text
stringlengths
0
61.5k
ಕೋಮುಗಲಭೆಗಳಿಂದ ಹತ್ಯೆಯಾಗಿರುವ 9 ಪ್ರಕರಣಗಳಲ್ಲಿ ಈಗಾಗಲೇ ಚಾರ್ಜ್ ಶೀಟ್ ಹಾಗು ಎಫ್ಐಆರ್ ಹಾಕಲಾಗಿದೆ ಎಂದು ತಿಳಿಸಿದ ಅವರು ಈ ಮೂಲಕ 23 ಹಿಂದು ಕಾರ್ಯಕರ್ತರ ಹತ್ಯೆಯಾಗಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ಸುಳ್ಳಾರೋಪಗಳನ್ನು ಮುಂದುವರಿಸಿದರೆ ಬಿಜೆಪಿ ವಿರುದ್ಧ ಕಾನೂನು ಕ್ರಮ : ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರ ನಂತರ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್, ಮತ್ತೆ ಮತ್ತೆ 23 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎನ್ನುವ ಸುಳ್ಳಾರೋಪಗಳನ್ನು ಬಿಜೆಪಿಯವರು ಮುಂದುವರಿಸಿದರೆ ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಗುಂಡೂರಾವ್ ತಿಳಿಸಿದರು. ಬಿಜೆಪಿಯ...
'ಮೇರು ವ್ಯಕ್ತಿತ್ವ, ತತ್ವಾದರ್ಶಗಳ ಪಾಲಕ ಗಾಂಧಿ' | Prajavani
'ಮೇರು ವ್ಯಕ್ತಿತ್ವ, ತತ್ವಾದರ್ಶಗಳ ಪಾಲಕ ಗಾಂಧಿ'
Published: 02 ಅಕ್ಟೋಬರ್ 2019, 19:33 IST
Updated: 02 ಅಕ್ಟೋಬರ್ 2019, 19:33 IST
ಮಾಗಡಿ: 'ಜೀವನದುದ್ದಕ್ಕೂ ಸತ್ಯ, ಅಹಿಂಸೆ ಬೋಧಿಸಿ, ಅದನ್ನೆ ಉಸಿರಾಗಿಸಿಕೊಂಡವರು ಮಹಾತ್ಮ ಗಾಂಧಿ' ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಚನ್ನೇಗೌಡ ಹೇಳಿದರು.
ಇಲ್ಲಿನ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ವತಿಯಿಂದ ಬುಧವಾರ ನಡೆದ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
'ಕೇವಲ ತತ್ವಾದರ್ಶಗಳ ಬೋಧಕರಾಗದೇ ಪಾಲಕರಾದ ಮೇರು ವ್ಯಕ್ತಿತ್ವದ ಗಾಂಧಿ ಹಚ್ಚಿಟ್ಟ ದೀಪದಲ್ಲಿ ಬದುಕು ಕಂಡ ಸಾಧಕರು ಬಹಳ ಇದ್ದಾರೆ. ಇತರರ ಒಳಿತಿಗೆ ದುಡಿಯುವುದೂ ಮುಖ್ಯ ಎಂಬ ಬಾಪೂಜಿ ಅವರ ಮಾತು ಸಾರ್ವಕಾಲಿಕ ಸತ್ಯ. ಯುವನಜನರು ಗಾಂಧಿ ಮತ್ತು ಶಾಸ್ತ್ರಿಯವರ ಬಗ್ಗೆ ತಿಳಿದುಕೊಳ್ಳಬೇಕು' ಎಂದರು.
ಗಣಿತ ಶಿಕ್ಷಕ ಪಿ.ಟಿ.ರಂಗಯ್ಯ ಮಾತನಾಡಿ, 'ಗಾಂಧಿ ಹೋರಾಟದ ಸ್ಫೂರ್ತಿಯಾಗಿದ್ದರು. ಮಾನವ ಹಕ್ಕುಗಳಿಗಾಗಿ ಹೋರಾಡಿದ ಮಾರ್ಟಿನ್‌ ಲೂಥರ್‌ ಕಿಂಗ್‌, ವರ್ಣಬೇಧ ನೀತಿ ವಿರುದ್ದ ಹೋರಾಡಿದ್ದ ನೆಲ್ಸನ್‌ ಮಂಡೇಲಾ, ಅಮೇರಿಕಾದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ಅವರಿಗೂ ಗಾಂಧಿ ಸ್ಪೂರ್ತಿಯಾಗಿದ್ದರು. ಅವರಂತೆ ವಿದ್ಯಾರ್ಥಿಗಳು ಕಠಿಣ ಶ್ರಮದ ಮೂಲಕ ಗುರಿ ಮುಟ್ಟಲು ಶ್ರಮಿಸಬೇಕು' ಎಂದರು.
9ನೆ ತರಗತಿ ವಿದ್ಯಾರ್ಥಿನಿ ವನಜಾ, 8ನೇ ತರಗತಿ ಕುಸುಮ, ಚೈತನ್ಯ, 10ನೇ ತರಗತಿ ಎಸ್‌.ರಂಜಿತ, ಶಿಕ್ಷಕರಾದ ಕಿರಣ್‌, ರಂಜನಿ, ಕುಮಾರ್‌, ಸಿದ್ದಪ್ಪ, ಪೂರ್ಣಿಮಾ, ಚಿಕ್ಕರಂಗಯ್ಯ ಮಾತನಾಡಿದರು. ಗಾಂಧಿ ಮತ್ತು ಶಾಸ್ತ್ರೀ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಕನ್ನಡದ ಬಗ್ಗೆ ಅಭಿರುಚಿ ಮೂಡುವಂತೆ ಮಾಡುವುದೇ ಕನ್ನಡದ ಅಭಿವೃದ್ಧಿ | ಕನ್ನಡ ಕಲಿ Kannada Kali
ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಆ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು. ಬದಲಾಗಿ ಇನ್ನೊಂದು ಭಾಷೆಯನ್ನು ವಿರೋಧಿಸುವುದು, ಅನ್ಯ ಭಾಷೆಯನ್ನಾಡುವ ಜನರನ್ನು ವಿರೋಧಿಸುವುದು ಇದು ನಮಗೆ ನಮ್ಮ ಭಾಷೆ ಮತ್ತು ರಾಜ್ಯದ ಬಗ್ಗೆ ಇರುವ ಭಯವನ್ನು ಸೂಚಿಸುವುದೇ ವಿನಃ ಇದರಿಂದ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ.
*** ವಿವೇಕ್ ಬೆಟ್ಕುಳಿ, ಕುಮಟಾ
ಕನ್ನಡ ಭಾಷೆಯ ಬಗ್ಗೆ ನಾವು ಜಾಗ್ರತವಾಗುವುದು ಒಂದು ಕಾವೇರಿ ನೀರು, ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೆಳನ, ಉಳಿದಂತೆ ಸಭೆ ಸಮಾರಂಭಗಳಲ್ಲಿ ಮಾತ್ರವಾಗಿದೆ. ನಮ್ಮಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಿರಂತರ ಕಟ್ಟುವ ಕಾರ್ಯ ನಡೆದಿಲ್ಲ ಎಂಬುದು ಅಕ್ಷರಶಃ ಸತ್ಯವಾಗಿದೆ.
ನಮ್ಮ ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳಿವೆ ಕನ್ನಡ ಭಾಷೆಯನ್ನು ಏನಾದರೂ ಅಭಿವೃದ್ಧಿ ಪಡಿಸಬೇಕೆಂದರೆ ಮುಂಚೆ ಆ ಶಾಲೆಗಳಿಂದಲೆ ಕಾರ್ಯ ಪ್ರಾರಂಭವಾಗಬೇಕಾಗಿದೆ. ಆದರೇ ದುರಾದೃಷ್ಟವಶಾತ ನಮ್ಮ ಸಕಾ೯ರಿ ಶಾಲೆಗಳ ಬಗ್ಗೆ ನಮಗೆ ನಂಬಿಕೆ ಇಲ್ಲವಾಗಿದೆ. ಕನ್ನಡದ ಬಗ್ಗೆ ಹೋರಾಟ ಮಾಡುವ ಪಕ್ಷ, ಸಂಘಟನೆ, ಕವಿಗಳು, ಸಾಹಿತಿಗಳು, ರಾಜಕಾರಣಿಗಳು ಒಟ್ಟಾರೆ ಭಾಷಣ ಮಾಡುವ ಎಲ್ಲಾ ಅರ್ಹತೆ ಮತ್ತು ...
