text stringlengths 0 61.5k |
|---|
Published: 04 ನವೆಂಬರ್ 2018, 13:59 IST |
Updated: 05 ನವೆಂಬರ್ 2018, 00:18 IST |
ನವದೆಹಲಿ: ಆಲ್ ಇಂಡಿಯಾ ರೇಡಿಯೊ (ಎಐಆರ್) ಮಹಿಳಾ ಉದ್ಯೋಗಿಗಳೂ ಕಚೇರಿಯಲ್ಲಿ ಲೈಂಗಿಕ ಕಿರುಕುಳ ಎದುರಿಸಿದ್ದನ್ನು ಬಹಿರಂಗಪಡಿಸಿದ್ದಾರೆ. ಮಧ್ಯಪ್ರದೇಶದ ಶಾಹ್‌ದೊಲ್ ಆಕಾಶವಾಣಿ ಕೇಂದ್ರದ 9 ಮಂದಿ ಉದ್ಘೋಷಕಿಯರು ಆರೋಪ ಮಾಡಿದ್ದು, ಇವರನ್ನೇ ಸೇವೆಯಿಂದ ವಜಾಗೊಳಿಸಿರುವುದು ಬೆಳಕಿಗೆ ಬಂದಿದೆ. ಆರೋಪ ಎದುರಿಸುತ್ತಿರುವ ಅಧಿಕಾರಿ ರತ್ನಾಕರ್ ಭಾರ್ತಿ ಅವರಿಗೆ ಬಡ್ತಿ ನೀಡಿ ದೆಹಲಿಗೆ ವರ್ಗಾವಣೆ ಮಾಡಲಾಗಿದೆ! |
2017ರ ಜೂನ್‌ನಲ್ಲಿ ಈ ಮಹಿಳೆಯರು ಪ್ರಕರಣ ದಾಖಲಿಸಿದ್ದರು. ಇದಾದ ನಂತರ ಅವರನ್ನು ವಜಾ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪೈಕಿ ಮೂವರು ಸಂತ್ರಸ್ತೆಯರು ತಮಗಾದ ಕಹಿ ಅನುಭವವನ್ನು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ. |
'ದಿ ಕ್ವಿಂಟ್' ಈ ಕುರಿತು ವರದಿ ಮಾಡಿದೆ. |
ಹರಿಯಾಣದ ಕುರುಕ್ಷೇತ್ರ, ಉತ್ತರ ಪ್ರದೇಶದ ಒಬ್ರಾ ಮತ್ತು ಹಿಮಾಚಲ ಪ್ರದೇಶದ ಧರ್ಮಶಾಲಾದ ಎಐಆರ್ ಕೇಂದ್ರಗಳಲ್ಲಿ ಹೆಚ್ಚಿನ ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಿವೆ ಎನ್ನಲಾಗಿದೆ. |
2016ರ ಆಗಸ್ಟ್‌ನಲ್ಲಿ 'ಮನದ ಮಾತು' ಕಾರ್ಯಕ್ರಮದ ಸಂದರ್ಭದಲ್ಲಿ ಸ್ಟುಡಿಯೊದಲ್ಲಿದ್ದಾಗ ಕಾರ್ಯಕ್ರಮ ಮುಖ್ಯಸ್ಥ (ಪ್ರೋಗ್ರಾಂ ಹೆಡ್) ಸುರೇಶ್ ಕುಮಾರ್ ಅವರು ಬಲವಂತದಿಂದ ಮುತ್ತಿಕ್ಕಿದ್ದರು ಎಂದು ಧರ್ಮಶಾಲಾದ ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ. ಆದರೆ, ಆ ಸಂದರ್ಭದ ಸಿಸಿಟಿವಿ ದೃಶ್ಯಾವಳಿ ಕಣ್ಮರೆಯಾಗಿದೆ ಎನ್ನಲಾಗಿದೆ. |
2010ರಲ್ಲಿ ಪುರುಷ ಸಹೋದ್ಯೋಗಿಗಳು ಕಚೇರಿಯಲ್ಲೇ ಮದ್ಯಪಾನ ಮಾಡುತ್ತಿದ್ದರಲ್ಲದೆ, ಆಶ್ಲೀಲ ಸಿನಿಮಾ ನೋಡಿದ್ದರು ಎಂದು ಉತ್ತರ ಪ್ರದೇಶದ ಒಬ್ರಾ ಕೇಂದ್ರದ ಉದ್ಯೋಗಿ ಆರೋಪಿಸಿದ್ದಾರೆ. ಕೇಂದ್ರದ ಗ್ರಂಥಪಾಲಕ ಸುರೇಶ್‌ಚಂದ್ರ ಎಂಬುವವರು ನಗ್ನ ಚಿತ್ರವುಳ್ಳ ನಿಯತಕಾಲಿಕೆಯನ್ನು ತೋರಿಸಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಅವರು ದೂರಿದ್ದಾರೆ. ಕೇಂದ್ರದ ಮುಖ್ಯಸ್ಥ ಜಿ.ಪಿ.ನಿರಾಳ ಎಂಬುವವರು ತಮ್ಮ ವಿರುದ್ಧ ಆಶ್ಲೀಲ ಪದ ಬಳಸಿ ಮಾತನಾಡುತ್ತಿದ್ದರು ಎಂದೂ ಅವರು ಹೇಳಿದ್ದಾರೆ. |
'ಉದ್ಯೋಗಿಗಳ ಹಿನ್ನೆಲೆ ಪರೀಕ್ಷಿಸಿ' |
ಮುಂಬೈ: ದೇಶದಾದ್ಯಂತ ಮೀ– ಟೂ ಅಭಿಯಾನ ತೀವ್ರ ಸ್ವರೂಪ ಪಡೆಯುತ್ತಿರುವ ಈ ಸಂದರ್ಭದಲ್ಲಿ, ಕಂಪನಿಗಳು ಉನ್ನತ ಹುದ್ದೆಗಳಿಗೆ ಉದ್ಯೋಗಿಗಳನ್ನು ಆಯ್ಕೆ ಮಾಡುವ ವೇಳೆ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ವಿಸ್ತೃತ ಮಟ್ಟದಲ್ಲಿ ಅವರ ಹಿನ್ನೆಲೆ ಪರಿಶೀಲನೆ ಮಾಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. |
'ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳು ಆಯಾ ವ್ಯಕ್ತಿಯ ವರ್ತನೆ, ವ್ಯಕ್ತಿತ್ವವನ್ನು ಬಿಂಬಿಸಬಹುದು' ಎಂದು ತಜ್ಞರು ಹೇಳಿದ್ದಾರೆ. |
ರಾಜೀನಾಮೆ ಅಂಗೀಕಾರವೂ ಇಲ್ಲ, ಅನರ್ಹತೆಯೂ ಇಲ್ಲ – ವಾದ, ಪ್ರತಿವಾದ ಹೇಗಿತ್ತು? – Public Tv |
ರಾಜೀನಾಮೆ ಅಂಗೀಕಾರವೂ ಇಲ್ಲ, ಅನರ್ಹತೆಯೂ ಇಲ್ಲ - ವಾದ, ಪ್ರತಿವಾದ ಹೇಗಿತ್ತು? |
ನವದೆಹಲಿ: ಅತೃಪ್ತ ಶಾಸಕರು ಎಬ್ಬಿಸಿದ ಬಿರುಗಾಳಿಯಲ್ಲಿ ತೂರಿಬಂದ ರಾಜೀನಾಮೆ ಚೆಂಡು ಸುಪ್ರೀಂಕೋರ್ಟ್ ಅಂಗಳಕ್ಕೆ ಬಿದ್ದಿದೆ. ರೆಬೆಲ್ ಶಾಸಕರು ತಮ್ಮದೆ ಪಕ್ಷದ ನಾಯಕರು ಒಡ್ಡಿದ ಚಕ್ರವ್ಯೂಹ ಭೇದಿಸಲು ಭಾರೀ ಕಸರತ್ತು ನಡೆಸಿದ್ದಾರೆ. |
ನಮ್ಮ ರಾಜೀನಾಮೆ ಅಂಗೀಕರಿಸುವಲ್ಲಿ ವಿಳಂಬ ಧೋರಣೆ ಅನುಸರಿಸ್ತಿದ್ದಾರೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ, ಸ್ಪೀಕರ್, ಸಿಎಂ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅತೃಪ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡಿತ್ತು. ಮುಖ್ಯ ನ್ಯಾ.ರಂಜನ್ ಗೊಗೋಯ್, ದೀಪಕ್ ಗುಪ್ತಾ, ಅನಿರುದ್ಧ್ ಬೋಸ್ ಅವರ ತ್ರಿಸದಸ್ಯ ಪೀಠದ ಎದುರು ಸ್ಪೀಕರ್ ಪರವಾಗಿ ಅಭಿಷೇಕ್ ಸಿಂಘ್ವಿ, ಸಿಎಂ ಪರ ರಾಜೀವ್ ಧವನ್ ಹಾಗೂ ಅತೃಪ್ತರ ಪರವಾಗಿ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ಮೂವರು ವಕೀಲರು ಸುಮಾರು 1 ಗಂಟೆಗಳ ವಾದ ಆಲಿಸಿದ ತ್ರಿಸದಸ್ಯ ಪೀಠ ಮಧ್ಯಾಹ್ನ 12.55ರ ಹೊತ್ತಿಗೆ ಮಧ್ಯಂತರ ಆದೇಶ ಪ್ರಕಟಿಸಿತು. |
