ ಅಂಕುಶ ವಿಧಿಸುವ ಪರಮಾಧಿಕಾರ ಜನಶಕ್ತಿಗಿದೆ ಎನ್ನುವುದು ಪ್ರಶ್ನಿಸಲಾಗದ ನಿಜ. ಚುನಾವಣಾ ಪ್ರಜಾತಂತ್ರದ ತಾತ್ವಿಕತೆಯನ್ನು ನೇಪಥ್ಯಕ್ಕೆ ಸರಿಸಿ, ವಾಸ್ತವ ಮುಚ್ಚಿಟ್ಟರೆ ಆಳುವ ವರ್ಗಗಳು ಜನರನ್ನು ಅನಾಯಾಸವಾಗಿ ಮರುಳುಗೊಳಿಸಬಹುದು ಎಂಬ ತರ್ಕವೇ ರಾಜಕೀಯದಲ್ಲಿ ಮೇಲುಗೈ ಪಡೆಯುತ್ತಿರುವುದು ದುರಂತ.
ಭಾರತದ ಪ್ರಥಮ ಚುನಾವಣೆಯಲ್ಲಿ (1951-52) ಬಹುಸಂಖ್ಯೆಯಲ್ಲಿ ಅನಕ್ಷರಸ್ಥ ಮತದಾರರೇ ಭಾಗವಹಿಸಿರುತ್ತಾರೆ. ಸ್ವಾತಂತ್ರ್ಯ ಹೋರಾಟವು ಪ್ರೇರೇಪಿಸಿದ್ದ ಜಾಗೃತಿ ಅವರಲ್ಲಿ ನೆಲೆಯೂರಿತ್ತು. ಆದರೆ ಈಗಿನವು ನವಮಾಧ್ಯಮಗಳು ಪ್ರಾಯೋಜಿಸುವ ಉದ್ರೇಕಿತ, ಅತಿರಂಜಿತ ವರದಿಗಳಿಗೆ ಮಾರುಹೋಗಿ, ಭಾವತೀವ್ರತೆಗೆ ಒಳಗಾಗಬಹುದಾದ ಮತದಾರರೇ ಬಹುಸಂಖ್ಯೆಯಲ್ಲಿ ಪಾಲ್ಗೊಳ್ಳುವ ಚುನಾವಣೆಗಳಾಗಿವೆ. ರಾಜಕಾರಣಿಗಳು ಮತ್ತು ಅವರ ಹಿಂಬಾಲಕರ ಅಸಂಬದ್ಧ ಹೇಳಿಕೆಗಳೇ ಪ್ರಮುಖ ಸುದ್ದಿಗಳಾಗಿ ಪ್ರವಹಿಸುತ್ತಿರುವಾಗ ಮಾಹಿತಿಪೂರ್ಣ ಪ್ರಜಾಮತ ಮೂಡುವುದು ದೂರದ ವಿಚಾರ. ಮತದಾರರ ಜಾಗೃತಿ ಹೇಗೆ ಸಾಧ್ಯವೆನ್ನುವುದು ನಾವು ಹುಡುಕಬೇಕಾಗುವ ದಾರಿಯಾಗುತ್ತದೆ.
