text stringlengths 0 61.5k |
|---|
25 min ago ಶರದ್ ಪವಾರ್ ಗೆ ರಾಷ್ಟ್ರಪತಿಯಾಗುವ ಆಫರ್ ನೀಡಿದೆಯೇ ಎನ್ಡಿಎ? |
27 min ago ಕೆಆರ್ ಮಾರ್ಕೆಟ್ ಫ್ಲೈಓವರ್ ಮತ್ತೆ ಅರ್ಧ ಬಂದ್ |
ಸ್ಪಾಟ್ ಫಿಕ್ಸಿಂಗ್ : ಮಿಸ್ಸಿಂಗ್ ಲಿಂಕ್ ಹುಡುಕಿ |
| Published: Tuesday, September 10, 2013, 12:03 [IST] |
ನವದೆಹಲಿ, ಸೆ.10: ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಕ್ರಿಕೆಟರ್ ಅಜಿತ್ ಚಂಡಿಲಾಗೆ ಕೊನೆಗೂ ಜಾಮೀನು ಸಿಕ್ಕಿದೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಮಿಸ್ಸಿಂಗ್ ಲಿಂಕ್ ಪತ್ತೆಯಾಗಿ ಮತ್ತೊಮ್ಮೆ ತನಿಖೆ ನಡೆಸಿ ಎಂದು ನ್ಯಾಯಾಲಯ ಆದೇಶಿಸಿದೆ. |
ದೆಹಲಿ ಪೊಲೀಸರು ಜುಲೈ ತಿಂಗಳಿನಲ್ಲಿ ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕಿಲ್, ಕ್ರಿಕೆಟ್ ಆಟಗಾರ ಶ್ರೀಶಾಂತ್ ಸೇರಿದಂತೆ 30 ಮಂದಿ ಮೇಲೆ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. |
ಪ್ರಕರಣ ಸಂಬಂಧ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರಾದ ಶ್ರೀಶಾಂತ್, ಅಂಕೀತ್ ಚೌವ್ಹಾಣ್ ಮತ್ತು ಅಜಿತ್ ಚಾಂಡಿಲ ಅವರನ್ನು ಕಳೆದ ಮೇ 16ರಂದು ಮುಂಬೈಯಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಶ್ರೀಶಾಂತ್ ಹಾಗೂ ಚೌವ್ಹಾಣ್ ಜಾಮೀನನ ಮೇಲೆ ಬಿಡುಗಡೆಯಾಗಿದ್ದರು. ಆದರೆ ಮತ್ತೊರ್ವ ಆಟಗಾರ ಚಾಂಡಿಲ ಮಾತ್ರ ಇನ್ನು ತಿಹಾರ್ ಜೈಲಲ್ಲೇ ಇದ್ದರು. |
ಹೆಚ್ಚುವರಿ ಸೆಷನ್ಸ್ ಜಡ್ಜ್ ಧರ್ಮೇಶ್ ಶರ್ಮ ಅವರು ರಾಜಸ್ಥಾನ ರಾಯಲ್ಸ್ ಆಟಗಾರ ಚಂಡಿಲಾ, ಮಾಜಿ ರಣಜಿ ಆಟಗಾರ ಬಾಬುರಾವ್ ಯಾದವ್ ಹಾಗೂ ಬುಕ್ಕಿ ದೀಪಕ್ ಕುಮಾರ್ ಅವರಿಗೆ ಜಾಮೀನು ನೀಡಿದ್ದು, ಎಲ್ಲರೂ 50,000 ರು ವೈಯಕ್ತಿಕ ಬಾಂಡ್ ಹಾಗೂ ಒಬ್ಬರು ಶ್ಯೂರಿಟಿ ನೀಡಿ ಜೈಲಿನಿಂದ ಮುಕ್ತರಾಗಿದ್ದಾರೆ. |
ಬುಕ್ಕಿಗಳಾದ ಜಿತೇಂದ್ರ ಕುಮಾರ್ ಜೈನ್, ರಮೇಶ್ ವ್ಯಾಸ್, ಅಶ್ವನಿ ಅಗರವಾಲ್, ಸುನಿಲ್ ಭಾಟಿಯಾ ಹಾಗೂ ಫಿರೋಜ್ ಫಾರಿದ್ ಅನ್ಸಾರಿ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ. |
ಮಿಸ್ಸಿಂಗ್ ಲಿಂಕ್: ಅಜಿತ್ ಚಂಡಿಲಾ, ಶ್ರೀಶಾಂತ್ ಜತೆ ಸಂಪರ್ಕ ಹೊಂದಿದ್ದ ಬುಕ್ಕಿಗಳ ಹೇಳಿಕೆಗಳಲ್ಲಿ ಗೊಂದಲ ಕಂಡು ಬಂದಿದ್ದು, ಈ ಕೇಸ್ ನಲ್ಲಿ ಮಿಸ್ಸಿಂಗ್ ಲಿಂಕ್ ಇದೆ. ವಿಶೇಷ ಸೆಲ್ ಆರಂಭಿಸಿ ದೆಹಲಿ ಪೊಲೀಸರು ಮತ್ತೊಮ್ಮೆ ತನಿಖೆ ನಡೆಸುವಂತೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಜಡ್ಜ್ ಧರ್ಮೇಶ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. |
ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ನೇತೃತ್ವದ ತಂಡ ದೋಷಾರೋಪಣ ಪಟ್ಟಿ ಸಿದ್ಧಪಡಿಸಿದ್ದು, ಜು.31 ರಂದು ನೀರಜ್ ಕುಮಾರ್ ಅವರು ನಿವೃತ್ತಿ ಹೊಂದುತ್ತಿದ್ದು ಅದಕ್ಕಿಂತ ಮೊದಲು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. |
ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವವರ ಮೇಲೆ ಮಹಾರಾಷ್ಟ್ರ ಅಪರಾಧ ನಿಯಂತ್ರಣ ಕಾಯ್ದೆ (ಮೊಕಾ) ಪ್ರಕಾರ ದೂರು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 420, 409 ಹಾಗೂ 120 (ಬಿ) ಹಾಗೂ ಮೋಕಾ ಸೆಕ್ಷನ್ 6 ಮತ್ತು 8 ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. |
ಶ್ರೀಶಾಂತ್ ಗೆಳೆಯ ಅಭಿಷೇಕ್ ಶುಕ್ಲಾ ಅವರನ್ನು ಮೋಕಾ ಅಡಿಯಲ್ಲಿ ಆರೋಪಿಯನ್ನಾಗಿಸಿಲ್ಲ. ಪಾಕಿಸ್ತಾನ, ದುಬೈ ಹಾಗೂ ಇಂಗ್ಲೆಂಡ್ ನಿಂದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಸ್ಪಾಟ್ ಫಿಕ್ಸಿಂಗ್ ನಿಯಂತ್ರಿಸುತ್ತಿದ್ದರು. ಪಾಕಿಸ್ತಾನ ಬುಕ್ಕಿ ಸಲ್ಮಾನ್, ದುಬೈ ಬುಕ್ಕಿ ಜಾವೇದ್ aka ಡಾಕ್ಟರ್ aka ಜಾವೇದ್ ಛೂಟನಿ ಅವರು ಭಾರತದ ಬುಕ್ಕಿಗಳಾದ ರಮೇಶ್ ವ್ಯಾಸ್ ಹಾಗೂ ಟಿಂಕು ಮಂಡಿ ಮೂಲಕ ಫಿಕ್ಸಿಂಗ್ ಮಾ... |
ಇನ್ನಷ್ಟು spot fixing ಸುದ್ದಿಗಳು |
ಕೊಲ್ಲೂರಿನಲ್ಲಿ ಶ್ರೀಶಾಂತ್ ಮನದಾಸೆ ಬಹಿರಂಗ |
ರವಿಶಾಸ್ತ್ರಿ ಅಂಡ್ ಟೀಂನಿಂದ ಸ್ಪಾಟ್ ಫಿಕ್ಸಿಂಗ್ ತನಿಖೆ |
ಐಪಿಎಲ್ ಫಿಕ್ಸಿಂಗ್ ಮಾಡಿದ್ದು ನಿಜ : ಗುರುನಾಥ |
ಸ್ಪಾಟ್ ಫಿಕ್ಸಿಂಗ್ : ವಿಜಯ್ ಮಲ್ಯ, ಪವಾರ್ ಕೂಡಾ ಭಾಗಿ |
ಐಪಿಎಲ್ ಕ್ರಿಕೆಟ್ ಕಳ್ಳಾಟದಲ್ಲಿ ಧೋನಿ ಸುಳ್ಳಾಟ! |
ಸ್ಪಾಟ್ ಫಿಕ್ಸಿಂಗ್ ಹಗರಣ : ಮೇಯಪ್ಪನ್ ಗೆ ಮತ್ತಷ್ಟು ಸಂಕಷ್ಟ |
ಸ್ಪಾಟ್ ಫಿಕ್ಸಿಂಗ್: ಗುರುನಾಥ್ ಮತ್ತೆ ಕಟಂಕ ಶುರು |
ಶ್ರೀಶಾಂತ್ ಗೆ ಆಜೀವ ನಿಷೇಧ ಹೇರಿದ ಬಿಸಿಸಿಐ |
ದಾವೂದ್ ಜತೆ ಶ್ರೀಶಾಂತ್ ಮೇಲೂ ಚಾರ್ಜ್ ಶೀಟ್ |
ಮೇಯಪ್ಪನ್ ಗೆ ಕ್ಲೀನ್ ಚೀಟ್ ಏಕೆ? : ಕೋರ್ಟ್ |
ಸ್ಪಾಟ್ ಫಿಕ್ಸಿಂಗ್ : ಕುಂದ್ರಾ, ಮೇಯಪ್ಪನ್ ಗೆ ಕ್ಲೀನ್ ಚಿಟ್ |
spot fixing high court bcci cricket sreesanth dawood ibrahim ಸ್ಪಾಟ್ ಫಿಕ್ಸಿಂಗ್ ಹೈಕೋರ್ಟ್ ಬಿಸಿಸಿಐ ಕ್ರಿಕೆಟ್ ದಾವೂದ್ ಇಬ್ರಾಹಿಂ ಶ್ರೀಶಾಂತ್ |
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ | ಸುದ್ದಿ ಬೆಳ್ತಂಗಡಿ |
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ |
in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ವರದಿ, ವಿಶೇಷ ಸುದ್ದಿ, ಸಂಘ ಸಂಸ್ಥೆ, ಸಮಾರಂಭ, ಸಾಮಾನ್ಯ |
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಡಿ.16ರಂದು ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಜರಗಿತು. |
ಸಂಘದ ಅಧ್ಯಕ್ಷ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿದ್ದರು. ವರದಿ ವರ್ಷದಲ್ಲಿ 47 ಕೋಟಿ ರೂ.ಗಿಂತ ಅಧಿಕ ಮೊತ್ತದ ಠೇವಣಿಗಳನ್ನು ಹೊಂದಿರುವ ಸಂಘವು 55 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ವಿವಿಧ ಸಾಲಗಳನ್ನು ನೀಡಿದೆ.ಈ ವರ್ಷ ಸಂಘವು ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿರುವುದರಿಂದ ಹೆಚ್ಚಿನ ಯೋಜನೆಗಳನ್ನು ರೂಪಿಸಿಕೊಂಡಿದ್ದು ಸದಸ್ಯರಿಗೆ ಲಾಭದಾಯಕ ಸೇವೆಗಳನ್ನು ನೀಡುವ ಗುರಿಯನ್ನು ಹೊಂದಿದೆ. |
