text
stringlengths
0
61.5k
166 ಟೆಸ್ಟ್ ಪಂದ್ಯಗಳಲ್ಲಿ 55.56 ಸರಾಸರಿಯಂತೆ 13,447 ರನ್ ಗಳಿಸಿರುವ ಸಚಿನ್ , 442 ಏಕದಿನ ಪಂದ್ಯಗಳಲ್ಲಿ 45.12 ಸರಾಸರಿಯಂತೆ 17598 ರನ್ ಗಳಿಸಿದ್ದಾರೆ. ಕ್ರಿಕೆಟ್ ರಂಗದಲ್ಲಿ ಕಾಲಿರಿಸಿ 20 ವರ್ಷವಾದರೂ 37 ವರ್ಷದ ಸಚಿನ್ ಅವರ ಉತ್ಸಾಹ ಕುಗ್ಗಿಲ್ಲ.
ಲತಾ ಮಂಗೇಷ್ಕರ್, ಕಿಶೋರ್ ಕುಮಾರ್ ಹಾಡುಗಳನ್ನು ಸದಾ ಕೇಳುವ ಸಚಿನ್, ಟ್ವೀಟ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಸಚಿನ್ ಅವರ ಟ್ವೀಟ್ ಗಳು ಇಂಗ್ಲೀಷ್ ಭಾಷೆಯಲ್ಲಿದ್ದೂ, ಮರಾಠಿ ಮಾನುಸ್ ಗಳ ಕಣ್ಣಿಗೆ ಬಿದ್ದು, ಮರಾಠಿ ಬಳಸುವಂತೆ ಫತ್ವಾ ಹೊರಡಿಸಿದರೆ ಅಚ್ಚರಿಯೇನಿಲ್ಲ.
ಸಚಿನ್ ತೆಂಡೂಲ್ಕರ್ ಎಂಎಸ್ ಧೋನಿ ಟ್ವಿಟ್ಟರ್ ಯುವರಾಜ್ ಸಿಂಗ್ ಕ್ರಿಕೆಟ್ sachin tendulkar twitter mahendra singh dhoni yuvraj singh
ವೈಕುಂಠ ಏಕಾದಶಿ: ವಾಹನ ಸಂಚಾರ ಬದಲಾವಣೆ | Prajavani
ವೈಕುಂಠ ಏಕಾದಶಿ: ವಾಹನ ಸಂಚಾರ ಬದಲಾವಣೆ
ಬೆಂಗಳೂರು: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ಇಸ್ಕಾನ್ ಸುತ್ತಮುತ್ತಲ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು ರಸ್ತೆಯಿಂದ ಪಶ್ಚಿಮ ಕಾರ್ಡ್ ರಸ್ತೆ ಕಡೆಗೆ ಬರುವ ವಾಹನಗಳು ಸಾಬೂನು ಕಾರ್ಖಾನೆ ವೃತ್ತ, ಡಾ.ರಾಜ್‌ಕುಮಾರ್ ರಸ್ತೆ ಮೂಲಕ ಹತ್ತನೇ ಅಡ್ಡರಸ್ತೆಯಲ್ಲಿ ಸಾಗಿ ಬಲ ತಿರುವು ಪಡೆದು ರಾಜಾಜಿನಗರ ಒಂದನೇ ಬ್ಲಾಕ್ ಮುಖಾಂತರ ಬರಬೇಕು. ನವರಂಗ್ ವೃತ್ತದ ಕಡೆಯಿಂದ ಬರುವ ವಾಹನಗಳು ಡಾ.ರಾಜ್‌ಕುಮಾರ್ ರಸ್ತೆ, ಹತ್ತನೇ ಅಡ್ಡರಸ್ತೆಯಲ್ಲಿ ಎಡಕ್ಕೆ ತಿರುಗಿ ರಾಜಾಜಿನಗರ ಒಂದನೇ ಬ್ಲಾಕ್‌ಗೆ ಬಂದು ಬಲ ತಿರುವ...
ಇಸ್ಕಾನ್‌ಗೆ ಬರುವ ಗಣ್ಯ ವ್ಯಕ್ತಿಗಳ ವಾಹನಗಳ ನಿಲುಗಡೆಗೆ ಜಿಕೆಡಬ್ಲ್ಯೂ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳು ಹಾಗೂ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಮಹಾಲಕ್ಷ್ಮಿಲೇ ಔಟ್ ಆಟದ ಮೈದಾನದಲ್ಲಿ ಅವಕಾಶ ವಿದೆ ಎಂದು ಮಾಹಿತಿ ನೀಡಿದ್ದಾರೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತಾದಿಗಳು ಇಸ್ಕಾನ್‌ಗೆ ಬರುವುದರಿಂದ ವಾಹನ ದಟ್ಟಣೆ ಹೆಚ್ಚಿ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಅಲ್ಲದೇ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಮೆಟ್ರೊ ರೈಲು ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಪೊಲೀಸರು ಮನವಿ ಮಾಡಿದ್ದಾರೆ.
2021ರ ನೀಟ್ ಪರೀಕ್ಷೆ ಮುಂದೂಡಿದ ಕೇಂದ್ರ ಸರ್ಕಾರ – Zoomin Tv
in ರಾಷ್ಟ್ರೀಯ, ಶಿಕ್ಷಣ
ಈ ಹಿಂದೆ ನೀಟ್ ಪರೀಕ್ಷೆ ಏಪ್ರಿಲ್ 18 ರಂದು ನಿಗದಿಯಾಗಿತ್ತು, ಆದರೆ ಇದನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಶೀಘ್ರ ನಿಗದಿಪಡಿಸಲಾಗುವುದು, ನಮ್ಮ ಯುವ ವೈದ್ಯಕೀಯ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ವಿಟರ್‍ ನಲ್ಲಿ ಬರೆದುಕೊಂಡಿದ್ದಾರೆ.
ಅಸ್ಪೃಶ್ಯತೆ ನಿವಾರಣೆ ಅನುಮಾನ | Prajavani
ದಲಿತ ಲೇಖಕರ ಕೃತಿ ಬಿಡುಗಡೆಯಲ್ಲಿ ಚಿಂತಕ ಚಂದ್ರಶೇಖರ್ ತಾಳ್ಯ
Published: 20 ಜನವರಿ 2019, 21:50 IST
Updated: 20 ಜನವರಿ 2019, 21:50 IST
ಚಿತ್ರದುರ್ಗ: ಜಾತಿ ವ್ಯವಸ್ಥೆ ಇರುವಂಥ ನಮ್ಮ ದೇಶದಲ್ಲಿ ಅಸ್ಪೃಶ್ಯತೆ ಹಿಂದೆಯೂ ಇತ್ತು. ಮುಂದೆಯೂ ಇರುತ್ತದೆ. ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂಬ ಅನುಮಾನ ಕಾಡುತ್ತಿದೆ ಎಂದು ಚಿಂತಕ ಚಂದ್ರಶೇಖರ್ ತಾಳ್ಯ ಹೇಳಿದರು.
ತರಾಸು ರಂಗಮಂದಿರದಲ್ಲಿ ಭಾನುವಾರ ದಲಿತ ಲೇಖಕರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
'ದಲಿತರಿಗೆ ಒಂದು ಲೋಟ ನೀರು ಕೊಡುವುದಿಲ್ಲ, ಕ್ಷೌರಕ್ಕೂ ಅಲೆದಾಡುತ್ತಿದ್ದಾರೆ ಎಂದರೆ ಮನುಷ್ಯ-ಮನುಷ್ಯರ ನಡುವಿನ ವರ್ತನೆ ಬಗ್ಗೆ ಬೇಸರ ಉಂಟಾಗುತ್ತಿದೆ. ಮಾನವೀಯತೆ ಕುರಿತು ಒಲವು ಇರುವಂಥ ಯಾವ ವ್ಯಕ್ತಿಯೂ ಈ ರೀತಿ ನಡೆದುಕೊಳ್ಳಲಾರ. ಆದರೆ, ಕೆಲವರು ಅದನ್ನೇ ಮರೆತು ಸಮಾನತೆಯ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಮನುಷ್ಯ ಜನಾಂಗವನ್ನು ಮೇಲೆತ್ತುವ ಸಲುವಾಗಿ ಇಡೀ ಮಾನವ ಕುಲಕ್ಕೆ ಅನ್ವಯಿಸುವಂತೆ ಉತ್ತಮ ಚಿಂತನೆ ಕೊಟ್ಟ ಮಹನೀಯರೆಂದರೆ ಡಾ. ಅಂಬೇಡ್ಕರ್, ಬಾಬು ಜಗಜೀವನರಾಂ. ಆದರೆ, ಅವರ ಆದರ್ಶಗಳನ್ನು ಪಾಲಿಸದೇ ಇರುವುದರಿಂದ ಈಗಲೂ ದಲಿತರು ಕಷ್ಟಗಳನ್ನು ಎದುರಿಸುವಂತಾಗಿದೆ' ಎಂದು ವಿಷಾದಿಸಿದರು.
