text stringlengths 0 61.5k |
|---|
— Gaurav (@taklooman) 7 June 2018 |
ವಿದ್ಯುತ್ ಪೂರೈಕೆ ಕೈಕೊಟ್ಟಿದ್ದರಿಂದ ಅನೇಕ ರೈಲುಗಳ ಓಡಾಟಕ್ಕೆ ತೊಂದರೆಯಾಯಿತು. ಮುಂಬ್ರಾ-ಥಾಣೆ ಮಾರ್ಗದಲ್ಲಿನ ರೈಲುಗಳ ಸಂಚಾರ 15-20 ನಿಮಿಷಗಳಷ್ಟು ವಿಳಂಬವಾಗಿದೆ. |
ಮಳೆಯಿಂದ ಹಾನಿಯಾಗದಂತೆ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪಾಲಿಕೆ ಉಪ ಆಯುಕ್ತರು ಮತ್ತು ಸಹಾಯಕ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳ ರಜೆಗಳನ್ನು ರದ್ದುಗೊಳಿಸಲಾಗಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಹೇಳಿಕೆ ತಿಳಿಸಿದೆ. |
ಗುರುವಾರವಷ್ಟೇ ಮುಂಗಾರು ಮುಂಬೈ ನಗರಿಯನ್ನು ಪ್ರವೇಶಿಸಿದ್ದು, ಇದುವರೆಗೂ ಮುಂಗಾರು ಪೂರ್ವ ಮಳೆಯೂ ಹೆಚ್ಚಾಗಿ ಬಿದ್ದಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಮಳೆ ತೀವ್ರತೆ ಇನ್ನಷ್ಟು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. |
ಕೊಲಬಾ, ವರ್ಲಿ, ಘಟ್ಕೋಪರ್, ಟ್ರೊಂಬೆ, ಮಲಾಡ್ ಸೇರಿದಂತೆ ಪ್ರವಾಹ ಸಾಧ್ಯತೆಯ ಪ್ರದೇಶಗಳಲ್ಲಿ ನೌಕಾಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. |
BMC preparations for Mumbai Rains. pic.twitter.com/cchpFl80ef |
— Hardik Rajgor (@Hardism) 6 June 2018 |
ಹವಾಮಾನ ಇಲಾಖೆಯು ಭಾರಿ ಮಳೆಯ ಎಚ್ಚರಿಕೆ ನೀಡಿದ್ದರೂ ಮುಂಬೈ ಮಹಾನಗರ ಪಾಲಿಕೆ ಅದನ್ನು ಎದುರಿಸಲು ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಜನಸಾಮಾನ್ಯರು ದೂರಿದ್ದಾರೆ. |
ರಸ್ತೆಗಳು ನೀರಿನಿಂದ ತುಂಬಿಕೊಂಡಿದ್ದು, ಜನರು ಪರದಾಡುವಂತಾಗಿದೆ. ಆದರೆ, ಅದನ್ನು ನಿಭಾಯಿಸಲು ಪಾಲಿಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ. |
maharashtra mumbai monsoon weather rain flood ಮಹಾರಾಷ್ಟ್ರ ಮುಂಬೈ ಮಾನ್ಸೂನ್ ಮುಂಗಾರು ಹವಾಮಾನ ಮಳೆ ಪ್ರವಾಹ |
Monsoon hit Mumbai as heavy rain reported in several places. Trains were running delayed and some roads have been flooded. |
'ನೀಚ' ಎಂದ ಅಯ್ಯರ್ ಬಿಜೆಪಿಯ ಸ್ಟಾರ್ ಕ್ಯಾಂಪೇನರ್: ಟ್ವಿಟ್ಟಿಗರ ಗೇಲಿ | Mani Shankar Aiyer defends his Neech statement against PM Modi: Twitter reactions - Kannada Oneindia |
