text
stringlengths
0
61.5k
ಕಾಟ ಕೊಡುವ ಮಕ್ಕಳನ್ನು ಮನೆಯಿಂದ ಹೊರಹಾಕಬಹುದು : ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು
March 19, 2017 Sri Raghav Abusive Children, Delhi High Court, Evict, home, parents, ದೆಹಲಿ ಹೈಕೋರ್ಟ್
ನವದೆಹಲಿ, ಮಾ.19-ತಮ್ಮ ತಂದೆತಾಯಿಗಳು ಮತ್ತು ಪೋಷಕರನ್ನು ನಿಂದಿಸುವ ಮತ್ತು ಕಾಟ ಕೊಡುವ ವಯಸ್ಕ ಮಕ್ಕಳನ್ನು ಮನೆಯಿಂದ ತೆರವುಗೊಳಿಸಬಹುದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೇ ಹಿರಿಯ ನಾಗರಿಕರು ಅಥವಾ ಪೋಷಕರು ಘನತೆಯೊಂದಿಗೆ ಶಾಂತಿ-ನೆಮ್ಮದಿಯಿಂದ ಬದುಕುವ ಹಕ್ಕು ಹೊಂದಿರುತ್ತಾರೆ ಎಂಬುದನ್ನು ಕೋರ್ಟ್ ಎತ್ತಿ ಹಿಡಿದಿದೆ. ಪೋಷಕರ ಮನೆಯಲ್ಲೇ ಇದ್ದುಕೊಂಡು ಅವರನ್ನು ನಿಂದಿಸುವ ಮತ್ತು ಕಾಟಕೊಡುವ ಮಕ್ಕಳನ್ನು ಸ್ವತ್ತಿನಿಂದ ತೆರವುಗೊಳಿಸಬಹುದಾಗಿದೆ ಎಂದು ನ್ಯಾಯಮೂರ್ತಿ ಮನಮೋಹನ್ ತೀರ್ಪು ನೀಡಿದ್ದಾರೆ.
ಪೋಷಕರು ಸ್ವಯಾರ್ಜಿತ ಆಸ್ತಿ ಹೊಂದಿರಲಿ ಅಥವಾ ಹೊಂದಿಲ್ಲದೇ ಇರಲಿ, ಸ್ವತ್ತಿನ ಮೇಲೆ ಎಲ್ಲಿಯವರೆಗೆ ಅವರು ಕಾನೂನು ಸುಪರ್ದಿ ಹೊಂದಿರುತ್ತಾರೆ. ಅಲ್ಲಿಯವರೆಗೆ ಈ ತೀರ್ಪು ಅನ್ವಯಿಸುತ್ತದೆ. ತಂದೆ-ತಾಯಿಗಳ ಮನೆಯಲ್ಲಿದ್ದುಕೊಂಡು ಅವರನ್ನೇ ನಿಂದಿಸುವಂಥ ಮಕ್ಕಳನ್ನು ಅಲ್ಲಿಂದ ಹೊರಹಾಕಬಹುದಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ವಯೋವೃದ್ಧ ಮತ್ತು ರೋಗಪೀಡಿತ ಪೋಷಕರನ್ನು ನಿಂದಿಸಿ ಕಾಟಕೊಡುತ್ತಿದ್ದ ಮದ್ಯವ್ಯಸನಿ ಮಾಜಿ ಪೊಲೀಸ್ ಪೇದೆ ಮತ್ತು ಆತನ ಸಹೋದರನನ್ನು ಮನೆಯಿಂದ ತೆರವುಗೊಳಿಸಬೇಕು ಎಂದು ಅಕ್ಟೋಬರ್ 2015ರಲ್ಲಿ ಪರಿಹಾರ ನಿರ್ವಹಣಾ ನ್ಯಾಯಾಧಿಕರಣ ನೀಡಿದ್ದ ಆದೇಶ ಪ್ರಶ್ನಿಸಿ ಈ ಇಬ್ಬರು ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಧಿಕರಣದ ತೀರ್ಪನ್ನು ನ್ಯಾಯಮೂರ್ತಿ ಮನಮೋಹನ್ ಎತ್ತಿ ಹಿಡಿದಿದ್ದಾರೆ.
ಯುವತಿ ಆತ್ಮಹತ್ಯೆ : ಲವ್ ಜಿಹಾದ್ ಆರೋಪ- ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ - Newsnap Kannada
ಯುವತಿ ಆತ್ಮಹತ್ಯೆ : ಲವ್ ಜಿಹಾದ್ ಆರೋಪ- ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
Youth suicides: Love jihad allegation
ಕುಂದಾಪುರದ ಯುವತಿಯೊಬ್ಬಳನ್ನು ವಂಚಿಸಿದ ವಿವಾಹಿತ ಪುರುಷನ ಮೋಸ ಅರಿತು ಆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಕುಂದಾಪುರ ಬಳಿಯ ಉಪ್ಪಿನಕುದ್ರು ನಿವಾಸಿ ಶಿಲ್ಪಾ ಎಂಬ ಯುವತಿ ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.
ಇದನ್ನು ಓದಿ –ಹೊಟ್ಟೆ ನೋವು ಚಿಕಿತ್ಸೆಗೆ 10 ಕೋಟಿ ರು ಬಿಲ್! ಆದರೂ ಬದುಕಲಿಲ್ಲ ಆ ಮಹಿಳೆ – ದೂರು ದಾಖಲು
ವಿವಾಹವಾಗಿದ್ದ ಮುಡುಗೋಪಾಡಿ ಅಜೀಜ್ ಎಂಬಾತನ ಜತೆ ಎರಡು ಮೂರು ವರ್ಷಗಳಿಂದ ಸ್ನೇಹದಿಂದ ಇದ್ದ ಶಿಲ್ಪಾಳನ್ನು ನಂಬಿಸಿ ತನ್ನ ಫ್ಲಾಟ್ ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂಬ ಆರೋಪ ಕೇಳಿಬಂದಿದೆ.
ಆಕೆಯ ಕೆಲ ಖಾಸಗಿ ಫೋಟೋಗಳನ್ನು ಸೆರೆ ಹಿಡಿದಿದ್ದ ಅಜೀಜ್ ಬಳಿಕ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ. ಮದುವೆಯಾಗುವಂತೆ ಒತ್ತಾಯಿಸಿದ್ದನು. ಆತನ ಪತ್ನಿ ಕೂಡ ಅಜೀಜ್ ನನ್ನು ಮದುವೆಯಾಗಿ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಳು ಎನ್ನಲಾಗಿದೆ.
ಅಜೀಜ್ ನ ಬ್ಲಾಕ್ ಮೇಲ್, ಮತಾಂತರ ಯತ್ನ, ಕಿರುಕುಳಕ್ಕೆ ಬೇಸತ್ತು ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿಲ್ಪಾ ಸಾವಿನ ಹಿಂದೆ ಲವ್ ಜಿಹಾದ್ ಕೈವಾಡವಿದೆ ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಆರೋಪಿ ಅಜೀಜ್ ನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಧರ್ಮಸ್ಥಳಕ್ಕೆ ಭೇಟಿ. | ಸುದ್ದಿ ಬೆಳ್ತಂಗಡಿ
in: ಅಧಿಕಾರಿಗಳ ಕಾರ್ಯಕ್ರಮ, ಕಾರ್ಯಕ್ರಮಗಳು, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಚುನಾವಣೆ, ಜಿಲ್ಲಾ ಸುದ್ದಿ, ಪ್ರಚಲಿತ, ಪ್ರಶಸ್ತಿ ಪುರಸ್ಕಾರ, ಬಿಸಿ ಬಿಸಿ, ಮುಖ್ಯ ವರದಿ, ರಾಜಕೀಯ, ರಾಜ್ಯ ಸುದ್ದಿ, ರಾಷ್ಟ್ರೀಯ, ವರದಿ, ವಿಶೇಷ ಸುದ್ದಿ, ಸಾಮಾನ್ಯ
ಧರ್ಮಸ್ಥಳ : ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎ.27 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಬಂಟ್ವಾಳದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಧ್ಯಾಹ್ನ 1.10 ಕ್ಕೆ ಹೆಲಿಕಾಪ್ಟರ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದರು. ಧರ್ಮಸ್ಥಳ ಬೀಡಿನಲ್ಲಿ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭ ಹೆಗ್ಗಡೆಯವರು ರಾಹುಲ್ ಗಾಂಧಿಯವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಚುನಾವಣಾ ವೀಕ್ಷಕರಾದ ವೇಣುಗೋಪಾಲ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯದರ್ಶಿ ವೆಂಕಟೇಶ್, ಪಕ್ಷದ ಅಭ್ಯರ್ಥಿ ಶಾಸಕ ಕೆ.ವಸಂತ ಬಂಗೇರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್, ಕೇಂದ್ರ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ ಅಜ್ರಿ ಮೊದಲಾದವರು ಉಪಸ್ಥಿತರಿದ್ದರು.
