text stringlengths 0 61.5k |
|---|
Nothing good comes easy in life. These are the words of the wise, motivating us to work hard in order to achieve success in all endeavours in life. However, does hard work alone do it all, or does luck play a role as well? Well, astrologers say that the planetary positions on the birth chart should also be checked once. |
ಬಸವ ಜಯಂತಿ ಪ್ರಚಾರ ರಥಕ್ಕೆ ಚಾಲನೆ, ಪೋಸ್ಟರ್ ಬಿಡುಗಡೆ - Mysuru Mithra |
Tuesday 7 December 2021 , 3:12 pm |
Home » ಬಸವ ಜಯಂತಿ ಪ್ರಚಾರ ರಥಕ್ಕೆ ಚಾಲನೆ, ಪೋಸ್ಟರ್ ಬಿಡುಗಡೆ |
ಮೈಸೂರು: ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಆ.4 ಮತ್ತು 5ರಂದು ನಡೆಯಲಿರುವ ಬಸವೇಶ್ವರ ಜಯಂತಿ ಕಾರ್ಯಕ್ರಮದ ಪ್ರಚಾರ ರಥಕ್ಕೆ ಜೆಎಸ್‍ಎಸ್ ಮಹಾವಿದ್ಯಾಪೀಠದ ಗೌರವ ಕಾರ್ಯದರ್ಶಿ ಎಸ್.ಪಿ.ಮಂಜುನಾಥಸ್ವಾಮಿ ಭಾನುವಾರ ಮೈಸೂರಿನ ಕೆ.ಆರ್.ಮೊಹಲ್ಲಾದ ಮಾಧವಾಚಾರ್ ರಸ್ತೆಯ ಮಹದೇಶ್ವರ ದೇವಸ್ಥಾನ ವೃತ್ತದಲ್ಲಿ ಚಾಲನೆ ನೀಡಿದರು. |
ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯಿತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ಸಮಾರಂಭ ನಡೆಯಿತು. ಪ್ರಚಾರ ರಥಕ್ಕೆ ಚಾಲನೆ ನೀಡಿದ ಬಳಿಕ ಎಸ್.ಪಿ.ಮಂಜುನಾಥಸ್ವಾಮಿ ಅವರು ಮಾತನಾಡಿ, 12ನೇ ಶತಮಾನದಲ್ಲಿಯೇ ಅನುಭವ ಮಂಟಪ ಸ್ಥಾಪಿಸಿ, ಮಹಿಳೆಯರಿಗೆ ಹಾಗೂ ಎಲ್ಲಾ ವರ್ಗದವರಿಗೆ ಅವಕಾಶ ನೀಡಿ, ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಸಾರಿದ ಬಸವಣ್ಣನವರ ವಚನ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ ಎಂದರು. |
ಇಂದಿನ ಯುವ ಪೀಳಿಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿಕೊಂಡು ಕೀಳು ಮನೋಭಾವಗಳನ್ನು ತೊಡೆದುಹಾಕಿ ನಾವೆಲ್ಲರೂ ಸಮಾನತೆಯಿಂದ ಹೋಗಲು ಬಸವಣ್ಣನವರು ಸ್ಫೂರ್ತಿಯಾಗಿದ್ದಾರೆ. ಅವರ ಆದರ್ಶವನ್ನು ನಾವು , ಅದರಲ್ಲೂ ಯುವಜನತೆ ಹೆಚ್ಚಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು. |
ಮುಖ್ಯ ಅತಿಥಿಯಾಗಿದ್ದ ಸಂಸದ ಪ್ರತಾಪ್‍ಸಿಂಹ ಮಾತನಾಡಿ, ಬಸವಣ್ಣನವರು ಅನುಭವ ಮಂಟಪದ ಮೂಲಕ ಆಡಳಿತ ಹೇಗೆ ನಡೆಸಬೇಕು. ಅನ್ಯಾಯಗಳನ್ನು ಸರಿಪಡಿಸುವುದು ಹೇಗೆ? ಎಂಬುದನ್ನು ಆ ಕಾಲದಲ್ಲಿಯೇ ಪ್ರಜಾತಂತ್ರ ವ್ಯವಸ್ಥೆ ಹೇಗಿರಬೇಕು? ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ದೇಶಕ್ಕೆ ಪ್ರಜಾತಂತ್ರ ವ್ಯವಸ್ಥೆ ತಂದುಕೊಟ್ಟ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಬೇಕು. ಜಾತಿ, ಮತ, ಧರ್ಮ ಎಂಬ ಸಂಕುಚಿತ ಮನೋಭಾವ ತೊರೆದು ಪ್ರೀತಿಯಿಂದ ಬದುಕು ನಡೆಸಬೇಕು. ಬಸವಣ್ಣನವರ ತತ್ವ ಅನುಸರಿಸಿ ಆಳುವ ಸರ್ಕಾರಕ್ಕೆ ಸವಾಲು ಎಸೆಯುವ ರೀತಿಯಲ್ಲಿ ವಿದ್ಯೆ ಕಲಿಸುತ್ತಿರುವ ಸುತ್ತೂರು ಸಂಸ್ಥಾನದ ಬಗ್ಗೆ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದರು. |
ಬಸವ ಜಯಂತಿ ಕಾರ್ಯಕ್ರಮದ ಪೋಸ್ಟರ್‍ಗಳನ್ನು ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ ಬಿಡುಗಡೆ ಮಾಡಿದರು. ಶಾಸಕ ಎಲ್.ನಾಗೇಂದ್ರ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಎಂಎಲ್‍ಸಿ ತೋಂಟದಾರ್ಯ, ಮೇಯರ್ ಬಿ.ಭಾಗ್ಯವತಿ, ಬಿಜೆಪಿ ಮುಖಂಡರಾದ ಕೆ.ಎನ್.ಪುಟ್ಟಬುದ್ಧಿ, ಹೆಚ್.ವಿ.ರಾಜೀವ್, ಕಾ.ಪು.ಸಿದ್ದಲಿಂಗಸ್ವಾಮಿ, ನಗರಪಾಲಿಕೆ ಸದಸ್ಯರಾದ ಶಿವಕುಮಾರ್, ಸುನೀಲ್, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ದೂರ ಕೆ.ಶಿವಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾದ ಮೈಸೂರು ನಗರ ಘಟಕದ ಅಧ್ಯಕ್ಷ ಟಿ.ಲಿಂಗರಾಜು, ನಗರ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಎಸ್.ಜಯಶಂಕರ್, ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ ಶಿವಪ್ಪ, ಲೋಕೇಶ್, ಮಾರ್ಬಳ್ಳಿ ಚಂದ್ರಶೇಖರ್, ಮಹದೇವಸ್ವಾಮಿ, ಡಿ.ಪಿ.ಸುರೇಶ್, ಮಧುಕರ್, ಮುತ್ತಣ್ಣ, ಕೀರ್ತಿ, ಶಿವಪ್ರಕಾಶ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. |
