text
stringlengths
0
61.5k
Prakash Narasimhaiah August 6, 2012 at 8:54 PM
Prakash Narasimhaiah August 7, 2012 at 10:14 AM
ಆತ್ಮೀಯ ಶ್ರೀಧರ್ ,
ನಿಮ್ಮ ಅವಧೂತ ಬ್ಲಾಗ್ನಲ್ಲಿ ನನ್ನ ಲೇಖನ ಹಾಕಲು ಆಗಲಿಲ್ಲ. ಈ ಬಗ್ಗೆ ನನಗೆ ಹೇಗೆ ಹಾಕಬೆಂಬುದರ ಬಗ್ಗೆ ಗೊತ್ತಿಲ್ಲ. ದಯಮಾಡಿ ತಿಳಿಸಿಕೊಡಿ ಇಲ್ಲ ಈ ಲೇಖನ ಮತ್ತು ಮುಂದಿನ ಲೇಖನಗಳನ್ನು ನೀವೇ ಆ ಬ್ಲಾಗ್ನಲ್ಲಿ ಹಾಕಿಬಿಡಿ. ದಯಮಾಡಿ ಬೇಸರಿಸಬೇಡಿ.
40 ವರ್ಷಗಳ ಪೊಲೀಸ್ ಇಲಾಖೆಗಾಗಿಯೇ ಜೀವ ಸವೆಸಿದ ಮಹಿಳೆಗೆ ವಿದಾಯ ಹೇಳಿದ ಗುಂಟೂರು ಪೊಲೀಸರು!- Kannada Prabha
40 ವರ್ಷ ತಮ್ಮ ಸೇವೆ ಮಾಡಿದ ಮಹಿಳೆಗೆ ಗುಂಟೂರು ಪೊಲೀಸರ ಹೃದಯಸ್ಪರ್ಶಿ ವಿದಾಯ!
ಬರೋಬ್ಬರಿ 40 ವರ್ಷಗಳ ಕಾಲ ಪೊಲೀಸ್ ಠಾಣೆಯಲ್ಲಿಯೇ ತನ್ನ ಜೀವ ಸವೆಸಿದ ಮಹಿಳೆಗೆ ಗುಂಟೂರು ಪೊಲೀಸರು ಕಣ್ಣೀರಿನ ವಿದಾಯ ಹೇಳಿದ್ದಾರೆ.
Published: 11th September 2019 02:33 PM | Last Updated: 11th September 2019 07:33 PM | A+A A-
40 ವರ್ಷಗಳ ಪೊಲೀಸ್ ಇಲಾಖೆಗಾಗಿಯೇ ಜೀವ ಸವೆಸಿದ ಮಹಿಳೆಗೆ ವಿದಾಯ ಹೇಳಿದ ಗುಂಟೂರು ಪೊಲೀಸರು!
ಗುಂಟೂರು: ಬರೋಬ್ಬರಿ 40 ವರ್ಷಗಳ ಕಾಲ ಪೊಲೀಸ್ ಇಲಾಖೆಗಾಗಿಯೇ ತನ್ನ ಜೀವ ಸವೆಸಿದ ಮಹಿಳೆಗೆ ಗಂಟೂರು ಪೊಲೀಸರು ಕಣ್ಣೀರಿನ ವಿದಾಯ ಹೇಳಿದ್ದಾರೆ.
ಗಂಡನನ್ನು ಕಳೆದುಕೊಂಡ ಬಳಿಕ ಮಹಿಳೆ, ಗುಂಟೂರು ಜಿಲ್ಲೆಯ ತಡೇಪಲ್ಲಿ ಪೊಲೀಸ್ ಠಾಣೆಯನ್ನೇ ಸೂರು ಮಾಡಿಕೊಂಡಿದ್ದರು. ಕಳೆದ 40 ವರ್ಷಗಳಿಂದ ಪೊಲೀಸ್ ಇಲಾಖೆಗಾಗಿಯೇ ತನ್ನ ಜೀವವನ್ನು ಸವೆಸಿದ್ದಾರೆ. ಇದೀಗ ಮಹಿಳೆ ಇಹಲೋಕ ತ್ಯಜಿಸಿದ್ದು, ಸ್ವತಃ ಪೊಲೀಸರೇ ಹಣವನ್ನು ವ್ಯಯಿಸಿ ಮಹಿಳೆಗೆ ಅಂತಿಮ ವಿದಾಯ ಹೇಳಿದ್ದಾರೆ.
ಮಹಿಳೆಯ ನಿಜವಾದ ಹೆಸರನ್ನು ತಿಳಿಯದ ಪೊಲೀಸರು ಆಕೆಯನ್ನು ಭಾನವತ್, ಮೂಗಮ್ಮ ಎಂದು ಕರೆಯುತ್ತಿದ್ದರು. ಮಹಿಳೆ ಮಾಡುತ್ತಿದ್ದ ಕಾರ್ಯಗಳಿಗೆ ಸಿಬ್ಬಂದಿಗಳೂ ಸೇರಿ ಪೊಲೀಸ್ ಅಧಿಕಾರಿಗಳೂ ಕೂಡ ಗೌರವವನ್ನು ನೀಡುತ್ತಿದ್ದರು. ಬೆಳಗಿನ ಸಮಯದಲ್ಲಿ ಠಾಣೆಯಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದ ಮಹಿಳೆಯ ರಾತ್ರಿಯಾಗುತ್ತಿದ್ದಂತೆಯೇ ಪೊಲೀಸ್ ಕ್ಟಾಟ್ರಸ್ ನಲ್ಲಿ ಕಳೆಯುತ್ತಿದ್ದರು.
ಠಾಣೆಯಲ್ಲಿ ಯಾವುದೇ ಕೆಲಸವಿದ್ದರೂ ಹಿಂದೂ ಮುಂದೂ ನೋಡದೆ ಬಂದು ಕೆಲಸ ಮಾಡುತ್ತಿದ್ದರು. ಠಾಣೆಗೆ ಬರುತ್ತಿದ್ದ ಪೊಲೀಸರು ವರ್ಗಾವಣೆಯಾಗುತ್ತಿದ್ದರು. ಆದರೆ, ಮಹಿಳೆ ಮಾತ್ರ ತನ್ನ ಕೊನೆಯುಸಿರಿರುವವರೆಗೂ ಠಾಣೆಯಲ್ಲಿಯೇ ಕಳೆದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೂಗಮ್ಮ ಅವರ ಕುಟುಂಬ ಸದಸ್ಯರು ನಲಗೊಂಡ ಜಿಲ್ಲೆಯ ಸೂರ್ಯಪೇಟೆಯಲ್ಲಿ ನೆಲೆಸಿದ್ದಾರೆ. ತಡೆಪಲ್ಲಿಯಲ್ಲಿ ಕೆಲವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪನಿ ಬಂದ್ ಆದ ಬಳಿಕ ಎಲ್ಲರೂ ತಡೇಪಲ್ಲಿಯೇ ನೆಲೆಸಿದ್ದಾರೆಂದು ಪೊಲೀಸ್ ಅಧಿಕಾರಿ ಡಿ.ನರೇಶ್ ಕುಮಾರ್ ಹೇಳಿದ್ದಾರೆ.