ಅತೃಪ್ತರ ಪರ ಮೊದಲಿಗೆ ವಾದ ಮಂಡಿಸಿದ ವಕೀಲ ಮುಕುಲ್ ರೋಹ್ಟಗಿ ಅವರು, ಸ್ಪೀಕರ್ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದರು. ಇದಕ್ಕೆ ಸ್ಪೀಕರ್ ಪರ ವಕೀಲರಾದ ಸಿಂಘ್ವಿ ಆಕ್ಷೇಪ ವ್ಯಕ್ತಪಡಿಸಿದರು. ನಂತರ, ರೋಹ್ಟಗಿ ಅವರಿಗೆ ವಾದ ಮಂಡಿಸಲು ಜಡ್ಜ್ ಅನುವು ಮಾಡಿಕೊಟ್ಟರು. |
ಅತೃಪ್ತರ ಪರ ವಕೀಲರ ವಾದ ಏನು? |
ಸ್ಪೀಕರ್ ಅವರು ಎರಡು ಕುದುರೆಗಳ ಮೇಲೆ ಸವಾರಿ ಮಾಡಲು ಯತ್ನಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ನನಗೆ ಆದೇಶ ಕೊಡುವಂತೆ ಇಲ್ಲ ಎನ್ನುತ್ತಾರೆ. ಕೋರ್ಟ್ ಆದೇಶದ ಅನ್ವಯ ಶಾಸಕರು ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ರಾಜೀನಾಮೆ ಅಂಗೀಕಾರ ಮಾಡಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ. ನ್ಯಾಯಾಂಗ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. 8 ಶಾಸಕರ ರಾಜೀನಾಮೆ ನಂತರ ಉದ್ದೇಶಪೂರ್ವಕವಾಗಿಯೇ ಅನರ್ಹತೆ ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ಕೂಡಲೇ ಸ್ಪೀಕರ್ ಕೈಗೊಂಡಿರುವ ಅನರ್ಹತೆ ಅರ್ಜಿಯ ವಿಚಾರಣೆಗೆ ತಡೆ ನೀಡಬೇಕು. ಸಂವಿಧಾನದ ವಿಧಿ 32 ಅನ್ವಯ ಶಾಸಕರಿಗೆ ರಿಲೀಫ್ ನೀಡಬೇಕು ಎಂದು ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. |
ಮುಕುಲ್ ರೋಹ್ಟಗಿ ಅವರ ವಾದ ಆಲಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಅವರು, ಸುಪ್ರೀಂಕೋರ್ಟ್ ಪರಮಾಧಿಕಾರವನ್ನು ಸ್ಪೀಕರ್ ಪ್ರಶ್ನಿಸುತ್ತಿದ್ದಾರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಇಲ್ಲ ಸರ್. ಆ ರೀತಿ ಏನಿಲ್ಲ. ರಮೇಶ್ ಕುಮಾರ್ ಅವರು ಹಾಗೆ ಹೇಳಿಲ್ಲ ಎಂದು ತಮ್ಮ ವಾದವನ್ನು ಆರಂಭಿಸಿದರು. |
ಸ್ಪೀಕರ್ ಪರ ವಕೀಲರ ವಾದ ಏನು? |
1974ರ ತಿದ್ದುಪಡಿ ಅನ್ವಯ ಶಾಸಕರ ರಾಜೀನಾಮೆಯನ್ನು ವಿಚಾರಣೆ ಮಾಡಿಯೇ ಸ್ಪೀಕರ್ ಅಂಗೀಕರಿಸಬೇಕು. ಅನರ್ಹತೆ ಅರ್ಜಿಯ ವಿಚಾರಣೆ ಶುರುವಾದ ಮೇಲೆ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಅನರ್ಹತೆಯ ತೂಗುಗತ್ತಿಯಿಂದ ಪಾರಾಗುವ ಸಲುವಾಗಿಯೇ ಈ ಶಾಸಕರು ರಾಜೀನಾಮೆ ನೀಡಿದ್ದಾರೆ. ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೋ? ಇಲ್ಲವೋ ಎಂದು ಸ್ಪೀಕರ್ ಪರಿಶೀಲಿಸಬೇಕು. ಹೀಗಾಗಿ ಇಂತಿಷ್ಟೇ ಅವಧಿಯಲ್ಲಿ ರಾಜೀನಾಮೆ ಅಂಗೀಕರಿಸಿ ಅಂತ ಗಡುವು ವಿಧಿಸಬೇಡಿ. ರಮೇಶ್ ಕುಮಾರ್ ಅವರ ವಿರುದ್ಧ ಅತೃಪ್ತರು ಮಾಡಿರುವ ಆರೋಪ ಸರಿಯಲ್ಲ. ಸಂವಿಧಾನದ ಪರಿಧಿಯಲ್ಲಿಯೇ ಸ್ಪೀಕರ್ ಕೆಲಸ ಮಾಡುತ್ತಿದ್ದಾರೆ. ಅವರು ಸದನದ ಹಿರಿಯರಿದ್ದಾರೆ. ಅವರಿಗೆ ಸಂವಿಧಾನದ ಅರಿವಿದೆ ಎಂದು ಕೋರ್ಟ್ ಗಮನಕ್ಕೆ ತಂದರು. |
ಸಿಎಂ ಪರ ವಕೀಲರ ವಾದ ಏನಿತ್ತು? |
ಸರ್ಕಾರ ಹಗರಣಗಳಲ್ಲಿ ಮುಳುಗಿದೆ ಎಂದು ಅತೃಪ್ತರು ಹೇಳಿರುವುದು ಸುಳ್ಳು. ರಾಜೀನಾಮೆ ನೀಡಿದ ಶಾಸಕರೊಬ್ಬರ ಹೆಸರು ಹಗರಣವೊಂದರಲ್ಲಿ ಕೇಳಿಬಂದಿದೆ. ಇದು ರಾಜಕೀಯ ಪ್ರೇರಿತ ದೂರು. ಇದನ್ನು ಮಾನ್ಯ ಮಾಡಬೇಡಿ. ಅತೃಪ್ತ ಶಾಸಕರ ದೂರಿನ ಸಂಬಂಧ ಯಾವುದೇ ತೀರ್ಪು ಹೊರಡಿಸಬೇಡಿ. ಸ್ಪೀಕರ್ ಗೆ ರಾಜೀನಾಮೆ ಅರ್ಜಿಗಳನ್ನು ಇತ್ಯರ್ಥಪಡಿಸಲು ಗಡುವು ನೀಡಬೇಡಿ. ಹರ್ಯಾಣ ಪ್ರಕರಣದಲ್ಲಿ ಸ್ಪೀಕರ್ ಗೆ ಹೈಕೋರ್ಟ್ 4 ತಿಂಗಳು ಗಡುವು ನೀಡಿತ್ತು ಎಂದು ರಾಜೀವ್ ಧವನ್ ಅವರು ಪ್ರಸ್ತಾಪಿಸಿದರು. |
ಈ ಮೂವರ ವಾದ ಆಲಿಸಿದ ಸಿಜೆ ಗೊಗೊಯ್ ನೇತೃತ್ವದ ಪೀಠ, ಶಾಸಕರ ಅನರ್ಹತೆ ಬಗ್ಗೆ ಉಲ್ಲೇಖಿಸಲಾಗಿರುವ ಸಂವಿಧಾನದ 190 ವಿಧಿ ಮತ್ತು ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ಇರುವ 361ನೇ ವಿಧಿಯ ಬಗ್ಗೆ ಇಲ್ಲಿ ಹಲವು ಪ್ರಶ್ನೆಗಳು ಎದ್ದಿದೆ. ಸ್ಪೀಕರ್ ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಬಹುದೋ. ಬೇಡವೋ ಎಂಬ ಪ್ರಶ್ನೆ ಎದ್ದಿದೆ. ಸಾಂವಿಧಾನಿಕ ಪೀಠದಲ್ಲಿ ಈ ಪ್ರಕರಣದ ವಿಚಾರಣೆಯ ಅಗತ್ಯತೆ ಇದೆಯಾ ಅಂತ ಪರಿಶೀಲಿಸಬೇಕಿದೆ. ಸ್ಪೀಕರ್ ಶಾಸಕರ ರಾಜೀನಾಮೆ, ಅನರ್ಹತೆ ವಿಚಾರಣೆ ಕೈಗೊಳ್ಳಬಾರದು. ಮಂಗಳವಾರದವರೆಗೂ ಸ್ಪೀಕರ್ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮಧ್ಯಂತರ ಆದೇಶ ಹೊರಡಿಸಿತು. |