'ಜಗಜೀವನರಾಂ, ಗಾಂಧೀಜಿ ಈ ದೇಶದ ಎರಡು ಕಣ್ಣುಗಳಾಗಿದ್ದು, ಇಬ್ಬರೂ ಶಾಂತಿದೂತರು. ಅದೇ ರೀತಿ ಶಿವನಿಗೆ ಇದ್ದಂತೆ ಮೂರನೇ ಕಣ್ಣೂ ಒಂದಿದೆ. ಅವರೇ ಡಾ. ಅಂಬೇಡ್ಕರ್. ಸವರ್ಣೀಯರ ಧೋರಣೆ ಎಂದಿಗೂ ಬದಲಾಗದು ಎಂದು ಸದಾ ಅವರ ನಡವಳಿಕೆ ವಿರುದ್ಧ ಸಿಟ್ಟಿನಿಂದಲೇ ಪ್ರತಿಕ್ರಿಯಿಸುತ್ತಿದ್ದರು. ಅವರ ಮಾತು ಇಂದಿಗೂ ನಿಜವಾಗಿದೆ' ಎಂದರು.
'ದಲಿತ ಸಂವೇದನೆಯನ್ನು ಮತ್ತು ಲೇಖಕರನ್ನು ಅರ್ಥ ಮಾಡಿಕೊಳ್ಳಬೇಕಾದ್ದು, ಯುವ ಜನರು ಹಾಗೂ ವಿದ್ಯಾರ್ಥಿ ಸಮೂಹ. ಆದರೆ, ಅವರೇ ಬಂದಿಲ್ಲ. ಇಂತಹ ಕಾರ್ಯಕ್ರಮ ಪದವಿ ಅಥವಾ ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಆಯೋಜಿಸುವುದೇ ಉತ್ತಮ' ಎಂದು ಅಭಿಪ್ರಾಯಪಟ್ಟರು.
'ನಮ್ಮ ದೇಶದಲ್ಲಿ ದಲಿತ ಲೇಖಕರಲ್ಲಿ ಇರುವಂಥ ಪ್ರಜ್ಞೆ ಮತ್ತು ಆಳ ಬಹುಶಃ ಯಾವ ಮೇಲ್ವರ್ಗದ ಲೇಖಕರಿಗೂ ಬರಲಿಕ್ಕೆ ಸಾಧ್ಯವಿಲ್ಲ. ಕಾರಣ ದಲಿತ ಲೇಖಕರ ಸಂವೇದನೆಯಲ್ಲಿ ದುಃಖ, ದುಮ್ಮಾನ, ಸಂಕಟಗಳಿರುತ್ತವೆ. ಅವುಗಳನ್ನು ಅನುಭವಿಸುತ್ತಲೇ ಬರವಣಿಗೆ ಮೂಲಕ ಸಮಾಜವನ್ನು ಉತ್ತಮ ಮಾರ್ಗದೆಡೆಗೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ' ಎಂದರು.
'ದಲಿತ ಸಮುದಾಯದವರಷ್ಟು ಹೆಚ್ಚು ನೋವು, ಕಷ್ಟಗಳನ್ನು ಬೇರೆ ಯಾವ ಸಮುದಾಯ ಅನುಭವಿಸಲಿಕ್ಕೆ ಸಾಧ್ಯವಿಲ್ಲ ಎಂಬುದು ನನ್ನ ಭಾವನೆ. ಪ್ರಸ್ತುತ ದಿನಗಳಲ್ಲೂ ಅಂತಹ ನೋವು-ಸಂಕಟಗಳಿಗೆ ತುತ್ತಾಗುತ್ತಿರುವುದು ದಲಿತರು ಎಂಬುದೇ ವಿಷಾದದ ಸಂಗತಿ' ಎಂದು ತಿಳಿಸಿದರು.
'ದಲಿತ ಸಮುದಾಯದವರು ಹುಟ್ಟಿನಿಂದಲೇ ಕಲಾವಿದರು. ಅವರು ಯಾವ ವೃತ್ತಿಯನ್ನೇ ಮಾಡುತ್ತಿರಲಿ ಕಾಯಕ ಮರೆಯುವುದಿಲ್ಲ. ಇದಕ್ಕಾಗಿಯೇ ಸೃಜನಾತ್ಮಕ, ಪ್ರಜ್ಞಾತ್ಮಕ ಜೀವಿಗಳಾಗಿ ನಮಗೆ ಕಾಣುತ್ತಾರೆ' ಎಂದರು.
ದಲಿತ ಲೇಖಕರು ಎಲ್ಲ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ದಾಖಲಿಸುವ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಜತೆಗೆ ಇನ್ನಷ್ಟೂ ಪರಿಣಾಮಕಾರಿಯಾಗಿ ಚಿಂತಿಸಿ ಬದಲಾವಣೆ ತರಬೇಕಾದ ಅಗತ್ಯವೂ ಇದೆ ಎಂದು ಅಭಿಪ್ರಾಯಪಟ್ಟರು.
ಜನಪದ ತಜ್ಞ ಮೀರಾಸಾಬಿಹಳ್ಳಿ ಶಿವಣ್ಣ, ಪ್ರಾಧ್ಯಾಪಕರು ಮತ್ತು ಚಿಂತಕರಾದ ಎನ್.ಎಸ್. ಮಹಂತೇಶ್, ರಂಗನಾಥ್, ಡಾ. ಗೋವಿಂದರಾವ್, ವಸಂತಕುಮಾರ್, ಹನುಮೇಶ್ ಅವರೂ ಇದ್ದರು.
ಟಿಪ್ಪು ಜನ್ಮದಿನ ವಿರೋಧಿಸಿ ನ.10ರಂದು ಕೊಡಗು-ಚಿತ್ರದುರ್ಗ ಬಂದ್ ಕರೆದ ಬಿಜೆಪಿ, ಮದ್ಯದ ವಿಷಯದಲ್ಲಿ ಸಿದ್ದರಾಮಯ್ಯನವರ ದ್ವಂದ್ವ ನೀತಿ, ಇಂಗ್ಲೆಂಡ್ ಪ್ರಧಾನಿ ಬಳಿ ಸಿಎಂ ಮನವಿ ಏನು?, ಟೆಸ್ಟ್ ಪಂದ್ಯಕ್ಕೆ ಹಣ ನೀಡಲು ಸುಪ್ರೀಂ ಸಮ್ಮತಿ | Digital Kannada
Home ಸುದ್ದಿಸಂತೆ ಟಿಪ್ಪು ಜನ್ಮದಿನ ವಿರೋಧಿಸಿ ನ.10ರಂದು ಕೊಡಗು-ಚಿತ್ರದುರ್ಗ ಬಂದ್ ಕರೆದ ಬಿಜೆಪಿ, ಮದ್ಯದ ವಿಷಯದಲ್ಲಿ ಸಿದ್ದರಾಮಯ್ಯನವರ ದ್ವಂದ್ವ...
