text stringlengths 0 61.5k |
|---|
The Karnataka Chalanachitra Academy has announced its annual awards for Kannada film Personalities. Here is a brief profile of the winners. |
ತುಳಸಿ; ಪೂಜೆಗಷ್ಟೇ ಅಲ್ಲ, ಆದಾಯಕ್ಕೂ | Prajavani |
ತುಳಸಿ; ಪೂಜೆಗಷ್ಟೇ ಅಲ್ಲ, ಆದಾಯಕ್ಕೂ |
–ಲೋಕೇಶ ಡಿ. |
ತುಳಸಿಯನ್ನು ಕೊಳ್ಳುವವರು ಹೆಚ್ಚು. ಆದರೆ ಬೆಳೆಯುವವರ ಸಂಖ್ಯೆ ಕಡಿಮೆ. ಈ ಲೆಕ್ಕಾಚಾರ ಗುಬ್ಬಿ ತಾಲ್ಲೂಕು ಕಳ್ಳಿಪಾಳ್ಯದ ಲಕ್ಷ್ಮೀದೇವಮ್ಮ ಅವರಲ್ಲೂ ಬಂತು. ಆ ಲೆಕ್ಕಾಚಾರದ ಹಾಗೆಯೇ ತುಳಸಿ ಬೆಳೆದರು. ತುಳಸಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆದು ಲಾಭ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟರು. |
ಎಂಟು ವರ್ಷಗಳಿಂದಲೂ ತುಳಸಿ ಬೆಳೆದುಕೊಂಡು ಬಂದಿದ್ದಾರೆ ಲಕ್ಷ್ಮೀ ದೇವಮ್ಮ. ತೆಂಗು, ಅಡಿಕೆ, ಬಾಳೆ, ರಾಗಿ ಇವುಗಳ ಮಧ್ಯೆ ಮಿಶ್ರ ಬೆಳೆಯಾಗಿ ಇದನ್ನು ಕೈಗೊಂಡಿದ್ದಾರೆ. ಗಿಡದಿಂದ ಗಿಡಕ್ಕೆ 1 ಅಡಿ ಅಂತರ, ಸಾಲಿನಿಂದ ಸಾಲಿಗೆ 2 ಅಡಿ ಬಿಟ್ಟು ನಾಟಿ ಮಾಡಿದ್ದಾರೆ. ನಾಟಿ ಮಾಡಿದ ದಿನದಿಂದ ಒಂದು ತಿಂಗಳಿಗೆ ತುಳಸಿ ಪತ್ರೆ ಕೊಯ್ಲು ಪ್ರಾರಂಭಿಸುತ್ತಾರೆ. ಈ ಪತ್ರೆಯು ವರ್ಷ ಪೂರ್ತಿ ಇರುತ್ತದೆ. ಅನಂತರ ಗಿಡಗಳನ್ನು ಕಿತ್ತು ಹೊಸ ಸಸಿಗಳನ್ನು ಹಾಕುತ್ತಾರೆ. |
'ನಮ್ಮ ಜಮೀನಿನ ಒಂದು ಭಾಗದಲ್ಲಿ ಸ್ವಲ್ಪ ಗಿಡಗಳನ್ನು ಪತ್ರೆಗೆ ಕಟಾವು ಮಾಡದೆ ಬಿಟ್ಟು ಆದರಿಂದ ಬಂದ ಹೂಗಳಿಂದ ಬೀಜವನ್ನು ತೆಗೆದು ಸಸಿಗಳನ್ನು ಸಿದ್ದಪಡಿಸಿಕೊಳ್ಳುತ್ತೇವೆ' ಎಂದು ತುಳಸಿಯನ್ನು ನಿರಂತರ ಬೆಳೆಯುವ ಕಾರ್ಯವೈಖರಿ ಬಿಡಿಸಿಡುತ್ತಾರೆ ಲಕ್ಷ್ಮೀದೇವಮ್ಮ. |
ಭೂಮಿ ಸಿದ್ಧತೆ ಮತ್ತು ನೀರು ನಿರ್ವಹಣೆ: ಭೂಮಿಯನ್ನು ಮೊದಲು ರೋಟರ್‌ನಿಂದ ಹೊಡೆಸಿ ಮತ್ತೊಮ್ಮೆ ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಿಸಿ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಸೇರಿಸುತ್ತಾರೆ. ಸಸಿಗಳನ್ನು ನಾಟಿ ಮಾಡುವಾಗ ಸಾಲುಗಳಿಗೆ ನೀರು ಬಿಟ್ಟುಕೊಂಡು ನಾಟಿ ಮಾಡುತ್ತಾರೆ. ಮೂರರಿಂದ ಐದು ದಿನಗಳಿಗೊಮ್ಮೆ ನೀರು ಹಾಯಿಸುತ್ತಾರೆ. ಸಸಿಗಳು ಬೆಳೆದಂತೆ ಹತ್ತು ಹದಿನೈದು ದಿನಗಳಿಗೆ ಒಂದಾವರ್ತಿ ನೀರು ಬಿಡುತ್ತಾರೆ. ಇದು ಇವರು ಅನುಸರಿಸಿಕೊಂಡು ಬಂದಿರುವ ಪದ್ಧತಿ. |
ಗಿಡಗಳಿಗೆ ಪೋಷಕಾಂಶ ನೀಡುವ ದೃಷ್ಟಿಯಿಂದ ಎಳನೀರು ಕಷಾಯ ಸಿಂಪಡಣೆ ಮಾಡುತ್ತಾರೆ. ಒಂದು ಲೀಟರ್ ಎಳನೀರಿಗೆ 15 ಲೀಟರ್ ನೀರು ಬೆರೆಸಿ ತುಳಸಿ ಪತ್ರೆಗೆ ಸಿಂಪಡಣೆ ಮಾಡುತ್ತಾರೆ. ಇದರಿಂದ ತುಳಸಿ ಪತ್ರೆ ಹಚ್ಚ ಹಸಿರಿಂದ ಹೊಳಪು ಬರುತ್ತದೆ ಎಂಬುದು ಇವರ ಅನುಭವ. ಇದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿಗೆ ಬೇಡಿಕೆ ಇದೆ ಎನ್ನುತ್ತಾರೆ. |
ಮಾರುಕಟ್ಟೆ: ಸಾಮಾನ್ಯ ದಿನಗಳಲ್ಲಿ ಒಂದು ಮಾರು ಹೂವಿಗೆ ₹30ರಿಂದ ₹ 40 ರೂಪಾಯಿ ಬೆಲೆಯಿದ್ದರೆ, ಹಬ್ಬದ ಸಮಯದಲ್ಲಿ ₹50 ರಿಂದ ₹70ಕ್ಕೆ ಏರುತ್ತದೆ. |
ಬೇರೆ ಹೂಗಳಂತೆ ಇದಕ್ಕೆ ಸೀಸನ್ ಇಲ್ಲ. ವರ್ಷದ ಎಲ್ಲಾ ಕಾಲವೂ ಪತ್ರೆ ಸಿಗುತ್ತದೆ, ಬೇಡಿಕೆಯೂ ಇರುತ್ತದೆ ಎಂಬುದು ತುಳಸಿಯನ್ನು ಇವರು ಬೆಳೆಯಲು ಇರುವ ಪ್ರಮುಖ ಕಾರಣ. |
ವಿಘ್ನೇಶ್ವರ ಐಡಿಎಫ್ ಮಹಿಳಾ ಸಂಘದಲ್ಲಿ ಪ್ರತಿನಿಧಿಯಾಗಿರುವ ಇವರು ಮೊದಲ ಕಂತಿನಲ್ಲಿ ಎಸ್‍ಬಿಐ ಬ್ಯಾಂಕಿನಿಂದ ₹10 ಸಾವಿರ ಪಡೆದು, 2 ಮೇಕೆಗಳನ್ನು ತಂದು ನಾಲ್ಕೈದು ತಿಂಗಳ ತರುವಾಯ 15 ಸಾವಿರಕ್ಕೆ ಮಾರಿದ್ದಾರೆ. ಉಳಿದ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿದ್ದಾರೆ. ಸಂಪರ್ಕ 8151969336. |
