text stringlengths 0 61.5k |
|---|
ಬಳ್ಳಾರಿ,ಏ.30:ರಾಜ್ಯದಲ್ಲಿ ಕೋವಿಡ್ ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 12ರವರೆಗೆ ಹೊರಡಿಸಲಾಗಿರುವ ನಿರ್ಬಂಧಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. |
ಕೋವಿಡ್‍ಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು,ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ನಡೆದ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಅವರು ಸೂಚನೆ ನೀಡಿದರು. |
ಹೊರಡಿಸಲಾಗಿರುವ ನಿಬರ್ಂಧದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು;ಅಂದಾಗ ಮಾತ್ರ ಕೋವಿಡ್ ಕಡಿಮೆಯಾಗಲು ಸಾಧ್ಯ.ಇಲ್ಲದಿದ್ದಲ್ಲಿ ಇನ್ನೂ 8-10 ದಿನ ಲಾಕ್‍ಡೌನ್ ಮಾಡಬೇಕಾಗುತ್ತದೆ;ಇದರಿಂದ ಜನರಿಗೆ ಅನಗತ್ಯ ತೊಂದರೆಯಾಗಲಿದ್ದು,ಇದಕ್ಕೆ ಅಸ್ಪದ ಮಾಡಿಕೊಡಬೇಡಿ ಎಂದು ಅವರು ಹೇಳಿದರು. |
ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಎನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅವುಗಳನ್ನು ಕೈಗೊಳ್ಳಿ;ಸರಕಾರದಿಂದ ತಮಗೆ ಯಾವೆಲ್ಲವುಗಳ ಅಗತ್ಯವಿದೆಯೋ ಅವುಗಳನ್ನೆಲ್ಲ ಒದಗಿಸಲಾಗುವುದು ಎಂದು ಅವರು ಹೇಳಿದರು. |
*ಅನವಶ್ಯಕ ರೆಮ್ಡಿಸಿವಿರ್ ಬಳಕೆ ಸಲ್ಲದು: ಕೆಲವು ಜಿಲ್ಲೆಗಳಲ್ಲಿ ಅನವಶ್ಯಕವಾಗಿ ರೆಮ್ಡೆಸಿವಿರ್ ಲಸಿಕೆಗಳನ್ನು ರೋಗಿಗಳಿಗೆ ನೀಡುತ್ತಿರುವುದು ಕಂಡುಬಂದಿದ್ದು, ಇದು ಸರಿಯಾದ ಕ್ರಮವಲ್ಲ. ಅವಶ್ಯಕತೆ ಇರುವವರಿಗೆ ಮಾತ್ರ ನೀಡಿ ಎಂದು ಸೂಚನೆ ನೀಡಿದರು. |
ನಿಯಮಾನುಸಾರ ರೆಮ್ಡೆಸಿವಿರ್ ನೀಡಲು ಕ್ರಮವಹಿಸಿ;ಖಾಸಗಿ ವೈದ್ಯರಿಗೆ ವಿನಾಕಾರಣ ರೆಮ್ಡೆಸಿವಿರ್ ಇಂಜೆಕ್ಷನ್ ಬೇಡಿಕೆವಿರಿಸದಂತೆ ಸಭೆ ನಡೆಸಿ ಸೂಚನೆ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಹಾಗೂ ಡಿಸಿಗಳಿಗೆ ಸೂಚಿಸಿದರು. |
ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ರವಿಕುಮಾರ್ ಅವರು ಮಾತನಾಡಿ, 14 ದಿನಗಳ ಲಾಕ್‍ಡೌನ್ ಸಂದರ್ಭದಲ್ಲಿ ಲಕ್ಷಾಂತರ ಜನರು ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಬಂದಿದ್ದು,ಅವರನ್ನು ಪತ್ತೆಹಚ್ಚಿ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿರುವ ಕೋವಿಡ್ ಟಾಸ್ಕ್‍ಫೋರ್ಸ್‍ಗಳನ್ನು ಬಲಪಡಿಸಬೇಕು. ನಿರ್ಬಂಧ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದರು. |
ಕೋವಿಡ್ ವ್ಯಾಪಕವಾಗಿ ಹರಡದಂತೆ ಕ್ರಮವಹಿಸಬೇಕು ಮತ್ತು ಕೋವಿಡ್ ಕೇರ್ ಸೆಂಟರ್‍ಗಳನ್ನು ಸಿದ್ಧತೆ ಮಾಡಿಟ್ಟುಕೊಳ್ಳಿ ಎಂದು ಸೂಚಿಸಿದ ಅವರು ರೋಗಲಕ್ಷಣವಿರುವವರು ಮತ್ತು ಸಂಪರ್ಕಿತರನ್ನು ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಿ ಎಂದರು. |
ಯಾವ ಸಿಬ್ಬಂದಿಗಳ ಅವಶ್ಯಕತೆಯಿದೆಯೋ ಆ ಇಲಾಖೆಯ ಸಿಬ್ಬಂದಿಗಳನ್ನು ಕೋವಿಡ್ ಕಾರ್ಯಕ್ಕೆ ಬಳಸಿಕೊಳ್ಳಿ;ಈಗಾಗಲೇ ಈ ಕುರಿತು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. |
ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಕಲಬುರಗಿ ಜಿಲ್ಲೆಯ ಕೋವಿಡ್ ಸ್ಥಿತಿಗತಿ ವಿವರಿಸುವ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಡಳಿತ ಆಕ್ಸಿಜನ್ ನೆರವನ್ನು ಕಲ್ಪಿಸುವ ಮೂಲಕ ನೆರವಿಗೆ ಧಾವಿಸಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. |
ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಜಿಲ್ಲೆಯ ಕೋವಿಡ್ ಸ್ಥಿತಿಗತಿ,ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. |
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ,ಡಾ.ಸಿ.ಎನ್.ಅಶ್ವತ್‍ನಾರಾಯಣ, ಕಂದಾಯ ಸಚಿವ ಆರ್.ಅಶೋಕ, ಆರೋಗ್ಯ ಸಚಿವ ಡಾ.ಸುಧಾಕರ್ ಸೇರಿದಂತೆ ಬಳ್ಳಾರಿಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ,ಎಸ್ಪಿ ಸೈದುಲು ಅಡಾವತ್ ಮತ್ತಿತರರು ಇದ್ದರು. |
ಮಂಡ್ಯ: ಅಂಬರೀಷ್ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ 5 ಕ್ವಿಂಟಾಲ್ ಧಾರವಾಡ ಪೇಡಾ! | Rebel star Ambareesh Fan sent 5 Quintals Dharwad peda to Mandya | Kannadaprabha.com |
Monday, July 22, 2019 5:17 PM IST |
ಮಂಡ್ಯ: ಅಂಬರೀಷ್ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ 5 ಕ್ವಿಂಟಾಲ್ ಧಾರವಾಡ ಪೇಡಾ! |
Published: 29 May 2019 01:10 PM IST |
ಧಾರವಾಡ ಪೇಡ(ಸಾಂದರ್ಭಿಕ ಚಿತ್ರ) |
ಮಂಡ್ಯ: ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ, ಅಂಬರೀಷ್ ಅಭಿಮಾನಿಯೊಬ್ಬರು ಧಾರವಾಡದಿಂದ ಬರೋಬ್ಬರಿ 500 ಕೆಜಿ ಪೇಡಾವನ್ನು ಮಂಡ್ಯಕ್ಕೆ ಕಳುಹಿಸುತ್ತಿದ್ದಾರೆ. |
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಅಲ್ಲಿ ನಡೆದ ಜಿದ್ದಾಜಿದ್ದಿಯಲ್ಲಿ ಸುಮಲತಾ ಗೆಲುವು ಸಾಧಿಸಿದ್ದರು. |
ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ ಸ್ವಾಭಿಮಾನ ಸಮಾವೇಶ ಹಾಗೂ ಅಂಬರೀಶ್ ಜನ್ಮದಿನದ ಅಂಗವಾಗಿ ಐದು ಕ್ವಿಂಟಾಲ್ ಧಾರವಾಡ ಪೇಡಾವನ್ನು ಉದ್ಯಮಿ ನಾರಾಯಣ ಕಲಾಲ್ ರವಾನಿಸಿದ್ದಾರೆ. ಇದಕ್ಕಾಗಿ ಅವರು 2.10 ಲಕ್ಷ ರು ಹಣ ವ್ಯಯಿಸಿದ್ದಾರೆ. |
ಬಾಬುಸಿಂಗ್ ಠಾಕೂರ್ ಪೇಡಾ ಫ್ಯಾಕ್ಟರಿಯಲ್ಲಿ ತಯಾರಾಗಿರುವ ಪೇಡಾವನ್ನು ವಿಶೇಷ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿದ್ದು, ಈಗಾಗಲೇ ಮಂಡ್ಯ ತಲುಪಿವೆ. |
Topics : Dharwad peda, Mandya, Ambhareesh Fan, Birthday, ಧಾರವಾಡ ಪೇಡ, ಮಂಡ್ಯ, ಅಂಬರೀಷ್ ಅಭಿಮಾನಿ, ಹುಟ್ಟುಹಬ್ಬ |
ಅಮೆರಿಕ: ಗುಂಡಿನ ದಾಳಿಗೆ 30 ಮಂದಿ ಬಲಿ | Prajavani |
ಟೆಕ್ಸಾಸ್, ಡೇಟನ್ ನಗರಗಳಲ್ಲಿ ಬಂದೂಕುಧಾರಿಗಳಿಂದ ಕೃತ್ಯ l ಒಟ್ಟು 42 ಜನರಿಗೆ ಗಾಯ |
ವಾಷಿಂಗ್ಟನ್/ಹ್ಯೂಸ್ಟನ್ (ಪಿಟಿಐ): ಅಮೆರಿಕದಲ್ಲಿ ಈ ವಾರಾಂತ್ಯ ಕರಾಳ ವಾಗಿ ಮಾರ್ಪಟ್ಟಿದ್ದು, ಶನಿವಾರ, ಭಾನುವಾರ ನಡೆದ ಎರಡು ಪ್ರತ್ಯೇಕ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. |
ಟೆಕ್ಸಾಸ್‌ನ ದಕ್ಷಿಣ ಗಡಿಭಾಗದಲ್ಲಿರುವ ಎಲ್ ಪಾಸೊ ನಗರದಲ್ಲಿ ಶನಿವಾರ ಮೊದಲ ದಾಳಿ ನಡೆದಿದ್ದು, ಜನ ನಿಬಿಡವಾಗಿದ್ದ ವಾಲ್‌ಮಾರ್ಟ್ ಸ್ಟೋರ್‌ನಲ್ಲಿ 21 ವರ್ಷದ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ. ಈ ಪ್ರಕರಣದಲ್ಲಿ 20 ಮಂದಿ ಮೃತಪಟ್ಟು, 26 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಒಂಬತ್ತು ಜನರ ಸ್ಥಿತಿ ಗಂಭೀರವಾಗಿದೆ. 'ದಾಳಿಕೋರನನ್ನು ಪ್ಯಾಟ್ರಿಕ್ ಕ್ರುಸಿಯಸ್ ಎಂದು ಗುರುತಿಸಿದ್ದು, ಸ್ಟೋರ್ ... |