ಜಾತಿ-ಲಿಂಗ ಅಸಮತೆಗಳು ಹಾಗೂ ವಸಾಹತುಶಾಹಿ ಪರಾಧೀನದ ಹಿನ್ನೆಲೆಯಲ್ಲಿ ರೂಪುತಳೆದಿದೆ ಭಾರತೀಯ ಪ್ರಜಾತಂತ್ರ. ಭಾರತದ ಶ್ರೇಣಿಯುತ ಅಸಮತೆಗಳನ್ನು ತೊಡೆದುಹಾಕುವ ಮೂಲಕ, ಪ್ರತಿಯೊಬ್ಬನಿಗೂ ಅವಕಾಶಗಳ ಸಮಾನತೆಯನ್ನು ಖಾತರಿಪಡಿಸುವ, 'ಒಂದು ಮತಕ್ಕೆ ಒಂದೇ ಮೌಲ್ಯ'ವೆನ್ನುವ ಧ್ಯೇಯವನ್ನು ವಿಚಾರ ಮತ್ತು ಆಚಾರದಲ್ಲಿ ರೂಢಿಸಿಕೊಂಡು ದೃಢವಾದ ಹೆಜ್ಜೆಗಳೊಂದಿಗೆ ಕ್ರಮಿಸುತ್ತಿತ್ತು. ಕರ್ನಾಟಕದ ಪ್ರಸ್ತುತ ಚುನಾವಣಾ ವಾಙ್ಮಯವನ್ನು ಅವಲೋಕಿಸಿದರೆ, ಸಾಂವಿಧಾನಿಕ ಆಶಯಗಳಾದ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯಗಳಲ್ಲಿ ಸಮತೆಯನ್ನು ಸ್ಥಾಪಿಸುವ ವಿಚಾರಗಳೇ ಸಾರ್ವಜನಿಕ ಚರ್ಚೆಗಳಿಂದ ಮಾಯವಾಗುತ್ತಿರುವುದು ಗೋಚರಿಸುತ್ತದೆ. ಚುನಾವಣೆಗಳು ಪ್ರಧಾನ ಪಠ್ಯರಹಿತ ಪ್ರಜಾತಂತ್ರದ ಅಡಿಟಿಪ್ಪಣಿಯಾಗುತ್ತಿರುವುದು ಯಾವ ದೂರದೃಷ್ಟಿಯನ್ನು ಸೂಚಿಸುತ್ತದೆ ಎಂಬುದು ಸ್ಪಷ್ಟವಾಗುತ್ತಿಲ್ಲ.
ಪ್ರಚಾರದ ಮೇಲಾಟಗಳಲ್ಲಿ ಮರೆಯಾಗುತ್ತಿರುವುದೇನು ಎಂಬ ಬಗ್ಗೆ ವಿವೇಚಿಸುವ ಸಂದರ್ಭಗಳು ನಮ್ಮ ಮುಂದಿವೆ. ಕ್ಷಣಿಕ ಭಾವನೆ, ಆಮಿಷಗಳಿಗೆ ತುತ್ತಾಗಿ ಪ್ರಜೆಗಳು ತಮ್ಮ ದೀರ್ಘಕಾಲೀನ ಹಿತಾಸಕ್ತಿಗಳನ್ನು ಮರೆತು ತೂಕಡಿಸಬಾರದು ಎಂಬ ಅರಿವು ಸಾಂವಿಧಾನಿಕ ಪ್ರಜಾತಾಂತ್ರಿಕ ಆಡಳಿತಕ್ಕಿರುವ ಒಂದು ಪ್ರಮುಖ ಸಮರ್ಥನೆ. ನಮ್ಮ ಕನ್ನಡ ನೆಲದ ಸಮೃದ್ಧಿಗೆ ದೂರಗಾಮಿ ಯೋಚನೆ-ಯೋಜನೆಗಳ ರೂಪುರೇಷೆಗಳೇನು? ನಗರೀಕರಣವನ್ನು ವೇಗವಾಗಿ ಆವಾಹಿಸಿಕೊಳ್ಳುತ್ತಿರುವ ನಮ್ಮ ರಾಜ್ಯದಲ್ಲಿ ಇಂಗಾಲ ಅವಲಂಬಿತ ಆರ್ಥಿಕತೆ ಸೃಷ್ಟಿಸುವ ದುರಂತ ಚಿತ್ರಣಗಳೇನು? ಸಂಪತ್ತಿನ ವಿಕೇಂದ್ರೀಕರಣ ಯಾರಿಗೆ, ಯಾವ ಪರಿಯಲ್ಲಿ ಲಭಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ನಗರಗಳಿಗೆ ವಲಸೆ ಹೋಗುವ ಜನರ ಬದುಕಿನ ಸಮಸ್ಯೆ ನಿವಾರಿಸುವ ಬಗೆ ಹೇಗೆ?
