text
stringlengths
0
61.5k
ಮೆಟಾ ಒಡೆತನದ ವಾಟ್ಸಾಪ್‌ ಐಫೋನ್‌ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದೆ. ಐಫೋನ್‌ ಬಳಕೆದಾರರು ಶೀಘ್ರದಲ್ಲೇ ತಮ್ಮ iOS ಅಪ್ಡೇಟ್‌ ಮಾಡಿಕೊಳ್ಳದಿದ್ದರೆ ನಿಮ್ಮ ಐಫೋನ್‌ನಲ್ಲಿ ವಾಟ್ಸಾಪ್‌ ವರ್ಕ್‌ ಮಾಡುವುದನ್ನು ನಿಲ್ಲಿಸಲಿದೆ. ಅಂದರೆ ವಾಟ್ಸಾಪ್‌ iOS 10 ಮತ್ತು iOS 11 ಚಾಲನೆಯಲ್ಲಿರುವ ಐಫೋನ್‌ನಲ್ಲಿ ತನ್ನ ಕಾರ್ಯನಿರ್ವಹಿಸುವುದನ್ನು ಸ್ಟಾಪ್‌ ಮಾಡಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಐಫೋನ್‌...
ಹೌದು, ವಾಟ್ಸಾಪ್‌ iOS 10 ಮತ್ತು iOS 11 ಚಾಲನೆಯಲ್ಲಿರುವ ವಾಟ್ಸಾಪ್‌ನಲ್ಲಿ ತನ್ನ ಕಾರ್ಯವನ್ನು ನಿಲ್ಲಿಸಲು ಮುಂದಾಗಿದೆ. ಸದ್ಯ ವಾಟ್ಸಾಪ್‌ ಅಪ್ಲಿಕೇಶನ್ ಈ ವರ್ಷದ ನಂತರ ಅವರ OS ಅನ್ನು ಬೆಂಬಲಿಸುವುದನ್ನು ನಿಲ್ಲಿಸಲಿದೆ ಎಂದು ವರದಿಯಾಗಿದೆ. ಆದರಿಂದ ಐಫೋನ್‌ ಬಳಕೆದಾರರು ಹೊಸ iOS ಗೆ ಅಪ್‌ಗ್ರೇಡ್ ಮಾಡಿಕೊಳ್ಳುವುದು ಸೂಕ್ತವಾಗಿದೆ. ಹಾಗಾದ್ರೆ ವಾಟ್ಸಾಪ್‌ ಐಫೋನ್‌ನ ಯಾವ ಒಎಸ್‌ನಲ್ಲಿ ಕಾರ್ಯ...
ವಾಟ್ಸಾಪ್‌ ಇದೇ ಅಕ್ಟೋಬರ್ 24, 2022 ರ ನಂತರ iOSನ ಹಳೆಯ ಆವೃತ್ತಿಯನ್ನು ಬೆಂಬಲಿಸುವುದನ್ನು ನಿಲ್ಲಿಸುತ್ತದೆ. ಆದರಿಂದ ಐಫೋನ್‌ ಬಳಕೆದಾರರು ಸೆಟ್ಟಿಂಗ್‌ಗಳು > ಜನರಲ್‌ಗೆ ಹೋಗಿ, ನಂತರ ಇತ್ತೀಚಿನ iOS ಆವೃತ್ತಿಯನ್ನು ಪಡೆಯಲು ಸಾಫ್ಟ್‌ವೇರ್ ಅಪ್ಡೇಟ್‌ ಟ್ಯಾಪ್ ಮಾಡಿ, ಎಂದು ವಾಟ್ಸಾಪ್‌ ಹಳೆಯ iOS ಆವೃತ್ತಿಯನ್ನು ಚಾಲನೆ ಮಾಡುತ್ತಿರುವ ಐಫೋನ್‌ ಬಳಕೆದಾರರಿಗೆ ಸಂದೇಶವನ್ನು ಕಳುಹಿಸುತ್ತಿದೆ. ...
