text
stringlengths
0
61.5k
17. ಬೈಲನ್ನೂ ಯೊರ್ದನನ್ನೂ ಅದರ ಸೀಮೆಯನ್ನೂ ಕಿನ್ನೆರೆತ್‌ ಮೊದಲುಗೊಂಡು ಪೂರ್ವದಲ್ಲಿರುವ ಅಷ್ಡೋದ್‌ ಪಿಸ್ಗಾದ ಕೆಳಗಿರುವ ಉಪ್ಪಿನಸಮುದ್ರವಾದ ಬೈಲು ಸಮುದ್ರದ ವರೆಗೆ ಕೊಟ್ಟೆನು.
18. ಆ ಕಾಲದಲ್ಲಿ ನಾನು ನಿಮಗೆ ಆಜ್ಞಾಪಿಸಿದ್ದೇನಂದರೆ--ನಿಮ್ಮ ದೇವರಾದ ಕರ್ತನು ನಿಮಗೆ ಈ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟಿದ್ದಾನೆ; ಯುದ್ಧಸ್ಥ ರಾಗಿರುವ ನೀವೆಲ್ಲರು ನಿಮ್ಮ ಸಹೋದರರಾದ ಇಸ್ರಾಯೇಲ್‌ ಮಕ್ಕಳ ಮುಂದೆ ಆಯುಧ ಧರಿಸಿ ಕೊಂಡು ಹಾದುಹೋಗಬೇಕು.
19. ನಿಮ್ಮ ಹೆಂಡತಿ ಯರೂ ಮಕ್ಕಳೂ ಪಶುಗಳೂ (ನಿಮಗೆ ಬಹಳ ಪಶುಗಳಿವೆ ಎಂದು ನನಗೆ ತಿಳಿದಿದೆ)
20. ಕರ್ತನು ನಿಮಗಾದ ಹಾಗೆ ನಿಮ್ಮ ಸಹೋದರರಿಗೂ ವಿಶ್ರಾಂತಿ ಕೊಡುವ ವರೆಗೂ ನಿಮ್ಮ ದೇವರಾದ ಕರ್ತನು ಯೊರ್ದನಿನ ಆಚೆಯಲ್ಲಿ ಅವರಿಗೆ ಕೊಟ್ಟ ದೇಶವನ್ನು ಅವರು ಸ್ವಾಧೀನಪಡಿಸಿಕೊಳ್ಳುವ ವರೆಗೆ ನಾನು ನಿಮಗೆ ಕೊಟ್ಟ ಪಟ್ಟಣಗಳಲ್ಲಿ ವಾಸವಾಗಿರಬೇಕು; ಆ ಮೇಲೆ ನಾನು ನಿಮಗೆ ಕೊಟ್ಟ ನಿಮ್ಮ ನಿಮ್ಮ ಸ್ವಾಸ್ತ್ಯಗಳ ಬಳಿಗೆ ತಿರುಗಬಹುದು ಎಂಬದು.
21. ಆ ಕಾಲದಲ್ಲಿ ನಾನು ಯೆಹೋಶುವನಿಗೆ ಆಜ್ಞಾ ಪಿಸಿದ್ದೇನಂದರೆ--ನಿಮ್ಮ ದೇವರಾದ ಕರ್ತನು ಆ ಇಬ್ಬರು ಅರಸರಿಗೆ ಮಾಡಿದ್ದನ್ನೆಲ್ಲಾ ನಿನ್ನ ಕಣ್ಣು ಗಳು ನೋಡಿದವು. ನೀನು ಹಾದುಹೋಗುವ ಎಲ್ಲಾ ರಾಜ್ಯಗಳಿಗೆ ಕರ್ತನು ಹಾಗೆಯೇ ಮಾಡುವನು.
22. ನೀವು ಅವುಗಳಿಗೆ ಭಯಪಡಬೇಡಿರಿ; ಯಾಕಂದರೆ ನಿಮ್ಮ ದೇವರಾದ ಕರ್ತನು ತಾನೇ ನಿಮಗೋಸ್ಕರ ಯುದ್ಧಮಾಡುತ್ತಾನೆ ಎಂಬದು.
23. ಆ ಕಾಲದಲ್ಲಿ ನಾನು ಕರ್ತನಿಗೆ ಮಾಡಿದ ಬಿನ್ನಹ ವೇನಂದರೆ--
24. ನನ್ನ ದೇವರಾದ ಕರ್ತನೇ, ನೀನು ನಿನ್ನ ಸೇವಕನಿಗೆ ನಿನ್ನ ಮಹಿಮೆಯನ್ನೂ ನಿನ್ನ ಕೈಯ ಶಕ್ತಿಯನ್ನೂ ತೋರಿಸುವದಕ್ಕೆ ಆರಂಭಮಾಡಿದಿ; ನಿನ್ನ ಕೃತ್ಯಗಳ ಹಾಗೆಯೂ ನಿನ್ನ ಪರಾಕ್ರಮದ ಹಾಗೆಯೂ ಮಾಡಲು ಶಕ್ತನಾದ ದೇವರು ಪರಲೋಕದಲ್ಲಾಗಲಿ ಭೂಮಿಯಲ್ಲಾಗಲಿ ಯಾರಿದ್ದಾರೆ? ನಾನು ದಾಟಿ ಹೋಗಿ
25. ಯೊರ್ದನಿನ ಆಚೆಯಲ್ಲಿರುವ ಆ ಒಳ್ಳೇ ದೇಶವನ್ನೂ ಆ ಒಳ್ಳೇ ಬೆಟ್ಟವನ್ನೂ ಲೆಬನೋನನ್ನೂ ನೋಡುವದಕ್ಕೆ ಅಪ್ಪಣೆಯಾಗಬೇಕು ಎಂಬದೇ.
26. ಆದರೆ ಕರ್ತನು ನಿಮಗೋಸ್ಕರ ನನ್ನ ಮೇಲೆ ಕೋಪಗೊಂಡು ನನ್ನ ಮನವಿಯನ್ನು ಕೇಳಲಿಲ್ಲ; ಕರ್ತನು ನನಗೆ--ಇನ್ನು ಸಾಕು; ಈ ವಿಷಯ ದಲ್ಲಿ ನನ್ನ ಸಂಗಡ ಇನ್ನೂ ಮಾತನಾಡಬೇಡ.
27. ಪಿಸ್ಗಾದ ತುದಿಗೆ ಏರಿ ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಕಣ್ಣುಗಳನ್ನೆತ್ತಿ ಅದನ್ನು ಕಣ್ಣಾರೆ ನೋಡು; ಆದರೆ ಈ ಯೊರ್ದನನ್ನು ನೀನು ದಾಟಿಹೋಗುವದಿಲ್ಲ.
28. ಆದರೆ ಯೆಹೋಶು ವನಿಗೆ ಆಜ್ಞಾಪಿಸಿ ಅವನಿಗೆ ದೃಢಮಾಡಿ ಬಲಪಡಿಸು; ಅವನು ಈ ಜನರ ಮುಂದೆ ದಾಟಿಹೋಗಿ ನೀನು ನೋಡುವ ದೇಶವನ್ನು ಅವರಿಗೆ ಸ್ವಾಸ್ತ್ಯ ವಾಗಿ ಹೊಂದುವಂತೆ ಮಾಡುವನು ಎಂದು ಹೇಳಿದನು.
