text
stringlengths
0
61.5k
ಸಂಪುಟ ವಿಸ್ತರಣೆಯಿಂದ ಸಮ್ಮಿಶ್ರ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ ಬೆಳಗಾವಿ: ಸಂಪುಟ ವಿಸ್ತರಣೆಯಿಂದ ಸಮ್ಮಿಶ್ರ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದರು. ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆಯಿಂದ...
ಸಂಪುಟ ವಿಸ್ತರಣೆ ಇಲ್ಲ ಪುನಾರಚನೆ: ಸಿದ್ದರಾಮಯ್ಯ
ಸಿಎಲ್‌ಪಿ ಸಭೆಯಲ್ಲಿ ಶಾಸಕರಿಗೆ ಭರವಸೆ ನೀಡಿದ ಸಿದ್ದರಾಮಯ್ಯ ಬೆಳಗಾವಿ: ಈ ವಾರದಲ್ಲಿ ಸಚಿವ ಸಂಪುಟ ಪುನಾರಚನೆ ಖಚಿತ ಎಂಬ ಭರವಸೆಯನ್ನು ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಿಗೆ ನೀಡಿದ್ದಾರೆ. ಬೆಳಗಾವಿಯಲ್ಲಿ...
ಉತ್ತರ ಕರ್ನಾಟಕದ ಅಸಮಾಧಾನ ನೀಗಿಸಲು ಎಂಬಿ. ಪಾಟೀಲ್ ಮನವಿ ಬೆಂಗಳೂರು: ಮೈತ್ರಿ ಸರಕಾರ ರಚನೆಯಾದಂದಿನಿಂದ ಉತ್ತರ ಕರ್ನಾಟಕದ ಭಾಗದ ನಾಯಕರಿಗೆ ಅನ್ಯಾಯವಾಗಿದೆ ಎಂಬ ಭಾವನೆ ತಲೆದೋರಿದೆ. ಸಚಿವ ಸಂಪುಟ ವಿಸ್ತರಣೆಯ ಮೂಲಕವಾದರೂ ಆ ಭಾವನೆ...
ಶುಂಠಿ ತೋಟದಲ್ಲಿ ಜೀತಕ್ಕಿದ್ದ 14 ಮಂದಿ ಕಾರ್ಮಿಕರ ರಕ್ಷಣೆ | Prajapragathi
Home ರಾಜ್ಯ ಶುಂಠಿ ತೋಟದಲ್ಲಿ ಜೀತಕ್ಕಿದ್ದ 14 ಮಂದಿ ಕಾರ್ಮಿಕರ ರಕ್ಷಣೆ
ಶುಂಠಿ ತೋಟದಲ್ಲಿ ಜೀತಕ್ಕಿದ್ದ 14 ಮಂದಿ ಕಾರ್ಮಿಕರ ರಕ್ಷಣೆ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲೇಕುಪ್ಪೆಯ ಟಿಬೆಟಿಯನ್ ಕಾಲೋನಿಯ 10ನೇ ಕ್ಯಾಂಪ್‍ನಲ್ಲಿರುವ ಶುಂಠಿ ತೋಟದಲ್ಲಿ ಜೀತಕ್ಕಿದ್ದ 14 ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಬೈಲೆಕುಪ್ಪೆ ಪೊಲೀಸ್, ಮೈಸೂರು ಜಿಲ್ಲಾಡಳಿತ, ಹುಣಸೂರು ಉಪ ವಿಭಾಗದ ಉಪವಿಭಾಗಾಧಿಕಾರಿ ಕೆ.ನಿತೀಶ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಈ ಅಧಿಕಾರಿಗಳು ಸಂತ್ರಸ್ತರನ್ನು ವಿಚಾರಣೆಗೆ ಒಳಪಡಿಸಿದ ನಂತರ ಇವರೆಲ್ಲಾ ಜೀತಕಾರ್ಮಿಕರಾಗಿ ದುಡಿಯುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಬಿಡುಗಡೆಗೊಂಡ ಈ ಎಲ್ಲಾ ಸಂತ್ರಸ್ತ ಜೀತದಾಳುಗಳಿಗೆ ಜಿಲ್ಲಾಡಳಿತ ಬಿಡುಗಡೆ ಪ್ರಮಾಣಪತ್ರ ನೀಡಿ ತೊಟದ ಮಾಲೀಕರ ಜತೆ ಈ ಜೀತದಾಳುಗಳು ಮಾಡಿಕೊಂಡಿದ್ದ ಎಲ್ಲಾ ಒಪ್ಪಂದಗಳಿಂದ ಅವರನ್ನು ಮುಕ್ತಿಗೊಳಿಸಿದೆ. ಜೀತದಾಳುಗಳ ಪುನರ್‍ವಸತಿ ಯೋಜನೆಯಡಿ ತಲಾ 20ಸಾವಿರ ರೂಪಾಯಿಗಳ ಆರಂಭಿಕ ಪರಿಹಾರಧನ ನೀಡಲಾಗುತ್ತಿದೆ.
ಸೆಪ್ಟೆಂಬರ್ 8 ರಂದು ಫಾರ್ಮ್ ಮಾಲೀಕನನ್ನು ಬಂಧಿಸಲಾಗಿದ್ದು, ಅವನ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ. ಬೈಕೆಕುಪ್ಪೆ ಪೊಲೀಸ್ ಠಾಣೆಯಲ್ಲಿ ಐಪಿಸಿಯ 370ನೇ (ಮಾನವ ಕಳ್ಳಸಾಗಣೆ) ಮತ್ತು ಜೀತಕಾರ್ಮಿಕ ನಿರ್ಮೂಲನಾ ಕಾಯ್ದೆಯ ಸೆಕ್ಷನ್ 16, 17, ಮತ್ತು 18 ಅಡಿ ಈ ಪ್ರಕರಣ ದಾಖಲು ಮಾಡಲಾಗಿದೆ. ಈ ಫಾರ್ಮ್ ನಡೆಸುತ್ತಿದ್ದ ಮಾಲೀಕನ ಸಹೋದರ ಮತ್ತು ಭಾವನನ್ನು ಕೂಡ ಪ್ರಕರಣದಲ್ಲಿ ಸಹ ಆರೋಪಿಗಳನ್ನಾಗಿಸ...
ರಕ್ಷಣೆಗೆ ಒಳಗಾಗಿರುವ ಈ ಎಲ್ಲ ಜೀತ ಕಾರ್ಮಿಕರು 28ರಿಂದ 60ವರ್ಷ ವಯಸ್ಸಿನ ಒಳಗಿನವರು. ಹೆಚ್ಚಿನವರು 30ರ ಆಸುಪಾಸು ಪ್ರಾಯದವರು. ಇವರ ಪೈಕಿ ಏಳು ಮಂದಿ ಐದು ತಿಂಗಳಿನಿಂದ ಈ ದುಡಿಯುತ್ತಿದ್ದರೆ, ಉಳಿದವರು ಮೂರು ತಿಂಗಳಿನಿಂದ ದುಡಿಯುತ್ತಿದ್ದರು. ಈ ಎಲ್ಲಾ ಕಾರ್ಮಿಕರನ್ನು ಗದಗ, ದಾವಣಗೆರೆ, ಧಾರವಾಡ, ಹಾವೇರಿ, ಮಂಡ್ಯ, ಲಿಂಗಸಗೂರು, ಹುಬ್ಬಳ್ಳಿ ಮತ್ತು ನೆಲಮಂಗಲದಿಂದ ಕರೆತರಲಾಗಿತ್ತು. ತೋಟದ ಮಾಲ...