ಒಂದು ವೇಳೆ ನೀವು ಕೂಡ iOS 10 ಅಥವಾ iOS 11 ಚಾಲನೆಯಲ್ಲಿರುವ ಐಫೋನ್‌ ಅನ್ನು ಬಳಸುತ್ತಿದ್ದರೆ ಶೀಘ್ರದಲ್ಲೇ ವಾಟ್ಸಾಪ್‌ ನಿಮ್ಮ ಡಿವೈಸ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ. ಆದರಿಂದ ನೀವು ವಾಟ್ಸಾಪ್‌ ಬಳಸುವುದನ್ನು ಮುಂದುವರಿಸಲು iOS 12 ಅಥವಾ iOS 15.5 ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಇದು ಪ್ರಸ್ತುತ ಲಭ್ಯವಿರುವ iOS ನ ಇತ್ತೀಚಿನ ಆವೃತ್ತಿಯಾಗಿದೆ. ಅಂದರೆ ಐಫೋನ್‌ 5s,...
ಇನ್ನು ಆಪಲ್ ಕಂಪೆನಿ ತನ್ನ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) 2022 ಅನ್ನು ಪ್ರಾರಂಭಿಸುವ ಕೆಲವೇ ದಿನಗಳ ಮೊದಲು ಈ ಸುದ್ದಿ ಹೊರಬಂದಿದೆ. ಆದರಿಂದ ಆಪಲ್‌ ಕಂಪನಿಯು iOS 16, iPadOS 16, macOS 13, tvOS16, watchOS 9 ಸೇರಿದಂತೆ ತನ್ನ ಆಪರೇಟಿಂಗ್ ಸಿಸ್ಟಮ್‌ಗಳ ಹೊಸ ಆವೃತ್ತಿಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.
ವಾಟ್ಸಾಪ್‌ ತನ್ನ ಬಳಕೆದಾರರಿಗೆ ಗ್ರೂಪ್‌ಗಳಲ್ಲಿ ಅನುಕೂಲವಾಗುವಂತಹ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ವಾಟ್ಸಾಪ್‌ ಗ್ರೂಪ್‌ನಿಂದ ನೀವು ಎಕ್ಸಿಟ್‌ ಆದರೆ ಇನ್ಮುಂದೆ ಯಾರಿಗೂ ತಿಳಿಯದಂತೆ ಮಾಡುವುದಕ್ಕೆ ಈ ಫೀಚರ್ಸ್‌ ಸಹಾಯ ಮಾಡಲಿದೆ. ಈ ಫೀಚರ್ಸ್‌ ಮೂಲಕ ವಾಟ್ಸಾಪ್‌ ಗ್ರೂಪ್‌ನಿಂದ ಸೈಲೆಂಟ್‌ ಆಗಿ ಎಕ್ಸಿಟ್‌ ಆಗುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ವಾಟ್ಸಾಪ್‌ "ವ್ಯೂ ಪಾಸ್ಟ್ ಪಾರ್ಟಿಸಿಪೇನ್ಟ್...
ಸ್ವಾತಂತ್ರ್ಯ ದಿನದಂದು ಗಂಡು ಮಗುವಿಗೆ ಜನ್ಮ ನೀಡಿದ 'ನಂದಿತಾ'...!
ಸ್ವಾತಂತ್ರ್ಯ ದಿನದಂದು ಗಂಡು ಮಗುವಿಗೆ ಜನ್ಮ ನೀಡಿದ 'ನಂದಿತಾ'…!
ಸ್ವಾತಂತ್ರ್ಯ ದಿನದಂದೇ ತಾಯಿಯಾಗಿ ಸಾಂಸಾರಿಕ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ ನಂದಿತಾ
ಬೆಂಗಳೂರು, ಆ.17: ತನ್ನ ಹಾಡಿನ ಮೂಲಕವೇ ಸಾವಿರಾರು ಜನರನ್ನು ಸೆಳೆದವರು ನಂದಿತಾ. ನನ್ನ ಪ್ರೀತಿಯ ಹುಡುಗಿ, ಇಂತಿ ನಿನ್ನ ಪ್ರೀತಿಯ, ಆಪ್ತಮಿತ್ರ, ದುನಿಯಾ ಮುಂತಾದ ಸಿನಿಮಾಗಳಿಗೆ ಹಿನ್ನಲೆ ಗಾಯಕಿಯಾಗಿ ಹಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಂದಿತಾ ಈಗ ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದಾರೆ. ಹೌದು, ನಂದಿತಾ ಅವರು ಗಂಡು ಮಗುವಿಗೆ ಜನ್ಮ ನೀಡುವುದರ ಮೂಲಕ ತಾಯಿಯಾಗಿದ...
