text
stringlengths
0
61.5k
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-98994 .field-name-body .field-items div.field-item > p'); if(x1 != null && x1.length != 0) { $('#node-98994 .field-name-body ....
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-98994 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-98994'); }); } else { $('#in-article-mob-98994').hide(); $('#in-article-mob-3rd-98994').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಕೋವಿಡ್ ಲಸಿಕೆ ಪಡೆಯಲು ಸಾರ್ವಜನಿಕರಿಗೆ ಮನವೊಲಿಸಿ: ವಿ.ರಶ್ಮಿ ಮಹೇಶ - Akhilavani
ಕೋವಿಡ್ ಲಸಿಕೆ ಪಡೆಯಲು ಸಾರ್ವಜನಿಕರಿಗೆ ಮನವೊಲಿಸಿ: ವಿ.ರಶ್ಮಿ ಮಹೇಶ
ಕೊಪ್ಪಳ: ಗ್ರಾಮ ಪಂಚಾಯತ ಮಟ್ಟದಿಂದ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾ.ಪಂ ಸದಸ್ಯರು ಸೇರಿದಂತೆ ಸ್ಥಳಿಯ ಜನಪ್ರತಿನಿಧಿಗಳ ಸಹಭಾಗಿತ್ವದೊಂದಿಗೆ ಸಾರ್ವಜನಿಕರ ಮನವೊಲಿಸಿ ಕೋವಿಡ್ ಲಸಿಕೆ ನೀಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸೋಮವಾರದಂದು (ಅ.೨೫) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್-೧೯ ಲಸಿಕೆಯ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕಂಡುಬಂದಿರುವ ಕಡಿಮೆ ಪ್ರಮಾಣದ ಲಸಿಕೆ ಪಡೆದಿರುವ ಗಂಗಾವತಿ ನಗರ ಪ್ರದೇಶದ ೩ನೇ ವಾರ್ಡಿನ ಸಿದ್ದಿಕೇರಿ, ೫ನೇ ವಾರ್ಡ್ ಕಿಲ್ಲಾ ಏರಿಯಾ, ೭ನೇ ವಾರ್ಡ್ ಮೆಹಬೂಬನಗರ, ೧೨ನೇ ವಾರ್ಡ್-ಇಸ್ಲಾಂಪುರ, ೧೩ನೇ ವಾರ್ಡ್-ಬನ್ನಿಗಿಡದ ಕ್ಯಾಂಪ್. ಗಂಗಾವತಿ ಗ್ರಾಮೀಣ ಪ್ರದೇಶದ ನವಲಿ ಪ್ರಾಥಮಿಕ ಆರೋಗ್ಯ ಕೇಂದ್ರದಡಿಯ ಗಾಂಧಿನಗರ, ಚಿಕ್ಕ ಬೆಣಕಲ್, ಹಳೇ ಕಲ್ಗುಡಿ. ಕೊಪ್ಪಳದ ಮೆಳ್ಳಿಕೇರ...
ಗ್ರಾಮೀಣ ಭಾಗಗಳಲ್ಲಿ ಕೋವಿಡ್-೧೯ ಕುರಿತು ಇದುವರೆಗೂ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಕೆಲವು ಗ್ರಾಮೀಣ ಭಾಗದಲ್ಲಿ ಲಸಿಕೆ ಕುರಿತು ಗಂಭೀರತೆ ಕಾಣುತ್ತಿಲ್ಲ. ಅಂತಹ ಗ್ರಾಮಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಇನ್ನ? ಸೂಕ್ಷ್ಮ ಮಟ್ಟದಲ್ಲಿ ಜಾಗೃತಿ ಮೂಡಿಸಿ. ಇಲ್ಲಿಯವರೆಗೂ ಪೂರೈಸಿರುವ ಲಸಿಕೆಯ ಪ್ರಮಾಣದ ಅರ್ಧದ? ಲಸಿಕೆಯನ್ನು ಹದಿನೈದು ದಿನದೊಳಗೆ ನೀಡಬೇಕು. ವ್ಯಾಕ್ಸಿನ್ ಪ...
ಲಸಿಕಾ ಕಾರ್ಯವನ್ನು ಕೈಗೊಳ್ಳಲು ಈಗಾಗಲೇ ಲಸಿಕಾ ಮೇಳದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇನ್ನೂ ಹೆಚ್ಚಿನ ಮಟ್ಟದಲ್ಲಿ ಯಶಸ್ವಿಯಾಗಬೇಕು. ಲಸಿಕಾ ಕಾರ್ಯಕ್ರಮಕ್ಕೆ ಸರ್ಕಾರೇತರ ಸಂಘ, ಸಂಸ್ಥೆಗಳನ್ನು ಬಳಸಿಕೊಳ್ಳಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಗ್ರಹಿಸಿ ಅವುಗಳನ್ನು ಪರಿಹರಿಸಲು ಪ್ರಯತ್ನಿಸಿ. ಶಾಲಾ-ಕಾಲೇಜುಗಳಲ್ಲಿ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ...
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ವ್ಯಾಕ್ಸಿನ್ ಪಡೆಯದವರು ಮಾಸ್ಕ್ ಧರಿಸದೇ ಓಡಾಡುತ್ತಿರುವುದು ಕಂಡುಬಂದಲ್ಲಿ ದಂಢವಿಧಿಸಬೇಕು. ಗಂಗಾವತಿ ಹಾಗೂ ಕಾರಟಗಿ ಭಾಗದ ರೈಸ್ ಮಿಲ್‌ಗಳಲ್ಲಿ ವ್ಯಾಕ್ಸಿನೇ?ನ್ ಸೆಂಟರ್‌ಗಳನ್ನು ಮಾಡಿ ಇದರಿಂದ ಅಲ್ಲಿಗೆ ಬರುವ ರೈತಾಪಿ ಜನರಿಗೆ ವ್ಯಾಕ್ಸಿನ್ ಕೊಡಬಹುದು. ಹಾಗೂ ಜನಸಂದಣಿಯಿರುವ ದೇವಸ್ಥಾನ, ಬಸ್‌ನಿಲ್ದಾಣ, ಮಾರುಕಟ್ಟೆಗಳ...
ಇನ್ನೂ ಮೊದಲ ಡೋಸ್ ಲಸಿಕೆ ಪಡೇಯದೇ ಇರುವಂತವರ ಕಡೆ ಕೇಂದ್ರಿಕರಿಸಿ, ಸಮಯದ ನಿಬಂಧವನ್ನು ಬಿಟ್ಟು ಲಸಿಕಾ ಕಾರ್ಯವನ್ನು ಮಾಡಬೇಕು. ನಿಯಮಿತ ಮೇಲ್ವಿಚಾರಣೆ, ಬೆಂಬಲಿತ ಮೇಲ್ವಿಚಾರಣೆ ಮತ್ತು ಸಜ್ಜುಗೊಳಿಸುವಿಕೆಯ ಕಾರ್ಯ ತಾಲ್ಲೂಕು ವೈದ್ಯಾಧಿಕಾರಿಗಳಿಂದ ಆಗಬೇಕು. ಕೋವಿಡ್-೧೯ನಿಂದ ಮೃತಪಟ್ಟವರ ಕುಟುಂಬದವರಿಗೆ ನೀಡುವ ಸರ್ಕಾರದ ಪರಿಹಾರಕ್ಕೆ ಸಂಬಂಧಿಸಿದಂತೆ ಇ-ತಂತ್ರಾಂಶದಲ್ಲಿ ಬಿ.ಪಿ.ಎಲ್., ಎ.ಪಿ.ಎಲ್...