ದಿನದಲ್ಲಿ ಎಂಟು ಗಂಟೆ ಕೆಲಸ ಮಾಡಬೇಕು. ದಿನ ಒಂದಕ್ಕೆ 350ರೂಪಾಯಿಗಳನ್ನು ನೀಡಲಾಗುವುದು. ಇದರ ಜೊತೆಗೆ ಉಳಿದುಕೊಳ್ಳಲು ಮನೆ, ಮೂರು ಹೊತ್ತು ಒಳ್ಳೆಯ ಊಟ, ಪ್ರತಿ ರಾತ್ರಿ ಮದ್ಯವನ್ನು ನೀಡಲಾಗುವುದು ಎಂದು ಆತ ಎಲ್ಲರಿಗೂ ವಾಗ್ದಾನ ಮಾಡಿದ್ದ. ಮೊದಲು 15 ದಿನ ಕೆಲಸ ಮಾಡಿ. ಆಗ ನಿಮಗೆ 15 ದಿನಗಳ ಸಂಬಳ ನೀಡಲಾಗುವುದು. ಒಂದು ವೇಳೆ ಈ ಕೆಲಸ ಇಷ್ಟವಾದರೆ ಮುಂದುವರಿಸಿ, ಇಲ್ಲದೇ ಹೋದರೆ ಮನೆಗೆ ವಾವಸ್ ಕ...
ಈ ಎಲ್ಲ ಜೀತ ಕಾರ್ಮಿಕರು ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 7 ಗಂಟೆಯವರೆಗೆ ದುಡಿಯಬೇಕಿತ್ತು. ಗಿಡ ನೆಡುವುದು, ಕಳೆ ಕೀಳುವುದು, ಕೀಟನಾಶಕ ಸಿಂಪಡನೆ, ಗೊಬ್ಬರ ಹಾಕುವುದು ಇತ್ಯಾದಿ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಅಡುಗೆ ಮಾಡಲು ಯಾರನ್ನಾದರೂ ಒಬ್ಬರಿಗೆ ತೀರಾ ಅತ್ಯಲ್ಪ ಅವಧಿ ನೀಡಲಾಗುತ್ತಿತ್ತು. ಆ ಸಮಯದಲ್ಲಿ ಅವರು ಅಡುಗೆ ಮಾಡಿ ಪುನಃ ಕೆಲಸ ಮಾಡಬೇಕಿತ್ತು. ಅವರಿಗೆ ಮಾಲೀಕ ಸ್ವಲ್ಪ ಅನ್ನ...
ತಮ್ಮ ಸಂಬಳ ನೀಡುವಂತೆ ಅಥವಾ ರಜೆ ಕೇಳಿದರೆ ಮಾಲೀಕ ಎಲ್ಲರ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ ಜೊತೆಗೆ ಹೀನಾಯವಾಗಿ ಬೈಯುತ್ತಿದ್ದ. ಮೋಟಾರ್ ಸೈಕಲ್ ಚೈನಿನಿಂದ ಹಾಗೂ ಕೋಲಿನಿಂದ ಅವರನ್ನು ಥಳಿಸಲಾಗುತ್ತಿತ್ತು. ಇವುಗಳಿಂದ ಆದ ಗಾಯವನ್ನು ರಕ್ಷಣಾ ಕಾರ್ಯಾಚರಣೆ ವೇಳೆ ಈ ಸಂತ್ರಸ್ತರು ತೋರಿಸಿದರು. ಆ ಫಾರ್ಮಿನಿಂದ ಕೆಲಸ ಕಮ್ಮಿ ಇದ್ದಾಗ ಎಲ್ಲಾ ಕೆಲಸದವರನ್ನು ಮತ್ತೊಂದು ತೋಟಕ್ಕೆ ಕರೆದುಕೊಂಡು ಹ...
ರಕ್ಷಣೆಗೆ ಒಳಗಾದ ಸಂತ್ರಸ್ತರ ಪೈಕಿ 38 ವರ್ಷದ ಒಬ್ಬ ವ್ಯಕ್ತಿ ತನ್ನ ಗೋಳು ಹೇಳಿಕೊಂಡಿದ್ದು ಹೀಗೆ: ನಾನು ಗದಗದವನು. ಐದು ತಿಂಗಳ ಹಿಂದೆ ನನ್ನ ಹೆಂಡತಿ ಮತ್ತು ಎರಡು ವರ್ಷದ ಮಗುವನ್ನು ಬಾಡಿಗೆ ಮನೆಯಲ್ಲಿ ಬಿಟ್ಟು ಬಂದಿದ್ದೇನೆ. ಅವರ ಬಳಿ 2 ಸಾವಿರ ರೂಪಾಯಿ ಮಾತ್ರ ಇತ್ತು. ಹೆಚ್ಚಿಗೆ ದುಡಿದು ಮನೆಯವರಿಗೆ ದುಡ್ಡು ಕಳಿಸುವ ಉದ್ದೇಶದಿಂದ ಬಂದೆ. ಈ ಐದು ತಿಂಗಳಿನಿಂದ ಒಮ್ಮೆಯೂ ಅವರೊಂದಿಗೆ ಮಾತನಾಡಲ...
ಬಿ.ಕಾಂ ಪದವೀಧರನಾದ ಒಬ್ಬ ಯುವಕ ಎರಡು ತಿಂಗಳ ಹಿಂದೆ ಹೇಗೋ ಇಲ್ಲಿಂದ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾದ. ಆತ ಪೊಲೀಸರಿಗೆ ನೀಡಿದ ಸುಳಿವಿನ ಮೇರೆಗೆ ಈ ವಿಷಯ ಬಹಿರಂಗಗೊಳ್ಳಲು ಸಾಧ್ಯವಾಯಿತು. ಆತ ಗದಗಕ್ಕೆ ಹಿಂದಿರುಗಿದ ಮೇಲೆ ಜೀತಕ್ಕಿದ್ದ ಇನ್ನೊಂದು ಕಾರ್ಮಿಕನ ಸಹೋದರನ ಹುಡುಕಾಟದಲ್ಲಿ ತೊಡಗಿದ. ಕೊನೆಗೂ ಆತ ಸಿಕ್ಕಿದ ಮೇಲೆ ಆತನ ಸಹೋದರ ಪಡುತ್ತಿರುವ ಕಷ್ಟದ ಬಗ್ಗೆ ವಿವರಿಸಿದ. ಆ ಸಹೋದರ ಮತ್ತ...