ಹಿನ್ನಲೆ ಗಾಯಕಿ ನಂದಿತಾ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ರಾಕೇಶ್ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಸ್ವಾತಂತ್ರ್ಯ ದಿನದಂದೇ ಮಗು ಜನಿಸಿರುವುದು ಇಬ್ಬರ ಮುಖದಲ್ಲಿಯೂ ನಗು ಮನೆಮಾಡಿದೆ. ಗಂಡು ಮಗು ಜನಿಸಿರುವ ಸಿಹಿ ವಿಷಯವನ್ನು ಗಾಯಕಿ ನಂದಿತಾ ತನ್ನ ಫೇಸ್ ಬುಕ್ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜತೆಗೆ ಸ್ವಾತಂತ್ರ್ಯೋತ್ಸವ ಹಾಗೂ ನಾಗರಪಂಚಮಿಯ ಶುಭಾಶಯಗಳ...
ಸ್ವಾತಂತ್ರ್ಯೋತ್ಸವದ ದಿನ ಜನಿಸಿರುವ ಲಕ್ಕಿ ಮಗು:
ನಂದಿತಾ ಅವರ ಮಗು ಸ್ವಾತಂತ್ರ್ಯೋತ್ಸವದ ದಿನವೇ ಜನಿಸಿದ್ದು, ಆ ಮಗು ಲಕ್ಕಿ ಎಂದು ಅಭಿಮಾನಿಗಳೆಲ್ಲಾ ಹೇಳುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ತ ಸಿಕ್ಕ ದಿವಸ ಮಗುವಿಗೆ ಜನ್ಮ ನೀಡಿರುವುದರಿಂದ ಮಗುವಿನ ತಾಯಿ ನಂದಿತಾ ಅವರೂ ಭಾರೀ ಸಂತಸದಲ್ಲಿದ್ದಾರೆ. ಸ್ವಾತಂತ್ರ್ಯ ದಿನದೊಂದಿಗೆ ಈ ಬಾರಿ ನಾಗರಪಂಚಮಿ ಹಬ್ಬವೂ ಬಂದಿದ್ದು, ಮಗು ಮತ್ತಷ್ಟು ಅದೃಷ್ಟವಂತ ಎಂದು ನಂದಿತಾ ಅಭಿಮಾನಿಗಳು ಸಂತಸದಿಂದ ಹಾರೈಸಿ...
ಹಬ್ಬ ಚಿತ್ರದ ಮೂಲಕ ಹಿನ್ನಲೆ ಗಾಯನ ಕ್ಷೇತ್ರಕ್ಕೆ ಪ್ರವೇಶ:
ಗಾಯಕಿ ನಂದಿತಾ ಅವರು ರಾಜೇಂದ್ರ ಬಾಬು ನಿರ್ದೇಶನದ ಹಬ್ಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದು, ಕೆಲವೇ ವರ್ಷಗಳಲ್ಲಿ ಸ್ಟಾರ್ ಸಿಂಗರ್ ಆಗಿ ಬೆಳೆದರು. ಲಕ್ಷ ರೂಪಾಯಿ ಸಂಪಾದಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರಿಂಗ್ ತನ್ನ ಉದ್ಯೋಗ ವನ್ನು ತ್ಯಜಿಸಿ, ಹಾಡುಗಾರಿಕೆಯನ್ನು ತನ್ನ ವೃತ್ತಿ ಹಾಗೂ ಪ್ರವೃತ್ತಿಯನ್ನಾಗಿಸಿಕೊಂಡವರು ನಂದಿತಾ. 'ನನಗಿಷ್ಟ' ಚಿತ್ರಕ್ಕೆ ಸಂಗೀತ ನಿರ್ದೇಶಕಿಯಾಗಿ...