14 min ago ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ: ಸಮುದಾಯವನ್ನು ಸಮರ್ಥಿಸಿಕೊಂಡ ಜಮೀರ್ |
18 min ago ಲಾಕ್‌ಡೌನ್ ಉಲ್ಲಂಘಿಸಿದ್ದಕ್ಕೆ ತಂದೆ ಮೇಲೆ ಮಗನಿಂದ ಕೇಸ್ |
31 min ago ಉಡುಪಿಯಲ್ಲಿ 600 ಬಡವರಿಗೆ ಚಿಕನ್ ಬಿರಿಯಾನಿ ವಿತರಣೆ |
| Published: Tuesday, May 14, 2019, 15:19 [IST] |
ನವದೆಹಲಿ, ಮೇ 14: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನೀಚ' ಎಂದು ಕರೆದ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ವಿರುದ್ಧ ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ಎದ್ದಿದೆ. |
ಅಂದು ನಾನು ನನ್ನ ಲೇಖನದಲ್ಲಿ ಏನೆಲ್ಲ ಬರೆದಿದ್ದೆನೋ ಅದೆಲ್ಲವನ್ನೂ ಸಮರ್ಥಿಸಿಕೊಳ್ಳುತ್ತೇನೆ, ಅದರ ಪ್ರತಿ ಪದವೂ ಸತ್ಯ" ಎಂದು ಮಣಿಶಂಕರ್ ಅಯ್ಯರ್ ಅವರು ಎಎನ್ ಐ ನ್ಯೂಸ್ ಏಜೆನ್ಸಿಗೆ ಹೇಳಿದ್ದರು. ಇದು ಮತ್ತೊಮ್ಮೆ ವಿವಾದ ಹೊತ್ತಿಸಿದ್ದು, ಕಾಂಗ್ರೆಸ್ ಮಾನ ಹರಾಜು ಹಾಕುವುದಕ್ಕೆ ಮಣಿಶಂಕರ್ ಅಯ್ಯರ್ ಒಬ್ಬರೇ ಸಾಕು ಎಂಬ ಮಾತುಗಳು ಕೇಳಿಬರುತ್ತಿವೆ. |
ಮತ್ತೆ ವಿವಾದದ ಕಿಡಿ ಹತ್ತಿಸಿದ ಗಾಂಧಿ ಕುಟುಂಬದ ಮುಕುಟ'ಮಣಿ' ಶಂಕರ್ ಅಯ್ಯರ್! |
ಮಣಿಶಂಕರ್ ಅಯ್ಯರ್ ಅವರು ಇಂಥ ಹೇಳಿಕೆ ನೀಡುವ ಮೂಲಕ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ ಎಂದು ಮತ್ತಷ್ಟು ಜನ ಟ್ವಿಟ್ಟರ್ ನಲ್ಲಿ ಗೇಲಿ ಮಾಡಿದ್ದಾರೆ. ಕಾಂಗ್ರೆಸ್ ಈ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. |
2017 ರ ಡಿಸೆಂಬರ್ ತಿಂಗಳಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅಯ್ಯರ್, "ಡಾ. ಬಿ. ಆರ್ ಅಂಬೇಡ್ಕರ್ ಅವರು ಕಂಡ ಕನಸನ್ನು ನನಸಾಗಿಸಲು ಶ್ರಮಿಸಿದವರಲ್ಲಿ ಜವಹರಲಾಲ್ ನೆಹರೂ ಅಗ್ರಗಣ್ಯರು. ದೇಶಕ್ಕಾಗಿ ದುಡಿದ ಇಂಥ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುವ ಇಂಥ ವ್ಯಕ್ತಿ(ಮೋದಿ)ಯನ್ನು 'ನೀಚ' ಎನ್ನದೇ ಇರಲಾಗದು, ಆತನಿಗೆ ಯಾವುದೇ ನಾಗರಿಕ ಸಭ್ಯತೆಗಳಿಲ್ಲ. ಅತ್ಯಂತ ಹೀನಾಯ ರೀತಿಯ ರಾಜಕೀಯವನ್ನು ಅವರು ಮಾಡುತ್ತಿದ್ದಾರೆ ಎಂದಿದ್ದರು. |