Related Topics:cmKarnataka crisisPublic TVrebel MLAsSpeaker Ramesh KumarSupreme Courtಅತೃಪ್ತ ಶಾಸಕರುಕಾಂಗ್ರೆಸ್ಪಬ್ಲಿಕ್ ಟಿವಿಸುಪ್ರೀಂಕೋರ್ಟ್ಸ್ಪೀಕರ್ ರಮೇಶ್ ಕುಮಾರ್ |
ನಮ್ಮ ಕುಂಡಲಿಯಲ್ಲಿ ದೋಷವಿರುತ್ತದೆಯಾ? ಅದರ ಪರಿಹಾರ ಹೇಗೆ? | Do You Know About The Different Types Of Doshas? - Kannada BoldSky |
ನಮ್ಮ ಕುಂಡಲಿಯಲ್ಲಿ ದೋಷವಿರುತ್ತದೆಯಾ? ಅದರ ಪರಿಹಾರ ಹೇಗೆ? |
| Published: Tuesday, October 24, 2017, 10:12 [IST] |
ಜ್ಯೋತಿಷ್ಯ ಎನ್ನುವುದು ಒಂದು ವಿಶಾಲವಾದ ವಿಚಾರ. ನಮ್ಮ ಜೀವನದ ಅದೃಷ್ಟ ಹಾಗೂ ವಿಫಲತೆಗಳೆಲ್ಲವೂ ನಮ್ಮ ಭವಿಷ್ಯವನ್ನು ಆಧರಿಸಿಯೇ ಇರುತ್ತದೆ. ಕೆಲವೊಮ್ಮೆ ನಮ್ಮ ಜಾತಕದಲ್ಲಿ ಅಥವಾ ಭವಿಷ್ಯದಲ್ಲಿ ದೋಷದ ಫಲ ವಿರುತ್ತದೆ. ಈ ದೋಷಗಳಿಂದ ನಾವು ಮಾಡುವ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯದೆ ಇರುವುದು ಮತ್ತು ಜೀವನ ಸದಾ ನೋವಿನಿಂದ ಕೂಡಿರುತ್ತದೆ. ದೋಷ ಎನ್ನುವ ಪದವು "ಅನಪೇಕ್ಷಿತ ಅಥವಾ ಒಳ್ಳೆಯ ಫಲಿತಾಂಶ ಪಡೆಯದ ವಿಚಾರ" ಎನ್ನುವ ಅರ್ಥವನ್ನು ನೀಡುತ್ತದೆ. |
ಜ್ಯೋತಿಷ್ಯದಲ್ಲಿ ದೋಷಗಳು ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರಿಂದಲೇ ಅನೇಕ ನೋವು ನಷ್ಟಗಳು ಉಂಟಾಗುತ್ತದೆ ಎನ್ನಲಾಗುತ್ತದೆ. ಜಾತಕದಲ್ಲಿರುವ 12 ಮನೆಗಳಲ್ಲಿ ಸಂಚರಿಸುವ ಗ್ರಹಗತಿಗಳ ಆಧಾರದ ಜೊತೆಗೆ ದೋಷಗಳು ಕೂಡಿಕೊಂಡಿರುತ್ತದೆ. ದೋಷಗಳು ಇರುವಾಗ ಕೆಲವು ಗ್ರಹಗತಿಗಳ ಸಂಚಾರವು ಹೆಚ್ಚು ಪ್ರಾಭವಕ್ಕೆ ಒಳಗಾಗಿರುತ್ತದೆ. |
ನೀವು ನಿಮ್ಮ ಜೀವನದಲ್ಲಿ ಬಹಳಷ್ಟು ಕಷ್ಟ ನೋವುಗಳನ್ನು ಒಂದಾದ ಮೇಲೊಂದರಂತೆ ಅನುಭವಿಸುತ್ತಿದ್ದೀರಿ ಎಂದಾದರೆ ಮೊದಲು ನಿಮ್ಮ ಜಾತಕದಲ್ಲಿ ಯಾವ ದೋಷಗಳಿವೆ ಎಂದು ತಿಳಿದುಕೊಳ್ಳಿ. ದೋಷಗಳಲ್ಲಿಯೂ ಹಲವಾರು ಬಗೆಯ ದೋಷಗಳಿವೆ. ಒಂದೊಂದು ಸಹ ವಿಭಿನ್ನ ಬಗೆಯ ಅನುಭವ ಹಾಗೂ ತೊಂದರೆಯನ್ನುಂಟು ಮಾಡುತ್ತವೆ. ಅವುಗಳ ಕುರಿತು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಮುಂದಿರುವ ವಿವರಣೆಯನ್ನು ನೋಡಿ... |
ಮಾಂಗಲಿಕ ದೋಷ |
ವ್ಯಕ್ತಿಯೋರ್ವನ ಜಾತಕದಲ್ಲಿ ಹನ್ನೆರಡು ಮನೆಗಳಿರುತ್ತವೆ. ಒ೦ದು ಮ೦ಗಳನು ಒ೦ದನೆಯ, ಎರಡನೆಯ, ನಾಲ್ಕನೆಯ, ಏಳನೆಯ, ಎ೦ಟನೆಯ, ಅಥವಾ ಹನ್ನೆರಡನೆಯ ಮನೆಗಳಲ್ಲಿ ಆರೋಹಣ ಕ್ರಮದಲ್ಲಿ ಕ೦ಡುಬ೦ದಲ್ಲಿ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆ ವ್ಯಕ್ತಿಗೆ ಕುಜದೋಷವಿದೆಯೆ೦ದು ಹೇಳಲಾಗುತ್ತದೆ. ಕುಜದೋಷವುಳ್ಳ ವ್ಯಕ್ತಿಯೋರ್ವರು ಮ೦ಗಳ ಗ್ರಹನ ಋಣಾತ್ಮಕ ಪ್ರಭಾವದಡಿಯಲ್ಲಿ ಸಿಲುಕಿಕೊ೦ಡಿರುತ್ತಾರೆ ಎ೦ದು ಹೇಳಲಾಗುತ್ತದೆ. ವೈವಾಹಿಕ ವಿಚಾರದಲ್ಲಿ ಈ ಪ್ರಭಾವವು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ. ಏಕೆ೦ದರೆ, ವಧೂವರರ ಜಾತಕಗಳನ್ನು ಪರಸ್ಪರ ಹೋಲಿಸಿ ಪರಿಶೀಲಿಸುವ ವೇಳೆಯಲ್ಲಿ ಕುಜನ ಸ್ಥಾನಮಾನವು ಒ೦ದು ಅತ್ಯ೦ತ ಪ್ರಮುಖವಾದ ಮಾನದ೦ಡವಾಗಿರುತ್ತದೆ. ವ್ಯಕ್ತಿಯೋರ್ವವರ ಜಾತಕವನ್ನು ಕುಜದೋಷಕ್ಕಾಗಿ ಪರಿಶೀಲಿಸಬೇಕಾಗುತ್ತದೆ ಹಾಗೂ ಆ ವ್ಯಕ್ತಿಯ ಮತ್ತು ಅವರ ಬಾಳಸ೦ಗಾತಿಯಾಗುವವರ ಜಾತಕಗಳು ಹೊ೦ದಾಣಿಕೆಯಾಗುತ್ತವೆಯೇ ಎ೦ಬುದನ್ನು ಮದುವೆಗೆ ಮೊದಲು ತೀರ್ಮಾನಿಸಬೇಕಾಗುತ್ತದೆ. |
ವಿವಾಹದ ಸಂದರ್ಭದಲ್ಲಿ ಗಂಡು ಹೆಣ್ಣಿನ ಜಾತಕವು ಕೂಡುತ್ತದೆಯೇ ಎಂದು ನೋಡುತ್ತಾರೆ. ಕೂಡುತ್ತದೆ ಎಂದಾದರೆ ಕುಂಡಲಿಯಲ್ಲಿ ಕೆಲವು ವಿಚಾರಗಳು ಹೊಂದಾಣಿಕೆಯಾಗುವಂತೆ ಇರಬೇಕು. ಹೀಗೆ ತಾಳೆನೋಡುವಾಗ ವ್ಯಕ್ತಿ ಯಾವ ನಾಡಿಯನ್ನು ಹೊಂದಿದ್ದಾನೆ ಎನ್ನುವುದು ಕುಂಡಲಿಯಲ್ಲಿ ಇರುತ್ತದೆ. ಹುಡುಗ ಮತ್ತು ಹುಡುಗಿಯ ಕುಂಡಲಿಯಲ್ಲಿ ಒಂದೇ ನಾಡಿಯಿದ್ದರೆ ನಾಡಿ ದೋಷ ಉಂಟಾಗುತ್ತದೆ. ನಾಡಿ ಒಂದೇ ಇದ್ದರೆ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳು |
ಉಂಟಾಗುತ್ತದೆ ಎನ್ನಲಾಗುತ್ತದೆ. |
ಪಿತೃದೋಷ |
ನಮ್ಮ ಪೂರ್ವಜರು ಅಥವಾ ಕುಟುಂಬದ ಮುಖ್ಯಸ್ಥರಾದವರು ಕೆಟ್ಟದನ್ನು ಮಾಡಿದಾಗ ಈ ದೋಷ ಸಂಭವಿಸುತ್ತದೆ. ಕುಂಡಲಿಯಲ್ಲಿರುವ ಸಂಪತ್ತಿನ ಮನೆಯಾದ 9ನೇ ಮನೆಯಲ್ಲಿ ಈ ದೋಷವಿರುತ್ತದೆ. ಇದು ಜಾತಕದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಮನೆಯನ್ನು ತಂದೆ ಮತ್ತು ಮನುಷ್ಯನ ಮನೆ ಎಂದು ಪರಿಗಣಿಸಲಾಗುತ್ತದೆ. ಈ ದೋಷ ಇದ್ದ ವ್ಯಕ್ತಿಗೆ ಪ್ರಗತಿ ಹೊಂದಲು ಕಷ್ಟವಾಗುತ್ತದೆ. |
