text
stringlengths
0
61.5k
ರಸ್ತೆ ಗುಂಡಿಗಳನ್ನು ಮುಚ್ಚಲು ಯಾವ ಕಾರ್ಯವಿಧಾನ ಅನುಸರಿಸಲಾಗುತ್ತಿದೆ. ನಿಮ್ಮ ಹೃದಯ ಮುಟ್ಟಿ ಹೇಳಿ , ಗುಂಡಿಗಳನ್ನು ಮುಚ್ಚಿರುವಿರಾ ಎಂದು ಬಿಬಿಎಂಪಿ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನಿಸಿತು.
bengaluru bbmp bwssb karnataka high court road ಬೆಂಗಳೂರು ಜಲಮಂಡಳಿ ಬಿಬಿಎಂಪಿ ರಸ್ತೆ ಕರ್ನಾಟಕ ಹೈಕೋರ್ಟ್
BWSSB has said before the high court that permission from BBMP is mandatory for digging roads fir water and drainage connection in Bengaluru city.
ಸಂದರ್ಶನ: ಉಪೇಂದ್ರ ಅಣ್ಣನ ಮಗ ನಿರಂಜನ್ ಮುಂದಿರುವ ಕನಸು | Upendra's relative Niranjan Sudhindra interview - Kannada Filmibeat
Exclusive interview with Niranjan Sudheendra
ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದಿಂದ ನಟ ನಿರಂಜನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಮೊದಲ ಅಗ್ನಿಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಅವರ ಜೊತೆ 'ಸೆಕೆಂಡ್ ಹಾಫ್' ಚಿತ್ರದಲ್ಲಿ ತೆರೆಹಂಚಿಕೊಂಡ ನಿರಂಜನ್ ಸುಧೀಂದ್ರ ಇದೀಗ ಹೊಸ ಹೊಸ ಪ್ರಾಜೆಕ್ಟ್ ಗಳಿಗಾಗಿ ತಯಾರಾಗುತ್ತಿದ್ದಾರೆ.
ಉಪ್ಪಿಯ ಗರಡಿಯಲ್ಲಿ ಬೆಳೆದ ನಿರಂಜನ್ ಅವರು ಮುಂದಿನ ಭವಿಷ್ಯವನ್ನ ಕನ್ನಡ ಚಿತ್ರರಂಗದಲ್ಲಿ ರೂಪಿಸಿಕೊಳ್ಳಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಿದ್ರೆ, ಉಪೇಂದ್ರ ಅವರ ಅಣ್ಣನ ಮಗನ ಮುಂದಿನ ಸಿನಿಮಾಗಳು ಹೇಗಿರಲಿದೆ.? ಯಾವ ರೀತಿಯ ಚಿತ್ರಗಳನ್ನ ಮಾಡಲು ಪ್ಲ್ಯಾನ್ ಮಾಡ್ತಿದ್ದಾರೆ.? ಎಂಬುದರ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. ಪೂರ್ತಿ ಸಂದರ್ಶನ ಮತ್ತು ವಿಡಿಯೋ ಮುಂದೆ ಇ...
ನೀವು ಸಿನಿಮಾರಂಗಕ್ಕೆ ಬಂದಿದ್ದು ಹೇಗೆ.?
''ಚಿಕ್ಕವಯಸ್ಸಿನಿಂದಲೂ ನಾನು ಚಿಕ್ಕಪ್ಪನ (ನಟ ಉಪೇಂದ್ರ) ಜೊತೆಯಲ್ಲಿ ಬೆಳದಿದ್ದು. ಅವರೇ ನನಗೆ ದೊಡ್ಡ ಸ್ಪೂರ್ತಿ. ಕಾಲೇಜ್ ದಿನಗಳಿಂದಲೂ ಡ್ಯಾನ್ಸ್, ನಟನೆ, ನಾಟಕಗಳಲ್ಲಿ ಹೆಚ್ಚು ಆಸಕ್ತಿ ಇತ್ತು. ನಂತರ ನಾನು ಪರ್ಫಾಮ್ ಮಾಡಬಹುದು ಅಂತ ಅನಿಸಿತು. ಈಗ 'ಸೆಕೆಂಡ್ ಹಾಫ್' ಚಿತ್ರದ ಮೂಲಕ ಅದನ್ನ ನೆರವೇರಿಸಿಕೊಳ್ಳುವತ್ತಾ ಸಾಗಿದ್ದೇನೆ '' - ನಿರಂಜನ್
'ಸೆಕೆಂಡ್ ಹಾಫ್' ಚಿತ್ರಕ್ಕೆ ಅವಕಾಶ ಹೇಗೆ ಸಿಕ್ತು.?
''ನಿರ್ದೇಶಕ ಯೋಗಿ ದೇವಗಂಗೆ ಪ್ರಿಯಾಂಕಾ ಅವರ ಬಳಿ ಮಾತನಾಡಲು ಮನೆಗೆ ಬಂದಾಗ ನನ್ನ ಫೋಟೋ ನೋಡಿದ್ರು. ನಂತರ ನಮ್ಮ ಚಿಕ್ಕಮ್ಮನ ಬಳಿ ಅವರನ್ನ ಭೇಟಿ ಮಾಡ್ಬೇಕು ಅಂತ ಕೇಳಿದ್ರು. ನಾನು ಹೋಗಿ ಮೀಟ್ ಮಾಡಿದೆ. ಈ ರೀತಿ ಒಂದು ಪಾತ್ರವಿದೆ ಮಾಡಿ ಅಂದ್ರು. ನನಗೂ ಖುಷಿ ಆಯ್ತು, ಒಪ್ಕೊಂಡೆ''
ಮುಂದಿನ ದಿನಗಳಲ್ಲಿ ಯಾವ ರೀತಿ ಸಿನಿಮಾ ಮಾಡ್ಬೇಕು ಅಂದುಕೊಂಡಿದ್ದೀರಾ?