ಕೆ.ಆರ್.ಪೇಟೆ ಬಿರುಗಾಳಿ ಸಹಿತ ಮಳೆ; ಮರಗಳು ಧರೆಗೆ – Karavali Kirana |
ಕೆ.ಆರ್.ಪೇಟೆ ಬಿರುಗಾಳಿ ಸಹಿತ ಮಳೆ; ಮರಗಳು ಧರೆಗೆ |
ಕೆ.ಆರ್.ಪೇಟೆ: ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಬಂದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ನೂರಾರು ತೆಂಗು, ಅಡಿಕೆ ಹಾಗೂ ರಸ್ತೆಬದಿಯ ಮರಗಳು ನೆಲಕ್ಕುರುಳಿವೆ. ಕೆಲ ಮನೆಗಳ ಮೇಲ್ಚಾವಣಿ ಹಾರಿಹೋಗಿವೆ. |
ತಾಲ್ಲೂಕಿನ ಮಡುವಿನಕೋಡಿ ಗ್ರಾಮದ ಎಂ.ಬಿ.ಶಶಿಧರ್ ಎಂಬುವವರ ತೋಟದಲ್ಲಿ ತೆಂಗಿನ ಮರಗಳು ಬುಡಸಮೇತ ನೆಲಕ್ಕುರುಳಿವೆ. ತೋಟ ದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. |
ಹೊಸಹೊಳಲು ಬಳಿ ಮರವೊಂದು ವಿದ್ಯುತ್ ತಂತಿಯ ಮೇಲೆ ಉರುಳಿದ್ದರಿಂದ ಹೊಸಹೊಳಲು ಹಾಗೂ ಕೆ.ಆರ್.ಪೇಟೆ ಪಟ್ಟಣದ ಒಂದು ಭಾಗಕ್ಕೆ ರಾತ್ರಿ ಎಂಟು ಗಂಟೆಯವರೆವಿಗೂ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. |
ಚಂದಗೋನಹಳ್ಳಿಯಮ್ಮ ಕ್ಷೇತ್ರದಲ್ಲಿ ನಿರ್ಮಿಸಲಾಗಿದ್ದ ಸುಮಾರು 20ಕ್ಕೂ ಅಧಿಕ ತಾತ್ಕಾಲಿಕ ಊಟದ ಶೆಡ್‌ಗಳ ತಗಡಿನ ಮತ್ತು ಸಿಮೆಂಟ್ ಶೀಟಿನ ಚಾವಣಿಗಳು ಹಾರಿ ಹೋಗಿದ್ದು ಊಟಕ್ಕೆ ಕುಳಿತಿದ್ದ ಹಲವು ಮಂದಿಗೆ ಶೀಟುಗಳು ಬಡಿದು ಗಾಯಗಳಾಗಿವೆ. |
ದೇವರ ಹರಕೆ ಪರ ಮಾಡುತ್ತಿದ್ದ ವೇಳೆ ಸಾಲಿಗ್ರಾಮದ ದೇವಮ್ಮ ಎಂಬುವವರ ಎರಡು ವರ್ಷದ ಮಗುವನ್ನು ಸೀರೆಯಲ್ಲಿ ಕಟ್ಟಿದ್ದ ತೊಟ್ಟಿಲು, ಮಗು ಬಿರುಗಾಳಿಯ ರಭಸಕ್ಕೆ ಸುಮಾರು 50 ಮೀಟರ್ ದೂರಕ್ಕೆ ಹಾರಿ ಬಿದ್ದಿತು. ದೇವರ ದರ್ಶನಕ್ಕೆ ಬಂದಿದ್ದ ಹೊಳೆನರಸೀಪುರದ ರವಿಕುಮಾರ್ ಎಂಬುವವರು ಮಗುವನ್ನು ರಕ್ಷಣೆ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. |
ಬಿರುಗಾಳಿ, ಮಳೆಗೆ ಮನೆಗಳಿಗೆ ಹಾನಿ |
ಶ್ರೀರಂಗಪಟ್ಟಣ: ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ 4 ಮನೆಗಳು ಜಖಂಗೊಂಡಿವೆ.ಗ್ರಾಮದ ಜವರೇಗೌಡ ಎಂಬುವವರ ಮನೆಯ ಚಾವಣಿ ಸಂಪೂರ್ಣ ಹಾರಿ ಹೋಗಿದೆ. ಕಲ್ನಾರ್ ಶೀಟುಗಳ ಜತೆಗೆ ಕಬ್ಬಿಣದ ಕಂಬಿಗಳೂ ಮುರಿದು ಬಿದ್ದಿವೆ. ಮುಂದಿನ ವಾರ ನಡೆಯಲಿರುವ ಮಗಳ ಮದುವೆಗೆ ಜವರೇಗೌಡ ಮನೆಯನ್ನು ದುರಸ್ತಿ ಮಾಡಿಸಿದ್ದರು. ಈಗ ಮನೆಯಲ್ಲಿ ವಾಸ ಮಾಡದ ಸ್ಥಿತಿ ಉಂಟಾಗಿದೆ. ಮನೆಯಲ್ಲಿದ್ದ ಧವಸ, ದಾನ್ಯ ಬಟ್ಟೆ, ಪಾತ್ರೆಗಳು ಹಾನಿಗೀಡಾಗಿವೆ. |
ಇದೇ ಗ್ರಾಮದ ಹರೀಶ್ ಅವರ ಕಲ್ನಾರ್ ಶೀಟಿನ ಮನೆಯ ಚಾವಣಿ ಕೂಡ ಬಿರುಗಾಳಿಗೆ ಭಾಗಶಃ ಹಾನಿಯಾಗಿದೆ. ಸಿ.ಎಂ.ಕುಮಾರಸ್ವಾಮಿ, ಸಿ.ಡಿ.ಸೋಮಣ್ಣ ಎಂಬುವವರ ಹೆಂಚಿನ ಮನೆಗಳು ಕೂಡ ಹಾನಿಗೀಡಾಗಿವೆ. |
ಚನ್ನಹಳ್ಳಿ ಗ್ರಾಮಕ್ಕೆ ಸಮೀಪ ಇರುವ ಹಕ್ಕಿಪಿಕ್ಕಿ ಜನರ ಕಾಲೊನಿಯಲ್ಲಿ ಬಿರುಗಾಳಿಗೆ 14 ಟೆಂಟ್‌ಗಳು ಮುರಿದುಬಿದ್ದಿವೆ. ದಿನಬಳಕೆ ವಸ್ತುಗಳು ನಾಶವಾಗಿವೆ. ತಾಲ್ಲೂಕಿನ ಗಡಿಭಾಗದ ಮೊಗರಹಳ್ಳಿ ಬಳಿ ಬೀಡುಬಿಟ್ಟಿದ್ದ ಹಕ್ಕಿಪಿಕ್ಕಿ ಜನಾಂಗದ 107 ಕುಟುಂಬಕ್ಕೆ ತಾಲ್ಲೂಕು ಆಡಳಿತ ಮೂರು ತಿಂಗಳ ಹಿಂದೆ ಟೆಂಟ್‌ಗಳನ್ನು ನಿರ್ಮಿಸಿ ಆಶ್ರಯ ನೀಡಿತ್ತು. ಸರ್ಕಾರದಿಂದ ನಿರ್ಮಿಸಿರುವ ಟೆಂಟ್‌ಗಳು ಕಳಪೆಯಿಂದ ಕೂಡಿವೆ ಎಂದು ಹಕ್ಕಿಪಿಕ್ಕಿ ಜನರು ದೂರಿದ್ದಾರೆ. |
ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಕಾಳೇಗೌಡ, ಗ್ರಾಮ ಪಂಚಾಯಿತಿ ಮಹದೇವಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್, ಅಧ್ಯಕ್ಷ ಜಗದೀಶ್, ನಿಂಗಶೆಟ್ಟಿ, ಕಂದಾಯ ನಿರೀಕ್ಷ ದೊಡ್ಡಯ್ಯ ಸ್ಥಳಕ್ಕೆ ಭೇಟಿ ನೀಡಿದ್ದರು. ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಎಸ್.ಕಾಳೇಗೌಡ ಆಗ್ರಹಿಸಿದ್ದಾರೆ. |