ಸಮರ್ಪಕವಾದ ಮತ್ತು ಮುತ್ಸದ್ದಿತನದ ಪ್ರಶ್ನೆಗಳನ್ನು ಎದುರಿಸದ ಚುನಾವಣೆಗಳು ಜನರ ಬದುಕಿನ ದಿಕ್ಕು ತಪ್ಪಿಸುವುದರೊಂದಿಗೆ ಅವರ ಗೋಳನ್ನು ವಿಸ್ತರಿಸುತ್ತವೆ. ನಿರಂತರ ನಿಯತಕಾಲಿಕ ಚುನಾವಣೆಗಳನ್ನು ನಡೆಸುವುದು ಮಾತ್ರ ಸಾಧನೆಯಲ್ಲ. ಸಮತೋಲಿತ ಸಂವಾದರಹಿತ ವಾದ-ಪ್ರತಿವಾದಗಳ ಕೆಸರೆರಚಾಟಗಳಿಂದ ಮೇಳೈಸುವ ಚುನಾವಣೆಗಳು ಉನ್ಮಾದಪೀಡಿತ ಪ್ರಜಾತಂತ್ರವನ್ನು ಮುನ್ನೆಲೆಗೆ ತರಬಹುದು. ಇದು ತಂದೊಡ್ಡುವ ದೀರ್ಘಕಾಲೀನ ಊಹಿಸಿದ ಮತ್ತು ಊಹಿಸದ ಪರಿಣಾಮಗಳನ್ನು ನಾಡೇ ಅನುಭವಿಸಬೇಕಾಗುತ್ತದೆ. ಸರ್ವರಿಗೂ ಸಮಪಾಲು, ಸಮಬಾಳು ಎಂಬ ಘೋಷವಾಕ್ಯ ಮರೀಚಿಕೆಯಾಗಿಯೇ ಉಳಿಯುತ್ತದೆ. ಉತ್ತಮ ಮಾರ್ಗ ಮಾತ್ರ ಉನ್ನತ ಗುರಿಯೆಡೆಗೆ ಮುನ್ನಡೆಸುತ್ತದೆ ಎಂಬ ಎಚ್ಚರ ನಮ್ಮೆಲ್ಲರ ಆಶಯ ಧ್ವನಿ.
ಡಯಾನಳ ಸೊಸೆ ರೂಲ್ಸ್ ಬ್ರೇಕ್ ಮಾಡುತ್ತಿದ್ದಾಳಾ? | Kate Middleton Breaking Too Many Rules? | ಇಂಗ್ಲೇಂಡ್ ಪ್ರಿನ್ಸ್ ಕೈಹಿಡಿದ ಕೇಟ್ ರೂಲ್ಸ್ ಬ್ರೇಕ್ ಮಾಡುತ್ತಿದ್ದಾಳಾ? - Kannada BoldSky
52 min ago ದಾಂಪತ್ಯದಲ್ಲಿ ಪ್ರೀತಿ ಹೆಚ್ಚಲು ಮನೆಯ ವಾಸ್ತು ಹೀಗಿರಲಿ
Movies Mane Maratakkide Review: ದೆವ್ವದ ಮನೆಯಲ್ಲಿ ನಗುವಿನ ಜಾತ್ರೆ
News ರೈಲ್ವೆ ಸಿಬ್ಬಂದಿಗೆ ಭರ್ಜರಿಯಾಗಿ ಬಡ್ತಿ, ಇಂಗ್ರೀಮೆಂಟ್ ಘೋಷಣೆ
| Updated: Thursday, May 9, 2013, 17:44 [IST]
