text
stringlengths
0
61.5k
ಮದ್ಯ ಮುಕ್ತ ರಾಜ್ಯವಾಯ್ತು ಬಿಹಾರ
ಬಿಹಾರದಲ್ಲಿ ಮದ್ಯಮಾರಾಟಕ್ಕೆ ಬಿತ್ತು ಬ್ರೇಕ್! ಇನ್ನೂ ಮುಂದೆ ಮಾರುವ ಹಾಗೂ ಇಲ್ಲ, ಕುಡಿಯುವ ಹಾಗೂ ಇಲ್ಲ! ಸರ್ಕಾರದ ನಿರ್ಧಾರವನ್ನು ಯಾರಾದರು ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಪಡಿಸುವ ಎಚ್ಚರಿಕೆಯನ್ನು ನೀಡಿದ್ದಾರೆ ಮುಖ್ಯಮಂತ್ರಿ ನಿತೀಶ್ ಕುಮಾರ್.
ಚುನಾವಣಾ ಪೂರ್ವದಲ್ಲಿ ಮದ್ಯಮುಕ್ತ ರಾಜ್ಯವನ್ನಾಗಿ ಘೋಷಿಸುವ ಭರವಸೆ ನೀಡಿದ್ದ ನಿತೀಶ್ ಅವರು ಕೊಟ್ಟ ಮಾತಿನಂತೆ ನಡೆದುಕೊಂಡು ಇಲ್ಲಿನ ಮಕ್ಕಳು ಮತ್ತು ಮಹಿಳೆಯರಿಂದ ಭೇಷ್ ಎಂದು ಕರೆಸಿಕೊಂಡಿದ್ದಾರೆ. ನಗರ ಮತ್ತು ಗ್ರಾಮೀಣ ಭಾಗದ ಯಾವುದೇ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳೂ ಸೇರಿದಂತೆ ರಾಜ್ಯಾದ್ಯಂತ ಮಂಗಳವಾರದಿಂದ ಅಧಿಕೃತವಾಗಿ ಮದ್ಯ ಮಾರಾಟ ಮತ್ತು ಕುಡಿತಕ್ಕೆ ನಿಷೇಧ ಹೇರಿದ್ದಾರೆ.
Previous articleಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಈ ದಿನದ ವಿದ್ಯಮಾನ, ಚಿತ್ರಗಳಲ್ಲಿ ಕಾಣಬೇಕಾದ ಮಹಾನಗರದ ಪ್ರತಿಭಟನಾ ದಿನ
ಶ್ರೀಮಂತರಾಗಲು ಇಷ್ಟ ಇದ್ರೆ ತಕ್ಷಣ ಮನೆಯಿಂದ ಈ ವಸ್ತುಗಳನ್ನು ತೆಗೆದು ಹಾಕಿರಿ – Upayuktamahiti.com
ಶ್ರೀಮಂತರಾಗಲು ಇಷ್ಟ ಇದ್ರೆ ತಕ್ಷಣ ಮನೆಯಿಂದ ಈ ವಸ್ತುಗಳನ್ನು ತೆಗೆದು ಹಾಕಿರಿ
March 28, 2022 March 28, 2022 adminLeave a Comment on ಶ್ರೀಮಂತರಾಗಲು ಇಷ್ಟ ಇದ್ರೆ ತಕ್ಷಣ ಮನೆಯಿಂದ ಈ ವಸ್ತುಗಳನ್ನು ತೆಗೆದು ಹಾಕಿರಿ
ಒಂದು ವೇಳೆ ಉಪಯೋಗವಿಲ್ಲದ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.ಈ ಕೆಲವು ವಸ್ತುಗಳು ಉಪಯೋಗ ಇಲ್ಲದಿದ್ದರೆ ಮೊದಲು ಮನೆಯಿಂದ ಹೊರಗೆ ಹಾಕಿ.ಯಾಕೆಂದರೆ ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
1 , ಮನೆಯಲ್ಲಿ ಮುರಿದ ಕುರ್ಚಿ, ಟೇಬಲ್ ಇದ್ದಾರೆ ಅದನ್ನು ಮನೆಯಿಂದ ಹೊರಗೆ ಹಾಕಿ. ಮುರಿದ ಕುರ್ಚಿ ಟೇಬಲ್ ಇರುವುದರಿಂದ ಆದಾಯ ಕೂಡ ಬರುವುದಿಲ್ಲ. ಧನ ಸಂಪತ್ತಿನಲ್ಲಿ ಕೊರತೆಗಳು ಕಾಡುತ್ತವೆ.ಯಾವುದೇ ರೀತಿಯ ಮುರಿದ ವಸ್ತುವನ್ನು ಇಟ್ಟುಕೊಳ್ಳಬಾರದು.ಇವುಗಳಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇಂತಹ ವಸ್ತುಗಳು ಮನೆಯಲ್ಲಿರುವುದರಿಂದ ಮಾನಸಿಕ ತೊಂದರೆಗಳು ಉಂಟಾಗುತ್ತದೆ.
2, ಮುರಿದು ಹೋದ ಕನ್ನಡಿ,ಹರಿದು ಹೋದ ಫೋಟೋಗಳನ್ನು ಅಂಟಿಸಬಾರದು.3, ಮುರಿದುಹೋದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.4, ದೀಪಾವಳಿಯಲ್ಲಿ ಬಳಸಿದ ಹಳೆಯ ಬಟ್ಟಲುಗಳನ್ನು, ಮುರಿದ ಟೀ ಕಪ್ ಗಳು ಮನೆಯಲ್ಲಿ ಇರಬಾರದು.
5, ಮನೆಯಲ್ಲಿ ಯಾವುದೇ ರೀತಿಯಾಗಿ ಯುದ್ಧದ ಚಿತ್ರಗಳನ್ನು ಅಂಟಿಸಬಾರದು ಮತ್ತು ಹರಿಯುತ್ತಿರುವ ನೀರಿನ ಚಿತ್ರವನ್ನು, ಮುಳುಗುತ್ತಿರುವ ಹಡಗಿನ ಚಿತ್ರವನ್ನು , ಕ್ರೂರ ಪ್ರಾಣಿಗಳ ಚಿತ್ರವನ್ನು, ಮುಳ್ಳು ಇರುವ ಚಿತ್ರವನ್ನು ಆಂಟಿಸಬಾರದು. ವಾಸ್ತುಶಾಸ್ತ್ರದ ಅನುಸಾರವಾಗಿ ಮನೆಯಲ್ಲಿ ಇಂತಹ ಚಿತ್ರಗಳನ್ನು ಇಟ್ಟುಕೊಳ್ಳುವುದರಿಂದ ಇವುಗಳ ಕೆಟ್ಟ ಪ್ರಭಾವ ಮನುಷ್ಯನ ಜೀವನದ ಮೇಲೆ ಬೀರುತ್ತದೆ. ವಿಶೇಷವಾಗಿ ...