2018-19 ನೇ ಸಾಲಿನಲ್ಲಿ ಸಂಘವು 84ಲಕ್ಷ ರೂ. ಲಾಭಗಳಿಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ವಿತರಿಸಲಿದೆ. |
ಸಂಘದ ಉಪಾಧ್ಯಕ್ಷ ಪ್ರಕಾಶ ನಾರಾಯಣ ರಾವ್, ನಿರ್ದೇಶಕರಾದ ಕೊರಗಪ್ಪ ನಾಯ್ಕ, ಜ್ಯೋತಿ ಜೆ.ಫಡ್ಕೆ, ಶಶಿಧರ ಎಂ.ಕಲ್ಮಂಜ, ನಂದಕುಮಾರ್, ಶಶಿಧರ, ಸುಮಾ ಗೋಖಲೆ, ರಾಘವ ಕಲ್ಮಂಜ, ಶಶಿಧರ ಬಿ., ಸಂಜೀವ ಗೌಡ, ನಯನಾ, ಶಶಿಧರ ಬಿ, ವೃತ್ತಿಪರ ನಿರ್ದೇಶಕರಾದ ಎನ್. ಎಸ್.ಗೋಖಲೆ, ಗಜಾನನ ವಝೆ ಉಪಸ್ಥಿತರಿದ್ದರು. |
ಸೋಮಂತಡ್ಕ ಶಾಖಾ ಮ್ಯಾನೇಜರ್ ಚಂದ್ರಕಾಂತ ಪ್ರಭು ಸ್ವಾಗತಿಸಿದರು. ಸಿಇಓ ನಾರಾಯಣ ಫಡ್ಕೆ ವರದಿ ವಾಚಿಸಿದರು. ಕಕ್ಕಿಂಜೆ ಶಾಖಾ ಮ್ಯಾನೇಜರ್ ಮಧುಕರ ರಾವ್ ಕಾರ್ಯಕ್ರಮ ನಿರೂಪಿಸಿದರು.ನೆರಿಯ ಶಾಖಾ ಮ್ಯಾನೇಜರ್ ಕರುಣಾಕರ್ ಎಂ.ಎಸ್. ವಂದಿಸಿದರು. |
+ಸಭೆಯಲ್ಲಿ ಭಾಗವಹಿಸಿದ ಪ್ರತಿ ಸದಸ್ಯರಿಗೆ ಮಾಸ್ಕ್, ಸಾಮಾಜಿಕ ಅಂತರ ಮೊದಲಾದ ಕೊರೊನಾ ಎಚ್ಚರಿಕೆಗಳು ಕಡ್ಡಾಯವಾಗಿತ್ತು. |
+ಕೋವಿಡ್ ಕಾರಣ ಭೋಜನ ವ್ಯವಸ್ಥೆ ಬೆಳಿಗ್ಗೆ 10.30 ರಿಂದಲೇ ಆರಂಭಿಸಲಾಯಿತು. |
+ಕೃಷಿಕರ ಸಾಲ ತಿರುವಳಿ ಯೋಜನೆಗೆ ಸಂಘದ ಪರವಾಗಿ ಶೇ.1 ಸಹಾಯಧನ ನೀಡುವುದಾಗಿ ತೀರ್ಮಾನಿಸಲಾಯಿತು. |
+ಅಂತರ್ಜಲ ವೃದ್ಧಿಗೆ ಸಂಘದ ಮೂಲಕ ಹೆಚ್ಚಿನ ಒತ್ತು ನೀಡುವುದು. |
+ಸೋಮಂತಡ್ಕದಲ್ಲಿ ನಿರ್ಮಿಸುತ್ತಿರುವ ಸಂಘದ ನೂತನ ಕಟ್ಟಡವನ್ನು ಶೀಘ್ರ ಲೋಕಾರ್ಪಣೆ ಗೊಳಿಸುವುದು. |
+ಆತ್ಮ ನಿರ್ಭರ ಭಾರತ ಯೋಜನೆಯಡಿ ಸಂಘದ ಮೂಲಕ ಉದ್ಯೋಗ ನೈಪುಣ್ಯ ತರಬೇತಿ ನೀಡಿ ವ್ಯವಹಾರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಯತ್ನ. |
ಮುದ್ರಣ ಮಾಧ್ಯಮದೊಳಗೆ ತೂರಿ ಬರಲಿದೆ ವಿದೇಶೀ ಬಂಡವಾಳ ! | ThatsKannada.com - Foreign investment in the field of Print media is allowed - Kannada Oneindia |
ಮುದ್ರಣ ಮಾಧ್ಯಮದೊಳಗೆ ತೂರಿ ಬರಲಿದೆ ವಿದೇಶೀ ಬಂಡವಾಳ ! |
ನವದೆಹಲಿ : ದೇಶೀಯ ಮಾಧ್ಯಮ ಸಂಘಟನೆಗಳು ಮತ್ತು ಪ್ರತಿ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರಕಾರವು ಸುದ್ದಿ ಪತ್ರಿಕೆಗಳಲ್ಲಿ ಶೇ 26ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದೆ. |
ಮಂಗಳವಾರ ಪ್ರಧಾನಿ ವಾಜಪೇಯಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆ-ಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಆದರೆ ಸಂಪಾದಕೀಯ ಮತ್ತು ಆಡಳಿತ ನಿಯಂತ್ರಣ ಭಾರತೀಯ ಕೈಗಳಲ್ಲೇ ಇರುವಂತೆ ಸುರಕ್ಷಾ ಕ್ರಮವನ್ನು ಕೈಗೊಳ್ಳಲಾಗಿದೆ. ಮುದ್ರಣ ಮಾಧ್ಯಮದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡುವ ಮು... |
ಮೈತ್ರಿಯಲ್ಲಿ ಗೊಂದಲವಿಲ್ಲ, ಫಲಿತಾಂಶದ ನಂತರ ಮೈತ್ರಿ ಇನ್ನಷ್ಟು ಗಟ್ಟಿ; ಗುಂಡೂರಾವ್ | Udayavani – ಉದಯವಾಣಿ |
ಮೈತ್ರಿಯಲ್ಲಿ ಗೊಂದಲವಿಲ್ಲ, ಫಲಿತಾಂಶದ ನಂತರ ಮೈತ್ರಿ ಇನ್ನಷ್ಟು ಗಟ್ಟಿ; ಗುಂಡೂರಾವ್ |
Team Udayavani, May 18, 2019, 1:28 PM IST |