ಆಫ್ರಿಕಾದ ಮಹಿಳೆಗೆ ಹೊಸ ಕವಾಟ ಅಳವಡಿಕೆ | Prajavani |
ಆಫ್ರಿಕಾದ ಮಹಿಳೆಗೆ ಹೊಸ ಕವಾಟ ಅಳವಡಿಕೆ |
ಬೆಂಗಳೂರು: ಹೃದಯದ ಕವಾಟ ಸಮಸ್ಯೆಯಿಂದ ಬಳಲುತ್ತಿದ್ದ ಆಫ್ರಿಕಾದ ಮಹಿಳೆಯೊಬ್ಬರಿಗೆ ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಯಶಸ್ವಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ನೆರವೇರಿಸಿ ನೂತನ ಕವಾಟ ಅಳವಡಿಸಲಾಗಿದೆ.ಆಫ್ರಿಕಾದ ಮಲವಿಯ ಲಿಸುಂಗು ಕಠೆಂಡುಲ ಅವರೇ ಯಶಸ್ವೀ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ. |
ಇತ್ತೀಚೆಗೆ ಈಕೆ ತಮ್ಮ ದೇಶದಲ್ಲಿ ತಪಾಸಣೆಗೆ ಒಳಗಾದಾಗ ಮೈಟ್ರಲ್ ಕವಾಟ ಸಮಸ್ಯೆಯಿಂದ ಬಳಲುತ್ತಿರುವುದು ಗೋಚರಿಸಿತು. ಹೀಗಾಗಿ, ಅದನ್ನು ಬದಲಿಸಬೇಕಾಗಿತ್ತು. ಇವರ ತಾಯಿ ಕೂಡ ಕೆಲವು ವರ್ಷಗಳ ಹಿಂದೆ ನಗರದಲ್ಲಿಯೇ ಯಶಸ್ವಿ ಮೈಟ್ರಲ್ ಕವಾಟ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಮಗಳಿಗೂ ಬೆಂಗಳೂರಿನಲ್ಲಿಯೇ ಚಿಕಿತ್ಸೆ ಕೊಡಿಸಲು ಇಲ್ಲಿಗೆ ಕರೆ ತಂದರು. |
ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಲಿಸುಂಗು ಅವರನ್ನು ತಪಾಸಣೆಗೆ ಒಳಪಡಿಸಿದಾಗ ಕೆಮ್ಮು, ಉಸಿರಾಟದ ತೊಂದರೆ ಹಾಗೂ ಆಯಾಸದಿಂದ ಬಳಲುತ್ತಿರುವುದು ಕಂಡು ಬಂದಿತು. ಎಕೋಕಾರ್ಡಿಯೋಗ್ರಾಂ ತಪಾಸಣೆಯಲ್ಲಿ ರೋಗಿಯ ಮೈಟ್ರಲ್ ಕವಾಟವು ಕಿರಿದಾಗಿದ್ದು ಕೂಡ ಕಂಡು ಬಂದಿತು. ಸಾಮಾನ್ಯವಾಗಿ ಇಂತಹ ಕವಾಟದ ಸಮಸ್ಯೆಗೆ ನಮ್ಮಲ್ಲಿ `ಬಲೂನ್ ವ್ಯಾಲ್ವುಲೋಪ್ಲಾಸ್ಟಿ~ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ಆದರೆ, ರೋಗಿಯ ಮೈಟ್ರಲ್ ಕವಾಟವು ಬಹಳ ಹಾಳಾಗಿದ್ದರಿಂದ ಅದರ ಬದಲಾವಣೆಗಾಗಿ ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. |
ತಕ್ಷಣ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಪಿ.ಎಸ್. ಸೀತಾರಾಮ್ ಭಟ್ ಮತ್ತು ಅವರ ತಂಡ ರೋಗಿಯನ್ನು ಕವಾಟ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದರು. |
ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿದ ತಂಡ ಆಕೆಗೆ ಹೊಸದಾಗಿ ಬಳಕೆಯಲ್ಲಿರುವ ಬಯೋ ಪ್ರೋಸ್ತೆಟಿಕ್ ಟಿಶ್ಯೂ ವಾಲ್ವ್ ಅಳವಡಿಸಿತು. ಇದರಿಂದ ರೋಗಿಯು ಜೀವನ ಪರ್ಯಂತ ಹೆಪ್ಪುಗಟ್ಟುವಂತಹ ನಿರೋಧಕ ಔಷಧಗಳನ್ನು ಬಳಸುವ ಮತ್ತು ಪದೇ ಪದೇ ರಕ್ತ ಪರೀಕ್ಷೆಗೆ ಒಳಪಡುವ ಅವಶ್ಯಕತೆ ಇರುವುದಿಲ್ಲ. |
ಈ ಕವಾಟವು ಸುಮಾರು 20 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿದ್ದು, ರೋಗಿಯು ಶೀಘ್ರ ಗುಣಮುಖರಾಗಿ ತಮ್ಮ ಸ್ವದೇಶಕ್ಕೆ ಹಿಂತಿರುಗಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ. |
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಲ್ಲಾಳ - ವಿಕಿಸೋರ್ಸ್ |
ಉಲ್ಲಾಳ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನಲ್ಲಿ ಮಂಗಳೂರಿನಿಂದ 8ಕಿಮೀ ದೂರದಲ್ಲಿ ನೇತ್ರಾವತಿ ದಕ್ಷಿಣ ದಂಡೆಯ ಮೇಲಿರುವ ಊರು. ಇಂದು ಮಂಗಳೂರು ಪಟ್ಟಣದ ಸಮೂಹದಲ್ಲೇ ಸೇರಿಹೋಗಿದೆ. |
ಪುತ್ತಿಗೆಯ ಚೌಟ ಅರಸುಮನೆತನದ ಒಂದು ಶಾಖೆಯ ರಾಜರು ಉಲ್ಲಾಳವನ್ನು ಆಳುತ್ತಿದ್ದರು. ಇಲ್ಲಿಯ ಸೋಮನಾಥ ಅವರ ಕುಲದೇವರು. 16ನೆಯ ಶತಮಾನದಲ್ಲಿ ರಾಜ್ಯಭಾರ ಮಾಡುತ್ತಿದ್ದ ಅಬ್ಬಕ್ಕ ಈ ಶಾಖೆಯಲ್ಲಿ ಪ್ರಸಿದ್ಧಳು. ವಿದೇಶಿಯರ ಬಲವನ್ನು ಮುರಿಯಲು ಸರ್ವಪ್ರಯತ್ನಮಾಡಿದ ಈ ವೀರರಾಣಿ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದಳು. ಆಕೆಯ ತರುವಾಯ ಉಲ್ಲಾಳ ರಾಜ್ಯವನ್ನಾಳಿದ ಆಕೆಯ ಮಗಳು ಕಾರ್ಕಳದ ಅರಸರೊಡನೆ ಯುದ್ಧ ಮಾಡಿ ಸತ್ತಳು. ಆಕೆಯ ಮಗ ಚಿಕ್ಕರಾಯ (1606-28) ಬಿದನೂರು ವೆಂಕಟಪ್ಪನಾಯಕನ ನೆರವನ್ನು ಪಡೆದು ಕಾರ್ಕಳದ ಅರಸನನ್ನು ಸೋಲಿಸಿದ (1608). ಭೋಜರಾಜನ ಆಳ್ವಿಕೆಯಲ್ಲಿ (1630-44) ಉಲ್ಲಾಳ ಬಿದನೂರು ಸಂಸ್ಥಾನಕ್ಕೆ ಸೇರಿತು. |