ಎಲ್ಲರೂ ಊರು ಬಿಟ್ಟರೂ ಮೂಗಮ್ಮ ಮಾತ್ರ ಇಲ್ಲಿಯೇ ಉಳಿದರು. ಠಾಣೆಯಲ್ಲಿ ಡಾನ್ ರೀತಿ ಇದ್ದರು. ಠಾಣೆಯಲ್ಲಿನ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದ ನಾವು ಊಟ ತಿಂಡಿಯನ್ನೂ ಮರೆತು ಬಿಡುತ್ತಿದ್ದೆವು. ಈ ವೇಳೆ ಮೂಗಮ್ಮ ನಮ್ಮೆಲ್ಲರನ್ನೂ ನೋಡಿಕೊಳ್ಳುತ್ತಿದ್ದರು. ಅನಾರೋಗ್ಯಕ್ಕೀಡಾದಾಗ ಸಾಕಷ್ಟು ಬಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇನೆ. ಠಾಣೆಯಿಂದ ಹೊರ ಹೋಗುವ ಹಿಂದಿನ ರಾತ್ರಿ ನನ್ನೊಂದಿಗೆ ಮಾತನಾಡಿದ್ದಾರೆಂದು ಏಸ್.ಆರ್. ನಾರಾಯಣ ಅವರು ತಿಳಿಸಿದ್ದಾರೆ.
ಮೂಗಮ್ಮ ಅವರೊಂದಿಗೆ ಸಮಯ ಕಳೆದಿದ್ದ ಪೊಲೀಸರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದು, ಮೂಗಮ್ಮ ಅವರಿಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ. ಸರ್ಕಾರಿ ಗೌರವದ ರೀತಿಯಲ್ಲಿಯೇ ಪೊಲೀಸರು ಗೌರಮ್ಮ ಅವರಿಗೆ ಅಂತಿಮ ವಿದಾಯ ಹೇಳಿದ್ದಾರೆ.
ಮತ್ತೆ ಸೇಲ್‌ಗಿದೆ ಏರ್‌ ಇಂಡಿಯಾ: 100% ಷೇರು ಮಾರಲು ಕೇಂದ್ರ ಸಜ್ಜು! | Central Govt plans For 100 percent Sale Of Air India March 17 Deadline For Bids
ಮತ್ತೆ ಸೇಲ್‌ಗಿದೆ ಏರ್‌ ಇಂಡಿಯಾ| ಈ ಬಾರಿ 100% ಷೇರು ಮಾರಲು ಕೇಂದ್ರ ಸರ್ಕಾರ ಸಜ್ಜು| ಪ್ರಾಥಮಿಕ ಬಿಡ್‌ ದಾಖಲೆ ಬಿಡುಗಡೆ| ಆಸಕ್ತಿ ವ್ಯಕ್ತಪಡಿಸುವಿಕೆಗೆ ಮಾ.17 ಗಡುವು| ಇದು ದೇಶದ್ರೋಹ, ಕೋರ್ಟಿಗೆ ಹೋಗುವೆ: ಸ್ವಾಮಿ| ಸರ್ಕಾರದ ಬಳಿ ದುಡ್ಡಿಲ್ಲ, ಅದಕ್ಕೆ ಮಾರ್ತಿದೆ: ಕಾಂಗ್ರೆಸ್‌| ಬಿಳಿಯಾನೆ ಮಾರಲು 2ನೇ ಸಲ ಕಸರತ್ತು
Bangalore, First Published Jan 28, 2020, 9:21 AM IST
ನವದೆಹಲಿ[ಜ.28]: ಬರೋಬ್ಬರಿ 58 ಸಾವಿರ ಕೋಟಿ ರು. ಸಾಲದ ಹೊರೆಯನ್ನು ಹೊತ್ತಿರುವ, ದೇಶದ ಪಾಲಿಗೆ ಬಿಳಿಯಾನೆಯಾಗಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿ ಏರ್‌ ಇಂಡಿಯಾವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮತ್ತೊಮ್ಮೆ ಪ್ರಯತ್ನ ಆರಂಭಿಸಿದೆ. 2018ರಲ್ಲಿ ಶೇ.76ರಷ್ಟುಷೇರುಗಳನ್ನು ಮಾರಾಟಕ್ಕಿಟ್ಟರೂ ಯಾರೊಬ್ಬರೂ ಮುಂದೆ ಬಾರದ ಕಾರಣ ಹಿನ್ನಡೆ ಅನುಭವಿಸಿದ್ದ ಸರ್ಕಾರ, ಈ ಬಾರಿ ಶೇ.100ರಷ್ಟುಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಅಲ್ಲದೆ ಖರೀದಿದಾರರಿಗೆ ಈ ಹಿಂದೆ ವಿಧಿಸಿದ್ದ ಕೆಲವು ನಿಯಮಗಳನ್ನೂ ಸರಳೀಕೃತಗೊಳಿಸಿದೆ.
ಇದಕ್ಕಾಗಿ ಪ್ರಾಥಮಿಕ ಬಿಡ್‌ ದಾಖಲೆಗಳನ್ನು ಸೋಮವಾರ ಬಿಡುಗಡೆ ಮಾಡಿದ್ದು, ಆಸಕ್ತಿ ವ್ಯಕ್ತಪಡಿಸುವಿಕೆಗೆ ಮಾ.17ರ ಗಡುವನ್ನು ನೀಡಿದೆ. ಮಾ.31ರಂದು ಬಿಡ್‌ ವಿಜೇತರ ಹೆಸರನ್ನು ಪ್ರಕಟಿಸಲಾಗುವುದು.
ಸರ್ಕಾರದ ಈ ನಿರ್ಧಾರಕ್ಕೆ ಸ್ವತಃ ಬಿಜೆಪಿ ಸಂಸದರೊಬ್ಬರಿಂದಲೇ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಈ ಕ್ರಮ ದೇಶದ್ರೋಹದ್ದು ಎಂದು ಜರಿದಿರುವ ಸಂಸದ ಸುಬ್ರಮಣಿಯನ್‌ ಸ್ವಾಮಿ, ಈ ನಿರ್ಧಾರದ ವಿರುದ್ಧ ಕೋರ್ಟಿಗೆ ಹೋಗುವ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ಸರ್ಕಾರದ ಬಳಿ ದುಡ್ಡಿಲ್ಲ. ಹೀಗಾಗಿ ದೇಶದ ಬಳಿ ಇರುವ ಮೌಲ್ಯಯುತ ಆಸ್ತಿಯನ್ನು ಮಾರುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಟೀಕಿಸಿದ್ದಾರೆ.
ಸೇಲ್‌ಗಿದೆ ಕಂಪನಿ:
ಏರ್‌ ಇಂಡಿಯಾದ ಶೇ.100 ಹಾಗೂ ಅದೇ ಸಂಸ್ಥೆಯ ಅಗ್ಗದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿರುವ ಶೇ.100ರಷ್ಟುಷೇರು ಮತ್ತು ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸರಕು ಮತ್ತು ಗ್ರೌಂಡ್‌ ಹ್ಯಾಂಡಲಿಂಗ್‌ ಸೇವೆ ಒದಗಿಸುತ್ತಿರುವ ಏರ್‌ ಇಂಡಿಯಾ- ಸಿಂಗಾಪುರ ಏರ್‌ಲೈನ್ಸ್‌ ನಡುವಣ ಜಂಟಿ ಪಾಲುದಾರಿಕಾ ಕಂಪನಿ ಎಐಎಸ್‌ಎಟಿಎಸ್‌ನಲ್ಲಿನ ಶೇ.50ರಷ್ಟುಷೇರುಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಬಿಡ್‌ ದಾಖಲೆ ತಿಳಿಸಿದೆ.