ನಾವು ಮಾಡಿದಂತಹ ಒಳ್ಳೆಯ ಕೆಲಸಗಳು ಅಥವಾ ಪಾಪಗಳು ನಮ್ಮನ್ನು ಬಿಟ್ಟು ಹೋಗುವುದಿಲ್ಲವೆಂದು ಹಿಂದೂ ಧರ್ಮದಲ್ಲಿ ಹೇಳಲಾಗುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಅದರಿಂದ ನಮ್ಮ ಮುಂದಿನ ಪೀಳಿಗೆ ಕೂಡ ಒಳ್ಳೆಯದಾಗುತ್ತಾ ಹೋಗುತ್ತದೆ. ಅದೇ ಪಾಪಕರ್ಮಗಳನ್ನು ಮಾಡಿದರೆ ಅದು ಮುಂದಿನ ಪೀಳಿಗೆಯನ್ನು ಕಾಡುತ್ತಾ ಇರುತ್ತದೆ. ಕೆಲವೊಂದು ಸಂದರ್ಭದಲ್ಲಿ ನಾವು ಎಷ್ಟೇ ಕಷ್ಟಪಟ್ಟರೂ ನಮ್ಮ ಏಳಿಗೆಯೇ ಆಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಹಿಂದಿನವರು ಮಾಡಿರುವಂತಹ ಪಾಪಕರ್ಮಗಳು. ವ್ಯಾಪಾರ ಹಾಗೂ ವಿವಾಹದ ವೇಳೆ ನಮ್ಮ ಹಿರಿಯರು ಮಾಡಿದಂತಹ ಒಳ್ಳೆಯ ಹಾಗೂ ಪಾಪ ಕರ್ಮಗಳು ಬೆಳಕಿಗೆ ಬರುತ್ತದೆ. ಮದುವೆಗಳು ವಿಳಂಬವಾಗುವುದು ಕೂಡ ನಮ್ಮ ಹಿರಿಯುರು ಮಾಡಿರುವಂತಹ ಪಾಪಕರ್ಮಗಳಿಂದಲೇ ಎಂದು ಹೇಳಲಾಗುತ್ತದೆ. ಕೆಲವರಿಗೆ ಎಷ್ಟು ಹುಡುಕಾಡಿದರೂ ಸರಿಯಾದ ಸಂಗಾತಿ ಸಿಗದೆ ಇರುವುದರಿಂದ ಮದುವೆ ವಿಳಂಬವಾಗಿರುತ್ತದೆ. ಇದಕ್ಕೆ ಹಿಂದೂ ಧರ್ಮದ ಪ್ರಕಾರ ಪಿತೃ ದೋಷ |
ಕಾರ್ತಿಕ್ ಜನ್ಮ ದೋಷ |
ಹಿಂದೂ ಪುರಾಣಗಳ ಪ್ರಕಾರ ಈ ದೋಷವು ಕಾರ್ತಿಕ್ ತಿಂಗಳಲ್ಲಿ ಸಂಭವಿಸುತ್ತದೆ. ಅಕ್ಟೋಬರ್ ಮಧ್ಯದಲ್ಲಿ ಪ್ರಾರಂಭವಾಗುತ್ತದೆ. ಮತ್ತು ನವೆಂಬರ್ ಮಧ್ಯದಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಸೂರ್ಯನು ದುರ್ಬಲನಾಗಿರುತ್ತಾನೆ. ಈ ಸಮಯದಲ್ಲಿ ಉಂಟಾಗುವ ದೋಷವು ವ್ಯಕ್ತಿ ಹಾಗೂ ಆತನ ಕುಟುಂಬದ ಮೇಲೂ ದೋಷ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಜನಿಸಿದ ವ್ಯಕ್ತಿಯು ಕಾರ್ತಿಕ ಜನ್ಮ ದೋಷವನ್ನು ಹೊಂದಿರುತ್ತಾನೆ ಎಂದು ಹೇಳಲಾಗುತ್ತದೆ. |
ಇದು ವ್ಯಕ್ತಿಯ ಜಾತಕದಲ್ಲಿ ಗಂಭೀರವಾದ ಸ್ಥಿತಿಯಾಗಿದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಇದು ವ್ಯಕ್ತಿಯ ಜೀವನದಲ್ಲಿ ಎಲ್ಲವನ್ನೂ ಹಾಳುಮಾಡುತ್ತದೆ. ಉತ್ತಮ ಗ್ರಹಗಳ ಸಂಚಾರವಿದ್ದರೂ ಈ ದೋಷದಿಂದ ದುರಾದೃಷ್ಟ ಸಂಭವಿಸುತ್ತದೆ. ಇವುಗಳಿಗೆ ಜ್ಯೋತಿಷ್ಯದಲ್ಲಿರುವ ಪರಿಹಾರ ಕ್ರಮವನ್ನು ಅನುಸರಿಸಿ ದೋಷದಿಂದ ಮುಕ್ತರಾಗಬಹುದು. |
ರೌಡಿಗಳ ಜಗತ್ತಿನಲ್ಲಿ 'ರಾಜಣ್ಣನ ಮಗ' - Varthabharati |
ರೌಡಿಸಂ ಚಿತ್ರ ಎಂದೊಡನೆ ಕನ್ನಡ ಸಿನೆಮಾ ಪ್ರೇಕ್ಷಕನಲ್ಲಿ ಮೂಡುವಂಥ ಎಲ್ಲ ಅಂಶಗಳನ್ನು ಇರಿಸಿಕೊಂಡೇ ತಯಾರು ಮಾಡಿರುವಂಥ ಚಿತ್ರ ರಾಜಣ್ಣನ ಮಗ. ಬಹುಶಃ ನಿರ್ದೇಶಕ ಕೋಲಾರದವರಾದ ಕಾರಣವೋ ಅಥವಾ ಕನ್ನಡದ ಟ್ರೆಂಡ್ ಎಂದೋ ಗೊತ್ತಿಲ್ಲ, ತೆಲುಗು ಶೈಲಿಯ ಮೇಕಿಂಗ್ ಚಿತ್ರದಲ್ಲಿದೆ. ಹಾಗಂತ ವಿಪರೀತ ರಕ್ತಪಾತವೇನಿಲ್ಲ. ಆದರೆ ಅತಿಮಾನುಷ ಹೊಡೆದಾಟದ ದೃಶ್ಯಗಳಿವೆ. ಅದಕ್ಕೆ ನ್ಯಾಯವೊದಗಿಸುವಂಥ ಕಟ್ಟುಮಸ್ತಾದ ನಾಯಕನಿದ್ದಾನೆ ಎನ್ನುವುದೇ ಚಿತ್ರದ ಹೈಲೈಟ್. |
ಗಂಡ, ಹೆಂಡತಿ ಮತ್ತು ಮೂರು ಮಂದಿ ಗಂಡು ಮಕ್ಕಳಿರುವ ನಂದನವನದಂಥ ಕುಟುಂಬ. ಆದರೆ ಅಷ್ಟರಲ್ಲೇ ಅವರ ಆನಂದ ನಂದಿಸುವಂಥ ಘಟನೆಯೊಂದು ನಡೆಯುತ್ತದೆ. ಪುತ್ರ ಗೌರೀಶಂಕರ ಕೊಲೆ ಪ್ರಕರಣವೊಂದಲ್ಲಿ ಜೈಲು ಸೇರುತ್ತಾನೆ. ಸೆರೆಮನೆ ಸೇರಿದ ಮಗನನ್ನು ಬೇಕೆಂದೇ ಮರೆತು ಬಿಡುತ್ತಾರೆ ತಂದೆ. ಆದರೆ ಎಂಟು ವರ್ಷಗಳ ಬಳಿಕ ಕಾರಾಗೃಹದಿಂದ ಮನೆಗೆ ಮರಳುವ ಗೌರಿಶಂಕರನನ್ನು ತಂದೆಯ ತಿರಸ್ಕಾರದ ಮಾತುಗಳು ಮನೆಯಿಂದ ಹೊರಗೆ ಹೋಗುವಂತೆ ಮಾಡುತ್ತವೆ. ಆದರೆ ಮತ್ತೊಂದೆಡೆ ಪಾತಕ ಲೋಕ ಕೈಬೀಸಿ ಸ್ವಾಗತಿಸುತ್ತದೆ. ಆದರೆ ಗೌರಿಗೆ ಮಾತ್ರ ಇದರ ಅರಿವೇ ಆಗುವುದಿಲ್ಲ. ಗೌರಿಯ ಹೆಸರಿನಲ್ಲಿ ಕಾಳದಂಧೆಗಳೇ ನಡೆಯತೊಡಗುತ್ತವೆ. ಆದರೆ ಆತ ಅಣ್ಣನ ಮಕ್ಕಳು ಕಲಿಯುವ ಶಾಲೆಯತ್ತ ಹೋಗಿ ಅವರಿಗೆ ತನ್ನಮ್ಮ ಮಾಡಿ ಕೊಟ್ಟ ಅಡುಗೆಯ ರುಚಿ ಸವಿಯುತ್ತಿರುತ್ತಾನೆ. ಆಸ್ಪತ್ರೆಯಲ್ಲಿ ಪರಿಚಿತಳಾದ ವೈದ್ಯೆಯನ್ನು ಪ್ರೀತಿಸುತ್ತಾನೆ. ಜೊತೆಗಿದ್ದ ಸ್ನೇಹಿತರಿಗೆ ಸಹಾಯ ಮಾಡುತ್ತಾನೆ. ಆದರೆ ಸ್ವತಃ ಗೌರಿ ತಂದೆ ಮತ್ತು ಪ್ರೇಯಸಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡುವ ಪರಿಸ್ಥಿತಿ ಉಂಟಾಗುತ್ತದೆ. ಅದು ಯಾಕೆ ಎನ್ನುವುದೇ ಚಿತ್ರದ ಪ್ರಮುಖ ಅಂಶ. ಅದರ ಜೊತೆಯಲ್ಲೇ ಗೌರಿ ಯಾಕೆ ಕೊಲೆಗಾರನಾದ ಎನ್ನುವ ವಿಚಾರಕ್ಕೆ ಚಿತ್ರದ ಕೊನೆಯಲ್ಲಿ ಕತೆಗೆ ತಿರುವು ನೀಡುವ ರೀತಿಯಲ್ಲಿ ಉತ್ತರ ನೀಡಲಾಗಿದೆ. ಅದೆಲ್ಲವನ್ನು ಚಿತ್ರಮಂದಿರದಲ್ಲಿ ನೋಡಿದರೆ ಚೆನ್ನಾಗಿರುತ್ತದೆ. |