ಉಲ್ಲಾಳದಲ್ಲಿ ಕೋಟೆ ಮತ್ತು ಅರಮನೆಯ ಅವಶೇಷಗಳಿವೆ. ಸೋಮನಾಥ ದೇವಾಲಯದಲ್ಲಿ ಇಟಾಲಿಯನ್ ಶೈಲಿಯ ಹಲವು ಸುಂದರ ಶಿಲ್ಪಗಳಿವೆ. ಊರಿನಿಂದ ಸು.9ಕಿಮೀ ದೂರದಲ್ಲಿ ಉಲ್ಲಾಳ ಅರಸರ ಭದ್ರತಾಣವಾಗಿದ್ದ ಉಚ್ಚಿಲ ಕೋಟೆ ಮತ್ತು ಮಣೇಲ ಅರಮನೆ ಇವೆ. ಕಾರ್ಕಳದ ಭೈರರಸ ಒಡೆಯರೂ ಇಲ್ಲಿ ಅರಮನೆಗಳನ್ನು ಕಟ್ಟಿದ್ದರೆಂದು ಹೇಳಿಕೆ. |
ಸೈಯದ್‍ಮಹಮ್ಮದ್ ಷರೀಫ ಮದನೀ ದರ್ಗಾ |
ಉಲ್ಲಾಳದಲ್ಲಿರುವ ಸೈಯದ್ ಮಹಮ್ಮದ್ ಷರೀಫ ಮದನೀ ಅವರ ದರ್ಗಾ ಬಹು ಪ್ರಸಿದ್ಧ. ಈ ಸಂತರು ಸು.400 ವರ್ಷಗಳ ಹಿಂದೆ ಮದೀನಾದಿಂದ ಬಂದು ಇಲ್ಲಿನ ಮೇಲಂಗಡಿ ಮಸೀದಿಯಲ್ಲಿ ನೆಲಸಿ ಇಲ್ಲಿಯೇ ಮದುವೆಯಾಗಿ ಅನೇಕ ಪವಾಡಗಳನ್ನು ಮೆರೆಸಿ ಜನಮನ್ನಣೆ ಗಳಿಸಿದರೆಂದು ಪ್ರತೀತಿ. ಇವರ ಗೌರವಾರ್ಥ ಐದು ವರ್ಷಗಳಿಗೊಮ್ಮೆ ಉರುಸ್ ನಡೆಯುತ್ತದೆ. ಎಲ್ಲ ಜಾತಿಮತಗಳ ಜನ ಇಲ್ಲಿಗೆ ಬರುತ್ತಾರೆ. ಸಂತರ ಮರಣಾನಂತರ ಕಟ್ಟಿದ ದರ್ಗಾ ನಾಲ್ಕು ಬಾರಿ ಪುನರ್ನಿರ್ಮಾಣವಾಯಿತು. ಇಂದು ಇರುವ ಭವ್ಯ ಕಟ್ಟಡ 1970ರ ರಚನೆ. ಈ ದರ್ಗಾದ ಆಡಳಿತವರ್ಗ ಅರಬ್ಬೀ ಕಾಲೇಜು ಮತ್ತು ಪ್ರೌಢಶಾಲೆಯನ್ನು ನಡೆಸುತ್ತಿದೆ. 16ನೆಯ ಶತಮಾನದಲ್ಲಿ ಫ್ರಾನ್‍ಸಿಸ್ಕನ್ ಪಾದ್ರಿಗಳು ಕಟ್ಟಿಸಿದ ಚರ್ಚ್ ನಗರದಲ್ಲಿದೆ. ಕವಿ ಉಲ್ಲಾಳ ಮಂಗೇಶರಾಯರು ಈ ಊರಿನವರು. (ವಿ.ಜಿ.ಕೆ.) |
"https://kn.wikisource.org/w/index.php?title=ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಉಲ್ಲಾಳ&oldid=46538" ಇಂದ ಪಡೆಯಲ್ಪಟ್ಟಿದೆ |
ಗುರುವಾರ, 8 ಏಪ್ರಿಲ್ 2021 (09:20 IST) |
ಬೆಂಗಳೂರು: ಮದಗಜ ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣ ವೇಳೆ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. |
ಕಂಠೀರವ ಸ್ಟುಡಿಯೋದಲ್ಲಿ ಮಾಸ್ಟರ್ ಅರ್ಜುನ್ ನೇತೃತ್ವದಲ್ಲಿ ಫೈಟಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. |
ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಮದಗಜ ಚಿತ್ರದ ನಾಲ್ಕನೇ ಹಂತದ ಶೂಟಿಂಗ್ ನಡೆಯುತ್ತಿದ್ದು, ಇದೀಗ ನಾಯಕ ನಟನಿಗೆ ಗಾಯವಾಗಿರುವುದರಿಂದ ಶೂಟಿಂಗ್ ಸ್ಥಗಿತಗೊಂಡಿದೆ. ಇನ್ನು, 15 ದಿನ ಶ್ರೀಮುರಳಿ ವಿಶ್ರಾಂತಿ ಪಡೆಯಲಿದ್ದಾರೆ. |
ವಿಲೀನಕ್ಕೆ ತಡೆಯಿಲ್ಲ: ಸುಪ್ರೀಂ | Udayavani – ಉದಯವಾಣಿ |
ವಿಲೀನಕ್ಕೆ ತಡೆಯಿಲ್ಲ: ಸುಪ್ರೀಂ |
ನವದೆಹಲಿ: ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ವಿವಿಧ ಬ್ಯಾಂಕ್ ಅಧಿಕಾರಿಗಳ ಸಂಘಟನೆಗಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. |
ಇದರಿಂದಾಗಿ, ಏಪ್ರಿಲ್ 1ರಿಂದ ಈ ಬ್ಯಾಂಕ್‌ಗಳ ವಿಲೀನ ಜಾರಿಗೆ ಇದ್ದ ಅಡೆತಡೆ ನಿವಾರಣೆಯಾಗಿದೆ. ವಿಲೀನದ ನಂತರ ಬ್ಯಾಂಕ್ ಆಫ್ ಬರೋಡಾ, ಭಾರತೀಯ ಸ್ಟೇಟ್ ಬ್ಯಾಂಕ್ ನಂತರದ ದೇಶದ 2ನೇ ಅತಿ ದೊಡ್ಡ ಬ್ಯಾಂಕಿಂಗ್ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. |
ಡ್ರೈವಿಂಗ್ ಬಾರದ ರೇಖಾಯಿಂದ ಮಾಂಸಪ್ರಿಯ ದರ್ಶನ್ ವರೆಗೆ | ಡ್ರೈವಿಂಗ್ ಬಾರದ ರೇಖಾಯಿಂದ ಮಾಂಸಪ್ರಿಯ ದರ್ಶನ್ ವರೆಗೆ - Latest Cinema News from Sandalwood - Kannada Filmibeat |
ಡ್ರೈವಿಂಗ್ ಬಾರದ ರೇಖಾಯಿಂದ ಮಾಂಸಪ್ರಿಯ ದರ್ಶನ್ ವರೆಗೆ |
ಸ್ಯಾಂಡಲ್ ವುಡ್ ನ ಬಿಸಿಬಿಸಿ, ಗರಿಗರಿ, ಪುಡಿಪುಡಿ ಸುದ್ದಿಗಳು.. |
ಜಿಂಕೆ ಮರಿ ರೇಖಾಗೆ, ಇತ್ತೀಚೆಗೆ ಅವಕಾಶಗಳು ಹೆಚ್ಚುತ್ತಿವೆ. ಹುಡುಗಾಟ ನಂತರ ಗುಣವಂತ, ಹೆತ್ತರೇ ಹೆಣ್ಣನ್ನೇ ಹೆರಬೇಕು ಮತ್ತಿತರ ಚಿತ್ರಗಳಲ್ಲಿ ರೇಖಾ ನಾಯಕಿ. ಅಭಿನಯದಲ್ಲೇ ರೇಖಾ ಹೇಗೆ? ಈ ಪ್ರಶ್ನೆಗೆ ಉತ್ತರ ಪ್ರೇಕ್ಷಕರಿಗೆ ಗೊತ್ತಿದೆ. ಪ್ರೇಕ್ಷಕರಿಗೆ ಗೊತ್ತಿಲ್ಲದ ಸಂಗತಿಯೇನೆಂದರೆ;ರೇಖಾಗೆ ಸ್ಕೂಟಿ ಸೇರಿದಂತೆ ಯಾವುದೇ ದ್ವಿಚಕ್ರ ವಾಹನ ಓಡಿಸಲು ಬರುವುದಿಲ್ಲ! ಈ ವಿಷಯ ಗೊತ್ತಿಲ್ಲದ ನಿರ್ದೇಶಕರು ಚಿತ್ರೀಕರಣದ ಸಂದರ್ಭದಲ್ಲಿ ತಲೆಚಚ್ಚಿಕೊಂಡರಂತೆ! |