ವಾಜಿದ್ ಅವರ ಭಾವನಾತ್ಮಕ ವಿಡಿಯೋ ವೈರೆಲ್; ಆಸ್ಪತ್ರೆಯಿಂದಲೆ ಸಹೋದರನಿಗಾಗಿ ಕೊನೆಯ ಹಾಡು – Karnataka Jwale
Home/Uncategorized/ವಾಜಿದ್ ಅವರ ಭಾವನಾತ್ಮಕ ವಿಡಿಯೋ ವೈರೆಲ್; ಆಸ್ಪತ್ರೆಯಿಂದಲೆ ಸಹೋದರನಿಗಾಗಿ ಕೊನೆಯ ಹಾಡು
ವಾಜಿದ್ ಅವರ ಭಾವನಾತ್ಮಕ ವಿಡಿಯೋ ವೈರೆಲ್; ಆಸ್ಪತ್ರೆಯಿಂದಲೆ ಸಹೋದರನಿಗಾಗಿ ಕೊನೆಯ ಹಾಡು
ಬಾಲಿವುಡ್​ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಹಿಂದಿ ಚಿತ್ರರಂಗದ ಸುಪ್ರಸಿದ್ಧ ಸಂಗೀತ ಸಹೋದರರು ಎಂದು ಖ್ಯಾತಿ ಗಳಿಸಿದ್ದ ಸಾಜಿದ್-ವಾಜಿದ್ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಗಾನ ಬಜಾಯಿಸಿದ್ದರು.
ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಾಜಿದ್ ಕೆಲ ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೆ ಕಳೆದ 4 ದಿನಗಳಿಂದ ವೆಂಟಿಲೇಟರ್​ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ದಿನ ಕಳೆದಂತೆ ಆರೋಗ್ಯ ಹದಗೆಟ್ಟಿದೆ. ಇದರ ಬೆನ್ನಲ್ಲೇ ಹೃದಯಾಘಾತದಿಂದ ಸಹೋದರ ವಿದಾಯ ಹೇಳಿದ್ದಾರೆ ಎಂದು ಸಾಜಿದ್ ತಿಳಿಸಿದ್ದಾರೆ.
1998ರಲ್ಲಿ ಬಿಡುಗಡೆಯಾಗಿದ್ದ ಸಲ್ಮಾನ್ ಖಾನ್ ಮತ್ತು ಕಾಜೋಲ್ ಅಭಿನಯದ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಚಿತ್ರದ ಮೂಲಕ ಸಾಜಿದ್-ವಾಜಿದ್ ಜೋಡಿ ಪರಿಚಿತರಾಗಿದ್ದರು. ಮೊದಲ ಚಿತ್ರವೇ ಸೂಪರ್ ಹಿಟ್ ಆದ ಬೆನ್ನಲ್ಲೇ ಮತ್ತೆ ಹಿಂತಿರುಗಿ ನೋಡಿದಿಲ್ಲ. ಅದರಲ್ಲೂ ಸಲ್ಲು ಮಿಯಾ ಅವರ ಚಿತ್ರಗಳ ಮ್ಯೂಸಿಕ್ ಕಂಪೋಸರ್ ಎಂದೇ ಈ ಜೋಡಿ ಬಾಲಿವುಡ್​ನಲ್ಲಿ ಖ್ಯಾತಿಗಳಿಸಿದ್ದರು.
ಸಾಜಿದ್-ವಾಜಿದ್ ಯಾವಾಗೆಲ್ಲಾ ಸಲ್ಮಾನ್ ಖಾನ್ ಚಿತ್ರಗಳಿಗೆ ಗಾಜ ಬಜಾಯಿಸಿದ್ದರೂ, ಅವೆಲ್ಲವೂ ಸೂಪರ್ ಡೂಪರ್ ಹಿಟ್ ಲೀಸ್ಟ್​ಗೆ ಸೇರ್ಪಡೆಯಾಗುತ್ತಿತ್ತು. ಅದು ತೇರೆ ನಾಮ್ ಚಿತ್ರವಿರಲಿ, ಇಲ್ಲ ದಬಂಗ್ ಸಿರೀಸ್ ಚಿತ್ರಗಳಿರಲಿ…ಹೀಗೆ ಬಾಲಿವುಡ್​ ಭಾಯಿಜಾನ್ ಅಭಿನಯದ ಹಲೋ, ವೀರ್, ಪಾರ್ಟನರ್, ವಾಂಟೆಡ್ , ಏಕ್ ಥಾ ಟೈಗರ್ ಸೇರಿದಂತೆ ಹಲವು ಸಂಗೀತ ಹಿಟ್ ಚಿತ್ರಗಳಿಗೆ ಬ್ಯಾಂಡ್ ಬಜಾಯಿಸಿದ್ದರು.
ಆದರೆ ವಿಧಿಯಾಟ, 22 ವರ್ಷಗಳ ಸಂಗೀತ ಪಯಣಕ್ಕೆ ಇಂದು ವಾಜಿದ್ ವಿದಾಯ ಹೇಳಿದರು. ಆದರೆ ಅದಕ್ಕೂ ಮುನ್ನ ತನ್ನ ಸಹೋದರನಿಗಾಗಿ ಕೊನೆಯ ಬಾರಿ ವಾಜಿದ್ ಹಾಡೊಂದನ್ನು ಸಮರ್ಪಿಸಿದ್ದರು. ಈ ಹಾಡಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ, ಆಸ್ಪತ್ರೆ ಬೆಡ್​ನಲ್ಲಿ ಕೂತಿರುವ ವಾಜಿದ್, ನಾನು ಸಾಜಿದ್ ಭಾಯ್​ಗಾಗಿ ನಾನು ಒಂದು ಹಾಡು ಹಾಡಲು ಇಚ್ಛಿಸುತ್ತೇನೆ. ಅಂತೆಯೇ ದಬಂಗ್ ಚಿತ್ರದ ಶೀರ್ಷಿಕೆ ಹಾಡನ್ನು ಹಾಡಿದ್ದರು. ಭಾವನಾತ್ಮಕವಾಗಿ ಮೂಡಿ ಬಂದಿರುವ ಈ ಹಾಡಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ಸಲ್ಮಾನ್ ಖಾನ್- ಕಿಚ್ಚ ಸುದೀಪ್ ಅಭಿನಯದ ದಬಂಗ್-3 ಚಿತ್ರಕ್ಕೂ ಸಾಜಿದ್-ವಾಜಿದ್ ಸಹೋದರು ಸಂಗೀತ ನೀಡಿದ್ದರು. ಈ ಸಿನಿಮಾ ಕನ್ನಡದಲ್ಲಿ ಡಬ್​ ಆಗಿದ್ದರಿಂದ ಅವರ ಹಾಡುಗಳು ಕನ್ನಡದಲ್ಲೂ ಕೇಳುವಂತಾಗಿತ್ತು. ವಾಜಿದ್ ಅವರ ನಿಧನಕ್ಕೆ ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್, ವರುಣ್ ಧವನ್ ಸೇರಿದಂತೆ ಬಾಲಿವುಡ್​ನ ಬಹುತೇಕರು ಸಂತಾಪ ಸೂಚಿಸಿದ್ದಾರೆ.