ಟಿಪ್ಪು ಜನ್ಮದಿನ ವಿರೋಧಿಸಿ ನ.10ರಂದು ಕೊಡಗು-ಚಿತ್ರದುರ್ಗ ಬಂದ್ ಕರೆದ ಬಿಜೆಪಿ, ಮದ್ಯದ ವಿಷಯದಲ್ಲಿ ಸಿದ್ದರಾಮಯ್ಯನವರ ದ್ವಂದ್ವ ನೀತಿ, ಇಂಗ್ಲೆಂಡ್ ಪ್ರಧಾನಿ ಬಳಿ ಸಿಎಂ ಮನವಿ ಏನು?, ಟೆಸ್ಟ್ ಪಂದ್ಯಕ್ಕೆ ಹಣ ನೀಡಲು ಸುಪ್ರೀಂ ಸಮ್ಮತಿ
Former, Chief Minister, B.S.Yediyurappa with others stage protest against Tippu Jayanthi Celebrations at Maurya Circle in Bengaluru on Tuesday.
ನವೆಂಬರ್ 10 ರಂದು ಟಿಪ್ಪು ಸುಲ್ತಾನ್ ಜನ್ಮದಿನ ಆಚರಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮಂಗಳವಾರ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು.
ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಿಸುವ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ಭಾರತೀಯ ಜನತಾ ಪಕ್ಷ ಮಂಗಳವಾರ ಬೀದಿಗಿಳಿದಿತ್ತು. 'ಟಿಪ್ಪು ಜಯಂತಿ ಆಚರಣೆ ದಿನವೇ ಕೊಡಗು- ಚಿತ್ರದುರ್ಗ ಬಂದ್ ಕರೆ ನೀಡಲಾಗಿದೆ. ಅಂದು ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸಿಎಂ ಸಿದ್ದರಾಮಯ್ಯನವರೆ ಕಾರಣ' ಎಂದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ.
ಟಿಪ್ಪು ಜನ್ಮದಿನ ಆಚರಣೆ ವಿರೋಧಿಸಿ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಭಾಗಿಯಾಗಿದ್ದು, 'ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸುತ್ತೇವೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಕೋಮು ಸೌಹಾರ್ದ ಕದಡುತ್ತಿರುವ ಕೆಎಫ್ ಡಿ ಮತ್ತು ಪಿಎಫಐ ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ' ಎಂದರು. ಈ ವೇಳೆ ಮಾತನಾಡಿದ ಯ...
'ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನವೆಂಬರ್ 10ರಂದು ಧ್ವಜ ಸತ್ಯಾಗ್ರಹ ಮತ್ತು ಜೈಲ್ ಭರೋ ಚಳವಳಿ ಮೂಲಕ ಪ್ರತಿಭಟನೆ ಮಾಡುತ್ತೇವೆ. ಅಲ್ಲದೆ ಅಂದು ಕೊಡಗು-ಚಿತ್ರದುರ್ಗ ಬಂದ್ ಕರೆ ನೀಡಿದ್ದೇವೆ. ಅಂದು ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಹೊಣೆ. ಸಂಶೋಧಕ ಚಿದಾನಂದ ಮೂರ್ತಿ, ಚಂದ್ರಶೇಖರ ಕಂಬಾರರು ಸಹ ಸರ್ಕಾರದ ನಿರ್ಧಾರಕ...
900 ಮದ್ಯದಂಗಡಿಗೆ ಪರವಾನಿಗೆ ನೀಡಿ, ಈಗ ಕುಡಿಬೇಡ್ರಿ ಎನ್ನುತ್ತಿದ್ದಾರೆ ಸಿಎಂ
'ನೀವು ದುಡಿದ ಹಣವನ್ನು ಕುಡಿದು ಹಾಳು ಮಾಡಬೇಡಿ. ಹಣವನ್ನು ಉಳಿಸಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ವೈದ್ಯರು, ಇಂಜಿನಿಯರ್ ಮತ್ತು ರಾಜಕಾರಣದಲ್ಲಿ ದುಡಿಯುವಂತೆ ಮಾರ್ಗದರ್ಶನ ನೀಡಿ…' ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೌರ ಕಾರ್ಮಿಕರಿಗೆ ಬಿಸಿಯೂಟ ನೀಡುವ ಯೋಜನೆಗೆ ಚಾಲನೆ ನೀಡುತ್ತಾ ಹೇಳಿದ ಕಿವಿಮಾತು. ಈ ಕಿವಿ ಮಾತು ಹೇಳುವ ಮುನ್ನ ಇತ್ತೀಚೆಗೆ ತಮ್ಮ ಸರ್ಕಾರ ಎಂಎಸ್ಐಎಲ್ ಮೂಲಕ ರಾ...
ಇದೇ ಸಂದರ್ಭದಲ್ಲಿ 'ಮುಂದಿನ ವರ್ಷ ಮಾರ್ಚ್ ತಿಂಗಳ ಒಳಗಾಗಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲಾಗುವುದು' ಎಂಬ ಭರವಸೆಯನ್ನು ನೀಡಿದರು ಸಿಎಂ. ಇವರ ಸೇವೆ ಖಾಯಂಗೊಳ್ಳುವುದರಿಂದ ವೇತನ ಹೆಚ್ಚಳವಾಗುವುದಲ್ಲದೆ, ಸರ್ಕಾರಿ ಸೌಲಭ್ಯಗಳು ಸಿಗಲಿವೆ.
ಇಂಗ್ಲೆಂಡ್ ಪ್ರಧಾನಿ ಜತೆ ಸಿಎಂ ಭೇಟಿ
ಸದ್ಯ ಭಾರತದ ಪ್ರವಾಸದಲ್ಲಿರುವ ಇಂಗ್ಲೆಂಡ್ ಪ್ರಧಾನಿ ಥೆರೆಸ್ಸಾ ಮೇ ಅವರು ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಬಂಡವಾಳ ಹೂಡಿಕೆ ವಿಚಾರವಾಗಿ ಅವರಲ್ಲಿ ಮನವಿ ಮಾಡಿಕೊಂಡ್ರು. ಬಂಡವಾಳ ಹೂಡಿಕೆಗೆ ಕರ್ನಾಟಕ ದೇಶದಲ್ಲೇ ಅತ್ಯಂತ ಪ್ರಶಸ್ತ ರಾಜ್ಯ. ಹೀಗಾಗಿ ಐಟಿ, ಬಿಟಿ, ವಿಮಾನಯಾನ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಬಂ...
ಮೊದಲ ಟೆಸ್ಟ್ ಪಂದ್ಯಕ್ಕೆ ₹ 58.66 ka'f ಹಣ ಬಿಡುಗಡೆ ಮಾಡುವಂತೆ ಸುಪ್ರೀಂ ಸೂಚನೆ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಆಯೋಜನೆಗಾಗಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಗೆ ₹ 58.66 ಕೋಟಿ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಅನುಮತಿ ನೀಡಿದೆ. ಲೋಧಾ ಸಮಿತಿ ಶಿಫಾರಸ್ಸು ಅಳವಡಿಸಿಕೊಳ್ಳುವವರೆಗೂ ಯಾವುದೇ ಕಾರಣಕ್ಕೆ ರಾಜ್ಯ ಸಂಸ್ಥೆಗಳಿಗೆ ನಯಾ ಪೈಸೆ ಬಿಡುಗಡೆ ಮಾಡಬಾರದು ಎಂದು ಸೂಚನೆ ನೀಡಲಾಗಿತ್ತು. ಅಲ್ಲದೆ ಬಿಸಿಸಿಐ ಆರ್ಥಿಕ ವ್ಯವಹಾರವನ್ನು ತನ್ನ ವಶಕ್ಕ...
ಬೆಂಗಳೂರಿನಲ್ಲಿ ಕನಕದಾಸ ಜಯಂತಿಯಲ್ಲಿ ಭಾಗವಹಿಸಿದ್ದ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಪದ್ಮಾವತಿ ಅವರು ಕನಕದಾಸರ ಪ್ರತಿಮೆಗೆ ಹೂವಿನ ಹಾರಹಾಕಿ ಗೌರವ ಸೂಚಿಸಿದ್ದು ಹೀಗೆ.
ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಡಿಕ್ಸ್ ವಿಲ್ಲೆ, ನ್ಯೂ ಹ್ಯಾಂಪ್ ಶೈರ್ ಪಟ್ಟಣಗಳಲ್ಲಿ ನಡೆದ ಚುನಾವಣೆಯಲ್ಲಿ ಹಿಲರಿ 4-2 ಅಂತರದಿಂದ ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಿದ್ದಾರೆ.
ದೆಹಲಿಯ ಯುವ ಬ್ಯಾಟ್ಸ್ ಮನ್ ರಿಶಬ್ ಪಂತ್ ದೇಶಿ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದಿದ್ದಾನೆ. ಪ್ರತಿಷ್ಠಿತ ರಣಜಿ ಟೂರ್ನಿಯಲ್ಲಿ ಜಾರ್ಖಂಡ್ ವಿರುದ್ಧ ಕೇವಲ 48 ಎಸೆತಗಳಲ್ಲಿ ಶತಕ ಬಾರಿಸಿದ್ದು, ಆ ಮೂಲಕ ಭಾರತದ ದೇಶಿಯ ಕ್ರಿಕೆಟ್ ಪಂದ್ಯದಲ್ಲಿ ವೇಗದ ಶತಕ ಬಾರಿಸಿದ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಈ ಸಮಸ್ಯೆ ಬಗೆಹರಿಸಲು ಎರಡು ದಿನಗಳಲ್ಲಿ ಉತ್ತಮ ಕಾರ್ಯಯೋಜನೆಯನ್ನು ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಮಧ್ಯೆ ಹೆಲಿಕಾಪ್ಟರ್ ಗಳ ಮೂಲಕ ಕೃತಕ ಮಳೆಯನ್ನು ಸುರಿಸಿ ಇದರ ಪ್ರಮಾಣ ತಗ್ಗಿಸಿ ಹಾಗೂ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳನ್ನು ಏಳು ದಿನಗಳ ಕಾಲ ...
Previous articleಶ್ಯಾಮ್ ಬೆನಗಲ್ ಸಮಿತಿ ಶಿಫಾರಸ್ಸು ಒಪ್ಪಿದ ಸೆನ್ಸಾರ್ ಮಂಡಳಿ, ಹಾಗಾದ್ರೆ ಇನ್ಮುಂದೆ ಚಿತ್ರಗಳಿಗೆ ಕತ್ತರಿ ಬೀಳಲ್ವಾ?
Next articleಮಧ್ಯರಾತ್ರಿಯಿಂದ 500 ಮತ್ತು 1000 ರು. ನೋಟುಗಳ ರದ್ದು, ಕಪ್ಪು ಹಣ, ನಕಲಿ ನೋಟು, ಭ್ರಷ್ಟಾಚಾರ ತಡೆಗೆ ಪ್ರಧಾನಿ ಮೋದಿ ದಿಟ್ಟ ಹೆಜ್ಜೆ!
ಯಡಿಯೂರಪ್ಪ ನಾಳೆ ಪ್ರಮಾಣವಚನ ಸ್ವೀಕಾರ ಮಾಡ್ತಾರಾ? | Karnataka Results will yeddyurappa become chief minister? - Kannada Oneindia
ಯಡಿಯೂರಪ್ಪ ನಾಳೆ ಪ್ರಮಾಣವಚನ ಸ್ವೀಕಾರ ಮಾಡ್ತಾರಾ?
ಬೆಂಗಳೂರು, ಮೇ 16: ಮುಖ್ಯಮಂತ್ರಿಯಾಗಲು ತುದಿಗಾಲಲ್ಲಿ ನಿಂತಿರುವ ಯಡಿಯೂರಪ್ಪ ಅವರು ಬಯಸಿದಂತೆ ಮೇ 17ರಂದು ಪ್ರಮಾಣವಚನ ಸ್ವೀಕರಿಸುತ್ತಾರೆಯೇ ಇಲ್ಲವೇ ಎಂಬ ಕುತೂಹಲ ಮೂಡಿದೆ.
ಮೇ 17 ಅಥವಾ 18ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ಪ್ರಚಾರ ಭಾಷಣಗಳ ವೇಳೆ ಹೇಳಿಕೊಂಡಿದ್ದರು.
ಪ್ರಮಾಣ ವಚನ ಸ್ವೀಕರಿಸಲು ಮೇ 17 ಸೂಕ್ತ ದಿನವೆಂದು ಯಡಿಯೂರಪ್ಪ ಅವರಿಗೆ ತಿಳಿಸಿದ್ದರಿಂದ ಅಂದೇ ಮುಹೂರ್ತ ನಿಗದಿಪಡಿಸಲು ಅವರು ಉತ್ಸಾಹ ತೋರಿದ್ದರು. ಆದರೆ, ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆಯೇ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.
'ರಾಜ್ಯಪಾಲರ ನಿರ್ಧಾರಕ್ಕೆ ಕಾಯುತ್ತಿದ್ದೇವೆ'
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಯಡಿಯೂರಪ್ಪ ಅವರು, ಪಕ್ಷದ ಇತರೆ ಮುಖಂಡರ ಜತೆಗೂಡಿ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿದರು.
ತಮ್ಮನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ ನಿರ್ಧಾರದ ಪ್ರತಿಯನ್ನು ರಾಜ್ಯಪಾಲರಿಗೆ ಒಪ್ಪಿಸಿದರು.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡುವಂತೆ ಅವರನ್ನು ಕೋರಿದ್ದೇವೆ. ರಾಜ್ಯಪಾಲರು ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಶೀಘ್ರವೇ ತೀರ್ಮಾನ ಪ್ರಕಟಿಸಿ ನನಗೆ ಕರೆ ಮಾಡುವ ವಿಶ್ವಾಸವಿದೆ. ಅವರಿಂದ ಪತ್ರ ಬಂದ ಬಳಿಕ ನಿಮಗೆ ತಿಳಿಸಲಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು. .
ಬುಧವಾರ (ಮೇ 16 ) ಸಂಜೆ ವೇಳೆಗೆ ರಾಜ್ಯಪಾಲರು ಸರ್ಕಾರ ರಚನೆಯ ಬಗ್ಗೆ ಆಹ್ವಾನ ನೀಡುವ ಸಾಧ್ಯತೆ ಇದೆ. ಪ್ರಮಾಣವಚನ ಸ್ವೀಕಾರಕ್ಕೆ ಸೂಕ್ತ ಸಮಯ ನಿಗದಿಪಡಿಸಲು ಯಡಿಯೂರಪ್ಪ ಅವರು ಜ್ಯೋತಿಷಿಗಳ ಮೊರೆ ಹೊಕ್ಕಿದ್ದಾರೆ ಎನ್ನಲಾಗಿದೆ.
karnataka election results 2018 election results karnataka assembly elections 2018 karnataka yeddyurappa bjp ಕರ್ನಾಟಕ ಚುನಾವಣೆ ಫಲಿತಾಂಶ 2018 ಕರ್ನಾಟಕ ವಿಧಾನಸಭೆ ಚುನಾವಣೆ 2018 ಚುನಾವಣೆ ಫಲಿತಾಂಶ ಕರ್ನಾಟಕ ಪ್ರಮಾಣ ವಚನ
Karnataka Election Results 2018: Bjp leader BS Yeddyurappa has been elected as party's legislative leader. He is waiting for governer's green signal to form the government. Questions arised will Yeddyurappa take oath on Thursday or not.
