text
stringlengths
0
61.5k
ಫೆ.20ರಿಂದ 24ರವರೆಗೆ ಬೆಂಗಳೂರಿನಲ್ಲೇ ಏರ್‍ಶೋ | Kannadamma
Home ರಾಜ್ಯ ಫೆ.20ರಿಂದ 24ರವರೆಗೆ ಬೆಂಗಳೂರಿನಲ್ಲೇ ಏರ್‍ಶೋ
ಬೆಂಗಳೂರು:ಏರ್ ಶೋಗೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲಕ್ಕೆ ಈಗ ತೆರೆ ಎಳೆಯಲಾಗಿದೆ.
ಎರಡು ವರ್ಷಕ್ಕೊಮ್ಮೆ ನಡೆಯುವ ವೈಮಾನಿಕ ಪ್ರದರ್ಶನ ಸ್ಥಳಾಂತರಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು. ಈ ಹಿನ್ನೆಲೆ ಎಂದಿನಂತೆ ಬೆಂಗಳೂರಿನಲ್ಲೇ ಏರ್‍ಶೋ ನಡೆಯಲಿದೆ.
2019ರ ಫೆಬ್ರವರಿ 20ರಿಂದ 24ರವರೆಗೆ ಒಟ್ಟು 5 ದಿನಗಳ ಕಾಲ ಯಲಹಂಕದ ವಾಯು ನೆಲೆಯಲ್ಲಿ 12ನೇ ವೈಮಾನಿಕ ಪ್ರದರ್ಶನ ನಡೆಯಲಿದೆ. ಕೇಂದ್ರ ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪ್ರಸಕ್ತ ವರ್ಷದ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲೇ ನಡೆಸಲು ಸೂಚನೆ ಕೊಟ್ಟಿದ್ದಾರೆ.
ಇದಕ್ಕಾಗಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಅವರು ತಾಕೀತು ಮಾಡಿದ್ದಾರೆ. ಈಗ ರಕ್ಷಣಾ ಇಲಾಖೆ ಒಪ್ಪಿಗೆ ನೀಡಿರುವುದರಿಂದ ವೈಮಾನಿಕ ಪ್ರದರ್ಶನದ ಬಗ್ಗೆ ಉಂಟಾಗಿದ್ದ ಎಲ್ಲ ಗೊಂದಲಗಳು ನಿವಾರಣೆಯಾಗಿದೆ.
ಈ ಹಿಂದೆ ವೈಮಾನಿಕ ಪ್ರದರ್ಶನವನ್ನು ಉತ್ತರ ಪ್ರದೇಶದ ರಾಜಧಾನಿ ಲಖ್ನೋ ಸಮೀಪದ ಬಕ್ಷಿ-ಕ-ತಲಬ್ ವಾಯುನೆಲೆಗೆ ಸ್ಥಳಾಂತರವಾಗಲಿದೆ ಎಂಬ ಪುಕಾರು ಹಬ್ಬಿತ್ತು.
ಯಾವಾಗ ಕರ್ನಾಟಕದಿಂದ ಉತ್ತರಪ್ರದೇಶಕ್ಕೆ ಏರ್ ಶೋ ಸ್ಥಳಾಂತರವಾಗಲಿದೆ ಎಂಬ ಸುದ್ದಿ ಹಬ್ಬಿತೋ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಹರಿಹಾಯ್ದಿತ್ತು.ಯಾವುದೇ ಕಾರಣಕ್ಕೂ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಸ್ಥಳಾಂತರ ಮಾಡಬಾರದು,ಇದಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಿರ್ಮಲಾ ಸೀತಾರಾಮನ್‍ಗೆ ಪತ್ರ ಬರೆದಿದ್ದರು.
ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ವೈಮಾನಿಕ ಪ್ರದರ್ಶನವನ್ನು ಕರ್ನಾಟಕದಿಂದ ಬೇರೆಡೆ ಸ್ಥಳಾಂತರ ಮಾಡಬಾರದು.ಇದು ಬೆಂಗಳೂರಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಕ್ಷಣಾ ಇಲಾಖೆ ಮತ್ತೊಮ್ಮೆ ಮರು ಚಿಂತನೆ ಮಾಡಬೇಕೆಂದು ಒತ್ತಾಯಿಸಿದ್ದರು.
ಅಲ್ಲದೆ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ಸಿ.ಸದಾನಂದಗೌಡ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲೇ ನಡೆಯಬೇಕೆಂದು ಮನವಿ ಮಾಡಿಕೊಂಡಿದ್ದರು.
ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯಲಿರುವ ಈ ವೈಮಾನಿಕ ಪ್ರದರ್ಶನಕ್ಕೆ ಜಪಾನ್, ಅಮೆರಿಕ, ಜರ್ಮನಿ, ರಷ್ಯಾ, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳು ಭಾಗವಹಿಸುತ್ತವೆ.
ವೈಮಾನಿಕ ಪ್ರದರ್ಶನದಲ್ಲಿ ಭಾರತ ರಕ್ಷಣಾ ಇಲಾಖೆಯಲ್ಲಿ ಸಾಧಿಸಿರುವ ಸಾಧನೆಗಳು ಅನಾವರಣವಾಗಲಿದೆ. ಅಲ್ಲದೆ ಈ ವೇಳೆ ಕೆಲವು ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಭಾಗವಹಿಸುವುದರಿಂದ ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಅನೇಕ ಉದ್ಯಮಿಗಳು ಮುಂದೆ ಬರುತ್ತಾರೆ. ಹೀಗಾಗಿ ವೈಮಾನಿಕ ಪ್ರದರ್ಶನವೆಂಬುದು ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ರಾಜ್ಯದಲ್ಲಿ ಉಳಿಸಿಕೊಳ್ಳುವ ಸರ್ಕಾರದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.
Previous articleಸ್ವಾಭಿಮಾನಕ್ಕೆ ದಕ್ಕೆಯಾಗಿಲ್ಲ :ಯಾರ ಗೆಲವು ಅಲ್ಲ ಪಕ್ಷದ ಗೆಲವು :ಪಿಎಲ್ ಡಿ ಬ್ಯಾಂಕ್ ಬಗ್ಗೆ ಸತೀಶ ಪ್ರತಿಕ್ರಿಯೆ
ದಿಯಾ ಮಿರ್ಜಾ ಮದುವೆಯಲ್ಲಿ ಆ ಪೊಟೋ ಸಖತ್ ವೈರಲ್! - Kannada Updates
ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಮುಂಬೈನ ಉದ್ಯಮಿ ವೈಭವ್ ರೇಖಿ ರವರೊಂದಿಗೆ ಎರಡನೇ ಮದುವೆಯಾಗಿದ್ದು, ಇವರಿಬ್ಬರಿಗೂ ಮದುವೆ ಮಾಡಿಸಿದ ಮಹಿಳಾ ಪುರೋಹಿತೆಯ ಪೊಟೋಬೊಂದು ಸಖತ್ ವೈರಲ್ ಆಗುತ್ತಿದೆ.