ಸಾಕ್ಷ್ಯ ಸಂಗ್ರಹ: 'ದಾಳಿ ವೇಳೆ ಸ್ಥಳದಲ್ಲಿದ್ದವರು ಸೆರೆಹಿಡಿದ ಚಿತ್ರಗಳು ಹಾಗೂ ವಿಡಿಯೊಗಳನ್ನು ಎಡಿಟ್ ಮಾಡದೆಯೇ ಮೂಲಸ್ವರೂಪದಲ್ಲಿಯೇ ತಮಗೆ ಸಲ್ಲಿಸಬೇಕು. ಇವುಗಳನ್ನು ಪರಿಶೀಲಿಸಲಾಗುತ್ತದೆ' ಎಂದು ಎಫ್‌ಬಿಐ ಅಧಿಕಾರಿಗಳು ಹೇಳಿದ್ದಾರೆ. |
ವಾರದಲ್ಲಿ ಎರಡನೇ ದಾಳಿ: ಅಮೆರಿಕದ ವಾಲ್‌ಮಾರ್ಟ್ ಸ್ಟೋರ್‌ನಲ್ಲಿ ಒಂದು ವಾರದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಮಂಗಳವಾರ ಮಿಸಿಸಿಪ್ಪಿಯ ಸೌಥ್ಏವನ್‌ನ ವಾಲ್‌ಮಾರ್ಟ್ ಸ್ಟೋರ್‌ನಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು. |
'ಎಲ್ ಪಾಸೊ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ನನ್ನ ಸಂತಾಪವಿದೆ' ಎಂದು ವಾಲ್‌ಮಾರ್ಟ್ ಸಿಇಒ ಡಗ್ ಮೆಕ್‌ಮಿಲನ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. |
ಓಹಿಯೊದ ಬಾರ್‌ನಲ್ಲಿ 2ನೇ ದಾಳಿ: ಡೇಟನ್‌ನ ಓರೆಗಾನ್ ಜಿಲ್ಲೆಯ ಓಹಿಯೊದ ಪ್ರಸಿದ್ಧ ಬಾರ್‌ನಲ್ಲಿ ಭಾನುವಾರ ಬೆಳಗಿನ ಜಾವ ಒಂದು ಗಂಟೆ ವೇಳೆಗೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, 9 ಜನರು ಸಾವನ್ನಪ್ಪಿದ್ದಾರೆ. 16 ಮಂದಿ ಗಾಯಗೊಂಡಿದ್ದಾರೆ. |
ಘಟನೆ ನಡೆದ ಸ್ಥಳದ ಸಮೀಪವೇ ಇದ್ದ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿದ್ದು, ಅಧಿಕಾರಿಗಳ ಗುಂಡೇಟಿಗೆ ಬಂದೂಕುಧಾರಿ ಮೃತಪಟ್ಟಿದ್ದಾನೆ. |
ಜನಾಂಗೀಯ ದ್ವೇಷ ಹಿನ್ನೆಲೆ |
'ಕ್ರುಸಿಯಸ್‌ಗೆ ಸೇರಿದ ಟ್ವಿಟರ್ ಖಾತೆ ಶನಿವಾರದಿಂದ ನಿಷ್ಕ್ರಿಯವಾಗಿದೆ. ಇದಕ್ಕೂ ಮೊದಲು ಈತ ಮಾಡಿರುವ ಪೋಸ್ಟ್‌ಗಳಲ್ಲಿ ಜನಾಂಗೀಯ ದ್ವೇಷದ ಸಂದೇಶಗಳಿವೆ. ವಲಸಿಗರು ಹಾಗೂ ಹಿಸ್ಪಾನಿಕ್ ಜನರು (ಕ್ಯೂಬಾ, ಮೆಕ್ಸಿಕನ್, ದಕ್ಷಿಣ ಅಥವಾ ಕೇಂದ್ರ ಅಮೆರಿಕ, ಸ್ಪೇನ್ ಮೂಲದವರು) ಟೆಕ್ಸಾಸ್ ಅನ್ನು ಆವರಿಸಿಕೊಂಡಿರುವುದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗುತ್ತಿದೆ ಎಂದು ಆತ ಬರೆದುಕೊಂಡಿದ್ದಾನೆ' ಎ... |
ಟ್ರಂಪ್‌ಗೆ ಪ್ರಶಂಸೆ!: ಕ್ರುಸಿಯಸ್ ತನ್ನ ಹಳೆಯ ಟ್ವೀಟ್‌ಗಳಲ್ಲಿ, ಟ್ರಂಪ್ ಅವರನ್ನು ಹಾಗೂ ನಿರ್ದಿಷ್ಟವಾಗಿ ಅಮೆರಿಕ–ಮೆಕ್ಸಿಕೊ ಗಡಿಗೆ ಗೋಡೆ ನಿರ್ಮಿಸುವ ಅವರ ನಿರ್ಣಯವನ್ನು ಪ್ರಶಂಸಿಸಿದ್ದಾನೆ. |
ಮದುವೆ ನಿರಾಕರಿಸಿದ ಸಹೋದರಿಯರು- ಮಚ್ಚಿನಿಂದ ಹಲ್ಲೆಗೈದ ಅತ್ತೆ ಮಗ - Public TV |
– ಓದಿರುವ ನಾನು ನಿನ್ನ ತಮ್ಮನನ್ನು ಮದುವೆಯಾಗಲ್ಲ |
ಹಾಸನ : ಮದುವೆಯಾಗಲು ನಿರಾಕರಿಸಿದ ಸಹೋದರಿಯರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಕುಂಚೇವು ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. |
Jayanth & Victoria, Wedding Ceremony 4/22/12 |
ಯೋಗಿತಾ (22) ಹಾಗೂ 17 ವರ್ಷದ ಅಪ್ರಾಪ್ತೆ ಗಂಭೀರವಾಗಿ ಗಾಯಗೊಂಡ ಸಹೋದರಿಯರಾಗಿದ್ದಾರೆ. ಗಾಯಾಳು ಸಹೋದರಿಯರು ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗರಾಜ್ ಆಲಿಯಾಸ್ ನಾಗ ಮಚ್ಚಿನಿಂದ ಹಲ್ಲೆ ಮಾಡಿರುವ ಆರೋಪಿಯಾಗಿದ್ದಾನೆ. |
ಕಳೆದ ಎರಡು ತಿಂಗಳ ಹಿಂದೆ ಈ ಇಬ್ಬರು ಸಹೋದರಿಯರ ತಂದೆ ಮೃತಪಟ್ಟಿದ್ದರು. ಸಾವಾದ ಮನೆಯಲ್ಲಿ ಒಂದು ವರ್ಷದೊಳಗೆ ಶುಭಕಾರ್ಯ ಮಾಡಬೇಕೆಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಸಹೋದರಿಯರ ಸಂಬಂಧಿಯಾದ ನಾಗರಾಜ್, ಯುವತಿಯರ ತಾಯಿ ಹೇಮಲತ ಅವರ ಬಳಿ ಬಂದು ತನ್ನ ತಮ್ಮ ದಿನೇಶ್‍ಗೆ ಯೋಗಿತಾಳನ್ನು ಮದುವೆ ಮಾಡಿ ಕೊಡುವಂತೆ ಕೇಳಿದ್ದಾನೆ. ಮನೆಯ ಹಿರಿಯ ಮಗಳಾದ ನನ್ನ ಮೇಲೆ ಸಂಸಾರದ ಜವಾಬ್ದಾರಿ ಇದೆ ಸದ್ಯಕ್ಕೆ ನಾ... |
