text stringlengths 0 61.5k |
|---|
ತರುಣಿಯರಿಗೆ ಮದುವೆಗೆ ಧರಿಸಲು 5 ಬೆಸ್ಟ್ ಡ್ರೆಸ್ |
ಗಂಡಸರನ್ನು ಕಂಗೆಡಿಸುತ್ತಿರುವ 7 ಕಾಮನ್ ಕಾಯಿಲೆ |
ಚಳಿಯಲ್ಲಿ ಹಿತವಾದ ಅನುಭವಕ್ಕೆ 7 ಬಗೆಯ ಟೀಗಳು |
ಧರಿಸಿರುವ ಶೂ ನೋಡಿ ವ್ಯಕ್ತಿಯ ಗುಣ ತಿಳಿಯಬಹುದು! |
Read more about: ಜೀವನಶೈಲಿ ವಿಶ್ವ lifestyle world |
Kate Middleton Breaking Too Many Rules? | ಇಂಗ್ಲೇಂಡ್ ಪ್ರಿನ್ಸ್ ಕೈಹಿಡಿದ ಕೇಟ್ ರೂಲ್ಸ್ ಬ್ರೇಕ್ ಮಾಡುತ್ತಿದ್ದಾಳಾ? |
Middleton was married into the British royal family, she has changed the rules in her own graceful manner. Now that Kate Middleton's baby is about to come, she is bending more than few royal traditions. |
ಬಿಜೆಪಿ ಮೈತ್ರಿಧರ್ಮ ಪಾಲಿಸುತ್ತಿದೆ: ಚಿರಾಗ್ | Udayavani – ಉದಯವಾಣಿ |
Thursday, 29 Oct 2020 | UPDATED: 04:07 PM IST |
Team Udayavani, Oct 19, 2020, 1:20 AM IST |
ಪಟ್ನಾ: ಬಿಹಾರದಲ್ಲಿ ಎಲ್‌ಜೆಪಿ ಜತೆ ಯಾವುದೇ ಸಖ್ಯ ಇಲ್ಲ ಎಂದು ಬಿಜೆಪಿ ಅಧಿಕೃತವಾಗಿ ಘೋಷಿಸಿದ್ದರೂ, ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮಾತ್ರ ತಮ್ಮ ರಾಜಕೀಯ ತಂತ್ರವನ್ನು ಮುಂದುವರಿಸಿದ್ದಾರೆ. |
ತಮ್ಮ ವಿರುದ್ಧ ಬಿಜೆಪಿ ಟೀಕಿಸಿರುವುದಕ್ಕೆ ರವಿವಾರ ಪ್ರತಿಕ್ರಿಯಿಸಿರುವ ಚಿರಾಗ್, "ಸಿಎಂ ನಿತೀಶ್ ಕುಮಾರ್ ಜತೆ ಮೈತ್ರಿ ಮಾಡಿಕೊಂಡಿರುವ ಕಾರಣ ಬಿಜೆಪಿ ಕೇವಲ ತನ್ನ ಮೈತ್ರಿಧರ್ಮ ಪಾಲಿಸುತ್ತಿದೆ. ಪ್ರಧಾನಿ ಮೋದಿ ಜತೆಗಿನ ನನ್ನ ಸಂಬಂಧವನ್ನು ಎಲ್ಲರೆದುರು ಪ್ರದರ್ಶಿಸ ಬೇಕಾದ ಅಗತ್ಯವಿಲ್ಲ' ಎಂದಿದ್ದಾರೆ. |
ಇದೇ ವೇಳೆ, ಬಂಕೀಪುರ ಕ್ಷೇತ್ರದಲ್ಲಿ 3 ಬಾರಿ ಗೆದ್ದಿರುವ ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್‌ನಿಂದ ನಟ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ ಸಿನ್ಹಾ ಕಣಕ್ಕಿಳಿಯ ಲಿದ್ದಾರೆ. ಈ ಕ್ಷೇತ್ರ ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕಳೆದ ಬಾರಿ ಪಟ್ನಾ ಸಾಹಿಬ್‌ನಲ್ಲಿ ಶತ್ರುಘ್ನ ಅವರು ಸೋಲುಂಡಿದ್ದರು. "ನಾನು ನನ್ನ ಅಪ್ಪನ ಸೋಲಿಗೆ ಪ್ರತೀಕಾರ ತೀರಿಸಲೆಂದು ಸ್ಪರ್ಧಿಸುತ್ತಿಲ್ಲ. ಬದಲಿಗೆ ಪಾಟ್ನಾದ ಜನರ ಶ್ರೇಯೋಭಿವೃದ್ಧಿಗಾಗಿ ಕಣಕ್ಕಿಳಿದಿದ್ದೇನೆ' ಎಂದು ಲವ ಸಿನ್ಹಾ ಹೇಳಿದ್ದಾರೆ. |
ಬೈಡೆನ್ ಹೇಳಿಕೆ ಪ್ರಸ್ತಾವ: ಅಮೆರಿಕದಲ್ಲಿ ಡೆಮಾ ಕ್ರಾಟ್ ಅಭ್ಯರ್ಥಿ ಜೋ ಬೈಡೆನ್ ನೀಡಿರುವ "ಭಯದ ಬದಲಿಗೆ ಭರವಸೆ, ವಿಭಜನೆ ಬದಲಿಗೆ ಏಕತೆ' ಹೇಳಿಕೆಯನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ಚಿದಂಬರಂ, ಬಿಹಾರ, ಮಧ್ಯಪ್ರದೇಶದ ಮತದಾರರು ಕೂಡ ಇಂಥದ್ದೇ ಶಪಥ ಮಾಡಬೇಕಾದ ಅಗತ್ಯವಿದೆ ಎಂದಿದ್ದಾರೆ. |
ಮಳೆಗಾಲದಲ್ಲಿ ಫೋನ್ ಸುರಕ್ಷತೆ ಹೇಗಿರಬೇಕು? - Kannada Gizbot |