ಫೆ.15 ರಂದು ದಿಯಾ ಮಿರ್ಜಾ ಹಾಗೂ ವೈಭವ್ ರೇಖಿ ಇಬ್ಬರ ಮದುವೆ ಸರಳವಾಗಿ ಕೆಲವೇ ಗಣ್ಯರ ಸಮ್ಮುಖದಲ್ಲಿ ನಡೆದಿದೆ. ದಿಯಾ ಮಿರ್ಜಾ ತನ್ನ ಮದುವೆಯ ವಿಚಾರವನ್ನು ಗೌಪ್ಯವಾಗಿಟ್ಟಿದ್ದು, ಮದುವೆಯಾದ ಬಳಿಕ ಕೆಲವೊಂದು ಪೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ಪೈಕಿ ಇವರಿಬ್ಬರಿಗೂ ಮದುವೆ ಮಾಡಿದ ಮಹಿಳಾ ಪುರೋಹಿತೆಯ ಪೊಟೋ ಸಖತ್ ವೈರಲ್ ಆಗಿದೆ.
ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಮದುವೆ ಮಾಡಲು ಪುರುಷರು ಪೌರೋಹಿತ್ಯ ವಹಿಸಿಕೊಳ್ಳುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈಗಲೂ ಕೂಡ ಅದೇ ಮುಂದವರೆದುಕೊಂಡು ಬರುತ್ತಿದೆ. ಆದರೆ ಮಹಿಳೆಯರಿಗೂ ಸಮಾನ ಅವಕಾಶ ನೀಡಬೇಕೆಂದು ಮಹಿಳೆಯರೂ ಸಹ ಪೌರೋಹಿತ್ಯ ಮಾಡಬಹುದೆಂಬ ಸಂದೇಶ ಸಾರುವ ಸಲುವಾಗಿ ದಿಯಾ ಮಿರ್ಜಾ ಅವರ ಮದುವೆಗೆ ಮಹಿಳೆಯೊಬ್ಬರನ್ನು ಪೌರೋಹಿತ್ಯ ವಹಿಸುವಂತೆ ತಿಳಿಸಿದ್ದು, ಆ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಪೊಟೋ ಹಂಚಿಕೊಂಡಿರುವ ದಿಯಾ ಒಂದು ಸಂದೇಶವನ್ನು ಸಹ ನೀಡಿದ್ದಾರೆ. ನಮ್ಮ ಮದುವೆ ನೆರವೇರಿಸಿಕೊಟ್ಟ ಶೀಲಾ ರವರಿಗೆ ಧನ್ಯವಾದಗಳು, ಸಮಾನತೆಗಾಗಿ ನಾವು ಜೊತೆಯಾಗಿ ಹೋರಾಟಲು ಹೆಮ್ಮೆ ಎನ್ನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಕಳೆದ 2004 ರಲ್ಲಿ ದಿಯಾ ಹಾಗೂ ಸಾಹಿಲ್ ಸಂಘ ಇವರಿಬ್ಬರಿಗೂ ಮದುವೆ ಆಗಿದ್ದು, ಕೆಲವೊಂದು ಕಾರಣಗಳಿಂದ ೨೦೧೯ ರಲ್ಲಿ ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ಪಡೆದುಕೊಂಡಿದ್ದರು.
ಪದಾರ್ಥ ಚಿಂತಾಮಣಿ | Udayavani – ಉದಯವಾಣಿ
Readers' Recipe : ಗೋಬಿ ಪಕೋಡ
Readers' Recipe: ಕಣಿಲೆ ದೋಸೆ
ದೇವಾಲಯಗಳಲ್ಲಿ ಬಿಸು ಪರ್ಬ ಆಚರಣೆ
ಗ್ರೀನ್‌ ಟೀ ಎಂದರೆ ಡಯಟ್ ಮಾಡುವವರಿಗೆ, ಆರೋಗ್ಯ ಕಾಳಜಿ ವಹಿಸುವವರಿಗೆ ಎನ್ನುವ ಕಾಲ ಈಗಿಲ್ಲ. ಗ್ರೀನ್‌ ಟೀಯನ್ನು ಯಾರೂ ಬೇಕಾದರೂ ಕುಡಿಯಬಹುದು ಮಾತ್ರವಲ್ಲ ಇದರಿಂದ ವಿಶೇಷ ರೀತಿಯ ಪಾನೀಯ ಮಾಡಿ ಸೇವಿಸಬಹುದು. ದಣಿದ ದೇಹಕ್ಕೆ ತಂಪನ್ನು ನೀಡುವ, ಬಿಸಿಲಿಗೆ…
ಪಾನಿಪುರಿ ಬೇಕಾಗುವ ಸಾಮಗ್ರಿ: ಚಿರೋಟಿ ರವೆ: 2 ಕಪ್‌ ಬೇಕಿಂಗ್‌ ಸೋಡಾ: ಚಿಟಿಕೆ ಉಪ್ಪು : ರುಚಿಗೆ ತಕ್ಕಷ್ಟು ಮೈದಾ: 2 ಟೇಬಲ್‌ ಸ್ಪೂನ್‌ ಬೇಯಿಸಿದ ಆಲೂಗಡ್ಡೆ: 1 ಕಪ್‌ ಬೇಯಿಸಿದ ಬಟಾಣಿ: 1 ಕಪ್‌ ಗರಂ ಮಸಾಲ:…
ಬೇಕಾಗುವ ಸಾಮಗ್ರಿಗಳು: ಹಾಲು: 2 ಕಪ್‌ ಬೆಣ್ಣೆ: ಕಾಲು ಕಪ್‌ ಸಕ್ಕ ರೆ: ಮುಕ್ಕಾಲ್‌ ಕಪ್‌ ಮೊಟ್ಟೆ: 3 ಏಲಕ್ಕಿ ಹುಡಿ: 2 ಚಮಚ ಜಾಯಿ ಕಾಯಿ ಹುಡಿ: ಸ್ವಲ್ಪ ವೆನಿಲ್ಲಾ ಏಕ್ಸ್‌ಟ್ರಾ ಕ್ಟ್: 1 ಚಮಚ ಬ್ರೆಡ್‌: 3 ಕಪ್‌ ಬಾದಾಮಿ,…
ಬೇಕಾಗುವ ಸಾಮಗ್ರಿಗಳು: ಅನನಾಸು: 7 ಹೋಳುಗಳು ತೆಂಗಿನತುರಿ: 2 ಕಪ್‌ ಸಕ್ಕರೆ: ಒಂದು ಕಪ್‌ ತುಪ್ಪ: ಅರ್ಧ ಚಮ ಚ ಕೇಸರಿ: ಸ್ವಲ್ಪ ಹಸುರು ಬಣ್ಣ: ಸ್ವಲ್ಪ ಮಾಡುವ ವಿಧಾನ: ಮೊದಲು ಅನನಾಸು ಹೋಳುಗಳನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಮಿಕ್ಸಿ…
ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು: ಅರ್ಧ ಕೆ.ಜಿ. ತುಪ್ಪ: 4 ಚಮಚ ಜೀರಿಗೆ: 1 ಚಮಚ ಓಂಕಾ ಳು: 1 ಚಮಚ ಎಳ್ಳು: 2 ಚಮಚ ಕೆಂಪು ಮೆಣಸಿನ ಹುಡಿ: 2 ಚಮ ಚ ಉಪ್ಪು: ರುಚಿಗೆ ತಕ್ಕಷ್ಟು ಮಾಡುವ ವಿಧಾನ:…
ಕ್ರಿಸ್ಮಸ್‌ ಹಬ್ಬಕ್ಕೆ ವಿಶೇಷ ಮೆರುಗು ನೀಡುವುದು ಕುಸ್ವಾರ್‌ ತಯಾರಿ ಮತ್ತು ಹಂಚುವಿಕೆ. ಕುಟುಂಬ ಸದಸ್ಯರು, ನೆರಹೊರೆಯವರು, ಆಪ್ತರೆಲ್ಲ ಸೇರಿ ಒಟ್ಟಾಗಿ ತಯಾರಿಸುವ ಕುಸ್ವಾರ್‌ ಅನ್ನು ಎಲ್ಲರಿಗೂ ಹಂಚಿ ತಿನ್ನುವುದೇ ಸಂಭ್ರಮ. ಕುಸ್ವಾರ್‌ ಎಂದರೆ ಕ್ರಿಸ್ಮಸ್‌ ಹಬ್ಬದ ಸಂದರ್ಭದಲ್ಲಿ ತಯಾರಿಸುವಂಥ…
ಬೂದುಗುಂಬಳದ ಹಲ್ವ ಬೇಕಾಗುವ ಸಾಮಗ್ರಿ ಬೀಜ ತೆಗೆದ ಕುಂಬಳಕಾಯಿ ತುರಿ- 1ಕಪ್‌, ಹೆರೆದ ಉಂಡೆ ಬೆಲ್ಲದ ಪುಡಿ- 1 ಕಪ್‌, ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ತುಪ್ಪ. ಮಾಡುವ ವಿಧಾನ ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿ ದ್ರಾಕ್ಷಿ,…
ಅಕ್ಕಿ ಅಡುಗೆಯ ರುಚಿಯೇ ಅಂಥದ್ದು. ವೆರೈಟಿ ಎಂಬುವುದು ಇದರಲ್ಲಿ ಬಹಳಷ್ಟಿದೆ. ಒಮ್ಮೆ ತಿಂದರೆ ಮತ್ತೊಮ್ಮೆ ತನ್ನಬೇಕೆಂಬ ತವಕ. ಓಹೋ ಇದು ಅಕ್ಕಿಯಿಂದ ಮಾಡಿದ್ದೇ ಎಂಬ ಕುತೂಹಲ ಬೇರೆ. ಅದಕ್ಕೆಂದೇ ವಿವಿಧ ರೀತಿಯ ಅಕ್ಕಿ ತಿನಿಸುಗಳನ್ನು ಇಲ್ಲಿ ನೀಡಲಾಗಿದೆ. ಸ್ವೀಟ್‌…
ಕರಾವಳಿಯ ಪ್ರತಿ ಮನೆಯಲ್ಲೂ ಅನ್ನ ಮಾಡದೆ ದಿನ ಕಳೆಯುವುದೇ ಇಲ್ಲ. ಅದು ಕೆಲವೆಡೆ ಕುಚ್ಚಿಲು ಅಥವಾ ಬೆಳ್ತಿಗೆ ಅನ್ನ ಆಗಿರಬಹುದು. ಆದರೆ ಇತ್ತೀಚೆಗೆ ಮನೆಗಳಲ್ಲಿ ಅನ್ನ ಉಳಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಮನೆ ಹೆಂಗಸರಿಗೆ ಅದನ್ನು ಏನು ಮಾಡುವುದು…
ಬೇಕಾಗುವ ಸಾಮಗ್ರಿಗಳು ಹಾಲು: 1 ಕಪ್‌ ತೆಂಗಿನ ಹಾಲು: 1 ಕಪ್‌ ಸಕ್ಕರೆ: 1 ಕಪ್‌ ಚಿಕ್ಕು: 2 ತುಪ್ಪ: 2 ಚಮಚ ಗೋಡಂಬಿ, ದ್ರಾಕ್ಷಿ, ಬಾದಾಮಿ- ತಲಾ- 3- 4 ಮಾಡುವ ವಿಧಾನ ಒಂದು ಪ್ಯಾನ್‌ಗೆ ಹಾಲು,…
ಬೇಕಾಗುವ ಸಾಮಗ್ರಿಗಳು ರಾಗಿ: 1 ಕಪ್‌ ತೆಂಗಿನ ತುರಿ: ಮುಕ್ಕಾಲು ಕಪ್‌ ಬೆಲ್ಲದ ಹುಡಿ: ಒಂದೂವರೆ ಕಪ್‌ ಏಲಕ್ಕಿ ಹುಡಿ: ಸ್ವಲ್ಪ ತುಪ್ಪ: 2 ಚಮಚ ಮಾಡುವ ವಿಧಾನ ರಾಗಿಯನ್ನು ನೀರಿನಲ್ಲಿ ಎರಡು ಗಂಟೆ ನೆನೆಸಿ ತೆಂಗಿನ ತುರಿಯೊಂದಿಗೆ…
ಬಗೆ ಬಗೆಯ ಸಿಹಿ, ದೀಪಾವಳಿ ವಿಶೇಷ
ಎಂದಿನಂತೆ ಮತ್ತೆ ಬಂದಿದೆ ದೀಪಾವಳಿ. ಹಬ್ಬವೆಂದರೆ ವಿವಿಧ ಖಾದ್ಯಗಳ ತಯಾರಿಯೇ ಸಂಭ್ರಮ ಕೊಡುವಂಥದ್ದು. ಪ್ರತಿ ವರ್ಷದಂತೆ ಈ ಬಾರಿಯೂ ಅದೇ ಸಿಹಿ, ಅದೇ ಖಾರ ಮಾಡುವ ಯೋಚನೆ ಬಿಡಿ. ಈ ಬಾರಿ ಏನಾದರೂ ಹೊಸದನ್ನು ಟ್ರೈ ಮಾಡಿ. ದೀಪಾವಳಿ…
ದೋಸೆ ಒಗ್ಗರಣೆ, ಇದು ಸ್ನ್ಯಾಕ್ಸ್ ಸ್ಪೆಶಲ್‌
ಮನೆಯಲ್ಲಿ ಬೆಳಗ್ಗೆ ಮಾಡಿದ ಉಪಾಹಾರ ಅಥವಾ ಬ್ರೇಕ್‌ ಫಾಸ್ಟ್‌ ಉಳಿಯುವುದು ಸಾಮಾನ್ಯ. ಆಗ ಮಹಿಳೆಯರಿಗೆ ಈ ಉಳಿದ ಆಹಾರವನ್ನು ಏನು ಮಾಡುವುದು ಎಂಬ ತಲೆ ನೋವು ಉಂಟಾಗುವುದು ಸಾಮಾನ್ಯ. ಯಾಕೆಂದರೆ ಈಗಿನ ಮಕ್ಕಳಿಗೆ ಬೆಳಗ್ಗೆ ತಿಂದ ತಿಂಡಿಯನ್ನು ಮತ್ತೊಮ್ಮೆ…
ಪಲಾವ್‌ ಎಂಬ ಫಾಸ್ಟ್ ಫ‌ುಡ್‌!