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ತರನ್ನುಮ್, ಪ್ರೊಬೇ?ನರಿ ಐಎಎಸ್ ಅಧಿಕಾರಿ ಹೇಮಂತಕುಮಾರ, ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಆಂಬುಲೆನ್ಸ್‌ ಸುಲಿಗೆಕೋರರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು : 108 ಆಂಬುಲೆನ್ಸ್‌ಗೆ ಆದ್ಯತೆ ನೀಡಬೇಕು:ಸಚಿವ ಸುಧಾಕರ್ - BC Suddi
ಆಂಬುಲೆನ್ಸ್‌ ಸುಲಿಗೆಕೋರರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು : 108 ಆಂಬುಲೆನ್ಸ್‌ಗೆ ಆದ್ಯತೆ ನೀಡಬೇಕು:ಸಚಿವ ಸುಧಾಕರ್
22/04/2021 22/04/2021 News Desk
ಬೆಂಗಳೂರು: "ಕೊರೊನಾ ಸೋಂಕಿತರು ಹಾಗೂ ಶವ ಸಾಗಾಟ ಮಾಡುವ ಆಂಬುಲೆನ್ಸ್‌‌ಗಳ ವಸೂಲಿಗೆ ಶೀಘ್ರವೇ ಸರ್ಕಾರದಿಂದ ದರ ನಿಗದಿಯಾಗಲಿದೆ" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌‌ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆಂಬುಲೆನ್ಸ್‌ ಸುಲಿಗೆಕೋರರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು. 108 ಆಂಬುಲೆನ್ಸ್‌ಗೆ ಆದ್ಯತೆ ನೀಡಬೇಕು. ಖಾಸಗಿ ಆಂಬುಲೆನ್ಸ್‌ಗಳಿಗೂ ಶೀ...
"ನಿಮ್ಮ ಆರೋಗ್ಯ, ನಿಮ್ಮೊಂದಿಗೆ ನಾವಿದ್ದೇವೆ. ಜನರು ಆತ್ಮವಿಶ್ವಾಸದಿಂದ ಇರಬೇಕು. ಸಿಎಂ ಹಾಗೂ ಅಧಿಕಾರಿಗಳು ನಿಮ್ಮೊಂದಿಗೆ ಇರುತ್ತಾರೆ. ರೋಗದ ಲಕ್ಷಣ ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಪಡೆದುಕೊಳ್ಳಿ. ಕೊರೊನಾ ಪಾಸಿಟಿವ್‌ ಬಂದರೆ ಆತಂಕಕ್ಕೊಳಗಾಗಬೇಡಿ. ಧೈರ್ಯದಿಂದ ಇರಿ" ಎಂದಿದ್ದಾರೆ.
"ಆಕ್ಸಿಜನ್‌‌ ಹಾಗೂ ರೆಮ್ಡಿಸಿವರ್‌‌ಗಾಗಿ ಸಹಾಯವಾಣಿ ತೆರೆಯಲಾಗಿದೆ. ಕೊರೊನಾ ಸೋಂಕಿನ ಹೋರಾಟ ಮಧ್ಯೆ ಇದ್ದೇವೆ. ನಾವೆಲ್ಲರೂ ಒಂದುಗೂಡಿ ಹೋರಾಟ ನಡೆಸಬೇಕಿದೆ. ರಾಜ್ಯದಲ್ಲಿ 48 ಗಂಟೆಯಲ್ಲಿ ಎಲ್ಲಿಯೂ ಆಕ್ಸಿಜನ್ ಕೊರತೆಯಾಗಿಲ್ಲ" ಎಂದು ತಿಳಿಸಿದ್ದಾರೆ.
"ಮಾಜಿ ಸಚಿವ ಎಂ.ಬಿ.ಪಾಟೀಲ್‌ ಅವರ ಆಸ್ಪತ್ರೆಯಲ್ಲಿ ಉತ್ತಮ ಕಾರ್ಯ ನಡೆಯುತ್ತಿದೆ. ಸರ್ಕಾರಕ್ಕೆ ಹಾಗೂ ಜನರಿಗೆ ಸ್ಪಂದಿಸಿ ಉತ್ತಮ ಕಾರ್ಯ ಮಾಡಲು ಮುಂದಾಗಿದ್ದಾರೆ" ಎಂದಿದ್ದಾರೆ.
ನೈರುತ್ಯ ಪಾಕಿಸ್ತಾನದಲ್ಲಿ ಚೀನಾದ ರಾಯಬಾರಿಗೆ ಆತಿಥ್ಯ ವಹಿಸಿದ್ದ ಹೊಟೇಲ್‌‌‌ನಲ್ಲಿ ಬಾಂಬ್‌ ಸ್ಪೋಟ: 10ಕ್ಕೂ ಅಧಿಕ ಮಂದಿ ಗಾಯ: ನಾಲ್ವರು ಮೃತ್ಯು
ಆರ್‌ಟಿಪಿಸಿಆರ್‌‌ ಪರೀಕ್ಷಾ ಫಲಿತಾಂಶಗಳನ್ನು 24 ಗಂಟೆಗಳ ಒಳಗೆ ನೀಡುವುದರ ಜೊತೆಗೆ ಮಾಹಿತಿಯನ್ನು ಐಸಿಎಂಆರ್‌ ಪೋರ್ಟಲ್‌‌ನಲ್ಲಿಯೂ ನಮೂದಿಸಬೇಕು: ಲ್ಯಾಬ್‌ಗಳಿಗೆ ಸರ್ಕಾರ ಸೂಚನೆ
ಸ್ಪರ್ಧಾತ್ಮಕ ಜೀವನಕ್ಕೆ ತಯಾರಾಗಿ: ಬಂಗಾರಪ್ಪ | Prajavani
ಸ್ಪರ್ಧಾತ್ಮಕ ಜೀವನಕ್ಕೆ ತಯಾರಾಗಿ: ಬಂಗಾರಪ್ಪ
ಸೊರಬ: ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಶಿಕ್ಷಣಾಭಿಮಾನಿಗಳ ಹೆಮ್ಮೆಗೆ ಕಾರಣ ಆಗಿವೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ನುಡಿದರು.ಸಮೀಪದ ಕುಪ್ಪಗಡ್ಡೆಯಲ್ಲಿ ಈಚೆಗೆ ಸ್ಥಳೀಯ ದಂಡಾವತಿ ವಿದ್ಯಾವರ್ಧಕ ಸಂಘದ ರಾಷ್ಟ್ರೀಯ ಪ್ರೌಢಶಾಲೆಯ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಮಲೆನಾಡು ಪ್ರೌಢಶಾಲೆಗಳು ತಾಲ್ಲೂಕು ಹಾಗೂ ಸುತ್ತಮುತ್ತ ಬಹು ವರ್ಷಗಳ ಹಿಂದಿನಿಂದ ಶೈಕ್ಷಣಿಕ ಪ್ರಗತಿಗೆ ಕಾರಣ ಆಗಿ, ಸಮಾಜದ ವಿವಿಧ ಕ್ಷೇತ್ರಗಳಿಗೆ ಗಣ್ಯರ ಕಾಣಿಕೆ ನೀಡಿವೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿವೆ. ಗ್ರಾಮೀಣ ಕೃಪಾಂಕ, ರೈತರಿಗೆ ಉಚಿತ ವಿದ್ಯುತ್, ಪೊಲೀಸರಿಗೆ ಸ್ಟಾರ್ ಗೌರವ ಮೊದಲಾದ ತಮ್ಮ ಅಧಿಕಾರಾವಧಿಯ ಸಾಧನೆಗಳನ್ನು ವಿವರಿಸಿದರು.