ಮಳೆಗಾಲದಲ್ಲಿ ಫೋನ್ ಸುರಕ್ಷತೆ ಹೇಗಿರಬೇಕು? |
Updated: Friday, July 17, 2015, 11:37 [IST] |
ಎಲ್ಲಾ ಕಾಲದಲ್ಲಿ ನಿಮ್ಮ ಫೋನ್ ಅನ್ನು ಕೊಂಡೊಯ್ದಂತೆ ಮಳೆಗಾಲದಲ್ಲಿ ಫೋನ್ ಬಳಸುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ. ನಿಮ್ಮ ಸುರಕ್ಷೆಯೊಂದಿಗೆ ನಿಮ್ಮ ಫೋನ್ ಸಂರಕ್ಷಣೆಯನ್ನು ಮಾಡುವುದೂ ಅತ್ಯಗತ್ಯವಾಗಿದೆ. ನಿಮ್ಮ ಫೋನ್‌ಗೆ ಸ್ವಲ್ಪ ನೀರು ತಾಗಿದರೂ ಫೋನ್‌ಗೆ ಏನಾದರೂ ಹಾನಿಯಾಗುವುದು ಖಂಡಿತ. ಫೋನ್‌ನ ಸುರಕ್ಷತೆಯನ್ನು ಮಾಡಲು ನೀವು ದುಬಾರಿಯಾಗಿ ಖರ್ಚು ಮಾಡಬೇಕೆಂದೇನಿಲ್ಲ. |
ಓದಿರಿ: ಬಿದ್ದರೂ ಒಡೆಯದ ಟ್ಯೂರಿಂಗ್ ಫೋನ್ ವಿಶೇಷತೆ |
ಇಂದಿನ ಲೇಖನದಲ್ಲಿ ನಾವು ನೀಡಿರುವ ಕೆಲವೊಂದು ಟಿಪ್ಸ್‌ಗಳು ನಿಮ್ಮ ಫೋನ್‌ನ ಸುರಕ್ಷತೆಯನ್ನು ಸರಳವಾಗಿ ಮಾಡುತ್ತವೆ. ಇದು ಹೇಗೆ ಎಂಬುದನ್ನು ನೋಡಿ |
ಬ್ಲ್ಯೂಟೂತ್ ಅಥವಾ ಇಯರ್ ಫೋನ್ |
ಮಳೆಗಾಲದ ಸಮಯದಲ್ಲಿ ಫೋನ್ ಬಳಸುವಾಗ ಬ್ಲ್ಯೂಟೂತ್ ಅಥವಾ ಇಯರ್ ಫೋನ್ ಬಳಕೆ ಮಾಡಿ. ಕೆಲವೊಂದು ಬ್ಲ್ಯೂಟೂತ್‌ಗಳು ಜನಪ್ರತಿರೋಧಕವಾಗಿರುತ್ತವೆ ಆದ್ದರಿಂದ ಇದರ ಬಳಕೆಯನ್ನು ಮಾಡಿ. |
ಜಿಪ್ ಪೌಚ್ |
ಪ್ಲಾಸ್ಟಿಕ್‌ನಿಂದ ತಯಾರಿಸಲಾಗುವ ಈ ಪೌಚ್ ಜನಪ್ರತಿರೋಧಕವಾಗಿರುತ್ತವೆ ಮತ್ತು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರೀ ಮಳೆಯಲ್ಲಿ ಕೂಡ ನಿಮ್ಮ ಫೋನ್‌ನ ಸುರಕ್ಷತೆಯನ್ನು ಈ ಪೌಚ್ ಬಳಸಿ ಮಾಡಬಹುದು. |
ವಾಟರ್ ಪ್ರೂಫ್ ಕವರ್ |
ವಾಟರ್ ಪ್ರೂಪ್ ಕವರ್ ಕೂಡ ಮಳೆಯಿಂದ ನಿಮ್ಮ ಫೋನ್‌ಗೆ ಉತ್ತಮ ಸುರಕ್ಷತೆಯನ್ನು ನೀಡುತ್ತದೆ. ಐಫೋನ್, ಸ್ಯಾಮ್‌ಸಂಗ್, ಸೋನಿ ಫೋನ್‌ಗೆ ವಾಟರ್ ಪ್ರೂಫ್ ಕವರ್ ಅನ್ನು ನಿಮಗೆ ಖರೀದಿಸಬಹುದು. |
ಫೋನ್ ಒದ್ದೆಯಾದಾಗ ಬ್ಯಾಟರಿ ತೆಗೆಯಿರಿ |
ನಿಮ್ಮ ಫೋನ್‌ನ ಒಳಗೆ ತುಸು ಹೆಚ್ಚು ನೀರು ಹೋಗಿದೆ ಎಂದಾದಲ್ಲಿ ಫೋನ್‌ನಿಂದ ಬ್ಯಾಟರಿ ಬೇರ್ಪಡಿಸಿ. ನಂತರ ಅದನ್ನು ಒಣಗಲು ಬಿಡಿ. |
ಫೋನ್ ಒಣಗಿಸಲು ಬೆಂಕಿ ಅಥವಾ ಹೇರ್ ಡ್ರೈಯರ್ ಬಳಕೆಯನ್ನು ಮಾಡದಿರಿ. |
ಅಕ್ಕಿಯಲ್ಲಿಡಿ |
ಫೋನ್‌ನ ಮೇಲೆ ಹೆಚ್ಚು ನೀರು ಬಿದ್ದಿದೆ ಎಂದಾದಲ್ಲಿ ಅದನ್ನು ಅಕ್ಕಿಯಲ್ಲಿ ಹಾಕಿಡಿ. ಅಕ್ಕಿ ಫೋನ್‌ನಲ್ಲಿರುವ ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ. |
ಚಾರ್ಜರ್ ಬಳಕೆಯನ್ನು ಮಾಡದಿರಿ |
ಫೋನ್ ಒದ್ದೆಯಾದ ಸಂದರ್ಭದಲ್ಲಿ ಚಾರ್ಜರ್ ಬಳಕೆಯನ್ನು ಮಾಡದಿರಿ. ಶಾರ್ಟ್ ಸರ್ಕ್ಯೂಟ್‌ನಂತಹ ಅಪಾಯ ಸಂಭವಿಸಿ ಫೋನ್ ಸುಟ್ಟು ಹೋಗುವ ಸಾಧ್ಯತೆ ಇರುತ್ತದೆ. |
Story first published: Friday, July 17, 2015, 11:36 [IST] |
Monsoons have arrived and so has the tricky problem of using your phone while you are caught in a sudden downpour. Water damage is not covered under warranty and the moment even some moisture is detected in your phone it is considered to be out of warranty. Here are seven tricks and tips to protect your phone. |
