text stringlengths 0 61.5k |
|---|
ಮಾಶಬಲ್ ಪ್ರಕಾರ, ಭಾರತದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಲು, ಕಳೆದ ವಾರ 10 ಮಿಲಿಯನ್ ಯುಎಸ್ ಡಾಲರ್ ಅನುದಾನವನ್ನು ಫೇಸ್‌ಬುಕ್ ಘೋಷಿಸಿತ್ತು. |
ಲಸಿಕೆ ಟ್ರ್ಯಾಕರ್ ಉಪಕರಣವು ಬಳಕೆದಾರರಿಗೆ ಹತ್ತಿರದ ಲಸಿಕೆ ಕೇಂದ್ರದ ಸ್ಥಳಗಳನ್ನು ಕಂಡುಹಿಡಿಯಲು ಅನುಮತಿಸುತ್ತದೆ. |
ಯುನೈಟೆಡ್ ವೇ, ಸ್ವಾಸ್ತ್, ಹೆಮಕುಂಟ್ ಫೌಂಡೇಶನ್, ಐ ಆಮ್ ಗುರಗಾಂವ್, ಪ್ರಾಜೆಕ್ಟ್ ಮುಂಬೈ ಮತ್ತು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ ನರ್ ಶಿಪ್ ಫೋರಂ (ಯು ಎಸ್ ಐ ಎಸ್ ಪಿ ಎಫ್) – ಎನ್ ಜಿಒಗಳು ಮತ್ತು ಏಜೆನ್ಸಿಗಳೊಂದಿಗೆ ಕೈಜೋಡಿಸಲಿದೆ ಎಂದು ಫೇಸ್ ಬುಕ್ ತಿಳಿಸಿದೆ. |
5,000 ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳು ಮತ್ತು ವೆಂಟಿಲೇಟರ್ ಗಳು, ಬೈಪಾಪ್ ಯಂತ್ರಗಳಂತಹ ಇತರ ಸಾಧನಗಳೊಂದಿಗೆ ನಿರ್ಣಾಯಕ ವೈದ್ಯಕೀಯ ಉಪಕರಣಗಳ ಸಂಗ್ರಹವನ್ನು ನಿರ್ಮಿಸಲು ಸಹಾಯ ಮಾಡಲಿದೆ ಈ ಆ್ಯಪ್. |
ಇನ್ನು, ಫೇಸ್ ಬುಕ್ ಫೀಡ್ ನಲ್ಲಿ ಕೋವಿಡ್-19 ಮಾಹಿತಿ ಕೇಂದ್ರ ಮತ್ತು ತುರ್ತು ಆರೈಕೆಯನ್ನು ಪಡೆಯುವ ವಿಧಾನವನ್ನು ತೋರಿಸಲಾಗುವುದು ಮತ್ತು ಕೋವಿಡ್-19 ರೋಗಲಕ್ಷಣಗಳನ್ನು ಮನೆಯಲ್ಲಿಯೇ ಹೇಗೆ ನಿರ್ವಹಿಸುವುದು ಎಂಬ ಮಾಹಿತಿಯನ್ನು ಸಹ ಹೊಂದಿರುತ್ತದೆ ಎಂಬ ಮಾಹಿತಿಗಳನ್ನು ಯುನಿಸೆಫ್ ಇಂಡಿಯಾ ಒದಗಿಸುತ್ತದೆ ಎಂದು ಫೇಸ್ ಬುಕ್ ಹೇಳಿದೆ. |
ವೃದ್ಧಾಪ್ಯ `ಶಾಪ'ವಲ್ಲ! - ಕಾಯಿಲೆಗೆ ಕಾಯಬೇಡಿ..... - Vydyaloka |
Vydyaloka > Articles > ಹಿರಿಯ ನಾಗರಿಕರ ಸಮಸ್ಯೆಗಳು > ವೃದ್ಧಾಪ್ಯ `ಶಾಪ'ವಲ್ಲ! – ಕಾಯಿಲೆಗೆ ಕಾಯಬೇಡಿ….. |
ವೃದ್ಧಾಪ್ಯ `ಶಾಪ'ವಲ್ಲ! – ಕಾಯಿಲೆಗೆ ಕಾಯಬೇಡಿ….. |
ದೀರ್ಘಾಯುಷಿಗಳಾಗಬೇಕೆಂದು ಬಯಸುವವರೆಲ್ಲ ವೃದ್ಯಾಪ್ಯವನ್ನು ಸಂತೋಷದಾಯಕವನ್ನಾಗಿ ಮಾಡಿಕೊಂಡು ಆರೋಗ್ಯಕರವಾದ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು. |
ಎಂದಿಗೂ ವೃದ್ಧಾಪ್ಯವನ್ನು `ಶಾಪ' ವೆಂದು ಭಾವಿಸದೆ `ವರ' ಎಂದುಕೊಂಡಲ್ಲಿ ನಿಭಾಯಿಸುವುದು ಖಂಡಿತ ಕಷ್ಟವಾಗಲಾರದು. ಮಧ್ಯ ವಯಸ್ಸಿನಲ್ಲೇ ಪೀಠಿಕೆ ಹಾಕಿ ಆರೋಗ್ಯಕರ ಸೂತ್ರಗಳನ್ನು ಪಾಲಿಸಿದಲ್ಲಿ ವೃದ್ಧಾಪ್ಯ ಸುಖಕರವಾಗಿರುತ್ತದೆ. |
ಯಾವುದೇ ದುಶ್ಚಟಗಳಿಗೆ ದಾಸರಾಗದಂತೆ ಜೀವನ ನಡೆಸಿದಲ್ಲಿ ಅನಾರೋಗ್ಯ ಹತ್ತಿರ ಸುಳಿಯಲಾರದು. ಮಕ್ಕಳು, ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಸಮಯ ಕಳೆದರೆ ನೆಮ್ಮದಿಯ ಬದುಕು ಸಾಧ್ಯವಿದೆ. ಅದಕ್ಕೆ ಆತ್ಮವಿಶ್ವಾಸವೇ ದಿವ್ಯ ಔಷಧಿ. |
ಹೊರೆ ಎನ್ನುವುದು ಬೇಡ |
ಒತ್ತಡದ ನಡುವೆ ಬದುಕುತ್ತಿರುವ ಮಕ್ಕಳು ತಮ್ಮ ಅಪ್ಪ, ಅಮ್ಮನನ್ನು ಹೊರೆಯೆಂದು ಭಾವಿಸದೆ ಪ್ರೀತಿಯಿಂದ ನೋಡಿಕೊಂಡಲ್ಲಿ, ಉತ್ತಮ ಕೌಟುಂಬಿಕ ಪರಿಸರ ಇದ್ದಲ್ಲಿ ಹಿರಿಯರ ಆರೋಗ್ಯ ಸದಾ ನಳನಳಿಸುತ್ತಿರುತ್ತದೆ. ಇಲ್ಲದಿದ್ದಲ್ಲಿ ಅನೇಕ ಕಾಯಿಲೆಗಳು ನರಳಿಸುತ್ತವೆ. |