ಇಂಗ್ಲೇಂಡ್ ನ ರಾಜ ಮನೆತನದ ಬಗ್ಗೆ ಸಾಕಷ್ಟು ಕೇಳಿರುತ್ತೀರಿ. ಅಲ್ಲಿ ಪ್ರತಿಯೊಂದು ಕಾರ್ಯವು ರಾಜಮನೆತನ ತಲಾ-ತಲಾಂತರಗಳಿಂದ ಪಾಲಿಸಿ ಬಂದ ನಿಯಮದಂತೆ ನಡೆಯುವುದು. ಅಂತಹ ಕುಟುಂಬಕ್ಕೆ ಮದುವೆಯಾಗಿ ಬಂದ ಸಾಮಾನ್ಯ ಹೆಣ್ಣು ಕೇಟ್ ಮಿಡಲ್ಟನ್! ತನ್ನ ಹೆಸರಿನ ಮುಂದೆ ಯಾವುದೇ ಬಿರುದಿನ ಕಿರೀಟವಿರಲಿಲ್ಲ, ಇಂಗ್ಲೇಂಡ್ ನ ರಾಜಕುಮಾರ ಪ್ರಿನ್ಸ್ ವಿಲಿಯಮ್ಸ್ ನ ಮದುವೆಯಾದ ಬಳಿಕ ಲೇಡಿ ಕೇಟ್ ಮಿಡಲ್ಟನ್ ಆದಳು. ಇವರಿಬ್ಬರ ಮದುವೆಯೇ ಸಂಪ್ರದಾಯಕ್ಕೆ ಸ್ವಲ್ಪ ಭಿನ್ನವಾಗಿದೆ.
ರಾಣಿ ಇಲ್ಲಿಯ ಉತ್ತಾರಾಧಿಕಾರಿಗಳು ತಮಗೆ ಮನ ಮೆಚ್ಚಿದವರ ಕೈ ಹಿಡಿಯಬಹುದೆಂಬ ಕಾನೂನು ತಂದಳು. ಆದರೆ ಇದುವರೆಗೆ ಯಾರೂ ರಾಜಮನೆದವರನ್ನು ಬಿಟ್ಟು ಹೊರಗಿನವರನ್ನು ಮದುವೆಯಾಗಿರಲಿಲ್ಲ. ಆದರೆ ವಿಲಿಯಮ್ಸ್ ತಾನು ಇಷ್ಟಪಟ್ಟ ಕೇಟ್ ಮಿಡಲ್ಟನ್ ಳ ಕೈ ಹಿಡಿದನು. ಹೀಗೆ ಕೇಟ್ ಬ್ರಿಟಿಷ್ ರಾಯಲ್ ನ ಸದಸ್ಯಳಾದಳು.
ರಾಜ ಮನೆತನಕ್ಕೆ ಬಂದ ಮೇಲೆ ಕೇಟ್ ಇಲ್ಲಿಯ ಅನೇಕ ಕಾನೂನುಗಳನ್ನು ತನಗೆ ಇಷ್ಟಬಂದಂತೆ ಪರಿವರ್ತಿಸಿದ್ದಾಳೆ. ಈಗ ಗರ್ಭಿಣಿಯಾಗಿರುವ ಕೇಟ್ ರಾಜಮನೆತನದ ಮೂಲ ಸಂಪ್ರದಾಯವನ್ನು ಮುರಿಯುತ್ತಿದ್ದಾಳೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಅವುಗಳೆಂದರೆ...
* ರಾಜ ಮನೆತನದ ಸಂಪ್ರದಾಯದಂತೆ ಅರಮನೆಯಲ್ಲಿಯೇ ಹೆರಿಗೆಯಾಗಬೇಕು. ಆದರೆ ಕೇಟ್ ಅರಮನೆಯಲ್ಲಿ ಹೆರಿಗೆಯಾಗಲು ನಿರಾಕರಿಸಿದ್ದಾಳೆ.