ದರ್ಶನ್ ಮಾಜಿ ಮದ್ಯಪಾನಿಯಂತೆ. ಆದರೆ ಕೆಲವು ಸಲ ಫಾರಿನ್ ವೈನ್ ರುಚಿ ನೋಡುತ್ತಾರಂತೆ! ದರ್ಶನ್ ಪ್ರಾಣಿ ಪ್ರಿಯ. ಮೈಸೂರಿನ ಅವರ ಮನೆಯಲ್ಲಿ ಒಂಟೆ ಇದೆಯಂತೆ.ಬಣ್ಣದ ಪಕ್ಷಿಗಳಿವೆಯಂತೆ. |
ದರ್ಶನ್ ಮಾಂಸ ಪ್ರಿಯ. ದಿನದ 3ಹೊತ್ತು ಮಾಂಸ ಕೊಟ್ಟರೂ ಅವರಿಗೆ ಬೇಸರವಿಲ್ಲವಂತೆ! ಚಿಕನ್ ಕಬಾಬ್ ಹೆಸರು ಕೇಳಿದರೆ ಸಾಕು, ಅವರ ಬಾಯಲ್ಲಿ ನೀರು ಬರುತ್ತೆ! |
ಕೊನೆಗೂ ಜಂಭದ ಹುಡುಗಿಚಿತ್ರಮಂದಿರಕ್ಕೆ ಮರಳಿದೆ. ನನ್ನ ಚಿತ್ರ ಚೆನ್ನಾಗಿದ್ದರೂ, ಪ್ರೇಕ್ಷಕರು ಒಪ್ಪಿಕೊಂಡಿದ್ದರೂ ಚಿತ್ರಮಂದಿರ ನೀಡುತ್ತಿಲ್ಲ. ನನಗಂತೂ ಅಳುವೇ ಬರುತ್ತಿದೆ ಎಂದು ಪತ್ರಕರ್ತರ ಮುಂದೆ ನಾಯಕಿ,ನಿರ್ದೇಶಕಿ ಮತ್ತು ನಿರ್ಮಾಪಕಿ ಪ್ರಿಯಾ ಹಾಸನ್ ಗೋಳಾಡಿದ್ದರು. ಈಗ ಹೇಗೋ ಸಪ್ನ ಚಿತ್ರಮಂದಿರಕ್ಕೆ ಜಂಭದ ಹುಡುಗಿಬಂದಿದೆ. |
ಗಣೇಶ್ ಮತ್ತು ರೇಖಾ ಅಭಿನಯದಹುಡುಗಾಟಐವತ್ತು ದಿನ ಪೂರೈಸಿದೆ. ಇತ್ತ ಗಣೇಶ್ ರ ಇನ್ನೊಂದು ಚಿತ್ರ ಚೆಲುವಿನ ಚಿತ್ತಾರಅರ್ಧ ಸೆಂಚುರಿಯ ಸಮೀಪದಲ್ಲಿದೆ. |
ರಾಜ್ಯ ಸರ್ಕಾರದ ಐದು ಪ್ರಶಸ್ತಿ ಬಾಚಿಕೊಂಡ ದುನಿಯಾ23ನೇ ವಾರ. ಮತ್ತೊಂದು ಕಡೆ ಏಳು ಪ್ರಶಸ್ತಿ ಬಾಚಿಕೊಂಡ ಮುಂಗಾರು ಮಳೆ ಚಿತ್ರ 31 ವಾರ ಪೂರೈಸಿದೆ. ಈ ಎರಡೂ ಚಿತ್ರಗಳು ಚಿತ್ರಮಂದಿರಗಳಿಗೆ ಕಚ್ಚಿಕೊಂಡಿರುವ ಕಾರಣ, ಬೇರೆ ಕನ್ನಡ ಚಿತ್ರಗಳು ಬಿಡುಗಡೆಗೆ ಪರದಾಡುತ್ತಿವೆ. |
ಮನ್ಮಥಚಿತ್ರದಲ್ಲಿ ಸೋಡಾ ಗ್ಲಾಸ್ ಹಾಕಿಕೊಂಡು, ಗೂನು ಬೆನ್ನಿನವನಂತೆ ಬಗ್ಗಿಬಗ್ಗಿ ಜಗ್ಗೇಶ್ ಸುಸ್ತಾಗಿದ್ದಾರೆ.ಅನಾರೋಗ್ಯದಿಂದ ಅವರು ಬಳಲಿದ್ದಾರೆ. ಅವರು ಇಷ್ಟೆಲ್ಲ ಕಷ್ಟಪಟ್ಟ ಈ ಚಿತ್ರ ಆಗಸ್ಟ್ 3ರಂದು ತೆರೆಕಾಣಲಿದೆ. |
ದರ್ಶನ್ ಮತ್ತು ಆದಿತ್ಯ, ಈ ಇಬ್ಬರು ಹೀರೋಗಳಿದ್ದರೂ ಸ್ನೇಹನಾ ಪ್ರೀತಿನಾಚಿತ್ರ ಕುಂಟುತ್ತಿದೆ.ಈ ಮಧ್ಯೆ ಮಚ್ಚಿನ ಚಿತ್ರಕ್ಕೆ ದರ್ಶನ್ ಮರಳಿದ್ದು, ಆಯುಧ ಪೂಜೆಚಿತ್ರದಲ್ಲಿ ಅಭಿನಯಿಸಲಿದ್ದಾರೆ. |
ಈಟೀವಿಯಲ್ಲಿ ಪ್ರಸಾರವಾಗುತ್ತಿರುವ ಮಂಥನಧಾರಾವಾಹಿಯನ್ನು ವೀಕ್ಷಕರು ಒಪ್ಪಿದ್ದಾರೆ. ಧಾರಾವಾಹಿ ಮೊನ್ನೆಯಷ್ಟೇ 100ಕಂತುಗಳನ್ನು ಪೂರ್ಣಗೊಳಿಸಿದೆ. ಕತೆ, ಚಿತ್ರಕತೆ ಮತ್ತು ಸಂಭಾಷಣೆ ಹೊಸೆಯುತ್ತಿರುವ ಸೇತುರಾಂ, ಮಂಥನದ ನಿಜವಾದ ಹೀರೋ. ಈ ವಯಸ್ಸಿನಲ್ಲಿ ಸೀರಿಯಲ್ ಸೋತರೇ, ಆ ಪರಿಸ್ಥಿತಿಯನ್ನು ನಿಬಾಯಿಸುವುದು ಹೇಗಪ್ಪಾ ಎಂಬ ಚಿಂತೆ ಅವರಿಗೆ ಬಂದಿತ್ತಂತೆ. ಆದರೆ ವೀಕ್ಷಕರು ಅವರ ಕೈಹಿಡಿದಿದ್ದಾರೆ. ಟಿ.ಎನ್.ಸೀತಾರಾಂ ಸೀರಿಯಲ್ ಮೀರಿಸುವಂತೆ ಮಂಥನ ಮುನ್ನಡೆದಿದೆ. |
ವಿದೇಶಿ ಆರ್ಥಿಕ ಮಾದರಿ ಬೇಡ : ಪಿತ್ರೋಡಾ | Sam Pitroda | India | Telecom Guru | Economic Model | America | Education | ವಿದೇಶಿ ಆರ್ಥಿಕ ಮಾದರಿ ಬೇಡ : ಪಿತ್ರೋಡಾ - Kannada Oneindia |
| Published: Thursday, April 15, 2010, 12:39 [IST] |
ಬೆಂಗಳೂರು, ಏ. 15 : ಬಳಕೆ ಆಧರಿತ ಪಾಶ್ಚಾತ್ಯ ಆರ್ಥಿಕ ಮಾದರಿ ಭಾರತಕ್ಕೆ ಯೋಗ್ಯವಲ್ಲ. ಈ ಮಾದರಿಯ ಅನುಕರಣೆ ಬೇಡ ಎಂದು ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಸಲಹೆ ಮಾಡಿದ್ದಾರೆ. |
ಮೈಕ್ರೋಸಾಫ್ಟ್ ಆಯೋಜಿಸಿದ್ದ ಟೆಕ್ ಎಡ್ 2010 ತಂತ್ರಜ್ಞಾನ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊಸತನ, ವಿನೂತನ ಎಂಬ ಸ್ವಂತಿಕೆ ನಮ್ಮದಾಗಬೇಕು ಎಂದರು. ಅಭಿವೃದ್ಧಿಗಾಗಿ ತನ್ನದೇ ಆದ ಆರ್ಥಿಕ ಮಾದರಿಬೇಕು. ವಿಶೇಷವಾಗಿ ಶಿಕ್ಷಣ, ಆರೋಗ್ಯದಂತಹ ಕ್ಷೇತ್ರಗಳಲ್ಲಿ ಹೊಸ ಅಭಿವೃದ್ಧಿ ಮಾದರಿಗಳಿಗೆ ಭಾರತ ಒತ್ತು ನೀಡಬೇಕಾಗಿದೆ ಎಂದು ಹೇಳಿದರು. |
ನಗರದ ಪ್ರದೇಶಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗಗಳು ಹೊರಗುತ್ತಿಗೆ ಕೇಂದ್ರಗಳಾಗಿ ರೂಪಗೊಳ್ಳಬೇಕು. ಬೆಂಗಳೂರು ಅಮೆರಿಕದ ಬ್ಯಾಕ್ ಆಫೀಸ್ ಆಗುವುದಾದರೆ ನಗರ ಪ್ರದೇಶಗಳಿಗೆ ಬ್ಯಾಕ್ ಆಫೀಸ್ ಆಗಿ ಗ್ರಾಮೀಣ ಪ್ರದೇಶಗಳು ಏಕೆ ಆಗಬಾರದು ಎಂದು ಪಿತ್ರೋಡಾ ಪ್ರಶ್ನಿಸಿದರು. |
ಸೇವೆ ಆರಂಭಿಸದ ಖಾಸಗಿ ಆಸ್ಪತ್ರೆ ನೋಂದಣಿ ರದ್ದು | Udayavani – ಉದಯವಾಣಿ |