ಸ್ಪರ್ಧಾತ್ಮಕ ಅಭ್ಯಾಸಕ್ಕೆ ಮುಂದಾಗಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಬಂಗಾರಪ್ಪ, ಶಾಲಾ ನಿವೇಶನ ದಾನಿಗಳ ಭಾವಚಿತ್ರ ಅನಾವರಣಗೊಳಿಸಿದರು.ಗ್ರಾ.ಪಂ. ಅಧ್ಯಕ್ಷ ಆನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿಮಲಾ ಚಂದ್ರಪ್ಪ, ತಾ.ಪಂ. ಸದಸ್ಯೆ ಲಕ್ಷ್ಮೀಜಗದೀಶ್, ಸಂಘದ ಮಾಜಿ ಅಧ್ಯಕ್ಷ ಕೆ. ನಾಗಪ್ಪ, ಕಾರ್ಯದರ್ಶಿ ಟಿ. ಹುಚ್ಚಪ್ಪ,...
ನಾವೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ;ಪರಿಶೀಲನೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Jul 19, 2019, 11:22 PM IST
ಬೆಳ್ತಂಗಡಿ: ಮೂಲಭೂತ ಸೌಕರ್ಯ ವಂಚಿತ ನಾವೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾವೂರು ಗ್ರಾಮದ ಕುದ್ಕೋಳಿ, ಪುಲಿತ್ತಡಿ, ಅಲ್ಯ, ಮಲ್ಲ, ಮುತ್ತಾಜೆ, ಎರ್ಮೆಲೆ, ಮಂಜಲ ಪ್ರದೇಶಗಳಿದ್ದು, ಇಲ್ಲಿ ಸುಮಾರು 25 ಮೂಲನಿವಾಸಿ ಕುಟುಂಬಗಳು ಕಾಡಿನ ನಡುವೆ ವಾಸಿಸುತ್ತಿದೆ. 250 ಕ್ಕೂ ಹೆಚ್ಚು ಜನರಿರುವ ಪ್ರದೇಶವಾಗಿದ್ದರೂ ಮೂಲಭೂತ ಸೌಕರ್ಯಗಳು ವಂಚಿತವಾಗಿದೆ. ವಾರದ ಹಿಂದೆ ಈ ಬಗ್ಗೆ ವಾರ್ತಾಭಾರತಿ ವಿಸ್ತೃತವಾದ ವರದಿಯನ್ನು ಪ್ರಕಟಿಸಿತ್ತು.
ಈ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆ ಮಧ್ಯೆ ಹಳ್ಳ ಒಂದು ಇದ್ದು, ಮಳೆಗಾಲದಲ್ಲಿ ವಾಹನಗಳು ಬರಲು ಅವಕಶಾವಿಲ್ಲದ ಕಾರಣ ಅನಾರೋಗ್ಯಕ್ಕೀಡಾದವರನ್ನು ಎತ್ತಿಕೊಂಡೇ ಹೋಗಬೇಕಾದ ಅನಿವಾರ್ಯತೆಯಿದೆ. ಇದಕ್ಕೆ ಸೇತುವೆ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಅಧಿಕಾರಿಗಳನ್ನು ಆಗ್ರಹಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಇ. ಜಯರಾಂ, ತಿಂಗಳೊಳಗೆ ಸೇತುವೆ ನಿರ್ಮಾಣ ಕುರಿತು ಅರಣ್ಯ ಇಲಾಖೆ ಸ್ಟಷ್ಟ ಮಾಹಿತ...
ವಿದ್ಯುತ್ ಸಂಪರ್ಕ ಒದಗಿಸುವ ಬಗ್ಗೆ ಮತ್ತು ರಸ್ತೆ ಅಭಿವೃದ್ಧಿ ಕುರಿತು ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ ಅನ್‍ಲೈನ್ ಅರ್ಜಿ ಸಲ್ಲಿಸಲಾಗಿದೆ. ಎಂದು ಸ್ಥಳೀಯರು ತಿಳಿಸಿದರು. ಅದರ ಬಗ್ಗೆ ಮುತುವರ್ಜಿ ವಹಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ಈ ಕುರಿತು ತಿಂಗಳಿಗೊಮ್ಮೆ ಸಂಬಂಧಪಟ್ಟ ಅಧಿಕಾರಿ ಸಭೆ ಕರೆದು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಇಒ ಜಯರಾಮ್ ಅವರು ನಿವಾಸಿಗಳಿಗೆ ತ...
ಸಮಾಜ ಕಲ್ಯಾಣಾಧಿಕಾರಿ ಎಚ್.ಎಂ.ಪಾಟೀಲ್, ಉದ್ಯೋಗ ಖಾತರಿ ಯೋಜನೆ ಉಪನಿರ್ದೇಶಕ ಕುಸುಮಾಧರ್, ಇಂಜಿನಿಯರ್ ಉಪವಿಭಾಗದ ಹರೀಶ ಕಾರಿಂಜ, ನಾವೂರು ಗ್ರಾಪಂ ಪಿಡಿಒ ಅಶೋಕ್ ದೇವಾಡಿಗ ಮೊದಲಾದ ಅಧಿಕಾರಿ ವರ್ಗ ಭೇಟಿ ನೀಡಿದ್ದರು.
ನಾವೂರು ಗ್ರಾಪಂ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ಗಣೇಶ್ ಗೌಡ, ಸದಸ್ಯರಾದ ಹರೀಶ್ ಸಾಲಿಯಾನ್, ನಾಗಮ್ಮ, ಅಧಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ ಲಾಯಿಲ, ಕಾರ್ಯದರ್ಶಿ ಜಯಾನಂದ ಪಿಲಿಕಲ, ಸ್ಥಳೀಯರಾದ ಶಿವಪ್ಪ ಮಲೆಕುಡಿಯ, ಸದಾಶಿವ ಮಲೆಕುಡಿಯ, ಕೊರಗ ಮಲೆಕುಡಿಯ, ಜಯಂತ್ ಮತ್ತಿತರರು ಇದ್ದರು.