ಅರ್ಧ ಗಂಟೆಯಲ್ಲಿ ತಯಾರಿಸಬಹುದಾದ ರುಚಿಕರ ತಿಂಡಿ ಪಲಾವ್‌. ಮಾರ್ನಿಂಗ್‌ ಕ್ಲಾಸ್‌, ಟ್ಯೂಶನ್‌ ಕಾರಣಕ್ಕೆ ಮಕ್ಕಳು ಬೇಗ ಮನೆ ಬಿಡ್ತಾರೆ ಅನ್ನುವ ಸಂದರ್ಭದಲ್ಲಿ ಮತ್ತು ವಿಶೇಷ ದಿನಗಳಲ್ಲಿ ಫ‌ಟಾಫ‌ಟ್‌ ಅಂತ ಮಾಡಬಹುದಾದ ತಿನಿಸು ಇದು. ದೊಡ್ಡವರಿಂದ ಚಿಕ್ಕ ಮಕ್ಕಳು ಸಹ…
ಎಗ್‌ ವೆರೈಟಿ
ಅತ್ಯಧಿಕ ಪ್ರಮಾಣದ ಪ್ರೊಟೀನ್‌, ಟ್ರಿಷಿಯನ್‌, ಮಿನರಲ್ಸ್‌ ಹೊಂದಿರುವ ಮೊಟ್ಟೆ ಕೇವಲ ಮಾಂಸಹಾರಿಗಳು ಮಾತ್ರವಲ್ಲ ಕೆಲವು ಮಂದಿ ಸಸ್ಯಾಹಾರಿಗಳೂ ಸೇವಿಸುತ್ತಾರೆ. ಕಾರಣ ಅದರಲ್ಲಿರುವ ಆರೋಗ್ಯಕಾರಿ ಗುಣಗಳು. ಬಾಡ್‌, ಹಾಫ್ಬಾಯ್ಲಡ್‌ ಎಂದುಕೊಂಡು ಸೇವಿಸುವ ಮೊಟ್ಟೆಯಲ್ಲಿ ದೇಹದ ಸೌಂದರ್ಯ ಹೆಚ್ಚಿಸುವ ಗುಣವೂ ಇದೆ….
ಸಬ್ಬಸಿಗೆ ಸೊಪ್ಪಿನಿಂದ ಹಬ್ಬದ ಅಡುಗೆ
ಸುವಾಸನೆಯಿಂದ ಕೂಡಿದ ಸಬ್ಬಸಿಗೆ ಸೊಪ್ಪು, ಅಧಿಕ ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಸಿ ಜೀವಸತ್ವವನ್ನು ಒಳಗೊಂಡಿದೆ. ಸಬ್ಬಸಿಗೆ ಸೊಪ್ಪನ್ನು ಬಳಸಿ ಸುಲಭವಾಗಿ ಮಾಡಬಹುದಾದ ಕೆಲವೊಂದು ಅಡುಗೆ ವಿಧಾನಗಳು ಇಲ್ಲಿವೆ. ಸೂಪ್‌ ಬೇಕಾಗುವ ಸಾಮಗ್ರಿಗಳು ಸಣ್ಣಗೆ ಹೆಚ್ಚಿದ ಸಬ್ಬಸಿಗೆ…
ಹೀಗೂ ಮಾಡಬಹುದು ಕೋಲ್ಡ್ ಕಾಫಿ !
ಕಾಫಿ ಎಂದರೆ ಯಾರಿಗೆ ತಾನೇ ಪ್ರಿಯವಲ್ಲ. ಒಂದು ಕಪ್‌ ಕುಡಿ ದರೆ ಮತ್ತೂಂದು ಕಪ್‌ ಬೇಕೆನಿಸುವಷ್ಟು ಸ್ವಾದ ಹೊಂದಿರುವ ಕಾಫಿಯೂ ಈಗ ಕೋಲ್ಡ್‌ ಕಾಫಿಯಾಗಿ, ವಿವಿಧ ಫ್ಲೇವರ್‌ ಗಳಲ್ಲಿ ಲಭ್ಯವಿವೆ. ಹೊಟೇಲ್‌, ಕಾಫಿ ಡೇಯಲ್ಲಿ ಮಾತ್ರ ಸಿಗುವ ವಿವಿಧ ಫ್ಲೇವರ್‌ನ…
ನವರಾತ್ರಿ ವಿಶೇಷ ಖಾದ್ಯ
ನವರಾತ್ರಿ ಎಂದರೆ ಒಂಬತ್ತು ದಿನಗಳ ಹಬ್ಬ. ಬಗೆ ಬಗೆಯ ತಿಂಡಿತಿನಿಸುಗಳೊಂದಿಗೆ ಒಂದಷ್ಟು ಖಾರ, ಮತ್ತಷ್ಟು ಸಿಹಿಯೊಂದಿಗೆ ಗರಿಗರಿ ತಿನಸುಗಳನ್ನು ಮನೆ ಮಂದಿಯೊಂದಿಗೆ ಸೇರಿ ಮಾಡಿ ಬಂದ ಅತಿಥಿಗಳಿಗೂ ಕೊಟ್ಟು ಸಂಭ್ರಮಿಸುವ ಕ್ಷಣ. ತಿಂಗಳ ಮೊದಲೇ ಅಡುಗೆ ಮನೆಯಲ್ಲಿ ಈ…
ಒಮೆಗಾ- 3 ಹಾಗೂ ಅನೇಕ ಖನಿಜಾಂಶ, ಪೋಷಕಾಂಶಗಳನ್ನು ಹೊಂದಿರುವ ಮೀನು ಖಾದ್ಯ ಕರಾವಳಿ ಭಾಗದಲ್ಲಿ ಚಿರಪರಿಚಿತ ಮಾತ್ರವಲ್ಲ ಹೆಚ್ಚಿನವರಿಗೆ ಬಹುಪ್ರಿಯವೂ ಹೌದು. ಮೀನಿನ ಗಸಿ, ಫ್ರೈ, ಸಾಂಬಾರು ಮಾಡಿ ಮಾತ್ರ ಗೊತ್ತಿರುವವರು ಅಪರೂಪಕ್ಕೊಮ್ಮೆ ಅಥವಾ ವಿಶೇಷ ಸಂದರ್ಭದಲ್ಲಿ ಮೀನಿನಿಂದಲೂ ವಿವಿಧ ಖಾದ್ಯಗಳನ್ನು ಸುಲಭವಾಗಿ…
ದೇಶದ ನಾನಾ ಭಾಗಗಳಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಈ ಹಬ್ಬದ ವಿಶೇಷವೇ ವಿವಿಧ ಬಗೆಯ ಖಾದ್ಯಗಳು. ಮೋದಕ ಪ್ರಿಯನೆಂದೇ ಕರೆಯುವ ಗಣೇಶನಿಗೆ ಈ ಬಾರಿ ದೇಶದ ವಿವಿಧ ಭಾಗಗಳಲ್ಲಿ ಮುಖ್ಯವಾಗಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ದಕ್ಷಿಣ…
ಅಕ್ಕಿಯಿಂದ ಶ್ಯಾವಿಗೆ ತಯಾರಿಸಿಕಾಯಿ ಹಾಲು, ಹುಳಿ ಗೊಜ್ಜು, ಸಾಂಬಾರಿನೊಂದಿಗೆ ರುಚಿ ನೋಡಿದ್ದೇವೆ. ರಾಗಿ ಶ್ಯಾವಿಗೆಯನ್ನು ಎಲ್ಲೋ ಸವಿದ ನೆನಪು. ಮತ್ತೆ ಮತ್ತೆ ರುಚಿ ನೋಡಬೇಕು, ಹೊಟ್ಟೆ ತುಂಬಾ ತಿನ್ನಬೇಕು ಅನ್ನೋ ಆಸೆಯಾದರೆ ಮನೆಯಲ್ಲಿ ರಾಗಿ ಶ್ಯಾವಿಗೆ ಮಾಡಿ ನೋಡಬಹುದು. ಒಂದು ಕಪ್‌ ರಾಗಿ ಹಿಟ್ಟನ್ನು ಒಂದು…
ಮಹಾನಗರ : ಕಾರ್ಗಿಲ್‌ ವಿಜಯ ದಿವಸದ ಸ್ಮರಣಾರ್ಥ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಶ್ರೀ ಶಾಸ್ತಾವು ಭೂತನಾಥೇಶ್ವರ ಟ್ರಸ್ಟ್‌, ಲಯನ್ಸ್‌ ಜಿಲ್ಲೆ 317-ಡಿ ಮತ್ತು ಸಮಗ್ರ ಕಲಿಕಾ ಕೇಂದ್ರದ ಸಹಯೋಗದಲ್ಲಿ ಗುರುವಾರ ನಗರದ ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ…
ಕಪಿಲ ತೀರದಲ್ಲಿರುವ ಶಿಶಿಲೇಶ್ವರಕ್ಕೆ ಒಮ್ಮೆ ಭೇಟಿ ಕೊಡಿ | Know about Shishileshwara temple, Belthangady - Kannada Oneindia
» ಕಪಿಲ ತೀರದಲ್ಲಿರುವ ಶಿಶಿಲೇಶ್ವರಕ್ಕೆ ಒಮ್ಮೆ ಭೇಟಿ ಕೊಡಿ
ಕಪಿಲ ತೀರದಲ್ಲಿರುವ ಶಿಶಿಲೇಶ್ವರಕ್ಕೆ ಒಮ್ಮೆ ಭೇಟಿ ಕೊಡಿ
Updated: Monday, April 11, 2016, 14:20 [IST]
ಬೇಸಿಗೆಯಲ್ಲಿ ಒಂದು ದಿನದ ಪ್ರವಾಸ ಹೋಗಲು ಯೋಜನೆ ರೂಪಿಸುತ್ತಿರುವವರು ಬೆಳ್ತಂಗಡಿ ತಾಲೂಕಿನಲ್ಲಿರುವ ಶಿಶಿಲೇಶ್ವರ ದೇವಾಲಯಕ್ಕೆ ಭೇಟಿ ನೀಡಬಹುದು. ಮಂಗಳೂರು ನಗರದಿಂದ ಸುಮಾರು 93 ಕಿ.ಮೀ.ದೂರದಲ್ಲಿರುವ ದೇವಾಲಯ ಕಪಿಲ ನದಿ ತೀರದಲ್ಲಿದೆ.