ಕನ್ನಡ ಮಾಧ್ಯಮದಲ್ಲಿ ನಾನು ವಿಜ್ಞಾನದಲ್ಲಿ ಪದವಿ ಪಡೆಯಲು ಬಯಸಿದರೆ ಅದಕ್ಕೆ ಅವಕಾಶ ಇಲ್ಲ, ಇದ್ದರೆ ಅದಕ್ಕೆ ಯೋಗ್ಯವಾದ ಕನ್ನಡ ಪುಸ್ತಕಗಳಿಲ್ಲ. ದೊಡ್ಡ ದೊಡ್ಡ ಪಟ್ಟಣಕ್ಕೆ ಹೋಗಿ ಯಾವುದೇ ಕಂಪನಿಯಲ್ಲಿ ಕಾರ್ಯನಿರ್ವಹಿಸಲು ಕೇವಲ ಕನ್ನಡ ಸಾಕಾಗುವುದಿಲ್ಲ. ಅನಿವಾರ್ಯವಾಗಿ ನಾವು ಇಂಗ್ಲೀಷ ಭಾಷೆಯನ್ನು ತಬ್ಬಿಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಇಂಗ್ಲೀಷ ಭಾಷೆಯ ಹಿಡಿತದಿಂದ ಅವಕಾಶಗಳು ಹೆಚ್ಚ...
ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ತಿಂಗಳುಗಳ ಕಾಲ ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆಯುವುದು, ಭಾಷೆಯ ಅಭಿವೃದ್ಧಿಗಾಗಿ ದೊಡ್ಡ ದೊಡ್ಡ ಘೋಷಣೆಗಳು ಹೊರಬೀಳುವುದು. ವಿವಿಧ ಭಾಷಣ ಭರವಸೆಗಳ ಮಹಾಪೂರವೇ ಹರಿಯುವುದು. ಈ ಎಲ್ಲಾ ರೀತಿಯ ಕಾರ್ಯಕ್ರಮಗಳಿಂದ ಈ ವರ್ಷದ ಕನ್ನಡ ರಾಜ್ಯೋತ್ಸವ ವಿಜ್ರಂಭಣೆಯಿಂದ ಆಯಿತು ಎಂದು ಹೇಳಬಹುದೇ ವಿನಃ ಕನ್ನಡ ಭಾಷೆಗೆ ಏನು ಪ್ರಯೋಜನ ಆಯಿತು ಎಂಬುದನ್ನು ...
ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯ ಭೋದನೆಯ ಬಗ್ಗೆ ಗಮನಿಸುವ ಅಗತ್ಯವಿದೆ. ನಮ್ಮ ಎಲ್ಲಾ ಕನ್ನಡ ಶಾಲೆಗಳಲ್ಲಿ ಜಗತ್ತಿನ ಎಲ್ಲಾ ಬಗ್ಗೆಯ ಮಾಹಿತಿಗಳು ಕನ್ನಡ ಪುಸ್ತಕದಲ್ಲಿಯೇ ಸಿಗುವಂತಹ ವ್ಯವಸ್ಥೆ ಆಗ ಬೇಕಾಗಿದೆ. ಇಂಗ್ಲೀಷ್, ಹಿಂದಿ ಇತರ ಅನೇಕ ಭಾಷೆಗಳಲ್ಲಿ ಇರುವ ವಿಜ್ಞಾನ, ಗಣಿತ, ಸಾಹಿತ್ಯ, ತಂತ್ರಜ್ಞಾನ ಹೀಗೆ ಎಲ್ಲಾ ಬಗೆಯ ಪುಸ್ತಕಗಳು ಕನ್ನಡಕ್ಕೆ ಅನುವಾದಿಸುವ ಕಾರ್ಯ ಹೆಚ್ಚು ಹೆಚ್ಚ...
ಕನ್ನಡ ತಂತ್ರಾಶದ ಬಗ್ಗೆ ವ್ಯಾಪಕ ಪ್ರಚಾರ, ವಿವಿಧ ಕನ್ನಡ ವೆಬ್ತಾಣಗಳ ರಚನೆ ಆಗಬೇಕಾಗಿದೆ. ಕನ್ನಡ ಬಾವುಟ ಹಾರಿಸುವುದು, ಕೂಗುವುದು, ಎಮ್ಮೆಗಳ ಮೆರವಣಿಗೆ ಮಾಡುವುದು, ಎಡಬಿಡಂಗಿ ರಾಜಕಾರಣಗಳ ಮಾತಿಗೆ ವಿರೋಧ ವ್ಯಕ್ತಪಡಿಸಿ ಹರತಾಳ, ಮೆರವಣಿಗೆ ಮಾಡುವುದು ಇವುಗಳಿಂದ ತಾತ್ಕಾಲಿಕವಾದ ಕನ್ನಡ ಟಿವಿಯಲ್ಲಿ ಸುದ್ದಿ ಬರಬಹುದೇ ವಿನ: ಭಾಷೆಯ ಅಭಿವೃದ್ಧಿ ಖಂಡಿತಾ ಸಾಧ್ಯವಿಲ್ಲ.
Vivek Betkuli
ಮೊದಲು ನಮಗೆ ಕನ್ನದ್ ಬರಬೇಕು
ಹೆಸರಿಲಿ (not verified) Fri, 04/19/2013 - 20:55
ಮೊದಲು ನಮಗೆ ಕನ್ನದ್ ಬರಬೇಕು ಆಮೆಲೆ ನವು ಇನ್ನೊಬ್ಬರಿಗೆ ಕನ್ನದ ಕಲಿಸಬೇಕು ಕನ್ನದ ಬಗ್ಗೆ ಅಭಿಮಾನ್ ಇರಬೆಕು ಕನ್ನದವನ್ನು ವಿರೊದಿಸುವವರಿಗೆ ಸರಿಯಾಗಿ ಸಿಕ್ಸಿಸಬೇಕು ಪ್ರತಿವನ್ದು ಯವದೆ ಕಛೇರಿ ಯಾವುದೆ ಒನ್ದು ಸಾಲೆ ಇರಬಹುದು ಅಲ್ಲಿ ಪ್ರತಿ ವಬ್ಬರು ಕನ್ನದ್ ಮಾತಾದ್ ಬೇಕು. ಜೈ ಹಿನ್ದ್ ಜೈ ಕನ್ನದಾಮ್ಬೆ
ಕನ್ನಡ ಬಾಳ್ಗೆ ಬೆಳಕು
ಹೆಸರಿಲಿ (not verified) Thu, 09/19/2013 - 23:49
ನ‌ಮ್ಮ ಕನ್ನಡ ಭಾಷೆಯನ್ನು ಉಳಿಸಿ, ಬೆಳಸಿ,, ಪೋಷಸುವುದು ನಮ್ಮೆಲ್ಲರ ಹೊಣೆ. ನ‌ನ್ನ‌ ತಾಯಿ ಕ‌ನ್ನ‌ಡಾ0ಬೆಗೆ ಕೋಟಿ ಕೋಟಿ ನ‌ಮ‌ನ‌ಗ‌ಳು..
ಮುಂದಿನ 50 ವರ್ಷ ಬಿಜೆಪಿ ಆಡಳಿತ: ಅಮಿತ್ ಶಾ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Sep 10, 2018, 12:01 PM IST
ಹೊಸದಿಲ್ಲಿ,ಸೆ.10: ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಮುಂದಿನ 50 ವರ್ಷಗಳವರೆಗೆ ಯಾರೂ ಅಧಿಕಾರದಿಂದ ಕೆಳಗಿಳಿಸಲಾಗದು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ರವಿವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, 2019ರ ಚುನಾವಣೆಯಲ್ಲಿ ಬಿಜೆಪಿ ಸಾಧನೆಯ ಆಧಾರದಲ್ಲಿ ಗೆಲ್ಲುತ್ತದೆ ಎಂದು ಹೇಳಿದರು.