''ನನಗೆ ಮಾಸ್ ಸಿನಿಮಾಗಳು ಮಾಡ್ಬೇಕು ಅನ್ನೋದು ಇಷ್ಟ. ಮಾಸ್ ಕ್ಯಾರೆಕ್ಟರ್ ಮಾಡ್ಬೇಕು ಅನ್ನೋ ಆಸೆ. ಎಲ್ಲ ರೀತಿಯ ಪಾತ್ರಗಳನ್ನ ಕೂಡ ಮಾಡ್ತೀನಿ. ಒಬ್ಬ ಕಲಾವಿದ ಎಲ್ಲ ರೀತಿಯ ಪಾತ್ರವನ್ನ ಮಾಡ್ಬೇಕು. ಆಗಲೆ ಅವರು ಬೆಳೆಯಲು ಸಾಧ್ಯ''
ಉಪೇಂದ್ರ ಕುಟುಂಬ ಎನ್ನುವುದು ನಿಮಗೆ ಪ್ಲಸ್ ಅಥವಾ ಮೈನಸ್.?
''ಎಲ್ಲವೂ ಪ್ಲಸ್ ಪಾಯಿಂಟ್. ಯಾಕಂದ್ರೆ, ಅವರ ಆರ್ಶೀವಾದ ನಮ್ಮ ಮೇಲಿದೆ. ಉಪೇಂದ್ರ ಅವರ ಕುಟುಂಬದಿಂದ ಒಬ್ಬ ನಟ ಅಂದ್ಮೇಲೆ ಒಂದು ನಿರೀಕ್ಷೆ ಇರುತ್ತೆ, ಅದನ್ನ ನಾವು ಪ್ರೂವ್ ಮಾಡಲೇಬೇಕು. ಅದರಲ್ಲೀ ಬೇಜಾರು ಮಾಡಬಾರದು''
ನೀವು ಬಾಲನಟನಾಗಿ ಅಭಿನಯಿಸಿದ್ದೀರಂತೆ ಹೌದಾ?
''ಉಪೇಂದ್ರ ಅವರ 'ಎ' ಸಿನಿಮಾದಲ್ಲಿ ನಾನು ನನಗೆ ಗೊತ್ತಿಲ್ಲದ ಹಾಗೆ ಅಭಿನಯಿಸಿದ್ದೇನೆ. ಚಿತ್ರದ ಆರಂಭದಲ್ಲಿ ಒಂದು ಮಗು ಅಳುತ್ತೆ. ಆ ಮಗು ನಾನೇ. 7ನೇ ತರಗತಿ ಓದುವಾಗ 'ಬಳ್ಳಾರಿ ನಾಗ' ಅಂತ ವಿಷ್ಣುವರ್ಧನ್ ಸರ್ ಅವರ ಸಿನಿಮಾದಲ್ಲಿ ಅವರ ಜೂನಿಯರ್ ಪಾತ್ರ ಮಾಡಿದ್ದೆ. ಅವರ ಜೊತೆ ಅಭಿನಯಿಸೋಕೆ ಒಂದು ಅವಕಾಶ ಸಿಕ್ತು ಅನ್ನೋದೆ ಖುಷಿ''
ಮುಂದಿನ ಪ್ರಾಜೆಕ್ಟ್ ಗಳು ಯಾವುದು.?
''ಈ ಸಿನಿಮಾ ಮುಗಿಲಿ ಅಂತ ಸುಮ್ಮನಿದ್ದೆ. ತುಂಬಾ ಜನ ನಿರ್ದೇಶಕರು ಬಂದು ಕೇಳ್ತಿದ್ದಾರೆ. ತುಂಬಾ ವಿಭಿನ್ನವಾದ ಕಥೆಗಳನ್ನ ತರ್ತಿದ್ದಾರೆ. ಈಗ ಕತೆಗಳನ್ನ ಕೇಳುತ್ತಿದ್ದೇನೆ. ಒಂದೊಳ್ಳೆ ಪ್ರಾಜೆಕ್ಟ್ ಮಾಡುವ ಆಸೆಯಿದೆ. ಈಗ ಕೆಲಸ ಆರಂಭವಾಗಬೇಕಿದೆ. ಸದ್ಯದಲ್ಲೇ ಅನೌನ್ಸ್ ಮಾಡ್ತೇವೆ''
ನಿಮ್ಮ ಡ್ಯಾನ್ಸ್ ಜರ್ನಿ ಬಗ್ಗೆ ಹೇಳಿ.?
''ಕಾಲೇಜ್ ದಿನಗಳಿದಂಲೂ ಡ್ಯಾನ್ಸ್ ಅಂದ್ರೆ ನನಗೆ ತುಂಬಾ ಇಷ್ಟ. ಕಾಲೇಜ್ ನಲ್ಲಿ ನಮ್ಮದೊಂದು ಟೀಮ್ ಇತ್ತು. ಆ ಟೀಮ್ ಮೂಲಕ ಎಲ್ಲ ಕಾಲೇಜ್ ಗಳಲ್ಲೂ ನಡೆಯುತ್ತಿದ್ದ ಡ್ಯಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದೀವಿ. ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದೇನೆ''.
ನಿಮ್ಮ ಸಿನಿಮಾ ನೋಡಿದ್ಮೇಲೆ ಸಿಕ್ಕಿರುವ ದೊಡ್ಡ ಮೆಚ್ಚುಗೆ ಯಾವುದು.?