ನಿವೃತ್ತಿ ಹೊಂದುವ 3 ಗಂಟೆ ಮೊದ್ಲೇ ನೀಡಿದ್ರು ಸಸ್ಪೆಂಡ್ ಆರ್ಡರ್..! - Public Tv |
– ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಕಕ್ಕಾಬಿಕ್ಕಿ |
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮೆಕ್ಯಾನಿಕಲ್ ಎಂಜಿನಿಯರೊಬ್ಬರಿಗೆ ನಿವೃತ್ತಿ ಹೊಂದುವ ಕೇವಲ 3 ಗಂಟೆ ಮೊದಲು ಬಿಎಂಟಿಸಿ ಸಸ್ಪೆಂಡ್ ಆರ್ಡರ್ ನೀಡಿದೆ. |
ಬಿಎಂಟಿಸಿಯಲ್ಲಿ ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಗಂಗಣ್ಣಗೌಡರು ಸಸ್ಪೆಂಡ್ ಆರ್ಡರ್ ಪಡೆದು ಕಂಗಾಲಾಗಿದ್ದಾರೆ. ರಾಜ್ಯ ಸಾರಿಗೆ ಇಲಾಖೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಗಂಗಣ್ಣ ಅವರು ಎಷ್ಟೋ ಬಸ್‍ಗಳಿಗೆ ಮರು ಜೀವ ತುಂಬಿದ್ದರು. ಆದ್ರೆ ಬಿಎಂಟಿಸಿಯಲ್ಲಿ ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ನಿವೃತ್ತಿ ಹೊಂದಬೇಕಾಗಿದ್ದ ದಿನವೇ ಬಿಎಂಟಿಸಿ ಗಂಗಣ್ಣ ಅವರಿಗೆ ಸಸ್ಪೆಂಡ್ ಆರ್ಡರ್ ನೀಡಿ ಶಾಕ್ ಕೊಟ್ಟಿದೆ. |
34 ವರ್ಷಗಳ ಕಾಲ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡಿ ನೆಮ್ಮದಿಯ ನಿವೃತ್ತಿ ಜೀವನ ಮಾಡಬೇಕಾಗಿದ್ದ ಗಂಗಣ್ಣ ಅವರು ಸೇವೆಯ ಕೊನೆಯ ದಿನ ಅಮಾನತುಗೊಂಡು ಚಿಂತೆಯಲ್ಲಿ ಕುಳಿತಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಬಿಎಂಟಿಸಿಯಲ್ಲಿ ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಗಂಗಣ್ಣ, ತಮ್ಮ ಅವಧಿಯಲ್ಲಿ ಬಸ್ ಬ್ರೇಕ್ ಡೌನ್ ಆಗಿ ನಿಲ್ಲೋದನ್ನ ಅತ್ಯಂತ ಕಡಿಮೆ ಮಟ್ಟಕ್ಕೆ ತಂದಿದ್ದರು. ಈ ಹಿಂದೆ ವರ್ಷಕ್ಕೆ 1500 ರಿಂದ 1800 ಬಸ್‍ಗಳು ಆನ್ ರೋಡ್ ಬ್ರೇಕ್ ಡೌನ್ ಆಗಿ ನಿಲ್ಲುತ್ತಿತ್ತು. ಆದ್ರೆ ಗಂಗಣ್ಣ ಅವರು ಚೀಫ್ ಎಂಜಿನಿಯರ್ ಆದ ಮೇಲೆ ವರ್ಷಕ್ಕೆ 1500 ಆನ್ ರೋಡ್ ಬ್ರೇಕ್ ಡೌನ್ ಪ್ರಕರಣಗಳಿಂದ 300ಕ್ಕೆ ತಂದಿದ್ದರು. ಆದ್ರೆ ಇವರ ಅವಧಿಯಲ್ಲಿ ಬಸ್‍ಗಳು ಹೆಚ್ಚು ಕಾಲ ಶೇಡ್ ನಲ್ಲಿ ನಿಂತಿದೆ ಎಂದು ಆರೋಪಿಸಿ ನಿವೃತ್ತಿಗೊಳ್ಳೋ ಮೂರು ಗಂಟೆ ಮುಂಚೆ ಬಿಎಂಟಿಸಿ ಎಂಡಿ ಗಂಗಣ್ಣ ಅವರನ್ನು ಅಮಾನತು ಮಾಡಿದ್ದಾರೆ. |
ಈ ಬಗ್ಗೆ ಮಾತಾನಾಡಿದ ಎಐಟಿಯುಸಿ ಅಧ್ಯಕ್ಷ ಅನಂತಸುಬ್ಬ ರಾವ್, ಸಾರಿಗೆ ಇಲಾಖೆಗೆ ಮಂತ್ರಿಯಾಗಿ ಡಿ.ಸಿ ತಮ್ಮಣ್ಣ ಬಂದಾಗಿನಿಂದ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಗಂಗಣ್ಣಗೌಡ ಒಬ್ಬ ದಕ್ಷ ಅಧಿಕಾರಿ. ಮಂತ್ರಿಗಳು ಹಣದಾಸೆಗೆ ಅವರು ಹೇಳಿದಂತೆ ಕೆಲಸ ಮಾಡಲಿಲ್ಲ ಎಂದು ಗಂಗಣ್ಣಗೌಡ ಅವರನ್ನು ಅಮಾನತು ಮಾಡಿದ್ದಾರೆ. ಹಾಗೆಯೇ ದಕ್ಷ ಅಧಿಕಾರಿಗಳಿಗೆ ಒಂದು ಸಂದೇಶ ರವಾನಿಸಿದ್ದಾರೆ. ತಮ್ಮ ವಿರುದ್ಧವಾಗಿ ಕೆಲಸ ಮಾಡಿದರೆ ಇದೇ ಗತಿ ಎಂದು ತೋರಿಸಲು ಮಂತ್ರಿಗಳು ಮಾಡಿರೋ ಕುತಂತ್ರವಿದು, ಗಂಗಣ್ಣಗೌಡರನ್ನ ಬಲಿಪಶು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. |