ಇಷ್ಟಕ್ಕೆ ಸುಮ್ಮನಾಗದ ನಾಗರಾಜ್ ನಿನ್ನ ತಂಗಿಯನ್ನಾದರೂ ನನ್ನ ತಮ್ಮನಿಗೆ ಮದುವೆ ಮಾಡಿಕೊಡು ಎಂದು ಒತ್ತಾಯಿಸಿದ್ದು, ಇದಕ್ಕೂ ಸಹೋದರಿಯರಿಬ್ಬರು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ನಾಗರಾಜ್ ಮಚ್ಚಿನಿಂದ ಸಹೋದರಿಯರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. |
ಈ ಘಟನೆ ಸಂಬಂಧ ಹಲ್ಲೆ ನಡೆಸಿದ ಆರೋಪಿ ನಾಗರಾಜ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಅಜ್ಜಿ ಪುಟ್ಟಮ್ಮ, ಸೋದರತ್ತೆ ಅಕ್ಕಮ್ಮನನ್ನು ಬಂಧಿಸಿದ್ದು, ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. |
ದೆಹಲಿ ಸಾಮೂಹಿಕ ಆತ್ಮಹತ್ಯೆ: ಪೋಸ್ಟ್ ಮಾರ್ಟಮ್ ವರದಿ ಏನು ಹೇಳುತ್ತೆ? | Delhi's Burari suicide case: Post mortem says 10 people died of hanging - Kannada Oneindia |
| Published: Wednesday, July 11, 2018, 15:42 [IST] |
ದೆಹಲಿ, ಜುಲೈ 11: ಕುತೂಹಲ ಕೆರಳಿಸಿರುವ ದೆಹಲಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ವರದಿಗಳು ಬಂದಿದ್ದು, ಹನ್ನೊಂದರಲ್ಲಿ 10 ಜನ ನೇಣು ಬಿಗಿದುಕೊಂಡೇ ಸತ್ತಿದ್ದಾರೆ ಎಂದು ವರದಿ ತಿಳಿಸಿದೆ. |
ಕುಟುಂಬದ ಹಿರಿಯ ಮಹಿಳೆ ನಾರಾಯಣ ದೇವಿ ಅವರ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. 10 ಜನರ ದೇಹದ ಮೇಲೂ ಯಾವುದೇ ರೀತಿಯ ಗಾಯದ ಗುರುತುಗಳು ಕಂಡು ಬಂದಿಲ್ಲವಾದ್ದರಿಂದ ಇದನ್ನು ಆತ್ಮಹತ್ಯೆ ಎಂದೇ ಪೋಸ್ಟ್ ಮಾರ್ಟಮ್ ವರದಿಗಳು ಹೇಳುತ್ತಿವೆ. |
ಆದರೆ ನಾರಾಯಣ ದೇವಿ(77)ಯವರ ದೇಹ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿತ್ತಾದ್ದರಿಂದ ಅವರದ್ದು ಸಹಜ ಸಾವು ಹೌದೋ, ಅಲ್ಲವೋ ಎಂಬ ತನಿಖೆ ನಡೆಯುತ್ತಿದೆ. ಅವರಿಗೆ ಸ್ಟೂಲ್ ಹತ್ತಲು ಸಾಧ್ಯವಾಗದ ಕಾರಣ ಅವರನ್ನು ಮನೆಯ ಸದಸ್ಯರೇ ಒಬ್ಬರು ಕತ್ತು ಹಿಡಿದು ಸಾಯಿಸಿ, ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. |
delhi new delhi suicide post mortem death ದೆಹಲಿ ನವದೆಹಲಿ ಆತ್ಮಹತ್ಯೆ ಸಾವು |
Delhi Burari mass suicide case: Post mortem of 10 of the 11 family members has come, Police say all 10 died of hanging and no injury marks are present on the bodies. Report of 11th and the eldest member Narayani Devi is awaited, her body was found on the floor unlike the other 10. |
ಜಂಬಳ್ಳಿಯಲ್ಲಿ ತಲಾತಲಾಂತರದಿಂದ ಆಚರಿಸುವ ಆರಾಧ್ಯ ದೈವ ಬಂಡಿ ಅಮ್ಮನವರ ಪೂಜಾ ಮಹೋತ್ಸವ | Malnad Times |
Home Hosanagara Ripponpet ಜಂಬಳ್ಳಿಯಲ್ಲಿ ತಲಾತಲಾಂತರದಿಂದ ಆಚರಿಸುವ ಆರಾಧ್ಯ ದೈವ ಬಂಡಿ ಅಮ್ಮನವರ ಪೂಜಾ ಮಹೋತ್ಸವ |
ರಿಪ್ಪನ್‌ಪೇಟೆ: ಅನಾದಿ ಕಾಲದಿಂದಲೂ ವಿಶಿಷ್ಯವಾಗಿ ವರ್ಷಕ್ಕೆ ಒಮ್ಮೆ ಪೂಜಿಸಲ್ಪಡುವ ಜಂಬಳ್ಳಿಯ ಆರಾಧ್ಯದೈವ ಬಂಡಿ ಅಮ್ಮನವರ ಪೂಜಾ ಮಹೋತ್ಸವವು ಹುಂಚದ ಶಾಂತಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಕಲಾ ಹೋಮ ಮತ್ತು ಪೂಜಾ ಕಂಕೈರ್ಯವು ಶ್ರದ್ದಾಭಕ್ತಿಯಿಂದ ಅಪಾರ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು. |