ಯಶಸ್ವಿ ಬಿಡ್‌ದಾರರಿಗೆ ಕಂಪನಿಯ ನಿರ್ವಹಣೆಯನ್ನು ವರ್ಗಾಯಿಸಲಾಗುತ್ತದೆ. ಆ ಬಿಡ್‌ದಾರರು ಏರ್‌ ಇಂಡಿಯಾ ಹಾಗೂ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಹೊಂದಿರುವ 23,286 ಕೋಟಿ ರು. ಸಾಲದ ಹೊರೆಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಉಳಿಕೆ ಸಾಲವನ್ನು ಏರ್‌ ಇಂಡಿಯಾ ಅಸ್ಸೆಟ್ಸ್‌ ಹೋಲ್ಡಿಂಗ್‌ ಲಿಮಿಟೆಡ್‌ಗೆ ಹಂಚಿಕೆ ಮಾಡಲಾಗುತ್ತದೆ. ಏರ್‌ ಇಂಡಿಯಾ ಎಂಜಿನಿಯರಿಂಗ್‌ ಸವೀರ್‍ಸ್‌, ಏರ್‌ ಇಂಡಿಯಾ ಏರ್‌ ಟ್ರಾಫಿಕ್‌ ಸವೀರ್‍ಸಸ್‌, ಏರ್‌ಲೈನ್‌ ಅಲೈಡ್‌ ಸವೀರ್‍ಸಸ್‌, ಹೋಟೆಲ್‌ ಕಾರ್ಪೊರೆಷನ್‌ ಆಫ್‌ ಇಂಡಿಯಾ ಕಂಪನಿಗಳನ್ನು ಅಸ್ಸೆಟ್ಸ್‌ ಹೋಲ್ಡಿಂಗ್ಸ್‌ಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಕಂಪನಿಗಳು ಮಾರಾಟಕ್ಕಿಲ್ಲ ಎಂದು ಬಿಡ್‌ ದಾಖಲೆ ತಿಳಿಸಿದೆ.
ಅಲ್ಲದೆ ಖರೀದಿ ಪ್ರಕ್ರಿಯೆಯಲ್ಲಿ ಏರ್‌ಇಂಡಿಯಾದ ಕಾಯಂ ಸಿಬ್ಬಂದಿಗೆ ಶೇ.3ರಷ್ಟುಷೇರುಗಳನ್ನು ರಿಯಾಯಿತಿ ದರದಲ್ಲಿ ನೀಡುವ ಪ್ರಸ್ತಾಪವನ್ನು ಮಾಡಲಾಗಿದೆ. ಜೊತೆಗೆ ಬಿಡ್‌ದಾರರು, ಕಂಪನಿಗೆ ಏರ್‌ ಇಂಡಿಯಾ ಎಂಬ ಹೆಸರನ್ನು ಉಳಿಸಿಕೊಂಡು ಹೋಗಬೇಕು ಎಂಬ ಷರತ್ತು ವಿಧಿಸಲಾಗಿದೆ.
ಯೋಗ ಗುರು ರಾಮದೇವ್ ಆಸ್ತಿ ಮೂಲ ಯಾವುದು? | Baba Ramdev Assets | Ramdev to Declare Assests | Patanjali Yogpeeth | ಬಾಬಾ ರಾಮದೇವ್ ಆಸ್ತಿ ವಿವರ | ರಾಮದೇವ್ ಆಸ್ತಿ ವಿವರ ಬಹಿರಂಗ | ಪತಂಜಲಿ ಯೋಗ ಪೀಠ ಹರಿದ್ವಾರ | - Kannada Oneindia
ಯೋಗ ಗುರು ರಾಮದೇವ್ ಆಸ್ತಿ ಮೂಲ ಯಾವುದು?
By * ಅವಿನಾಶ್ ಕೋಟ್ಯಾನ್, ಕುದ್ರೋಳಿ, ಮಂಗಳೂರು
| Published: Thursday, June 9, 2011, 14:25 [IST]
ಭ್ರಷ್ಟಾಚಾರ ವಿರುದ್ಧದ ಹೋರಾಟ ದಿನೇ ದಿನೇ ನಾಟಕೀಯ ತಿರುವುಗಳನ್ನು ಪಡೆಯುತ್ತಿರುವುದು ಮಾಧ್ಯಮಗಳಿಗೆ ಮತ್ತು ಜನಸಾಮಾನ್ಯರಿಗೆ ರೋಚಕ ಮಾಹಿತಿಯನ್ನು ಒದಗಿಸುತ್ತಿದೆ. ಅಣ್ಣಾ ಹಜಾರೆ ಆರಂಭಿಸಿದ ಸತ್ಯಾಗಹದ ಅಭೂತಪೂರ್ವ ಯಶಸ್ವಿನಿಂದ ಜನ ಲೋಕಪಾಲ್ ಮಸೂದೆ ರಚನೆಗೆ ಸ್ಪಷ್ಟತೆ ಸಿಕ್ಕಿ, ಜನ ಸಾಮಾನ್ಯರಲ್ಲಿ ಹೊಸ ಭರವಸೆಯನ್ನುಂಟು ಮಾಡಿತ್ತು . ಆದರೆ, ಅದೇ ಸಮಯದಲ್ಲಿ ಭಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿರುವ ಮಧ್ಯಮ ವರ್ಗದ ನೈತಿಕತೆಯ ಬಗ್ಗೆ ಅನೇಕ ಸಂಶಯಗಳು,ಪ್ರಶ್ನೆಗಳು ಹುಟ್ಟಿಕೊಂಡವು.
ಈಗ ಮತ್ತೊ ಬಾಬಾ ರಾಮ್‌ದೇವ್ ರ ಮತ್ತು ವಿದೇಶದಲ್ಲಿರುವ ಕಪ್ಪು ಹಣದ ವಿರುದ್ಧ ನಿ ಎತ್ತಿವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಮೊದಲನೆಯದು, ಈಗಾಗಲೇ ಜನಲೋಕಪಾಲ್ ರಚನೆ ಬಗ್ಗೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹ ಅವಶ್ಯವೇ? ಜನಲೋಕಪಾಲ್ ಸಮಿತಿಯ ಸದಸ್ಯ ರೊಡನೆ ಚರ್ಚಿಸಿ ವಿದೇಶದಲ್ಲಿರುವ ಕಪ್ಪು ಹಣ ತರಿಸಲು ಬಾಬಾ ರಾಮ್ ದೇವ್ ಪ್ರಯತ್ನಿಸಬಹುದಲ್ಲವೇ? ಈ ಉಪವಾಸ ಸತ್ಯಾಗ್ರಹ ಏಕೆ? ಇದರ ಹಿಂದಿನ ಸಂಚು ಏನು? ಮಾಧ್ಯಮಗಳಿಂದ ಪ್ರಚಾರ ಪಡೆಯುವುದೇ? ವಿದೇಶಿ ಬ್ಯಾಂಕುಗಳು ಸುಲಭವಾಗಿ ಭಾರತ ಸರಕಾರದ ಆದೇಶಗಳನ್ನು ಪಾಲಿಸಲು ಸಾಧ್ಯವೇ?
