text
stringlengths
0
61.5k
ಕನ್ನಿಕಾ ಮಹಲ್‌ನಲ್ಲಿ ತಿನಿಸುಗಳ ಮೇಳ : ನೂರಾರು ಮಂದಿ ಭಾಗಿ
Published: 06 ಜುಲೈ 2019, 17:44 IST
Updated: 06 ಜುಲೈ 2019, 17:44 IST
ರಾಮನಗರ: ನಾಲಿಗೆಗೆ ರುಚಿ ಎನಿಸುವ ಬಗೆಬಗೆ ಖಾದ್ಯಗಳು. ಮಕ್ಕಳು, ಹಿರಿಯರಿಗೂ ಮುದ ನೀಡುವಂತಹ ತಿನಿಸುಗಳು...
ಇವೆಲ್ಲ ಶನಿವಾರ ಒಂದೇ ವೇದಿಕೆಯಲ್ಲಿ ಮಾರಾಟವಾದವು. ನೂರಾರು ಸಂಖ್ಯೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದವು. ವಾಸವಿ ವನಿತಾ ಸಂಘವು ರೋಟರಿ ಸಿಲ್ಕ್‌ಸಿಟಿ ಕ್ಲಬ್‌ ಸಹಯೋಗದಲ್ಲಿ ಕನ್ನಿಕಾ ಮಹಲ್‌ನಲ್ಲಿ ಶನಿವಾರ ಆಯೋಜಿಸಿದ್ದ ರುಚಿ ಸಂತೆಯಲ್ಲಿ ಆರ್ಯ ವೈಶ್ಯ ಸಮುದಾಯದ ಜನರು ಮಳಿಗೆಗಳನ್ನು ತೆರೆದು ಗ್ರಾಹಕರಿಗೆ ವಿವಿಧ ಖಾದ್ಯಗಳ ರುಚಿಯನ್ನು ಉಣಬಡಿಸಿದರು.
ಏನೆಲ್ಲ ಇತ್ತು: ಮಧಾಹ್ನ 1ಕ್ಕೆ ಆರಂಭವಾದ ರುಚಿ ಸಂತೆಯಲ್ಲಿ ಬಗೆಬಗೆಯ ಸ್ಟಾರ್ಟರ್‌ಗಳು, ಕೇಕ್‌, ಜ್ಯೂಸ್‌, ಐಸ್‌ಕ್ರೀಮ್‌ ಸೇರಿದಂತೆ ಎಲ್ಲ ಬಗೆಯ ತಿನಿಸುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಕೆಲವನ್ನು ಮೊದಲೇ ಮಾಡಿ ತಂದಿದ್ದರೆ, ಇನ್ನೂ ಕೆಲವನ್ನು ಸ್ಥಳದಲ್ಲಿಯೇ ತಯಾರಿಸಿ ಕೊಡಲಾಯಿತು. ಪಾವ್‌ ಭಾಜಿ. ಗಿರಮಿಟ್‌, ಚುರಮುರಿ, ಸ್ಯಾಂಡ್‌ ವಿಚ್‌, ಸಮೋಸಾ, ಪಾನಿಪುರಿ, ಮಸಾಲೆಪುರಿಯಂತಹ ತಿನಿಸುಗಳ ಜ...
ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿಯನ್ನೂ ಸಹ ಇಲ್ಲಿ ಮಾಡಲಾಗಿತ್ತು. ನೆಂಚಿಕೊಳ್ಳಲು ಬದನೆ ಪಲ್ಯ, ಚಟ್ನಿ ಪುಡಿಯ ವ್ಯವಸ್ಥೆಯೂ ಇತ್ತು. ಜೊತೆಗೆ ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಹಪ್ಪಳ ಸಹಿತ ಖರಿದ ತಿನಿಸುಗಳ ಮಾರಾಟವೂ ನಡೆಯಿತು. ರಾತ್ರಿವರೆಗೆ ನಡೆದ ಮೇಳದಲ್ಲಿ ನೂರಾರು ಮಂದಿ ಪಾಲ್ಗೊಂಡರು. ಜ್ಯೂಸ್ ಪ್ರಿಯರಿಗಾಗಿ ನಿಂಬೆ, ನೆಲ್ಲಿ, ಮೊಜಿಟೊ, ಹರ್ಬಲ್‌ ರಸ ಇಡಲಾಗಿತ್ತು.
'ನಗರದ ಮಂದಿ ಬಾಯಿ ರುಚಿಗಾಗಿ ಹೊರಗಿನ ತಿಂಡಿಗಳ ಮೊರೆ ಹೋಗುತ್ತಾರೆ. ಆದರೆ ಅಲ್ಲಿ ಆಹಾರದ ಗುಣಮಟ್ಟ ಇರುವುದಿಲ್ಲ. ಸ್ವಚ್ಚತೆಯೂ ಇರುವುದಿಲ್ಲ. ಹೀಗಾಗಿ ಶುದ್ಧ ಮತ್ತು ಸ್ವಚ್ಚ ಪರಿಸರದಲ್ಲಿ ತಯಾರಿಸಲಾದ ಆಹಾರಗಳ ಅರಿವು ಮೂಡಿಸಲು ರಾಮನಗರದಲ್ಲಿ ಮೊದಲ ಬಾರಿಗೆ ಈ ಮೇಳವನ್ನು ಆಯೋಜಿಸಲಾಗಿದೆ. ಒಟ್ಟು 15 ಮಳಿಗೆಗಳಿಗೆ ಅವಕಾಶ ನೀಡಲಾಗಿದ್ದು, ರಾಮನಗರದವರೇ ಹೆಚ್ಚಿನ ಮಂದಿ ಪಾಲ್ಗೊಂಡಿದ್ದರು ' ಎಂದು ವ...
ಒಂದು ವಾರದಿಂದ ಆಹಾರ ಮೇಳಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಹತ್ತಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ಮಾಡಿದ್ದು, ಗ್ರಾಹಕರಿಗೂ ಮೆಚ್ಚುಗೆಯಾಗಿದೆ
- ಕವಿತಾ, ವ್ಯಾಪಾರಿ
ಹೊರಗೆ ಹೋಲಿಸಿದರೆ ಇಲ್ಲಿ ಸಿಗುವ ಆಹಾರ ರುಚಿಯಾಗಿಯೂ, ಸ್ವಚ್ಛವಾಗಿಯೂ ಇದೆ. ಆಹಾರ ಜಾಗೃತಿ ಮತ್ತು ಮನೋರಂಜನೆಗೆ ಇಂತಹ ಮೇಳಗಳು ಸಹಕಾರಿ
ಟ್ರ್ಯಾಕ್ಟರ್​ ಟ್ರೇಲರ್​ ಇಬ್ಬರು ಕಳ್ಳರನ್ನು ಬಂಧಿಸಿದ ಹರಿಹರ ಗ್ರಾಮಾಂತರ ಪೊಲೀಸರು, 6 ಟ್ರೇಲರ್​ಗಳ ವಶ ·
ವಿಜಯವಾಣಿ ಸುದ್ದಿಜಾಲ May 16, 2019 9:08 AM
ದಾವಣಗೆರೆ: ದಾವಣಗೆರೆ ಜಿಲ್ಲೆಯ ವಿವಿಧೆಡೆಗಳಲ್ಲಿ ಟ್ರ್ಯಾಕ್ಟರ್​ ಟ್ರೇಲರ್​ಗಳನ್ನು ಕದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿಕಾರಿಪುರ ತಾಲೂಕಿನ ಹರಗವಳ್ಳಿಯ ಬಸವರಾಜ್​ (30) ಮತ್ತು ರವಿಕುಮಾರ್​ (34) ಬಂಧಿತರು. ಬಂಧಿತರಿಂದ ಅಂದಾಜು 15 ಲಕ್ಷ ರೂ. ಮೌಲ್ಯದ 6 ಟ್ರೇಲರ್​ ಮತ್ತು ಒಂದು ಟ್ರ್ಯಾಕ್ಟರ್​ ಅನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ಅಲ್ಲದೆ ಹರಿಹರ, ಮಲೇಬೆನ್ನೂರು, ಹೊನ್ನಾಳಿ ತಾಲೂಕಿನ ವಿವಿಧ ಗ್ರಾಮಗಳ ಗದ್ದೆಗಳಲ್ಲಿ, ಕಣಗಳಲ್ಲಿ ನಿಲ್ಲಿಸಿರುತ್ತಿದ್ದ ಟ್ರ್ಯಾಕ್ಟರ್​ ಟ್ರೇಲರ್​ಗಳನ್ನು ಬಸವರಾಜ್​ ಮತ್ತು ರವಿಕುಮಾರ್​ ಕದಿಯುತ್ತಿದ್ದರು. ಕದ್ದ ಟ್ರೇಲರ್​ಗಳನ್ನು ಬೇರೆ ತಾಲೂಕುಗಳ ರೈತರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ಹಣ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. (ದಿಗ್ವಿಜಯ ನ್ಯ...