ಶಿಶಿಲೇಶ್ವರ ದೇವಾಲಯದಲ್ಲಿರುವ ಶಿವಲಿಂಗ ಉದ್ಭವ ಲಿಂಗವೆಂದು ಇತಿಹಾಸ ಹೇಳುತ್ತದೆ. ದೇವಸ್ಥಾನಕ್ಕೆ ಅಂಟಿಕೊಂಡಿರುವ ಮತ್ಸ್ಯ ತೀರ್ಥದಲ್ಲಿ ಪೆರುವೇಲು ಎಂಬ ಜಾತಿಗೆ ಸೇರಿದ ಸಾವಿರಾರು ಮೀನುಗಳಿವೆ. ನದಿಯ ಎರಡು ದಡವನ್ನು ಸಂಪರ್ಕಿಸುವ ಭವ್ಯ ತೂಗು ಸೇತುವೆ. ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟು, ಇಲ್ಲಿನ ಸೂರ್ಯಾಸ್ತಗಳು ಪ್ರಮುಖ ಆಕರ್ಷಣೆಯಾಗಿವೆ. [ದೇವಾಲಯದ ಬಗ್ಗೆ ಓದಿ]
ಒಂದು ದಿನದ ಪ್ರವಾಸಕ್ಕೆ ಇದು ಸೂಕ್ತವಾದ ತಾಣವಾಗಿದೆ. ಬೆಳಗ್ಗೆ ತೆರಳಿದರೆ ಸಂಜೆ ಸೂರ್ಯಾಸ್ತದ ಸವಿಸವಿದು ವಾಪಸ್ ಬರಬಹುದು. ಇಲ್ಲಿ ವಾಸ್ತವ್ಯ ಹೂಡಲು ಗುಣಮಟ್ಟದ ಲಾಡ್ಜ್ ವ್ಯವಸ್ಥೆ ಇಲ್ಲ. ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡಿ, ಶಿಶೀಲೇಶ್ವರಕ್ಕೆ ಹೋಗಿ ಬರಬಹುದು. [ಬೇಕಲ ಕೋಟೆಗೆ ಒಂದು ದಿನದ ಪ್ರವಾಸ ಹೋಗಿ ಬನ್ನಿ]
ಎಷ್ಟು ದೂರ? : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶೀಲೇಶ್ವರ ಗ್ರಾಮದಲ್ಲಿ ಈ ದೇವಾಲಯವಿದೆ. ಮಂಗಳೂರು ನಗರದದಿಂದ ಸುಮಾರು 93 ಕಿ.ಮೀ. ಪ್ರಯಾಣ ಮಾಡಿದರೆ ದೇವಾಲಯ ತಲುಪಬಹುದು. ಕಾರ್ಕಳದಿಂದ ಇರುವ ದೂರ ಸುಮಾರು 91 ಕಿ.ಮೀ. [ಪ್ರೀತಿ ಪಾತ್ರರೊಂದಿಗೆ ಪ್ರವಾಸದ ಐಡಿಯಾ ತಲೆಯಲ್ಲಿದೆಯೇ?]
ಹೋಗುವುದು ಹೇಗೆ? : ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲ್ಯಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುವ ಮಾರ್ಗದಲ್ಲಿ ಸಿಗುವ ಕೊಕ್ಕಡದಿಂದ ಬಲಕ್ಕೆ 16 ಕಿ.ಮೀ ತೆರಳಿದರೆ ದೇವಾಲಯ ಸಿಗುತ್ತದೆ. ಉಡುಪಿಯಿಂದ ಬರುವವರು ಕಾರ್ಕಳ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಅರಶಿಣಮಕ್ಕಿ ಮೂಲಕ ತಲುಪಬಹುದು. ಉಪ್ಪಿನಂಗಡಿ ಧರ್ಮಸ್ಥಳಗಳಿಂದ ಬಸ್ ಸೌಲಭ್ಯವೂ ಇದೆ.
ಹಸಿರು ಪರಿಸರ : ಶಿಶಿಲೇಶ್ವರ ದೇವಾಲಯದ ಸುತ್ತಲು ಹಸಿರ ಕಾಡು, ಪ್ರಕೃತಿಗೆ ಕಲಶ ವಿಟ್ಟಂತಿರುವ ದೊಡ್ಡ ಬೆಟ್ಟಗಳಿವೆ. ನಡುವೆ ಪಶ್ಚಿಮ ಘಟ್ಟದಿಂದ ಹಾದು ಬರುವ ಅಪ್ಪಟ ಸ್ಫಟಿಕದಂಥ ನೀರಿನ ಕಪಿಲ ನದಿ ಇದೆ.
ಶಿಶಿಲೇಶ್ವರ ದೇವಸ್ಥಾನ ಸುಮಾರು 800 ವರ್ಷಗಳಷ್ಟು ಹಳೆಯದ್ದು. ಮನಸ್ಸಿಗೆ ಶಾಂತಿ, ದೇಹಕ್ಕೆ ತಂಪಿನ ಅನುಭವ ನೀಡುವ ಸುಂದರ ಪರಿಸರವನ್ನು ನೀವೊಮ್ಮೆ ನೋಡಿ ಬನ್ನಿ.
mangaluru, dakshina kannada, tourism, belthangady, district news, ಮಂಗಳೂರು, ದಕ್ಷಿಣ ಕನ್ನಡ, ಪ್ರವಾಸ, ಜಿಲ್ಲಾಸುದ್ದಿ
Shishileshwara temple in Shishila of Belthangady taluk, Dakshina Kannada district. Its best place for one day trip. Temple located along side of river Kapila believed to be built around 700 years back. A hanging bridge over the river is another attraction.