ಸೇವೆ ಆರಂಭಿಸದ ಖಾಸಗಿ ಆಸ್ಪತ್ರೆ ನೋಂದಣಿ ರದ್ದು |
ಖಾಸಗಿ ಆಸ್ಪತ್ರೆ ವೈದ್ಯರಿಗೆ ಡಿಸಿ ಎಚ್ಚರಿಕೆ |
Team Udayavani, May 3, 2020, 4:42 PM IST |
ವಿಜಯಪುರ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧ್ಯಕ್ಷತೆಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ಸಭೆ ನಡೆಯಿತು. |
ವಿಜಯಪುರ: ಜಿಲ್ಲೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಖಾಸಗಿ ಆಸ್ಪತ್ರೆಗಳು ಸೇವೆ ಆರಂಭಿಸಬೇಕು. ಜಿಲ್ಲಾಡಳಿತದ ಈ ನಿರ್ದೇಶನ ನಿರ್ಲಕ್ಷಿಸಿದಲ್ಲಿ ಖಾಸಗಿ ಆಸ್ಪತ್ರೆಗಳ ನೋಂದಣಿ ರದ್ದುಗೊಳಿಸುವುದಾಗಿ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಎಚ್ಚರಿಸಿದ್ದಾರೆ. |
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಜಿಲ್ಲಾದ್ಯಂತ ಸೇವೆ ಆರಂಭಿಸಿರುವ ಖಾಸಗಿ ಆಸ್ಪತ್ರೆ ಹೊರತುಪಡಿಸಿ ಸೇವೆ ನೀಡದ ಖಾಸಗಿ ಆಸ್ಪತ್ರೆಗಳು ತಕ್ಷಣ ಸೇವೆ ಆರಂಭಿಸಬೇಕು. ಸಾರ್ವಜನಿಕರಿಂದ ದೂರು ಬಂದಲ್ಲಿ ಸಂಬಂಧಿಸಿದ ಆಸ್ಪತ್ರೆಗಳ ನೋಂದಣಿ ರದ್ದು ಮಾಡುವುದಾಗಿ ಎಚ್ಚರಿಸಿದರು. |
ಜಿಲ್ಲೆಯಲ್ಲಿ 229 ಆಯುರ್ವೇದಿಕ್ ಕ್ಲಿನಿಕ್-ನರ್ಸಿಂಗ್, 5 ಯುನಾನಿ, 29 ಹೋಮಿಯೋಪಥಿಕ್, 230 ಆಲೋಪಥಿಕ್ ಮತ್ತು 38 ಡೈಗ್ನೊàಸ್ಟಿಕ್ ಆಸ್ಪತ್ರೆಗಳಿವೆ. ಈ ಆರೋಗ್ಯ ಕೇಂದ್ರಗಳಲ್ಲಿ ಶ್ವಾಸಕೋಶ ತೊಂದರೆ, ನೆಗಡಿ, ಕೆಮ್ಮು, ಜ್ವರ ರೋಗಿಗಳು ಕಂಡು ಬಂದಲ್ಲಿ ಚಿಕಿತ್ಸೆ ನೀಡದೇ ತಕ್ಷಣ ತಜ್ಞ ವೈದ್ಯರ ಬಳಿಗೆ ಕಳಿಸುವ ವ್ಯವಸ್ಥೆ ಮಾಡಬೇಕು. ಅಲ್ಲದೇ ರೋಗಿ ತಜ್ಞ ವೈದ್ಯರ ಆಸ್ಪತ್ರೆಗೆ ತಲುಪಿದ ಬಗ್ಗೆ ಖಾತ್ರಿಪಡಿಸಿಕೊಂಡು ತಾಲೂಕು ಆರೋಗ್ಯಾಧಿ ಕಾರಿ ಹಾಗೂ ಐಎಂಎ ಅಧ್ಯಕ್ಷರಿಗೆ ಮಾಹಿತಿ ನೀಡಬೇಕು. ಪ್ರಾಥಮಿಕ ಪರೀಕ್ಷೆ ನಡೆಸಿದ ಹಾಗೂ ತಜ್ಞ ವೈದ್ಯರು ರೋಗಿಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ವೈದ್ಯರು ತಮ್ಮ ತಜ್ಞತೆಗೆ ತಕ್ಕಂತೆ ಚಿಕಿತ್ಸೆ ಒದಗಿಸಬೇಕು ಎಂದು ನಿರ್ದೇಶನ ನೀಡಿದರು. |
ಜಿಲ್ಲೆಯಲ್ಲಿ ಈಗಾಗಲೇ ಘೋಷಿಸಿ ರುವ ಕಂಟೇನ್ಮೆಂಟ್ ವಲಯದಲ್ಲಿ ಯಾವುದೇ ಆಸ್ಪತ್ರೆಗಳು ಐಪಿಡಿ, ಹೆರಿಗೆ, ಸರ್ಜರಿ ಕೈಗೊಳ್ಳುವಂತಿಲ್ಲ. ಕೇವಲ ಓಪಿಡಿ ಮಾತ್ರ ತೆರೆದು ಚಿಕಿತ್ಸೆ ನೀಡಬಹುದಾಗಿದೆ. ತುರ್ತು ಚಿಕಿತ್ಸಾ ಪ್ರಕರಣ ಇದ್ದಲ್ಲಿ ರೋಗಿಗಳನ್ನು ಇತರೆ ತಜ್ಞ ವೈದ್ಯರ ಬಳಿ ಕಳುಹಿಸಲು ಪೊಲೀಸ್ ಇಲಾಖೆ ನೆರವು ಪಡೆಯಬಹುದು. |
ಗೋಲ್‌ಗುಂಬಜ್ ಸಿಪಿಐ ಬಿ.ಕೆ. ಮುಕರ್ತಿಹಾಳ ಮೊ.9480804232 ಸಂಪರ್ಕಿಸಿ ನೆರವು ಪಡೆಯುವಂತೆ ಸೂಚಿಸಿದರು. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ |
ಸಾರ್ವಜನಿಕರಿಗೆ ಆರೋಗ್ಯ ಸೇವೆ ಕಲ್ಪಿಸಿ ಜಿಲ್ಲಾಡಳಿತದ ಜೊತೆ ಸಹಕರಿಸಬೇಕು. ಬಯೋಮೆಡಿಕಲ್ ವೇಸ್ಟ್ ನಿರ್ವಹಣೆಗೆ ಸಮನ್ವಯ ಸಾಧಿಸಲಾಗುವುದು. ಕೋವಿಡ್-19 ಹೊರತು ಪಡಿಸಿ ಇತರೇ ಸಾವು ಸಂಭವಿಸಿದಲ್ಲಿ, ಆಸ್ಪತ್ರೆಯಲ್ಲಿ ದೃಢೀಕರಣ ಇರಿಸಿಕೊಂಡು ರೋಗಿ ಸಂಬಂಧಿಗಳಿಗೆ ಪ್ರತಿ ನೀಡಬೇಕು ಎಂದರು. ಜಿಪಂ ಸಿಇಓ ಗೋವಿಂದರೆಡ್ಡಿ, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ಜಿಲ್ಲಾಸ್ಪತ್ರೆ ಸರ್ಜನ್ ಡಾ| ಶರಣಪ್ಪ ಕಟ್ಟಿ, ಡಾ| ಎಂ.ಬಿ.ಬಿರಾದಾರ ಇತರರು ಉಪಸ್ಥಿತರಿದ್ದರು. |
'ಧೀರ' ಚಿತ್ರದ ಬಿಡುಗಡೆಗೆ ಸಿದ್ಧತೆ | Prajavani |
'ಧೀರ' ಚಿತ್ರದ ಬಿಡುಗಡೆಗೆ ಸಿದ್ಧತೆ |
Published: 21 ಅಕ್ಟೋಬರ್ 2017, 01:01 IST |
Updated: 21 ಅಕ್ಟೋಬರ್ 2017, 01:01 IST |
ಬೆಂಗಳೂರು: ನಟ ಅಜಿತ್‌ಕುಮಾರ್ ನಟನೆಯ 'ಆರಂಭಂ' ತಮಿಳು ಸಿನಿಮಾವು 'ಧೀರ' ಹೆಸರಿನಡಿ ಕನ್ನಡದಲ್ಲಿ ಡಬ್ಬಿಂಗ್ ಆಗಿ ಬಿಡುಗಡೆಗೆ ಸಿದ್ಧವಾಗಿದೆ. 'ಸತ್ಯದೇವ್ ಐಪಿಎಸ್' ಡಬ್ಬಿಂಗ್ ಚಿತ್ರದ ನಿರ್ಮಾಪಕ ಜಿ. ಕೃಷ್ಣಮೂರ್ತಿ ಅವರೇ ಈ ಚಿತ್ರವನ್ನೂ ಡಬ್ಬಿಂಗ್ ಮಾಡಿ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. |