6, ಕಾರಂಜಿ ಚಿತ್ರ ಮನೆಯಲ್ಲಿದ್ದರೆ ಹಣ ಬರುತ್ತದೆ ಆದರೆ ಅದು ವ್ಯರ್ಥವಾಗಿ ಹೋಗುತ್ತದೆ.7, ಮನೆಯಲ್ಲಿ ಒಣಗಿದ ಸಸ್ಯಗಳು ಮರಗಳು ಇರಬಾರದು. ಗಿಡಗಳು ಒಣಗದಂತೆ ನೀವು ನೋಡಿಕೊಳ್ಳಬೇಕು ಹಾಗೂ ಮನೆಯೊಳಗೆ ತುಳಸಿ ಸಸ್ಯವನ್ನು ಇಡಬಾರದು.8, ಮನೆಯಲ್ಲಿ ಒಡೆದುಹೋದ ಭಗವಂತನ ಫೋಟೋಗಳನ್ನು ಮತ್ತು ಮೂರ್ತಿಗಳನ್ನು ಇಟ್ಟುಕೊಳ್ಳಬಾರದು.ಇದರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತದೆ.
9, ದೇವರ ಚಿತ್ರಗಳನ್ನು ಕೇವಲ ದೇವರಕೋಣೆಯಲ್ಲಿ ಅಂಟಿಸಬೇಕು ಮತ್ತು ಬೆಡ್ ರೂಮ್ ಗಳಲ್ಲಿ ದೇವರ ಚಿತ್ರವನ್ನು ಆಂಟಿಸಬಾರದು.10, ಕಸವನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಾರದು. ಇದರಿಂದ ಆರ್ಥಿಕ ಸ್ಥಿತಿಗಳು ತೊಂದರೆಗೆ ಒಳಗಾಗುತ್ತವೆ. ಆದ್ದರಿಂದ ಉಪಯೋಗ ಮಾಡದೇ ಇರುವ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿದರೆ ಒಳ್ಳೆಯದು.
ಒಣ ಮೆಣಸಿನಕಾಯಿ ಬೆಳೆಯಬಾರದೇಕೆ, ಅಂದಿದ್ದರಂತೆ ಅವರು! - kittur
HomeDistrictಒಣ ಮೆಣಸಿನಕಾಯಿ ಬೆಳೆಯಬಾರದೇಕೆ, ಅಂದಿದ್ದರಂತೆ ಅವರು! - kittur
ಭದ್ರಕೋಟೆ ಭೇದಿಸಿ ಹೆದ್ದಾರಿಗೆ ನುಗ್ಗಿದ ಹೋರಾಟಗಾರರು! - click...
ಒಣ ಮೆಣಸಿನಕಾಯಿ ಬೆಳೆಯಬಾರದೇಕೆ?
ಚನ್ನಮ್ಮನ ಕಿತ್ತೂರು: 'ಹಸಿ ಮೆಣಸಿನಕಾಯಿಗೆ ಧಾರಣಿ ಕಡಿಮೆ ಇರುತ್ತದೆ. ಒಣ ಮೆಣಸಿನಕಾಯಿಗೆ ಒಳ್ಳೆಯ ದರ ಇರುತ್ತದೆ. ಹಾಗಾದರೆ ಒಣ ಮೆಣಸಿನಕಾಯಿ ಏಕೆ ಬೆಳೆಯಬಾರದು, ಭಾರತೀಯ ರೈತರು ಎಂಥ ದಡ್ಡರು' ಎಂದು ಅವರು ಅಂದಿದ್ದರಂತೆ..
ಈ ಮಾತನ್ನು ನೆನಪಿಸಿದವರು ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೀಗೆ ಹೇಳಿದ್ದನ್ನು ಸೋಮವಾರ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಸ್ಮರಿಸಿದರು.
ಯಾವ ಬೇಳೆ ಹೇಗೆ ಬೆಳೆಯುತ್ತದೆ ಎಂಬುದು ಗೊತ್ತಿರುವುದಿಲ್ಲ. ಕಬ್ಬು ಇಷ್ಟೇ ಇರುತ್ತದೆ. ಬೆಲ್ಲದ ಪೆಂಟಿ 30 ಕೆಜಿ ಇರುತ್ತದೆ. ಹೇಗೆಂದು ಕೇಳುವ ನಮ್ಮವರಿಗೆ ಮೂಲ ಜ್ಞಾನ ನೀಡಬೇಕಾದ ಕಾಲ ಬಂದಿದೆ ಎಂದು ಅವರು ವಿಶ್ಲೇಷಿಸಿದರು.
ವಿಮಾನ ನಿಲ್ದಾಣಕ್ಕೆ ಸೂಕ್ತ ಜಾಗೆ
ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲು ಕಿತ್ತೂರು ಸೂಕ್ತ ಜಾಗೆಯಾಗಿದೆ. ಇಲ್ಲಿ ನಿಲ್ದಾಣ ಆಗುವುದರಿಂದ ಈ ಭಾಗವು ಒಳ್ಳೆಯ ಬೆಳವಣಿಗೆಯಾಗಬಲ್ಲುದು ಎಂದು ಸಚಿವ ನಿರಾಣಿ ಅಭಿಪ್ರಾಯಪಟ್ಟರು.
ಅನಂತರ ಇಲ್ಲಿಯ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದ ಅವರು, ಅಲ್ಲಿದ್ದ ಕೈಗಾರಿಕೆಯೊಂದಕ್ಕೆ ಭೇಟಿ ನೀಡಿ ಉದ್ಯಮಿಯೊಂದಿಗೆ ಮಾಹಿತಿ ಪಡೆದರು.
ಶಾಸಕ ಮಹಾಂತೇಶ ದೊಡ್ಡಗೌಡರ, ಬಸನಗೌಡ ಸಿದ್ರಾಮನಿ, ಚನಬಸಪ್ಪ ಮೊಕಾಶಿ, ನಿಜಲಿಂಗಯ್ಯ ಹಿರೇಮಠ, ಶ್ರೀಕರ ಕುಲಕರ್ಣಿ, ಅಪ್ಪಣ್ಣ ಪಾಗಾದ, ಸಂದೀಪ ದೇಶಪಾಂಡೆ, ಉಳವಪ್ಪ ಉಳ್ಳೇಗಡ್ಡಿ, ಉಮಾದೇವಿ ಬಿಕ್ಕಣ್ಣವರ, ಸರಸ್ವತಿ ಹೈಬತ್ತಿ, ಕಿರಣ ಪಾಟೀಲ, ಕಿರಣ ವಾಳದ, ಕಂದಾಯ ಹಾಗೂ ಕೈಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.
ವಾಹನ ನಿಲುಗಡೆ ತಾಣವಾದ ಸಂತೆ ಶೆಡ್‌ | Prajavani
ವಾಹನ ನಿಲುಗಡೆ ತಾಣವಾದ ಸಂತೆ ಶೆಡ್‌
ಒತ್ತುವರಿಗೆ ನಲುಗಿದ ವಾರದ ಸಂತೆ ಮೈದಾನ; ನಿರ್ಲಕ್ಷ್ಯದಿಂದ ಅಧ್ವಾನಗೊಂಡ ವರ್ತಕರ ನೆರಳಿನ ತಾಣಗಳು
Published: 27 ಮೇ 2018, 18:03 IST
Updated: 27 ಮೇ 2018, 18:03 IST
ಬಾಗೇಪಲ್ಲಿ: ಪಟ್ಟಣದ ಸಂತೆ ಮೈದಾನದ ರಸ್ತೆಯಲ್ಲಿ ವಾರದ ಸಂತೆಗಾಗಿ ನಿರ್ಮಿಸಿರುವ ಶೆಡ್‌ಗಳು ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದೆ ವಾಹನ ನಿಲುಗಡೆ ತಾಣವಾಗಿ, ನಿರ್ಗತಿಕರು, ಪ್ರಾಣಿಗಳ ಸೂರಾಗಿ ಪರಿವರ್ತನೆ ಯಾಗಿರುವುದು ಸಾರ್ವಜನಿಕರ ವಲಯದಲ್ಲಿ ಅಸಮಾಧಾನ ಉಂಟು ಮಾಡಿದೆ.