ವೃದ್ಧಾಪ್ಯದಲ್ಲಿ ಕಾಡುವ ಸಮಸ್ಯೆಗಳು ಹತ್ತು ಹಲವು. ಮಧುಮೇಹ, ಮಂಡಿನೋವು, ರಕ್ತದೊತ್ತಡ, ಉಬ್ಬಸ, ಅಸಿಡಿಟಿ, ಅಲರ್ಜಿ, ಕೆಮ್ಮು-ಹೀಗೆ ನೂರೆಂಟು ಸಮಸ್ಯೆಗಳು ಹಿರಿಯರನ್ನು ಮಾನಸಿಕ ಹಾಗೂ ದೈಹಿಕವಾಗಿ ಭಾದೆಪಡಿಸುತ್ತವೆ. ಹೀಗಾಗಿ ಅವರಿಗೆ ವೃದ್ಧಾಪ್ಯ ಅತ್ಯಂತ ಕ್ಲಿಷ್ಟಕರ ಎನಿಸುತ್ತದೆ. |
ಇತ್ತೀಚೆಗೆ ಹಿರಿಯ ನಾಗರಿಕರಲ್ಲಿ ಮಧುಮೇಹದಿಂದ ನರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. 65 ಇಲ್ಲವೇ 70 ವರ್ಷ ತುಂಬಿದ ನಂತರ ಮಧುಮೇಹ ಸ್ವಲ್ಪಮಟ್ಟಿಗೆ ಕಾಣಿಸಿಕೊಂಡಲ್ಲಿ ಆಹಾರದಲ್ಲಿ ಪಥ್ಯ, ನಡಿಗೆ ಮತ್ತು ಕೆಲವು ಮನೆ ಔಷಧಿಗಳಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ತರಬಹುದು. |
ಮಂಡಿನೋವು |
ಬಹುಸಂಖ್ಯಾ ಹಿರಿಯ ನಾಗರೀಕರಲ್ಲಿ ಮಂಡಿನೋವು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇದು ಪುರುಷ ಮತ್ತು ಮಹಿಳೆಯರೆಂಬ ಭೇದವಿಲ್ಲದೇ ಇಬ್ಬರಲ್ಲೂ ಕಾಣಿಸಿಕೊಳ್ಳುವಂತಹುದು. ಇದು ಮೂಳೆಗಳು ಟೊಳ್ಳಾಗುವಿಕೆಯಿಂದ ದೇಹದ ತೂಕ ಹೆಚ್ಚಾಗಿದ್ದಲ್ಲಿ ಕಾಣಿಸಿಕೊಳ್ಳುತ್ತದೆ. ಮಂಡಿಗಳಲ್ಲಿ ನೋವು, ಊತ, ಬಿಗಿತ ಹೆಚ್ಚಾಗಿರುತ್ತದೆ. |
ಆಮಶಂಕೆ |
ಜೀರ್ಣ ಶಕ್ತಿ ಕಡಿಮೆಯಾದಂತೆ ವೃದ್ಧರಲ್ಲಿ ಆಮಶಂಕೆ ಹೆಚ್ಚು ಬಾಧೆಪಡುವಂತಹದ್ದು. ಹೊಟ್ಟೆ ಹಿಂಡಿದಂತಾಗಿ ನೋವು ಬಂದು ಮಲವಿಸರ್ಜನೆ ಆಗುತ್ತಿದ್ದಲ್ಲಿ ಮತ್ತು ಮಲದೊಂದಿಗೆ ಗೊಣ್ಣೆಯಂತಹ ಪದಾರ್ಥ ಹೋಗುತ್ತಿದ್ದಲ್ಲಿ ಆಮಶಂಕೆಯಿಂದಾಗಿ ಹಾಗಾಗುತ್ತಿರುತ್ತದೆ. ಊಟವಾದೊಡನೆ ಮಲವಿಸರ್ಜನೆಗೆ ಹೋಗಬೇಕೆನಿಸುತ್ತದೆ. ಬಾಯಿಯಲ್ಲಿ ನೀರು ಬರುವುದು, ಹೊಟ್ಟೆಯುಬ್ಬರ ಕೂಡ ಇರುವುದು. |
ಮಾನಸಿಕ ಯಾತನೆಗಳು ಒಮ್ಮೆಮ್ಮೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿ ಬಿಡುತ್ತವೆ. ವೃದ್ಧರು ಆಗಾಗ ವೈದ್ಯರನ್ನು ಭೇಟಿಯಾಗಿ ರಕ್ತದೊತ್ತಡ ಪರೀಕ್ಷಿಸಿಕೊಳ್ಳಬೇಕು. ಹೆಚ್ಚಾಗಿದ್ದಲ್ಲಿ ನಿಯಂತ್ರಿಸಲು ಔಷಧಿ ಸೇವನೆ, ಪಥ್ಯ, ವ್ಯಾಯಾಮ ಪಾಲಿಸಬೇಕು. ಉಪ್ಪಿನ ಸೇವನೆ ಮಿತಿಗೊಳಿಸಬೇಕು. ಸದಾ ಸಂತೋಷದಿಂದ ಇರಲು ಪ್ರಯತ್ನಿಸಬೇಕು. |
ವೃದ್ಧಾಪ್ಯದಲ್ಲಿ ಅನೇಕರಿಗೆ ನಿದ್ರಾಹೀನತೆ ತೊಂದರೆ ಕಾಡುತ್ತಿರುವುದು ಸಾಮಾನ್ಯ. ಸರಿಯಾಗಿ ನಿದ್ರೆ ಬರುವುದಿಲ್ಲ. ಒಮ್ಮೆ ಮಲಗಿದರೂ ಎರಡ್ಮೂರು ಗಂಟೆಗೆಲ್ಲ ಎಚ್ಚರವಾಗಿ ಬಿಡುತ್ತದೆ. ಮಾನಸಿಕ ನೆಮ್ಮದಿಯಿಲ್ಲದೆ ಖಿನ್ನತೆ, ಆತಂಕಗಳು ಇದ್ದಲ್ಲಿಯೂ ನಿದ್ರೆ ಬರುವುದಿಲ್ಲ. |
ಉಸಿರು ತೆಗೆದುಕೊಳ್ಳಲು ಉಬ್ಬಸ ರೋಗಿಗಳಿಗೆ ಕಷ್ಟವಾಗುತ್ತಿರುತ್ತದೆ. ಸುಂಯ್, ಸುಂಯ್ ಶಬ್ಧ ಬರುತ್ತಿರುತ್ತದೆ. ಮಳೆಗಾಲ, ಚಳಿಗಾಲದಲ್ಲಿ ಉಬ್ಬಸದ ತೊಂದರೆ ಇನ್ನು ಹೆಚ್ಚು. ಉಬ್ಬಸದಿಂದ ಬಳಲುವ ಅನೇಕರು ರಾತ್ರಿ ಮಲಗುವುದೇ ಇಲ್ಲ. ಕುಳಿತುಕೊಂಡೇ ಉಸಿರಿಗಾಗಿ ತಹತಹಿಸುತ್ತಿರುತ್ತಾರೆ. |
ವಯಸ್ಕರಲ್ಲಿ ಕೆಮ್ಮು ಬಹಳಷ್ಟು ಕಾಡುತ್ತಿರುತ್ತದೆ. ಮಳೆಗಾಲದಲ್ಲಿ ಕೆಮ್ಮು ಹೆಚ್ಚು ಬಾಧಿಸುತ್ತದೆ. |