ಕಂಟ್ರೋಲ್ ತಪ್ಪಿದ ಕೊರೋನಾ, ಸಾರ್ವಜನಿಕರೇ ಎಚ್ಚರ, ನಿಮ್ಮ ಆರೋಗ್ಯ ಕೈಯಲ್ಲೇ ಇದೆ..! – EESANJE / ಈ ಸಂಜೆ |
ಕಂಟ್ರೋಲ್ ತಪ್ಪಿದ ಕೊರೋನಾ, ಸಾರ್ವಜನಿಕರೇ ಎಚ್ಚರ, ನಿಮ್ಮ ಆರೋಗ್ಯ ಕೈಯಲ್ಲೇ ಇದೆ..! |
October 13, 2020 October 13, 2020 Sri Raghav Coronavirus Alert |
ಬೆಂಗಳೂರು, ಅ.13- ಸಾರ್ವಜನಿಕರೇ ಎಚ್ಚರ.. ಎಚ್ಚರ.. ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಾರ್ವಜನಿಕರು ಮತ್ತಷ್ಟು ಜಾಗೃತರಾಗಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಎದುರಾಗಿದೆ. ಕೊರೊನಾ ಸೋಂಕಿಗೆ ಈವರೆಗೂ ಯಾವುದೇ ನಿರ್ದಿಷ್ಟ ಔಷ ಲಭ್ಯವಾಗಿಲ್ಲ. ಈ ಕೊರೊನಾ ಸೋಂಕು ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. |
ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸ್ಯಾನಿಟೈಜರ್ ಬಳಕೆ ಪದೇ ಪದೇ ಕೈತೊಳೆದು ನೀವು ಶುಚಿಯಾಗಿರುವುದರ ಜೊತೆಗೆ ಪರಿಸರವನ್ನು ಶುಚಿ ಯಾಗಿ ಇಟ್ಟುಕೊಳ್ಳುವ ಮೂಲಕ ಕೊರೊನಾವನ್ನು ನಿಯಂತ್ರಿಸಬೇಕಾಗಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಸಾವಿನ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ವಿಶೇಷವಾಗಿ ತುಮಕೂರು, ಚಿತ್ರದುರ್ಗ, ಕೊಡಗು ಜಿಲ್ಲೆಗಳಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ತೀವ್ರಗೊಳ್ಳುತ್ತಿದೆ. |
ರಾಜಧಾನಿ ಬೆಂಗಳೂರಿನಲ್ಲೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಆರೋಗ್ಯ ಇಲಾಖೆ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಕೂಡ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ಜಾಗೃತರಾಗದಿದ್ದರೆ ರೋಗ ಉಲ್ಭಣಗೊಂಡು ಮತ್ತಷ್ಟು ಜನ ಬಲಿಯಾಗುವುದರಲ್ಲಿ ಅನುಮಾನವಿಲ್ಲ. |
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70 ಲಕ್ಷ ದಾಟಿದೆ. ರಾಜ್ಯದಲ್ಲಿ 8 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಮೀರಿದೆ. ರಾಜಧಾನಿ ಬೆಂಗಳೂರಿನಲ್ಲಿ 2.5 ಲಕ್ಷ ಜನರಿಗೆ ಸೋಂಕು ತಗುಲಿದೆ. ಗುಣಮುಖರಾಗುವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದ್ದು ಪ್ರತಿದಿನ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇರುವುದರಿಂದ ಸಾರ್ವಜನಿಕ ವಲಯದಲ್ಲಿ ಆತಂಕವೂ ಕೂಡ ಹೆಚ್ಚಾಗಿದೆ.ಜನರು ಗುಂಪು ಸೇರುವುದು ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು ಎಲ್ಲಿಂದರಲ್ಲಿ ಹೇಗಿಂದರಾಗೆ ಇರುವುದಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳದಿದ್ದರೆ ಕೊರೊನಾ ಬಲಿ ತೆಗೆದುಕೊಳ್ಳುವ ಸಂಖ್ಯೆ ಕೂಡ ಹೆಚ್ಚಾಗಲಿದೆ. |
ಈ ತಿಂಗಳಲ್ಲಿ ಹಬ್ಬ, ಜಾತ್ರೆ, ಶುಭ ಸಮಾರಂಭಗಳು ನಡೆಯುವುದು ಹೆಚ್ಚು ವಿಶೇಷವಾಗಿ ದಸರಾ, ಆಯುಧಪೂಜಾ, ಈದ್-ಮಿಲಾದ್, ವಾಲ್ಮೀಕಿ ಜಯಂತ್ರಿ ಅಂತಹ ವಿಶೇಷ ಹಬ್ಬಗಳ ಆಚರಣೆ ನಡೆಯಲಿದೆ. ಹಬ್ಬದ ಸಂದರ್ಭಗಳಲ್ಲಿ ಹೆಚ್ಚು ಸೇರದಂತೆ ಮನೆಗಳಿಗೆ ಸೀಮಿತಗೊಳಿಸಿಕೊಂಡು ಹಬ್ಬ ಆಚರಣೆ ಮಾಡಬೇಕು. ಕೊರೊನಾ ನಮಗೇನು ಮಾಡುವುದಿಲ್ಲ. |
ಈವರೆಗೂ ನನಗೇನೂ ಆಗಿಲ್ಲ ಎಂಬ ನಿರ್ಲಕ್ಷ್ಯ ಧೋರಣೆಯಿಂದ ಬೇಕಾಬಿಟ್ಟಿ ವರ್ತಿಸಿದರೆ ಕೊರೊನಾದ ಕಬಂಧ ಬಾಹುಗಳಿಗೆ ಸಿಲುಕಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೊರೊನಾ ಜೊತೆಗೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಸರ್ಕಾರ ಶಾಲಾ- ಕಾಲೇಜುಗಳನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಆದರೆ ಮಾಸ್ಕ್ ಧರಿಸಿಕೊಳ್ಳಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿಕೊಳ್ಳುವಂತೆ ಹಲವು ಮಾರ್ಗಸೂಚಿಗಳನ್ನು ನೀಡಿದೆ. ಇದನ್ನು ನಾವು ಕಡ್ಡಾಯವಾಗಿ ಪಾಲಿಸಲೇ ಬೇಕಾಗಿದೆ. |