* ಅದಲ್ಲದೆ ಕೇಟ್ ಸೇಂಟ್ ಮೇರಿ ಆಸ್ಪತ್ರೆಯಲ್ಲೂ ಹೆರಿಗೆಯಾಗಲು ಇಚ್ಛೆಯಿಲ್ಲ ಅಂದಿದ್ದಾರೆ. ಕೇಟ್ ಅತ್ತೆ ಡಯಾನ ಇದೇ ಆಸ್ಪತ್ರೆಯಲ್ಲಿ ಕೇಟ್ ಳ ಗಂಡನಿಗೆ ಜನ್ಮ ನೀಡಿದ್ದಳು ಅನ್ನುವುದನ್ನು ಇಲ್ಲಿ ಸ್ಮರಿಸಬಹುದು. ಕೇಟ್ ರಾಯಲ್ ಬರ್ಕ್ಷೈರ್ ಆಸ್ಪತ್ರೆಯಲ್ಲಿ ತನ್ನ ಮಗುವಿಗೆ ಜನ್ಮ ನೀಡಲಿದ್ದಾಳೆ. ಈ ಆಸ್ಪತ್ರೆ ಬಕಿಂಗ್ಹ್ಯಾಮ್ ಅರಮನೆಯಿಂದ ದೂರವಿದ್ದು, ಕೇಟ್ ಳ ಮನೆಗ ಸಮೀಪವಾಗಿದೆ.
* ಅದಲ್ಲದೆ ಜನಿಸುವ ಮಗು ವಂಶಪಾರಂರ್ಯವಾಗಿ ಧರಿಸುತ್ತಿದ್ದ royal hand-me-downs ಉಡುಗೆಯನ್ನು ಧರಿಸುವುದಿಲ್ಲ! ವಿಲಿಯಮ್ಸ್ ಮತ್ತು ಕೇಟ್ ಈಗಾಗಲೇ ಹುಟ್ಟಲಿರುವ ಮಗುವಿಗೆ ಡ್ರೆಸ್ ಕೊಂಡುಕೊಂಡಿದ್ದಾರೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ.
* ಅದಲ್ಲದೆ ಅವರ ಮಗುವಿಗೆ ಯಾವುದೇ ಆರ್ಮಿ ಹಾಗೂ ದಾದಿಯರ ಕಾವಲು ಬೇಕಾಗಿಲ್ಲ ಎಂದು ದಂಪತಿಗಳು ನಿರ್ಧರಿಸಿದ್ದಂತೆ ಇದೆ. ತನ್ನ ಮಗು ಉಸಿರುಕಟ್ಟುವ ದಾದಿಯರ ಸೇವೆಗಿಂತ ತನ್ನ ಮಗು ಮುಕ್ತವಾಗಿ ಬೆಳೆಯಬೇಕೆನ್ನುವುದೇ ಕೇಟ್ ಳ ಆಶಯವಾಗಿದೆ.
* ಕೇಟ್ ಸೀಮಂತ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಇದೆ. ಆದರೆ ಇದು ಸತ್ಯವೋ, ಸುಳ್ಳೋ ಗೊತ್ತಿಲ್ಲ, ಆದರೆ ಸಾರ್ವಜನಿಕವಾಗಿ ಸೀಮಂತ ಮಾಡಿಸಿಕೊಳ್ಳುವುದು ಅರಮನೆಯ ನಿಯಕ್ಕೆ ವಿರುದ್ಧವಾದದು.
ಅರಮನೆಯ ನಿಯಮಗಳನ್ನು ಬದಲಾಯಿಸಲು ಎದೆ ಗುಂಡಿಗೆ ಗಟ್ಟಿ ಇರುವವರಿಗೆ ಮಾತ್ರ ಸಾಧ್ಯ. ಅದನ್ನು ಕೇಟ್ ನಿರೂಪಿಸುತ್ತಿದ್ದಾಳೆಯೇ?!