ಮೈಸೂರು ಬ್ಯಾಂಕ್ ರಸ್ತೆಯ ಹುಣಸೆ ತೋಪಿನಲ್ಲಿ ಪ್ರತಿ ಸೋಮ ವಾರ ನಡೆಯುವ ಸಂತೆಗೆ ಬರುವವರ ಅನುಕೂಲಕ್ಕಾಗಿ 10 ವರ್ಷಗಳ ಹಿಂದೆ ಆರು ಶೆಡ್‌ಗಳನ್ನು ನಿರ್ಮಿಸಲಾಗಿತ್ತು. ವಾರದ ಸಂತೆಗಾಗಿ ಮೀಸಲಿಟ್ಟ ಜಾಗ ಒತ್ತುವರಿಗೆ ನಲುಗುತ್ತಿದ್ದರೆ, ಇತ್ತ ಶೆಡ್‌ಗಳು ದಿನೇ ದಿನೇ ಅಧ್ವಾನಗೊಳ್ಳುತ್ತಿವೆ. ಪುರಸಭೆ ಅಧಿಕಾರಿಗಳು ಇದನ್ನೆಲ್ಲ ಕಂಡರೂ ಕಾಣದಂತೆ ಜಾಣ ಕುರುಡುತನ ತೋರುತ್ತಿದ್ದಾರೆ ಎನ್ನುವುದು ಪಟ್ಟಣದ ...
ಒಂದು ಕಾಲದಲ್ಲಿ ವಿಶಾಲವಾಗಿದ್ದ ವಾರದ ಸಂತೆಯ ಜಾಗ ಪುರಸಭೆ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇದೀಗ ಸ್ವಲ್ಪ ಮಾತ್ರ ಉಳಿದಿದೆ. ಅದರಲ್ಲಿ ಈ ಶೆಡ್‌ ಪುರಾತನ ಕಾಲದ ಸ್ಮಾರಕಗಳ ಪಳೆಯುಳಿಕೆಯಂತೆ ಗೋಚರಿಸುತ್ತಿವೆ. ಶಿಥಿಲಗೊಂಡಿರುವ ಶೆಡ್‌ಗಳು ಬೀಳುವ ಸ್ಥಿತಿಯಲ್ಲಿವೆ.
'ಶೆಡ್‌ಗಳಿಗೆ ಪುರಸಭೆ ವತಿಯಿಂದ ಸೂಕ್ತವಾದ ನಿರ್ವಹಣೆ ಇಲ್ಲದಿರುವುದರಿಂದ ಸುತ್ತಮುತ್ತಲಿ ನವರು ಕಸ, ಕಡ್ಡಿ, ಗಲೀಜನ್ನು ತಂದು ಹಾಕುತ್ತಿದ್ದಾರೆ. ಇದರಿಂದ ಶುಚಿತ್ವ ಇಲ್ಲದೇ ದುರ್ನಾತ ಬೀರುತ್ತಿದೆ. ಮುರಿದಿರುವ ಶೆಡ್‌ಗಳಲ್ಲಿ ನಿರ್ಗತಿಕರು ಬೀಡು ಬಿಟ್ಟು ಮತ್ತಷ್ಟು ಗಲೀಜು ವಾತಾವರಣ ಸೃಷ್ಟಿಸುತ್ತಿದ್ದಾರೆ. ಅದರ ನಿರ್ವಹಣೆ ಆಗುತ್ತಿಲ್ಲ. ಪ್ರಾಣಿಗಳು ಕೆಲವೊಮ್ಮೆ ಇಲ್ಲಿ ಠಿಕಾಣಿ ಹೂಡುತ್ತವೆ. ನ...
'ಪಟ್ಟಣದಲ್ಲಿ ಇದೀಗ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಆದರೆ ಬಹು ಮೌಲ್ಯದ ಪುರಸಭೆಯ ಸ್ವತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅನ್ಯರ ಪಾಲಾಗುತ್ತಿವೆ. ಇದರಿಂದ ಪುರಸಭೆಯ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತಿದೆ. ಆದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸು ತ್ತಿಲ್ಲ' ಎಂದು 4ನೇ ವಾರ್ಡ್ ನಿವಾಸಿ ಅಶೋಕ್ ಬೇಸರ ವ್ಯಕ್ತಪಡಿಸಿದರು.
'ಪಟ್ಟಣದ ಮುಖ್ಯರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಜಾಗ ಸಿಗದ ಕಾರಣಕ್ಕೆ ಅದನ್ನು ಸಹ ಸಂತೆ ತೋಪಿನ ಜಾಗದಲ್ಲಿಯೇ ತೆರೆಯಲು ಭೂಮಿ ಪೂಜೆ ಮಾಡಲಾಗಿದೆ. ಇದರಿಂದ ಸಂತೆಗೆ ಬರುವವರಿಗೆ ತೊಂದರೆಯಾಗಲಿದೆ. ನಿತ್ಯ ಜನದಟ್ಟಣೆ ಇರುವ ಸ್ಥಳದತ್ತ ಕ್ಯಾಂಟೀನ್ ಸ್ಥಳಾಂತರಿಸಿದರೆ ಉತ್ತಮ' ಎಂದು ಹೇಳಿದರು.
ಪುರಸಭೆ ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ವಾರದ ಸಂತೆ ಸಂಸ್ಕೃತಿ ಉಳಿವಿಗಾಗಿ ಶೆಡ್‌ಗಳ ಜಾಗವನ್ನು ಅಭಿವೃದ್ಧಿಪಡಿಸಿ, ಶುಚಿತ್ವ ಕಾಪಾಡಲು ಕ್ರಮಕೈಗೊಳ್ಳಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಶೆಡ್‌ಗಳಿಗೆ ರಕ್ಷಣೆ ನೀಡಲು ಪುರಸಭೆ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಎಲ್ಲರಿಗೂ ತೊಂದರೆಯಾಗಿದೆ
ಏರ್‌ಟೆಲ್‌ನ ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಸಿಗಲಿದೆ ಬಿಗ್‌ ಆಫರ್‌! | Airtel has introduced an additional benefit of 500MB free daily data for rs 249 prepaid plan - Kannada Gizbot
ಏರ್‌ಟೆಲ್‌ನ ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಸಿಗಲಿದೆ ಬಿಗ್‌ ಆಫರ್‌!
| Published: Monday, November 15, 2021, 18:36 [IST]
ದೇಶದ ಟೆಲಿಕಾಂ ವಲಯದಲ್ಲಿ ಗ್ರಾಹಕರ ನೆಚ್ಚಿನ ಸಂಸ್ಥೆಗಳಲ್ಲಿ ಏರ್‌ಟೆಲ್‌ ಕೂಡ ಒಂದಾಗಿದೆ. ಜಿಯೋ ಟೆಲಿಕಾಂ ಜೊತೆಗೆ ಪ್ರಬಲ ಪೈಪೋಟಿ ನಡೆಸುತ್ತಿರುವ ಏರ್‌ಟೆಲ್‌ ಗ್ರಾಹಕರಿಗೆ ಹಲವು ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಅಲ್ಪಾವಧಿಯ ಪ್ಲಾನ್‌ಗಳ ಜೊತೆಗೆ ದೀರ್ಘಾವಧಿಯ ಪ್ಲಾನ್‌ಗಳನ್ನು ಕೂಡ ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಇದಲ್ಲದೆ ಕೆಲವು ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಹ...