ಬ್ಲ್ಯಾಕ್ ಫಂಗಸ್: ಜಿಲ್ಲಾ ಆಡಳಿತ ಮತ್ತು ಆರೋಗ್ಯ ಇಲಾಖೆ ಅಂಕಿ ಅಂಶದಲ್ಲಿ ವ್ಯತ್ಯಯ; ಗೊಂದಲ ನಿರ್ಮಾಣ!- Kannada Prabha
Published: 19th June 2021 11:21 AM | Last Updated: 19th June 2021 01:22 PM | A+A A-
ಬಾಗಲಕೋಟೆ: ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿದ್ದು, ಈ ನಡುವಲ್ಲೇ ಜಿಲ್ಲಾ ಆಡಳಿತ ಮಂಡಳಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತಿರುವ ಅಂಕಿ ಅಂಶಗಳು ಗೊಂದಲಗಳನ್ನು ಮೂಡಿಸುತ್ತಿವೆ.
ಬ್ಲ್ಯಾಕ್ ಫಂಗಸ್ ಪ್ರಕರಣಗಳ ಕುರಿತು ನಿನ್ನೆಯಷ್ಟೇ ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಂಕಿ ಅಂಶ ಪ್ರಕಟಿಸಿದ್ದು, ಜಿಲ್ಲೆಯಲ್ಲಿ 108 ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ 98 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 5 ಮಂದಿ ವೈದ್ಯಕೀಯ ಸಲಹೆಗಳನ್ನು ನೀಡಿದ್ದರೂ ಚಿಕಿತ್ಸೆ ಪಡೆದುಕೊಳ್ಳದೆ ಹಿಂತಿರುಗಿದ್ದಾರೆಂದು ಹೇಳಿತ್ತು.
ಆದರೆ, ಜಿಲ್ಲಾ ಆಡಳಿತ ಮಂಡಳಿಯು ಜಿಲ್ಲೆಯಲ್ಲಿ 91 ಪ್ರಕರಣಗಳು ಪತ್ತೆಯಾಗಿದ್ದು, 80 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದು, 10 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಿದೆ.
ಹೀಗಾಗಿ ಜಿಲ್ಲಾ ಆಡಳಿತ ಮಂಡಳಿ ಹಾಗೂ ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳು ಗೊಂದಲ ಮೂಡಿಸುತ್ತಿವೆ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಆಡಳಿತ ಮಂಡಳಿ ಗೊಂದಲಕರ ಅಂಕಿಅಂಶ ನೀಡುತ್ತಿರುವುದು ಇದು ಮೊದಲನೇನಲ್ಲ. ಈ ಹಿಂದೆಯೂ ಈ ರೀತಿ ಹಲವು ಬಾರಿ ವಿಭಿನ್ನ ರೀತಿಯ ಅಂಕಿಅಂಶಗಳು ಪ್ರಕಟಗೊಂಡಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ್ ದೇಸಾಯಿಯವರು, ಸೋಂಕು ಪ್ರಕರಣಗಳಲ್ಲಿ ಸಂಖ್ಯೆಗಳು ಕೆಲವೊಮ್ಮೆ ಏರುಪೇರಾಗುವ ಸಾಧ್ಯತೆಗಳಿವೆ. ಕೆಲವರು ಬಾಗಲಕೋಟೆ ಜಿಲ್ಲೆಯವರಲ್ಲದಿದ್ದರೂ, ಜಿಲ್ಲೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿರುತ್ತಾರೆ. ಇಂತಹವರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿರುತ್ತದೆ. ನಾವು ಕೇವಲ ಸ್ಥಳೀಯರನ್ನು ಮಾತ್ರ ಪಟ್ಟಿ ಮಾಡುತ್ತಿದ್ದೇವೆ. ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕಾರ ನೀಡುತ್ತಿದ್ದೇವೆಂದು ಹೇಳಿದ್ದಾರೆ.
bagalkot Black fungus health department district authorities ಬಾಗಲಕೋಟೆ ಬ್ಲ್ಯಾಕ್ ಫಂಗಸ್ ಆರೋಗ್ಯ ಇಲಾಖೆ ಜಿಲ್ಲಾ ಆಡಳಿತ ಮಂಡಳಿ
ಭಾರತ ತಂಡಕ್ಕೆ ಪಾಕ್‌ ಪ್ರಧಾನಿ ಅಭಿನಂದನೆ..!
Islamabad, First Published 9, Jan 2019, 2:16 PM IST
'ಆಸ್ಪ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದ ಕೊಹ್ಲಿ ಪಡೆಗೆ ಅಭಿನಂದನೆ ತಿಳಿಸಲು ಇಚ್ಛಿಸುತ್ತೇನೆ' ಎಂದು ಇಮ್ರಾನ್‌ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಮಾಜಿ ವೇಗಿ ಶೋಯಿಬ್‌ ಅಖ್ತರ್‌ ಸೇರಿದಂತೆ ಇನ್ನೂ ಅನೇಕ ವಿಶ್ವ ಪ್ರಸಿದ್ಧ ಕ್ರಿಕೆಟಿಗರು ಭಾರತ ತಂಡದ ಸಾಧನೆಯನ್ನು ಕೊಂಡಾಡಿದ್ದಾರೆ.
ಇಸ್ಲಾಮಾಬಾದ್‌(ಜ.09): ಆಸ್ಪ್ರೇಲಿಯಾ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತ ತಂಡಕ್ಕೆ ಪಾಕಿಸ್ತಾನ ತಂಡದ ಮಾಜಿ ನಾಯಕ ಮತ್ತು ಹಾಲಿ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅಭಿನಂದನೆ ತಿಳಿಸಿದ್ದಾರೆ.
ಟೀಂ ಇಂಡಿಯಾ 71 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿದೆ. ಕಾಂಗರೂ ತಂಡವನ್ನು ತವರಿನಲ್ಲೇ 2-1 ಅಂತರದಲ್ಲಿ ಮಣಿಸಿದ ವಿರಾಟ್ ಪಡೆ ಚಾರಿತ್ರಿಕ ಸಾಧನೆ ಮಾಡಿತ್ತು.