16.8 ಲಕ್ಷ ಹಜ್ ಯಾತ್ರಿಕರ ಆಗಮನ: ಪಾಸ್‌ಪೋರ್ಟ್ ಮಹಾನಿರ್ದೇಶನಾಲಯ ಘೋಷಣೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Aug 17, 2018, 7:54 PM IST
ಜಿದ್ದಾ (ಸೌದಿ ಅರೇಬಿಯ), ಆ. 17: 16.8 ಲಕ್ಷಕ್ಕೂ ಅಧಿಕ ಹಜ್ ಯಾತ್ರಿಕರು ಗುರುವಾರ ಮಧ್ಯಾಹ್ನದ ವೇಳೆಗೆ ಸೌದಿ ಅರೇಬಿಯಕ್ಕೆ ಆಗಮಿಸಿದ್ದಾರೆ ಎಂದು ಪಾಸ್‌ಪೋರ್ಟ್ ಮಹಾನಿರ್ದೇಶನಾಲಯ ತಿಳಿಸಿದೆ.
''ಈ ಕ್ಷಣದವರೆಗೆ ನಮ್ಮ ವಾಯು, ಭೂ ಮತ್ತು ಜಲ ತಪಾಸಣಾ ಠಾಣೆಗಳು ಜಗತ್ತಿನ ವಿವಿಧ ಭಾಗಗಳಿಂದ 16,84,629 ಯಾತ್ರಿಕರನ್ನು ಹಾರ್ದಿಕವಾಗಿ ಸ್ವಾಗತಿಸಿವೆ'' ಎಂದು ಪಾಸ್‌ಪೋರ್ಟ್ಸ್ ಮಹಾ ನಿರ್ದೇಶಕ ಮೇಜರ್ ಜನರಲ್ ಸುಲೈಮಾನ್ ಬಿನ್ ಅಬ್ದುಲ್ ಅಝೀಝ್ ಅಲ್-ಯಾಹ್ಯಾ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
15,84,085 ಯಾತ್ರಿಕರು ವಿಮಾನದ ಮೂಲಕ ಬಂದಿದ್ದಾರೆ ಎಂದು ಯಾಹ್ಯಾ ಹೇಳಿದರು. 84,381 ಮಂದಿ ಭೂ ಗಡಿದಾಟುಗಳ ಮೂಲಕ ಬಂದರೆ, 16,163 ಯಾತ್ರಿಕರು ಹಡಗುಗಳಲ್ಲಿ ಬಂದಿದ್ದಾರೆ ಎಂದರು.
''ಆಂತರಿಕ ಸಚಿವ ರಾಜಕುಮಾರ ಅಬ್ದುಲ್ ಅಝೀಝ್ ಬಿನ್ ಸೌದ್ ಬಿನ್ ನಯೀಫ್ ಮತ್ತು ಮಕಾ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಝಲ್‌ರ ಮಾರ್ಗದರ್ಶನದಲ್ಲಿ ಹಜ್ ಯಾತ್ರಿಕರನ್ನು ದಕ್ಷತೆಯಿಂದ ಸ್ವಾಗತಿಸಲು ನಾವು ಹಿಂದಿನಿಂದಲೇ ಯೋಜನೆ ರೂಪಿಸಿದ್ದೆವು. ಈ ಉದ್ದೇಶಕ್ಕಾಗಿ ನಾವು ಎಲ್ಲ ಅರ್ಹ ಸಿಬ್ಬಂದಿ ಮತ್ತು ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದೇವೆ'' ಎಂದು ಅವರು ನುಡಿದರು.
ಹಜ್ ಮಾರ್ಗದರ್ಶಿಗಳ ತರಬೇತಿ ಪೂರ್ಣ
135 ಪುರುಷ, ಮಹಿಳಾ 'ತವಾಫಾ' ಮಾರ್ಗದರ್ಶಿಗಳು ಯಾತ್ರಿಕರ ಸೇವೆಗೆ ಸಿದ್ಧ
ಹಜ್ ಯಾತ್ರಿಕರಿಗೆ ಮಾರ್ಗದರ್ಶನ ನೀಡುವ 135 ಪುರುಷ ಮತ್ತು ಮಹಿಳಾ 'ತವಾಫಾ' ಮಾರ್ಗದರ್ಶಿಗಳ ತರಬೇತಿಯನ್ನು ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗ (ಎಸ್‌ಸಿಟಿಎಚ್) ಪೂರ್ಣಗೊಳಿಸಿದೆ.
ಪ್ರವಾಸ ಮಾರ್ಗದರ್ಶಿ ಪರವಾನಿಗೆಗಳನ್ನು ಪಡೆದವರಿಗೆ ಈ ತರಬೇತಿಯನ್ನು ನೀಡಲಾಗುತ್ತಿದೆ.
ತರಬೇತಿ ಕೋರ್ಸ್ ಮುಗಿಸಿದ ಪ್ರಥಮ ತಂಡದ ಸದಸ್ಯರಿಗೆ ಪ್ರಮಾಣಪತ್ರ ನೀಡುವ ಕಾರ್ಯಕ್ರಮ ಮಕ್ಕಾದಲ್ಲಿರುವ 'ಅರಬ್ ದೇಶಗಳ ಯಾತ್ರಿಕರಿಗಾಗಿ ರಾಷ್ಟ್ರೀಯ ತವಾಫಾ ಸಂಸ್ಥೆ (ಎಆರ್‌ಬಿಎಚ್‌ಎಜೆ)'ಯಲ್ಲಿ ಮಂಗಳವಾರ ನಡೆಯಿತು.
ಆಯೋಗವು ಎಆರ್‌ಬಿಎಚ್‌ಎಜೆಯ 135ಕ್ಕೂ ಅಧಿಕ ಪುರುಷ ಮತ್ತು ಮಹಿಳಾ ಮಾರ್ಗದರ್ಶಿಗಳನ್ನು ಗೌರವಿಸಿದೆ ಎಂದು ಎಸ್‌ಸಿಟಿಎಚ್ ಮಹಾ ನಿರ್ದೇಶಕ ಡಾ. ಹಿಶಮ್ ಬಿನ್ ಮುಹಮ್ಮದ್ ಮಅದನಿ ಹೇಳಿದರು.
ಬಾಂಗ್ಲಾದೇಶದಿಂದ 1.25 ಲಕ್ಷ ಯಾತ್ರಿಕರು
ಬಾಂಗ್ಲಾದೇಶದ ಹಜ್ ಯಾತ್ರಿಕರನ್ನು ಹೊತ್ತ ಕೊನೆಯ ವಿಮಾನಗಳು ಶುಕ್ರವಾರ ಬೆಳಗ್ಗೆ ಢಾಕಾದಿಂದ ಹೊರಟಿವೆ.
ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್ ಮತ್ತು ಸೌದಿ ಅರೇಬಿಯನ್ ಏರ್‌ಲೈನ್ಸ್‌ನ ವಿಶೇಷ ವಿಮಾನಗಳ ಮೂಲಕ ಈಗಾಗಲೇ 1,25,000ಕ್ಕೂ ಅಧಿಕ ಬಾಂಗ್ಲಾದೇಶಿ ಹಜ್ ಯಾತ್ರಿಗಳು ಪವಿತ್ರ ನಗರ ಮಕ್ಕಾ ತಲುಪಿದ್ದಾರೆ.
ಯಾತ್ರಿಕರ ಸಾಗಣೆಗಾಗಿ ಬಾಂಗ್ಲಾದೇಶ ಸರಕಾರವು ಸೌದಿ ಅರೇಬಿಯದ ಸಹಕಾರದೊಂದಿಗೆ ವ್ಯಾಪಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿದ್ದರಾಮಯ್ಯ.. ಹೇ ಸಿದ್ದರಾಮಯ್ಯ.- ಸಿದ್ದು ಭಾಷಣಕ್ಕೆ ಕುಡುಕ ಯುವಕನ ಕಿರಿಕಿರಿ – Public Tv
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಕುಡುಕ ಯುವಕನೊಬ್ಬ ಕಿರಿಕಿರಿ ಉಂಟುಮಾಡಿದ ಘಟನೆ ನಡೆದಿದೆ.
ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ಸಿದ್ದರಾಮಯ್ಯ ಅವರು 35 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಭಾಷಣ ಮಾಡುತ್ತಿದ್ದರು. ಈ ವೇಳೆ ಮದ್ಯದ ನಶೆಯಲ್ಲಿದ್ದ ಯುವಕನೊಬ್ಬ ಹೇ… ಸಿದ್ದರಾಮಯ್ಯ.. ಹೇ ಸಿದ್ದರಾಮಯ್ಯ.. ಎಂದು ಕೂಗಾಟ ಆರಂಭಿಸಿದ್ದಾನೆ.
ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಯುವಕನನ್ನು ಸುಮ್ಮನಿರುವಂತೆ ಹೇಳಿದ್ದಾರೆ. ಆದರೂ ಬಿಡದ ಯುವಕ ಸಿದ್ದರಾಮಯ್ಯ ಅಂತ ಏಕವಚನದಿಂದಲೇ ಕೂಗಾಡಿದ್ದಾನೆ. ಯುವಕ ಮಾತು ಕೇಳದಿದ್ದಾಗ ಪೊಲೀಸರೇ ಆತನನ್ನು ಎತ್ತಿಕೊಂಡು ಹೋಗಿ ಹೊರಗಡೆ ಬಿಟ್ಟ ಪ್ರಸಂಗ ನಡೆದಿದೆ.
ಈ ಹಿಂದೆ ಬೆಳಗಾವಿಯ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ 'ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು' ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಪೀರಪ್ಪ ಕಟ್ಟಿಮನಿ ಎಂಬವರು 'ಹೌದು ಹುಲಿಯಾ' ಎಂದಿದ್ದು, ಆ ಬಳಿಕ ಡೈಲಾಗ್ ಸಖತ್ ಫೇಮಸ್ ಆಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿ...
ಕ್ಲಾಡ್ – ಅಪರೂಪದ ಬಿಳಿ ಮೊಸಳೆ | ಹೊನಲು
ಅಮೇರಿಕಾ ಸ್ಯಾನ್‍ ಪ್ರಾನ್ಸಿಸ್ಕೋದ ಕ್ಯಾಲಿಪೋರ‍್ನಿಯಾ ಅಕಾಡೆಮಿ ಆಪ್ ಸೈನ್ಸಸ್ ನಲ್ಲಿರುವ ಕ್ಲಾಡ್ ಎಂಬ ಬಿಳಿ ಮೊಸಳೆಯು ಬಹಳ ಅಪರೂಪದ ಪ್ರಾಣಿಯಾಗಿದೆ. ಇದು ಬಿಳಿ ಮೊಸಳೆಗಳಲ್ಲೇ ಅತ್ಯಂತ ಹಿರಿಯ ಮೊಸಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ವಯಸ್ಸು ಕೇವಲ 26 ವರ‍್ಶ. ಇದನ್ನು ಆಲ್ಬಿನೋ ಅಲಿಗೇಟರ್ ಎನ್ನಲಾಗುತ್ತದೆ.
ಆಲ್ಬಿನೋ ಎಂದರೇನು?
ಆಲ್ಬಿನೋ ಪದ ಅಕ್ಯುಲೋಕ್ಯುಟೇನಿಯಸ್ ಆಲ್ಬಿನಿಸಂ ಅನ್ನು ಸೂಚಿಸುತ್ತದೆ. ಈ ಅನುವಂಶೀಯ ಅಸ್ವಸ್ತತೆಯುಳ್ಳವರ ದೇಹದಲ್ಲಿ ಮೆಲನಿನ್ ಪಿಗ್ಮೆಂಟ್ ಅತ್ಯಂತ ಕಡಿಮೆ ಇರುತ್ತದೆ ಅತವಾ ಉತ್ಪಾದನೆಯೇ ಆಗುವುದಿಲ್ಲ. ದೇಹದಲ್ಲಿನ ಮೆಲನಿನ್ ಪ್ರಮಾಣದ ಮೇಲೆ ಚರ‍್ಮ, ಕೂದಲು ಮತ್ತು ಕಣ್ಣುಗಳ ಬಣ್ಣ ನಿರ‍್ದಾರಿತವಾಗುತ್ತದೆ. ಆಪ್ಟಿಕ್ ನರಗಳ ಬೆಳವಣಿಗೆಯ ಮೇಲೂ ಮೆಲನಿನ್ ಪ್ರಬಾವ ಬೀರುತ್ತದೆ. ಆಲ್ಬಿನಿಸಂ ಇರುವವರಿಗ...
ಕ್ಲಾಡ್ ನ ಹುಟ್ಟು
ಕ್ಲಾಡ್ 1995 ರ ಸೆಪ್ಟೆಂಬರ್ 15ರಂದು ಪ್ಲೋರಿಡಾದಲ್ಲಿ ಹುಟ್ಟಿತು. ಹುಟ್ಟಿದಾಗ ಇದರ ತೂಕ ಕೇವಲ 57 ಗ್ರಾಂ (2 ಔನ್ಸ್). ಇಂದು 76 ಹಲ್ಲುಗಳನ್ನು ಹೊಂದಿರುವ ಕ್ಲಾಡ್ ತೂಕ 222 ಪೌಂಡ್ಸ್ (ಅಂದಾಜು 101 ಕೆಜಿ) ಹಾಗೂ ಉದ್ದ 9 ಅಡಿ 5 ಇಂಚು. ಆಲ್ಬಿನಿಸಂ ಅಸ್ವಸ್ತತೆಯಿಂದಾಗಿ ಕ್ಲಾಡ್ ಅರಣ್ಯದಲ್ಲಿ ಇತರೆ ಅಲಿಗೇಟರ್ ನಂತೆ ಜೀವಿಸುವುದು ಸಾದ್ಯವಿರಲಿಲ್ಲ. ಜಗತ್ತಿನಲ್ಲಿ ಈ ಅಸ್ವಸ್ತತೆಗೆ ಒಳಗಾದ ಕೆಲವೇ...