ಇವುಗಳಲ್ಲದೆ ತಲೆನೋವು, ಗುಳ್ಳೆಗಳು, ನೆಗಡಿ, ವಾಯುಬಾಧೆ, ಉರಿಮೂತ್ರ, ಹೃದ್ರೋಗ, ಮಲಬದ್ಧತೆ, ಮರೆವು, ಕಣ್ಣಿನಪೊರೆ- ಹೀಗೆ ಅನೇಕ ಸಮಸ್ಯೆಗಳು ಹಿರಿಯರನ್ನು ತೊಂದರೆಗೀಡು ಮಾಡುತ್ತವೆ. ಆದರೆ ಈ ಬಗ್ಗೆ ಹೆಚ್ಚು ಆತಂಕಪಡಬೇಕಾದ ಅಗತ್ಯವಿಲ್ಲ. |
ಟೆನ್‍ಷನ್ ಬೇಡ |
ಜೀವನ ಶೈಲಿ ಬದಲಿಸಿಕೊಳ್ಳಬೇಕು. |
ಒಳ್ಳೆಯ ವಾತಾವರಣ ಕಲ್ಪಿಸಿಕೊಳ್ಳಬೇಕು. |
ಸರಿಯಾದ ವ್ಯಾಯಾಮ, ನಡಿಗೆ, ಧ್ಯಾನ, ಹಿತಮಿತವಾದ ಆಹಾರ, ಹೆಚ್ಚು ನೀರು ಕುಡಿಯುವುದು, ನಿರಾತಂಕವಾದ ನಿದ್ರೆ ಹೀಗೆ ದೈಹಿಕ ಆರೋಗ್ಯ ಕಾಪಾಡಿಕೊಂಡರೆ ರೋಗ ಮುಕ್ತರಾಗಬಹುದು. |
ಸಾಹಿತ್ಯ, ಸಂಗೀತದಂತಹ ಉತ್ತಮ ಹವ್ಯಾಸ, ಜನರೊಂದಿಗೆ ಬೆರೆಯುವುದು, ದೇವಸ್ಥಾನಗಳಿಗೆ ಭೇಟಿ ಕೊಡುವುದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು, ನಿಯಮಿತವಾಗಿ ಕುಟುಂಬ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು. |
ವಯನಾಡಿನಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು: ಪ್ರತಿಭಟನೆ- ಲಾಠಿಚಾರ್ಜ್ |
Homeಮುಖಪುಟವಯನಾಡಿನಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು: ಪ್ರತಿಭಟನಾನಿರತರ ಮೇಲೆ ಲಾಠಿಚಾರ್ಜ್ |
ವಯನಾಡಿನಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು: ಪ್ರತಿಭಟನಾನಿರತರ ಮೇಲೆ ಲಾಠಿಚಾರ್ಜ್ |
22 November 2019, 4:45 PM |
ಕೇರಳದ ವಯನಾಡಿನಲ್ಲಿ 10 ವರ್ಷದ 5ನೇ ವಿದ್ಯಾರ್ಥಿನಿ ಶೆಹಲಾ ಶೆರಿನ್, ಸರ್ಕಾರಿ ಶಾಲೆಯಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದಳು. ಎರಡು ದಿನಗಳ ಹಿಂದೆ ಘಟನೆ ನಡೆದಿತ್ತು. ಶಾಲೆ ಮತ್ತು ವೈದ್ಯರ ನಿರ್ಲಕ್ಷ್ಯ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪ್ರೊಟೆಸ್ಟ್ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವಿನ ಘರ್ಷಣೆಗೆ ಕಾರಣವಾಗಿದೆ. |
ಇದನ್ನೂ ಓದಿ: ತರಗತಿಯಲ್ಲಿದ್ದ ಬಾಲಕಿಗೆ ಕಚ್ಚಿದ ಹಾವು: ತಲೆಕೆಡಿಸಿಕೊಳ್ಳದ ಶಿಕ್ಷಕಿ, ಬಾಲಕಿಯ ಧಾರುಣ ಸಾವು |
ಶೆಹಲಾ ಶೆರಿನ್ ಸಾವಿಗೆ ಶಾಲೆ ಮತ್ತು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಮತ್ತು ಶೆಹಲಾ ಸಹಪಾಠಿಗಳು ಆರೋಪಿಸಿದ್ದಾರೆ. ಈಗಾಗಲೇ ಆಸ್ಪತ್ರೆ ವೈದ್ಯರು ಮತ್ತು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. |
ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಸದಸ್ಯರ ನೇತೃತ್ವದಲ್ಲಿ ಬಾಲಕಿಯ ಸಾವಿಗೆ ನ್ಯಾಯ ಒದಗಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ಹೆಚ್ಚಿದೆ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಿದ್ಯಾರ್ಥಿಗಳನ್ನು ಬ್ಯಾರಿಕೇಡ್ ನಿಂದ ತಡೆಯಲಾಯಿತು. ಆದರೆ ಬ್ಯಾರಿಕೇಡ್ ತಳ್ಳಿ ಒಳಗೆ ಪ್ರವೇಶಿಸಲು ಯತ್ನಿಸಿದ ವಿದ್ಯಾರ್ಥಿಗಳ ಮೇ... |