ಬೆಂಗಳೂರು: ಗೊಂದಲಕ್ಕಿಂತ ರಾಜ್ಯ ಸರ್ಕಾರ ವಿಸರ್ಜನೆಯೊಂದೇ ಪರಿಹಾರ ಎಂಬ ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮೈತ್ರಿಯಲ್ಲಿ ಯಾವುದೇ ಗೊಂದಲ ಇಲ್ಲ. ಮೇ 23ರ ಫಲಿತಾಂಶದ ನಂತರ ಮೈತ್ರಿ ಇನ್ನಷ್ಟು ಗಟ್ಟಿಗೊಳ್ಳಲಿದೆ ಎಂದು ತಿಳಿಸಿದ್ದಾರೆ. |
ಪದೇ, ಪದೇ ಗೊಂದಲದಲ್ಲಿ ಸರ್ಕಾರ ನಡೆಸುವುದಕ್ಕಿಂತ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗೋದು ಒಳ್ಳೇಯದು ಎಂಬುದು ಜನರ ಅಭಿಪ್ರಾಯವಾಗಿದೆ ಎಂಬುದಾಗಿ ಬಸವರಾಜ ಹೊರಟ್ಟಿ ಅವರು ಹೇಳಿರುವುದು ರಾಜ್ಯರಾಜಕೀಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. |
ಬಸವರಾಜ ಹೊರಟ್ಟಿ ಸಾಹೇಬ್ರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ನಮ್ಮ ಮೈತ್ರಿಯಲ್ಲಿ ಯಾವುದೇ ಗೊಂದಲ್ಲ ಇಲ್ಲ. ಸರ್ಕಾರ ಅಸ್ಥಿರವಾಗುವುದಿಲ್ಲ. ಕೆಲವು ದಿನಗಳ ಹಿಂದಿನ ಬೆಳವಣಿಗೆಯಿಂದ ಅವರು ಹೇಳಿರಬಹುದು ಎಂದರು. |
ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಬಿಜೆಪಿ, RSS ನಿಂದ ಸಾಧ್ಯವಿಲ್ಲ -ಸಿದ್ಧರಾಮಯ್ಯ |
ಹಿಂದುತ್ವ ಎಂದರೆ ಹಿಂದುತ್ವವೇ. ನೆಹರೂ, ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ನಾವುಗಳು ಹಿಂದೂಗಳಲ್ಲವೇ. ಆರ್ ಎಸ್ ಎಸ್ ಸಿದ್ಧಾಂತವೇ ಬಿಜೆಪಿಯ ಸಿದ್ಧಾಂತ. ಹಿಂದುತ್ವದಲ್ಲಿ ಕಠಿಣ, ಮೃದು ಎಂಬುದು ಇರುವುದಿಲ್ಲ. |
Published on : 08 Jan, 2021 , 3:30 pm |
ಯಾವುದೇ ರಾಜಕೀಯ ಪಕ್ಷ ಯಶಸ್ಸು ಗಳಿಸಬೇಕಾದರೆ ಜನರ ಜೊತೆಗಿನ ಸಂಪರ್ಕ ಮುಖ್ಯ. ಜೊತೆಗೆ ಪಕ್ಷದ ಸಿದ್ಧಾಂತ ಅನುಸರಿಸುವುದೂ ಪ್ರಮುಖವಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. |
ಬೆಂಗಳೂರು ವಿಭಾಗದ ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ 'ಪಕ್ಷ ಇಂದು ಸಂಕಷ್ಟದಲ್ಲಿದೆ. ಆದರೆ ಅದು ತಾತ್ಕಾಲಿಕ. ಪಕ್ಷ ಹಿಂದೆಯೂ ಕಷ್ಟದ ದಿನಗಳನ್ನು ಎದುರಿಸಿದೆ. ಕಷ್ಟ, ಸುಖ ರಾಜಕೀಯ ಪಕ್ಷಗಳಿಗೆ ಸ್ವಾಭಾವಿಕ. ಅದು ಹಗಲು, ರಾತ್ರಿ ಇದ್ದಂತೆ. 1977ರಲ್ಲಿ ಪಕ್ಷ ಸೋತ್ತಿತ್ತು. ಮೂರು ವರ್ಷಗಳ ಬಳಿಕ ಪಕ್ಷ ಗೆಲುವು ಸಾಧಿಸಿ ಇಂದಿರಾಗಾಂಧಿಯವರು ಪ್ರಧಾನಿಯಾದರು. 2004ರಲ್ಲಿ ... |
ಈಗ ಪಕ್ಷಕ್ಕೆ ಕಷ್ಟ ಎದುರಾಗಿದೆ. ಆದರೆ ಕಾರ್ಯಕರ್ತರು ದೃತಿಗೆಡುವ ಅಗತ್ಯವಿಲ್ಲ. ಪಕ್ಷಕ್ಕೆ ಹೋರಾಟ ಹೊಸದೇನಲ್ಲ. ಮಹಾತ್ಮ ಗಾಂಧಿಯವರ ಕಾಲದಿಂದಲೂ ಪಕ್ಷ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಅಂದು ಗಾಂಧೀಜಿಯವರು ಹೋರಾಟ ಆರಂಭಿಸದೇ ಹೋಗಿದ್ದರೆ ನಾವು ಸ್ವತಂತ್ರ ಜೀವಿಗಳಾಗುತ್ತಿರಲಿಲ್ಲ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳೇ ಹೊರತು ಫಲಾನುಭಿಗಳಲ್ಲ. ಈ ವರ್ಷವನ್ನು ಸಂಘರ್ಷ ಹಾಗ... |
2918ರಲ್ಲಿ ಭ್ರಷ್ಟಾಚಾರ, ಜನವಿರೋಧಿ ನೀತಿಯಿಂದ ನಾವು ಅಧಿಕಾರ ಕಳೆದುಕೊಳ್ಳಲಿಲ್ಲ. ಬಿಜೆಪಿ, ಜೆಡಿಎಸ್ ನವರ ಅಪ ಪ್ರಚಾರ, ನಮ್ಮ ಪ್ರಚಾರದ ಕೊರತೆಯಿಂದ ನಾವು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ರಾಜ್ಯದಲ್ಲಿ ಪಕ್ಷ ಸಧೃಡವಾಗಿದೆ. ಅದು ಮಚಾಯಿತಿ ಚುನಾವಣೆಯಲ್ಲಿ ಸಾಬೀತಾಗಿದೆ. ನಾವೇ ಆಧಿಕ ಸ್ಥಾನವನ್ನು ಗೆದ್ದಿದ್ದೇವೆ ಎಂದು ಬಿಜೆಪಿಯವರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ, ಪಂಚಾಯಿತಿ ಚ... |
ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ವೈಫಲ್ಯಗಳ ಸರಮಾಲೆಯೇ ಇದೆ. ಸರ್ಕಾರ ಸತ್ತಿದೆ. ಆಡಳಿತ ಯಂತ್ರ ಹಳಿ ತಪ್ಪಿದೆ. ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿದೆ. ಇದನ್ನು ನಾವು ಜನರಿಗೆ ತಿಳಿಸಬೇಕಾಗಿದೆ. ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು ನಮ್ಮ ಸರ್ಕಾರ. ಯಡಿಯೂರಪ್ಪ ಅವರು ಸಂಘ ಪರಿವಾರದವರ ಸಲಹೆ ಮೇರೆಗೆ ಸನಾತನ ಧರ್ಮದ ಮರು ಸೃಷ್ಟಿ ಎಂದು ಹೇಳಿ ಅನುಭವ ಮಂಟಪಕ್ಕೆ ... |
ಹಿಂದುತ್ವ ಎಂದರೆ ಹಿಂದುತ್ವವೇ. ನೆಹರೂ, ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ನಾವುಗಳು ಹಿಂದೂಗಳಲ್ಲವೇ. ಆರ್ ಎಸ್ ಎಸ್ ಸಿದ್ಧಾಂತವೇ ಬಿಜೆಪಿಯ ಸಿದ್ಧಾಂತ. ಹಿಂದುತ್ವದಲ್ಲಿ ಕಠಿಣ, ಮೃದು ಎಂಬುದು ಇರುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಬಿಜೆಪಿ, ಆರ್ ಎಸ್ ಎಸ್ ನಿಂದ ಸಾಧ್ಯವಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾವುದಾರೂ ಪಕ್ಷಕ್ಕೆ ಕಾರ್ಯಕರ್ತರ ಪಡೆ ಇದ್ದರೆ ಅದು ಕಾಂಗ... |
ದೇಶಕ್ಕೆ ಮೋದಿಯವರ ಕೊಡುಗೆ ಏನು. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟಕೊಂಡು ಆಡಳಿತ ನಡೆಸುವುದನ್ನು ಬಿಟ್ಟರೆ ಯಾವುದೇ ಸಮಸ್ಯೆಗಳಿಗೆ ಮೋದಿಯವರ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಯಾವುದೇ ಹೊಸ ಕಾರ್ಯಕ್ರಮ ಘೋಷಣೆ ಮಾಡಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿರುವುದನ್ನು ಹೊರತುಪಡಿಸಿದರೆ ಯಾವುದೇ ಸಾಧನೆ ಮಾಡಿಲ್ಲ. ಡಿ ನೋಟಿಫಿಕೇಷನ್ ... |
ಇದು ನಾವು ಸುಮ್ಮನೆ ಕೂರುವ ಕಾಲವಲ್ಲ. ಹೋರಾಟ, ಸಂಘಟನೆ ನಮ್ಮ ಗುರಿಯಾಗಬೇಕು. ನಾವು ಹೋರಾಟ ಮಾಡಬೇಕಿರುವುದು ಮೋದಿ, ಯಡಿಯೂರಪ್ಪ ವಿರುದ್ಧ ಅಲ್ಲ. ಆರ್ ಎಸ್ ಎಸ್ ನ ಕೋಮುವಾದದ ವಿರುದ್ಧ. ನಮ್ಮ ಸಾಂಪ್ರದಾಯಿಕ ಮತಗಳು ವಿಭಜನೆ ಆಗಿದೆ. ಅದನ್ನು ವಾಪಸ್ ತರುವ ಪ್ರಯತ್ನ ಆಗಬೇಕು ಎಂದು ಅವರು ಹೇಳಿದ್ದಾರೆ. |
ಮೇ 23 ರ ನಂತರ JDS ನಡೆ ಏನು? ದೇವೇಗೌಡ್ರು ಹೇಳಿದ್ದಿಷ್ಟು... | HD Deve Gowda explains, What will be the JDS move after Lok Sabha elections 2019 results - Kannada Oneindia |
just now ತಾಳ್ಮೆವಹಿಸಲು ರೈತರಿಗೆ ಮನವಿ ಮಾಡಿದ ಕೃಷಿ ಸಚಿವ ಬಿಸಿ ಪಾಟೀಲ್ |
21 min ago ಕೊರೊನಾ: ಇದುವರೆಗಿನ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತೇ? |
29 min ago ಕೊರೊನಾದಿಂದ ರೈತ ಸಂಕುಲ ಸಂಕಷ್ಟಕ್ಕೆ; ನೆರವಿಗೆ ದಾವಿಸಿದ ಯಡಿಯೂರಪ್ಪ |
| Published: Saturday, May 18, 2019, 13:19 [IST] |
ಮೇ 23ರ ಚುನಾವಣಾ ಫಲಿತಾಂಶದ ನಂತರ ಜೆಡಿಎಸ್ ನಡೆ ಬಗ್ಗೆ ಎಚ್ ಡಿ ದೇವೇಗೌಡ ಹೇಳಿದ್ದೇನು? | Oneindia Kannada |