Related Topics:BMTCD C TammannaPublic TVRetirementsuspendಅಮಾನತುಡಿ.ಸಿ.ತಮ್ಮಣ್ಣನಿವೃತ್ತಿಪಬ್ಲಿಕ್ ಟಿವಿಬಿಎಂಟಿಸಿಬೆಂಗಳೂರು Mechanical engineerಮೆಕ್ಯಾನಿಕಲ್ ಎಂಜಿನಿಯರ್ |
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದ ರೆಬೆಲ್ ಸ್ಟಾರ್ | Simply Cinema Kannada |
ಬೆಳಗ್ಗೆ ಇಂದ ಹೆಚ್ಚು ಓಡಾಡಿದ್ದರಿಂದ ಅಂಬರೀಶ್ ಅವರಿಗೆ ಕಾಲು ನೋವಿತ್ತು. ಸ್ನಾಯು ಸೆಳೆತದಿಂದ ಕುಸಿದು ಬಿದ್ದಿರುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸದ್ಯ ಅಂಬರೀಶ್ ಚಿನ್ನಾಸ್ವಾಮಿ ಕ್ರೀಡಾಂಗಣದಿಂದ ತಮ್ಮ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. |
ಮ್ಯಾಚ್ ಶುರುವಾದಾಗಿನಿಂದ ಅಂಬರೀಶ್ ಕ್ರೀಡಾಂಗಣದಲ್ಲಿಯೇ ಇದ್ದರು. ಅಂಬರೀಶ್ ಅವರನ್ನು ಅಲ್ಲೇ ಹತ್ತಿರವಿರುವ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ರಾಕ್ಲೈನ್ ವೆಂಕಟೇಶ್ ಅಂಬರೀಶ್ ಅವರ ಜೊತೆ ಆಸ್ಪತ್ರೆಗೆ ತೆರಳಿದ್ದಾರೆ. |
ಅಂಬರೀಶ್ ನಿಜವಾಗಿಯೂ ಕಾಲು ನೋವಿನಿಂದ ಕುಸಿದು ಬಿದ್ದಿದ್ದಾರೆಯೇ ಎನ್ನುವುದು ಇನ್ನು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಕೆಲವರು ಕಾಲು ನೋವಿನಿಂದ ಹೀಗಾಗಿದೆ ಎಂದರೆ ಇನ್ನು ಕೆಲವರು ಕಾಲು ಎಡವಿ ಬಿದ್ದಿರಬಹುದು, ಅಥವಾ ಅತಿಯಾದ ಬಿಸಿಲಿನಿಂದಾಗಿ ಬಳಲಿರಬಹುದು. ಎಂದಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಂಬಿ ತೆರಳಿದ್ದಾರೆ ಅಂಬಿ. |
ನವೆಂಬರ್ 22, 2020 By ಅರಳಿ ಮರ |
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಈ ತಾಮಸ ಗುಣಗಳು ಆಧ್ಯಾತ್ಮಿಕ ನಷ್ಟ ಮಾತ್ರವಲ್ಲ, ಲೌಕಿಕದಲ್ಲೂ ನಷ್ಟವನ್ನೇ ತಂದುಕೊಡುತ್ತದೆ. ತಾಮಸ ಗುಣಗಳನ್ನು ಬೆಳೆಸಿಕೊಂಡ ನೀವು ಇಹಕ್ಕೂ ಪರಕ್ಕೂ ಸಲ್ಲದವರಾಗಿಬಿಡುತ್ತೀರಿ. ಆದ್ದರಿಂದ, ನಿಮ್ಮೊಳಗಿನ ತಾಮಸಿಕ ಪ್ರವೃತ್ತಿಯನ್ನು ಗುರುತಿಸಿಕೊಂಡು, ಅದರಿಂದ ಹೊರಬರಲು ಯತ್ನಿಸಿ. |
ಮತ್ತೊಂದು ಸೂರ್ಯ ಗ್ರಹಣ-ಭಾರತಕ್ಕಿದೆಯಾ ಖಂಡಗ್ರಾಸ ಗ್ರಹಣದ ಎಫೆಕ್ಟ್? - Public TV |
ಮತ್ತೊಂದು ಸೂರ್ಯ ಗ್ರಹಣ-ಭಾರತಕ್ಕಿದೆಯಾ ಖಂಡಗ್ರಾಸ ಗ್ರಹಣದ ಎಫೆಕ್ಟ್? |
ಬೆಂಗಳೂರು: ಹದಿನೈದು ದಿನಗಳ ಹಿಂದಷ್ಟೇ ಶತಮಾನದ ಭೂಮಂಡಲದ ಅಪರೂಪದ ಕೌತುಕ ರಕ್ತಚಂದಿರನ ಕಣ್ತುಂಬಿಕೊಂಡಿದ್ದೇವೆ. ಈಗ ಮತ್ತೊಂದು ಸೂರ್ಯ ಗ್ರಹಣಕ್ಕೆ ಜನ ಅಣಿಯಾಗಬೇಕಿದೆ. ಇಂದು ಮಧ್ಯರಾತ್ರಿ 12:25 ಗ್ರಹಣ ಆರಂಭವಾಗಿ, ಮುಂಜಾನೆ 4:17 ನಿಮಿಷಕ್ಕೆ ಮುಕ್ತಾಯವಾಗಲಿದೆ. |