ಜಿಯೋ ಫ್ರೈಮ್ ಮೆಂಬರ್‌ಶಿಪ್‌ ಮಾರ್ಚ್ 31ಕ್ಕೆ ಕೊನೆ! ಮುಂದೇನು? | Reliance Jio Prime membership expiring on March 31, What Next? - Kannada Goodreturns
» ಜಿಯೋ ಫ್ರೈಮ್ ಮೆಂಬರ್‌ಶಿಪ್‌ ಮಾರ್ಚ್ 31ಕ್ಕೆ ಕೊನೆ! ಮುಂದೇನು?
ಜಿಯೋ ಫ್ರೈಮ್ ಮೆಂಬರ್‌ಶಿಪ್‌ ಮಾರ್ಚ್ 31ಕ್ಕೆ ಕೊನೆ! ಮುಂದೇನು?
Published: Tuesday, March 27, 2018, 12:55 [IST]
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋ ಮೂಲಕ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಸಂಚಲನಕ್ಕೆ ಕಾರಣರಾಗಿದ್ದಾರೆ! ಕಳೆದ ಏಪ್ರಿಲ್ ನಲ್ಲಿ ಜಿಯೋ ಫ್ರೈಮ್ ಮೆಂಬರ್ಶಿಪ್ ಮೂಲಕ ಹಲವು ಕೊಡುಗೆಗಳನ್ನು ಘೋಷಿಸಿದ್ದರು. ಬರುವ ಮಾರ್ಚ್ 31ರಿಂದ ಜಿಯೋ ಫ್ರೈಮ್ ಮೆಂಬರ್ಶಿಪ್ ರದ್ದಾಗಲಿದ್ದು, ಏಪ್ರಿಲ್ 1ರಿಂದ ಯಾವ ಕೊಡುಗೆಗಳನ್ನು ಘೋಷಿಸಲಿದ್ದಾರೆ ನೋಡೋಣ..! ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!!
ಶೀಘ್ರದಲ್ಲಿ ಅಧಿಕೃತ ಪ್ರಕಟಣೆ
ಜಿಯೋ ಫ್ರೈಮ್ ಮೆಂಬರ್ಶಿಪ್ ನಂತರದ ಮುಂದಿನ ಯೋಜನೆ ಬಗ್ಗೆ ರಿಲಯನ್ಸ್ ಶೀಘ್ರದಲ್ಲಿಯೇ ಅಧಿಕೃತ ಪ್ರಕಟಣೆ ಹೊರಡಿಸಿ ನೂತನ ಯೋಜನೆ ಬಗ್ಗೆ ಮಾಹಿತಿ ನೀಡಲಿದೆ. ಅಂಬಾನಿ ಧಮಾಕಾ! ರಿಲಯನ್ಸ್ ಬಿಗ್ ಟಿವಿ ಮೂಲಕ 500 ಚಾನೆಲ್ 5 ವರ್ಷ ಸಂಪೂರ್ಣ ಉಚಿತ!!
ಜಿಯೋ ಪ್ರೈಂ ಸದಸ್ಯತ್ವ
ಕಳೆದ ವರ್ಷದ ಏಪ್ರಿಲ್ ಪ್ರಾರಂಭದಲ್ಲಿ ಜಿಯೋ ಕೇವಲ ರೂ. 99ಕ್ಕೆ ಜಿಯೋ ಪ್ರೈಂ ಸದಸ್ಯತ್ವ ಸೌಲಭ್ಯ ಒದಗಿಸಿತ್ತು. ಒಂದು ವರ್ಷದ ಸದಸ್ಯತ್ವಕ್ಕೆ ಚಂದಾದಾರರು ರೂ. 99 ಜತೆ ರೂ. 309 ಅಥವಾ ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡಬೇಕಾಗಿತ್ತು. ಜಿಯೋ ಆರಂಭದಲ್ಲಿ 3 ತಿಂಗಳು ಉಚಿತ ಸೇವೆ ನೀಡಿತ್ತು. ಅದಾದ ನಂತರ ಪ್ರೈಂ ಸದಸ್ಯತ್ವ ಯೋಜನೆಯನ್ನು ಪ್ರಾರಂಭಿಸಿತ್ತು.
ವಿಶೇಷ ಕೊಡುಗೆ
ಮುಕೇಶ್ ಅಂಬಾನಿ ಜಿಯೋ ಪ್ರೈಂ ಸದಸ್ಯತ್ವ ಪಡೆದ ಗ್ರಾಹಕರಿಗೆ ಸಾಮಾನ್ಯ ಗ್ರಾಹಕನಿಗಿಂತ ವಿಶೇಷ ಸೌಲಭ್ಯಗಳನ್ನು ನೀಡಿದ್ದರು. ಪ್ರೈಂ ಸದಸ್ಯತ್ವದಲ್ಲಿ ರೂ. 399 ರೀಚಾರ್ಜ್ ಮಾಡಿರುವ ಗ್ರಾಹಕರು ಮಾರ್ಚ್ 31ರವರೆಗೆ 4G ಡೇಟಾ, ಎಸ್ಎಂಎಸ್, ರೋಮಿಂಗ್, ಧ್ವನಿ ಕರೆಗಳು ಸೇರಿದಂತೆ ಅನೇಕ ಸೌಲಭ್ಯ ಪಡೆದಿದ್ದರು.
ಜಿಯೋ ಎಫೆಕ್ಟ್
2016 ರ ಕೊನೆಯಲ್ಲಿ ಭಾರತದ ದೂರಸಂಪರ್ಕ ಕ್ಷೇತ್ರವನ್ನು ಪ್ರವೇಶಿಸಿದ ಜಿಯೋ ಭಾರೀ ಸಂಚಲನವನ್ನು ಸೃಷ್ಟಿಸಿ, ದರ ಸಮರಕ್ಕೆ ಕಾರಣವಾಗಿದೆ. ಜಿಯೋ ನೀಡಿದ ಉಚಿತ ಹಾಗು ಕಡಿಮೆ ದರದ ಸೇವೆಗಳ ಪರಿಣಾಮದಿಂದ ಇತರೆ ಟೆಲಿಕಾಂ ಕಂಪನಿಗಳು ತಮ್ಮ ಸೇವೆಗಳ ಮೇಲಿನ ದರಗಳನ್ನು ಕಡಿಮೆ ಮಾಡಿ ತಮ್ಮ ಗ್ರಾಹಕರನ್ನು ಉಳಿಸಲು ಪ್ರಯತ್ನಿಸುತ್ತಿವೆ. ಜಿಯೊನ ಉಚಿತ ಕೊಡುಗೆಗಳು ಟೆಲಿಕಾಂ ಕ್ಷೇತ್ರದ ಆರ್ಥಿಕತೆ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
Read more about: ರಿಲಯನ್ಸ್ ಜಿಯೋ jio reliance jio telecom finance news
Reliance Jio Prime membership expiring on March 31, What Next?
Jio Prime is a membership for customers, who can enrol with a one-time annual membership fees of Rs 99 along with Recharge of Rs 309 and above.
ಮಂಗಳವಾರ, 12 ಅಕ್ಟೋಬರ್ 2021 (13:01 IST)
ಶರೀರ ಎಂಬುದನ್ನು ಪ್ರಕೃತಿ ನಮಗೆ ನೀಡಿರುವ ಒಂದು ಅದ್ಭುತ ಯಂತ್ರಕ್ಕೆ ಹೋಲಿಸಬಹುದಾದರೆ ವ್ಯಾಯಾಮ ಎಂಬುದು ಅದನ್ನು ಸುಸ್ಥಿತಿಯಲ್ಲಿಡುವಂತೆ ನಿರ್ವಹಣೆ ಮಾಡುವ ವಿಧಾನ. ಆದುದರಿಂದ ವ್ಯಾಯಾಮ ಹವ್ಯಾಸವಲ್ಲ, ಬದಲಿಗೆ ದಿನಚರಿಯಾಗಬೇಕು.