ಬೆಂಗಳೂರು, ಮೇ 18: ಲೋಕಸಭೆ ಚುನಾವಣೆಯ ಫಲಿತಾಂಶ ಮೇ 23 ರಂದು ಹೊರಬೀಳುತ್ತಿದ್ದಂತೆಯೇ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉದುರಿಬೀಳುತ್ತಿದೆ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಉತ್ತರ ನೀಡಿದ್ದಾರೆ. |
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ, "ನಾವು ಕಾಂಗ್ರೆಸ್ ನೊಂದಿಗೇ ಇರುತ್ತೇವೆ. ನಾನು ಇದಕ್ಕಿಂತ ಹೆಚ್ಚು ಏನನ್ನೂ ಮಾತನಾಡುವುದಕ್ಕೆ ಬಯಸುವುದಿಲ್ಲ, ಮೇ 23 ರಂದು ಫಲಿತಾಂಶ ಹೊರಬೀಳುತ್ತದೆ. ಆಗ ಇಡೀ ದೇಶಕ್ಕೂ ರಾಜಕೀಯದ ಸ್ಪಷ್ಟ ಚಿತ್ರಣ ಸಿಗುತ್ತದೆ. ನಂತರ ಏನೆಲ್ಲ ಬೆಳವಣಿಗೆಗಳು ನಡೆಯಲಿದೆ ಎಂದು ನೋಡೋಣ" ಎಂದರು. |
ಮೇ 18 ರಂದು ತಮ್ಮ 87 ನೇ ಜನ್ಮದಿನ ಆಚರಿಸಿಕೊಂಡ ಎಚ್ ಡಿ ದೇವೇಗೌಡ, ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡುತ್ತಿದ್ದರು. ಅವರೊಂದಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಇದ್ದರು. |
ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಶುಭಾಶಯ |
ಇತ್ತೀಚೆಗಷ್ಟೇ, "ಕಾಂಗ್ರೆಸ್ ಬೆಂಬಲವಿಲ್ಲದೆ ಪ್ರಾದೇಶಿಕ ಪಕ್ಷಗಳು ಕೇಮದ್ರದಲ್ಲಿ ಸರ್ಕಾರ ನಡೆಸಲು ಸಾಧ್ಯವಿಲ್ಲ" ಎಂದಿದ್ದ ದೇವೇಗೌಡರು ಈಗ ಮತ್ತೊಮ್ಮೆ ತಮ್ಮ ಬೆಂಬಲ ಕಾಂಗ್ರೆಸ್ಸಿಗೆ ಎಂದಿದ್ದಾರೆ. ಮೇ 23 ರಂದು ದೆಹಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷ ನಾಯಕರ ಸಭೆ ನಡೆಯಲಿದ್ದು, ದೇವೇಗೌಡರೂ ಹಾಜರಾಗುವ ನಿರೀಕ್ಷೆ ಇದೆ. |
21 ರಂದು ಜೆಡಿಎಸ್ ಸಭೆ |
ಮೇ 21ರಂದು ಬೆಂಗಳೂರಿನಲ್ಲಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಸಚಿವರು, ಶಾಸಕರ ಸಭೆ ನಡೆಯಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ಅಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೇ 23 ರ ಫಲಿತಾಂಸದ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. |
ಮೇ 21ಕ್ಕೆ ಮಹತ್ವದ ಸಭೆ ಕರೆದ ಎಚ್.ಡಿ.ದೇವೇಗೌಡರು! |
ಮೇ 23 ರಂದು ದೆಹಲಿಯಲ್ಲಿ ಸಭೆ |
ಮೇ 23 ರಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿಯಲ್ಲಿ ಮಹಾಘಟಬಂಧನಕ್ಕೆ ಬೆಂಬಲ ನೀಡುವ ಎಲ್ಲಾ ವಿಪಕ್ಷಗಳನ್ನೂ ಆಮಂತ್ರಿಸಿ, ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಜೆಡಿಎಸ್ ಸುಪ್ರಿಮೋ ಎಚ್ ಡಿ ದೇವೇಗೌಡ, ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್, ಟ... |
ಸವಾಲಾದ ಸಿದ್ದರಾಮಯ್ಯ ನಡೆ |
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಆಪ್ತರು, ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುತ್ತಿರುವುದು ಜೆಡಿಎಸ್ ಗೆ ಭಾರೀ ಮುಜುಗರವನ್ನುಂಟು ಮಾಡುತ್ತಿದೆ. ಜೊತೆಗೆ ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆ ಎಂದೋ ಮುಖ್ಯಮಂತ್ರಿಯಾಗಬೇಕಿತ್ತು ಎಂದಿದ್ದು, ನಂತರ ರೇವಣ್ಣ ಅವರೂ ಮುಖ್ಯಮಂತ್ರಿ ಪಟ್ಟಕ್ಕೆ ಅರ್ಹರು ಎಂದು ಸಿದ್ದರಾಮಯ್ಯ ಪಂಚ್ ನೀಡಿದ್ದು.. ಈ ... |
