text
stringlengths
0
61.5k
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ, ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಲಹೆಗಾರ ಕರ್ನಿರೆ ವಿಶ್ವನಾಥ್ ಶೆಟ್ಟಿ, ಮೋಹನ್ ಶೆಟ್ಟಿ ಮೂಡನಿಡಂಬೂರು, ಮನೋಹರ್ ಶೆಟ್ಟಿ ತೋನ್ಸೆ ಉಪಸ್ಥಿತರಿದ್ದರು.
ದ.ಕ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ NRI ಗಳಿಗೆ ಲಸಿಕೆ ನೀಡಲು ಡಿ.ಸಿ ಆದೇಶ: ಅನಿವಾಸಿ ಕನ್ನಡಿಗರಿಂದ ಸ್ವಾಗತ – V4 News
June 11, 2021 17 No comment
ಮೇ 30ರಂದು ದ.ಕ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಆಯೋಜಿಸಲ್ಪಟ್ಟ ಜಿಲ್ಲಾಧಿಕಾರಿಗಳೊಂದಿಗೆ ಅನಿವಾಸಿ ಕನ್ನಡಿಗರ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ಹಲವು ಅನಿವಾಸಿ ಕನ್ನಡಿಗರು, ಸಂಘಟನೆಗಳು ಪಾಲ್ಗೊಂಡು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರರವರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಕ್ತ ಸ್ಥಿತಿಗತಿ ಹಾಗೂ ಅನಿವಾಸಿಗಳ ಸಮಸ್ಯೆ ಬಗ್ಗೆ ವಿಸ್ತೃತವಾಗಿ ಚರ್ಚ...
ವೀಡಿಯೊ ಸಂವಾದದಲ್ಲಿ ಬಹುಮುಖ್ಯವಾಗಿ ಚರ್ಚೆಯಾದ ವಿಷಯ ಅನಿವಾಸಿಗಳಿಗೆ ತುರ್ತು ಲಸಿಕೆ ನೀಡುವ ಕುರಿತಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಜನರು ವಿದೇಶದಲ್ಲಿ, ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ, ರಜೆ ನಿಮ್ಮಿತ ಊರಿಗೆ ತೆರಳಿರುವ ಅನೇಕರಿಗೆ ಮರಳಿ ಬರಲು ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಿದರೆ ನೂರಾರು ಮಂದಿ ಲಸಿಕೆ ಪಡೆಯದೇ ಕ್ಲಪ್ತ ಸಮಯದಲ್ಲಿ ವಾಪಾಸಾಗಲೂ ಆಗದ...
ಸಂವಾದ ಕಾರ್ಯಕ್ರಮ ಮುಕ್ತಾಯವಾದ ಕೂಡಲೇ ಈ ಕುರಿತು ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿಯವರು, ಅನಿವಾಸಿಗಳಿಗೆ ಲಸಿಕೆ ಪಡೆಯಲು ಹೆಸರು ನೊಂದಾಯಿಸಲು ಸೂಚಿಸಿ, ನೊಂದಾಯಿಸಿದ 402 ಜನರಿಗೆ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಪ್ರಥಮ ಲಸಿಕೆ ನೀಡುವ ವ್ಯವಸ್ಥೆ ಮಾಡಿದ್ದರು, ಹೊಸದಾಗಿ ನೊಂದಾಯಿಸಿದ 500 ಜನರಿಗೆ ಜುಲೈ 11ರಂದು ಲಸಿಕೆ ನೀಡಲು ವ್ಯವಸ್ಥೆ ಮಾಡಲಾಯಿತು. ಇದೀಗ, ಜೂನ್ 14‌ ರ ಸೋಮವಾರದಿಂದ ...
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಈ ಆದೇಶವನ್ನು ಅನಿವಾಸಿ ಕನ್ನಡಿಗರು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದಾರೆ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ 'ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ'ಯ ಯತೀಶ್ ಬೈಕಂಪಾಡಿರವರ ಕಾಳಜಿಗೆ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್, ಒಮಾನ್ ಪ್ರವಾಸಿ ಕನ್ನಡಿಗರ ಸೇವಾ ವೇದಿಕೆಯ ಶಶಿಧರ ಶೆಟ್ಟಿ, ದುಬೈ ಅಡ್ವೊಕೇಟ್ ಸುನೀಲ್...
Tags: #covid 19 #Dakshina Kannada District Collector Dr KV Rajendra #DK District Red Cross Society #nri #v4stream V4News
ಜಯಪ್ರಕಾಶ್ ಹೆಗ್ಡೆ ಪರ ಟ್ವಿಟರ್ ಅಭಿಯಾನ:ಚಿಂತೆಗೀಡಾದ ಶೋಭಾ ಕರಂದ್ಲಾಜೆ | Jayaprakash Hegde fans started Twitter campaign - Kannada Oneindia
| Published: Tuesday, January 8, 2019, 15:09 [IST]
ಉಡುಪಿ, ಜನವರಿ 08: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಮುಂದೆ ಚುನಾವಣೆಗೆ ಸ್ಪರ್ಧಿಸಲಿರುವ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದ್ದು, ಈ ನಡುವೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಆಯ್ಕೆಗೆ ಒತ್ತಾಯಿಸಿ ಟ್ವಿಟರ್ ಅಭಿಯ...
ಜಯಪ್ರಕಾಶ್ ಹೆಗ್ಡೆ ಅವರ ಅಭಿಮಾನಿಗಳು ಒಂದೇ ದಿನದಲ್ಲಿ ಮಾಡಿರುವ ಟ್ವೀಟ್ ಗಳು ನೂರೋ, ಇನ್ನೂರೋ ಅಲ್ಲ, ಭರ್ತಿ 3,000 ಟ್ವೀಟ್ ಗಳನ್ನು ಮಾಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚುತ್ತಲೇ ಇದೆ.
"ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಸ್ಪರ್ಧಿಸಲು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಸಮರ್ಥರು.‌ ಇವರಿಗೆ ಟಿಕೆಟ್ ನೀಡಿ ಎಂದು ಟ್ವಿಟರ್ ನಲ್ಲಿ ಒತ್ತಾಯಿಸಲಾಗುತ್ತಿದೆ". ಕಳೆದ ಎರಡು ದಿನಗಳಿಂದ ನಿರಂತರವಾಗಿ ಟ್ವೀಟ್ ಗಳು ಹೆಚ್ಚುತ್ತಿದ್ದು, ಹೆಗ್ಡೆ ಅವರ ಪರವಾಗಿ ಮಾಡಲಾದ ಈ ಹ್ಯಾಶ್ ಟ್ಯಾಗ್ ಟ್ವೀಟ್ ಭಾರಿ ಗಮನ ಸೆಳೆಯುತ್ತಿದೆ.
ಮುಂದಿನ ಲೋಕಸಭಾ ಚುನಾವಣೆಗೆ ಜಯಪ್ರಕಾಶ ಹೆಗ್ಡೆ ಬಿಜೆಪಿ ಅಭ್ಯರ್ಥಿಯಾಗಬೇಕು ಎನ್ನುವ ಒತ್ತಾಯ ಇತ್ತು. ಸದ್ಯ ಈ ಒತ್ತಾಯ ಟ್ವಿಟರ್ ಮೂಲಕವೂ ವ್ಯಕ್ತವಾಗುತ್ತಿದೆ. ಆದರೆ ಜಯಪ್ರಕಾಶ ಹೆಗ್ಡೆ ಅವರ ಅಭಿಮಾನಿಗಳು ಆರಂಭಿಸಿರುವ ಈ ಟ್ವಿಟರ್ ಅಭಿಯಾನ ಸಂಸದೆ ಶೋಭಾ ಕರದ್ಲಾಜೆ ಅವರನ್ನು ಚಿಂತೆಗೇಡುಮಾಡಿದೆ.