ಬೇಡಿದ ವರ ಕರುಣಿಸುವ ಬಂಡಿಯಮ್ಮ ದೇವಿ ವರ್ಷಕ್ಕೊಮ್ಮೆ ದೀಪಾವಳಿ ಸಂದರ್ಭದಲ್ಲಿ ಕಲ್ಲಿನ ಚಕ್ರದ ಬಂಡಿಯಲ್ಲಿ ದೇವಿಯನ್ನು ಪ್ರತಿಷ್ಟಾಪಿಸಿ ತಳಿರು ತೋರಣದೊಂದಿಗೆ ಹೂವಿನ ವಿಶೇಷ ಅಲಂಕಾರ ಮಾಡಿ ಮುತ್ತೈದೆಯರು ಮತ್ತು ಪುರುಷರು ಶ್ರದ್ಧಾ ಭಕ್ತಿಯಿಂದ ಪೂಜಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿ ಹರಿಕೆಯನ್ನು ಸಮರ್ಪಿಸುತ್ತಾರೆ. |
ವಿವಾಹವಾಗದವರು ಮತ್ತು ಸಂತಾನವಿಲ್ಲದವರು ಬಂಡಿ ಅಮ್ಮನವರಲ್ಲಿ ಪ್ರಾರ್ಥಿಸಿದರೆ ಬರುವ ವರ್ಷದಲ್ಲಿ ವಿವಾಹ ಮತ್ತು ಸಂತಾನ ಭಾಗ್ಯವನ್ನು ದಯಪಾಲಿಸುತ್ತಾಳೆಂಬ ನಂಬಿಕೆ ಭಕ್ತರದು. |
ಒಟ್ಟಾರೆಯಾಗಿ ಜಂಬಳ್ಳಿಯ ಬಂಡಿಯಮ್ಮ ದೇವಿಯ ಪೂಜಾ ಮಹೋತ್ಸವಕ್ಕೆ ದೂರದೂರುಗಳಿಂದ ಭಕ್ತರು ಪಾಲ್ಗೊಂಡು ಪೂಜಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಇಲ್ಲಿನ ದೇವಿಯ ವಿಶೇಷತೆಗೆ ಸಾಕ್ಷಿಯಾಗಿದೆ. |
ಜಂಬಳ್ಳಿಯ ಜೆ.ಎಂ.ಶಾಂತಕುಮಾರ್, ಗಾಯಿತ್ರಿ ಮುರುಗೇಂದ್ರಪ್ಪಗೌಡ, ಐಶ್ವರ್ಯ, ಸುಧಾಂಶ, ಡಾ.ಶಶಿಕುಮಾರ್ ಶಿವಮೊಗ್ಗ, ಕಮಲಾಕ್ಷ, ರಾಜು ಹುಗುಡಿ, ಇಂದ್ರಮ್ಮ, ವಸಂತಮ್ಮ, ಶಿವಾನಂದಪ್ಪಗೌಡ, ಗೌರಮ್ಮ, ಅಶೋಕ ಬೆನವಳ್ಳಿ, ಸುಮಿತ್ರಮ್ಮ, ಯಶೋಧಮ್ಮ, ನಾಗವೇಣಮ್ಮ, ಶಿವಲಿಂಗೇಶ್ವರ, ಹೆಚ್.ಎಂ.ಚಂದ್ರಕಾಂತ ಹುಗುಡಿ, ಭುವನಚಂದ್ರ, ಜಯಪ್ರಕಾಶ್, ಲಾಲುಪ್ರಸಾದ್, ಜೆ.ಜಿ.ಸದಾನಂದ ಜಂಬಳ್ಳಿ, ನಾಗಭೂಷಣ, ಈಶ್ವರಪ್ಪ... |
ಅಪಾಯ ಆಹ್ವಾನಿಸುತ್ತಿದೆ ಹೆಬ್ಬಾಳ ಫ್ಲೈಓವರ್ – Public TV |
ಅಪಾಯ ಆಹ್ವಾನಿಸುತ್ತಿದೆ ಹೆಬ್ಬಾಳ ಫ್ಲೈಓವರ್ |
ಬೆಂಗಳೂರು: ಸುಮನಹಳ್ಳಿ ಆಯ್ತು, ಇದೀಗ ಹೆಬ್ಬಾಳ ಫ್ಲೈಓವರ್ ಸರದಿ. ಪ್ರಯಾಣಿಕರೇ ಹೆಬ್ಬಾಳ ಫ್ಲೈಓವರ್ ಮೇಲೆ ಹೋಗೋದಕ್ಕೂ ಮುನ್ನ ಎಚ್ಚರವಾಗಿರಿ. ಮೇಲ್ಸೇತುವೆ ಸವೆದು ಎರಡು ಕಡೆ ಗುಂಡಿ ಬಿದ್ದಿದೆ. ಹೀಗಾಗಿ ಸೇತುವೆ ಮೇಲೆ ನಿಂತು ಈ ಗುಂಡಿ ಮೂಲಕ ಕೆಳಗಡೆ ನೋಡಿದರೆ ಓಡಾಡುವ ಜನ, ವಾಹನಗಳು ಕಾಣುತ್ತವೆ. ಈ ಕಾರಣದಿಂದಾಗಿ ಹೆಬ್ಬಾಳ ಮೇಲ್ಸೇತುವೆ ಡೇಂಜರ್ ಝೋನ್ ಆಗಿದೆ. |
ಹೌದು. ಬೆಂಗಳೂರಿನ ಫ್ಲೈಓವರ್ ಗಳ ಮೇಲೆ ವಾಹನ ಸವಾರರು ಸಂಚರಿಸೋಕೆ ಭಯ ಪಡುತ್ತಿದ್ದಾರೆ. ಈ ಮೇಲ್ಸೇತುವೆ ಮೇಲಿನ ಕಬ್ಬಿಣದ ಡ್ರಿಲ್ ಸವೆದು, ಫ್ಲೈಓವರ್ ನಲ್ಲಿ ಎರಡು ಕಡೆ ಗುಂಡಿ ಬಿದ್ದಿದೆ. ಈ ಮೂಲಕ ಕೆಳಗಡೆ ನೋಡಿದರೆ ಕೆಳಗಡೆ ಓಡಾಡುವ ವಾಹನಗಳು, ಜನರು ಕಾಣುತ್ತಾರೆ. ಅಷ್ಟು ಪ್ರಮಾಣದಲ್ಲಿ ಗುಂಡಿ ಬಿದ್ದಿದ್ದರೂ ಇದರ ಮೇಲೆಯೇ ವಾಹನಗಳು ಓಡಾಡ್ತಿದ್ದು, ಅಪಾಯ ಯಾವ ಸಮಯದಲ್ಲಿ ಆಗುತ್ತೋ ಗೊತ್ತಿಲ್ಲ.... |
ಇದಕ್ಕೆ ಸಂಚಾರಿತಜ್ಞರು ಕೂಡ ಆತಂಕ ವ್ಯಕ್ತಪಡಿಸ್ತಿದ್ದು, ಕಳಪೆ ಕಾಮಗಾರಿಯಿಂದ ಈ ರೀತಿ ಆಗಿದೆ. ಹೀಗಾಗಿ ಮುಂಚಿತವಾಗಿ ಎಚ್ಚೆತ್ತು ಕ್ರಮ ಜರುಗಿಸಬೇಕು. ಇಲ್ಲ ಅಂದರೆ ಸೇತುವೆ ಕುಸಿಯುವ ಸಂಭವ ಇದೆ. ದೊಡ್ಡ ಅಪಾಯ ಎದುರಾಗಿ ಅಪಘಾತಗಳಾಗುತ್ತವೆ. ಅಧಿಕಾರಿಗಳು ಎಚ್ಚೆತ್ತು ಸರಿಪಡಿಸದೇ ಹೋದರೆ ಅಪಾಯ ಗ್ಯಾರಂಟಿ ಅಂತ ಮುನ್ಸೂಚನೆ ಕೊಡುತ್ತಿದ್ದಾರೆ. |
ಒಟ್ಟಾರೆ ಹೆಬ್ಬಾಳ ಫ್ಲೈಓವರ್ ಡೇಂಜರ್ ಸ್ಪಾಟ್ ಆಗಿದೆ. ಈಗಾಗಲೇ ಮೇಲು ಸೇತುವೆ ಮೇಲೆ ಗುಂಡಿ ಬಿದ್ದು ಸೇತುವೆ ಕುಸಿಯುವ ಸಂಭವ ಹೆಚ್ಚಿದೆ. ಹಲವಾರು ಬಾರಿ ವಾಹನ ಸವಾರರು ಬಿದ್ದು ಗಾಯಗೊಂಡು, ಸಾವನ್ನಪ್ಪಿರುವ ಉದಾಹರಣೆಗಳಿವೆ. ಬಿಬಿಎಂಪಿ, ಬಿಡಿಎ ಮತ್ತು ಸರ್ಕಾರದ ಪ್ರತಿನಿಧಿಗಳು ಎಚ್ಚೆತ್ತು ಮುನ್ನೆಚ್ಚರಿಕಾ ಕ್ರಮಗಳನ್ನ ಜರುಗಿಸ್ತಾರಾ ಕಾದು ನೋಡಬೇಕಿದೆ. |