ರಾಜಣ್ಣನ ಮಗ ಗೌರೀಶಂಕರನ ಪಾತ್ರದಲ್ಲಿ ಹರೀಶ್ ಜಲಗೆರೆ ಜೀವಂತಿಕೆ ತುಂಬಿದ್ದಾರೆ. ಇದು ಅವರಿಗೆ ಎರಡನೇ ಚಿತ್ರವಾದರೂ ಪಾತ್ರಕ್ಕೆ ಬೇಕಾದ ಬಿಲ್ಡಪ್ ನೀಡುವಲ್ಲಿ ಅವರ ದೇಹ ಮತ್ತು ಮುಖಭಾವ ಸಹಕಾರಿಯಾಗಿದೆ. ಈಗಾಗಲೇ ಜೂನಿಯರ್ ಟೈಗರ್ ಪ್ರಭಾಕರ್ ಎಂದೇ ಗುರುತಿಸಿಕೊಳ್ಳುತ್ತಿರುವ ಹರೀಶ್‌ರಲ್ಲಿ ಆರಂಭ ಕಾಲದ ಪ್ರಭಾಕರ್ ಹೇರ್‌ಸ್ಟೈಲ್ ಮತ್ತು ಲುಕ್ಕು ಇದೆಯೆನ್ನುವುದು ಎಲ್ಲ ಪ್ರೇಕ್ಷಕರ ಅಭಿಪ್ರಾಯ. ಆರಡಿ ಎತ್ತರದ ಈ ನಾಯಕ ಕರಾಟೆ ಮತ್ತು ಜಿಮ್ನಾಸ್ಟಿಕ್‌ನಲ್ಲಿ ಪಳಗಿರುವುದರಿಂದ ಆ್ಯಕ್ಷನ್ ದೃಶ್ಯಗಳಿಗೆ ಸಹಜ ಕಳೆ ಬಂದಿದೆ. ಡಿಫರೆಂಟ್ ಡ್ಯಾನಿಯ ಸಾಹಸ ಸಂಯೋಜನೆಯ ಫೈಟುಗಳಿಗೆ ರವಿಬಸ್ರೂರು ಹಿನ್ನೆಲೆ ಸಂಗೀತದ ಬೀಟು ಸೇರಿದಾಗ ಥಿಯೇಟರ್‌ನಲ್ಲಿ ಚಪ್ಪಾಳೆ ಮೊಳಗುತ್ತದೆ. ಎರಡೆರಡು ಲುಕ್‌ನಲ್ಲಿ ಪ್ರತ್ಯಕ್ಷಗೊಳ್ಳುವ ನಾಯಕ ಎರಡಕ್ಕೂ ನ್ಯಾಯವೊದಗಿಸಿದ್ದಾರೆ. |
ಗೌರೀಶಂಕರನ ಪ್ರೇಯಸಿ ಡಾಕ್ಟರ್ ಪಾತ್ರದಲ್ಲಿ ನಟಿಸಿರುವ ಅಕ್ಷತಾ ಟಿಪಿಕಲ್ ವೈದ್ಯೆಯ ನಿಷ್ಕಳಂಕ ಅಂದದೊಡನೆ ಮನಸೆಳೆಯುತ್ತಾರೆ. ರಾಜಣ್ಣನಾಗಿ ಚರಣ್ ರಾಜ್‌ಗೆ ನಟಿಸಲು ಹೇಳಿಕೊಳ್ಳುವಂಥ ಅವಕಾಶಗಳೇನೂ ಇಲ್ಲ. ಆದರೆ ಕೆಲವೇ ದೃಶ್ಯಗಳಲ್ಲಿ ಬಂದರೂ ನೆನಪಿರಿಸಿಕೊಳ್ಳುವಂಥ ಪಾತ್ರವನ್ನು ನಿಭಾಯಿಸಿದ್ದಾರೆ ಎನ್ನಬಹುದು. ತಾಯಿಯಾಗಿ ವೀಣಾ ಬಾಲಾಜಿಯವರದು ಮಮತಾಮಯಿ ಪಾತ್ರ. ರಾಜೇಶ್ ನಟರಂಗ ಇತ್ತೀಚೆಗೆ ಪೊಲೀಸ್ ಅಧಿಕಾರಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿರುವ ಕಾರಣವೋ ಗೊತ್ತಿಲ್ಲ, ತುಂಬ ಸ್ವಾಭಾವಿಕ ಕುಣಿಯುವಂತೆ ಮಾಡುತ್ತದೆ ನಟನೆಯಿಂದ ಇಷ್ಟವಾಗುತ್ತಾರೆ. ಐಟಂ ಹಾಡೊಂದು ಪಡ್ಡೆಗಳನ್ನು ಕುಳಿತಲ್ಲೇ ಕುಣಿಸುತ್ತದೆ. ಪ್ರಮೋದ್ ಆರ್. ಛಾಯಾಗ್ರಹಣ ಚಿತ್ರಕ್ಕೆ ಕಳೆ ನೀಡಿದೆ. |
ಚಿತ್ರದ ಕತೆಯನ್ನು ಗಮನಿಸಿದಾಗ ತೊಂಬತ್ತರ ದಶಕದ ಆರಂಭದಲ್ಲಿ ತೆರೆಕಂಡಿದ್ದ 'ಮೋಡದ ಮರೆಯಲ್ಲಿ' ಚಿತ್ರ ನೆನಪಾಗುತ್ತದೆ. ಅದರಂತೆ ಅನೇಕ ಚಿತ್ರಗಳಲ್ಲಿ ಅನಿವಾರ್ಯವಾಗಿ ರೌಡಿಸಂಗೆ ಸೇರಿಕೊಳ್ಳುವ ನಾಯಕನ ಕತೆಯನ್ನು ತೋರಿಸಲಾಗಿದೆ. ಆದರೆ ಅವುಗಳಂತೆ ಇಲ್ಲಿಯೂ ದುರಂತ ಅಂತ್ಯ ನೀಡಿರುವುದು ಮಾತ್ರ ಅನಗತ್ಯ ಎಂಬಂತಿದೆ. ಉಳಿದಂತೆ ಕನ್ನಡಕ್ಕೆ ಒಬ್ಬ ಆ್ಯಕ್ಷನ್ ಹೀರೋವನ್ನು ನೀಡುವಲ್ಲಿ ಚಿತ್ರ ಯಶಸ್ವಿಯಾಗಿರುವುದು ನಿಜ. |
ಕನ್ನಡಕ್ಕೆ ಗುಂಗುರು ಕೂದಲ ಚೆಲುವೆ ಗೌರಿ! | Gauri Karnik's debut in Kannada - ಕನ್ನಡಕ್ಕೆ ಗುಂಗುರು ಕೂದಲ ಚೆಲುವೆ ಗೌರಿ! - Kannada Filmibeat |
| Published: Friday, February 6, 2009, 15:36 [IST] |
ಹಿಂದಿ ಚಿತ್ರರಂಗದ ಗುಂಗುರು ಕೂದಲ ಬೆಡಗಿ ಗೌರಿ ಕಾರ್ನಿಕ್ ಗೊತ್ತಲ್ಲಾ? 'ಸುರ್' ಎಂಬ ಹಿಂದಿ ಚಿತ್ರದಲ್ಲಿ ಪ್ರೇಕ್ಷಕರನ್ನು ಸೂರೆಗೊಂಡು ಕಾಣೆಯಾದ ನಾಯಕಿ. ಈಗ ಮತ್ತೆ ಕನ್ನಡದಲ್ಲಿ ಪ್ರತ್ಯಕ್ಷವಾಗಿದ್ದಾರೆ! ಈಕೆ ನಟಿಸಲಿರುವುದು ಕಾರಂಜಿ ಚಿತ್ರದಲ್ಲಿ. ಚಿತ್ರದ ಹೀರೊ ವಿಜಯ್ ರಾಘವೇಂದ್ರ. |
ಲಕ್ಕಿ ಆಲಿಯೊಂದಿಗೆ ಈಕೆ ನಟಿಸಿದ್ದ ಸುರ್ ಚಿತ್ರ ಉತ್ತಮ ವಿಮರ್ಶೆಗೆ ಪಾತ್ರವಾಗಿತ್ತು. ಆ ಚಿತ್ರದ ನಂತರ ಆಕೆ ನಾಪತ್ತೆಯಾಗಿ ಬಿಟ್ಟಳು. ಇಷ್ಟು ದಿನ ಎಲ್ಲಿದ್ರಿ ಎಂದು ಕೇಳಿದ ಪತ್ರಕರ್ತರಿಗೆ ಆಕೆ ಉತ್ತರ ಕೇಳಿ ದಿಗ್ಭ್ರಮೆಯಾಗಿದೆ. ಆಕೆ ಲಂಡನ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರಂತೆ. ಓದು ಮುಗಿಯುತ್ತಿದ್ದಂತೆಯೇ ಬಣ್ಣದ ಲೋಕಕ್ಕೆ ಓಡಿಬಂದಿದ್ದಾರೆ. |
ಐದು ಮಂದಿ ರಾಕ್ ಬ್ಯಾಂಡ್ ಹುಡುಗರ ಚಿತ್ರಕಥೆಯನ್ನು ಕಾರಂಜಿ ಒಳಗೊಂಡಿದೆ. ರಾಕ್ ಬ್ಯಾಂಡ್ ಹುಡುಗರ ತರಲೆ ತಾಪತ್ರಯಗಳು, ಏರಿಳಿತಗಳಲ್ಲಿ ಸಾಗುವ ಜೀವನ ಕಡೆಗೆ ಸೋಲಿನಿಂದ ಹೊರಬಂದು ಒಂದಾಗುವ ಕಥೆಯನ್ನು ತೆರೆಗೆ ತರುತ್ತಿದ್ದಾರೆ. ರಾಕ್ ಬ್ಯಾಂಡ್ ಸದಸ್ಯರಲ್ಲಿ ಗೌರಿ ಸಹ ಒಬ್ಬಳು. 'ಸುರ್' ಒಂದು ಸಂಗೀತ ಪ್ರಧಾನ ಚಿತ್ರವಾಗಿತ್ತು. ಅದೇ ರೀತಿಯಲ್ಲಿ 'ಕಾರಂಜಿ' ಸಹ ಸಂಗೀತ ಪ್ರಧಾನವಾಗುಳ್ಳ ಚಿತ್ರ. ಸ್ವತಃ ಉತ್ತಮ ಗಾಯಕಿಯೂ ಆಗಿರುವ ಗೌರಿ ಕಾರ್ನಿಕ್ ಕೆಲ ವರ್ಷಗಳಿಂದ ಹಿಂದೂಸ್ತಾನಿ ಸಂಗೀತ ಸಾಧನೆಯಲ್ಲಿ ತೊಡಾಗಿಕೊಂಡಿದ್ದಾರೆ. |
Read more about: ಕನ್ನಡ ಸಿನಿಮಾ kannada movies ವಿಜಯ ರಾಘವೇಂದ್ರ ಕಾರಂಜಿ vijaya raghavendra ಗೌರಿ ಕಾರ್ನಿಕ್ ಗುಂಗುರು ಕೂದಲು gauri karnik karanji |
ಸಿ ವೋಟರ್ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸಾಧ್ಯತೆ |
ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಣಾಹಣಿ ಹೋರಾಟ ನಡೆಯುವ ಮುನ್ಸೂಚನೆಯನ್ನು ಸಿ ವೋಟರ್ ಸಮೀಕ್ಷೆ ನೀಡಿದೆ. ಸಿ ವೋಟರ್ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 224 ಕ್ಷೇತ್ರಗಳ ಪೈಕಿ 102 ಸೀಟುಗಳನ್ನು ಗೆಲ್ಲಲಿದೆ. |