''ನಮ್ಮ ಚಿಕ್ಕಪ್ಪ ಅವರಿಂದ. ಸಿನಿಮಾ ಎಲ್ಲ ಮುಗಿದಮೇಲೆ ಅವರು ಸಿನಿಮಾ ನೋಡಿದ್ರು. 'ನೀನೊಬ್ಬ ದೊಡ್ಡ ಹೀರೋ ಆಗ್ತೀಯಾ' ಎಂದು ಶುಭಹಾರೈಸಿದ್ರು. ನಾನು ಕೂಡ ಅದಕ್ಕೆ ನ್ಯಾಯ ಒದಗಿಸಿದ್ದೇನೆ ಅನಿಸಿದೆ. ಯಾಕಂದ್ರೆ, ಎಲ್ಲರೂ ನನ್ನ ಪಾತ್ರವನ್ನ ಮೆಚ್ಚಿಕೊಂಡ್ರು''
ನಿಮ್ಮ ಕ್ರಶ್ ಯಾರು.? ನಿಮಗೆ ಯಾರ್ ಹೀರೋಯಿನ್ ಆಗ್ಬೇಕು.?
''ತುಂಬಾ ಜನ ಇಷ್ಟ ಆಗ್ತಾರೆ. ಸದ್ಯ, ಆಶಿಕಾ ರಂಗನಾಥ್, ರಶ್ಮಿಕಾ ಮಂದಣ್ಣ ಅವರನ್ನ ತೆರೆಮೇಲೆ ನೋಡೋಕೆ ಒಂಥರಾ ಖುಷಿ. ಇನ್ನು ಹೀರೋಯಿನ್ ಅಂತ ಹೇಳೋದಾದರೇ, ತುಂಬಾ ಜನ ಇದ್ದಾರೆ. ಸ್ಕ್ರಿಪ್ಟ್ ನೋಡಿ ಆಯ್ಕೆ ಮಾಡ್ಕೋಬೇಕು''
Read more about: interview upendra priyanka upendra sandalwood ಸಂದರ್ಶನ ಉಪೇಂದ್ರ ಪ್ರಿಯಾಂಕಾ ಉಪೇಂದ್ರ ಸ್ಯಾಂಡಲ್ ವುಡ್
Niranjan Sudheendra relative of Sandalwood real star upendra has begun his sandalwood journey. He has shared screen with his aunt Priyanka upendra in 2nd half movie.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಡಾ.ಜಿ.ಶಂಕರ್ ಸಲಹೆ | Prajavani
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಡಾ.ಜಿ.ಶಂಕರ್ ಸಲಹೆ
ಕೋಟ ಆನಂದೋತ್ಸವ, ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭ
Published: 10 ಜೂನ್ 2018, 16:48 IST
Updated: 10 ಜೂನ್ 2018, 16:48 IST
ಕೋಟ(ಬ್ರಹ್ಮಾವರ): ಪೋಷಕರು ಮಕ್ಕಳಿಗೆ ಸಂಸ್ಕಾರ ನೀಡಬೇಕು. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಆಗ ತಮ್ಮ ಬದುಕಿನಲ್ಲಿ ಸಾರ್ಥಕ ದಿನ ಕಾಣಬಹುದು. ಇದು ನಮ್ಮ ಹಿರಿಯರು ನೀಡಿದ ಬಹುದೊಡ್ಡ ಕೊಡುಗೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ ಶಂಕರ್ ಹೇಳಿದರು.
ಕೋಟ ಮಣೂರಿನ ಸಂಯುಕ್ತ ಪ್ರೌಢಶಾಲಾ ವಠಾರದ ಗೀತಾನಂದ ರಂಗಮಂದಿರದಲ್ಲಿ ಇತ್ತೀಚೆಗೆ ಕೋಟ ಪಡುಕೆರೆಯ ಗೀತಾನಂದ ಫೌಂಡೇಶನ್‌ನ ಆಶ್ರಯದಲ್ಲಿ ನಡೆದ ಆನಂದೋತ್ಸವ ಹಾಗೂ ಉಚಿತ ನೋಟ್‌ಬುಕ್ ವಿತರಣೆ, ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಗಾಲಿಕುರ್ಚಿ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಡಲ ತಡಿಯಂಥ ಪ್ರದೇಶವೆಂಬುವುದು ಶೈಕ್ಷಣಿಕ ಸಾಂಸ್ಕೃತಿಕವಾಗಿ ಬೆಳೆಯಲು ದಿ.ಕೆ.ಸಿ.ಕುಂದರ್ ಕಾರಣಿಕರ್ತರು ಎಂದರು.
ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ ಸಂಪನ್ಮೂಲ ವ್ಯಕ್ತಿಯಾಗಿ ಪರಿಸರದ ಬಗ್ಗೆ ಮಾಹಿತಿ ನೀಡಿದರು.
ಕೋಟ ಪಡುಕೆರೆ ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾವ್ಕಂರ್, ಮೊಗವೀರ ಯುವ ಸಂಘ ಉಡುಪಿ ಜಿಲ್ಲಾಧ್ಯಕ್ಷ ಮಲ್ಪೆ ವಿನಯ ಕರ್ಕೆರ, ಕುಂದಾಪುರದ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರಕಾಶ್ ತೋಳಾರ್, ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಆನಂದ್ ಕುಂದರ್, ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷತ್ ಕುಂದರ್, ಮೊಗವೀರ ಯುವಸಂಘ ಕೋಟ ಘಟಕದ ...
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ನೋಟ್ ಬುಕ್ ವಿತರಿಸಲಾಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ್ ಐತಾಳ್ ಸ್ವಾಗತಿಸಿದರು. ಜನತಾ ಫಿಶ್ ಮಿಲ್ ಸಮಾಜ ಕಾರ್ಯದ ವಿಭಾಗದ ರವಿಕಿರಣ್ ಕಾಂಚನ್ ಕೋಟ ವಾರ್ಷಿಕ ವರದಿ ವಾಚಿಸಿದರು. ಜನತಾ ಫಿಶ್‌ಮಿಲ್ ಸಿಬ್ಬಂದಿ ಐಶ್ವರ್ಯ ನಿರೂಪಿಸಿ...