ಹೌದು, ಏರ್‌ಟೆಲ್‌ ತನ್ನ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಹೆಚ್ಚುವರಿ ಡೇಟಾ ನೀಡುವ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಇದೀಗ 249ರೂ.ಗಳ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ಬಳಕೆದಾರರಿಗೆ ಉಚಿತವಾಗಿ ದೈನಂದಿನ 500MB ಹೆಚ್ಚುವರಿ ಡೇಟಾ ಪ್ರಯೋಜನವನ್ನು ಪರಿಚಯಿಸಿದೆ. ಈ ಪ್ಲಾನ್‌ ದೈನಂದಿನ 1.5GB ಡೇಟಾ ಪ್ರಯೋಜನ ನೀಡಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಹೀಗೆ ಹೆಚ್ಚುವರಿ ಡೇಟಾ ಪ್ರಯೋಜನ ನ...
ಏರ್‌ಟೆಲ್‌ ಟೆಲಿಕಾಂ 249ರೂ. ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಇದೀಗ ಹೆಚ್ಚುವರಿ ಡೇಟಾ ಆಫರ್‌ ನೀಡಿದೆ. ದೈನಂದಿನ 1.5GB ಡೇಟಾ ಪ್ರಯೋಜನ ನೀಡುವ ಈ ಪ್ಲಾನ್‌ ಹೆಚ್ಚುವರಿ ಡೇಟಾ ಪ್ರಯೋಜನ ಪ್ರಯುಕ್ತ ಇದು ದಿನಕ್ಕೆ 2GB ಡೇಟಾ ನೀಡಲಿದೆ. ಇದನ್ನು ಏರ್‌ಟೆಲ್‌ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ರಿಡೀಮ್ ಮಾಡಬಹುದು. ಇನ್ನು ಈ ಪ್ಲಾನ್‌ ಅನಿಯಮಿತ ಕರೆ ಹಾಗೂ ದಿನಕ್ಕೆ 100 ಎಸ್‌ಎಂಎಸ್‌ ಸೇವೆಯನ್ನು ನೀಡಲಿದ...
ಇನ್ನು ಏರ್‌ಟೆಲ್‌ ಹೆಚ್ಚುವರಿ ಡೇಟಾ ಆಫರ್‌ ನೀಡುವ ಮೂಲಕ ಜಿಯೋದ 249ರೂ ಪ್ಲಾನ್‌ಗೆ ಸೆಡ್ಡು ಹೊಡೆದಿದೆ. ಜಿಯೋ ಟೆಲಿಕಾಂನ 249ರೂ ಪ್ರಿಪೇಯ್ಡ್‌ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್‌ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ. ಈ ಪ್ಲ್ಯ...
ಇದಲ್ಲದೆ ವಿ ಟೆಲಿಕಾಂ ಕೂಡ 249ರೂ.ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ ಹೊಂದಿದೆ. ಆದರೆ ಈ ಪ್ಲಾನ್‌ ದೈನಂದಿನ 1.5GB ಡೇಟಾ ನೀಡಲಿದೆ. ಇನ್ನು ಈ ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಜೊತೆಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೀಕೆಂಡ್ ಡೇಟಾ ...
ದೈನಂದಿನ 2GB ಡೇಟಾ ನೀಡುವ ಏರ್‌ಟೆಲ್ ಪ್ರಿಪೇಯ್ಡ್‌ ಪ್ಲಾನ್‌ಗಳು!
ಏರ್‌ಟೆಲ್‌ ಟೆಲಿಕಾಂನ 298ರೂ. ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಹಾಗೆಯೇ ಈ ಪ್ಲ್ಯಾನ್ ಹೆಚ್ಚುವರಿಯಾಗಿ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.
ಏರ್‌ಟೆಲ್‌ 449ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಒಳಗೊಂಡಿದೆ. ಇದರೊಂದಿಗೆ ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ಮತ್ತು ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಹೊಂದಿದೆ. ಹಾಗೆಯೇ ಪ್ರತಿದಿನ 2GB ಡೇಟಾವನ್ನು ಪಡೆದಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಹೆಲೋ ಟ್ಯೂನ್, ವೆಂಕ್ ಮ್ಯೂಸಿಕ್ ಸೇವೆಗಳ ಪ್ರಯೋಜನ ಸಹ ಲಭ್ಯವಾಗಲಿದೆ.
Bharti Airtel has introduced an additional benefit of 500MB free daily data for its prepaid users.to know more visit to kannada.gizbot.com.
ಡಿಕೆಶಿ, ಸಿದ್ದು ಕಾಂಗ್ರೆಸ್‌ ಜೋಡೆತ್ತು | Udayavani – ಉದಯವಾಣಿ
ಬಂಗಾರಪೇಟೆ: ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೋಡೆತ್ತು ಗಳಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಲಾಗು ವುದು ಎಂದು ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪದಗ್ರಹಣ, ಸಂವಿಧಾನ ಪ್ರತಿಜ್ಞಾ ವಿಧಿ ಓದು ಕಾರ್ಯಕ್ರಮ ವೀಕ...
ಪಕ್ಷದ ಟ್ರಬಲ್‌ ಶೂಟರ್‌ ಡಿ.ಕೆ.ಶಿವಕುಮಾರ್‌ ಅಧ್ಯಕ್ಷರಾ ಗಿರು ವುದರಿಂದ ಕಾರ್ಯಕರ್ತರಲ್ಲಿ ನವಚೈತನ್ಯ ಮೂಡಿದೆ. ಮುಂಬರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಿ, ಗೆಲ್ಲಿಸಿ, ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಜಿಲ್ಲೆಯ 187 ಸ್ಥಳಗಳಲ್ಲಿ 200 ಕಾರ್ಯಕರ್ತರ ಹಾಜರಿ...
ತಾಲೂಕು ಕೆಪಿಸಿಸಿ ಉಸ್ತು ವಾರಿ ಅಂಬರೀಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಾರ್ಥಸಾರಥಿ, ಕೋಚಿಮುಲ್‌ ನಿರ್ದೇಶಕ ಜಯಸಿಂಹ ಕೃಷ್ಣಪ್ಪ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಫ್ರಾನ್ಸಿಸ್‌, ಎನ್‌ಎಸ್‌ ಯುಐ ಅಧ್ಯಕ್ಷ ರಾಕೇಶ್‌ ಕುಮಾರ್‌, ಪುರಸಭೆ ಸದಸ್ಯರಾದ ಸಾದಿಕ್‌ ಪಾಷಾ, ಕಪಾಲಿ ಶಂಕರ್‌, ಕುಂಬಾರಪಾಳ್ಯ ಮಂಜುನಾಥ್‌, ಗೋವಿಂದ, ಎಸ್‌. ವೆಂಕಟೇಶ್‌, ಶಾರದ ವಿವೇಕಾನಂದ, ಮಾಜಿ ಅಧ್ಯಕ್ಷೆ ಭಾಗ್ಯ...