ಕೃಷಿ ಸಚಿವ ಬಿ.ಸಿ.ಪಾಟೀಲ್‍ ವಿರುದ್ಧ ಕುಮಾರಸ್ವಾಮಿ ಕಿಡಿ | Vartha Bharati- ವಾರ್ತಾ ಭಾರತಿ
ಕೃಷಿ ಸಚಿವ ಬಿ.ಸಿ.ಪಾಟೀಲ್‍ ವಿರುದ್ಧ ಕುಮಾರಸ್ವಾಮಿ ಕಿಡಿ
ವಾರ್ತಾ ಭಾರತಿ Mar 08, 2020, 11:08 PM IST
ಮೈಸೂರು,ಮಾ.8: ಸಾಲಮನ್ನಾ ಕುರಿತು ಹೇಳಿಕೆ ನೀಡಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದು, 'ಕೃಷಿ ಸಚಿವರೇ...ನಾಲಿಗೆ ಇದೆ ಅಂತ ತೆವಲಿಗೆ ಮಾತನಾಡಬೇಡಿ. ಸುಮ್ಮನೆ ಸುಳ್ಳು ಹೇಳಿಕೊಂಡು ಓಡಾಡಬೇಡಿ' ಎಂದು ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಬರೀ ಸಾಲಮನ್ನಾ ಘೋಷಣೆ ಮಾಡಿ ಹೋದರೇ ಹೊರತು ಅದಕ್ಕಾಗಿ ಸೂಕ್ತ ರೂಪು ರೇಷೆ ಸಿದ್ಧಪಡಿಸಲಿಲ್ಲ. ಬಾಯಿಗೆ ಬಂದಂತೆ ಘೋಷಣೆ ಮಾಡಿ ಹೋಗುವುದು ದೊಡ್ಡ ವಿಷಯವೇನಲ್ಲ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದರು. ಈ ಕುರಿತು ರವಿವಾರ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಆ ಯಪ್ಪನಿಗೆ ಸಾಲ ಮನ್ನಾದ ಬಗ್ಗೆ ಮಾಹಿತಿಯೇ ಇಲ್ಲ. ಸಾಲಮನ್ನಾದ ಬಗ್ಗೆ ಆ ...
ಬಿಜೆಪಿಯಿಂದ ಶಾದಿಭಾಗ್ಯ ಯೋಜನೆಗೆ ತಿಲಾಂಜಲಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ ಶಾದಿ ಭಾಗ್ಯ ಒಂದೇ ಅಲ್ಲ ರಾಜ್ಯದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನ ಸ್ಥಗಿತ ಮಾಡಿದೆ. ಬೆಳಗಾವಿಯಲ್ಲಿ ಬಿಜೆಪಿ ಶಾಸಕರೇ ನನ್ನ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ ಅಂತ ಗಲಾಟೆ ಮಾಡಿದ್ದಾರೆ. ಅದು ಸಹ ಮಂತ್ರಿಯನ್ನು ಕೂರಿಸಿಕೊಂಡು ಅನುದಾನ ಕೊಡಿ ಅಂತ ಕೇಳಿದ್ದಾರೆ. ಸಿಎಂ ನೆರೆ ಹಾವಳಿಯ ಜನರಿಗೆ ...
ಮತ ಚಲಾಯಿಸದೆ ಮಂಗಳಾರತಿ ಮಾಡಿಸಿಕೊಂಡ ದಿಗ್ವಿಜಯ್ ಸಿಂಗ್ ! | LS polls: Digvijay Singh does not cast his vote - Kannada Oneindia
5 min ago ಲಾಕ್‌ಡೌನ್; ಮನೆಯಲ್ಲಿ ದೌರ್ಜನ್ಯ ನಡೆದರೆ ಈ ಸಹಾಯವಾಣಿಗೆ ಕರೆ ಮಾಡಿ
12 min ago ಕೊರೊನಾ: ವೈದ್ಯಲೋಕಕ್ಕೆ ಕೈಮುಗಿದ ಅಮಿತ್ ಶಾ
21 min ago ಕ್ವಾರಂಟೈನ್‌ ಕೇಂದ್ರದಿಂದ ಮೂತ್ರ ತುಂಬಿದ ಬಾಟಲಿಗಳನ್ನು ಎಸೆದ್ರು!
| Published: Monday, May 13, 2019, 12:14 [IST]
ಇಂದೋರ್, ಮೇ 13: ಭಾನುವಾರ ನಡೆದ ಆರನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸದ ದಿಗ್ವಿಜಯ್ ಸಿಂಗ್ ಅವರನ್ನು ಬಿಜೆಪಿ ನಾಯಕರು ಗೇಲಿ ಮಾಡಿದ್ದಾರೆ. 'ಮತದಾನ ಅತ್ಯಮೂಲ್ಯ ಕರ್ತವ್ಯ ಎನ್ನುವ ನೀವೇ ಮತಚಲಾಯಿಸದೆ ಮತದಾರರಿಗೆ ಋಣಾತ್ಮಕ ಸಂದೇಶ ನೀಡಿದ್ದೀರಾ' ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದಿಗ್ವಿಜಯ್ ಸಿಂಗ್ ಅವರನ್ನು ಟೀಕಿಸಿದ್ದಾರೆ.
ಭಾನುವಾರ ನಡೆದ ಆರನೇ ಹಂತದ ಮತದಾನದಲ್ಲಿ ಮಧ್ಯಪ್ರದೇಶದ ರಾಜಘರ್ ನಿಂದ ಮತಚಲಾಯಿಸಬೇಕಿದ್ದ ಭೋಪಾಲ್ ಕ್ಷೇತ್ರದ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಮತ ಚಲಾಯಿಸಿರಲಿಲ್ಲ.
ಭೋಪಾಲ್‌ ರಾಜನಿಗೆ ಹಿಂದು ಫೈರ್‌ ಬ್ರಾಂಡ್‌ ಸಾಧ್ವಿ ಸವಾಲು
ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, "ನನಗೆ ಮತ ಚಲಾಯಿಸದೆ ಇರುವುದಕ್ಕೆ ತೀವ್ರ ಬೇಸರವಿದೆ. ಆದರೆ ರಾಜ್ಘರ್ ಮತಗಟ್ಟೆಗೆ ತೆರಳಲು ನನಗೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ಮತಚಲಾಯಿಸಲು ಆಗಲಿಲ್ಲ. ಮುಂದಿನ ಬಾರಿ ನಾನು ಭೋಪಾಲ್ ಗೇ ನನ್ನ ಮತದಾನದ ಹಕ್ಕನ್ನು ವರ್ಗಾಯಿಸಿಕೊಳ್ಳುತ್ತೇನೆ" ಎಂದು ಸಿಂಗ್ ಹೇಳಿದ್ದರು.
"ಡಿಗ್ಗಿ ದಾದಾ ಬಹಳ ವಿಚಿತ್ರವಾಗಿ ವರ್ತಿಸಿದ್ದಾರೆ. ತಮ್ಮ ಮತವನ್ನು ಚಲಾಯಿಸಲಾಗದಿರುವುದಕ್ಕೆ ಅವರು ಬಹಳ ಬೇಸರಗೊಂಡಿದ್ದಾರೆ. ಮತದಾನ ನಮ್ಮ ಅತ್ಯುನ್ನತ ಕರ್ತವ್ಯ. ಹತ್ತು ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ ಒಬ್ಬರಿಗೆ ಮತಚಲಾಯಿಸಬೇಕು ಎಂಬುದು ಗೊತ್ತಾಗುವುದಿಲ್ಲ ಎಂದರೆ ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಎಷ್ಟು ಗೌರವವಿದೆ ಎಂಬುದನ್ನು ನೀವೇ ಅರಿತುಕೊಳ್ಳಿ" ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳ...