ಹುಡುಕಿದಷ್ಟೂ ಕೆದಕಿದಷ್ಟು ಕೌತುಕಗಳನ್ನ ಅಡಗಿಸಿಟ್ಟುಕೊಂಡಿರುವ ಸೌರಮಂಡಲದಲ್ಲಿ ಇಂದು ಮತ್ತೊಂದು ಕೌತುಕ ಘಟನೆ ನಡೆಯಲಿದೆ. ಈ ಖಂಡಗ್ರಾಸ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಕರ್ನಾಟಕಕ್ಕೆ ಯಾವ ಎಫೆಕ್ಟ್ ಇರುವದಿಲ್ಲ. ಈ ಸೂರ್ಯಗ್ರಹಣ ದಕ್ಷಿಣ ಅಮೇರಿಕಾ, ಅಂರ್ಜೆಟೈನಾ, ಅಂಟಾರ್ಟಿಕಾದಲ್ಲಿ ಮಾತ್ರ ಗೋಚರಿಸುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಗ್ರಹಣ ಸಂಭವಿಸಲಿದ್ದು, ಸೂರ್ಯನ ಶೇಕಡಾ 30 ರಿಂದ 40 ರಷ್ಟು ಭಾಗ ಮಾತ್ರ ಗ್ರಹಣ ಪೀಡಿತವಾಗಿರುತ್ತದೆ. |
ಈ ಗ್ರಹಣದ ಬಗ್ಗೆ ಭಯ ಬೇಡ ಅನ್ನೋದು ಕೆಲ ಜ್ಯೋತಿಷಿಗಳ ವಾದ. ಯಾಕೆಂದರೆ ಗ್ರಹಣ ಪೀಡಿತ ಪ್ರದೇಶದಲ್ಲಿ ಭಾರತವಾಗಲೀ ಅಥವಾ ಕರ್ನಾಟಕವಾಗಲೀ ಇಲ್ಲ. ಅಲ್ಲದೇ ಮಧ್ಯರಾತ್ರಿ ಗ್ರಹಣ ಆರಂಭವಾಗಿ ಮುಂಜಾನೆಯಷ್ಟರೊಳಗೆ ಮುಗಿದು ಹೋಗತ್ತದೆ. ಹಾಗಾಗಿ ಗ್ರಹಣ ಸಂಭವಿಸುವ ವೇಳೆ ನಾವೆಲ್ಲಾ ನಿದ್ರಾವಸ್ಥೆಯಲ್ಲಿರುತ್ತೇವೆ. ಹಾಗಾಗಿ ಆತಂಕ ಬೇಡ ಎಂದು ಜ್ಯೋತಿಷಿ ಡಾ. ವಿದ್ವಾನ್ ಕಮಲಾಕರ್ ಭಟ್ ಹೇಳುತ್ತಾರೆ. |
ಮನುಷ್ಯನ ದೇಹ ಪಂಚಭೂತಗಳಿಂದ ಕೂಡಿದೆ. ಜಗತ್ತಿಗೆ ಒಬ್ಬನೇ ಸೂರ್ಯ. ಹಾಗಾಗಿ ಗ್ರಹಣ ಪೀಡಿತ ಸೂರ್ಯನಿಂದ ಕೆಲ ವ್ಯತಿರಿಕ್ತ ಪರಿಣಾಮಗಳು ಬೀರುತ್ತವಂತೆ. ಹಾಗಾಗಿ ಗ್ರಹಣ ಕಾಲದ ವ್ರತಾಚರಣೆಗಳನ್ನ ಪಾಲಿಸಬೇಕಂತೆ. ಒಟ್ಟಿನಲ್ಲಿ ಸೂರ್ಯ ಕಿರಣಗಳಂತೂ ನಮ್ಮ ಮೇಲೆ ಬೀಳಲ್ಲ. ಆದರೂ ಗ್ರಹಣ ಅತೀವವಾಗಿ ನಂಬುವವರು ಗ್ರಹಣ ಕಾಲಸ ರೀತಿ ರಿವಾಜುಗಳನ್ನ ಪಾಲಿಸೋದ್ರಿಂದ ಯಾವ ನಷ್ಟವೂ ಇಲ್ಲ ಅಂತಾ ಕೆಲ ಜ್ಯೋತಿಷಿಗಳು ಹೇಳುತ್ತಾರೆ. |
Tags: india, karnataka, Public TV, Puja, Sun Eclipse, ಕರ್ನಾಟಕ, ಪಬ್ಲಿಕ್ ಟಿವಿ, ಪೂಜೆ, ಭಾರತ, ಸೂರ್ಯ ಗ್ರಹಣ |
'ಸ್ವಚ್ಛಯಜ್ಞ' ಮುಂದುವರಿಸಿದ ಹೈಕೋರ್ಟ್! | Prajavani |
'ಸ್ವಚ್ಛಯಜ್ಞ' ಮುಂದುವರಿಸಿದ ಹೈಕೋರ್ಟ್! |
ಗಡುವಿನಲ್ಲಿ ವಿನಾಯಿತಿ ಇಲ್ಲ l ಸಾರ್ವಜನಿಕರಲ್ಲಿ ಪೌರಪ್ರಜ್ಞೆ ಹೆಚ್ಚಿಸಲು ಕಿವಿಮಾತು |
Published: 15 ಆಗಸ್ಟ್ 2018, 01:36 IST |
Updated: 15 ಆಗಸ್ಟ್ 2018, 01:36 IST |
ಬೆಂಗಳೂರು: 'ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಸಮಗ್ರ ಕರಡು ಪ್ರತಿ ಸಿದ್ಧಪಡಿಸಲು ಇನ್ನೂ ಎರಡು ದಿನ ಸಮಯ ಬೇಕು' ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿಗೆ ಹೈಕೋರ್ಟ್ ಮತ್ತೆ ಗರಂ ಆಗಿದೆ. |
ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಮುಂದುವರಿಸಿತು. |
ಈ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಜಾಹೀರಾತು ನೀತಿಯ ಕರಡು ವಿವರಗಳನ್ನು ತಿಳಿಸಿದರು. |
ಪ್ರಮಾಣ ಪತ್ರದಲ್ಲಿದ್ದ ತಜ್ಞರು, ವಿವಿಧ ಇಲಾಖೆಗಳು, ನಾಗರಿಕರು, ಜಾಹೀರಾತು ಸಂಸ್ಥೆಗಳು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷ ಭಾಗಿಯಾದವರ ಜೊತೆ ಚರ್ಚಿಸಿ ನಿಯಮ ರೂಪಿಸಲಾಗುವುದು ಎಂಬ ಸಾಲಿಗೆ ದಿನೇಶ್ ಮಾಹೇಶ್ವರಿ ಅಸಮಾಧಾನ ವ್ಯಕ್ತಪಡಿಸಿದರು. |
