text
stringlengths
0
61.5k
Team Udayavani, Aug 13, 2021, 6:30 AM IST
ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಬುಧವಾರ ಸಂಜೆ 6.02 ಗಂಟೆಯಿಂದ 7.05 ಗಂಟೆಯವರೆಗೆ ಮಾರ್ಷಲ್‌ಗ‌ಳು ಮತ್ತು ಸಂಸದರ ನಡುವೆ ನಡೆದ ಗುದ್ದಾಟದ ವೀಡಿಯೋ ಬಿಡುಗಡೆಯಾಗಿದೆ. ವೀಡಿಯೋದಲ್ಲಿ ದಾಖಲಾಗಿರುವ ದೃಶ್ಯಾವಳಿಗಳ ಪ್ರಕಾರ ಮಹಿಳಾ ಸಂಸದರು, ಮಹಿಳಾ ಮಾರ್ಷಲ್‌ಗ‌ಳು ಸಂಘರ್ಷದಲ್ಲಿ ತೊಡಗಿದ್ದರು. ಜತೆಗೆ ಸಂಸದರು ದಾಖಲೆ ಗಳನ್ನು ಹರಿದು ಎಸೆದಿರುವುದೂ ದಾಖಲಾಗಿದೆ.
ವಿಪಕ್ಷಗಳ ಪಾದಯಾತ್ರೆ: ಸಂಸತ್‌ ಅಧಿವೇಶನ ಮೊಟಕು ಗೊಳಿಸಿದ್ದನ್ನು ಖಂಡಿಸಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಸಂಸತ್‌ ಭವನದಿಂದ ವಿಜಯ ಚೌಕ್‌ವರೆಗೆ ಪಾದಯಾತ್ರೆ ನಡೆಸಿದರು.
ಜತೆಗೆ ರಾಜ್ಯಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಮನವಿಯನ್ನೂ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ದೇಶದ ಶೇ.60ರಷ್ಟು ಮಂದಿಯ ಧ್ವನಿಯನ್ನೇ ಹತ್ತಿಕ್ಕಲಾಗಿದೆ. ಹೀಗಾಗಿ ಅವರಿಗೆ ಸಂಸತ್‌ ಅಧಿವೇಶನ ಇಲ್ಲದಂತೆಯೇ ಆಗಿದೆ. ಸಂಸದರಿಗೆ ಥಳಿಸಲಾಗಿದೆ ಎಂದು ದೂರಿದರು.
ವಿಪಕ್ಷಗಳಿಗೆ ಸದನದಲ್ಲಿ ಮಾತನಾಡಲು ಅವಕಾಶವನ್ನೇ ನೀಡಲಾಗಿಲ್ಲ. ಇದು ದೇಶದಲ್ಲಿ ನಡೆದ ಪ್ರಜಾಸತ್ತೆಯ ಹತ್ಯೆ ಎಂದರು ರಾಹುಲ್‌. ಅದಕ್ಕೆ ದನಿಗೂಡಿಸಿದ ಶಿವಸೇನೆ ರಾಜ್ಯಸಭಾ ಸದಸ್ಯ ದೇಶದ ಜನರಿಗೆ ಅಗತ್ಯ ವಿಚಾರಗಳನ್ನು ಪ್ರಸ್ತಾಪ ಮಾಡದಂತೆ ತಡೆಯಲಾಗಿದೆ. ಡಿಎಂಕೆ ಸಂಸದ ತಿರುಚ್ಚಿ ಶಿವ ಮಾತನಾಡಿ ತಮ್ಮ ಸಂಸದೀಯ ಅನುಭವದಲ್ಲಿ ಇಂಥ ದೃಶ್ಯಗಳನ್ನು ನೋಡಿಲ್ಲವೆಂದರು.
ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಮಲ್ಲಿಕಾರ್ಜುನ ಖರ್ಗೆ, ಸಂಜಯ ರಾವುತ್‌, ತಿರುಚ್ಚಿ ಶಿವ, ಮನೋಜ್‌ ಝಾ ಸೇರಿದಂತೆ ಪ್ರಮುಖರು ಇದ್ದರು. ಜತೆಗೆ ಜಂಟಿ ಹೇಳಿಕೆಯನ್ನೂ ಬಿಡುಗಡೆ ಮಾಡಿವೆ.
ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ | Udayavani – ಉದಯವಾಣಿ
Monday, 21 Sep 2020 | UPDATED: 08:57 AM IST
ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ
Team Udayavani, Aug 11, 2020, 8:52 AM IST
ಮಾಲೂರು: ಜಿಲ್ಲೆಯ ನಗರ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ ನೀಡಲಾಗುವುದು. ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಅನುದಾನ ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಸಲಹೆ ನೀಡಿದರು.
ಪಟ್ಟಣದ ಕೃಷ್ಣಪ್ಪ ಬಡಾವಣೆಯಲ್ಲಿ ಎಸ್‌ಎಫ್‌ಸಿಯಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಮಾಲೂರು ಬೆಂಗಳೂರು ನಗರಕ್ಕೆ ಸಮೀಪದಲ್ಲಿದ್ದು, ವೇಗವಾಗಿ ಬೆಳೆಯುತ್ತಿದೆ. ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ. ಹೀಗಾಗಿ ಕೋವಿಡ್ ಸಂಕಷ್ಟದ ನಡುವೆಯೂ ಸಿಎಂ ಎಸ್‌ಎಫ್‌ಸಿ ವಿಶೇಷ ಅನುದಾನದಡಿ 7.5 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು
ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಪುರಸಭೆಗೆ 15ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆ ಆಗಲಿದ್ದು, ಇಲ್ಲಿನ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಪಕ್ಷಾತೀತವಾಗಿ ಪಟ್ಟಣದ ಅಭಿವೃದ್ಧಿಗೆ ಅನುದಾನ ನಿಗದಿ ಪಡಿಸಲಾಗುವುದು ಎಂದರು. ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಪಕ್ಷಾತೀತವಾಗಿ ಪಟ್ಟಣದ ಅಭಿವೃದ್ಧಿಗೆ ಎಸ್‌ಎಫ್‌ಸಿ ಅನುದಾನ ಬಿಡುಗಡೆ ಮಾಡಿದ ಸಿಎಂಗೆ ಅಭಿನಂದನೆ ತಿಳ...