"ಇವರೆಲ್ಲ ಸಂವಿಧಾನದ ಬಗ್ಗೆ ದೊಡ್ಡ ಭಾಷಣ ಬಿಗಿತಾರೆ. ಏನೇ ಆಗಲಿ ಸೋಲೋದು ಗ್ಯಾರಂಟಿ, ದಿಗ್ವಿಜಯ ಹೆಸರಿಗಷ್ಟೇ ಸೀಮಿತ" ಎಂದು ಕರ್ನಾಟಕ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಸಹ ಟ್ವೀಟ್ ಮಾಡಿದ್ದಾರೆ.
ಇವರೆಲ್ಲ ಸಂವಿಧಾನದ ಬಗ್ಗೆ ದೊಡ್ಡ ಭಾಷಣ ಬಿಗಿತಾರೆ. ಏನೇ ಆಗಲಿ ಸೋಲೋದು ಗ್ಯಾರಂಟಿ, ದಿಗ್ವಿಜಯ ಹೆಸರಿಗಷ್ಟೇ ಸೀಮಿತ. https://t.co/n5l5G1pW5A
— Chowkidar K S Eshwarappa (@ikseshwarappa) May 12, 2019
ದಿಗ್ವಿಜಯ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷವು ಬಿಜೆಪಿಯ ಸಾಧ್ವಿ ಪ್ರಜ್ಞಾ ಠಾಕುರ್ ಅವರ ವಿರುದ್ಧ ಭೋಪಾಲ್ ನಿಂದ ಲೋಕಸಭೆ ಗೆ ಕಣಕ್ಕಿಳಿಸಿದೆ.
digvijay singh shivraj singh chauhan lok sabha elections 2019 voting madhya pradesh ದಿಗ್ವಿಜಯ್ ಸಿಂಗ್ ಲೋಕಸಭೆ ಚುನಾವಣೆ 2019 ಮಧ್ಯಪ್ರದೇಶ
Bhopal Congress Candidate Digvijay Singh who has voting right in Rajgarh has not cast his vote in Lok Sabha elections 2019. BJP leaders including former CM of MP Shivraj Singh Chauhan criticises him.
ದಾವಣಗೆರೆ | ಅದ್ದೂರಿಗಿಂತ ಅರ್ಥಪೂರ್ಣ ಕಾರ್ಯಕ್ರಮ ಮುಖ್ಯ | Prajavani
ದಾವಣಗೆರೆ | ಅದ್ದೂರಿಗಿಂತ ಅರ್ಥಪೂರ್ಣ ಕಾರ್ಯಕ್ರಮ ಮುಖ್ಯ
Published: 14 ಸೆಪ್ಟೆಂಬರ್ 2019, 17:49 IST
Updated: 15 ಸೆಪ್ಟೆಂಬರ್ 2019, 10:08 IST
ದಾವಣಗೆರೆ: ಈಗ ಕಾಲೇಜು ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳನ್ನು ಎಷ್ಟು ಅದ್ದೂರಿಯಾಗಿ ಮಾಡಲಾಗುತ್ತಿದೆ ಎಂಬುದು ಮುಖ್ಯವಾಗಿದೆ. ಅದರ ಬದಲು ಎಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬುದು ಮುಖ್ಯವಾಗಬೇಕು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಡಾ. ಎಚ್‌.ಬಿ. ಪ್ರಭಾಕರ ಶಾಸ್ತ್ರಿ ಹೇಳಿದರು.
ಇಲ್ಲಿನ ಆರ್‌.ಎಲ್‌. ಕಾನೂನು ಕಾಲೇಜಿನ ವಿದ್ಯಾರ್ಥಿ ಪರಿಷತ್ತು ಮತ್ತು ಎನ್‌ಎಸ್‌ಎಸ್‌ ಚಟುವಟಿಕೆ ಉದ್ಘಾಟಿಸಿ ಶನಿವಾರ ಮಾತನಾಡಿದರು.
ವಿದ್ಯಾರ್ಥಿ ಸಂಘ ಇರುವುದು ಪ್ರತಿಭಟನೆ ನಡೆಸಲು ಅಲ್ಲ. ಉತ್ತಮ ಚಟುವಟಿಕೆಯನ್ನು ಹಮ್ಮಿಕೊಳ್ಳಲು ಇರುವುದು. ವ್ಯಾಸಂಗಕ್ಕೆ ಪೂರಕವಾಗಿ ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಮತ್ತು ಆಸಕ್ತಿಯನ್ನು ಉದ್ದೀಪನಗೊಳಿಸುವ ಕೆಲಸ ವಿದ್ಯಾರ್ಥಿ ಸಂಘ ಮಾಡಬೇಕು. ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಬರುತ್ತಿದ್ದಾರೆ ಎಂದು ಜನ ಹೆದರಿಕೊಳ್ಳುವಂತೆ ಪದಾಧಿಕಾರಿಗಳು ಇರಬಾರದು. ಕಾಲೇಜಿಗೆ ಗೌರವ ತರುವಂತೆ ಇರಬೇಕು ಎಂದು ಸಲಹ...
ವಿದ್ಯಾರ್ಥಿಗಳ ಬೇಕು–ಬೇಡಗಳನ್ನು, ಕುಂದು–ಕೊರತೆಗಳನ್ನು ಪ್ರಾಂಶುಪಾಲರ, ಆಡಳಿತ ಮಂಡಳಿಯ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸಬೇಕು. ಹಾಗಂತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುವುದಲ್ಲ. ಗಾಯನ, ರಂಗಚಟುವಟಿಕೆ, ಕ್ರೀಡೆ ಹೀಗೆ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಒದಗಿಸಬೇಕು. ಇದೆಲ್ಲದರ ಜತೆಗೆ ಸಮಾಜಕ್ಕೆ ಏನು ಅಗತ್ಯ ಎಂದು ನೋಡಿ ಸೇವೆ ಮಾಡಲು ಮುಂದ...
ವಿದ್ಯಾರ್ಥಿ ಸಂಘ ಅಂದರೆ ಹಿಂದೆ ತಮ್ಮೊಳಗಿನ ಪ್ರತಿಭಾವಂತರನ್ನು ಆಯ್ಕೆ ಮಾಡಿ ಕಾಲೇಜಿನ, ವಿದ್ಯಾರ್ಥಿಗಳ ಹೊಣೆಗಾರಿಕೆ ನೀಡುವುದಾಗಿತ್ತು. ಚುನಾವಣೆ ಒಂದು ನೆಪವಷ್ಟೇ ಆಗಿತ್ತು. ಈಗ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.
ಸಮಾಜದ ಹತ್ತಿರಕ್ಕೆ ವಿದ್ಯಾರ್ಥಿಗಳನ್ನು ಒಯ್ಯಲು ಎನ್‌ಎಸ್‌ಎಸ್‌ ಸಹಕಾರಿ. ಪಠ್ಯೇತರ ಚಟುವಟಿಕೆ ಈಚೆಗೆ ಕಡಿಮೆಯಾಗಿದೆ. ಹಿಂದೆ ಪ್ರತಿ ವಾರದ ಕೊನೆಗೆ ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಚಟುವಟಿಕೆ ನಡೆಯುತ್ತಿದ್ದವು ಎಂದರು.
ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ. ಈಶ್ವರ ಭಟ್‌ ಮಾತನಾಡಿ, ಯಾವುದೇ ಪ್ರಕರಣದ ಹಿನ್ನೆಲೆಯನ್ನು ವಕೀಲರಾದವರು ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ನೈತಿಕ ಆಯಾಮಗಳು ಗೊತ್ತಾದರೆ ಅವುಗಳು ಸಮಾಜದ ಮೇಲೆ ಬೀರುವ ಪರಿಣಾಮ ಕೂಡ ತಿಳಿಯುತ್ತದೆ' ಎಂದು ತಿಳಿಸಿದರು.
ಆರ್‌.ಎಲ್‌. ಕಾನೂನು ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಡಾ. ಆರ್.ಎಲ್‌. ಉಮಾಶಂಕರ್‌. ಮೈಸೂರು ಮಾನಸ ಗಂಗೋತ್ರಿಯ ಕಾನೂನು ಅಧ್ಯಯನ ಮತ್ತು ಸಂಶೋಧನ ವಿಭಾಗದ ಡಾ. ಟಿ.ಆರ್‌. ಮಾರುತಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ಬಿ.ಎಸ್‌. ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಧ್ಯಾಪಕ ಜಿ.ಎಸ್‌. ಯತೀಶ್‌ ಸ್ವಾಗತಿಸಿದರು. ಎಂ. ಸೋಮಶೇಖರಪ್ಪ ವಂದಿಸಿದರು. ಶಾಂತಿಕ್‌ ಮುರ್ಡೇಶ್ವರಿ ಕಾರ್ಯಕ್ರಮ ನಿರೂಪಿಸಿದರು.
ಶ್ವೇತಾ ಶ್ರೀವಾತ್ಸವ್ ವೈಯಕ್ತಿಕ ಜೀವನದಲ್ಲಿ ಗುಡ್ ನ್ಯೂಸ್ | Actress Shwetha Srivatsav is Pregnant - Kannada Filmibeat
ಶ್ವೇತಾ ಶ್ರೀವಾತ್ಸವ್ ವೈಯಕ್ತಿಕ ಜೀವನದಲ್ಲಿ ಗುಡ್ ನ್ಯೂಸ್
| Updated: Sunday, March 5, 2017, 14:18 [IST]
'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದ ಮೂಲಕ ಕನ್ನಡ ಕಲಾಭಿಮಾನಿಗಳಿಗೆ ಮನಸ್ಸು ಕದ್ದ ನಟಿ ಶ್ವೇತಾ ಶ್ರೀವಾತ್ಸವ್. ಇತ್ತೀಚೆಗಷ್ಟೆ 'ಕಿರಗೂರಿನ ಗಯ್ಯಾಳಿಗಳು' ಅಂತಹ ಅದ್ಭುತ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದ ನಂತರ ಶ್ವೇತಾ ಬೇರೆ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ.['ಸಿಂಪಲ್ ಹುಡ್ಗಿ' ಶ್ವೇತಾ ಶ್ರೀವಾತ್ಸವ್ ಡೈರೆಕ್ಟರ್ ಕ್ಯಾಪ್ ತೊಡೋದು ಯಾವಾಗ?]
ಹೌದು, ಸಿಂಪಲ್ ಶ್ವೇತಾ ಅವರು ಸದ್ಯ, ತಮ್ಮ ಬದುಕಿನ ಅತ್ಯಂತ ಸುಂದರ ದಿನಗಳನ್ನು ಸವಿಯುತ್ತಿದ್ದಾರಂತೆ. ಹೀಗಾಗಿ, ಯಾವ ಚಿತ್ರವನ್ನ ಒಪ್ಪಿಕೊಂಡಿಲ್ಲವಂತೆ. ಏನಪ್ಪಾ ಅದು ಜೀವನದ ಅತ್ಯಂತ ಸುಂದರ ದಿನಗಳು ಅಂತ ಯೋಚನೆ ಮಾಡ್ತಿದ್ದೀರಾ? ಶ್ವೇತಾ ಶ್ರೀವಾತ್ಸವ್ ತಮ್ಮ ಚೊಚ್ಚಲ ಮಗುವಿಗೆ ತಾಯಿಯಾಗಲಿದ್ದಾರೆ.
ಸಿಂಪಲ್ ಹುಡುಗಿ ತಾಯಿ ಆಗುತ್ತಿದ್ದಾರೆ!
ತಮ್ಮ ಬೋಲ್ಡ್ ಆಕ್ಟಿಂಗ್ ಮೂಲಕ ಗಮನ ಸೆಳೆದಿದ್ದ ನಟಿ ಶ್ವೇತಾ ಶ್ರೀವತ್ಸವ್ ತಾಯಿ ಆಗುತ್ತಿದ್ದಾರೆ. ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡುವ ಸಂತಸದಲ್ಲಿದ್ದಾರೆ.[ಸಂಕ್ರಾಂತಿ ಸಂಭ್ರಮದಲ್ಲಿ 'ಸಿಂಪಲ್ ಹುಡುಗಿ' ಶ್ವೇತಾ ಶ್ರೀವಾತ್ಸವ್]
'ಫೇಸ್ ಬುಕ್'ನಲ್ಲಿ ಸಂತಸ ಹಂಚಿಕೊಂಡ ನಟಿ
ಈ ವಿಷ್ಯವನ್ನ ಖುದ್ದು ನಟಿ ಶ್ವೇತಾ ಅವರೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪತಿ ಮತ್ತು ಶ್ವೇತಾ ಜೊತೆಯಾಗಿರುವ ಫೋಟೋ ಪೋಸ್ಟ್ ಮಾಡಿ ಕಾಮೆಂಟ್ ಮಾಡಿದ್ದಾರೆ.
ತಾಯಿ ಆದ ಸಂತಸದಲ್ಲಿ ಶ್ವೇತಾ
''ನಾನು ಗರ್ಭೀಣಿ ಎಂದು ಹೇಳಲು ತುಂಬಾ ಸಂತಸವಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಮನೆಗೆ ಪುಟ್ಟ ಜೀವ ಬರಲಿದೆ. ನಾನು ಮತ್ತು ನನ್ನ ಪತಿ ಆ ಜೀವವನ್ನ ಸ್ವಾಗತಿಸಲು ಕಾಯುತ್ತಿದ್ದೇವೆ. ನಿಮ್ಮ ಆರ್ಶೀವಾದ ಹಾಗೂ ಹಾರೈಕೆ ನಮ್ಮ ಮೇಲೆ ಇರಲಿ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಮಹಿಳಾ ದಿನಾಚರಣೆ ತುಂಬಾ ಸ್ಪೆಷಲ್!
''ಈ ಸಲದ ಮಹಿಳಾ ದಿನಾಚರಣೆಯನ್ನು ತಮ್ಮ ಸ್ಪೆಷಲ್‌ ವ್ಯಕ್ತಿಯಾದ ಪತಿ ಅಮಿತ್‌ ಶ್ರೀವಾತ್ಸವ್ ಜೊತೆ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ. ಅವರು ಜೀವನದ ಪ್ರತಿ ಹಂತದಲ್ಲೂ ಬೆಂಬಲ ನೀಡಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.