ಎಸ್‌ಡಿಪಿ ರೆಮಿಡೀಸ್, ರಿಸರ್ಚ್ ಸೆಂಟರ್ ಆವರಣದಲ್ಲಿ ಕಲೋಪಾಸನಾ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506
ಎಸ್‌ಡಿಪಿ ರೆಮಿಡೀಸ್, ರಿಸರ್ಚ್ ಸೆಂಟರ್ ಆವರಣದಲ್ಲಿ ಕಲೋಪಾಸನಾ
ಲಲಿತಕಲೆಗಳಲ್ಲಿ ಸಂಗೀತಕ್ಕೆ ಪ್ರಾಧಾನ್ಯತೆ ಇದೆ – ಪ್ರೊ.ವಿ.ಬಿ.ಅರ್ತಿಕಜೆ
ಪುತ್ತೂರು: ಕಲೆ ಎಂದರೆ ನಿರಂತರ ಅಭ್ಯಾಸಗಳಿಂದ ಮೈಗೂಡಿಸಿಕೊಂಡು ಬರುವ ಸಾಧನವಾಗಿದೆ. ಸಂಗೀತಕ್ಕೆ ಕಲೋಪಾಸನಾ ಎಂದು ಕರೆಯುತ್ತಾರೆ ಲಲಿತಕಲೆಗಳಲ್ಲಿ ಸಂಗೀತಕ್ಕೆ ಪ್ರಾಧಾನ್ಯತೆ ಇದೆ ಎಂದು ಸಾಹಿತಿ ಪ್ರೊ.ವಿ.ಬಿ ಅರ್ತಿಕಜೆ ಹೇಳಿದರು. ಎಸ್‌ಡಿಪಿ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಪ್ರಾಯೋಜಕತ್ವದಲ್ಲಿ ಜ.23 ರಂದು ಸೆಂಟರ್ ಆವರಣದಲ್ಲಿ ನಡೆದ ಕಲೋಪಾಸನಾ 2016 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಸ್ತ್ರೀಯ ಸಂಗೀತದಲ್ಲಿ ಗುಣಗಳನ್ನು ಹೊಂದಿಕೊಂಡು ಮೂರು ವರ್ಗಗಳಿವೆ. ಸಾತ್ವಿಕ, ರಾಜಸ ಹಾಗೂ ತಾಮಸ ಗುಣಗಳಿಗೆ ತನ್ನದೇ ಆದ ಸಂಗೀತಗಳಿವೆ ಇವುಗಳಲ್ಲಿ ಭಕ್ತಿ, ಭಾವಗೀತೆ, ಜನಪದ, ನೃತ್ಯ ಸಂಗೀತ ಮುಂತಾದ ಪ್ರಾಕಾರಗಳಿವೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಎಸ್.ಡಿ.ಪಿ. ರೆಮಿಡೀಸ್ ನಿರ್ದೇಶಕರಾದ ರೂಪರೇಖಾ ಮತ್ತು ಡಾ. ಹರಿಕೃಷ್ಣ ಪಾಣಾಜೆ ದಂಪತಿಗಳು ಅತಿಥಿಗಳನ್ನು ಗೌರವಿಸಿದರು. ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಮಾಧವ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದುಷಿ ರಂಜನಿ ಗಾಯತ್ರಿ ಚೆನ್ನೈ ಯವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು. ಜ. ೨೪ರಂದು ಸಂಜೆ ಶಿಜಿತ್ ನಂಬಿಯಾರ್ ಮತ್ತು ಪಾರ್ವತಿ ಮೆನನ್ ಚೆನ್ನೈ ಯವರಿಂದ ಭರತನಾಟ್ಯ ನಡೆಯಲಿದೆ. ಜ.೨೫ರಂದು ಸಂಜೆ ಕೊಂಡದಕುಳಿ ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ ಕೊಂಡದಕುಳಿ ಯವರಿಂದ ಶ್ರೀ ರಾಮ ಪಟ್ಟಾಭಿಷೇಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಭುವನ್ ತೊಡೆ ಕಚ್ಚಿದ್ದ ಪ್ರಥಮ್ ಪ್ರಕರಣ ಸುಖಾಂತ್ಯ | Kannada Actor Bhuvan Ponnanna Decide To Withdraw Assault Case Of Pratham - Kannada Filmibeat
33 min ago ಶಂಕರ್ ನಾಗ್ ಗೆ 'ಕೋತಿ' ಎಂದಿದ್ದ ಆ ಬಜಾರಿ ನಟಿ ಯಾರು.?
56 min ago ಶಂಕರ್ ನಾಗ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಮಾಹಿತಿ ಬಾಯ್ಬಿಟ್ಟ ಜೈಜಗದೀಶ್.!
ಒಂದಾದ ಬಿಗ್ ಬಾಸ್ ಜೋಡಿ..! | FILMIBEAT KANNADA
ಭುವನ್ ಮತ್ತು ಪ್ರಥಮ್ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿಗಳಿಸಿದವರು. ಬಿಗ್ ಬಾಸ್ ಮನೆಯಲ್ಲಿ ಸದಾ ಕಿತ್ತಾಡುತ್ತಿದ್ದ ಭುವನ್ ಮತ್ತು ಪ್ರಥಮ್, ಬಿಗ್ ಬಾಸ್ ಮುಗಿದ ಮೇಲು ಇಬ್ಬರ ವಾರ್ ಮುಂದುವರೆದಿತ್ತು. ಭುವನ್ ಗೆ ಕಚ್ಚಿ ರಕ್ತ ಬರಿಸಿದ್ದ ಪ್ರಥಮ್ ಪ್ರಕರಣ ಈಗ ಸುಖಾಂತ್ಯ ಕಾಣುವ ಹಂತಕ್ಕೆ ಬಂದಿದೆ.
ಭುವನ್ ಸದ್ಯ 'ರಾಂಧವ' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. 'ರಾಂಧವ' ಚಿತ್ರದ ವಿತರಣೆ ಹಕ್ಕು ಪಡೆದಿರುವ ಜಯಣ್ಣ ಭುವನ್ ಮತ್ತು ಪ್ರಥಮ್ ಇಬ್ಬರನ್ನು ರಾಜಿ ಮಾಡಿಸಿದ್ದಾರೆ. ಕೇಸ್ ವಾಪಸ್ ಪಡೆಯುವಂತೆ ಭುವನ್ ಗೆ ಹೇಳಿದ್ದಾರೆ. ಅಲ್ಲದೆ ಪ್ರಕರಣದಿಂದ ಬೇಸತ್ತು ಹೋಗಿದ್ದ ಪ್ರಥಮ್ ಕೇಸ್ ಹಿಂಪಡೆಯುವಂತೆ ಭುವನ್ ಅವರನ್ನು ಕಾಡಿಸುತ್ತಿದ್ದರಂತೆ.
ರಾಜಿ ಮಾಡಿಸಿದ ವಿತರಕ ಜಯಣ್ಣ
ಇದೇ ಸಮಯಕ್ಕೆ ಸರಿಯಾಗಿ ಜಯಣ್ಣ ಮಧ್ಯೆ ಪ್ರವೇಶಿಸಿ ರಾಜಿ ಮಾಡಿಸಿದ್ದಾರೆ. ಆದ್ರೆ ಭುವನ್ ಈ ಸಂದಾನಕ್ಕೆ ಒಂದು ಕಂಡೀಶನ್ ಹಾಕಿದ್ದಾರೆ. ಪ್ರಥಮ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಮೊದಲ ಕ್ಷಮೆ ಕೇಳಲು ಹಿಂಜರಿದ ಪ್ರಥಮ್ ನಂತರ ಜಯಣ್ಣ ಮಾತಿನ್ನು ಕೇಳಿ ಒಪ್ಪಿಕೊಂಡು ಮಾಧ್ಯಮದ ಮುಂದೆ ಕ್ಷಮೆಯಾಚಿಸಿದ್ದಾರೆ.
ತೊಡೆ ಕಚ್ಚಿದ್ದು ನಿಜ
"ನನ್ನ ತಪ್ಪಿನ ಅರಿವಾಗಿದೆ, ಭುವನ್ ತೊಡೆ ಕಚ್ಚಿದ್ದು ನಿಜ. ಭುವನ್ ಹಸುವಿನ ಮಾಂಸ ತಿನ್ನುತಾನೆ ಎಂದು ಸುಳ್ಳು ಹೇಳಿದೆ. ಇನ್ನುಮುಂದೆ ಅವರಿಗೆ ಯಾವುದೆ ರೀತಿ ಹಿಂಸೆ ನೀಡಲ್ಲ. ಕೇಸ್ ವಾಪಸ್ ತೆಗೆದುಕೊಳ್ಳಿ" ಎಂದು ಕೇಳಿಕೊಂಡಿದ್ದಾರೆ. ಮಾಧ್ಯಮದ ಮುಂದೆ ಕ್ಷಮೆ ಕೋರಿದ ಹಿನ್ನಲೆ ಭುವನ್ ಕೇಸ್ ವಾಪಸ್ ಪಡೆಯಲು ಮುಂದಾಗಿದ್ದಾರೆ.