ಉಪವಿಭಾಗಾಧಿಕಾರಿ ವಿ.ಸೋಮಶೇಖರ್‌, ಯೋಜನಾ ನಿರ್ದೇಶಕ ರಂಗಸ್ವಾಮಿ, ತಹಶೀಲ್ದಾರ್‌ ಮಂಜುನಾಥ್‌, ಮುಖ್ಯಾಧಿಕಾರಿ ಪ್ರಸಾದ್‌, ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್‌, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಎಟ್ಟಕೋಡಿ ಕೃಷ್ಣಾರೆಡ್ಡಿ, ರಾಘವೇಂದ್ರ, ಅಭಿಯಂತರ ಮಂಜುನಾಥ್‌, ಪುರಸಭೆ ಸಿಎಒ ಮಂಜುನಾಥ್‌, ಲೆಕ್ಕಾಧಿಕಾರಿ ಮಲ್ಲೇಶ್‌, ಕಂದಾಯ ಅಧಿಕಾರಿ ರೇಣುಕಾ, ಕಂದಾಯ ನಿರೀಕ್ಷಕ ಮುನಿರಾಜು ಉಪಸ್ಥಿತರಿದ್ದರು.
ದ.ಕ.ಜಿಲ್ಲೆ : ಜ.18ರಂದು ಕೊರೋನ ಲಸಿಕೆ ಅಭಿಯಾನಕ್ಕೆ ಚಾಲನೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Jan 17, 2021, 11:27 PM IST
ಮಂಗಳೂರು, ಜ.17: ದ.ಕ.ಜಿಲ್ಲೆಯ ಆರು ಕೇಂದ್ರಗಳ ಸಹಿತ ಜಿಲ್ಲೆಯ ಎಲ್ಲ ಮೆಡಿಕಲ್ ಕಾಲೇಜು, ಐದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ನಿರೋಧಕ ಲಸಿಕೆ 'ಕೋವಿಸೀಲ್ಡ್' ಜ.18ರಿಂದ ಪೂರ್ಣ ಪ್ರಮಾಣದಲ್ಲಿ ನೀಡುವ ಕಾರ್ಯಕ್ಕೆ ಚಾಲನೆ ಸಿಗಲಿದೆ.
ಶನಿವಾರ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರೂ ಕೂಡ ರವಿವಾರ ರಜಾ ದಿನವಾದ ಕಾರಣ ಜ.18ರಿಂದ ಪೂರ್ಣರೂಪದಲ್ಲಿ ಜಿಲ್ಲೆಯ ಮೆಡಿಕಲ್ ಕಾಲೇಜು ಸೇರಿದಂತೆ ಮಂಗಳೂರು, ಮುಲ್ಕಿ, ಬಂಟ್ವಾಳದ ವಾಮದಪದವು, ವಿಟ್ಲ ಹಾಗೂ ಕಡಬದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೋವಿಡ್ ನೋಡಲ್ ಅಧಿಕಾರಿ ಡಾ. ರಾಜೇಶ್ ಸಾಮಾನ್ಯವಾಗಿ ಸೋಮವಾರ ಆರೋಗ್ಯ ಕೇಂದ್ರ ಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಲಸಿಕೆ ನೀಡುವ ಕೆಲಸದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಈ ಕಾರಣ ದಿಂದ ಈಗಿರುವ ಆರು ಕೇಂದ್ರಗಳ ಜತೆಗೆ ಜಿಲ್ಲೆಯ ಮೆಡಿಕಲ್ ಕಾಲೇಜು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾ ಗುತ್ತದೆ. ಜ.19ರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ...
ವೆನ್ಲಾಕ್‌ನ ಆಯುಷ್‌ನಲ್ಲಿ 6 ಕಡೆ: ಸುರತ್ಕಲ್ ಮತ್ತು ಕುಳಾಯಿ ಕೇಂದ್ರ ವ್ಯಾಪ್ತಿಯ ಮಂದಿಗೆ ಸುರತ್ಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಿದರೆ ಉಳಿದಂತೆ ತಾಲೂಕಿನ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಮಂದಿಗೆ ವೆನ್ಲಾಕ್‌ನ ಆಯುಷ್ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ. ಆಯುಷ್ ವಿಭಾಗದ ಮೂರು ಮಹಡಿಗಳಲ್ಲಿ 6 ಕೇಂದ್ರ ತೆರೆಯಲಾಗಿದ್ದು, ದಿನಕ್ಕೆ 600 ಮಂದಿಗೆ ನೀಡುವ ವ್...
ಎರಡನೇ ಬಾರಿ ಲಸಿಕೆ ಮಂಗಳೂರಿಗೆ
ಒಂದು ಸುತ್ತಿನ ಲಸಿಕೆಯ ವಿತರಣೆಯ ಬಳಿಕ ಎರಡನೇ ಸುತ್ತನ ಲಸಿಕೆ ವಿತರಣೆ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಜ.18ರಂದು ಮತ್ತೊಂದು ಸುತ್ತಿನ ಲಸಿಕೆಯೊಂದಿಗೆ ಇಲಾಖೆಯ ವಾಹನ ಮೈಸೂರು ಮೂಲಕ ಮಂಗಳೂರು ಪ್ರವೇಶ ಪಡೆಯಲಿದೆ. ಮಂಗಳೂರು ಪ್ರಾದೇಶಿಕ ಲಸಿಕಾ ಕೇಂದ್ರವಾದ ಕಾರಣದಿಂದ ರಾಜ್ಯದ ಇತರ ಜಿಲ್ಲೆಗೆ ಹೋಲಿಕೆ ಮಾಡಿದರೆ ಲಸಿಕೆಯ ಪ್ರಮಾಣ ಸ್ವಲ್ಪ ಹೆಚ್ಚು ತರುವ ಸಾಧ್ಯತೆಯಿದೆ. ಮೊ...