ಚಾತುರ್ಮಾಸ್ಯ ವ್ರತಾಚರಣೆ: ಕಲಶ ವಿಸರ್ಜನೆ , ಪಿಂಛಿ ಪರಿವರ್ತನಾ ಕಾರ್ಯಕ್ರಮ | Sanjevani
Home ಜಿಲ್ಲೆ ಮಂಗಳೂರು ಚಾತುರ್ಮಾಸ್ಯ ವ್ರತಾಚರಣೆ: ಕಲಶ ವಿಸರ್ಜನೆ , ಪಿಂಛಿ ಪರಿವರ್ತನಾ ಕಾರ್ಯಕ್ರಮ
ಚಾತುರ್ಮಾಸ್ಯ ವ್ರತಾಚರಣೆ: ಕಲಶ ವಿಸರ್ಜನೆ , ಪಿಂಛಿ ಪರಿವರ್ತನಾ ಕಾರ್ಯಕ್ರಮ
ಉಜಿರೆ, ನ.೧೮- ಜೈನ ಧರ್ಮದ ಪ್ರಭಾವನೆಯಿಂದ ಸಕಲ ಜೀವಿಗಳ ರಕ್ಷಣೆಯೊಂದಿಗೆ ಲೋಕ ಕಲ್ಯಾಣವಾಗುತ್ತದೆ. ಮುನಿಗಳಿಗೆ ಪಿಂಛಿದಾನ ದಿಂದ ಕರ್ಮಗಳ ನಾಶವಾಗಿ ಪುಣ್ಯ ಸಂಚಯವಾಗುತ್ತದೆ.
ಮುನಿಗಳು ಪಿಂಛಿಯಿಂದ ಸಕಲ ಜೀವಿಗಳ ರಕ್ಷಣೆ ಮಾಡುತ್ತಾರೆ ಎಂದು ಪೂಜ್ಯ ಪುಣ್ಯನಂದಿ ಮುನಿ ಮಹಾರಾಜರು ಹೇಳಿದರು.
ಅವರು ಶನಿವಾರ ವೇಣೂರಿನಲ್ಲಿ ಬಾಹುಬಲಿ ಸಭಾಭವನದಲ್ಲಿ ಚಾತುರ್ಮಾಸ್ಯ ಕಲಶ ವಿಸರ್ಜನೆ , ಸಮಾರೋಪ ಸಮಾರಂಭ ಹಾಗೂ ಪಿಂಛಿ ಪರಿವರ್ತನಾ ಕಾರ್ಯಕ್ರಮದಲ್ಲಿ ಮಂಗಲ ಪ್ರವಚನ ನೀಡಿದರು. ಅಹಿಂಸೆ ಮತ್ತು ಸಂಯಮದ ಸಂಕೇತವಾದ ಪಿಂಛಿ ಸಾಧುಗಳ ಸಾಧನೆಗೆ ಪೂರಕವಾಗಿದೆ. ಮುನಿಗಳ ಜಪ, ತಪ, ಧ್ಯಾನ ಹಾಗೂ ಸ್ವಾಧ್ಯಾಯದಿಂದ ಪಿಂಛಿಯಲ್ಲಿ ವಿಶೇಷ ಶಕ್ತಿ ಇದ್ದು ಮುನಿಗಳು ಪಿಂಛಿಯಿಂದಲೇ ಆಶೀರ್ವಾದ ಮಾಡುತ್ತಾರೆ.
ಸಮಾಜದವರ ಪುರುಷಾರ್ಥ, ಪುಣ್ಯ ಹಾಗೂ ಭಾಗ್ಯದಿಂದ ಮುನಿಗಳು ಚಾತುರ್ಮಾಸ್ಯ ವೃತ ಆಚರಣೆ ಮಾಡುತ್ತಾರೆ. ನಿತ್ಯವೂ ಬಾಹುಬಲಿಯ ದರ್ಶನ ಭಾಗ್ಯದಿಂದ ತಮಗೆ ಅತೀವ ಆನಂದವಾಗಿದೆ ಎಂದು ಹೇಳಿದ ಮುನಿಗಳು ಸುಗಮವಾಗಿ ಚಾತುರ್ಮಾಸ್ಯ ವೃತಾಚರಣೆಗೆ ಸಹಕರಿಸಿದ ಸರ್ವರನ್ನೂ ಹರಸಿ ಆಶೀರ್ವದಿಸಿದರು. ಮುನಿಗಳ ವಾಸ್ತವ್ಯ ದಿಂದ ಭೀಕರ ರೋಗಗಳು ನಿವಾರಣೆಯಾಗುತ್ತವೆ ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಮೂಡಬಿದ್ರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಮೋಕ್ಷ ಮಾರ್ಗದಲ್ಲಿ ಸಾಗಲು ಸಮಾಜಕ್ಕೆ ಮುನಿಗಳು ಮಾರ್ಗದರ್ಶನ ನೀಡುತ್ತಾರೆ. ಮುನಿಗಳು ಸಂಯಮದ ಉಪಕರಣವಾಗಿ ಪಿಂಛಿ ಬಳಸಿದರೆ, ಶೌಚಕ್ಕಾಗಿ ಕಮಂಡಲ ಮತ್ತು ಜ್ಞಾನವೃದ್ಧಿ ಹಾಗೂ ಸ್ವಾಧ್ಯಾಯಕ್ಕಾಗಿ ಶಾಸ್ತ್ರ ಗ್ರಂಥಗಳು – ಈ ಮೂರನ್ನು ಮಾತ್ರ ಬಳಸುತ್ತಾರೆ ಎಂದು ಹೇಳಿದರು.
ಪಂಚ ನಮಸ್ಕಾರ ಮಂತ್ರ ಪಠಣದೊಂದಿಗೆ ಜೈನ ಸಮಾಜದ ವತಿಯಿಂದ ಮೂಡಬಿದ್ರೆಯ ಸ್ವಾಮೀಜಿ ಹಾಗೂ ಡಾ. ಪದ್ಮಪ್ರಸಾದ ಅಜಿಲರು ಪಿಂಛಿಯನ್ನು ಮುನಿಗಳಿಗೆ ಅರ್ಪಿಸಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿದರು. ವಿಜಯರಾಜ ಅಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಯೋಜಕರಾದ ಪ್ರವೀಣ ಕುಮಾರ್ ಇಂದ್ರ ಉಪಸ್ಥಿತರಿದ್ದರು.
ವೇಣೂರು ಜೈನ ಮಿಲನ್ ಕಾರ್ಯದರ್ಶಿ ಜ್ಯೋತ್ಸ್ನಾ ಸ್ವಾಗತಿಸಿದರು. ಸುಧೀಂದ್ರ ಕುಮಾರ್ ಧನ್ಯವಾದವಿತ್ತರು. ಮಹಾವೀರ ಜೈನ್ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರ್ವಹಿಸಿದರು.