ಅದಕ್ಕೆ ದೇಹದೊಂದಿಗೇ ಮನಸ್ಸನ್ನು ಸಿದ್ಧಗೊಳಿಸುವುದು ಮುಖ್ಯ. ವ್ಯಾಯಾಮ ಕಡ್ಡಾಯವಾದರೂ ಯಾವ ರೀತಿಯ ವ್ಯಾಯಾಮ, ಸಮಯ ಎಂಬುದು ಅವರವರ ಆಯ್ಕೆ. ಕೆಲವರಿಗೆ ಬೆಳಿಗ್ಗೆ ಬೇಗ ಎದ್ದು ಓಡುವುದು ಸುಲಭವಾದರೆ ಮತ್ತೆ ಹಲವರಿಗೆ ಸಂಜೆ ಗೆಳೆಯರೊಡನೆ ಆಟ ಆಡುವುದು ಇಷ್ಟ. ಅನೇಕರಿಗೆ ಮಧ್ಯಾಹ್ನದ ವಾಕ್ ಹೆಚ್ಚು ಸೂಕ್ತ.
ನಮ್ಮ ದೇಹದ ಜೈವಿಕ ಗಡಿಯಾರ ದೇಹದ ಕ್ರಿಯೆಗಳಾದ ರಕ್ತದೊತ್ತಡ, ಉಷ್ಣತೆ, ಹೃದಯಬಡಿತ, ಹಾರ್ಮೋನ್ಗಳ ಮಟ್ಟ ಎಲ್ಲದರ ಮೇಲೆ ಪ್ರಭಾವ ಹೊಂದಿದೆ. ಇವೆಲ್ಲವೂ ನಮ್ಮ ವ್ಯಾಯಾಮದ ಸಿದ್ಧತೆಗೆ ಅಗತ್ಯ. ವ್ಯಕ್ತಿಯಿಂದ ವ್ಯಕ್ತಿಗೆ ಈ ಜೈವಿಕ ಗಡಿಯಾರದಲ್ಲಿ ವ್ಯತ್ಯಾಸವಿರುತ್ತದೆ. ಹಾಗಾಗಿ ಜೈವಿಕ ಗಡಿಯಾರವನ್ನು ಅನುಸರಿಸಿ ವ್ಯಾಯಾಮವನ್ನು ಮಾಡುವುದು ಉತ್ತಮ ಆಯ್ಕೆ; ಆದರೆ ಜೈವಿಕ ಗಡಿಯಾರವನ್ನು ಕೀಲಿ ಕೊಟ್ಟು ನಮಗೆ ಬೇಕಾದಂತೆ ಬದಲಿಸಲು ಸಾಧ್ಯವಿಲ್ಲ. ಹೀಗಿರುವಾಗ ಯಾವಾಗ ವ್ಯಾಯಾಮ ಮಾಡಿದರೆ ಅತ್ಯಂತ ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಮೂಡುವುದು ಸಹಜ. ಯಾವಾಗಲಾದರೂ ಸರಿ; ನಿಯಮಿತವಾಗಿ ದಿನವೂ ಒಂದೇ ಸಮಯಕ್ಕೆ ವ್ಯಾಯಾಮ ಮಾಡುವುದು ಮುಖ್ಯ. ಏಕೆಂದರೆ ಬೆಳಿಗ್ಗೆ ಮತ್ತು ಸಂಜೆಯ ಸಮಯಗಳೆರಡರಲ್ಲೂ ಬೇರೆ ಬೇರೆ ಲಾಭಗಳಿವೆ.
ಬೆಳಗಿನ ಸಿಹಿ ನಿದ್ದೆ ಬಿಟ್ಟು ಎದ್ದು ವ್ಯಾಯಾಮ ಮಾಡಲು ದೃಢ ಮನಸ್ಸು ಬೇಕು. ಒಂದರ ನಂತರ ಇನ್ನೊಂದು ಕೆಲಸ ಬಂದು ಕಡೆಗೆ ಸಮಯ ಸಾಲದೇ ವ್ಯಾಯಾಮ ಮಾತ್ರ ಮರುದಿನಕ್ಕೆ ಮುಂದೂಡಲ್ಪಡುತ್ತದೆ. ಇದೇ ಚಕ್ರ ಹಾಗೇ ಮುಂದುವರಿಯುವುದೂ ಇದೆ. ಮಧ್ಯಾಹ್ನ-ರಾತ್ರಿ ವ್ಯಾಯಾಮಕ್ಕೆ ಸಮಯ ನಿಗದಿಪಡಿಸಿದಾಗ ಇತರ ಜವಾಬ್ದಾರಿಗಳ ಜತೆ ನಿರ್ವಹಣೆ ಕಷ್ಟಸಾಧ್ಯ. ಕೆಲವು ಬಾರಿ ಇತರ ಕೆಲಸಗಳ ಒತ್ತಡ ಹೆಚ್ಚಿದಾಗ ಮನಸ್ಸಿಗೆ ವ್ಯಾಯಾಮ ಮಾಡುವ ಆಸಕ್ತಿ ಮತ್ತು ದೇಹಕ್ಕೆ ಶಕ್ತಿ ಎರಡೂ ಇರುವುದಿಲ್ಲ. ಹೀಗಾಗಿ ಬೆಳಿಗ್ಗೆ ಎದ್ದ ಕೂಡಲೇ ಮನಸ್ಸು ಏನಾದರೂ ನೆಪ ಹುಡುಕುವ ಮೊದಲೇ ದೃಢ ಮನದಿಂದ ವ್ಯಾಯಾಮಕ್ಕೆ ತಯಾರಾದರೆ ಅದನ್ನು ದಿನಚರಿಯ ಭಾಗವನ್ನಾಗಿ ಮಾಡುವುದು ಸುಲಭ.
ಮಧ್ಯಾಹ್ನ-ಸಂಜೆಯ ವ್ಯಾಯಾಮ
ನಮ್ಮ ದೇಹದ ಉಷ್ಣತೆ ಬೆಳಿಗ್ಗೆ ಎದ್ದಾಗಲಿಂದ ನಿಧಾನವಾಗಿ ಹೆಚ್ಚುತ್ತಾ ಮಧ್ಯಾಹ್ನದ ಹೊತ್ತಿಗೆ ಗರಿಷ್ಠ ಮಟ್ಟ ತಲುಪುತ್ತದೆ. ಮಾಂಸಖಂಡಗಳ ಸಾಮರ್ಥ್ಯ, ಸಹನಶಕ್ತಿ, ಬಾಗುವಿಕೆ ಈ ಸಮಯದಲ್ಲಿ ಹೆಚ್ಚಿರುವುದರಿಂದ ವ್ಯಾಯಾಮ ಮಾಡುವುದು ಸುಲಭ. ಅದೇ ರಾತ್ರಿಯ ವಿಶ್ರಾಂತಿಯಿಂದ ಎದ್ದ ಕೂಡಲೇ ಮಾಂಸಖಂಡಗಳು ಬಿಗಿಯಾಗಿದ್ದು, ಬಾಗಿ-ಬಳುಕುವುದು ಕಷ್ಟ. ಹೀಗಾಗಿ ಬೆಳಿಗ್ಗೆ ವ್ಯಾಯಾಮ ಮಾಡುವಾಗ ಪೂರ್ವ ತಯಾರಿಯ ಉಷ್ಣತೆ ಹೆಚ್ಚಿಸುವ 'ವಾರ್ಮ್ ಅಪ್'ಗೆ ಹೆಚ್ಚು ಸಮಯ ಬೇಕು. ಇಲ್ಲದಿದ್ದಲ್ಲಿ ಸ್ನಾಯುಗಳಿಗೆ ಪೆಟ್ಟಾಗುವ ಸಾಧ್ಯತೆ ಹೆಚ್ಚು.