These 4 are most successful campaigners of BJP 🙌#ManiShankaraiyar #HarGharModi pic.twitter.com/NsT7CxisLN |
— 🌼Aparna🌈 (@Jayaa_IND) May 14, 2019 |
ಬಿಜೆಪಿ ಸ್ಟಾರ್ ಕ್ಯಾಂಪೇನರ್! |
ಇವರು ನಾಲ್ಕು ಜನ ಬಿಜೆಪಿಯ ಅತ್ಯಂತ ಯಶಸ್ವೀ ತಅರಾ ಪ್ರಚಾರಕರು ಎಂದು ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಮತ್ತು ಅಮಿತ್ ಶಾ ಅವರ ಚಿತ್ರದೊಂದಿಗೆ ಮಣಿಶಂಕರ್ ಅಯ್ಯರ್ ಅವರ ಚಿತ್ರವನ್ನೂ ಪೋಸ್ಟ್ ಮಾಡಿ ಗೇಲಿ ಮಾಡಿದ್ದಾರೆ ಅಪರ್ಣಾ. |
During gujarat election he made controversial comment over modi that costed his party to loss in gujarat and know he once again doing same mistake, pray for congress party 😂 #ManiShankarAiyar |
— sivagangadhar (@SivaGangadhar02) May 14, 2019 |
ಕಾಂಗ್ರೆಸ್ ಗಾಗಿ ಪ್ರಾರ್ಥಿಸಿ |
ಗುಜರಾತ್ ಚುನಾವಣೆಯ ಸಮಯದಲ್ಲಿ ಈ ಹೇಳಿಕೆ ನೀಡಿದ್ದ ಮಣಿಶಂಕರ್ ಅಯ್ಯರ್ ರಿಂದ ಕಾಂಗ್ರೆಸ್ ಎಮಥ ನಷ್ಟ ಅನುಭವಿಸಬೇಕಾಯ್ತು ಎಂಬುದು ಗೊತ್ತಿರುವ ವಿಷಯ. ಈಗ ಮತ್ತೆ ಅದೇ ತಪ್ಪು ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗಾಗಿ ಪ್ರಾರ್ಥಿಸಿ ಎಂದಿದ್ದಾರೆ ಶಿವಗಂಗಾಧರ್. |
He was in mask of @sampitroda #ManiShankarAiyar |
— Osho Rajesh (@ORajesh100) May 14, 2019 |
ಸ್ಯಾಮ್ ಪಿತ್ರೋಡಾ ಮುಖವಾಡ! |
ಮಂನಿಶಂಕರ್ ಅಯ್ಯರ್ ಅವರು ಸ್ಯಾಮ್ ಪಿತ್ರೋಡಾ ಮುಖವಾಡ ಧರಿಸಿದ್ದಾರೆ-ಓಶೋ ರಾಜೇಶ್. |
in last over, this fool #ManiShankarAiyar showed his character. Sam Pitroda had already damaged Pappu's career. Looks like he wanted contribute something to RG's loss. |
— Chowkidar Avinash (@mvavinash) May 14, 2019 |
ರಾಹುಲ್ ಭವಿಷ್ಯಕ್ಕೆ ಕೊಳ್ಳಿ! |
ಸ್ಯಾಮ್ ಪಿತ್ರೋಡಾ ಈಗಾಗಲೇ ರಾಹುಲ್ ಗಾಂಧಿ ಆವರ ರಾಜಕು ಭವಿಷ್ಯಕ್ಕೆ ಹಾನಿಯುಂಟು ಮಾಡಿದ್ದಾರೆ. ಕೇವಲ ಸ್ಯಾಮ್ ಪಿತ್ರೋಡಾ ಒಬ್ಬರೇ ಆ ಕೆಲಸ ಮಾಡಿದರೆ ಸಾಲದು ಎಂಬಂತೆ ಮಣಿಶಂಕರ್ ಅಯ್ಯರ್ ಅವರೂ ಈಗ ಕೈಜೋಡಿಸುತ್ತಿದ್ದಾರೆ- ಅವಿನಾಶ್ |