ಕ್ಲಾಡ್ ನ ಪ್ರಸಿದ್ದಿ ಮತ್ತು ಆರೈಕೆ
ಕ್ಯಾಲಿಪೋರ‍್ನಿಯಾ ಅಕಾಡೆಮಿ ಆಪ್ ಸೈನ್ಸಸ್‍ನಲ್ಲಿರುವ ಆಲ್ಬಿನೋ ಅಲಿಗೇಟರ್ ಕ್ಲಾಡ್ ಒಂದು ವಿಶೇಶ ಆಕರ‍್ಶಣೆಯಾಗಿದೆ. ಇದರ ವೀಕ್ಶಣೆಗಾಗಿ, ಸಾಕಶ್ಟು ಪ್ರವಾಸಿಗರು ಬರುವುದುಂಟು. ಆದ್ದರಿಂದ ಇದನ್ನು ಮಗುವಿನಂತೆ ಆರೈಕೆ ಮಾಡಲಾಗುತ್ತದೆ. ವಾರದಲ್ಲಿ ಮೂರು ಬಾರಿ ವಿಶೇಶ ತರಬೇತಿ ಅವದಿಯನ್ನು ನಿಗದಿಪಡಿಸಲಾಗಿದೆ. ಇದಕ್ಕಾಗಿಯೇ ಮೀನುಗಳಿಂದ ತಯಾರಿಸಲಾದ ಉಂಡೆಗಳನ್ನು ನೀಡಲಾಗುತ್ತದೆ. ದ್ರುಶ್ಟಿ ದೋಶವಿರ...
ಆಲ್ಬಿನೋ ಅಲಿಗೇಟರ್ ಗಳು ಸಾಮಾನ್ಯವಾಗಿ ಅಮೇರಿಕಾ ಸಂಯುಕ್ತ ಸಂಸ್ತಾನದ ಆಗ್ನೇಯ ಬಾಗದ ಸಿಹಿ ನೀರಿನ ನದಿಗಳಲ್ಲಿ, ಸರೋವರಗಳಲ್ಲಿ, ಜೌಗು ಪ್ರದೇಶದಲ್ಲಿ ಕಂಡುಬರುತ್ತವೆ. ಬಹಳ ಅಪರೂಪವಾದ ಈ ಬಿಳಿ ಅಲಿಗೇಟರ್ ಗಳು ಇಡೀ ವಿಶ್ವದಲ್ಲಿ ಸುಮಾರು 100 ಇರಬಹುದು ಎಂದು ಜೀವಶಾಸ್ತ್ರಜ್ನರು ಅಂದಾಜಿಸಿದ್ದಾರೆ.
(ಮಾಹಿತಿ ಮತ್ತು ಚಿತ್ರ ಸೆಲೆ: earthtouchnews.com, askinglot.com, smithsonianmag.com, datebook.sfchronicle.com, calacademy.org)
ಟ್ಯಾಗ್‌ಗಳು: :: ಕೆ.ವಿ.ಶಶಿದರ ::, alligators, White Alligator, ಬಿಳಿ ಮೊಸಳೆ, ಮೊಸಳೆ, ಸೋಜಿಗ, ಸೋಜಿಗದ ಸಂಗತಿ, ಸೋಜಿಗದ ಸಂಗತಿಗಳು
10 / 09 / 2019 - ರೇಹೇಬರ್
ಮುಖಪುಟ2019ಸೆಪ್ಟೆಂಬರ್10 (ಮಂಗಳವಾರ)
ದಿನ: 10 ಸೆಪ್ಟೆಂಬರ್ 2019
ಅಂಕಾರಾ ಮೆಟ್ರೋಪಾಲಿಟನ್ ಪುರಸಭೆಯು ರಾಜಧಾನಿಯಲ್ಲಿ ನಾಗರಿಕರು ಶಾಂತಿ ಮತ್ತು ಸುರಕ್ಷತೆಯಿಂದ ಬದುಕಬಲ್ಲದು ಎಂದು ಖಚಿತಪಡಿಸಿಕೊಳ್ಳಲು ನಗರದ ಎಲ್ಲಾ ಭಾಗಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದೆ. ಸಾರಿಗೆ ಮತ್ತು ನೈಸರ್ಗಿಕ ಅನಿಲ ಸೇವೆಗಳ ಯೋಜನೆ ಅಂಕಾರಾ ಮಹಾನಗರ ಪಾಲಿಕೆಯ ಕೈಗಾರಿಕೆ ಮತ್ತು ವ್ಯಾಪಾರ ಇಂಕ್. (Bugsaş) [ಇನ್ನಷ್ಟು ...]
ಕೈಸೇರಿ ಮೆಟ್ರೋಪಾಲಿಟನ್ ಪುರಸಭೆಯಿಂದ ಮಾಡಲ್ಪಟ್ಟಿದೆ ಮತ್ತು ಉದ್ಘಾಟನೆಯಾದಾಗಿನಿಂದ ಕೇಸೇರಿಯ ಪ್ರಮುಖ ಬೌಲೆವಾರ್ಡ್‌ಗಳಲ್ಲಿ ಒಂದಾಗಿದೆ, ಜನರಲ್ ಹುಲುಸಿ ಅಕರ್ ಬೌಲೆವಾರ್ಡ್ ಅನ್ನು ಪಾದಚಾರಿ ಮತ್ತು ಬೈಸಿಕಲ್ ಮಾರ್ಗಗಳನ್ನಾಗಿ ಮಾಡಲಾಗುವುದು. ಇದನ್ನು ಕೇಸೇರಿ ಮಹಾನಗರ ಪಾಲಿಕೆ ನಿರ್ಮಿಸಿದೆ [ಇನ್ನಷ್ಟು ...]
ಕೊನ್ಯಾ ಮೆಟ್ರೋಪಾಲಿಟನ್ ಪುರಸಭೆಯ ಮೇಯರ್ ಉಗುರ್ ಇಬ್ರಾಹಿಂ ಅಲ್ಟೇ, ಕೊನ್ಯಾ ಮೆಟ್ರೊದ ಮೊದಲ ಹಂತ, ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಕೊನ್ಯಾ ಭೇಟಿಯ ಸಂದರ್ಭದಲ್ಲಿ ಅವರಿಗೆ ಒಳ್ಳೆಯ ಸುದ್ದಿ ನೀಡಲಾಯಿತು, ಈ ತಿಂಗಳಲ್ಲಿ ಟೆಂಡರ್ ಮಾಡಲಾಯಿತು, 2021 ಇಸ್ಲಾಮಿಕ್ ಸಾಲಿಡಾರಿಟಿ ಗೇಮ್ಸ್ ಕೊನ್ಯಾದಲ್ಲಿ ಮತ್ತು [ಇನ್ನಷ್ಟು ...]