ಬಿಜೆಪಿ ರಾಷ್ಟ್ರೀಯ ಮಟ್ಟದ ನಾಯಕರು ಈ ಟ್ವೀಟ್ ಹ್ಯಾಶ್ ಟ್ಯಾಗ್ ನೋಡಿ ಜಯಪ್ರಕಾಶ ಹೆಗ್ಡೆ ಅವರನ್ನು ಮುಂದಿನ ಉಡುಪಿ -ಚಿಕ್ಕಮಂಗಳೂರು ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಿದ್ದಾರೋ ? ಕಾದು ನೋಡಬೇಕು.
udupi loksabha election ticket twitter campaign district news ಉಡುಪಿ ಚುನಾವಣೆ ಲೋಕಸಭಾ ಟಿಕೆಟ್ ಜಿಲ್ಲಾಸುದ್ದಿ
Supporter of BJP activists making noise on Twitter in favour of Jayaprakash Hegged . They demanding tick to Jayaprakash Hegged for contest in next upcoming Loksabha election from Udupi- Chikkamangaluru constituency.
ಶಾಂತಿ ಸ್ಥಾಪನೆ ಗಾಂಧೀಜಿ ಕನಸು: ಫಾದರ್ ಡೇವಿಡ್ ಡಿಸೋಜಾ | Prajavani
ಶಾಂತಿ ಸ್ಥಾಪನೆ ಗಾಂಧೀಜಿ ಕನಸು: ಫಾದರ್ ಡೇವಿಡ್ ಡಿಸೋಜಾ
ಮಹಾತ್ಮ ಗಾಂಧೀಜಿ 150ನೇ ಜಯಂತಿ: ಅರ್ಥಪೂರ್ಣ ಆಚರಣೆ
Published: 02 ಅಕ್ಟೋಬರ್ 2018, 18:27 IST
Updated: 02 ಅಕ್ಟೋಬರ್ 2018, 18:27 IST
ಕಲಬುರ್ಗಿ: 'ಶಾಂತಿ ಸ್ಥಾಪಿಸುವುದೆಂದರೆ ದೇವರ ರಾಜ್ಯ ಸ್ಥಾಪಿಸಿದಂತೆ. ಅದುವೇ ಗಾಂಧೀಜಿಯವರ ಕನಸಾಗಿತ್ತು' ಎಂದು ಫಾದರ್ ಡೇವಿಡ್ ಡಿಸೋಜಾ ಹೇಳಿದರು.
ಮಿನಿ ವಿಧಾನಸೌಧ ಆವರಣದಲ್ಲಿ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ವ ಧರ್ಮ ಪ್ರಾರ್ಥನೆ- ಸದ್ಭಾವನಾ ಗೀತ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಬುದ್ಧ, ಬಸವ, ಗಾಂಧೀ, ಅಂಬೇಡ್ಕರ್ ಅವರ ಜೀವನದ ಸಂದೇಶಗಳೇ ನಮಗೆ ದಾರಿ ದೀಪವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ನಾವು–ನೀವೆಲ್ಲರೂ ಸಾಗಬೇಕಾಗಿದೆ' ಎಂದರು.
ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, 'ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಗಾಂಧೀಜಿಯವರ ಪಾತ್ರ ಬಹುಮುಖ್ಯವಾಗಿದೆ. ಅವರ ಪರಿಶ್ರಮದಿಂದಾಗಿ ನಾವೆಲ್ಲರೂ ಇಂದು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ' ಎಂದು ಹೇಳಿದರು.
ಮಹ್ಮದ್ ಜಾವೀದ್ ಆಲಂ ಖಾಸ್ಮಿ ಮಾತನಾಡಿ, 'ಗಾಂಧೀಜಿ ಅವರು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸರ್ವ ಧರ್ಮಗಳ ಸಮುದಾಯವನ್ನು ಒಗ್ಗೂಡಿಸಿಕೊಂಡು ಮುನ್ನಡೆದರು. ವಿವಿಧತೆಯಲ್ಲಿ ಏಕತೆ ಹೊಂದಿರುವ ನಾವುಗಳು ಪ್ರೀತಿ, ಸಹೋದರತ್ವದಿಂದ ಬಾಳಬೇಕು' ಎಂದು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರತಂದಿರುವ 'ಪಾಪು ಗಾಂಧಿ-ಗಾಂಧಿ ಬಾಪು ಆದ ಕಥೆ' ಕಿರುಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಲೋಕಾರ್ಪಣೆ ಮಾಡಿದರು.
ಬುದ್ಧ ವಿಹಾರದ ಸಂಘಾನಂದ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಮಲ್ಲಮ್ಮ ಎಸ್.ವಳಕೇರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಭಾರತ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಶಶೀಲ್ ಜಿ.ನಮೋಶಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್...
ಗೋವಾ ಹೆಸರೇ ಕಮಾಲ್… – ಅವಧಿ/Avadhi
ಖುಷ್ವಂತ್ ಸಿಂಗ್ ಒಮ್ಮೆ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ….
"ನನ್ನ ಪತ್ನಿ ತೀರಿಹೋದಾಗ ನಾನು ತುಂಬ ದುಃಖದಲ್ಲಿದ್ದೆ. ಆದಷ್ಟು ಮರೆಯಲು ಯತ್ನಿಸುತ್ತಿದ್ದೆ. ಆದರೆ ಎಲ್ಲರೂ ಅದರ ಕುರಿತೇ ಮಾತಾಡುತ್ತಿದ್ದರು. ನಾನು ಕುಡಿತದಲ್ಲಿ, ಓದಿನಲ್ಲಿ ಅದನ್ನು ಮರೆಯಲು ಯತ್ನಿಸುತ್ತಿದ್ದೆ. ಜನರ ಕಾಟ ಹೆಚ್ಚಾದಾಗ ಗೋವಾಕ್ಕೆ ಯಾರಿಗೂ ಹೇಳದೆಕೇಳದೆ ಓಡಿಹೋದೆ." ಎಂದು
ನನಗೆ ಆಶ್ಚರ್ಯವಾಯ್ತು-
ಅಷ್ಟೊಂದು ನೊಂದಜೀವಿಗೆ ನೆಮ್ಮದಿಕೊಡುವಂಥದ್ದು ಅಂಥದ್ದೇನಿದೆ ಗೋವಾದಲ್ಲಿ ಅಂತ. ಮದ್ಯ, ಮಾನಿನಿ, ಜೂಜುಗಳಾಗಿದ್ದರೆ ಅವು ಬೇರೆಕಡೆಯೂ ಸಿಗುತ್ತವಲ್ಲ..?! ಗೋವಾನೆ ಆಗಬೇಕೆ..?
ಮಾವಿನಕೆರೆ ರಂಗನಾಥನ್ ಅವರ ಕಾದಂಬರಿ "ಮಿಥುನ" ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ
ಪ್ರಕಟಗೊಳ್ಳುತ್ತಿದ್ದಾಗ ಪ್ರತಿವಾರ ತಪ್ಪದೆ ಓದುತ್ತಿದ್ದೆ. ಅದರಲ್ಲಿ ಹೀರೋ-ಹೀರೋಯಿನ್ ಓಡಿಹೋಗುವುದು ಗೋವಾಗೆ. ಅದರಲ್ಲಿನ ವರ್ಣನೆ ಗಮನಸೆಳೆದಿತ್ತು. ಅದರೊಟ್ಟಿಗೆ ನಾಯಕಿಗೆ ಮನಃಪರಿವರ್ತನೆಯಾಗಿ, ಬದುಕಿನ ಇನ್ನೊಂದು ಮುಖವನ್ನು ಆಕೆ ಒಪ್ಪಿಕೊಳ್ಳುವ ಕಥೆ ನನಗೆ ತುಂಬ ಹಿಡಿಸಿತ್ತು. ಅದೂ ನಡೆಯುವುದು ಗೋವಾದಲ್ಲಿ. ಕುತೂಹಲ ಮೊಳಕೆಯೊಡೆದದ್ದು ಹೀಗೆ.