#ManiShankarAiyar should have come before the beginning of 1st phase of elections. However it is good that he is serving the nation by damaging #Congress https://t.co/HT5JfQt522 |
— Tripati Dey Artist (@tripati_artist) May 14, 2019 |
ದೇಶಸೇವೆ ಮಾಡುತ್ತಿದ್ದಾರೆ |
ಮಣಿಶಂಕರ್ ಅಯ್ಯರ್ ಚುನಾವಣೆಯ ಮೊದಲ ಹಂತದಲ್ಲೇ ಬರಬೇಕಿತ್ತು. ಏನೇ ಆಗಲಿ, ಅವರು ಕಾಂಗ್ರೆಸ್ಸಿಗೆ ಹಾನಿ ಮಾಡುವ ಮೂಲಕ ದೇಶಸೇವೆ ಮಾಡುತ್ತಿದ್ದಾರೆ- ತ್ರಿಪಾಟಿ ದೇವ್ |
narendra modi lok sabha elections 2019 controversy ಮಣಿ ಶಂಕರ್ ಅಯ್ಯರ್ ನರೇಂದ್ರ ಮೋದಿ ಲೋಕಸಭೆ ಚುನಾವಣೆ ವಿವಾದ |
Congress leader Mani Shankar Aiyer, who was suspended by the party after his 'Neech' remark against PM Narendra Modi in 2017, has again defended his words. Twitter reactions. |
ಜಮ್ಮು-ಕಾಶ್ಮೀರದಲ್ಲಿ ಸ್ಥಾಪನೆಗೊಳ್ಳುತ್ತಿದೆ 25 ಸ್ಮಾರ್ಟ್ ಶಾಲೆಗಳು | News13 |
News13 > ಸುದ್ದಿಗಳು > ರಾಷ್ಟ್ರೀಯ > ಜಮ್ಮು-ಕಾಶ್ಮೀರದಲ್ಲಿ ಸ್ಥಾಪನೆಗೊಳ್ಳುತ್ತಿದೆ 25 ಸ್ಮಾರ್ಟ್ ಶಾಲೆಗಳು |
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಶ್ರೀನಗರದಲ್ಲಿ ಗ್ರಂಥಾಲಯಗಳು, ವಿಜ್ಞಾನ ಪ್ರಯೋಗಾಲಯಗಳು, ಸ್ಮಾರ್ಟ್ ತರಗತಿ ಕೊಠಡಿಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ 25 'ಸ್ಮಾರ್ಟ್ ಶಾಲೆಗಳನ್ನು' ಸ್ಥಾಪಿಸಲು ನಿರ್ಧರಿಸಿದೆ. |
ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಅತ್ಯಂತ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ರೋಮಾಂಚಕ ಮತ್ತು ಸ್ಪರ್ಧಾತ್ಮಕ ಕಲಿಕೆಯ ಸಂಸ್ಥೆಗಳನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಗೊಂಡಿರುವುದಾಗಿ ಶ್ರೀನಗರ ಆಡಳಿತವು ಘೋಷಿಸಿದೆ. |
ಶ್ರೀನಗರದಲ್ಲಿ 25 ಸ್ಮಾರ್ಟ್ ಶಾಲೆಗಳ ಸ್ಥಾಪನೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂಬುದಾಗಿ ಜನವರಿ 19 ರಂದು ಸರ್ಕಾರ ಘೋಷಿಸಿತ್ತು. |
25 ಶಾಲೆಗಳನ್ನು ಪ್ರಾಯೋಗಿಕವಾಗಿ ಆಧುನೀಕರಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಶಾಲೆಯ ಅಭಿವೃದ್ಧಿ, ಸಂಪೂರ್ಣ ಶಾಲಾ ಕಟ್ಟಡಗಳನ್ನು ನವೀಕರಿಸುವುದು, ಆಧುನಿಕ ಮೂಲಸೌಕರ್ಯಗಳೊಂದಿಗೆ ಸಜ್ಜುಗೊಳಿಸುವುದು ಮತ್ತು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಶೈಕ್ಷಣಿಕ ರಚನೆಯನ್ನು ಪುನರುಜ್ಜೀವನಗೊಳಿಸುವುದರೊಂದಿಗೆ ಈ ಪ್ರಕ್ರಿಯೆಯು ಪ್ರಾರಂಭವಾಗಿದೆ. |