ಮನೆಯಿರಲಿ, ಕಚೇರಿಯಿರಲಿ, ಹೋಟೆಲ್, ಶಾಪಿಂಗ್, ಮಾಲ್ ಎಲ್ಲೇ ಹೋದರೂ ಕೂಡ ಕನಿಷ್ಟ ಅಂತರವನ್ನು ನಾವು ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ನ್ನು ಧರಿಸಿಕೊಂಡಿರಬೇಕು. |
ಇಷ್ಟು ಕನಿಷ್ಠ ಮಾರ್ಗಸೂಚಿಗಳನ್ನು ಪಾಲಿಸಿದರೆ ಕೊರೊನಾವನ್ನು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಿಸಬಹುದಾಗಿದೆ. ಈಗಾಗಲೇ ಕೊರೊನಾ ಅಟ್ಟಹಾಸ ಮೀರಿ ಮೆರೆಯುತ್ತಿದೆ. ಅದು ಮತ್ತಷ್ಟು ತೀವ್ರಗೊಳ್ಳುವುದನ್ನು ತಡೆಯಲು ಸಾರ್ವಜನಿಕರು ಎಚ್ಚರ ವಹಿಸಲೇಬೇಕಾಗಿದೆ. |
ಕೇವಲ ಆರೋಗ್ಯ ಇಲಾಖೆ ಮಾಡುವ ಕೆಲಸವಲ್ಲ. ಸಾರ್ವಜನಿಕರು ಸ್ವಯಂ ಜಾಗೃತಿ ವಹಿಸಲೇಬೇಕು. ಈಗ ಕೊರೊನಾ ಶೇ. ಪ್ರಮಾಣ 17ರಷ್ಟಿದೆ. ಅದು 5ರಷ್ಟು ಇಳಿಕೆಯಾಗಬೇಕೆಂದರೆ ಆರೋಗ್ಯ ಇಲಾಖೆಯ ಜೊತೆ ಸಾರ್ವಜನಿಕರು ಕೈಜೋಡಿಸಬೇಕು. |
ರಾಜಕೀಯ ಸಮಾರಂಭ ಸಾಮಾಜಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಗಳು ಹಬ್ಬ ಹರಿದಿನಗಳು, ಜಾತ್ರೆ, ಸಮಾರಂಭಗಳು ಇನ್ನಿತರ ಯಾವುದೇ ಸಮಾರಂಭಗಳನ್ನು ಸದ್ಯಕ್ಕೆ ಮುಂದೂಡುವುದೇ ಒಳಿತು. ಆಚರಿಸಲೇಬೇಕಾದ ಅನಿವಾರ್ಯತೆ ಇದ್ದರೆ ಅದನ್ನು ಮನೆಗೆ ಸೀಮಿತಗೊಳಿಸಿಕೊಳ್ಳಬೇಕು. ಜನ ಸಂದಣಿ ಇರುವ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. |
ಅತೃಪ್ತರಿಗೆ ಅನರ್ಹತೆ ಶಾಕ್ ಕೊಟ್ಟ ಸ್ಪೀಕರ್! | Digital Kannada |
Home ರಾಜಕೀಯ ಅತೃಪ್ತರಿಗೆ ಅನರ್ಹತೆ ಶಾಕ್ ಕೊಟ್ಟ ಸ್ಪೀಕರ್! |
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿ ಆದೇಶ ಹೊರಡಿಸಿದ್ದಾರೆ. |
ಇತ್ತೀಚೆಗೆ ಆರ್.ಶಂಕರ್, ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ಅನಾರ್ಹಗೊಳಿಸಿದ್ದ ಸ್ಪೀಕರ್, ಭಾನುವಾರ ಇನ್ನುಳಿದ 12 ಶಾಸಕರ ವಿರುದ್ಧದ ತೀರ್ಪು ಪ್ರಕಟಿಸಿದ್ದಾರೆ. |
ಇದರೊಂದಿಗೆ ಜೆಡಿಎಸ್ ನ ಎಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ, ಕಾಂಗ್ರೆಸ್ ನ ಮುನಿರತ್ನ, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು, ಆನಂದ್ ಸಿಂಗ್, ಶಿವರಾಂ ಹೆಬ್ಬಾರ್, ರೋಷನ್ ಬೇಗ್, ಶ್ರೀಮಂತ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಎಂಟಿಬಿ ನಾಗರಾಜ್, ಸುಧಾಕರ್, ಎಂಬಿ ಪಾಟೀಲ್ ಅವರು 15ನೇ ವಿಧಾನಸಭೆಯ ಸದಸ್ಯತ್ವ ಅನರ್ಹಗೊಂಡಿದ್ದಾರೆ. |
ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಾನೂನಿನ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡಿರುವ ಎಚ್.ವಿಶ್ವನಾಥ್, 'ಸ್ಪೀಕರ್ ಅನರ್ಹತೆ ತೀರ್ಮಾನ ಏಕಪಕ್ಷೀಯವಾಗಿದೆ. ಅವರು ಕೇವಲ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕುಮಾರಸ್ವಾಮಿ ಅವರ ಮನವಿಯನ್ನು ಮಾತ್ರ ಆಲಿಸಿದ್ದು ಆತುರದ ನಿರ್ಧಾರ ಕೈಗೊಂಡಿದ್ದಾರೆ. ನಾವು ಬೇರೆ ಹುದ್ದೆ ಬಯಸಿ ರಾಜೀನಾಮೆ ಕೊಟ್ಟಿಲ್ಲ. ಬದಲಿಗೆ ಕುಟುಂಬ ರಾಜಕಾರಣ, ಹೊಲಸು ರಾಜಕಾರಣದಿಂದ ಬೇಸತ್ತು ರಾಜೀನಾಮೆ ನೀಡಿದ್ದೇವೆ. ಈ ತೀರ್ಪಿನ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ' ಎಂದು ತಿಳಿಸಿದರು. |
ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ | Nammurutv. news |