ಬಿಜೆಪಿ ಮೋದಿಯವರ ಕಠಿಣ ಪರಿಶ್ರಮದಿಂದಾಗಿ ಗೆಲ್ಲುತ್ತದೆ...ನಂತರ 50 ವರ್ಷ ವರೆಗೆ ಯಾರೂ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲಾಗದು ಎಂದು ಶಾ ಹೇಳಿದ್ದಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
1947ರಲ್ಲಿ ಕಾಂಗ್ರೆಸ್ ಚುನಾವಣೆ ಗೆದ್ದ ಬಳಿಕ 1967ರವರೆಗೆ ಅಧಿಕಾರದಲ್ಲಿ ಉಳಿಯಿತು. ಅದೇ ಸಾಧನೆಯನ್ನು ಪುನರಾವರ್ತಿಸುವ ಸರದಿ ಇದೀಗ ಭಾರತೀಯ ಜನತಾ ಪಕ್ಷದ್ದು ಎಂದು ಶಾ ವಿವರಿಸಿದರು.
ಮೇ 20ರಂದು 7ನೇ ಇಯತ್ತೆ ಪರೀಕ್ಷಾ ಫಲಿತಾಂಶ ಪ್ರಕಟ | ThatsKannada.com - 7th std results to be announced on May 20 - Kannada Oneindia
ಮೇ 20ರಂದು 7ನೇ ಇಯತ್ತೆ ಪರೀಕ್ಷಾ ಫಲಿತಾಂಶ ಪ್ರಕಟ
ಬೆಂಗಳೂರು : ಏಳನೇ ಇಯತ್ತೆಯ ಸಾರ್ವತ್ರಿಕ ಪರೀಕ್ಷಾ ಫಲಿತಾಂಶ ಬಹುತೇಕ ಮೇ 20ರಂದು ಪ್ರಕಟವಾಗಲಿದೆ ಎಂದು ಪರೀಕ್ಷಾ ವಿಭಾಗದ ಸಾರ್ವಜನಿಕ ಸಲಹಾ ನಿರ್ದೇಶಕಿ ಜಿ.ಮೀನಾಕ್ಷಿ ತಿಳಿಸಿದ್ದಾರೆ.
ರಾಜ್ಯಾದ್ಯಂತ 8.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 5,035 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಫಲಿತಾಂಶ ಒದಗಿಸುವ ನಿಟ್ಟಿನಲ್ಲಿ ಅಂತಿಮ ಹಂತದ ಕೆಲಸಗಳು ಸಮರೋಪಾದಿಯಲ್ಲಿ ಸಾಗಿವೆ. ಎಲ್ಲವೂ ಅಂದುಕೊಂಡಂತೆ ಸಲೀಸಾಗಿ ಮುಗಿದರೆ, ಮೇ 20ಕ್ಕೆ ರಾಜ್ಯಾದ್ಯಂತ ಆಯಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಮೀನಾಕ್ಷಿ ಹೇಳಿದರು.
ಉಕ್ರೇನ್‌ನಿಂದ ಭಾರತೀಯರನ್ನು ತಾಯ್ನಾಡಿಗೆ ಸ್ಥಳಾಂತರಿಸಲು ಆರಂಭಿಸಿರುವ ಆಪರೇಷನ್ ಗಂಗಾ ಪಾಲುದಾರರ ಜತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವರ್ಚುವಲ್ ಸಂವಾದ
ಯುದ್ಧಗ್ರಸ್ಥ ಉಕ್ರೇನ್ ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತ ಸರ್ಕಾರ ಆರಂಭಿಸಿರುವ 'ಆಪರೇಷನ್ ಗಂಗಾ' ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಪಾಲುದಾರರ ಜತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಸಂವಾದ ನಡೆಸಿದರು. ಗಂಗಾ ಕಾರ್ಯಾಚರಣೆಯು ಇದುವರೆಗೆ ಉಕ್ರೇನ್‌ನಿಂದ ಸುಮಾರು 23,000 ಭಾರತೀಯ ನಾಗರಿಕರನ್ನು ಮತ್ತು 18 ದೇಶಗಳಿಗೆ ಸೇರ...
ಆಪರೇಷನ್ ಗಂಗಾ ಕಾರ್ಯಾಚರಣೆಯ ಭಾಗವಾಗಿರುವ ಉಕ್ರೇನ್, ಪೋಲೆಂಡ್, ಸ್ಲೊವಾಕಿಯಾ, ರೊಮೇನಿಯಾ ಮತ್ತು ಹಂಗೇರಿಯಲ್ಲಿನ ಭಾರತೀಯ ಸಮುದಾಯ ಮತ್ತು ಖಾಸಗಿ ವಲಯದ ಪ್ರತಿನಿಧಿಗಳು ತಮ್ಮ ಅನುಭವಗಳು, ಎದುರಿಸಿದ ಸವಾಲುಗಳನ್ನು ಪ್ರಧಾನಿ ಅವರೊಂದಿಗೆ ಸಂವಾದದಲ್ಲಿ ಹಂಚಿಕೊಂಡರು. ಅಲ್ಲದೆ, ಸಂಕೀರ್ಣ ಮಾನವೀಯ ಕಾರ್ಯಾಚರಣೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕೆ ಆಗಿರುವ ತೃಪ್ತಿ, ಗೌರವ ಮತ್ತು ನೈಜ ಕ...
ಕಾರ್ಯಾಚರಣೆಯ ಯಶಸ್ಸಿಗೆ ಅವಿರತ ಶ್ರಮಿಸಿದ ಭಾರತೀಯ ಸಮುದಾಯದ ಮುಖಂಡರು, ಸ್ವಯಂಸೇವಕ ಗುಂಪುಗಳು, ಕಂಪನಿಗಳು, ಖಾಸಗಿ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಅವರು ಆತ್ಮೀಯ ಮೆಚ್ಚುಗೆ ಮತ್ತು ಶ್ಲಾಘನೆ ವ್ಯಕ್ತಪಡಿಸಿದರು. ಆಪರೇಷನ್ ಗಂಗಾದಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರು ಪ್ರದರ್ಶಿಸಿದ ದೇಶಭಕ್ತಿಯ ಉತ್ಸಾಹ, ಸಮುದಾಯ ಸೇವೆಯ ಪ್ರಜ್ಞೆ ಮತ್ತು ತಂಡದ ಮನೋಭಾವವನ್ನು ಅವ...
ರಷ್ಯಾ-ಉಕ್ರೇನ್ ಯುದ್ಧ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ ಖಾತ್ರಿಪಡಿಸಲು ಭಾರತ ಸರ್ಕಾರವು ಮಾಡಿದ ಸಂಘಟಿತ ಪ್ರಯತ್ನಗಳ ಕುರಿತು ಮಾತನಾಡಿದ ಪ್ರಧಾನಿ, ಉಕ್ರೇನ್ ಮತ್ತು ಅದರ ನೆರೆಹೊರೆಯ ರಾಷ್ಟ್ರಗಳ ನಾಯಕರೊಂದಿಗೆ ನಿರಂತರ ವೈಯಕ್ತಿಕ ಸಂವಾದ ನಡೆಸಿದ್ದನ್ನು ಸ್ಮರಿಸಿದರು. ಎಲ್ಲಾ ವಿದೇಶಿ ಸರ್ಕಾರಗಳಿಂದ ಪಡೆದ ಬೆಂಬಲಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.