'ಸತ್ಯದೇವ್ ಐಪಿಎಸ್' ಚಿತ್ರದ ಬಿಡುಗಡೆ ಖಂಡಿಸಿ ಕನ್ನಡಪರ ಹೋರಾಟಗಾರರು ಮತ್ತು ಹಲವು ನಟರು ಪ್ರತಿಭಟಿಸಿದ್ದರು. ಈಗ 'ಧೀರ' ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಸಂಪಿಗೆ ಚಿತ್ರಮಂದಿರದಲ್ಲಿ ನಟ ವಿಜಯ್ ನಟನೆಯ 'ಮರ್ಸೆಲ್' ಚಿತ್ರ ಪ್ರದರ್ಶನ ಕಂಡಿತ್ತು. ಈ ವೇಳೆ ವಿಜಯ್ ಅಭಿಮಾನಿಗಳು ಕನ್ನಡಿಗರ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ. |
ಈ ಕುರಿತು 'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಡಬ್ಬಿಂಗ್ ಪರ ಹೋರಾಟಗಾರ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, 'ನಾನು ಡಬ್ಬಿಂಗ್ ಪರವಾಗಿದ್ದೇನೆ. ಆದರೆ, ಕನ್ನಡಿಗರ ಭಾವನೆಗಳನ್ನು ಕೆರಳಿಸುವ ಕೆಲಸಕ್ಕೆ ಎಂದಿಗೂ ಮುಂದಾಗುವುದಿಲ್ಲ. ಧೀರ ಚಿತ್ರದ ಬಿಡುಗಡೆಗೆ ನನ್ನ ಬೆಂಬಲ ಇಲ್ಲ' ಎಂದು ಸ್ಪಷ್ಟಪಡಿಸಿದರು. |
'ತಮಿಳು ಭಾಷೆಯ ಯಾವುದೇ ಡಬ್ಬಿಂಗ್ ಚಿತ್ರ ಪ್ರದರ್ಶನಕ್ಕೆ ನಾನು ಬೆಂಬಲ ನೀಡುವುದಿಲ್ಲ. ಇದರಿಂದ ಅನಾಹುತಗಳೇ ಹೆಚ್ಚು. ನನ್ನದು ತಟಸ್ಥ ನಿಲುವು. ಆದರೆ, ಹಿಂದಿ ಸೇರಿದಂತೆ ಇತರ ಯಾವುದೇ ಭಾಷೆಯ ಚಿತ್ರಗಳನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿದರೆ ನಾನು ಖುದ್ದಾಗಿ ನಿಂತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸುತ್ತೇನೆ' ಎಂದು ಪ್ರತಿಕ್ರಿಯಿಸಿದರು. |
'ಕೃಷ್ಣಮೂರ್ತಿ ಅವರು ನಮ್ಮ ವಾಣಿಜ್ಯ ಮಂಡಳಿಯ ಸದಸ್ಯರಾಗಿದ್ದಾರೆ. 'ಧೀರ' ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅದು ಅವರ ನಿರ್ಧಾರವಾಗಿದೆ' ಎಂದರು. |
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ಪತ್ರಿಕೋದ್ಯಮ ವಿಭಾಗದಲ್ಲಿ ಅನುಪಮ ವೇದಿಕೆಯ ಕಾರ್ಯಕ್ರಮ |
ಬಾಲ್ಯದ ಮುಗ್ಧತೆಯೇ ಬದುಕಿನ ಸಿದ್ಧತೆಯ ತಳಹದಿ: ಡಾ.ವಿನಾಯಕ ಭಟ್ಟ |
ಪುತ್ತೂರು: ಕಾವ್ಯಗಳ ಶಕ್ತಿ ಅನಂತವಾದದ್ದು. ಅನೇಕ ಬಹುಶ್ರುತ ಸಾಧಕರು ಕಾವ್ಯಗಳ ಮೂಲಕ ಅತ್ಯುತ್ಕೃಷ್ಟ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಎಂದೋ ಮೂಡಿದ ಕಾವ್ಯಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಗಳಾಗಿ ನಮ್ಮ ಮುಂದಿವೆ. ಅಂತಹ ಉತ್ಕೃಷ್ಟ ಕಾವ್ಯ ಪ್ರಪಂಚವನ್ನು ಸೃಷ್ಟಿಸಿದವರಲ್ಲಿ ಆದಿ ಶಂಕರಾಚಾರ್ಯರೂ ಒಬ್ಬರು ಎಂದು ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಹೇಳಿದರು. |
ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸುವ ಅನುಪಮ ಪ್ರತಿಭಾ ವೇದಿಕೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ 'ನನ್ನ ಇಷ್ಟದ ಹಾಡು' ವಿಷಯದ ಕುರಿತಾಗಿ ಶುಕ್ರವಾರ ಮಾತನಾಡಿದರು. |
ಬಾಲ್ಯದ ಮುಗ್ಧತೆಯೇ ಬದುಕಿನ ಸಿದ್ಧತೆಯ ತಳಹದಿ. ಆದರೆ ಬೆಳೆಯುತ್ತಾ ಸಾಗಿದಂತೆ ಮುಗ್ಧತೆ ಮಾಯವಾಗಿ ಬಿಡುತ್ತದೆ. ಪ್ರೀತಿ-ಪ್ರೇಮ-ಪ್ರಣಯಗಳ ಬಲೆಯೊಳಗೆ ಸಿಲುಕಿ ಅನೇಕ ಯುವಕ ಯುವತಿಯರು ನಿಜವಾದ ಸತ್ವವನ್ನೂ, ಬದುಕಿನ ತತ್ತ್ವವನ್ನೂ ಮರೆತು ಮುಂದುವರೆಯುತ್ತಾರೆ. ಆದರೆ ನಿಜವಾದ ಪ್ರೇಮವೆಂದರೆ ತಾಯಿಯ ಪ್ರೇಮ. ವ್ಯಕ್ತಿಯ ಜನನ ಪೂರ್ವದಿಂದಲೇ ಆತನನ್ನು ಪ್ರೀತಿಸುವ ಒಂದು ಜೀವವಿದ್ದರೆ ಅದು ಅಮ್ಮ. ಈ ಸತ್ಯವನ್ನು ಶಂಕರಾಚಾರ್ಯರು ತಮ್ಮ ಕಾವ್ಯಗಳಲ್ಲಿ ವ್ಯಕ್ತಪಡಿಸಿದ್ದಾರೆ. ಇಂತಹ ಸಂದೇಶಗಳನ್ನು ಅರಿಯುವಲ್ಲಿ ಕಾವ್ಯಗಳು ನಮಗೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. |
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಯಾವುದಾದರೂ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸುವ ಹಾಗೂ ಅವಕಾಶ ಕಲ್ಪಿಸಿಕೊಡುವ ವ್ಯವಸ್ಥೆ ಇರಬೇಕು. ಇದುವರೆಗೂ ವೇದಿಕೆಯೇರದವರೂ ವೇದಿಕೆಗೆ ಬರುವಂತಾಗುವುದೇ ಕಾರ್ಯಕ್ರಮದ ನಿಜವಾದ ಸಾರ್ಥಕ್ಯ. ಆ ನೆಲೆಯಲ್ಲಿ ಅನುಪಮ ವೇದಿಕೆ ಕಾರ್ಯನಿರ್ವಹಿಸುತ್ತದೆ ಎಂದರು. |
