text
stringlengths
0
61.5k
ಹಿಂದಿಯ 'ಬಿಗ್ ಬಾಸ್ 13' ಕಾರ್ಯಕ್ರಮ ಸ್ಪರ್ಧಿ ಮಹಿರಾ ಶರ್ಮಾ ವಿವಾದ ಮಾಡಿಕೊಂಡಿದ್ದಾರೆ. ಈ ಬಾರಿಯ 'ದಾದಾ ಸಾಹೇಬ್ ಪಾಲ್ಕೆ'ಯಲ್ಲಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ನನಗೆ 'ಮೋಸ್ಟ್ ಫ್ಯಾಷನೇಬಲ್ ಸ್ಪರ್ಧಿ' ಎಂಬ ಪ್ರಶಸ್ತಿ ಸಿಕ್ಕಿದೆ ಎಂದು ಪೋಸ್ ನೀಡಿದ್ದಾರೆ.
ಪ್ರಶಸ್ತಿ ಸಿಕ್ಕಿದೆ ಎಂಬ ವಿಷಯವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿರಾ ಶರ್ಮಾ ಹಂಚಿಕೊಂಡಿದ್ದಾರೆ. ಅಂದಹಾಗೆ, 'ದಾದಾ ಸಾಹೇಬ್ ಪಾಲ್ಕೆ' ಕಾರ್ಯಕ್ರಮದಲ್ಲಿ ಮಹೀರಾ ಶರ್ಮಾ ಭಾಗಿಯಾಗಿದ್ದು ನಿಜ. ಆದರೆ, ಅವರಿಗೆ ಯಾವುದೇ ಪ್ರಶಸ್ತಿ ಸಿಕ್ಕಿರಲಿಲ್ಲ.
'ದಾದಾ ಸಾಹೇಬ್ ಪಾಲ್ಕೆ' ಆಯೋಜಕರಿಗೆ ಮಹಿರಾ ಶರ್ಮಾ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಮಹೀರಾ ಶರ್ಮಾ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಚಾರಕ್ಕಾಗಿ ಮಹೀರಾ ಶರ್ಮಾ ಈ ರೀತಿ ಮಾಡಿದ್ದಾರೆ ಎಂದಿದ್ದಾರೆ. ಸುಳ್ಳು ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮಹಿರಾ ಶರ್ಮಾ ಫೆಬ್ರವರಿ 20 ರಂದು ರಾತ್ರಿ 11:30 ಸುಮಾರಿಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದರು. ನಂತರ ಈ ಪೋಸ್ಟ್ ಶೇರ್ ಆಗಿ ಆಯೋಜಕ ಗಮನಕ್ಕೆ ಬಂತು.
'ಸ್ವಾಭಿಮಾನದ ಮಂಡ್ಯ ಜನತೆಯ ಗೆಲುವು'- ಸುಮಲತಾ ಅಂಬರೀಷ್ | Sumalatha Ambareesh Thanks to Mandya People for her Victory | Kannadaprabha.com
Monday, June 24, 2019 11:42 PM IST
Published: 23 May 2019 04:38 PM IST | Updated: 23 May 2019 04:59 PM IST
ಮಂಡ್ಯ: ತೀವ್ರ ಕುತೂಹಲ ಕೆರಳಿಸಿದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಒಂದು ಲಕ್ಷದ ಹದಿನೈದು ಸಾವಿರ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಸುಮಲತಾ ಅವರ ಗೆಲುವಿನ ಬಗ್ಗೆ ಚುನಾವಣಾ ಆಯೋಗದ ಅಧಿಕೃತ ಘೋಷಣೆಯಷ್ಟೆ ಬಾಕಿಯಿದೆ.
ಭಾರಿ ಅಂತರದಲ್ಲಿ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ , ಇದು ಸ್ವಾಭಿಮಾನದ ಮಂಡ್ಯ ಜನತೆಯ ಗೆಲುವು ಎಂದಿದ್ದಾರೆ.
ಇದು ನನ್ನ ಗೆಲುವಲ್ಲ, ಅಂಬರೀಷ್ ಅವರ ಗೆಲುವು ಆಗಿದೆ. ನನ್ನ ಗೆಲುವಿಗೆ ಮಂಡ್ಯ ಜನತೆ ಮಾತ್ರವಲ್ಲದೆ ರಾಜ್ಯದ ಜನತೆಯೇ ಹಾರೈಸಿದ್ದಾರೆ ಎಂದು ಹೇಳಿದ್ದಾರೆ.
ತುಂಬಾ ದೊಡ್ಡ ಸಾಹಸ ಮಾಡಿದ್ದು, ಒಳ್ಳೇಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೆ. ಈ ಹಾದಿಯಲ್ಲಿ ಚಿತ್ರೋದ್ಯಮದ ಗಣ್ಯರು, ರಾಜ್ಯದ ಜನತೆಯೇ ಬೆಂಬಲಿಸಿದ್ದು, ಅವರೆಲ್ಲರಿಗೂ ಚಿರಖುಣಿಯಾಗಿರುವುದಾಗಿ ಹೇಳಿದ್ದಾರೆ.
ಆರಂಭದಲ್ಲಿ ಹಿನ್ನೆಡೆಯಲ್ಲಿದ್ದರೂ ಮಧ್ಯಾಹ್ನದ ನಂತರ ಮುನ್ನಡೆ ಕಾಯ್ದುಕೊಂಡ ಸುಮಲತಾ ಅಂಬರೀಷ್ ಅವರಿಗೆ ಮದ್ದೂರು, ಮಳವಳ್ಳಿ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಲೀಡ್ ಸಿಕ್ಕಿದೆ.
ಮಂಡ್ಯ ಕ್ಷೇತ್ರದ ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸದ್ಯದಲ್ಲೇ ಜನರ ಮುಂದೆ ವಿವರಿಸಲಿದ್ದೇನೆ" ಎಂದು ಹೇಳಿದ್ದಾರೆ.
Topics : Politics, Loksabha Poll 2019, Mandya, Sumalatha Ambareesh ರಾಜಕೀಯ, ಲೋಕಸಭಾ ಚುನಾವಣೆ 2019, ಮಂಡ್ಯ, ಸುಮಲತಾ ಅಂಬರೀಷ್
ಗುಡ್ ಫ್ರೈಡೇ. ಜಗತ್ತಿಗೆ ಶಾಂತಿ ಸಂದೇಶ ಸಾರಿದ ಯೇಸು.! – Bc suddi (ಬಿಸಿಸುದ್ದಿ)
829 Views March 30, 2018 No Comments ಪ್ರಮುಖ ಸುದ್ದಿ admin
ಚಿತ್ರದುರ್ಗ: ಇಂದು ಗುಡ್ ಫ್ರೈಡೇ. ಜಗತ್ತಿಗೆ ಶಾಂತಿ, ಸೌಹಾರ್ದ, ಸಹೋದರತೆಯ ಸಂದೇಶ ಸಾರಿ ಮಾನವ ಪಾಪ ವಿಮೋಚನೆಗಾಗಿ ಏಸು ಕ್ರಿಸ್ತರು ಶಿಲುಬೆಗೇರಿದ ದಿನ. ಈ ಪವಿತ್ರ ದಿನವನ್ನು ನಾಡಿನಾದ್ಯಂತ ಭಕ್ತಿಯಿಂದ ಆಚರಿಸಲಾಗುತ್ತದೆ. ಯೇಸು ಕ್ರಿಸ್ತರು ತ್ಯಾಗ ಮಾಡಿ ತನ್ನನ್ನು ತಾನು ಅರ್ಪಣೆ ಮಾಡಿಕೊಂಡ ದಿನವೇ ಶುಭ ಶುಕ್ರವಾರ.
ಈ ಶುಭ ಶುಕ್ರವಾರ ದಿನವನ್ನು ಬಯಲುನಾಡಾದ ಚಿತ್ರದುರ್ಗದಲ್ಲಿಯೂ ಸಹಾ ಕ್ರೈಸ್ತ ಬಾಂಧವರು ಭಕ್ತಿ ಮತ್ತು ಶೃದ್ಧೆಯಿಂದ ಆಚರಿಸಿದರು. ಇಂದು ಬೆಳಗ್ಗಿನಿಂದಲೇ ಉಪವಾಸದ ಮೂಲಕ ವೃತ ಕೈಗೊಂಡಿರುವ ಸಾವಿರಾರು ಭಕ್ತರು ನಗರದ ಚರ್ಚ್‌ಗಳಿಗೆ ತೆರಳಿ ವಿಶೇಷ ಪಾರ್ಥನೆ ಸಲ್ಲಿಸಿದರು.
ಶಾಂತಿ ಪ್ರೀತಿ ಸಹನೆ, ಮಾನವೀಯತೆಯ ಗುಡ್ ಫ್ರೈಡೆಯೇಸು ಕ್ರಿಸ್ತರನ್ನು ಶಿಲುಬೆಗೇರಿಸುವ ಮುನ್ನ ಶಿಲುಬೆಯನ್ನು ಹೊತ್ತು ಸಾಗಿದ ಘಟನಾವಳಿಗಳನ್ನು ಸ್ಮರಿಸಿ, ನೆನಪಿಸಿಕೊಳ್ಳುವ ಶಿಲುಬೆ ಹಾದಿಯಲ್ಲಿ ಪಾಲ್ಗೊಂಡರು. ಕ್ರೈಸ್ತರ ಪವಿತ್ರ ಕಪ್ಪು ದಿನಗಳ ಆಚರಣೆಯ ಅನೇಕ ಕ್ರೈಸ್ತ ಧರ್ಮಗುರುಗಳು ಹಾಗೂ ನೂರಾರು ಭಕ್ತರು ಈ ವಿಶೇಷ ಪ್ರಾರ್ಥನಾ ವಿಧಿಯಲ್ಲಿ ಭಾಗವಹಿಸಿದರು. ಶುಭ ಶುಕ್ರವಾರದಂದು ಏಸು ಕ್ರಿಸ್ತ ಶಿಲುಬೆಗೆ ಏರಿದ ನೆನಪಿಗಾಗಿ ಈ ಪೂಜಾ ವಿಧಿಯನ್ನು ನಡೆಸಲಾಗುತ್ತದೆ.