ಮೆಗಾ ಹೀರೋ ಮಾಡಬೇಕಿದ್ದ 'ಜಯಂ' ನಿತಿನ್ ಪಾಲಾಗಿದ್ದು ಹೇಗೆ? | Nithin is Not the First Choice for Jayam Movie - Kannada Filmibeat
| Updated: Friday, June 18, 2021, 13:36 [IST]
ತೆಲುಗು ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿಸಿದ ಹಾಗೂ ಬಾಕ್ಸ್ ಆಫೀಸ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ್ದ ಚಿತ್ರ ಜಯಂ. 2002ರಲ್ಲಿ ತೆರೆಕಂಡ ಈ ಚಿತ್ರ ಸಂಪೂರ್ಣವಾಗಿ ಹೊಸಬರಿಂದ ಕೂಡಿತ್ತು. ನಾಯಕ ನಿತಿನ್‌ಗೆ ಮೊದಲ ಸಿನಿಮಾ. ನಟಿ ಸದಾಗೂ ಚೊಚ್ಚಲ ಚಿತ್ರ. ಗೋಪಿಚಂದ್ ಒಂದು ಸಿನಿಮಾದಲ್ಲಿ ಮಾತ್ರ ಅಭಿನಯಿಸಿದ್ದರು. ಛಾಯಾಗ್ರಾಹಕರಾಗಿ ಜೊತೆಗೆ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ತೇಜ್ ಈ ಸಿ...
ಹೀಗೆ, ಹೊಸ ಕಲಾವಿದರಿಂದಲೇ ತಯಾರಾದ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯಿತು. ಕಲೆಕ್ಷನ್ ವಿಚಾರದಲ್ಲಿ ಟ್ರೆಂಡ್ ಸೃಷ್ಟಿಸಿತು. ನಿರೀಕ್ಷೆಗೂ ಮೀರಿ ಸಕ್ಸಸ್ ಕಂಡಿತು. ಅಂದ್ಹಾಗೆ, ಜಯಂ ಚಿತ್ರದಲ್ಲಿ ನಿತಿನ್ ನಟಿಸುವುದಕ್ಕೂ ಮೊದಲು ಮೆಗಾ ಕುಟುಂಬದ ಹುಡುಗನನ್ನು ಹೀರೋ ಮಾಡಲು ಯೋಜಿಸಲಾಗಿತ್ತು. ಆದರೆ, ಆ ಸಿನಿಮಾ ನಿತಿನ್ ಪಾಲಾಯ್ತು. ಯಾರದು ಮೆಗಾ ಹೀರೋ? ಮುಂದೆ ಓದಿ...
ಸಂಭಾವನೆ ಕೊಟ್ಟಿಲ್ಲ ಅಂತ ತಾವೇ ನಿರ್ಮಿಸಿದರು
ಚಿತ್ರಂ, ನುವ್ವು ನೇನು, ಫ್ಯಾಮಿಲಿ ಸರ್ಕಸ್, ಹೇ ದಿಲ್ ಅಂತಹ ಹಿಟ್ ಚಿತ್ರಗಳನ್ನ ತೇಜ್ ನಿರ್ದೇಶನ ಮಾಡಿದ್ದರು. ಆದ್ರೆ, ನಿರ್ಮಾಪಕರು ಸರಿಯಾದ ಸಂಭಾವನೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಜಯಂ ಚಿತ್ರವನ್ನು ಖುದ್ದೇ ತೇಜ್ ನಿರ್ಮಿಸಿದರು.
ಅಲ್ಲು ಅರ್ಜುನ್ ಮುಂಚೂಣಿಯಲ್ಲಿದ್ದರು
ಕೇವಲ ತನ್ನ ಬ್ರ್ಯಾಂಡ್‌ನಿಂದಲೇ ಸಿನಿಮಾ ಮಾಡುತ್ತಿದ್ದ ತೇಜ್ ಹೊಸಬರನ್ನು ಪರಿಚಯಿಸುವ ಉದ್ದೇಶ ಹೊಂದಿದ್ದರು. ನಿತಿನ್‌ಗೂ ಮೊದಲು ಬಹಳಷ್ಟು ಜನರನ್ನು ಆಡಿಷನ್ ಮಾಡಿದರು. ಅದರಲ್ಲಿ ಅಲ್ಲು ಅರ್ಜುನ್ ಸಹ ಒಬ್ಬರು. 'ಜಯಂ' ಸಿನಿಮಾ ಮಾಡುವ ವೇಳೆ ಅಲ್ಲು ಅರ್ಜುನ್ ನಾಯಕನಾಗಿರಲಿಲ್ಲ. ಖ್ಯಾತ ನಿರ್ಮಾಪಕನ ಪುತ್ರ ಅಲ್ಲು ಅರ್ಜುನ್‌ರನ್ನು ಪರಿಚಯ ಮಾಡಬೇಕು ಎಂಬ ಕಾರಣಕ್ಕಾಗಿ ತೇಜ್ ಆಲೋಚಿಸಿದರು. ಆದರೆ, ಅ...
ನಿತಿನ್ ಆಯ್ಕೆಯಾಗಿದ್ದು ಹೇಗೆ?
ತೇಜ್ ನಿರ್ದೇಶನದ 'ನುವ್ವು ನೇನು' ಚಿತ್ರದ ಬಿಡುಗಡೆ ವೇಳೆ ವಿತರಕ ಸುಧಾಕರ್ ರೆಡ್ಡಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಈ ನಡುವೆ ಎರಡ್ಮೂರು ಕಾರ್ಯಕ್ರಮದಲ್ಲಿ ಸುಧಾಕರ್ ರೆಡ್ಡಿ ಪುತ್ರ ನಿತಿನ್ ನೋಡಿದ್ದ ತೇಜ್, ನಟನೆ ಕುರಿತು ಆಸಕ್ತಿ ವಿಚಾರಿಸಿದ್ದರು. ಫೋಟೋ ತರಿಸಿಕೊಂಡು, ಸ್ಕ್ರೀನ್ ಪರೀಕ್ಷೆ ಸಹ ಮಾಡಿದರು. ನಿತಿನ್ ನಟನೆ ಬಗ್ಗೆ ಇಂಪ್ರೆಸ್ ಆದ ತೇಜ್ ಜಯಂ ಚಿತ್ರಕ್ಕೆ ಹೀರೋ ಆಗಿ ಪರಿಚಯಿಸ...