ಇಂದು ಹೈದರಾಬಾದ್‌ ವಿಮೋಚನಾ ದಿನ | News13
News13 > ಅಂಕಣಗಳು > ದಿನ ವಿಶೇಷ > ಇಂದು ಹೈದರಾಬಾದ್‌ ವಿಮೋಚನಾ ದಿನ
ಇಂದು ಹೈದರಾಬಾದ್‌ ವಿಮೋಚನಾ ದಿನ
Thursday, September 17th, 2020 ದಿನ ವಿಶೇಷ Admin
ಇಂದು ಹೈದರಾಬಾದ್‌ ವಿಮೋಚನಾ ದಿನ. ಹೈದರಾಬಾದಿನ ನಿಜಾಮರ ದರ್ಪವನ್ನು ಮುರಿದು ತೆಲಂಗಾಣ, ಮಹಾರಾಷ್ಟ್ರದ ಮರಾಠಾವಾಡ ಮತ್ತು ಕರ್ನಾಟಕದ ಕಲ್ಯಾಣ ಕರ್ನಾಟಕ ಪ್ರದೇಶಗಳನ್ನು ಭಾರತ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿದ ದಿನ. 1948ರ ಸೆ.17ರಂದು ಹೈದರಾಬಾದ್ ನಿಜಾಮರಿಂದ ಈ ಭೂಪ್ರದೇಶಗಳು ಸ್ವತಂತ್ರಗೊಂಡವು.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಹೈದರಾಬಾದಿನ ನಿಜಾಮರು ಮಾತ್ರ ತಮ್ಮ ಸಂಸ್ಥಾನಗಳನ್ನು ಭಾರತದ ಜತೆ ವಿಲೀನಗೊಳಿಸಲು ನಿರಾಕರಿಸಿದ್ದರು. ಆ ಸಂಸ್ಥಾನಗಳ ಬಹುಪಾಲು ಜನರು ಭಾರತಕ್ಕೆ ಸೇರಲು ಒಲವು ವ್ಯಕ್ತಪಡಿಸಿದ್ದರೂ ಕೂಡ ಅವರ ಆಶಯವನ್ನು ಧಿಕ್ಕರಿಸಿ ಹೈದರಾಬಾದಿನ ನಿಜಾಮ ಮೀರ್ ಉಸ್ಮಾನ್ ಅಲಿ ತನ್ನ ಸಂಸ್ಥಾನಗಳನ್ನು ಸ್ವತಂತ್ರ ರಾಷ್ಟ್ರ ಎಂದು ಘೋಷಣೆ ಮಾಡಿದ್ದ. ಹೀಗಾಗಿ ಅನಿವಾರ್ಯವಾಗ...
ಲಕ್ಷಾಂತರ ಜನರು ಹೈದರಾಬಾದ್ ಪ್ರಾಂತ್ಯ ವಿಮೋಚನೆಗಾಗಿ ಹೋರಾಡಿದರು. ಇದಕ್ಕಾಗಿ ತಮ್ಮ ಮನೆಮಠಗಳನ್ನು ಕಳೆದುಕೊಂಡರು, ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದರು. 1942ರಲ್ಲಿ ಹೈದರಾಬಾದ್ ರಾಜ್ಯದ ಜನಸಂಖ್ಯೆ ಸುಮಾರು 1 ಕೋಟಿ 63 ಲಕ್ಷ ಇತ್ತು. ಈ ರಾಜ್ಯದ ವಿಸ್ತೀರ್ಣ 82,313 ಚದರ ಮೈಲು ಆಗಿತ್ತು. ತೆಲುಗು, ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಅಲ್ಲಿ ಮಾತನಾಡಲಾಗುತ್ತಿತ್ತು. ಕರ್ನಾಟಕದ ಕಲ್ಯಾಣ ಕರ್ನ...
ಹೈದರಾಬಾದ್ ಪ್ರಾಂತ್ಯವನ್ನು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿದ್ದ ಹೈದರಾಬಾದಿನ ನಿಜಾಮ, ಮುಸ್ಲಿಂ ರಾಷ್ಟ್ರವನ್ನು ಸ್ಥಾಪನೆ ಮಾಡುವ ಹಪಹಪಿಗೆ ಬಿದ್ದಿದ್ದ. ಈತನ ವಿರುದ್ಧ ಹೋರಾಟ ನಡೆಸುವುದೇ ದೊಡ್ಡ ಸವಾಲಿನ ಕಾರ್ಯವಾಗಿತ್ತು. ಎರಡು ಲಕ್ಷಕ್ಕೂ ಹೆಚ್ಚು ತರಬೇತಿ ಹೊಂದಿದ ಉಗ್ರ ಮನಸ್ಥಿತಿಯ ಸೈನಿಕರು ಆತನ ಬಳಿ ಇದ್ದರು.
ಹೈದರಾಬಾದ್ ನಿಜಾಮನಿಂದ ಹೈದರಾಬಾದನ್ನು ಸ್ವತಂತ್ರಗೊಳಿಸುವ ನಿಟ್ಟಿನಲ್ಲಿ ದೊಡ್ಡಮಟ್ಟದ ಕಾರ್ಯಾಚರಣೆ ನಡೆಯಿತು. ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಡ ನಿರ್ಧಾರದ ಫಲವಾಗಿ 1948ರಂದು ಸೆಪ್ಟೆಂಬರ್ 13ರಂದು ಭಾರತೀಯ ಸೇನೆಯು ಹೈದರಾಬಾದಿನ ಮೇಲೆ ದಾಳಿ ಮಾಡಿತು. ಈ ಕಾರ್ಯಾಚರಣೆಗೆ 'ಆಪರೇಷನ್ ಪೋಲೋ' ಎಂದು ಹೆಸರಿಸಲಾಯಿತು. ಭಾರತೀಯ ಸೇನೆಯು ನಿಜಾಮನ ಎಲ್ಲಾ ಸೈನ್ಯ ಅಧಿಕಾರಿಗಳ...
1948ರ ಸೆಪ್ಟೆಂಬರ್ 17ರಂದು ಭಾರತದ ಒಕ್ಕೂಟದ ಜೊತೆ ಹೈದರಾಬಾದ್ ಸಂಸ್ಥಾನ ವಿಲೀನವಾಯಿತು. ಸೆಪ್ಟೆಂಬರ್ 17ರಂದು ನಿಜಾಮನು ಭಾರತದ ಒಕ್ಕೂಟಕ್ಕೆ ಸೇರುವುದಾಗಿ ಘೋಷಣೆ ಮಾಡಿದ. ಈ ದಿನದ ಸ್ಮರಣಾರ್ಥ ಪ್ರತಿವರ್ಷ ಹೈದರಾಬಾದ್ ವಿಮೋಚನಾ ದಿನವನ್ನು ಆಚರಣೆ ಮಾಡಲಾಗುತ್ತದೆ.
ದಿನಕ್ಕೊಂದು ಭರವಸೆಯ ತೂಗುಪಟ ಬೇಕು | Udayavani – ಉದಯವಾಣಿ
Friday, 25 Jun 2021 | UPDATED: 10:18 AM IST
Team Udayavani, Jun 6, 2021, 1:18 PM IST
ನಾಳೆ ಬೆಳಗಾಗುತ್ತದೋ ಇಲ್ಲವೋ ಎಂಬ ಭಯ.ಎದ್ದರೆ ನನಗೆಲ್ಲವೂ ನೆನಪಿರು ತ್ತದೋ ಅಥವಾ ಮರೆತು ಹೋಗುತ್ತದೆಯೋ ಎಂಬ ಆತಂಕ. ಏಕೆಂದರೆ ಮೊನ್ನೆ ಬೆಕ್ಕು ನನ್ನೆದುರಿಗೆ ಕೂತಿದ್ದರೆ ಅದು ನಾಯಿ ಎಂದು ವಾದ ಮಾಡಿದೆ! ಎಲ್ಲದರ ಜತೆಗೆ ನೆನಪಿನ ಶಕ್ತಿಯೂ ಹೋಗಿಬಿಟ್ಟರೆ… ಅದನ್ನು ನೆನಪಿಸಿಕೊಂಡರೆ ಭಯ, ಮುಜುಗರ, ಆತಂಕ, ದುಃಖ ಒಮ್ಮೆಲೆ ಬಂದು ಬಿಡುತ್ತದೆ.ವೈದ್ಯಳಾಗಿ ಸಾವಿಗೇಕೆ ಅಂಜಬೇಕು ಎಂದು ಸಮಾಧಾನ ಮಾಡಿಕೊಳ...