ಆ ದೇಶಗಳಲ್ಲಿ ತಮ್ಮದೇ ಆದ ಕಾನೂನುಗಳಿಲ್ಲವೇ? ಈ ವಿಷಯಗಳಿಂತ ಮುಖ್ಯವಾದುದು, ಬಾಬಾ ರಾಮ್‌ದೇವ್‌ರವರ ಆಸ್ತಿಯ ಮೂಲ ಯಾವುದು? ಒಂದು ಅಂದಾಜಿನ ಪ್ರಕಾರ ಬಾಬಾ ರಾಮ್‌ದೇವ್ ಮತ್ತು ಇವರ ಸಂಸ್ಥೆ ಸುಮಾರು 1100 ಕೋಟಿ ರೂಪಾಯಿ ಮೌಲ್ಯದಷ್ಟು ಆಸ್ತಿಯನ್ನು ಹೊಂದಿದೆ. ಇದಕ್ಕೆ ಮೂಲ ಯಾವುದು? ಇವರಿಗೆ ದಾನ ಮಾಡಿದ ಮಹಾ ಪುರುಷರು ಯಾರು? ಅಷ್ಟು ಹಣಕ್ಕೂ ತೆರಿಗೆ ಕಟ್ಟಲಾಗಿದೆಯೇ? ಅವರು ಹಣ ಸಂಪಾದಿಸಲು ಅನುಸರಿಸಿದ ಮಾಡಿದ ದಾರಿಗಳು ಯಾವುವು? ಭ್ರಷ್ಟರಿಂದ, ಕಾರ್ಪೋರೇಟ್ ಸಂಸ್ಥೆಗಳಿಂದ ಹಣ ಪಡೆಯುವುದು ಸರಿಯೇ? ಅದು ಭ್ರಷ್ಟತೆಯಲ್ಲವೇ? ಏಕೆ ಇವರಿಗೆ 1100 ಕೋಟಿ ರೂಪಾಯಿ ಆಸ್ತಿ ? ಆದರಿಂದ ಜನಸಾಮಾನ್ಯರಿಗೆ ಮಾಡಿರುವ ಅನುಕೂಲಗಳೇನು?
ಬಾಬಾ ರಾಮದೇವ್ ತಮ್ಮ ಆಸ್ತಿ ವಿವರಗಳನ್ನು ಇಂದು ಸಾರ್ವಜನಿಕರಿಗೆ ಬಹಿರಂಗಪಡಿಸುತ್ತಿದ್ದಾರೆ. ಆದರೆ ಅದರ ಮೂಲಗಳನ್ನು ಕೇಂದ್ರ ಸರಕಾರ ಈ ಹಣದ ಮೂಲದ ಬಗ್ಗೆ ತನಿಖೆ ನಡೆಸಿ ಬಾಬಾ ರಾಮ್‌ದೇವ್‌ರಂಥವರನ್ನು ಜೈಲಿಗೆ ಕಳುಹಿಸುವುದು ಇಂದಿನ ತುರ್ತು ಕೆಲಸವಾಗಿದೆ. ಇಲ್ಲದೇ ಇದ್ದಲ್ಲಿ ಜನರಿಂದ ಚುನಾಯಿಸಲ್ಪಟ್ಟ ಸರಕಾರಗಳನ್ನು ಬ್ಲಾಕ್‌ಮೇಲ್ ಮಾಡಿ ಮತ್ತಷ್ಟು ಆಸ್ತಿವಂತರಾಗಿ, ರಾಜಕೀಯ ಪಕ್ಷ ಸ್ಥಾಪಿಸಿ ಜನರಿಗೆ ಮಂಕುಬೂದಿ ಎರಚುತ್ತಾರೆ. ಕೇಂದ್ರ ಸರಕಾರ ಬಾಬಾ ರಾಮ್‌ದೇವ್‌ರಂತಹ ಅವಿವೇಕಿಗಳಿಗೆ ಸಂಪೂರ್ಣ ಶರಣಾಗುವುದರ ಮೂಲಕ ಭಾರತದ ಸಂವಿಧಾನಕ್ಕೆ ಅಪಚಾರ ಮಾಡಿದೆ.
ಬಾಬಾ ರಾಮದೇವ್ ಕಪ್ಪು ಹಣ ಉಪವಾಸ ಆಸ್ತಿ baba ramdev black money assets
Yoga guru Baba Ramdev holding throne of mammoth financial empire in the name of Patanjali Yogapeeth, Haridwar. He is declaring his assets to public but will he declare the source of income to people without hiding any details.
ಗೂಗಲ್‌ ಫಾರ್ಮ್‌ ಅನ್ನು ರಚಿಸಲು ಈ ಕ್ರಮಗಳನ್ನು ಅನುಸರಿಸಿ! | Google Forms: How To Create, Share And Check Responses - Kannada Gizbot
17 min ago ಸೂಪರ್ ವ್ಯಾಲ್ಯೂ ಟ್ಯಾಗ್‌ ಪಡೆದ ಜಿಯೋ ಪ್ಲ್ಯಾನ್‌ಗಳ ಪ್ರಯೋಜನಗಳೆನು?
48 min ago ಆಪಲ್ ಪಾಡ್‌ಕಾಸ್ಟ್ ಪ್ರೀಮಿಯಂ ಚಂದಾದಾರಿಕೆ ಇಂದಿನಿಂದ ಲಭ್ಯ!
ಗೂಗಲ್‌ ಫಾರ್ಮ್‌ ಅನ್ನು ರಚಿಸಲು ಈ ಕ್ರಮಗಳನ್ನು ಅನುಸರಿಸಿ!
ಪ್ರಸ್ತುತ ಬಹುತೇಕ ಸೇವೆಗಳು ಡಿಜಿಟಲ್‌ ರೂಪ ಪಡೆದುಕೊಂಡಿದ್ದು, ಈ ನಿಟ್ಟಿನಲ್ಲಿ ಜನರು ಏನೇ ಕೆಲಸವಿದ್ದರೂ ಆನ್‌ಲೈನ್‌ ಅನ್ನೇ ನೆಚ್ಚಿಕೊಳ್ಳಬೇಕಿದೆ. ಸ್ಮಾರ್ಟ್‌ಫೋನ್‌ ಮೂಲಕ ಅಥವಾ ಲ್ಯಾಪ್‌ಟಾಪ್‌ ಮೂಲಕ ಸೇವೆಗಳನ್ನು ಪಡೆಯಬಹುದಾಗಿದೆ. ಆ ಪೈಕಿ ಮಾಹಿತಿ ಪಡೆಯಲು, ಪ್ರಶ್ನಾವಳಿಗಳಿಗೆ ಉತ್ತರ ಪಡೆಯಲು ಹಾಗೂ ಆನ್‌ಲೈನ್‌ ಸಮೀಕ್ಷೆಗಳನ್ನು ನಡೆಸಲು ಗೂಗಲ್‌ ಫಾರ್ಮ್‌ ಬಹು ಉಪಯುಕ್ತವಾಗಿದೆ.
ಹೌದು, ಆನ್‌ಲೈನ್‌ ಗೂಗಲ್ ಫಾರ್ಮ್‌ ಹೆಚ್ಚು ಪ್ರಸ್ತುತದಲ್ಲಿದೆ. ಎಲ್ಲ ವಲಯಗಳಲ್ಲಿಯೂ ಮಾಹಿತಿ ಪಡೆಯಲು ಗೂಗಲ್ ಫಾರ್ಮ್‌ಗಳು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದರ ಬಳಕೆ ಮೂಲಕ ಮಾಹಿತಿ ಕಲೆ ಹಾಕುವುದು ತುಂಬಾ ಸುಲಭ. ಅಲ್ಲದೇ ಮಾಹಿತಿಯು ಡಿಜಿಟಲ್ ರೂಪದಲ್ಲಿ ದಾಖಲಾಗುತ್ತದೆ. ಹಾಗಾದರೇ ಗೂಗಲ್‌ ಫಾರ್ಮ್‌ ಅನ್ನು ರಚಿಸುವುದು ಹೇಗೆ? ಫಾರ್ಮ್‌ಗಳನ್ನು ಶೇರ್ ಮಾಡುವುದು ಹೇಗೆ?. ಫಾರ್ಮ್‌ ಅನ್ನು ಪರೀಶಿಲಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿರಿ.