ಬಿಜೆಪಿ 96 ಸೀಟುಗಳನ್ನು ಗೆಲ್ಲಲಿದೆ. ಜೆಡಿಎಸ್ 25 ಸ್ಥಾನಗಳನ್ನು ಗೆಲ್ಲಬಹುದು ಇತರೆ 1 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ. ಆದರೆ ಚುನಾವಣೆಗೆ ಇನ್ನೂ ಕೆಲವು ತಿಂಗಳು ಬಾಕಿ ಉಳಿದಿದ್ದು, ಅಷ್ಟರಲ್ಲಿ ಫಲಿತಾಂಶ ಮೇಲುಕೆಳಗಾಗುವ ಸಂಭವವೂ ಇಲ್ಲದಿಲ್ಲ. |
2013ರ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ ಕಾಂಗ್ರೆಸ್ ಪಕ್ಷವು 20 ಸ್ಥಾನಗಳನ್ನು ಈ ಬಾರಿ ಕಳೆದುಕೊಳ್ಳಲಿದೆ, ಬಿಜೆಪಿ 56 ಸ್ಥಾನಗಳನ್ನು ಗಳಿಸಿಕೊಂಡರೆ, ಜೆಡಿಎಸ್ 15 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಮತ್ತು ಇತರೆ ಪಕ್ಷಗಳು 21 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಪ್ರಸಕ್ತ ಸಮೀಕ್ಷೆಯನ್ನು ಗಮನಿಸಿದರೆ ಜೆಡಿಎಸ್ ಕಿಂಗ್ ಮೇಕರ್ ಪಾತ್ರವನ್ನು ವಹಿಸುವ ಮೂಲಕ ಮತ್ತು ರಾಜ್ಯ ರಾಜಕೀಯದಲ್ಲಿ ತನ್ನ ಗುರುತನ್ನು ಅಚ್ಚೊತ್ತಬಹುದು. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದ್ದು, ಜೆಡಿಎಸ್ ಕಿಂಗ್ ಮೇಕರ್ ಪಾತ್ರ ವಹಿಸುತ್ತದೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕು. |
ಒಂದುಗೂಡಿವೆ ಜಿಯೋ ಮ್ಯೂಸಿಕ್ ಹಾಗೂ ಸಾವನ್ ಏಷ್ಯಾದಲ್ಲೇ ಅತಿದೊಡ್ಡ network... |
ಒಂದುಗೂಡಿವೆ ಜಿಯೋ ಮ್ಯೂಸಿಕ್ ಹಾಗೂ ಸಾವನ್ ಏಷ್ಯಾದಲ್ಲೇ ಅತಿದೊಡ್ಡ network… |
December 6, 2018 Sunil Sirasangi 0 Comments . South Asia, Jio Music, Jio Saavn, media, music Saavn, ಜಿಯೋ ಮ್ಯೂಸಿಕ್, ದಕ್ಷಿಣ ಏಷ್ಯಾ, ಸಾವನ್' |
ಹೊಸ ಏಕೀಕೃತ ವೇದಿಕೆ ಎಲ್ಲ ಆಪ್‌ಸ್ಟೋರ್‌ಗಳಲ್ಲಿ ಹಾಗೂ ರಿio.ಛಿom/ರಿiosಚಿಚಿvಟಿ ಮೂಲಕ ಲಭ್ಯ |
45 ಮಿಲಿಯನ್‌ಗೂ ಹೆಚ್ಚಿನ ಹಾಡುಗಳು ಹಾಗೂ ಪ್ರಶಸ್ತಿ ವಿಜೇತ ಒರಿಜಿನಲ್ ಕಂಟೆಂಟ್ ಜೊತೆಗೆ ಗ್ರಾಹಕರಿಗೆ ವೈವಿಧ್ಯಮಯ ಆಡಿಯೋ ಅನುಭವ ನೀಡಲಿದೆ ಜಿಯೋಸಾವನ್ |
ಏಕೀಕೃತ ಜಿಯೋಸಾವನ್ ವೇದಿಕೆಗೆ ಬರಲಿದ್ದಾರೆ ಸದ್ಯ ಜಿಯೋಮ್ಯೂಸಿಕ್ ಹಾಗೂ ಸಾವನ್ ಬಳಸುತ್ತಿರುವ ಅಷ್ಟೂ ಗ್ರಾಹಕರು |
ಜಿಯೋ ಗ್ರಾಹಕರಿಗೆ ಸಿಗಲಿದೆ ಏಕೀಕೃತ ಆಪ್‌ಗೆ ಮುಕ್ತ ಪ್ರವೇಶ |
ಮುಂಬಯಿ: ಸಂಗೀತ, ಮೀಡಿಯಾ ಹಾಗೂ ಕಲಾವಿದರಿಗಾಗಿ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ವೇದಿಕೆಯಾದ 'ಜಿಯೋಸಾವನ್' ಅನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆ ಸಾವನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಇಂದು ಲೋಕಾರ್ಪಣೆಗೊಳಿಸಿದೆ. ಭಾರತದ ಅತ್ಯಂತ ಜನಪ್ರಿಯ ಮ್ಯೂಸಿಕ್ ಆಪ್ ಜಿಯೋಮ್ಯೂಸಿಕ್ ಹಾಗೂ ಭಾರತದ ಮುಂಚೂಣಿ ಜಾಗತಿಕ ಓವರ್-ದ-ಟಾಪ್ ವೇದಿಕೆ ಸಾವನ್‌ಗಳ ಅಧಿಕೃತ ಏಕೀಕರಣವನ್ನು ಜಿಯೋಸಾವನ್ ಪ್ರತಿನಿಧಿಸಲಿದೆ. ಈ ಹೊಸ ಏಕೀಕೃತ ಜಿಯೋಸಾವನ್ ಆಪ್ ಜಿಯೋ ಆಪ್ ಸ್ಟೋರ್ ಸೇರಿದಂತೆ ಎಲ್ಲ ಆಪ್ ಸ್ಟೋರ್‌ಗಳಲ್ಲಿ, ಜಿಯೋಫೋನ್‌ನಲ್ಲಿ ಹಾಗೂ ತಿತಿತಿ.ರಿio.ಛಿom/ರಿiosಚಿಚಿvಟಿ ಮೂಲಕ ಗ್ರಾಹಕರಿಗೆ ಲಭ್ಯವಾಗಲಿದೆ. |
ನಗ್ನತೆ ಸ್ವತಂತ್ರತೆಯ ಸಂಕೇತ :ಕಿಮ್ ಕರ್ದೆಶಿಯಾನ್ | Kim Kardashian | Nude Phootshoot | US Harper's Bazaar | Playboy | Reality Show | PETA | Cristiano Ronaldo| ನಗ್ನತೆ ಸ್ವತಂತ್ರತೆಯ ಸಂಕೇತ :ಕಿಮ್ ಕದರ್ಶಿಯಾನ್ - Kannada Filmibeat |
29 min ago ಹೊಸ ದಾಖಲೆ ಬರೆದ 'ಬುಟ್ಟ ಬೊಮ್ಮಾ' ಹಾಡು, ಸೂಪರ್ ಎಂದ ವಾರ್ನರ್ |
31 min ago ಆರಾಧ್ಯ ದೈವ ರಾಜ್‌ಕುಮಾರ್ ಬಗ್ಗೆ ಜಗ್ಗೇಶ್ ಭಾವುಕ ಮಾತು |
43 min ago ಎರಡನೇ ಪತ್ನಿ ಪರಿಚಯ ಮಾಡಲು ಪ್ರೆಸ್‌ಮೀಟ್ ಮಾಡಲಿದ್ದಾರೆ ಪ್ರಭುದೇವ! |
| Published: Wednesday, April 21, 2010, 11:17 [IST] |
ಹಾಲಿವುಡ್ ನಟಿ ಕಿಮ್ ಬೆತ್ತಲೆ ಚಿತ್ರಕ್ಕೆ ಭಾರಿ ಡಿಮ್ಯಾಂಡ್, ಹುಟ್ಟುಡುಗೆಯಲ್ಲಿ ಕಿಮ್ ಕರ್ದೆಶಿಯಾನ್ ರನ್ನು ಸೆರೆ ಹಿಡಿದಿದ್ದು ಖ್ಯಾತ ಫೋಟೋ ಗ್ರಾಫರ್ ಅಮಂಡಾ ಡಿ ಕಾಡೆನೆಟ್. 29 ವರ್ಷದ ಈ ನಟಿ ತಾನು ಬೆತ್ತಲೆಯಾಗಿ ಕಾಣಿಸಿಕೊಳ್ಳುವುದು ಸ್ವತಂತ್ರತೆಯ ಸಂಕೇತ ಎಂದು ಎದ್ದೆಯುಬ್ಬಿಸಿ ಹೇಳುತ್ತಾಳೆ. ಒಟ್ಟಿನಲ್ಲಿ ಹಾರ್ಪರ್ ಬಜಾರ್ ಪತ್ರಿಕೆ ಬಿಸಿ ಮಸಾಲೆ ದೊಸೆಯಂತೆ ಖರ್ಚಾಗುತ್ತಿದೆ. |