ದೇಶದಲ್ಲಿರುವ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸಬೇಕು ! – ಭಾಜಪದ ಶಾಸಕ - ಸನಾತನ ಪ್ರಭಾತ
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಕರ್ನಾಟಕ > ದೇಶದಲ್ಲಿರುವ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸಬೇಕು ! – ಭಾಜಪದ ಶಾಸಕ
26 May 2022 | 08:32 AM
ಮಂಗಳೂರಿನ ಜುಮ್ಮಾ ಮಸೀದಿಯಲ್ಲಿ ದೇವಸ್ಥಾನದ ಅವಶೇಷಗಳು ದೊರೆತಿರುವ ಪ್ರಕರಣ
ಮಂಗಳೂರು – ದೇಶದ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಯಬೇಕು; ಏಕೆಂದರೆ ಹೆಚ್ಚಿನ ಮಸೀದಿಗಳನ್ನು ಹಿಂದೂಗಳ ದೇವಸ್ಥಾನಗಳ ಮೇಲೆ ಕಟ್ಟಲಾಗಿದೆ. ಪ್ರತಿ ಬಾರಿ 'ಧಾರ್ಮಿಕ ಸ್ಥಳ ೧೯೯೧ರ ಕಾನೂನಿನ' ಆಧಾರ ಪಡೆಯುವುದು ಯೋಗ್ಯವಲ್ಲ, ಎಂದು ಭಾಜಪದ ಶಾಸಕರಾದ ಭರತ ಶೆಟ್ಟಿಯವರು ಹೇಳಿದ್ದಾರೆ. ಇಲ್ಲಿನ ಮಲಾಲಿ ಜುಮ್ಮಾ ಮಸೀದಿಯ ಪರಿಸರದಲ್ಲಿ ಪೊಲೀಸರು ಮೇ ೨೬ರ ವರೆಗೆ ಗುಂಪು ಸೇರದಂತೆ ಆದೇಶಿಸಿದ್ದಾರೆ. ಈ ಮಸೀದಿಯ ನೂತನೀಕರಣದ ಸಮಯದಲ್ಲಿ ಏಪ್ರಿಲ್‌ ೨೧ರಂದು ಹಿಂದೂ ದೇವಸ್ಥಾನದ ವಾಸ್ತುವಿನ ಅವಶೇಷಗಳು ದೊರೆತಿದ್ದವು. ಅನಂತರ ಹಿಂದೂಗಳು ಇಲ್ಲಿ ಪೂಜೆ ಮಾಡಲು ಅನುಮತಿ ನೀಡುವ ಹಾಗೂ ಈ ಮಸೀದಿಯನ್ನು ಸಂರಕ್ಷಿಸಲು ಮನವಿ ಮಾಡಿದ್ದರು. ಇನ್ನೊಂದೆಡೆ ಸ್ಥಳೀಯ ನ್ಯಾಯಾಲಯವು ಮಸೀದಿಯ ನೂತನೀಕರಣದ ಕೆಲಸವನ್ನು ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ಶೆಟ್ಟಿಯವರು ಮಾತನಾಡುತ್ತಿದ್ದರು. ಭಾಜಪವು ಪುರಾತತ್ತ್ವ ವಿಭಾಗದಿಂದ ಈ ಮಸೀದಿಯ ಸಮೀಕ್ಷೆ ನಡೆಸಬೇಕಾಗಿ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮೇ ೨೫ರಂದು ವಿಶ್ವ ಹಿಂದೂ ಪರಿಷದ್‌ ಹಾಗೂ ಬಜರಂಗ ದಳವು ಇಲ್ಲಿನ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಪೂಜಾರ್ಚನೆ ಮಾಡಿತು. ಈ ವಿಷಯದಲ್ಲಿ ರಾಜ್ಯದ ಗೃಹಮಂತ್ರಿಗಳಾದ ಅರಗಾ ಜ್ಞಾನೇಂದ್ರರವರು ಮಾತನಾಡುತ್ತ, ಜಿಲ್ಲಾಡಳಿತವು ಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡಿದೆ, ಎಂದು ಹೇಳಿದರು.
ಕಾಂಗ್ರೆಸ್‌ ನೇತಾರ ಡಿ. ಕೆ. ಶಿವಕುಮಾರರವರು ಮಾತನಾಡುತ್ತ, ಭಾಜಪವು ಕರ್ನಾಟಕದ ಹೆಸರನ್ನು ಕೆಡಿಸುತ್ತಿದೆ. ಮಂಗಳೂರು ಆರ್ಥಿಕ ಹೂಡಿಕೆಗಾಗಿ ಒಳ್ಳೆಯ ಜಾಗವಾಗಿರುವುದರಿಂದ ಇಂತಹ ವಾದಗಳಿಂದ ಉದ್ಯೋಗದ ಮೇಲೆ ಪರಿಣಾಮವಾಗುತ್ತಿದೆ, ಎಂದು ಹೇಳಿದರು.
ಭಾಜಪದ ಶಾಸಕರು ಹೀಗೆ ಮನವಿ ಮಾಡುವುದರೊಂದಿಗೆ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರಕಾರವು ಭಾರತದ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸುವ ಆದೇಶವನ್ನು ನೀಡುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ !
Categories ಕರ್ನಾಟಕ, ರಾಷ್ಟ್ರೀಯ Tags ಅಸುರಕ್ಷಿತ ಹಿಂದೂ ದೇವಸ್ಥಾನಗಳು, ಭಾರತೀಯ ಜನತಾ ಪಕ್ಷ, ಮನವಿ, ವಿಶ್ವ ಹಿಂದೂ ಪರಿಷತ್ತು Post navigation
ಕರ್ನಾಟಕದ ಕಾಮೇಗೌಡರನ್ನ ನೆನೆದ ಪ್ರಧಾನಿ ಮೋದಿ, ಅಷ್ಟಕ್ಕೂ ಯಾರೀ 82 ವರ್ಷದ ಅಜ್ಜ? | Know Mandya Kamegowda Mentioned By PM Modi in Mann Ki Baat
ಕರ್ನಾಟಕದ ಕಾಮೇಗೌಡರನ್ನ ನೆನೆದ ಪ್ರಧಾನಿ ಮೋದಿ, ಅಷ್ಟಕ್ಕೂ ಯಾರೀ 82 ವರ್ಷದ ಅಜ್ಜ?
First Published Jun 28, 2020, 4:51 PM IST
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು (ಭಾನುವಾರ) ಕರ್ನಾಟಕದ ವ್ಯಕ್ತಿಯನ್ನ ಕೊಂಡಾಡಿದ್ದಾರೆ. ತಮ್ಮ 66ನೇ ಆವೃತ್ತಿಯ ಮನ್ ಕಿ ಬಾತ್‌ನಲ್ಲಿ 82 ವರ್ಷದ ಕಾಮೇಗೌಡರ ಸಾಧನೆಯನ್ನು ನೆನೆದು ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಷ್ಟಕ್ಕೂ ಮೋದಿ ಅವರ ಬಾಯಲ್ಲಿ ಬಂದ ಕಾಮೆಗೌಡ ಯಾರು? ಅವರು ಮಾಡಿದ ಸಾಧನೆ ಏನು..? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಪ್ರಧಾನಿ ಮೋದಿ ಇಂದಿನ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಬಾಯಾರಿದ ಪಕ್ಷಿಗಳು ಮತ್ತು ಪ್ರಾಣಿಗಳಿಗಾಗಿ ತನ್ನದೇ ಹಣದಿಂದ 14 ಕೊಳಗಳನ್ನು ರಚಿಸಿ ಮಾದರಿಯಾಗಿರುವ ಮಂಡ್ಯದ 82 ವರ್ಷದ ಕಾಮೇಗೌಡರನ್ನು ನೆನಪು ಮಾಡಿಕೊಂಡರು
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದವರು ಕಾಮೇಗೌಡ. ತಂಡೆ ನೀಲಿ ವೆಂಕಟಗೌಡ. ತಾಯಿ ರಾಜಮ್ಮ.
ಶಾಲೆಯ ಮೆಟ್ಟಿಲು ಹತ್ತಿ ಅಕ್ಷರ ಕಲಿಯದ ಕಾಮೇಗೌಡರು ತಮ್ಮ ಪರಿಸರ ಪ್ರೀತಿಯಿಂದಾಗಿಯೇ ಇತರರಿಗೆ ಮಾದರಿಯಾಗಿದ್ದಾರೆ.
ಚಿಕ್ಕಮನೆ, ತುಂಡು ಭೂಮಿ, ಒಂದಷ್ಟು ಕುರಿಗುಳು ಕಾಮೇಗೌಡರ ಆಸ್ತಿಯಾಗಿದೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕುರಿಗಾಹಿ 83 ವರ್ಷದ ಕಾಮೇಗೌಡ ಅವರದ್ದು ಕಾಡಿನಲ್ಲಿ ಕುರಿ ಮೇಯಿಸೋದೇ ಇವರ ಕಾಯಕ.
ಹುಟ್ಟಿದಾಗಿನಿಂದಲೂ ಪರಿಸರದೊಂದಿಗೆ ತುಂಬಾ ಒಡನಾಟವಿಟ್ಟುಕೊಂಡಿರುವ ಅವರು, ಪರಿಸರಕ್ಕಾಗಿ ಜೀವನವಿಡೀ ದುಡಿದ ಹಣವನ್ನೇ ಖರ್ಚು ಮಾಡಿದ್ದಾರೆ.
ಇದೂವರೆಗೂ 16 ಕೆರೆಗಳನ್ನು ನಿರ್ಮಿಸಿರುವ ಇವರು ವನ್ಯ ಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಜಲ ಸಂರಕ್ಷಣೆಯನ್ನೂ ಮಾಡುತ್ತಿದ್ದಾರೆ.