3 ವರ್ಷ ನಟಿಸಿಲ್ಲ, ಅಣ್ಣಾವ್ರ ಮನೆ ಮುಂದೆ ನಡೆದಿತ್ತು ಅಭಿಮಾನದ ಪ್ರತಿಭಟನೆ
ಗೋಪಿಚಂದ್ ಮೊದಲ ಆಯ್ಕೆಯಲ್ಲ
ಜಯಂ ಚಿತ್ರದ ವಿಲನ್ ಪಾತ್ರದಲ್ಲಿ ಅಬ್ಬರಿಸಿದ ಗೋಪಿಚಂದ್‌ಗೂ ಮೊದಲು ಬಾಲಿವುಡ್ ನಟನನ್ನು ಕರೆತರುವ ಚಿಂತನೆ ನಡೆದಿತ್ತು. ಆದರೆ ನಿರ್ದೇಶಕ ತೇಜ್‌ಗೆ ಹಿಂದಿ ನಟ ಇಷ್ಟ ಆಗ್ಲಿಲ್ಲ. ಗೋಪಿಚಂದ್ ತಂದೆ ಟಿ-ಕೃಷ್ಣ ಬಳಿ ತೇಜ್ ಸಹಾಯಕ ನಿರ್ದೇಶಕರಾಗಿದ್ದರು. ಆಗಿನಿಂದಲೂ ಗೋಪಿಚಂದ್ ಕುರಿತು ತಿಳಿದಿದ್ದ ತೇಜ್, ಜಯಂ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು.
1.65 ಕೋಟಿ ಬಜೆಟ್
ನಿರ್ದೇಶನದ ಜೊತೆ ನಿರ್ಮಾಣ ಮಾಡಿದ್ದ ತೇಜ್ ಈ ಚಿತ್ರಕ್ಕಾಗಿ ಖರ್ಚು ಮಾಡಿದ್ದು 1.65 ಕೋಟಿ. ಸುಮಾರು 65 ದಿನ ಚಿತ್ರೀಕರಣ ಮಾಡಿದರು. ಹೇಗೋ ಕಷ್ಟಪಟ್ಟು ಸಿನಿಮಾ ಮುಗಿಸಿದ ಚಿತ್ರತಂಡಕ್ಕೆ ಆರ್‌ಪಿ ಪಟ್ನಾಯಕ್ ಸಂಗೀತ ಜೋಶ್ ನೀಡಿತು. ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸುವಂತೆ ಮಾಡಿತು. ಒಟ್ಟು 30 ಜನ ಕಲಾವಿದರೊಂದಿಗೆ ಸಿನಿಮಾ ತಯಾರಾಯಿತು.
ಜಯಂ ಗಳಿಸಿದ್ದೆಷ್ಟು?
2002 ಜೂನ್ 14 ರಂದು ತೆರೆಕಂಡ ಜಯಂ ಸಿನಿಮಾ ದೊಡ್ಡ ಹಿಟ್ ಆಯಿತು. ಮೊದಲು 40 ಪ್ರಿಂಟ್ ಆಗಿತ್ತು, ಆಮೇಲೆ ಅದರ ಸಂಖ್ಯೆ 150ಕ್ಕೆ ಏರಿತು. ಸುಮಾರು 70 ಸೆಂಟರ್‌ನಲ್ಲಿ ಜಯಂ ಸಿನಿಮಾ ಶತದಿನ ಆಚರಿಸಿದೆ. ಕಲೆಕ್ಷನ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ ಜಯಂ ಒಟ್ಟಾರೆ 32 ಕೋಟಿ ಬಿಸಿನೆಸ್ ಮಾಡಿತು ಎಂದು ವರದಿ ಹೇಳಿದೆ.
MORE NITHIN NEWS
ಅಂಧಾಧುನ್ ತೆಲುಗು ಟೈಟಲ್ ಪ್ರಕಟಣೆ: ಜೂನ್ 11ಕ್ಕೆ ಸಿನಿಮಾ ಬಿಡುಗಡೆ
ವಿಡಿಯೋ ವೈರಲ್; ಚಿತ್ರೀಕರಣ ವೇಳೆ ಆಯತಪ್ಪಿ ಬಿದ್ದ ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್
ಪವನ್ ಕಲ್ಯಾನ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ ಖ್ಯಾತ ನಟ
ಅಂಧಾದುನ್ ತೆಲುಗು ರೀಮೇಕ್ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರತಂಡ
ಬಾಲಿವುಡ್‌ಗೆ ಹೋದ ರಶ್ಮಿಕಾ: 'ಕಿಲ್ ಇಟ್ ರಶ್' ಎಂದ ನಟ!
2020ರಲ್ಲಿ ಹೊಸ ಜೀವನ ಆರಂಭಿಸಿದ ಸೌತ್ ತಾರೆಯರು
ಶೂಟಿಂಗ್ ಆರಂಭಿಸಿದ 'ಅಂಧಾದುನ್' ತೆಲುಗು ರೀಮೇಕ್
ವಿಡಿಯೋ: ನಿರ್ದೇಶಕನಿಗೆ ಓಡಾಡಿಸಿ ಹೊಡೆದ ನಟಿ ಕೀರ್ತಿ ಸುರೇಶ್
ನಿತಿನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ನಟಿ ತಮನ್ನಾ
'ಭೀಷ್ಮಾ' ನಿರ್ದೇಶಕರಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ನಿತಿನ್
Read more about: nithin allu arjun ನಿತಿನ್ ಸದಾ ಅಲ್ಲು ಅರ್ಜುನ್
Telugu actor Nithin was not first choice for Jayam film. before nithin, one of the mega hero was to do this project said report.