ಹೊರರಾಷ್ಟ್ರಗಳಲ್ಲಿರುವ ಭಾರತೀಯರ ಸುರಕ್ಷತೆಗೆ ಭಾರತ ಸರ್ಕಾರವು ಸದಾ ಆದ್ಯತೆ ನೀಡುತ್ತಾ ಬಂದಿದೆ ಎಂದು ಪುನರುಚ್ಚರಿಸಿದ ಪ್ರಧಾನಿ, ಯಾವುದೇ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತ ತನ್ನ ನಾಗರಿಕರಿಗೆ ಸಹಾಯ ಮಾಡಲು ನಿರಂತರ ನಿಷ್ಠೆ ತೋರುತ್ತಾ ಬಂದಿದೆ ಎಂದು ಸ್ಮರಿಸಿದರು. 'ವಸುಧೈವ ಕುಟುಂಬಕಂ'ನ ಭಾರತದ ಪ್ರಾಚೀನ ತತ್ತ್ವಶಾಸ್ತ್ರದಲ್ಲೇ ಮುನ್ನಡೆಯುತ್ತಾ ಬಂದಿರುವ ಭಾರತವು ತುರ್ತು ಸ...
ಪರ್ಯಾಯ ಇಂಧನದ ಪಯಣ 'ಸನ್ ಟ್ರಿಪ್' | Prajavani
ಪರ್ಯಾಯ ಇಂಧನದ ಪಯಣ 'ಸನ್ ಟ್ರಿಪ್'
ಜಕ್ಕಣಕ್ಕಿ ಎಂ ದಯಾನಂದ
ಜಗತ್ತಿನ ಮೊಟ್ಟಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ 'ಸೋಲಾರ್‌ ಇಂಪಲ್ಸ್‌–2' ವಿಮಾನ ವಿಶ್ವ ಪರ್ಯಟನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಗೊತ್ತಿರುವ ಸಂಗತಿ. 16 ತಿಂಗಳ ಅವಧಿಯಲ್ಲಿ ಇದು ಒಟ್ಟು 42 ಸಾವಿರ ಕಿ.ಮೀ ಸಂಚರಿಸಿತ್ತು. ಈ ವೇಳೆ ನಾಲ್ಕು ಖಂಡಗಳು (ಏಷ್ಯಾ, ಉತ್ತರ ಅಮೆರಿಕ, ಯೂರೋಪ್‌ ಮತ್ತು ಆಫ್ರಿಕಾ) ಎರಡು ಮಹಾಸಾಗರಗಳು ಮತ್ತು ಮೂರು ಸಮುದ್ರಗಳ ಮೇಲೆ ಹಾರಾಟ ನಡೆಸಿತ್ತು.
ಶಕ್ತಿಯ ಮೂಲವಾದ ಸೂರ್ಯನ ಶಕ್ತಿಯ ಬಗ್ಗೆ ವಿಶ್ವದ ಗಮನ ಸೆಳೆಯಲು 'ಸೋಲಾರ್‌ ಇಂಪಲ್ಸ್‌' ನಡೆಸಿದ ಹಾರಾಟ ಯಶಸ್ವಿ ಪರ್ಯಟನೆ ಮಾಡಿ ಹೊಸ ಮೈಲುಗಲ್ಲು ಸಾಧಿಸಿದೆ. ಬರಿದಾಗುವ ಸಂಪನ್ಮೂಲಗಳ ಬಗ್ಗೆ ಅರಿವು ಮೂಡಿಸುವ ಚಟುವಟಿಕೆಗಳು ವಿಶ್ವದಾದ್ಯಂತ ನಡೆಯುತ್ತಲೇ ಇರುತ್ತವೆ.
ಹೀಗೆ ಸೌರಶಕ್ತಿ ಪ್ರಾಮುಖ್ಯವನ್ನು ಜಗತ್ತಿಗೆ ಸಾರುವ ಪ್ರಯಾಣವೊಂದು 2010 ರಿಂದ ನಡೆಯುತ್ತಿದೆ. ಇದು 'ಸನ್ ಟ್ರಿಪ್‌' ಹೆಸರಿನ ಸೌರಶಕ್ತಿ ಫಲಕಗಳನ್ನು ಹೊಂದಿರುವ ವಾಹನಗಳ ಪ್ರಯಾಣ. ಈ ಪಯಣದಲ್ಲಿ ಸ್ಪರ್ಧಿಗಳು ಸೋಲಾರ್ ಚಾಲಿತ ಪರಿಸರ ಸ್ನೇಹಿ ವಾಹನಗಳ ರಾಯಭಾರಿಗಳಂತೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಾರೆ.
ತಮ್ಮ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಗುರಿ ಮುಟ್ಟುತ್ತಾರೆ. ಇವರ ವಾಹನದ ಎಂಜಿನ್‌ಗಳು ಬ್ಯಾಟರಿಚಾಲಿತವಾಗಿದ್ದರೂ ಅವುಗಳಿಗೆ ಶಕ್ತಿ ಬರುವುದು ಮಾತ್ರ ಸೂರ್ಯನಿಂದ. ಬೆಟ್ಟ, ಗುಡ್ಡ, ಇಳಿಜಾರು, ಬಿಸಿಲು, ಮಳೆ, ಚಳಿ ಎನ್ನದೆ ಸಾಗುತ್ತಾರೆ. 2018ರ ಸನ್‌ಟ್ರಿಪ್‌ ಜೂನ್ 17 ರಂದು ಆರಂಭವಾಗಿದ್ದು, ರೇಷ್ಮೆ ಮಾರ್ಗದ (Silk Route) ಮೂಲಕ ಸಾಗುತ್ತಿದೆ.
ಎಲ್ಲರೂ ಇರುತ್ತಾರೆ: ಈ ಸನ್‌ಟ್ರಿಪ್‌ ಸ್ಪರ್ಧೆಯಲ್ಲಿ ಎಲ್ಲ ರೀತಿಯ ಜನರೂ ಭಾಗವಹಿಸುತ್ತಾರೆ. ಹೊಸಬರು, ಹಳಬರು, ಅನುಭವ ಇದ್ದವರು, ಇಲ್ಲದವರು, ಕ್ರೀಡಾಪಟುಗಳು, ಅಂಗವೈಕಲ್ಯವನ್ನು ಮೆಟ್ಟಿನಿಂತವರು.. ಹೀಗೆ ಈ ಪಯಣದಲ್ಲಿ ವೈವಿದ್ಯ ತುಂಬಿರುತ್ತದೆ. ಈ ವೈವಿಧ್ಯವೇ ಈ ಸಾಹಸಯಾತ್ರೆಯ ಯಶಸ್ಸಿನ ಗುಟ್ಟು ಎಂದು ಸ್ಪರ್ಧಿಯೊಬ್ಬರು ಅಭಿಪ್ರಾಯಪಡುತ್ತಾರೆ.
2018ರ ಸನ್‌ಟ್ರಿಪ್‌ನ ನಿಯಮಗಳು: ಈ ವರ್ಷದ ಸನ್‌ಟ್ರಿಪ್‌ನಲ್ಲಿ ಈ ಹಿಂದಿಗಿಂತ ಒಂದಷ್ಟು ಹೆಚ್ಚಿನ ನಿಯಮಗಳನ್ನು ವಿಧಿಸಲಾಗಿದೆ. ಇವು ಈ ಪಯಣವನ್ನು ಇನ್ನಷ್ಟು ಸುಲಭಗೊಳಿಸಲು, ಸ್ಪರ್ಧಿಗಳಿಗೆ ಸುರಕ್ಷತೆ ಒದಗಿಸಲು ವಿಧಿಸಲಾದ ನಿಬಂಧನೆಗಳು. ಟ್ರಿಪ್‌ನಲ್ಲಿ ಭಾಗವಹಿಸುವವರು ಸೋಲಾರ್ ಎಲೆಕ್ಟ್ರಿಕ್‌ ಬೈಸಿಕಲ್‌ ಮೇಲೆಯೇ ಸಾಗಬೇಕು.