"ಖಾಸಗಿ ಶಾಲೆಗಳಲ್ಲಿಯೂ ಸಹ ನಾನು ಸ್ಮಾರ್ಟ್ ಬೋರ್ಡ್‌ಗಳು ಮತ್ತು ಪ್ರೊಜೆಕ್ಟರ್‌ಗಳಂತಹ ಸೌಲಭ್ಯಗಳನ್ನು ನೋಡಿಲ್ಲ, ಇದು ಅಧ್ಯಯನವನ್ನು ಹೆಚ್ಚು ಮೋಜಿನ ಸಂಗತಿಯನ್ನಾಗಿ ಮಾಡುತ್ತದೆ. ಆದರೆ ಇಲ್ಲಿ ಸರ್ಕಾರಿ ಶಾಲೆಗಳಲ್ಲಿನ ಸೌಲಭ್ಯಗಳು ಖಾಸಗಿ ಶಾಲೆಗಳಿಗಿಂತ ಹೆಚ್ಚು ಉತ್ತಮವಾಗಿವೆ. ಶಾಲೆಯ ಪರಿಸರ ಹಿತಕರವಾಗಿದೆ ಮತ್ತು ಶಾಲೆಗಳ ಶಿಕ್ಷಕರು ಅತ್ಯುತ್ತಮರಾಗಿದ್ದಾರೆ" ಎಂದು ವಿದ್ಯಾರ್ಥಿ ಮೆಹ್ರೀನ್ ಭಟ್ ಹೇಳುತ್ತಾರೆ. |
"ನಾವು ಈಗ ಎಲ್ಲವನ್ನೂ ಪ್ರಾಯೋಗಿಕವಾಗಿ ಕಲಿಯುತ್ತಿದ್ದೇನೆ ಮತ್ತು ಉತ್ತಮ ಕಲಿಕೆಯ ಸೌಲಭ್ಯ ಲಭ್ಯವಿದೆ. ಖಾಸಗಿ ಶಾಲೆಗಳಿಗಿಂತ ಕಲಿಕೆ ತುಂಬಾ ಉತ್ತಮವಾಗಿದೆ" ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳಿದ್ದಾನೆ. |
ಜೆಡಿಎಸ್‌ಗೆ ಮತ ಹಾಕಿ ತಪ್ಪು ಮಾಡಬೇಡಿ: ಮೋದಿ | Narendra Modi addressing BJP rally in Bengaluru - Kannada Oneindia |
ಬೆಂಗಳೂರು, ಮೇ 03: ಬಿಸಿಲ ನಾಡು ಕಲಬುರಗಿ, ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ಮುಗಿಸಿದ ಮೋದಿ ಅವರು ಬೆಂಗಳೂರಿನ ಸಮಾವೇಶಕ್ಕೆ ಆಗಮಿಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದು ಮೋದಿ ಅವರ ಮಾತು ಕೇಳಲು ಕಾತರರಾಗಿದ್ದಾರೆ. |
ಬೆಂಗಳೂರಿನ ಜನತೆಗೆ ನನ್ನ ನಮಸ್ಕಾರಗಳು, ಕೆಂಪೇಗೌಡರವರಿಗೆ, ಡಾ.ರಾಜಕುಮಾರ್, ಸಿವಿ ರಾಮನ್, ವಿಶ್ವೇಶ್ವರಯ್ಯಾ ಅವರಿಗೆ ನನ್ನ ಅನಂತ ಪ್ರಣಾಮಗಳು ಎನ್ನುವ ಮೂಲಕ ಭಾಷಣವನ್ನು ಮೋದಿ ಆರಂಭಿಸಿದರು. |
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರುಗಳು ಬಹಳ ದಿನಗಳ ನಂತರ ಬಿಜೆಪಿ ಜೊತೆ ಮತ್ತೆ ಕಾಣಿಸಿಕೊಂಡಿದ್ದು, ವೇದಿಕೆ ಏರಿದ್ದಾರೆ. ಮೋದಿ ಬಂದ ನಂತರ ಎಸ್.ಎಂ.ಕೃಷ್ಣ ಅವರು ವೇದಿಕೆಗೆ ಬಂದರು. |
ಸ್ವಚ್ಛ, ಸುಂದರ, ಶಾಂತಿಯುತ ಕರ್ನಾಟಕ ನಿರ್ಮಿಸೋಣ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂದು ಘೋಷಣೆ ಕೂಗವ ಮೂಲಕ ನರೇಂದ್ರ ಮೋದಿ ಭಾಷಣ ಮುಗಿಸಿದರು. |
6:20 PM, 3 May |