ಕಾಂಗ್ರೆಸ್‌ ಪಾಲಿಗೆ ಮತ್ತೊಮ್ಮೆ ಹೀರೋ ಆದ ಡಿಕೆಶಿ : ಸರಿಯಾಗಿಯೇ ಸಿಕ್ಕಿಹಾಕಿಕೊಂಡ ಅಮಿತ್ ಶಾ !!
ಕಾಂಗ್ರೆಸ್‌ ಪಾಲಿಗೆ ಮತ್ತೊಮ್ಮೆ 'ಹೀರೋ' ಆದ ಡಿಕೆಶಿ : ಸರಿಯಾಗಿಯೇ ಸಿಕ್ಕಿಹಾಕಿಕೊಂಡ ಅಮಿತ್ ಶಾ !!
May 31, 2018 Devu Pattar 0 Comments amith shah, bangalore, big price, congress, d.k shi, offer, shooter, Trouble
ಬೆಂಗಳೂರು : ಗುಜರಾತ್‌ ಶಾಸಕರಿಗೆ ಕರ್ನಾಟಕದ ರೆಸಾರ್ಟ್‌ನಲ್ಲಿ ರಕ್ಷಣೆ ನೀಡಿದ್ದ ಕಾಂಗ್ರೆಸ್‌ನ ಟ್ರಬಲ್‌ ಶೂಟರ್ ಡಿಕೆಶಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಮಿಷ ಒಡ್ಡಿದ್ದರು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ವಿಧಾನಪರಿಷತ್‌ ಸದಸ್ಯ ಸಿ.ಎಂ ಲಿಂಗಪ್ಪ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಗುಜರಾತ್‌ನಲ್ಲಿ ರಾಜ್ಯಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಶಾಸಕರನ್ನು ಉಳಿಸಿಕೊಳ್ಳಲು ಕರ್ನಾಟಕ ಸೂಕ್ತವೆಂದು ತಿಳಿದು ಎಲ್ಲಾ ಶಾಸಕರನ್ನು ಕರ್ನಾಟಕಕ್ಕೆ ಕಳಿಸಿತ್ತು. ಈ ವೇಳೆ ಡಿಕೆಶಿ ಎಲ್ಲಾ ನಾಯಕರನ್ನ...
ಇದೇ ಸಂದರ್ಭದಲ್ಲಿ ಡಿಕೆಶಿಯವರಿಗೆ ಅಮಿತ್ ಶಾ ಕರೆ ಮಾಡಿದ್ದು, ಕಾಂಗ್ರೆಸ್‌ನ ನಾಲ್ಕು ಶಾಸಕರನ್ನು ತಮಗೆ ಒಪ್ಪಿಸುವಂತೆ ಕೇಳಿದ್ದು, ಅದಕ್ಕೆ ಪ್ರತಿಯಾಗಿ ದೊಡ್ಡ ಸಹಾಯ ಮಾಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ಈ ವೇಳೆ ತಾನು ಡಿಕೆಶಿ ಪಕ್ಕದಲ್ಲೇ ಇದ್ದುದ್ದಾಗಿ ಲಿಂಗಪ್ಪ ಹೇಳಿದ್ದಾರೆ.
ಅಮಿತ್ ಶಾ ಹಿಂದಿಯಲ್ಲಿ ಮಾತನಾಡುತ್ತಿದ್ದರೆ ಡಿಕೆಶಿ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದರು. 38 ಮಂದಿ ಶಾಸಕರನ್ನು ನೀವೇ ಇಟ್ಟುಕೊಳ್ಳಿ. ನಮಗೆ ನಾಲ್ಕು ಮಂದಿ ಶಾಸಕರನ್ನು ಕೊಡಿ. ಇದಕ್ಕೆ ಪ್ರತಿಫಲವಾಗಿ ನಾನು ಸಹಾಯ ಮಾಡುತ್ತೇನೆ ಎಂದು ಶಾ ಹೇಳಿದ್ದರು. ಆದರೆ ಡಿಕೆಶಿ ಇದಕ್ಕೆ ಒಪ್ಪಿರಲಿಲ್ಲ. ನಾನು ಎಂದಿಗೂ ಕಾಂಗ್ರೆಸ್ ನವನೇ. ನನ್ನ ಮೈಯಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ ಎಂದು ಅಮಿತ್ ...