ಅವರ ವಾಹನದ ಬ್ಯಾಟರಿಯನ್ನು ಸೂರ್ಯನ ಶಕ್ತಿಯಿಂದಲೇ ಚಾರ್ಜ್‌ ಮಾಡಿಕೊಳ್ಳಬೇಕು. ಒಂದು ವೇಳೆ ಸ್ಪರ್ಧಿಗಳು ಬೇರೆ ಯಾವುದಾದರೂ ಶಕ್ತಿಮೂಲದಿಂದ ಬ್ಯಾಟರಿಗಳನ್ನು ಚಾರ್ಜ್ ಮಾಡಿದರೆ ಅವರನ್ನು ಟ್ರಿಪ್‌ನಿಂದಲೇ ಹೊರ ಹಾಕಲಾಗುತ್ತದೆ. ತುರ್ತು ಸಂದರ್ಭದಲ್ಲಿ ಬಳಸಲು ಮಾತ್ರವೇ ವಾಲ್‌ ಚಾರ್ಜರ್‌ ಅನ್ನು ಬಳಸಲು ಅವಕಾಶವಿದೆ. ಇದನ್ನು ಟ್ರಿಪ್ ಸಂಯೋಜಕರು ಸೀಲ್ ಮಾಡಿರುತ್ತಾರೆ. ಕದ್ದುಮುಚ್ಚಿ ಬಳಸುವಂತೆ ಇಲ್...
ನಿಗದಿತ ಸ್ಥಳದಿಂದ ಪ್ರಯಾಣ ಆರಂಭವಾದರೆ ಇಂಥದ್ದೇ ಮಾರ್ಗದಲ್ಲಿ ಸಾಗಬೇಕು ಎಂಬ ನಿಯಮವೇನೂ ಇಲ್ಲ. ಪ್ರತಿ ಸ್ಪರ್ಧಿ ತಾನು ಯಾವ ದೇಶದ ಮೂಲಕ ಸಾಗಬೇಕು ಎಂಬುದನ್ನು ಅವರೇ ತೀರ್ಮಾನಿಸಿಕೊಳ್ಳಬಹುದು. ಸ್ಪರ್ಧಿಗಳು ಯಾವ ದೇಶಗಳನ್ನು ಹಾದು ಹೋಗುತ್ತಾರೊ ಅಲ್ಲಿಯ ವೀಸಾಗಳನ್ನು ಹೊಂದಿರಬೇಕು.
ಮ್ಯಾಪ್‌ನಲ್ಲಿ ಮೊದಲೇ ತೋರಿಸಿದಂತೆ ಯಾವುದೇ ಭಾಗದಲ್ಲಿನ ನಿಷೇಧಿತ ಸ್ಥಳಗಳ ಮೂಲಕ ಸಾಗಬಾರದು. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಅವರನ್ನೂ ಸ್ಪರ್ಧೆಯಿಂದ ಹೊರಹಾಕಲಾಗುವುದು.
ಯಾವುದೇ ಸಹಾಯ ಸಿಗುವುದಿಲ್ಲ: ಸನ್‌ಟ್ರಿಪ್‌ ಎಂತಹುದೇ ದುರ್ಗಮ ಮಾರ್ಗದಲ್ಲಿ ಸಾಗಿದರೂ ಯಾವ ಸಹಾಯಕರು ನೆರವಿಗೆ ಬರುವುದಿಲ್ಲ ಮತ್ತು ವಾಹನಗಳೂ ಹಿಂದೆ ಬರುವುದಿಲ್ಲ. ಅವರು ಸಾಗುವ ದಾರಿಯಲ್ಲಿ ಎದುರಾಗುವ ಊರಿನ ಜನರಿಂದ ನೆರವು ಯಾಚಿಸಬಹುದು ಮತ್ತು ವಾಹನಗಳ ಬಿಡಿಭಾಗಗಳನ್ನು ಪಡೆದುಕೊಳ್ಳಬಹುದು.
ಸಣ್ಣ ಬ್ಲೂಟೂತ್‌ ರೇಡಿಯೊ ಟ್ರಾನ್ಸ್‌ಮೀಟರ್ ಒಯ್ಯಲು ಅವಕಾಶವಿದೆ. ಇದು ಪದೇ ಪದೇ ಸಿಗ್ನಲ್‌ಗಳನ್ನು ನೀಡುತ್ತಿರುತ್ತದೆ. ತುರ್ತು ಸಂದರ್ಭದಲ್ಲಿ ಇದು ನೆರವಾಗುತ್ತದೆ. ಸನ್‌ಟ್ರಿಪ್‌ನಲ್ಲಿ ಭಾಗವಹಿಸುವವರು ಪರಸ್ಪರ ಮತ್ತೊಬ್ಬರಿಗೆ ನೆರವಾಗಬೇಕು.
ಈ ಬಾರಿಯೂ (2018) ಸನ್‌ಟ್ರಿಪ್‌ನಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 7 ರವರೆಗೆ (ಸ್ಥಳೀಯ ಕಾಲಮಾನ) ಪ್ರಯಾಣ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇತರೆ ವಾಹನಗಳಿಗೆ ತೊಂದರೆಯಾಗದಿರಲಿ ಎಂಬ ಕಾರಣದಿಂದ ಈ ನಿಯಮ ಮೊದಲ ಟ್ರಿಪ್‌ನಿಂದಲೂ ಜಾರಿಯಲ್ಲಿದೆ.
ಅಲ್ಲದೆ ಸಾಹಸಿಗರು ಸರಿಯಾದ ಪ್ರಮಾಣದಲ್ಲಿ ನಿದ್ದೆ, ವಿಶ್ರಾಂತಿ ಪಡೆಯಬೇಕಿರುವುದರಿಂದ ರಾತ್ರಿ ಪ್ರಯಾಣಕ್ಕೆ ಅನುಮತಿ ಇಲ್ಲ. ಸಾಗುವ ದಾರಿಯಲ್ಲಿ ಸಿಗುವ ಸ್ಥಳೀಯರೊಂದಿಗೆ ಸಂವಹನ ನಡೆಸಬೇಕು. ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಆಯೋಜಕರು ಬಯಸುತ್ತಾರೆ.
ವಿಜೇತರ ಘೋಷಣೆ: ಸೌರಶಕ್ತಿಯಿಂದ ತಮ್ಮ ವಾಹನದ ಬ್ಯಾಟರಿಯನ್ನು ಚಾರ್ಜ್‌ ಮಾಡಿಕೊಂಡು ನಿಗದಿತ ಗುರಿಯನ್ನು ಮುಟ್ಟಿದವರನ್ನು ಸ್ಪರ್ಧೆಯ ವಿಜೇತರು ಎಂದು ಘೋಷಿಸಲಾಗುತ್ತದೆ. ನವೀಕರಿಸಬಹುದಾದ ಇಂಧನದ ಬಗ್ಗೆ ಅವರಿಗಿರುವ ಜ್ಞಾನ, ಸಾಮರ್ಥ್ಯ ಇತ್ಯಾದಿಗಳನ್ನೂ ಗೆಲುವಿಗೆ ಪರಿಗಣಿಸಲಾಗುತ್ತದೆ.
2018ರ ಚೀನಾದ ಲಿಯೋನ್‌ನಿಂದ ಕಾಂಟನ್‌ವರೆಗೆ ನಡೆಯುತ್ತಿರುವ100 ದಿನಗಳ ಸನ್ ಟ್ರಿಪ್‌ನಲ್ಲಿ ಕೊನೆ ಗುರಿ ಗುವಾಂಜೌಗೆ ಮೊದಲು ಬಂದು ತಲುಪುವರರನ್ನು ವಿಜೇತರು ಎಂದು ಪರಿಗಣಿಸಲಾಗುತ್ತದೆ.