ನಮ್ಮ ವಾಕ್‌ ತರಬೇತಿಗೆ ವಯಸ್ಸಿನ ನಿರ್ಬಂಧ ವಿಲ್ಲ. ಹುಟ್ಟಿದ ಮಗುವಿನಿಂದ ಹಿಡಿದು 90 ವರ್ಷದ ಹಿರಿಯರೆಲ್ಲರೂ ಒಂದೆಲ್ಲ ಒಂದು ರೀತಿಯಲ್ಲಿ ತಮ್ಮ ಸುತ್ತ ಮುತ್ತಲಿನ ಪರಿಸರದೊಂದಿಗೆ ಸಂಭಾಷಿಸುತ್ತಲೇ ಇರುತ್ತಾರೆ. ಈ ಸಮಯದಲ್ಲಿ ನಮ್ಮ ದೇಹದಲ್ಲೋ, ಮನಸ್ಸಿನಲ್ಲೋ ವ್ಯತ್ಯಾಸ ವಾದರೆ, ತೊಡಕಾಗಿರುವುದೆಲ್ಲಿ ಎಂದು ಪರಿಶೀಲಿಸಿ, ಸಂವಹನಕ್ಕೆ ಅಡ್ಡಿಯಾಗದಂತೆ ನೋಡಿಕೊಂಡು, ಅದಕ್ಕೆ ಬೇಕಾಗುವ ಸಾಮರ್ಥ್ಯವನ್ನ...
ಮೊನ್ನೆ ಪಾರ್ಕಿನ್ಸನ್‌ ರೋಗದ ಬಗ್ಗೆ ಓದುತ್ತಿದ್ದೆ. ಇದು ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟವರಲ್ಲಿ ಕಂಡುಬರುವ ಮೆದುಳಿನ ಕಾಯಿಲೆ. ನಮ್ಮ ಬೆನ್ನು ಹುರಿಯಲ್ಲಿರುವ ಶೇ. 70ರಷ್ಟು ನರಗಳಿಗೆ ಇದು ಹರಡಿಬಿಡುತ್ತದೆ. ಇದರಿಂದಾಗಿ ನಡೆದಾಡಲು, ಮಾತನಾಡಲು, ತಮ್ಮ ಕೈಗಳನ್ನು ಬಳಸಿ ಕೆಲಸ ಮಾಡಲು.. ಹೀಗೆ ದಿನನಿತ್ಯದ ಎಲ್ಲ ಕೆಲಸಗಳಿಗೂ ಅಡ್ಡಿಯಾಗುತ್ತದೆ. ನರಗಳನ್ನು ನಿಯಂತ್ರಿಸಲು ವೈದ್ಯರು ಮಾತ್ರೆಗಳನ್ನ...
ಕ್ರಿಸ್ಟೀನ (ಹೆಸರು ಬದಲಿಸಲಾಗಿದೆ) ನನ್ನ ಕಾಣಲು ತಮ್ಮ ಗಂಡನೊಂದಿಗೆ ಬಂದಿದ್ದರು. ಅವರಿಗೆ ಈಗ 70 ವರ್ಷ. ಸುಮಾರು ಹತ್ತು ವರ್ಷಗಳ ಹಿಂದೆ ಪಾರ್ಕಿನ್ಸನ್‌ ಇರುವುದು ದೃಢಪಟ್ಟಿತ್ತು. ವೃತ್ತಿಯಲ್ಲಿ ವೈದ್ಯೆ. ಸಾಧ್ಯವಾದಷ್ಟು ದಿನ ಜನರ ನಿಸ್ವಾರ್ಥ ಸೇವೆ ಮಾಡಿದ್ದರು.
ಪಾರ್ಕಿನ್ಸನ್‌ನ ಗುಣ ಲಕ್ಷಣಗಳು ಹೆಚ್ಚಾಗುತ್ತಿದ್ದ ಹಾಗೆ ಅವರಿಗೆ ವಾಕ್‌ ತಜ್ಞರನ್ನು ಕಾಣುವುದು ಅನಿವಾರ್ಯವಾಗಿತ್ತು. ಹಾಗಾಗಿ ನನ್ನೆದುರಿಗೆ ಚಂದದೊಂದು ನಗೆ ಬೀರುತ್ತಾ ಬಂದು ಕುಳಿತಿದ್ದ ಅವರು ತಮ್ಮ ಕಥೆ ಹೇಳಿದ್ದು ಹೀಗೆ..
ನಾನು ವೈದ್ಯೆಯಾಗಬೇಕು ಎಂದು ಓದುತ್ತಿದ್ದಾಗ, ಪಠ್ಯದಲ್ಲಿ ಬರುತ್ತಿದ್ದ ರೋಗಗಳ ಬಗ್ಗೆ ಓದುವಾಗ ಯಾವುದೋ ಸಣ್ಣ ಲಕ್ಷಣ ನನ್ನಲ್ಲಿ ಅಥವಾ ನನ್ನ ಪರಿಚಯದವರಲ್ಲಿ ಕಂಡರೆ ಕೂಡಲೇ ಮನಸ್ಸು ಯಾವಾಗಲೂ ಮುಂದಾಗಬಹುದಾದ ತೊಂದರೆಯನ್ನೇ ನೆನಪಿಸುತ್ತಿತ್ತು. ಆಗೆಲ್ಲ, ಇಂಥ ರೋಗವೆಲ್ಲ ನನಗೆಲ್ಲಿ ಬರುತ್ತದೆ? ನಾನೇ ವೈದ್ಯೆಯಾಗುತ್ತೇನಲ್ಲ, ಎಲ್ಲದಕ್ಕೂ ಔಷಧವನ್ನು ಹುಡುಕಿಕೊಂಡರಾಯಿತು. ಯಾವ ಆಸ್ಪತ್ರೆಗೆ ಬೇಕಾದರ...
ಸುಮಾರು 30 ವರ್ಷಗಳ ಹಿಂದೆ ಕಾಡುತ್ತಿದ್ದ ಭಯ ಈಗ ನಿಜವಾಗಿದೆ. ಪಾರ್ಕಿನ್ಸನ್‌ ರೋಗದ ಬಗ್ಗೆ ಎಲ್ಲವನ್ನು ಅರಿತಿದ್ದರೂ ನನಗದು ಇದೆ ಎಂದು ಗೊತ್ತಾದ ತತ್‌ಕ್ಷಣ ಮನಸ್ಸು ಅದು ಸುಳ್ಳಾಗಿರಲಿ ಎಂದು ಬೇಡುತ್ತಿತ್ತು. ಮೊದಲ ದಿನಗಳಲ್ಲಿ ಮನೆಯವರೆಲ್ಲರೂ ಆಘಾತ ಹಾಗೂ ನಿರಾಕರಣೆಯಲ್ಲಿ ಮುಳುಗಿ ಹೋಗಿದ್ದೆವು. ಇನ್ನು ಸತ್ಯದ ಅರಿವಾದಾಗ ಅದನ್ನು ಒಪ್ಪಿ ಎಷ್ಟು ದಿನ ಬದುಕ ಬಲ್ಲೆನೋ ಅಷ್ಟು ದಿನ ಚೆನ್ನಾಗಿ ಬದ...
ವೈದ್ಯಳಾಗಿ ಸಾವಿಗೇಕೆ ಅಂಜಬೇಕು ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ. ಆದರೂ ವೈದ್ಯರುಗಳಿಗೆ ಕೂಡ ರೋಗ ಹತ್ತಿರ ಬಂದಾಗಲೇ ಅದರ ನಿಜ ರೂಪ ಅರ್ಥವಾಗೋದು! ನಮ್ಮಲ್ಲಿ ನೆನಪಿನ ಶಕ್ತಿ ಪರೀಕ್ಷಿಸುವುದಕ್ಕೆ ಕೆಲವೊಂದು ಪರೀಕ್ಷೆ ಮಾಡಬೇಕು. ಅದರಲ್ಲೊಂದು ಪ್ರಶ್ನೆ, ಇವತ್ತು ಯಾವ ವಾರ ಹೇಳುವಿರಾ ಎಂದು. ಅದಕ್ಕವರು ಕೊಟ್ಟ ಉತ್ತರ ನನ್ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು.