ಗೂಗಲ್ ಫಾರ್ಮ್‌ಗಳನ್ನು ರಚಿಸುವುದು ಹೇಗೆ
ಗೂಗಲ್ ಫಾರ್ಮ್‌ಗಳಲ್ಲಿ ಫಾರ್ಮ್ ರಚಿಸುವುದು ಬಹಳ ಸುಲಭ. ಈ ಹಂತಗಳನ್ನು ಅನುಸರಿಸಿ.
* Docs.google.com/forms ಗೆ ಭೇಟಿ ನೀಡಿ.
* ಸೈಟ್ ಲೋಡ್ ಆದ ನಂತರ, ಖಾಲಿ ಹೊಸ ಫಾರ್ಮ್ ಅನ್ನು ರಚಿಸಲು ಪ್ರಾರಂಭಿಸಲು + ಐಕಾನ್ ಮೇಲೆ ಸುಳಿದಾಡಿ ಅಥವಾ ನೀವು ಟೆಂಪ್ಲೆಟ್ ಅನ್ನು ಆಯ್ಕೆ ಮಾಡಬಹುದು. ಮೊದಲಿನಿಂದ ಪ್ರಾರಂಭಿಸಲು, ಹೊಸ ಫಾರ್ಮ್ ರಚಿಸಿ ಒತ್ತಿರಿ.
* ಮೇಲಿನಿಂದ ಪ್ರಾರಂಭಿಸಿ, ನೀವು ಶೀರ್ಷಿಕೆ ಮತ್ತು ವಿವರಣೆಯನ್ನು ಸೇರಿಸಬಹುದು.
* ಕೆಳಗಿನ ಪೆಟ್ಟಿಗೆಯಲ್ಲಿ, ನೀವು ಪ್ರಶ್ನೆಗಳನ್ನು ಸೇರಿಸಬಹುದು. ಹೆಚ್ಚಿನ ಪ್ರಶ್ನೆಗಳನ್ನು ಸೇರಿಸುವುದನ್ನು ಮುಂದುವರಿಸಲು, ಟೂಲ್‌ಬಾರ್‌ನಿಂದ ಬಲಭಾಗದಲ್ಲಿರುವ + ಐಕಾನ್ ಅನ್ನು ಒತ್ತಿರಿ.
* ಫ್ಲೋಟಿಂಗ್ ಟೂಲ್‌ಬಾರ್‌ನಲ್ಲಿ ಕಂಡುಬರುವ ಇತರ ಸೆಟ್ಟಿಂಗ್‌ಗಳು, ಇತರ ರೂಪಗಳಿಂದ ಪ್ರಶ್ನೆಗಳನ್ನು ಆಮದು ಮಾಡಿಕೊಳ್ಳುವುದು, ಉಪಶೀರ್ಷಿಕೆ ಮತ್ತು ವಿವರಣೆಯನ್ನು ಸೇರಿಸುವುದು, ಫೋಟೋ ಸೇರಿಸುವುದು, ವೀಡಿಯೊ ಸೇರಿಸುವುದು ಮತ್ತು ನಿಮ್ಮ ರೂಪದಲ್ಲಿ ಪ್ರತ್ಯೇಕ ವಿಭಾಗವನ್ನು ರಚಿಸುವುದು.
* ಗಮನಿಸಿ, ಯಾವುದೇ ಸಮಯದಲ್ಲಿ ನೀವು ಸೆಟ್ಟಿಂಗ್‌ಗಳ ಪಕ್ಕದಲ್ಲಿಯೇ ಇರುವ ಪೂರ್ವವೀಕ್ಷಣೆ ಐಕಾನ್ ಅನ್ನು ಯಾವಾಗಲೂ ಹೊಡೆಯಬಹುದು, ಇತರರು ಅದನ್ನು ತೆರೆದಾಗ ನಿಮ್ಮ ಫಾರ್ಮ್ ಹೇಗೆ ಕಾಣುತ್ತದೆ ಎಂಬುದನ್ನು ನೋಡಲು
ಗೂಗಲ್ ಫಾರ್ಮ್ಸ್ ವಿನ್ಯಾಸಗೊಳಿಸುವುದು ಹೇಗೆ
* ಥೀಮ್ ಆಯ್ಕೆಗಳನ್ನು ತೆರೆಯಲು ಪೂರ್ವವೀಕ್ಷಣೆ ಐಕಾನ್ ಪಕ್ಕದಲ್ಲಿಯೇ ಕಸ್ಟಮೈಸ್ ಥೀಮ್ ಐಕಾನ್ ಒತ್ತಿರಿ.
* ನಂತರ ನೀವು ಪೂರ್ವ ಲೋಡ್ ಮಾಡಿದ ಚಿತ್ರವನ್ನು ಹೆಡರ್ ಆಗಿ ಆಯ್ಕೆ ಮಾಡಬಹುದು ಅಥವಾ ನೀವು ವೈಯಕ್ತಿಕ ಫೋಟೋವನ್ನು ಸಹ ಆಯ್ಕೆ ಮಾಡಬಹುದು.
* ಮುಂದೆ, ಹೆಡರ್ ಚಿತ್ರದ ಥೀಮ್ ಬಣ್ಣದೊಂದಿಗೆ ಹೋಗಲು ನೀವು ಆಯ್ಕೆ ಮಾಡಬಹುದು ಅಥವಾ ನಿಮ್ಮ ಇಚ್ಛೆಯಂತೆ ನೀವು ಅದನ್ನು ಹೊಂದಿಸಬಹುದು. ಗಮನಿಸಿ, ಹಿನ್ನೆಲೆ ಬಣ್ಣವು ನೀವು ಆಯ್ಕೆ ಮಾಡಿದ ಥೀಮ್ ಬಣ್ಣವನ್ನು ಅವಲಂಬಿಸಿ.
ಚೀನಾ ಡೆವಲಪರ್ಗೆ ಸೇರಿದ 100ಕ್ಕೂ ಹೆಚ್ಚು ಆಪ್‌ಗಳಿಗೆ ನಿಷೇಧ!..ಕಾರಣ ಗಂಭೀರ!! | Google removing 100 apps from Chinese developer - Kannada Gizbot
ಚೀನಾ ಡೆವಲಪರ್ಗೆ ಸೇರಿದ 100ಕ್ಕೂ ಹೆಚ್ಚು ಆಪ್‌ಗಳಿಗೆ ನಿಷೇಧ!..ಕಾರಣ ಗಂಭೀರ!!
ಶಂಕಿತ ಸೈಬರ್ ದಾಳಿ ಹಾಗೂ ಡೇಟಾ ಉಲ್ಲಂಘನೆ ಸಾಧ್ಯತೆ ಹಿನ್ನೆಲೆಯಲ್ಲಿ ಚೀನಿನಾದ ಪ್ರಖ್ಯಾತ ಡೆವಲಪರ್ಗೆ ಸೇರಿದ 100ಕ್ಕೂ ಹೆಚ್ಚು ಮೊಬೈಲ್ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಈಗಾಗಲೇ 40 ಆಪ್ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದ್ದು, ಉಳಿದ ಆಪ್‌ಗಳಿಗೂ ನಿಷೇಧವಾಗಲಿದೆ ಎಂದು ಹೇಳಲಾಗಿದೆ.