'ಈಗಲೇ ನಮ್ಮ ಜಾಗ ಬಿಟ್ಟು ಹೊರಡಿ' ಕುತಂತ್ರಿ ಪಾಕ್‌ಗೆ ಭಾರತ ಕೊನೆ ಸಂದೇಶ | Pak Must Immediately Vacate All Illegally Occupied Areas Says MEA
'ಈಗಲೇ ನಮ್ಮ ಜಾಗ ಬಿಟ್ಟು ಹೊರಡಿ' ಕುತಂತ್ರಿ ಪಾಕ್‌ಗೆ ಭಾರತ ಕೊನೆ ಸಂದೇಶ
ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ ಭಾರತ/ ಆಕ್ರಮಣ ಮಾಡಿಕೊಂಡ ಜಾಗ ಮೊದಲು ಖಾಲಿ ಮಾಡಿ/ ನಮ್ಮ ಜಾಗದಲ್ಲಿ ಚುನಾವಣೆ ನಡೆಸಲು ಹೇಗೆ ಸಾಧ್ಯ?
Bengaluru, First Published May 4, 2020, 5:07 PM IST
ನವದೆಹಲಿ(ಮೇ 04) ಕೊರೋನಾ ಲಾಕ್ ಡೌನ್, ಹೋರಾಟದ ನಡುವೆ ಭಾರತ ಪಾಕಿಸ್ತಾನಕ್ಕೆ ಸರಿಯಾದ ಏಟು ನೀಡಿದೆ. ಇಮ್ರಾನ್ ಖಾನ್ ಸರ್ಕಾರಕ್ಕೆ ತಿರುಗೇಟು ನೀಡಿದೆ. ಆಕ್ರಮಿಸಿಕೊಂಡಿರುವ ಭಾರತದ ಜಾಗ ಖಾಲಿ ಮಾಡಲು ಪಾಕಿಸ್ತಾನಕ್ಕೆ ಸೂಚನೆ ರವಾನಿಸಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಸಂಪೂರ್ಣ ಜಮ್ಮು -ಕಾಶ್ಮೀರ ಹಾಗೂ ಲದ್ದಾಕ್ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಪಾಕಿಸ್ತಾನಕ್ಕೆ ಸೂಚಿಸಲಾಗಿದೆ ಎಂದು ಹೇಳಿದೆ. ಪಾಕಿಸ್ತಾನ ಈ ಕೂಡಲೆ ಜಾಗ ತೊರೆಯಬೇಕು ಎಂದು ಹೇಳಿದೆ.
ಜಾಧವ್ ರಕ್ಷಣೆಗೆ ಪಾಕಿಸ್ತಾನದೊಂದಿಗೆ ಹಿಂಬಾಗಿಲ ಮಾತುಕತೆ
ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಪಾಕಿಸ್ತಾನ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಇಡೀ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಪಾಕಿಸ್ತಾನವು ಈ ಪ್ರದೇಶಗಳನ್ನು ಬಿಟ್ಟು ಹೊರನಡೆಯಬೇಕು ಎಂದು ಖಾರವಾದ ಉತ್ತರ ನೀಡಲಾಗಿದೆ.
ಪಾಕಿಸ್ತಾನದ ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಆದೇಶದಲ್ಲಿ, ಈ ಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಜತೆಗೆ 2018 ರ 'ಗಿಲ್ಗಿಟ್ ಬಾಲ್ಟಿಸ್ತಾನ್ ಸರ್ಕಾರದ ಆದೇಶಕ್ಕೆ ತಿದ್ದುಪಡಿ ತರಲು ಅನುಮತಿ ನೀಡಿತ್ತು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಭಾರತ ಭಾರತದ ಜಾಗದ ಮೇಲೆ ತೀರ್ಮಾನ ನೀಡಲು ಯಾರು ಎಂದು ಪ್ರಶ್ನೆ ಮಾಡಿದೆ
ಈ ಪ್ರದೇಶದಲ್ಲಿ ಪಾಕಿಸ್ತಾನದ ಯಾವ ಹಕ್ಕು ಇರುವುದಿಲ್ಲ, ಸಾರ್ವಭೌಮ ಭಾರತಕ್ಕೆ ಸೇರಿದ ಜಾಗದಲ್ಲಿ ಪಾಕಿಸ್ತಾನ ಕಿತಾಪತಿ ತೋರುವ ಅಗತ್ಯ ಇಲ್ಲ ಎಂದುನ ಖಡಕ್ ಎಚ್ಚರಿಕೆ ರವಾನಿಸಲಾಗಿದೆ. ಚೀನಾ-ಪಾಕಿಸ್ತಾನ್ ಎಕಾನಿಮಿಕ್ ಕಾರಿಡಾರ್ ಹೆಸರಿನಲ್ಲಿ ಚೀನಾ ಸಹ ಕ್ಯಾತೆ ತೆಗೆದಿತ್ತು. ಈಗ ಪಾಕಿಸ್ತಾನ ಚುನಾವಣೆಗೆ ಮುಂದಾಗಲು ಸಿದ್ಧತೆ ಮಾಡಿಕೊಂಡಿದ್ದು ಭಾರತದ ವಿರೋಧಕ್ಕೆ ಕಾರಣ ಆಗಿದೆ.