'ಒಂದು ಕೌನ್ಸಿಲ್ ಸಭೆ ನಡೆಸುವುದಕ್ಕೂ ನಾವೇ ಆದೇಶ ಮಾಡಬೇಕಾ, ನಿಮ್ಮ ಕೆಲಸ ಮಾಡೋದಕ್ಕೂ ನಾವೇ ಹೇಳಬೇಕಾ, ಅಧಿಕಾರಿಗಳು ಸಂಬಳ ತಗೋಳೋದಿಲ್ವಾ' ಎಂದು ಪ್ರಶ್ನೆಗಳ ಮಳೆಗರೆದರು. |
ನ್ಯಾ. ದಿನೇಶ್ ಮಾಹೇಶ್ವರಿ ಹೇಳಿದ್ದು... |
* ಫಲಕಗಳನ್ನು ತೆರವುಗೊಳಿಸಲು ನೀಡಿರುವ ಈ ತಿಂಗಳ ಅಂತ್ಯದ ಡೆಡ್‌ಲೈನ್‌ನಲ್ಲಿ ಕಿಂಚಿತ್ತೂ ವಿನಾಯ್ತಿ ನೀಡುವುದಿಲ್ಲ. |
* ಆಗಸ್ಟ್ 31ರ ಮಧ್ಯರಾತ್ರಿಯೊಳಗೆ ಬೆಂಗಳೂರು ಹೊಸ ಕಳೆಯೊಂದಿಗೆ ಕಂಗೊಳಿಸಬೇಕು. |
* ಅನಧಿಕೃತ ಜಾಹೀರಾತು ಹಾಕಿರುವವರು ಇದೇ 30ರೊಳಗೆ ಸ್ವಯಂಸ್ಫೂರ್ತಿಯಿಂದ ತೆರವುಗೊಳಿಸಬೇಕು. |
* ಜಾಹೀರಾತು ಫಲಕಗಳನ್ನು ತೂಗುಹಾಕುವ ಕಬ್ಬಿಣ ಮತ್ತು ಮರದ ಸ್ಟ್ರಕ್ಚರ್‌ಗಳನ್ನು ಯಾವಾಗ ತೆರವುಗೊಳಿಸುತ್ತೀರಿ? |
* ಬೆಂಗಳೂರಿನ ಅಭಿವೃದ್ಧಿಗೆ, ಸೌಂದರ್ಯವೃದ್ಧಿಗೆ ವಕೀಲ ವೃಂದವೂ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರದ ಜನರೂ ಸಹಕರಿಸಬೇಕು. |
* ಬೆಂಗಳೂರು ಫ್ಲೆಕ್ಸ್, ಪ್ಲಾಸ್ಟಿಕ್ ಮತ್ತು ಪೋಸ್ಟರ್ ಮುಕ್ತ ನಗರವಾಗಬೇಕು. |
* ನಗರದ ಸೌಂದರ್ಯ ವೃದ್ಧಿಯ ದಿಸೆಯಲ್ಲಿ ಇದಿನ್ನೂ ಮೊದಲ ಹೆಜ್ಜೆ. |
* ನಾಳೆ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರಧ್ವಜಗಳ ಬ್ಯಾನರ್ ಹಾಗೂ ಪ್ಲಾಸ್ಟಿಕ್ ಕಸವನ್ನು ವಿಲೇವಾರಿ ಮಾಡಲು ಏನು ಕ್ರಮ ಕೈಗೊಂಡಿದ್ದೀರಿ? |
* ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತಂತೆ ಮತ್ತು ಕಾನೂನು ಉಲ್ಲಂಘಿಸಿದವರ ವಿರುದ್ಧ ಕೈಗೊಂಡಿರುವ ಕ್ರಮಗಳೇನು? |
ದೂರುವುದು ಬೇಡ: 'ಬಿಬಿಎಂಪಿ ಇತಿಹಾಸ ಗಮನಿಸದರೆ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ದಿಸೆಯಲ್ಲಿ ಈ ಹಿಂದೆ ಪಾರದರ್ಶಕ ನಡವಳಿಕೆ ಇಲ್ಲ' ಎಂಬ ಅರ್ಜಿದಾರರ ಪರ ವಕೀಲರ ಆಕ್ಷೇಪಣೆಯನ್ನು ನ್ಯಾಯಪೀಠ ಒಪ್ಪಲಿಲ್ಲ. |
'ಜನರಲ್ಲಿ ಪೌರಪ್ರಜ್ಞೆ ಜಾಗೃತಗೊಳಿಸಬೇಕು. ಎಲ್ಲದಕ್ಕೂ ಆಡಳಿತ ವ್ಯವಸ್ಥೆ ದೂಷಿಸುವುದು ಸರಿಯಲ್ಲ. ಡೊಂಕು ತಿದ್ದಲು ನಮ್ಮ ಕೊಡುಗೆ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದರು. |
ಆದೇಶ: 'ತೆರವುಗೊಳಿಸಿರುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ವಿಲೇವಾರಿಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಮುಂದಿನ ವಿಚಾರಣೆ ವೇಳೆ ಸ್ಪಷ್ಟವಾಗಿ ನಿಖರವಾಗಿತಿಳಿಸಿ ಎಂದು ಬಿಬಿಎಂಪಿಗೆ ನಿರ್ದೇಶಿಸಿದ ನ್ಯಾಯಪೀಠ ಮುಂದಿನ ವಿಚಾರಣೆ ವೇಳೆಗೆ ಉತ್ತಮ ಪ್ರಮಾಣಪತ್ರ ಸಲ್ಲಿಸಿ' ಎಂದು ಆದೇಶಿಸಿತು. |
ಮಾತೃಭಾಷಾ ಶಿಕ್ಷಣಕ್ಕಾಗಿ ಕ.ಸಾ.ಪ. ಚಳವಳಿ ಶುರು | Kannada scholars oppose English medium - Kannada Oneindia |
ಮಾತೃಭಾಷಾ ಶಿಕ್ಷಣಕ್ಕಾಗಿ ಕ.ಸಾ.ಪ. ಚಳವಳಿ ಶುರು |
| Updated: Wednesday, September 4, 2013, 11:41 [IST] |
ಬೆಂಗಳೂರು : ನಗರದ ಕನ್ನಡ ಸಾಹಿತ್ಯಪರಿಷತ್ತಿನ ಆವರಣದಲ್ಲಿ ನಾಡು-ನುಡಿ ರಕ್ಷಣೆಗಾಗಿ ಮಂಗಳವಾರ ಜನಪ್ರವಾಹವೇ ಹರಿದು ಬಂದಿತ್ತು. |