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಪ್ರತಿಭೆಗೆ ವೇದಿಕೆ ದೊರೆತಾಗ ಮಾತ್ರ ಅದು ಅರಳುವುದಕ್ಕೆ ಸಾಧ್ಯ. ಪ್ರತಿಭೆಯನ್ನು ಗುರುತಿಸುವ ಮತ್ತು ಅರಳಿಸುವ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು. ಅನುಪಮ ಪ್ರತಿಭಾ ವೇದಿಕೆ ಪ್ರತಿಭೆಗೆ ಕೇವಲ ವೇದಿಕೆಯಷ್ಟೇ ಆಗದೆ ಪ್ರತಿಭಾ ಪುರಸ್ಕಾರವನ್ನೂ ನಡೆಸುವ ಮಟ್ಟಕ್ಕೆ ಬೆಳೆಯಬೇಕು. ವಿವಿಧ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗೆ ಗೌರವ ಸಂದಾಯವಾದಾಗ ಅದು ಮತ್ತಷ್ಟು ಸತ್ವಯುತವಾಗಿ ಬೆಳೆದುಬರುವುದಕ್ಕೆ ಸಾಧ್ಯ ಎಂದರು. |
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಪಂಚಮಿ ಬಾಕಿಲಪದವು, ಪ್ರಿಯಾ, ಪ್ರಕೃತಿ, ನಿಶ್ಚಿತ, ಮೋಹನ ಆಚಾರ್ಯ, ಶೇಖರ, ಸ್ಪೂರ್ತಿ, ಮೇಘಾ ಡಿ, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಾದ ನವೀನ್ ಹಾಗೂ ಸಾಯಿಶ್ವೇತಾ ತಮ್ಮ ಇಷ್ಟದ ಹಾಡಿನ ಬಗೆಗೆ ಮಾತನಾಡಿದರು. |
ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ, ಇಂಗ್ಲಿಷ್ ಉಪನ್ಯಾಸಕಿ ಸಂಧ್ಯಾ ಎಂ, ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿ.ತೇಜಶಂಕರ ಸೋಮಯಾಜಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ, ಅನುಪಮ ಪ್ರತಿಭಾ ವೇದಿಕೆಯ ಕಾರ್ಯದರ್ಶಿ ವೈಷ್ಣವೀ ಜೆ ರಾವ್ ಉಪಸ್ಥಿತರಿದ್ದರು. |
ತೃತೀಯ ವರ್ಷದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮಿ ಸ್ವಾಗತಿಸಿ, ಅದಿತಿ ವಂದಿಸಿದರು. ತೃತೀಯ ವರ್ಷದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಮನೀಶ್ ವಿ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು. |
ಸೆ. 22 ರಿಂದ 25 ರ ವರೆಗೆ ಕೃಷಿ ಮೇಳ – KNP |
ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಸೆಪ್ಟಂಬರ್ 22 ರಿಂದ 25 ರವರೆಗೆ ನಾಲ್ಕು ದಿನಗಳ ಕಾಲ "ಸಿರಿಧಾನ್ಯ ಬಳಸಿ-ಆರೋಗ್ಯ ಉಳಿಸಿ" ಎಂಬ ಘೋಷವಾಕ್ಯದೊಂದಿಗೆ ಕೃಷಿ ಮೇಳವನ್ನು ಹಮ್ಮಿಕೊಂಡಿದೆ. |
ಕೃಷಿ ಮೇಳದಲ್ಲಿ ಪಲ್ಸ್ ಕಾರ್ನರ್, ಹೈ-ಟೆಕ್ ಮಳಿಗೆಗಳು, ಹೂ ಮತ್ತು ಹಣ್ಣು ಪ್ರದರ್ಶನ, ಮತ್ಸ್ಯ ಮೇಳ, ವಸ್ತು ಪ್ರದರ್ಶನಗಳು ಮತ್ತು ಕೃಷಿ ಯಂತ್ರೋಪಕರಣಗಳ ಬೃಹತ್ ಪ್ರದರ್ಶನ ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. |
ಕೃಷಿ ಮೇಳಕ್ಕೆ ಬರುವ ರೈತರಿಗೆ ಪ್ರತಿ 15 ನಿಮಿಷಕ್ಕೊಮ್ಮೆ ವಾಹನ ವ್ಯವಸ್ಥೆಯನ್ನು ಕೃಷಿ ವಿಶ್ವವಿದ್ಯಾಲಯ ಕಲ್ಪಿಸಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಆರ್.ಆರ್. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |
Tags: "ಸಿರಿಧಾನ್ಯ ಬಳಸಿ-ಆರೋಗ್ಯ ಉಳಿಸಿ"ಕೃಷಿ ಮೇಳಕೃಷಿ ವಿಶ್ವವಿದ್ಯಾಲಯಕೆ.ಎನ್.ಪಿ.ವಾರ್ತೆಧಾರವಾಡಪಲ್ಸ್ ಕಾರ್ನರ್ಬೃಹತ್ ಪ್ರದರ್ಶನವಸ್ತು ಪ್ರದರ್ಶನಸೆ. 22 ರಿಂದ 25 ರ ವರೆಗೆ ಕೃಷಿ ಮೇಳಹೂ ಮತ್ತು ಹಣ್ಣು ಪ್ರದರ್ಶನ |
ಕ್ಲಾಸಿಕ್ ಕಾರುಗಳಿಗಿಂತಲೂ ಹೊಸ ಐಸಿ ಕಾರುಗಳು ಮತ್ತು ಇವಿ ಕಾರುಗಳೇ ಪರಿಸರಕ್ಕೆ ಹೆಚ್ಚು ಡೇಂಜರ್ - Kannada DriveSpark |
Published: Tuesday, June 21, 2022, 8:46 [IST] |
ಪರಿಸರ ಸಂರಕ್ಷಣೆಗಾಗಿ ವಿಶ್ವಾದ್ಯಂತ ಎಲೆಕ್ಟ್ರಿಕ್ ಕಾರುಗಳ ಬಳಕೆಗಾಗಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪರಿಸರ ಸ್ನೇಹಿ ಎನ್ನುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಇವಿ ಕಾರುಗಳು ಮತ್ತು ಮಾಲಿನ್ಯ ತಡೆಯುವ ಹೊಸ ತಂತ್ರಜ್ಞಾನ ಪ್ರೇರಿತ ಸಾಮಾನ್ಯ ಕಾರುಗಳ ಬಳಕೆ ಹೆಚ್ಚುತ್ತಿದೆ. |
ಸುಧಾರಿತ ತಂತ್ರಜ್ಞಾನ ಪ್ರೇರಿತ ಪೆಟ್ರೋಲ್, ಹೈಬ್ರಿಡ್ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಕಾರು ಮಾದರಿಗಳ ಬಳಕೆಯು ಹೆಚ್ಚುತ್ತಿದ್ದು, ಮಾಲಿನ್ಯ ಪ್ರಮಾಣವನ್ನು ತಡೆಯಲು ಹಳೆಯ ವಾಹನಗಳ ಮೇಲಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಆದರೆ ಅಧ್ಯಯನವೊಂದರ ಪ್ರಕಾರ ಕ್ಲಾಸಿಕ್ ಕಾರುಗಳಿಂತಲೂ ಹೆಚ್ಚು ಹೊಸ ತಂತ್ರಜ್ಞಾನ ಪ್ರೇರಿತ ಇಂಧನ ಆಧರಿತ ಕಾರುಗಳು ಮತ್ತು ಎಲೆಕ್ಟ್ರಿಕ್ ಕಾರು ಮಾದರಿಗಳಿಂದಲೇ ಪರಿಸರ ಹೆಚ್ಚು ಹಾನಿ ಎಂಬ ಅಂಶವನ್ನು ಬಹಿರಂಗಪಡಿಸಲಾಗಿದೆ. |