ಮರ್ಸಿನ್ ಮೆಟ್ರೋಪಾಲಿಟನ್ ಮುನ್ಸಿಪಾಲಿಟಿ ಕೌನ್ಸಿಲ್ ಸೆಪ್ಟೆಂಬರ್ ಸಭೆ 1. ವಿಲೀನದ ಕುರಿತು ಮಾತನಾಡಿದ ಮೇಯರ್ ವಹಾಪ್ ಸೀಯರ್, ಭೂಗತ ಲಘು ರೈಲು ವ್ಯವಸ್ಥೆಯಲ್ಲಿ ನಿಜವಾದ ಕೆಲಸವು ಮರ್ಸಿನ್ ನಂತರವಾಗಿದೆ ಎಂದು ಹೇಳಿದರು. ಭೂಗತ ಲಘು ರೈಲು ವ್ಯವಸ್ಥೆಯ ಅಧ್ಯಕ್ಷೀಯ ಹೂಡಿಕೆ, [ಇನ್ನಷ್ಟು ...]
ಇದೇ ರೀತಿಯ ರೈಲ್ವೆ ಸುದ್ದಿ ಮತ್ತು ಇತರ ಸುದ್ದಿಗಳು ನೀವು ಆಸಕ್ತಿ ಹೊಂದಿರಬಹುದು InRayNews 25.01.2019 ಟೆಂಡರ್ ಬುಲೆಟಿನ್ 25 / 01 / 2019 ನಮ್ಮ ಸಿಸ್ಟಮ್ 25.01.2019 / 04.02.2019 / 04 ನಲ್ಲಿ 02 ಗಾಗಿ ಯಾವುದೇ ಟೆಂಡರ್ ದಾಖಲೆಗಳಿಲ್ಲ [ಇನ್ನಷ್ಟು ...]
ಕೊಕೇಲಿ ಮಹಾನಗರ ಪಾಲಿಕೆ ಕಡಲ ಸಾರಿಗೆಯಲ್ಲಿ ಚಳಿಗಾಲದ ಸುಂಕವನ್ನು ಪ್ರವೇಶಿಸಿದೆ. ಪ್ಯಾಸೆಂಜರ್ ಎಂಜಿನ್ ಸೇವೆ (ಹ್ಯಾಟ್ಎಕ್ಸ್‌ಎನ್‌ಯುಎಂಎಕ್ಸ್) ಅನ್ನು ನಾಲ್ಕು ಆಗಮನಗಳು ಮತ್ತು ಇಜ್ಮಿಟ್ - ಗೋಲ್ಕುಕ್ - ಡೆಗಿರ್ಮೆಂಡೆರೆ ಮತ್ತು ಕರಮುರ್ಸೆಲ್ ನಡುವೆ ಮೂರು ನಿರ್ಗಮನಗಳಾಗಿ ಆಯೋಜಿಸಲಾಗಿದೆ. ಸ್ಟೀಮ್ ಗಂಟೆಗಳ ಅನುಸರಿಸಿ [ಇನ್ನಷ್ಟು ...]
ಗುಡ್ ನ್ಯೂಸ್! ಜಿಎಸ್ಟಿ ರಿಟರ್ನ್ಸ್ ಫಾರ್ಮ್ ಸಲ್ಲಿಕೆ ಇನ್ನಷ್ಟು ಸರಳೀಕರಣ | Simplified GST return forms to be rolled out from April 1 - Kannada Goodreturns
8 min ago ಈ ಮ್ಯೂಚುವಲ್ ಫಂಡ್‌ಗಳಲ್ಲಿ ಇನ್ವೆಸ್ಟ್ ಮಾಡಿ 20 ವರ್ಷಗಳಲ್ಲಿ 5 ಕೋಟಿ ಸಂಪಾದನೆ ಹೇಗೆ?
ಗುಡ್ ನ್ಯೂಸ್! ಜಿಎಸ್ಟಿ ರಿಟರ್ನ್ಸ್ ಫಾರ್ಮ್ ಸಲ್ಲಿಕೆ ಇನ್ನಷ್ಟು ಸರಳೀಕರಣ
| Published: Wednesday, December 5, 2018, 13:31 [IST]
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರಿಟರ್ನ್ಸ್ ಫಾರ್ಮ್ ಅನ್ನು ಇನ್ನಷ್ಟು ಸರಳೀಕರಣಗೊಳಿಸಲಾಗಿದ್ದು, 2019 ರ ಏಪ್ರಿಲ್ 1 ರಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ಕಂದಾಯ ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ಇಎಸ್ಟಿ ಸಂಗ್ರಹಣೆಯ ಗುರಿ ಮುಟ್ಟುವ ವಿಶ್ವಾಸವಿದ್ದು, ತೆರಿಗೆಯನ್ನು ಯಾರೂ ವಂಚಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಜಿಎಸ್ಟಿ ಜಾರಿಯಾದ ಮೊದಲ ಎಂಟು ತಿಂಗಳು ಅವಧಿಯಲ್ಲಿ (ಏಪ್ರಿಲ್ ನಿಂದ ನವೆಂಬರ್ ) ರೂ. 7.76 ಲಕ್ಷ ಕೋಟಿಗಿಂತ ಅಧಿಕ ಜಿಎಸ್ಟಿ ಸಂಗ್ರಹವಾಗಿದೆ. 2018-19 ನೇ ಸಾಲಿನಲ್ಲಿ ರೂ. 13.48 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹಿಸುವ ಗುರಿ ಇಡಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದರ...
ಜೂ. ದರ್ಶನ್ ನೋಡಿ ಡಿಂಪಲ್ ಬೆಡಗಿ ಶಾಕ್!
Bengaluru, First Published Feb 1, 2019, 3:49 PM IST
ಮಜಾಭಾರತ ಕಾಮಿಡಿ ಶೋ ಸ್ಪರ್ಧಿಯಾಗಿ ಆಗಮಿಸಿದ ಜೂನಿಯರ್‌ ದರ್ಶನ್ ಕಂಡು ಜನರು ಬೆರಗಾಗಿದ್ದಾರೆ. ಅದರಲ್ಲೂ ಡಿಂಪಲ್ ಕ್ವೀನ್ ರಚಿತಾ ರಾಮ್ ಮೂಕ ವಿಸ್ಮಿತರಾದರು.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾಭಾರತ ಕಾರ್ಯಕ್ರಮದಲ್ಲಿ ಹಲವಾರು ಜೂನಿಯರ್ ಸ್ಟಾರ್ಸ್ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಆದರೆ, ಆಟೋ ಡ್ರೈವರ್ ಅವಿನಾಶ್ ಲುಕ್ ಮಾತ್ರ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು.
ಜೂನಿಯರ್ ದರ್ಶನ್ ಆಗಿ ಬಂದ ಆಟೋ ಡ್ರೈವರ್ ಅವಿನಾಶ್ ಮೂಲತಃ ಚಿಕ್ಕಮಗಳೂರಿನವರು. ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋಗಳನ್ನು ನೋಡಿದ ಸ್ವತಃ ಕಲರ್ಸ್ ವಾಹಿನಿಯೇ ಅವರನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನಿಸಿತಂತೆ.
ಇನ್ನು ಈ ಡೂಪ್ಲಿಕೇಟ್ ದಾಸನನ್ನು ನೋಡಿದ ಡಿಂಪಲ್ ರಾಣಿ ರಚಿತಾ ರಾಮ್‌ಗೆ ಕೂತಲ್ಲೇ ಕೂರಲೂ ಆಗಲಿಲ್ಲ. ದರ್ಶನ್ ಅವರೇ ಬಂದರೆಂದು ಎಲ್ಲರೂ ಅರೆಕ್ಷಣ ಬೆರಗಾಗಿ ಬಿಟ್ಟರು. ಅವಿನಾಶ್ ನಡೆ, ಲುಕ್, ಮಾತನಾಡುವ ಸ್ಟೈಲ್, ಬಾಡಿ ಲ್ಯಾಂಗ್ವೇಜ್... ಸೇಮ್ ಟೂ ಸೇಮ್ ಜಾಲೆಂಜಿಂಗ್ ಸ್ಟಾರ್ ಹಾಗೆಯೇ ಇದೆ.
ಮದ್ವೆಗೆ ಗೌಡರ ಹುಡುಗನೇ ಬೇಕೆಂದ ರಚಿತಾ ರಾಮ್!
ಹಿಟ್ ಜೋಡಿ ರಚಿತಾ ರಾಮ್ ಹಾಗೂ ದರ್ಶನ್‌ರನ್ನು ಕಿರುತೆರೆ ಮೇಲೆ ನೋಡುವ ಅವಕಾಶವನ್ನು ಮತ್ತೊಮ್ಮೆ ಅವಿನಾಶ್ ಮೂಲಕ ಸಿಕ್ಕಂತಾಯಿತು. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಇಂಥ ಕಾರ್ಯಕ್ರಮಗಳು ಮತ್ತಷ್ಟು ಬರಲಿ, ಅವಿನಾಶ್‌ರಂಥ ಪ್ರತಿಭಾನ್ವಿತರು ಬೆಳಕಿಗೆ ಬರಲಿ ಎಂದು ಹಾರೈಸೋಣವೇ?
ಕೆಜಿಎಫ್ ಟ್ರೈಲರ್ ಅಬ್ಬರಕ್ಕೆ ತಬ್ಬಿಬ್ಬಾದ ಸೆನ್ಸಾರ್ ಮಂಡಳಿ..! ಯಶ್ ಗೆ ಧನ್ಯವಾದ ತಿಳಿಸಿದ್ದೇಕೆ..? | Censor Board Appreciates Trailer Of K G F 2 So Fantastice
ಕೆಜಿಎಫ್ ಟ್ರೈಲರ್ ಅಬ್ಬರಕ್ಕೆ ತಬ್ಬಿಬ್ಬಾದ ಸೆನ್ಸಾರ್ ಮಂಡಳಿ..! ಯಶ್ ಗೆ ಧನ್ಯವಾದ ತಿಳಿಸಿದ್ದೇಕೆ..?
Updated:Wednesday, March 9, 2022, 16:00[IST]
ಕೆಜಿಎಫ್ ಕೇವಲ ಸೌತ್ ಸಿನಿ ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಭಾಗ ಒಂದರಲ್ಲಿ ಅದರ ಗತ್ತು ಏನು ಎಂದು ತೋರಿಸಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಭಾಗ ಒಂದರಲ್ಲಿ ಅದ್ಭುತವಾಗಿ ಸಿನಿಮಾ ನಿರ್ದೇಶನವ ಮಾಡಿ ಯಶಸ್ವಿಯಾಗಿದ್ದರು. ಹೌದು ಕೆಜಿಎಫ್ ಭಾಗ-1 ಸಿನಿಮಾ ನೋಡಿದ ಪ್ರತಿಯೊಬ್ಬರೂ ಕೆಜಿಎಫ್ ಭಾಗ-2 ( K G F 2) ಯಾವಾಗ ಬರುತ್ತದೆ ಎಂದು ಅಂದೇ ಎದುರು ನೋಡುತ್ತಿದ್ದರು. ಹಾಗೆ ಇ...
ಕೆಜಿಎಫ್ ಭಾಗ-2 ಟ್ರೈಲರ್ ರಿಲೀಸ್ ಮಾಡಬೇಕಾ ಬೇಡ ಎಂಬುದಾಗಿ ಚಿತ್ರತಂಡ ಪ್ರೀತಿಯ ಅಭಿಮಾನಿಗಳ ಮುಂದೆ ಈ ಮುಂಚೆ ಪ್ರಶ್ನೆ ಮಾಡಿತ್ತು. ಆಗ ಟ್ರೈಲರ್ ನೋಡಬೇಕು ಎಂಬುದಾಗಿ ಹೇಳಿದ ಅಭಿಮಾನಿಗಳ ಆಸೆಯಂತೆ ಇದೆ ಮಾರ್ಚ್ 27 ನೇ ತಾರೀಕು ಟ್ರೈಲರ್ ಬಿಡುಗಡೆ ಮಾಡಲು ಸಜ್ಜಾಗಿದೆ. ವಿಶ್ವದಾದ್ಯಂತ ಕೆಜಿಎಫ್ ಭಾಗ-2 ಟ್ರೈಲರ್ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಸೆನ್ಸಾರ್ ಮಂಡಳಿಗೂ ಚಿತ್ರ ತಂಡ ಕಾಲಿಟ್ಟು ಅದರ...
ಟ್ರೈಲರ್ ನೋಡಿದ ಸೆನ್ಸಾರ್ ಮಂಡಳಿ ಸದಸ್ಯರೊಬ್ಬರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್-2 ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ. ನಿಜಕ್ಕೂ ಈ ಟ್ರೈಲರ್ ನಾವು ಅಂದುಕೊಂಡದ್ದಕ್ಕಿಂತ ಅದ್ಭುತವಾಗಿದೆ. ನಟ ಯಶ್ ಗೆ (Yash) ಧನ್ಯವಾದಗಳು, ಮಾತುಗಳೇ ಬರುತ್ತಿಲ್ಲ, ಮಾನ್ಸ್ಟರ್ ಹಿಟ್ ಚಿತ್ರ ಇಷ್ಟರಲ್ಲೇ ಬರಲಿದೆ. ಸದ್ಯದಲ್ಲೇ ಕೆಜಿಎಫ್2 ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡಿ ಎಂಬುದಾಗಿ ಯಾವ ಸೀನ್ ಕಟ್ ...
ಮೂಡುಬಿದಿರೆಯಲ್ಲಿ ದ.ಕ. ಜಿಲ್ಲಾ ಮಟ್ಟದ ಪ.ಪೂ. ಕ್ರೀಡಾಕೂಟ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Oct 15, 2019, 10:51 PM IST
ಮೂಡುಬಿದಿರೆ : ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಎಡಪದವು ಸ್ವಾಮಿ ವಿವೇಕಾನಂದ ಪ.ಪೂ. ಕಾಲೇಜು ಇವುಗಳ ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳ 2019-20ನೇ ಸಾಲಿನ ಕ್ರೀಡಾಕೂಟವು ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ನಡೆಯಿತು.