ಸೋನಿಯಾಗೆ ಗೌಡ್ರ ಪತ್ರ |
ಇತ್ತೀಚೆಗಷ್ಟೇ ಸೋನಿಯಾ ಗಾಂಧಿ ಅವರಿಗೆ ದೇವೇಗೌಡರು ಪತ್ರವೊಂದನ್ನು ಬರೆದಿದ್ದು, ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ಇಲ್ಲದ್ದರ ಬಗ್ಗೆ ಆರೋಪಿಸಿದ್ದಾರೆ ಎನ್ನಲಾಗಿದೆ. |
deve gowda lok sabha elections 2019 congress ದೇವೇಗೌಡ ಲೋಕಸಭೆ ಚುನಾವಣೆ 2019 ಕಾಂಗ್ರೆಸ್ |
Former prime minister and JDS supremo HD Deve Gowda told, he will stand by Congress side , even after Lok Saha elections 2019 results. |
ಭೂ ಮಾಫಿಯಾಕ್ಕೆ ಸಿದ್ದರಾಮಯ್ಯ ಬೆಂಬಲ: ಕಾರಜೋಳ ಟೀಕೆ | Prajavani |
Published: 15 ಮೇ 2019, 11:59 IST |
Updated: 15 ಮೇ 2019, 11:59 IST |
ಬೆಂಗಳೂರು: 'ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಒಂದೆಡೆ ಬೆಂಗಳೂರಿನಲ್ಲಿ ಭೂ ಮಾಫಿಯಾಕ್ಕೆ ಬೆಂಬಲ ನೀಡುತ್ತಿದ್ದಾರೆ. ಇನ್ನೊಂದೆಡೆ ಸಾಮಾಜಿಕ ನ್ಯಾಯಕ್ಕಾಗಿ ದುಡಿದ ದೇವರಾಜ ಅರಸು ಅವರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುತ್ತಿದ್ದಾರೆ' ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಟೀಕಿಸಿದರು. |
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 'ಅರಸು ಅವರನ್ನು ಯಾರೂ ತಮಗೆ ಹೋಲಿಸಿಕೊಳ್ಳಬಾರದು ಎಂದು ವಿಧಾನಸಭೆಯಲ್ಲಿಯೇ ಹೇಳಿದ್ದೇನೆ. ಆದರೂ ಸಿದ್ದರಾಮಯ್ಯ ತಮಗೆ ಹೋಲಿಸಿಕೊಳ್ಳುತ್ತಿದ್ದಾರೆ. ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಆಸೆಯಿದೆ. ಆದ್ದರಿಂದ ತಮ್ಮ ಶಿಷ್ಯರ ಮೂಲಕ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ' ಎಂದರು. |
ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ, ಸಿದ್ರಾಮಯ್ಯ, ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ. ರೇವಣ್ಣ ಇವರೆಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆಯಿದೆ. ಈ ಅಸೆಯ ಕಚ್ಚಾಟದಿಂದಲೇ ಕಾಂಗ್ರೆಸ್ ಮೂರು ಹೋಳಾಗುತ್ತದೆ ಎಂದರು. |
ರಾಜ್ಯದ ಜನ ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ರಾಜಕಾರಣದಲ್ಲಿ ಕಾಲಹರಣ ಮಾಡುವುದು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದರು. ಕುಂದಗೋಳ ಹಾಗೂ ಚಿಂಚೊಳಿಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. |
ರೇಣುಕಾಚಾರ್ಯ ಮಾತನಾಡಿ ಮುಖ್ಯಮಂತ್ರಿಯಾಗುವ ಆಸೆಯಿಂದ ಡಿ.ಕೆ. ಶಿವಕುಮಾರ್ ಹಾಗೂ ಎಂ.ಬಿ. ಪಾಟೀಲ ಉಪಚುನಾವಣೆಯ ಸಾರಥ್ಯ ವಹಿಸಿಕೊಂಡಿದ್ದಾರೆ. ಇಬರಿಬ್ಬರೂ ತಲಾ ₹ 50 ಕೋಟಿ ಚುನಾವಣೆಗೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು. |
ಪತ್ರಿಕೋದ್ಯಮದ ಚೇತನ ಪಾಪು ಅಸ್ತಂಗತ |
Posted Date: 17 Mar, 2020 |