ಧಾರವಾಡ ಜಿಲ್ಲಾಧಿಕಾರಿ ಕಛೇರಿ ಎದುರು ABVP ಪ್ರತಿಭಟನೆ - KisanJagruti Tv -->
Home › LOCAL › ಧಾರವಾಡ ಜಿಲ್ಲಾಧಿಕಾರಿ ಕಛೇರಿ ಎದುರು ABVP ಪ್ರತಿಭಟನೆ
ಧಾರವಾಡ ಜಿಲ್ಲಾಧಿಕಾರಿ ಕಛೇರಿ ಎದುರು ABVP ಪ್ರತಿಭಟನೆ
By Kisan Team Thursday, September 16, 2021 Comment
ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಿಸಲಾರಂಭಿಸಿದ ಬಳಿಕ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳು ಈಗ ಹಂತಹಂತವಾಗಿ ಪುನರಾರಂಭಗೊಂಡಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 6ನೇ ತರಗತಿಯಿಂದ ಆರಂಭಗೊಂಡು, ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ತರಗತಿಗಳೆಲ್ಲವೂ ಮತ್ತೆ ತೆರೆದುಕೊಂಡಿರುವುದು ಸ್ವಾಗತಾರ್ಹ.ಆದರೆ ಈಗ ಭೌತಿಕ ತರಗತಿಗಳು ಆರಂಭಗೊಂಡ
ಬಳಿಕ ದಿನಕ್ಕೊಂದು ಸಮಸ್ಯೆ ಉದ್ಭವವಾಗುತ್ತಿದೆ.ಈ ಕೆಳಗೆ ಉಲ್ಲೇಖಿಸಿದ ಪ್ರಮುಖ ಅಂಶಗಳನ್ನು ರಾಜ್ಯ ಸರಕಾರ ತಕ್ಷಣಕ್ಕೆ ಇತ್ಯರ್ಥಗೊಳಿಸಬೇಕೆಂದು ಅಭಾವಿಪ ಒತ್ತಾಯಿಸುತ್ತವೆ.
1) ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲ ಗ್ರಾಮಗಳಿಗೂ ಬಸ್ ಸೇವೆ ಪುನರಾರಂಭಿಸಿ.
ಶಾಲೆ-ಕಾಲೇಜುಗಳು ಆರಂಭವಾಗಿ ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ಉತ್ಸಾಹದಿಂದ ಗಮನ ಹರಿಸಿದ್ದಾರೆ. ಕೋವಿಡ್ ಕಾರಣಕ್ಕೆ ಬದಲಾದ
ತರಗತಿಗಳ ಸಮಯಕ್ಕೆ ಹಾಜರಾಗಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ
(ಕೆಎಸ್‌ಆರ್‌ಟಿಸಿ) ಎಲ್ಲ ಬಸ್‌ಗಳು ಸೇವೆ ಒದಗಿಸುತ್ತಿವೆ. ಆದರೂ, ಲಾಕ್‌ಡೌನ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಸಾರಿಗೆ ಸೇವೆ ಕೆಲ ಹಳ್ಳಿಗಳಲ್ಲಿ
ಇನ್ನೂ ಪುನರಾರಂಭವಾಗಿಲ್ಲ. ದಿನಕ್ಕೆ ಒಂದು ಅಥವಾ ಎರಡು ಬಸ್‌ಗಳು ಮಾತ್ರ ಸಂಚರಿಸುತ್ತಿವೆ .ಇದರಿಂದಾಗಿ ರಾಜ್ಯದ ಗ್ರಾಮೀಣ
ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಾರಿಗೆ ಸಂಚಾರ ತೊಂದರೆಯಾಗಿ ಪರಿಣಮಿಸಿದೆ.