ಯೌವನಾವಸ್ಥೆಗೆ ಕಾಲಿಟ್ಟ ದಿನಗಳಲ್ಲಿ ಅಂಗಾಂಗಗಳು ಬಲಿಯುವ ಸಮಯದಲ್ಲಿ ನಾನು ಎಲ್ಲರಿಗಿಂತ ಉತ್ತಮವಾದ ಬಲಿಷ್ಠವಾದ ದೇಹ ನನ್ನದಾಗಲಿ ಎಂದು ಬಯಸುತ್ತಿದ್ದೆ. ಇದಕ್ಕಾಗಿ ದಿನವೂ ಪ್ರಾರ್ಥಿಸುತ್ತಿದ್ದೆ. ಈಗ ಅದೆಲ್ಲವೂ ನನಗೆ ಸಿಕ್ಕಿದೆ ಎಂದು ನಿಂತಲ್ಲೇ ದೇವರಿಗೆ ಧನ್ಯವಾದ ರೂಪದಿ ಫ್ಲೈಯಿಂಗ್ ಕಿಸ್ ನೀಡುತ್ತಾಳೆ. |
ನಮ್ಮ ಬೆಂಗಾಲಿ ಬೆಡಗಿ ಬಿಪಾಶ ಬಸುಗೆ ಗಾಢ ಚುಂಬನದ ರುಚಿ ನೀಡಿದ್ದ ಖ್ಯಾತ ಪುಟ್ಬಾಲ್ ತಾರೆ ಕ್ರಿಸ್ಟಿಯನೋ ರೊನಾಲ್ಡೊ ಈಕೆಯ ಸದ್ಯದ ಚುಂಬನ ಪ್ರೇಮಿ. ರೊನಾಲ್ಡೋ ಕಿಸ್ ಗಿಂತ ಕಿಮ್ ಕೊಟುವ ಕಿಸ್ ಗ್ರೇಟ್ ಅಂತೆ ಹಾಗಂತ ಇಡೀ ಹಾಲಿವುಡ್ ನಲ್ಲಿ ಸುದ್ದಿ. ಕಿಸ್ ಜೊತೆಗೆ ಕಿಮ್ ಗೆ ತನ್ನ ಪೃಷ್ಠದ ಮೇಲೆ ಭಾರಿ ಹೆಮ್ಮೆ. ಯಾರಿಗೂ ಇಲ್ಲದ ಸುಂದರವಾದ ಶೇಪ್ ನನ್ನದು ಎಂದೇ ಆಕೆಯ ನಂಬಿಕೆ. |
ಬಚ್ಚಿಟ್ಟಿ ಕೊಂಡರೆ ಏನು ಪ್ರಯೋಜನೆ ಬೆತ್ತಲಾದರಷ್ಟೇ ಸುದ್ದಿ ಎನ್ನುವ ಕಿಮ್, ಸಿನಿಮಾಗಿಂತ ಟಿವಿಯಲ್ಲೇ ಮಿಂಚಿತ್ತಿದ್ದಾರೆ. ಈಕೆ ನಡೆಸಿಕೊಡುವ Keeping Up with the Kardashians ಕಾರ್ಯಕ್ರಮ ಅತಿ ಜನಪ್ರಿಯ. 2007ರಲ್ಲಿ ಪ್ಲೇ ಬಾಯ್ ಮ್ಯಾಗಜೀನ್ ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ಕಿಮ್, ರೂಪದರ್ಶಿ, ನಟಿ, ನಿರ್ಮಾಪಕಿ ಹಾಗೂ ಮಳಿಗೆ ಓನರ್ ಕೂಡ ಹೌದು. ಗೆಳೆಯ ರೇ ಜೆ ಜೊತೆಗಿನ ಸರಸಮಯ ದೃಶ್ಯಗಳ ವಿಡಿಯೋ ವೆಬ್ ಲೋಕಕ್ಕೆ ಸೇರಿ ಎಲ್ಲೆಡೆ ಹರಿದಾಡಿ ಕೊನೆಗೆ ಅದನ್ನು ಪ್ರಸಾರ ಮಾಡಿದ ಸಂಸ್ಥೆಯಿಂದ ಸುಮಾರು 5ಮಿಲಿಯನ್ ಡಾಲರ್ ಕಕ್ಕಿಸಿದ ಕೀರ್ತಿ ಕಿಮ್ ಗೆ ಸಲ್ಲುತ್ತದೆ. |
ಕಿಮ್ ಥಾಮಸ್ ರನ್ನು 2000 ರಲ್ಲೇ ವರಿಸಿದ್ದಳು. ಆತನನ್ನು ವಿಚ್ಛೇದನ ಪಡೆದ ನಂತರ ರೇಜೆ, ರೆಗ್ಗಿ ಬುಷ್ ಜೊತೆ ಒಡನಾಟದ ನಂತರ ಈಗ ರೊನಾಲ್ಡೋ ಸರದಿ. ಪ್ಲೇ ಬಾಯ್ ಮ್ಯಾಗಜೀನ್ ಗಾಗಿ ಬೆತ್ತಲೆಯಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ ಕಿಮ್ , ಈಗಿನ ನಗ್ನ ಫೋಟೋ ಶೂಟ್ ಗೆ ಸಮರ್ಥನೆ ನೀಡಿದ್ದಾರೆ. ಆಗ ಗೊತ್ತಿಲ್ಲದೆ ಬೆತ್ತಲಾದೆ, ಈಗ ಗೊತ್ತಿದ್ದು ಬೆತ್ತಲಾಗಿದ್ದೀನಿ ಎಂದಿದ್ದಾರೆ. ಮರಿ ಬೆಕ್ಕೊಂದರನ್ನು ಎತ್ತಿ ಹಿಡುದು ಬೆಕ್ಕಿನ ನಡಿಗೆ ಇಟ್ಟಿದ್ದ ಕಿಮ್ ವಿರುದ್ಧ ಪೆಟಾ ಅನಿಮಲ್ ಕೇರ್ ನ ಸಿಟ್ಟಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಿಮ್, ನಾನು ಯಾವುದೇ ಪ್ರಾಣಿಗಳಿಗೂ ತೊಂದರೆ ಕೊಟ್ಟಿಲ್ಲ, ಕೊಡುವುದಿಲ್ಲ ಎಂದಿದ್ದರು. ಇದರಲ್ಲಿ ಮನುಷ್ಯ ಪ್ರಾಣಿಗಳು ಸೇರಿದಿಯೇ ಎಂದು ಯಾರು ಕೇಳಲಿಲ್ಲ ಸದ್ಯ! |
Read more about: ಚುಂಬನ ಬೆತ್ತಲೆ ಪೆಟಾ ರೊನಾಲ್ಡೋ ಹಾಲಿವುಡ್ ನಗ್ನ ಅಮೆರಿಕ ರಿಯಾಲಿಟಿ ಶೋ kim kardashian cristiano ronaldo peta nude photoshoot harper bazaar hollywood america reality show ಕಿಮ್ ಕರ್ದೆಶಿಯಾನ್ |
ಈಗ ಹಿಂದಿಯಲ್ಲಿ ಸೌಥ್ ಚಲನಚಿತ್ರಗಳನ್ನು ಡೌನ್ಲೋಡ್ ಮಾಡಲು ಟಾಪ್ 5 HD ಸೈಟ್ಗಳು ಇಲ್ಲಿವೆ. | Digit Kannada |
ಈಗ ಹಿಂದಿಯಲ್ಲಿ ಸೌಥ್ ಚಲನಚಿತ್ರಗಳನ್ನು ಡೌನ್ಲೋಡ್ ಮಾಡಲು ಟಾಪ್ 5 HD ಸೈಟ್ಗಳು ಇಲ್ಲಿವೆ. |
ಇವರಿಂದ Ravi Rao | ಪ್ರಕಟಿಸಲಾಗಿದೆ 25 Jan 2018 |
ಉತ್ತರ ಭಾರತೀಯಾರಿಗೊಂದು ಸಿಹಿಸುದ್ದಿ, ಸೌಥ್ ಮೂವೀಸ್ ಡೌನ್ಲೋಡ್ ಮಾಡಲು ಟಾಪ್ 5 HD ಸೈಟ್ಗಳು ನಿಮಗಾಗಿ. |
ಈ ದಿನಗಳಲ್ಲಿ ದಕ್ಷಿಣ ಭಾರತೀಯ ಚಲನಚಿತ್ರೋದ್ಯಮವು ಚಲನಚಿತ್ರ ಉದ್ಯಮದಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿಮಗೆ ತಿಳಿದಿದೆ. ಇದಕ್ಕೆ ದೊಡ್ಡ ಉದಾಹರಣೆ BAHUBALI ಚಲನಚಿತ್ರವಾಗಿದೆ. ಜನರು ದಕ್ಷಿಣದ ಚಲನಚಿತ್ರಗಳನ್ನು HD ಯಲ್ಲಿ ಮತ್ತು ಹಿಂದಿ ಭಾಷೆಯಲ್ಲಿ ವೀಕ್ಷಿಸುವುದಕ್ಕೆ ಬಹಳ ಕುತೂಹಲದಿಂದ ಕೂಡಿರುತ್ತಾರೆ. ಅದಕ್ಕಾಗಿ ನಾವು ನಿಮಗೆ ಈ 5 ಅತ್ಯುತ್ತಮ ಸೈಟನ್ನು ನೀಡುತ್ತೇವೆ. ಇವು ಇತ್ತೀಚಿನ ಸೌತ್ ಸಿನೆಮಾವನ್ನು ಡೌನ್ಲೋಡಿಂಗ್ ಮಾಡಲು ಅತ್ಯುತ್ತಮವಾಗಿದೆ. |
(1) HDmoviemaza.com |
(2) Bolly4u.cc |
(3) Khatrimaza.com |
(4) Movievoom/Moviesvilla |
(5) Moviescounter |
HDmoviemaza.com |
ದಕ್ಷಿಣ ಸಿನೆಮಾವನ್ನು ಡೌನ್ಲೋಡಿಂಗ್ ಮಾಡಲು HDMOVIEMAZA ಅತ್ಯಂತ ಪ್ರಸಿದ್ಧ ತಾಣವಾಗಿದೆ, ಇಲ್ಲಿ ಎಲ್ಲಾ ರೀತಿಯ ಸೌತ್ ಸಿನೆಮಾಗಳು ವಿವಿಧ ಗುಣಗಳಲ್ಲಿ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯವಿವೆ. ಚಲನಚಿತ್ರಗಳು ಕೂಡಾ ಡೇಟಾ ಸ್ನೇಹಿ ಸಾಧನವಾಗಿದೆ, ಸಿನೆಮಾಗಳು ಹೆಚ್ಚಿನ MB / GB ಯಲ್ಲಿ ಇಲ್ಲ. ನೀವು ಆ ಸೈಟ್ನಿಂದ ಹಳೆಯ ಬಾಲಿವುಡ್ ಚಲನಚಿತ್ರಗಳನ್ನು ಡೌನ್ಲೋಡ್ ಮಾಡಬಹುದು. |