ಬಹುಭಾಷಾ ನಟಿ ಮೀನಾ ಪತಿ ವಿದ್ಯಾ ಸಾಗರ್ ಇತ್ತೀಚೆಗೆ ಚೆನ್ನೈನಲ್ಲಿ ಮೃತಪಟ್ಟಿದ್ದಾರೆ. ವಿದ್ಯಾಸಾಗರ್ ಸಾವಿಗೆ ಅನೇಕ ಮಂದಿ ಸಂತಾಪ ಸೂಚಿಸಿದ್ದರು. ಇದೀಗ ಪತಿಯನ್ನು ಕಳೆದುಕೊಂಡ ನೋವಿನಲ್ಲೂ ನಟಿ ಮೀನಾ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.... |
ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿರುವ ಕಿರಣ್ ರಾಜ್ ಅಭಿನಯದ "ಬಡ್ಡೀಸ್" ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಸಂತಸವನ್ನು ಚಿತ್ರತಂಡ ಹಂಚಿಕೊಂಡಿದ್ದು ಹೀಗೆ. ನನ್ನನ್ನು ಇಷ್ಟು ದಿನ "ಕನ್ನಡತಿ" ಕಿರಣ್ ರಾಜ್ ಎನ್ನುತ್ತಿದ್ದರು. ಈಗ "ಬಡ್ಡೀಸ್"... |
ಸಾಕಷ್ಟು ನಟರ ತಾವು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಸ್ಟಾರ್ ಗಳು ಎಂದು ಸಾಭಿತು ಪಡಿಸಿದ್ದಾರೆ. ಇದೀಗ ಜೂನಿಯರ್ ಎನ್ ಟಿ ಆರ್ ಕೂಡ ತಾವು ರಿಯಲ್ ಲೈಫ್ ನಲ್ಲೂ ಸ್ಟಾರ್ ಎಂದು... |
ಖ್ಯಾತ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಇತ್ತೀಚೆಗೆ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ವಿದ್ಯಾಸಾಗರ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಇದರ ನಡುವೆ ಕೊವಿಡ್ ನಿಂತ ಮೃತಪಟ್ಟಿದ್ದಾರೆ ಎಂಬ ಮಾತು ಕೂಡ ಕೇಳಿ... |
ಬೆಂಗಳೂರು: ಸಾಕಷ್ಟು ಹೈಡ್ರಾಮಾದ ಬಳಿಕ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಂಡಿದೆ. ಮಹಾರಾಷ್ಟ್ರ ಸರ್ಕಾರ ಇಂದು ವಿಶ್ವಾಸ ಮತ ಯಾಚನೆ ಮಾಡಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ... |
ಗುಜರಾತ್ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ | Udayavani – ಉದಯವಾಣಿ |
Saturday, 28 Nov 2020 | UPDATED: 01:46 PM IST |
Team Udayavani, Oct 29, 2020, 1:53 PM IST |
ಬೆಂಗಳೂರು: ಗುಜರಾತಿನ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. |
ಜನಸಂಘದ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿ ಎರಡು ಬಾರಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿ ರಾಜ್ಯದ ಅಭಿವೃದ್ಧಿಗೆ ಅಪೂರ್ವ ಕೊಡುಗೆ ನೀಡಿದ್ದರು. ಸಮಾಜದ ಎಲ್ಲ ವರ್ಗದ ಜನರ ಸರ್ವಾಂಗೀಣ ಏಳಿಗೆಗೆ ಶ್ರಮಿಸಿದ ಅವರ ನಿಧನದಿಂದ ಸಜ್ಜನ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ. |
ಇದನ್ನೂ ಓದಿ:ಬಿಜೆಪಿ ಹಿರಿಯ ಮುಖಂಡ, ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಇನ್ನಿಲ್ಲ |
ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. |
ಸರ್ಕಾರ ಉರುಳಬೇಕಾದರೆ, ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಈ ಕಸರತ್ತುಗಳು ನಡೆಯಬೇಕಿದೆ! | KANNADIGA WORLD |
Home ಕನ್ನಡ ವಾರ್ತೆಗಳು ಕರ್ನಾಟಕ ಸರ್ಕಾರ ಉರುಳಬೇಕಾದರೆ, ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಈ ಕಸರತ್ತುಗಳು ನಡೆಯಬೇಕಿದೆ! |
ವಿಧಾನಸಭೆಯ ಒಟ್ಟು ಚುನಾಯಿತ ಪ್ರತಿನಿಧಿಗಳ ಸಂಖ್ಯಾ ಬಲ 224 ಆಗಿದ್ದು ಪ್ರಸ್ತುತ ಕಾಂಗ್ರೆಸ್ 80, ಜೆಡಿಎಸ್ 37 ಬಿಎಸ್‍ಪಿ 1, ಬಿಜೆಪಿ 104 ಶಾಸಕರನ್ನು ಹೊಂದಿದೆ. ಇಬ್ಬರು ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಬಿಜೆಪಿ ತನ್ನ ಬಲವನ್ನು 106ಕ್ಕೆ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್‍ಪಿಯ ಒಬ್ಬ ಶಾಸಕರನ್ನು ಒಳಗೊಂಡಂತೆ ಮೈತ್ರಿ ಸರ್ಕಾರ 118 ಜನ ಶಾಸಕರನ್ನು ಹೊಂದಿದೆ... |
ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಕನಿಷ್ಟ 13 ಮಂದಿ ರಾಜೀನಾಮೆ ನೀಡಬೇಕಾಗುತ್ತದೆ. ನೀಡಿದ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಬೇಕು. 13 ಮಂದಿ ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಬೆಂಬಲ ನೀಡುವ ಶಾಸಕರ ಸಂಖ್ಯೆ 105ಕ್ಕೆ ಕುಸಿಯುತ್ತದೆ. ಹೀಗಾಗಿ 106 ಶಾಸಕರ ಬೆಂಬಲದೊಂದಿಗೆ ಬಿಜೆಪಿ ರಾಜ್ಯಪಾಲರ ಬಳಿ ತೆರಳಿ ಸರ್ಕಾರ ಬಹುಮತ ಸಾಬೀತು ಪಡಿಸುವಂತೆ ಒತ್ತಾಯಿಸುತ್ತದೆ. |
ಎಲ್ಲ ಪ್ರತಿಕೂಲಗಳನ್ನು ಮೆಟ್ಟಿ ನಿಂತು ಐಪಿಎಸ್ ಗೆ ಆಯ್ಕೆಯಾದ ಬುಶ್ರಾ ಬಾನು | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Nov 28, 2021, 7:49 AM IST |
ಫಿರೋಝಾಬಾದ್ : ವಿವಾಹವಾಗಿ 13 ವರ್ಷಗಳ ಬಳಿಕ, ನಾಲ್ಕು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ಎರಡು ಮಕ್ಕಳ ತಾಯಿ ಇತ್ತೀಚೆಗೆ ಭಾರತೀಯ ಪೊಲೀಸ್ ಸೇವೆ (ಐಪಿಎಸ್)ಗೆ ಆಯ್ಕೆಯಾಗಿದ್ದಾರೆ. |
ಇದಕ್ಕೂ ಮುನ್ನ ಉತ್ತರ ಪ್ರದೇಶ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಇವರು, ಫಿರೋಝಾಬಾದ್ ನಲ್ಲಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. |
2020ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 234ನೇ ರ‍್ಯಾಂಕ್ ಪಡೆದ ಬುಶ್ರಾ ಅರ್ಷದ್ ಬಾನು, ಐಪಿಎಸ್‌ಗೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಭಾರತೀಯ ಕಂದಾಯ ಸೇವೆಗೂ ಇವರು ಆಯ್ಕೆಯಾಗಿದ್ದಾರೆ. ಆದರೆ ಅವರ ಹೃದಯಕ್ಕೆ ಆಪ್ತವಾಗಿರುವ ಹುದ್ದೆಯೆಂದರೆ ಐಪಿಎಸ್. ಕುಟುಂಬದಲ್ಲಿ ಹಠಮಾರಿ ಎಂದು ಕರೆಸಿಕೊಳ್ಳುವ ಬಾನು, ನಾಗರಿಕ ಸೇವಾ ಪರೀಕ್ಷೆಗೆ ಸಜ್ಜಾಗಿದ್ದನ್ನು ನೆನೆಸಿಕೊಳ್ಳುತ್ತಾರೆ. ಯಾವುದೇ ಕೋಚಿಂಗ್ ಸಂ... |
17 ವಯಸ್ಸಿನಲ್ಲೇ ಕಾನ್ಪುರದಲ್ಲಿ ಪದವಿ ಪಡೆದ ಇವರು 20ನೇ ವಯಸ್ಸಿಗೆ ಎಂಬಿಎ ಪದವಿ ಪಡೆದಿದ್ದರು. ಎಂಜಿನಿಯರ್ ನನ್ನು ವಿವಾಹವಾದ ಬಳಿಕ ಪತಿ ಅಸ್ಮರ್ ಹುಸೇನ್ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕರಾಗಿ ಸೌದಿ ಅರೇಬಿಯಾಗೆ ತೆರಳಿದರು. ಬಾನು ಕೂಡಾ ಕಾರ್ಪೊರೇಟ್ ಉದ್ಯೋಗದಲ್ಲಿದ್ದರೂ, ಇಬ್ಬರೂ ಸ್ವದೇಶಕ್ಕೆ ಮರಳಲು ನಿರ್ಧರಿಸಿದರು. |
ಬಾನು ಬಾಲ್ಯದಲ್ಲೇ ಸ್ಮಾರ್ಟ್ ಆಗಿದ್ದನ್ನು ಕಂಡ ಎಲ್ಲರೂ, ಆಕೆ ಕಲೆಕ್ಟರ್ ಆಗುತ್ತಾರೆ ಎಂದು ಪೋಷಕರ ಬಳಿಕ ಹೇಳುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಇದು ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿತ್ತು. |
1 ಕೊರಿಂಥ 11 | ಆನ್‌ಲೈನ್ ಬೈಬಲ್ | ನೂತನ ಲೋಕ ಭಾಷಾಂತರ |
1 ಕೊರಿಂಥ 11:1-34 |
11 ನಾನು ಕ್ರಿಸ್ತನನ್ನು ಅನುಕರಿಸುವವನಾಗಿರುವಂತೆಯೇ ನೀವೂ ನನ್ನನ್ನು ಅನುಕರಿಸುವವರಾಗಿರಿ. 2 ನಾನು ನಿಮ್ಮನ್ನು ಶ್ಲಾಘಿಸುತ್ತೇನೆ, ಏಕೆಂದರೆ ನೀವು ಎಲ್ಲ ವಿಷಯಗಳಲ್ಲಿ ನನ್ನನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೀರಿ ಮತ್ತು ನಾನು ನಿಮಗೆ ತಿಳಿಸಿದಂಥ ಕಟ್ಟಳೆಗಳನ್ನು ತಿಳಿಸಿಕೊಟ್ಟ ರೀತಿಯಲ್ಲಿಯೇ ಬಿಗಿಯಾಗಿ ಹಿಡಿದುಕೊಂಡಿದ್ದೀರಿ. 3 ಆದರೆ ಈ ವಿಷಯವನ್ನು ನೀವು ತಿಳಿದಿರಬೇಕೆಂಬುದು ನನ್ನ ಬಯಕೆ, ಅದ... |