ತಾನು ಕುರಿ ಕಾಯುತ್ತಿದ್ದ ಕುಂದೂರು ಬೆಟ್ಟ ಸದಾ ಹಸಿರಾಗಿರ ಬೇಕೆಂದು ಬೆಟ್ಟ ಸುತ್ತ 2 ಸಾವಿರಕ್ಕೂ ಅಧಿಕ ಗಿಡ ನೆಟ್ಟು ಬೆಳೆಸಿದ್ದಾರೆ. ತಾನು ನೆಟ್ಟ ಆ ಸಸಿಗಳು ಇಂದು ಮರವಾಗಿರುವುದನ್ನು ಕಂಡು ಆನಂದದಿಂದ ಸದಾ ಕಾಡಲ್ಲಿ ಸುತ್ತಾಡುತ್ತಾರೆ.
ಜೊತೆಗೆ ತಿಳುವಳಿಕೆಗೆ ಬಂದ ಕೆಲವು ಉತ್ತಮ ಸಂದೇಶ ಮತ್ತು ಪರಿಸರ ಕಾಳಜಿ ಸಂದೇಶಗಳನ್ನು ಬೆಟ್ಟದ ಬಂಡೆಯ ಮೇಲೆ ಬಣ್ಣದಿಂದ ಬರೆಸೋ ಮೂಲಕ ಜನರಲ್ಲಿ ಪರಿಸರ ಕಳಕಳಿ ಮೂಡಿಸುತ್ತಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಕೂಡ ಕಾಮೇಗೌಡ ಅವರನ್ನು ಹುಡುಕಿಕೊಂಡು ಹೋಗಿ ಸತ್ಕಾರಿಸಿದೆ.
ಮಂಡ್ಯದಲ್ಲಿ ಕೆರೆಗಳನ್ನು ನಿರ್ಮಿಸಿ ಹೆಸರಾಗಿರುವ ಕಾಮೇಗೌಡರ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್‌ನಲ್ಲಿ ಕೊಂಡಾಡಿದ್ದಾರೆ. ಜತೆಗೆ ಕೇಂದ್ರ ಜಲಸಂಪನ್ಮೂಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಮ್ಮ ಟ್ವಿಟ್ಟರ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.
ಸುಪ್ರೀಂ ಆದೇಶ ಸಿಬಿಐಗೆ ನೈತಿಕ ವಿಜಯ: ಬಿಜೆಪಿ ಬಣ್ಣನೆ – ಮೈಸೂರು ಟುಡೆ
Home/ ಪ್ರಮುಖ ಸುದ್ದಿ/ ದೇಶ/ಸುಪ್ರೀಂ ಆದೇಶ ಸಿಬಿಐಗೆ ನೈತಿಕ ವಿಜಯ: ಬಿಜೆಪಿ ಬಣ್ಣನೆ
ಸುಪ್ರೀಂ ಆದೇಶ ಸಿಬಿಐಗೆ ನೈತಿಕ ವಿಜಯ: ಬಿಜೆಪಿ ಬಣ್ಣನೆ
ಹೊಸದಿಲ್ಲಿ (ಫೆ.5): ಬಹುಕೋಟಿ ಶಾರದಾ ಮತ್ತು ರೋಸ್‌ ವ್ಯಾಲಿ ಚಿಟ್‌ ಫ‌ಂಡ್‌ ಹಗರಣದಲ್ಲಿ ಸಿಬಿಐ ಮುಂದೆ ತನಿಖೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ಇಂದು ಕೋಲ್ಕತ ಪೊಲೀಸ್‌ ಕಮಿಷನರ್‍ಗೆ ಆದೇಶಿಸಿರುವುದು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಲ ಸರಕಾರಕ್ಕೆ ಒದಗಿರುವ ಭಾರೀ ಕಾನೂನು ಪ್ರಹಾರವಾಗಿದೆ. ಜತೆಗೆ ಸಿಬಿಐಗೆ ಒದಗಿರುವ ನೈತಿಕ ವಿಜಯವಾಗಿದೆ ಎಂದು ಪ್ರತಿಕ್ರಿಯಿಸುವ ಮೂಲಕ ಸುಪ್ರೀಂ ಕೋರ್ಟ್‌ ಆದೇಶವನ್ನು ಬಿಜೆಪಿ ಸ್ವಾಗತಿಸಿದೆ.
ಸುಪ್ರೀಂ ಕೋರ್ಟ್‌ ಇಂದು ನೀಡಿರುವ ಮಹತ್ವದ ಆದೇಶದಲ್ಲಿ ಕೋಲ್ಕತ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರು ಮೇಘಾಲಯದ ರಾಜಧಾನಿಯಲ್ಲಿ ಶಿಲಾಂಗ್‌ನಲ್ಲಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದೆ. ಆದರೆ ಅವರನ್ನು ಬಂಧಿಸುವುದಾಗಲೀ, ಅವರ ಮೇಲೆ ಬಲ ಪ್ರಯೋಗಿಸುವುದಾಗಲೀ ಮಾಡಬಾರದು ಎಂದು ಸಿಬಿಐಗೆ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್‌ ಆದೇಶದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡುತ್ತಾ ಕೇಂದ್ರ ಸಚಿವ ರವಿ ಶಂಕರ್‌ ಪ್ರಸಾದ್‌ ಅವರು "ಲಕ್ಷಾತರ ಜನಸಾಮಾನ್ಯರನ್ನು ಲೂಟಿ ಮಾಡಲಾಗಿರುವ ಹಗರಣದಂತಹ ವಿಷಯಗಳನ್ನು ಯಾರೂ ರಾಜಕೀಯಗೊಳಿಸಬಾರದು" ಎಂದರಲ್ಲದೆ ಆ ರೀತಿಯ ವರ್ತನೆ ತೋರಿರುವ ಪಶ್ಚಿಮ ಬಂಗಾಲ ಸರಕಾರವನ್ನು ತೀವ್ರವಾಗಿ ಟೀಕಿಸಿದರು.
ಶಾರದಾ ಮತ್ತು ರೋಸ್‌ ವ್ಯಾಲಿ ಚಿಟ್‌ ಫ‌ಂಡ್‌ ಅಕ್ರಮದಲ್ಲಿ ಲಕ್ಷಾಂತರ ಸಣ್ಣ ಹೂಡಿಕೆದಾರರ ಹಣವನ್ನು ಲೂಟಿ ಮಾಡಲಾಗಿದೆ; ಹಾಗಿರುವಾಗ ಈ ಮಹಾ ಅನ್ಯಾಯದ ವಿರುದ್ಧ ತನಿಖೆ ನಡೆಸುವುದು ನ್ಯಾಯ ಸಮ್ಮತವಲ್ಲವೇ ಎಂದು ರವಿ ಶಂಕರ್‌ ಪ್ರಸಾದ್‌ ಪ್ರಶ್ನಿಸಿದರು. (ಎನ್.ಬಿ)
ಸಾಲಮನ್ನಾ ಜೊತೆಗೆ ನಿರುದ್ಯೋಗ ನಿವಾರಣೆಗೆ ಆದ್ಯತೆ: ಮುಖ್ಯಮಂತ್ರಿ ಕುಮಾರಸ್ವಾಮಿ
ಜೆಡಿಎಸ್ ಉಗ್ರಗಾಮಿಗಳನ್ನು ರಾಜ್ಯಕ್ಕೆ ಕರೆಸಿಕೊಳ್ಳುತ್ತಿದೆ ಎಂಬ ಪ್ರಧಾನಿ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ
ಕರಗ: ನಮ್ಮ ಬೆಂಗಳೂರ ದೊಡ್ಡ ಹಬ್ಬ | ಹೊನಲು
ಬೆಂಗಳೂರು" ಅಂದ ಕೂಡಲೇ 'ಅದು ಅಯ್ ಟಿ, ಬಿ ಟಿ' ಗಳ ನಗರ ಎಂದು ಜಗತ್ತಿನೆಲ್ಲೆಡೆ ಮಾತಾಡಿಕೊಳ್ಳುವಂತೆ ಈ ನಗರ ಹೆಸರು ಮಾಡಿದೆ. ಮಾಹಿತಿ ತಂತ್ರಜ್ನಾನದ ಚಟುವಟಿಕೆಗಳ ಬೀಡಾಗಿರುವ ಈ ಊರಲ್ಲಿ ಇಂದು ದೊಡ್ಡ ದೊಡ್ಡ ಶಾಪಿಂಗ್ ಮಾಲುಗಳನ್ನು, ಮಲ್ಟಿಪ್ಲೆಕ್ಸ್ ಗಳನ್ನು,ಮೆಟ್ರೋ ರಯ್ಲು-ಅಯ್ಶಾರಾಮಿ ವೋಲ್ವೋ ಬಸ್ಸುಗಳನ್ನು ಕಾಣಬಹುದಾಗಿದೆ. ಇದು ಬದಲಾಗುತ್ತಿರುವ ಕಾಲದ ಜೊತೆ ಜೊತೆಗೆ ಬೆಂಗಳೂರು ಹೇಗೆ ಹೆಜ್ಜೆ ಹಾಕುತ್ತಿದೆ ಎಂದು ತೋರಿಸುತ್ತದೆ.