ಪ್ರಥಮ್ ಮದುವೆ ಆಗ್ತಿದ್ದಾರಂತೆ
ಪ್ರಥಮ್ ಮದುವೆ ಕೂಡ ಫಿಕ್ಸ್ ಆಗಿದೆಯಂತೆ. ಸಧ್ಯದಲ್ಲೇ ಪ್ರಥಮ್ ಹಸೆಮಣೆ ಏರಲಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಹಾಗಾಗಿ ಈ ಕೇಸಿನಿಂದ ಹೇಗಾದರು ಮಾಡಿ ಆದಷ್ಟು ಬೇಗ ಮುಕ್ತಿ ಪಡೆಯಬೇಕು ಎಂದು ಕಾಯುತ್ತಿದ್ದರು. ಸದ್ಯ ತೊಡೆ ಕಚ್ಚಿದ ಪ್ರಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದೆ.
ಬಿಗ್ ಬಾಸ್ ಮುಗಿದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಭುವನ್ ಮತ್ತು ಪ್ರಥಮ್ ನಡುವಿನ ಜಗಳ ತಾರಕಕ್ಕೇರಿತ್ತು. ಈ ಸಮಯದಲ್ಲಿ ಪ್ರಥಮ್, ಭುವನ್ ಗೆ ಹಸುವಿನ ಮಾಂಸ ತಿನ್ನುತ್ತೀಯಾ ಎಂದು ಹೇಳಿ ಕರೆಳಿಸಿ ಭುವನ್ ತೊಡೆಗೆ ಸರಿಯಾಗಿ ಕಚ್ಚಿದ್ದರು. ಪ್ರಥಮ್ ಕಚ್ಚಿದ ಎಫೆಕ್ಟ್ ಗೆ ಭುವನ್ ಆಸ್ಪತ್ರೆ ಸೇರಿದ್ದರು. ಪ್ರಥಮ್ ಹುಚ್ಚಾಟದಿಂದ ನೊಂದ ಭುವನ್ ನಂತರ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು.
ಸಲ್ಲಾಪ: October 2016
ಬಾರೊ ಸಾಧನಕೇರಿಗೆ.......................ಬೇಂದ್ರೆ
ಬಾರೊ ಸಾಧನಕೇರಿಗೆ |
ಮರಳಿ ನಿನ್ನೀ ಊರಿಗೆ ||
ನೋಟ ಸೇರದು ಯಾರಿಗೆ? || ಬಾರೊ….
ಮಲೆಯ ಮೊಗವೇ ಹೊರಳಿದೆ
ನೆಲಕೆ ಹರೆಯವು ಮರಳಿದೆ
ಭೂಮಿತಾಯ್ ಒಡಮುರಿದು ಎದ್ದಳೊ
ಶ್ರಾವಣದ ಸಿರಿ ಬರಲಿದೆ || ಬಾರೊ…
ಮೋಡಗಳ ನೆರಳಾಟವು
ಅಡವಿ ಹೂಗಳ ಕೂಟವು
ಕೋಟಿ ಜೇನ್ನೊಣಕೂಟವು
ಯಕ್ಷಿ ಮಾಡಿದ ಮಾಟವು
ನೋಡು ಬಾ ಗುಂಪಾಗಿ ಪಾತರ-
ಗಿತ್ತಿ ಕುಣಿಯುವ ತೋಟವು || ಬಾರೊ…
ಗಾಳಿ ಎಲ್ಲೂ ಆಡಿದೆ
ಹೇಳು ಗೆಳೆಯಾ ಬೇರೆ ಎಲ್ಲೀ
ತೆರೆದ ನೋಟವ ನೋಡಿದೆ? || ಬಾರೊ…
ಬೇಂದ್ರೆಯವರ ಬದುಕು ಬಹುಕಾಲದವರೆಗೆ ಸ್ಥಿರವಾದ ಬದುಕಾಗಿರಲಿಲ್ಲ. ಈ ಸಮಯದಲ್ಲಿ ಅವರು ಧಾರವಾಡವನ್ನು ನೆನೆಸಿಕೊಂಡು ಬರೆದ ಕವನಗಳು ಅನೇಕ. 'ನಾವು ಹೋಗ್ತೇವಿನ್ನ ತಾಯಿ, ನಂ ನಮಸ್ಕಾರ ನಿಮಗ' ಎನ್ನುವುದು ಅವರು ಧಾರವಾಡವನ್ನು ಬಿಟ್ಟು ಹೋಗುವಾಗ ಹಾಡಿದ ಕವನ. 'ಮಲ್ಲಾಡದ ಗಿಣಿಯೆ ನೀ' ಎನ್ನುವುದು ಧಾರವಾಡದ ವಿರಹದಲ್ಲಿ ಬರೆದ ಕವನ. 'ಬಂದಿರುವೆನಿದೊ ತಾಯಿ, ಧಾರವಾಡದ ಮಾಯಿ, ಸರ್ವಮಂಗಳೆ ನಿನ್ನ ಭಾಗ್ಯದುಡಿಗೆ' ಎನ್ನುವುದು ಅವರು ಧಾರವಾಡಕ್ಕೆ ಮರಳಿದಾಗ ಹಾಡಿದ ಪದ. 'ನಿನ್ನ ಕಣ್ಣ-ಕಡೆಗೋಲಿಂದ ನನ್ನಹೃದಯ ಕಡೆಯೇ ತಾಯಿ' ಎನ್ನುವುದು ಅವರ ಧಾರವಾಡದ ರಕ್ಷಕ ದೇವತೆಯಾದ ಕೋಟೆಯ ದುರ್ಗಾದೇವಿಗೆ ಸಲ್ಲಿಸಿದ ನಮನ.
ಪುಣೆಯಲ್ಲಿ ಇದ್ದಂತಹ ಬೇಂದ್ರೆಯವರ ಕಕ್ಕ ಬಂಡೋಪಂತ ಬೇಂದ್ರೆಯವರು ೧೯೨೯ರಲ್ಲಿ ಸಾಧನಕೇರಿಯಲ್ಲಿ ಒಂದು ಮನೆಯನ್ನು ಬೇಂದ್ರೆಯವರಿಗೆ ಉಡುಗೊರೆಯಾಗಿ ನೀಡಿದರು. ಇಡೀ ಧಾರವಾಡವೇ ಆಗ ಒಂದು ಕಾಡಿನಂತಿತ್ತು. ಊರಿನಿಂದ ದೂರವಿದ್ದ ಸಾಧನಕೇರಿಯಂತೂ ದಟ್ಟ ಕಾಡೇ ಸೈ! ಆದರೆ ಬೇಂದ್ರೆಯವರಿಗೆ ಈ ನಿಸರ್ಗರಮ್ಯ ನಿವಾಸ ಅನೇಕ ರೀತಿಗಳಲ್ಲಿ ಒಂದು ವರದಾನ! ಧಾರವಾಡಕ್ಕೆ ಮರಳಿ ಬರುವ ಸನ್ನಿವೇಶದಲ್ಲಿ ಬೇಂದ್ರೆ 'ಬಾರೊ ಸಾಧನಕೇರಿಗೆ, ಮರಳಿ ನಿನ್ನೀ ಊರಿಗೆ' ಎನ್ನುವ ಗೀತೆಯನ್ನು ಹಾಡಿದ್ದಾರೆ. ಮಳೆಯಲ್ಲಿ ನೆನೆಯುವ ಸಾಧನಕೇರಿಯನ್ನು ನೆನೆಸಿಕೊಳ್ಳುತ್ತಿರುವುದು ಈ ಗೀತೆಯ ವೈಶಿಷ್ಟ್ಯವಾಗಿದೆ.