ಮಾಜಿ ಸಿಎಂ ಎಚ್‌ಡಿಕೆ ಭೇಟಿ ಮಾಡಿ ಕುತೂಹಲ ಮೂಡಿಸಿದ ಆರ್. ಅಶೋಕ್ | Kalaburagi Corporation Election Result: Former CM HD Kumaraswamy Meets R Ashok - Kannada Oneindia
| Published: Saturday, September 11, 2021, 19:12 [IST]
ರಾಮನಗರ, ಸೆಪ್ಟೆಂಬರ್ 11: ಕಲಬುರಗಿ ಮಹಾನಗರ ಪಾಲಿಕೆ ಫಲಿತಾಂಶ ಅತಂತ್ರವಾದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕಿಂಗ್ ಮೇಕರ್ ಆಗಿರುವ ಜೆಡಿಎಸ್ ಬೆಂಬಲ ಕೊಡುವಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ.
ಬಿಡದಿಯ ಕೇತುಗಾನಹಳ್ಳಿ ತೋಟದ ಮನೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾದ ಕಂದಾಯ ಸಚಿವ ಆರ್. ಅಶೋಕ್, "ಕಲಬುರಗಿ ಪಾಲಿಕೆ ಚುನಾವಣೆಗೆ ನಮ್ಮ ಪಕ್ಷಕ್ಕೆ ಬೆಂಬಲ ಕೊಡುವಂತೆ ಮಾತನಾಡಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಕಲಬುರಗಿ ಪಾಲಿಕೆ ಬೆಂಬಲದ ಬಗ್ಗೆ ಕುಮಾರಸ್ವಾಮಿ ಸೋಮವಾರ ಸದನದಲ್ಲಿ ಚರ್ಚಿಸೊಣ ಎಂದಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜೊತೆಗೆ ಚರ್ಚಿಸಿ ಒಂದೊಳ್ಳೆ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ದೊಡ್ಡಬಳ್ಳಾಪುರದ ಚುನಾವಣೆ ವಿಷಯದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.''
ಹಾಗೆಯೇ ಕಲಬುರಗಿ ಪಾಲಿಕೆ ಚುಕ್ಕಾಣಿಗೆ ಜೆಡಿಎಸ್- ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್, "ಹಾಗೇನು ಇಲ್ಲ, ಕಾಂಗ್ರೆಸ್‌ನಲ್ಲೇ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಲ್ಲೇ ಒಮ್ಮತವಿಲ್ಲ. ಮೇಯರ್ ಪಟ್ಟದ ಡಿಮ್ಯಾಂಡ್ ಕೂಡ ಚರ್ಚೆಯಾಗಿಲ್ಲ,'' ಎಂದು ಸ್ಪಷ್ಟಪಡಿಸಿದರು.
ಸಚಿವ ಅಶೋಕ್ ಭೇಟಿಯ ಬಗ್ಗೆ ಟ್ವಿಟ್ ಮಾಡಿದ ಮಾಜಿ ಸಿಎಂ ಎಚ್‌ಡಿಕೆ, ಇನ್ನು ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಬೆಂಬಲ ಕೋರಿ ಬಿಡದಿ ಬಳಿಯ ಕೇತುಗಾನಹಳ್ಳಿಯ ತೋಟದ ಮನೆಯಲ್ಲಿ ಸಚಿವ ಆರ್. ಅಶೋಕ್ ಭೇಟಿಯಾಗಿ ಚರ್ಚಿಸಿರುವುದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಜಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
"ಹಿರಿಯ ಸಚಿವ ಆರ್. ಅಶೋಕ್ ಇಂದು ನನ್ನ ತೋಟದ ಮನೆಯಲ್ಲಿ ಭೇಟಿಯಾಗಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಕಲಾಪದ ಬಗ್ಗೆಯೂ ಅವರು ನನ್ನೊಂದಿಗೆ ಸಮಾಲೋಚಿಸಿದರು,'' ಎಂದು ಮಾಜಿ ಸಿಎಂ ಟ್ವೀಟ್ ಮಾಡಿದ್ದಾರೆ.
ಇನ್ನೂ ಸಚಿವ ಆರ್. ಅಶೋಕ್ ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ಕೋರಿರುವ ಬಗ್ಗೆ ಟ್ವಿಟರ್‌ನಲ್ಲಿ, "ಸೋಮವಾರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಅಲ್ಲಿ ನಮ್ಮ ಶಾಸಕರ ಜತೆ ಎಲ್ಲ ಬೆಳವಣೆಗಗಳ ಬಗ್ಗೆ ಚರ್ಚಿಸಿದ ನಂತರ ಪಕ್ಷದ ಅಭಿಪ್ರಾಯವನ್ನು ತಿಳಿಸಲಾಗುವುದು ಎಂದು ಅವರಿಗೆ ಹೇಳಿದ್ದೇನೆ,'' ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
"ಸಚಿವ ಆರ್. ಅಶೋಕ್ ಅವರೊಂದಿಗೆ ಪ್ರಸ್ತುತ, ರಾಜ್ಯದ ರೈತಾಪಿ ಜನ ಎದುರಿಸುತ್ತಿರವ ಸಮಸ್ಯೆಗಳೂ ಸೇರಿದಂತೆ ರಾಜ್ಯ ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಸಚಿವರ ಗಮನಕ್ಕ ತಂದಿದ್ದೇನೆ. ಈ ಸಂದರ್ಭದಲ್ಲಿ ನಮ್ಮ ಪಕ್ಷದ ಶಾಸಕರಾದ ಸಾ.ರಾ. ಮಹೇಶ್ ನನ್ನ ಜತೆ ಇದ್ದರು,'' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವಿಟ್ ಮೂಲಕ ತಿಳಿಸಿದ್ದಾರೆ.
r ashok hd kumaraswamy mahanagara palike kalaburagi bjp jds politics ramanagara ಆರ್ ಅಶೋಕ್ ಎಚ್ ಡಿ ಕುಮಾರಸ್ವಾಮಿ ಮಹಾನಗರ ಪಾಲಿಕೆ ಕಲಬುರಗಿ ಬಿಜೆಪಿ ಜೆಡಿಎಸ್ ರಾಜಕೀಯ ರಾಮನಗರ
Kalaburagi Corporation Election Result: Revenue Minister R Ashok Meets to former CM H.D. Kumaraswamy in Ramanagara taluk.