ಕೃಷ್ಣದೇವರಾಯನನ್ನು ಕುರಿತ ಅಧ್ಯಯನವೊಂದನ್ನು ಕೈಗೊಂಡಾಗಲಂತೂ ಗೋವಾ ತನ್ನ ಇತಿಹಾಸ ಸಮೇತ ನನಗೆ ಮುಖಾಮುಖಿಯಾಯಿತು. ವಿಜಯನಗರ ಸಾಮ್ರಾಜ್ಯದ ರಾಶಿರಾಶಿ ಮುತ್ತುರತ್ನಗಳ ವ್ಯಾಪಾರದ ಕಥೆಯಿದೆಯಲ್ಲ.. ಅದು ನಿಜಕ್ಕೂ ಶುರುವಾಗುವುದು ಗೋವಾದಿಂದಲೇ. ವಿಜಯನಗರಕ್ಕೆ ಬಂದ ಪ್ರಾವಾಸಿಗರೆಲ್ಲರು ಗೋವಾ ಮೂಲಕವೇ ಪ್ರವೇಶಿಸುತ್ತಿದ್ದರು. ಆ ಮೂಲಕವೇ ಬಹುತೇಕ ಸರಕುಗಳು ಸಾಗಣೆಯಾಗುತ್ತಿದ್ದವು. ಮತ್ತು ಗೋವಾ ಇತಿಹಾ...
ತೀರ ಇತ್ತೀಚೆಗೆ ಗಣಿಗಾರಿಕೆಯ ಜನ ಉಪಯೋಗಿಸಿಕೊಂಡದ್ದೂ ಗೋವಾವನ್ನೇ. ಹೀಗೆ ಗೋವಾ ನನ್ನನ್ನು ಆಕರ್ಷಿಸುತ್ತಾ ಹೋಯಿತು. ಒಂದೆರಡು ದಿನಗಳ ಮಟ್ಟಿಗೆ ಹೋಗಿಬಂದಿದ್ದೂ ಆಯ್ತು. ಆದರೆ ಅದರ ಆಕರ್ಷಣೆ ಅಷ್ಟಕ್ಕೆ ಕೊನೆಗೊಳ್ಳಲಿಲ್ಲ. ವಿಭಿನ್ನವಾದ ಏನಾದರೊಂದನ್ನು ಗೋವಾ ಕುರಿತು ಮಾಡಬೇಕೆಂಬ ಆಸೆ ಬಹುದಿನಗಳಿಂದಲೂ ಇತ್ತು. ಆದರೆ ಏನೆಂಬುದು ಹೊಳೆದಿರಲಿಲ್ಲ.ಇಂಥಾ ಸಂದರ್ಭದಲ್ಲೇ ದೊರಕಿದ್ದು ಈ "ಸಾಂಸ್ಕೃತಿಕ ಅ...
ಹೊರಟೆ- ಗೋಮಾಂತವನ್ನು ಹುಡುಕುತ್ತಾ…
ಪೌರಾಣಿಕವಾಗಿ ಕಥೆಯೊಂದಿದೆ.
ಜಗತ್ತಿನೆಲ್ಲಾ ಕ್ಷತ್ರಿಯರನ್ನು ಕೊಂದು ಲೋಕವನ್ನೆಲ್ಲಾ ಗೆದ್ದ ಪರಶುರಾಮನಿಗೆ ಕಾರಣಾಂತರಗಳಿಂದ ಲೋಕಭ್ರಷ್ಟನಾಗಬೇಕಾಗಿ ಬಂತು. ಗೆದ್ದ ಎಲ್ಲ ಸ್ಥಳಗಳನ್ನೂ ಕಳೆದುಕೊಂಡು ನೆಲೆಯೇ ಇಲ್ಲದಂತಾದಾಗ ಸಹ್ಯಾದ್ರಿ ಪರ್ವತಗಳ ಕಡೆಯಿಂದ ಏಳುಬಾಣಗಳನ್ನು ಬಿಟ್ಟು, ಸಮುದ್ರದ ನೀರು ಹಿಂದೆ ಸರಿಯುವಂತೆ ಮಾಡಿದ. ಹಾಗೆ ಸಮುದ್ರ ಹಿಂದೆ ಸರಿದ ಜಾಗದಲ್ಲಿ ಸೃಷ್ಟಿಯಾದ ಹೊಸ ಭೂಭಾಗವೇ "ಗೋಮಾಂತ" ಅರ್ಥಾತ್ ಗೋವುಗಳ ನಾಡು...
ಭೂಮಿಯ ಮೇಲಿನ ಭೂಭಾಗವೆಲ್ಲವೂ ಒಂದನೊಂದು ಕಾಲದಲ್ಲಿ ಸಮುದ್ರದಿಂದ ಮೇಲೆದ್ದುಬಂದ ಪ್ರಕೃತಿಸಹಜ ಪ್ರಕ್ರಿಯೆಗಳೇ ತಾನೇ..! ಗೋವಾ ಸಹಾ ಕಾಲಾಂತರದಲ್ಲಿ ಸಮುದ್ರ ಹಿಂದೆ ಸರಿದ ಕಾರಣಕ್ಕಾಗಿಯೇ ಸೃಷ್ಟಿಯಾದ ಭೂಭಾಗ. ಇದು ಎಲ್ಲ ನಡುಗಡ್ಡೆ, ಭೂಶಿರಗಳಲ್ಲಿ ನಡೆಯುವ ಅತಿ ನಿಧಾನವಾದ ಭೌಗೋಳಿಕ ಪ್ರಕ್ರಿಯೆ. ಇದು ನಡೆದದ್ದು ಸುಮಾರು ಕ್ರಿಸ್ತಪೂರ್ವ 12,000ರ ಕಾಲಮಾನದಲ್ಲಿ. ಸಮುದ್ರತೀರದ ಭಾಗಗಳಲ್ಲಿ ದೊರಕಿರು...
ಗೋವಾ ಪೌರಾಣಿಕತೆ ಇಲ್ಲಿಗೆ ಮುಗಿದಿಲ್ಲ.
ಭೀಷ್ಮಪರ್ವ, ಸ್ಕಂದಪುರಾಣ, ಸುತ ಸಮಾಹಿತಗಳಲ್ಲಿ "ಗೋವಾಪುರಿ"ಯ ಪ್ರಸ್ತಾಪವಿದೆ. ಪರಶುರಾಮ ಯಜ್ಞಗಳಿಗಾಗಿ ಪುರೋಹಿತರನ್ನು ಕರೆಸಿದನಷ್ಟೇ.. ಅವರಲ್ಲಿ ಏಳುಜನರು ಪರಶಿವನ ವಿಶೇಷಪ್ರೀತಿಗೆ ಪಾತ್ರರಾಗಿ ಸಪ್ರರ್ಷಿಗಳೆನಿಸಿದರು. ಮುಂದೆ ಸಪ್ತಕೂಟೇಶ್ವರರೆಂಬ ಹೆಸರಿನಿಂದ ಪ್ರಸಿದ್ಧರಾದರು. ಒಮ್ಮೆ ಶಿವನೇ ಪಾರ್ವತಿಯೊಡನೆ ವಿರಸವೇರ್ಪಟ್ಟಾಗ ಗೋವಾಕ್ಕೆ ಬಂದು ಕೆಲಕಾಲ ಕಳೆದನಂತೆ. ಮತ್ತೊಂದು ಪ್ರತೀತಿಯ ಪ್ರ...
ಇಷ್ಟಕ್ಕೂ "ಗೋಮಾಂತ" ಎಂಬುದರ ಅರ್ಥವೇನೆಂದು ಎಲ್ಲೂ ವಿವರಣೆ ಸಿಗುತ್ತಿಲ್ಲ.