ಸೌಜನ್ಯಾ ಪರ ರಕ್ತ ಕ್ರಾಂತಿಗೂ ಸಜ್ಜಾಗಿದ್ದೇವೆ; ತಿಮರೋಡಿ |
November 4, 2013 6:09 PM·0 commentsViews: 5 |
Narendra Kerekadu and Reshma Studio |
ಮೂಲ್ಕಿ; ಧರ್ಮರಕ್ಷಕರನ್ನೇ ಧರ್ಮಾಧಿಕಾರಿಗಳು ದಮನಿಸಲು ಪ್ರಯತ್ನ ನಡೆಸುತ್ತಿರುವುದು ಖಂಡನೀಯ, ಸೌಜನ್ಯಾ ಪ್ರಕರಣದಲ್ಲಿ ಸಲ್ಲಿಸಿರುವ ಸಿಒಡಿ ವರದಿಯೇ ನಕಲಿಯಾಗಿದ್ದು ತನಿಖಾಧಿಕಾರಿಗಳು ದೊಡ್ಡವರ ಅಣತಿಯಂತೆ ವರದಿಯನ್ನು ನೀಡಿದ್ದಾರೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಸುಪರ್ದಿಯಲ್ಲಿಯೇ ಮರು ತನಿಖೆ ನಡೆಸಬೇಕು ನ್ಯಾಯಕ್ಕಾಗಿ ರಕ್ತಕ್ರಾಂತಿ ಆದರೂ ನಾವು ಹಿಂದೆ ಬೀ... |
ಮೂಲ್ಕಿಯ ನಾಗರಿಕ ವೇದಿಕೆಯ ಸಂಯೋಜನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 99 ರಲ್ಲಿ ಲಲಿತ್ ಮಹಲ್ ಬಳಿ ಸೌಜನ್ಯಾ ಹತ್ಯಾ ಪ್ರಕರಣದ ಸೂಕ್ತ ತನಿಖೆಯನ್ನು ನಡೆಸಬೇಕು ಎಂದು ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. |
ಸೌಜನ್ಯಾ ಹತ್ಯಾ ಪ್ರಕರಣದಲ್ಲಿ ಪೊಲೀಸ್ ಇಲಾಖೆಯು ಸೂಕ್ತ ರೀತಿಯಲ್ಲಿ ತನಿಖೆ ನಡೆಸದೆ ಅಧಿಕಾರಿಗಳ ನಿಷ್ಕ್ರೀಯತೆ ಹಾಗೂ ಪಾಳೆಗಾರಿಕೆಯ ಕುತಂತ್ರದಿಂದಾಗಿ ಸೌಜನ್ಯಾಳಂತಹ ಅನೇಕ ಪ್ರಕರಣಗಳು ಧರ್ಮಸ್ಥಳದಲ್ಲಿ ಬೆಳಕಿಗೆ ಬಂದಿಲ್ಲ. ಸತ್ಯವನ್ನು ದಮನಿಸುವ ಯಾವ ರಾಜಕೀಯ ಷಡ್ಯಂತ್ರ ಅಥವ ಕೃತ್ಯಗಳು ಸಹ ಇನ್ನು ಮುಂದೆ ನಡೆಯುವುದಿಲ್ಲ ಧರ್ಮಸ್ಥಳದ ದೇವತೆಗಳೇ ನಮಗೆ ರಕ್ಷಣೆ ನೀಡುತ್ತಿದೆ ಎಂದು ಹೇಳಿದರು. |
ಕೆಮಾರು ಸಾಂಧೀಪನಿ ಸಾಧನಾಶ್ರಮದ ಈಶ ವಿಠಲ ದಾಸ ಸ್ವಾಮೀಜಿ ಮಾತನಾಡಿ ನಮ್ಮ ಈ ಹೋರಾಟವು ದುಷ್ಟ ಅಧಿಕಾರಿಗಳು ಹಾಗೂ ನೈಜ ಆರೋಪಿಗಳ ವಿರುದ್ಧವೇ ಹೊರತು ಯಾವುದೇ ವ್ಯಕ್ತ ಅಥವ ಕ್ಷೇತ್ರದ ವಿರುದ್ಧ ಅಲ್ಲ, ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ನಡೆದಲ್ಲಿ ಜನರೇ ಅದಕ್ಕೆ ಉತ್ತರಿಸುವ ದಿನ ದೂರವಿಲ್ಲ ಎಂದರು. |
ಸೌಜನ್ಯಾಳ ತಾಯಿ ಕುಸುಮಾವತಿ ಮಾತನಾಡಿ ನ್ಯಾಯಕ್ಕಾಗಿ ಹೋರಾಟ ನಡೆಸಲು ಜಿಲ್ಲೆಯಾದ್ಯಂತ ನಾವು ವಿವಿಧ ಪ್ರತಿಭಟನೆಗಳಿಗೆ ತೆರಳಿದರೆ ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಮಾನಸಿಕ ಹಿಂಸೆ ನೀಡುತ್ತಿದ್ದಾರೆ, ಸತ್ತ ನನ್ನ ಮಗಳ ನ್ಯಾಯಯುತ ಬೇಡಿಕೆಯನ್ನು ನಡೆಸುವುದು ಅಪರಾದವೇ ಎಂದು ಕಣ್ಣೀರು ಹಾಕಿದರು. |
ನಾಗರಿಕ ಸಮಿತಿಯ ಅಧ್ಯಕ್ಷ ವಿನೋದ್ ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು, ಸೌಜನ್ಯಳ ತಂದೆ ಚಂದಪ್ಪ ಗೌಡ ಉಪಸ್ಥಿತರಿದ್ದರು. ಉಮೇಶ್ ಮಾನಂಪಾಡಿ ಕಾರ್ಯಕ್ರಮ ನಿರೂಪಿಸಿದರು, ನವೀನ್ ಬಪ್ಪನಾಡು ವಂದಿಸಿದರು. |
ಪ್ರತಿಭಟನೆಯ ಸಂದರ್ಭ ಮೂಲ್ಕಿಯ ಆಸುಪಾಸಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ನಡೆಸಿದ್ದರು. ರಿಕ್ಷಾ ಮತ್ತು ಕಾರು ಚಾಲಕರು ತಮ್ಮ ವಾಹನವನ್ನು ಸ್ಥಗಿತಗೊಳಿಸಿ ಹರತಾಳ ನಡೆಸಿದರು. |
ರಾಜ್ಯೋತ್ಸವ ಪ್ರಶಸ್ತಿ-ಮೂಲ್ಕಿ ಪೈಯೊಟ್ಟು ಸದಾಶಿವ ಸಾಲ್ಯಾನ್ |
Bhagyavan Sanil ಮೂಲ್ಕಿ: ಗ್ರಾಮೀಣ ಕ್ರೀಡೆ ಕಂಬಳ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಮೂಲ್ಕಿ ಪೈಯೊಟ್ಟು ಸದಾಶಿವ ಸಾಲ್ಯಾನ್ ರವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನೀಡಿದರು. |
Subsets and Splits
No community queries yet
The top public SQL queries from the community will appear here once available.