ಮಾತೃಭಾಷಾ ಶಿಕ್ಷಣಕ್ಕಾಗಿ ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಚಳವಳಿಯಲ್ಲಿ ಕನ್ನಡಪರ ಸಂಘಟನೆಗಳು ಮತ್ತು ಸಾಹಿತಿಗಳು ಪಾಲ್ಗೊಂಡಿದ್ದರು. ಒಂದನೇ ತರಗತಿಯಲ್ಲಿ ಆಂಗ್ಲ ಭಾಷೆಯ ಕಲಿಕೆಗೆ ತೀವ್ರ ವಿರೋಧ ವ್ಯಕ್ತವಾಯಿತು. |
ನಾಡ ಗೀತೆ ಹಾಡುವುದರೊಂದಿಗೆ ಚಳವಳಿ ಆರಂಭಗೊಂಡಿತು. 24ಕ್ಕೂ ಅಧಿಕ ಸಂಘಟನೆಗಳು ಇಂದಿನ ಪ್ರತಿಭಟನೆಗೆ ಕೈಜೋಡಿಸಿದ್ದವು. ಮಾತೃಭಾಷೆಯ ಅನುಷ್ಠಾನಕ್ಕೆ ಉಚ್ಚನ್ಯಾಯಾಲದಲ್ಲಿನ ಅಡಚಣೆಗಳನ್ನು ಒಂದು ತಿಂಗಳೊಳಗಾಗಿ ಸರ್ಕಾರ ನಿವಾರಿಸಿಕೊಳ್ಳಬೇಕು ಎಂದು ಚಳವಳಿಗಾರರು ಆಗ್ರಹಿಸಿದರು. |
ಕನ್ನಡ ದ್ರೋಹಿ ಶಾಲೆಗಳನ್ನು ಪತ್ತೆ ಹಚ್ಚಿ ಮಾನ್ಯತೆ ರದ್ದು ಗೊಳಿಸ ಬೇಕು. ನಮ್ಮ ಬೇಡಿಕೆಗಳತ್ತ ಸರ್ಕಾರ ಗಮನಹರಿಸದಿದ್ದರೆ ಚಳವಳಿ ಉಗ್ರ ಸ್ವರೂಪಕ್ಕೆ ತಿರುಗಲಿದೆ ಎಂದು ಚಳವಳಿನಿರತರು ಎಚ್ಚರಿಸಿದರು. |
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ್ ಪಾಟೀಲ, ಸಾಹಿತಿಗಳಾದ ಜಿ.ನಾರಾಯಣ, ಪ್ರೊ. ಎನ್.ಬಸವರಾಧ್ಯ, ಡಾ.ಸಾ.ಶಿ.ಮರುಳಯ್ಯ, ಡಾ.ಕಮಲ ಹಂಪನಾ, ಮುಖ್ಯಮಂತ್ರಿ ಚಂದ್ರು, ಸಾ.ರಾ.ಗೋವಿಂದ್ ಸೇರಿದಂತೆ ವಿವಿಧ ಗಣ್ಯರು ಚಳವಳಿಯಲ್ಲಿ ಭಾಗವಹಿಸಿದ್ದರು. |
ಮಾತೃಭಾಷೆಯ ಚಳವಳಿ ಯಶಸ್ಸು ಸಾಧಿಸದಿದ್ದರೆ ನಮ್ಮ ಸರ್ವನಾಶ ತಪ್ಪದು ಎಂದು ಸಾಹಿತಿ ಮತ್ತು 72ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶಾಂತರಸ ಅಭಿಪ್ರಾಯಪಟ್ಟಿದ್ದಾರೆ. |
Kannada scholars and writers on Tuesday(Jun.14) united to protest strongly any proposal to introduce English as a subject from class I in schools under the State syllabus. |
ಅಮೆರಿಕದಿಂದ ಭಾರತಕ್ಕೆ ಬಂದಿಳಿದ ಮೊದಲ ತುರ್ತು ಕೋವಿಡ್ -19 ಪರಿಹಾರ ಸಾಮಗ್ರಿ | ಕನ್ನಡಿ ನ್ಯೂಸ್ - Kannadi News |
ಅಮೆರಿಕದಿಂದ ಭಾರತಕ್ಕೆ ಬಂದಿಳಿದ ಮೊದಲ ತುರ್ತು ಕೋವಿಡ್ -19 ಪರಿಹಾರ ಸಾಮಗ್ರಿ |
ವಿಸ್ತೃತ ಆರೋಗ್ಯ ಮೂಲಸೌಕರ್ಯಗಳ ಮಧ್ಯೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಮತ್ತು ಮಾರಣಾಂತಿಕ ಅಲೆಯೊಂದಿಗೆ ದೇಶವು ಹೋರಾಡುತ್ತಿರುವಾಗ ಅಮೆರಿಕದಿಂದ ಕೋವಿಡ್ -19 ನೆರವಿನ ಮೊದಲ ಕಂತಿನ ರವಾನೆ ಶುಕ್ರವಾರ ಭಾರತಕ್ಕೆ ಬಂದಿದೆ ಎಂದು ಯುಎಸ್ ರಾಯಭಾರ ಕಚೇರಿ ತಿಳಿಸಿದೆ. |
ಅಮೆರಿಕದಿಂದ ಹಲವಾರು ತುರ್ತು ಕೋವಿಡ್-19 ಪರಿಹಾರ ಸಾಗಣೆಗಳಲ್ಲಿ ಮೊದಲನೆ ಕಂತು ಭಾರತಕ್ಕೆ ಬಂದಿದೆ. 70 ವರ್ಷಗಳ ಸಹಕಾರವನ್ನು ಆಧರಿಸಿ, ನಾವು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಒಟ್ಟಾಗಿ ಹೋರಾಡುವಾಗ ಅಮೆರಿಕವು ಭಾರತದೊಂದಿಗೆ ನಿಂತಿದೆ ಎಂದು ಅಮೆರಿಕ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. |