ಹುಬ್ಬಳ್ಳಿ: ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ *ಪಾಪು* ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶತಾಯುಷಿ *ಡಾ. ಪಾಟೀಲ ಪುಟ್ಟಪ್ಪ* ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಾ. ಪಾಟೀಲ ಪುಟ್ಟಪ್ಪನವರು ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. |
ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡದ ಅಸ್ಮಿತೆಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪಾಪು ಅವರು ಹಲವಾರು ಕನ್ನಡ ಪರ ಹೋರಾಟಗಳ ನೇತೃತ್ವವನ್ನು ವಹಿಸಿ ಈ ಭಾಗದಲ್ಲಿ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಡಾ, ಪಾಟೀಲ ಪುಟ್ಟಪ್ಪನವರು ಬೆಳಗಾವಿಯಲ್ಲಿ ನಡೆದಿದ್ದ ೭೦ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
*ಪ್ರಪಂಚ* ಪತ್ರಿಕೆಯ ಸಂಪಾದಕರಾಗಿದ್ದ ಪುಟ್ಟಪ್ಪನವರು ತಮ್ಮ ಪತ್ರಿಕೆಯ ಮೂಲಕ ಈ ಭಾಗದಲ್ಲಿ ಕನ್ನಡದ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸುವ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು. *ತರಂಗ* ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಡಾ. ಪುಟ್ಟಪ್ಪನವರ ಅಂಕಣ ಬರಹ *ಪಾಪು ಪ್ರಪಂಚ* ಅವರ ಬರಹದ ವೈಶಿಷ್ಟ್ಯತೆಯನ್ನು ಕರ್ನಾಟಕದ ಜನರಿಗೆ ಪರಿಚಯಿಸಿತ್ತು. |
ಕನ್ನಡಿಗರು ಬಹುಸಂಖ್ಯಾತರಾಗಿದ್ದ ಗಡಿಭಾಗದ ಪ್ರದೇಶಗಳ ಒಗ್ಗೂಡುವಿಕೆಗೆ ಆಗ್ರಹಿಸಿ ೧೯೪೦ ಹಾಗೂ ೧೯೫೦ ರಲ್ಲಿ ನಡೆದಿದ್ದ ಹಕ್ಕೊತ್ತಾಯ ಹೋರಾಟದಲ್ಲಿ ಪಾಟೀಲ ಪುಟ್ಟಪ್ಪನವರು ಮುಂಚೂಣಿಯಲ್ಲಿದ್ದರು. |
ಕರ್ನಾಟಕದ ಏಕೀಕರಣಕ್ಕೆ ಒತ್ತಾಯಿಸಿ ಡಾ. ಪಾಟೀಲ ಪುಟ್ಟಪ್ಪನವರು ೧೯೪೮ ರಲ್ಲಿ ದಾವಣಗೆರೆಯಲ್ಲಿ ಮೊಟ್ಟ ಮೊದಲ ನಿರ್ಣಯವನ್ನು ಹೊರಡಿಸಿದ್ದರು. ಆ ಮೂಲಕ ಕನ್ನಡ ಭಾಷಾವಾರು ಪ್ರಾಂತ್ಯಗಳ ಒಗ್ಗೂಡುವಿಕೆಗೆ ಪಾಪು ಅವರು ಮೊದಲ ಅಡಿಗಲ್ಲನ್ನು ಸ್ವಾತಂತ್ರ್ಯ ದಕ್ಕಿದ ಆರಂಭದ ವರ್ಷಗಳಲ್ಲೇ ಹಾಕಿದ್ದರು ಎಂಬುದು ವಿಶೇಷ. |
*ಕರ್ನಾಟಕದ ಕವಿ ಲೇಖಕರು', 'ಕರ್ನಾಟಕ ಸಂಗೀತ ಕಲಾರತ್ನರು', 'ಬದುಕಲು ಬೇಕು ಬದುಕುವ ಈ ಮಾತು', 'ನೀವು ನಗಬೇಕು', 'ನೆನಪಿನ ಬುತ್ತಿ', 'ಮಾತು ಮಾಣಿಕ್ಯ', 'ಕನ್ನಡದ ಕಂಪು', 'ಸುವರ್ಣ ಕರ್ನಾಟಕ', 'ಪುಸ್ತಕ ಸಂಸ್ಕೃತಿ'* ಮೊದಲಾದ ಕೃತಿಗಳ ಮೂಲಕ ಪಾಟೀಲ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. |
ಕನ್ನಡ ವಿಶ್ವವಿದ್ಯಾನಿಲಯ ಕೊಡಮಾಡುವ ಪ್ರತಿಷ್ಠಿತ *ನಾಡೋಜ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಪರಿಷತ್ ನಿಂದ ೨೦೦೮ ರಲ್ಲಿ ನೃಪತುಂಗ ಪ್ರಶಸ್ತಿ, ೨೦೧೦ ರಲ್ಲಿ ವೂಡಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಸನ್ಮಾನ ಗೌರವಗಳು ಈ ಶತಾಯುಷಿ ಸಾಹಿತಿಯನ್ನು ಅರಸಿಕೊಂಡು ಬಂದಿವೆ. |
Subsets and Splits
No community queries yet
The top public SQL queries from the community will appear here once available.