DavangereHariharTractorTrailerಟ್ರೇಲರ್​ಟ್ರ್ಯಾಕ್ಟರ್​ದಾವಣಗೆರೆಶಿಕಾರಿಪುರಹರಿಹರ
Previous Previous post: 2014ರಲ್ಲಿ ಗಂಗಾ ಪುತ್ರರಾಗಿ ಬಂದ ಮೋದಿ 2019ರಲ್ಲಿ ರಫೇಲ್​ ಏಜಂಟ್​ ಆಗಿ ನಿರ್ಗಮನ: ಸಿಧು ಉವಾಚ
Next Next post: ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಬೇಟೆ: ಪುಲ್ವಾಮಾದಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿ ಭದ್ರತಾಪಡೆ
ಬಿಎಸ್‌ವೈ ಜನತೆಕಣ್ಣೊರೆಸುವ ಮುಖ್ಯಮಂತ್ರಿ: ಕಟೀಲ್‌ | Udayavani – ಉದಯವಾಣಿ
Friday, 22 Oct 2021 | UPDATED: 10:23 AM IST
ಬಿಎಸ್‌ವೈ ಜನತೆಕಣ್ಣೊರೆಸುವ ಮುಖ್ಯಮಂತ್ರಿ: ಕಟೀಲ್‌
Team Udayavani, Oct 3, 2020, 3:05 PM IST
ಬರಗೂರು: ಜನತೆಯ ಕಣ್ಣೀರು ಒರೆಸುವ ನಮ್ಮ ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಹೊರ ಹೊಮ್ಮಿರುವುದು ನಮ್ಮ ಸೌಭಾಗ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲು ಹೇಳಿದರು.
ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರಿನಲ್ಲಿ ನಡೆದ ಬರಗೂರು ಹಾಗೂ ನಾದೂರು ಮಹಾ ಶಕ್ತಿ ಕೇಂದ್ರಗಳ ಬೂತ್‌ ಸಮಿತಿಗಳ ಸಭೆ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದ ಕಲ್ಯಾಣದಲ್ಲಿ ಶಿರಾ ತಾಲೂಕಿನ ಕಲ್ಯಾಣದ ಚಿಂತನೆ ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪರದ್ದಾಗಿದೆ. 2018ರಲ್ಲಿ ಜನರಿಗೆ ಸ್ಪಂದಿಸುವ, ರೈತರ ಪರವಾಗಿ ಹೋರಾಡುವ ಚಿಂತಕ ಯಡಿಯೂರಪ್ಪರಿಗೆ ಮತದಾರರು ಬಹುಮತ ಕೊಟ್ಟು 104 ಸ್ಥಾನಗಳನ್ನು ...
ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಈ ಸಭೆಯಲ್ಲಿ ಭಾಗವಹಿಸಿರುವ ಅಪಾರ ಸಂಖ್ಯೆಯ ಜನರನ್ನು ಗಮನಿಸಿದರೆ ಇದು ಕಾರ್ಯಕರ್ತರ ಬೂತ್‌ ಮಟ್ಟದ ಸಭೆ ಎಂದು ಕಾಣುತ್ತಿಲ್ಲ. ಮುಂಬರುವ ಚುನಾವಣಾ ಪ್ರಚಾರ ಸಭೆಯಂತೆ ರಾರಾಜಿಸುತ್ತಿರುವುದು ಚುನಾವಣೆಯ ಗೆಲುವಿನ ಸಂಕೇತವಾಗಿದ್ದು ಇಲ್ಲಿನ ಕಾರ್ಯಕರ್ತರ ಪರಿಶ್ರಮ ಫ‌ಲಶೃತಿಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು. ಕಾಂಗ್ರೆಸ್‌, ಜೆಡಿಎಸ್‌ ಪಕ್ಷ ತೊರೆದ...
ಮೈಸೂರು ಸಂಸದ ಪ್ರತಾಪ್‌ಸಿಂಹ, ಶಿರಾ ತಾಲೂಕು ಮುಖಂಡ ಎಸ್‌.ಆರ್‌.ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ರಾಜ್ಯ ಉಪಾಧ್ಯಕ್ಷ ಎಂ.ಬಿ. ನಂದೀಶ್‌ ಇತರರು ಇದ್ದರು.
1. ಗಂಡು ಹುಡುಗರ ಎತ್ತರ ನಿರ್ಧಾರ ಆಗೋದು ಹೇಗೆ, ಎಲ್ಲೀವರೆಗೂ ನಾವು ಎತ್ತರ ಬೆಳೀತೀವಿ?
- ಜೋಮನ್, ಭದ್ರಾವತಿ, ವಯಸ್ಸು 16
ಪ್ರೀತಿಯ ಜೋಮನ್, ಬಹುತೇಕವಾಗಿ ಅಪ್ಪ-ಅಮ್ಮಂದಿರ ಎತ್ತರಕ್ಕೆ ಅನುಗುಣವಾಗಿ ಮಕ್ಕಳ ಎತ್ತರ ನಿರ್ಧಾರವಾಗುತ್ತದೆ. ತಂದೆ-ತಾಯಿಗಳಿಂದ ಮಕ್ಕಳಿಗೆ ವರ್ಗಾಯಿಸಲ್ಪಟ್ಟಿರುವ ವಂಶವಾಹಿಗಳೇ ಇದಕ್ಕೆ ಕಾರಣ. ಇಷ್ಟೇ ಅಲ್ಲ ಪೌಷ್ಟಿಕರ ಆಹಾರ ಸೇವನೆ ಮತ್ತು ವ್ಯಾಯಾಮದ ಜೊತೆಗೆ Growth hormone, Thyroid hormone, Insulin, Testosterone, Cortisol ಇತ್ಯಾದಿ ಹಾರ್ಮೋನುಗಳ ಸೂಕ್ತ ರೀತಿಯ ಉತ್ಪತ್ತಿ ಕೂಡ ...
2. ಡಾಕ್ಟರ್, ಯಾವ ರೀತಿಯ ನ್ಯಾಪ್ಕಿನ್ ಉಪಯೋಗಿಸಿದರೆ ಒಳ್ಳೆಯದು?
- ಧರಿತ್ರಿ, ಶಿವಮೊಗ್ಗ
ಡಿಯರ್ ಧರಿತ್ರಿ, ಮಾರುಕಟ್ಟೆಯಲ್ಲಿ ಮಿನಿ, ಲಾರ್ಜ್, ಎಕ್ಸ್‌ಟ್ರಾ ಲಾರ್ಜ್ ಎಂಬ ವಿವಿಧ ಕಂಪೆನಿಯ ವಿವಿಧ ವಿನ್ಯಾಸದ ನಮೂನೆಯ ನ್ಯಾಪ್‌ಕಿನ್‌ಗಳು ಲಭ್ಯವಿರುವುದರಿಂದ ನೀವು ಗೊಂದಲಕ್ಕೆ ಒಳಗಾಗಿರಬಹುದಲ್ಲವೆ? ಚಿಂತೆ ಬೇಡ. ಸ್ರಾವವನ್ನು ಹೀರುವ ಸಾಮರ್ಥ್ಯಕ್ಕೆ ಅನುಗುಣವಾಗಿ ಇವುಗಳನ್ನು ರೂಪಿಸಿರುತ್ತಾರೆ. ಆದ್ದರಿಂದ ಋತುಸ್ರಾವದ ಪ್ರಮಾಣದ ಮೇಲೆ ನೀವು ವಿವಿಧ ಅಳತೆಯ ನ್ಯಾಪ್‌ಕಿನ್‌ಗಳನ್ನು ಬಳಸಬಹುದ...