ಸದ್ಯಕ್ಕಿಲ್ಲ ಶ್ವೇತಾ ಅವರ ಚಿತ್ರಗಳು
ಸದ್ಯಕ್ಕಂತೂ ದೊಡ್ಡ ಬ್ರೇಕ್ ತೆಗೆದುಕೊಳ್ತಿರೋ ಶ್ವೇತಾ ಅವರಿಂದ ಯಾವುದೇ ಚಿತ್ರಗಳು ಇಲ್ಲ. ತದನಂತರ ಚಿತ್ರರಂಗದಲ್ಲಿ ಮುಂದಿನ ಹೆಜ್ಜೆಗಳ ಬಗ್ಗೆ ಸದ್ಯಕ್ಕಂತೂ ಏನೂ ನಿರ್ಧರಿಸಿಲ್ಲ ಎಂದು ಕುತೂಹಲ ಮೂಡಿಸಿದ್ದಾರೆ.
Read more about: shwetha srivatsav actress mother sandalwood ಸ್ಯಾಂಡಲ್ ವುಡ್ ಶ್ವೇತಾ ಶ್ರೀವಾತ್ಸವ್ ನಟಿ ತಾಯಿ
'Kiragoorina Gayaligallu' actress Shwetha Srivatsav has been glowing off late, then there is actually a big reason behind it. yes, The actress is Pragnant, She and her husband, Amith Srivatsav, are preparing for the arrival of their first child.
'ಮನುಕುಲವನ್ನು ಗೌರವಿಸಿ' ಎಂಬ ಸಂದೇಶ ಮೆರೆದ ಧೀರರಿಗೆ ಕೆಸಿಎಫ್ ಯುಎಇ ಅಭಿನಂದನೆ – janadhvani
ಮಂಗಳೂರು-ಕಾಸರಗೋಡು ಸಂಚಾರ ತಡೆ: ಗಡಿಯಲ್ಲಿ ಜನಾಕ್ರೋಶ ಗುರುಪುರ: ಗುಡ್ಡ ಕುಸಿತ ಸ್ಥಳಕ್ಕೆ SYS ಜಿಲ್ಲಾ ನಾಯಕರ ಭೇಟಿ ತಾಜುಲ್ ಉಲಮಾ ಚಾರಿಟಿ ಸೇವೆಗೆ ಮುಲ್ಕಿ ವಲಯ ಮಟ್ಟದಲ್ಲಿ ಚಾಲನೆ ಗುಡ್ಡ ಕುಸಿತ: SSF ಮೂಡಬಿದ್ರೆ ಡಿವಿಷನ್ ನಿಂದ ಶ್ಲಾಘನೀಯ ಕಾರ್ಯಾಚರಣೆ ಮಂಗಳೂರು-ಕಾಸರಗೋಡು: ಪಾಸ್ ರದ್ದುಗೊಳಿಸಿದ ಕೇರಳ ಸರ್ಕಾರ
ಕೊರೋನಾ ಎಂಬ ಮಾಹಾ ವೈರಸ್ ಗೆ ಹೆದರಿ ಜೀವಿಸುತ್ತಿರುವ ಈ ಸಮಯದಲ್ಲಿಯೂ ಮಾನವೀಯತೆ ಮೆರೆದ ಯುವಕರು, ಪಾಣೆಮಂಗಳೂರಿನಲ್ಲಿ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದಾಗ ವಿಷಯ ತಿಳಿದ ಸ್ಥಳೀಯ ಗೂಡಿನಬಳಿ ಯುವಕರಾದ ಮುಹಮ್ಮದ್‌, ಸಮೀರ್,ಝಾಯಿದ್ , ಆರಿಫ್, ಮುಕ್ತಾರ್ ತೌಸೀಫ್ ರವರು ಯಾವುದೇ ಜಾತಿ ಧರ್ಮ ವನ್ನು ಲೆಕ್ಕಿಸದೆ ಕೂಡಲೇ ತಮ್ಮ ಜೀವನವನ್ನು ಪಣಕ್ಕಿಟ್ಟು ನದಿಗೆ ಹ...
ಈ ಸಂದರ್ಭದಲ್ಲಿ ಹಫೀಝನ ಪಾತ್ರವೂ ಮಹತ್ವಪೂರ್ಣವಾದದ್ದು ಮೊದಲು ನೇತ್ರಾವತಿ ವೀರರ ಮನೆ ಬಾಗಿಲಿಗೆ ತೆರಳಿ ವಿಷಯ ಮುಟ್ಟಿಸಿದ್ದಾನೆ. ಆ ನಿರ್ದಿಷ್ಟ ಸ್ಥಳವನ್ನು ಸೂಚಿಸಿದ್ದು ಹಫೀಝ್ ಆಗಿದ್ದರು, ಈ ಹುಡುಗನಿಗೂ ತಮ್ಮೆಲ್ಲರ ಮೆಚ್ಚುಗೆಯೊಂದು ಇರಲಿ.ಈ ವೀರ ಯುವಕರಿಗೆ ಕರ್ನಾಟಕ ಕಲ್ಚರಲ್ ಫೌಂಡೇಷನ್ ಯು.ಎ.ಇ ರಾಷ್ಟ್ರೀಯ ಸಮಿತಿಯು ಅಭಿನಂದನೆ ಸಲ್ಲಿಸುತ್ತದೆ.
ಈದುಲ್ ಫಿತ್ರ್ ಹಬ್ಬ ಆಚರಿಸುವ ದಿನದಂದು ನಡೆದ ಘಟನೆಯು ಇಸ್ಲಾಮ್ ಜಗತ್ತಿಗೆ ಶಾಂತಿ, ಸೌಹಾರ್ದತೆ, ತ್ಯಾಗವನ್ನು ನೆನಪಿಸುವ ಮಾನವೀಯತೆಯ ಸಂದೇಶವನ್ನು ನೀಡಿದ್ದಾರೆ. ಇಡೀ ನಾಡು ಹೆಮ್ಮೆಪಡುವಂತಹ ಇವರ ಸೇವೆಯು ಶ್ಲಾಘನೀಯ ಎಂದು ಕೆಸಿಎಫ್ ಯು.ಎ.ಇ. ರಾಷ್ಟ್ರೀಯ ಅಧ್ಯಕ್ಷ ಜಲೀಲ್ ನಿಜಾಮಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಭಜನೆ, ಸತ್ಸಂಗ ವೃದ್ಧಾಪ್ಯದ ನಂತರ ಎಂಬ ಭ್ರಮೆಯಿಂದಲೇ ನಮ್ಮ ಅವನತಿ'
'ಭಜನೆ, ಸತ್ಸಂಗ ವೃದ್ಧಾಪ್ಯದ ನಂತರ ಎಂಬ ಭ್ರಮೆಯಿಂದಲೇ ನಮ್ಮ ಅವನತಿ'
ಪುತ್ತೂರು: ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಭಜನೆ ಮತ್ತು ಸತ್ಸಂಗ ಕಾರ್ಯಕ್ರಮ ಭಾನುವಾರ (ಮಾ.27) ನಡೆಯಿತು. ನೆಹರೂ ನಗರದ ಶಿವಮಣಿ ತಂಡದವರು ಭಜನೆ ನಡೆಸಿಕೊಟ್ಟರು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಪ್ರಾಸ್ತಾವಿಕವಾಗಿ ಮಾತನಾಡುತ್ತಾ- "ಭಜನೆ ಸತ್ಸಂಗಗಳು ವೃದ್ಧಾಪ್ಯದ ನಂತರ ಎಂಬ ಭ್ರಮೆಯಿಂದಾಗಿ ನಾವು ಅವನತಿಯತ್ತ ಸಾಗುತ್ತಿದ್ದೇವೆ. ಪಾಂಡಿತ್ಯಕ್ಕೂ ಆಧ್ಯಾತ್ಮಕ್ಕೂ ಸಂಬಂಧವಿಲ್ಲ. ಸಂಸ್ಕೃತ ಭಾಷೆ ಗೊತ್ತಿದ್ದ ಮಾತ್ರಕ್ಕೆ ಸಂಸ್ಕೃತಿ ಇದೆ ಎಂದು ಅರ್ಥವಲ್ಲ. ಜಾಲತಾಣಗಳಲ್ಲಿ ಕಾಣಿಸಿಕೊಂಡ ತಕ್ಷಣ ಸ್ವಾಮೀಜಿ ಆಗುವುದಿಲ್ಲ. ಅದಕ್ಕ...