ನಾನು ಪುತ್ರರತ್ನನ ಕಾಲ್ಚೆಂಡಿನಾಟವಾದೆನಯ್ಯ... | My sojourn in Red Skins - Kannada Oneindia
3 min ago ಯಾರಾಗುತ್ತಾರೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ?
11 min ago ಸೋಲಿನ ನೈತಿಕ ಹೊಣೆ ಹೊರುತ್ತೇನೆ, ರಾಜೀನಾಮೆ ಇಲ್ಲ: ದಿನೇಶ್ ಗುಂಡೂರಾವ್
16 min ago ಜೀವ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಹಾರಿದರು
20 min ago ವಿರೋಧಪಕ್ಷಗಳ ಆರೋಪದಲ್ಲಿ ಹುರುಳಿಲ್ಲ: ಇವಿಎಂ-ವಿವಿಪ್ಯಾಟ್ ತಾಳೆ ಸಂಪೂರ್ಣ ಪಕ್ಕಾ
ನಾನು ಪುತ್ರರತ್ನನ ಕಾಲ್ಚೆಂಡಿನಾಟವಾದೆನಯ್ಯ...
| Published: Thursday, October 19, 2006, 21:55 [IST]
ಇಷ್ಟೆಲ್ಲ ಅಜ್ಞಾನದಿಂದ ಕೂಡಿದ ನನ್ನನ್ನು ಪಂದ್ಯನೋಡಲು ನನ್ನ ಮಗ ಫೆಡೆಕ್ಸ್‌ ಮೈದಾನಕ್ಕೆ ಕರೆದುಕೊಂಡು ಹೋದ. ನಾನು ಹೋಗಿ ನೋಡಿ ಆನಂದಿಸಿದೆ (ಅನುಭವಿಸಿದೆ?). ಫುಟ್‌ಬಾಲ್‌ ಆಟ ನೋಡಲು ಹೋಗುವುದೆಂದರೆ ಅದು ಬರಿ ಆಟವಲ್ಲೋ ಅಣ್ಣ, ಅದೊಂದು ಇಡೀ ಕುಟುಂಬಕ್ಕೆ ಪಿಕ್‌ನಿಕ್‌ ಇದ್ದಹಾಗೆ. ಆಟ ನೋಡುವುದು ಅಂಥಾ ಒಂದು ವಿಹಾರದ ಸಣ್ಣ ಭಾಗವಷ್ಟೆ.
ಆಟ ಪ್ರಾರಂಭವಾಗುವುದಕ್ಕೆ ಒಂದೆರಡು ಘಂಟೆ ಮೊದಲೇ ನಡೆಯುವ ಸ್ಥಳಕ್ಕೆ ಹೋಗಿ ಸೇರಿ, ಅಲ್ಲೊಂದು ಡೇರೆ ಹಾಕಿ, ಪಾನೀಯಗಳನ್ನು ಮಂಜುಗಡ್ಡೆಯಾಳಗೆ ನೆನೆಗುದಿಗೆ ಹಾಕಲು ತರುಣರು ಉತ್ಸಾಹದಿಂದ ಕಾದಿರುತ್ತಾರೆ. ಕೋಳಿಕಾಲುಗಳನ್ನು ಮಸಾಲೆಯಲ್ಲಿ 'ಮ್ಯಾರಿನೇಟಿ'ಸಿ, ಉಷ್ಣಶುನಕಗಳನ್ನು (ಅರ್ಥಾತ್‌ 'ಹಾಟ್‌ ಡಾಗ್‌' ಗಳನ್ನು) ಬಿಡಿಸಿ ಬೇರ್ಪಡಿಸಿ ಅದಕ್ಕೆ ಬೇಕಾದ ಬನ್ನು ಮುಂತಾದ ಪರಿಕರಗಳನ್ನು ಅಣಿ ಮಾಡಿಕೊಳ್...
ಅತ್ತ, 'ಆಚೆ-ಒಲೆ'ಯಾಂದನ್ನು (ಗ್ರಿಲ್‌ ಅನ್ನು) ಹೂಡಿ ಕಲ್ಲಿದ್ದಿಲಿನಂಥ ಕರಿಗೆಂಡಗಳನ್ನು ಪೇರಿಸಿ ಅದರಮೇಲೊಂದಿಷ್ಟು ಸೀಮೆ ಎಣ್ಣೆಯಂಥ ತೈಲವನ್ನು ಸುರಿದು ಬೆಂಕಿ ಹಚ್ಚುವುದಕ್ಕೆ ಗಂಡಸರು ಮುಂದಾಗುತ್ತಾರೆ. ಏತನ್ಮಧ್ಯೆ, ತಣ್ಣಗಾದ ಪೀತರಸವನ್ನು (ಬೀರು) ಬಾಟಲಿಗಳಿಂದ ಸುರುವಿಕೊಳ್ಳುತ್ತಾ ಆರಂಭವಾಗುತ್ತದೆ ಅಮೇರಿಕನ್ನರ ಮಧ್ಯಾಹ್ನದೂಟದ ತಯಾರಿ. ಆ 'ಪಾಟಿ' ಪೀತರಸವನ್ನು ಹೀರುವ ಮದಿರಾಪ್ರಿಯರ ವಿಸರ್...
ಅಷ್ಟು ಹೊತ್ತಿಗೆ, ಅಮೇರಿಕನ್ನರ ರಾಷ್ಟ್ರಭಕ್ತಿ ಉಕ್ಕಿ ಸುರಿಯುತ್ತಿರುತ್ತದೆ. ರಾಷ್ಟ್ರಗೀತೆಯನ್ನು ಹಾಡಿ ಎಲ್ಲರಿಗೂ ರೋಮಾಂಚನಗೊಳಿಸಲೆಂದೇ ಒಬ್ಬ ಉತ್ತಮ ಹಾಡುಗಾರ/ಗಾರ್ತಿ ಬಂದಿರುತ್ತಾನೆ/ಳೆ. ರಾಷ್ಟ್ರಗೀತೆಯನ್ನು ಕೇಳಿ ರಣ ದುಂದುಭಿ ಮೊಳಗುತ್ತದೆ. ಎರಡೂ ಪಕ್ಷದ ಹುರಿಯಾಳುಗಳು ಸನ್ನದ್ಧರಾದಾಗ ಆಯಾ ಪಕ್ಷದ ಪ್ರೋತ್ಸಾಹಕರು ಗಂಟಲು ಕಿತ್ತು ಹೋಗುವಹಾಗೆ ಕಿರುಚುತ್ತಾರೆ. ಏನು ಕಿರುಚಬೇಕೆಂಬುದನ್ನೂ ...
ಆಟ ಸಾಗುತ್ತಿರುವಾಗ, ಮಧ್ಯೆಮಧ್ಯೆ ಒಳ್ಳೆ ಮಾಟವಾದ ಮಯ್ಯಿನ ಒಂದೇ ಎತ್ತರದ ಕರಿ-ಬಿಳಿ-ಕಂದು ಬಣ್ಣದ ಖುಷಿ-ಹುಡುಗಿಯರು (ಚೀರ್‌ ಗರ್ಲ್ಸ್‌) ವಸ್ತ್ರಲೋಭಿಗಳಾಗಿ ಅಂಗಸೌಷ್ಠವದ ಉಬ್ಬು-ತಗ್ಗುಗಳನ್ನು ಪ್ರದರ್ಶಿಸುತ್ತ ಮಣಿಕಟ್ಟಿನ ಮೂಳೆಗಳು ಸವೆದುಹೋಗುವುವೋ ಅನ್ನುವಷ್ಟು ಬಿರುಸಿನಿಂದ ಕುಣಿಯುತ್ತ, ಹೊಳೆಯುವ ಕುಚ್ಚುಗಳನ್ನು (ಪಾಂ-ಪಾಂ) ತಿರುಗಿಸುತ್ತ ಆಡುಗರನ್ನು, ಅದಕ್ಕಿಂತ ಹೆಚ್ಚಾಗಿ, ನೋಡುಗರನ್ನು...