3. ನನಗೀಗ 14 ವರ್ಷ. ಗಡ್ಡ ಮತ್ತು ಕೆನ್ನೆಗಳ ಮೇಲೆ ಸಣ್ಣ ಸಣ್ಣ ಮದುವಾದ ರೋಮ ಬೆಳೆದಿದೆ. ಶೇವ್ ಮಾಡಿಕೊಳ್ಳಲು ಆಸೆ. ಮನೆಯಲ್ಲಿ 18 ರವರೆಗೆ ಬೇಡ ಅಂತಿದ್ದಾರೆ. ಏನು ಮಾಡಲಿ?
- ಮಿಥುನ್ ಪಿ ಕೆ. ಕೊಳ್ಳೆಗಾಲ
ಮಿಥುನ್,'ಮೊದಲ ಶೇವ್'ಇಷ್ಟೇ ವರ್ಷಕ್ಕೆ ಮಾಡ್ಕೊಬೇಕು ಅಂತ ಯಾವ ನಿಯಮವೂ ಇಲ್ಲ. ಮೊದಮೊದಲು ನವಿರಾಗಿ ಶುರುವಾಗ ಮುಖದ ಕೂದಲು (peach fuzz!) ಕ್ರಮೇಣ ಹೆಚ್ಚುತ್ತಾ ಕಪ್ಪಾಗುತ್ತಾ ಹೋಗುತ್ತವೆ. ಇದರಿಂದ ನಿನಗೆ ಮುಜುಗುರವೆನ್ನಿಸಿದರೆ ಶೇವ್ ಮಾಡಿಕೊಳ್ಳಲು 18 ವರ್ಷದವರಿಗೂ ಕಾಯಬೇಕಿಲ್ಲ. ಆದರೆ ಮೊಟ್ಟಮೊದಲ ಬಾರಿ ಶೇವ್ ಮಾಡಿಕೊಳ್ಳಬೇಕಾದರೆ ಜೋಪಾನ. ಬೆಚ್ಚನೆ ನೀರು, ಶೇವಿಂಗ್ ಕ್ರೀಮ್ ಅಥವಾ ಜೆಲ್ ಇ...
ಪತ್ನಿ ಉಳಿಸಿಕೊಳ್ಳಲು ಖ್ಯಾತ ರೈತನ ಪರದಾಟ, ಪ್ರಧಾನಿ ಮೋದಿಗೆ ಮೊರೆ | KANNADIGA WORLD
Home ಕನ್ನಡ ವಾರ್ತೆಗಳು ರಾಷ್ಟ್ರೀಯ ಪತ್ನಿ ಉಳಿಸಿಕೊಳ್ಳಲು ಖ್ಯಾತ ರೈತನ ಪರದಾಟ, ಪ್ರಧಾನಿ ಮೋದಿಗೆ ಮೊರೆ
ಪತ್ನಿ ಉಳಿಸಿಕೊಳ್ಳಲು ಖ್ಯಾತ ರೈತನ ಪರದಾಟ, ಪ್ರಧಾನಿ ಮೋದಿಗೆ ಮೊರೆ
ನವದೆಹಲಿ: ಬಿತ್ತನೆ ಬೀಜಕ್ಕಾಗಿ ಪರದಾಡುತ್ತಿದ್ದ ರೈತರಿಗೆ ಉಚಿತವಾಗಿ ಬೀಜ ಹಂಚಿ ದೇಶಾದ್ಯಂತ ಕಿಸಾನ್ ಬಾಬಾ ಎಂದು ಖ್ಯಾತಿಗಳಿಸಿದ್ದ ರೈತನೊಬ್ಬ ಇದೀಗ ಕೋಮಾದಲ್ಲಿರುವ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಹಣವಿಲ್ಲದೆ ಪರದಾಡುತ್ತಿರುವ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಪ್ರಕಾಶ್ ಸಿಂಗ್ ರಘುವಂಶಿ ಬಹುಶಃ ಈ ಹೆಸರು ಪರಿಚಿತವಿಲ್ಲದಿದ್ದರೂ ಕಿಸಾನ್ ಬಾಬಾ ಎಂಬ ಹೆಸರು ಮಾತ್ರ ಎಲ್ಲರಿಗೂ ನೆನಪಿರುತ್ತದೆ. ಏಕೆಂದರೆ 2007ರಲ್ಲಿ ದೇಶದಲ್ಲಿ ಬಿತ್ತನೆ ಬೀಜದ ಹಾಹಾಕಾರವೆದ್ದಾಗ ಇಡೀ ದೇಶಾದ್ಯಂತ ಸಂಚರಿಸಿ ರೈತರಿಗೆ ಉಚಿತ ಬಿತ್ತನೆ ಬೀಜ ನೀಡಿದ್ದ ರೈತನೇ ಈ ಪ್ರಕಾಶ್ ಸಿಂಗ್ ರಘುವಂಶಿ. ಇದೇ ಕಾರಣಕ್ಕಾಗಿ ಇವರನ್ನು ಕಿಸಾನ್ ಬಾಬಾ ಎಂದೂ ಕರೆಯುತ್ತಾರೆ. ಇವರ ಈ ಕಾರ್ಯದಿಂದಾಗಿ ದ...
2007ರಲ್ಲಿ ಬ್ಯಾಂಕಿನಿಂದ ಸಾಲ ಪಡೆದು ಪ್ರಕಾಶ್ ಸಿಂಗ್ ಕಾರು ಖರೀದಿಸಿದ್ದರು. ರೈತರಿಗೆ ಉಚಿತವಾಗಿ ಬೀಜ ಹಂಚಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದ ಪ್ರಕಾಶ್ ಸಿಂಗ್ ಅವರು, ಕಿಸಾನ್ ರಥ ಯಾತ್ರಾ ಎಂಬ ಹೆಸರಿನಲ್ಲಿ ಇದೇ ಕಾರಿನಲ್ಲಿ ದೇಶಾದ್ಯಂತ ಸಂಚರಿಸಿ ರೈತರಿಗೆ ಬಿತ್ತನೆ ಬೀಜವನ್ನು ಹಂಚಿಕೆ ಮಾಡಿದ್ದರು. ಆ ಮೂಲಕ ರೈತರ ಪಾಲಿಗೆ ಕಿಸಾನ್ ಬಾಬಾ ಆಗಿದ್ದರು.
ತಮ್ಮ ಅಭೂತಪೂರ್ವ ಕಾರ್ಯದಿಂದಾಗಿ ಕಿಸಾನ್ ಬಾಬಾ 2009ರಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರಿಂದ ರಾಷ್ಟ್ರೀಯ ಕೃಷಿ ಆವಿಷ್ಕಾರ ಪ್ರಶಸ್ತಿಗೂ ಭಾಜನರಾಗಿದ್ದರು.
ಇದೀಗ ಇಂತಹ ಕಿಸಾನ್ ಬಾಬಾ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ತಮ್ಮ ಅನಾರೋಗ್ಯ ಪೀಡಿತ ಪತ್ನಿಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಪ್ರಕಾಶ್ ಸಿಂಗ್ ರಘುವಂಶಿ ಅವರ ಪತ್ನಿ ಶಕುಂತಲಾ ಅವರು ಅನಾರೋಗ್ಯ ಪೀಡಿತರಾಗಿ ಕೋಮಾದಲ್ಲಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದಾರೆ. ಪ್ರಕಾಶ್ ಸಿಂಗ್ ಮೂಲತಃ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯ ತಾಂಡಿಯಾ ಗ್ರಾಮದವ...
ಬಳಿಕ ಅವರನ್ನು ಅಕ್ಟೋಬರ್ 28ರಂದು ನವದೆಹಲಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವರೆಗೂ ಚಿಕಿತ್ಸೆಗಾಗಿ ಸುಮಾರು 4 ಲಕ್ಷ ರು.ಗಳು ಖರ್ಚಾಗಿದ್ದು, ಶಕುಂತಲಾ ಅವರ ಆರೋಗ್ಯದಲ್ಲಿ ಮಾತ್ರ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಆದರೆ ಪ್ರತಿ ನಿತ್ಯ ಚಿಕಿತ್ಸೆಗಾಗಿ ಸುಮಾರು 40 ರಿಂದ 50 ಸಾವಿರ ರು.ಖರ್ಚಾಗುತ್ತಿದ್ದು. ಅಷ್ಟು ಹಣವನ್ನು ವ್ಯಯಿಸಲು ಪ್ರಕಾಶ್ ಸಿಂಗ್ ಶಕ್ತರಾಗಿಲ್ಲ. ಚಂ...