ಹೌದು, ಚೀನಾದ ಜನಪ್ರಿಯ ಡೆವಲಪರ್ ಡಿಒ ಗ್ಲೋಬಲ್ ಕಂಪೆನಿಯನ್ನು ಗೂಗಲ್ ಕಂಪೆನಿ ನಿಷೇಧಿಸುವ ಉದ್ದೇಶವನ್ನು ಹೊಂದಿದೆ ಬುಜ್ ಪೀಡ್ ನ್ಯೂಸ್ ಇಂದು ವರದಿ ಮಾಡಿದೆ. ಡಿಒ ಗ್ಲೋಬಲ್ ಕಂಪೆನಿಯ ಆಪ್‌ಗಳಿಂದ ಉಲ್ಲಂಘನೆ ಕಂಡುಬಂದಿರುವುದರಿಂದ 250 ದಶಲಕ್ಷಕ್ಕಿಂತ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಆಪ್‌ಗಳು ಡಿಲೀಟ್ ಆಗುತ್ತಿವೆ ಎನ್ನಲಾಗಿದೆ.
ಫ್ರಖ್ಯಾತ ಮಾಧ್ಯಮ ವರದಿಗಳ ಪ್ರಕಾರ, ಡಿಒ ಗ್ಲೋಬಲ್ ಕಂಪೆನಿಯ ಆಪ್‌ಗಳು ಜಾಹಿರಾತು ರಹಿತ ಎಂದು ಹೇಳಿಕೊಂಡರೂ ಜಾಹಿರಾತುಗಳನ್ನು ಪ್ರಕಟಿಸುತ್ತಿವೆ. ಆದರೆ, ಇಲ್ಲಿ ಮುಖ್ಯವಾಗಿ ತಿಳಿಯಬೇಕಾದದ್ದು ಏನೆಂದರೆ, ಡಿಒ ಗ್ಲೋಬಲ್ ಕಂಪೆನಿಯ ಹೆಚ್ಚು ಆಪ್‌ಗಳು ಆಟೋಮ್ಯಾಟಿಕ್ ಆಗಿ ಜಾಹಿರಾತುಗಳನ್ನು ಕ್ಲಿಕ್ ಮಾಡಿಕೊಳ್ಳುತ್ತಿದ್ದವು ಎಂಬ ಗಂಭೀರ ಆರೋಪ ಎದುರಾಗಿದೆ.
ಹಾಗಾಗಿ, ದೈತ್ಯ ಸರ್ಚ್ ಇಂಜಿನ್ ಗೂಗಲ್, ಇಂಟರ್ನೆಟ್ ದೈತ್ಯ ಜಾಹೀರಾತು ಉತ್ಪನ್ನಗಳಿಗೆ ನಿಷೇಧ ವಿಸ್ತರಿಸಿದೆ. ಜಾಗತಿಕ ಅಪ್ಲಿಕೇಶನ್‌ಗಳು ಗೂಗಲ್‌ನ AdMob ನೆಟ್‌ವರ್ಕ್ ಮೂಲಕ ಖರೀದಿಸಲು ಜಾಹೀರಾತಿನ ಪಟ್ಟಿಯನ್ನು ಒದಗಿಸುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಪ್ಲೇ ಸ್ಟೋರ್ನಿಂದ ತೆಗೆದುಹಾಕುವಿಕೆಯು ಅತಿದೊಡ್ಡ ನಿಷೇಧದಲ್ಲೊಂದನ್ನು ಗುರುತಿಸುತ್ತದೆ.
ಜಾಹೀರಾತು ವೇದಿಕೆ ಮೂಲಕ ಸುಮಾರು 800 ದಶಲಕ್ಷ ಬಳಕೆದಾರರನ್ನು ತಲುಪುತ್ತಿರುವ ಆಪ್‌ಗಳ ದುರುದ್ದೇಶಪೂರಿತ ವರ್ತನೆಗಳನ್ನು ಚುರುಕುನಿಂದ ತನಿಖೆ ಮಾಡುತ್ತೇವೆ. ಸೈಬರ್ ಉಲ್ಲಂಘನೆ ಕಂಡುಬಂದರೆ ಮತ್ತಷ್ಟು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪೆನಿ ವಕ್ತಾರರು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದನ್ನು ನಾವು ನೋಡಬಹುದು.
Google removing 100 apps from Chinese developer to ward off cyberattacks. to know more visit to kannada.gizbot.com
ಶೈಕ್ಷಣಿಕವಾಗಿ ಉತ್ತಮವಾಗಿರಲು ಜ್ಯೋತಿಷ್ಯದ ಪರಿಹಾರಗಳು | Astrological Remedies For Good Academic Performance - Kannada BoldSky
ಶೈಕ್ಷಣಿಕವಾಗಿ ಉತ್ತಮವಾಗಿರಲು ಜ್ಯೋತಿಷ್ಯದ ಪರಿಹಾರಗಳು
| Updated: Thursday, February 28, 2019, 16:44 [IST]
ಶಿಕ್ಷಣವೆನ್ನುವುದು ಜೀವನದಲ್ಲಿ ಅತೀ ಅಗತ್ಯವಾಗಿ ಬೇಕೇಬೇಕು. ಶಿಕ್ಷಣವಿಲ್ಲದ ವ್ಯಕ್ತಿಯನ್ನು ಸಮಾಜದಲ್ಲಿ ಕೂಡ ಕಡೆಗಣಿಸಲಾಗುತ್ತದೆ. ಹೀಗಾಗಿ ಶಿಕ್ಷಣವಿದ್ದರೆ ಆಗ ಸ್ವತಂತ್ರವಾಗಿ ಬದುಕಬಹುದು. ಶಿಕ್ಷಣವೆಂದರೆ ಇಂದಿನ ದಿನಗಳಲ್ಲಿ ಅದು ಐಷಾರಾಮಿ ಜೀವನದಂತೆ ಆಗಿದೆ. ಸಾಕಷ್ಟು ದುಡ್ಡು ಖರ್ಚು ಮಾಡಿದರೆ ಆಗ ಒಳ್ಳೆಯ ಶಿಕ್ಷಣ ಸಿಗಲು ಸಾಧ್ಯವಿದೆ. ಅಷ್ಟು ಸುಲಭವಾಗಿ ಜೀವನದಲ್ಲಿ ಏನೂ ಸಿಗದು ಮತ್ತು ಜೀವನದಲ್ಲಿ ಯಾವುದನ್ನೂ ನಾವು ಲಘುವಾಗಿ ಪರಿಗಣಿಸಬಾರದು. ಇದರಿಂದಾಗಿ ಕಠಿಣ ಪರಿಶ್ರಮ ಎನ್ನುವುದು ಅತೀ ಅಗತ್ಯವಾಗಿರುವುದು. ಇದರೊಂದಿಗೆ ಶಿಕ್ಷಣದಲ್ಲಿ ಮುಂದುವರಿಯಬೇಕು ಎನ್ನುವ ಬದ್ಧತೆ ಕೂಡ ಇರಬೇಕು. ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ ಎಂದು ಪ್ರತಿಯೊಂದು ಹಂತದಲ್ಲೂ ವಿದ್ಯಾರ್ಥಿಗಳಿಗೆ ಹಿರಿಯರು ಹೇಳುತ್ತಿರುತ್ತಾರೆ. ಅದೇ ರೀತಿಯಾಗಿ ಯಶಸ್ಸಿಗೆ ಸ್ವಲ್ಪ ಮಟ್ಟದ ಅದೃಷ್ಟವು ಬೇಕು ಎಂದು ಹಿರಿಯರು ಹೇಳುವುದಿಲ್ಲವೇ?