ಉತ್ತರ ಕೇರಳದ ವಯನಾಡು ಸರ್ಕಾರಿ ಶಾಲೆಯಲ್ಲಿ 5 ನೇ ತರಗತಿ ವಿದ್ಯಾರ್ಥಿನಿ ಶೆಹಲಾ ಶೆರಿನ್ ಗೆ ಹಾವು ಕಚ್ಚಿ ಮೃತಪಟ್ಟಿದ್ದಾಳೆ. ಸುಲ್ತಾನ್ ಬಾಥೆರಿಯಲ್ಲಿರುವ ಶಾಲೆಯ ತರಗತಿಯಲ್ಲಿ ವಿದ್ಯಾರ್ಥಿನಿ ಶೆಹಲಾ ಕುಳಿತಿದ್ದಳು. ಈ ವೇಳೆ ಮಹಡಿ ಮೇಲಿನ ರಂಧ್ರದೊಳಗಿಂದ ಬಂದ ಹಾವು ಶೆಹಲಾಳನ್ನು ಕಚ್ಚಿದೆ. ಆದರೆ ಶೆಹಲಾ ಉಗುರು ಅಥವಾ ಕಲ್ಲಿನಿಂದ ಏಟು ಮಾಡಿಕೊಂಡಿದ್ದಾಳೆ ಎಂದು ಶಿಕ್ಷಕರು ನಿರ್ಲಕ್ಷಿಸಿದ್ದರು.... |
ಇದನ್ನೂ ಓದಿ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ: ಶಿವಸೇನೆ ಶಾಸಕರ ಒಕ್ಕೊರಲ ಒತ್ತಾಯ |
ಶೆಹಲಾ ಶೆರಿನ್ ಸಹಪಾಠಿಗಳು, ಶಾಲಾ ಸಮವಸ್ತ್ರದಲ್ಲೇ, ತಮ್ಮ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಫಲಕ ಹಿಡಿದು, ಘೋಷಣೆ ಕೂಗಿ ಶೆಹಲಾಳ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು. ಸುಲ್ತಾನ್ ಬಾಥೆ ಪಟ್ಟಣದ ಮೂಲಕ ಮೆರವಣಿಗೆ ಹೊರಟು, ಸರ್ಕಾರಿ ವೃತ್ತಿಪರ ಹೈಯರ್ ಸೆಕೆಂಡರಿ ಶಾಲೆಯ ಮುಂದೆ ಒಂದುಗೂಡಿದರು. ವಿದ್ಯಾರ್ಥಿಯನ್ನು ಆಸ್ಪತ್ರೆಗ... |
ಬಾಲಕನೊಬ್ಬ ಪ್ಲಾಸ್ಟಿಕ್ ಹಾವನ್ನು ಕೊರಳಲ್ಲಿ ಸುತ್ತಿಕೊಂಡು, ಶಾಲೆಯಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲ. ಆಟದ ಮೈದಾನದಲ್ಲಿ ಮತ್ತು ತರಗತಿ ಕೋಣೆಗಳ ಒಳಗೆ ಹಾವುಗಳು ಬರುತ್ತಿವೆ ಎಂದು ಆರೋಪಿಸಿದರು. ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಹೇಳಬೇಕೆಂದು ಒತ್ತಾಯಿಸಿದರು. |
ಈ ಬಗ್ಗೆ ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿ, ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಶಿಕ್ಷಕರು ವಿಫಲರಾಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ಶಿಕ್ಷಕರು, ಮಕ್ಕಳಿಗೆ ತರಬೇತಿ ಮತ್ತು ತಿಳಿವಳಿಕೆ ನೀಡಬೇಕು ಎಂದು ಹೇಳಿದ್ದಾರೆ. |
ವಯನಾಡು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಎ.ಹ್ಯಾರಿಸ್, ಶಾಲೆಗೆ ಭೇಟಿ ನೀಡಿ, ಶಾಲೆಯ ಮತ್ತು ಅದರ ಆವರಣದ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದರು. ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಹೇಳಿದ್ದಾರೆ. |
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮಾಧ್ಯಮ ವರದಿ ಆಧಾರದ ಮೇಲೆ ತಮ್ಮದೇ ಪ್ರಕರಣ ದಾಖಲಿಸಿದ್ದು, ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ವೈದ್ಯಕೀಯ ಅಧಿಕಾರಿಯಿಂದ ವರದಿ ಕೋರಿದೆ. |
Previous articleಟ್ವಿಟ್ಟರ್‌ನಲ್ಲಿ ಸಿದ್ದರಾಮಯ್ಯ – ಸದಾನಂದಗೌಡ – ಶ್ರೀರಾಮುಲು ಕದನ: ಪರಸ್ಪರ ಆರೋಪ ಪ್ರತ್ಯಾರೋಪ |
Next articleರಾಜ್ಯದಲ್ಲಿ ಜೆಡಿಎಸ್ ಪಕ್ಷ ವಿಸರ್ಜನೆಯಾಗಿಬಿಡಬೇಕು, ಜೆಡಿಎಸ್-ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ: ಆರ್.ಅಶೋಕ್ |
ಅಪ್ಪನ ಕಣ್ಣೀರು, ಅವ್ವನ ಸ್ವಗತ | ಓದು ಬಜಾರ್ |
ಅಕ್ಟೋಬರ್ 23, 2008 / odubazar |
ಅಪ್ಪನ ಕಣ್ಣೀರು, ಅವ್ವನ ಸ್ವಗತ |
ಎದೆ ಮಿಡಿತದ ಸದ್ದು |