ಆದರೆ ಪ್ರಸ್ತುತ ನರೇಂದ್ರ ಮೋದಿ ಅವರು ಬ್ರಿಟನ್ ಪ್ರವಾಸದಲ್ಲಿರುವುದರಿಂದ ಆಸ್ಪತ್ರೆಯ ವೆಚ್ಚ ಭರಿಸಲಾಗದೇ ಪ್ರಕಾಶ್ ಸಿಂಗ್ ತಮ್ಮ ಪತ್ನಿಯನ್ನು ಮನೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಅಂತೆಯೇ ಪ್ರಸ್ತುತ ಬೀಜೋತ್ಪಾದನೆ ಮತ್ತು ಸಂಶೋಧನೆಗೆ ಬಳಕೆಯಾಗುತ್ತಿರುವ ಅವರ 3.5 ಎಕರೆ ಕೃಷಿ ಭೂಮಿಯನ್ನು ಸಹ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ಒಂದು ಕಾಲದಲ್ಲಿ ಸಂಕಷ್ಟದಲ್ಲಿದ್ದ ದೇಶದ ರೈತರಿಗೆ ನೆರವಾಗಿದ್ದ ಖ್ಯಾತ ರೈತ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾನೆ.
ಸಂಪುಟ ರಚನೆಯೆಂಬ ಕಸರತ್ತು | Udayavani – ಉದಯವಾಣಿ
Tuesday, 26 Oct 2021 | UPDATED: 01:59 AM IST
ಸಂಪುಟ ರಚನೆ ವಿಶೇಷ ಕಸರತ್ತು. ಪ್ರಧಾನಿ ಆದವರು ಪ್ರತಿಭೆ ಮತ್ತು ಅನುಭವವನ್ನು ಗಮನದಲ್ಲಿಟ್ಟು ಕೊಂಡೇ ಈ ಕಸರತ್ತು ನಡೆಸಬೇಕಾಗುತ್ತದೆ. ಅದರಲ್ಲೂ ಸಮ್ಮಿಶ್ರ ಸರ್ಕಾರದಲ್ಲಿ ಈ ಲೆಕ್ಕಾಚಾರ ಇನ್ನೂ ಕಷ್ಟ. ಭಾರತದ ಎಲ್ಲ ರಾಜ್ಯಗಳು, ಎಲ್ಲ ಸಮುದಾಯಗಳನ್ನೂ ಸಂಪುಟ ರಚನೆಯ ಹದದೊಳಗೆ ತರಬೇಕಾಗುತ್ತದೆ.
ಮೋದಿ 2ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ತೆಗೆದುಕೊಂಡಿರುವಂತೆಯೇ, ಸಂಪುಟ ರಚನೆಯ ಕಸರತ್ತಿಗೆ ವಿಶೇಷ ಮಹತ್ವ ಬಂದಿತು. ಯಾರು ಯಾವ ಖಾತೆ ಪಡೆಯುತ್ತಾರೆ, ಎಂಬ ಲೆಕ್ಕಾಚಾರ ದಿನದಿನಕ್ಕೂ ತೀವ್ರ ಗೊಂಡಿತ್ತು. ಭಾರತದ ವೈವಿಧ್ಯತೆಯನ್ನು ಗಮನದಲ್ಲಿ ಟ್ಟುಕೊಂಡರೆ, ಸಂಪುಟ ರಚನೆ ವಿಶೇಷ ಕಸರತ್ತು. ಪ್ರಧಾನಿ ಆದವರು ಪ್ರತಿಭೆ ಮತ್ತು ಅನುಭವವನ್ನು ಗಮನದಲ್ಲಿಟ್ಟು ಕೊಂಡೇ ಈ ಕಸರತ್ತು ನಡೆಸಬೇಕಾಗುತ್ತದೆ.
ಅದರಲ್ಲೂ ಸಮ್ಮಿಶ್ರ ಸರ್ಕಾರದಲ್ಲಿ ಈ ಲೆಕ್ಕಾಚಾರ ಇನ್ನೂ ಕಷ್ಟ. ಭಾರತದ ಎಲ್ಲ ರಾಜ್ಯಗಳು, ಎಲ್ಲ ಸಮುದಾಯಗಳನ್ನೂ ಸಂಪುಟ ರಚನೆಯ ಹದದೊಳಗೆ ತರಬೇಕಾಗುತ್ತದೆ. ಬಿಜೆಪಿ ಸ್ವತಂತ್ರವಾಗಿ 303 ಸ್ಥಾನ ಪಡೆದಿದೆ. ಆದರೂ ಮೋದಿ, ಮೈತ್ರಿ ಪಕ್ಷಗಳ ಸದಸ್ಯರನ್ನು ಸಂಪುಟದೊಳಗೆ ಸೇರಿಸಿಕೊಳ್ಳುವ ತೀರ್ಮಾನ ಮಾಡಿದ್ದಾರೆ.
ಮೈತ್ರಿಪಕ್ಷಗಳು, ವಾಜಪೇಯಿ ಮತ್ತು ಮಂತ್ರಿಮಂಡಲ- ಮೊದಲ ಬಾರಿ ಎನ್‌ಡಿಎ ಮೈತ್ರಿಕೂಟವನ್ನು ಪೂರ್ಣಾವಧಿಗೆ ನಡೆಸಿದ ಶ್ರೇಯಸ್ಸು ವಾಜಪೇಯಿಗೆ ಸಲ್ಲುತ್ತದೆ. ಅದಕ್ಕೂ ಮುಂಚೆ ಅವರು ಎರಡು ಬಾರಿ ಈ ಯತ್ನದಲ್ಲಿ ವಿಫ‌ಲವಾಗಿದ್ದರು. 1999ರಷ್ಟೊತ್ತಿಗೆ ತಮ್ಮ ಮೈತ್ರಿಕೂಟದಲ್ಲಿ ಹಲವಾರು ಪಕ್ಷಗಳನ್ನು ಸೇರಿಸಿಕೊಂಡು ವಾಜಪೇಯಿ ಚುನಾವಣೆ ಎದುರಿಸಿದ್ದರು. ಆಗ ಬಿಜೆಪಿಗೆ ಆತ್ಮವಿಶ್ವಾಸವೂ ಬಂದಿತ್ತು, ಸಮ್ಮಿಶ್...
1999ರಿಂದ 2004ರವರೆಗೆ ನಡೆದ ಸರ್ಕಾರ ವಾಜಪೇಯಿಗೆ ತೇಪೆ ಹಾಕುವ ಅನಿವಾರ್ಯತೆಯಿತ್ತು. ಕೇವಲ ತನ್ನ ಪಕ್ಷದೊಳಗಿರುವ ಬೇರೇ ಬೇರೆ ಹಿತಾಸಕ್ತಿಗಳು ಮಾತ್ರವಲ್ಲ, ಮೈತ್ರಿಪಕ್ಷಗಳಾದ ಡಿಎಂಕೆ ಮತ್ತದರ ತಮಿಳು ಹಿಂಬಾಲಕರನ್ನು ತೃಪ್ತಿಪಡಿಸುವುದರಿಂದ ಹಿಡಿದು ಜೆಡಿಯು, ತೃಣಮೂಲ ಕಾಂಗ್ರೆಸ್‌, ಅಕಾಲಿದಳ, ಶಿವಸೇನೆವರೆಗಿನ ಭಿನ್ನ ಆಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿತ್ತು.
ಸಮತಾ ಪಕ್ಷದ (ನಂತರ ಜೆಡಿಯುನೊಳಗೆ ವಿಲೀನಗೊಂಡಿತು) ನೇತಾರರಾಗಿದ್ದ ಜಾರ್ಜ್‌ ಫೆರ್ನಾಂಡಿಸ್‌, ಆಗ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸೇರಿದ ಮೊದಲ ಪ್ರಮುಖ ಜಾತ್ಯತೀತ ನಾಯಕ. ಅದಕ್ಕೆ ಪ್ರತಿಫ‌ಲವಾಗಿ ಅವರಿಗೆ ರಕ್ಷಣಾ ಖಾತೆಯನ್ನು ನೀಡಲಾಯಿತು. ಇದರ ಜೊತೆಗೆ ಭದ್ರತೆಗೆ ಸಂಬಂಧಿಸಿದಂತೆ ಸಂಪುಟ ಸಮಿತಿಯಲ್ಲೂ ಒಂದು ಸ್ಥಾನವಿತ್ತು.