ಹೌದು, ಕ್ಲಾಸಿಕ್ ಮತ್ತು ವಿಶೇಷ ಕಾರುಗಳ ವಿಮಾ ಪೂರೈಕೆದಾರರಾದ ಕಂಪನಿಯಾಗಿರುವ ಫುಟ್‌ಮ್ಯಾನ್ ಜೇಮ್ಸ್ ಹೊಸ ಅಧ್ಯಯನ ವರದಿಯಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಆಧುನಿಕ ವಾಹನಗಳಿಗಿಂತಲೂ ಕ್ಲಾಸಿಕ್ ಕಾರುಗಳು ಪರಿಸರಕ್ಕೆ ಕಡಿಮೆ ಹಾನಿಕಾರಕ ಎಂದು ಹೇಳಿಕೊಂಡಿದೆ. |
ಆಧುನಿಕ ಕಾರುಗಳಿಗಿಂತಲೂ ಭಿನ್ನವಾಗಿರುವ ಕ್ಲಾಸಿಕ್ ಕಾರುಗಳ ವಾರ್ಷಿಕವಾಗಿ ಬಳಕೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನವನ್ನು ಮಾಡಲಾಗಿದ್ದು, ಆಧುನಿಕ ಕಾರುಗಳು ದೈನಂದಿನ ಆಧಾರದ ಮೇಲೆ ಹೆಚ್ಚಾಗಿ ಬಳಸಲ್ಪಡುವುದಲ್ಲದೆ ಅವುಗಳ ಉತ್ಪಾದನೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಇಂಗಾಲವನ್ನು ಉತ್ಪಾದಿಸುತ್ತವೆ. |
ಹೊಸ ಅಧ್ಯಯನ ವರದಿಯ ಪ್ರಕಾರ, ಯುಕೆಯಲ್ಲಿನ ಕ್ಲಾಸಿಕ್ ಕಾರೊಂದು ವಾರ್ಷಿಕವಾಗಿ ಸರಾಸರಿಯಾಗಿ 1,931 ಕಿ.ಮೀ ಪ್ರಮಾಣದ ಮೂಲಕ ಗರಿಷ್ಠ 563 ಕೆಜಿ (1,241 lb) Co2 ಅನ್ನು ಹೊರಸೂಸುತ್ತವೆ. |
ಆದರೆ ಆಧುನಿಕ ವಾಹನಗಳು ಪ್ರತಿ ಕಿ.ಮೀ ಗೆ ಗಣನೀಯವಾಗಿ ಕಡಿಮೆ CO2 ಹೊರಸೂಸುವಿಕೆಯನ್ನು ಹೊಂದಿದ್ದರೂ ಕೂಡಾ ಅವುಗಳು ವಾರ್ಷಿಕವಾಗಿ ಹೆಚ್ಚಿನ ದೂರ ಕ್ರಮಿಸುವುದರಿಂದ ಮತ್ತು ಕಾರ್ಖಾನೆಯಿಂದ ಗಣನೀಯವಾಗಿ ದೊಡ್ಡ ಪ್ರಮಾಣದಲ್ಲಿ ಇಂಗಾಲದ ಉತ್ಪಾದನೆಗೆ ಕಾರಣವಾಗುತ್ತವೆ. |
ಯುರೋಪಿನಲ್ಲಿ ಫೋಕ್ಸ್‌ವ್ಯಾಗನ್ ಗಾಲ್ಫ್‌ನಂತಹ ಕಾರುಗಳು ಸರಾಸರಿ ಪ್ರಯಾಣಿಕ ಕಾರಿನ ಉತ್ಪಾದನೆಯ ಸಮಯದಲ್ಲಿ ವಾರ್ಷಿಕ ಇಂಗಾಲದ ಹೊರಸೂಸುವಿಕೆಯು 6.8 ಟನ್ (14,991 lb) ತಲುಪುತ್ತದೆ ಎನ್ನಲಾಗಿದ್ದು, ಇದರ ಜೊತೆಗೆ ಪೋಲೆಸ್ಟಾರ್ 2 ನಂತಹ ಆಧುನಿಕ ಬ್ಯಾಟರಿ-ಎಲೆಕ್ಟ್ರಿಕ್ ವಾಹನದ ಉತ್ಪಾದನೆ ಸಂದರ್ಭದಲ್ಲೂ 26 ಟನ್ (57,320 ಪೌಂಡ್) Co2 ಗೆ ಹೆಚ್ಚುತ್ತದೆ. |
ಆದರೆ ಮಾಲಿನ್ಯಕ್ಕೆ ಮುಖ್ಯ ಕಾರಣ ಎನ್ನಲಾಗುವ ಕ್ಲಾಸಿಕ್ ಕಾರುಗಳು ಸರಾಸರಿ ಸಾಮಾನ್ಯ ಕಾರುಗಳು ವಾರ್ಷಿಕವಾಗಿ ಹೊರಸೂಸುವ 26-ಟನ್ Co2 ಅಂಕಿಅಂಶವನ್ನು ತಲುಪಲು ಕನಿಷ್ಠ 46 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನ್ಯಾಯೋಚಿತವಾಗಿ ಮುಂದಿನ ದಶಕದಲ್ಲಿ ವಾಹನ ತಯಾರಕರು ತಮ್ಮ ಕಾರ್ಬನ್-ತಟಸ್ಥ ಉತ್ಪಾದನಾ ಗುರಿಗಳನ್ನು ತಲುಪಿದ ಮಾತ್ರವೇ ಈ ಹೋಲಿಕೆ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. |
ಇದಕ್ಕೆ ಎಲೆಕ್ಟ್ರಿಕ್ ಕಾರುಗಳ ಸಂಚಾರವು ಸಂಪೂರ್ಣವಾಗಿ ಮಾಲಿನ್ಯ ಮುಕ್ತವಾಗಿದ್ದರೂ ಇವಿ ವಾಹನ ಉತ್ಪಾದನೆ ಸಂದರ್ಭದಲ್ಲಿ ಮತ್ತು ಅದಕ್ಕೆ ಒದಗಿಸುವ ಶಕ್ತಿ ಸಂಪನ್ಮೂಲವು ಮಾಲಿನ್ಯ ಮುಕ್ತವಾಗಿಲ್ಲ. |
ಭಾರತದಂತ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಶೇ.70 ಕ್ಕಿಂತಲೂ ಕಲ್ಲಿದ್ದಲೂ ಮೇಲೆ ಅವಲಂಭಿತವಾಗಿದ್ದು, ಇವಿ ವಾಹನಗಳಿಗೆ ಬೇಕಿರುವ ಶಕ್ತಿ ಪೂರೈಕೆಯು ಹೆಚ್ಚಿನ ಮಟ್ಟದ ಮಾಲಿನ್ಯಕ್ಕೆ ಪರೋಕ್ಷ ಕಾರಣವಾಗುತ್ತದೆ ಎನ್ನುವುದು ಅಧ್ಯಯನದ ಮುಖ್ಯ ಅಂಶವಾಗಿದೆ. |
ಅದಾಗ್ಯೂ, ಎಲೆಕ್ಟ್ರಿಕ್ ವಾಹನಗಳು ಅದರ ಜೀವನ ಚಕ್ರದಲ್ಲಿ ಕಡಿಮೆ ಇಂಗಾಲದ ಹೆಜ್ಜೆಗುರುತನ್ನು ಹೊಂದಿರಲಿದ್ದು, ಕಾರುಗಳ ಬಳಕೆಯನ್ನು ಆಧರಿಸಿ ಕ್ಲಾಸಿಕ್ ಕಾರು ಮಾದರಿಗಳಿಗೆ ವಿನಾಯ್ತಿ ನೀಡುವಂತೆ ಫುಟ್‌ಮ್ಯಾನ್ ಜೇಮ್ಸ್ ಅಧ್ಯಯನ ವರದಿಯು ಶಿಫಾರಸ್ಸು ಮಾಡುತ್ತದೆ. |
ಕೋವಿಡ್ ಲಾಕ್‍ಡೌನ್ ಮಾರ್ಗಸೂಚಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಿಎಂ ಬಿಎಸ್‍ವೈ ಸೂಚನೆ - Sanjevani |
Home ಜಿಲ್ಲೆ ಬಳ್ಳಾರಿ ಕೋವಿಡ್ ಲಾಕ್‍ಡೌನ್ ಮಾರ್ಗಸೂಚಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಿಎಂ ಬಿಎಸ್‍ವೈ ಸೂಚನೆ |
ಕೋವಿಡ್ ಲಾಕ್‍ಡೌನ್ ಮಾರ್ಗಸೂಚಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಿಎಂ ಬಿಎಸ್‍ವೈ ಸೂಚನೆ |
Subsets and Splits
No community queries yet
The top public SQL queries from the community will appear here once available.