ನಾನು ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ. ಬದುಕಿನ ಹೊಸಿಲ ಒಳಗಡೆ ಇರುವಾಲೇ ನನ್ನ ಚೊಚ್ಚಲ ಕಥಾಸಂಕಲನ ಪ್ರಕಟಿಸಿ ನಿಮ್ಮ ಬೊಗಸೆಯಲ್ಲಿ ಇಡುತ್ತಿರುವುದಕ್ಕೆ ಖಷಿ ಆಗುತ್ತಿದೆ. |
ನನಗೆ ಕತೆ ಬರೆಯುವುದೆಂದರೆ ಪ್ರಯಾಸದ ಕೆಲಸ. ಪದಜೋಡಣೆ ಮಾಡುವುದು ಗುಬ್ಬಿ ಹುಲ್ಲಿನ ದಳಗಳನ್ನು ಸೇರಿಸಿ ಗೂಡು ಕಟ್ಟುವ ಹಾಗೆ ತ್ರಾಸದಾಯಕ. ಬಳಸುವ ಪ್ರತಿ ಪದವೂ ಜೀವಂತಿಕೆಯಿಂದ ಉಸಿರಾಡಬೇಕು ಅನ್ನುವವನು ನಾನು. ನನ್ನ ವಾರಿಗೆಯ ಗಳೆಯರೆಲ್ಲಾ ಎಂಜಾಯ್ ಮಾಡುವುದರಲ್ಲಿ ತಲ್ಲೀನರಾಗಿದ್ದರೆ, ನಾನು ಪುಸ್ತಕದ ಪುಟಗಳಲ್ಲಿನ ತರಹೇವಾರಿ ಶಬ್ದಗಳ ಹುಡುಕುವ ಆಟದಲ್ಲಿ ಧ್ಯಾನಸ್ಧನಾಗಿರುತ್ತಿದ್ದೆ. |
ಗೆಳೆಯರು ಆಗಾಗ ಪ್ರಶ್ನೆ ಮಾಡುತ್ತಾರೆ. ನಿನಗೆ ಕತೆ ಬರೆಯಲು ಏನು ಪ್ರೇರಣೆ ಅಂತ. ನನಗೆ ಕತೆ ಬರೆಯಲು ಪ್ರೇರಣೆ ನೀಡಿದ್ದು ಅಪ್ಪ ಮತ್ತು ಅವ್ವ ಬಿಡುತ್ತಿದ್ದ ನಿಟ್ಟುಸಿರ ಮಾತುಗಳು. ಪ್ರತಿ ರಾತ್ರಿ ಊಟ ಮಾಡುವ ಹೊತ್ತಿಗೆ ಅಪ್ಪ, ತಾನು ಅದೆಷ್ಟೊಂದು ದುಡಿದರೂ ಇನ್ನೂ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿರುವ ಬಡತನ ಸಾಲದ ಭಾದೆಯನ್ನು ಕಣ್ಣಲ್ಲಿ ನೀರು ಜಿನುಗುವಂತೆ ಕತೆಯಂತೆ ಹೇಳುತ್ತಿದ್ದ. ಆತನ ... |
ಹಳ್ಳಿ ಬದುಕಿನ ನೈಜ ಚಿತ್ರಣಗಳನ್ನು, ಹಳ್ಳಿಯಲ್ಲಿ ಹೆಜ್ಜೆ ಇಟ್ಟಿರುವ ಜಾಗತೀಕರಣದ ವಿರೂಪತೆಯನ್ನು, ನನ್ನೆದೆಯ ತವಕ, ತಲ್ಲಣಗಳನ್ನು ಕತೆಯಾಗಿಸುವ ಅದಮ್ಯ ತುಡಿತದೊಂದಿಗೆ ಕತೆ ಬರೆಯುತ್ತಿದ್ದೇನೆ. ನನ್ನೆಲ್ಲ ಕತೆಗಳನ್ನು ನಿಮ್ಮೆದುರಿಗೆ ಹರವಿದ್ದೇನೆ. ಸಹೃದಯಿಗಳಾದ ತಾವು ಓದಿ ಪ್ರತಿಕ್ರಿಯಿಸುತ್ತೀರೆಂದು ಭಾವಿಸಿದ್ದೇನೆ. |
ಜೋಳ: Latest ಜೋಳ News & Updates, Photos & Images, Videos | Vijaya Karnataka - Page 16 |
September,19,2019, 20:34:12 |
ಜಾನುವಾರುಗಳ ಹಸಿರು ಮೇವಿಗೆ ಹೆಚ್ಚಿದ ಬೇಡಿಕೆ |
ಬೇಸಿಗೆಯ ಬಿರುಬಿಸಿಲಿನ ತಾಪ ದಿನದಿನಕ್ಕೂ ಹೆಚ್ಚುತ್ತಿದೆ. ಒಂದು ಕಡೆ ಕುಡಿವ ನೀರು, ಮತ್ತೊಂದು ಕಡೆ ಮೇವಿಗೂ ಜಾನುವಾರುಗಳು ಪರದಾಡುವಂತಾಗಿದೆ. |
ವಿಷಪ್ರಾಶನ ಶಂಕೆ: 50ಕ್ಕೂ ಹೆಚ್ಚು ಪಾರಿವಾಳಗಳ ಸಾವು |
Apr 06, 2019, 01.15 PM |
ಪಾರಿವಾಳಗಳಿಗೆ ಸಾಮೂಹಿಕ ವಿಷ ಪ್ರಾಶನ ಮಾಡಿರುವ ಶಂಕೆಯಿದೆ ಎಂದು ಸ್ಥಳೀಯರು ಮತ್ತು ವನ್ಯಜೀವಿ ಕಾರ್ಯಕರ್ತರು ಹೇಳಿದ್ದಾರೆ. ಆದರೆ ಅಧಿಕಾರಿಗಳು ಇನ್ನೂ ಯಾವುದೇ ನಿರ್ಣಯಕ್ಕೆ ಬಂದಿಲ್ಲ. ಬೆಳಗ್ಗೆ ಸ್ನೇಹಿತರ ಜತೆ ವಾಕಿಂಗ್ ಮಾಡುತ್ತಿದ್ದಾಗ ಹಲವಾರು ಪಾರಿವಾಳಗಳು ಸತ್ತುಬಿದ್ದಿರುವುದು ಕಂಡಿತು. ದೇವಾಲಯದ ಸಮೀಪ ಫುಟ್‌ಪಾತ್‌ಗಳಲ್ಲಿ, ರಸ್ತೆಯ ಮೇಲೆ, ಖಾಲಿ ಜಾಗಗಳಲ್ಲೆಲ್ಲ ಪಾರಿವಾಳಗಳು ಸತ್ತು ಬಿದ... |
ಬಿರುಸು ಮಳೆ: ಬೆಳೆಗೆ ಹಾನಿ |
ತಾಲೂಕಿನ ವಿವಿಧ ಗ್ರಾಮದಲ್ಲಿ ಶುಕ್ರವಾರ ಸಂಜೆ ಮಿಂಚು, ಗುಡುಗು ಸಹಿತ ಆಣೆಕಲ್ಲು ಮಳೆಯಾಗಿದ್ದು, ಹಲವೆಡೆ ಬೆಳೆ ಹಾನಿಯಾಗಿದೆ. |
ಆಹಾರದಲ್ಲಿರಲಿ ಸಿರಿಧಾನ್ಯ, ಇದು ಮಧುಮೇಹಿಗಳಿಗೂ ಬೆಸ್ಟ್ |