ಕೆಲವೊಂದು ಸಲ ಕಠಿಣ ಪರಿಶ್ರಮವಿದ್ದರೂ ಅದರಿಂದ ಯಶಸ್ಸು ಸಿಗುವುದಿಲ್ಲ. ಯಾಕೆಂದರೆ ವಿದ್ಯಾರ್ಥಿಗೆ ತಾನು ಕಲಿತಿರುವುದು ಪರೀಕ್ಷೆ ವೇಳೆಗೆ ಮರೆತು ಹೋಗಿರುವುದು. ತುಂಬಾ ಚುರುಕಾಗಿರುವಂತಹ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬೀಳುವರು. ಇನ್ನು ಕೆಲವು ವಿದ್ಯಾರ್ಥಿಗಳಿಗೆ ಆರಂಭದ ವರ್ಷಗಳಲ್ಲಿ ಹೆಚ್ಚಿನ ಆಸಕ್ತಿಯು ಇರುವುದಿಲ್ಲ. ಆದರೆ ಪದವಿ ಕೊನೆಗೊಳ್ಳುತ್ತಿರುವಂತೆ ಅವರಲ್ಲಿ ಆಸಕ್ತಿ ಬಂದು ಇನ್ನಷ್ಟು ಪರಿಶ್ರಮ ವಹಿಸುವರು.
ಇದರ ಹಿಂದೆ ಹಲವಾರು ರೀತಿಯ ಕಾರಣಗಳು ಇರಬಹುದು. ಮುಖ್ಯವಾಗಿ ಸುತ್ತಲಿನ ವಾತಾವರಣ, ಸ್ನೇಹಿತರ ಬಳಗ ಅಥವಾ ಶಿಕ್ಷಕರು ಹಾಗೂ ವಿದ್ಯಾರ್ಥಿ ನಡುವಿನ ಹೊಂದಾಣಿಕೆ ಹೀಗೆ ಹಲವಾರು. ಅದಾಗ್ಯೂ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವೊಂದು ಸಲ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಇರುವಂತಹ ಗ್ರಹಗತಿಯ ಪರಿಣಾಮವಾಗಿ ವಿದ್ಯಾಭ್ಯಾಸದಲ್ಲಿ ಆಸಕ್ತಿಯು ಕಡಿಮೆಯಾಗುವುದು ಮತ್ತು ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ನೀಡಲು ಕಾರಣವಂತೆ.
ಇದಕ್ಕೆ ಪರಿಹಾರ ಏನು ಎನ್ನುವ ಪ್ರಶ್ನೆಯು ಖಂಡಿತವಾಗಿಯೂ ಬರುವುದು. ಇದರ ಬಗ್ಗೆ ನೀವು ಚಿಂತೆ ಮಾಡಬೇಡಿ. ಈ ಲೇಖನದಲ್ಲಿ ಕೊಟ್ಟಿರುವ ಕೆಲವೊಂದು ಕ್ರಮಗಳನ್ನು ನೀವು ಪಾಲಿಸಿಕೊಂಡು ಹೋದರೆ ಆಗ ವಿದ್ಯಾಭ್ಯಾಸದಲ್ಲಿ ಆಸಕ್ತಿ ಬರುವುದು ಅಥವಾ ವಿದ್ಯಾರ್ಥಿಯ ಪ್ರದರ್ಶನವು ಸುಧಾರಣೆಯಾಗುವುದು. ಇದರ ಬಗ್ಗೆ ನೀವು ಮುಂದಕ್ಕೆ ಓದಿಕೊಳ್ಳಿ.
ಸರಸ್ವತಿ ದೇವಿಯನ್ನು ಪೂಜಿಸಿ
ನೀವು ಓದಲು ಕುಳಿತುಕೊಳ್ಳುವ ಮೊದಲು ಸರಸ್ವತಿ ದೇವಿಯ ಫೋಟೊದ ಎದುರು ಅಗರಬತ್ತಿ ಹಚ್ಚಿಟ್ಟು ಪ್ರಾರ್ಥನೆ ಮಾಡಿ. ಇದೇ ವೇಳೆ ನೀವು ಓಂ ಐಮ್ ಸರಸ್ವತಿಯೇ ನಮಃ ಮಂತ್ರ ಪಠಿಸಿ.
ಗುರುವಿಗೆ ಗೌರವ ನೀಡಿ
ಗುರು ಗ್ರಹವನ್ನು ಗುರು ಎಂದು ಕರೆಯಲಾಗುತ್ತದೆ ಮತ್ತು ಇದು ಬೃಹಸ್ಪತಿ ದೇವರಿಗೆ ಸಂಬಂಧಿಸಿದ್ದಾಗಿದೆ. ನಾವು ಗುರು(ಶಿಕ್ಷಕ)ವಿಗೆ ಗೌರ ಸಲ್ಲಿಸಿದರೆ ಆಗ ಬ್ರಹಸ್ಪತಿ ದೇವರು ಕೂಡ ಒಲಿಯುವರು ಎಂದು ನಂಬಲಾಗಿದೆ. ಗುರು ಗ್ರಹವು ಸಾಮಾಜಿಕ ಗೌರವ ಮತ್ತು ಅದೃಷ್ಟ ಪಡೆಯಲು ನೆರವಾಗುವುದು.
ಗಾಯತ್ರಿ ಮಂತ್ರ ಪಠಿಸಿ
ಗಾಯತ್ರಿ ಮಂತ್ರವು ತುಂಬಾ ಶಕ್ತಿಶಾಲಿ ಮಂತ್ರವಾಗಿದೆ. ಇದನ್ನು ನೀವು ನಿಯಮಿತವಾಗಿ ಪಠಿಸಿದರೆ ಆಗ ಏಕಾಗ್ರತೆ ಮತ್ತು ನೆನಪಿನ ಶಕ್ತಿಯು ಹೆಚ್ಚಾಗುವುದು.
Most Read: ಭಾರತದ ಈ ಐದು ಸ್ಥಳಗಳಲ್ಲಿ ಭಾರತೀಯರಿಗೇ ಪ್ರವೇಶವಿಲ್ಲ!
ಅಶ್ವಗಂಧದ ಬೇರು ಬಳಸಿ
ಪರೀಕ್ಷೆಗೆ ಮೊದಲು ಹೆಚ್ಚಿನ ವಿದ್ಯಾರ್ಥಿಗಳಿಗೆ ಆತಂಕವು ಕಾಡುವುದು. ಇಂತಹ ವಿದ್ಯಾರ್ಥಿಗಳು ಅಶ್ವಗಂಧದು ಬೇರನ್ನು ತೆಗೆದುಕೊಂಡು ಅದನ್ನು ಕುತ್ತಿಗೆ ಅಥವಾ ಮೊಣಕೈ ಭಾಗಕ್ಕೆ ಕಟ್ಟಿಕೊಳ್ಳಬೇಕು. ಪರೀಕ್ಷೆಗೆ 21 ದಿನಕ್ಕೆ ಮೊದಲು ನೀವು ಹೀಗೆ ಮಾಡಬೇಕು.
ಹಸಿರು ದಾರ ಕಟ್ಟಿಕೊಳ್ಳಿ
ಹಸಿರು ಬಣ್ಣವು ನೆನಪಿನ ಶಕ್ತಿ ಹೆಚ್ಚು ಮಾಡುವುದು. ಹೀಗಾಗಿ ಹಸಿರು ಬಣ್ಣದ ದಾರವನ್ನು ಹೆಬ್ಬೆರಳಿನ ಸುತ್ತಲು ಕಟ್ಟಿಕೊಂಡರೆ ಅದರಿಂದ ನೆನಪಿನ ಶಕ್ತಿಯು ಸುಧಾರಣೆ ಆಗುವುದು.