ರಜೆಯಲ್ಲೂ ಕರ್ತವ್ಯ ಪ್ರಜ್ಞೆ
ಲಸಿಕೆ ವಿತರಣೆ ಕಾರ್ಯಕ್ರಮ ಪೂರ್ಣ ಪ್ರಮಾಣದಲ್ಲಿ ಸಾಗಲಿರುವ ಕಾರಣದಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ರವಿವಾರದ ರಜೆಯನ್ನು ಬದಿಗೊತ್ತಿಕೊಂಡು ಕೋವಿಡ್ ಆ್ಯಪ್‌ನಲ್ಲಿ ಲಸಿಕೆ ಸ್ವೀಕರಿಸುವ ಮಂದಿಗಳ ಹೆಸರನ್ನು ಅಪ್‌ಲೋಡ್ ಮಾಡುವ ಕಾರ್ಯದ ಜತೆಗೆ ಲಸಿಕೆಯ ಶೆಡ್ಯುಲ್ ಕೆಲಸದಲ್ಲಿ ತಲ್ಲೀನರಾಗಿದ್ದರು.
ಜ.20ರಿಂದ ಎರಡನೇ ಸುತ್ತಿನ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ನಗರಾಡಳಿತ ಸೇರಿದಂತೆ 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರ ಹೆಸರು ನೋಂದಣಿ ಮಾಡಲಾಗುತ್ತಿದ್ದು, ಜ.25ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಹೆಸರು ಅಪ್‌ಲೋಡ್‌ಗೆ ಕೊನೆಯ ದಿನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜ. 31ಕ್ಕೆ ಮಕ್ಕಳಿಗೆ ಪಲ್ಸ್ ಪೊಲೀಯೋ ಕಾರ್ಯಕ್ರಮ
ಜ.17ರಂದು ನಡೆಯಬೇಕಿದ್ದ ಪಲ್ಸ್ ಪೊಲೀಯೋ ಕಾರ್ಯಕ್ರಮ ಕೋವಿಡ್ ಲಸಿಕೆಗಾಗಿ ಜ.31ಕ್ಕೆ ಮುಂದೂಡಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪೂರ್ಣ ರೂಪದಲ್ಲಿ ಕೋವಿಡ್ ಲಸಿಕೆ ನೀಡುವ ಕಾಯಕದಲ್ಲಿ ತಲ್ಲೀನರಾಗಿರುವ ಕಾರಣ ಪಲ್ಸ್ ಪೊಲಿಯೋ ಕಾರ್ಯಕ್ರಮವನ್ನು ಜ.31ರಂದು ಹಮ್ಮಿಕೊಳ್ಳಲಾಗಿದೆ ಎಂದು ಡಿಎಚ್‌ಒ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಲಿಂಗಾಯತ ಧರ್ಮ ವಿಚಾರ ನನ್ನ ಆತ್ಮಸಾಕ್ಷಿಗೆ ತಕ್ಕ ಹೇಳಿಕೆ ನೀಡಿದ್ದೇನೆ : ಡಿ.ಕೆ.ಶಿ ಸ್ಪಷ್ಟನೆ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal
ಸುದ್ದಿದಿನ,ಕೋಲಾರ : ನಾನು ಲೀಡರೇ ಅಲ್ಲ. ನಾನು ಲೀಡರ್ ಎಂದು ಎಲ್ಲೂ ಹೇಳಿಕೊಂಡಿಲ್ಲ, ಯಾರನ್ನು ಗೆಲ್ಲಿಸುತ್ತೇನೆ ಎಂದು ಎಲ್ಲೂ ಹೇಳಿಕೊಂಡಿಲ್ಲ. ಲಿಂಗಾಯತ ಧರ್ಮ ‌ವಿಚಾರ ನಾನು ನನ್ನ ಆತ್ಮಸಾಕ್ಷಿಗೆ ತಕ್ಕ ಹೇಳಿಕೆ ನೀಡಿದ್ದೇನೆ, ಆ ಹೇಳಿಕೆಗೆ ನಾನು ಬದ್ದನಾಗಿದ್ದೇನೆ ಎಂದು ಕೋಲಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು, ನಾವು ರಾಜಕಾರಣಿಗಳು ಧಾರ್ಮಿಕ ವಿಚಾರದಲ್ಲಿ ಭಾಗಿಯಾಗಿದ್ದ ತಪ್ಪು. ಬಳ್ಳಾರಿಯಲ್ಲೂ‌ ನಾನು ಗೆಲ್ಲಿಸಿಕೊಳ್ತೇನೆ ಅಂತ ಹೇಳಿಕೊಂಡಿಲ್ಲ.ನನ್ನ ಹೇಳಿಕೆ ಹಿಂದೆ ಯಾರನ್ನೂ‌ ಮುಗಿಸುವ ಉದ್ದೇಶ ಇಲ್ಲ, ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ಕೋಲಾರ ಹೊರವಲಯದಲ್ಲಿರುವ ಆರ್ ಎಲ್ ಜಾಲಪ್ಪ ಆಸ್ಪತ್ರೆಯ ಖಾಸಗಿ ಕಾರ್ಯಕ್ರಮಕ್ಕ...
ದುನಿಯಾ ಸೂರಿ News in Kannada - ದುನಿಯಾ ಸೂರಿ Latest news on kannada.oneindia.com India's #1 Language Portal English বাংলা ગુજરાતી हिन्दी മലയാളംதமிழ் తెలుగు Follow @oneindiakannada Home ಸುದ್ದಿಜಾಲ ಬೆಂಗಳೂರು ಮೈಸೂರು ಮಂಗಳೂರು ಕರ್ನಾಟಕ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ ವಾಣಿಜ್ಯ ಚಲನಚಿತ್ರ ಸಿನಿ ಸಮಾಚಾರ ಚಿತ್ರವಿಮರ್ಶೆ ಬಾಲಿವುಡ್...
ದುನಿಯಾ ಸೂರಿ ದುಬೈ, ಯುಎಇನಲ್ಲಿ ಅಣ್ಣಾಬಾಂಡ್ ಬಿಡುಗಡೆ Thursday, May 3, 2012, 15:45 [IST]
Good news for Kannada Movie Lovers. First time in Dubai and UAE, Puneeth Rajkumar's Anna Bond Releasing on 03 May 2012. For details, please contact under mentioned contact numbers....