ವ್ಯಪಾರಿಯನ್ನು ದೋಚಿದ್ದ ಐವರು ದರೋಡೆಕೋರರ ಸೆರೆ : 22 22.43 ಲಕ್ಷ ರೂ. ವಶ | KANNADIGA WORLD
Home ಕನ್ನಡ ವಾರ್ತೆಗಳು ಕರ್ನಾಟಕ ವ್ಯಪಾರಿಯನ್ನು ದೋಚಿದ್ದ ಐವರು ದರೋಡೆಕೋರರ ಸೆರೆ : 22 22.43 ಲಕ್ಷ ರೂ. ವಶ
ವ್ಯಪಾರಿಯನ್ನು ದೋಚಿದ್ದ ಐವರು ದರೋಡೆಕೋರರ ಸೆರೆ : 22 22.43 ಲಕ್ಷ ರೂ. ವಶ
Posted By: Gulf ReporterPosted date: November 23, 2015 In: ಕರ್ನಾಟಕ
ಬೆಂಗಳೂರು, ನ.23: ಕೇರಳಕ್ಕೆ ಸಿಗರೇಟ್ ಹಾಗೂ ಚಾಕೋಲೇಟ್ ವಸ್ತುಗಳನ್ನು ಕೊಂಡೊಯ್ಯಲು ಹಣದೊಂದಿಗೆ ಬಂದಿದ್ದ ವ್ಯಾಪಾರಿಯೊಬ್ಬರ ದರೋಡೆ ನಡೆಸಿ 23ಲಕ್ಷ ದೋಚಿದ್ದ 5ಮಂದಿ ದರೋಡೆಕೋರರನ್ನು ಹೆಣ್ಣೂರು ಪೊಲೀಸರು ಬಂಧಿಸಿ 22.43 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಮೋಹನ್(26), ಚಂದ್ರಶೇಖರ್(25), ಚೇತನ್‌ಕುಮಾರ್(26), ಅನಿಲ್‌ಕುಮಾರ್(32) ಮತ್ತು ನವೀನ್‌ಕುಮಾರ್ (26) ಬಂಧಿತ ದರೋಡೆಕೋರರು. ಹೊರಮಾವು ಗ್ರಾಮದಲ್ಲಿರುವ ವಿಜಯ್ ಏಜೆನ್ಸಿಯಲ್ಲಿ ಕೇರಳದ ವಾಸಿಯಾದ ಅನೀಫ್ ಎಂಬುವರು ಕೆಲಸ ಮಾಡುತ್ತಿದ್ದು, ನ.11ರಂದು ಬೆಳಗ್ಗೆ 9.10ರಲ್ಲಿ ಸಿಗರೇಟ್ ಹಾಗೂ ಚಾಕೋಲೇಟ್ ಖರೀದಿಸಲು ವಿಜಯ್‌ಏಜೆನ್ಸಿ ಗೋಡೋನ್ ಬಳಿ ಬಂದಿದ್ದರು.
ಸಿಗರೇಟ್ ಗೋಡೋನ್ ತೆರೆಯದ ಕಾರಣ ಅನಿಫ್ ಅವರು ತಮ್ಮ ಬುಲೆರೋ ಜೀಪನ್ನು ನಿಲ್ಲಿಸಿಕೊಂಡು ಕುಳಿತಿದ್ದರು. ಈ ವೇಳೆ ಐದಾರು ಮಂದಿ ಇದ್ದ ದರೋಡೆಕೋರರು ವಾಹನದ ಬಳಿ ಬಂದು ಅನೀಫ್ ಹಾಗೂ ಅವರ ಚಾಲಕ ಶಫಿ ಅವರ ಮುಖಕ್ಕೆ ಖಾರದಪುಡಿ ಹಾಗೂ ಪೆಪ್ಪರ್ ಸ್ಪ್ರೇ ಹಾಕಿ ಜೀಪಿನಲ್ಲಿದ್ದ 23ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಹೆಣ್ಣೂರು ಪೊಲೀಸರಿಗೆ ಅನಿಫ್ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪೂರ್ವವಲಯದ ಅಪರ ಪೊಲೀಸ್ ಆಯುಕ್ತ ಹರಿಶೇಖರನ್ ಅವರು ನೀಡಿರುವ ಸಲಹೆ ಮೇರೆಗೆ ಉಪಪೊಲೀಸ್ ಆಯುಕ್ತ ಸತೀಶ್‌ಕುಮಾರ್ ಮಾರ್ಗದರ್ಶನದಲ್ಲಿ ಕೆ.ಆರ್.ಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭದ್ರಿನಾಥ್ ನೇತೃತ್ವದಲ್ಲಿ ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್ ಲಕ್ಷ್ಮಿನಾರಾಯಣ್‌ಪ್ರಸಾದ್, ಪಿಎಸ್‌ಐಗಳಾದ ಪ್ರಶೀಲಾ, ಯಶವಂತ್‌ಕುಮಾರ್ ಹಾಗೂ ಸಿಬ್ಬಂದಿಗಳಾದ ಫೈರೋಜ್‌ಖಾನ್,...
ಕೇರಳದ ಏಜೆನ್ಸಿಯವರಾದ ಅನೀಫ್ ಬೆಂಗಳೂರಿನಿಂದ ಕೇರಳಕ್ಕೆ ಸಿಗರೇಟ್ ಹಾಗೂ ಚಾಕೋಲೇಟ್ ವಸ್ತುಗಳನ್ನು ಕೊಂಡುಕೊಳ್ಳಲು ಕೆಲಸಗಾರನ ಜತೆಯಲ್ಲಿ ನಗರದ ಹೊರಮಾವು ಗ್ರಾಮದ ಸಿಗರೇಟ್ ಡೋನ್‌ಗೆ ಬರುವಾಗ ಎಂದಿನಂತೆ ಅನಿಲ್‌ಕುಮಾರ್‌ಗೆ ಮಾಹಿತಿ ನೀಡಿ ಸಿಗರೇಟ್‌ಗಳನ್ನು ಕೊಡಿಸುವಂತೆ ತಿಳಿಸುತ್ತಿದ್ದರು. ಅನಿಲ್‌ಕುಮಾರ್ ಸಿಗರೇಟ್ ಕೊಡಿಸಿ ಅನೀಫ್‌ರಿಂದ ಕಮಿಷನ್ ತೆಗೆದುಕೊಳ್ಳುತ್ತಿದ್ದನು. ಈ ವೇಳೆ ಅನಿಲ್‌ಕುಮ...
ಡಿ.11 ರಂದು ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ; ಸಯ್ಯದ್ ಅಲಿ ತಂಙಲ್ ಕುಂಬೋಲ್ , ಎವಿ ಉಸ್ತಾದ್ ನಂದಿ , ಹುಸೈನ್ ದಾರಿಮಿ ದುಬೈ ಯಲ್ಲಿ
ಹಿಂಸಾಚಾರದ ಬಳಿಕ ನಾಪತ್ತೆ, ದೀಪ್ ಸಿದು ಹುಡುಕಿ ಕೊಟ್ಟವರಿಗೆ 1 ಲಕ್ಷ ಬಹುಮಾನ! | Delhi Police announce Rs 1L cash reward for information on Deep Sidhu pod
Bangalore, First Published Feb 3, 2021, 2:56 PM IST
ನವದೆಹಲಿ(ಫೆ.02): ದೆಹಲಿಯಲ್ಲಿ ರೈತರ ಟ್ರಾಕ್ಟರ್ ಪರೇಡ್ ನಡುವೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿರುವ ಆರೋಪಕ್ಕೆ ಸಿಲುಕಿರುವ ನಟ ದೀಪ್ ನಾಪತ್ತೆಯಾಗಿದ್ದಾರೆ. ಹೀಗಿರುವಾಗ ದೆಹಲಿ ಪೊಲೀಸರು ದೀಪ್ ಸಿಧು ಹುಡುಕಿಕೊಟ್ಟವರಿಗೆ ಒಂದು lkfx ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಹೌದು, ವಿವಾದದ ನಡುವೆಯೇ ಜನವರಿ 26ರ ಗಣರಾಜ್ಯೋತ್ಸವದಂದು ನಡೆದಿದ್ದ ರೈತ ಟ್ರಾಕ್ಟರ್ ಪೆರೇಡ್ ನಡುವೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ನಿಶಾನ್‌ ಸಾಹೇಬ್ ಹಾರಿಸಲಾಗಿತ್ತು. ಇದರ ಹಿಂದೆ ಪಂಜಾಬಿ ನಟ ದೀಪ್ ಸಿಧು ಇದ್ದಾರೆಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಈ ಹಿಂಸಾಚಾರದ ಮರುದಿನವೇ ಪ್ರಚೋದನಕಾರಿ ಭಾಷಣ ನೀಡಿ ಮತ್ತಷ್ಟು ಸಮಸ್ಯೆಯುಂಟು ಮಾಡಿದ ಆರೋಪದಡಿ ಸಿಧು ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್...