ಫೆರ್ನಾಂಡಿಸ್‌ ಅವರ ಸಹವರ್ತಿಗಳಾದ ನಿತೀಶ್‌ ಕುಮಾರ್‌ ಮತ್ತು ಶರದ್‌ ಯಾದವ್‌ ಅವರಿಗೆ ಕ್ರಮವಾಗಿ ರೈಲ್ವೆ ಮತ್ತು ಕಾರ್ಮಿಕ ಸಚಿವಾಲಯಗಳನ್ನು ನೀಡಲಾಯಿತು. ಮೊದಲು ಭಾರೀ ಕೈಗಾರಿಕಾ ಸಚಿವರಾಗಿದ್ದ ಶಿವಸೇನಾದ ಮನೋಹರ್‌ ಜೋಷಿಯನ್ನು ನಂತರ ಲೋಕಸಭಾ ಸ್ಪೀಕರ್‌ ಆಗಿಸಲಾಯಿತು. ಶಿವಸೇನಾದ ಇನ್ನೊಬ್ಬ ನಾಯಕ ಸುರೇಶ್‌ ಪ್ರಭು ಅವರಿಗೆ ಇಂಧನ ಖಾತೆ ನೀಡಲಾಯಿತು.
ಎಲ್‌ಜೆಪಿ ನಾಯಕ ರಾಂ ವಿಲಾಸ್‌ ಪಾಸ್ವಾನ್‌ ಅವರಿಗೆ ಆಕರ್ಷಕ ಸಂವಹನ ಖಾತೆ ನೀಡ ಲಾಯಿತು. ಬಿಜೆಡಿಯ ನವೀನ್‌ ಪಟ್ನಾಯಕ್‌ಗೆ ಗಣಿಗಾರಿಕೆ, ಡಿಎಂಕೆಯ ಮುರಸೋಲಿ ಮಾರನ್‌, ಟಿ.ಆರ್‌.ಬಾಲುಗೆ ಕ್ರಮವಾಗಿ ವಾಣಿಜ್ಯ ಮತ್ತು ಕೈಗಾರಿಕೆ, ಪರಿಸರ ಮತ್ತು ಅರಣ್ಯ ಖಾತೆಯನ್ನು ಹಂಚಲಾಯಿತು. ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾಗೆ ಅವರು ಸಮ್ಮಿಶ್ರ ಸರ್ಕಾರದಲ್ಲಿ ಇರುವವರೆಗೆ ರೈಲ್ವೆ ಖಾತೆಯನ್ನು ವಹಿಸಲಾಗಿತ್ತು.
ಪ್ರಾದೇಶಿಕತೆ ಮತ್ತು ಸಮುದಾಯಗಳು: ಉತ್ತರಪ್ರದೇಶವನ್ನು ಸ್ವತಃ ವಾಜಪೇಯಿ ಪ್ರತಿನಿಧಿ ಸುತ್ತಿದ್ದರು. ಅವರ ಜೊತೆಗೆ ಮುರಳಿ ಮನೋಹರ್‌ ಜೋಷಿ, ಸಂತೋಷ್‌ ಗಂಗ್ವಾರ್‌, ಮನೇಕಾ ಗಾಂಧಿ ಇನ್ನಿತರರೂ ಇದ್ದರು. ಅಡ್ವಾಣಿ ಗುಜರಾತನ್ನು ಪ್ರತಿನಿಧಿ ಸುತ್ತಿದ್ದರು. ಜಸ್ವಂತ್‌ ಸಿಂಗ್‌ ರಾಜಸ್ಥಾನದ ಮುಖ ವಾಗಿದ್ದರು. ಬಿಹಾರಕ್ಕೆ ದೊಡ್ಡ ಪಾಲು ಸಿಕ್ಕಿತ್ತು.
ಯಶ್ವಂತ್‌ ಸಿನ್ಹಾ, ನಿತೀಶ್‌ ಕುಮಾರ್‌, ಶತೃಘ್ನ ಸಿನ್ಹಾ, ಶಹನವಾಜ್‌ ಹುಸೇನ್‌, ರವಿಶಂಕರ್‌ ಪ್ರಸಾದ್‌, ಸಂಜಯ್‌ ಪಾಸ್ವಾನ್‌, ರಾಜೀವ್‌ ಪ್ರತಾಪ್‌ ರೂಡಿ ಎಲ್ಲ ಬಿಹಾರದ ಪ್ರತಿನಿಧಿಗಳು. ಮಧ್ಯಪ್ರದೇಶದಿಂದ ಸುಂದರ್‌ಲಾಲ್‌ ಪತ್ವಾ, ಉಮಾಭಾರತಿ, ಸುಮಿತ್ರಾ ಮಹಾಜನ್‌, ಪ್ರಹ್ಲಾದ್‌ ಪಟೇಲ್‌ ಸಚಿವರಾಗಿದ್ದರು. ಆದಿವಾಸಿಗಳಾದ ಕರಿಯ ಮುಂಡಾ, ಬಾಬುಲಾಲ್‌ ಮರಾಂಡಿ ಜಾರ್ಖಂಡ್‌ನ‌ ಪ್ರತಿನಿಧಿಗಳಾಗಿದ್ದರ...
ರಾಮ್‌ನಾಯಕ್‌, ಪ್ರಮೋದ್‌ ಮಹಾಜನ್‌, ಬಾಳಾ ಸಾಹೇಬ್‌ ವಿಖೆ ಪಾಟೀಲ್‌, ಅಣ್ಣಾ ಸಾಹೇಬ್‌ ಪಾಟೀಲ್‌, ವೇದಪ್ರಕಾಶ್‌ ಗೋಯಲ್‌, ಜಯವಂತಿಬೆನ್‌ ಮೆಹ್ತಾ ಸರ್ಕಾರದಲ್ಲಿದ್ದರು. ಆಗ ಆಂಧ್ರಪ್ರದೇಶದಿಂದ ಬಿಜೆಪಿಗೆ ಬಹುತೇಕ ಸಂಸದರೇ ಇರಲಿಲ್ಲ. ಆದರೂ ವೆಂಕಯ್ಯ ನಾಯ್ಡು, ಬಂಗಾರು ಲಕ್ಷ್ಮಣ್‌, ಬಂಡಾರು ದತ್ತಾತ್ರೇಯ, ವಿದ್ಯಾಸಾಗರ್‌ ರಾವ್‌ ಸರ್ಕಾರದಲ್ಲಿ ಸೇರಿಕೊಂಡಿದ್ದರು. ತಮಿಳುನಾಡು ಕೂಡ ಹಲವು ಸಚಿವರನ್...
ದ್ರಾವಿಡ ಪಕ್ಷಗಳನ್ನು ಅವರು ಪ್ರತಿನಿಧಿಸುತ್ತಿದ್ದರು. ಪಿ.ಆರ್‌.ಕುಮಾರಮಂಗಲಂ, ತಿರುನವುಕ್ಕರಸರ್‌ ಆಗ ಸ್ಥಾನ ಪಡೆದಿದ್ದರು. ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಓಮರ್‌ ಅಬ್ದುಲ್ಲಾ, ಚಮನ್‌ಲಾಲ್‌ ಗುಪ್ತಾ ಅವರು ಜಮ್ಮುಕಾಶ್ಮೀರದ ಪ್ರತಿನಿಧಿಗಳಾಗಿ ಸಂಪುಟ ಸೇರಿದ್ದರು. ವಾಜಪೇಯಿ, ಜೋಷಿ, ಸುಷ್ಮಾ ಸ್ವರಾಜ್‌, ಮಹಾಜನ್‌, ಜೇಟ್ಲಿ, ಶಾಂತಕುಮಾರ್‌, ಅನಂತ್‌ ಕುಮಾರ್‌ ಬ್ರಾಹ್ಮಣರಾಗಿದ್ದರೆ, ಜಸ್ವಂತ್...