ನಂತರ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಮಹಾರಾಜ್ ಇವರು ಸತ್ಸಂಗ ಪ್ರವಚನ ನಡೆಸಿಕೊಟ್ಟರು. ಅವರು ಮಾತನಾಡುತ್ತಾ- "ನಂಬಿಕೆಗೆ ಇನ್ನೊಂದು ಹೆಸರು ಗಿರೀಶ್ ಚಂದ್ರ ಘೋಷ್. ಅವರು ಶ್ರೀರಾಮಕೃಷ್ಣರ ಬಳಿ ಬಂದು ಪರಿವರ್ತನೆ ಹೊಂದಿದರು. ಇದು ಸತ್ಸಂಗದ ಪ್ರಭಾವ. ನಮ್ಮ ಅವನತಿಗೆ ನಾವೇ ಕಾರಣ. ಜೀವನದಲ್ಲಿ ಭಕ್ತಿ ನಾಮಸ್ಮರಣೆ ಇವುಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಾ...
ಕಾರ್ಯಕ್ರಮವು ಫೇಸ್ಬುಕ್ ಪೇಜಿನಲ್ಲಿ ಲೈವ್ ಆಗಿ ಕೂಡ ಪ್ರಸಾರಗೊಂಡಿತ್ತು.
ಮಹಿಳಾ ಥೆರಪಿಸ್ಟ್ ಶ್ರೀಮತಿ ಅಖಿಲ ಗಣೇಶ್ ಕನ್ಯಾನ ಆಸ್ಪತ್ರೆಯಲ್ಲಿ ನಡೆಯುವ ಮೂಲವ್ಯಾಧಿ ತಪಾಸಣಾ ಶಿಬಿರ, ಪಂಚಕರ್ಮ ಚಿಕಿತ್ಸೆ, ಸ್ವರ್ಣ ಪ್ರಾಶನ ಚಟುವಟಿಕೆಗಳ ವರದಿ ನೀಡಿದರು. ಪುರುಷ ಥೆರಪಿಸ್ಟ್ ಶ್ರೀ ವಿವೇಕ್ ಕಾಮತ್ ಬೊಳುವಾರು ಪ್ರಾರ್ಥಿಸಿ, ಕಾರ್ಯಕ್ರಮ ನಿರ್ವಹಿಸಿದರು. ನಂತರ ಸ್ವಾಮೀಜಿಯವರಿಂದ ಪೂಜೆ, ಅತಿಥಿಗಳಿಗೆ ಪ್ರಸಾದ ವಿತರಿಸಲಾಯಿತು.
ಬಿಂಕ-ಭಿನ್ನಾಣದ ಕಲರ್‌ಫ‌ುಲ್‌ ಯಾನ | Udayavani – ಉದಯವಾಣಿ
Thursday, 13 May 2021 | UPDATED: 05:26 AM IST
ಬಿಂಕ-ಭಿನ್ನಾಣದ ಕಲರ್‌ಫ‌ುಲ್‌ ಯಾನ
Team Udayavani, Jul 13, 2019, 3:01 AM IST
ಸಾಮಾನ್ಯವಾಗಿ ಹುಡುಗರು ಲವ್‌ ಫೇಲ್ಯೂರ್‌ ಆದ್ರೆ, ಫ್ಯಾಮಿಲಿ ಪ್ರಾಬ್ಲಂ ಅಥವಾ ಇನ್ನೇನಾದ್ರೂ ಬೇಸರವಾದರೆ ಆದ್ರೆ ಹಳೆಯದನ್ನೆಲ್ಲ ಮರೆಯಲು ಕೈಯಲ್ಲಿ ಬಾಟಲ್‌ ಹಿಡಿಯುವುದು ಅಥವಾ ಲಾಂಗ್‌ ಡ್ರೈವ್‌ ಹೋಗುವುದನ್ನ ಅನೇಕ ಚಿತ್ರಗಳಲ್ಲಿ ನೋಡಿದ್ದೇವೆ. ಒಂದು ವೇಳೆ ಹುಡುಗಿಯರಿಗೂ ಇಂಥದ್ದೇ ಪರಿಸ್ಥಿತಿ ಬಂದರೆ ಅವರೇನು ಮಾಡಬಹುದು? ಹುಡುಗರಂತೆ, ಹುಡುಗಿಯರಿಗೂ ರೀಫ್ರೆಶ್‌ ಆಗಲು ಲೈಫ್ ರೀಸ್ಟಾರ್ಟ್‌ ಮಾಡ...
ಕೊನೆಯಾಗುತ್ತದೆ ಎಂದುಕೊಂಡ ಹುಡುಗಿಯರ ಜೀವನ ಹೊಸದಾಗಿ ಹೇಗೆಲ್ಲ ಶುರುವಾಗಬಹುದು? ಇವೆಲ್ಲದರ ಚಿತ್ರಣವೇ "ಯಾನ' ಚಿತ್ರ. ಹೆಸರೇ ಹೇಳುವಂತೆ "ಯಾನ' ಮಾಯಾ, ನಂದಿನಿ, ಅಂಜಲಿ ಎನ್ನುವ ಮೂವರು ಹುಡುಗಿಯರ ಜೀವನ "ಯಾನ'ದ ಚಿತ್ರ. ಮೂವರು ಬೇರೆ ಬೇರೆ ಹಿನ್ನೆಲೆಯಿಂದ ಬಂದ ಹುಡುಗಿಯರು ತಮಗೆ ಎದುರಾಗುವ ಸವಾಲುಗಳನ್ನು ಹೇಗೆ ಸ್ವೀಕರಿಸಿ, ಹೊಸ ಜೀವನಕ್ಕೆ ತೆರೆದುಕೊಳ್ಳುತ್ತಾರೆ ಅನ್ನೋದು ಚಿತ್ರದ ಕಥೆಯ ಒಂದ...