ಆದರೆ ಸಕ್ಕರೆ ಕಾಯಿಲೆಯ ಪ್ರಮಾಣ ಹೆಚ್ಚಾದಂತೆ ಸಿರಿಧಾನ್ಯದಿಂದ ಮಾಡಿದ ಆಹಾರಗಳಿಗೆ ಇದಕ್ಕಿದ್ದಂತೆ ಬೇಡಿಕೆ ಕಂಡು ಬಂತು. ಈ ಆಹಾರ ನಿಧಾನವಾಗಿ ಪಚನವಾಗುವ ಕಾರಣ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದಿಲ್ಲ. ಆದ್ದರಿಂದ ಸಿರಿಧಾನ್ಯ ಮಧುಮೇಹಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ. |
ಕೆರೆ ಏರಿ ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ |
ಅರ್ಧಕ್ಕೆ ನಿಂತಿರುವ ಕೆರೆ ಏರಿಯ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ನರಸೇಗೌಡನದೊಡ್ಡಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. |
ಮುಟ್ಟಿನ ದಿನಗಳಲ್ಲಿ ಆದಷ್ಟು ಈ ಚಟುವಟಿಕೆಗಳಿಂದ ದೂರವಿರಿ | Are You On Your Periods? Then Avoid Doing These Things - Kannada BoldSky |
ಮುಟ್ಟಿನ ದಿನಗಳಲ್ಲಿ ಆದಷ್ಟು ಈ ಚಟುವಟಿಕೆಗಳಿಂದ ದೂರವಿರಿ |
| Updated: Thursday, October 20, 2016, 11:21 [IST] |
ಮಾಸಿಕ ದಿನಗಳಲ್ಲಿ ಮಹಿಳೆಯರು ಕೆಲವಾರು ನೋವುಗಳನ್ನು ಅನುಭವಿಸುತ್ತಾರೆ. ಕೆಳಹೊಟ್ಟೆಯಲ್ಲಿ ಸಾಮಾನ್ಯದಿಂದ ತೀಕ್ಷ್ಣವಾದ ನೋವು, ಹಾರ್ಮೋನುಗಳ ಬದಲಾವಣೆಯ ಕಾರಣ ಮನೋಸ್ಥಿತಿಯಲ್ಲಿಯೂ ಬದಲಾವಣೆ, ರೇಗಾಟ, ಅಸಹನೆ, ಕೋಪಗೊಳ್ಳುವುದು ಮೊದಲಾದವುಗಳನ್ನು ಈ ದಿನಗಳಲ್ಲಿ ಕಾಣಬಹುದು. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು? |
ಸುಸ್ತು, ಆಸಕ್ತಿ ಇಲ್ಲದಿರುವುದು, ಮೈ ಸರಿಯಿಲ್ಲ ಎಂಬ ಭಾವನೆ ಇಡಿಯ ದಿನ ಮೂಡಿರುವುದು ಸಹಾ ಕಾಣಬರುತ್ತದೆ. ಹಿಂದಿನ ದಿನಗಳಲ್ಲಿ ಈ ಅವಧಿಯಲ್ಲಿ ಸಂಪೂರ್ಣ ರಜೆ ನೀಡುವ ಸಲುವಾಗಿ ಮನೆಯ ಹೊರಗಿನ ಕೋಣೆಯೊಂದರಲ್ಲಿ ಕಾಲ ಕಳೆಯುವಂತೆ ಮಾಡಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಇದು ಸಾಧ್ಯವಾಗದ ಕಾರಣ ಈ ದುಗುಡಗಳನ್ನು ಎದುರಿಸಿ ನಿತ್ಯದ ಕೆಲಸಗಳನ್ನು ಪೂರೈಸುವುದೇ ಜಾಣತನದ ಕ್ರಮವಾಗಿದೆ. ಮುಟ್ಟಿನ ನೋ... |
ಸುಮ್ಮನೇ ಹೊಟ್ಟೆನೋವು ಅಂದರೆ ಸಾಕು, ಅಕ್ಕ ಪಕ್ಕದವರಿಂದ ಪುಕ್ಕಟೆಯಾಗಿ ನೂರಾರು ಸಲಹೆಗಳು ಬರುತ್ತವೆ. ಇವುಗಳನ್ನು ಯಾವುದನ್ನು ಅನುಸರಿಸಬೇಕು ಅಥವಾ ಬಾರದು ಎಂಬ ದ್ವಂದ್ವದಲ್ಲಿ ಯಾವುದನ್ನೂ ಅನುಸರಿಸಲೇ ಆಗದೇ ಹೋಗುವುದು ಅಥವಾ ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ವಿಧಾನ ಅಥವಾ ಔಷಧಿಗಳನ್ನು ಸೇವಿಸುವ ಪರಿಣಾಮವಾಗಿ ಆರೋಗ್ಯ ಇನ್ನಷ್ಟು ಬಿಗಡಾಯಿಸುವುದು ಸಹಾ ಕಂಡುಬರಬಹುದು. ಮುಟ್ಟಿನ ಅವಧಿಯಲ್ಲಿ ... |
ನಿಮ್ಮ ಆರೋಗ್ಯವನ್ನು ತಪಾಸಿಸಿ ನಿಮ್ಮ ವೈದ್ಯರೇ ಸೂಕ್ತ ಔಷಧಿಗಳನ್ನು ನೀಡಬಲ್ಲರೇ ಹೊರತು ಸ್ವತಃ ಪ್ರಯೋಗಿಸುವುದು ಸರ್ವಥಾ ಒಳ್ಳೆಯದಲ್ಲ. ಆದರೆ ಅರಿತೋ, ಅರಿಯದೆಯೋ ಈ ಸಮಯದಲ್ಲಿ ನಿಮ್ಮ ಕೆಲವು ಚಟುವಟಿಕೆಗಳು ನಿಮ್ಮ ಆರೋಗ್ಯವನ್ನು ಬಾಧಿಸುತ್ತಿರಬಹುದು. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ... |