ಕರ್ನಾಟಕ ಶಿಕ್ಷಣ ನಗರವಾಗಿದೆ, ಇಲ್ಲಿ ಬಂದ್ರೆ ಭವಿಷ್ಯ ಸಿಗುತ್ತೆ: ಸಚಿವ ಡಾ.ಅಶ್ವಥ್ ನಾರಾಯಣ - Tv5 Kannada
ಕರ್ನಾಟಕ ಶಿಕ್ಷಣ ನಗರವಾಗಿದೆ, ಇಲ್ಲಿ ಬಂದ್ರೆ ಭವಿಷ್ಯ ಸಿಗುತ್ತೆ: ಸಚಿವ ಡಾ.ಅಶ್ವಥ್ ನಾರಾಯಣ
ಬೆಂಗಳೂರು: ಭಾರತ ಸರ್ಕಾರ ಒಂದು ವಾರ ಕಾಲ ಸ್ಟಾರ್ಟ್‌ಅಪ್ ದಿನ ಆಚರಣೆ ‌ಮಾಡ್ತಿದೆ. ಮೋದಿ ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನ ಅಂತ ಘೋಷಣೆ ಮಾಡಿದ್ದಾರೆ. ಇದು ದೇಶಕ್ಕೆ ಹೆಚ್ಚು ಶಕ್ತಿ ನೀಡಿದಂತಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಸ್ಟಾರ್ಟ್‌ಅಪ್ ವಿಜನ್ ಆರಂಭವಾಗಿತ್ತು. ಸ್ನೇಹಮಯವಾದ ವಾತಾವರಣ ನಮ್ಮ ಇಲಾಖೆಯಲ್ಲಿ ಆಗುತ್ತಿದೆ. 2021ರಲ್ಲಿ 1 ಲಕ್ಷದ 60 ಸಾವಿರ ಕೋಟಿ ಬಂಡವಾಳ ಭಾರತಕ್ಕೆ ಬಂದಿದೆ. ಇದರಲ್ಲಿ ಶೇ.30ಕ್ಕೂ ಹೆಚ್ಚು ಬಂಡವಾಳ ನಮ್ಮ ರಾಜ್ಯಕ್ಕೆ ಬಂದಿದೆ. ಭಾರತದ ಶಕ್ತಿ ವಿಶ್ವದಲ್ಲಿ ಹೆಚ್ಚಾಗಿದೆ.
46 ಪ್ರಶಸ್ತಿಗಳ ಪೈಕಿ 16 ಪ್ರಶಸ್ತಿ ನಮ್ಮ ರಾಜ್ಯಕ್ಕೆ ಬಂದಿವೆ. ಶೇ.30ರಷ್ಟು ಪ್ರಶಸ್ತಿಗಳು ನಮ್ಮ ರಾಜ್ಯಕ್ಕೆ ಬಂದಿವೆ. ಇದು ಖುಷಿ ಪಡುವ ವಿಚಾರ. ಮುಂದಿನ 25 ವರ್ಷದಲ್ಲಿ ವಿಶ್ವಗುರುವಾಗಬೇಕು. ಅದು ಸ್ಟಾರ್ಟ್‌ಅಪ್ ಮೂಲಕವಾಗಬೇಕು. ಇದು ಮೋದಿ ಆಶಯ. ಆ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ.
ಎಲ್ಲ ವಲಯದಲ್ಲಿ ಸ್ಟಾರ್ಟ್‌ಅಪ್​ಗಳು ಪ್ರಾರಂಭವಾಗಿವೆ. 150ಕ್ಕೂ ಹೆಚ್ಚು ಸ್ಟಾರ್ಟ್‌ಅಪ್​ಗಳಿಗೆ ನಾವು ಬಂಡವಾಳ ನೀಡಿದ್ದೇವೆ.
ದೇಶದಲ್ಲಿ57 ಸಾವಿರ ಸ್ಟಾರ್ಟ್‌ಅಪ್ ಇವೆ. ನಮ್ಮಲ್ಲಿ 13 ಸಾವಿರ ಸ್ಟಾರ್ಟ್‌ಅಪ್ ಇವೆ. ಎಲ್ಲರಿಗೂ ಶಿಕ್ಷಣ ಬೇಕು. ಅದು ನಮ್ಮ ರಾಜ್ಯದಲ್ಲಿ ಆಗುತ್ತಿದೆ. ಕರ್ನಾಟಕ ಶಿಕ್ಷಣ ನಗರವಾಗಿದೆ, ಇಲ್ಲಿ ಬಂದ್ರೆ ಭವಿಷ್ಯ ಸಿಗುತ್ತೆ. ಇಂತಹ ವಾತಾವರಣ ದೇಶದಲ್ಲಿ ನಿರ್ಮಾಣವಾಗಿದೆ. ವಿಶ್ವ ಕೂಡ ಕರ್ನಾಟಕದತ್ತ ನೋಡುತ್ತಿದೆ. ವಿಶ್ವ ದರ್ಜೆಯ ಸಂಸ್ಥೆಗಳು‌ ನಮ್ಮಲ್ಲಿ ಆಗುವ ಪ್ರಯತ್ನ ನಡೆಯುತ್ತಿವೆ. ಯುವಕರ ಸಬಲೀ...
ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಲು ಬರಲಿವೆ ಫೋಕ್ಸ್‌ವ್ಯಾಗನ್ ನಿರ್ಮಾಣದ ಮತ್ತಷ್ಟು ಹೊಸ ಕಾರುಗಳು - Kannada DriveSpark
ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಲು ಬರಲಿವೆ ಫೋಕ್ಸ್‌ವ್ಯಾಗನ್ ನಿರ್ಮಾಣದ ಮತ್ತಷ್ಟು ಹೊಸ ಕಾರುಗಳು
Updated: Monday, December 25, 2017, 17:42 [IST]
ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ಕಾರುಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಮತ್ತು ಹ್ಯುಂಡೈ ಇಂಡಿಯಾ ಸಂಸ್ಥೆಯನ್ನು ಹಿಂದಿಕ್ಕಲು ಫೋಕ್ಸ್‌ವ್ಯಾಗನ್ ಬೃಹತ್ ಯೋಜನೆ ರೂಪಿಸಿದ್ದು, ಮುಂಬರುವ ದಿನಗಳಲ್ಲಿ ಹೊಸ ಹೊಸ ನಮೂನೆಯ ಮಧ್ಯಮ ಗಾತ್ರದ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಕಾರು ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆಯಿದ್ದು, ಈ ವಿಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಇಂಡಿಯಾ ಸಂಸ್ಥೆಗಳು ಮುನ್ನಡೆ ಸಾಧಿಸುತ್ತಿವೆ. ಇದರಿಂದ ಭಾರತೀಯ ಗ್ರಾಹಕರನ್ನ ತನ್ನತ್ತ ಸೆಳೆಯುವಂತೆ ಮಾಡಲು ಮುಂದಾಗಿರುವ ಫೋರ್ಕ್ಸ್‌ವ್ಯಾಗನ್ ಮಹತ್ವದ ಯೋಜನೆಗಳನ್ನು ರೂಪಿಸಿದೆ.
ಪ್ರತಿಷ್ಠಿತ ಸುದ್ದಿಸಂಸ್ಥೆಯಾದ ಇಟಿ ಆಟೋ ಜಾಲತಾಣ ಮಾಡಿರುವ ವರದಿ ಪ್ರಕಾರ ಫೋರ್ಕ್ಸ್‌ವ್ಯಾಗನ್ ಸಂಸ್ಥೆಯು ಮುಂದಿನ 5 ವರ್ಷಗಳ ಯೋಜನೆಗಾಗಿ ಬರೋಬ್ಬರಿ 7,600 ಕೋಟಿ ಬೃಹತ್ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಸಣ್ಣ ಕಾರುಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ.
ಹೀಗಾಗಿ ಕಾರು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಪುಣೆ ಬಳಿ ಹೊಸದೊಂದು ಕಾರು ಉತ್ಪಾದನಾ ಘಟಕವನ್ನು ತೆರೆಯುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಜೊತೆ ಜೊತೆಗೆ ಅಗ್ಗದ ಕಾರುಗಳ ಉತ್ಪಾದನೆಯ ಉದ್ದೇಶ ಹೊಂದಿದೆ.