ನಾಳೆ (ಏಪ್ರಿಲ್ 04) ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ನಾಟಕದ ಬಿಜೆಪಿ ಮಹಿಳಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದೇನೆ ಎಲ್ಲರೂ ಅದರಲ್ಲಿ ಭಾಗಿ ಆಗಿ. |
6:19 PM, 3 May |
ನನಗೆ ತಡವಾಗಿದೆ, ಹೊರಡಲೇ ಬೇಕು ಆದರೆ ಮನಸಿಲ್ಲ, ಆದರೆ ಕೊನೆಯದಾಗಿ ಒಂದು ವಿಷಯ ಹೇಳುತ್ತೇನೆ, ನಮ್ಮ ದಿಲ್ಲಿಯ ಸರ್ಕಾರ ಕರ್ನಾಟಕದ ಜೊತೆಗಿದೆ, ಇಲ್ಲಿನ ಜನರ ಜೊತೆಗಿದೆ. |
6:18 PM, 3 May |
ರೇಷ್ಮೆಯಲ್ಲಿ ರಾಮನಗರ ಪ್ರಸಿದ್ಧಿ ಹೊಂದಿದೆ. ಕೇವಲ ಎರಡು ವರ್ಷದಲ್ಲಿ ರೇಷ್ಮೆ ಉತ್ಪಾದನೆಯನ್ನು ದ್ವಿಗುಣ ಗೊಳಿಸುವುದು ನಮ್ಮ ಸರ್ಕಾರದ ಗುರಿ. ಈಗಾಗಲೇ ನಮ್ಮ ಸರ್ಕಾರ ಈ ಬಗ್ಗೆ 2000 ಕೋಟಿ ಮೀಸಲಿಟ್ಟಿದ್ದೇವೆ. |
6:14 PM, 3 May |
ಕಾಂಗ್ರೆಸ್‌ನ ಪ್ರಣಾಳಿಕೆ ನೋಡಿದೆ. ಎಲ್ಲಿ ಕಲ್ಲು ಕೂಡ ಇಲ್ಲವೋ ಅಲ್ಲಿ ಬೆಟ್ಟವನ್ನೇ ತೋರಿಸುತ್ತಾರೆ ಇದು ಕಾಂಗ್ರೆಸ್ ಕಲೆ. ಐಟಿ ಸೆಕ್ಟರ್‌ನಲ್ಲಿ 300 ಬಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಇದು ಅತ್ಯದ್ಬುತ ಸುಳ್ಳು. ಜನರಿಗೆ ಭರವಸೆ ಕೊಡುವ ಪವಿತ್ರವಾದ ವಸ್ತುವಾದ ಪ್ರಣಾಳಿಕೆಯಲ್ಲಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತೀರಾ? |
6:12 PM, 3 May |
ಮೋದಿ ನೀನು ಏನು ಮಾಡಿದೆ? ಎಂದು ಕಾಂಗ್ರೆಸ್‌ನವರು ನನ್ನ ಕೇಳ್ತಿದ್ದಾರೆ, ಆದರೆ ಕಾಂಗ್ರೆಸ್‌ನವರೆ ಹೇಳಿ ನೀವು ಏನು ಮಾಡಿದ್ದೀರಿ? ಎಲ್ಲಿ ಮಾಡಿದ್ದೀರಿ? ಯಾರಿಗಾಗಿ ಮಾಡಿದ್ದೀರಿ? ಹೇಗೆ ಮಾಡಿದ್ದೀರಿ? |
ಸಿಟಿ ಆಫ್ ಲೇಕ್ಸ್ (ಕೆರೆಗಳ ನಗರ) ಎನಿಸಿಕೊಂಡಿದ್ದ ಬೆಂಗಳೂರು ಇಂದು ಸಿಟಿ ಆಫ್ ಬರ್ನಿಂಗ್ ಲೇಕ್ಸ್ (ಬೆಂಕಿಯ ಕೆರೆ) ಆಗಿಬಿಟ್ಟಿದೆ. ನೀರು ಹರಿಯಬೇಕಿದ್ದ ಕೆರೆಯಲ್ಲಿ ಜಾಗದಲ್ಲಿ ಇಂದು ಕೆಮಿಕಲ್ ಹರಿಯುತ್ತಿದೆ. |
ಕಾಂಗ್ರೆಸ್‌ಗೆ ಅಧಿಕಾರದ ಮದ ಏರಿದೆ, ಕಾಂಗ್ರೆಸ್‌ನ ಹಿರಿಯ ಸಚಿವರೊಬ್ಬರು ತಮ್ಮನ್ನು ಭೇಟಿ ಆಗಲು ಬಂದ ಅಂಗವಿಕಲನನ್ನು ಲಿಫ್ಟ್‌ನಿಂದ ಹೊರದಬ್ಬಿದ್ದಾನೆ ಇದು ಅಂಹಕಾರದ ಪರಮಾವಧಿ. |
ಬಿಬಿಎಂಪಿ ಕಚೇರಿಯಲ್ಲಿ ಕಾಂಗ್ರೆಸ್‌ನ ಮುಖಂಡನೊಬ್ಬ ಹೋಗಿ ಗೂಂಡಾಗಿರಿ ಮಾಡುತ್ತಾನೆ, ಹಾಗಾದರೆ ನೀವು ಯೋಚಿಸಿ ಇಲ್ಲಿ ಯಾರಿಗೆ ತಾನೇ ರಕ್ಷಣೆ ಇದೆ ಎಂದು |
6:01 PM, 3 May |
ಇಲ್ಲಿನ ಒಬ್ಬ ಕಾಂಗ್ರೆಸ್‌ನ ಶಾಸಕರ ಮಗ ಅಮಾಯಕರ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಾನೆ, ಅಂತಹಾ ಅಪರಾಧಿಗೆ ಕಾಂಗ್ರೆಸ್ ಸರ್ಕಾರ ಅವನಿಗೆ ಬೆಂಬಲ ನೀಡುತ್ತದೆ. |