ಜಾಕಿ ಅಮೋಘ ಪ್ರಾರಂಭ; ಪ್ರೇಕ್ಷಕರ ನೂಕು ನುಗ್ಗಲು Thursday, October 14, 2010, 12:21 [IST]
ಪುನೀತ್ ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಚಿತ್ರ ಜಾಕಿ. ಈ ಚಿತ್ರ ಇಂದು (ಅ.14) ರಾಜ್ಯದಾದ್ಯಂತ ತೆರ...
More Headlines ಸೌದಿಯಲ್ಲಿ ಬಾಂಬ್ ಸ್ಫೋಟ, ಶುಕ್ರವಾರ ಮಸೀದಿಯಲ್ಲಿ ರಕ್ತದೋಕುಳಿ ಹೈದರಾಬಾದ್ : ಎಟಿಎಂನಲ್ಲಿ ಗುಂಡು ಹಾರಿಸಿದವ ಸಿಕ್ಕಿಬಿದ್ದ ನಟ ಅಮಿತಾಬ್ ಸಮೀಪದಲ್ಲೇ ಶೂಟೌಟ್ ಪಿಯುಸಿ ಮೌಲ್ಯಮಾಪನದಲ್ಲಿ ನಿಜಕ್ಕೂ ಲೋಪವಾಗಿದೆಯೇ? ಬೆಟ್ಟಿಂಗ್ ಕಿಂಗ್ ಪಿನ್ ಮುಖೇಶ್ ಶರ್ಮಾ ಬಂಧನ ಪಾಕಿಸ್ತಾನ: 6 ವರ್ಷಗಳ ನಂತರ ಮತ್ತೆ ಕ್ರಿಕೆಟ್ ಆರಂಭ ಬ್ರಿಟಿಷ್ ಮಹಿಳೆ ಬಳಿ ಕ್ಷಮೆ ಯಾಚಿಸಿದ ಭಾರತ ಅಕ್ಟೋಬರ್...
ಬೇಡಿಕೆ ಈಡೇರಿಕೆಗೆ ನೌಕರರ ಪ್ರತಿಭಟನೆ | Prajavani
ಬೇಡಿಕೆ ಈಡೇರಿಕೆಗೆ ನೌಕರರ ಪ್ರತಿಭಟನೆ
ಚಿಂತಾಮಣಿ: ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ವೇತನ ಹಾಗೂ ಭತ್ಯೆ ನೀಡಲು ತೀರ್ಮಾನ ಕೈಗೊಳ್ಳದಿದ್ದರೆ ಮಾರ್ಚ್‌ನಲ್ಲಿ ಹೋರಾಟ ಹಮ್ಮಿಕೊಳ್ಳುವುದು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ನಾರಾಯಣರೆಡ್ಡಿ ಎಚ್ಚರಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬುಧವಾರ ತಾಲ್ಲೂಕು ಕಚೇರಿ ಎದುರು ಹಮ್ಮಿಕೊಂಡಿ...
ರಾಜ್ಯ ನೌಕರರ ಸಂಘದ ಪದಾಧಿಕಾರಿಗಳು ಹಲವು ಬಾರಿ ಮುಖ್ಯಮಂತ್ರಿಗಳನ್ನು ಹಾಗೂ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ಅನೇಕ ಬಾರಿ ಮನವಿ ಸಹ ನೀಡಲಾಗಿದೆ, ಬಜೆಟ್‌ನಲ್ಲಿ ಅನುಕೂಲಕರ ತಿರ್ಮಾನ ಕೈಗೊಳ್ಳುವುದಾಗಿ ಸಿಎಂ ಭರವಸೆಯನ್ನು ಸಹ ನೀಡಿದ್ದಾರೆ. ಬರುವ ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ಒಗ್ಗಟ್ಟಿನಿಂದ ಪ್ರತಿಭಟನೆಗೆ ಸಿದ್ದಗೊಳ್ಳುವಂತೆ ಕರೆ ನೀಡಿದರು.
ಕೇಂದ್ರ ಸರ್ಕಾರಿ ನೌಕರರು ಮತ್ತು ಇತರೆ ರಾಜ್ಯ ಸರ್ಕಾರಗಳ ನೌಕರರು 2006ದಿಂದ 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಭತ್ಯೆ ಪಡೆಯುತ್ತಿದ್ದಾರೆ. ಅಂತಿಮ ಬಜೆಟ್‌ವರೆಗೂ ಸಮಯದ ಅವಕಾಶ ನೀಡಲಾಗಿದೆ ಎಂದು ಹೇಳಿದರು.ಸರ್ಕಾರವು ನೂತನವಾಗಿ ಜಾರಿಗೆ ತಂದಿರುವ ಪೆನ್ಷನ್(ಎನ್.ಪಿ.ಎಸ್) ಪದ್ದತಿಯನ್ನು ರದ್ದುಪಡಿಸಿ ಹಿಂದಿನ ನಿವೃತ್ತಿ ವೇತನ ಪದ್ದತಿಯನ್ನೇ ಮುಂದುವರಿಸಬೇಕು, ಮನೆ ಬಾಡಿಗೆ ಮತ್ತು ನಗರ ಪ...
ವೈದ್ಯಕೀಯ ಇಲಾಖೆಯಿಂದ ಡಾ.ವೆಂಕಟೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಸಂತರೆಡ್ಡಿ, ಚೌಡಪ್ಪ, ವೆಂಕಟೇಶ್ ಸೇರಿದಂತೆ ಹಲವು ಇಲಾಖೆಯ ನೌಕರರ ಪ್ರತಿನಿಧಿಗಳು ಮಾತನಾಡಿದರು. ವರ್ಗಾವಣೆಯಾದ ಶಿಕ್ಷಕರು ಮತ್ತು ನೌಕರರಿಗೆ ಸೇವೆಗೆ ಸೇರಿದ ದಿನವನ್ನು ಪರಿಗಣಿಸಿ ಕಾಲಮಿತಿ ಬಡ್ತಿ ಹಾಗೂ ಸ್ವಯಂಚಾಲಿತ ಬಡ್ತಿಯನ್ನು ಮಂಜೂರು ಮಾಡಬೇಕು. ವರ್ಗಾವಣೆ ಕಾಯ್ದೆ ರೂಪಿಸಬೇಕು, ಆರೋಗ್ಯ ಭಾಗ್ಯ ಯೋಜನೆಯಡಿ...