ಧಾರವಾಡವು ಮಲೆನಾಡ ಸೆರಗಿನಲ್ಲಿರುವ ಊರು. ಇಲ್ಲಿ ಉದ್ಭವಿಸುವ ಶಾಲ್ಮಲೆಯು ಮುಂದೆ ಸಾಗಿದಂತೆ ಬೇಡ್ತಿ ಹಾಗು ಗಂಗಾವಳಿ ಎನ್ನುವ ಹೊಸ ಹೆಸರುಗಳನ್ನು ಹೊತ್ತುಕೊಂಡು ಪಶ್ಚಿಮ ಸಮುದ್ರವನ್ನು ಸೇರುತ್ತಾಳೆ. ಇಲ್ಲಿಯ ಬೆಣ್ಣಿಹಳ್ಳವು ಪೂರ್ವಕ್ಕೆ ಸಾಗಿ ಮಲಪ್ರಭಾ ನದಿಯನ್ನು ಸೇರುತ್ತದೆ.
ಇಲ್ಲಿಯ ಮಳೆಯ ವರ್ಣನೆಯನ್ನು ಜಾನಪದ ಗೀತೆಯಲ್ಲಿ,--
'ಧಾರವಾಡದ ಮ್ಯಾಗ, ಏರಿ ಬಂದಾವ ಮೋಡ
ದೊರೆಯೆ ನೋಡಪ್ಪ ಕಮಕಾಳ ಕಟ್ಟೀ ಮ್ಯಾಲೆ
ಭೋರ್ಯಾಡತಾನ ಮಳೆರಾಯ'
--ಎಂದು ಬಣ್ಣಿಸಲಾಗಿದೆ.
ಬೇಂದ್ರೆಯವರಂತೂ ಶ್ರಾವಣಪ್ರಿಯರು. ಆದುದರಿಂದಲೇ ಈ ಕವನವು ಪ್ರಾರಂಭವಾಗುವುದು 'ಮಳೆಯು ಎಳೆಯುವ ತೇರಿಗೆ' ಎಂದು ಸಾಧನಕೇರಿಯನ್ನು ವರ್ಣಿಸುವ ಮೂಲಕ.
ಮತ್ತೊಂದು ವಿಷಯವನ್ನು ಗಮನಿಸಿರಿ. ತೇರು ಎನ್ನುವುದು ದೇವರ ರಥ. ಮಳೆಯು ದೈವದತ್ತವಾದದ್ದು. ಶ್ರಾವಣ ಮಾಸದಲ್ಲಿಯೇ ಶ್ರೀಕೃಷ್ಣ ಹಾಗು ಮಹರ್ಷಿ ಅರವಿಂದರು ಹುಟ್ಟಿದ್ದರಿಂದ, ಮಳೆಮಾಸದ ಬಗೆಗಿನ ಬೇಂದ್ರೆಯವರ ಪ್ರೀತಿಯಲ್ಲಿ ಭಕ್ತಿಯೂ ಬೆರೆತಿದೆ. ಆದುದರಿಂದ ಇಲ್ಲಿ ಮಳೆಯು ಎಳೆಯುತ್ತಿರುವ ರಥವು ಕೇವಲ ವಾಹನವಲ್ಲ; ಇದು ದೇವರ 'ತೇರು'. (ತಮ್ಮಮತ್ತೊಂದು ಕವನದಲ್ಲಿ ಬೇಂದ್ರೆಯವರು ಮಳೆಯಲ್ಲಿ ತೊಯ್ದ ಬೆಟ್ಟಗಳನ್ನು 'ಗುಡ್ಡ ಆಗ್ಯಾವ ಸ್ಥಾವರಲಿಂಗ' ಎಂದು ಬಣ್ಣಿಸಿದ್ದಾರೆ.) ಈ ಮಳೆಯು ಯಾವ ತೇರನ್ನು ಎಳೆಯುತ್ತಿದೆ ಎನ್ನುವದನ್ನು ಬೇಂದ್ರೆಯವರು ಹೇಳಿಲ್ಲ. ಆದರೆ ಅದು ಪ್ರಕೃತಿದೇವಿಯ ತೇರು ಎನ್ನುವುದು ಅಂತರ್ನಿಹಿತವಾಗಿದೆ. ಈ ತೇರು ಹಲಬಗೆಯ ಸಸ್ಯಸಂಕುಲದಿಂದ ಶೋಭಿತವಾಗಿದೆ. ಆದುದರಿಂದ ಕವನ ಪ್ರಾರಂಭವಾಗುವುದು ದೈವಿಕ ದರ್ಶನದೊಡನೆ!
ಧಾರವಾಡವು (ಆ ಕಾಲದಲ್ಲಿ) ಅನೇಕ ಮಡ್ಡಿಗಳಿಂದ, ಕೊಳ್ಳಗಳಿಂದ ಕೂಡಿತ್ತು. ಆದುದರಿಂದ ಮಳೆಯು ಧಾರವಾಡಕ್ಕೆ ಢಿಕ್ಕಿ ಹೊಡೆದಾಗ, ಕಣ್ಣಿಗೆ ಮೊದಲು ಬೀಳುವುದು ಜನವಸತಿಯಿಂದ ದೂರದಲ್ಲಿರುವ ಏರಿಯ ಮೇಲಿರುವ ಹಸಿರು! ತನ್ನಂತರ ಸಿಗುವುದು ಕೆಳಭಾಗದಲ್ಲಿರುವ ಜನನಿಬಿಡ ಊರು. ಆ ಊರಿನಲ್ಲಿಯೂ ಸಹ ಹಸಿರು ಸೇರಿಕೊಂಡಿದೆ. ಆ ಊರಿನ ದಾರಿಯ ಇಕ್ಕೆಲಗಳಲ್ಲಿ ಹಸಿರು 'ಚಾಚಿಕೊಂಡಿದೆ'. (ಆ ಕಾಲದಲ್ಲಿ ಧಾರವಾಡದ ರಸ್ತೆಗಳೆಲ್ಲ ಮಣ್ಣು, ಕಲ್ಲುಗಳ ರಸ್ತೆಗಳಾಗಿದ್ದವು.)
ಆದುದರಿಂದ ಈ ವರ್ಣನೆಯಲ್ಲಿ ಕ್ರಮಬದ್ಧತೆ ಹಾಗು ವಾಸ್ತವ ಸಂಗತಿಗಳ ದಾಖಲಾತಿ ಇರುವುದು ಗಮನಾರ್ಹವಾಗಿದೆ. ಇದು ಬೇಂದ್ರೆಯವರ ಎಲ್ಲ ಕವನಗಳ ವೈಶಿಷ್ಟ್ಯವೂ ಆಗಿದೆ.
'ಕವಿಗೇನ ಬೇಕ? ಹೂತ ಹುಣಸಿಮರ ಸಾಕ' ಎಂದು ಹಾಡಿದ ಕವಿಗೆ, ಈ ಹಸಿರು ತುಂಬಿದ ನೋಟವು ಹೇಗೆ ಕಂಡಿರಬಹುದು? ಸ್ವರ್ಗಸದೃಶವಾಗಿಯೆ?....ಊಹೂಂ, ಆ ನಂದನದ ಒಂದು ತುಣುಕೇ, ಕಳಚಿಕೊಂಡು ಧರೆಯ ಮೇಲೆ ಇಳಿದಿದೆ ಎಂದು ಬೇಂದ್ರೆಯವರಿಗೆ ಭಾಸವಾಗುತ್ತಿದೆ.
ಧಾರವಾಡದ ಭೌಗೋಲಿಕ ಪ್ರಾಕೃತಿಕತೆಯನ್ನು ವರ್ಣಿಸಿದ ಕವಿ ಇದೀಗ ಧಾರವಾಡದ ಜೀವಸಂಕುಲದ ಕಡೆಗೆ, ಈ ಜೀವಸಂಕುಲವನ್ನು ಹೊತ್ತ ಧರಿತ್ರಿಯ ಕಡೆಗೆ ತಮ್ಮ ಗಮನವನ್ನು ಹರಿಸುತ್ತಾರೆ. ಇಲ್ಲಿಯೂ ಸಹ ಮೊದಲು ಭೂವೈಶಿಷ್ಟ್ಯ, ಬಳಿಕ ಪಕ್ಷಿವೈಶಿಷ್ಟ್ಯ, ತನ್ನಂತರ ಸಸ್ಯವೈಶಿಷ್ಟ್ಯ ಇವು ವರ್ಣನೆಯ ಮಜಲುಗಳಾಗಿವೆ.