ನಗರವು ದೊಡ್ಡದಾಗಿ ಬೆಳೆಯುತ್ತಾ ಹೊಸತನಕ್ಕೆ ತಕ್ಕಂತೆ ಬದಲಾಗುತ್ತಿದ್ದರೂ, ತನ್ನ ಗುರುತಾದ ಸಾಂಪ್ರದಾಯಿಕ ಆಚರಣೆಗಳನ್ನು ಬಿಟ್ಟು ಕೊಡದಿರುವುದು ಈ ನಗರದ ಹೆಗ್ಗಳಿಕೆ. ನಗರದಲ್ಲಿ ನಡೆಯುವ ಬೆಂಗಳೂರು ಕರಗ, ಕಡಲೇಕಾಯಿ ಪರಿಶೆ, ದೊಡ್ಡಮ್ಮ – ಅಣ್ಣಮ್ಮ ದೇವಿ ಉತ್ಸವಗಳು ನಗರವನ್ನು "ನಮ್ಮ ಬೆಂಗಳೂರು" ಆಗಿಯೇ ಹಿಡಿದಿಟ್ಟಿವೆ. ಈ ಉತ್ಸವಗಳು ಕೇವಲ ನಿನ್ನೆ ಮೊನ್ನೆಯವಲ್ಲ, ಆ ಆಚರಣೆಗಳಿಗೆ ಅವುಗಳದೇ ಆದ ಹಿನ್ನೆಲೆ ಇದೆ. ಮೊನ್ನೆ ಮೊನ್ನೆಯಶ್ಟೆ (ಏಪ್ರಿಲ್ ಏಳರಿಂದ ಏಪ್ರಿಲ್ ಹದಿನೇಳು) ಬೆಂಗಳೂರು ಕರಗ ನಡೆಯಿತು. ಲೋಕಸಬೆ ಚುನಾವಣೆ ಬರಾಟೆಯಲ್ಲಿ ಈ ಬಾರಿ ಕರಗ ಹೆಚ್ಚು ಸದ್ದು ಮಾಡದಿದ್ದರೂ, ಉತ್ಸವ ಚೆನ್ನಾಗಿಯೇ ನೆರವೇರಿತು.
ಏನಿದು ಕರಗ? ಏನದರ ಹಿನ್ನೆಲೆ?
ಕರಗ ಅಂದರೆ 'ಕಯ್ಯಲ್ಲಿ ಮುಟ್ಟದೆ(ಕ) ರುಂಡದಲ್ಲಿ(ರ) ಮುಡಿದು ಗತಿಸುವುದು(ಗ)' ಎಂದು ಹೇಳಲಾಗುತ್ತದೆ.ಮಡಿಕೆಯ ಮೇಲೆ ಹೂವಿನ ಮೇರುವೆ(ಪಿರಮಿಡ್) ಇಟ್ಟು ಅದನ್ನೇ ತಲೆಯ ಮೇಲೆ ದರಿಸಲಾಗುವುದು. "ತಿಗಳ" ಸಮುದಾಯದ ಜನರು ಆಚರಿಸುವ ಈ ಹಬ್ಬದ ಆಚರಣೆಗೆ 500 ವರುಶಗಳ ಇತಿಹಾಸವಿದೆ. ಈ ಹಬ್ಬಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ, ಅದು ಮಹಾಬಾರತಕ್ಕೆ ಕೊಂಡೊಯ್ಯುತ್ತದೆ. ಮಹಾಬಾರತದ ದ್ರವ್ಪದಿ ಆದಿಶಕ್ತಿಯ ಒಂದು ರೂಪವೆಂದು ಹೇಳಲಾಗುತ್ತದೆ.
ಕುರುಕ್ಶೇತ್ರ ಕಾಳಗ ಮುಗಿದು ಪಾಂಡವರೆಲ್ಲೆರೂ ಕಯ್ಲಾಸಕ್ಕೆ ಮರಳುತ್ತಿರುತ್ತಾರೆ. ಪಾಂಡವರು ಮುಂದೆ ಹೋಗುತ್ತಾ ದ್ರವ್ಪದಿ ಅವರನ್ನು ಹಿಂಬಾಲಿಸಿಕೊಂಡು ಒಬ್ಬಳೇ ಬರುತ್ತಿರುತ್ತಾಳೆ. ಪಾಂಡವರು ಮತ್ತು ದ್ರವ್ಪದಿ ನಡುವೆ ದೂರ ಹೆಚ್ಚಾಗುತ್ತಿದ್ದಾಗ, ತಿಮರಾಸುರನೆಂಬ ರಕ್ಕಸನೊಬ್ಬ ಒಬ್ಬಂಟಿಯಾಗಿದ್ದ ದ್ರವ್ಪದಿಗೆ ಕಾಟ ಕೊಡಲು ಶುರು ಮಾಡುತ್ತಾನೆ. ಆಗ ದ್ರವ್ಪದಿಯು ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ 'ಯಜಮಾನ'ರನ್ನು, ಹಣೆಯಿಂದ 'ಗಣಾಚಾರಿ'ಗಳನ್ನು, ಕಿವಿಗಳಿಂದ 'ಗವ್ಡ'ರನ್ನು, ಬಾಯಿಯಿಂದ 'ಗಂಟೆಪೂಜಾರಿ'ಗಳನ್ನು ಮತ್ತು ಹೆಗಲಿನಿಂದ 'ವೀರಕುಮಾರ'ರನ್ನು ಸ್ರುಶ್ಟಿ ಮಾಡುತ್ತಾಳೆ. ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದಿರು ಹೋರಾಡಿ ಗೆಲ್ಲುತ್ತಾರೆ.
ಹೀಗೆ ಮಕ್ಕಳನ್ನು ಹುಟ್ಟಿಸಿದ ದ್ರವ್ಪದಿ ತಾಯಿ ಆದಿಶಕ್ತಿಯಾಗಿ, ಮತ್ತೆ ಬೂಮಿಗೆ ಮರಳಿ ಬಾರದಂತೆ ಕಯ್ಲಾಸಕ್ಕೆ ಹೋಗುವುದು ಮಕ್ಕಳಿಗೆ ದುಗುಡ ಉಂಟು ಮಾಡುತ್ತದೆ. ಅವಳು ಹೋಗದಂತೆ ಬೇಡಿಕೊಳ್ಳಲು ಕ್ರಿಶ್ಣನು ಅವರಿಗೆ ಹೇಳುವನು. ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕಯ್ಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ 'ಅಲಗುಸೇವೆ' ಎನ್ನುತ್ತಾರೆ) "ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು" ಎಂದು ಅಲವತ್ತು ಕೊಳ್ಳುತ್ತಾರೆ. ಇದನ್ನು ನೋಡಿ ದ್ರವ್ಪದಿಗೆ ಮರುಕವಾಗಿ ಪ್ರತೀ ವರುಶವೂ ಮೂರು ದಿನ ಬೂಮಿಗೆ ಬಂದು ಮಕ್ಕಳೊಂದಿಗೆ ಇರುವ ಮಾತು ನೀಡುತ್ತಾಳೆ. ಆ ಮೂರು ದಿನಗಳೇ ಕರಗ ಹಬ್ಬದ ದಿನಗಳು. "ಅಂದು ದ್ರವ್ಪದಿಯಿಂದ ಹುಟ್ಟಿದ ವೀರಕುಮಾರರೇ ನಾವು" ಎಂದು ತಿಗಳ ಸಮುದಾಯದವರ ನಂಬಿಕೆ.
ಕರಗ ಹಬ್ಬದ ಆಚರಣೆ ಹಿಂದೂ ತೂಗುತೇದಿಯ(ಕ್ಯಾಲೆಂಡರ್‍) ಮೊದಲ ತಿಂಗಳ ಸಪ್ತಮಿ ಇಂದ ಶುರುವಾಗಿ ಹನ್ನೊಂದು ದಿನಗಳ ಕಾಲ ನಡೆಯುತ್ತದೆ. ಆ 11 ದಿನಗಳ ಗಡುವಿನಲ್ಲಿ, 3 ದಿನಗಳ ಕಾಲ ತಾಯಿ ದ್ರವ್ಪದಿ ತಮ್ಮೊಡನೆ ಇರುತ್ತಾಳೆಂದು ತಿಗಳರ ನಂಬಿಕೆ. ಬೆಂಗಳೂರಿನ ತಿಗಳರ ಪೇಟೆಯಲ್ಲಿರುವ ದರಮರಾಯ ಸ್ವಾಮಿ ಗುಡಿಯಲ್ಲಿ ಹಬ್ಬದ ಚಟುವಟಿಕೆಗಳು ನಡೆಯುತ್ತವೆ. ಹನ್ನೊಂದು ದಿನಗಳ ಸಡಗರದಲ್ಲಿ ಕಾರ‍್ಯಕ್ರಮಗಳು ಹೀಗಿರುತ್ತವೆ:
ಬಾವುಟ ಏರಿಸುವುದು: ಉತ್ಸವದ ಮೊದಲ ದಿನವಾದ ಅಂದು ಹಳದಿ ಬಣ್ಣದ ಬಾವುಟವೊಂದನ್ನು ಗುಡಿಯ ಅಂಗಳದೊಳಗೆ, ಬಿದಿರಿನ ಕಂಬದ ಮೇಲೆ ಹಾರಿಸಲಾಗುತ್ತದೆ. ಅದರಿಂದ ಕರಗ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಗಣಾಚಾರಿಗಳು, ಗಂಟೆಪೂಜಾರಿಗಳು, ವೀರಕುಮಾರರು ಮತ್ತು ಕರಗವನ್ನು ಹೊರುವವರು, ಉತ್ಸವಕ್ಕೆ ಯಾವ ತಡೆಯೂ ಇಲ್ಲದೆ ನಡೆಸಲು ಪಣ ತೊಟ್ಟು ದಾರವೊಂದನ್ನು(ಕಂಕಣ) ತಮ್ಮ ಕಯ್ಯಿಗೆ ಕಟ್ಟಿಕೊಂಡು, ಒಂದು ದಾರವನ್ನು ಬಾವುಟಗಮ್ಬಕ್ಕೂ ಕಟ್ಟುವರು.
ಶುದ್ದಿ ಕಾರ‍್ಯ: ಬಾವುಟ ಹಾರಿಸಿದ ಮರುದಿನದಿಂದ ಈ ಕೆಲಸ ಶುರುವಾಗುತ್ತದೆ. ಆದಿಶಕ್ತಿಯು ಬೂಮಿಗೆ ಬರುತ್ತಿರುವುದರಿಂದ ಕೆಟ್ಟ ಶಕ್ತಿಗಳು ಸುಳಿಯಬಾರದೆಂದು ಪೂಜೆಗಳನ್ನು ನಗರದ ಆರು ಕಡೆಗಳಲ್ಲಿ ಎಂಟು ದಿನ ಮಾಡಲಾಗುತ್ತದೆ. ಪ್ರತಿ ದಿನದ ಪುಣ್ಯ ಜಳಕದ ಬಳಿಕ, ಕೆಟ್ಟ ಶಕ್ತಿಗಳನ್ನು ದೂರವಿಡುವಂತೆ ಕರಗದ ಪೂಜಾರಿಯು ದೇವಿಯನ್ನು ಕೋರುವುದು ಪದ್ದತಿ.