ಯುವಜನರಲ್ಲಿ ಯಾವುದೇ ಕ್ರಿಯೆಗೆ ಪ್ರತಿಕ್ರಿಯಿಸುವ ಸಮಯ ಅತ್ಯಂತ ವೇಗವಾಗಿರುವುದು ಮಧ್ಯಾಹ್ನ. ಕಠಿಣ ದೈಹಿಕ ಶ್ರಮದ ಜತೆ ಮಾನಸಿಕ ಕೌಶಲವೂ ಅವಶ್ಯಕವಾದ ಹಾಕಿ, ಶಟಲ್, ಫುಟ್ಬಾಲ್, ಟೆನಿಸ್, ಕಬಡ್ಡಿ ಇಂಥ ಆಟಗಳನ್ನು ಮಧ್ಯಾಹ್ನ ಆಡುವುದು ಸೂಕ್ತ.
ಹಾರ್ಮೋನ್ಗಳ ಪ್ರಭಾವ
ದೇಹದ ಮಾಂಸಖಂಡಗಳ ಬೆಳವಣಿಗೆ ಮತ್ತು ಸಾಮರ್ಥ್ಯದಲ್ಲಿ ನಿರ್ದಿಷ್ಟ ಹಾರ್ಮೋನ್ಗಳ ಪ್ರಭಾವವಿದೆ. ಇವುಗಳು ಮಧ್ಯಾಹ್ನದ ನಂತರ ಹೆಚ್ಚುತ್ತವೆ. ಹಾಗೆಯೇ ಕೊಬ್ಬಿನ ಶೇಖರಣೆ ಮತ್ತು ಮಾಂಸಖಂಡಗಳ ಸಂಕುಚನಕ್ಕೆ ಕಾರಣವಾಗುವ ಕಾರ್ಟಿಸಾಲ್ ಎಂಬ ಸ್ಟ್ರೆಸ್ ಹಾರ್ಮೋನ್, ಮುಂಜಾನೆ ಅಧಿಕವಾಗಿದ್ದು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.
ಹಿರಿಯ ರಂಗಕರ್ಮಿ ಡಿ.ಕೆ.ಚೌಟ ವಿಧಿವಶ - Udupi Times
ಹಿರಿಯ ರಂಗಕರ್ಮಿ ಡಿ.ಕೆ.ಚೌಟ ವಿಧಿವಶ
ಬೆಂಗಳೂರು: ಹಿರಿಯ ರಂಗಕರ್ಮಿ, "ರಂಗ ನಿರಂತರ"ದ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ.ಚೌಟ (82) ಇಂದು ಮಧ್ಯಾಹ್ನ ನಗರದ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, 15 ದಿನಗಳ ಹಿಂದೆ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಇಂದು ಮುಂಜಾನೆ ಎದೆನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬಸವೇಶ್ವರ ನಗರ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ. ನಾಳೆ ಮುಂಜಾನೆ ೭ಕ್ಕೆ ಹರಿಶ್ಚಂದ್ರಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಡಿ.ಕೆ. ಚೌಟ ಎಂದೇ ಜನಪ್ರಿಯರಾಗಿದ್ದ ದರ್ಬೆ ಕೃಷ್ಣಾನಂದ ಚೌಟ ಹುಟ್ಟಿದ್ದು ಜೂನ್ 1, 1938ರಂದು. ಕಾಸರಗೋಡು ಜಿಲ್ಲೆಯ ಮೀಯಪದವಿನ ದರ್ಬೆ ಮನೆತನದ ಚೌಟ ಅವರ ಊರು ಮಂಜೇಶ್ವರದಿಂದ ಏಳು ಕಿ.ಮೀ ದೂರದಲ್ಲಿದೆ. ಚಿತ್ರಕಲೆ ಮತ್ತು ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಕಲಾ ಪೋಷಕರೂ ಆಗಿದ್ದರು. ಕಳೆದ ವರ್ಷ ನಡೆದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಅಧ್ಯಕ್ಷರಾಗಿದ್ದರು.
ಮಕ್ಕಳಾದ ಪ್ರಜ್ಞಾ ಚೌಟ, ಮತ್ತು ಬಾಲಿವುಡ್ ಸಂಗೀತ ನಿರ್ದೇಶಕ ಸಂದೀಪ್ ಚೌಟ ಸೇರಿದಂತೆ ಅಪಾರ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.
ಎಫ್‌ಡಿಐ ಸೆಳೆಯಲು ಮನಮೋಹನ್ ಒಲವು | Prajavani
ಎಫ್‌ಡಿಐ ಸೆಳೆಯಲು ಮನಮೋಹನ್ ಒಲವು
ನವದೆಹಲಿ (ಪಿಟಿಐ): ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ)ಗೆ ಬಹು-ಉದ್ದೇಶಿತ ಚಿಲ್ಲರೆ ವ್ಯಾಪಾರವನ್ನು ಮುಕ್ತವಾಗಿಸುವ ಮತ್ತು ರಕ್ಷಣೆಯಂತಹ ಇತರ ಕ್ಷೇತ್ರಗಳ ಆಡಳಿತವನ್ನು ಉದಾರೀಕರಣಗೊಳಿಸುವ ಬೇಡಿಕೆಗಳ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮನಮೋಹನ್ ಸಿಂಗ್, 'ವಿದೇಶದಿಂದ ಬಂಡವಾಳ ಹರಿದು ಬರುವಂತಹ ಅನುಕೂಲಕರ ಪರಿಸರವನ್ನು ದೇಶದಲ್ಲಿ ನಿರ್ಮಾಣ ಮಾಡುವ ಅವಶ್ಯಕತೆ ಇದೆ' ಎಂದು ನುಡಿದರು.
ವಿದೇಶದಿಂದ ಅಪಾರ ಹಣ ಹರಿದು ಬರುವಂತಹ ಅನುಕೂಲಕರ ವಾತಾವರಣ ನಿರ್ಮಾಣಕ್ಕಾಗಿ ಪರಿವರ್ತನೆಯ ಮಾರ್ಗಗಳನ್ನು ಬಲಪಡಿಸುವ ಅಗತ್ಯವಿದೆ ಎಂದರು. ಪ್ರಸಕ್ತ ಅಂತರರಾಷ್ಟ್ರೀಯ ಸನ್ನಿವೇಶದಲ್ಲಿ ಹೊರಹೊಮ್ಮುತ್ತಿರುವ ಹೊಸ ಮಾರುಕಟ್ಟೆಯಿಂದ ವಿದೇಶಿ ಹಣವನ್ನು ಹೊರಗೆ ಹರಿಸುತ್ತಿರುವುದರಿಂದ ಎಫ್‌ಡಿಐನಲ್ಲಿನ ಕುಸಿತಕ್ಕೆ ಸರ್ಕಾರದ ನೀತಿಗಳನ್ನು ಹೊಣೆಯಾಗಿಸಿ ದೂಷಿಸಲಾಗದು' ಎಂದರು.