ರಾಮ್‌ ಜೇಠ್ಮಲಾನಿಯಂತೆ ಅಡ್ವಾಣಿ ಸಿಂಧಿ ಸಮುದಾಯದ ಮುಖವಾಗಿದ್ದರು. ಪಾಸ್ವಾನ್‌, ಸತ್ಯನಾರಾಯಣ್‌ ಜತಿಯಾ, ಕೈಲಾಶ್‌ ಮೇಘಾಲ್‌, ಸಂಜಯ್‌ ಪಾಸ್ವಾನ್‌ ದಲಿತ ವರ್ಗದವರಾಗಿದ್ದರು. ಉಮಾ ಭಾರತಿ, ಪ್ರಹ್ಲಾದ್‌ ಪಟೇಲ್‌ ಲೋಧ್‌ ರಜಪೂತರಾಗಿದ್ದರು. ಸುಂದರ್‌ಲಾಲ್‌ ಪತ್ವಾ ಮತ್ತು ವೇದಪ್ರಕಾಶ್‌ ಗೋಯಲ್‌ ವೈಶ್ಯರಾಗಿದ್ದರು.
ಸಾಹಿಬ್‌ ಸಿಂಗ್‌ ವರ್ಮ ಜಾಟರಾಗಿದ್ದರೆ, ಇಬ್ಬರು ಸಿನ್ಹಾಗಳು ಮತ್ತು ಪ್ರಸಾದ್‌ ಕಾಯಸ್ಥರಾಗಿದ್ದರು. ನಿತೀಶ್‌, ಶರದ್‌ ಯಾದವ್‌, ನಾಗಮಣಿ ಇತರೆ ಹಿಂದುಳಿದ ಜಾತಿಯವರಾಗಿದ್ದರು. ಇಂಡಿಯನ್‌ ಫೆಡರಲ್‌ ಡೆಮಾಕ್ರ್ಯಾಟಿಕ್‌ ಪಕ್ಷದ ಪಿ.ಸಿ.ಥಾಮಸ್‌ ಕೇರಳ ಮತ್ತು ಕೈಸ್ತ ಸಮುದಾಯದ ಗುರುತಾಗಿದ್ದರು. ಫೆರ್ನಾಂಡಿಸ್‌ ಬಿಹಾರ ಮತ್ತು ಕೈಸ್ತ ಸಮುದಾಯದ ಧ್ವನಿಯಾಗಿದ್ದರು. ಮಮತಾ ಪ.ಬಂಗಾಳಕ್ಕೇ ಆಶಯಗಳ ಸಂಕೇತವ...
ಮನಮೋಹನ್‌ ಸಂಪುಟ: ಒಂದು ಜನಪ್ರಿಯ ವದಂತಿಯೊಂದು ಈಗಲೂ ಚಾಲ್ತಿಯಲ್ಲಿದೆ. ವಾಜಪೇಯಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಟಾಗ, ನೂತನ ಪ್ರಧಾನಿ ಮನಮೋಹನ್‌ಗೆ ಒಂದು ಸಲಹೆ ನೀಡಿದ್ದರಂತೆ. ಭದ್ರತೆಗೆ ಸಂಬಂಧಪಟ್ಟ ಖಾತೆಯನ್ನು ಮೈತ್ರಿಪಕ್ಷಗಳಿಗೆ ನೀಡಲೇಬೇಡಿ ಎನ್ನುವುದು ಆ ಸಲಹೆಯಾಗಿತ್ತಂತೆ! ಅದರ ಪರಿಣಾಮವೋ ಏನೋ, ನಾಲ್ಕು ಅಗ್ರಖಾತೆಗಳಾದ ಗೃಹ, ರಕ್ಷಣೆ, ವಿದೇಶಾಂಗ ಮತ್ತು ವಿತ್ತವನ್ನು ಕಾಂಗ್ರೆಸ್...
2009ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ 262 ಸ್ಥಾನ ಗೆದ್ದಿತು, ಇವುಗಳಲ್ಲಿ 206 ಸ್ಥಾನಗಳು ಕಾಂಗ್ರೆಸ್‌ನದ್ದೇ ಆಗಿದ್ದವು. ಸೋನಿಯಾ-ಮನಮೋಹನ್‌ ಜೋಡಿ ಎನ್‌ಡಿಎದ ಮಾದರಿಯನ್ನು ಅನುಸರಿಸಿ, ಮೈತ್ರಿಪಕ್ಷಗಳಿಗೆ ಪ್ರಮುಖ ಖಾತೆಗಳನ್ನು ನೀಡಿತು. ಎನ್‌ಸಿಪಿ ಮುಖ್ಯಸ್ಥ ಶರದ್‌ಪವಾರ್‌ ಕೃಷಿ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸರಬರಾಜು ಸಚಿವರಾದರೆ, ಡಿಎಂಕೆಯ ಟಿಆರ್‌ ಬಾಲುಗೆ ಸಾರಿಗೆ, ಆರ್‌ಜೆಡಿಯ ಲಾಲೂ...
ಎ.ಆರ್‌. ಅಂಟುಲೆ, ಸೈಫ‌ುದ್ದೀನ್‌ ಸೋಝ್ ಮತ್ತು ಇ.ಅಹಮ್ಮದ್‌ನಂಥ ಮುಸ್ಲಿಂ ನಾಯಕರು, ಎ.ಕೆ. ಆ್ಯಂಟನಿ, ಆಸ್ಕರ್‌ರಂಥ ಕ್ರಿಶ್ಚಿಯನ್‌ ನಾಯಕರು, ಸುಶೀಲ್‌ ಶಿಂದೆ, ಮೀರಾ ಕುಮಾರ್‌, ಮಹಾ ವೀರ್‌ ಪ್ರಸಾದ್‌ರಂಥ ದಲಿತ ಪ್ರತಿನಿಧಿಗಳು, ಸಂತೋಷ್‌ ಮೋಹನ್‌, ಹ್ಯಾಂಡಿಕ್‌ರಂಥ ಈಶಾನ್ಯದ ಪ್ರತಿನಿಧಿಗಳು ಕೇಂದ್ರ ಸಂಪುಟದ ಭಾಗವಾದರು. ಯುಪಿಎ-2ರ ಸಚಿವ ಸಂಪುಟದಲ್ಲೂ ಯುಪಿಎ-1ರಲ್ಲಿದ್ದ ಅನೇಕ ನಾಯಕರು ಇದ್ದರ...
ಮೋದಿ ಮೊದಲ ಕ್ಯಾಬಿನೆಟ್‌: ಪೂರ್ಣ ಬಹುಮತದೊಂದಿಗೆ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿಯವರು ತಮ್ಮ ಮಿತ್ರಪಕ್ಷಗಳಿಗೆ ಸಂಪುಟದಲ್ಲಿ ಅಷ್ಟೊಂದು ಮನ್ನಣೆ ನೀಡಲಿಲ್ಲ. ಆದಾಗ್ಯೂ ಎನ್‌ಜೆಪಿಯ ಪಾಸ್ವಾನ್‌, ಶಿವಸೇನೆಯ ಅನಂತ ಗೀತೆ, ಮತ್ತು ಎಸ್‌ಎಡಿಯ ಹರಸಿಮ್ರತ್‌ ಕೌರ್‌ಗೆ ತಮ್ಮ ಸರ್ಕಾರದಲ್ಲಿ ಅಧಿಕಾರ ನೀಡಿದರಾದರೂ, ಇವರಿಗೆಲ್ಲ ಪ್ರಮುಖ ಸ್ಥಾನಗಳನ್ನೇನೂ ನೀಡಲಿಲ್ಲ. ಜೆಡಿಯುಗಂತೂ ರಾಜ್ಯಸಭೆಯಲ್ಲಿ ಡೆ...
'ಚಲನಚಿತ್ರ ಅಕಾಡೆಮಿ ಪ್ರಶಸ್ತಿ': ಯಾರ್ಯಾರಿಗೆ, ಯಾವ ಕ್ಷೇತ್ರಕ್ಕೆ? | Chalanachitra Academy Awards 2016: Profile of Winners - Kannada Filmibeat
| Updated: Wednesday, March 1, 2017, 11:06 [IST]
2015-16ನೇ ಸಾಲಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ 15 ಜನ ಸಾಧಕರಿಗೆ ಈ ಬಾರಿ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.[ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಸೇರಿದಂತೆ 15 ಜನರಿಗೆ 'ಅಕಾಡೆಮಿ ಪ್ರಶಸ್ತಿ]
ನಟ ಶ್ರೀನಿವಾಸ ಮೂರ್ತಿ, ದೊಡ್ಡಣ್ಣ, ಹಾಸ್ಯ ನಟ ಎಂ.ಎಸ್. ಉಮೇಶ್, ಬಿವಿ ರಾಧ, ಸೇರಿದಂತೆ ವಿವಿಧ ಕ್ಷೇತ್ರದ 15 ಕಲಾವಿದರಿಗೆ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ. 2015-16ನೇ ಸಾಲಿನಲ್ಲಿ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪಡೆದವರ ಪಟ್ಟಿ ಮತ್ತು ಅವರ ಕಿರು ಪರಿಚಯ ಇಲ್ಲಿದೆ.