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನೌಕರರಿಗೆ ಪ್ರತಿ ತಿಂಗಳಿಗೆ 5 ನೇ ತಾರೀಖಿನೊಳಗೆ ವೇತನ ಪಾವತಿ, ರಾಜ್ಯ ಸರ್ಕಾರಿ ನೌಕರರ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ವರಮಾನದ ಮೀತಿ ಕೇಂದ್ರ ಸರ್ಕಾರದ ವರಮಾನದ ಮಿತಿ , ಸ್ಥಗಿತ ವೇತನ ಬಡ್ತಿ ಹೆಚ್ಚಳ ಮತ್ತಿತರ ಬೇಡಿಕೆಗಳನ್ನು ಮನವಿ ಪತ್ರವನ್ನು ತಹಶೀಲ್ದಾರ್ ಕೃಷ್ಣಮೂರ್ತಿ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಯಿ...
ತಹಶೀಲ್ದಾರ್ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಮೂಲಕ ಕೂಡಲೇ ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದ ನಂತರ ಸಭೆಯನ್ನು ಮುಕ್ತಾಯಗೊಂಡಿತು.ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಬಹುತೇಕ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ನೂರಾರು ನೌಕರರು ಸಭೆಯಲ್ಲಿ ಭಾಗವಹಿಸಿದ್ದರು.
ವೇತನ ಆಯೋಗ ಜಾರಿಯಾಗಲಿ
ಬಾಗೇಪಲ್ಲಿ: ಕೇಂದ್ರ ಆರನೇ ವೇತನ ಆಯೋಗದ ಶಿಫಾರಸುಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ನೂರಾರು ಸರ್ಕಾರಿ ನೌಕರರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.ಮನೆ ಬಾಡಿಗೆ, ನಗರ ಪರಹಾರ ಭತ್ಯೆ, ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ಮತ್ತಿತರ ಬೇಡಿಕೆಗಳನ್ನು ಈಡೇರಿ...
ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಹನುಮಂತರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಿದೆ. 1998ರಲ್ಲಿ 5ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದ ನಂತರ 6ನೇ ವೇತನ ಆಯೋಗ ರಚಿಸುವ ಪೂರ್ವದಲ್ಲಿ ತನ್ನ ನೌಕರರಿಗೆ ಶೇ 50 ರಷ್ಟು ತುಟ್ಟಿಭತ್ಯೆ ನೀಡಿತ್ತು, ಆದರೆ ರಾಜ್ಯ ಸರ್ಕಾರ ಇಂಥ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಕಿಡಿಕಾರಿದರು.
ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್.ನಾರಾಯಣಸ್ವಾಮಿ ಶೆಟ್ಟಿ ಮಾತನಾಡಿ, ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆಗೊಳ್ಳುವ ಶಿಕ್ಷಕರ ಹಿಂದಿನ ಜಿಲ್ಲೆಯಲ್ಲಿರುವ ಸೇವೆಯನ್ನು ಪರಿಗಣಿಸಬೇಕು. 10 ವರ್ಷದ ಕಾಲಮಿತಿ ಬಡ್ತಿ ಹಾಗೂ 15 ವರ್ಷದ ಸ್ವಯಂಚಾಲಿತ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಕೃಷ್ಣರಾವ್, ಕಾರ್ಯದರ್ಶಿ ಕೆ.ಬಿ.ಆಂಜನೇಯರೆಡ್ಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎ.ವೆಂಕಟೇಶ್ವರ, ಅಖಿಲ ಕರ್ನಾಟಕ ಪ್ರಾಥಮಿಕ ಶಿಕ್ಷಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ವಿ.ಶಿವಯ್ಯ, ಕಾರ್ಯದರ್ಶಿ ಕೆ.ವಿ.ರಾಜಣ್ಣ, ಸಂಘಟನಾ ಕಾರ್ಯದರ್ಶಿ ಕೆ.ಎನ್.ವಿಜಯ್‌ಕುಮಾರ್, ತಾಲ್ಲೂಕು ದೈಹಿಕ ...
ತಾರತಮ್ಯ ನಿವಾರಣೆಗೆ ಮೆರವಣಿಗೆ
ಶಿಡ್ಲಘಟ್ಟ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ನೌಕರರು ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರರಿಗೆ 6ನೇ ವೇತನ ಆಯೋಗ ಶಿಫಾರಸ್ಸು ಮಾಡಿದ ವೇತನ ಮತ್ತು ಭತ್ಯೆ ಪರಿಷ್ಕರಣೆ, ಕೇಂದ್ರ ಸರ್ಕಾರಕ್ಕನುಗುಣವಾಗಿ ರಾಜ್ಯ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಹಾಗೂ ಇತರೆ ಭತ್ಯೆ ಮಂಜೂರು ಮಾಡಬೇಕು. ಇತರೆ ರಾಜ್ಯಗಳಿಗೆ ಹೋಲಿಸಿದಲ್ಲಿ ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ನಡುವೆ ಶೇ 30ರಿಂದ 40ರಷ್ಟು ವೇತನದಲ್ಲಿ ವ್ಯತ್ಯಾಸವಿದೆ ಎಂ...
ಕಳೆದ 2006ರಿಂದ 6ನೇ ವೇತನ ಆಯೋಗದ ಅನ್ವಯ ವೇತನ ಪಾವತಿಯಾಗಬೇಕಿದ್ದರೂ ಇದುವರೆಗೂ ಅನುಷ್ಠಾನ ಗೊಳ್ಳದೆ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೌಕರರು ತಮ್ಮೆಲ್ಲಾ ಬೇಡಿಕೆ ಈಡೇರಿಸವಂತೆ ಮುಖ್ಯಮಂತ್ರಿ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.ತಹಸೀಲ್ದಾರ್ ಬಿ.ಮಲ್ಲಿಕಾರ್ಜುನ್ ಮನವಿ ಸ್ವೀಕರಿಸಲಾಯಿತು. ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜ್‌ರಾವ್, ಕಾರ್ಯದರ್ಶಿ ಎಸ್.ಎಂ.ಅಕ್ಕಲರೆಡ್...
ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ
ಗುಡಿಬಂಡೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರ ನಡುವಿನ ವೇತನದದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇದನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಬುಧವಾರ ತಾಲ್ಲೂಕು ಸರ್ಕಾರಿ ನೌಕರರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ಸಾಮಾನ್ಯ ಸರ್ಕಾರಿ ನೌಕರರು ಜೀವನ ನಡೆಸುವುದು ತುಂಬಾ ದುಸ್ತರವಾಗಿದೆ, ನಿತ್ಯ ಬಳಕೆಯ ಪದಾರ್ಥಗಳ ಬೆಲೆ ಗಗನಮುಖಿಯಾಗಿದೆ. ರಾಜ್ಯ ಸರ್ಕಾರದ ನೌಕರರು ಸವಲತ್ತುಗಳಿಂದ ವಂಚಿತರಾಗಿದ್ದಾರೆ, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿ ಜಾರಿಯಲ್ಲಿದ್ದರೂ, ಒಂದೇ ರೀತಿಯ ಕೆಲಸ ನಿರ್ವಹಿಸುವ ನೌಕರರ ನಡುವೆ ವೇತನ ತಾರತಮ್ಯ ಇದೆ ಎಂದು ನೌಕರರು ಟೀಕಿಸಿದರು.
ರಾಜ್ಯ ಸರ್ಕಾರ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದು ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕೆಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಆಗ್ರಹಿಸಿದರು.ಉಪಾಧ್ಯಕ್ಷ ರವೀಂದ್ರ ಉಪ್ಪಾರ್, ಕಾರ್ಯದರ್ಶಿ ಮುನಿಕೃಷ್ಣ, ಮಾಜಿ ಅಧ್ಯಕ್ಷ ಕೃಷ್ಣಪ್ಪ, ಗಂಗರತ್ನಮ್ಮ, ಜಯರಾಮರೆಡ್ಡಿ, ಶ್ರೀರಾಮರೆಡ್ಡಿ, ಚಿನ್ನಪ್ಪರೆಡ್ಡಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ...
ದಿ ಇನ್ವೆಸ್ಟರ್ ಪ್ರಕಾರ, ಸ್ಯಾಮ್‌ಸಂಗ್ 7 ರಲ್ಲಿ ರಿಪೇರಿ ಮಾಡಿದ ಗ್ಯಾಲಕ್ಸಿ ನೋಟ್ 2017 ಅನ್ನು ಮಾರಾಟ ಮಾಡಬಹುದು ಗ್ಯಾಜೆಟ್ ಸುದ್ದಿ
ಇದು ನಮ್ಮನ್ನು ಸ್ವಲ್ಪ ಅಸಮಾಧಾನಗೊಳಿಸುವಂತಹ ಸುದ್ದಿಗಳಲ್ಲಿ ಒಂದಾಗಿದೆ ಮತ್ತು ಇದು ದಕ್ಷಿಣ ಕೊರಿಯಾದ let ಟ್‌ಲೆಟ್ ಪ್ರಾರಂಭಿಸಿದ ವದಂತಿಯಾಗಿರುವುದರಿಂದ ನಾವು ಅದನ್ನು "ಉಪ್ಪಿನ ಧಾನ್ಯದೊಂದಿಗೆ ತೆಗೆದುಕೊಳ್ಳಬೇಕು" ಹೂಡಿಕೆದಾರರು, ಇದರಲ್ಲಿ ಕಂಪನಿಯು ಸಿದ್ಧರಿರುತ್ತದೆ ಎಂದು ಹೇಳಲಾಗುತ್ತದೆ ದುರಸ್ತಿ ಮಾಡಿದ ಸ್ಮಾಸಂಗ್ ಗ್ಯಾಲಕ್ಸಿ ನೋಟ್ 7 ಅನ್ನು ಮಾರಾಟಕ್ಕೆ ಇರಿಸಿ.
ನೀವು ಎಲ್ಲಿ ನೋಡಿದರೂ ಈ ಸುದ್ದಿ ಸೂಕ್ಷ್ಮವಾಗಿರುತ್ತದೆ ಮತ್ತು ಅದು ಇಂದು ಸಾಧನಗಳನ್ನು ಹಿಂತಿರುಗಿಸದ ಬಳಕೆದಾರರನ್ನು ಸಂಸ್ಥೆಯು ಇನ್ನೂ ಹೊಂದಿದೆ ಮತ್ತು ಅವರು ಸ್ವಯಂಪ್ರೇರಣೆಯಿಂದ ಹಿಂತಿರುಗಿಸದಿದ್ದರೆ ಅವುಗಳನ್ನು ದೂರದಿಂದಲೇ ನಿಷ್ಕ್ರಿಯಗೊಳಿಸಲು ಅವರು ಯೋಚಿಸಿದ್ದರು, ಆದ್ದರಿಂದ ಈ ಹಂತದಲ್ಲಿ ಈ ಸಾಧನಗಳನ್ನು (ರಿಪೇರಿ ಮಾಡಲಾಗಿದೆಯೋ ಇಲ್ಲವೋ) ಮರು-ಪ್ರಾರಂಭಿಸಲು ಮನಸ್ಸಿನಲ್ಲಿಟ್ಟುಕೊಳ್ಳು...
2017 ರಲ್ಲಿ ಮಾರಾಟವು ಕೇಂದ್ರೀಕೃತವಾಗಿರುತ್ತದೆ ಮತ್ತು ಅತಿಯಾಗಿ ಬಿಸಿಯಾಗುವ ತೊಂದರೆಯಿಲ್ಲದೆ ಟರ್ಮಿನಲ್‌ಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗುವುದು, ಆದರೆ ಅವುಗಳನ್ನು ವಿಶ್ವಾದ್ಯಂತ ಮಾರಾಟ ಮಾಡಲಾಗುವುದಿಲ್ಲ ಎಂದು ತೋರುತ್ತದೆ, ಭಾರತ ಅಥವಾ ವಿಯೆಟ್ನಾಂನಂತಹ ದೇಶಗಳು ಈ ಫ್ಯಾಬ್ಲೆಟ್ ರಿಸೀವರ್‌ಗಳಲ್ಲಿರುತ್ತವೆ. ಯಾವುದೇ ಸಂದರ್ಭದಲ್ಲಿ ಅವರು ಈ ನೋಟ್ 7 ಅನ್ನು ಮತ್ತೆ ಮಾರಾಟ ಮಾಡಲು ನಿರ್ಧರಿಸ...
ಸಾಧನಗಳ ಬ್ಯಾಟರಿಯ ಮೇಲೆ ಕೇಂದ್ರೀಕರಿಸಿದ ಸಮಸ್ಯೆಗಳು ಸಂಪೂರ್ಣವಾಗಿ ನಿಜವಲ್ಲ ಎಂದು ತೋರುತ್ತದೆ ಮತ್ತು ಸಮಸ್ಯೆಗೆ ನಿಖರವಾದ ಕಾರಣ ಏನು ಎಂದು ಎಂಜಿನಿಯರ್‌ಗಳು ಇಂದು ಸ್ಪಷ್ಟವಾಗಿಲ್ಲ. ಆದ್ದರಿಂದ, ಇದು ನಿಜವಾಗಬಹುದು ಎಂಬ ಕಾರಣಕ್ಕೆ ನಾವು ಸ್ವಲ್ಪ ಅನುಮಾನದಿಂದ ತೆಗೆದುಕೊಳ್ಳಬೇಕಾಗಿರುವುದು ಸುದ್ದಿಯಾಗಿದೆ, ಆದರೆ ಅದು ನಿಜ ಅದೇ ಸಾಧನವನ್ನು ಮತ್ತೆ ಪ್ರಾರಂಭಿಸಲು, ಬಳಕೆದಾರರು ಮತ್ತು ಮಾಧ್ಯಮಗ...
ಲೇಖನಕ್ಕೆ ಪೂರ್ಣ ಮಾರ್ಗ: ಗ್ಯಾಜೆಟ್ ಸುದ್ದಿ » ಟೆಲಿಫೋನಿ » ಮೊಬೈಲ್ ಫೋನ್ಗಳು » ಹೂಡಿಕೆದಾರರ ಪ್ರಕಾರ, ಸ್ಯಾಮ್‌ಸಂಗ್ 7 ರಲ್ಲಿ ರಿಪೇರಿ ಮಾಡಿದ ಗ್ಯಾಲಕ್ಸಿ ನೋಟ್ 2017 ಅನ್ನು ಮಾರಾಟ ಮಾಡಬಹುದು
ರಸ್ತೆಗುರುಳಿದ ಮರ | News13
News13 > ಸುದ್ದಿಗಳು > ರಾಜ್ಯ > ಪ್ರಾದೇಶಿಕ > ಕಾರ್ಕಳ > ರಸ್ತೆಗುರುಳಿದ ಮರ
ರಸ್ತೆಗುರುಳಿದ ಮರ
Thursday, April 30th, 2015 News13
ಕಾರ್ಕಳ : ಕಾರ್ಕಳ ನ್ಯಾಯಾಲಯದ ಪ್ರಾಂಗಣದ ಬಳಿ ಬುಧವಾರ ಸಂಜೆ ಮಾಗನೆಯ ಮರವೊಂದು ಹಠಾತ್ತನೆ ರಸ್ತೆಗೆ ಉರುಳಿ ಬಿದ್ದು, ಹಲವು ತಾಸುಗಳ ಕಾಲ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಈ ಸಂದರ್ಭ ಜನ ಹಾಗೂ ವಾಹನ ಸಂಚಾರ ವಿರಳವಾಗಿದ್ದ ಕಾರಣ ಯಾವುದೇ ಅಪಾಯ ಸಂಭವಿಸಲಿಲ್ಲ.
ತೌಕ್ತೆ ಚಂಡಮಾರುತ: ಮಹಾರಾಷ್ಟ್ರದ ಕೊಂಕಣ ವಲಯದಲ್ಲಿ ಇಬ್ಬರು ಸಾವು | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ May 18, 2021, 12:03 AM IST
ಮುಂಬೈ, ಮೇ 17: ತೌಕ್ತೆ ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರದ ಕೊಂಕಣ ವಲಯದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದುರಂತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರಕಾರ ಸೋಮವಾರ ಹೇಳಿದೆ. ಸಿಂಧುದುರ್ಗಾ ಜಿಲ್ಲೆಯ ಆನಂದವಾಡಿ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ದೋಣಿಗಳು ಮುಳುಗಿವೆ. ದುರಂತದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಈತನನ್ನು ಜಿಲ್ಲೆಯ ದೇವಗಡ ತಾಲೂಕಿನ ರಾಜಾರಾಮ್ ಕದಮ್ ಎಂದು ...
ಇದಲ್ಲದೆ, ರಾಯಗಢ ಜಿಲ್ಲೆಯಲ್ಲಿ ಚಂಡಮಾರುತದ ಪ್ರಭಾವದಿಂದ ಸುರಿದ ಮಳೆಯಿಂದ ಸಂಭವಿಸಿದ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸಚಿವೆ ಆದಿತಿ ತತ್ಕಾರೆ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದಾರೆ. ಚಂಡಮಾರುತಕ್ಕೆ ಸೋಮವಾರ 11 ಗಂಟೆಗೆ ರಾಯಗಢದ 1,104 ಕಟ್ಟಡಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಒಂದು ಕಟ್ಟಡ ಸಂಪೂರ್ಣವಾಗಿ ನಾಶವಾಗಿದೆ. 2,299 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್...
ಸ್ಪೇನ್: Latest ಸ್ಪೇನ್ News & Updates, Photos & Images, Videos | Vijaya Karnataka - Page 6
September,17,2019, 12:40:35
Jun 29, 2018, 04.41 PM
ಅಂತಿಮ 16ರ ಹಂತಕ್ಕೆ ಸ್ಪೇನ್, ಪೋರ್ಚುಗಲ್ ಲಗ್ಗೆ
Jun 26, 2018, 10.41 AM
ರಷ್ಯಾದಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ 2018 ಟೂರ್ನಮೆಂಟ್‌ನಲ್ಲಿ ಬಲಿಷ್ಠ ಸ್ಪೇನ್ ಹಾಗೂ ಪೋರ್ಚುಗಲ್ ತಂಡಗಳು ತಮ್ಮ ತಮ್ಮ ಪಂದ್ಯಗಳಲ್ಲಿ ಡ್ರಾ ಫಲಿತಾಂಶವನ್ನು ಕಾಣುವ ಮೂಲಕ ಪ್ರಿ-ಕ್ವಾರ್ಟರ್ ಫೈನಲ್‌ಗೆ ಮುನ್ನುಗ್ಗಿದೆ.