ಇಲ್ಲಿ ಇಂದಿನ ಜನರೇಶನ್‌ ಹುಡುಗ-ಹುಡುಗಿಯರ ಮನಸ್ಥಿತಿ, ಪೋಷಕರಾದವರ ಪರಿಸ್ಥಿತಿ, ಕಥೆ-ವ್ಯಥೆ, ನೋವು-ನಲಿವು ಎಲ್ಲವೂ ಇದೆ. ಹಾಗಂತ ಚಿತ್ರದ ಕಥೆಯಲ್ಲಿ ತೀರಾ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ. ಸರಳವಾದ ಕಥೆಯನ್ನೇ ಕಲರ್‌ಫ‌ುಲ್‌ ಆಗಿ ಕಟ್ಟಿಕೊಟ್ಟಿರುವುದರಿಂದ ಚಿತ್ರದಲ್ಲಿ ಗ್ಲಾಮರ್‌ಗಂತೂ ಕೊರತೆಯಿಲ್ಲ.
ಕೆಲವೆಡೆ ಸ್ವಲ್ಪ ಜರ್ಕ್‌ ತೆಗೆದುಕೊಂಡು "ಯಾನ' ನಿಧಾನವೆನಿಸಿದರೂ, ಅದರ ಹಿಂದೆಯೇ ಬರುವ ಸಾಂಗ್ಸ್‌, ಡ್ಯಾನ್ಸ್‌, ಕಾಮಿಡಿ ಹೀಗೆ ಒಂದಷ್ಟು ಮನರಂಜನಾತ್ಮಕ ಅಂಶಗಳು ಪ್ರೇಕ್ಷಕರನ್ನು ಮರಳಿ ಟ್ರ್ಯಾಕ್‌ಗೆ ಕರೆದುಕೊಂಡು ಹೋಗುತ್ತದೆ. ಒಟ್ಟಾರೆ "ಅದೇ ದಾರಿ'ಯಲ್ಲಿ ಎಲ್ಲೂ ಬೋರ್‌ ಆಗದೇ ಪ್ರೇಕ್ಷಕರ "ಯಾನ' ಸುಖಕರವಾಗಿರುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಇನ್ನು ಇಡೀ ಚಿತ್ರದ ಬಹುಭಾಗ ಮೂವರು ಹುಡುಗಿಯರ ಸುತ್ತವೇ ನಡೆಯುವುದರಿಂದ ಚಿತ್ರದ ಮೂವರೂ ನಾಯಕಿಯರು (ವೈಭವಿ,ವೈನಿಧಿ, ವೈಸಿರಿ) ಕೂಡ ಅಭಿನಯ ಮತ್ತು ಅಂದ ಎರಡರಲ್ಲೂ ಗಮನ ಸೆಳೆಯುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದ್ರೆ ಚಿತ್ರದುದ್ದಕ್ಕೂ ಮೂವರು ಸುಂದರ ಸೋದರಿಯರೇ ಹೈಲೈಟ್‌!
ಉಳಿದಂತೆ ಅನಂತನಾಗ್‌, ಸುಹಾಸಿನಿ, ರಂಗಾಯಣ ರಘು ಮೊದಲಾದ ಅನುಭವಿ ಕಲಾವಿದರದ್ದು ಅಚ್ಚುಕಟ್ಟು ಅಭಿನಯ. ಸಾಧುಕೋಕಿಲ, ಚಿಕ್ಕಣ್ಣ, ಸಂಜು ಬಸಯ್ಯ ಮೊದಲಾದ ಪಾತ್ರಗಳನ್ನು ಕಾಮಿಡಿಗಾಗಿಯೇ ಬಲವಂತವಾಗಿ ಸೇರಿಸಿದಂತಿದೆ. ನಾಯಕರ ಪಾತ್ರಗಳು ಹೆಸರಿಗಷ್ಟೇ ಇರುವಂತಿದೆ.
ಇನ್ನು ಚಿತ್ರದ ತಾಂತ್ರಿಕ ಗುಣಮಟ್ಟ ಚೆನ್ನಾಗಿದ್ದು, ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ ಸಾಕಷ್ಟು ಗಮನ ಸೆಳೆಯುತ್ತದೆ. ಅದ್ಧೂರಿ ಲೊಕೇಶನ್‌ಗಳು, ಕಾಸ್ಟೂéಮ್‌, ಮೂವರು ಬೆಡಗಿಯರ ಬಿಂಕ-ಭಿನ್ನಾಣ ಎಲ್ಲವೂ ತೆರೆಮೇಲೆ "ಯಾನ'ವನ್ನು ಕಲರ್‌ಫ‌ುಲ್‌ ಆಗಿ ಮಾಡಿದೆ. ಒಟ್ಟಿನಲ್ಲಿ ತೀರಾ ನಿರೀಕ್ಷೆಗಳಿಲ್ಲದೆ ವಾರಾಂತ್ಯದಲ್ಲಿ ಒಮ್ಮೆ "ಯಾನ'ದ ಅನುಭವವನ್ನು ಕಣ್ತುಂಬಿಕೊಳ್ಳಲು ಅಡ್ಡಿಯಿಲ್ಲ.
ಚಿತ್ರ: ಯಾನ
ನಿರ್ಮಾಣ: ಹರೀಶ್‌ ಶೇರಿಗಾರ್‌
ನಿರ್ದೇಶನ: ವಿಜಯಲಕ್ಷ್ಮೀ ಸಿಂಗ್‌
ತಾರಾಗಣ: ವೈಭವಿ, ವೈನಿಧಿ, ವೈಸಿರಿ, ಅನಂತನಾಗ್‌, ಸುಹಾಸಿನಿ, ಸುಮುಖ, ಅಭಿಷೇಕ್‌, ರಂಗಾಯಣ ರಘು, ರವಿಶಂಕರ್‌, ಸಾಧುಕೋಕಿಲ, ಚಿಕ್ಕಣ್ಣ ಮತ್ತಿತರರು
ಪ್ರಕಾಶ್ ರೈ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಗೋಮೂತ್ರದಿಂದ ಶುದ್ದ ಮಾಡಿದ BJP !
January 16, 2018 Devu Pattar 0 Comments actor, bjp, gomootra, prakash rai, progrramme, shirasi, spread, yuv morcha
ಶಿರಸಿ : ನಟ ಪ್ರಕಾಶ್‌ ರೈ ಅವರು ಇತ್ತೀಚೆಗಷ್ಟೇ ಶಿರಸಿಯಲ್ಲಿ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂಬ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಅವರು ಭಾಗವಹಿಸಿದ್ದ ವೇದಿಕೆಯನ್ನು ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ್ದಾರೆ.
ಶಿರಸಿಯ ಶ್ರೀ ರಾಘವೇಂದ್ರ ಮಠದ ಸಭಾ ಮಂಟಪದಲ್ಲಿ ಪ್ರೀತಿ ಪದಗಳ ಪಯಣ ಎಂಬ ಸಂಘಟನೆಯೊಂದು ವಿಚಾರಗೋಷ್ಠಿ ಏರ್ಪಡಿಸಿತ್ತು. ಈ ಸಮಾರಂಭವನ್ನು ನಟ ಪ್ರಕಾಶ್‌ರೈ ಉದ್ಘಾಟಿಸಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ವೇದಿಕೆಯನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿದ್ದಾರೆ.