ಗುಡ್ಡಗಾಡು, ಹುಲ್ಲುಗಾವಲಿನ ತಪ್ಪಲುಪ್ರದೇಶವಾದ್ದರಿಂದ ಗೋವಾದಲ್ಲಿ ಗೋಸಂಪತ್ತು ಸಾಕಷ್ಟಿದ್ದಿರಬಹುದು. ಗೋವಾ ಆಯಕಟ್ಟಿನ ಜಾಗದಲ್ಲಿರುವ ಬಂದರು ಪ್ರದೇಶವಾದ್ದರಿಂದ ವಿದೇಶಗಳ ದೃಷ್ಟಿ ಮೊದಲು ಗೋವಾದ ಮೇಲೆಯೇ ಬೀಳುತ್ತಿತ್ತು. ಗೋವುಗಳನ್ನು ಹೈನುಗಾರಿಕೆಗೆ ಮಾತ್ರವಲ್ಲದೆ ಮಾಂಸಕ್ಕಾಗಿಯೂ ಬಳಸುತ್ತಿದ್ದುದು ಸಾಮಾನ್ಯ. ಗೋವಾದಿಂದ ಗೋವುಗಳ ವ್ಯಾಪಾರವೂ ನಡೆಯುತ್ತಿತ್ತೇ..? ಗೋಮಾಂತ ಎಂದರೆ ಗೋವುಗಳ ಅಂತ...
ಬಹುನಿರೀಕ್ಷಿತವಾಗಿಯೇ ರಜೆ, ಸಾಕಷ್ಟು ಬಿಡುವಿನ ಸಮಯ, ತಾಜಾ ಗಾಳಿಯಲ್ಲಿ ವಿಶ್ರಾಂತಿ ಅವಕಾಶ. ಏನು ಹೆಚ್ಚು ಸುಂದರ ಆಗಿರಬಹುದು? ಯಾವುದೇ ಪ್ರಣಯ ಒಂದು ಸಾಮಾನ್ಯ ಸೆಟ್ ಇಲ್ಲಿದೆ - ಟೆಂಟ್, ಒಂದು ಗಿಟಾರ್ ಕ್ಯಾಂಪ್ ಫೈರ್ ಮತ್ತು ಹಾಡುಗಳು. ಆರೊಮ್ಯಾಟಿಕ್ ಕಿವಿಯ ಒಂದು ಪಾತ್ರೆಯಲ್ಲಿ ಬೇಯಿಸಿದ, ನಿಜವಾದ ಸ್ಪರ್ಧೆಯಾಗಿ. ಹೊರಾಂಗಣ ಚಟುವಟಿಕೆಗಳನ್ನು ಅಭಿಮಾನಿಗಳು ಎಚ್ಚರಿಕೆಯಿಂದ ಆಹಾರ ತಯಾರು ಇದರಲ್...
ಪಾತ್ರೆಗಳನ್ನು ಈ ರೀತಿಯ ಮಾಡಲು ಇದು ಮೂಲವಸ್ತುಗಳು ಸ್ಟೀಲ್, ಅಲ್ಯುಮಿನಿಯಮ್, ಕಬ್ಬಿಣ ಮತ್ತು ಟೈಟಾನಿಯಂ ಸೇರಿವೆ. ಸ್ಟೀಲ್ ಡಿಕ್ಸಿ ವಿವಿಧ ಶಕ್ತಿ, ಸುಲಭವಾಗಿ ಮತ್ತು ವಿಶ್ವಾಸಾರ್ಹತೆ. ಇದು ತಯಾರಿಸಲಾಗುತ್ತದೆ ಇದರಿಂದ ಶೀಟ್ಸ್, ಬೆಸುಗೆ ಹಾಕುವ ಅಥವಾ ಬೆಸುಗೆ ಸಂಪರ್ಕಗಳಿವೆ. ಅಲ್ಲದೆ ಮಡಿಕೆಗಳು riveted, ಆದರೆ ದೇಹದ ವಿರೂಪ ಕೆಟ್ಟ ಇದು, ಹರಿಯಲು ಅವಕಾಶ ಮಾಡಬಹುದು. ಇದೇ ಕಾರಣಕ್ಕಾಗಿ ಬಹಳ ಜ...
ಅಲ್ಲವೇ - ಬೆಂಕಿ ಕಾರಣ ಇಂತಹ ಪರಿಸ್ಥಿತಿಗಳಲ್ಲಿ ಅಡುಗೆ, ಗಮನ ಮತ್ತು ಎಚ್ಚರಿಕೆ ಅಗತ್ಯ , ವಿದ್ಯುತ್ ಕುಕ್ಕರ್ ಅದನ್ನು ಸುಟ್ಟನು ಎಂದು ಸಾಧ್ಯತೆಗಳುಂಟು ಆಹಾರ ಬೆರೆಸಿ. ಸೂಪ್ ಅಂಬಲಿಯನ್ನು ಬೇಗನೆ ಸಿದ್ಧವಾಗಲಿದೆ. ನೀವು ಭಕ್ಷ್ಯಗಳು ಪ್ರತಿಯೊಂದು ವಿವಿಧ ಸೂಕ್ತ ಮಾದರಿಗಳನ್ನು ಪಾತ್ರೆಗಳನ್ನು ಬಳಸಬಹುದಾಗಿದೆ. ಉದಾಹರಣೆಗೆ, ಒಂದು ಮಡಕೆ ಶಿಬಿರದ ಆಕೃತಿಯಲ್ಲಿ ಉದ್ದನೆಯ ಅಥವಾ ಸುತ್ತಿನ ಎರಡೂ. ಕೊ...
ಕೆಲವು ಅನುಭವಿ ಪ್ರವಾಸಿಗರು ಕ್ಯಾಂಪ್ಫೈರ್ನಲ್ಲಿ, ಸಹ Pilaf ಮೇಲೆ ಅಡುಗೆ ನಿರ್ವಹಿಸಿ. ಈ ಉದ್ದೇಶಕ್ಕಾಗಿ ಅವರು ಒಂದು ಬೀಡುಕಬ್ಬಿಣದ ಮಡಕೆ ಬಳಸಿ. ಇದರ ಗುಣ ನೀವು ಟೇಸ್ಟಿ Pilaf ಮಾಡಿ ಅನುಮತಿಸುವ ಗೋಡೆಗಳ ಅಸಮವಾದ ತಾಪನ, ನೆಲೆಸಿದೆ. ಇದು ಒಂದು ವಿಶೇಷ ಪರಿಮಳವನ್ನು ಬೆಂಕಿಯ ಹೊಗೆಯ ನೀಡುತ್ತದೆ.
ಇದು ತೆರೆದ ಬೆಂಕಿ ತಯಾರಿಸಲಾಗುತ್ತದೆ ಇದು ಭಕ್ಷ್ಯಗಳು, ಧೂಮಪಾನ ಮರೆಯಬೇಡಿ ಯಾವುದೇ ರಹಸ್ಯ. ಮಸಿ ವಿಷಯಗಳನ್ನು ಕಲೆ ಮಾಡದಿರಲು ಸಲುವಾಗಿ ನೀವು ಪ್ರತ್ಯೇಕ ಪ್ರತಿ ಡಿಕ್ಸಿ ಪ್ಯಾಕ್ ಅಗತ್ಯವಿದೆ ಪ್ಲಾಸ್ಟಿಕ್ ಚೀಲ. ಬೆನ್ನಹೊರೆಯಲ್ಲಿ ಅಂತರವನ್ನು ಉಳಿಸಲು ಅವರು ಬೌಲ್ ಒಂದು ಹಾಕಲು ಅಥವಾ ಸುಲಭವಾಗಿ ಚಚ್ಚಿ ಮಾಡಬಹುದು ಉತ್ಪನ್ನಗಳನ್ನು ಆರಂಭವಾಯಿತು.
ಪ್ರಕೃತಿಯಲ್ಲಿ ವಿಶ್ರಾಂತಿ, ಕೇವಲ ತಾಜಾ ಗಾಳಿಯ ಆನಂದ ಐಷಾರಾಮಿ ಅವಕಾಶವನ್ನು ತಂಪು ಸರೋವರದ ಗಿಟಾರನ್ನು ನುಡಿಸುತ್ತಾ ಈಜುವ, ಆದರೆ ವಿಶೇಷ ಪರಿಮಳವನ್ನು ಹೊಗೆ ಕೊಡುವಂತಹ ಸಜೀವವಾಗಿ ತಯಾರಿಸಲಾಗುತ್ತದೆ ಪರಿಮಳಯುಕ್ತ ಭಕ್ಷ್ಯಗಳು. ನಿಮ್ಮ ರಜೆಗೆ ಆನಂದಿಸಿ!
ಶಯನಗೃಹದಲ್ಲಿ ಕಾಮಕೇಳಿ ಆನಂದಕ್ಕೆ 5 ಟಿಪ್ಸ್ | Tips To Enjoy Sex Inside The Bedroom | ಶಯನಕೋಣೆಯಲ್ಲಿ ಕಾಮಕೇಳಿ ಆನಂದಕ್ಕೆ 5 ಟಿಪ್ಸ್ - Kannada Indiansutras
ಇಂಡಿಯನ್ ಸೂತ್ರ » ಕನ್ನಡ » ಕಾಮಸೂತ್ರ » ಶಯನಗೃಹದಲ್ಲಿ ಕಾಮಕೇಳಿ ಆನಂದಕ್ಕೆ 5 ಟಿಪ್ಸ್
ಶಯನಗೃಹದಲ್ಲಿ ಕಾಮಕೇಳಿ ಆನಂದಕ್ಕೆ 5 ಟಿಪ್ಸ್
Array Updated: Wednesday, May 8, 2013, 14:09 [IST]
ಕತ್ತಲು ಸುತ್ತಲು ಮುತ್ತಿದಂತಹ ಸಮಯದಲ್ಲಿ ಎಂಥ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತೀರಿ? ಮಲಗುವ ಕೋಣೆ, ಅಡುಗೆಮನೆ, ಟೆರೇಸ್, ವರಾಂಡ, ಬಚ್ಚಲುಮನೆ, ಗ್ಯಾರೇಜಿನಲ್ಲಿಟ್ಟ ಕಾರಿನೊಳಗೆ... ಹೊಸದಾಗಿ ಮದುವೆಯಾದ ಹಸಿದಿರುವ ಮೈ ಹೊಂದಿರುವಂತಹ ಹದಿಹರೆಯದ ಜೋಡಿಗಳಿಗೆ ಸ್ಥಳ ಯಾವುದಾದರೇನು? ಕಂಡ ಸ್ಥಳವೆಲ್ಲ ಶೃಂಗಾರಮಯವೆ.
ಆದರೆ ಕಾಲ ಪಕ್ವವಾದಂತೆಲ್ಲ, ಮನೆಯಲ್ಲೆಲ್ಲ ಸುಳಿದಾಡುವ ಗಾಳಿ ಪಕ್ಕದಮನೆಯಲ್ಲಿರುವ ಜನರ ಕಿವಿ ಹೊಕ್ಕಂತೆಲ್ಲ, ಒಂದು ಬಗೆಯ ಮುಜುಗರ ಆವರಿಸಲು ಪ್ರಾರಂಭಿಸುತ್ತದೆ. ಅಂತಹ ಸಮಯದಲ್ಲಿ ಅಥವಾ ಇನ್ನಾವುದೇ ಸಮಯದಲ್ಲಿ ಗಂಡ ಹೆಂಡತಿ ಕಾಮಕ್ರೀಡೆಯಾಡಲು ಮಲಗುವ ಕೋಣೆಗಿಂತ ಪ್ರಶಸ್ತವಾದ ಜಾಗ ಮತ್ತೊಂದಿಲ್ಲ.
ಪ್ರಣಯದ ಸುಖಪಡಲು ಶಯನಗೃಹವೇ ಅತ್ಯುತ್ತಮ ಜಾಗ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ನಮ್ಮ ಭಾರತೀಯರಲ್ಲಿ ಅವಿಭಕ್ತ ಕುಟುಂಬವೇ ಹೆಚ್ಚು. ಮಲಗುವ ಕೋಣೆಯಲ್ಲಿ ಸಿಗುವಂಥ ಖಾಸಗಿತನ, ಎಲ್ಲವನ್ನೂ ಬರಿದು ಮಾಡಿಕೊಂಥ ಭಾವ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ಏನೇ ಹೇಳಿ, ಕೇಳಿಯಾಡಲು ಬೆಡ್ ರೂಂ ಬೆಸ್ಟ್ ರೂಂ.
ಇರುವ ಮಲಗುವ ಕೋಣೆಯನ್ನೇ ಬಳಸಿಕೊಂಡರೆ ಪ್ರಣಯದಾಟವನ್ನು ಮತ್ತಷ್ಟು ಆನಂದಿಸಲು ಸಾಧ್ಯ. ಅಗತ್ಯಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಜಡಗಟ್ಟಿರುವ ಮೈಯಲ್ಲಿ ಮತ್ತಷ್ಟು ಕಾಮನೆಗಳನ್ನು ತುಂಬಲು ಸಾಧ್ಯ. ಲೈಂಗಿಕ ಕ್ರೀಡೆಯನ್ನೇ ಇನ್ನಷ್ಟು ಸರಸಮಯ ಮಾಡಲು ಇಲ್ಲೊಂದಿಷ್ಟು ಟಿಪ್ಸ್ ನೀಡಲಾಗಿದೆ. ಅವು ನಿಮ್ಮ ಜೀವನ ರಸಮಯವಾಗಿಸಲು ಸಹಾಯ ಮಾಡುತ್ತವೆ.
ಮೆತ್ತನೆಯ ಕಂಬಳಿ ಮೇಲೆ ಕಾಮಕೇಳಿ
ಲೈಂಗಿಕ ಕ್ರಿಯೆ ಪ್ರತಿಬಾರಿ ಮಂಚದ ಮೇಲೆಯೇ ಆಗಬೇಕೆಂದಿಲ್ಲ. ಮೆತ್ತನೆಯ ಕಂಬಳಿ ಅಥವಾ ಮೈಗೆ ಹಿತನೀಡುವಂತಹ ರಜಾಯ್ ಅನ್ನೇ ನೆಲದ ಮೇಲೆ ಹಾಸಿಕೊಂಡು, ಅದನ್ನೇ ಹೊದ್ದುಕೊಂಡು, ಉಟ್ಟಬಟ್ಟೆಯನ್ನೆಲ್ಲ ಬಿಸಾಕಿ ಹೊರಳಾಡುವುದಿದೆಯಲ್ಲ ವಿಶಿಷ್ಟ ಅನುಭವ ನೀಡುತ್ತದೆ.
ಕುರ್ಚಿ ಅಥವಾ ಸೋಫಾದ ಮೇಲೆ
ಪ್ರತಿಬಾರಿನೂ ಹಾಸಿಗೆಯ ಮೇಲೇನಾ ಎಂದು ರಾಗವೆಳೆಯುವ ಹೆಂಡತಿಗೆ ಒಂದು ಬಾರಿ ಸೋಫಾದ ಮೇಲೆ ಕಾಮದಾಟದ ರುಚಿ ತೋರಿಸಿ. ಮಂಚದ ಪಕ್ಕದಲ್ಲಿರುವ ಕುರ್ಚಿಯ ಮೇಲೆ ಕೂಡ ಕುಳಿತುಕೊಂಡು ಆರಾಮ ಕುರ್ಚಿಯ ಭಂಗಿಯಲ್ಲಿ ಕೇಳಿಯಲ್ಲಿ ತೊಡಗಬಹುದು. ಕುರ್ಚಿಯಲ್ಲಿ ಕುಳಿತು ಮಾಡುವಾಗ ಮೆತ್ತನೆಯ ದಿಂಬನ್ನು ಬಳಸಲು ಮರೆಯದಿರಿ. ಆದರೆ, ಸಾಧ್ಯವಾದ ಮಟ್ಟಿಗೆ ಕುರ್ಚಿಯಾಗಲಿ, ಸೋಫಾ ಆಗಲಿ ಕಿರ್ ಕಿರ್ ಸದ್ದು ಮಾಡದಂತೆ ಎಚ್ಚ...
ಕಾಮನೆ ಉಕ್ಕುವಂತಹ ಕರ್ಟನ್ ‌ಗಳಿರಲಿ
ಶಯನಗೃಹದ ಶೃಂಗಾರ ನಿಮ್ಮ ಕಾಮದಾಟದ ಒಂದು ಭಾಗವಾಗಿರಲಿ. ಮನಸ್ಸಿಗೆ ಹಿತ ನೀಡುವಂತಹ ಸುಂದರ ಕರ್ಟನ್‌ಗಳು ಗಾಳಿಗೆ ಸುಯ್ದಾಡುತಿರಲಿ. ಕಾಮನೆ ಕೆರಳಿಸುವಂತಹ ಬಣ್ಣಗಳು ಅದರಲ್ಲಿ ತುಂಬಿರಲಿ. ಕಿಟಕಿಯನ್ನು ಅರ್ಧದಷ್ಟು ತೆರೆದಿಟ್ಟು, ಕಿಲಾಡಿ ಗಾಳಿಯನ್ನು ಕೋಣೆಯಲ್ಲೆಲ್ಲ ಸುಳಿದಾಡಲು ಬಿಟ್ಟು, ಗಾಳಿಗೆ ತಿಳಿಯದಂತೆ ಕರ್ಟನ್ ಹಿಂದೆ ಹೋಗಿ ಕೆರಳಿದಂತಹ ದೇಹಗಳು ಬೆಸೆದುಕೊಳ್ಳಲಿ. ನಿಮ್ಮ ಈ ಪ್ರಣಯದಾಟವನ್ನು...
ಸುವಾಸನೆ ಬೀರುವ ಕ್ಯಾಂಡಲ್ ಬೆಳಗುತಿರಲಿ
ಕೋಣೆಯ ಮೂಲೆಯಲ್ಲಿದ್ದ ಮ್ಯೂಸಿಕ್ ಸಿಸ್ಟಂ ರೋಮ್ಯಾಂಟಿಕ್ ಹಾಡನ್ನು ಗುನುಗುತ್ತಿದ್ದರೆ, ಲೈಟ್ ಬೆಳಕು ಆರಿದ ಮೇಲೆ ಮತ್ತೊಂದು ಮೂಲೆಯಲ್ಲಿ ಸುವಾಸನೆಯುಳ್ಳ ಮೊಂಬತ್ತಿ ಬೆಳಗುತಿರಲಿ. ಕ್ಯಾಂಡಲ್ ಬೆಳಕು ವಿಶಿಷ್ಟಬಗೆಯ ಮೂಡನ್ನು ಸೃಷ್ಟಿಸುತ್ತದೆ. ಕ್ಯಾಂಡಲ್ ಬೆಂಕಿಯ ಲಾಸ್ಯಕ್ಕೆ ಕಾಮನೆಯ ಧಗೆ ಭಗಭಗ ಅಂದಿರುತ್ತದೆ. ಆ ಮಂದ ಬೆಳಕಿನಲ್ಲಿಯೇ 'ಈ ಸಮಯ ಶೃಂಗಾರಮಯ, ನೂತನ ಬಾಳಿಗೆ ಶುಭೋದಯ' ಎಂದು ಹಾಡು ಹೇಳ...
ಕಟ್ಟಿಗೆ ಟೇಬಲ್ ಮೇಲೆ ಆಗಲಿ ಸಂಗಮ
ಇದೊಂದು ವಿಶಿಷ್ಟ ಪ್ರಯೋಗ. ಮಂಚದ ಮೇಲೆ, ಸೋಫಾದ ಮೇಲೆ, ಕುರ್ಚಿಯ ಮೇಲೆ, ಕಂಬಳಿಯ ಮೇಲೆ ಕೇಳಿಯಾಡಿ ಬೇಜಾರಾದಾಗ ಪಕ್ಕದಲ್ಲಿರುವ ಟೇಬಲ್ ಅನ್ನೇ ಲೈಂಗಿಕ ಕ್ರೀಡೆಯ ಅಂಗಳವಾಗಲಿ. ಬೆತ್ತಲಾದ ಸಂಗಾತಿಯನ್ನು ಟೇಬಲ್ ಮೇಲೆ ಮಲಗಿಸಿ ನೀವು ನಿಂತ ಅಥವಾ ಮಲಗಿದ ಭಂಗಿಯಲ್ಲಿ ಒಳಸೇರುತ್ತಿದ್ದರೆ ಸಿಗುವ ಆನಂದವನ್ನು ಅನುಭವಿಸಿಯೇ ತೀರಬೇಕು.
Read more about: ಕಾಮಸೂತ್ರ, ಕಾಮಕೇಳಿ, ಶಯನಗೃಹ, kamasutra, love making, bedroom
There are many places to enjoy sex. from bedroom, bathroom, kitchen, stairs, garden to car, couples love to experiment sex in different places. But, having sex in the bedroom is one of the best places for a couple.
ಲವ್ ರಂಜನ್ ರ ಅಪ್ ಕಮಿಂಗ್ ಫಿಲ್ಮ್ ನಲ್ಲಿ ರಣಬೀರ್ ನ ಮಾತಾಪಿತರಾಗಿ ಡಿಂಪಲ್ ಕಪಾಡಿಯಾ ಮತ್ತುಬೋನಿ ಕಪೂರ್. | Sanjevani
Home ಸಿನೆಮಾ ಬಾಲಿವುಡ್ ಲವ್ ರಂಜನ್ ರ ಅಪ್ ಕಮಿಂಗ್ ಫಿಲ್ಮ್ ನಲ್ಲಿ ರಣಬೀರ್ ನ ಮಾತಾಪಿತರಾಗಿ ಡಿಂಪಲ್ ಕಪಾಡಿಯಾ...
ಲವ್ ರಂಜನ್ ರ ಅಪ್ ಕಮಿಂಗ್ ಫಿಲ್ಮ್ ನಲ್ಲಿ ರಣಬೀರ್ ನ ಮಾತಾಪಿತರಾಗಿ ಡಿಂಪಲ್ ಕಪಾಡಿಯಾ ಮತ್ತುಬೋನಿ ಕಪೂರ್.
ನಿರ್ದೇಶಕ ಲವ್ ರಂಜನ್ ಅವರ ಅಪ್ ಕಮಿಂಗ್ ಫಿಲ್ಮ್ ನ ಶೂಟಿಂಗ್ ಗಾಗಿ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನೋಯ್ಡಾಗೆ ತಲುಪಿದ್ದಾರೆ. ಲವ್ ರಂಜನ್ ರ ಈ ಫಿಲ್ಮ್ ನ ಸ್ಟಾರ್ ಕಾಸ್ಟ್ ನಲ್ಲಿ ಬೋನಿ ಕಪೂರ್ ಮತ್ತು ಡಿಂಪಲ್ ಕಪಾಡಿಯಾ ಕೂಡ ಸೇರಿದ್ದಾರೆ. ಫಿಲ್ಮ್ ನಲ್ಲಿ ಬೋನಿಕಪೂರ್ ಮತ್ತು ಡಿಂಪಲ್ ಕಪಾಡಿಯಾ ರಣಬೀರ್ ನ ತಂದೆತಾಯಿ ಪಾತ್ರದಲ್ಲಿ ಕಾಣಿಸಲಿದ್ದಾರೆ.
ಮೇಕರ್ಸ್ ಫಿಲ್ಮ್ ನ ಶೂಟಿಂಗ್ ನಿಮಿತ್ತ ಸ್ಪೈನ್ ನಲ್ಲಿ ಒಂದು ಶೆಡ್ಯೂಲ್ ಶುರು ಮಾಡುವವರಿದ್ದರು. ಆದರೆ ಕೋವಿಡ್ ಕಾರಣ ಮೇಕರ್ಸ್ ಗೆ ನಮ್ಮ ದೇಶದಲ್ಲೇ ಶೂಟಿಂಗ್ ಆರಂಭಿಸಬೇಕಾಗಿ ಬಂತು.
ಫಿಲ್ಮ್ ಮೂಲಗಳು ತಿಳಿಸಿದಂತೆ ಫಿಲ್ಮ್ ನಲ್ಲಿ ರಣಬೀರ್ ಕಪೂರ್ ನ ತಂದೆ ಓರ್ವ ಶ್ರೀಮಂತ ಮತ್ತು ಆತ್ಮವಿಶ್ವಾಸ ಇರುವ ವ್ಯಕ್ತಿಯಾಗಿದ್ದಾನೆ. ಫಿಲ್ಮ್ ರೈಟರ್ ಇದಕ್ಕೆ ಸೂಕ್ತ ವ್ಯಕ್ತಿ ಬೋನಿಕಪೂರ್ ಎಂದರು.ಅನಂತರ ಮೇಕರ್ಸ್ ಬೋನಿಕಪೂರ್ ಬಳಿ ಈ ಬಗ್ಗೆ ಮಾತನಾಡಿದಾಗ ಅವರು ಪಾತ್ರವನ್ನು ನಿರಾಕರಿಸಿದ್ದರು. ನಿರಾಶರಾದ ಲವ್ ರಂಜನ್ ನಂತರ ಅರ್ಜುನ್ ಕಪೂರ್ ರನ್ನು ಈ ವಿಷಯದಲ್ಲಿ ಸಂಧಾನಕ್ಕೆ ಕಳುಹಿಸಿದರು.
ಅರ್ಜುನ್ ಜೊತೆಗೆ ಅಂಶುಲಾ, ಜಾಹ್ನವಿ ಮತ್ತು ಖುಷಿ ಇವರೂ ಸೇರಿಕೊಂಡು ತಂದೆಯನ್ನು ಫಿಲ್ಮ್ ನಲ್ಲಿ ಅಭಿನಯಿಸಲು ಒತ್ತಾಯಿಸಿದರು. ಕೊನೆಗೆ ಬೋನಿಕಪೂರ್ ಇದಕ್ಕೆ ರಾಜಿಯಾದರು.ಸದ್ಯ ಬೋನಿಕಪೂರ್ ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿ ನಿರತರಾಗಿದ್ದು ಬಂದಿದ್ದಾರೆ.
ಬೋನಿ ಕಪೂರ್ ಇತ್ತೀಚೆಗೆ ಬಿಡುಗಡೆಗೊಂಡ ಅನಿಲ್ ಕಪೂರ್ ಅವರ ಏಕೆ ವರ್ಸಸ್ಸ್ ಏಕೆ ಫಿಲ್ಮ್ ನ ಮೂಲಕ ಅಭಿನಯಕ್ಕೆ ಇಳಿದಿದ್ದಾರೆ.ಫಿಲ್ಮ್ ನಲ್ಲಿ ಬೋನಿಕಪೂರ್ ರ ಪತ್ನಿಯಾಗಿ ಒಂದೊಮ್ಮೆ ರಿಷಿ ಕಪೂರ್ ರ ರೋಮ್ಯಾಂಟಿಕ್ ಬಾಬಿ ಫಿಲ್ಮ್ ನಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಡಿಂಪಲ್ ಕಪಾಡಿಯಾ ಇದ್ದು ರಣಬೀರ್ ಕಪೂರ್ ನ ತಾಯಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಜಾಹ್ನವಿ ಕಪೂರ್ ಫಿಲ್ಮ್ ನ ಶೂಟಿಂಗಿಗೆ ರೈತರಿಂದ ತಡೆ.
ಪಂಜಾಬ್ ನ ಬಸ್ಸೀ ಪಠಾನದಲ್ಲಿ ಬಾಲಿವುಡ್ ಕಲಾವಿದರನ್ನು ಆಂದೋಲನ ನಿರತ ರೈತರು ವಿರೋಧಿಸಿದ್ದು ಶೂಟಿಂಗಿಗೆ ತಡೆಯೊಡ್ಡಿದರು.
ಇಲ್ಲಿ ಫಿಲ್ಮ್ ಗುಡ್ ಲಕ್ ಜ್ಯಾರಿ ಶೂಟಿಂಗ್ ನಡೆಸಲು ತಂಡವು ತಲುಪಿತ್ತು .ಆದರೆ ರೈತ ಆಂದೋಲನಕಾರಿಗಳು ಶೂಟಿಂಗ್ ನಡೆಸಲು ತಡೆಒಡ್ಡಿದರು .
ಶೂಟಿಂಗ್ ಗಾಗಿ ನಟಿ ಜಾಹ್ನವಿ ಕಪೂರ್ ಕೂಡಾ ತಲುಪಿದ್ದರು. ಘಟನೆಯ ನಂತರ ಫಿಲ್ಮ್ ಯುನಿಟಿನ ವತಿಯಿಂದ ರೈತರನ್ನು ಖುಷಿಪಡಿಸುವ ತನಕ ಶೂಟಿಂಗ್ ಗೆ ಅನುಮತಿ ನೀಡಲಿಲ್ಲ.
ಅನಂತರ ಜಾಹ್ನವಿ ಕಪೂರ್ ತನ್ನ ಸ್ಟೇಟಸ್ ನಲ್ಲಿ ಮತ್ತು ಸೋಶಲ್ ಮೀಡಿಯಾ ಅಕೌಂಟ್ ನಲ್ಲಿ ರೈತರ ಪರವಾಗಿ ಹೇಳಿಕೆಗಳನ್ನು ನೀಡಬೇಕಾಯಿತು. ನಂತರವೇ ಶೂಟಿಂಗಿಗೆ ರೈತರು ಅನುಮತಿ ನೀಡಿದರು.
ಜಾಹ್ನವಿ ಕಪೂರ್ ಬರುತ್ತಲೇ ಆಂದೋಲನ ನಡೆಸುತ್ತಿದ್ದ ಯುವ ರೈತರ ಸಮೂಹವು ಅಲ್ಲಿಗೆ ಬಂತು. ರೈತರು ಬಾಲಿವುಡ್'ನ ವಿರುದ್ಧವೂ ಘೋಷಣೆಗಳನ್ನು ಕೂಗಿದರು. ಘಟನೆಯ ನಂತರ ಫಿಲ್ಮಿನ ಯುನಿಟ್ ಗೆ ಸಂಬಂಧಿತ ಲಾಲ್ಜಿತ್ ಸಿಂಗ್ ಮತ್ತು ಮನೀಷ್ ವಾಲಿಯ ಅವರು ಸ್ಥಳಕ್ಕೆ ಬಂದು ಯುವಕರ ಜೊತೆ ಮಾತನಾಡಿದರು
ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ? – Public TV
ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?
ಬೆಂಗಳೂರು: ನಟಿ ಸಂಜನಾ ಗಲ್ರಾನಿ ಮತ್ತು ವಂದನಾ ಜೈನ್ ನಡುವಿನ ಗಲಾಟೆ ಪ್ರಕರಣ ಠಾಣೆಯ ಮೆಟ್ಟಿಲು ಹತ್ತಿದ್ದಾಗಿದೆ. ಹೋಟೆಲ್ ನಲ್ಲಿ ನಡೆದ ಗಲಾಟೆಗೆ ವಂದನಾ ಜೈನ್ ನೀಡಿದ್ದ ದೂರಿಗೆ, ಸಂಜನಾ ಪ್ರತಿದೂರು ನೀಡಿದ್ದು ಈಗ ರಾಜಿಯಾಗಲು ಮುಂದಾಗಿದ್ದಾರೆ.
ಡಿಸಿಪಿಯವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಂಜನಾ, ನನಗೆ ಇದನ್ನೆಲ್ಲಾ ಮುಂದುವರಿಸಬೇಕು ಎಂಬ ಆಸೆಯಿಲ್ಲ. ಆಕೆ ಕೊಟ್ಟಿರುವ ದೂರನ್ನು ವಾಪಸ್ ತೆಗೆದುಕೊಂಡರೆ ನಾನು ವಾಪಸ್ ತೆಗೆದುಕೊಳ್ಳುತ್ತೇನೆ. ನಾನು ವಿಸ್ಕಿ ಬಾಟಲ್ ನಲ್ಲಿ ಹೊಡೆದೆ ಎಂದರೆ ನಮ್ಮ ನಿರ್ಮಾಪಕರು, ನಿರ್ದೇಶಕರು ನನ್ನ ಬಗ್ಗೆ ಏನೆಂದುಕೊಳ್ಳಬೇಕು ಎಂದು ಹೇಳುವ ಮೂಲಕ ನಾನು ರಾಜಿಗೆ ರೆಡಿ ಎಂದು ಪರೋಕ್ಷವಾಗಿ ಹೇ...
ಆಕೆಯೇ ಗಲಾಟೆ ಶುರು ಮಾಡಿ ಬಾಯಿಗೆ ಬಂದಂತೆ ಬೈದಿರೋದು. ನನ್ನ ರಕ್ಷಣೆಗೆ ಇರಲಿ ಎಂದು ಏಳು ನಿಮಿಷದ ವಿಡಿಯೋ ಮಾಡಿಟ್ಟುಕೊಂಡಿದ್ದೇನೆ. ಫೋಟೋ ತೆಗೆಯಬೇಕು ಎಂದು ಬಂದು ಗಲಾಟೆ ಮಾಡಿದ್ದಾಳೆ. ಅವಳ ಜೊತೆ ನಾನು ಯಾವತ್ತೂ ಹೋಟೆಲ್‍ಗೂ ಹೋಗಿಲ್ಲ. ನನಗೆ ಇದೆಲ್ಲವನ್ನೂ ಮುಂದುವರಿಸಿ ಪ್ರಚಾರ ತೆಗೆದುಕೊಳ್ಳಬೇಕು ಎಂದು ಇಷ್ಟವಿಲ್ಲ. ಒಂದು ಪಕ್ಷ ವಂದನಾ ದೂರು ವಾಪಸ್ ಪಡೆದರೆ ನಾನು ದೂರು ವಾಪಸ್ ಪಡೆಯುತ್ತೇನ...
ಪತ್ರ ಬರೆದು ಮನವಿ
ಹೋಟೆಲ್ ನಲ್ಲಿ ನಡೆದಿರುವ ಘಟನೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ನನಗೆ ಇಷ್ಟ ಇಲ್ಲ. ದಯವಿಟ್ಟು ಮಾಧ್ಯಮ ಮಿತ್ರರು ಪ್ರಕರಣವನ್ನು ದೊಡ್ಡದು ಮಾಡುವ ಆಗತ್ಯ ಇಲ್ಲ. ಪ್ರಕರಣವನ್ನ ಇಲ್ಲೇ ಬಿಟ್ಟು ಬಿಡುವಂತೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಸಂಜನಾ ಗರ್ಲಾನಿ ನನ್ನನ್ನ ದೂಷಿಸುತ್ತಿರುವ ಮಹಿಳೆಯ ಬಳಿ ಯಾವುದೇ ಪುರಾವೆಗಳಿಲ್ಲ. ಪತ್ರದಲ್ಲಿ ವಿವರಿಸಲು ಆಗದೇ ಇರುವಂತಹ ಪದಗಳನ್ನು ಬಳಸಿ ನನ್ನ ತ...
ಭಾರತದ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು ಮದುವೆ ಆಗುವುದಾಗಿ ಬ್ಲಾಕ್ ಮೇಲ್ ಮಾಡಿ ಪ್ರಚಾರ ಗಿಟ್ಟಿಸಿಕೊಂಡ ಹಾಗೇ ನನ್ನ ಗುರಿಯಾಗಿ ಪ್ರಚಾರ ಮಾಡುತ್ತಿದ್ದಾಳೆ ಎಂದು ವಂದನಾ ಹೆಸರು ಹೇಳದೆ ಕಿಡಿಕಾರಿದರು. ಇದನ್ನು ಓದಿ: ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ
ಘಟನೆಯಿಂದ ನನ್ನ ತಾಯಿ ನೊಂದು ಹೋಗಿದ್ದಾರೆ. ನನಗೆ ಮುಂದಿನ ವರ್ಷ ಸ್ಯಾಂಡಲ್‍ವುಡ್ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಿವೆ. ಅವುಗಳನ್ನು ನೋಡಿಕೊಂಡರೆ ಸಾಕು ಈ ರೀತಿ ಅಗ್ಗದ ಕೊಳಕು ಪ್ರಚಾರ ಬೇಡ. ನಾನು ಈ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದೇನೆ. ದಯವಿಟ್ಟು ನನ್ನನ್ನ ಬೆಂಬಲಿಸಿ ಎಂದು ಪತ್ರದ ಮೂಲಕ ಸಂಜನಾ ಗಲ್ರಾನಿ ಮನವಿ ಮಾಡಿಕೊಂಡಿದ್ದಾರೆ.
Related Topics:bengalurucomplaintletterPublic TVSanjana Galranivandana jainದೂರುಪತ್ರಪಬ್ಲಿಕ್ ಟಿವಿಬೆಂಗಳೂರುವಂದನಾ ಜೈನ್ಸಂಜನಾ ಗಲ್ರಾನಿ
ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಕಪ್ಪು ಬಣ್ಣ ಬಳಿದ ಪ್ರಕರಣ : ಪ್ರಚಾರಕ್ಕಾಗಿ ಈ ಕೆಲಸ..! - Kannada News | suddione
by suddionenews December 19, 2021, 5:39 PM 1.7k Views
ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿ ಮಿತಿ ಮೀರಿದೆ. ಈ ಹಿನ್ನೆಲೆ ಬೆಂಗಳೂರಿನ ಸದಾಶಿವನಗರ ಶಿವಾಜಿ ಪುತ್ಥಳಿಗೆ ಕಪ್ಪು ಬಣ್ಣ ಬಳಿದಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ 7 ಜನರನ್ನ ಬಂಧಿಸಲಾಗಿದೆ.
ಈ ಸಂಬಂಧ ಮಾತನಾಡಿದ ಕೇಂದ್ರ ವಿಭಾಗ ಡಿಸಿಪಿ ಅನುಚೇತ್, 17 ರಂದು ಮುಂಜಾನೆ ಬಾಷ್ಯಂ ಸರ್ಕಲ್ ನಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಬಣ್ಣ ಹಾಕಿದ್ರು. ಘಟನೆ ಸಂಬಂಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ವಿ. ಘಟನೆ ಸಂಬಂಧ ಏಳು ಜನರನ್ನು ಬಂಧಿಸಿದ್ದೇವೆ. ಅವರ ವಾಹನ ಹಾಗೂ ತಂದಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ.