text
stringlengths
0
61.5k
'ಆ ರೆಡ್ ಸಿಗ್ನಲ್ ಬಿದ್ದಿರದಿದ್ದರೆ ಇನ್ನೂ ದೊಡ್ಡ ಅನಾಹುತವೇ ಆಗ್ತಿತ್ತು' | Mumbai: A red traffic signal that proved lucky for many motorists - Kannada Oneindia
| Updated: Friday, March 15, 2019, 11:22 [IST]
ಮುಂಬೈ (ಮಹಾರಾಷ್ಟ್ರ), ಮಾರ್ಚ್ 14: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಗುರುವಾರ ಪಾದಚಾರಿ ಮೇಲ್ಸೇತುವೆ ಕುಸಿದು, ಐವರು ಮೃತಪಟ್ಟು, ಮೂವತ್ತಾರು ಮಂದಿ ಗಾಯಗೊಂಡಿದ್ದಾರೆ. ಆ ಮೇಲ್ಸೇತುವೆ ಸಮೀಪದ ಟ್ರಾಫಿಕ್ ಸಿಗ್ನಲ್ ಅಪಾರ ಸಂಖ್ಯೆಯ ವಾಹನ ಚಾಲಕರ ಪಾಲಿಗೆ ಜೀವ್ ಉಳಿಸಿದ ದೈವವಾಗಿದೆ.
ಒಂದು ವೇಳೆ ಸೇತುವೆ ಕುಸಿದ ಸಮಯದಲ್ಲಿ ಕೆಂಪು ಸಿಗ್ನಲ್ ಬೀಳದೆ ಇದ್ದಿದ್ದರೆ ಅದರ ಕೆಳಗೆ ಅದೆಷ್ಟು ಮಂದಿ ಹಾದು ಹೋಗಿರುತ್ತಿದ್ದರೋ? ಆಜಾದ್ ಮೈದಾನ್ ಪೊಲೀಸ್ ಠಾಣೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣದ ಮಧ್ಯೆ ಸಂಪರ್ಕದಂತೆ ಆ ಸೇತುವೆ ಇತ್ತು.
ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮದವರ ಜತೆ ಈ ಬಗ್ಗೆ ಮಾತನಾಡಿ, ಆ ಸಿಗ್ನಲ್ ಕೆಂಪಿತ್ತು. ಆದ್ದರಿಂದ ತಾಳ್ಮೆಗೆಟ್ಟು ಕಾಯುತ್ತಾ ಇದ್ದೆವು. ಆ ಸಿಗ್ನಲ್ ಹಸಿರಿಗೆ ತಿರುಗುವ ಮುನ್ನ ಮೇಲ್ಸೆತುವೆ ಕುಸಿಯಿತು. ಜತೆಗೆ ಅಲ್ಲಿದ್ದ ಜನರು ಕೆಳಗೆ ಬಿದ್ದರು. ಒಂದು ವೇಳೆ ಹಸಿರು ಸಿಗ್ನಲ್ ಇದ್ದಿದ್ದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಿರುತ್ತಿತ್ತು ಎಂದಿದ್ದಾರೆ.
ಇದೇ ಸಮಯಕ್ಕೆ ಇಡೀ ಮುಂಬೈನ ಜನರು ತಮ್ಮ ಮನೆಗಳಿಗೆ ಹಿಂತಿರುಗಲು ರೈಲು ನಿಲ್ದಾಣಕ್ಕೆ ಬರುತ್ತಾರೆ. ನಾವು ಕೂಡ ಬೇಗ ಮನೆಗೆ ಹೋಗಬೇಕೆಂದು ಇದ್ದೆವು. ಆದರೆ ಆ ಸಿಗ್ನಲ್ ಕೆಂಪು ಇದ್ದಿದ್ದಕ್ಕೆ ಈಗ ಸಮಾಧಾನ ಅನ್ನಿಸುತ್ತಿದೆ. ಇಲ್ಲದಿದ್ದರೆ ನನಗೆ ಕೂಡ ಗಾಯವಾಗುತ್ತಿತ್ತು ಎಂದು ಹೇಳಿದ್ದಾರೆ.
ಮತ್ತೊಬ್ಬರು ಟ್ಯಾಕ್ಸಿ ಚಾಲಕ ಅಪಾಯದಿಂದ ಪಾರಾಗಿದ್ದು, ಅವರ ವಾಹನಕ್ಕೆ ಸಣ್ಣ ಪ್ರಮಾಣದ ಹಾನಿ ಆಗಿದೆ. ಆ ಟ್ಯಾಕ್ಸಿ ಹಿಂದೆ ಇದ್ದವರು ಸರಿಯಾದ ಸಮಯಕ್ಕೆ ಆತನನ್ನು ತಡೆದಿದ್ದಾರೆ. ಆ ಮೂಲಕ ದೊಡ್ಡ ಅನಾಹುತ ತಪ್ಪಿದೆ.
mumbai accident ಮುಂಬೈ ಅಪಘಾತ
A red signal at a traffic junction near a foot overbridge, a major part of which caved in Mumbai Thursday evening, lucky for a large number of motorists who were waiting for it to turn green.
ನೈಸ್ ರಸ್ತೆಯಲ್ಲಿ ಭೀಕರ ಅಪಘಾತ: ಬಸ್'ಗೆ ಕಾರು ಡಿಕ್ಕಿ, ಇಬ್ಬರ ದುರ್ಮರಣ – Karavali Kirana
ನೈಸ್ ರಸ್ತೆಯಲ್ಲಿ ಭೀಕರ ಅಪಘಾತ: ಬಸ್'ಗೆ ಕಾರು ಡಿಕ್ಕಿ, ಇಬ್ಬರ ದುರ್ಮರಣ
ಬೆಂಗಳೂರು: ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಗುರುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಸ್ಸಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಸುಮುಖ್ (22) ಮತ್ತು ಲೀನಾ ನಾಯ್ಡು (19) ಎಂದು ಗುರ್ತಿಸಲಾಗಿದೆ. ಗುರುವಾರ ಸಂಜೆ 5.15ರ ಸುಮಾರಿಗೆ ಸುಮುಖ್ ಹೋಂಡಾ ಸಿಟಿ ಕಾರಿನಲ್ಲಿ ತನ್ನ ಸ್ನೇಹಿತೆ ಲೀನಾ ನಾಯ್ಡು ಜೊತೆ ನೈಸ್ ರಸ್ತೆಯ ಪಿಇಎಸ್ ಕಾಲೇಜು ಕಡೆಯಿಂದ ಸೋಂಪುರ ಕಡೆಗೆ ವೇಗವಾಗಿ ಬರುವಾಗ ಬಿಡಿಎ ಟೋಲ್ ಬಳಿ ಕಾರು ನಿಯಂತ್ರಣ ತಪ್ಪಿದೆ. ಈ ವೇಳೆ ಎದುರು ದಿಕ್ಕಿನ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಖಾಸಗಿ ಮಿನಿ ಬಸ್'ಗೆ ಡಿ...
ಡಿಕ್ಕಿಯ ರಭಸಕ್ಕೆ ಕಾರು ಉರುಳಿ ಬಿದ್ದ ಪರಿಣಾಮ ಚಾಲಕ ಸುಮುಖ್ ಹಾಗೂ ಲೀನಾ ನಾಯ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ವೇಳೆ ಖಾಸಗಿ ಮಿನಿ ಬಸ್ ಕೂಡ ಉರುಳಿ ಬಿದ್ದಿದ್ದು, ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ಹಾಗೂ ಇತರೆ ವಾಹನಗಳ ಸವಾರರು ಪ್ರಯಾಣಿಕರನ್ನು ಹೊರಗೆ ಎಳೆದು ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಚಾಲಕ ಕಾಲೊಂದನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಸುಮುಖ್'ನ ಕಾರು ಖಾಸಗಿ ಮಿನಿಬಸ್'ಗೆ ಡಿಕ್ಕಿಯಾದ ಸಂದರ್ಭದಲ್ಲಿ ಕಾರಿನ ಮುಂದಿನ ಚಕ್ರ ಕಿತ್ತು ಮುಂದೆ ಹೋಗುತ್ತಿದ್ದ ಫಾರ್ಚುನರ್ ಕಾರಿನ ಹಿಂಬದಿಗೆ ಗುದ್ದಿದ್ದರಿಂದ ಕಾರು ಕೂಡ ಜಖಂ ಆಗಿದೆ. ಆದರೆ, ಕಾರಿನ ಸವಾರರಿಗೆ ಯಾವುದೇ ಸಮಸ್ಯೆಗಳಾಗಿಲ್ಲ ಎಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಕೆಂಗೇರಿ ಸಂಚಾರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸುಮುಖ್ ಕಾರನ್ನು ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಮಾಡಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಅಪಘಾತವಾಗಿರುವ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮ್ಯೂಸಿಕ್‌ ವಿಡಿಯೊದಲ್ಲಿ ವಿಕ್ಕಿ | Prajavani
'ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌' ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಕ್ಕಿ ಕೌಶಲ್‌ ಈಗ ಹೊಸ ಪ್ರಯೋಗಗಳಿಗೆ ಸಜ್ಜಾಗಿದ್ದಾರೆ.
ನೋರಾ ಫತೇಹಿ ಅವರೊಂದಿಗೆ 'ಪಚ್‌ತಾವೋಗೆ' ಮ್ಯೂಸಿಕ್‌ ವಿಡಿಯೊದಲ್ಲಿ ನಟಿಸಿದ್ದಾರೆ. ಭೂಷಣ್‌ ಕುಮಾರ್‌ ಈ ವಿಡಿಯೊ ನಿರ್ಮಾಣ ಮಾಡಿದ್ದಾರೆ. ಅರವಿಂದ್‌ ಖಿರಾ ನಿರ್ದೇಶನ ಇದಕ್ಕಿದೆ. ವಿಕ್ಕಿ ಹಾಗೂ ನೋರಾ ಇತ್ತೀಚೆಗೆ ಶಿಮ್ಲಾದಲ್ಲಿ ಓಡಾಡುತ್ತಿರುವ ಚಿತ್ರಗಳು ವೈರಲ್ ಆಗಿದ್ದವು. ಈ ಜೋಡಿ ಡೇಂಟಿಂಗ್‌ನಲ್ಲಿದೆ ಎಂಬ ಗುಸು ಗುಸು ಶುರುವಾಗಿತ್ತು. ಆದರೆ ಅವರು ವಿಡಿಯೊದ ಮೊದಲ ಹಂತದ ಶೂಟಿಂಗ್‌ನಲ್ಲಿ ಪಾಲ...
ಭಾವನಾತ್ಮಕ ಸನ್ನಿವೇಶಗಳನ್ನು ಒಳಗೊಂಡ ಹಾಡು ಇದಾಗಿದೆ ಎಂದು ಚಿತ್ರತಂಡ ಹೇಳಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ವಿಡಿಯೊದ ಮೊದಲ ಪೋಸ್ಟರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಶ್ರದ್ಧಾ ಕಪೂರ್‌, ಜಾನ್‌ ಅಬ್ರಹಾಂ, ಹೃತಿಕ್‌ ರೋಷನ್‌ ಸೇರಿದಂತೆ ಬಾಲಿವುಡ್‌ನ ಬಹುತೇಕ ನಟ, ನಟಿಯರು ಈ ಮೊದಲೇ ಮ್ಯೂಸಿಕ್ ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದರು. ಇದರ ಯಶಸ್ಸು ಸಿನಿಮಾದ ಮೇಲೂ ಪರಿಣಾಮ ಬೀರುತ್ತದೆ. ನಟ, ನಟಿಯರ ಇಮೇಜ್‌ ಹೆಚ್ಚಿಸುತ್ತದೆ ಎಂದು ಇತ್ತೀಚೆಗೆ ಶ್ರದ್ಧಾ ಕಪೂರ್ ಹೇಳಿದ್ದರು.
'ಪಚ್‌ತಾವೋಗೆ' ವಿಡಿಯೊಗೆ ಜಾನಿ ಅವರು ಕತೆ ಕಟ್ಟಿದ್ದಾರೆ. ಬಿ.ಪರಾಕ್‌ ಇದಕ್ಕೆ ಸಂಗೀತ ನಿರ್ದೇಶಿಸಿದ್ದಾರೆ. ವಿಕ್ಕಿ ಕೌಶಲ್‌ ಮೊದಲ ಬಾರಿ ಮ್ಯೂಸಿಕ್‌ ವಿಡಿಯೊದಲ್ಲಿ ನಟಿಸಿದ್ದಾರೆ. 'ಶಿಮ್ಲಾದಲ್ಲಿ ಶೂಟಿಂಗ್ ಮಾಡುವಾಗ ನಾನು ಸಾಕಷ್ಟು ಹೊಸ ವಿಷಯಗಳನ್ನು ಕಲಿತುಕೊಂಡೆ. ಸಿನಿಮಾಕ್ಕಿಂತ ಇದು ಭಿನ್ನವಾದ ಅನುಭವ ನೀಡಿದೆ. ಮೊದಲ ಬಾರಿ ಹಾಡನ್ನು ಕೇಳಿದಾಗ ಪುಳಕಿತನಾಗಿದ್ದೆ. ಜನರು ಹೇಗೆ ಸ್ವೀಕರಿಸುತ...
ಭಾರತಕ್ಕೆ ಮಾದರಿಯಾಗಲಿದೆ ವಿಯೆಟ್ನಾಂ ದೇಶದ ಅಕ್ಕಿ ಎಟಿಎಂಗಳು!! – ಕನ್ನಡ ಸುದ್ದಿಗಳು
April 14, 2020 KannadaSuddigalu ಆರೋಗ್ಯ/ಜೀವನಶೈಲಿ, ರಾಜಕೀಯ, ಸುದ್ದಿತಾಣ 0
ಇದು ಅಂತಿಂಥಾ ಎಟಿಎಂ ಅಲ್ಲ. ಈ ಕರೋನ ದೆಸೆಯಿಂದ ಹಣಕ್ಕಿಂತ ಜನಕ್ಕೆ ಆಹಾರ ಮುಖ್ಯ ಎನ್ನುವುದು ಅರಿವಾಗುತ್ತಲಿದೆ. ಇದೆ ಪರಿಸ್ಥಿತಿ ಈಗ ಭಾರತಕ್ಕಿಂತ ಬಡದೇಶವಾದ ವಿಯೆಟ್ನಾಂ ದು. ವಿಯೆಟ್ನಾಂನಲ್ಲಿ ಕರೋನವೈರಸ್ ಸೋಂಕಿತರು ಸುಮಾರು 265 ಜನ ಹಾಗು ಮರಣಹೊಂದಿದವರು ೦!!. ಇಲ್ಲಿ ವಿಶ್ವದ ಇತರ ಭಾಗಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಅಗತ್ಯವಿರುವ...
ಇಲ್ಲಿನ ಸರ್ಕಾರವು ಸಾಮಾಜಿಕ ದೂರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ ಹಾಗೆಯೇ ಅನೇಕ ಸಣ್ಣ ಉದ್ಯಮಗಳನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿದೆ. ಆದರೆ ಸಾವಿರಾರು ಜನ ಕೆಲಸ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಆದಾಯವಿಲ್ಲದ ಈ ಜನರಿಗೆ, ಉದ್ಯಮಿಗಳು ಮತ್ತು ದಾನಿಗಳು ವಿಯೆಟ್ನಾಂನ ಹಲವಾರು ನಗರಗಳಲ್ಲಿ ಉಚಿತ ಅಕ್ಕಿಯನ್ನು ವಿತರಿಸುವ ಯಂತ್ರಗಳನ್ನು ಸ್ಥಾಪಿಸಿದ್ದಾರೆ. ನೆರೆ ದೇಶ ತೈವಾನ್ ನಲ್ಲಿ...
ವಿಯೆಟ್ನಾಂ ನ ಹನೋಯಿಯಲ್ಲಿ, ದೊಡ್ಡ ನೀರಿನ ತೊಟ್ಟಿಯಂತಿರುವ ಈ ಎಟಿಎಂ ನಲ್ಲಿ ಅಕ್ಕಿ ವಿತರಣೆ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಇರುತ್ತದೆ. ಸಾಲಿನಲ್ಲಿ ಕಾಯುವವರು ಒಬ್ಬರಿಗೊಬ್ಬರು ಆರು ಅಡಿ ಅಂತರದಲ್ಲಿ ನಿಲ್ಲಬೇಕು ಮತ್ತು ಅಕ್ಕಿ ಸ್ವೀಕರಿಸುವ ಮೊದಲು ಅವರು ಹ್ಯಾಂಡ್ ಸ್ಯಾನಿಟೈಜರ್ ಬಳಸಬೇಕು ಎಂದು ಸ್ಥಳೀಯ ಪತ್ರಿಕೆ ಹನೋಯಿ ಟೈಮ್ಸ್ ವರದಿ ಮಾಡಿದೆ. ಪ್ರತಿ ಸ್ಥಳೀಯ ನಿವಾಸಿಗಳಿಗೆ 2 ಕಿಲೋಗ್ರ...
ಹೋ ಚಿ ಮಿನ್ಹ್ ನಗರದಲ್ಲಿ, ಅಕ್ಕಿ ಎಟಿಎಂ ಅಕ್ಕಿಯನ್ನು 24/7 ವಿತರಿಸುತ್ತದೆ ಮತ್ತು ಡಾ ನಂಗ್‌ನಲ್ಲಿ ಮುಂದಿನ ವಾರ ಎರಡು ಅಕ್ಕಿ ಎಟಿಎಂಗಳನ್ನು ಸ್ಥಾಪಿಸಲಾಗುವುದಂತೆ. ಇಂತಹ ಸಾಮಾಜಿಕ ಕಳಕಳಿ ಹಾಗು ವೈಯಕ್ತಿಕ ಜವಾಬ್ದಾರಿ ಭಾರತಕ್ಕೆ ನಿಜವಾಗಿಯೇ ಪ್ರಸ್ತುತ ಬೇಕಾಗಿದೆ. ಏನಂತೀರಾ.. ನಿಮ್ಮ ಅಭಿಪ್ರಾಯವನ್ನ ನಮ್ಮೊಂದಿಗೆ ಹಂಚಿಕೊಳ್ಳಿ..
ಜೀವ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಹಾರಿದರು | gujarat surat students jumped from fourth floor to save their life from fire - Kannada Oneindia
| Published: Saturday, May 25, 2019, 17:51 [IST]
ಸೂರತ್, ಮೇ 25: ಗುಜರಾತ್‌ನ ಸೂರತ್‌ನಲ್ಲಿರುವ ತಕ್ಷಿಲಾ ಆರ್ಕೇಡ್ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಅವಘಡ ಕನಿಷ್ಠ 20 ಮಂದಿ ವಿದ್ಯಾರ್ಥಿಗಳ ಬದುಕನ್ನು ಸುಟ್ಟುಹಾಕಿದೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸಂಜೆ 4 ಗಂಟೆ ಸುಮಾರಿಗೆ ಕಟ್ಟಡದ ಎರಡನೆಯ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹಾಗೆಯೇ ಅದು ಮೇಲ್ಭಾಗಕ್ಕೂ ಆವರಿಸಿತ್ತು. ಈ ಕಟ್ಟಡದಲ್ಲಿ ನಾಲ್ಕು ವಿಭಿನ್ನ ಕೋಚಿಂಗ್ ಕೇಂದ್ರಗಳು ನಡೆಯುತ್ತಿದ್ದವು. ಬೆಂಕಿಯ ಜ್ವಾಲೆ ಮತ್ತು ದಟ್ಟವಾದ ಹೊಗೆ ಆವರಿಸಿದಾಗ ಅದರಿಂದ ತಪ್ಪಿಸಿಕೊಳ್ಳಲು ಅನೇಕ ವಿದ್ಯಾರ್ಥಿಗಳು ಕಟ್ಟಡದಿಂದ ಹೊರಕ್ಕೆ ಜಿಗಿದಿದ್ದರು. ಹಾಗೆ ಜಿಗಿದವರೆಲ್ಲರೂ ಪ್ರಾಣಾಪಾಯದಿಂದ ಪಾರಾದರೂ...
'ನಾವು ನಾಲ್ಕನೆಯ ಹಾಗೂ ತುತ್ತತುದಿಯ ಮಹಡಿಯಲ್ಲಿದ್ದೆವು. ಇದ್ದಕ್ಕಿದ್ದಂತೆ ಸುತ್ತಲೂ ಹೊಗೆ ಆವರಿಸಿತ್ತು. ಉಸಿರಾಡುವುದೇ ಅಸಾಧ್ಯ ಎನ್ನುವಂತಾಯಿತು. ಸಹಾಯಕ್ಕಾಗಿ ಕಿರಿಚಾಡಿದೆವು. ನಾನು ಅಮ್ಮನಿಗೆ ಕರೆ ಮಾಡಿದೆ. ಮಾತನಾಡುತ್ತಲೇ ಅಲ್ಲಿದ್ದ ಏಕೈಕ ಮೆಟ್ಟಿಲಿನ ಕಡೆಗೆ ಓಡಿದೆ. ಆದರೆ, ಮೆಟ್ಟಿಲನ ಭಾಗವೂ ಹೊಗೆಯಿಂದ ತುಂಬಿಕೊಂಡಿತ್ತು' ಎಂದು ಅಲ್ಲಿನ ಭಯಾನಕ ಸ್ಥಿತಿಯನ್ನು ವಿವರಿಸಿದರು ಊರ್ಮಿಳಾ ಪಟ...
'ಉಳಿದವರಂತೆಯೇ ನಾನು ಮತ್ತು ನನ್ನ ಸ್ನೇಹಿತೆ ಇಬ್ಬರೂ ಕೊಠಡಿಯ ಹಿಂದೆ ಓಡಿದೆವು. ಅಲ್ಲಿ ಹೊರಕ್ಕೆ ಜಿಗಿಯದೆ ಬೇರೆ ಆಯ್ಕೆಯೇ ಇರಲಿಲ್ಲ. ಬೇರೆಯವರು ಜಿಗಿಯುವುದನ್ನು ಕಂಡೆ. ನಾನೂ ಜಿಗಿದೆ' ಎಂದು ಹೇಳಿದರು.
ತೊಡೆಗಳು, ಹಿಂಬದಿ ಮತ್ತು ತಲೆಗೆ ಗಾಯಗೊಂಡಿರುವ ಆಕೆ ಪಿಪಿ ಸಾವನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
'ನನ್ನ ಪರಿಸ್ಥಿತಿ ನರಕದಲ್ಲಿದ್ದಂತೆ ಆಗಿತ್ತು. ಕಟ್ಟಡದಲ್ಲಿ ಎಷ್ಟು ಹೊತ್ತು ಇದ್ದೆನೋ, ಅಲ್ಲಿಂದ ಜಿಗಿಯುವಂತೆ ನನ್ನನ್ನು ಯಾವುದು ಪ್ರಚೋದಿಸಿತ್ತೋ ಗೊತ್ತಿಲ್ಲ. ಪ್ರತಿಯೊಬ್ಬರೂ ಸಹಾಯಕ್ಕಾಗಿ ಕೂಗುತ್ತಿದ್ದದ್ದಷ್ಟೇ ನನಗೆ ನೆನಪಿದೆ. ಜಿಗಿದ ಬಳಿಕ ನಾನು ಕೂಡ ಸತ್ತೇ ಹೋದೆ ಎಂದೇ ಭಾವಿಸಿದ್ದೆ' ಎಂದು 15 ವರ್ಷದ ಹ್ಯಾಪಿ ಪಾಂಚಾಲಿ ತಿಳಿಸಿದರು.
ಈ ಭೀಕರ ಘಟನೆಯಲ್ಲಿ ಯುವಕನೊಬ್ಬ ಇಬ್ಬರು ಬಾಲಕಿಯರ ಜೀವ ರಕ್ಷಿಸಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ.
— VVS Laxman (@VVSLaxman281) 25 May 2019
ಅದೇ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಕೇತನ್ ಜೊರಾವಾಡಿಯಾ ಎಂಬ ಯುವಕ, ಬೆಂಕಿ ಮತ್ತು ದಟ್ಟ ಹೊಗೆಗೆ ಹೆದರದೆ ಅಲ್ಲಿಯೇ ಇದ್ದು, ಕಟ್ಟಡದಿಂದ ಬೀಳುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ. ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಅನೇಕರು ಯುವಕನ ಚಿತ್ರವನ್ನು ಹಂಚಿಕೊಂಡು ಸಾಹಸವನ್ನು ಶ್ಲಾಘಿಸಿದ್ದಾರೆ.
gujarat surat fire students ಗುಜರಾತ್ ಸೂರತ್ ಬೆಂಕಿ ವಿದ್ಯಾರ್ಥಿ
More than dozen students jumped from the fourth floor to save thier life from fire on Friday at Surat coaching complex in Gujarat.
ಜನರ ಸೇವೆಗಾಗಿ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡಿ - ಶಾಸಕ ಎಂ.ವಿ.ವೀರಭದ್ರಯ್ಯ | Benkiya Bale
ಚುನಾವಣೆಯಲ್ಲಿ ನೀಡಿದ ಮಾತಿನಂತೆ ಈ ಗ್ರಾಮದ ರಸ್ತೆಗೆ ಅನುದಾನ ನೀಡಿದ್ದು, ಜನರ ಸೇವೆಗಾಗಿ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯಪಟ್ಟರು.
ಮಧುಗಿರಿ ತಾಲೂಕು ಕಸಬಾ ಹೋಬಳಿಯ ಸೋಗೇನಹಳ್ಳಿಯಲ್ಲಿ 1 ಕೋಟಿ ರೂ. ವೆಚ್ಚದ ಸೋಗೇನಹಳ್ಳಿ-ಗೊಲ್ಲರಹಟ್ಟಿ-ಗೌರಿಬಿದನೂರು-ಹಿಂದೂಪೂರ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದಲ್ಲಿ ಶಾಂತಿಯ ವಾತವರಣವನ್ನು ನಾನು ಬಯಸಿದ್ದು, ಜನರ ಸೇವಕರಂತೆ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲಗುರಿಯಾಗಿದ್ದು, ಯಾರೂ ರಾಜಕೀಯ ಬೆರಸಬಾರದು ಎಂದರು.
ಅಭಿವೃದ್ಧಿ ಕಾಮಗಾರಿಗೆ ಹಣಕಾಸಿನ ತೊಂದರೆಯಿಲ್ಲ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎತ್ತಿನಹೊಳೆ ಯೋಜನೆಯ 410 ಕೋಟಿ ಅನುದಾನ ಬಿಡುಗಡೆಯಾಗಿದ್ದು, ನೀರಾವರಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. 3-4 ವರ್ಷಗಳಲ್ಲಿ ನೀರು ನಮ್ಮ ಕೆರೆಗಳಿಗೆ ಹರಿಯಲಿದೆ. ಆದ್ದರಿಂದ ಎಲ್ಲರೂ ಧೈರ್ಯದಿಂದ ಬದುಕು ಸಾಗಿಸಬೇಕು. ಬರಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಅಗತ್ಯ ಕಾರ್ಯವನ್ನು ಮಾಡುತ್ತಿದ್ದು, ರೈತರು ಹಾಗೂ ಸಾ...
ತಾ.ಪಂ.ಸದಸ್ಯ ರಂಗನಾಥ್ ಮಾತನಾಡಿ ನಾನೂ ಕಾಂಗ್ರೆಸ್ ಸದಸ್ಯನಾಗಿದ್ದರೂ ಪಕ್ಷ ಭೇದ ಮಾಡದೆ ರಾಜಕೀಯ ಮಾಡುವ ಶಾಸಕರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಈ ರಸ್ತೆಯು ನಾನು ಸದಸ್ಯನಾಗಿ ಮೂರು ವರ್ಷಕ್ಕೆ ದುರಸ್ಥಿಯಾಗುತ್ತಿದ್ದು, ಸಂತಸ ತಂದಿದೆ. ಮುಂದೆಯೂ ಇದೇ ರೀತಿಯ ಸಹಕಾರವನ್ನು ಶಾಸಕರಿಂದ ಬಯಸುವುದಾಗಿ ತಿಳಿಸಿ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಲು ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದ...
ಚಳಿಗಾಲದಲ್ಲಿ ಇದನ್ನೆಲ್ಲ ಮಿಸ್ ಮಾಡಿದಲೇ ಉಪಯೋಗಿಸಿ - Oneindia Kannada
Published : November 16, 2017, 10:37
ಚಳಿಗಾಲದಲ್ಲಿ ಇದನ್ನೆಲ್ಲ ಮಿಸ್ ಮಾಡಿದಲೇ ಉಪಯೋಗಿಸಿ
1.ತುಟಿಗೆ ಇರಲಿ ಆರೈಕೆ
2. ಸ್ನಾನಕ್ಕೆ ಸೋಪ್ ಬಳಸಬೇಡಿ;ಚಳಿಗಾಲದಲ್ಲಿ ಸೋಪ್ ಬಳಸಿ ಸ್ನಾನ ಮಾಡಿದ್ರೆ ಚರ್ಮ ಮತ್ತಷ್ಟು ಡ್ರೈ ಆಗುತ್ತದೆ. ಜೊತೆಗೆ ಸ್ನಾನ ಮಾಡಿ ಹೊರಬಂದ ನಂತರ ಮೈ ಮೇಲೆ ಬಿಳಿ ಪದರದಂತೆ ಕಾಣುತ್ತದೆ ಅಥವಾ ಚರ್ಮದಲ್ಲಿ ಹುರುಕಿ ಬಿಟ್ಟಂತೆ ಕಾಣುತ್ತದೆ. ಆದ್ದರಿಂದ ಸೋಪ್ ಬಳಸೋದನ್ನ ಸಾಧ್ಯವಾದಷ್ಟು ಕಡಿಮೆ ಮಾಡಿ. ಬದಲಿಗೆ ಕಡಲೆಹಿಟ್ಟು ಬಳಸಿ ಸ್ನಾನ ಮಾಡಿ. ಇನ್ನು ಮುಖಕ್ಕಂತೂ ಸೋಪ್ ಹಚ್ಚಲೇಬೇಡಿ. ಕಡಲೆಹಿಟ್ಟ...
4.ಕೋಮಲ ಕೈಗಳಿಗೆ ಇಲ್ಲಿದೆ ಸೀಕ್ರೆಟ್
ಒಂದು ವೇಳೆ ನಿಮ್ಮ ಕೈಗಳು ತುಂಬಾ ಒಣಗಿದಂತಾಗಿದ್ದು, ಸುಕ್ಕುಗಟ್ಟಿದಂತೆ ಕಾಣುತ್ತಿದ್ದರೆ ಹೀಗೆ ಮಾಡಿ. ರಾತ್ರಿ ಮಲಗುವ ಮುನ್ನ ಕೈಗಳಿಗೆ ವ್ಯಾಸಲೀನ್ ಹಚ್ಚಿ ಒಂದು ನಿಮಿಷದ ನಂತರ ಗ್ಲವ್ಸ್ ಧರಿಸಿ ಮಲಗಿ. ಇದರ ಜೊತೆಗೆ ದಿನದ ಮಧ್ಯೆ ಕೈಗಳು ಡ್ರೈ ಆದಂತೆ ಅನ್ನಿಸಿದ್ರೆ ಹ್ಯಾಂಡ್ ಕ್ರೀಂ ಅಥವಾ ಬಾಡಿ ಲೋಷನ್ ಹಚ್ಚಿಕೊಳ್ಳಿ.ಕೂದಲು ಕಳೆಗುಂದದಿರಲಿ
ನಿಮ್ಮಂತೆಯೇ ಬನ್ನಿ - ವರ್ಲ್ಡ್‌ವೈಡ್ ಚರ್ಚ್ ಆಫ್ ಗಾಡ್ ಸ್ವಿಟ್ಜರ್‌ಲ್ಯಾಂಡ್
ಆರ್ಟಿಕೆಲ್ > ಸಣ್ಣ ಚಿಂತನೆಯ > ನಿಮ್ಮಂತೆಯೇ ಬನ್ನಿ!
ಯೇಸುವಿನಲ್ಲಿ ನಾವು ಹೊಂದಿರುವ ವಿಮೋಚನೆಯನ್ನು ಸ್ವೀಕರಿಸಲು ಜನರನ್ನು ಪ್ರೋತ್ಸಾಹಿಸಲು ಬಿಲ್ಲಿ ಗ್ರಹಾಂ ಆಗಾಗ್ಗೆ ಒಂದು ಅಭಿವ್ಯಕ್ತಿಯನ್ನು ಬಳಸಿದ್ದಾರೆ: ಅವರು ಹೇಳಿದರು, "ನಿಮ್ಮಂತೆಯೇ ಬನ್ನಿ!" ದೇವರು ಎಲ್ಲವನ್ನೂ ನೋಡುತ್ತಾನೆ ಎಂಬುದು ನಮ್ಮ ಜ್ಞಾಪನೆಯಾಗಿದೆ: ನಮ್ಮ ಅತ್ಯುತ್ತಮ ಮತ್ತು ಕೆಟ್ಟದು, ಆದರೆ ಅವನು ನಮ್ಮನ್ನು ಪ್ರೀತಿಸುತ್ತಾನೆ. "ನಿಮ್ಮಂತೆಯೇ ಬರಲು" ಎಂಬ ಕರೆ ಅಪೊಸ್ತಲ ಪೌಲನ ಮ...
"ನಾವು ಇನ್ನೂ ಬಲಹೀನರಾಗಿರುವಾಗಲೇ ಕ್ರಿಸ್ತನು ನಮಗೋಸ್ಕರ ಭಕ್ತಿಹೀನನಾಗಿ ಸತ್ತನು. ಈಗ ಯಾರೊಬ್ಬರೂ ನ್ಯಾಯಯುತ ಮನುಷ್ಯನ ಸಲುವಾಗಿ ಸಾಯುವುದಿಲ್ಲ; ಒಳ್ಳೆಯದಕ್ಕಾಗಿ ಅವನು ತನ್ನ ಜೀವವನ್ನು ಅಪಾಯಕ್ಕೆ ದೂಡಬಹುದು. ಆದರೆ ನಾವು ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಮರಣಹೊಂದಿದನು ಎಂಬಲ್ಲಿ ದೇವರು ನಮ್ಮ ಮೇಲಿನ ಪ್ರೀತಿಯನ್ನು ಪ್ರದರ್ಶಿಸುತ್ತಾನೆ. 5,6-8)
ಇಂದು ಅನೇಕ ಜನರು ಪಾಪದ ವಿಷಯದಲ್ಲಿ ಯೋಚಿಸುವುದಿಲ್ಲ. ನಮ್ಮ ಆಧುನಿಕ ಮತ್ತು ಆಧುನಿಕೋತ್ತರ ಪೀಳಿಗೆಯು "ಶೂನ್ಯತೆ", "ಹತಾಶತೆ" ಅಥವಾ "ಪ್ರಜ್ಞಾಶೂನ್ಯತೆ" ಎಂಬ ಭಾವನೆಯ ದೃಷ್ಟಿಯಿಂದ ಹೆಚ್ಚು ಯೋಚಿಸುತ್ತದೆ, ಮತ್ತು ಅವರು ತಮ್ಮ ಆಂತರಿಕ ಹೋರಾಟದ ಕಾರಣವನ್ನು ಕೀಳರಿಮೆಯ ಭಾವನೆಯಲ್ಲಿ ನೋಡುತ್ತಾರೆ. ಅವರು ತಮ್ಮನ್ನು ತಾವು ಪ್ರೀತಿಸುವ ಸಾಧನವಾಗಿ ಪ್ರೀತಿಸಲು ಪ್ರಯತ್ನಿಸಬಹುದು, ಆದರೆ ಅದಕ್ಕಿಂತ ಹೆ...
ಇಮ್ 15. ನೇ ಶತಮಾನದಲ್ಲಿ, ಮಾರ್ಟಿನ್ ಲೂಥರ್ ನೈತಿಕವಾಗಿ ಪರಿಪೂರ್ಣ ಜೀವನವನ್ನು ನಡೆಸಲು ಕಠಿಣ ಹೋರಾಟವನ್ನು ನಡೆಸಿದರು. ಅವನು ನಿರಂತರವಾಗಿ ತನ್ನನ್ನು ತಾನು ವಿಫಲಗೊಳಿಸುವುದನ್ನು ಕಂಡುಕೊಂಡನು. ಅವನ ಹತಾಶೆಯಲ್ಲಿ ಅವನು ಅಂತಿಮವಾಗಿ ದೇವರ ಕೃಪೆಯಲ್ಲಿ ಸ್ವಾತಂತ್ರ್ಯವನ್ನು ಕಂಡುಕೊಂಡನು. ಅಲ್ಲಿಯವರೆಗೆ, ಲೂಥರ್ ತನ್ನ ಪಾಪಗಳೊಂದಿಗೆ ಗುರುತಿಸಿಕೊಂಡಿದ್ದನು ಮತ್ತು ಹತಾಶೆಯನ್ನು ಮಾತ್ರ ಕಂಡುಕೊಂಡ...
ದೇವರು ನಿನ್ನನ್ನು ಪ್ರೀತಿಸುತ್ತಾನೆ. ದೇವರು ತನ್ನ ಹೃದಯದ ಕೆಳಗಿನಿಂದ ಪಾಪವನ್ನು ದ್ವೇಷಿಸುತ್ತಿದ್ದರೂ, ಅವನು ನಿಮ್ಮನ್ನು ದ್ವೇಷಿಸುವುದಿಲ್ಲ. ದೇವರು ಎಲ್ಲ ಜನರನ್ನು ಪ್ರೀತಿಸುತ್ತಾನೆ. ಅವನು ಪಾಪವನ್ನು ನಿಖರವಾಗಿ ದ್ವೇಷಿಸುತ್ತಾನೆ ಏಕೆಂದರೆ ಅದು ಜನರನ್ನು ನೋಯಿಸುತ್ತದೆ ಮತ್ತು ನಾಶಪಡಿಸುತ್ತದೆ.
"ನಿಮ್ಮಂತೆಯೇ ಬನ್ನಿ" ಎಂದರೆ ನೀವು ಅವನ ಬಳಿಗೆ ಬರುವ ಮೊದಲು ನೀವು ಉತ್ತಮವಾಗಲು ದೇವರು ಕಾಯುತ್ತಿಲ್ಲ. ನೀವು ಏನು ಮಾಡಿದರೂ ಅವನು ಈಗಾಗಲೇ ನಿಮ್ಮನ್ನು ಪ್ರೀತಿಸುತ್ತಾನೆ. ಯೇಸು ದೇವರ ರಾಜ್ಯಕ್ಕೆ ಖಚಿತವಾದ ಮಾರ್ಗವಾಗಿದೆ ಮತ್ತು ಅವರ ಎಲ್ಲ ಅಗತ್ಯಗಳಿಂದ ಪರಿಪೂರ್ಣವಾದ ಸಹಾಯವಾಗಿದೆ. ದೇವರ ಪ್ರೀತಿಯನ್ನು ಅನುಭವಿಸಿದ ಅನುಭವದಿಂದ ನಿಮ್ಮನ್ನು ಹಿಂತೆಗೆದುಕೊಳ್ಳುವುದು ಏನು? ಅದು ಏನೇ ಇರಲಿ: ಈ ಹ...
ರೋಚಕ 'ಅನುಭವ' ನೀಡುವ 'ಖನನ'
ಮೋಡಿ ಮಾಡುವ ಹೊಸಬರ ತಂಡದ ಸಿನಿಮಾ
ಬೆಂಗಳೂರು.ಮೇ.12: ತನ್ನ ವಿಭಿನ್ನ ಹಾಡುಗಳು ಮತ್ತು ಟ್ರೈಲರ್ ನಿಂದ ಕುತೂಹಲ ಮೂಡಿಸಿದ್ದ ಸಿನಿಮಾಗಳಲ್ಲಿ 'ಖನನ' ಕೂಡಾ ಒಂದು. ಈಗಾಗಲೇ ಚಿತ್ರವು ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿತ್ತು. ಇದೀಗ ಸಿನಿಮಾ ತೆರೆ ಕಂಡಿದ್ದು, ಹೊಸಬರ ಈ ಪ್ರಯತ್ನ ಇಷ್ಟವಾಗುತ್ತದೆ.
ಅಂದ ಹಾಗೆ ಇದೊಂದು ರಿವೇಂಜ್ ಡ್ರಾಮಾ ಕೆಟಗರಿಗೆ ಸೇರಿದ ಸಿನಿಮಾ. ಒಂದೂರಲ್ಲೊಂದು ಕುಟುಂಬ ಇರುತ್ತದೆ. ಗಂಡ ಮತ್ತು ಹೆಂಡತಿ. ಗಂಡನಿಗೆ ಹಳ್ಳಿ ವ್ಯಾಮೋಹ. ಹೆಂಡತಿಯ ಆಸೆ ಏನು ಅಂತ ಸುಲಭಕ್ಕೆ ಗೊತ್ತಾಗುವುದಿಲ್ಲ. ಆದರೆ ಗೊತ್ತಾಗುವ ವೇಳೆ ಮತ್ತೇ ಇನ್ನೇನೋ ಆಗಿರುತ್ತದೆ. ಅದೇನು ಎಂಬುದನ್ನು ನೀವು ಚಿತ್ರಮಂದಿರದಲ್ಲಿಯೇ ನೋಡಿ ಆನಂದಿಸಬೇಕು.
ಇನ್ನು ಚಿತ್ರದಲ್ಲಿ ನಟಿಸಿರುವ ನವ ನಾಯಕ ಆರ್ಯವರ್ಧನ್ ಪಾತ್ರಕ್ಕೆ ತಕ್ಕಂತೆ ದೇಹ ಸೌಂದರ್ಯವನ್ನೂ ಹೆಚ್ಚಿಸಿಕೊಂಡಿರುವುದಷ್ಟೇ ಅಲ್ಲ, ನಟನೆಯಲ್ಲೂ ನೋಡುಗರನ್ನು ಸೆಳೆಯುತ್ತಾರೆ. ಅದೇ ರೀತಿ ನಾಯಕಿ ಕರಿಷ್ಮಾ, ಯುವ ಕಿಶೋರ್, ಅವಿನಾಶ್, ವಿನಯಾ ಪ್ರಸಾದ್ ಓಂ ಪ್ರಕಾಶ್ ರಾವ್ ಸೇರಿದಂತೆ ಸೇರಿದಂತೆ ಅನೇಕರ ಅಭಿನಯ ಗಮನ ಸೆಳೆಯುತ್ತದೆ. ಅದರಲ್ಲೂ ನಾಯಿಯ ಪಾತ್ರ ಕುತೂಹಲ ಮೂಡಿಸುತ್ತದೆ.
ಈ ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಮೂಡಿ ಬಂದಿದ್ದು, ನವ ನಿರ್ದೇಶಕ ರಾಧಾ ನಿರೂಪಣೆಯಲ್ಲಿ ಹೊಸತನ ಮತ್ತು ಚುರುಕುತನವಿದೆ. ಹಾಗೆಯೇ ಪೂರಕವಾಗಿ ಚಿತ್ರದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಮೂಡಿ ಬಂದಿದೆ.
ಸಾಮಾನ್ಯವಾಗಿ ನಿರ್ಮಾಪಕರೊಬ್ಬರ ಮಗ ನಾಯಕನಟರಾಗಿ ಕಾಣಿಸಿಕೊಂಡಾಗ ಅಂತಹ ಚಿತ್ರದಲ್ಲಿ ಸಿಕ್ಕಾಪಟ್ಟೇ ಆ್ಯಕ್ಷನ್ ಮತ್ತು ಸಿಕ್ಸ್ ಪ್ಯಾಕ್ ಪ್ರದರ್ಶನ ಇರುತ್ತದೆ. ಆದರೆ, ಈ ಚಿತ್ರದಲ್ಲಿ ಅವೆಲ್ಲವನ್ನು ಬಿಟ್ಟು, ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿರುವುದು ಚಿತ್ರದ ಹೆಗ್ಗಳಿಕೆ.
ಇದೊಂದು ಹೊಸಬರ ತಂಡದ ಚಿತ್ರವಾಗಿದ್ದರೂ ಸಹ ಚಿತ್ರವು ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಮನರಂಜಿಸುವ ಪ್ರೀತಿ, ಮೋಸ, ದ್ವೇಷ, ಸಂಬಂಧ, ಅನುಬಂಧ ಇತ್ಯಾದಿ ವಿಷಯಗಳಿವೆ. ಹಾಗೆಯೇ ಕಚಗುಳಿ ಕೊಡುವ ಸನ್ನಿವೇಶಗಳು ಸಹ ಇವೆ. ಖಂಡಿತಾ ಈ ಸಿನಿಮಾ ನೀವು ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ.
ಅರಬ್ ಜಗತ್ತಿಗೂ ಪಾಕಿಸ್ತಾನ ಅಪಥ್ಯವೇ? | Prajavani
ಮತ, ಸಿದ್ಧಾಂತಗಳು ರಾಷ್ಟ್ರಗಳ ನಡುವಿನ ಸ್ನೇಹ, ವೈರತ್ವವನ್ನು ನಿರ್ಧರಿಸುವ ಕಾಲಘಟ್ಟ ಇದಲ್ಲ
Published: 02 ಸೆಪ್ಟೆಂಬರ್ 2019, 00:09 IST
Updated: 02 ಸೆಪ್ಟೆಂಬರ್ 2019, 00:09 IST
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ ವಾಸ್ತವಕ್ಕೆ ಹತ್ತಿರವಿರುವ ಮಾತನ್ನು ಆಡಿದ್ದಾರೆ. 'ಕಾಶ್ಮೀರಕ್ಕೆ ಅನ್ವಯವಾಗುತ್ತಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿರುವ ವಿಷಯವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಥವಾ ಮುಸ್ಲಿಂ ಜಗತ್ತಿನಿಂದ ಪಾಕಿಸ್ತಾನ ಹೆಚ್ಚಿನ ಬೆಂಬಲ ನಿರೀಕ್ಷಿಸುವಂತಿಲ್ಲ. ನಾವು ಆ ಭ್ರಮೆಯಿಂದ ಹೊರಬರಬೇಕು' ಎಂಬುದು ಖುರೇಷಿ ಮಾತು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮೇಲೆ ಪಾಕಿಸ್ತಾನವು ಕಾಶ್ಮೀರದ ವಿಷಯವಾಗಿ ಭಾರತದ ವಿರುದ್ಧ ಇತರ ಜಾಗತಿಕ ಶಕ್ತಿಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿತು. ಆದರೆ ಸೌದಿ ಅರೇಬಿಯಾ, ಯುಎಇ ತರಹದ ಒಂದು ಕಾಲದ ಪಾಕಿಸ್ತಾನದ ಮಿತ್ರ ರಾಷ್ಟ್ರಗಳೇ 'ಇದು ಭಾರತದ ಆಂತರಿಕ ವಿಚಾರ' ಎಂದು ಕೈ ತೊಳೆದುಕೊಂಡವು. ಇಷ್ಟಲ್ಲದೇ ಯುಎಇ ...
ಹಾಗೆ ನೋಡಿದರೆ, ಯುಎಇ ಹಲವು ಸಂದರ್ಭಗಳಲ್ಲಿ ಪಾಕಿಸ್ತಾನದ ಬಗಲಿಗೆ ನಿಂತಿತ್ತು. 1981ರಲ್ಲಿ ಇಂದಿರಾ ಗಾಂಧಿ ಈ ಅರಬ್ ರಾಷ್ಟ್ರಕ್ಕೆ ಭೇಟಿ ನೀಡಿದ್ದರು ಎಂಬುದನ್ನು ಬಿಟ್ಟರೆ, ಭಾರತದ ಉಳಿದ್ಯಾವ ನಾಯಕರೂ ಅಧಿಕೃತವಾಗಿ ಭೇಟಿ ನೀಡುವ ಸಂದರ್ಭ ಒದಗಿರಲಿಲ್ಲ. ಸಂಬಂಧವು ತೈಲಾವಲಂಬನೆಗೆ ಸೀಮಿತವಾಗಿತ್ತು. 2014ರಲ್ಲಿ ಮೋದಿ ಪ್ರಧಾನಿಯಾದಾಗ ಅರಬ್ ರಾಷ್ಟ್ರಗಳತ್ತ ದೃಷ್ಟಿನೆಟ್ಟರು. ಯುಎಇಗೆ ಭೇಟಿ ಇತ್ತರು...
ಭಾರತದ ಒಟ್ಟು ತೈಲ ಆಮದಿನ ಶೇ 8ರಷ್ಟು ಯುಎಇಯಿಂದ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರ, ಆಹಾರ ಸಂಸ್ಕರಣೆ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅರಬ್ ರಾಷ್ಟ್ರವು ಭಾರತದೊಂದಿಗೆ ತೊಡಗಿಸಿಕೊಂಡಿದೆ. ಯುಎಇಯ ಆರ್ಥಿಕತೆ ಭಾರತದ ಮೇಲೆ ಎರಡು ರೀತಿಯಲ್ಲಿ ಅವಲಂಬಿತವಾಗಿದೆ. ಭಾರತ ಮೂರನೇ ಅತಿದೊಡ್ಡ ತೈಲ ಉಪಭೋಗಿ ರಾಷ್ಟ್ರ. ಅಲ್ಲದೆ ಅಲ್ಲಿನ ಕೈಗಾರಿಕೆ, ಉದ್ಯಮಗಳು ಭಾರತದ ಶ್ರಮಿಕ ವರ್ಗವ...
2018ರಲ್ಲಿ ಭಾರತ ಮತ್ತು ಯುಎಇ 'ಕರೆನ್ಸಿ ವಿನಿಮಯ' ಒಪ್ಪಂದ ಮಾಡಿಕೊಂಡವು. ಮೊದಲಿಗೆ, ನಾವು ಡಾಲರ್ ಮೂಲಕವೇ ಯುಎಇ ಜೊತೆ ವ್ಯವಹರಿಸಬೇಕಿತ್ತು. ಯುಎಇ ಈಗ ರೂಪಾಯಿಗೆ ಮಾನ್ಯತೆ ನೀಡಿರುವುದರಿಂದ, ಭಾರತಕ್ಕೆ ಡಾಲರ್ ಮೇಲಿನ ಅವಲಂಬನೆ ಅಷ್ಟರ ಮಟ್ಟಿಗೆ ತಗ್ಗಿದೆ. ಇತ್ತೀಚೆಗೆ ಮೋದಿ ಅವರ ಯುಎಇ ಭೇಟಿಯ ವೇಳೆ ಯುಎಇಯ ಮಹತ್ವಾಕಾಂಕ್ಷಿ ಯೋಜನೆ 'ಹೋಪ್ ಮಾರ್ಸ್ ಮಿಷನ್' ಸಾಕಾರಕ್ಕೆ, ತನ್ನ ಕಾರ್ಯಕ್ಷಮತೆ ಮತ...
ಈಗಾಗಲೇ ಚರ್ಚಿತವಾಗಿರುವ 'ಫುಡ್ ಕಾರಿಡಾರ್' ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡರೆ
ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ಭಾಗದ ರೈತರು ತಾವು ಬೆಳೆದ ಆಹಾರ ಪದಾರ್ಥಗಳನ್ನು ಯುಎಇಗೆ ಸುಲಭವಾಗಿ ರಫ್ತು ಮಾಡಲು ಸಾಧ್ಯವಾಗುತ್ತದೆ. ಹಾಗೆಂದು ಈ ದ್ವಿಪಕ್ಷೀಯ ಸ್ನೇಹ ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಅರಬ್ ರಾಷ್ಟ್ರ ತನ್ನ ನೆಲದಲ್ಲಿ 55 ಸಾವಿರ ಚದರ ಮೀಟರ್ ಜಾಗವನ್ನು ಹಿಂದೂ ದೇವಾಲಯ ನಿರ್ಮಾಣಕ್ಕೆ ಒದಗಿಸಿ ಬೆಂಬಲವಾಗಿ ನಿಂತಿದೆ. ಯುಎಇಯಲ್ಲಿ ತಲೆಮರೆಸಿಕೊಂಡಿ
ರುವ, ಭಾರತಕ್ಕೆ ಬೇಕಿರುವ ಪಾತಕಿಗಳನ್ನು ಹಸ್ತಾಂತರಿಸುವುದಕ್ಕೂ ಯುಎಇ ಮುಂದಾಗಿದೆ. ಹೀಗೆ ಭಾರತ ಮತ್ತು ಯುಎಇ ಸ್ವಹಿತಾಸಕ್ತಿಗೆ ಪೂರಕವಾಗಿ ಮುನ್ನಡೆಯುತ್ತಿದ್ದರೆ, ಪಾಕಿಸ್ತಾನ ತನ್ನ ದ್ವಂದ್ವ ವಿದೇಶಾಂಗ ನೀತಿ, ಕೆಟ್ಟ ಆಡಳಿತ ಮಾದರಿಯಿಂದ ಒಂದು ಕಾಲದ ಮಿತ್ರ ರಾಷ್ಟ್ರಗಳ ಉಪೇಕ್ಷೆಗೆ ಗುರಿಯಾಗಿದೆ.
ಬಿಡಿ, ಪಾಕಿಸ್ತಾನದ ಓಲೈಕೆಗೆ ಅರಬ್ ರಾಷ್ಟ್ರಗಳು ಮುಂದಾಗುತ್ತಿದ್ದ ಕಾಲಘಟ್ಟವೂ ಒಂದಿತ್ತು. 1969ರ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರಿ ಒಕ್ಕೂಟದ (ಐಒಸಿ) ಸಮಾವೇಶಕ್ಕೆ ಅರಬ್ ರಾಷ್ಟ್ರಗಳು ಭಾರತವನ್ನು ಆಹ್ವಾನಿಸಿ, ಪಾಕಿಸ್ತಾನ ಸಿಟ್ಟಾಯಿತೆಂಬ ಕಾರಣಕ್ಕೆ ಭಾರತವನ್ನು ಸಮಾವೇಶದಿಂದ ದೂರ ಇಟ್ಟಿದ್ದವು. ಜುಲ್ಫಿಕರ್ ಅಲಿ ಭುಟ್ಟೊ ಆಡಳಿತದ ಅವಧಿಯಲ್ಲಿ ಅರಬ್ ರಾಷ್ಟ್ರಗಳಿಂದ ಪಾಕಿಸ್ತಾನಕ್ಕೆ ಹಣದ ಹೊಳೆ ...
ನಂತರ 2014ರಲ್ಲಿ ಯೆಮನ್ ಬಿಕ್ಕಟ್ಟು ಉಲ್ಬಣಿಸಿದಾಗ, ಸೇನಾ ನೆರವು ನೀಡುವಂತೆ ಪಾಕಿಸ್ತಾನಕ್ಕೆ ಯುಎಇ ಕೇಳಿಕೊಂಡಿತ್ತು. ಆದರೆ ಪಾಕಿಸ್ತಾನದ ಸಂಸತ್ತು ಮಧ್ಯಪ್ರಾಚ್ಯದ ವಿಷಯದಲ್ಲಿ ತಟಸ್ಥ ನಿಲುವು ಹೊಂದುವ ನಿರ್ಣಯ ಅಂಗೀಕರಿಸಿತು. ಇದರಿಂದ ಅರಬ್ ರಾಷ್ಟ್ರಗಳು 'ಪಾಕಿಸ್ತಾನಕ್ಕೆ ಇರಾನ್ ಜೊತೆಗಿನ ಗೆಳೆತನ ಮುಖ್ಯವಾಯಿತೇ' ಎಂದು ಸಿಟ್ಟಾದವು. ಸ್ಥಿರ ವಿದೇಶಾಂಗ ನೀತಿ ಇಟ್ಟುಕೊಳ್ಳದ ಪಾಕಿಸ್ತಾನ, ಕೇವಲ...
ಈ ಬಾರಿ ಒಂದು ಹೆಜ್ಜೆ ಮುಂದಿರಿಸಿರುವ ಪ್ರಧಾನಿ ಮೋದಿ, ಯುಎಇ ಜೊತೆಗೆ ಬಹರೇನ್ ದೇಶಕ್ಕೂ ಭೇಟಿ ಇತ್ತಿದ್ದಾರೆ. ಇದು ಭಾರತೀಯ ನಾಯಕರೊಬ್ಬರು ಈ ದ್ವೀಪರಾಷ್ಟ್ರಕ್ಕೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ. ಜೊತೆಗೆ ಯುಎಇ ಮತ್ತು ಸೌದಿ ಅರೇಬಿಯಾವನ್ನು ಕಾಶ್ಮೀರದಲ್ಲಿ ಹಣ ಹೂಡಲು ಆಹ್ವಾನಿಸಿ ಭಾರತ ಜಾಣ್ಮೆ ಮೆರೆದಿದೆ. ಒಂದೊಮ್ಮೆ ಈ ಎರಡು ದೇಶಗಳೂ ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡಿದರೆ,...
ಒಂದಂತೂ ನಿಜ. ಮತ, ಸಿದ್ಧಾಂತಗಳು ರಾಷ್ಟ್ರಗಳ ನಡುವಿನ ಸ್ನೇಹ, ವೈರತ್ವವನ್ನು ನಿರ್ಧರಿಸುವ ಕಾಲಘಟ್ಟ ಇದಲ್ಲ. ಬದಲಾಗಿ ಆರ್ಥಿಕ ಮತ್ತು ವ್ಯೂಹಾತ್ಮಕ ಹಿತಾಸಕ್ತಿಗಳು ದ್ವಿಪಕ್ಷೀಯ ಸಂಬಂಧ ನಿರ್ಧರಿಸುತ್ತವೆ. ಅರಬ್ ಜಗತ್ತಿನ ವಿಷಯದಲ್ಲಿ ಆಗುತ್ತಿರುವುದು ಇದೇ. ಅರಬ್ ರಾಷ್ಟ್ರಗಳಿಗೆ ಪಾಕಿಸ್ತಾನ ದೊಡ್ಡ ಮಾರುಕಟ್ಟೆ
ಯಲ್ಲ. ಬದಲಿಗೆ, ಆರ್ಥಿಕ ಸಂಕಷ್ಟ ಎದುರಾದಾಗ ಸಹಾಯಕ್ಕಾಗಿ ಕೈಚಾಚುವ ಮುಸ್ಲಿಂ ರಾಷ್ಟ್ರವಾಗಿ ಮಾತ್ರ ಉಳಿದಿದೆ. ಆಂತರಿಕವಾಗಿ ಶಕ್ತಿಶಾಲಿಯಾಗಿರದ ಯಾವುದೇ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುವುದಿಲ್ಲ. ಭಯೋತ್ಪಾದನೆ ವಿಷಯದಲ್ಲಿನ ದ್ವಂದ್ವ ನೀತಿ, ಆರ್ಥಿಕ ದಿವಾಳಿತನದಿಂದಾಗಿ ಪಾಕಿಸ್ತಾನ ಏಕಾಂಗಿಯಾಗುತ್ತಿದೆ. ಭಾರತದ ಮೇಲಿನ ದ್ವೇಷ, ಅಸೂಯೆಯು ಪಾಕಿಸ್ತಾನವನ್ನು ಇನ್ನಷ್ಟು ಬಡಕಲು ಮಾಡು...
ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿಗೆ ಮೋದಿ ಅಧ್ಯಕ್ಷತೆಯಲ್ಲಿ ಎರಡು ಸಮಿತಿ | Two new cabinet committee formed to tackle economy, unemployment by centre - Kannada Oneindia
ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿಗೆ ಮೋದಿ ಅಧ್ಯಕ್ಷತೆಯಲ್ಲಿ ಎರಡು ಸಮಿತಿ
| Published: Wednesday, June 5, 2019, 20:08 [IST]
ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಆರ್ಥಿಕತೆ ಹಿಂಜರಿತದ ಆತಂಕದಿಂದ ಹೊರಬರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ತಮ್ಮದೇ ಅಧ್ಯಕ್ಷತೆಯಲ್ಲಿ ಎರಡು ಸಂಪುಟ ಸಮಿತಿ ರಚಿಸಿದ್ದಾರೆ. ಆರ್ಥಿಕ ಪ್ರಗತಿ, ಹೂಡಿಕೆ ಹಾಗೂ ಉದ್ಯೋಗದ ಅವಕಾಶ ಹೆಚ್ಚಿಸುವುದು ಈ ಸಮಿತಿಯ ಉದ್ದೇಶ ಆಗಿರುತ್ತದೆ.
ಈ ಸಂಪುಟ ಸಮಿತಿಯಲ್ಲಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ ಹಾಗೂ ಪಿಯೂಷ್ ಗೋಯೆಲ್ ಸದಸ್ಯರಾಗಿ ಇರುತ್ತಾರೆ. ಮತ್ತೊಂದು ಹತ್ತು ಸಂಪುಟ ಸದಸ್ಯರ ಸಮಿತಿಯನ್ನು ಉದ್ಯೋಗ ಹಾಗೂ ಕೌಶಲ ಅಭಿವೃದ್ಧಿಗಾಗಿ ರೂಪಿಸಲಾಗುತ್ತದೆ.
ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯೆಲ್, ನರೇಂದ್ರ ಸಿಂಗ್ ತೋಮರ್, ರಮೇಶ್ ಪೋಖ್ರಿಯಾಲ್ 'ನಿಶಾಂಕ್', ಧರ್ಮೇಂದ್ರ ಪ್ರಧಾನ್, ಮಹೇಂದ್ರ ನಾಥ್ ಪಾಂಡೆ, ಸಂತೋಷ್ ಕುಮಾರ್ ಗಂಗ್ವಾರ್, ಹರ್ ದೀಪ್ ಸಿಂಗ್ ಪುರಿ ಸದಸ್ಯರಾಗಿ ಇರುತ್ತಾರೆ.
2018-19ನೇ ಆರ್ಥಿಕ ವರ್ಷದ ಕೊನೆ ತ್ರೈ ಮಾಸಿಕದಲ್ಲಿ ಜಿಡಿಪಿ 5.8ಕ್ಕೆ ಕುಸಿಯುವುದರೊಂದಿಗೆ ಹೊಸ ಸರಕಾರಕ್ಕೆ ಆತಂಕ ಎದುರಾಗಿದೆ. ಒಟ್ಟಾರೆಯಾಗಿ ಕಳೆದ ವರ್ಷ ಇರಿಸಿಕೊಂಡಿದ್ದ ಜಿಡಿಪಿ ಗುರಿ 7.2 ಪರ್ಸೆಂಟ್. ಆದರೆ ಅಂದಾಜು ತಲುಪಿದ್ದು 6.8 ಪರ್ಸೆಂಟ್.
ಇನ್ನು ಉದ್ಯೋಗದ ವಿಚಾರಕ್ಕೆ ಬಂದರೆ, ಚುನಾವಣೆ ಮುಗಿದ ನಂತರ ಸರಕಾರವು ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (PLFS) ಬಿಡುಗಡೆ ಮಾಡಿತು. ವಾರ್ಷಿಕ ವರದಿ (2017ರ ಜುಲೈನಿಂದ 2018ರ ಜುಲೈ ತನಕ) ಪ್ರಕಾರ, ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ ಮಟ್ಟವಾದ 6.1 ಪರ್ಸೆಂಟ್ ಇತ್ತು.
jobs economy narendra modi bjp ಉದ್ಯೋಗ ಆರ್ಥಿಕತೆ ನರೇಂದ್ರ ಮೋದಿ ಬಿಜೆಪಿ
Two new cabinet committee formed under the chairmanship of PM Narendra Modi to tackle economy, unemployment by centre. Here is the details of the committee.
ಶಿವಕುಮಾರ ವಿರುದ್ಧ ಜಾರಕಿಹೊಳಿ ಅವಾಚ್ಯವಾಗಿ ನಿಂದನೆ: ಗುತ್ತೇದಾರ ಖಂಡನೆ - Sanjevani
Home ಜಿಲ್ಲೆ ಕಲಬುರಗಿ ಶಿವಕುಮಾರ ವಿರುದ್ಧ ಜಾರಕಿಹೊಳಿ ಅವಾಚ್ಯವಾಗಿ ನಿಂದನೆ: ಗುತ್ತೇದಾರ ಖಂಡನೆ