ಮನೆ ನ್ಯೂಸ್ ರಾಜ್ಯ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ |
ಶಿವಮೊಗ್ಗ/ ಗಾಜನೂರು:ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಡಾ.ಲೊಕೇಶ್ ಭೇಟಿ ನೀಡಿದ್ದರು. |
ಕಳೆದ ಮೂರು ದಿನಗಳ ಹಿಂದೆ ಕಲುಷಿತ ಆಹಾರವನ್ನು ಸೇವಿಸಿ 20 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದಾಖಲಾಗಿದ್ದರು ಈ ಹಿನ್ನೆಲೆಯಲ್ಲಿ, ವಸತಿ ಶಾಲೆಯ ಅಸ್ವಸ್ಥಗೊಂಡ ಮಕ್ಕಳ ಸಹಪಾಠಿಗಳನ್ನು ವಿಚಾರಿಸಲಾಯಿತು. |
ಅಡುಗೆ ತಯಾರು ಮಾಡುವ ಸಿಬ್ಬಂದಿಗಳನ್ನು ವಿಚಾರಿಸಲಾಯಿತು. |
ವಸತಿ ಶಾಲೆಯ ಸುತ್ತ ಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಯಿತು. |
ಅಡುಗೆಯವರು ಮತ್ತು ಅಡುಗೆ ಸಹಾಯಕರು ಪ್ರತ್ಯೇಕ ಉಡುಪುಗಳನ್ನು ಧರಿಸಿ ಅಡುಗೆ ತಯಾರು ಮಾಡುವಂತೆ, ಈ ಸಂದರ್ಭದಲ್ಲಿ ತಲೆಗೆ ಡಿಸ್ಪೋಸಬಲ್ ಕ್ಯಾಪ್ ಗಳು, ಗ್ಲೌಸ್ ಗಳು, ಏಫ್ರಾನ್ ಗಳನ್ನು, ಶುಭ್ರವಾದ ಬಿಳಿ ಬಟ್ಟೆಯ ಉಡುಪುಗಳನ್ನು ಧರಿಸಿ ಕರ್ತವ್ಯವನ್ಬು ನಿರ್ವಹಿಸುವಂತೆ ಸೂಚಿಸಲಾಯಿತು. |
ಅಡುಗೆ ಮನೆಯಲ್ಲಿ ಕರ್ತವ್ಯವನ್ನು ನಿರ್ವಹಿಸುವವರು ಪ್ರತ್ಯೇಕ ಪಾದರಕ್ಷೆಗಳನ್ನು ಬಳಸಬೇಕು. ಶೌಚಾಲಯ ಬಳಸಿದ ನಂತರ ಕೈ ಕಾಲುಗಳನ್ನು ಶುಭ್ರವಾಗಿ ತೊಳೆದುಕೊಂಡು ಅಡುಗೆ ಮನೆಗೆ ಬರಬೇಕು, ಈ ಬಗ್ಗೆ ಅಡುಗೆಯವರ ಪಾಲಿಸಬೇಕಾದ ಸೂಚನೆಗಳನ್ನು, ಸೂಚನಾ ಫಲಕದಲ್ಲಿ ಹಾಕುವಂತೆ ಪ್ರಾಂಶುಪಾಲರಿಗೆ ತಿಳಿಸಿದರು. |
3.9 ಸಿ |
ಸ್ವಾಗತಾರ್ಹ 1ಸ್ಟ ವರ್ಷದ |
ಈ ವಿಭಾಗದಲ್ಲಿ ನೀವು ವಿವಿಧ ವಿಶ್ವವಿದ್ಯಾಲಯಗಳ ಮೊದಲ ವರ್ಷದ ವೈದ್ಯಕೀಯ ಕೋರ್ಸ್‌ಗಳನ್ನು ಕಾಣಬಹುದು' ಆಲ್ಜೀರಿಯಾ. |
ನಾನು- ಪರಿಚಯ : ಜೀವಕಣಗಳ ಚಕ್ರದಲ್ಲಿ, ಪ್ರತಿವಾದ ಸೆಲ್ ವಿಷಯಗಳನ್ನು ಮತ್ತು ಎರಡು ನೀಡುವಂತೆ ನಂತರ ವಿಭಜಿಸುವ : ಏಕಕೋಶೀಯ ಜೀವಿಗಳನ್ನು ಆತ್ಮನಲ್ಲಿ ಹೊಸ ಸಂಸ್ಥೆ ... |
ನಾನು- ವ್ಯಾಖ್ಯಾನ : ಜೀನ್ ತಳೀಯ ಮಾಹಿತಿಯ ಘಟಕವಾಗಿದೆ, ಇದು ನಿರ್ದಿಷ್ಟ ಪಾಲಿಪೆಪ್ಟೈಡ್ ಅಥವಾ .. ನ ಸಂಶ್ಲೇಷಣೆಗಾಗಿ ನ್ಯೂಕ್ಲಿಯಿಕ್ ಆಸಿಡ್ ಸೀಕ್ವೆನ್ಸ್ ಕೋಡಿಂಗ್ ಅನ್ನು ಹೊಂದಿರುತ್ತದೆ.. |
ನಾನು- ಮಾನವ ವರ್ಣತಂತುಗಳ ರಚನೆ : Les chromosomes sont de petits organes en forme de bâtonnets constitués par de longues molécules d'ADN double brin associés... |
ನಾನು- ಪರಿಚಯ : ಸೈಟೊಜೆನೆಟಿಕ್ಸ್ ಅಧ್ಯಯನಗಳು ಸಾಂವಿಧಾನಿಕ ಆನುವಂಶಿಕ ರೋಗಗಳು ಮತ್ತು ಕ್ಯಾನ್ಸರ್ ವೈಪರೀತ್ಯಗಳಿಂದ ವರ್ಣತಂತುವಿನ ವೈದ್ಯಕೀಯ ವಿಭಾಗವಾಗಿದ್ದು. ಎಣಿಕೆಯ ... |
ನಾನು- ಪರಿಚಯ, ವ್ಯಾಖ್ಯಾನ : ಮೂಲತಃ ಕೋಶ ನ್ಯೂಕ್ಲಿಯಸ್ ಬೇರ್ಪಡಿಸಲು. ನ್ಯೂಕ್ಲಿಯಿಕ್ ಆಮ್ಲಗಳು ಪದಾರ್ಥಗಳಾಗಿವೆ, ನ್ಯೂಕ್ಲಿಯಸ್ನಲ್ಲಿ ಮಾತ್ರವಲ್ಲದೆ ... |
ನಾನು- ಎಲ್' MALE ಸಂತಾನೋತ್ಪತ್ತಿ ವ್ಯವಸ್ಥೆ : ಸಹ ಕರೆಯಲಾಗುತ್ತದೆ, & quot; ಗಂಡು ಸಂತಾನೋತ್ಪತ್ತಿ ವ್ಯವಸ್ಥೆ ಹಾಗೂ & quot;, ಇದು ಸಂತಾನೋತ್ಪತ್ತಿ ಕಾರ್ಯದಲ್ಲಿ ಭಾಗವಹಿಸುವ ಎಲ್ಲಾ ಸಂಸ್ಥೆಗಳು ಒಳಗೊಂಡಿದೆ. ಅವರು ಪೂರ್ಣಗೊಂಡ ... |
ನಾನು- ಋತುಚಕ್ರದ : ಎ- ವ್ಯಾಖ್ಯಾನ : ಸಕ್ರಿಯ ಜನನಾಂಗ ಜೀವನದುದ್ದಕ್ಕೂ, l'aspect histologique de la couche superficielle « fonctionnelle » de l'endomètre... |
ಪರಿಚಯ : L'embryologie est une discipline scientifique qui englobe la description morphologique des transformations de l'œuf fécondé en organisme. L'embryologie est la science du développement.... |