ತಮ್ಮಮೇಲೆ ಕ್ಯಾಮರಾ ಗುರಿಯಿಟ್ಟದ್ದು ಗೊತ್ತಾದ ಕೂಡಲೆ ಮತ್ತಷ್ಟು ಹಾವಭಾವಗಳಿಂದ ಕೋಮಲಬಾಲೆಯರು ಅಂಗಭಂಗಿಗಳನ್ನು ಪ್ರದರ್ಶಿಸುತ್ತಾ ವಿಕಸಿಸುತ್ತಾರೆ. ಪೀತರಸೋನ್ಮತ್ತರಾದ ತರುಣರು ಹುಚ್ಚೆದ್ದು ಕುಣಿಯುತ್ತಾರೆ. ನಿಜಕ್ಕೂ ಫುಟ್‌ಬಾಲ್‌ ಆಟ ನೋಡಲು ಮಜಾ ಬರುತ್ತದೆ! ದೊಡ್ಡ ದೊಡ್ಡ ಕಂಪನಿಯ ಮೇಲಧಿಕಾರಿಗಳಿಗಾಗಿಯೇ ಕಾದಿರಿಸಿರುವ 'ಸಿಹಿ-ಕೋಣೆ' ಗಳು (ಸ್ವೀಟ್‌) ಇದ್ದವರಿಗಂತೂ ಸ್ವರ್ಗಕ್ಕೆ ಮೂರೇ ಗೇಣು...
ತಮ್ಮೂರಿನ ತಂಡ ಗೆದ್ದರೆ ಅಗದೀ ಭಯಂಕರವಾದ ಸಂತೋಷ. ಸೋತರೆ ಹಿಡಿಶಾಪ. ಮದಿರೆಯ ಪ್ರಭಾವವೂ ಸೇರಿ 'ಸಂಸ್ಕೃತ' ಶಬ್ದಗಳನ್ನು ಪ್ರಯೋಗಿಸುತ್ತ ಎಂಬತ್ತು-ತೊಂಬತ್ತು ಸಾವಿರದಷ್ಟು ಜನ ಇದ್ದಕ್ಕಿದ್ದಂತೆ ಕ್ರೀಡಾಂಗಣವನ್ನು ಖಾಲಿ ಮಾಡುತ್ತಾರೆ. ಆದರೆ, ಅದೊಂದು ಚಕ್ರವ್ಯೂಹ, ಒಳಗೆ ಹೋದಷ್ಟು ಸುಲಭವಾಗಿ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಕಾರುಗಳು ಪಾರ್ಕಿಂಗ್‌ ಲಾಟನ್ನು ಬಿಡಲು ಒಂದು ಘಂಟೆಯಾದರೂ ಬೇಕಾಗುತ...
ಸಂಜೆಯ ಊಟವೂ ಅಲ್ಲೇ ನಡೆಯುತ್ತದೆ. ಶೀತಪೆಟ್ಟಿಗೆಯಲ್ಲಿ ಮಿಕ್ಕ ಪೀತರಸದ ಬಾಟಲಿಗಳು ಒಂದೊಂದಾಗಿ ಖಾಲಿಯಾಗುತ್ತವೆ. ಅಂತೂ ಇಡೀ ಭಾನುವಾರ ಸಂಸಾರಸಮೇತ, ಗಂಡ ಹೆಂಡತಿ ಮಕ್ಕಳು ಮರಿಗಳು ಅಜ್ಜ ಅಜ್ಜಿಯರೂ ಕೂಡಿ ವಿಹರಿಸುತ್ತಾರೆ. ಮಾರನೆಯ ದಿನ ಕೆಲಸಕ್ಕೆ ಬಂದಾಗ ಕಣ್ಣಾರೆ ನೋಡಿದ ಹಿಂದಿನ ದಿನದ ಪಂದ್ಯದ ವಿವರಗಳನ್ನು ಮತ್ತೊಮ್ಮೆ ಮೆಲಕುತ್ತಾ, ನೋಡದೇ ಇದ್ದ ಇತರ ಪಂದ್ಯಗಳಬಗ್ಗೆ ಮಿತ್ರರಿಂದ ಕೇಳಿ ತಿಳಿದು...
ಸರ್ಕಾರಿ ಸೌಲಭ್ಯ ಫಲಾನುಭವಿಗಳಿಗೆ ತಲುಪಿಸಿ | Prajavani
ಸರ್ಕಾರಿ ಸೌಲಭ್ಯ ಫಲಾನುಭವಿಗಳಿಗೆ ತಲುಪಿಸಿ
Published: 02 ಜನವರಿ 2018, 12:26 IST
Updated: 02 ಜನವರಿ 2018, 12:26 IST
ಮುಳಬಾಗಿಲು: 'ಸರ್ಕಾರಿ ಸೌಲಭ್ಯಗಳು ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲು ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು' ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ನಗರದ ಅಮರಜ್ಯೋತಿ ಶಾಲಾ ಆವರಣದಲ್ಲಿ ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಸೋಮವಾರ ಹಮ್ಮಿಕೊಂಡಿದ್ದ ಕೊಳವಿ ಬಾವಿ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತಾಡಿದರು.
ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ 35 ಮಂದಿ ಫಲಾನುಭವಿಗಳಿಗೆ ಕೊಳವೆ ಬಾವಿ ಸಲಕರಣೆ ವಿತರಿಸಲಾಗಿದ್ದು, ಎಲ್ಲ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಇಂತಹ ಅನುದಾನಗಳನ್ನು ದುರುಪಯೋಗ ಮಾಡಿಕೊಳ್ಳಲು ಯಾರೊಬ್ಬರೂ ಅವಕಾಶ ನೀಡಬಾರದು ಎಂದು ತಿಳಿಸಿದರು.
'ರೈತರು ಲಾಭದಾಯಕ ಕೃಷಿ ಚಟುವಟಿಕೆಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಲು ಮುಂದಾಗಬೇಕು' ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿ ರೈತರು ಹಳೆಯ ಕಾಲದ ಕೃಷಿ ಪರಿಕರಗಳನ್ನು ಬಳಸಿಕೊಂಡು ವ್ಯವಸಾಯ ಕ್ಷೇತ್ರದಲ್ಲಿ ಮತ್ತಷ್ಟು ಹಿಂದುಳಿಯುತ್ತಿದ್ದಾರೆ. ರೈತರ ಕೃಷಿ ಹಾಗೂ ವ್ಯವಸಾಯ ಅಭಿವೃದ್ಧಿಗೊಳಿಸುವಲ್ಲಿ ಇವತ್ತಿನ ಸರ್ಕಾರ ರೈತಪರ ಯೋಜನೆ ಜಾರಿಗೊಳಿಸಿದೆ. ಆದ್ದರಿಂದ ರೈತರು ಎಲ್ಲ ಯೋಜನೆಗಳನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಮನವಿ ಮಾಡಿದರು.