ಆರತಿ ಉತ್ಸವ: ಇದು ಕರಗ ಹಬ್ಬದ ಆರನೇ ದಿನದಂದು ನಡೆಯುತ್ತದೆ. ಮೊದಲ ದಿನದಿಂದ ಆರನೇ ದಿನದವರೆಗೂ ಪೂಜೆಗಳು ನಡೆಯುತ್ತಿರುತ್ತವೆ. ತಿಗಳ ಸಮುದಾಯದ ಹೆಂಗಸರು ಅಂದು ಅವರ ದೇವತೆಯಾದ ದ್ರವ್ಪದಿಗೆ ಆರತಿ ಸೇವೆಯನ್ನು ಮಾಡುವರು. ಯಲಕುಂಗ ಹೂವಿನಿಂದ ಅಂದಗೊಂಡ ಅಕ್ಕಿ ಮತ್ತು ಬೆಲ್ಲ ಇರುವ ಪಾತ್ರೆಗಳಿಗೆ, ಮಲ್ಲಿಗೆ ಮತ್ತು ಕನಕಾಂಬರ ಹೂವುಗಳಿಂದ ಸುತ್ತುವರಿದ ಕೋಲನ್ನು ಸಿಕ್ಕಿಸಲಾಗಿರುತ್ತದೆ. ಪಾತ್ರೆಯ ಒಳಗೆ ದೀವಿಗೆಯನ್ನು ಇಡಲಾಗಿರುತ್ತದೆ. ಈ ಆರತಿಯನ್ನು ಹೆಂಗಸರು ತಲೆ ಮೇಲೆ ಹೊತ್ತು ಗುಡಿಯವರೆಗೂ ಬಂದು ಆಮೇಲೆ ಪೂಜೆ ಮಾಡುತ್ತಾರೆ. ಆಮೇಲೆ ಗರಡಿಮನೆಯಲ್ಲಿ ಕಸರತ್ತು ಮಾಡಿರುವ ಹುಡುಗರು ಕಾಳಗ ಕಲೆಗಳಾದ ಕತ್ತಿ ವರಸೆ, ಕೋಲು ವರಸೆ, ಕೊಂಬು ವರಸೆ ಮುಂತಾದ ಚಳಕಗಳನ್ನು ತೋರಿಸುವರು. ಹಾಗೆಯೇ ಅಂದು 'ಪೋತರಾಜ'ನ (ಪೋತರಾಜನ ಬಗ್ಗೆ ಮುಂದೆ ತಿಳಿಯುತ್ತದೆ) ಮೂರುತಿ ಮತ್ತು ತ್ರಿಶೂಲವನ್ನು ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ಮೆರವಣಿಗೆ ಮುಗಿದ ಮೇಲೆ ಗುಡಿಯಲ್ಲಿ ಮಹಾ ಮಂಗಳಾರತಿ ಮಾಡುವರು.
ಹಸಿ ಕರಗ: ಹಬ್ಬದ ಏಳನೇ ದಿನ 'ಹಸಿ ಕರಗ' ಮಾಡಲಾಗುತ್ತದೆ. ಅಂದು ಶಕ್ತಿಪೀಟ ಇದೆ ಎಂದು ಹೇಳಲಾಗುವ ಸಂಪಂಗಿಕೆರೆಯ ಸುತ್ತಮುತ್ತಲಿನ ಜಾಗವನ್ನು ಚೊಕ್ಕ ಮಾಡಿ ಹೂವುಗಳಿಂದ ಅಂದಗೊಳಿಸುತ್ತಾರೆ. ವೀರಕುಮಾರರು, ಗಣಾಚಾರಿಗಳು, ಗಂಟೆಪೂಜಾರಿಗಳು, ಕುಲಪುರೋಹಿತರು ಶಕ್ತಿಪೀಟಕ್ಕೆ ಪೂಜೆ ಮಾಡುತ್ತಾರೆ. ಆಮೇಲೆ ಕರಗವನ್ನು ಹೊರುವುವವರಿಗೆ ಜಳಕವನ್ನು ಮಾಡಿಸುವರು. ಕೆಂಪು ಬಟ್ಟೆಯನ್ನು ಹೊದಿಸಿ, ಒಡವೆ ಮತ್ತು ಹೂವುಗಳಿಂದ ಸಿಂಗರಿಸಿ ಹಸಿ ಕರಗವನ್ನು ಮಾಡಿ ಅದನ್ನು ಪೀಟದ ಮೇಲೆ ಇಡಲಾಗುತ್ತದೆ. ಅದರ ಮಗ್ಗುಲಲ್ಲಿ ಮಾಟದಕೋಲು ಮತ್ತು ಬಾಕು(ಕತ್ತಿ) ಒಂದನ್ನೂ ಇಡಲಾಗುತ್ತದೆ.
ಕರಗವನ್ನು ಹೊತ್ತು ಕೊಳ್ಳುವವರು ಇವೆಲ್ಲವುದಕ್ಕೂ ಪೂಜೆ ಮಾಡುವರು. ಆಗ ವೀರಕುಮಾರರು ಕರ‍್ಪೂರವನ್ನು ಹಚ್ಚುವರು ಮತ್ತು ಸುತ್ತ ಮುತ್ತ ನೆರೆದ ಬಕ್ತರು 'ಗೋವಿಂದ'ನ ಹೆಸರು ಹೇಳಲು ಶುರು ಮಾಡುವರು. ಆಗ ವೀರಕುಮಾರರು 'ಗೋವಿಂದ ದಿಕ್ ದೀ ದಿಕ್ ದೀ' ಎಂದು ಹೇಳುತ್ತಾ ತಾವು ಹಿಡಿದಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದು ಕೊಳ್ಳಲು ಶುರು ಮಾಡುತ್ತಾರೆ ( ಅಲಗುಸೇವೆ ). ಈ ಹೊತ್ತಿನಲ್ಲಿ ಒಂದು ರೀತಿಯ ದಯ್ವೀ ಶಕ್ತಿ ಕರಗವನ್ನು ಹೊತ್ತುಕೊಳ್ಳುವವರ ಮೇಲೆ ಅವರಿಸೊಕೊಂಡನ್ತಾಗಿ, ಅವರು ಎಡಗಯಲ್ಲಿ ಪೀಟದ ಮೇಲಿರುವ ಮಾಟದಕೋಲಿನ ಜೊತೆ ಹಸಿಕರಗವನ್ನೂ ಮತ್ತು ಬಲಗಯಲ್ಲಿ ಬಾಕನ್ನು ಎತ್ತುಕೊಳ್ಳುವವರು. ಇದೆಲ್ಲಾ ನೋಡಲು ಬೆರಗುಗೊಳಿಸುವಂತ ಆಗುಹಗಳು ಎಂದು ಹೇಳಲಾಗುತ್ತದೆ.
ಅಲ್ಲಿಂದ ಅವರು ಹಸಿಕರಗವನ್ನು ಹಿಡಿದುಕೊಂಡು 'ಶಕ್ತಿಸ್ತಳ' ಎಂದು ಹೇಳಲಾಗುವ (ಬೆಂಗಳೂರು ಮಹಾನಗರ ಪಾಲಿಕೆ ಬಳಿ ಇರುವ) ಏಳು ಸುತ್ತಿನ ಕೋಟೆಯೆಡೆಗೆ ನಡೆಯುತ್ತಾರೆ ಮತ್ತು ವೀರಕುಮಾರರು 'ದಿಕ್ ದೀ' ದಿಕ ದೀ' ಎಂದು ಅಲಗುಸೇವೆ ಮಾಡುತ್ತಾ ಅವರನ್ನು ಹಿಂಬಾಲಿಸುತ್ತಾರೆ. ಕೋಟೆ ತಲುಪಿದ ಮೇಲೆ ಮತ್ತೊಮ್ಮೆ ಹಸಿಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ದರಮರಾಯ ಸ್ವಾಮೀ ಗುಡಿಯ ಕಡೆಗೆ ಮೆರವಣಿಗೆ ಸಾಗುತ್ತದೆ. ಗುಡಿಯು ಸ್ವಲ್ಪ ದೂರವಿರುವಾಗ ಹಸಿ ಕರಗ ಹೊತ್ತಿರುವವರು ಮಂಡಿಯೂರಿ ಕುಳಿತುಕೊಳ್ಳುವವರು ಆಗ ವೀರಕುಮಾರರು ಮತ್ತೊಮ್ಮೆ ಅಲಗುಸೇವೆ ನೀಡಿ 'ಶಕ್ತಿ'ಯನ್ನು ಗುಡಿಗೆ ಕರೆದು ಕೊಂಡು ಬರುತ್ತಾರೆ. ಆಗ ಗಂಟೆಪೂಜಾರಿಗಳು ಕೊರವಂಜಿ ಹಾಡನ್ನು ಹಾಡುವರು ಮತ್ತು ಕರಗವನ್ನು ಹೊತ್ತಿರುವವರು ಅದಕ್ಕೆ ತಕ್ಕಂತೆ ಕುಣಿಯುವವರು. ಗುಡಿ ತಲುಪಿದ ಮೇಲೆ ಪೂಜೆ ಸಲ್ಲಿಸಿ ಹಸಿ ಕರಗವನ್ನು ಇಳಿಸಲಾಗುವುದು.