ಮಾಸಿಕ ದಿನಗಳಲ್ಲಿ ಓಡುವುದು ಸರ್ವಥಾ ಸಲ್ಲದು. ಕೊಂಚ ದೂರಕ್ಕೇ ಆಗಲಿ, ಬಸ್ಸು ಬಿಟ್ಟು ಹೋಗುತ್ತದೆ ಎಂಬ ಅವಸರವೇ ಇರಲಿ, ಓಡುವುದರಿಂದ ಹೊಟ್ಟೆಯ ಭಾರ ಕೆಳಹೊಟ್ಟೆಯ ಮೇಲೆ ಬಿದ್ದು ಮಾಸಿಕ ದಿನಗಳ ನೋವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಆದ್ದರಿಂದ ಈ ದಿನಗಳಲ್ಲಿ ಓಡುವಿಕೆಗೆ ಸಂಪೂರ್ಣ ನಿಷೇಧವಿರಲಿ. |
ಸಿದ್ಧ ಆಹಾರಗಳನ್ನು ಸೇವಿಸುವುದು |
ಈ ಆಹಾರಗಳನ್ನು ಸಿದ್ಧಪಡಿಸುವಾಗ ಅಗ್ಗದ, ಅನಾರೋಗ್ಯಕರ ಮತ್ತು ಕೊಬ್ಬಿರುವ ಎಣ್ಣೆಗಳನ್ನೇ ಬಳಸಲಾಗುತ್ತದೆ. ಇದು ನಿಮ್ಮ ದೇಹದಲ್ಲಿ ಉರಿಯೂತವನ್ನುಂಟು ಮಾಡುತ್ತದೆ. |
ಅಲ್ಲದೇ ಈಗಾಗಲೇ ಬಳಲಿರುವ ದೇಹ ಇನ್ನಷ್ಟು ಬಳಲಲು ಕಾರಣವಾಗುತ್ತದೆ. ಆದ್ದರಿಂದ ಎಷ್ಟೇ ಸುಂದರವಿರಲಿ, ಎಷ್ಟೇ ಖ್ಯಾತಿಯನ್ನು ಪಡೆದಿರಲಿ, ಈ ಆಹಾರಗಳತ್ತ ನೋಡುವುದೂ ಬೇಡ. |
ಕೊಬ್ಬುಯುಕ್ತ ಆಹಾರ ಸೇವನೆ |
ವಿಶೇಷವಾಗಿ ಮಾಂಸಾಹಾರದಲ್ಲಿರುವ ಕೊಬ್ಬು ಸಂತುಲಿತ ಕೊಬ್ಬುಗಳಾಗಿದ್ದು ಇವು ಸಹಾ ದೇಹದಲ್ಲಿ ಉರಿಯೂತವುಂಟುಮಾಡಲು ಕಾರಣವಾಗಬಹುದು. ಆದ್ದರಿಂದ ಈ ದಿನಗಳಲ್ಲಿ ಕೊಬ್ಬಿನ ಅಂಶ ಹೆಚ್ಚಿರುವ ಯಾವುದೇ ಆಹಾರಗಳನ್ನು ಸೇವಿಸಬಾರದು. |
ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇದೆ. ಇದು ಹೊಟ್ಟೆಯ ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಲ್ಲದೇ ನಿದ್ದೆ ಬರದಿರುವಂತೆ ಮಾಡಿ ನೋವನ್ನು ಇಡಿಯ ದಿನ ಅನುಭವಿಸುವಂತೆ ಮಾಡುತ್ತದೆ. ಆದ್ದರಿಂದ ಅಷ್ಟೂ ದಿನಗಳ ಕಾಲ ಕಾಫಿ ಸೇವನೆಗೂ ರಜೆ ಇರಲಿ. |
ಹೊಟ್ಟೆಯ ತೊಂದರೆ ಹೆಚ್ಚಲು ತಡರಾತ್ರಿಯವರೆಗೆ ಎಚ್ಚರಾಗಿರುವುದು ಇನ್ನೊಂದು ಕಾರಣವಾಗಿದೆ. ಈ ಸಮಯದಲ್ಲಿ ಮಹಿಳೆಯರು ಇತರ ದಿನಗಳಿಗಿಂತಲೂ ಕೊಂಚ ಹೆಚ್ಚೇ ಆರಾಮ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಆದಷ್ಟು ಬೇಗನೇ ಮಲಗಿ ಕೊಂಚ ಹೆಚ್ಚೇ ಕಾಲ ಸುಖವಾಗಿ ನಿದ್ರಿಸುವ ಮೂಲಕ ದೇಹ ಸಹಜಸ್ಥಿತಿಗೆ ಬರಲು ಅನುಕೂಲವಾಗುತ್ತದೆ. |
ಭಾರೀ ವ್ಯಾಯಮಗಳು |
ಈ ದಿನಗಳಲ್ಲಿ ಮಹಿಳೆಯರು ಕೇವಲ ಸರಳ ವ್ಯಾಯಾಮಗಳನ್ನು ಮಾತ್ರ ಮಾಡಬೇಕು. ನಿತ್ಯವೂ ಮಾಡುತ್ತಿದ್ದೇನೆ, ಏನೂ ಆಗುವುದಿಲ್ಲ ಎಂಬ ಕಾರಣಗಳನ್ನು ಒಡ್ಡಿ ಭಾರೀ ವ್ಯಾಯಾಮಗಳನ್ನು ಮಾಡಬಾರದು. ಇದು ಮಾಸಿಕ ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ. |
ಕುಳಿತುಕೊಳ್ಳುವುದನ್ನು ಕಡಿಮೆ ಮಾಡಿ |
ಸುಸ್ತು ಎಂದು ಇಡಿಯ ದಿನ ಕುಳಿತೇ ಇರುವ ಮೂಲಕವೂ ನಿಧಾನವಾಗಿ ಹೊಟ್ಟೆನೋವು ಹೆಚ್ಚಬಹುದು. ಆದ್ದರಿಂದ ಕುಳಿತು ಆರಾಮ ಮಾಡುವ ಬದಲು ಬೆನ್ನ ಮೇಲೆ ಮಲಗಿ |
ಅಥವಾ ಅಡ್ಡಲಾಗಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ಆದಷ್ಟೂ ಕಡಿಮೆ ಮಾಡಬೇಕು. |
ಕೆಲವೊಮ್ಮೆ ಹಾರ್ಮೋನುಗಳ ಏರುಪೇರಿನ ಕಾರಣ ಹಸಿವೇ ಇಲ್ಲವಾಗುತ್ತದೆ. ಅಥವಾ ನಾಲಿಗೆಯ ರುಚಿ ಕೆಟ್ಟು ಯಾವ ತಿಂಡಿಯೂ ರುಚಿಸದಾಗುತ್ತದೆ. ಈ ಅವಧಿಯಲ್ಲಿ ದೇಹ ಹೆಚ್ಚಿನ ಪ್ರಮಾಣದ ರಕ್ತವನ್ನು ಕಳೆದುಕೊಳ್ಳುವ ಕಾರಣ ದೇಹ ಹೆಚ್ಚು ಆಯಾಸಗೊಳ್ಳುತ್ತದೆ. |