ಅಮೆರಿಕದಿಂದ ಮೊದಲ ಸಾಗಣೆಯಲ್ಲಿ ಕ್ಯಾಲಿಫೋರ್ನಿಯಾ ರಾಜ್ಯವು ದಾನ ಮಾಡಿದ 440 ಆಮ್ಲಜನಕ ಸಿಲಿಂಡರ್ ಗಳು ಮತ್ತು ನಿಯಂತ್ರಕಗಳು ಮತ್ತು 9,60,000 ಕ್ಷಿಪ್ರ ರೋಗನಿರ್ಣಯ ಪರೀಕ್ಷೆಗಳು ಮತ್ತು ಯುಎಸ್ಐಐಡಿ ಒದಗಿಸಿದ 100,000 ಎನ್ 95 ಮುಖವಾಡಗಳನ್ನು ಒಳಗೊಂಡಿದೆ. |
ಕೋವಿಡ್ -19 ಪ್ರಕರಣಗಳಲ್ಲಿ ಭಾರಿ ಏರಿಕೆಗೆ ದೇಶಕ್ಕೆ ಬೆಂಬಲಿಸಲು ಕೋವಿಶೀಲ್ಡ್ ಲಸಿಕೆ ತಯಾರಿಸಲು ಮತ್ತು ವೆಂಟಿಲೇಟರ್‌ಗಳು ಮತ್ತು ಆಮ್ಲಜನಕ ಉತ್ಪಾದನಾ ಗೇರ್‌ಗಳಂತಹ ಉಪಕರಣಗಳ ಸರಬರಾಜಿಗೆ ತುರ್ತಾಗಿ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಭಾರತಕ್ಕೆ ಒದಗಿಸುವುದಾಗಿ ಅಮೆರಿಕ ಭಾನುವಾರ ಭರವಸೆ ನೀಡಿತ್ತು. "ಸಾಂಕ್ರಾಮಿಕ ರೋಗದ ಆರಂಭದಲ್ಲಿ ನಮ್ಮ ಆಸ್ಪತ್ರೆಗಳು ತೊಂದರೆಗೊಳಗಾದಾಗ ಭಾರತವು ಅಮೆರಿಕದ ಸಹಾಯ ಕಳುಹಿಸಿದಂತೆಯೇ, ಭಾರತವು ಅದರ ಅಗತ್ಯ ಸಮಯದಲ್ಲಿ ಸಹಾಯ ಮಾಡಲು ಅಮೆರಿಕ ನಿರ್ಧರಿಸಿದೆ" ಎಂದು ಶ್ವೇತಭವನವು ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿದೆ. |
ಕೋವಿಡ್ ಸಂಕಷ್ಟದಲ್ಲೂ ಅತಿಕ್ರಮಣ ಹೆಸರಲ್ಲಿ ತೊಂದರೆ | Udayavani – ಉದಯವಾಣಿ |
Wednesday, 06 Jul 2022 | UPDATED: 12:51 PM IST |
ನಗರಸಭೆ ವಿರುದ್ಧ ಆಕ್ರೋಶ !ತರಕಾರಿ ವ್ಯಾಪಾರಸ್ಥರು ಅಂಗಡಿ ಮುಂದೆ ಹಾಕಿದ್ದ ಶೆಡ್ ತೆರವು |
Team Udayavani, May 16, 2021, 3:26 PM IST |
ಬಾಗಲಕೋಟೆ: ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದ ಜನರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ನಗರದಲ್ಲಿ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕಿದ್ದ ನಗರಸಭೆ ಅಧಿಕಾರಿಗಳು, ಜನರಿಗೆ ಮತ್ತಷ್ಟು ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. |
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಾಧ್ಯಮ ವಕ್ತಾರ ನಾಗರಾಜ ಹದ್ಲಿ ಮಾತನಾಡಿ, ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಕಳೆದ ಒಂದು ಹಲವು ದಿನಗಳಿಂದ ಕೊರೊನಾ ಕರ್ಫ್ಯೂ ಹೇರಲಾಗಿದೆ. ಇಂತಹ ಸಂದರ್ಭದಲ್ಲಿ ಬಾಗಲಕೋಟೆಯ ನಗರಸಭೆಯ ಪೌರಾಯುಕ್ತರು ಮತ್ತು ಅಧಿಕಾರಿಗಳು ಕೊರೊನಾ ಸೋಂಕು ಹರಡುತ್ತಿರುವುದನ್ನು ತಡೆಗಟ್ಟುವಲ್ಲಿ ಕ್ರಮ ತೆಗೆದುಕೊಳ್ಳುವುದು ಬಿಟ್ಟು ಬಾಗಲಕೋಟೆ ತರಕಾರಿ ಮಾರುಕಟ್ಟೆಯಲ್ಲಿ ರಸ್ತೆ ಡಾಂಬರೀಕರಣ ಮಾಡುವ ನೆಪದಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿಯ ಮೇಲೆ ಬಿಸಿಲಿನ ತಾಪಕ್ಕೆ ಮತ್ತು ಮಳೆನೀರು ಅಂಗಡಿ ಒಳಗೆ ಬರದ ಹಾಗೆ ರಕ್ಷಣೆಗೆ ಹಾಕಲಾಗಿರುವ ತಗಡು ತೆರವುಗೊಳಿಸುವ ಮೂಲಕ ವ್ಯಾಪಾರಸ್ಥರಿಗೆ, ಜನರಿಗೆ ಮತ್ತಷ್ಟು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. |
Subsets and Splits
No community queries yet
The top public SQL queries from the community will appear here once available.