ಮಾಜಿ ಸಚಿವ ಕೆ, ಅಮರನಾಥ ಶೆಟ್ಟಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಮೂಡುಬಿದಿರೆಯಲ್ಲಿರುವ `ಸಿಂಥೆಟಿಕ್ ಟ್ರ್ಯಾಕ್‍ನಿಂದಾಗಿ ಬಹಳಷ್ಟು ಸಾಧನೆ ದಾಖಲಾಗುತ್ತಿದೆ. ಇಂಥಹ ಟ್ರ್ಯಾಕ್‍ನಲ್ಲಿ ಅಭ್ಯಾಸ ಮಾಡುವ ಮೂಲಕ ಹಂತಹಂತವಾಗಿ ದಾಖಲೆಗಳನ್ನು ವೃದ್ಧಿಸುತ್ತ ಬರಲು ಕ್ರೀಡಾಳುಗಳು ಪ್ರಯತ್ನಿಸಬೇಕು' ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಜನಾರ್ದನ ಗೌಡ ಧ್ವಜಾರೋಹಣ ನೆರವೇರಿಸಿ, 'ದೇಶದ ಕ್ರೀಡೆ ಮಾತ್ರವಲ್ಲ ರಕ್ಷಣೆಗೆ ಸದೃಢ ಯುವಜನರನ್ನು ಸಜ್ಜುಗೊಳಿಸಿ, ಅವರ ಮಾನಸಿಕ, ದೈಹಿಕ ಕ್ಷಮತೆಯನ್ನು ವೃದ್ಧಿಸಲು ಕ್ರೀಡಾಚಟುವಟಿಕೆಗಳು ಅಗತ್ಯ' ಎಂದು ಹೇಳಿ ಶುಭ ಹಾರೈಸಿದರು.
ದ.ಕ. ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಉಮೇಶ ಕರ್ಕೇರಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಪದ್ಮನಾಭ ಎಚ್. ಸ್ವಾಗತಿಸಿದರು. ವಾಸು ಕೆ. ನಿರೂಪಿಸಿ ವಂದಿಸಿದರು. ದ.ಕ. ಜಿಲ್ಲೆಯ ವಿವಿಧ ತಾಲೂಕುಗಳ ಪ.ಪೂ. ಕಾಲೇಜುಗಳ ಸುಮಾರು 300 ಮಂದಿ ಕ್ರೀಡಾಳುಗಳು ಪಾಲ್ಗೊಂಡಿದ್ದರು.
ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 'ದಾದಾ' – Public TV
ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 'ದಾದಾ'
ಮುಂಬೈ: ಭಾರತದ ಕ್ರಿಕೆಟ್ ನಿಂಯತ್ರಣ ಮಂಡಳಿ (ಬಿಸಿಸಿಐ) 39ನೇ ಅಧ್ಯಕ್ಷರಾಗಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಮುಂಬೈನಲ್ಲಿ ಇಂದು ನಡೆದ ಸಭೆಯಲ್ಲಿ ಗಂಗೂಲಿ ಅಧಿಕಾರ ವಹಿಸಿಕೊಂಡರು. ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಒಬ್ಬರೆ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಘೋಷಣೆ ಮಾಡಲಾಗಿದೆ. ಉಳಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾರ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರ ಸಚಿವ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸಹೋದರ ಅರುಣ್ ಧುಮಾಲ್ ಖಜಾಂಚ...
9 ತಿಂಗಳ ಅವಧಿ: ಗಂಗೂಲಿ ಅವರು 2020ರ ಸೆಪ್ಟೆಂಬರ್ ವರೆಗೂ ಅಧಿಕಾರ ನಡೆಸಲಿದ್ದಾರೆ. ಏಕೆಂದರೆ ಹೊಸ ನಿಯಮಗಳ ಅನ್ವಯ ಕೇಂದ್ರ ಅಥವಾ ರಾಜ್ಯ ಸಂಸ್ಥೆಯಲ್ಲಿ ಅಧಿಕಾರದಲ್ಲಿದ್ದವರು ಮುಂದಿನ ಮೂರು ವರ್ಷ ಯಾವುದೇ ಅಧಿಕಾರ ಅನುಭವಿಸುವಂತಿಲ್ಲ. ಗಂಗೂಲಿ ಸದ್ಯ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದು, ಈ ಹಿಂದೆ ಕಾರ್ಯದರ್ಶಿಯೂ ಆಗಿದ್ದರು. 2015ರಲ್ಲಿ ಗಂಗೂಲಿ ಅವರು ಬಂಗಾಳ ಕ್ರಿಕೆಟ್ ಅಸೋಸಿಯೇಷನ...
ಬಿಸಿಸಿಐ ನೂತನ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ರಾಜ್ಯ ಅಸೋಸಿಯೇಷನ್ ಅಧ್ಯಕ್ಷ ಬ್ರಿಜೇಶ್ ಪಾಟೀಲ್ ಹಾಗೂ ಸೌರವ್ ಗಂಗೂಲಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಆ ಬಳಿಕ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ಗಂಗೂಲಿ ಒಬ್ಬರೆ ನಾಮಪತ್ರ ಸಲ್ಲಿಕೆ ಮಾಡಿದ್ದರು.
ಸಿಒಎ ಅವಧಿ ಅಂತ್ಯ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐ ಆಡಳಿತ ಮಂಡಳಿಯನ್ನು 2017ರಲ್ಲಿ ವಜಾಗೊಳಿಸಿತ್ತು. ಬಳಿಕ ಸುಪ್ರೀಂ ಆಡಳಿತಾತ್ಮಕ ಸಮಿತಿಯನ್ನು ನೇಮಿಸಿತ್ತು. ಇಂದು ಬಿಸಿಸಿಐ ಪದಾಧಿಕಾರಿಗಳಿಗೆ ಆಡಳಿತಾತ್ಮಕ ಸಮಿತಿ ಅಧಿಕಾರ ಹಸ್ತಾಂತರ ಮಾಡಿದ ಪರಿಣಾಮ ಸುಪ್ರೀಂ ಕೋರ್ಟ್ ನೇಮಿಸಿದ್ದ ಆಡಳಿತಾಧಿಕಾರಿಗಳ ಸಮಿತಿಯ 33 ತಿಂಗಳ ಆಡಳಿ...
6 ದಶಕದ ಬಳಿಕ ಕ್ರಿಕೆಟಿಗ ಅಧ್ಯಕ್ಷ:
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನೂತನ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಸರಿ ಸುಮಾರು 6 ದಶಕಗಳ ಬಳಿಕ ಬಿಸಿಸಿಐ ಅಧ್ಯಕ್ಷ ಸ್ಥಾನ ಪಡೆದ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. 65 ವರ್ಷಗಳ ಹಿಂದೆ ಮಹಾರಾಜ್ ಆಫ್ ವಿಜಯನಗರಂ ಎಂದೇ ಖ್ಯಾತಿ ಪಡೆದಿದ್ದ ವಿಜ್ಜಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದರ...