5:59 PM, 3 May |
ಮಹಿಳೆಯರ ಸುರಕ್ಷಿತೆ ಎಂಬುದು ಕರ್ನಾಟಕದಲ್ಲಿ ದೊಡ್ಡ ಚಿಂತೆಯಾಗಿಬಿಟ್ಟಿದೆ. ನ್ಯೂಯಿಯರ್ ಆಚರಣೆಗೆ ಜನ ಗೋವಾಗೆ ಹೋಗ್ತಾ ಇದ್ದರು ಅಥವಾ ಬೆಂಗಳೂರಿಗೆ ಬರುತ್ತಿದ್ದರು ಆದರೆ ಇಲ್ಲಿ ಹೊಸ ವರ್ಷದಲ್ಲಿ ಆದ ಘಟನೆ ಎಲ್ಲರನ್ನೂ ಚಿಂತಾಕ್ರನ್ನಾಗಿ ಮಾಡಿದೆ. ಆದರೆ ನಮ್ಮ ಬಿಜೆಪಿ ಸರ್ಕಾರ ಇಂತಹಾ ಮಹಿಳಾ ಪೀಡಕರನ್ನು ನೇಣಿಗೆ ಏರಿಸುವ ನಿರ್ಧಾರ ಕೈಗೊಂಡಿದ್ದೇವೆ ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಇಲ್ಲೂ ಜಾರಿಗೆ ತರುತ್ತೇವೆ. |
5:58 PM, 3 May |
ಸುಲಭವಾಗಿ ವ್ಯಾಪಾರ ಮಾಡುವ ಬಗ್ಗೆ ನಮ್ಮ ಸರ್ಕಾರ ಮಾತನಾಡುತ್ತಿದ್ದರೆ ಕರ್ನಾಟಕ ಸರ್ಕಾರವು ಸುಲಭವಾಗಿ ಕೊಲೆ ಹೇಗೆ ಮಾಡುವುದು ಎಂದು ಚಿಂತಿಸುತ್ತಿದೆ |
5:56 PM, 3 May |
ಕರ್ನಾಟಕದ ಪಿ.ಗುರುರಾಜ್, ಅಶ್ವಿನಿ ಪೊನ್ನಪ್ಪ ಅಂತಹಾ ಕ್ರೀಡಾಪಟುಗಳನ್ನು ಇಂದು ದೇಶವೇ ನೆನೆಯುತ್ತಿದೆ. ಕರ್ನಾಟಕದ ನನ್ನ ಪ್ರೀತಿಯ ಯುವಕರೆ ನಿಮಗೆ ಶಕ್ತಿ ಇದೆ ಆದರೆ ಭ್ರಷ್ಟಾಚಾರದ ಈ ಕಾಂಗ್ರೆಸ್ ಅನ್ನು ತೊಡೆದುಹಾಕಲಿಲ್ಲವೆಂದರೆ ನಿಮ್ಮ ಕನಸು ನನಸಾಗದು. |
5:54 PM, 3 May |
ಮೇ 12ರಂದು ಬಿಜೆಪಿಗೆ ಮತ ಹಾಕಿ, ಕಾಂಗ್ರೆಸ್‌ನ ಎಲ್ಲ ಅರಾಜಕತೆಗಳಿಂದ ಕರ್ನಾಟಕವನ್ನು ಮುಕ್ತ ಮಾಡಲು ನಿಮಗೆ ಅವಕಾಶ ಇದೆ ಅದನ್ನು ಕಳೆದುಕೊಳ್ಳಬೇಡಿ. |
5:52 PM, 3 May |
ಕಾಂಗ್ರೆಸ್ ಮಾಡಲು ಹೊರಟಿದ್ದ ಸ್ಟೀಲ್ ಬ್ರಿಡ್ಜ್ ಅದು ಕೇವಲ ಸ್ಟೀಲ್ ಬ್ರಿಡ್ಜ್ ಅಲ್ಲ steal (ಕಳ್ಳತನ)ದ ಬ್ರಿಡ್ಜ್. ಆದರೆ ಇದರ ವಿರುದ್ಧ ಬಿಜೆಪಿ ಮತ್ತು ಇಲ್ಲಿನ ಜನ ಅದ್ಭುತ ಹೋರಾಟ ಮಾಡಿ ದರೋಡೆಯನ್ನು ತಡೆದಿದ್ದಾರೆ. |
ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರಲ್ಲಿ ಒಂದು ಇಲಾಖೆ ಮೇಲೆ ಮತ್ತೊಂದು ಇಲಾಖೆ ಸ್ಪರ್ಧೆ ಮಾಡುತ್ತದೆ, ಒಬ್ಬ ಮಂತ್ರಿ ಇನ್ನೊಬ್ಬ ಮಂತ್ರಿ ಮೇಲೆ ಸ್ಪರ್ಧೆ ಮಾಡುತ್ತಿದ್ದಾನೆ, ಭ್ರಷ್ಟಾರದಲ್ಲಿ ಕರ್ನಾಟಕ ಸರ್ಕಾರ ಸ್ಪರ್ಧೆಗೆ ಬಿದ್ದಿದೆ. |
5:50 PM, 3 May |
ಟ್ರಾಫಿಕ್ ಜಾಮ್, ರಸ್ತೆ ಗುಂಡಿ ಇದರಲ್ಲೇ ಬೆಂಗಳೂರಿನ ಜನ ಸಿಕ್ಕಿಕೊಂಡಿದ್ದಾರೆ. ರಸ್ತೆ ಗುಂಡಿಯಿಂದ ಎಷ್ಟು ಜನ ಜೀವ ಕಳೆದುಕೊಂಡಿದ್ದಾರೆ. ಇದೆಲ್ಲಾ ಕಾಂಗ್ರೆಸ್‌ನ ಕೊಡುಗೆ. |