ಜೊತೆಗೆ ಈ ಹಿಂದೆ ಟಾಟಾ ಮೋಟಾರ್ಸ್ ಜೊತೆಗಿನ ಒಪ್ಪಂದವನ್ನು ಕೈಬಿಟ್ಟಿರುವ ಫೋಕ್ಸ್‌ವ್ಯಾಗನ್ ಇದೀಗ ಸ್ಕೋಡಾ ಇಂಡಿಯಾ ಜೊತೆಗೆ ಕೈಜೋಡಿಸಿದ್ದು, ಸ್ಕೋಡಾ ಜೊತೆಗೂಡಿ ಅಗ್ಗದ ಬೆಲೆಗಳಲ್ಲೇ ಉತ್ತಮ ಕಾರುಗಳ ಉತ್ಪಾದನೆ ಸಹಾಯ ಪಡೆಯಲಿದೆ.
ಈ ಮೂಲಕ ಭಾರತೀಯ ಗ್ರಾಹಕರು ಇಷ್ಟಪಡುವ ಕಡಿಮೆ ಬೆಲೆಯ ಉತ್ತಮ ಕಾರುಗಳನ್ನು ಅಭಿವೃದ್ದಿಪಡಿಸಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಇಂಡಿಯಾ ಸಂಸ್ಥೆಗಳಿಗೆ ತೀವ್ರ ಪೈಪೋಟಿಗಿಳಿಯುವ ಉದ್ದೇಶವಿದ್ದು, ಹೊಸ ಕಾರುಗಳನ್ನು MQB-A0 ಪ್ಲಾಟ್‌ಫಾರ್ಮ್ ಆಧಾರದ ಮೇಲೆ ಉತ್ಪಾದನೆ ಮಾಡಲಿದೆ.
ಕಳೆದ 15 ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಪ್ರಿಯಮಂ ಕಾರು ಉತ್ಪನ್ನಗಳ ಮೂಲಕ ತನ್ನದೇ ಬೇಡಿಕೆ ಕಾಯ್ದುಕೊಂಡಿರುವ ಫೋಕ್ಸ್‌ವ್ಯಾಗನ್ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಮುಗ್ಗರಿಸುತ್ತಿದೆ. ಹೀಗಾಗಿ ಆಟೋ ಮಾರುಕಟ್ಟೆಯ ಸನ್ನಿವೇಶಗಳನ್ನು ಅಧ್ಯಯನ ಮಾಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಸದ್ಯದಲ್ಲೇ ಮಧ್ಯಮ ವರ್ಗಗಳನ್ನು ಸೆಳೆಯಬಲ್ಲ ಹೊಸ ಹೊಸ ನಮೂನೆಯ ಕಾರುಗಳನ್ನು ಬಿಡುಗಡೆ ಮಾಡುವ ತವಕದಲ್ಲಿ...
ಪೇಸ್-ವಿಷ್ಣು, ಮಹೇಶ್-ರೋಹನ್ ಜೋಡಿ | Prajavani
ಪೇಸ್-ವಿಷ್ಣು, ಮಹೇಶ್-ರೋಹನ್ ಜೋಡಿ
ನವದೆಹಲಿ (ಪಿಟಿಐ): ಮಹೇಶ್ ಭೂಪತಿ ತಗಾದೆ ತೆಗೆದ ನಂತರ ಲಂಡನ್ ಒಲಿಂಪಿಕ್ಸ್‌ಗೆ ಪುರುಷರ ಡಬಲ್ಸ್ ಟೆನಿಸ್ ತಂಡ ರಚಿಸುವಲ್ಲಿ ಉಂಟಾಗಿದ್ದ ಸಮಸ್ಯೆಗೆ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಪರಿಹಾರ ಕಂಡುಕೊಂಡಿದ್ದು, ಎರಡು ಡಬಲ್ಸ್ ಜೋಡಿಯನ್ನು ಹೊಂದಿಕೆ ಮಾಡಿದೆ.
ದೇಶದ ಅಗ್ರ ಕ್ರಮಾಂಕದ ಆಟಗಾರ ಲಿಯಾಂಡರ್ ಪೇಸ್‌ಗೆ ಯುವ ಟೆನಿಸ್ ತಾರೆ ವಿಷ್ಣುವರ್ಧನ್ ಅವರನ್ನು ಜೊತೆ ಮಾಡಲಾಗಿದೆ. ಮಹೇಶ್ ಭೂಪತಿ ಜೊತೆಗೆ ಆಡಲಿರುವುದು ರೋಹನ್ ಬೋಪಣ್ಣ ಎಂದು ಎಐಟಿಎ ಗುರುವಾರ ನಿರ್ಧಾರ ಪ್ರಕಟಿಸಿದೆ. ಇದಕ್ಕೆ ಯಾವುದೇ ಆಟಗಾರರಿಂದ ಆಕ್ಷೇಪ ಬರುವುದಿಲ್ಲ ಎನ್ನುವ ವಿಶ್ವಾಸವನ್ನೂ ಟೆನಿಸ್ ಸಂಸ್ಥೆ ಹೊಂದಿದೆ.
ಭೂಪತಿ ಹಾಗೂ ಪೇಸ್ ನಡುವಣ ವೈಯಕ್ತಿಕ ಅಸಮಾಧಾನದ ಕಾರಣ ಪುರುಷರ ಡಬಲ್ಸ್ ತಂಡವನ್ನು ಎಐಟಿಎ ತಾನು ಬಯಸಿದಂತೆ ರಚಿಸಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ ರೋಹನ್ ಕೂಡ ಪೇಸ್ ಜೊತೆಗೆ ಆಡಲು ಒಪ್ಪದ ಕಾರಣ ಬೇರೆ ಮಾರ್ಗ ಹುಡುಕುವುದು ಅನಿವಾರ್ಯವಾಯಿತು.
ಲಿಯಾಂಡರ್ ಆಕ್ಷೇಪದ ನಡುವೆಯೂ ಅವರಿಗೆ ವಿಶ್ವ ರ‌್ಯಾಂಕಿಂಗ್‌ನಲ್ಲಿ 207ನೇ ಸ್ಥಾನದಲ್ಲಿರುವ ವಿಷ್ಣುವರ್ಧನ್ ಅವರನ್ನು ಜೊತೆಗಾರನನ್ನಾಗಿ ಮಾಡಲಾಗಿದೆ. ಈ ಮೊದಲು ಕಿರಿಯ ಆಟಗಾರರೊಂದಿಗೆ ಆಡುವುದಿಲ್ಲ ಹಾಗೂ ಒಲಿಂಪಿಕ್‌ನಿಂದ ಹಿಂದೆ ಸರಿಯುತ್ತೇನೆಂದು ಬೆದರಿಕೆ ಹಾಕಿದ್ದ ಪೇಸ್ ಕೂಡ ಅಸಮಾಧಾನದೊಂದಿಗೇ ಎಐಟಿಎ ತೀರ್ಮಾನಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಭೂಪತಿ ಹಾಗೂ ಬೋಪಣ್ಣ ನಡೆದುಕೊಂಡ ರೀತಿಯ ಬಗ್ಗೆ ಬೇಸರಗೊಂಡಿರುವ ಟೆನಿಸ್ ಸಂಸ್ಥೆಯು ಶಿಸ್ತು ಕ್ರಮ ಕೈಗೊಳ್ಳುವ ಯೋಚನೆ ಮಾಡಿದೆ. ಅಷ್ಟೇ ಅಲ್ಲ `ದೇಶದ ಮೊದಲ ಕ್ರಮಾಂಕ ಹೊಂದಿದ ಆಟಗಾರ(ಲಿಯಾಂಡರ್)ನಿಗೆ ಅನ್ಯಾಯವಾಗಿದೆ~ ಎಂದು ಕೂಡ ಎಐಟಿಎ ಅಧ್ಯಕ್ಷ ಅನಿಲ್ ಖನ್ನಾ ಒಪ್ಪಿಕೊಂಡಿದ್ದಾರೆ.