Related Topics:bccimumbaipresidentPublic TVsourav gangulyಅಧ್ಯಕ್ಷಪಬ್ಲಿಕ್ ಟಿವಿಬಿಸಿಸಿಐಮುಂಬೈಸೌರವ್ ಗಂಗೂಲಿ
ಫುಟ್ಬಾಲ್ ಕೋಚ್ ಈಗ ತರಕಾರಿ ಮಾರಾಟಗಾರ! | NEWSICS
ಫುಟ್ಬಾಲ್ ಕೋಚ್ ಈಗ ತರಕಾರಿ ಮಾರಾಟಗಾರ!
ಮುಂಬೈ: ವಿಶ್ವಕ್ಕೆ ಅಪ್ಪಳಿಸಿದ ಕೊರೋನಾ ಮಹಾಮಾರಿ ಎಲ್ಲರ ಬದುಕನ್ನು ಮೂರಾಬಟ್ಟೆ ಮಾಡಿದೆ. ಇದೇ ಕೊರೋನಾ ಎಫೆಕ್ಟ್ ನಿಂದ ಕ್ರೀಡಾಂಗಣದಲ್ಲಿ ಫುಟ್ಬಾಲ್ ಕಿಕ್‌ ಮಾಡೋದನ್ನು ಹೇಳಿಕೊಡ್ತಿದ್ದ ಕೋಚ್ ಒಬ್ಬರು ತರಕಾರಿ ತಗೊಂಡು ಮನೆ ಮನೆಗೆ ತಿರುಗುವಂತೆ ಮಾಡಿದೆ.
ಮುಂಬೈನ ಫುಟ್ಬಾಲ್ ತರಬೇತಿದಾರ ಪ್ರಸಾದ್ ಬೋಸಲೆ ಜೀವನ ನಿರ್ವಹಣೆಗಾಗಿ ಕಾಂಡಿವಿಲಿ ಪ್ರದೇಶದಲ್ಲಿ ತರಕಾರಿ ಅಂಗಡಿ ಇಟ್ಟು ವ್ಯಾಪಾರ ಆರಂಭಿಸಿದ್ದಾರೆ.
ಫುಟ್ಬಾಲ್ ಕೋಚ್ ಆಗಿದ್ದಾಗ ಪ್ರತಿ ತಿಂಗಳು 25 ಸಾವಿರ ರೂಪಾಯಿ ಸಂಪಾದಿಸುತ್ತಿದ್ದ ಪ್ರಸಾದ್ ಈಗ‌ ಕೊರೋನಾದಿಂದ ಮತ್ತೆ ಫುಟ್ಬಾಲ್ ಅಂಗಳಕ್ಕೆ ಇಳಿಯುವ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ ಸ್ನೇಹಿತರಿಂದ ಸಾಲ‌ ಪಡೆದು ತರಕಾರಿ ಅಂಗಡಿ ಇಟ್ಟು ಪ್ರತಿನಿತ್ಯ 300-400 ರೂಪಾಯಿ ಸಂಪಾದಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸಂಪಾದನೆ ಹೆಚ್ಚಿಸುವುದಕ್ಕಾಗಿ ಹೋಂ ಡೆಲಿವರಿ ಆರಂಭಿಸಲು ಚಿಂತನೆ ನಡೆಸಿ ...
ಈ ಬಗ್ಗೆ ಮಾತನಾಡಿರುವ ಪ್ರಸಾದ್, ಮೊದಲು ತರಕಾರಿ ಚೀಲಗಳನ್ನು ಹೊರಲು ನನಗೆ ಮುಜುಗರವಾಯಿತು. ಏಕೆಂದರೆ, ನಾನು ದೈಹಿಕ ಶಿಕ್ಷಣ ಸ್ನಾತಕೋತ್ತರ ಪದವೀಧರ. ಆದರೆ ಬದುಕಲು ಆಯ್ಕೆಗಳೇ ಇಲ್ಲದಿದ್ದಾಗ ಅನಿವಾರ್ಯವಾಯಿತು. ‌ನಾನು ಮನೆಯಲ್ಲಿ ತಂದೆ-ತಾಯಿ ಹಾಗೂ ಸಹೋದರಿಯೊಂದಿಗೆ ವಾಸವಾಗಿದ್ದೇನೆ. ಅವರ ನಿರ್ವಹಣೆ ಹೊಣೆ ನನ್ನ ಮೇಲಿದೆ ಎಂದಿದ್ದಾರೆ.
ಪ್ರಸ್ತುತ 4 ತಿಂಗಳಿನಿಂದ ಗ್ಯಾಸ್ ಸಬ್ಸಿಡಿ ಪಾವತಿಯಾಗಿಲ್ಲ | ಗ್ರಾಹಕರ ಆಕ್ರೋಶ – Prasthutha
4 ತಿಂಗಳಿನಿಂದ ಗ್ಯಾಸ್ ಸಬ್ಸಿಡಿ ಪಾವತಿಯಾಗಿಲ್ಲ | ಗ್ರಾಹಕರ ಆಕ್ರೋಶ
ಉಡುಪಿ : ಗ್ಯಾಸ್ ಸಿಲಿಂಡ್ ಬೆಲೆ ಅತ್ಯಂತ ಕಡಿಮೆ ಮಾಡುತ್ತೇವೆ ಎಂಬ ಭರವಸೆಯೊಂದಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆದರೆ, ಅಧಿಕಾರಕ್ಕೆ ಬಂದ ನಂತರ ಗ್ಯಾಸ್ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಹೋಯಿತು. ಅಷ್ಟು ಮಾತ್ರವಲ್ಲದೆ, ಸಬ್ಸಿಡಿ ಮೊತ್ತವನ್ನು ನೇರ ಖಾತೆಗೆ ಜಮಾಯಿಸುವುದಾಗಿ ಹೇಳಿದ್ದ ಸರಕಾರ, ಈಗ ನಾಲ್ಕು ತಿಂಗಳಿನಿಂದ ನಯಾ ಪೈಸೆ ಸಬ್ಸಿಡಿ ಮೊತ್ತ ಜಮಾಯಿಸಿಲ್ಲ ಎಂ...
ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಕಳೆದ ಮೇ ತಿಂಗಳಿನಿಂದ ಯಾರೊಬ್ಬರಿಗೂ ಪಾವತಿಯಾಗಿಲ್ಲ. ಕಳೆದೆರಡು ವರ್ಷಗಳಲ್ಲಿ ಕೇಂದ್ರ ಸರಕಾರ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹೊರತಾದ ರೂ.450 ದರವನ್ನು ಪ್ರತಿ ತಿಂಗಳೂ ರೂ.5, 10ರಂತೆ ಏರಿಸಿ, ಈಗ ರೂ.582ರಿಂದ 602 ನಡುವೆ ನಿಗದಿಪಡಿಸಿದೆ. ಹೀಗಾಗಿ ಗ್ಯಾಸ್ ಸಿಲಿಂಡರ್ ದರ ಏರಿದರೆ ಸಿಗುತ್ತಿದ್ದ ಸಬ್ಸಿಡಿ ರೂ.150 ಖೋತಾ ಆಗಿದೆ.