ಕೆಂಪು ಕೋಟೆ ಮೇಲೆ ದ್ವಜಾರೋಹಣ: ದೀಪ್ ಸಿದು ಹೇಳಿದ್ದಿಷ್ಟು
ಇಂಗ್ಲೀಷ್‌ನಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಮಾತು
ದೀಪ್‌ ಸಿಧು ಬಗ್ಗೆ ಪಂಜಾಬ್‌ ಹೊರಗಿನ ಜನರಿಗೆ ಹೆಚ್ಚು ತಿಳಿದಿರಲಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಇವರ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಸಿಧು ಸಿಂಘು ಗಡಿಯಲ್ಲಿ ನಿಂತು ಪೊಲಿಸರೊಂದಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಿದ್ದ ದೃಶ್ಯವಿತ್ತು. ಆರಂಭದಲ್ಲಿ ಈ ವಿಡಿಯೋ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿರುವ ರೈತ ಎಂದು ಹರಿದಾಡಿತ್ತಾದರೂ, ಬಳಿಕ ಅವರು ಪಂಜಾಬಿನ ಖ್ಯಾತ ನಟ ಎಂಬ ವಿಚಾರ ಬಯಲಾಗಿ...
ಬಿಜೆಪಿ ಜೊತೆಗಿನ ನಂಟಿನ ಮಾತು
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಿಎಂ ಮೋದಿ ಜೊತೆಗಿದ್ದ ಸಿಧು ಫೋಟೋ ಕೆಲ ಸಮಯದ ಹಿಂದೆ ಭಾರೀ ವೈರಲ್ ಆಗಿತ್ತು. ಇದಾದ ಬಳಿಕ ಅವರಿಗೆ ಹಾಗೂ ಬಿಜೆಪಿಗೆ ಆಫ್ತ ನಂಟಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ 2019ರ ಲೋಕಸಭಾ ಚುನಾವಣೆಯಲ್ಲಿ ಸಿಧು, ನಟ ಸನ್ನಿ ಡಿಯೋಲ್ ಪರ ಪ್ರಚಾರವನ್ನೂ ಮಾಡಿದ್ದರು.. ಹೀಗಿದ್ದರೂ ನಟ ಸನ್ನಿ ಸೇರಿ ಬಿಜೆಪಿ ಇವರೊಂದಿಗೆ ತಮಗೆ ಯಾವ ಸಂಬಂಭವೂ ಇಲ್ಲ ಎಂದಿದ್ದರು.
ತಮ್ಮ ಕನಸು ಮಕ್ಕಳ ಮೇಲೆ ಹೇರದಿರಿ: ಪಾಲಕರಿಗೆ ಡಿಸಿ ವಿನೋತ್ ಕಿವಿಮಾತು ·
ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪಾಸಾಗಿರುವ ವಿದ್ಯಾರ್ಥಿಗಳ ಮೇಲೆ ಪಾಲಕರು ಒತ್ತಡ ಹಾಕ ಬೇಡಿ. ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿದರೇ ಭವಿಷ್ಯ ಉಜ್ವಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಡಿಸಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಶೈಕ್ಷಣಿಕ ಹಾದಿಯಲ್ಲಿ ಎಸ್ಸೆಸ್ಸೆಲ್ಸಿ ಬಹುಮುಖ್ಯ ಘಟ್ಟ ಎಂದರು.
ಅರಿವಿನ ಕೊರತೆ ಜತೆ ಮಕ್ಕಳ ಭವಿಷ್ಯ ರೂಪಿಸುವ ಒತ್ತಡ ಪಾಲಕರ ಮೇಲಿದೆ. ಆದರೆ, ತಮ್ಮ ಆಸೆ, ಆಕಾಂಕ್ಷೆ ಈಡೇರಿಸಿಕೊಳ್ಳಲು ನಿರ್ದಿಷ್ಟ ವಿಷಯವನ್ನೇ ಓದುವಂತೆ ಒತ್ತಡ ಹಾಕುವುದು ಸರಿಯಲ್ಲ. ವಿಷಯ ಆಯ್ಕೆಯನ್ನು ಮಕ್ಕಳಿಗೆ ಬಿಡಿ ಎಂದು ಹೇಳಿದರು.
ಎಲ್ಲರೂ ಇಂಜಿನಿಯರ್, ಡಾಕ್ಟರ್‌ಗಳಾಗಲು ಸಾಧ್ಯವಿಲ್ಲ. ಕೆಲವರಿಗೆ ವಿಜ್ಞಾನ ಇಷ್ಟವಾದರೆ, ಇನ್ನು ಕೆಲವರಿಗೆ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ತಾಂತ್ರಿಕ ಶಿಕ್ಷಣದ ಆಸಕ್ತಿ ಇರುತ್ತದೆ. ಫ್ಯಾಷನ್ ಡಿಸೈನ್, ಗೃಹ ವಿಜ್ಞಾನ, ಡಿಪ್ಲೋಮಾ, ಪ್ಯಾರಾಮೆಡಿಕಲ್ ಮುಂತಾದ ಹಲವು ಕೋರ್ಸ್‌ಗಳು ಲಭ್ಯವಿದೆ. ಆದರೆ, ಪಾಲಕರ ಒತ್ತಾಯಕ್ಕೆ ಕಷ್ಟಕರ ಹಾಗೂ ನಿರಾಸಕ್ತ ವಿಷಯದ ಓದಿಗೆ ದಾಖಲಾಗಿ ಕಷ್ಟಪಡುತ್ತಾರೆ ಎಂದರು.
ಉಪನ್ಯಾಸಕರು, ಪ್ರಾಂಶುಪಾಲರು ದಾಖಲಾತಿ ಮಾಡಿಕೊಳ್ಳುವ ಮುನ್ನ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ಅವರ ಆಸಕ್ತಿ ಗಮನಿಸಿ ಸಲಹೆ ನೀಡಿದರೆ ಪಿಯುಸಿ ಫಲಿತಾಂಶ ಸುಧಾರಣೆ ಆಗುತ್ತದೆ ಎಂದು ತಿಳಿಸಿದರು.
ಜಿಪಂ ಸಿಇಒ ಸಿ.ಸತ್ಯಭಾಮಾ ಮಾತನಾಡಿ, ಬರದ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಕಿಚ್ಚು ಹೊತ್ತಬೇಕು. ಈ ನೆಲದ ಅನೇಕರು ಐಎಎಸ್ ಪಾಸಾಗಿ ಉನ್ನತ ಸ್ಥಾನಗಳಿಸಿದ್ದಾರೆ. ಅವರ ಹಾದಿಯಲ್ಲಿ ನೀವುಗಳು ಸಾಗಬೇಕು ಎಂದರು.