ಸ್ಟಾರ್ಟ್‌ಅಫ್ ಸಂಸ್ಕೃತಿ ಇಂದು ದೇಶದಲ್ಲಿ ಯಶಸ್ಸು ಕಂಡಿದ್ದರೆ ಅದರ ಯಶಸ್ಸು ಬೆಂಗಳೂರಿನ ಯುಕವರಿಗೆ ಸಲ್ಲಬೇಕು. ಬೆಂಗಳೂರು ಸ್ಟಾರ್ಟ್‌ಅಪ್ ಹಬ್ ಆಗಿ ಪರಿವರ್ತಿತಗೊಂಡಿದೆ. ಆದರೆ ಕಾಂಗ್ರೆಸ್ ಬೆಂಗಳೂರಲ್ಲಿ ಪಾಟ್ ಹೋಲ್ (ರಸ್ತೆ ಗುಂಡಿ) ಕ್ಲಬ್ ಮಾಡಿಬಿಟ್ಟಿದೆ. |
5:48 PM, 3 May |
ಕಾಸ್ಮೋಪಾಲಿಟಿನ್ ಸಂಸ್ಕೃತಿಯ ಮೂಲಕ ದೇಶದಲ್ಲಿ ಹೆಸರು ಮಾಡಿದ್ದ ಬೆಂಗಳೂರನ್ನು ಕಲ್ಚರ್ ಆಫ್ ಖೆಯಾಸ್ (ಅಟ್ಟಹಾಸ) ಮಾಡಿಬಿಟ್ಟಿದೆ ಈ ಕಾಂಗ್ರೆಸ್ ಸರ್ಕಾರ. |
5:47 PM, 3 May |
ಕಂಪ್ಯೂಟರ್ ರಾಜಧಾನಿ ಎಂದು ವಿಶ್ವದಲ್ಲಿ ಹೆಸರಾಗಿದ್ದ ಬೆಂಗಳೂರನ್ನು ಕಾಂಗ್ರೆಸ್ ಕ್ರೈಮ್ ರಾಜಧಾನಿಯನ್ನಾಗಿ ಕಾಂಗ್ರೆಸ್ ಪರಿವರ್ತಿಸಿಬಿಟ್ಟಿದೆ. |
5:46 PM, 3 May |
ಗಾರ್ಡನ್ ಸಿಟಿ ಎಂಬ ಹೆಸರು ಹೊಂದಿದ್ದ ಬೆಂಗಳೂರನ್ನು ಗಾರ್ಬೆಜ್ ಸಿಟಿ ಯನ್ನಾಗಿ ಪರಿವರ್ತಿಸುವ ಕಾರ್ಯವನ್ನು ಕಾಂಗ್ರೆಸ್ ಕರ್ನಾಟಕ ಮಾಡಿದೆ |
5:45 PM, 3 May |
5 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಸಿಲಿಕಾನ್ ವ್ಯಾಲಿಎನಿಸಿಕೊಂಡಿದ್ದ ಬೆಂಗಳೂರನ್ನು ವ್ಯಾಲಿ ಆಫ್ ಸೀನ್ (ಪಾಪದ ಕಣಿವೆ) ಮಾಡಿಬಿಟ್ಟಿದೆ. |
5:44 PM, 3 May |
5 ವರ್ಷಗಳಲ್ಲಿ ಕಾಂಗ್ರೆಸ್ ಬೆಂಗಳೂರಿಗೆ ಎಂತಹಾ ಕೆಟ್ಟ ಉಡುಗೊರೆಗಳನ್ನು ಕೊಟ್ಟಿದೆ. ಅದನ್ನು ನಾನು ಇಲ್ಲಿ ನಿಮ್ಮ ಮುಂದೆ ಇಡುತ್ತೇನೆ. |
5:42 PM, 3 May |
ಜೆಡಿಎಸ್ ಚುನಾವಣೆಯಲ್ಲಿ ಸೋಲುವುದು ಖಂಡಿತ. ಅವರು ಬೇರೆ ರಾಜ್ಯದಿಂದ ಭಯೋತ್ಪಾದಕರಿಗೆ ಬೆಂಬಲ ನೀಡುವವರನ್ನು ರಾಜ್ಯಕ್ಕೆ ಕರೆತಂದು ಮೈತ್ರಿ ಮಾಡಿಕೊಂಡಿದ್ದಾರೆ. |
* ಜೆಡಿಎಸ್‌ಗೆ ಮತ ಹಾಕುವ ತಪ್ಪು ನಿರ್ಧಾರ ಮಾಡದಿರಿ, ರಾಜ್ಯದ ಸಮಸ್ಯೆಗಳಿಗೆ ಬಿಜೆಪಿ ಮಾತ್ರವೇ ಪರ್ಯಾಯ ವ್ಯವಸ್ಥೆ. |
5:41 PM, 3 May |
ಕಾಂಗ್ರೆಸ್‌ಗೆ ಸೋಲುವುದು ಯಾವಾಗ ಖಚಿತವಾಗುತ್ತದೋ ಆಗ ಅದು ಅತಂತ್ರ ವಿಧಾನಸಭೆ ಆಗುತ್ತದೆ ಎನ್ನುವ ಗಾಳಿ ಸುದ್ದಿ ಹರಡಿಸುತ್ತದೆ. ಈ ಬಾರಿ ಕರ್ನಾಟಕದಲ್ಲೂ ಅದೇ ಆಗುತ್ತಿದೆ. ಈಗಲೂ ಕೂಡಾ ಕಾಂಗ್ರೆಸ್ ಗಾಳಿ ಸುದ್ದಿ ಹರಡಿಸುತ್ತಿದೆ ಆದರೆ ಬಿಜೆಪಿ ಬಹುಮತ ಪಡೆಯುವುದು ಖಾಯಂ, ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. |
Subsets and Splits
No community queries yet
The top public SQL queries from the community will appear here once available.