ಗಣಪತಿ ಮಂದಿರದಲ್ಲಿ ಪೂಜೆ ಸಲ್ಲಿಸಿ
ಹಸಿರು ಬಣ್ಣದ ಬಟ್ಟ ತೆಗೆದುಕೊಳ್ಳಿ. 21 ಗರಿಕೆ ಹುಲ್ಲು, ಸ್ವಲ್ಪ ಹೆಸರು ಬೇಳೆ ಮತ್ತು ಐದು ಹಸಿರು ಏಲಕ್ಕಿ ತೆಗೆದುಕೊಳ್ಳಿ ಮತ್ತು ಅದನ್ನು ಎಲ್ಲವನ್ನು ಜತೆಯಾಗಿ ಸೇರಿಸಿ, ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಇದನ್ನು ಬುಧವಾರ ಗಣಪತಿ ಮಂದಿರಕ್ಕೆ ಹೋಗಿ ಅರ್ಪಣೆ ಮಾಡಿ.
ಕರ್ಪೂರ ಮತ್ತು ಪಟಿಕವನ್ನು ಕಿಸೆಯಲ್ಲಿ ಇಟ್ಟುಕೊಳ್ಳಿ
ಸುತ್ತಲಿನ ನಕಾರಾತ್ಮಕ ಶಕ್ತಿಯು ಅಡೆತಡೆ ಉಂಟು ಮಾಡುವುದು ಮತ್ತು ಪರೀಕ್ಷೆಯ ಹಾಲ್ ನಲ್ಲಿ ಸರಿಯಾಗಿ ಗಮನ ಕೇಂದ್ರೀಕರಿಸಲು ಬಿಡುವುದಿಲ್ಲ. ಇದಕ್ಕೆ ಪರಿಹಾರವಾಗಿ ವಿದ್ಯಾರ್ಥಿಯು ಕಿಸೆಯಲ್ಲಿ ಕರ್ಪೂರ ಮತ್ತು ಪಟಿಕವನ್ನು ಇಟ್ಟುಕೊಳ್ಳಬೇಕು. ಇದು ನಕಾರಾತ್ಮಕತೆ ದೂರ ಮಾಡಿ, ಏಕಾಗ್ರತೆ ತಂದುಕೊಡುವುದು.
ಬುಧವಾರ ಗೋವಿಗೆ ಆಹಾರ ನೀಡಿ
ಬುಧವಾರದಂದು ಗೋವಿಗೆ ಒಂದು ಕೆಜಿ ಹಸಿರು ಮೇವನ್ನು ಆಹಾರವಾಗಿ ನೀಡಿ. ಸತತ ಮೂರು ವಾರಗಳ ತನಕ ನೀವು ಇದನ್ನು ಗೋವಿಗೆ ನೀಡಿ.
Most Read: ಇವೆಲ್ಲಾ ಅದೃಷ್ಟವನ್ನೇ ಬದಲಾಯಿಸುವ ಸಂಖ್ಯೆ!, ನಿಮ್ಮದೂ ಪರಿಶೀಲಿಸಿಕೊಳ್ಳಿ
ಓದುವ ಕೊಠಡಿಯ ಗೋಡೆಗಳಿಗೆ ಬಣ್ಣ ಹಚ್ಚಿಕೊಳ್ಳಿ
ಹಳದಿ, ಕಿತ್ತಳೆ ಅಥವಾ ಹಸಿರು ಬಣ್ಣವನ್ನು ಓದು ಕೊಠಡಿಗೆ ಹಚ್ಚಿ. ಇದು ಏಕಾಗ್ರತೆಗೆ ಒಳ್ಳೆಯದು.
ಮೂಗುತಿ ಧರಿಸಿ
ಮೂಗಿಗೆ ಯಾವುದೇ ರೀತಿಯ ಲೋಹದ ಆಭರಣ ಅಥವಾ ಮೂಗಿಗೆ ರಿಂಗ್ ನ್ನು ಧರಿಸುವುದು ಅತೀ ಅಗತ್ಯವಾಗಿದೆ. ಇದರಿಂದ ರಾಶಿಚಕ್ರಗಳು ಒಳ್ಳೆಯ ಫಲಿತಾಂಶ ನೀಡುವುದು. ಹುಡುಗರು ಗಾಜಿನ ಬಾಟಲಿಯಲ್ಲಿ ಬೆಳ್ಳಿ ದಾರ ಇಡಹುದು ಅಥವಾ ಇದನ್ನು ಯಾವಾಗಲೂ ತಮ್ಮಲ್ಲಿ ಇಟ್ಟುಕೊಳ್ಳಬಹುದು. ಇಂತಹ ಕ್ರಮ ಕೈಗೊಳ್ಳುವ ಮೊದಲು ನೀವು ಜ್ಯೋತಿಷಿಯ ಸಲಹೆ ಪಡೆದುಕೊಳ್ಳಿ.
ಓದುವ ಟೇಬಲ್ ಮೇಲೆ ಮಣ್ಣಿನ ಮಡಕೆ ಇಟ್ಟುಕೊಳ್ಳಿ
ಒಂದು ಮಣ್ಣಿನ ಮಡಕೆಯನ್ನು ಇಟ್ಟುಕೊಳ್ಳಿ ಮತ್ತು ಅದನ್ನು ಹುಡಿ ಸಕ್ಕರೆ ಹಾಕಿ ತುಂಬಿಸಿ. ಇದನ್ನು ನೀವು ಓದುವ ಟೇಬಲ್ ಮೇಲೆ ಇಟ್ಟುಕೊಳ್ಳಿ. ಇರುವೆ ಅಥವಾ ಬೇರೆ ಯಾವುದೇ ಕೀಟಗಳು ಇದರತ್ತ ಬರದಂತೆ ನೋಡಿಕೊಳ್ಳಿ.
ಈ ದೋಹಾ ಮತ್ತು ಮಂತ್ರಗಳನ್ನು ಪಠಿಸಿ
ಈ ಕೆಳಗಿನ ಮಂತ್ರವನ್ನು ಪ್ರತಿನಿತ್ಯ ಅಥವಾ ಬುಧವಾರ 108 ಮಣಿಗಳ ಜಪಮಾಲೆ ಹಿಡಿದುಕೊಂಡು ಪಠಿಸಿ.
ಓಂ ಬೂಮ್ ಬುದ್ಧಾಯೆ ನಮಃ
ಪ್ರತೀ ಬುಧವಾರದಂತೆ ನೀವು ಮಲಗುವ ಮೊದಲು 108 ಸಲ ದೋಹಾವನ್ನು ಪಠಿಸಬೇಕು.
ಛಿತಿ ಪವಕ ಗಗನ್ ಸಮೀರಾ, ಪಂಚ ರಚಿತ್ ಅತಿ ಅಧಮ್ ಸರೀಸಾ
ತುಳಸಿಯ 108 ದಳಗಳನ್ನು ಬಳಸಿಕೊಂಡು ಪ್ರತಿಯೊಂದು ಬುಧವಾರ ನೀವು ಈ ಕೆಳಗಿನ ಮಂತ್ರವನ್ನು ಪಠಿಸಬೇಕು.
ಗುರು ಗ್ರೇಹ ಗಯೆ ಪಧಾನ್ ರಘು ರಾಯಿ, ಅಲ್ಪ ಕಾಲ ವಿದ್ಯಾ ಸಬ್ ಪಾಯಿ.