'ಆರ್.ನಾಗೇಂದ್ರ ರಾವ್ ಪ್ರಶಸ್ತಿ'-ಶ್ರೀನಿವಾಸ ಮೂರ್ತಿ
ಕನಾರ್ಟಕ ಚಲನಚಿತ್ರ ಅಕಾಡೆಮಿ ವತಿಯಿಂದ, ಆರ್.ನಾಗೇಂದ್ರ ರಾವ್ ಅವರ ಹೆಸರಲ್ಲಿ ನೀಡಲಾಗುವ 'ಅಭಿನಯ ನಟ' ಪ್ರಶಸ್ತಿಗೆ, ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರನ್ನ ಆಯ್ಕೆ ಮಾಡಲಾಗಿದೆ. ಡಾ.ಸಿದ್ದಲಿಂಗಯ್ಯ ಅವರ 'ಹೇಮಾವತಿ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪರಿಚಯವಾದ ಶ್ರೀನಿವಾಸ ಮೂರ್ತಿ, 'ಕವಿರತ್ನ ಕಾಳಿದಾಸ', 'ಕೆರೆಳಿದ ಸಿಂಹ', 'ವಸಂತ ಗೀತೆ', 'ಹೊಸ ಬೆಳಕು', 'ಭಕ್ತ ಸಿರಿಯಾಳ', ಸೇರಿದಂತೆ 250 ...
'ಎಂ.ವಿ.ರಾಜಮ್ಮ ಪ್ರಶಸ್ತಿ'-ಆದವಾನಿ ಲಕ್ಷ್ಮೀದೇವಿ
60-70ರ ದಶಕದ ಖ್ಯಾತ ಪೋಷಕ ನಟಿ ಆದವಾನಿ ಲಕ್ಷ್ಮೀದೇವಿ. ಮೂಲತಃ ಗುಬ್ಬಿ ಕಂಪನಿ, ಕಟೀಲು ಕಂಪನಿಯ ನಾಟಕಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ಲಕ್ಷ್ಮೀದೇವಿ, 1957 ರಲ್ಲಿ 'ಭಕ್ತ ವಿಜಯ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ 'ಶುಕ್ರದೆಸೆ' ಚಿತ್ರದಲ್ಲಿ ನಾಯಕಿಯಾಗಿ ಆವಕಾಶ ಪಡೆದ ಈ ನಟಿ, 'ದಶಾವತಾರ', 'ಕಲಿತರೂ ಹೆಣ್ಣೇ', 'ಶ್ರೀ ರಾಮಾಂಜನೇಯ ಯುದ್ಧ', 'ವೀರ ಸಂಕಲ್ಪ', ಸೇರಿದಂತೆ ಹಲವರ...
'ಪಂಡರೀಬಾಯಿ ಪ್ರಶಸ್ತಿ'-ಬಿ.ವಿ.ರಾಧಾ
ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಬಿ.ವಿ ರಾಧ ಅವರು, ಇದುವರೆಗೂ 175ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ನವಕೋಟಿ ನಾರಾಯಣ' ಚಿತ್ರದಿಂದ ಆರಂಭವಾದ ಇವರ ಸಿನಿ ಪಯಣದಲ್ಲಿ, ನಾಯಕಿಯಾಗಿ, ಎರಡನೇ ನಾಯಕಿಯಾಗಿ, ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 'ದೇವರು ಕೊಟ್ಟ ತಂಗಿ', 'ಬೆಂಗಳೂರು ಮೈಲ್', 'ಅನೀರಿಕ್ಷಿತ', 'ಯಾವ ಜನ್ಮದ ಮೈತ್ರಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿ...
'ಬಾಲಕೃಷ್ಣ ಪ್ರಶಸ್ತಿ'-ಎಂ.ಎಸ್ ಉಮೇಶ್
1960 ರಲ್ಲಿ ಮೂಡಿಬಂದ 'ಮಕ್ಕಳ ರಾಜ್ಯ' ಚಿತ್ರದ ಮೂಲಕ ಬಾಲನಟನಾಗಿ ಎಂಟ್ರಿ ಕೊಟ್ಟ ಎಂ.ಎಸ್ ಉಮೇಶ್, ಹಾಸ್ಯ ನಟನಾಗಿ 220ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಮುನಿತಾಯಿ' ಚಿತ್ರದ ಪೋಷಕ ನಟನೆಗಾಗಿ ಅತ್ಯುತ್ತಮ ರಾಜ್ಯ ಪ್ರಶಸ್ತಿ ನೀಡಿದೆ. ಈಗ ಅಕಾಡೆಮಿ ಹಾಸ್ಯ ನಟ ಬಾಲಕೃಷ್ಣ ಅವರ ಹೆಸರಲ್ಲಿ ನೀಡುವ ಹಾಸ್ಯ ನಟ ಪ್ರಶಸ್ತಿಯನ್ನ ನೀಡಿ ಗೌರವಿಸುತ್ತಿದೆ.
'ತೂಗುದೀಪ ಶ್ರೀನಿವಾಸ್ ಪ್ರಶಸ್ತಿ'-ದೊಡ್ಡಣ್ಣ
ತೂಗುದೀಪ ಶ್ರೀನಿವಾಸ್ ಅವರ ನೆನಪಿನಲ್ಲಿ ನೀಡುವ ಖಳ ನಟ ಪ್ರಶಸ್ತಿಯನ್ನ ಈ ಬಾರಿ ನಟ ದೊಡ್ಡಣ್ಣ ಅವರಿಗೆ ನೀಡಲಾಗುತ್ತಿದೆ. ಸುಮಾರು 200 ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ದೊಡ್ಡಣ್ಣ ಅವರ ಮೊದಲ ಚಿತ್ರ ''ಕೂಡಿ ಬಾಳಿದರೇ ಸ್ವರ್ಗ ಸುಖ''. ಖಳನಟ, ಹಾಸ್ಯ ನಟನಾಗಿ ವಿಶೇಷ ಗಮನ ಸೆಳೆದಿರುವ ದೊಡ್ಡಣ್ಣ, 'ಬೆಳ್ಳಿ ಮೋಡಗಳು', 'ರಾಣಿ ಮಹಾರಣಿ', 'ಹಲೋ ಯಮ', 'ಸಿ.ಬಿ.ಐ ಶಂಕರ್', 'ರಣಚಂಡಿ', 'ಪ್ರಜಾಶಕ್...
ಬಿ.ಆರ್.ಪಂತುಲು ಪ್ರಶಸ್ತಿ-ಕೆ.ವಿ ರಾಜು
ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ ಹಾಗೂ ಚಿತ್ರಸಾಹಿತಿ ಕೆ.ವಿ ರಾಜು. 'ಬಂಧಮುಕ್ತ', 'ಸಂಗ್ರಾಮ', 'ಅಭಿಜಿತ್', 'ಯುದ್ಧಕಾಂಡ', 'ಇಂದ್ರಜಿತ್', 'ಸುಂದರಕಾಂಡ', 'ಬೆಳ್ಳಿಮೋಡಗಳು', 'ಬೆಳ್ಳಿಕಾಲುಂಗುರ', 'ಹುಲಿಯಾ' ಹೀಗೆ ಇವರ ನಿರ್ದೇಶನದಲ್ಲಿ ಬಂದ ಬಹುತೇಕ ಎಲ್ಲ ಸಿನಿಮಾವೂ ಸೂಪರ್ ಹಿಟ್ ಚಿತ್ರಗಳೇ. 50ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಹೀಗಾಗಿ, ಅಕಾಡೆ...