ಪೊಂಗಲು ಸೇವೆ: ಇದು ಹಬ್ಬದ ಎಂಟನೆ ದಿನ ನಡೆಯುತ್ತದೆ. ಅಂದು ಹೆಣ್ಣುಮಕ್ಕಳು ಅಕ್ಕಿ ಮತ್ತು ಬೆಲ್ಲವನ್ನು ಗುಡಿಗೆ ಒಯ್ದು ಗುಡಿಯ ಅಂಗಳದಲ್ಲಿ ಪೊಂಗಲನ್ನು ಮಾಡಿ ದೇವಿಗೆ ಎಡೆ ಮಾಡುವರು. ತಮ್ಮ ಸೇವೆಯಿಂದ ತಾಯಿಯು ಸಂತಸಗೊಂಡು ಆಕೆಯು ನಮ್ಮನ್ನು ಹರಸುವಳು ಎಂಬ ನಂಬಿಕೆ ಜನರದ್ದು. ಅಂದಿಡೀ ದಿನ ಅಲ್ಲೇ ಇರುವರು. ಇರುಳಲ್ಲಿ ಗಂಟೆ ಪೂಜಾರಿಗಳು ದ್ರವ್ಪದಿ ಬಗ್ಗೆ ಪುರಾಣ ಕತೆಗಳನ್ನು ಹೇಳುವುದು ಮತ್ತು ಬಕ್ತರು ಅದನ್ನು ಕೇಳುವುದು ವಾಡಿಕೆ.
ಹೂವಿನ ಕರಗ (ಕರಗ ಶಕ್ತ್ಯೋತ್ಸವ): ಹಬ್ಬದ ಒಂಬತ್ತನೇ ನಡೆಯುವುದು ಹೂವಿನ ಕರಗ. (ಇದರ ಬಗ್ಗೆ ಇನ್ನೊಂದು ಬರಹದಲ್ಲಿ ನೋಡೋಣ.)
ಗಾವು ಸೇವೆ: ಹಬ್ಬದ ಹತ್ತನೇ ಜರಗುವ ಇದು ಪೋತರಾಜನ ಕುರಿತು ಮಾಡುವ ಸೇವೆಯಾಗಿದೆ. ಪೋತರಾಜನ ಬಗ್ಗೆ ಒಂದು ಕತೆಯಿದೆ. ಪೋತರಾಜನು ಬಹಳ ಶೂರನಾಗಿದ್ದವನು ಮತ್ತು "ಏಳು ಸುತ್ತಿನ ಕೋಟೆ" ಎಂಬ ಅರಸುನಾಡನ್ನು ಆಳುತ್ತಿದ್ದನು(ಸಾಮ್ರಾಜ್ಯ). ಆತ ಶಿವನ ಮೊರೆಗ(ಬಕ್ತ)ನಾಗಿದ್ದು, ಬಾಡನ್ನು ತಿನ್ನದವನಾಗಿರುತ್ತಾನೆ. ಇನ್ನೂ ಹೆಚ್ಚು ಶಕ್ತಿಯನ್ನು ಪಡೆಯಲು ನೂರಾವೊಂದು ರಾಜರನ್ನು ಬಲಿ ಕೊಟ್ಟು ಶಿವನನ್ನು ಒಲಿಸಿಕೊಳ್ಳಲು ಪೂಜೆಯೊಂದನ್ನು ಮಾಡಬಯಸಿರುತ್ತಾನೆ. ನೂರು ರಾಜರನ್ನು ಸೆರೆ ಹಿಡಿದಾದಮೇಲೆ ಅವನ ಕೋಟೆಯ ಹತ್ತಿರ ನಿದ್ದೆ ಮಾಡುತ್ತಿದ್ದ ಬೀಮನನ್ನು ನೂರಾ ಒಂದನೇ ರಾಜನಾಗಿ ಸೆರೆ ಹಿಡಿಯುತ್ತಾನೆ.
ಪಾಂಡವರು ಬೀಮನ ಇಲ್ಲದಿರುವಿಕೆ ಬಗ್ಗೆ ಕ್ರಿಶ್ಣನನ್ನು ಕೇಳುತ್ತಾರೆ. ಕ್ರಿಶ್ಣನಿಗೆ ಎಲ್ಲವೂ ಗೊತ್ತಾಗಿ ಬೀಮನನ್ನು ಉಳಿಸಲು ಅರ‍್ಜುನನನ್ನು ಚೆಂದದ ಬಳೆ ಮಾರುವ ಕೊರವಂಜಿ ಹೆಣ್ಣಾಗಿ ಮಾಡಿ ಪೋತರಾಜನ ಕೋಟೆಯ ಹತ್ತಿರ ಕಳಿಸುವನು. ಆಕೆಯನ್ನು ನೋಡಿ ಆಕೆಯ ಚಂದಕ್ಕೆ ಮನಸೋತ ಪೋತರಾಜನು ಆಕೆಯನ್ನು ಮದುವೆಯಾಗಲು ಬಯಸುವನು. ಆಗ ಎಲ್ಲವೂ ತಿಳಿದ ಕ್ರಿಶ್ಣನು ಎರಡು ಬೇಡಿಕೆ ಮುಂದಿಡುತ್ತಾನೆ. ಸೆರೆಹಿಡಿದಿರುವ ಅರಸರನ್ನು ಬಿಡುಗಡೆಗೊಳಿಸುವುದು ಒಂದನೆಯದಾದರೆ, ಕೊರವಂಜಿಗಳು ಹಸಿಬಾಡು(ಹಸಿಮಾಂಸ) ತಿನ್ನುವುದರಿಂದ ಪೋತರಾಜನೂ ತಿನ್ನಬೇಕೆಮ್ಬುವುದು ಎರಡೆಯನೆದು. ಕಡೆಗೆ ಪೋತರಾಜನು ಎರಡೂ ಬೇಡಿಕೆಗೆ ಒಪ್ಪುವನು. ಮೊದಲಿಗೆ ಪೋತರಾಜನಿಗೆ ಕರಿಮೇಕೆಯೊಂದನ್ನ್ನುಕೊಟ್ಟು ಹಸಿಯಾಗಿಯೇ ತಿನ್ನಲು ಹೇಳುವರು. ಪೋತರಾಜನು ಬೀಮನ ಜೊತೆ ನೆತ್ತರು ಸಮೇತ ಹಸಿ ಬಾಡನ್ನು ತಿನ್ನುವನು ಆಗ ಪಾಂಡವರು ತಮ್ಮ ತಂಗಿ ಶಂಕೊದರಿಯನ್ನು ಪೋತರಾಜನಿಗೆ ಕೊಟ್ಟು ಮದುವೆ ಮಾಡುತ್ತಾರೆ ಎಂದು ಆ ಒಂದು ಕತೆ ಹೇಳುತ್ತದೆ.
ಹಬ್ಬದ ಹತ್ತನೇ ದಿನದಂದು ಪೋತರಾಜ, ಅರ‍್ಜುನ ಮತ್ತು ದ್ರವ್ಪದಿ ತೇರಿನ ಮೆರವಣಿಗೆಯನ್ನು ಶಕ್ತಿಸ್ತಳಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಶಾಂತಿಪೂಜೆಯನು ಮಾಡಿ ಪೋತರಾಜನ ಬಗ್ಗೆ ಪುರಾಣಕತೆಗಳನ್ನು ಹೇಳಲಾಗುತ್ತದೆ. ಆಮೇಲೆ ಉತ್ಸವ ಗುಡಿಗೆ ಮರಳುತ್ತದೆ. ಇದಾದಮೇಲೆ 'ಪೋತರಾಜ' ಬಣದ ಪೂಜಾರಿಗಳ ಮನೆಗೆ ಹೋಗಿ ಪೂಜೆಯನ್ನು ಮಾಡಲಾಗುತ್ತದೆ. ಆಗ ಆ ಪೂಜಾರಿಗಳ ಮಯ್ ಮೇಲೆ ಪೋತರಾಜನು ಬಂದಂತಾಗಿ ಅವರು ನುಗ್ಗಿ ಬರುವರು. ಅವರನ್ನು ತಿಳಿಗೊಳಿಸಿ ಗುಡಿಗೆ ಕರೆದುಕೊಂಡು ಬರಲು ಕರಿಮೇಕೆಯನ್ನು ಕೊಡಲಾಗುತ್ತದೆ ಮತ್ತು ಮಂತ್ರಗಳನ್ನು ಹೇಳಲಾಗುತ್ತದೆ. ಆಗ ಪೋತರಾಜ ಪೂಜಾರಿಗಳು ಮೇಕೆಯನ್ನು ಬಾಯಿಂದ ಕಡಿದು ಅದರ ನೆತ್ತರನ್ನು ಹೀರಿ ಶಾಂತರಾಗುವರು. ಆಮೇಲೆ ಆರತಿಯೊಂದಿಗೆ ಗಾವುಸೇವೆ ಕೊನೆಗೊಳ್ಳುತ್ತದೆ
ವಸಂತೋತ್ಸವ: ಇದು ಹಬ್ಬದ ಕಡೆಯ ದಿನ ನಡೆಯುವುದು. ಎಲ್ಲರೂ ಗುಡಿಯ ಮುಂದೆ ಸೇರಿ ಕರಗದ ಕೂಡುದಲೆ(ಯಶಸ್ಸು)ಯನ್ನು ಆಚರಿಸುವರು. ಚಿಕ್ಕವರಿಗೆ ದೊಡ್ಡವರಿಗೆ ಅಂದು ನಲಿವಿಗಾಗಿ ಆಟಗಳನ್ನು ಏರ‍್ಪಡಿಸಿರುತ್ತಾರೆ. ಎಲ್ಲರೂ ಪಾಲ್ಗೊಂಡು ಸಂತಸಪಡುತ್ತಾರೆ. ಇರುಳಲ್ಲಿ ಮೊದಲ ದಿನ ಏರಿಸಿದ್ದ ಬಾವುಟವನ್ನು ಇಳಿಸಲಾಗುತ್ತದೆ. ಬಾವುಟಗಂಬಕ್ಕೆ ಪೂಜೆಯನ್ನು ಮಾಡಿ ಕಯ್ಯಿಗೆ ಕಟ್ಟಿಕೊಂಡಿದ್ದ ದಾರವನ್ನು (ಕಂಕಣ) ಗುಡಿಗೆ ಹಿಂದಿರುಗಿಸಲಾಗುತ್ತದೆ.