"ನನಗಿನ್ನೆಲ್ಲಿ ವಾರ, ದಿನ? ದಿನಗಳು ಅರ್ಥವನ್ನು ಕಳೆದುಕೊಂಡು ಹಲವು ವರ್ಷಗಳೇ ಕಳೆದಿವೆ. ದೇಹದಲ್ಲಿ ಜೀವವೊಂದಿದ್ದರೆ ಸಾಕಾಗುವುದಿಲ್ಲ. ಆ ಜೀವಕ್ಕೆ ನಾಳೆಯೆಂಬ ಬೆಳಗಿನಲ್ಲಿ ನಂಬಿಕೆ ಇರಬೇಕು. ಹುಟ್ಟೋ ಸೂರ್ಯನಲ್ಲಿ, ಬೆಳಗೋ ನಕ್ಷತ್ರದಲ್ಲಿ, ಉದಯಿಸುವ ಚಂದ್ರನಲ್ಲಿ ನಂಬುಗೆಯಿರಬೇಕು. ಹಾಗಿದ್ದರೆ ಮಾತ್ರ ದಿನಕ್ಕೊಂದು ಬೆಲೆ, ಆ ಬೆಲೆಗೊಂದು ಅರ್ಥ.' ಹೀಗೆ ಹೇಳಿ ನಿಟ್ಟುಸಿರು ಬಿಟ್ಟ ಅವರ ಮಾತು ಕೇ...
ಅವರ ಮಾತುಗಳು ಈ ಹೊತ್ತಿನಲ್ಲಿ ಎಷ್ಟು ಸಾಂದರ್ಭಿಕ ಎನಿಸುತ್ತದೆ ಅಂದರೆ ವಿಷಾದಗೀತೆ ನೆನಪಿ ಸುತ್ತದೆ. ಒಂದೆಡೆ ಕೋವಿಡ್‌ ಎಲ್ಲವನ್ನೂ ವ್ಯಾಪಿ ಸುತ್ತಿರುವಾಗ ಕಳೆದುಕೊಳ್ಳುತ್ತಿರುವ ಸಂಖ್ಯೆಯೇ ಹೆಚ್ಚಾಗುತ್ತಿದೆ ಎನಿಸುವ ಭಾವ ಆವರಿಸಿಕೊಳ್ಳುತ್ತಿರು ವಾಗ, ನಿಜ "ನಮಗ್ಯಾವ ದಿನ? ನಮಗೆಷ್ಟು ದಿನ?
ಆಪಲ್ ವಾಚ್‌ಗಾಗಿ ಚಿರ್ಪ್, ಟ್ವಿಟರ್ ಅನ್ನು ಆಪಲ್‌ನ ಸ್ಮಾರ್ಟ್ ವಾಚ್‌ಗೆ ಮರಳಿ ತರುವ ಅಪ್ಲಿಕೇಶನ್ | ಐಫೋನ್ ಸುದ್ದಿ
ಟ್ವಿಟರ್ ಕೆಲವು ತಿಂಗಳ ಹಿಂದೆ ಆಪಲ್ ವಾಚ್‌ನಿಂದ ಕಣ್ಮರೆಯಾಯಿತು. ಐಫೋನ್ ಆವೃತ್ತಿಗೆ ನವೀಕರಣದ ನಂತರ, ಬಳಕೆದಾರರು ಸ್ಮಾರ್ಟ್ ವಾಚ್‌ಗಾಗಿ ಅಪ್ಲಿಕೇಶನ್ ಕಣ್ಮರೆಯಾಗುವುದನ್ನು ನೋಡಿದರು. ಒಂದು ಕಾರಣವೆಂದರೆ ಅದು ಸ್ಥಳೀಯ ಅಪ್ಲಿಕೇಶನ್ ಅಲ್ಲ ಮತ್ತು ಆಪಲ್ನ ಬೇಡಿಕೆಗಳ ಪ್ರಕಾರ, ವಾಚ್ಕಿಟ್ 2 ನೊಂದಿಗೆ, ಇದರ ಉದ್ದೇಶ ಹೀಗಿತ್ತು: ಎಲ್ಲಾ ಅಪ್ಲಿಕೇಶನ್ ಗಡಿಯಾರವು ಐಫೋನ್‌ನಿಂದ ಸ್ವತಂತ್ರವಾಗಿರಬೇಕು....
ಸತ್ಯವೆಂದರೆ, ಆಪಲ್ ವಾಚ್ ಅಧಿಸೂಚನೆಗಳಿಗಿಂತ ಸ್ವಲ್ಪ ಭಿನ್ನವಾದ ವಲಯದ ಮೇಲೆ ಕೇಂದ್ರೀಕರಿಸಿದೆ. ಈ ಸ್ಮಾರ್ಟ್ ವಾಚ್ ನಮ್ಮ ಜೀವನದ ಲಯದ ಸಮಗ್ರ ನಿಯಂತ್ರಣವನ್ನು ಇಟ್ಟುಕೊಳ್ಳುವಲ್ಲಿ ಮತ್ತು ಅಗತ್ಯವಿದ್ದಾಗ ನಮಗೆ ಎಚ್ಚರಗೊಳ್ಳುವ ಕರೆಗಳನ್ನು ನೀಡುವಲ್ಲಿ ಹೆಚ್ಚು "ಪರಿಣಿತ" ಆಗಿದೆ. ಅಂತೆಯೇ, ರಿಸರ್ಚ್ಕಿಟ್ 2.0, ಇದು ಐಒಎಸ್ 12 ರೊಂದಿಗೆ ಬರಲಿದೆ, ಆರೋಗ್ಯ ವಲಯದಲ್ಲಿ ಆಪಲ್ ಉಪಕರಣಗಳನ್ನು ಇನ್ನಷ...
ಅದು ನಿಜ ನಮ್ಮ ಮಣಿಕಟ್ಟಿನಿಂದ ಕೆಲವು ಅಪ್ಲಿಕೇಶನ್‌ಗಳ ಬಳಕೆಯನ್ನು ಹೆಚ್ಚು ಅರ್ಥವಾಗದಿರಬಹುದು. ಮಣಿಕಟ್ಟಿನ ಚಲನೆಯಿಂದಲ್ಲ, ಆದರೆ ಆಪಲ್ ವಾಚ್‌ನ ಪರದೆಯ ಗಾತ್ರ ಮತ್ತು ಅದರಿಂದ ಕೆಲವು ಸೆಷನ್‌ಗಳನ್ನು ಆನಂದಿಸುವ ಸಾಮರ್ಥ್ಯದಿಂದಾಗಿ. ಕೆಲವು ಪೂರ್ವವೀಕ್ಷಣೆಗಳಿಗೆ ಅದು ಕೆಟ್ಟದ್ದಲ್ಲ ಎಂಬುದು ನಿಜ - ಮತ್ತೆ ಐಒಎಸ್ 12 ರಲ್ಲಿ ನಮಗೆ ಆ ಆಯ್ಕೆ ಇರುತ್ತದೆ - ಆದರೆ ಟ್ವಿಟರ್ ಅಥವಾ ಇತರ ರೀತಿಯ ಪೂರ್...
ಅದು ಹೇಳಿದೆ, ಡೆವಲಪರ್ ಅದನ್ನು ವಿವರಿಸುತ್ತಾರೆ ಚಿರ್ಪ್ ಆಪಲ್ ವಾಚ್‌ಗಾಗಿ ಸ್ಥಳೀಯ ಅಪ್ಲಿಕೇಶನ್ ಆಗಿದೆ ಇದರೊಂದಿಗೆ ನಾವು ನಮ್ಮ «ಟೈಮ್‌ಲೈನ್ at ಅನ್ನು ನೋಡಬಹುದು, ಹಾಗೆಯೇ ಮೆಚ್ಚಿನವುಗಳೆಂದು ಗುರುತಿಸಬಹುದು ಅಥವಾ ಅನುಕೂಲಕರವೆಂದು ನಾವು ಭಾವಿಸುವ ಯಾವುದನ್ನಾದರೂ ರಿಟ್ವೀಟ್ ಮಾಡಬಹುದು. ನಮ್ಮ ಆಪಲ್ ಸ್ಮಾರ್ಟ್ ವಾಚ್‌ನಿಂದ ನಾವು ಟ್ವೀಟ್‌ಗಳಿಗೆ ಪ್ರತ್ಯುತ್ತರಿಸಬಹುದು ಅಥವಾ ಕಳುಹಿಸಬಹುದು....