ಪ್ರೇಮಿಗಳ ದಿನದಂದು ಥ್ರಿಲ್ ನೀಡೋಕೆ ಬರ್ತಿದೆ 'ಸಾಗುತ ದೂರ ದೂರ' ಸಿನಿಮಾ! - Public TV News
Thursday, 13.02.2020, 9:41 PM Public TV No Comments
'ಸಾಗುತ ದೂರ ದೂರ' ಸ್ಯಾಂಡಲ್‍ವುಡ್ ಅಂಗಳದಲ್ಲಿ ಎಲ್ಲರ ಗಮನ ಸೆಳೆದಿರೋ ಚಿತ್ರ. ಟೈಟಲ್? ಹೇಳುವಂತೆ ಚಿತ್ರವೂ ಜರ್ನಿಯಲ್ಲೇ ಕಥೆಯನ್ನು ಪ್ರೇಕ್ಷಕರಿಗೆ ಹೇಳಲಿದೆ. ಆದ್ರೆ ಇದು ಯಾರ ಜರ್ನಿ ಯಾಕೆ ಸಾಗುತ್ತಾರೆ ಅನ್ನೋದನ್ನ ನೀವು ಚಿತ್ರದಲ್ಲೇ ನೋಡಬೇಕು. ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇಯಂದು `ಸಾಗುತ ದೂರ ದೂರ' ಚಿತ್ರ ಬಿಡುಗಡೆಯಾಗುತ್ತಿದೆ.
ಭಾವನಾತ್ಮಕ ಜರ್ನಿ ಒಳಗೊಂಡಿರೋ ಈ ಚಿತ್ರದಲ್ಲಿ ಕಥೆಯೇ ಜೀವಾಳವಾಗಿದ್ದು, ಪ್ರತಿ ಪಾತ್ರವೂ ಇಲ್ಲಿ ಎಲ್ಲರ ಗಮನ ಸೆಳೆಯಲಿದೆ. ಗುರಿಯನ್ನು ಅರಸಿ ಹೊರಟವರ ಕಥೆ ಚಿತ್ರದಲ್ಲಿದ್ದು, ತಾಯಿ ಮಗನ ಸೆಂಟಿಮೆಂಟ್ ಕಥೆಯ ಜೀವಾಳವಾಗಿದೆ. ಇಡೀ ಚಿತ್ರದ ನಿರೂಪಣೆ ಜರ್ನಿ ರೂಪದಲ್ಲೇ ಸಾಗಿರೋದು ಚಿತ್ರದ ವಿಶೇಷ ಸಂಗತಿ. ಜೊತೆಗೆ ಇನ್ನೂರು ವಿಭಿನ್ನ ಲೊಕೇಷನ್ ಗಳಲ್ಲಿ ಚಿತ್ರವನ್ನು ಸೆರೆ ಹಿಡಿದಿರೋದು ಈ ಚಿತ್ರದ ಇನ...
ಹೊಸತನ ತುಂಬಿರೋ ಈ ಚಿತ್ರದ ಟ್ರೈಲರ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ ಸ್ಪರ್ಶವಿರೊ ಹಾಡುಗಳು ಕೂಡ ಗಮನ ಸೆಳೆದಿವೆ. ಅಪೇಕ್ಷಾ ಪುರೋಹಿತ್, ಜಾನ್ವಿ ಜ್ಯೋತಿ, ಮಹೇಶ್, ಮಾಸ್ಟರ್ ಆಶಿಕ್, ಉಷಾ ಬಂಡಾರಿ, ನವೀನ್, ವಿಜಯ್ ಸೇರಿದಂತೆ ಹಲವು ಕಲಾವಿದರು ಸಾಗುತ ದೂರ ದೂರ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಖುಷಿ ಕನಸು ಕ್ರಿಯೇಷನ್ಸ್ ಬ್ಯಾನರ್?ನಡಿ ನಿರ್ಮಾಣ ಆಗಿರೋ ಈ ಚಿತ್ರಕ್...
Tags: Apeksha P, kannada film, mahesh, Mst.Ashik, Public TV, Sagutha Doora Doora, ಅಪೇಕ್ಷಾ ಪುರೋಹಿತ್, ಕದ್ರಿ ಮಣಿಕಾಂತ್, ಜಾನ್ವಿ ಜ್ಯೋತಿ, ಪಬ್ಲಿಕ್ ಟಿವಿ, ರವಿತೇಜ, ಸಾಗುತ ದೂರ ದೂರ
'ಇಡಿ' ತನಿಖೆ ನ್ಯಾಯಸಮ್ಮತಲ್ಲ, ತನಿಖೆಗೆ ಹಾಜರಾಗುವುದಿಲ್ಲ: ಅನಿಲ್ ದೇಶ್ಮುಖ್‌ ವಕೀಲ | NaanuGauri
Home ಮುಖಪುಟ 'ಇಡಿ' ತನಿಖೆ ನ್ಯಾಯಸಮ್ಮತಲ್ಲ, ತನಿಖೆಗೆ ಹಾಜರಾಗುವುದಿಲ್ಲ: ಅನಿಲ್ ದೇಶ್ಮುಖ್‌ ವಕೀಲ
ಹಣ ವಂಚನೆ ಪ್ರಕರಣದಲ್ಲಿ ತನ್ನ ವಿರುದ್ಧ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ನ್ಯಾಯ ಸಮ್ಮತವಲ್ಲ ಎಂದು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್‌ ಅಭಿಪ್ರಾಯಪಟ್ಟಿದ್ದಾರೆ, ಆದ್ದರಿಂದ ಅವರು ತನಿಖೆಗೆ ಕೈಜೋಡಿಸುವುದಿಲ್ಲ ಎಂದು ಅವರ ವಕೀಲ ಬುಧವಾರ ಹೇಳಿದ್ದಾರೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೇಶ್ಮುಖ್ ಅವರ ವಕೀಲ ಕಮಲೇಶ್ ಘುಮ್ರೆ, ಇಡಿಯ ತನಿಖೆಯು ನಿಜವಾದ ತನಿಖೆಯಂತೆ ಕಾಣುತ್ತಿಲ್ಲ, ಅದು 'ಕಿರುಕುಳ' ಎಂದು ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 'ಇಡಿ' ದೇಶ್ಮುಖ್ ಅವರ ಪತ್ನಿ ಆರತಿಗೆ ಬುಧವಾರ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ತನ್ನ ಮುಂದೆ ಹಾಜರಾಗುವಂತೆ ಹೇಳಿದೆ ಎಂದು ಅವರು ಹೇಳಿದ್ದಾರೆ. ಆದರೆ ತಾನು ವಿಡಿಯೊ ಕಾನ್ಫರೆನ್ಸಿಂಗ್‌‌ ಮೂಲಕ ತನಿಖೆಗೆ ಸಹಕರಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ ಎಂದು ಕಮಲೇಶ್‌‌ ತಿಳಿಸಿದ್ದಾರೆ.