ಎಸ್ಸೆಸ್ಸೆಲ್ಸಿಯಲ್ಲಿ 625 ಕ್ಕೆ 613 ಅಂಕ ಗಳಿಸಿದ ವಿದ್ಯಾವಿಕಾಸ ಶಾಲೆಯ ವಿ.ಅನುಷಾ, ಗಾರ್ಡಿಯನ್ ಏಂಜಲ್‌ನ ಕಾವೇರಿ, ಡಿ.ವಿ.ಎಸ್ ಶಾಲೆಯ ಕಾವ್ಯಾ, ಗೂಳಯ್ಯನಹಟ್ಟಿ ಮುರಾರ್ಜಿ ವಸತಿ ಶಾಲೆ ಕೆ.ಶ್ವೇತಾ ಅವರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಸರ್ಕಾರಿ ಪಾಲಿಟೆಕ್ನಿಕ್‌ನ ಉಪನ್ಯಾಸಕರಾದ ಪ್ರದೀಪ್, ನಯನಾ, ಭಾರತೀಯ ಪುರಾತತ್ವ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಗೋಕುಲ್, ತುಂಬುರುಕಟ್ಟೆ ಮಂಜುನಾಥ ಮಾಹಿತಿ ನೀಡಿದರು.
ಜ್ಞಾನಕ್ಕೆ ಯಾವುದೇ ಗಡಿಗಳಿಲ್ಲ: ಡಾ.ಕೆ.ದಿನೇಶ್ – ಮೈಸೂರು ಟುಡೆ
Home/ ನಮ್ಮೂರು/ ಮೈಸೂರು/ಜ್ಞಾನಕ್ಕೆ ಯಾವುದೇ ಗಡಿಗಳಿಲ್ಲ: ಡಾ.ಕೆ.ದಿನೇಶ್
ಜ್ಞಾನಕ್ಕೆ ಯಾವುದೇ ಗಡಿಗಳಿಲ್ಲ: ಡಾ.ಕೆ.ದಿನೇಶ್
ಮೈಸೂರು,ಅ.21- ಜ್ಞಾನಕ್ಕೆ ಯಾವುದೇ ಗಡಿಗಳಿಲ್ಲ. ಸಮಗ್ರ ವಿಜ್ಞಾನ ಮತ್ತು ಅಂತರಶಿಕ್ಷಣ ಅಧ್ಯಯನಗಳು ಜ್ಞಾನವನ್ನು ಪಡೆಯಲು ಉತ್ತಮ ಮಾರ್ಗವಾಗಿವೆ ಎಂದು ಇನ್ ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾ.ಕೆ.ದಿನೇಶ್ ಹೇಳಿದರು.
ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ, ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ್, ಮೈಸೂರು ವಿಶ್ವವಿದ್ಯಾನಿಲಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬದಲಾವಣೆಗೆ ವೇಗವರ್ಧಕವಾಗಿ ವಿಶ್ವವಿದ್ಯಾನಿಲಯ ಎಂಬ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಯುವಸಮೂಹಕ್ಕೆ ತಂತ್ರಜ್ಞಾನ ಮತ್ತು ವಿಜ್ಞಾನದ ಸಹಕಾರ ಇರುವುದರಿಂದ ಎಲ್ಲವೂ ಸರಳವಾಗಿ ಸಿಗುತ್ತದೆ. ಆದರೆ, ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಯಾವುದೇ ವ್ಯಕ್ತಿ ಯಶಸ್ಸು ಪಡೆಯಬೇಕಾದರೆ ಸಪ್ತ ಸೂತ್ರಗಳನ್ನು ಅನುಸರಿಸಬೇಕು. ಅವುಗಳೆಂದರೆ ಸಾಹಸ ಮನೋಭಾವ, ನಿಮ್ಮನ್ನು ನೀವು ನಂಬುವುದು, ಸೃಜನಶೀಲತೆ, ಕನಸು ಕಾಣುವುದು, ಯೋಜನೆ ಅನುಷ್ಠಾನ, ಸಾಮಾಜಿಕ ಕಳಕಳಿ, ಆವಿಷ್ಕಾರ. ಇವಿ...
ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠ ಇರುವವರಿಗೆ ಸವಾಲುಗಳು ಸಾಲು ಸಾಲಾಗಿ ಬರುತ್ತವೆ. ಇನ್ ಪೋಸಿಸ್ ಸಂಸ್ಥೆ ಸ್ಥಾಪನೆ ಮಾಡಿದಾಗಲೂ ಸವಾಲುಗಳು ಇದ್ದವು. ಇಂದು ಕೂಡ ಸವಾಲುಗಳಿವೆ. ಹಾಗಂತ ಹಿಡಿದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸದೆ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಹಾಗೇ ಮೆಟ್ಟಿ ನಿಂತಿದ್ದ ಪರಿಣಾಮ ಇಂದು ಇನ್ ಪೋಸಿಸ್ ಸಂಸ್ಥೆ ಜಗತ್ತಿನಲ್ಲೇ 3 ಮೂರನೇ ಅತಿದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ...
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎ.ಕೋರಿ, ಇಂಡಿಯನ್ ಸೈನ್‌ಸ್‌ ಕಾಂಗ್ರೆಸ್‌ನ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್, ಶಿಕ್ಷಣ ತಜ್ಞರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಜಿ.ಕೆ, ಎಂ.ಎನ್)
ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ ಕ್ಲಿಕ್ಕಿಸಿದ ವರುಣ್ ಧವನ್ ಗೆ ಶಾಕ್ ಕೊಟ್ಟ ಮುಂಬೈ ಪೊಲೀಸ್ - Public TV
ಮುಂಬೈ: ವರುಣ್ ಧವನ್ ಜುಡ್ವಾ-2 ಚಿತ್ರದ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಹೀಗಿರುವಾಗಲ್ಲೇ ಮುಂಬೈ ಪೊಲೀಸರು ಅವರಿಗೆ ಒಂದು ಶಾಕ್ ಕೊಟ್ಟಿದ್ದಾರೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ ಕ್ಲಿಕ್ಕಿಸಿದ್ದಕ್ಕೆ ಮುಂಬೈ ಪೊಲೀಸರು ವರುಣ್ ಗೆ ದಂಡ ಕಟ್ಟಲು ತಿಳಿಸಿದ್ದಾರೆ.
ಕಾರಿನಲ್ಲಿ ಹೋಗುತ್ತಿರುವಾಗ ಟ್ರಾಫಿಕ್ ಸಿಗ್ನಲ್ ನಲ್ಲಿ ಪಕ್ಕದಲ್ಲಿದ್ದ ಆಟೋರಿಕ್ಷಾದಲ್ಲಿದ್ದ ಅಭಿಮಾನಿವೊಬ್ಬರು ವರಣ್ ಧವನ್ ಜೊತೆ ಸೆಲ್ಫೀ ತೆಗೆದುಕೊಳ್ಳಲು ಕೇಳಿಕೊಂಡಿದ್ರು. ಅಭಿಮಾನಿಗೆ ನಿರಾಶೆ ಆಗಬಾರದೆಂದು ವರುಣ್ ಕಾರಿನ ಕಿಟಕಿಯಿಂದ ತಲೆಯನ್ನು ಹೊರ ಹಾಕಿ ಸೆಲ್ಫೀ ತೆಗೆದುಕೊಂಡಿದ್ದಾರೆ.