ದಕ್ಷಿಣ ಮೂವೀಸ್ ಅನ್ನು ಡೌನ್ಲೋಡ್ ಮಾಡಲು ಮತ್ತೊಂದು ಹಾಟ್ ಸೈಟ್ ಬೋಲಿ.ಸಿಸಿ 300 ಎಮ್ಡಿಗೆ 300MB ಯಷ್ಟು ಕಡಿಮೆಯಾಗುತ್ತದೆ, ಏಕೆಂದರೆ ಚಲನಚಿತ್ರಗಳಿಗೆ 720MB ನಲ್ಲಿ ಚಲನಚಿತ್ರಗಳು ಲಭ್ಯವಿವೆ ಮತ್ತು ಇದು ಸಾಮಾನ್ಯವಾಗಿ 1 GB ಗಿಂತ ಹೆಚ್ಚಿನದಾಗಿರುತ್ತದೆ. ಈ ಸೈಟ್ನಿಂದ ನೀವು PUNJABI ಚಲನಚಿತ್ರಗಳು, ಟಿವಿ ಶೋಗಳು, ಮತ್ತು ಹಾಲಿವುಡ್ ಚಲನಚಿತ್ರಗಳನ್ನು ಡೌನ್ಲೋಡ್ ಮಾಡಬಹುದು. |
360H, 480p, 720p, 1080p ನಲ್ಲಿ 1GB ಯಷ್ಟು 300mb, 400 ರಿಂದ 500mb, 1 GB ಮತ್ತು ಹೆಚ್ಚಿನವುಗಳಲ್ಲಿ ಚಲನಚಿತ್ರಗಳನ್ನು ಒದಗಿಸುವ ಸೈಟ್ ಎಂದು ಖಟ್ರಿಮಾಝಾ ಹೊಂದಿದೆ. ಸಾಮಾನ್ಯವಾಗಿ ನೀವು ಕಡಿಮೆ ಗುಣಮಟ್ಟದಲ್ಲಿ HD ಗುಣಮಟ್ಟದವರೆಗೆ ದಕ್ಷಿಣ, ಬಾಲಿವುಡ್, ಹಾಲಿವುಡ್ ಚಲನಚಿತ್ರಗಳಲ್ಲಿ ಸೈಟ್ ಅನ್ನು ಡೌನ್ಲೋಡ್ ಮಾಡಬಹುದು. |
Movievoom/Moviesvilla |
MOVIESVOOM ಎನ್ನುವುದು BRIP, HD RIP ನಲ್ಲಿನ ಸಿನೆಮಾಗಳನ್ನು ಒದಗಿಸುವ ಏಕೈಕ ಸೈಟ್ ಆಗಿದೆ, ಮತ್ತು ಇದು ಅತ್ಯುತ್ತಮ ಗುಣಮಟ್ಟದೊಂದಿಗೆ 300 ರಿಂದ 400 mb ಗಳಷ್ಟು ಭಾಗಗಳಲ್ಲಿ ಚಲನಚಿತ್ರಗಳನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಈ ಸಿನೆಮಾದಲ್ಲಿ 3 ಅಥವಾ 4 ಭಾಗಗಳನ್ನು ಚಲನಚಿತ್ರಗಳು ವಿಂಗಡಿಸಲಾಗಿದೆ. ನೀವು ದಕ್ಷಿಣ ಮತ್ತು ಹಾಲಿವುಡ್ ಚಲನಚಿತ್ರಗಳನ್ನು ಇತ್ತೀಚಿನ ಬಾಲಿವುಡ್ ಸಿನೆಮಾಗಳನ್ನು ಕೆಲವೊಮ್ಮೆ ಡೌನ್ಲೋಡ್ ಮಾಡಬಹುದು. |
ನಾನು ನೀಡುವ ಕೊನೆಯ ಸೈಟ್ MOVIESCOUNTER ಆಗಿದೆ. ಈ ಸೈಟ್ ಸಹ ಬಾಲಿವುಡ್, ಹಾಲಿವುಡ್, ಸೌತ್ ಸಿನೆಮಾಗಳನ್ನು ಸಹ ಒದಗಿಸುತ್ತದೆ ಆದರೆ ಸಿನೆಮಾಗಳ ಗಾತ್ರವು ಸ್ವಲ್ಪ ಹೆಚ್ಚಿನದಾಗಿರುತ್ತದೆ, ಆದ್ದರಿಂದ ಸೈಟ್ಗಳ ಮೇಲೆ ನೀವು ಖಂಡಿತವಾಗಿಯೂ ಚಲನಚಿತ್ರವನ್ನು ಪಡೆಯಬಹುದು ಆದರೆ ದೊಡ್ಡ ಗಾತ್ರದಲ್ಲಿ ಮತ್ತು ಸಾಮಾನ್ಯವಾಗಿ HDCAM ಮತ್ತು HD ಗುಣಮಟ್ಟಗಳಲ್ಲಿ ಚಲನಚಿತ್ರಗಳನ್ನು ಒದಗಿಸಿ. |
ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿರಿ. Facebook / DigitKannada. |
ಇಂದಿನಿಂದ ಕಾರವಾರ ಮಂಗಳೂರು- ಬೆಂಗಳೂರು ರೈಲು ಸಂಚಾರ ಆರಂಭ | themangaloremirror.in |
ಮಂಗಳೂರು : ಕೊರೊನಾ ಹಿನ್ನಲೆ ಸಂಚಾರ ನಿಲ್ಲಿಸಲಾಗಿದ್ದ ಕಾರವಾರ- ಬೆಂಗಳೂರು ಹಾಗೂ ಮಂಗಳೂರು- ಬೆಂಗಳೂರು ನಡುವಿನ ರೈಲುಗಳ ಸಂಚಾರವು ಇಂದಿನಿಂದ ಆರಂಭವಾಗಲಿದೆ. |
ರೈಲು ನಂ.06585 ಯಶವಂತಪುರ- ಕಾರವಾರ ಹಾಗೂ 06586 ಕಾರವಾರ-ಯಶವಂತಪುರ ರೈಲು ಸೆಪ್ಟೆಂಬರ್ 5 ರಿಂದ ಕಾರ್ಯಾರಂಭಿಸಲಿದೆ. ಹಿಂದೆ ಸಂಚರಿಸುತ್ತಿದ್ದ ನಂಬರ್ 16595/16596 ರೈಲುಗಳದ್ದೇ ವೇಳಾಪಟ್ಟಿಯಲ್ಲೇ ಸಂಚರಿಸಲಿವೆ. ಇಂದು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಕಾರವಾರಕ್ಕೆ ಮರುದಿನ ಬೆಳಗ್ಗೆ 8.25ಕ್ಕೆ ತಲುಪಲಿದೆ. ಸೆಪ್ಟೆಂಬರ್ 5 ರಂದು ಸಂಜೆ 6ಕ್ಕೆ ಕಾರವಾರದಿಂದ ರೈಲು ಹೊರಡಲಿದೆ ಎಂದು ಕೊಂಕಣ ರೈಲ್ವೇ ಪ್ರಕಟಣೆ ತಿಳಿಸಿದೆ. ಈ ರೈಲುಗಳಲ್ಲಿ 7 ಸ್ಲೀಪರ್, ಒಂದು 3 ಟೈರ್ ಎ.ಸಿ, ಒಂದು 2 ಟೈರ್ ಎ.ಸಿ, 4 ಸಾಮಾನ್ಯ ಸಹಿತ 15 ಬೋಗಿಗಳು ಇರಲಿವೆ. ರೈಲುಗಳಿಗೆ ಸ್ಟೇಷನ್‌ನಲ್ಲಿ ಟಿಕೆಟ್ ನೀಡಲಾಗುವುದಿಲ್ಲ. ಪೂರ್ವ ಕಾಯ್ದಿರಿಸಿದ ಟಿಕೆಟ್‌ನಲ್ಲೇ ಪ್ರಯಾಣಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. |
ನಂಬರ್ 06515 ಬೆಂಗಳೂರು ಸಿಟಿ ಮಂಗಳೂರು (ವಾರದಲ್ಲಿ ನಾಲ್ಕುದಿನ) ರೈಲು ಸೆ.4ರಿಂದ ಮುಂದಿನ ಸೂಚನೆವರೆಗೆ ಹಾಗೂ ನಂಬರ್ 06516 ಮಂಗಳೂರು-ಬೆಂಗಳೂರು ಸಿಟಿ (ವಾರದಲ್ಲಿ ನಾಲ್ಕುದಿನ) ರೈಲು ಸೆ.6ರಿಂದ ಮುಂದಿನ ಸೂಚನೆ ವರೆಗೂ ಸಂಚರಿಸಲಿವೆ. ಇವುಗಳಿಗೆ ನಂ.16511/16512 ರೈಲುಗಳ ನಿಲುಗಡೆ ಅನ್ವಯವಾಗಲಿದೆ. |
ಉಪ್ಪಳದಲ್ಲಿ ಯುವಕನಿಗೆ ಚೂರಿ ಇರಿತ: ಆಸ್ಪತ್ರೆಗೆ ದಾಖಲು | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Oct 10, 2019, 12:27 PM IST |
Subsets and Splits
No community queries yet
The top public SQL queries from the community will appear here once available.