ಈ ಹಿಂದೆ ಇಡಿ ಅನಿಲ್ ದೇಶ್ಮುಖ್ ಅವರಿಗೆ ಅನೇಕ ಸಮನ್ಸ್ ನೀಡಿತ್ತು, ಅವರ ಹೇಳಿಕೆಯನ್ನು ದಾಖಲಿಸುವಂತೆ ಕೇಳಿಕೊಂಡಿತ್ತು. ಆದಾಗ್ಯೂ, ದೇಶ್ಮುಖ್‌ ಅವರು ಕೊರೊನಾವನ್ನು ಉಲ್ಲೇಖಿಸಿ ಸಮನ್ಸ್‌ಗೆ ಉತ್ತರಿಸಿರಲಿಲ್ಲ.
ಇದನ್ನೂ ಓದಿ: ಹೆಚ್ಚುತ್ತಿರುವ ಸಾಂಕ್ರಾಮಿಕ: ಕುಸಿಯುತ್ತಿರುವ ನರೇಂದ್ರ ಮೋದಿ ಜನಪ್ರಿಯತೆ
ಅವರು ಕೂಡಾ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸಲು ಇಡಿಗೆ ಪ್ರಸ್ತಾಪಿಸಿದ್ದರು. ಪ್ರಕರಣದಲ್ಲಿ ಯಾವುದೇ ಬಲವಂತದ ಕ್ರಮದಿಂದ ರಕ್ಷಣೆ ಕೋರಿ ದೇಶ್ಮುಖ್‌ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಈ ವರ್ಷದ ಆರಂಭದಲ್ಲಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಮಾಡಿದ ಕನಿಷ್ಠ 100 ಕೋಟಿ ರೂ.ಗಳ ಲಂಚದ ಆರೋಪಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ದೇಶ್ಮುಖ್‌‌ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದರ ನಂತರ ದೇಶ್ಮುಖ್ ಮತ್ತು ಇತರರ ವಿರುದ್ಧ ಇಡಿ ಕೂಡಾ ಪ್ರಕರಣವನ್ನು ದಾಖಲಿಸಿತ್ತು.
"ದೇಶ್ಮುಖ್ ಅವರು ಈ ತನಿಖೆ ನ್ಯಾಯಸಮ್ಮತವಲ್ಲ ಎಂದು ಭಾವಿಸುತ್ತಾರೆ. ಆದ್ದರಿಂದ ಅವರು ತನಿಖೆಗೆ ಕೈಜೋಡಿಸುತ್ತಿಲ್ಲ. ತನಿಖಾ ಸಂಸ್ಥೆ ಬಯಸಿದ ಯಾವುದೇ ದಾಖಲೆಗಳ ಬಗ್ಗೆ ಕನಿಷ್ಠ ನಮಗೆ ಹೇಳಬೇಕು. ಇಡಿ ತನಿಖೆ ಕಿರುಕುಳದಂತೆ ಕಾಣುತ್ತಿದೆಯೆ ಹೊರತು, ನಿಜವಾದ ತನಿಖೆಯಲ್ಲ" ಎಂದು ವಕೀಲ ಕಮಲೇಶ್‌ ಹೇಳಿದ್ದಾರೆ.
ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಮಾರ್ಗಗಳಿದ್ದರೂ, ದೇಶ್ಮುಖ್ ಅವರನ್ನು ನೇರವಾಗಿ ಪ್ರಶ್ನಿಸುವ ಸಲುವಾಗಿ ಹಾಜರಾಗುವಂತೆ ಕೇಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸ್‌ ಅಧಿಕಾರಿ ಪರಮ್ ಬಿರ್ ಸಿಂಗ್ ಅವರ ಆರೋಪಗಳು ನಿಜವಲ್ಲ ಎಂದಿರುವ ಕಮಲೇಶ್‌‌, "ಈ ಬಗ್ಗೆ ಅವರು ತಿಂಗಳುಗಟ್ಟಲೆ ಯಾಕೆ ಮೌನವಾಗಿದ್ದರು ಎಂದ ಹೈಕೋರ್ಟ್ ಪ್ರಶ್ನಿಸಿದೆ" ಎಂದು ಹೇಳಿದ್ದಾರೆ.
ಭ್ರಷ್ಟಾಚಾರದ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದ ನಂತರ ದೇಶ್ಮುಖ್‌ ಏಪ್ರಿಲ್‌ನಲ್ಲಿ ತನ್ನ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Previous articleಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣ ಯೋಜನೆಗಳು 'ಕಾನೂನು ಬದ್ಧವಾಗಿ ಮಾನ್ಯ': ಸುಪ್ರೀಂಗೆ ಒಕ್ಕೂಟ ಸರ್ಕಾರ
Next articleತೆರಿಗೆ ಹೆಚ್ಚಳದ ವಿರುದ್ದ ದೆಹಲಿಯಲ್ಲಿ ಸಹಿ ಸಂಗ್ರಹ ಮಾಡುತ್ತಿರುವ ಎಎಪಿ; ಬಿಜೆಪಿ ಪ್ರತಿಕ್ರಿಯಿಸಿದ್ದೇನು?