ಧಾರವಾಡವು ಪಶ್ಚಿಮಘಟ್ಟಗಳ ಕೊನೆಯಲ್ಲಿದೆ. ಆದುದರಿಂದ ಇಲ್ಲಿ 'ಮಲೆಯಮೊಗವೇ ಹೊರಳಿದೆ.' ಇನ್ನು ಧಾರವಾಡವು ಯಾವ ಕಾಲದಲ್ಲೂ ಮಾವಿನ ಕಾಡುಗಳ ನೆಲೆಯಾಗಿತ್ತು. ಇಂತಹ ಮಾವಿನ ಕಾಡುಗಳಲ್ಲಿ ಕೋಗಿಲೆಗಳಿಗೇನು ಕೊರತೆ? ಅವುಗಳ ಇಂಚರಕ್ಕೇನು ಕೊರತೆ?
ಪಂಪನು 'ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್, ಬನವಾಸಿ ದೇಶದೊಳ್' ಎಂದು ಹಾಡಿದ್ದಾನೆ. ಕನ್ನಡಕವಿಪರಂಪರೆಯ ಬೇಂದ್ರೆಯವರೂ ಸಹ ಕೋಗಿಲೆಯನ್ನು 'ಸವಿ ಕೊರಳಿನ' ಕೋಗಿಲೆ ಎಂದು ಮುದ್ದಿಸುವುದರಲ್ಲಿ ಆಶ್ಚರ್ಯವಿಲ್ಲ. ಈ ಕೋಗಿಲೆಗಳು ಚೈತ್ರಮಾಸದಲ್ಲಿ ಕುಕಿಲುವಂತಹ ಹಕ್ಕಿಗಳು, ಅಂದರೆ ಶ್ರಾವಣ ಮಾಸದ ಪೂರ್ವಭಾವಿ ಹರಿಕಾರರು. ನಿಸರ್ಗದ ಎಲ್ಲ ಹಕ್ಕಿಗಳ ಪ್ರತಿನಿಧಿಯಾಗಿ ಕೋಗಿಲೆಯು ಇಲ್ಲಿ ಮೂಡಿ ಬಂದಿದೆ.
ಹಾಡುವ ಹಕ್ಕಿಗಳಷ್ಟೇ ಬೇಂದ್ರೆಯವರಿಗೆ ಪ್ರಿಯವೇನು? ಮಾತಿಲ್ಲದೆ ನಿಸರ್ಗಕ್ಕೆ ಶೋಭೆಯನ್ನು ತರುವ ಸಸ್ಯಸಂಕುಲವೂ ಅವರಿಗೆ ಇಷ್ಟವಾದದ್ದೇ. ಮನೆಯ ಸುತ್ತಲಿನ ಸಾದಾ ಬಳ್ಳಿಯ ಬೇಲಿಯನ್ನು ಅವರು ಕಾಣುವ ಬಗೆ ಹೇಗೆ? 'ಬೇಲಿಗೂ ಹೂಬೆರಳಿದೆ !'
(ಆ ಕಾಲದಲ್ಲಿ ಬಹಳಷ್ಟು ಮನೆಗಳ ಸುತ್ತಲೂ ಇಟ್ಟಂಗಿಯ ಆವರಣದ ಬದಲು ಬಳ್ಳಿಗಳ ಬೇಲಿಗಳು, ವಿಶೇಷತಃ, tubular ಹೂವುಗಳ ಬಳ್ಳಿಗಳು ಇರುತ್ತಿದ್ದವು. ಆದುದರಿಂದ ಇಲ್ಲಿ documentation ಸಹ ಇದೆ.)
ಬೇಲಿಯು ಮನೆಯ ಕಾವಲುಗಾರ. ಇದರ ಕೆಲಸವೆಂದರೆ ಮನೆಯನ್ನು ಕಾಯುವುದು, ಒಳನುಗ್ಗುವ ಆಕ್ರಮಣಕಾರಿಗಳನ್ನು ಹೊರಗಿಡುವುದು. ಆದುದರಿಂದಲೇ ಬೇಲಿಗೆ ಮುಳ್ಳುಗಳು ಇರುತ್ತವೆ. The job of the fence is defense , sometimes with thorny offense; ಆದರೆ ಇಲ್ಲಿ ನಾವು ನೋಡುತ್ತಿರುವುದು reception with mense! ಧಾರವಾಡದಲ್ಲಿಯ ಬೇಲಿಗಳು ತಮ್ಮ ಹೂಬೆರಳುಗಳಿಂದ ನಿಮ್ಮನ್ನು ಸ್ವಾಗತಿಸುತ್ತಿವೆ, ಸ್ವಾಗತಕಾರಿಣಿಯಂತೆ! ಅರ್ಥಾತ್, ಇಲ್ಲಿಯ ನಿವಾಸಿಗಳು ಸಹೃದಯರು, ಅತಿಥಿಸತ್ಕಾರಪ್ರಿಯರು ಎಂದು ಬೇಂದ್ರೆ ಹೇಳುತ್ತಿದ್ದಾರೆ. ಅರ್ಥಾಂತರ ಅಲಂಕಾರಕ್ಕೆ ಇದೊಂದು ಸುಂದರ ಉದಾಹರಣೆಯಾಗಿದೆ.
ಶಿಶಿರಋತುವಿನಲ್ಲಿ ಯೋಗನಿದ್ರೆಯಲ್ಲಿ ಲೀನಳಾದ ಭೂತಾಯಿಯು, ಶ್ರಾವಣಮಾಸದ ಆಗಮನದಿಂದ ಎಚ್ಚತ್ತುಕೊಳ್ಳುತ್ತಾಳೆ, ಮತ್ತೆ ಹರೆಯದವಳಾಗುತ್ತಾಳೆ. ಅವಳ ಮೈಕೈಯು ಹಸಿರಿನಿಂದ ತುಂಬಿಕೊಳ್ಳುತ್ತದೆ. ಜಾಗ್ರತಿಗೆ ಮರಳಿದ ಅವಳು, ಈಗ ಮೈಕೈಗಳನ್ನು ಝಾಡಿಸಿಕೊಂಡು ಉತ್ಸಾಹದಿಂದ, ಉಲ್ಲಾಸದಿಂದ ಎದ್ದೇಳುತ್ತಾಳೆ. ಇದು ಸಮೃದ್ಧ ಶ್ರಾವಣದ ಆಗಮನದ ಸೂಚಕವಾಗಿದೆ. ಇಂತಹ ಧಾರವಾಡದ ಮಳೆಗಾಲವನ್ನು ಅನುಭವಿಸಲು ಬೇಂದ್ರೆ 'ಬಾರೊ ಸಾಧನಕೇರಿಗೆ' ಎಂದು ಕರೆಯುತ್ತಾರೆ. ಬೇಂದ್ರೆಯವರು ಯಾರನ್ನು ಕರೆಯುತ್ತಿದ್ದಾರೆ? 'ಮರಳಿ ನಿನ್ನೀ ಊರಿಗೆ' ಎನ್ನುವ ಉದ್ಗಾರವು ಅವರು ತಮ್ಮನ್ನೇ ಕರೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. 'ಶ್ರಾವಣದ ಸಿರಿ ಬರಲಿದೆ' ಎನ್ನುವ ಅವರ ಉದ್ಗಾರವು ಸಮೃದ್ಧವಾದ ವರ್ಷಾಕಾಲದ ಹರ್ಷಕ್ಕಾಗಿ ಅವರು ಉತ್ಸುಕತೆಯಿಂದ ಕಾಯುತ್ತಿರುವದನ್ನು ಸೂಚಿಸುತ್ತದೆ. (ತಮ್ಮ ಮತ್ತೊಂದು ಕವನದಲ್ಲಿ ಬೇಂದ್ರೆಯವರು ಮಳೆಗಾಲದ ಭೂಮಿತಾಯಿಯನ್ನು 'ಹೂವ ಹಡಲಿಗೆಯನು ಹೊತ್ತ / ಭೂಮಿತಾಯಿ ಜೋಗಿತಿ'ಎಂದು ಕರೆದಿದ್ದಾರೆ. ಬೇಂದ್ರೆಯವರ ಪಾಲಿಗೆ ಭೂತಾಯಿ ಕೇವಲ ಕಲ್ಲು ಮಣ್ಣಲ್ಲ; ಅವಳು ಸಜೀವ ದೇವಿ. ಆದುದರಿಂದಲೇ 'ಭೂಮಿತಾಯ್ ಒಡಮುರಿದು ಎದ್ದಳೊ' ಎನ್ನುವುದು ಅವರು ಅಂತಃಕರಣದಲ್ಲಿ ಕಂಡ ದರ್ಶನವಾಗಿದೆ.)