2) ಶಿಷ್ಯವೇತನವನ್ನು ತಕ್ಷಣಕ್ಕೆ ಬಿಡುಗಡೆಗೊಳಿಸಿ,
ಡಿಪ್ಲೋಮಾ ಇಂಜಿನಿಯರಿಂಗ್, ಸ್ನಾತಕ - ಸ್ನಾತಕೋತ್ತರ ತರಗತಿಗಳಲ್ಲಿ ಮತ್ತು ಪಿ.ಎಚ್.ಡಿ ಮಾಡುತ್ತಿರುವ ಪ.ಜಾತಿ, ಪ.ಪಂಗಡ,
ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪೂರ್ಣ
ಪ್ರಮಾಣದಲ್ಲಿ ಶಿಷ್ಯವೇತನ
ಪರದಾಡುವಂತಾಗಿದೆ.ರಾಜ್ಯ ಸರಕಾರ ಈ ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯಾಸಿರಿ ಶಿಷ್ಯವೇತನ ಸೇರಿದಂತೆ ಎಲ್ಲಾ
ವಿದ್ಯಾರ್ಥಿವೇತನವನ್ನು ತಕ್ಷಣಕ್ಕೆ ಬಿಡುಗಡೆಗೊಳಿಸಬೇಕೆಂದು ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕೆ ಪ್ರೋತ್ಸಾಹಿಸಲು ವಿದ್ಯಾರ್ಥಿವೇತನದ
ಮೊತ್ತವನ್ನು ಹೆಚ್ಚಿಗೆ ಮಾಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತ ಸರಕಾರಕ್ಕೆ ಆಗ್ರಹಿಸುತ್ತದೆ.
3) ಹಾಸ್ಟೆಲಗಳನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಾರಂಭಿಸಿ, ರಾಜ್ಯದ ಅನೇಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಹಾಸ್ಟೆಲಗಳಿಗೆ ಅವಲಂಬಿತರಾಗಿರುವುದರಿಂದ ರಾಜ್ಯದ ಹಿಂದುಳಿದ ವರ್ಗ,ಬಯಸಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆಗೆ ತುಂಬಾ ಆಂತರವಿದ.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಡ ಮತ್ತು ಕರ್ನಾಟಕದಲ್ಲಿ ಸುಮಾರು ಈ ವರ್ಷ 15 ಲಕ್ಷ ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಸ...
ಸಂಭವವಿದ್ದು ಆದರೆ ಕಳೆದವರ್ಷ ಪ್ರಕಾರ ಕೇವಲ ಎರಡೂವರೆ ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ವಸತಿನಿಲಗಳಲ್ಲಿ ಪ್ರವೇಶ ಪಡೆಯಲು
ಅವಕಾಶವಿದ್ದು, ಇನ್ನುಳಿದ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಮಾಸ್ಟಲ್ ಸೌಲಭ್ಯದಿಂದ ವಂಚಿತರಾಗುತ್ತಿದ್ದು, ಸರ್ಕಾರ ಬಡ ಮತ್ತು
ಪ್ರತಿಭಾವಂತ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ವರ್ಷದ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಹಾಸ್ಟೆಲ್ ಗಳನ್ನು ತೆರಿಯಬೇಕಿದೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ ಎಂದು ಮನವಿ ಸಲ್ಲಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಹಿಂದೆ... | Prajavani
ಭಾರತೀಯ ವಿಜ್ಞಾನ ಸಂಸ್ಥೆಯ ಹಿಂದೆ...
ಡಾ.ಆರ್.ಸುಬ್ರಹ್ಮಣ್ಯಂ Updated: 22 ಮಾರ್ಚ್ 2012, 01:00 IST
ಸ್ವಾಮಿ ವಿವೇಕಾನಂದರ ದೃಷ್ಟಿಕೋನ ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂದುತ್ವವನ್ನು ