text
stringlengths
0
61.5k
ಟೋಕ್ಯೊದ ಬೀದಿಯಲ್ಲಿ ಜಾಹೀರಾತು ಫಲಕಗಳು
ಜಪಾನ್ ದೇಶದಲ್ಲಿ ೧೮೦೬ರಲ್ಲಿ ಪ್ರಕಟವಾದ ಜೌಷಧಿಯೊಂದನ್ನು ಮಾರುವ ಜಾಹೀರಾತು
೧ ಜಾಹೀರಾತಿನ ಇತಿವೃತ್ತ
೨.೧ ಸಂಚಾರಿ ಜಾಹೀರಾತು ಫಲಕಗಳು
೨.೨ ಸಾರ್ವಜನಿಕ ಸೇವಾ ಜಾಹೀರಾತುಗಳು
೩ ಜಾಹೀರಾತಿನ ಪ್ರಕಾರಗಳು
೩.೧ ಮಾಧ್ಯಮಗಳು
೩.೨ ಗುಪ್ತ ಜಾಹೀರಾತು
೩.೩ ದೂರದರ್ಶನ ಜಾಹೀರಾತುಗಳು
೩.೪ ಮಾಹಿತಿ ಜಾಹೀರಾತುಗಳು
೩.೫ ಹೊಸ ಮಾಧ್ಯಮಗಳು ಮತ್ತು ಜಾಹೀರಾತು ವಿಧಾನಗಳು
೪ ನೆನಪು ಮತ್ತು ವರ್ತನೆ ಮೇಲೆ ಪರಿಣಾಮ
೫ ಮಾಧ್ಯಮದ ಬಗ್ಗೆ ಸಾರ್ವಜನಿಕ ಗ್ರಹಿಕೆ
೭ ಭವಿಷ್ಯದಲ್ಲಿ
೭.೧ ಜಾಗತಿಕ ಜಾಹೀರಾತು
೭.೨ ಶೈಲಿಗಳು
೧೦.೧ ಅಮೂಲ್ಯವಾದ ದಾಖಲೆಗಳು
ಜಾಹೀರಾತಿನ ಇತಿವೃತ್ತಸಂಪಾದಿಸಿ
ಜಾಹೀರಾತುಗಳು ಅಂಗಡಿಯ ಕೈಬಂಡಿಗಳ ಕುರ್ಚಿಗಳ ಮೇಲೆ, ವಿಮಾನ ನಿಲ್ದಾಣದ ನಡಿಗೆ ಮಾರ್ಗಗಳ ಗೋಡೆಗಳ ಮೇಲೆ, ಬಸ್ಸುಗಳ ಪಾರ್ಶ್ವಗಳ ಮೇಲೆ ಕಾಣಿಸುತ್ತವೆ, ಮತ್ತು ದೂರವಾಣಿಯಲ್ಲಿ ಉಳಿಸಿದ ಸಂದೇಶಗಳಲ್ಲಿ ಮತ್ತು ಅಂಗಡಿಗಳಲ್ಲಿನ ಸಾರ್ವಜನಿಕ ಸಂಬೋಧನಾ ವ್ಯವಸ್ಥೆಗಳಲ್ಲಿ ಕೇಳಿಸುತ್ತವೆ. ಜಾಹೀರಾತುಗಳು ಅನೇಕ ಬಾರಿ ಪ್ರೇಕ್ಷಕರು, ಶ್ರೋತೃಗಳು ಸುಲಭವಾಗಿ ಅಥವಾ ಮೇಲಿಂದ ಮೇಲೆ ದೃಶ್ಯ, ಶ್ರವ್ಯ ಮತ್ತು ಮುದ್ರಿ...
ನಿರ್ಲಾಭ ಸಂಸ್ಥೆಗಳು ವಿಶಿಷ್ಟವಾಗಿ ಜಾಹೀರಾತು ಗಿರಾಕಿಗಳಲ್ಲ ಮತ್ತು ಸಾರ್ವಜನಿಕ ಸೇವಾ ಪ್ರಕಟಣೆಗಳಂಥ ಒಲಿಸುವಿಕೆಯ ಮುಕ್ತ ಬಳಕೆಗಳ ಮೇಲೆ ಅವಲಂಬಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಜಾಹೀರಾತು ಮಾಡಲು ಆಗುವ ವೆಚ್ಚ ಅನಿರೀಕ್ಷಿತವಾಗಿ ವರ್ಧಿಸಿ ದೆ. ೨೦೦೬ರಲ್ಲಿ, ಜಾಹೀರಾತು ಮೇಲಿನ ವೆಚ್ಚ ಅಮೇರಿಕಾದಲ್ಲಿ ೧೫೫ ಶತಕೋಟಿ ಡಾಲರ್ ಎಂದು[೧] ಮತ್ತು ವಿಶ್ವದಾದ್ಯಂತ ೩೮೫ ಶತಕೋಟಿ ಡಾಲರ್ ಎಂದು [೨] ಅಂದಾಜ...
ಜಾಹೀರಾತು ಆರ್ಥಿಕ ಪ್ರಗತಿಗೆ ಅನಿವಾರ್ಯವೆಂದು ತೋರಬಹುದಾದರೂ, ಇದು ಸಾಮಾಜಿಕ ಹಾನಿಗಳಿಲ್ಲದೆ ಇಲ್ಲ. ಅನಪೇಕ್ಷಿತ ಇ-ಅಂಚೆ (ಸ್ಪ್ಯಾಮ್) ಬಹಳ ಪ್ರಚಲಿತವಾಗಿ ಈ ಸೇವೆಗಳನ್ನು ಬಳಸುವವರಿಗೆ ಒಂದು ಪ್ರಮುಖ ಪೀಡೆಯಾಗಿದೆ ಮತ್ತು, ಅಂತರ್ಜಾಲ ಸೇವಾ ಪ್ರಬಂಧಕರ ಮೇಲೆ ಕೂಡ ಒಂದು ಆರ್ಥಿಕ ಹೊರೆಯಾಗಿದೆ[೩].
ಜಾಹೀರಾತು, ಶಾಲೆಗಳಂತಹ ಸಾರ್ವಜನಿಕ ಪ್ರದೇಶಗಳನ್ನು ಹೆಚ್ಚೆಚ್ಚು ಅತಿಕ್ರಮಿಸುತ್ತಿದ್ದು, ಕೆಲವು ವಿಚಾರಕರು ಇದನ್ನು ಒಂದು ವಿಧದ ಮಕ್ಕಳ ಶೋಷಣೆಯೆಂದು ಪ್ರತಿಪಾದಿಸುತ್ತಾರೆ[೪][೫].
ಪುರಾತನ ಈಜಿಪ್ಟ್ ನವರು ಮಾರಾಟ ಸಂದೇಶಗಳು ಮತ್ತು ಭಿತ್ತಿಚಿತ್ರಗಳನ್ನು ಸೃಷ್ಟಿಸಲು ಜಂಬು ಕಾಗದವನ್ನು (ಪಪಾಯ್ರಸ್) ಬಳಸುತ್ತಿದ್ದರು. ಪಾಂಪೇ ಮತ್ತು ಪ್ರಾಚೀನ ಅರೇಬಿಯಾದ ಅವಶೇಷಗಳಲ್ಲಿ ವಾಣಿಜ್ಯ ಸಂದೇಶಗಳು ಮತ್ತು ರಾಜಕೀಯ ಪ್ರಚಾರ ಪ್ರದರ್ಶನಗಳು ದೊರೆತಿವೆ. ಜಂಬು ಕಾಗದದ ಮೇಲೆ "ಕಳೆದುಹೋದ ಮತ್ತು ಸಿಕ್ಕಿದ" (ಲಾಸ್ಟ್ ಆಂಡ್ ಫೌಂಡ್) ಜಾಹೀರಾತು ಪ್ರಾಚೀನ ಗ್ರೀಸ್ ಮತ್ತು ಪ್ರಾಚೀನ ರೋಮ್‌ನಲ್ಲಿ ...
ಭಿತ್ತಿಚಿತ್ರಗಳ ಪರಂಪರೆಯನ್ನು ಕ್ರಿ.ಪೂ. ೪೦೦೦ ರಷ್ಟು ಪ್ರಾಚೀನವೆಂದು ನಿರ್ಧರಿಸಲಾಗಿರುವ ಭಾರತೀಯ ಶಿಲಾ ಕಲೆಯ ವರ್ಣಚಿತ್ರಗಳ ಕಾಲದಿಂದ ಗುರುತಿಸಬಹುದು[೬]. ಕೋಟೆ ಮತ್ತು ರೈತರ ಆ ಹಳೆಯ ದಿನಗಳಲ್ಲಿ, ಉಪನಗರ ಮತ್ತು ನಗರಗಳು ಆಗತಾನೇ ಯೂರಪ್‌ನ ಆದ್ಯಂತ ಬೆಳೆಯಲು ಶುರುವಾಗಿದ್ದವು. ಉಪನಗರದ ಕೆಲವೇ ಜನ ಓದಲು ಬಲ್ಲವರಾಗಿದ್ದರಿಂದ, ಚಮ್ಮಾರ, ಅಥವಾ ಗಿರಣಿಗಾರ, ಅಥವಾ ದರ್ಜಿ, ಅಥವಾ ಕಮ್ಮಾರ ಎಂದು ತಿ...
೧೫ನೇ ಮತ್ತು ೧೬ನೇ ಶತಮಾನದಲ್ಲಿ, ಕರಪತ್ರಗಳನ್ನು ಅಂತರ್ಗತಗೊಳಿಸಿಕೊಂಡು ಜಾಹೀರಾತು ವಿಸ್ತರಿಸಿತು. ೧೭ನೇ ಶತಮಾನದಲ್ಲಿ, ಇಂಗ್ಲಂಡ್‍‍‍ನಲ್ಲಿ ಜಾಹೀರಾತುಗಳು ಸಾಪ್ತಾಹಿಕ ವರ್ತಮಾನ ಪತ್ರಿಕೆಗಳಲ್ಲಿ ಕಾಣಲು ಆರಂಭಿಸಿದವು. ಮೊದಲಿನ ಈ ಮುದ್ರಿತ ಜಾಹೀರಾತುಗಳು ಮುಖ್ಯವಾಗಿ ಪುಸ್ತಕ ಮತ್ತು ವೃತ್ತಪತ್ರಿಕೆಗಳನ್ನು (ಮುದ್ರಣಾಲಯದಲ್ಲಿನ ಪ್ರಗತಿಗಳಿಂದ ಹೆಚ್ಚು ಕೈಗೆಟಕುವ ಬೆಲೆಗಳಿಗೆ ಸಿಗತೊಡಗಿದವು), ಮತ...
೧೯ನೇ ಶತಮಾನದ ಅವಧಿಯಲ್ಲಿ ಆರ್ಥಿಕ ವ್ಯವಸ್ಥೆಯು ವಿಸ್ತಾರವಾಗತೊಡಗಿದಂತೆ, ಜಾಹೀರಾತು ಜೊತೆಜೊತೆಗೆ ಬೆಳೆಯಿತು. ಅಮೇರಿಕಾದಲ್ಲಿ, ಈ ಜಾಹೀರಾತು ವಿಧಾನದ ಯಶಸ್ಸು ಅಂತಿಮವಾಗಿ ಅಂಚೆ-ವ್ಯವಸ್ಥೆಯ ಜಾಹೀರಾತು ಬೆಳೆಯಲು ದಾರಿತೋರಿತು. ಜೂನ್ ೧೮೩೬ರಲ್ಲಿ, ಫ್ರಾನ್ಸ್‍‍‍‍ನ ಲಾ ಪ್ರೆಸ್ ಅದರ ಪುಟಗಳಲ್ಲಿ ಪಾವತಿ ಜಾಹೀರಾತುಗಳನ್ನು ಒಳಗೊಂಡ ಮೊದಲನೇಯ ವೃತ್ತಪತ್ರಿಕೆಯಾಯಿತು ಮತ್ತು ಇದರಿಂದ ಅದು ತನ್ನ ಬೆಲೆ ...
೧೮೪೦ರ ಸರಿಸುಮಾರು, ಬಾಸ್ಟನ್‌ನಲ್ಲಿ ವಾಲ್ನಿ ಪಾಮರ್, ಜಾಹೀರಾತು ಸಂಸ್ಥೆಗಳ ಒಂದು ಪೂರ್ವವರ್ತಿಯನ್ನು ಸ್ಥಾಪಿಸಿದನು[೭]. ಅದೇ ಕಾಲದ ಸರಿಸುಮಾರು, ಫ್ರಾನ್ಸ್‌ನಲ್ಲಿ, ಚಾರ್ಲ್ಸ್-ಲೂಯಿ ಹವಸ್, ಜಾಹೀರಾತು ದಲಾಲಿಯನ್ನು ಸೇರಿಸಿಕೊಂಡು ತನ್ನ ವಾರ್ತಾ ಸಂಸ್ಥೆ ಹವಸ್‌ನ ಸೇವೆಗಳನ್ನು ವಿಸ್ತರಿಸಿ ಅದನ್ನು ಫ್ರಾನ್ಸ್‌ನ ಮೊದಲ ಸಂಯೋಜಿಸಲ್ಪಟ್ಟ ಗುಂಪಾಗಿ ಮಾಡಿದನು. ಮೊದಲು, ದಳ್ಳಾಳಿ ಸಂಸ್ಥೆಗಳು ವೃತ್ತಪ...
ಎನ್. ಡಬ್ಲ್ಯು. ಏಯರ್ ೧೮೬೯ರಲ್ಲಿ ತೆರೆಯಿತು, ಮತ್ತು ಫಿಲಡೆಲ್ಫಿಯಾದಲ್ಲಿ ನೆಲೆಗೊಂಡಿತ್ತು[೭]. ಶತಮಾನದ ತಿರುವಿನಲ್ಲಿ, ಮಹಿಳೆಯರಿಗೆ ಉದ್ಯಮದಲ್ಲಿ ಬಹಳ ಕಡಿಮೆ ಜೀವನೋಪಾಯ ಆಯ್ಕೆಗಳಿದ್ದವು; ಆದರೆ, ಜಾಹೀರಾತು ಅವುಗಳ ಲ್ಲೊಂದಾಗಿತ್ತು. ಮಹಿಳೆಯರು ತಮ್ಮ ಕುಟುಂಬದಲ್ಲಾದ ಬಹುಪಾಲು ಖರೀದಿಗೆ ಹೊಣೆಯಾಗಿದ್ದರಿಂದ, ಜಾಹೀರಾತುದಾರರು ಮತ್ತು ದಳ್ಳಾಳಿ ಸಂಸ್ಥೆಗಳು, ಸೃಜನಾತ್ಮಕ ಪ್ರಕ್ರಿಯೆಯ ಅವಧಿಯಲ್ಲ...
೧೯೨೦ರ ದಶಕದ ಆರಂಭದ ವರ್ಷಗಳಲ್ಲಿ, ರೇಡಿಯೋ ಸಾಮಗ್ರಿ ತಯಾರಕರಿಂದ, ಮತ್ತು ಗ್ರಾಹಕರಿಗೆ ಹೆಚ್ಚು ರೇಡಿಯೋಗಳನ್ನು ಮಾರಲು ಕಾರ್ಯಕ್ರಮಗಳನ್ನು ನೀಡಲು, ಮಾರಾಟಗಾರರಿಂದ ಮೊದಲ ರೇಡಿಯೋ ನಿಲಯಗಳು ಸ್ಥಾಪಿಸಲ್ಪಟ್ಟವು. ಕಾಲ ಕಳೆದಂತೆ, ಶಾಲೆ, ವಿಹಾರಸಂಘಗಳು ಮತ್ತು ನಾಗರಿಕ ಗುಂಪುಗಳಂತಹ ಹಲವು ನಿರ್ಲಾಭ ಸಂಸ್ಥೆಗಳು ಕೂಡ ತಮ್ಮ ಸ್ವಂತ ರೇಡಿಯೋ ನಿಲಯಗಳನ್ನು ಸ್ಥಾಪಿಸಿದವು.[೮] ಕಾರ್ಯಕ್ರಮಗಳನ್ನು ಪ್ರಾಯೋ...
ಆದರೆ, ರೇಡಿಯೋ ನಿಲಯದ ಮಾಲೀಕರು, ಒಂದು ಕಾರ್ಯಕ್ರಮದ ಪ್ರಾಯೋಜನ ಹಕ್ಕುಗಳನ್ನು ಒಂದು ಉದ್ಯಮಕ್ಕೆ ಮಾರುವ ಬದಲು, ಪ್ರಾಯೋಜನ ಹಕ್ಕುಗಳನ್ನು ತಮ್ಮ ರೇಡಿಯೋ ನಿಲಯದ ಪ್ರಸಾರಗಳಾದ್ಯಂತ ಅನೇಕ ಉದ್ಯಮಗಳಿಗೆ ಸಣ್ಣದಾಗಿ ಸಮಯ ವಿಂಗಡಣೆ ಮಾಡಿ ಮಾರುವುದರಿಂದ, ಹೆಚ್ಚು ಹಣ ಗಳಿಸಬಹುದೆಂದು ಬೇಗ ಅರಿತರು. ೧೯೪೦ರ ದಶಕದ ಕೊನೆಯಲ್ಲಿ ಮತ್ತು ೧೯೫೦ರ ದಶಕದ ಆರಂಭದಲ್ಲಿ ಈ ಅಭ್ಯಾಸವನ್ನು ದೂರದರ್ಶನಕ್ಕೂ ಒಯ್ಯಲಾಯಿತ...
ಕ್ಯಾನಡಾದಲ್ಲಿ, ಗ್ರೇಮ್ ಸ್ಪ್ರಾಯ್‌ರಂಥ ಪ್ರತಿಪಾದಕರು ಸಂಘೀಯ ಸರ್ಕಾರವನ್ನು ಸಾರ್ವಜನಿಕ ಸಂಗ್ರಹ ಮಾದರಿ ಅಳವಡಿಸುವಂತೆ ಒಲಿಸುವಲ್ಲಿ ಸಮರ್ಥರಾಗಿದ್ದರು. ಆದರೆ ಅಮೇರಿಕಾದಲ್ಲಿ, ೧೯೩೪ರ ಸಂಪರ್ಕ ಕಾಯಿದೆ ಅಂಗೀಕಾರವಾಗುವು ದರೊಂದಿಗೆ ಬಂಡವಾಳಶಾಹಿ ಮಾದರಿ ವಿಜಯಿಯಾಯಿತು ಮತ್ತು ಸಂಘೀಯ ಸಂಪರ್ಕಗಳ ಮಂಡಳಿಯ ನಿರ್ಮಾಣವಾಯಿತು.[೮] ಸಮಾಜವಾದಿಗಳನ್ನು ಸಮಾಧಾನಪಡಿಸಲು, ವಾಣಿಜ್ಯ ಪ್ರಸಾರಕರು "ಸಾರ್ವಜನಿಕ...
ಆದಾಗ್ಯೂ, ಸಾರ್ವಜನಿಕ ರೇಡಿಯೋ ಅಮೇರಿಕಾದಲ್ಲಿ ಅಸ್ತಿತ್ವದಲ್ಲಿದೆ. ೧೯೫೦ರ ದಶಕದ ಆರಂಭದಲ್ಲಿ, ಡೂಮಾಂಟ್ ದೂರದರ್ಶನ ಜಾಲ ಬಹು ಪ್ರಾಯೋಜಕರಿಗೆ ಜಾಹೀರಾತು ಸಮಯ ಮಾರಾಟ ಮಾಡುವ ಆಧುನಿಕ ಪ್ರವೃತ್ತಿ ಆರಂಭಿಸಿತು. ಹಿಂದೆ, ತಮ್ಮ ಅನೇಕ ಕಾರ್ಯಕ್ರಮ ಗಳಿಗೆ ಪ್ರಾಯೋಜಕರನ್ನು ಪಡೆಯಲು ಡೂಮಾಂಟ್ ತೊಂದರೆ ಎದುರಿಸಿತ್ತು ಮತ್ತು ಹಲವು ಉದ್ಯಮಗಳಿಗೆ ಜಾಹೀರಾತು ಸಮಯದ ಸಣ್ಣ ಪ್ರಮಾಣದ ಖಂಡಗಳನ್ನು ಮಾರಿ ನಷ್ಟ ತ...
ಕೆಲವು ಸಂದರ್ಭಗಳಲ್ಲಿ ಪ್ರದರ್ಶನದ ವಿಷಯವಸ್ತುವಿನಲ್ಲಿ ಪ್ರಾಯೋಜಕರು, ತಮ್ಮ ಜಾಹೀರಾತು ಸಂಸ್ಥೆಯೇ ಪ್ರದರ್ಶನವನ್ನು ಬರೆಯುವಂತೆ ಮಾಡಿ, ಹೆಚ್ಚಿಗೆ ಹಿಡಿತವನ್ನು ಚಲಾಯಿಸುತ್ತಿದ್ದರು. ಏಕ ಪ್ರಾಯೋಜಕ ಮಾದರಿ ಈಗ ಬಹಳ ಕಡಿಮೆ ಚಾಲ್ತಿಯಲ್ಲಿದೆ, ಹಾಲ್‌ಮಾರ್ಕ್ ಹಾಲ್ ಆಫ್ ಫೇಮ್ ಲಕ್ಷಿಸಬೇಕಾದ ಅಪವಾದವಾಗಿದೆ. ಸೃಜನಾತ್ಮಕತೆ ಬೆಳಗಲು ಅವಕಾಶವಿದ್ದಂಥ ೧೯೬೦ರ ದಶಕ, ಜಾಹೀರಾತು ಒಂದು ಆಧುನಿಕ ರೀತಿಯಾಗಿ ಮ...
ಅಮೇರಿಕಾದ ಜಾಹೀರಾತು ಕ್ಷೇತ್ರದ ಈ ಅವಧಿಯನ್ನು ಸೃಜನಾತ್ಮಕ ಕ್ರಾಂತಿ (ಕ್ರಿಯೇಟಿವ್ ರೆವಲೂಷನ್) ಎಂದು ಕರೆಯುತ್ತಾರೆ ಮತ್ತು ಕ್ರಾಂತಿಕಾರಿ ವೋಕ್ಸ್‌ವ್ಯಾಗನ್ ಮತ್ತು ಇತರ ಜಾಹೀರಾತುಗಳನ್ನು ಸೃಷ್ಟಿಸಲು ಸಹಾಯಮಾಡಿದ ಬಿಲ್ ಬರ್ನ್‌ಬಾಕ್ ಇದರ ಪ್ರಾತಿನಿಧಿಕ ವ್ಯಕ್ತಿಯಾಗಿದ್ದರು. ಅಮೇರಿಕಾದ ಅತ್ಯಂತ ಸೃಜನಶೀಲ ಮತ್ತು ಬಹು ದೀರ್ಘಕಾಲದಿಂದರಿರುವ ಜಾಹೀರಾತುಗಳಲ್ಲಿ ಕೆಲವು ಈ ವಿಸ್ಮಯಕಾರಿ ಸೃಜನಶೀಲ ಕಾ...
ಕೇಬಲ್ ಮತ್ತು ಉಪಗ್ರಹ ದೂರದರ್ಶನ ಹೆಚ್ಚು ವ್ಯಾಪಕವಾದಂತೆ, ಕ್ಯೂವಿಸಿ, ಹೋಮ್ ಷಾಪಿಂಗ್ ನೆಟ್‌ವರ್ಕ್, ಮತ್ತು ಷಾಪ್‌ಟಿವಿಯಂತಹ ಸಂಪೂರ್ಣವಾಗಿ ಜಾಹೀರಾತಿಗೆ ಮೀಸಲಾಗಿದ್ದ ವಿಶಿಷ್ಟ ಗುರುತಿರುವ ತರಂಗಾಂತರಗಳು ಕಾಣಿಸಿಕೊಂಡವು. ಅಂತರ್ಜಾಲದ ಮೂಲಕ ವ್ಯಾಪಾರ, ಜಾಹೀರಾತು ಸಂಸ್ಥೆಗಳಿಗೆ ಹೊಸ ಎಲ್ಲೆಗಳನ್ನು ತೆರೆಯಿತು ಮತ್ತು ೧೯೯೦ರ ದಶಕದ ಡಾಟ್-ಕಾಮ್ ಉತ್ಕರ್ಷಕ್ಕೆ ಸಹಾಯವಾಯಿತು. ನಿಗಮಗಳು ಸಂಪೂರ್ಣ ಜ...
೨೧ನೇ ಶತಮಾನದ ತಿರುವಿನಲ್ಲಿ, ಅಂತರ್ಜಾಲ ಅನ್ವೇಷಣಾ ಸಾಧನ ಗೂಗಲ್ ಸಹಿತ ಹಲವಾರು ಅಂತರಜಾಲ ತಾಣಗಳು, ವಿಷಯಗಳ ಮಹಾಪೂರದ ಬದಲು, ಬಳಕೆದಾರರಿಗೆ ಸಹಾಯ ಮಾಡಲು ಬಯಸುವ, ಸಾಂದರ್ಭಿಕವಾಗಿ ಸಂಗತವಾದ, ಹೆಚ್ಚು ಪ್ರಕಟಗೊಳ್ಳದ ಜಾಹೀರಾತುಗಳಿಗೆ ಪ್ರಾಧಾನ್ಯನೀಡಿ ಅಂತರಜಾಲ ಜಾಹೀರಾತು ಕ್ಷೇತ್ರದಲ್ಲಿ ಬದಲಾವಣೆ ಆರಂಭಿಸಿದವು. ಇದು ಇದಕ್ಕೆ ಹೋಲುವ ಪ್ರಯತ್ನಗಳು ಅಧಿಕವಾಗುವಂತೆ ಮತ್ತು ಪ್ರತಿಕ್ರಿಯಾತ್ಮಕ ಜಾಹೀ...
ಉದಾಹರಣೆಗೆ, ೧೯೨೫ರಲ್ಲಿ ಅಮೇರಿಕಾದಲ್ಲಿ, ವೃತ್ತಪತ್ರಿಕೆಗಳು, ನಿಯತಕಾಲಿಕಗಳು, ಟ್ರ್ಯಾಮ್‌ಗಳ ಮೇಲಿನ ಚಿಹ್ನೆಗಳು, ಮತ್ತು ಹೊರಾಂಗಣ ಭಿತ್ತಿಪತ್ರಗಳು ಪ್ರಮುಖ ಜಾಹೀರಾತು ಮಾಧ್ಯಮಗಳಾಗಿದ್ದವು. ಜಿಡಿಪಿಯಲ್ಲಿ ಜಾಹೀರಾತು ವೆಚ್ಚದ ಪಾಲು ಸುಮಾರು ೨.೯ ಪ್ರತಿಶತವಿತ್ತು. ೧೯೯೮ರ ವೇಳೆಗೆ, ದೂರದರ್ಶನ ಮತ್ತು ರೇಡಿಯೋ ಪ್ರಮುಖ ಜಾಹೀರಾತು ಮಾಧ್ಯಮಗಳಾಗಿದ್ದವು. ಆದರೂ, ಜಿಡಿಪಿಯಲ್ಲಿ ಜಾಹೀರಾತು ವೆಚ್ಚದ ...
ಸಾರ್ವಜನಿಕ ಸ್ಥಳಗಳಲ್ಲಿ ವ್ಯವಸ್ಥಿತ ಮುಖಾಮುಖಿಗಳು (ಸ್ಟೇಜ್‌ಡ್ ಎನ್ಕೌಂಟರ್), ಕಂಪನಿ ಚಿಹ್ನೆಗಳನ್ನು ಹೊಂದಿದ ಕಾರುಗಳಂತಹ ಉತ್ಪನ್ನಗಳ ಕೊಡುಗೆಗಳು, ಮತ್ತು ಜಾಹೀರಾತು ಸಂದೇಶದ ಭಾಗವಾಗಲು ವೀಕ್ಷಕ ಪ್ರತಿಕ್ರಿಯಿಸಬಹುದಾದಂಥ ಪ್ರತಿಕ್ರಿಯಾತ್ಮಕ ಜಾಹೀರಾತುಗಳು, ಇಂತಹ ಹಲವು ವಿಚಿತ್ರ ರೀತಿಗಳನ್ನು ಒಳಗೊಂಡ "ಗರಿಲಾ ಪ್ರಚಾರಗಳು" ಇತ್ತೀಚಿನ ಒಂದು ಜಾಹೀರಾತು ಕಲ್ಪನೆಯಾಗಿದೆ. ಇದು, ಉತ್ಪನ್ನ ನಿಯೋಜ...
ಸಂಚಾರಿ ಜಾಹೀರಾತು ಫಲಕಗಳುಸಂಪಾದಿಸಿ
ಸಂಚಾರಿ ಜಾಹೀರಾತು ಫಲಕಗಳು ಸರಕು ವಾಹನಗಳ ಮೇಲೆ ಕಾಣುವ ಜಾಹಿರಾತು ಫಲಕಗಳು. ಇವು ಗಿರಾಕಿಗಳಿಂದ ಮೊದಲೇ ಆಯ್ದ ಮಾರ್ಗಗಳ ಉದ್ದಕ್ಕೂ ಜಾಹೀರಾತುಗಳನ್ನು ತೋರಿಸಲು ಮೀಸಲಾದ ವಾಹನಗಳಿರಬಹುದು, ಅಥವಾ ವಿಶೇಷವಾಗಿ ಸಿದ್ಧಗೊಳಿಸಿರುವ ಮಾಲು ವಾಹನಗಳಿರಬಹುದುದು. ಜಾಹೀರಾತು ಫಲಕಗಳು ಹಲವುವೇಳೆ ಬೆಳಗಿಸಲ್ಪಟ್ಟಿರುತ್ತವೆ; ಕೆಲವು ಹಿಂಬದಿಯಿಂದ ಬೆಳಕು ಬೀರುತ್ತವೆ ಮತ್ತು ಉಳಿದವು ಪ್ರಕಾಶ ಬಿಂದುಗಳನ್ನು ಬಳಸಿ...
ಕೆಲವು ಜಾಹೀರಾತು ಫಲಕ ಪರದೆಗಳು ನಿಶ್ಚಲವಿರುತ್ತವೆ ಮತ್ತು ಉಳಿದವು ಬದಲಾಯಿಸುತ್ತವೆ; ಉದಾಹರಣೆಗೆ, ಜಾಹೀರಾತುಗಳ ಒಂದು ಸಮೂಹದೊಳಗೆ ನಿರಂತರವಾಗಿ ಅಥವಾ ನಿಯತಕಾಲಿಕವಾಗಿ ಆವರ್ತವಾಗುತ್ತಿರುತ್ತವೆ. ಸಂಚಾರಿ ಪರದೆಗಳು ಪ್ರಪಂಚದಾದ್ಯಂತ ಮಹಾನಗರ ಪ್ರದೇಶಗಳಲ್ಲಿ ಬಗೆಬಗೆಯ ಸಂದರ್ಭಗಳಿಗಾಗಿ ಬಳಸಲ್ಪಡುತ್ತವೆ, ಉದಾಹರಣೆಗೆ:
ಉದ್ದೇಶಿತ ಜಾಹೀರಾತುಗಳಿಗಾಗಿ (ಟಾರ್ಗೆಟ್ ಆಡ್ಸ್)
ಏಕ-ದಿನ, ಮತ್ತು ದೀರ್ಘಾವಧಿ ಪ್ರಚಾರಗಳಿಗಾಗಿ
ಸಮ್ಮೇಳನಗಳಿಗಾಗಿ
ಕ್ರೀಡಾ ಸ್ಪರ್ಧೆಗಳಲ್ಲಿ
ಅಂಗಡಿಗಳ ಉದ್ಘಾಟನೆಗಳ ಮತ್ತು ಅಂತಹದೇ ಆದ ಪ್ರಚಾರ ಸಂದರ್ಭಗಳಲ್ಲಿ
ಸಣ್ಣ ಕಂಪನಿಗಳಿಂದ ದೊಡ್ಡ ಜಾಹೀರಾತುಗಳಿಗಾಗಿ
ಸಾರ್ವಜನಿಕ ಸೇವಾ ಜಾಹೀರಾತುಗಳುಸಂಪಾದಿಸಿ
ವಾಣಿಜ್ಯ ವಸ್ತು ಮತ್ತು ಸೇವೆಗಳ ಪ್ರಚಾರಕ್ಕಾಗಿ ಬಳಸಲಾಗುವ ಜಾಹೀರಾತು ತಂತ್ರಗಳನ್ನೇ, ಏಡ್ಸ್, ರಾಜಕೀಯ ಸಿದ್ಧಾಂತ, ಶಕ್ತಿ ಸಂರಕ್ಷಣೆ, ಧಾರ್ಮಿಕ ನೇಮಕ, ಮತ್ತು ಅರಣ್ಯನಾಶದಂತಹ ವಾಣಿಜ್ಯೇತರ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು, ಬೋಧಿಸಲು ಮತ್ತು ಪ್ರಚೋದಿಸಲು ಬಳಸಬಹುದು. ತನ್ನ ವಾಣಿಜ್ಯೇತರ ರೂಪದಲ್ಲಿ ಜಾಹೀರಾತು ಹೆಚ್ಚು ಜನರನ್ನು ವ್ಯಾಪಿಸಲು ಮತ್ತು ಪ್ರಚೋದಿಸಲು ಸಮರ್ಥವಾದ ಒಂದು ಪ್ರಬ...
ಸಾರ್ವಜನಿಕ ಸೇವಾ ಜಾಹೀರಾತು, ವಾಣಿಜ್ಯೇತರ ಜಾಹೀರಾತು, ಸಾರ್ವಜನಿಕ ಹಿತಾಸಕ್ತಿ ಜಾಹೀರಾತು, ಧ್ಯೇಯ ವ್ಯಾಪಾರ (ಕಾಸ್ ಮಾರ್ಕೆಟಿಂಗ್), ಮತ್ತು ಸಾಮಾಜಿಕ ವ್ಯಾಪಾರ, ವಾಣಿಜ್ಯೇತರ, ಸಾರ್ವಜನಿಕ ಹಿತಾಸಕ್ತಿ ವಿಷಯ ಮತ್ತು ಉಪಕ್ರಮಗಳ ಪರವಾಗಿ ಸಂಕೀರ್ಣ ಜಾಹೀರಾತಿನ ಬಳಕೆ (ಅಥವಾ ರೂಪಗಳು) ಮತ್ತು ವ್ಯಾಪಾರ ಸಂಪರ್ಕ ತಂತ್ರಗಳನ್ನು (ಸಾಮಾನ್ಯವಾಗಿ ವಾಣಿಜ್ಯ ಉದ್ಯಮ ಜೊತೆಗೆ ಬಳಸಲಾಗುವ), ಉಲ್ಲೇಖಿಸಲು ಉಪ...
ಈ ಅಗತ್ಯಗಳನ್ನು ಪೂರೈಸಲು, ಅಮೇರಿಕಾದಲ್ಲಿ ಹಲವು ಪ್ರಸಾರ ಕೇಂದ್ರಗಳು ತಮ್ಮಿಂದ ಬಯಸಿದ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಬಹಳ ಕಡಿಮೆ ವೀಕ್ಷಕರು ವೀಕ್ಷಿಸುತ್ತಿರುವಾಗ ತಡವಾಗಿ ರಾತ್ರಿ ಅಥವಾ ಮುಂಚಿತವಾಗಿ ಬೆಳಿಗ್ಗೆ ಪ್ರಸಾರ ಮಾಡುತ್ತವೆ ಮತ್ತು ಹೆಚ್ಚು ದಿನದ ಮತ್ತು ಪ್ರಧಾನ ಸಮಯದ ವಾಣಿಜ್ಯ ಅವಧಿಯನ್ನು ಅಧಿಕ ಹಣನೀಡುವ ಜಾಹೀರಾತುದಾರರಿಗೆ ಮೀಸಲಿಡುತ್ತವೆ. ಸಾರ್ವಜನಿಕ ಸೇವಾ ಜಾಹೀರಾತು ಮೊದಲನ...
ಜಾಹೀರಾತಿನ ಪ್ರಕಾರಗಳುಸಂಪಾದಿಸಿ
ಒಂದು ಜಾಹೀರಾತು ಫಲಕ
ಗೋಡೆಗಳ ಮೇಲಿನ ವರ್ಣಚಿತ್ರಗಳು, ಜಾಹೀರಾತು ಫಲಕಗಳು, ರಸ್ತೆ ಪೀಠೋಪಕರಣ ಅವಯವಗಳು, ಮುದ್ರಿತ ಕರಪತ್ರಗಳು ಮತ್ತು ರ‍್ಯಾಕ್ ಕಾರ್ಡ್‌ಗಳು, ರೇಡಿಯೋ, ಚಲನಚಿತ್ರ ಮತ್ತು ದೂರದರ್ಶನ ಜಾಹೀ ರಾತುಗಳು, ಅಂತರ್ಜಾಲ ಪಟಗಳು (ಬ್ಯಾನರ್), ಸಂಚಾರಿ ದೂರವಾಣಿ ಪರದೆಗಳು, ಅಂಗಡಿ ಗಾಡಿಗಳು, ಅಂತರಜಾಲ ಪಾಪ್-ಅಪ್ ಜಾಹೀರಾತುಗಳು, ಆಕಾಶಲೇಖನ, ಬಸ್ ನಿಲ್ದಾಣದ ಆಸನಗಳು, ಮಾನವ ಜಾಹೀರಾತು ಫಲಕ, ನಿಯತಕಾಲಿಕಗಳು, ವೃತ...
ಜಾಹೀರಾತಿನ ಪರಿಣಾಮವನ್ನು ಅಳೆಯುವ ಇನ್ನೊಂದು ರೀತಿ ಜಾಹೀರಾತು ಅನುಸರಣೆ (ಆಡ್ ಟ್ರ್ಯಾಕಿಂಗ್) ಎಂದು ಗುರುತಿಸಲ್ಪಡುತ್ತದೆ. ಈ ಜಾಹೀರಾತು ಸಂಶೋಧನಾ ವಿಧಾನಶಾಸ್ತ್ರ, ಗುರುತು ಮತ್ತು ಉತ್ಪನ್ನ ಅಥವಾ ಸೇವೆಯ ಬಗ್ಗೆ, ಉದ್ದೇಶಿತ ಬೇಡಿಕೆಯ ಗ್ರಹಿಕೆಗಳಲ್ಲಿನ ವ್ಯತ್ಯಾಸಗಳನ್ನು ಅಳೆಯುತ್ತದೆ. ಈ ಗ್ರಹಿಕೆಗಳಲ್ಲಿನ ವ್ಯತ್ಯಾಸಗಳನ್ನು ಕಂಪನಿಯ ಜಾಹೀರಾತು ಮತ್ತು ಪ್ರಚಾರಗಳಿಗೆ ಗ್ರಾಹಕರ ಪ್ರಕಟಪಡಿಸುವಿಕ...
ಮಾಧ್ಯಮದ ಪ್ರಾಮುಖ್ಯತೆ ಅಥವಾ ವೆಚ್ಚದ ಪ್ರಮಾಣ, ಮಾಧ್ಯಮ ವ್ಯಾಪಾರ ಅಥವಾ ಲಕ್ಷ್ಯದ ಪರಿಣಾಮ, ಮತ್ತು ಜಾಹೀರಾತು ನಿರ್ವಹಣೆಗಳ ಅಥವಾ ನಿರ್ಮಾಣದ ಗುಣಮಟ್ಟ, ಇವೆಲ್ಲದರ ಒಟ್ಟಾರೆ ಪರಿಣಾಮದ ಒಂದು ಅಳತೆಯನ್ನು ಒದಗಿಸುವುದು, ಸಾಮಾನ್ಯವಾಗಿ ಜಾಹೀರಾತು ಅನುಸರಣೆಯ ಉದ್ದೇಶವಾಗಿರುತ್ತದೆ. ಜಾಹೀರಾತು ಅನುಸರಣೆ ಬಗ್ಗೆ ಲೇಖನ (ಇಂಗ್ಲಿಷ್‌ನಲ್ಲಿ) Archived 2009-09-01 at the Wayback Machine.
ಗುಪ್ತ ಜಾಹೀರಾತುಸಂಪಾದಿಸಿ
ಒಂದು ಉತ್ಪನ್ನ ಅಥವಾ ಗುರುತನ್ನು ಮನೋರಂಜನೆ ಮತ್ತು ಮಾಧ್ಯಮಗಳಲ್ಲಿ ಹುದುಗಿಸಿದಾಗ ಗುಪ್ತ ಜಾಹೀರಾತು (ಕೋವರ್ಟ್ ಆಡ್ವರ್ಟೈಸಿಂಗ್) ಎಂದು ಕರೆಸಿಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಲನಚಿತ್ರದಲ್ಲಿ, ಮುಖ್ಯ ಪಾತ್ರ ಒಂದು ವಸ್ತು ಅಥವಾ ಒಂದು ಖಚಿತ ಗುರುತಿನ ಬೇರೇನೋ ಬಳಸಬಹುದು. ಉದಾಹರಣೆಗೆ ಮಿನಾರಿಟಿ ರಿಪೋರ್ಟ್ ಚಲನಚಿತ್ರದಲ್ಲಿ, ಟಾಮ್ ಕ್ರೂಸಿನ ಪಾತ್ರ ಜಾನ್ ಆಂಡರ್ಟನ್ ಮೇಲಿನ ಮೂಲೆಯಲ್ಲಿ ಸ್ಪಷ...
ಚಲನಚಿತ್ರದಲ್ಲಿ ಜಾಹಿರಾತಿನ ಮತ್ತೊಂದು ಉದಾಹರಣೆ ಆಯ್, ರೋಬಾಟ್‌ನಲ್ಲಿದೆ, ಮತ್ತು ಇದರಲ್ಲಿ ವಿಲ್ ಸ್ಮಿತ್‌ನಿಂದ ಅಭಿನಯಿಸಲಾದ ಮುಖ್ಯ ಪಾತ್ರ ತನ್ನ ಕಾನ್ವರ್ಸ್ ಬೂಟುಗಳನ್ನು ಹಲವು ಬಾರಿ ಉಲ್ಲೇಖಿಸುತ್ತಾನೆ, ಮತ್ತು ಅವನ್ನು "ಶ್ರೇಷ್ಠ"ವೆಂದು ಕರೆಯುತ್ತಾನೆ ಏಕೆಂದರೆ ಚಿತ್ರ ದೂರ ಭವಿಷ್ಯದಲ್ಲಿ ನಿಲ್ಲಿಸಲಾಗಿದೆ. ಆಯ್, ರೋಬಾಟ್ ಮತ್ತು ಸ್ಪೇಸ್‌ಬಾಲ್ಸ್ ಕೂಡ ಭವಿಷ್ಯದಲ್ಲಿ ಕಾಣಬಹುದಂಥ ಕಾರುಗಳನ್...
ಕ್ಯಾಡಲ್ಯಾಕ್, ದ ಮೇಟ್ರಿಕ್ಸ್ ರೀಲೋಡಡ್ ಚಲನಚಿತ್ರದಲ್ಲಿ ಜಾಹೀರಾತು ಮಾಡಲು ನಿರ್ಧರಿಸಿತು, ಮತ್ತು ಆ ಕಾರಣದಿಂದ ಈ ಚಿತ್ರ ಕ್ಯಾಡಲ್ಯಾಕ್ ಕಾರುಗಳನ್ನು ಬಳಸಲಾಗಿದ್ದ ಹೆಚ್ಚು ದೃಶ್ಯಗಳನ್ನು ಹೊಂದಿತ್ತು. ಹಾಗೇ, ಒಮೇಗಾ ಕೈಗಡಿಯಾರಗಳು, ಫೋರ್ಡ್, ವಾಯೊ, ಬಿಎಮ್‌ಡಬ್ಲ್ಯು ಮತ್ತು ಆಸ್ಟನ್-ಮಾರ್ಟಿನ್ ಕಾರುಗಳಿಗಾಗಿ, ಇತ್ತೀಚಿನ ಜೇಮ್ಸ್ ಬಾಂಡ್ ಚಲನಚಿತ್ರಗಳಲ್ಲಿ, ಗಮನಾರ್ಹವಾಗಿ ಕಸೀನೊ ರೊಯಾಲ್‌ನಲ್ಲ...
ದೂರದರ್ಶನ ಜಾಹೀರಾತುಗಳುಸಂಪಾದಿಸಿ
ಟೀವಿ ಜಾಹೀರಾತು ಸಾಮಾನ್ಯವಾಗಿ ಅತ್ಯಂತ ಪರಿಣಾಮಕಾರಿ ಮಾಧ್ಯಮ-ಮಾರುಕಟ್ಟೆ ಜಾಹೀರಾತು ವಿಧಾನವೆಂದು ಪರಿಗಣಿಸಲ್ಪಡುತ್ತದೆ ಮತ್ತು ಇದು ಜನಪ್ರಿಯ ಟೀವಿ ಪ್ರಸಂಗಗಳ ಸಮಯದಲ್ಲಿ ವಾಣಿಜ್ಯ ಪ್ರಸಾರಕ್ಕೆ ಟೀವಿ ಜಾಲ ಗಳು ಹೆಚ್ಚು ಶುಲ್ಕವಿಧಿಸುವುದರಿಂದ ಪ್ರಕಟಗೊಂಡಿದೆ. ಅಮೇರಿಕಾದಲ್ಲಿ, ವಾರ್ಷಿಕ ಸೂಪರ್ ಬೋಲ್ ಫುಟ್ಬಾಲ್ ಆಟ, ಟೀವಿ ಮೇಲಿನ ಅತ್ಯಂತ ಪ್ರಸಿದ್ಧ ಜಾಹೀರಾತು ಸಂದರ್ಭವೆಂದು ಗುರುತಿಸಲ್ಪಡುತ್...
ಗಣಕಯಂತ್ರ ರೇಖಾಚಿತ್ರಗಳ ಮೂಲಕ ಕ್ರಮಬದ್ಧ ಟೀವಿ ವಿಧೀಕರಣದಲ್ಲಿ (ಪ್ರೋಗ್ರ್ಯಾಮಿಂಗ್) ಮಿಥ್ಯಾ ಜಾಹೀರಾತುಗಳನ್ನು (ವರ್ಚ್ಯುಯಲ್ ಆಡ್ಸ್) ಅಳವಡಿಸಬಹುದು. ವಿಶಿಷ್ಟವಾಗಿ, ಅನ್ಯ ರೂಪದಿಂದ ಬೋಳಾದ ಹಿನ್ನೆಲೆ ದೃಶ್ಯಗಳಲ್ಲಿ ಇದನ್ನು ಅಳವಡಿಸಲಾಗುತ್ತದೆ[೧೧] ಅಥವಾ ಬಹುದೂರದ ಪ್ರಸಾರ ವಿಕ್ಷಕರಿಗೆ ಸಂಗತವಿರದ ಸ್ಥಳೀಯ ಜಾಹೀರಾತು ಫಲಕಗಳ ಬದಲಾಗಿ ಇರಿಸಲು ಬಳಸಲಾಗುತ್ತದೆ.[೧೨]
ಹೆಚ್ಚು ವಿವಾದಾತ್ಮಕವಾಗಿ , ನಿಜ ಜೀವನದಲ್ಲಿ ಹಿನ್ನೆಲೆಯಲ್ಲಿ ಏನೂ ಇರದ ಕಡೆ ಮಿಥ್ಯಾ ಜಾಹೀರಾತು ಫಲಕಗಳನ್ನು ಅಳವಡಿಸಬಹುದು[೧೩]. ಮಿಥ್ಯಾ ಉತ್ಪನ್ನ ನಿಯೋಜನೆಯೂ ಸಾಧ್ಯವಾಗಿದೆ.[೧೪][೧೫]
ಮಾಹಿತಿ ಜಾಹೀರಾತುಗಳುಸಂಪಾದಿಸಿ
ದೀರ್ಘಾವಧಿ ಪ್ರಕಾರ ಮತ್ತು ಅಲ್ಪಾವಧಿ ಪ್ರಕಾರವೆಂದು ವಿವರಿಸಲಾದ ಎರಡು ಥರದ ಮಾಹಿತಿ ಜಾಹೀರಾತುಗಳಿವೆ (ಇನ್ಫೊಮರ್ಷಿಯಲ್ಸ್). ದೀರ್ಘಾವಧಿ ಪ್ರಕಾರದ ಮಾಹಿತಿ ಜಾಹೀರಾತುಗಳು ೩೦ ನಿಮಿಷಗಳ ಸಮಯಾವಧಿ ಹೊಂದಿರುತ್ತವೆ. ಅಲ್ಪಾವಧಿ ಪ್ರಕಾರದ ಮಾಹಿತಿ ಜಾಹೀರಾತುಗಳು ೩೦ ಸೆಕೆಂಡಿನಿಂದ ೨ ನಿಮಿಷಗಳಷ್ಟು ದೀರ್ಘವಿರುತ್ತವೆ. ಮಾಹಿತಿ ಜಾಹೀರಾತುಗಳು, ಪ್ರತ್ಯಕ್ಷ ಪ್ರತಿಕ್ರಿಯೆ ಟೀವಿ (ಡೈರೆಕ್ಟ್ ರೆಸ್ಪಾನ್ಸ...
ಆಮೇಲೆ ತತ್‌ಕ್ಷಣ ಜಾಹೀರಾತು ಮಾಡಲಾದ ಸುಂಕರಹಿತ ದೂರವಾಣಿ ಸಂಖ್ಯೆ (ಟೋಲ್-ಫ್ರೀ) ಅಥವಾ ವೆಬ್‌ಸೈಟ್ ಮೂಲಕ ಉತ್ಪನ್ನವನ್ನು ಖರೀದಿಸುತ್ತಾನೆ. ಮಾಹಿತಿ ಜಾಹೀರಾತುಗಳು, ಉತ್ಪನ್ನಗಳನ್ನು ಮತ್ತು ಅವುಗಳ ಲಕ್ಷಣಗಳನ್ನು ವಿವರಿ ಸುತ್ತವೆ, ತೋರಿಸುತ್ತವೆ ಮತ್ತು ಹಲವುವೇಳೆ ಪ್ರಮಾಣೀಕರಿಸುತ್ತವೆ, ಮತ್ತು ಸಾಮಾನ್ಯವಾಗಿ ಗ್ರಾಹಕರಿಂದ ಮತ್ತು ಉದ್ಯಮ ವೃತ್ತಿನಿರತರಿಂದ ಯೋಗ್ಯತಾ ಪತ್ರಗಳನ್ನು ಹೊಂದಿರುತ್ತವ...
ಹೊಸ ಮಾಧ್ಯಮಗಳು ಮತ್ತು ಜಾಹೀರಾತು ವಿಧಾನಗಳುಸಂಪಾದಿಸಿ
ಜರ್ಮನಿಯಲ್ಲಿ ರೈಲು ಬಂಡಿಯೊಂದರ ಮೇಲೆ ಜಾಹೀರಾತು
ಅಂತರಜಾಲ ಮತ್ತು ಟಿವೊನಂಥ ಸಾಧನಗಳ ಬಳಕೆಯತ್ತ ಗ್ರಾಹಕನ ಸ್ಥಳಾಂತರದ ಕಾರಣ ಇತರ ಮಾಧ್ಯಮಗಳು ದೂರದರ್ಶನವನ್ನು ಮೀರಿಸುತ್ತಿವೆ. ಅಂತರ್ಜಾಲದ ಮೇಲೆ ಜಾಹೀರಾತು ಮಾಡುವುದು ಒಂದು ಇತ್ತೀಚಿನ ವಿದ್ಯಮಾನವಾಗಿದೆ. ಅಂತ ರ್ಜಾಲ ಆಧಾರಿತ ಜಾಹೀರಾತು ಕಾಲಾವಧಿಯ ಬೆಲೆ, ಸುತ್ತಲಿನ ಅಂತರಜಾಲ ವಿಷಯದ "ಪ್ರಸ್ತುತತೆ" ಮತ್ತು ಆ ಅಂತರಜಾಲ ತಾಣ ಪಡೆಯುವ ಸಂಚಾರದ ಮೇಲೆ ಅವಲಂಬಿಸಿದೆ. ಇ-ಮೇಲ್ ಜಾಹೀರಾತು ಮತ್ತೊಂದು ಇ...
ಕೆಲವು ಕಂಪನಿಗಳು, ವರ್ಧಕ (ಬೂಸ್ಟರ್) ರಾಕೆಟ್‌ಗಳ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಪಾರ್ಶ್ವದ ಮೇಲೆ ಸಂದೇಶಗಳನ್ನು ಅಥವಾ ಸಂಸ್ಥೆಯ ಪ್ರತೀಕ ಚಿಹ್ನೆಗಳನ್ನು ಇರಿಸಲು ಪ್ರಸ್ತಾಪಿಸಿವೆ. ಉದಾತ್ತ ಜಾಹೀರಾತಿನ ಕಾರ್ಯಸಾಧಕತೆ ಮೇಲೆ (ಮಾನಸಿಕ ನಿಯಂತ್ರಣ ನೋಡಿ), ಮತ್ತು ಸಮೂಹ ಸಂದೇಶಗಳ ವ್ಯಾಪಕತೆ ಬಗ್ಗೆ ವಿವಾದವಿದೆ (ಮಾಹಿತಿ ಪ್ರಚಾರ ನೋಡಿ).
ಸಂದಾಯರಹಿತ ಜಾಹೀರಾತು (ಶಾಬ್ದಿಕ ಸಾಗಣೆ (ವರ್ಡ್ ಆಫ಼್ ಮೌತ್) ಜಾಹೀರಾತು ಎಂದೂ ಕರೆಯುವ), ಕನಿಷ್ಠ ವೆಚ್ಚದಲ್ಲಿ ಒಳ್ಳೆ ಅನಾವರಣ ಒದಗಿಸಬಹುದು. ವೈಯಕ್ತಿಕ ಶಿಫಾರಸುಗಳು ("ಸ್ನೇಹಿತನ್ನನ್ನು ಕರೆತನ್ನಿ", "ಇದನ್ನು ಮಾರಿ"), ಸಡಗರ ಹರಡುವುದು, ಅಥವಾ ಒಂದು ಗುರುತನ್ನು ಒಂದು ಸಾಮಾನ್ಯ ನಾಮಪದದೊಂದಿಗೆ ಸಮೀಕರಿಸುವ ಕೆಲಸವನ್ನು ಸಾಧಿಸುವುದು (ಅಮೇರಿಕಾದಲ್ಲಿ, "ಜ಼ಿರಾಕ್ಸ್" = "ನೆರಳಚ್ಚು ಯಂತ್ರ",...
ಆದರೆ, ಕೆಲವು ಕಂಪನಿಗಳು ಒಂದು ಪದಾರ್ಥವನ್ನು ಗುರುತಿಸಲು ತಮ್ಮ ಗುರುತಿನ ಹೆಸರಿನ ಬಳಕೆಯನ್ನು ವಿರೋಧಿಸುತ್ತವೆ. ಒಂದು ಗುರುತನ್ನು ಒಂದು ಸಾಮಾನ್ಯ ನಾಮಪದದೊಂದಿಗೆ ಸಮೀಕರಿಸುವುದು ಆ ಗುರುತನ್ನು ಒಂದು ಜಾತಿವಾಚಕಗೊಳಿಸಿದ ವ್ಯಾಪಾರ ಚಿಹ್ನೆಯಾಗಿ (ಜನೆರಿಸೈಜ಼್ಡ್) ಪರಿವರ್ತಿಸುವ ಅಪಾಯವಿದೆ - ಅದನ್ನು ಒಂದು ಜಾತಿವಾಚಕ ಪದವಾಗಿ ಪರಿವರ್ತಿಸುವುದರ ಅರ್ಥ ಒಂದು ವ್ಯಾಪಾರ ಚಿಹ್ನೆಯಾಗಿ ಅದರ ನ್ಯಾಯಬದ...
ಇದನ್ನೂ ಕೂಡ ೨೦೦೦ರಲ್ಲಿ ಫಿನ್ಲಂಡ್‌ನಲ್ಲಿ ಪ್ರಾರಂಭಿಸಲಾಯಿತು. ೨೦೦೭ರ ವೇಳೆಗೆ ಸಂಚಾರಿ ಜಾಹೀರಾತಿನ ಬೆಲೆ ೨೨೦ ಕೋಟಿ ಡಾಲರ್ ಮುಟ್ಟಿತ್ತು ಮತ್ತು ಆಡ್‌ಮಾಬ್ ನಂತಹ ಪ್ರಬಂಧಕರು ಲೆಕ್ಕವಿಲ್ಲದಷ್ಟು ಸಂಚಾರಿ ಜಾಹೀರಾತುಗಳನ್ನು ತಲುಪಿಸಿದರು. ಹೆಚ್ಚು ಮುಂದುವರಿದ ಸಂಚಾರಿ ಜಾಹೀರಾತುಗಳು, ಪತಾಕೆ ಜಾಹೀರಾತುಗಳು, ಕೂಪನ್‌ಗಳು, ಎಮ್ಎಮ್ಎಸ್ ಚಿತ್ರ ಮತ್ತು ವೀಡಿಯೋ ಸಂದೇಶಗಳು, ಆಟಗಳಲ್ಲಿನ ಜಾಹೀರಾತುಗಳ...
ಇದು ಅಂತರಜಾಲ ವಿಳಾಸಗಳನ್ನು ಬೆರಳಚ್ಚು (ಟೈಪ್) ಮಾಡುವುದರ ಬದಲು, ಅಂತರಜಾಲ ವಸ್ತುವಿಗೆ ತ್ವರಿತ ಪ್ರವೇಶ ಪಡೆಯಲು ಆಧುನಿಕ ಫೋನುಗಳ ಕ್ಯಾಮರಾ ವೈಶಿಷ್ಟ್ಯವನ್ನು ಬಳಸುತ್ತದೆ. ಜಪಾನ್‌ನ ಮೋಬಾಯ್ಲ್ ಫೋನು ಬಳಕೆದಾರರಲ್ಲಿ ೮೩ ಪ್ರತಿಶತ ಜನ ಈಗಾಗಲೇ ೨ಡಿ ಬಾರ್‌ಕೋಡ್‌ಗಳ ಸಕ್ರಿಯ ಬಳಕೆದಾರರು. ಸಾಮಾಜಿಕ ಸಂಪರ್ಕಜಾಲ ಜಾಹೀರಾತು, (ಸೋಷಿಯಲ್ ನೆಟ್ವರ್ಕಿಂಗ್) ತೀವ್ರವಾಗಿ ಬೆಳೆಯುತ್ತಿರುವ ಜಾಹೀರಾತಿನ ಒಂ...
ಆದರೆ, ಬಳಕೆದಾರ ಸಾಮಾಜಿಕ ಸಂಪರ್ಕಜಾಲ ತಾಣಕ್ಕೆ ಒದಗಿಸಿರುವ ಜನಾಂಗ ಸ್ಥಿತಿಯ ಮಾಹಿತಿಯ ಅನುಕೂಲವನ್ನು ಜಾಹೀರಾತುದಾರರು ಪಡೆಯುವ ಸಾಮರ್ಥ್ಯವಿರುವುದರಿಂದ, ಇದು ಬಹಳ ಭರವಸೆ ಮೂಡಿಸಿದೆ. ಕಾಲಕಾಲಕ್ಕೆ, ದ ಸಿಡಬ್ಲ್ಯು, ಒಂದು ಸಂಪೂರ್ಣ ವಾಣಿಜ್ಯ ವಿರಾಮದ ಅವಧಿಯಲ್ಲಿ ಒಂದು ಕಂಪನಿಯ ಉತ್ಪನ್ನವನ್ನು ಪ್ರಚಾರ ಮಾಡಲು, "ವಸ್ತು ಆಚ್ಛಾದನೆಗಳು" (ಕಂಟೆಂಟ್ ರ‍್ಯಾಪ್ಸ್) ಎಂಬ ಲಘು ಕಾರ್ಯಕ್ರಮ ವಿರಾಮಗಳನ್ನ...
ನೆನಪು ಮತ್ತು ವರ್ತನೆ ಮೇಲೆ ಪರಿಣಾಮಸಂಪಾದಿಸಿ
"ಜಾಹೀರಾತಿನ ಮೇಲೆ ನಾನು ವೆಚ್ಚಮಾಡುವ ಅರ್ಧದಷ್ಟು ಹಣ ವ್ಯರ್ಥವಾಗುತ್ತದೆ; ತೊಂದರೆ ಏನೆಂದರೆ, ಯಾವ ಅರ್ಧ ಅಂತ ನನಗೆ ಗೊತ್ತಿಲ್ಲ." - ಸಾಮಾನ್ಯವಾಗಿ ಜಾನ್ ವಾನಮೇಕರ್‌ರಿಗೆ ಯಾ ವಿಲಿಯಮ್ ಲೀವರ್‌ರಿಗೆ ಹೊಂದಿಸಲಾದ ಜನಪ್ರಿಯ ಉಕ್ತಿ; ರಿಗ್ಲಿ ಚ್ಯೂಯಿಂಗ್ ಗಮ್ ಕಂಪನಿಯಿಂದ ಕೂಡ ಒಬ್ಬರಿಗೆ. ಜಾಹೀರಾತಿನ ಪ್ರಭಾವ ಗಣನೀಯವಾದ ಚರ್ಚೆಯ ವಿಷಯವಾಗಿದೆ ಮತ್ತು ಬೇರೆಬೇರೆ ಸಂದರ್ಭಗಳಲ್ಲಿ ಹಲವು ಬೇರೆಬೇರೆ ದ...
(ಕೊನೆಯಲ್ಲಿ ಸಫಲವಾಗುವ) ಜಾಹೀರಾತಿನ ವಿರೋಧಿಗಳು, ಇನ್ನೊಂದು ಕಡೆ, ಜಾಹೀರಾತು ವಾಸ್ತವವಾಗಿ ಬಳಕೆಯನ್ನು ಹೆಚ್ಚಿಸುತ್ತದೆಂದು ಸಾಧಿಸುತ್ತಾರೆ. ಬಹಳ ಮೂಲಗಳ ಪ್ರಕಾರ, ಜಾಹೀರಾತಿಗೆ ಒಳಗಾದ ವ್ಯಕ್ತಿಯ ಹಿಂದಿನ ಅನುಭವ ಮತ್ತು ಮಾನಸಿಕ ಸ್ಥಿತಿ, ಜಾಹೀರಾತು ಮಾಡಬಲ್ಲ ಪ್ರಭಾವವನ್ನು ನಿರ್ಧರಿಸಬಹುದು. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಜಾಹೀರಾತನ್ನು ಇತರ ದೂರದರ್ಶನ ಕಾರ್ಯಕ್ರಮಗಳಿಂದ ಭೇ...
ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ, ಗ್ರಾಹಕರು, ಮಾರಾಟ, ಲಾಭ ಮತ್ತು ಮಾರುಕಟ್ಟೆ ಅಂಶದ (ಮಾರ್ಕೆಟ್ ಷೇರ್) ಮೇಲೆ ವ್ಯಾಪಾರ ಕ್ರಿಯೆಗಳ ಪ್ರಭಾವ ನಿರ್ಧರಿಸಲು, ವ್ಯಾಪಾರ ವಿಶ್ಲೇಷಣಾ ಸೂತ್ರಗಳು ಮತ್ತು ವ್ಯಾಪಾರ ಕಾರ್ಯಸಾಧಕತೆಯ (ಮಾರ್ಕೆಟಿಂಗ್ ಎಫ಼ೆಕ್ಟಿವ್‌ನೆಸ್) ಒಂದು ಸಮಗ್ರ ವಿಜ್ಞಾನವನ್ನು ಅಭಿವೃದ್ಧಿಗೊಳಿಸಲಾಗಿದೆ. ವ್ಯಾಪಾರ ಮಿಶ್ರಣ ಪ್ರತಿರೂಪಣೆ (ಮಾರ್ಕೆಟಿಂಗ್ ಮಿಕ್ಸ್ ಮಾಡಲಿಂಗ್), ಪ್ರ...
ಮಾಧ್ಯಮದ ಬಗ್ಗೆ ಸಾರ್ವಜನಿಕ ಗ್ರಹಿಕೆಸಂಪಾದಿಸಿ
ಆಧುನಿಕ ಪಾಶ್ಚಾತ್ಯ ಸಮಾಜಗಳಲ್ಲಿ ಜಾಹೀರಾತು ಮತ್ತು ವ್ಯಾಪಾರ ಪ್ರಯತ್ನಗಳು ಹೆಚ್ಚು ಸರ್ವವ್ಯಾಪಕವಾದಂತೆ, ಸಂಸ್ಕೃತಿ ಸಂಮರ್ದನೆ (ಕಲ್ಚರ್ ಜ್ಯಾಮಿಂಗ್) ಮೂಲಕ ಮಾಧ್ಯಮಗಳು ಮತ್ತು ಗಿರಾಕಿ ಹಿತರಕ್ಷಣೆಯನ್ನು ಜಾಹೀರಾತಿನ ಸ್ವಂತ ತಂತ್ರಗಳನ್ನು ಬಳಸಿ ಟೀಕಿಸುವ ಆಡ್‌ಬಸ್ಟರ್ಸ್ ನಂತಹ ಗುಂಪುಗಳ ಟೀಕೆಗೆ ಈ ಉದ್ಯಮ ಗುರಿಯಾಗಿದೆ. ಬಳಕೆಯನ್ನು ಪ್ರೋತ್ಸಾಹಿಸುವ ಒಂದು ಜಟಿಲ ಆರ್ಥಿಕ ಸಮೂಹ ಉತ್ಪಾದನ ವ್ಯವಸ...
ಅದು ಶಾಲೆಗಳಲ್ಲಿ ಬಳಕೆಗೆ ಶೈಕ್ಷಣಿಕ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಿದೆ. ಜಾಹೀರಾತುದಾರರಿಂದ ಗುರಿಯಾಗುತ್ತಿರುವ ಮಾನಸಿಕ ಸ್ಥಳದ (ಮೆಂಟಲ್ ಸ್ಪೇಸ್) ಪ್ರವೇಶಕ್ಕೆ ತೆರಿಗೆ ವಿಧಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಗುಂಪುಗಳು ಹೆಚ್ಚೆಚ್ಚು ಸೂಚಿಸುತ್ತಿವೆ, ಏಕೆಂದರೆ ಪ್ರಸ್ತುತ ಕ್ಷಣದಲ್ಲಿ, ಬಲವಂತವಾಗಿ ಹೊರಿಸಲಾಗುತ್ತಿರುವ ಸಾರ್ವಜನಿಕರ ಸದಸ್ಯರಿಗೆ ಯಾವುದೇ ಪರಿಹಾರ ಧನ ಕೊಡದೇ ಉಚಿತವಾಗಿ ಜಾಹ...
ಆರ್ಕನ್ಸಾ ಮತ್ತು ಮೇಯ್ನ್ ಈ ರೀತಿಯ ತೆರಿಗೆ ಪದ್ಧತಿಯನ್ನು ಕಾರ್ಯಗತಮಾಡಲು ಮಸೂದೆಗಳನ್ನು ಪರಿಗಣಿಸುತ್ತಿವೆ. ಫ಼್ಲಾರಿಡಾ ೧೯೮೭ರಲ್ಲಿ ಈ ರೀತಿಯ ತೆರಿಗೆಯನ್ನು ತಂದಿತು, ಆದರೆ ರಾಷ್ಟ್ರೀಯ ವಾಣಿಜ್ಯ ಹಿತಾಸಕ್ತಿಗಳಿಂದ ಯೋಜಿತ ಸಮ್ಮೇಳನಗಳ ಹಿಂತೆಗೆತದಿಂದ ಪ್ರವಾಸೋದ್ಯಮಕ್ಕಾದ ಪ್ರಮುಖ ನಷ್ಟಗಳಿಂದ, ಮತ್ತು ಜಾಹೀರಾತುಗಳ ರದ್ದುಮಾಡುವಿಕೆಯಿಂದ ಪ್ರಸಾರೋದ್ಯಮ ಒಂದಕ್ಕೇ ಆದ ೧೨ ದಶಲಕ್ಷ ಡಾಲರ್‌ಗಳ ನಷ್...
ಹೊರಾಂಗಣ ಜಾಹೀರಾತಿನ ಹಲವು ಪ್ರಕಾರಗಳು ಸಾರ್ವಜನಿಕ ಕ್ಷೇತ್ರವನ್ನು ನಾಶಮಾಡುತ್ತವೆಂದು ಅಮೇರಿಕಾದಲ್ಲಿ ಹಲವು ಸಮುದಾಯಗಳು ನಂಬಿವೆ[೧೬]. ಅಮೇರಿಕಾದಲ್ಲಿ ೧೯೬೦ರ ದಶಕದಷ್ಟು ಹಿಂದೆಯೂ ಗ್ರಾಮಾಂತರ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳನ್ನು ನಿಷೇಧಿಸುವ ಪ್ರಯತ್ನಗಳಾಗಿದ್ದವು[೧೭]. ಸೌ ಪೌಲೊ ನಂತಹ ನಗರ ಗಳು ಒಂದು ಸಂಪೂರ್ಣ ನಿಷೇಧವನ್ನು ತಂದಿವೆ[೧೮] ಮತು ಬ್ರಿಟನ್‌ನ ರಾಜಧಾನಿ ಕೂಡ ಕಾನೂನು ವಿರೋಧಿ ಪ...
ಜಾಹೀರಾತಿನ ವಿಷಯ ಮತ್ತು ಪ್ರಭಾವವನ್ನು ನಿಯಂತ್ರಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿ ರಕ್ಷಿಸಲು ಹೆಚ್ಚೆಚ್ಚು ಪ್ರಯತ್ನಗಳಾಗಿವೆ. ಕೆಲವು ಉದಾಹರಣೆಗಳು: ಹಲವು ದೇಶಗಳಲ್ಲಿ ವಿಧಿಸಲಾದ ದೂರದರ್ಶನ ಧೂಮಪಾನ ಜಾಹೀರಾತಿನ ಮೆಲೆ ನಿಷೇಧ, ಮತ್ತು ೧೯೯೧ರಲ್ಲಿ ಸ್ವೀಡನ್ ಸರ್ಕಾರ ವಿಧಿಸಿದ ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜಾಹೀರಾತು ಮಾಡುವುದಕ್ಕೆ ಸಂಪೂರ್ಣ ನಿಷೇಧ. ಆ ನಿಬಂಧನೆ ವಾಸ್ತವ...
ಯೂರೋಪ್ ಮತ್ತು ಬೇರೆಡೆಗಳಲ್ಲಿ, ಮಕ್ಕಳಿಗೆ ಜಾಹೀರಾತು ಮಾಡುವುದನ್ನು ನಿಯಂತ್ರಿಸಬೇಕೇ (ಅಥವಾ ಎಷ್ಟು) ಎಂಬುದರ ಬಗ್ಗೆ ಒಂದು ಶಕ್ತಿದಾಯಕ ಚರ್ಚೆ ನಡೆಯುತ್ತಿದೆ. ಮಕ್ಕಳನ್ನು ಉದ್ದೇಶಿಸಿದ ಆಹಾರ ಜಾಹೀರಾತು ಅಮೇರಿಕಾದಲ್ಲಿ ಬಾಲ್ಯದ ಸ್ಥೂಲ ಕಾಯತೆಯ ಸೋಂಕು ಜಾಡ್ಯದಲ್ಲಿ ಒಂದು ಪ್ರಮುಖ ಅಂಶವೆಂದು ಸೂಚಿಸಿದ ಕಾಯ್ಸ಼ರ್ ಕುಟುಂಬ ಪ್ರತಿಷ್ಠಾನ (ಕಾಯ್ಸ಼ರ್ ಫ಼್ಯಾಮಲಿ ಫ಼ೌಂಡೇಷನ್) ಫೆಬ್ರವರಿ ೨೦೦೪ರಲ್ಲಿ...
ಜಾಹೀರಾತುದಾರರು, ಜಾಹೀರಾತು ಸಂಸ್ಥೆಗಳು ಮತ್ತು ಮಾಧ್ಯಮಗಳು ಜಾಹೀರಾತು ಮಾನದಂಡಗಳ ಒಂದು ನಿಯಮಾವಳಿಯನ್ನು ಒಪ್ಪಿಕೊಳ್ಳುತ್ತವೆ ಮತ್ತು ಅದನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತವೆ. ಇಂತಹ ನಿಯಮಾವಳಿಗಳ ಸಾಮಾನ್ಯ ಧ್ಯೇಯ ಯಾವುದೇ ಜಾಹೀರಾತು 'ನ್ಯಾಯಸಮ್ಮತ, ಸಭ್ಯ, ಪ್ರಾಮಾಣಿಕ ಮತ್ತು ಸತ್ಯ' ಇರುವಂತೆ ನಿಶ್ಚಿತಗೊಳಿಸುವುದು. ಕೆಲವು ಸ್ವ-ನಿಯಂತ್ರಕ ಸಂಸ್ಥೆಗಳು ಉದ್ಯಮಗಳಿಂದ ಹಣ ಒದಗಿಸಲ್ಪಡುತ್ತವೆ,...
ಬ್ರಿಟನ್‌ನಲ್ಲಿ ಜಾಹೀರಾತು ಫಲಕಗಳ ಪ್ರದರ್ಶನದಂತಹ ಹೊರಾಂಗಣ ಜಾಹೀರಾತಿನ ಬಹಳಷ್ಟು ಪ್ರಕಾರಗಳು ಬ್ರಿಟನ್‌ನ ಪಟ್ಟಣ ಮತ್ತು ಪ್ರಾಂತ ಯೋಜನಾ ವ್ಯವಸ್ಥೆಯಿಂದ (ಯುಕೆ ಟೌನ್ ಆಂಡ್ ಕೌಂಟಿ ಪ್ಲ್ಯಾನಿಂಗ್ ಸಿಸ್ಟಮ್) ನಿಯಂತ್ರಿತವಾಗಿರುತ್ತವೆ. ಸದ್ಯಕ್ಕೆ ಯೋಜನಾ ಪ್ರಾಧಿಕಾರ ದಿಂದ ಒಪ್ಪಿಗೆ ಇಲ್ಲದೆ ಜಾಹೀರಾತಿನ ಪ್ರದರ್ಶನ ೨೫೦೦ ಪೌಂಡುಗಳ ದಂಡಕ್ಕೆ ಗುರಿಯಾಗುವ ಒಂದು ಅಕ್ಷಮ್ಯ ಅಪರಾಧವಾಗಿದೆ. ಬ್ರಿಟನ್‌...
ಹಾಗಾಗಿ, ಅವರು ನಿಯಂತ್ರಕ ಕಾನೂನುಗಳನ್ನು ಕಡೆಗಣಿಸಲು ಅನೇಕ ವಿಧದ ಭಾಷಾಶಾಸ್ತ್ರದ ಸಾಧನಗಳನ್ನು ಬಳಸಿಕೊಳ್ಳುತ್ತಾರೆ (ಉದಾಹರಣೆಗೆ ಫ಼್ರೆಂಚ್ ಜಾಹೀರಾತುಗಳಲ್ಲಿ ಇಂಗ್ಲಿಷ್ ಬಳಕೆಯನ್ನು ಸೀಮಿತಗೊಳಿಸುವಂಥ ೧೯೯೪ರ ಟುಬ್ಞಾ ಕಾನೂನಿನ ನಿಯಮಾವಳಿ ೧೨ನ್ನು ಮೀರಲು ಇಂಗ್ಲಿಷ್ ಶಬ್ದಗಳನ್ನು ಎದ್ದುಕಾಣುವಂತೆ ಮುದ್ರಿಸುವುದು ಮತ್ತು ಫ಼್ರೆಂಚ್ ಅನುವಾದಗಳನ್ನು ಸೂಕ್ಷ್ಮ ಅಕ್ಷರಗಳಲ್ಲಿ ಮುದ್ರಿಸುವುದು); Bh...
ಭವಿಷ್ಯದಲ್ಲಿಸಂಪಾದಿಸಿ
ಜಾಗತಿಕ ಜಾಹೀರಾತುಸಂಪಾದಿಸಿ
ಜಾಹೀರಾತು, ಅಭಿವೃದ್ಧಿಯ ಐದು ಪ್ರಮುಖ ಘಟ್ಟಗಳನ್ನು ಕಂಡಿದೆ: ದೇಶೀಯ, ನಿರ್ಯಾತ, ಅಂತರರಾಷ್ಟ್ರೀಯ, ಬಹುರಾಷ್ಟ್ರೀಯ, ಮತ್ತು ಜಾಗತಿಕ. ಜಾಗತಿಕ ಜಾಹೀರಾತುದಾರರಿಗೆ ವಿಶ್ವದಾದ್ಯಂತ ಜಾಹೀರಾತನ್ನು ಅಭಿವೃದ್ಧಿಪಡಿಸುವಾಗ ಸರಿಹೊಂದಿಸಬೇಕಾದ ನಾಲ್ಕು ಸ್ಪರ್ಧಿಸುವ ಸಾಮರ್ಥ್ಯವುಳ್ಳ ವ್ಯಾಪಾರ ಲಕ್ಷ್ಯಗಳಿವೆ: ಏಕಕಂಠದಿಂದ ಮಾತನಾಡುತ್ತಲೇ ಗುರುತನ್ನು ಬೆಳೆಸುವುದು, ಸೃಜನಾತ್ಮಕ ಪ್ರಕ್ರಿಯೆಯಲ್ಲಿ ದೊಡ್ಡ ...
ಜಾಗತಿಕ ವ್ಯಾಪಾರದ ವಿಕಾಸವಾದಿ ಘಟ್ಟಗಳಿಂದ ಹುಟ್ಟಿದ ಜಾಗತಿಕ ಜಾಹೀರಾತಿನ ಆಚರಣೆಗಳ ಅಭಿವೃದ್ಧಿಗೆ ಮೂರು ಪ್ರಾಥಮಿಕ ಮತ್ತು ಮೂಲಭೂತವಾಗಿ ವಿಭಿನ್ನ ಮಾರ್ಗಗಳು ಯಾವುವೆಂದರೆ: ಆಚರಣೆಗಳನ್ನು ನಿರ್‍ಯಾತಮಾಡುವುದು, ಸ್ಥಳೀಯ ಆಚರಣೆಗಳನ್ನು ಉತ್ಪಾದಿಸುವುದು, ಮತ್ತು ಸಂಚರಿಸುವ ಕಲ್ಪನೆಗಳನ್ನು ಆಯಾತ ಮಾಡುವುದು. (Global marketing Management, 2004, ಪುಟಗಳು 13-18) ಯಾವುದೇ ದೇಶ ಅಥವಾ ಪ್ರದೇಶ...
ಒಂದು ಜಾಹೀರಾತಿನಲ್ಲಿ ಏನು ಕೆಲಸಮಾಡುತ್ತದೆಂದು ಒಂದು ಸಾರಿ ಗೊತ್ತಾದರೆ, ಆ ಕಲ್ಪನೆ ಅಥವಾ ಕಲ್ಪನೆಗಳನ್ನು ಇತರ ಯಾವುದೇ ಮಾರುಕಟ್ಟೆಯಿಂದ ಆಮದುಮಾಡಿಕೊಳ್ಳಬಹುದು. ಗಮನದ ಹರಿವು (ಫ಼್ಲೋ ಆಫ್ ಅಟೆನ್ಷನ್), ಭಾವನೆಯ ಹರಿವು (ಫ಼್ಲೋ ಆಫ್ ಇಮೋಷನ್) ಮತ್ತು ಅಂಕನ ಕ್ಷಣಗಳು (ಬ್ರ್ಯಾಂಡಿಂಗ್ ಮೊಮೆಂಟ್ಸ್) ಮುಂತಾದ ಮಾರುಕಟ್ಟೆ ಸಂಶೋಧನೆ ಪರಿಮಾಣಗಳು, ಯಾವುದೇ ದೇಶ ಅಥವಾ ಪ್ರದೇಶದಲ್ಲಿ ಒಂದು ಜಾಹೀರಾತಿನ...
ಅಂತರಜಾಲದ ಉದಯದೊಂದಿಗೆ ಹಲವು ಹೊಸ ಜಾಹೀರಾತು ಅವಕಾಶಗಳು ಬಂದವು. ಪಾಪ್-ಅಪ್, ಫ಼್ಲ್ಯಾಶ್, ಬ್ಯಾನರ್, ವೀಡಿಯೊ ಗೇಮ್ ಜಾಹೀರಾತು, ಮತ್ತು ಇ-ಅಂಚೆ ಜಾಹೀರಾತುಗಳು (ಕೊನೆಯದು ಸ್ಪ್ಯಾಮ್‌ನ ಒಂದು ಪ್ರಕಾರ) ಈಗ ಸಾಮನ್ಯ ವಿಷಯವಾಗಿದೆ. (ಟಿವೊ ನಂತಹ) ಅಂಕೀಯ ದೃಶ್ಯ ಮುದ್ರಕಗಳ (ಡಿಜಿಟಲ್ ವೀಡಿಯೋ ರಿಕಾರ್ಡರ್) ಮೇಲೆ ಕಾರ್ಯಕ್ರಮಗಳನ್ನು ಮುದ್ರಿಸಿಡುವ ಸಾಧ್ಯತೆ, ಬಳಕೆದಾರರಿಗೆ ಕಾರ್ಯಕ್ರಮಗಳನ್ನು ಮುದ್...
ಜೊತೆಗೆ, ಮೊದಲೇ ಮುದ್ರಿಸಿದ "ಪೆಟ್ಟಿಗೆ ಕಟ್ಟುಗಳ" (ಬಾಕ್ಸ್‌ಡ್ ಸೆಟ್) ಹೆಚ್ಚು ಕಾರ್ಯಕ್ರಮ ಅವಧಿಗಳು (ಸೀಸ಼ನ್) ದೂರದರ್ಶನ ಕಾರ್ಯಕ್ರಮ ಸರಣಿಯ ಮಾರಾಟಕ್ಕೆ ನೀಡಲಾಗುತ್ತದೆ; ಟೀವಿ ಮೇಲೆ ಕಾರ್ಯಕ್ರಮಗಳನ್ನು ಕಡಿಮೆ ಜನ ನೋಡುತ್ತಾರೆ. ಆದರೆ, ಈ ಕಟ್ಟುಗಳು ಮಾರಾಟ ಮಾಡಲ್ಪಡುತ್ತವೆಂಬ ಸಂಗತಿಯ ಕಾರಣ ಈ ಕಟ್ಟುಗಳ ಮಾರಾಟದಿಂದ ಕಂಪನಿ ಹೆಚ್ಚುವರಿ ಲಾಭ ಪಡೆಯುತ್ತದೆ. ಈ ಪರಿಣಾಮವನ್ನು ವಿರೋಧಿಸಲು ಹಲವ...
ವಿಶೇಷವಾಗಿ "ಮನೋರಂಜಕ" ಜಾಹೀರಾತಿನ ಉದಯದ ನಂತರ, ಕೆಲವು ಜನರು ಒಂದು ಜಾಹೀರಾತನ್ನು ಬಹಳ ಮೆಚ್ಚಿ ಅದನ್ನು ಆಮೇಲೆ ವೀಕ್ಷಿಸಲು ಅಥವಾ ಮಿತ್ರರಿಗೆ ತೋರಿಸಲು ಇಷ್ಟಟಡಬಹುದು. ಸಾಮನ್ಯವಾಗಿ, ಜಾಹೀರಾತು ಸಮುದಾಯ ಇಲ್ಲಿಯವರೆಗೂ ಇದನ್ನು ಸುಲಭ ಮಾಡಿಲ್ಲವಾದರೂ ಕೆಲವರು ತಮ್ಮ ಜಾಹೀರಾತುಗಳನ್ನು ನೋಡಲು ಮತ್ತು ಕೇಳಲು ಬಯಸುವವರಿಗೆ ವಿಸ್ತಾರವಾಗಿ ವಿತರಿಸಲು ಅಂತರಜಾಲವನ್ನು ಬಳಸಿದ್ದಾರೆ. ಜಾಹೀರಾತಿನ ಭವಿಷ...
ಹಿಂದೆ, ಸಾಧ್ಯವಾದಷ್ಟು ಅತ್ಯಂತ ದೊಡ್ಡದಾದ ಸಮೂಹ ಮಾರುಕಟ್ಟೆ ಗುಂಪಿನ ಜನರನ್ನು ಒಳಗೊಳ್ಳುವುದು ಒಂದು ಸಂದೇಶವನ್ನು ತಲುಪಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿತ್ತು. ಆದರೆ, ಬಳಕೆಯ ಅನುಸರಣೆ (ಯೂಸೇಜ್ ಟ್ರ್ಯಾಕಿಂಗ್), ಗ್ರಾಹಕರ ಕಿರುಪರಿಚಯಗಳು (ಪ್ರೋಫೈಲ್) ಮತ್ತು ಅಂತರಜಾಲ ದೈನಿಕದಿಂದ (ಬ್ಲಾಗ್) ಸಾಮಾಜಿಕ ಸಂಪರ್ಕಜಾಲ ತಾಣಗಳವರೆಗೆ ಎಲ್ಲದರಿಂದ ತರಲ್ಪಟ್ಟ ನಿರ್ದಿಷ್ಟ ಆಕರ್ಷಣಾ ವಸ್ತುವಿನ ಬ...
ಈ ಜಾಹೀರಾತುಗಳು ಒಂದು ನಿರ್ದಿಷ್ಟ ಗುಂಪಿಗಾಗಿ ಉದ್ದೇಶಿತವಾಗಿರುತ್ತವೆ ಮತ್ತು ನೇರ ತಮ್ಮ ಮನೆಯಿಂದಲೇ ಯಾವುದೇ ಸಮಯಕ್ಕೆ ಒಂದು ನಿರ್ದಿಷ್ಟ ಉದ್ಯಮ ಅಥವಾ ವ್ಯವಹಾರದ ಬಗ್ಗೆ ಹೆಚ್ಚು ತಿಳಿಯಲು ಬಯಸುವ ಯಾರಿಂದಲೇ ಆಗಲಿ ನೋಡಬಹುದಾಗಿದೆ. ಇದು ವೀಕ್ಷಕನನ್ನು ಪೂರ್ವನಿಯಾಮಕವಾಗುವುದಕ್ಕೆ ಮತ್ತು ವಾಸ್ತವಿಕವಾಗಿ ತಾವು ನೋಡಲು ಬಯಸುವ ಜಾಹೀರಾತುಗಳನ್ನು ಆರಿಸಲು ಕಾರಣವಾಗುತ್ತದೆ.[೧೯]