ಕರಗ ಮತ್ತು ದರಗಾ ನಂಟು:
ಕರಗ ಮೆರವಣಿಗೆಯು, ಸಾಗುತ್ತ ದಾರಿ ನಡುವೆ ಅರಳೆಪೇಟೆ(ಕಾಟನ್ ಪೇಟೆ)ಯಲ್ಲಿರುವ ಒಂದು ದರಗಾದ ಮುಂದೆ ನಿಲ್ಲುತ್ತದೆ. ಕರಗಕ್ಕೂ ದರಗಾಕ್ಕೂ ಏನು ನಂಟು ಎಂದು ಅಚ್ಚರಿ ಆಗಬಹುದು. ಮುಸ್ಲಿಂ ಸಮುದಾಯಕ್ಕೂ ಈ ಹಬ್ಬಕ್ಕೂ ಇರುವ ನಂಟಿನ ಹಿಂದೆ ಒಂದು ಕತೆ ಇದೆ. ಕರಗ ಹೊತ್ತು ನಡೆಯುವವರು ಅದನ್ನು ಬೀಳದ ಹಾಗೆ ಕಾಳಜಿ ವಹಿಸಬೇಕು, ಒಂದೊಮ್ಮೆ ಬೀಳಿಸಿದರೆ ಅದು ಕಡೆಗಣಿಸಲಾಗದ ತಪ್ಪು ಎಂಬ ನಂಬಿಕೆ ಇದೆ. ಹದಿನೆಂಟನೆ ಶತಮಾನದಲ್ಲಿ ಹಜರತ್ ತವಕಲ್ ಮಸ್ತಾನ್ ಶಾ ಎಂಬ ಮುಸ್ಲಿಂ ಸಂತರೊಬ್ಬರಿದ್ದರಂತೆ. ಅವರಿದ್ದ ಕಾಲದಲ್ಲಿ ಒಮ್ಮೆ, ಕರಗವನ್ನು ಹೊತ್ತಿದ್ದವರೊಬ್ಬರು, ಸಂತರಿದ್ದ ಜಾಗದಲ್ಲಿ ನಿಂತು ಕರಗ ಬೀಳದಂತೆ ಹರಸಿ ಎಂದು ಕೇಳಿದರೆಂದೂ, ಅದಕ್ಕೆ ಸಂತರು ಕರಗ ಬೀಳದಂತೆ ಹಾರಯ್ಸಿದರೆಂದೂ ಎನ್ನುವ ಹಿನ್ನೆಲೆಯಿದೆ. ಆ ನಡವಳಿಯೇ(ಸಂಪ್ರಾದಾಯ) ಇಂದಿಗೂ ಉಳಿದುಕೊಂಡಿದೆ. ಕರಗದ ಪೂಜೆಯ 3 ದಿವಸ ಮುಂಚೆ ಮತ್ತು ಕರಗದ ದಿನವೂ ಈ ದರಗಾಕ್ಕೆ ಬೇಟಿ ನೀಡಲಾಗುತ್ತದೆ. ಕರಗವನ್ನು ಹೊತ್ತು ಈ ದರಗಾವನ್ನು 3 ಬಾರಿ ಸುತ್ತು ಹೊಡೆಯಲಾಗುತ್ತದೆ ಎಂದು ಹೇಳಲಾಗುತ್ತದೆ.
(ಮಾಹಿತಿ ಸೆಲೆ: wikipedia, karaga.com, pradeepmgp, belgaurukaraga)
ಟ್ಯಾಗ್‌ಗಳು: :: ಅನ್ನದಾನೇಶ ಶಿ. ಸಂಕದಾಳ ::, Bengaluru, Festival, karaga, Mahabharatha, ಉತ್ಸವ, ಕರಗ, ಕುರುಕ್ಶೇತ್ರ, ತಿಗಳರು, ದರಗಾ, ದ್ರವ್ಪದಿ, ಪಾಂಡವರು, ಬೆಂಗಳೂರು, ಮಹಾಬಾರತ, ವೀರಕುಮಾರ, ಶಕ್ತಿಸ್ತಳ
ಹಿಂದಿನ ಬರಹ ಗಿನ್ನಿಸ್ ದಾಕಲೆಯ ಕೊಡಗಿನ ಹಾಕಿಹಬ್ಬ!
ಮುಂದಿನ ಬರಹ ಮರೆಯಾಗದ ಮುತ್ತು – ಡಾ. ರಾಜ್‍ಕುಮಾರ್
"ಕರಗಕ್ಕೂ ದರಗಾಕ್ಕೂ ಏನು ನಂಟು ಎಂದು ಅಚ್ಚರಿ ಆಗಬಹುದು" ಅಚ್ಚರಿ ಆಗೋದು ನವ ಇತಿಹಾಸದ ಅಮಲಿನಲ್ಲಿರೋ ಜನಗಳಿಗೆ ಮಾತ್ರ. ಈ ತೆರನಾದ ಎಷ್ಟೋ ಜಾತ್ರೆಗಳು, ಉತ್ಸವಗಳು ಮುಸ್ಲಿಂ ನಂಟಿ ನೊಂದಿಗೆ ಶ್ರೀಮಂತ ಗೊಂಡಿವೆ; ದಕ್ಷಿಣ ಕನ್ನಡ ದ ಹಲವೆಡೆ, ಪ್ರಖ್ಯಾತ ಅಯ್ಯಪ್ಪ ಸ್ವಾಮೀ ಇತ್ಯಾದಿ ಗಳು
"ಕರಗಕ್ಕೂ ದರಗಾಕ್ಕೂ ಏನು ನಂಟು ಎಂದು ಅಚ್ಚರಿ ಆಗಬಹುದು" nammoorina karadallu hIge daragaake hOguva paddati ide. Urus samayadalli, ella hiMdoogaLu daragakke hOguttaare. baabayyana habba aMta oMdide adaralli hindu muslim ibbaru meravaNigeyalli paalgoLLuttaare.
'ಪರಮಾತ್ಮ'ನ ಭಕ್ತರಾಗಿದ್ದರು ಅಪ್ಪು -ಧರ್ಮಸ್ಥಳ ಜೊತೆಗಿನ ಒಡನಾಟ ಹೇಗಿತ್ತು..? – Savi Kannada News
'ಪರಮಾತ್ಮ'ನ ಭಕ್ತರಾಗಿದ್ದರು ಅಪ್ಪು -ಧರ್ಮಸ್ಥಳ ಜೊತೆಗಿನ ಒಡನಾಟ ಹೇಗಿತ್ತು..?
ಅಪ್ಪು ಒಬ್ಬ ದೇವರ ಭಕ್ತನಾಗಿದ್ದರು. ಸಮಯ ಸಿಕ್ಕಾಗೆಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡುವುದು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ಮಾಡುತ್ತಿದ್ದರು. ಅದರಲ್ಲಿಯೂ ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ವಿಶೇಷ ಪ್ರೀತಿ, ಭಕ್ತಿಯನ್ನು ಅಪ್ಪು ಹೊಂದಿದ್ದರು. ಶ್ರೀಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಆಗಾಗ ಭೇಟಿ ನೀಡುತ್ತಿದ್ದರು.
ಹೌದು, ಅಪ್ಪುಗೆ ಮಂಜುನಾಥನ ಮೇಲೆ ಭಕ್ತಿಯಿತ್ತು. ಇದೇ ಕಾರಣಕ್ಕೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆಯುತ್ತಿದ್ರು. ಮೊದಲೆಲ್ಲ ಅಣ್ಣಾವ್ರ ಜೊತೆಗೆ ಹೋಗುತ್ತಿದ್ರೆ, ಅನಂತರ ಕುಟುಂಬದ ಜೊತೆ, ಸ್ನೇಹಿತರ ಜೊತೆ ಸೇರಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ರು. ಧರ್ಮಸ್ಥಳ ಹೆಸರಲ್ಲಿಯೇ ಒಂದು ಶಕ್ತಿ ಇದೆ ಅನ್ನೋದನ್ನು ಅಪ್ಪು ಹೇಳಿದ್ರು.
ಎರಡು ವರ್ಷಕ್ಕೊಮ್ಮೆ ಭೇಟಿ ನೀಡುತ್ತಿದ್ದ ಅಪ್ಪು
ಅಪ್ಪುಗೆ ಧರ್ಮಸ್ಥಳದ ಮೇಲಿರೋ ಭಕ್ತಿ ಅಪಾರವಾಗಿತ್ತು. ಧರ್ಮಸ್ಥಳಕ್ಕೆ ಸಮೀಪದ ಸ್ಥಳಗಳಲ್ಲಿ ಶೂಟಿಂಗ್‌ ನಡೆಯುತ್ತಿದ್ರೆ, ಹಾಗೇ ಮಂಜುನಾಥನ ದರ್ಶನ ಪಡೆಯುತ್ತಿದ್ರು. ಆದ್ರೆ, ಒಮ್ಮೆ ಧರ್ಮಸ್ಥಳದ ಸಮೀಪ ಶೂಟಿಂಗ್‌ ನಡೆಯುತ್ತಿಲ್ಲ ಅಂತಾದ್ರೆ, ಕನಿಷ್ಠ ಎರಡು ವರ್ಷಕ್ಕೆ ಒಮ್ಮೆಯಾದ್ರೂ ದರ್ಶನಕ್ಕೆ ಹೋಗುತ್ತಿದ್ರು. ಇದನ್ನು ಸ್ವತಃ ಅಪ್ಪುನೇ ಒಮ್ಮೆ ತಿಳಿಸಿದ್ದರು.