ದೇವರಾಜು ಅರಸು ಅಭಿವೃದ್ಧಿ ನಿಗಮ ಇಲಾಖೆ ಅಧಿಕಾರಿ ಗಣೇಶ್, ಕೋಚಿಮುಲ್ ನಿರ್ದೇಶಕ ಆರ್.ಆರ್.ರಾಜೇಂದ್ರಗೌಡ, ಎಪಿಎಂಸಿ ಅಧ್ಯಕ್ಷ ರಘುಪತಿ, ನಗರಸಭೆ ಸದಸ್ಯ ಜಗನ್‍ ಮೋಹನ್‍ರೆಡ್ಡಿ, ಅಂಬ್ಲಿಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಹಾಜರಿದ್ದರು.
ಮಂಗಳೂರು (ಮೇ 15): ಈ ಬಾರಿ ಕೇವಲ ವೋಟರ್ ಸ್ಲಿಪ್ ತೋರಿಸಿದರೆ ಮತದಾನಕ್ಕೆ ಅವಕಾಶವಿದ್ದುದರಿಂದ ಬಹಳಷ್ಟು ನಕಲಿ ಮತದಾನ ನಡೆದಿರುವ ಸಾಧ್ಯತೆಗಳಿವೆ. ಹೀಗಾಗಿ ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಆಹಾರ ಸಚಿವ, ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಮತದಾನ ಪ್ರಕ್ರಿಯೆ ಸಂ...
ಮತದಾರರು ತಮ್ಮ ಗುರುತಿನ ಚೀಟಿ ತೋರಿಸದೆ ಕೇವಲ ವೋಟರ್ ಸ್ಲಿಪ್ ತೋರಿಸಿ ಮತದಾನ ಮಾಡಬಹುದಾಗಿತ್ತು. ವೋಟರ್ ಸ್ಲಿಪ್‌ನಲ್ಲಿ ಮನೆ ನಂಬರ್ ನಮೂದಿಸಿಲ್ಲ. ಮತದಾರರ ಭಾವಚಿತ್ರ ಅಚ್ಚಾಗಿದ್ದರೂ ಪ್ರಿಂಟ್ ದೋಷದಿಂದ ಬಹುತೇಕ ಭಾವಚಿತ್ರಗಳು ಸರಿಯಾಗಿ ಕಾಣುತ್ತಿರಲಿಲ್ಲ.
ಇದರ ದುರುಪಯೋಗ ಪಡೆದು ಯಾರದೋ ಹೆಸರಿನಲ್ಲಿ ಬೇರೆ ಯಾರೋ ಮತದಾನ ನಡೆಸಿರುವ ಸಾಧ್ಯತೆ ಬಹಳಷ್ಟು ಹೆಚ್ಚಿದೆ ಎಂದು ದೂರಿದರು. ಈ ತಪ್ಪನ್ನು ಚುನಾವಣಾ ಆಯೋಗ ಮುಂದಿನ ಲೋಕಸಭೆ ಚುನಾವಣೆ ಸಂದರ್ಭದಲ್ಲಾದರೂ ಸರಿಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ದುಬೈ ಮೇಳದಲ್ಲಿ ಭಾರತೀಯತೆ ಹಾಗೂ ಕರ್ನಾಟಕ ಶಿಲ್ಪ ಸಂಸ್ಕೃತಿ | Dubai festival begins on Jan. 12th of 2005 - Kannada Oneindia
ದುಬೈ ಮೇಳದಲ್ಲಿ ಭಾರತೀಯತೆ ಹಾಗೂ ಕರ್ನಾಟಕ ಶಿಲ್ಪ ಸಂಸ್ಕೃತಿ
2005ರ ಜನವರಿ 12ರಿಂದ ಜಾಗತಿಕ ಆಕರ್ಷಣೆಯ ದುಬೈ ಮೇಳ ಶುರು
ದುಬೈ : 2005ರ ಜನವರಿಯಲ್ಲಿ ನಡೆಯಲಿರುವ ದುಬೈ ಮೇಳ ಈ ಬಾರಿ ಭಾರತೀಯ ಸ್ಪರ್ಶದಿಂದ ಕಂಗೊಳಿಸುವ ಸಾಧ್ಯತೆಗಳಿದ್ದು , ಈ ಮೇಳದಲ್ಲಿ ಕರ್ನಾಟಕದ ಕಂಪೂ ಇರಲಿದೆ.
ಪ್ರತಿಷ್ಠಿತ ದುಬೈ ಮೇಳದಲ್ಲಿ ದೇಶವಿದೇಶದ ಲಕ್ಷಾಂತರ ಮಂದಿ ಭಾಗವಹಿಸುತ್ತಾ ರೆ. ಈ ವರ್ಷದ ಉತ್ಸವದ ಶಾಪಿಂಗ್‌ನಲ್ಲಿ ಭಾರತೀಯ ಮಳಿಗೆಗಳೇ ಪ್ರಮುಖ ಆಕರ್ಷಣೆ. ಮಾರಾಟ ಮಳಿಗೆಗಳಲ್ಲಿ ಹೆಚ್ಚೆಚ್ಚು ಭಾರತೀಯ ವಸ್ತುಗಳನ್ನು ಪ್ರದರ್ಶಿಸುವ ಮೂಲಕ ಭಾರತೀಯರನ್ನು ಸೆಳೆಯಲಾಗುವುದು ಎಂದು ಭಾರತೀಯ ಕಾನ್ಸಲೇಟ್‌ ಜನರಲ್‌ ವೈ.ಕೆ. ಸಿನ್ಹಾ ತಿಳಿಸಿದ್ದಾರೆ.
ಇಷ್ಟೇ ಅಲ್ಲ , ಯುನೆಸ್ಕೋ ಸಂರಕ್ಷಿತ ಪರಂಪರೆ ಸ್ಮಾರಕಗಳ ಪಟ್ಟಿಯಲ್ಲಿರುವ ವಿಶ್ವ ವಿಖ್ಯಾತ ಹಂಪಿಯ ಐತಿಹಾಸಿಕ ಸ್ಮಾರಕಗಳ ಪ್ರತಿಕೃತಿಗಳೂ ದುಬೈ ಮೇಳದಲ್ಲಿ ಇರಲಿವೆ. ವಾಣಿಜ್ಯ-ಸಂಸ್ಕೃತಿ ಎರಡೂ ಕಾರಣಗಳಿಗಾಗಿ ಮೇಳ ಬಳಕೆಯಾಗುತ್ತಿರುವುದು ವಿಶೇಷ.
ಆರ್ಕೈವ್ಸ್ ಮಾಡಿದಾಗ - TELES RELAY
ಕೇಟ್ ಮಿಡಲ್ಟನ್ ಅವರಿಂದ ಸುದ್ದಿ: ಜಾರ್ಜ್, ಷಾರ್ಲೆಟ್ ಮತ್ತು ಲೂಯಿಸ್ ಅವರೊಂದಿಗೆ ಕೇಟ್ ಯಾವಾಗ ಅನುಪಸ್ಥಿತಿಯ ರಜೆ ಪಡೆಯುತ್ತಾರೆ?