ಮೂರು ಪರಿಹಾರ ಮಾರ್ಗಗಳ ಬಗ್ಗೆ ಯೋಚನೆ ಮಾಡಿದ್ದ ಎಐಟಿಎ ಮೊದಲ ಎರಡು ಸೂಕ್ತ ಎನಿಸುವ ಹಾಗೂ ಪದಕ ಗೆಲ್ಲುವ ಸಾಧ್ಯತೆ ಹೆಚ್ಚಿಸುವಂಥವು ಎಂದುಕೊಂಡಿತ್ತು. ಆದರೆ ರೋಹನ್ ಕೂಡ ಪೇಸ್ ಜೊತೆಗೆ ಆಡಲು ಒಪ್ಪದ ಕಾರಣ ಕೊನೆಯಲ್ಲಿ ಮೂರನೇ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಯಿತು. `ಇದನ್ನು ಎಲ್ಲರೂ ಒಪ್ಪುತ್ತಾರೆನ್ನುವ ವಿಶ್ವಾಸವಿದೆ~ ಎಂದು ಖನ್ನಾ ಅವರು ಇಲ್ಲಿ ನಡೆದ ತುರ್ತು ಸಭೆಯ ನಂತರ ಸ...
ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್(ಐಟಿಎಫ್)ಗೆ ಪ್ರವೇಶಗಳನ್ನು ಕಳುಹಿಸಲು ಗುರುವಾರವೇ ಕೊನೆಯ ದಿನವಾಗಿದ್ದರಿಂದ ಅವಸರದಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಯಿತು. ಅದಕ್ಕೂ ಮೊದಲೇ ಎಲ್ಲ ಆಟಗಾರರ ಜೊತೆಗೆ ಖನ್ನಾ ಖುದ್ದಾಗಿ ಮಾತನಾಡಿದ್ದರು. `ಇದೊಂದೇ ದಾರಿ~ ಎಂದು ಕೂಡ ಮನವರಿಕೆ ಮಾಡಿಕೊಟ್ಟಿದ್ದಾರೆ.
ಪದಕ ಗೆಲ್ಲುವಂಥ ಒಂದು ಗಟ್ಟಿ ತಂಡವನ್ನು ಕಟ್ಟಿ ಕಳುಹಿಸುವ ಬದಲು ಹೆಚ್ಚು ಆಟಗಾರರು ಇರುವ ತಂಡ ರಚಿಸಲಾಗಿದೆ ಎನ್ನುವ ಬೇಸರ ಟೆನಿಸ್ ಸಂಸ್ಥೆಯನ್ನೂ ಕಾಡುತ್ತಿದೆ. ಆದರೂ ಅದು `ಈಗ ಹೊಂದಿಸಿರುವ ಡಬಲ್ಸ್ ಆಟಗಾರರಿಂದ ಪದಕ ಬರಬಹುದು~ ಎನ್ನುವ ಆಶಯವನ್ನಂತೂ ಹೊಂದಿದೆ.
ಸೋಮದೇವ್ ದೇವವರ್ಮನ್ ತಾವು ದೈಹಿಕವಾಗಿ ಆಡಲು ಸಜ್ಜಾಗಿರುವುದಾಗಿ ಹೇಳಿದರೂ ಅವರನ್ನು ಪುರುಷರ ಡಬಲ್ಸ್‌ಗೆ ಎಐಟಿಎ ಪರಿಗಣಿಸಲಿಲ್ಲ. ಬದಲಿಗೆ ಈಗ ದೇಶದಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ವಿಷ್ಣುಗೆ ಮಣೆ ಹಾಕಿದೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಸಾನಿಯಾ ಮಿರ್ಜಾಗೆ ವೈಲ್ಡ್ ಕಾರ್ಡ್ ಸಿಗಬಹುದು ಎನ್ನುವ ನಿರೀಕ್ಷೆ ಇದೆ. ಒಂದು ವೇಳೆ ಬಯಸಿದಂತೆ ಸಾನಿಯಾಗೆ ಅರ್ಹತೆ ಸಿಕ್ಕರೆ ಪೇಸ್ ಜೊತೆಗೆ ಮಿಶ್ರ ಡಬಲ್ಸ್‌ನಲ್ಲಿ ಜೋಡಿಯಾಗಿ ಆಡುತ್ತಾರೆಂದು ಎಐಟಿಎ ಈಗಾಗಲೇ ಸ್ಪಷ್ಟಪಡಿಸಿದೆ.
ಆದರೂ ಮಿಶ್ರ ಡಬಲ್ಸ್‌ನಲ್ಲಿ ಮಹೇಶ್‌ಗೆ ಆಡುವ ಅವಕಾಶ ಸಿಗಬೇಕು ಎನ್ನುವುದು ಮಹೇಶ್ ತಂದೆ ಕೃಷ್ಣ ಭೂಪತಿ ಅಭಿಪ್ರಾಯ. ಅವರ ಈ ಹೇಳಿಕೆಗೆ ಎಐಟಿಎ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ. ಸಾನಿಯಾ ಅಂತೂ ಯಾರ ಜೊತೆಗಾದರೂ ಮಿಶ್ರ ಡಬಲ್ಸ್‌ನಲ್ಲಿ ಆಡುವುದಕ್ಕೆ ಸಿದ್ಧ ಎಂದು ಈ ಮೊದಲೇ ಹೇಳಿರುವ ಕಾರಣ ಯೋಚನೆ ಮಾಡುವ ಅಗತ್ಯವಂತೂ ಇಲ್ಲವಾಗಿದೆ.
ದೊಡ್ಡ ಕನಸೊಂದು ನನಸಾದ ಸಂತಸ. ಇಂಥದೊಂದು ಸಾಧ್ಯತೆಯ ಆಶಯ ಹೊಂದಿದ್ದೆ -ವಿಷ್ಣುವರ್ಧನ್
ರೋಹನ್ ಬೋಪಣ್ಣ ಜೊತೆಗೆ ಆಡಲು ಉತ್ಸಾಹಿತನಾಗಿದ್ದೇನೆ. ನನಗೆ ಮಾತ್ರವಲ್ಲ ರೋಹನ್‌ಗೂ ಹೀಗೆ ಅನಿಸಿರುವುದು ಸಹಜ -ಮಹೇಶ್ ಭೂಪತಿ
ಇದೊಂದು ಸಮಾಧಾನಕರ ಪರಿಹಾರ ಮಾರ್ಗ. ಆದರೆ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಜೊತೆಗೆ ಮಹೇಶ್ ಆಡುವುದು ಸೂಕ್ತ
-ಕೃಷ್ಣ ಭೂಪತಿ (ಮಹೇಶ್ ತಂದೆ)
ಯಾರ ಜೊತೆಗಾದರೂ ಮಿಶ್ರ ಡಬಲ್ಸ್‌ನಲ್ಲಿ ಆಡುವುದಕ್ಕೆ ಸಿದ್ಧ. ಎಐಟಿಎ ಕೈಗೊಂಡ ನಿರ್ಣಯಕ್ಕೆ ಆಕ್ಷೇಪವಿಲ್ಲ -ಸಾನಿಯಾ ಮಿರ್ಜಾ
ಮೂರು ಪರಿಹಾರ ಮಾರ್ಗಗಳ ಬಗ್ಗೆ ಯೋಚನೆ ಮಾಡಿ. ಕೊನೆಯಲ್ಲಿ ಮೂರನೆಯದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದನ್ನು ಎಲ್ಲರೂ ಒಪ್ಪುತ್ತಾರೆನ್ನುವ ವಿಶ್ವಾಸವಿದೆ -ಅನಿಲ್ ಖನ್ನಾ (ಎಐಟಿಎ ಅಧ್ಯಕ್ಷ)
'); $('#div-gpt-ad-98994-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-98994').addClass('inartprocessed'); } else $('#in-article-98994').hide(); } else { _taboola.push({article:'auto', url:'https://www.prajavani.net/article/ಪೇಸ್-ವಿಷ್ಣು-ಮಹೇಶ್-ರೋಹನ್-ಜೋಡಿ...