ಜೂ.7ಕ್ಕೆ ಬೆಂಗಳೂರು ಮಕ್ಕಳ ಜತೆ ಕಲಾಂ ತಾತನ ಊಟ | ThatsKannada.com - Kalam to have lunch with children at ISKON on June 7th - Kannada Oneindia |
10 min ago ದಿನೇಶ್ ಗುಂಡೂರಾವ್ ಬಳಿ ಸೋಲಿಗೆ ಮುಖಂಡರು ನೀಡಿದ ಕಾರಣ ಇದೊಂದೇ |
13 min ago ಮದುವೆಯಾಗಲ್ಲ ಎಂದಿದ್ದಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಯುವತಿ |
48 min ago ಕರಾವಳಿ ಕರ್ನಾಟಕ, ಕೇರಳಕ್ಕೆ ಮಾತ್ರ ಸೀಮಿತವಾದ ಮುಂಗಾರು |
ಜೂ.7ಕ್ಕೆ ಬೆಂಗಳೂರು ಮಕ್ಕಳ ಜತೆ ಕಲಾಂ ತಾತನ ಊಟ |
ಇಸ್ಕಾನ್‌ನ ಪಾತ್ರೆ ಸದಾ ಅಕ್ಷಯವಾಗಲಿ |
ಬೆಂಗಳೂರು : ಮಕ್ಕಳೊಂದಿಗೆ ಮಗುವಾಗುವ ಜಾಯಮಾನದ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಜೂನ್ 7ನೇ ತಾರೀಕು ಇಸ್ಕಾನ್‌ನ ಕೃಷ್ಣ ದೇಗುಲದಲ್ಲಿ 900 ಬಡ ಮಕ್ಕಳ ಜತೆ ಸಾಲಲ್ಲಿ ಕೂತು ಊಟ ಮಾಡಲಿದ್ದಾರೆ. |
ಜೂನ್ 6ನೇ ತಾರೀಕು ಸಂಜೆ ಬೆಂಗಳೂರಿಗೆ ಬರಲಿರುವ ಕಲಾಂ, ಮರುದಿನ ಇಸ್ಕಾನ್‌ನ ಅಕ್ಷಯ ಪಾತ್ರೆ ಯೋಜನೆಗೆ ಹೊಸ ಆಯಾಮ ಕೊಡಲಿದ್ದಾರೆ. ನಗರದ ಮಹಾನಗರ ಪಾಲಿಕೆಯ ಹಾಗೂ ಸರ್ಕಾರಿ ಶಾಲೆಗಳ ಸುಮಾರು 700 ಮಕ್ಕಳೂ ಸೇರಿದಂತೆ 900 ಬಡ ಶಾಲಾ ಮಕ್ಕಳೊಂದಿಗೆ ಸಾಲಿನಲ್ಲಿ ಕೂತು ಕಲಾಂ ತಾತ ಉಣ್ಣಲಿದ್ದಾರೆ. ಊಟದೊಟ್ಟಿಗೆ ಮಕ್ಕಳು ಕಲಾಂ ಅಜ್ಜನನ್ನು ಮನದಣಿಯೆ ಮಾತಾಡಿಸಬಹುದು. ಚೆಂದದ ಪ್ರಶ್ನೆಗಳಿಗೆ ತಾತ ಅಂದದ ಉತ್ತರ ಕೊಡಲಿದ್ದಾರೆ. |
2000ನೇ ಇಸವಿಯಲ್ಲಿ ಶುರುವಾದ ಇಸ್ಕಾನ್‌ನ ಮಹತ್ವಾಕಾಂಕ್ಷೆಯ ಅಕ್ಷಯ ಪಾತ್ರೆ ಯೋಜನೆ ಈಗ ದೊಡ್ಡದಾಗಿದೆ. 1500 ಮಕ್ಕಳಿಗೆ ಊಟ ಬಡಿಸುವುದರೊಂದಿಗೆ ಶುರುವಾದ ಯೋಜನೆ ಇವತ್ತು 43 ಸಾವಿರ ಮಕ್ಕಳಿಗೆ ಉಣಬಡಿಸುವಷ್ಟು ಬೆಳೆದಿದೆ. ಈ ಶೈಕ್ಷಣಿಕ ವರ್ಷದಲ್ಲಿ 1 ಲಕ್ಷ ಮಕ್ಕಳಿಗೆ ಊಟ ಹಾಕಬೇಕೆಂಬುದು ಇಸ್ಕಾನ್‌ನ ಗುರಿ. 2005ನೇ ಇಸವಿ ಹೊತ್ತಿಗೆ 2.5 ಲಕ್ಷ ಮಕ್ಕಳಿಗೆ ಊಟ ಬಡಿಸುವುದು ಕನಸು. |
ನಾಳೆ ಮಡಿಕೇರಿಯಲ್ಲಿ ಯೋಗ ಜಾಥಾ | Prajavani |
ಯೋಗ ದಿನಾಚರಣೆ ವ್ಯವಸ್ಥಿತವಾಗಿ ಆಯೋಜಿಸಲು ಡಿ.ಸಿ ಸೂಚನೆ |
ಮಡಿಕೇರಿ: 5ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವ್ಯವಸ್ಥಿತವಾಗಿ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಸೂಚಿಸಿದರು. |
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಯೋಗ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. |
ಯೋಗ ದಿನಾಚರಣೆಯನ್ನು ನಗರದ ಮೈತ್ರಿ ಹಾಲ್‍ನಲ್ಲಿ ಯೋಗ ದಿನಾಚರಣೆ ಆಚರಿಸಲು ಉದ್ದೇಶಿಸಲಾಗಿದ್ದು, ತಾಲ್ಲೂಕುಮಟ್ಟ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಯೋಗ ದಿನಾಚರಣೆ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಚ್. ರಾಮಚಂದ್ರ ತಿಳಿಸಿದರು. |
ಜೂನ್ 18ರಂದು ಸಂಜೆ 6ರಿಂದ 7ರವರೆಗೆ ಯೋಗ ಜಾಥಾ ಹಮ್ಮಿಕೊಂಡಿದ್ದು, ಜಾಥಾವು ನಗರದ ಕೋಟೆ ಆವರಣದಿಂದ ಪ್ರಾರಂಭಗೊಂಡು ನಗರದ ಹಳೇ ಬಸ್ ನಿಲ್ದಾಣದ ತನಕ ನಡೆಯಲಿದೆ. ಈ ಬಾರಿಯ ಯೋಗ ದಿನಾಚರಣೆ ಘೋಷ ವಾಕ್ಯ 'ಹೃದಯಕ್ಕಾಗಿ ಯೋಗ' ಎಂದು ಮಾಹಿತಿ ನೀಡಿದರು. |
21ರಂದು ಬೆಳಿಗ್ಗೆ 6.30ಕ್ಕೆ ಮೈತ್ರಿಹಾಲ್‍ನಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬೆಳಿಗ್ಗೆ 7ರಿಂದ 8ರವರೆಗೆ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ 22 ಯೋಗಾಸನಗಳು ಹಾಗೂ 4 ಪ್ರಾಣಾಯಾಮ ನಡೆಯಲಿದೆ ಎಂದು ರಾಮಚಂದ್ರ ಮಾಹಿತಿ ನೀಡಿದರು. |