ಪಿಪಿ ಒಳಗೆ ಖರೀದಿಗಳೊಂದಿಗೆ ಚಿರ್ಪ್ ಉಚಿತವಾಗಿದೆ. ಡೆವಲಪರ್ ಸ್ವತಃ ರೆಡ್ಡಿಟ್‌ನಲ್ಲಿ ವಿವರಿಸಿದಂತೆ, ಪಾವತಿ ಮಾದರಿಯು ಆಪ್ ಸ್ಟೋರ್, ನ್ಯಾನೋ ಫಾರ್ ರೆಡ್ಡಿಟ್‌ನಲ್ಲಿ ಅವರ ಇತರ ಅಪ್ಲಿಕೇಶನ್‌ನೊಂದಿಗೆ ಏನಾಯಿತು ಎಂಬುದರಂತೆಯೇ ಇರುತ್ತದೆ. ಅಂದರೆ, ಭವಿಷ್ಯದ PRO ನವೀಕರಣಗಳನ್ನು ಪಡೆಯಲು ಬಳಕೆದಾರರು $ 2 ಮತ್ತು $ 4 ರ ನಡುವೆ ಮೊತ್ತವನ್ನು ಪಾವತಿಸಿದ್ದಾರೆ. ಹೆಚ್ಚು ನಿಖರವಾಗಿ ಹೇಳುವುದಾದರೆ,...
ಲೇಖನಕ್ಕೆ ಪೂರ್ಣ ಮಾರ್ಗ: ಐಫೋನ್ ಸುದ್ದಿ » ಆಪಲ್ ಉತ್ಪನ್ನಗಳು » ಆಪಲ್ ವಾಚ್ » ಆಪಲ್ ವಾಚ್‌ಗಾಗಿ ಚಿರ್ಪ್, ಆಪಲ್‌ನ ಸ್ಮಾರ್ಟ್‌ವಾಚ್‌ಗೆ ಟ್ವಿಟರ್ ಅನ್ನು ಹಿಂದಿರುಗಿಸುವ ಅಪ್ಲಿಕೇಶನ್
ಸರಕಾರಿ ಶಾಲೆಯ ನೂತನ ಕಟ್ಟಡ ಸ್ಥಾಪನೆಯ ಹೆಸರಿನಲ್ಲಿ ಪರದಾಡುತ್ತಿರುವ ಮಕ್ಕಳು ! - ವರದಿಗಾರ
ವರದಿಗಾರ (28.11.2017): ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ನೇತ್ರಾವತಿ ನದಿ ದಡದಲ್ಲಿನ ಮಠ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯು ಕಳೆದ ಸುಮಾರು ದಶಕಗಳಿಂದ ಆಸುಪಾಸಿನ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುತ್ತಾ ಬಂದಿದೆ. ಊರಿಗೆ ಹಲವು ಪ್ರತಿಭೆಗಳನ್ನು ನೀಡುತ್ತಾ ಬಂದಿದ್ದು, ಇದೀಗ ಈ ಶಾಲೆಯ ...
ಆದರೆ ಕಟ್ಟಡ ಕೆಡವಿ ಸುಮಾರು ತಿಂಗಳುಗಳೇ ಕಳೆದಿದ್ದರೂ ಸಂಬಂದಪಟ್ಟವರು ಹೊಸ ಕಟ್ಟಡ ನಿರ್ಮಾಣ ಕಾರ್ಯವನ್ನು ಇನ್ನೂ ಪ್ರಾರಂಭಿಸಿಲ್ಲ. ಈ ಶಾಲೆಯಲ್ಲಿ 7ನೇ ತರಗತಿಯವರೆಗೆ ಕಲಿಯುವ ಮಕ್ಕಳಿದ್ದು ಇದೀಗ ಕೇವಲ 4 ತರಗತಿ ಕೋಣೆಗಳು ಕಾರ್ಯಚರಿಸುತ್ತಿದ್ದು ಮಕ್ಕಳು ತರಗತಿಯ ಹೊರಾಂಗಣದಲ್ಲಿ ಕುಳಿತುಕೊಳ್ಳುವ ಸ್ಥಿತಿ ಉಂಟಾಗಿದೆ. ಇರುವ 4 ತರಗತಿ ಕೋಣೆಗಳು ದುಸ್ಥಿತಿಯಲ್ಲಿದ್ದು ಮಕ್ಕಳಿಗೆ ಕುಳಿತುಕೊಳ್ಳಲು ಸ...
ಇಲ್ಲಿನ ದುಸ್ಥಿತಿ ಕಂಡು ಸ್ಥಳೀಯರು ತಮ್ಮ ಮಕ್ಕಳನ್ನು ಆಸುಪಾಸಿನ ಖಾಸಗಿ ಶಾಲೆಗೆ ದಾಖಲಾತಿ ಮಾಡುತ್ತಿದ್ದಾರೆ. ಈ ಕಾರಣಗಳಿಂದ ಮುಂದಿನ ಶೈಕ್ಷಣಿಕ ವರ್ಷಗಳಿಂದ ಇಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ದೊಡ್ಡ ಮಟ್ಟದಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದ್ದು , ಸಂಬಂದಪಟ್ಟ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಈ ಶಾಲೆಯನ್ನು...
ನೀರು, ಒಳಚರಂಡಿ ಸಂಪರ್ಕಕ್ಕೆ ರಸ್ತೆ ಅಗೆಯಲು ಬಿಬಿಎಂಪಿ ಅನುಮತಿ ಕಡ್ಡಾಯ | BWSSB says BBMP permission mandatory for digging roads for work - Kannada Oneindia
| Updated: Saturday, October 6, 2018, 11:37 [IST]
ಬೆಂಗಳೂರು, ಅಕ್ಟೋಬರ್ 6: ನೀರು, ಒಳಚರಂಡಿ ಸಂಪರ್ಕಕ್ಕಾಗಿ ರಸ್ತೆ ಅಗೆಯಬೇಕಾದರೆ ಜಲಮಂಡಳಿಯು ಕಡ್ಡಾಯವಾಗಿ ಬಿಬಿಎಂಪಿಯಿಂದ ಅನುಮತಿ ಪಡೆಯಲೇ ಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರ ಸಂಬಂಧಿಸಿದಂತೆ ವಿಜಯನ್ ಮೆನನ್ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಅರ್ಜಿಯನ್ ಹೈಕೋರ್ಟ್ ವಿಚಾರಣೆ ನಡೆಸಿದೆ.
ನಗರದ ರಸ್ತೆಗಳ ನಿರ್ವಹಣೆ ಹಾಗೂ ಗುಂಡಿಗಳಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಾಲಿಕೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಜಲಮಂಡಳಿ ತಯಾರಿದೆ. ರಸ್ತೆ ಅಗೆಯಲು ಪಾಲಿಕೆ ಅನುಮತಿ ನೀಡಿದರೆ ಮಾತ್ರ ಜಲಮಂಡಳಿ ಅನುಮೋದನೆ ನೀಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ನೀರು ಹಾಗೂ ಒಳಚರಂಡಿ ಪೈಪ್ ಲೈನ್ ಗಳನ್ನು ಬದಲಿಸುವ ಸಂದರ್ಭದಲ್ಲಿ ರಸ್ತೆ ಅಗೆಯಬೇಕಿದ್ದಲ್ಲಿ, ಪಾಲಿಕೆಯಿಂದ ಅನುಮತಿ ಪಡೆಯಲಾಗುತ್ತದೆ. ಕಾಮಗಾರಿ ಬಳಿಕ ಅಗೆದಿರುವ ರಸ್ತೆಗಳನ್ನು ಮೊದಲಿನಂತೆ ಮಾಡಲಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಜಲಮಂಡಳಿಯೇ ಭರಿಸಲಿದೆ ಎಂದು ತಿಳಿಸಲಾಗಿದೆ.