ಈ ಹೊತ್ತಿನಲ್ಲಿ ಇತರ ಹೊತ್ತಿಗಿಂತಲೂ ಹೆಚ್ಚು ಪೌಷ್ಟಿಕ ಮತ್ತು ಕಬ್ಬಿಣದ ಅಂಶ ಹೆಚ್ಚಿರುವ ಆಹಾರದ ಅಗತ್ಯವಿದೆ. ಹೀಗಿದ್ದಾಗ ಊಟವನ್ನೇ ಮಾಡದೇ ಇದ್ದರೆ ದೇಹಕ್ಕೆ ಪೋಷಕಾಂಶಗಳ ತೀವ್ರ ಕೊರತೆಯುಂಟಾಗುತ್ತದೆ. |
ಸೂಕ್ಷ್ಮ ಸ್ಥಳಗಳನ್ನು ಸ್ವಚ್ಛಗೊಳಿಸಲು ಸೋಪು ಬಳಸುವುದು |
ಈ ಅವಧಿಯಲ್ಲಿ ಮಹಿಳೆಯರು ಸೂಕ್ಷ್ಮಸ್ಥಳಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಆದರೆ ಮುಖದ ಚರ್ಮದಂತೆಯೇ ಈ ಭಾಗದ ಚರ್ಮವೂ ಅತಿ ಸೂಕ್ಷ್ಮವಾಗಿರುವ ಕಾರಣ ಮೈಸೋಪು ಸಲ್ಲದು. ಬದಲಿಗೆ ಸೌಮ್ಯವಾದ ದ್ರಾವಣ ಅಥವಾ ಇದೇ ಕಾರ್ಯಕ್ಕೆಂದು ಲಭ್ಯವಿರುವ ದ್ರಾವಣಗಳನ್ನು ಬಳಸಬೇಕು. |
ಸೋಪು ಅತಿ ಹೆಚ್ಚು ಕ್ಷಾರೀಯವಾದ ಕಾರಣ ಸೂಕ್ಷ್ಮ ಅಂಗಗಳಲ್ಲಿರುವ ಅಗತ್ಯ ತೇವಾಂಶ ಮತ್ತು ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನೇ ನಿವಾರಿಸಿ ಸೋಂಕು ಹೆಚ್ಚಲು ಕಾರಣವಾಗಬಹುದು. |
ಈ ಅವಧಿಯಲ್ಲಿ ಕೂಡುವುದು |
ಈ ಅವಧಿಯಲ್ಲಿ ಕೂಡುವುದು ಸರ್ವಥಾ ತರವಲ್ಲ. ಪ್ರಾರಂಭ ಮತ್ತು ಕೊನೆಯ ದಿನಗಳಲ್ಲಿ ಅನಿವಾರ್ಯ ಎನಿಸಿದರೆ ಸುರಕ್ಷತೆಯ ವಿಧಾನಗಳನ್ನು ಖಂಡಿತಾ ಅನುಸರಿಸಬೇಕು. ಇದರಿಂದ ಸೋಂಕು ಹರಡದಂತೆ ತಡೆಯಬಹುದು. |
Are You On Your Periods? Then Avoid Doing These Things |
Hormonal changes, light to severe abdominal pain, mood swings and irritation are a few of the major issues faced by women when they are on their period. A feeling of discomfort, weakness and fatigue are some of the conditions which women might experience during their periods. If you follow certain things and ways it he... |
ದಕ್ಷಿಣದ ಎರಡು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ: ಕರ್ನಾಟಕದ ಬಿಜೆಪಿ ನಾಯಕರು ಪ್ರಚಾರ, ಕಾರ್ಯತಂತ್ರದಲ್ಲಿ ಬ್ಯುಸಿ- Kannada Prabha |
Published: 01st March 2021 08:38 AM | Last Updated: 01st March 2021 10:17 AM | A+A A- |
ತಮಿಳು ನಾಡಿನ ವಿಲ್ಲುಪುರಂನಲ್ಲಿ ನಡೆದ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಿ ಟಿ ರವಿ |
ಬೆಂಗಳೂರು: ಕರ್ನಾಟಕದ ಬಿಜೆಪಿ ನಾಯಕರು ಈಗ ವಿಧಾನಸಭೆ ಚುನಾವಣೆ ಏರ್ಪಡುವ ದಕ್ಷಿಣದ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚುನಾವಣಾ ರ್ಯಾಲಿಗಳಿಗೆ ಕಾರ್ಯತಂತ್ರ ರೂಪಿಸುವುದರಿಂದ ಹಿಡಿದು ಸೀಟು ಹಂಚಿಕೆ, ರ್ಯಾಲಿಗಳನ್ನು ಆಯೋಜಿಸುವ ಬಗ್ಗೆ ಮತ್ತು ಸಾರ್ವಜನಿಕ ಸಮಾವೇಶಗಳನ್ನು ನಿಗದಿಪಡಿಸುವ ಕುರಿತು ಪಕ್ಷದಲ್ಲಿ ಕಾರ್ಯನಿರತರಾಗಿದ್ದಾರೆ. |
Subsets and Splits
No community queries yet
The top public SQL queries from the community will appear here once available.