ಇದನ್ನ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಮುಂಬೈ ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿ " ಇಂತಹ ಸಾಹಸಗಳು ಬೆಳ್ಳಿ ತೆರೆಯ ಮೇಲೆ ಕೆಲಸ ಮಾಡುತ್ತವೆ, ಆದ್ರೆ ಮುಂಬೈನ ರಸ್ತೆಗಳಲ್ಲಿ ಅಲ್ಲ. ನಿಮ್ಮ, ನಿಮ್ಮ ಅಭಿಮಾನಿಗಳ ಹಾಗೂ ಇತರೆ ಕೆಲವರ ಪ್ರಾಣದ ಜೊತೆ ಆಟವಾಡಿದ್ದೀರ. ನಿಮ್ಮಂತಹ ಯೂತ್ ಐಕಾನ್ ಹಾಗೂ ಜವಾಬ್ದಾರಿಯುತ ಮುಂಬ...
ಇದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಯಿಸಿದ ವರುಣ್ ಕ್ಷಮೆ ಕೇಳಿದ್ದಾರೆ. "ನನ್ನನ್ನು ಕ್ಷಮಿಸಿ. ನಮ್ಮ ವಾಹನಗಳು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದವು ಹಾಗೂ ನನಗೆ ಅಭಿಮಾನಿಗಳ ಭಾವನೆಗಳಿಗೆ ನೋವು ಮಾಡವುದಕ್ಕೆ ಇಷ್ಟವಿರಲಿಲ್ಲ. ಮುಂದಿನ ಬಾರಿ ನಾನು ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಳ್ತೀನಿ. ಇದನ್ನ ಪ್ರೋತ್ಸಾಹಿಸಲ್ಲ" ಎಂದು ವರುಣ್ ಟ್ವೀಟ್ ಮಾಡಿದ್ದಾರೆ.
ನೀವು ನಮ್ಮ ಟ್ವೀಟ್ ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡಿದ್ದು ನಮಗೆ ಖುಷಿಯಾಗಿದೆ ಎಂದು ಮುಂಬೈ ಪೊಲೀಸರು ಮತ್ತೆ ಟ್ವೀಟ್ ಮಾಡಿದ್ದಾರೆ.
Related Topics:bollywoodfanfinePublic TVselfieVarun Dhawanಅಭಿಮಾನಿದಂಡಪಬ್ಲಿಕ್ ಟಿವಿಬಾಲಿವುಡ್ವರುಣ್ ಧವನ್ಸೆಲ್ಫೀ
ಸಚಿನ್ ಟ್ವೀಟ್ ಮೇಲೆ ಎಲ್ಲರ ಕಣ್ಣು | Sachin on Twitter | Social Networking Site | Micro Blogging | Sachin Tweets | Cricketers Twitter | ಸಚಿನ್ ಟ್ವೀಟ್ ಮೇಲೆ ಎಲ್ಲರ ಕಣ್ಣು - Kannada Oneindia
20 min ago ಪೌರಕಾರ್ಮಿಕರಿಗೆ "ಪಾಲಿಸಿ" ಉಡುಗೊರೆ ನೀಡಿದ ಪಾಲಿಕೆ ಸದಸ್ಯ
27 min ago 'ಡಿಕೆಶಿ ಬಾಯಲ್ಲೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಬರಬಹುದು'; ಶೆಟ್ಟರ್ ಕಿಡಿ
32 min ago ಮೋದಿ ದಾರ್ಶನಿಕ, ಬಹುಮುಖ ಪ್ರತಿಭೆ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಶ್ಲಾಘನೆ
| Published: Wednesday, May 5, 2010, 12:55 [IST]
ಮುಂಬೈ, ಮೇ.5: ಕ್ರಿಕೆಟ್ ಮೈದಾನದಿಂದ ಕೊಂಚ ಕಾಲ ದೂರವಿರುಚ ಸಚಿನ್ ಈಗ ಹೊಸ ಅಂಕಣಕ್ಕೆ ಕಾಲಿರಿಸಿದ್ದಾರೆ. ತನ್ನ ಸಹ ಆಟಗಾರರಾದ ಧೋನಿ, ಯುವರಾಜ್ ರಂತೆ ತಾವು ಕೂಡ ಟ್ವಿಟ್ಟರ್ ಹಕ್ಕಿಯ ಗೂಡು ಹೊಕ್ಕಿದ್ದಾರೆ. ತಮ್ಮ ಬಾಲ್ಯದ ಸ್ನೇಹಿತ ಅತುಲ್ ಕಸ್ಬೇಕರ್ ಅವರೊಡಗಿನ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿರುವ ಸಚಿನ್, ತಮ್ಮ ಖಾತೆ ಬೇನಾಮಿಯಲ್ಲ ಎಂದೂ ಸಹ ಟ್ವೀಟ್ ಮಾಡಿದ್ದಾರೆ.
ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್.ಕಾಂ ಗೆ ಸಚಿನ್ ಕಾಲಿರಿಸುತ್ತಿದ್ದಂತೆ ಅಭಿಮಾನಿಗಳು ಹಿಂಬಾಲಕರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಟ್ವಿಂಟಿ20 ಪಂದ್ಯಗಳಲ್ಲಿ ಸಚಿನ್ ಸ್ಟ್ರೈಕ್ ರೇಟ್ ಅನ್ನು ಮೀರಿಸುವಂತಿದೆ ಈ ಬೆಳವಣಿಗೆ. ಸದ್ಯಕ್ಕೆ ಸುಮಾರು 27,949 ಹಿಂಬಾಲಕರನ್ನು ಸಚಿನ್ ಹೊಂದಿದ್ದಾರೆ.
ಸೆಹ್ವಾಗ್ ಗೆ ಎರಡನೆ ಮಗುವಾಗಿದ್ದಕ್ಕೆ ಶುಭ ಕೋರಿರುವ ಸಚಿನ್ , ತಮ್ಮ ಕೈಗಾದ ಗಾಯ ವಾಸಿಯಾಗಿದೆ. ಡಾಕ್ಟರ್ ಇನ್ನೂ ವಿಶ್ರಾಂತಿ ಅಗತ್ಯವಿದೆ ಎನ್ನುತ್ತಿದ್ದಾರೆ. ಈ ಬಗ್ಗೆ ಮತ್ತೆ ತಿಳಿಸುವೆ ಎಂದು ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ನಟ, ನಟಿಯರ ನಂತರ ಸಿನಿಮಾದಂತೆ ಗ್ಲಾಮರಸ್ ಆದ ಕ್ರಿಕೆಟ್ ಲೋಕದ ದಿಗ್ಗಜರು ಟ್ವಿಟ್ಟರ್ ಲೋಕಕ್ಕೆ ಕಾಲಿರಿಸುತ್ತಿದ್ದಾರೆ.
ವಿಡಿಯೋ: ಟ್ವೀಟರ್ ಲೋಕಕ್ಕೆ ಸಚಿನ್ ಎಂಟ್ರಿ