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಡಿಎಚ್‍ಒ ಡಾ.ಕೆ. ಮೋಹನ್, ಆಯುಷ್ ವೈದ್ಯೆ ಡಾ.ಶುಭಾ, ಅಶ್ವಿನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕುಲಕರ್ಣಿ, ಭಾರತೀಯ ವಿದ್ಯಾಭವನದ ಮಹೇಶ್ ಕುಮಾರ್ ಹಾಜರಿದ್ದರು. |
ವಿಶ್ವೇಶ್ವರ ಹೆಗಡೆ ಕಾಗೇರಿ ಬರಹ: ಕಲಾಪಗಳ ಸಂಸ್ಕೃತಿಯು ಗದ್ದಲದ ಸಂಸ್ಕೃತಿಯತ್ತ... | Prajavani |
Parliament Culture Vishweshwar Hegde Kageri Karnataka India |
ಸಂಸತ್ ಅಧಿವೇಶನ ಸುಗಮವಾಗಿ ನಡೆಯದಿರಲು ಕಾರಣ ಸರ್ಕಾರವೇ, ವಿರೋಧ ಪಕ್ಷವೇ? |
ವಿಶ್ವೇಶ್ವರ ಹೆಗಡೆ, ಕಾಗೇರಿ Updated: 07 ಆಗಸ್ಟ್ 2021, 03:00 IST |
ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವಂತಹ ಪದ್ದತಿಯೇ ಪ್ರಜಾಪ್ರಭುತ್ವ. ಇಲ್ಲಿ ಪ್ರಜೆಗಳ ಭಾವನೆ, ಪ್ರಜೆಗಳ ಆಕಾಂಕ್ಷೆ ಮತ್ತು ಆಶೋತ್ತರಗಳ ಉದ್ದೇಶವನ್ನಿಟ್ಟು, ಒಂದು ಸದನದ ಜನಪ್ರತಿನಿಧಿಗಳಾಗಿ ಕರ್ತವ್ಯವನ್ನು ನಿರ್ವಹಿಸುವಂತಹ ವ್ಯವಸ್ಥೆಯೇ ಸಂಸದೀಯ ವ್ಯವಸ್ಥೆ. |
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಪಾತ್ರ ಮಹತ್ವದ್ದಾಗಿರುತ್ತದೆ. ರಾಜಕೀಯ ಪಕ್ಷಗಳು ಈ ಸಂಸದೀಯ ವ್ಯವಸ್ಥೆಯ ಬೆನ್ನೆಲುಬು. ಅದರಂತೆ ಭಾರತದ ಸಂವಿಧಾನವು ಚುನಾವಣಾ ಆಯೋಗಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿ ದೇಶದಲ್ಲಿ ಮುಕ್ತ ಹಾಗೂ ನ್ಯಾಯೋಚಿತ ಚುನಾವಣೆಯ ಉದ್ದೇಶವನ್ನು ಈಡೇರಿಸಿದೆ. ರಾಷ್ಟ್ರ ಮತ್ತು ಜನರು ಎದುರಿಸುತ್ತಿರುವ ಬಹುರೂಪಿ ಸಮಸ್ಯೆಗಳನ್ನು ನಿಭಾಯಿಸಲು ಸಕ್ರಿಯವಾಗಿ ಶ್ರಮಿಸುವ ವ್ಯವಸ್ಥೆಯೇ ಯಶಸ್ವಿ ಪ್ರಜಾಪ್ರಭುತ್ವ. |
ಈ ವ್ಯವಸ್ಥೆಯಲ್ಲಿ ಶಾಸಕಾಂಗವು ಸಾರ್ವಭೌಮ ಮತ್ತು ಸರ್ವೋಚ್ಚ ಅಧಿಕಾರವನ್ನು ಹೊಂದಿದೆ. ಈ ವೇದಿಕೆಗಳು ಜನರ ವಿಶ್ವಾಸವನ್ನು ಗಳಿಸಿಕೊಳ್ಳಬೇಕಾದರೆ ಅವುಗಳು ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾದುದು ಅತ್ಯಗತ್ಯ. |
ಸಂವಿಧಾನದಲ್ಲಿ ದೇಶದ ಸಂಸತ್ತು ಮತ್ತು ರಾಜ್ಯದ ವಿಧಾನ ಮಂಡಲಗಳಿಗೆ ಅತ್ಯುನ್ನತ ಸ್ಥಾನಮಾನವನ್ನು ನೀಡಿದ್ದು, ಅಲ್ಲಿನ ಸದಸ್ಯರಿಗೆ ಸಂಪೂರ್ಣ ವಾಕ್ ಸ್ವಾತಂತ್ರ್ಯವನ್ನು ಕಲ್ಪಿಸಲಾಗಿದೆ. ಅಂದರೆ ಸದನದ ಕಲಾಪವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಸದನದ ಕಲಾಪಗಳನ್ನು ನಿಯಮಾವಳಿಗಳಂತೆ ನಡೆಸಲು ಸದನದ ಮುಖ್ಯಸ್ಥರಾಗಿ ಸಭಾಧ್ಯಕ್ಷರು ಸ್ವತಂತ್ರ ಹಾಗೂ ನಿಷ್ಪಕ್ಷವಾದ ದೃಷ್ಟಿಕೋನವನ್ನು ಹೊಂದಿರುವಂತೆ ಸಂವಿಧಾನದಲ್ಲಿ ಹಾಗೂ ನಿಯಮಾವಳಿಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. |
ಈ ಸಂಸದೀಯ ವ್ಯವಸ್ಥೆಯಲ್ಲಿ ಪಕ್ಷ ಪದ್ಧತಿಯ ಮೇರೆಗೆ ಆಡಳಿತ ನಡೆಸುವಂತಹ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳಿರುತ್ತವೆ. ಇವುಗಳೆರಡರ ಮುಖ್ಯ ಧ್ಯೇಯ ಕಲ್ಯಾಣ ರಾಜ್ಯವನ್ನು ಸೃಷ್ಟಿಸುವುದೇ ಆಗಿದೆ. ಇವುಗಳು ಒಂದು ವ್ಯವಸ್ಥೆಯ ಎರಡು ಮುಖಗಳಿದ್ದಂತೆ. ಆದರೆ ಕಳೆದೆರಡು ದಶಕಗಳಿಂದ ಸಂಸತ್ತು ಮತ್ತು ವಿಧಾನ ಮಂಡಲಗಳ ಚರ್ಚೆಗಳನ್ನು ಗಮನಿಸಿದಲ್ಲಿ ಆಡಳಿತ ಪಕ್ಷದ ಎಲ್ಲಾ ಕ್ರಮಗಳನ್ನು ವಿರೋಧಿಸುವುದೇ ಸರಿಯಾದ ಧೋರಣೆ ಎಂಬ ಭಾವನೆ ಪ್ರತಿಪಕ್ಷಗಳಲ್ಲಿರುವುದು ಕಾಣಿಸುತ್ತದೆ. ಪ್ರತಿಭಟನೆಯ ನೆಪದಲ್ಲಿ ಭಾರತದ ಜನತೆಯ ಆಶೋತ್ತರಗಳನ್ನು, ಸಂಸದೀಯ ಕಲಾಪಗಳ ಮಹತ್ವವನ್ನು, ಪ್ರಜಾಪ್ರಭುತ್ವದ ನಿಲುವುಗಳನ್ನು ಇಂದಿನ ರಾಜಕೀಯ ಪಕ್ಷಗಳು ಬಲಿಕೊಡುತ್ತಿವೆ. ಆಡಳಿತ ಪಕ್ಷವು ತಾನು ಮಾಡಿದ್ದೇ ಸರಿ ಎಂಬ ಧೋರಣೆಯಲ್ಲಿದ್ದರೂ ಅದನ್ನು ಸರಿಪಡಿಸಲು ಸಂಸದೀಯ ಪದ್ಧತಿಯಲ್ಲಿ ಕೆಲವೊಂದು ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳಲಾಗಿದೆ. |
ಕಲಾಪ ನಡೆಸಲು ಅವಕಾಶ ನೀಡದಿರುವುದರ ಹಿಂದೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವು- |
1. ವಿರೋಧ ಪಕ್ಷ ಎಂಬ ಕಾರಣಕ್ಕೋಸ್ಕರ ಹಲವಾರು ಬಾರಿ ಸರ್ಕಾರದ ನಿಲುವು/ನಿರ್ಣಯವನ್ನು ವಿರೋಧಿಸುವಂತಹ ಪ್ರವೃತ್ತಿ |
2. ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಸದಾವಕಾಶದಿಂದ ವಂಚಿತರಾಗಿದ್ದೇವೆ ಎನ್ನುವ ಭಾವನೆಯನ್ನು ವಿಪಕ್ಷ ಹೊಂದಿರುವುದು |
3. ರಾಜಕೀಯ ಪಕ್ಷಗಳು ತಮ್ಮ ಸದಸ್ಯರನ್ನು ಸದನದ ಶಿಸ್ತು ಹಾಗೂ ಗೌರವಕ್ಕೆ ಧಕ್ಕೆ ಬಾರದಂತೆ ವರ್ತಿಸುವಂತೆ ಮಾಡಲು ವಿಫಲವಾಗಿರುವುದು |
4. ಸದನದ ಕಲಾಪವನ್ನು ಮೊಟಕುಗೊಳಿಸುವ ಸದಸ್ಯರ ವಿರುದ್ಧ ಸಮಯೋಚಿತ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು |
5. ರಾಜಕೀಯ ಪಕ್ಷಗಳು ಆಂತರಿಕವಾಗಿ ತಮ್ಮ ಸದಸ್ಯರಿಗೆ ಸದನದ ನಿಯಮಾವಳಿಗಳನ್ನು ಪಾಲಿಸುವಂತೆ ತರಬೇತಿ ನೀಡದೇ ಇರುವುದು |
6. ಪ್ರತಿಪಕ್ಷವು ಸದನದ ಕಾರ್ಯಕಲಾಪ ಸಲಹಾ ಸಮಿತಿಯ ಸಭೆಯನ್ನು ಬಹಿಷ್ಕರಿಸುವುದು |
ಸಾಂವಿಧಾನಿಕ ಸಂಸ್ಥೆಗಳು ತಮ್ಮದೇ ಆದ ಪರಂಪರೆ, ಸಂಸ್ಕೃತಿ, ರೀತಿ-ನೀತಿಗಳನ್ನು ಹೊಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆಗಳ ಕಲಾಪಗಳ ಸಂಸ್ಕೃತಿಯು ಗದ್ದಲದ ಸಂಸ್ಕೃತಿಯತ್ತ ಸಾಗುತ್ತಿದೆ. ಆಟದಲ್ಲಿ ಗೆಲ್ಲಲಾರದವನು ಸುಮ್ಮನೆ ತಕರಾರು ಎತ್ತಿ ಆಟ ನಡೆಯದಂತೆ ಮಾಡುವುದು ಸರಿಯಲ್ಲ. ಈ ರೀತಿ ಮಾಡುತ್ತಲೇ ಹೋದರೆ ಆಟ ಸುಸೂತ್ರವಾಗಿ ನಡೆಯುವುದೇ ಇಲ್ಲ, ಫಲಿತಾಂಶ ದೊರೆಯುವುದಿಲ್ಲ. |
ನೆಹರೂರವರು 'ಸಂಸತ್ತಿನಲ್ಲಿ ಪ್ರಬಲವಾದ ವಿರೋಧ ಪಕ್ಷವಿರಬೇಕು' ಎಂದು ಬಯಸಿದ್ದರು, ಆದರೆ ಕಲಾಪ ನಡೆಸಲು ಬಿಡಲಾರದಂತಹ ವಿರೋಧ ಪಕ್ಷವನ್ನು ನಿರೀಕ್ಷಿಸಿರಲಿಲ್ಲ. ವಿರೋಧ ಪಕ್ಷಗಳ ಧ್ವನಿ ಎತ್ತರದಲ್ಲಿರಬೇಕು, ಆದರೆ ತಾರ್ಕಿಕ ಚರ್ಚೆಯ ನೆಲೆಗಟ್ಟಿನ ಮೇಲೆ ಆ ಧ್ವನಿ ನಿಂತಿರಬೇಕು, ಸಾರ್ವಜನಿಕ ಹೊಣೆಗಾರಿಕೆ, ಪರಿಣಾಮಕಾರಿ ಚರ್ಚೆ, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಸಂವಾದದ ಅಧಿವೇಶನಗಳನ್ನು ಪ್ರಬುದ್ಧ ಜನತೆ ನಿರೀಕ್ಷಿಸುತ್ತಿದ್ದಾರೆ. |
'ಆಡಳಿತ ಪಕ್ಷದಿಂದ ಮೌಲ್ಯರಹಿತ ಅಧಿಕಾರ ಬಳಕೆ, ವಿರೋಧ ಪಕ್ಷಗಳ ಸಂಯಮ ರಹಿತ ನಡವಳಿಕೆ ಹಾಗೂ ಸಭಾಧ್ಯಕ್ಷರ ಪಕ್ಷಪಾತಿ ಧೋರಣೆ ಸಂಸತ್ತಿನ ದೋಷಗಳ ಅಂಶಗಳು' ಎಂದು ಅರುಣ್ ಶೌರಿ ಹೇಳಿರುವ ಮಾತಿನಂತೆ 'ವಿರೋಧ ಪಕ್ಷದ ಸಂಯಮರಹಿತ ನಡವಳಿಕೆ ಮಾತ್ರ ಸಂಸತ್ ಕಲಾಪ ನಡೆಯದಿರಲು ಕಾರಣವಾಗಿದೆ. ವಿಪಕ್ಷ ಸದನದಿಂದ ಹೊರಹೋಗುವುದು ಕೊನೆಯ ಅಸ್ತ್ರವಾಗಬೇಕು. ಕ್ಷುಲ್ಲಕ ಕಾರಣಗಳಿಗಾಗಿ ಸದನವನ್ನು ಬಹಿಷ್ಕರಿಸುವುದು, ಶೂನ್ಯವೇಳೆಯ ದುರುಪಯೋಗ, ಅರ್ಥವಿಲ್ಲದ ಗೊತ್ತುವಳಿಗಳ ಮಂಡನೆ ವಿರೋಧ ಪಕ್ಷಗಳ ಸಾಮಾನ್ಯ ನಡೆಯಾಗಿದೆ. ಹಕ್ಕುಚ್ಯುತಿಗಳ ಮಂಡನೆಯೂ ಇದೇ ರೀತಿಯಾಗಿದೆ. ಸಚಿವರು ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದರೆ, ಸದನದ ಹಕ್ಕು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಗೋಚರವಾದರೆ ಹಕ್ಕುಚ್ಯುತಿ ಮಂಡಿಸಬೇಕು. ಸಣ್ಣ ಪುಟ್ಟ ವಿಷಯಗಳಿಗೆಲ್ಲ ಮಂಡಿಸಿದರೆ ಸಾರ್ವಜನಿಕರು ಸದನವನ್ನು ಗಂಭೀರವಾಗಿ ಪರಿಗಣಿಸದಿರಲು ಕಾರಣವಾಗಬಹುದು. |
ಶಾಸನ ಸಭೆಯ ಸುಗಮ ಕಲಾಪಕ್ಕೆ ಈ ಅಂಶಗಳು ನೆರವಾಗಬಹುದು |
1. ಶಾಸನ ಸಭೆಯ ಅಧಿವೇಶನದ ಕಾಲಾವಧಿಯನ್ನು ಹೆಚ್ಚಿಸುವುದು |
Subsets and Splits
No community queries yet
The top public SQL queries from the community will appear here once available.