ಧಾರ್ಮಿಕ ಕಾರ್ಯಕ್ರಮದಲ್ಲಿಯೂ ಭಾಗಿ
ವರನಟ ಡಾ.ರಾಜ್‌ ಕುಮಾರ್‌ ಕಾಲದಿಂದಲೂ ಪುನೀತ್‌ ಅವರು ಧರ್ಮಸ್ಥಳಕ್ಕೆ ಭೇಟಿ ನೀಡ್ತಾ ಇದ್ರು. ಮಂಜುನಾಥನ ಆಶೀರ್ವಾದ ಪಡೆದು, ಅಲ್ಲಿಂದ ಡಾ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದು ವಾಪಸ್‌ ಬೆಂಗಳೂರಿಗೆ ಬರ್ತಾ ಇದ್ರು. ಕಳೆದ ವರ್ಷ ಅಪ್ಪುಗೆ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಹ್ವಾನ ಬಂದಿತ್ತು. ತುಂಬಾ ಸಂತೋಷದಿಂದ ಆಹ್ವಾನವನ್ನು ಸ್ವೀಕರಿಸಿದ ಪುನೀತ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಸನ್ಮಾನಿಸಿದ್ರು.
ಭಜನೆ, ನೃತೃಕ್ಕೆ ಮನಸೋತಿದ್ದ ಅಪ್ಪು
ಧರ್ಮಸ್ಥಳದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಭಜನೆ, ನೃತ್ಯ ಕಾರ್ಯಕ್ರಮ ಸೇರಿದಂತೆ ವಿವಿಧ ಭಕ್ತಿ ಪ್ರದಾನ ದಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತೆ. ಅವುಗಳು ಭಕ್ತರನ್ನು ಆಕರ್ಶಿಸಿ ಬಿಡುತ್ತವೆ. ಎಲ್ಲರಲ್ಲಿಯೂ ಭಕ್ತಿಯ ಭಾವನೆಯನ್ನು ಹೊರಹೊಮ್ಮಿಸುತ್ತವೆ. ಅದೇ ರೀತಿ ಡಾ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣಮಹೋತ್ಸವ ವರ್ಷಾಚರಣೆ ಕಾರ್ಯಕ್ರಮದಲ್ಲಿಯೂ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದನ್ನು ನೋಡಿದ ಅಪ್ಪು ಮನಸೋತಿದ್ರು.
ಹೆಗ್ಗಡೆಯವರ ಗುಣಗಾನ ಮಾಡಿದ್ದ ಅಪ್ಪು
ಧರ್ಮಸ್ಥಳದಲ್ಲಿ ಎಲ್ಲವೂ ಅಚ್ಚು ಕಟ್ಟು. ಯಾವುದೇ ವಿವಾದ ಗೊಂದಲಗಳಿಗೆ ಅಲ್ಲಿ ಅವಕಾಶವೇ ಇಲ್ಲ. ಕಾಲಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಸುಲಲಿತವಾಗಿ ನಡೆಯುತ್ತವೆ. ಎಷ್ಟೇ ಜನ ಭಕ್ತರು ಭೇಟಿ ನೀಡಿದ್ರೂ ಎಲ್ಲರಿಗೂ ಅನ್ನದಾನ ನಡೆಯುತ್ತೆ. ಇಂತಹವೊಂದು ಶಿಸ್ತಿನ ಹಿಂದೆ ಇದ್ದವರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು. ಎಲ್ಲಾ ಕಡೆಯಿಂದಲೂ ಧರ್ಮಾಧಿಕಾರಿಗಳ ಕಾರ್ಯಕ್ಕೆ ಭಾರೀ ಪ್ರಮಾಣದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಪ್ಪು ಕೂಡ ಇದನ್ನೇ ಹೇಳಿದ್ದು.
ಭಕ್ತಿ ಗೀತೆ ಹಾಡಿದ್ದ ಪುನೀತ್‌
ಅಪ್ಪು ಒಬ್ಬ ನಟನಾಗಿ ಹೇಗೆ ಮಿಂಚಿದ್ದಾರೋ ಅದೇ ರೀತಿ ಗಾಯಕನಾಗಿಯೂ ಮಿಂಚಿದ್ದಾರೆ. ಬಾಲಕನಾಗಿದ್ದಾಗಲೂ ಅಪ್ಪುಗೆ ಗಾಯನದ ಬಗ್ಗೆ ಒಲವಿತ್ತು. ಸುಮಾರು ಹಾಡುಗಳನ್ನು ಹಾಡಿದ್ರು. ಅನಂತರ ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿ ಅಭಿನಯಿಸಲು ಆರಂಭಿಸಿದ ಮೇಲೆ ಮತ್ತೆ ಹಾಡಲು ಆರಂಭಿಸಿದ್ರು. ಕೇವಲ ತನ್ನ ಚಿತ್ರಕ್ಕೆ ಅಷ್ಟೇ ಅಲ್ಲ, ಬೇರೆ ಬೇರೆ ಹೀರೋಗಳ ಚಿತ್ರಕ್ಕೂ ಹಾಡನ್ನು ಹಾಡಿದ್ದಾರೆ.
ಅನೇಕ ಸಾಂಗ್‌ಗಳು ಸೂಪರ್‌ ಹಿಟ್‌ ಆಗಿವೆ. ಹಾಗೇ ಗಾಯನದಿಂದ ಬರುವ ಪೂರ್ಣ ಪ್ರಮಾಣದ ಹಣವನ್ನು ಅಪ್ಪು ಧಾನಧರ್ಮಕ್ಕಾಗಿಯೇ ವಿನಿಯೊಗಿಸುತ್ತಿದ್ರು. ಧರ್ಮಸ್ಥಳದಲ್ಲಿ ಅಪ್ಪು ಪಾಲ್ಗೊಂಡಾಗ ಅಲ್ಲಿರುವ ಶ್ರೀಮಂಜುನಾಥನ ಭಕ್ತರು, ಅಭಿಮಾನಿಗಳು ಅಪ್ಪು ಗಾಯನವನ್ನು ನಿರೀಕ್ಷಿಸಿದ್ರು. ಅಂತಹ ಸಂದರ್ಭದಲ್ಲಿ ಅಪ್ಪು ಹಾಡಿದ ಹಾಡನ್ನು ನೋಡಿ.
ಡಾ.ರಾಜ್‌ ಕೂಡ ಮಂಜುನಾಥನ ಭಕ್ತರಾಗಿದ್ರು
ಡಾ.ರಾಜ್‌ ಜೊತೆ ಭೇಟಿ ನೀಡುತ್ತಿದ್ದ ಅಪ್ಪು
ಅಪ್ಪು ವಿನಯವಂತ, ಸರಳಜೀವಿ, ಸಭ್ಯ ನಡತೆ ಹೊಂದಿರೋ ವ್ಯಕ್ತಿಯಾಗಿದ್ರು ಅಂದ್ರೆ ಅದಕ್ಕೆ ಕಾರಣ ವರನಟ ಡಾ.ರಾಜ್‌ ಕುಮಾರ್‌. ಹೌದು, ರಾಜ್‌ ಕುಮಾರ್‌ ತುಂಬಾ ಸರಳ, ವಿನಯವಂತರಾಗಿದ್ರು. ಅಪ್ಪು ಡಾ.ರಾಜ್‌ ಕುಮಾರ್‌ ಮಗನಾಗಿ ಅವರ ಜೊತೆ ಹೆಚ್ಚಿನ ಸಮಯ ಕಳೆದಿದ್ದಾರೆ.
ಅಪ್ಪು ಚಿಕ್ಕವನಿರುವಾಗ ಡಾ.ರಾಜ್‌ ಜೊತೆ ಅನೇಕ ಚಿತ್ರಮಾಡಿದ್ದಾರೆ. ಹೀಗಾಗಿ ಶೂಟಿಂಗ್‌ ಸಂದರ್ಭದಲ್ಲಿ ಕೂಡ ಅಪ್ಪು ರಾಜ್‌ಕುಮಾರ್‌ ಜೊತೆಗೆ ಇರುತ್ತಿದ್ರು. ಇದರಿಂದಾಗಿ ರಾಜ್‌ ಕುಮಾರ್‌ ಅವರಲ್ಲಿದ್ದ ಸರಳತೆ, ವಿನಯತೆ ಹಾಗೇ ಪುನೀತ್‌ಗೂ ಬಂದಿತ್ತು. ಡಾ.ರಾಜ್‌ ದೇವರ ಭಕ್ತಕೂಡ ಆಗಿದ್ರು. ಅನೇಕ ಭಕ್ತಿ ಪ್ರಧಾನ ಸಿನಿಮಾಗಳನ್ನು ಮಾಡಿ ಜನರ ಮನಸ್ಸಿನಲ್ಲಿ ನೆಲೆನಿಂತಿದ್ದಾರೆ. ಅನೇಕ ಬಾರಿ ಡಾ.ರಾಜ್‌ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಂತಹ ಸಂದರ್ಭದಲ್ಲಿ ಅಪ್ಪು ಅನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ರು. ಹೀಗಾಗಿ ಅಪ್ಪು ಕೂಡ ಡಾ.ರಾಜ್‌ ಅವರಂತೆ ದೇವರ ಭಕ್ತರಾಗಿದ್ರು.
ಆರ್ಥಿಕ ಪುನಃಶ್ಚೇತನಕ್ಕಾಗಿ ರೂ.9 ಲಕ್ಷ ಕೋಟಿಯ ಯೋಜನೆಗಳನ್ನು ಘೋಷಿಸಿದ ಜೇಟ್ಲಿ | News13
News13 > ಸುದ್ದಿಗಳು > ರಾಷ್ಟ್ರೀಯ > ಆರ್ಥಿಕ ಪುನಃಶ್ಚೇತನಕ್ಕಾಗಿ ರೂ.9 ಲಕ್ಷ ಕೋಟಿಯ ಯೋಜನೆಗಳನ್ನು ಘೋಷಿಸಿದ ಜೇಟ್ಲಿ
ಆರ್ಥಿಕ ಪುನಃಶ್ಚೇತನಕ್ಕಾಗಿ ರೂ.9 ಲಕ್ಷ ಕೋಟಿಯ ಯೋಜನೆಗಳನ್ನು ಘೋಷಿಸಿದ ಜೇಟ್ಲಿ