'ಶಂಕರ್ ಸಿಂಗ್ ಪ್ರಶಸ್ತಿ'-ಸಿ.ಜಯರಾಂ
ಸದಭಿರುಚಿಯ ಚಿತ್ರಗಳಿಗೆ ಹಸೆರು ವಾಸಿಯಾದವರು ನಿರ್ಮಾಪಕ ಸಿ.ಜಯರಾಂ. 'ಪಾವನಾಗಂಗಾ', 'ಅನುಪಮಾ', 'ನಾ ನಿನ್ನ ಬಿಡಲಾರೆ', 'ರಾಮಾಪುರದ ರಾವಣ' ಮುಂತಾದ ಚಿತ್ರಗಳನ್ನ ನಿರ್ಮಿಸಿದ ಖ್ಯಾತಿ ಇವರದ್ದು. ರಾಜ್ ಕುಮಾರ್ ಅಭಿನಿಯಿಸಿದ್ದ 'ಕಾಮನಬಿಲ್ಲು' ಚಿತ್ರಕ್ಕೂ ಬಂಡವಾಳ ಹಾಕಿದ್ದರು.
'ಜಿವಿ ಅಯ್ಯರ್ ಪ್ರಶಸ್ತಿ'-ಬಿ.ಕೆ.ಸುಮಿತ್ರಾ
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಜಿವಿ ಅಯ್ಯರ್ ಪ್ರಶಸ್ತಿ ಬಿ.ಕೆ ಸುಮಿತ್ರಾ ಅವರ ಮುಡಿಗೇರಿಸಿಕೊಂಡಿದ್ದಾರೆ. ''ಮಧುರ ಮಧುರುವೀ ಮಂಜುಳ ಗಾನ'' ಹಾಡಿನ ಮೂಲಕ ಪ್ರಸಿದ್ದರಾದ ಸುಮಿತ್ರಾ ಅವರು, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಗಾಯಕಿಯಾಗಿದ್ದಾರೆ. ಇವರು 'ಕನ್ನಡದ ಕೋಗಿಲೆ' ಎಂದೇ ಹೆಸರು ವಾಸಿ. ಜಿವಿ ಅಯ್ಯರ್ ಪ್ರಶಸ್ತಿಯನ್ನ ಈ ಬಾರಿ ಗಾಯಕಿ ಬಿ.ಕೆ.ಸುಮಿತ್ರಾ ಅವರು ಪಡೆಯುತ್ತಿದ...
'ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ'-ಡಾ.ಬಿ.ಎಲ್ ವೇಣು
ಡಾ.ಬಿ.ಎಲ್ ವೇಣು ಚಿತ್ರಕಥಾ, ಸಂಭಾಷಣೆ, ಕಾದಂಬರಿಕಾರರಾಗಿದ್ದರು. 25 ಕಾದಂಬರಿ, 5 ಕಥಾ ಸಂಕಲನ, 4ನಾಟಕಗಳನ್ನ ರಚಿಸಿರುವ ಬಿ.ಎಲ್ ವೇಣು ಅವರು ಮೊದಲು ಸಂಭಾಷಣೆ ರಚಿಸಿದ ಚಿತ್ರ 'ದೊಡ್ಮನೆ ಎಸ್ಟೇಟ್', 'ಪರಾಜಿತ್', 'ಅಜೇಯ', 'ಪ್ರೀತಿ ವಾತ್ಸಲ್ಯ', 'ಪ್ರೇಮಜಾಲ', 'ರಾಮಾರಾಜ್ಯದಲ್ಲಿ ರಾಕ್ಷಸರು' ಚಿತ್ರಗಳು ಅದೇ ಹೆಸರಿನಲ್ಲಿ ವೇಣು ಅವರು ರಚಿಸಿದ್ದ ಕಾಧಂಬರಿ ಆಧಾರಿತ ಚಿತ್ರಗಳು. 'ಒಲವಿನ ಉಡುಗೊರ...
'ಎಸ್. ರಂಗ ಪ್ರಶಸ್ತಿ'-ಎಸ್.ವಿ.ಶ್ರೀಕಾಂತ್
ಕನನಡ ಚಿತ್ರರಂಗದ ಪ್ರತಿಭಾಶಾಲಿ ಛಾಯಗ್ರಾಹಕ ಎಸ್.ವಿ ಶ್ರೀಕಾಂತ್. ಜೀವನ ತರಂಗ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಛಾಯಾಗ್ರಾಹಕರಾದ ಶ್ರೀಕಾಂತ್, 'ಮಾರ್ಗದರ್ಶಿ', 'ಗೆಜ್ಜೆಪೂಜೆ', 'ಉಪಾಸನೆ' ಮೊದಲಾದ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಈ ಮೂರು ಚಿತ್ರಗಳಿಗೂ ಶ್ರೀಕಾಂತ್ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ.
'ಎಂ.ಪಿ ಶಂಕರ್ ಪ್ರಶಸ್ತಿ'- ದೇವಿ
ಭರತನಾಟ್ಯ, ಕುಚುಪುಡಿ, ಕಥಕ್ಕಳಿ, ಮಣಿಪುರಿ ನೃತ್ಯಗಳಲ್ಲಿ ಪರಿಶ್ರಮ ಹೊಂದಿದ್ದ ದೇವಿ, ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಿಗೆ ಸಹ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ರಾಜ್ ಕುಮಾರ್ 25 ಚಿತ್ರಗಳಿಗೆ ಸಹ ನೃತ್ಯ ನಿರ್ದೇಶಕಿಯಾಗಿದ್ದಾರೆ. ಸ್ವತಂತ್ರ ನಿರ್ದೇಶಕಿಯಾಗದೆ, ತಮ್ಮ ಉಡುಪಿ ಜಯಾರಂ ಅವರು ಸಹಾಯಕಿಯಾಗಿಯೇ ಗುರುತಿಸಿಕೊಂಡಿದ್ದರು.
'ಶಂಕರ್ ನಾಗ್ ಪ್ರಶಸ್ತಿ' -ಎನ್.ಎಲ್.ರಾಮಣ್ಣ
ಚಲನಚಿತ್ರ ನಿರ್ಮಾಣ ನಿರ್ವಾಹಕಾರಗಿ ಕಳೆದ 5 ದಶಕಗಳಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ ರಾಮಣ್ಣ. 1964 ರಲ್ಲಿ ಶಿವಗಂಗಾ ಮಹಾಥ್ಮೆ ಚಿತ್ರದ ಮೂಲಕ ನಿರ್ಮಾಣ ನಿರ್ವಾಹಕರಾದ ರಾಮಣ್ಣ, ಇದುವೆರೆಗೂ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
'ಕೆ.ಎನ್.ಟೈಲರ್ ಪ್ರಶಸ್ತಿ'-ರಾಮ್ ಶೆಟ್ಟಿ
ಮೂಲತಃ ಮಂಗಳೂರಿನವರದಾ ರಾಮ ಶೆಟ್ಟಿ ಅವರು 750ಕ್ಕು ಹೆಚ್ಚು ಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿದ್ದಾರೆ. ಕನ್ನಡ, ಹಿಂದಿ, ಸೇರಿದಂತೆ ಮಾತೃಭಾಷೆ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣಕಾರರಾಗಿ ದುಡಿದಿದ್ದಾರೆ.
ವೀರಾಸ್ವಾಮಿ ಪ್ರಶಸ್ತಿ ಮತ್ತು ಬಿ ಜಯಮ್ಮ ಪ್ರಶಸ್ತಿ
ಶ್ರೀ ಸಿದ್ದಲಿಂಗೇಶ್ವರ ಎಂಟರ್ ಪ್ರೈಸಸ್ ಮಾಲೀಕರು ಕುಮಾರ್ ಶೆಟ್ಟರಿಗೆ, ಬಿ ಜಯಮ್ಮ ಪ್ರಶಸ್ತಿ ಲಭಿಸಿದೆ. ಕನ್ನಡ ಮತ್ತು ಮುಂಬೈನ ದೊಡ್ಡ ಚಿತ್ರಗಳನ್ನ ವಿತರಿಸುತ್ತಾ ಬಂದಿರುವ ಪಾಲ್ ಎಸ್ ಚಂದಾನಿ ವೀರಾಸ್ವಾಮಿ ಪ್ರಶಸ್ತಿ ನೀಡಲಾಗುತ್ತಿದೆ.
Read more about: karnataka chalanachitra academy kannada film industry award doddanna srinivas murthy sandalwood ಕರ್ನಾಟಕ ಚಲನಚಿತ್ರ ಅಕಾಡೆಮಿ ಕನ್ನಡ ಚಿತ್ರರಂಗ ಪ್ರಶಸ್ತಿ ದೊಡ್ಡಣ್ಣ ಶ್ರೀನಿವಾಸ ಮೂರ್ತಿ ಸ್ಯಾಂಡಲ್ ವುಡ್