ಮಳೆಗಾಲದ ಪರಿಸರದಲ್ಲಿ ಬೇಂದ್ರೆ ಒಬ್ಬ ಹುಡುಗನಂತೆ ಆಗಿದ್ದಾರೆ. ನಿಸರ್ಗದ ಪ್ರತಿಯೊಂದು ಮುಖವೂ ಅವರಲ್ಲಿ ಉಲ್ಲಾಸವನ್ನು ಹುಟ್ಟಿಸುತ್ತಿದೆ. ಆಗಸದಲ್ಲಿಯ ಮೋಡಗಳು ಸೂರ್ಯನ ಕೆಳಗೆ ಸರಿದು ಹೋಗುವಾಗ ಭೂಮಿಯ ಮೇಲೆ ಕಾಣುವ ಬಿಸಿಲು-ನೆರಳಿನ ಆಟ, ಎಲ್ಲೆಡೆಯೂ ಬಣ್ಣಬಣ್ಣಗಳನ್ನು ತುಂಬಿದ, ಹೆಸರಿಲ್ಲದ ನೂರಾರು ಹೂವುಗಳು, ಈ ಹೂವುಗಳನ್ನು ಮುತ್ತಿಕ್ಕುವ ಬಗೆಬಗೆಯ ಚಿಟ್ಟೆಗಳು ಹಾಗು ಜೇನ್ನೊಣಗಳು ಇವೆಲ್ಲ ಸೇರಿ, ಒಂದು ರಮ್ಯವಾದ ಯಕ್ಷಲೋಕವನ್ನು ಸೃಷ್ಟಿಸಿವೆ. ಮಾಟ ಅಂದರೆ ಜಾದೂ. ಈ ನಿಸರ್ಗರಮ್ಯತೆಯು ಯಾರೋ ಒಬ್ಬ ಯಕ್ಷಿಯು ಮಾಡಿದ ಜಾದೂದಂತೆ ಭಾಸವಾಗುತ್ತಿದೆ. ಮಳೆಯನ್ನು ನೀಡುವ ಆಕಾಶ ಹಾಗು ಜೀವಸಂಕುಲವನ್ನು ಸೃಷ್ಟಿಸುವ ಭೂಮಿ ಇವೆರಡೂ ಒಟ್ಟಾಗಿ ನಿರ್ಮಿಸುತ್ತಿರುವ ಮಾಯಾಲೋಕವಿದು.
(ಪಾತರಗಿತ್ತಿಗಳ ಬಗೆಗೆ ಬೇಂದ್ರೆಯವರಿಗೆ ಬಾಲಮೋಹವಿದೆ. ಆದುದರಿಂದಲೇ ಅವರು 'ಪಾತರಗಿತ್ತೀ ಪಕ್ಕಾ / ನೋಡೀದೇನs ಅಕ್ಕಾ!' ಎಂದು ತಮ್ಮ ಅಕ್ಕನನ್ನು ಬೆರಗಿನಿಂದ ಕರೆಯಲು ಸಾಧ್ಯವಾಯಿತು. ಆದರೆ, ಬಾಲಮೋಹದ ಈ ವ್ಯಕ್ತಿಯಲ್ಲಿ ಅಸಾಮಾನ್ಯ ಕಲ್ಪನಾಸಾಮರ್ಥ್ಯದ ಕವಿಯೊಬ್ಬ ಹುದುಗಿಕೊಂಡಿದ್ದಾನೆ. ಆದುದರಿಂದಲೇ 'ಪಾತರಗಿತ್ತೀ ಪಕ್ಕಾ' ಅವರ ಅಪ್ರತಿಮ ದೀರ್ಘ ಕವನಗಳಲ್ಲಿ ಒಂದಾಗಿದೆ.)
ಬೇಂದ್ರೆಯವರ ಕಾಲದಲ್ಲಿ ಧಾರವಾಡವು (ವಿಶೇಷತಃ ಸಾಧನಕೇರಿ, ವಿಶ್ವವಿದ್ಯಾಲಯ ಮೊದಲಾದ ದೂರದೂರದ ಪ್ರದೇಶವು) ಕಾಡಿನಿಂದ ತುಂಬಿತ್ತು. ಬೂರಲ ಮರ, ಅತ್ತಿ ಮರ, ಆಲದ ಮರ ಮೊದಲಾದ ಎತ್ತರದ ಮರಗಳು ತಮ್ಮ ಅಸಂಖ್ಯ ಶಾಖೆಗಳಿಂದ ಮುಗಿಲಿಗೆ ಕೈ ನೀಡಿದಂತೆ ಕಾಣುತ್ತಿದ್ದವು. ಈ ಗಿಡಗಳ ಹೊದರುಗಳಲ್ಲಿ ಹಕ್ಕಿಗಳು ಮನೆ ಮಾಡಿಕೊಂಡಿರುತ್ತಿದ್ದವು. ಮೊನ್ನೆ ಮೊನ್ನೆಯವರೆಗೂ, ಧಾರವಾಡದ ಮಧ್ಯಭಾಗದಲ್ಲಿರುವ ಪೋಲೀಸ ಠಾಣೆಯ ಪಕ್ಕದಲ್ಲಿರುವ ವಿಶಾಲವಾದ ಮರವೊಂದರಲ್ಲಿ ಮನೆ ಮಾಡಿಕೊಂಡಿದ್ದ ನೂರಾರು ಹಕ್ಕಿಗಳು ಸಂಜೆಯಾದೊಡನೆ ಕಲರವವನ್ನು ಎಬ್ಬಿಸುತ್ತಿದ್ದವು. ಈ ಚಿಲಿಪಿಲಿ ಹಾಗು ಈ ಶಾಖೆಗಳ ನಡುವಿನಿಂದ ಬೀಸುವ ತಂಗಾಳಿಯು ಪೇಟೆಯ ಮಧ್ಯದಲ್ಲಿ ಓಡಾಡುವ ಜನರಲ್ಲಿ ಖುಶಿಯನ್ನು ತುಂಬುತ್ತಿತ್ತು. ಪ್ರಕೃತಿಯೊಡನೆ ಒಂದಾದ ಜನರ ಚಿಂತೆಗಳು ದೂರವಾಗಿ ಅವರು ಸಂತಸವನ್ನು ತಾಳುತ್ತಿದ್ದರು. ಆದುದರಿಂದಲೇ ಬೇಂದ್ರೆಯವರು ಕೇಳುತ್ತಾರೆ: ಇಂತಹ ನೋಟವನ್ನು ಬೇರೆಲ್ಲಾದರೂ ಕಾಣಲು ಸಾಧ್ಯವೆ?
ರುಚಿ ಸಂತೆ: ನಾಲಿಗೆ ಚಪ್ಪರಿಸಿದ ಗ್ರಾಹಕರು | Prajavani