ಗೆಲುವಿನ ಹಾದಿಗೆ ಮರಳಿದ ಸ್ಪೇನ್
Jun 21, 2018, 10.06 AM
ಡಿಯಾಗೋ ಕೋಸ್ಟಾ ಬಾರಿಸಿರುವ ಮಿಂಚಿನ ಗೋಲ್‌ನ ನೆರವಿನಿಂದ ಪ್ರತಿಷ್ಠಿತ ಫಿಫಾ ವಿಶ್ವಕಪ್ 2018 ಟೂರ್ನಮೆಂಟ್‌ನಲ್ಲಿ ಪ್ರಬಲ ಸ್ಪೇನ್ ಗೆಲುವಿನ ಹಾದಿಗೆ ಮರಳಿದೆ.
ರೊನಾಲ್ಡೊ ಹ್ಯಾಟ್ರಿಕ್; ಸ್ಪೇನ್ ವಿರುದ್ಧ ಪೋರ್ಚುಗಲ್‌ಗೆ ಸಮಬಲದ ಥ್ರಿಲ್!
Jun 16, 2018, 01.04 PM
ಪ್ರತಿಷ್ಠಿತ ಫಿಫಾ ವಿಶ್ವಕಪ್ 2018 ಟೂರ್ನಮೆಂಟ್‌ನಲ್ಲಿ ಎರಡು ಬಲಾಢ್ಯ ತಂಡಗಳ ನಡುವಣ ಪಂದ್ಯವು ಸಮಬಲದಲ್ಲಿ ಅಂತ್ಯಗೊಂಡಿದೆ. ಹೌದು, ಶುಕ್ರವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಸ್ಪೇನ್ ವಿರುದ್ಧ 3-3 ಗೋಲುಗಳ ಅಂತರದ ಸಮಬಲ ದಾಖಲಿಸಿದೆ.
Jun 13, 2018, 05.23 PM
ಬಲಿಷ್ಠ ಸ್ಪೇನ್ ಮ್ಯಾಜಿಕ್ ನಡೆಯಬಹುದೇ?
ಮ್ಯಾಡ್ರಿಡ್ ಕೋಚ್ ಹುದ್ದೆಗೆ ಜಿದಾನ್ ರಾಜೀನಾಮೆ
Jun 01, 2018, 11.53 AM
ಜನಪ್ರಿಯ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡದ ಪ್ರಮುಖ ತರಬೇತುದಾರ ಹುದ್ದೆಗೆ ಜಿನೆಡಿನ್ ಜಿದಾನ್ ರಾಜೀನಾಮೆ ನೀಡಿದ್ದಾರೆ.
Apr 11, 2018, 12.48 PM
ರೊನಾಲ್ಡೊ 'ಸೈಕಲ್ ಕಿಕ್‌' ಗೋಲು; ಬೆಚ್ಚಿಬಿದ್ದ ಫುಟ್ಬಾಲ್ ಜಗತ್ತು
Apr 04, 2018, 06.58 PM
ಸೈಕಲ್ ಕಿಕ್ ಮೂಲಕ ಅದ್ಭುತ ಗೋಲು ದಾಖಲಿಸಿರುವ ಸ್ಪೇನ್‌ನ ಜನಪ್ರಿಯ ರಿಯಲ್ ಮ್ಯಾಡ್ರಿಡ್ ತಾರೆ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತೆ ಸುದ್ದಿಯಾಗಿದ್ದಾರೆ.
ಬೌಲ್ಟ್, ಸೌಥಿ ದಾಳಿಗೆ ಆಂಗ್ಲ ಉಡೀಸ್; 58ಕ್ಕೆ ಆಲೌಟ್
Mar 22, 2018, 11.41 AM
ಇಲ್ಲಿನ ಈಡೆನ್ ಪಾರ್ಕ್ ಮೈದಾನದಲ್ಲಿ ಸಾಗುತ್ತಿರುವ ಮೊದಲ ಟೆಸ್ಟ್ ಪಂದ್ಯದ ಪ್ರಥಮ ದಿನದ ಮೊದಲ ಅವಧಿಯಲ್ಲೇ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ (32/6) ಹಾಗೂ ಟಿಮ್ ಸೌಥಿ (25/4) ಮಾರಕ ದಾಳಿಗೆ ತತ್ತರಿಸಿರುವ ಇಂಗ್ಲೆಂಡ್ ಕೇವಲ 20.4 ಓವರ್‌ಗಳಲ್ಲಿ ಬರಿ 58 ರನ್‌ಗಳಿಗೆ ಆಲೌಟಾಗಿದೆ.
'ಮೋದಿ ಮೈಮೇಲೆ ಸ್ಪೇನ್ ಮಫ್ಲರ್, ಇಟಲಿ ಶೂ, ಲಂಡನ್ ಕೋಟ್'
Feb 09, 2018, 08.52 AM
ಸ್ಪೇನ್ ದೇಶದ ಮಫ್ಲರ್, ಇಟಲಿಯ ಶೂ ಮತ್ತು ಲಂಡನ್ ಕೋಟ್ ಧರಿಸುವ ಪ್ರಧಾನಿ ನರೇಂದ್ರ ಮೋದಿ ಅವರು, ಸ್ವದೇಶದ ಬಗ್ಗೆ ಮಾತನಾಡುತ್ತಿರುವುದು ಭೂತದ ಬಾಯಿಯಲ್ಲಿ ಭಗವದ್ಗೀತೆಯಂತಿದೆ ಎಂದು ಸಚಿವ ಸಂತೋಷ್ ಲಾಡ್ ಲೇವಡಿ ಮಾಡಿದರು.
ಉಪನ್ಯಾಸಕರ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳಿ | Prajavani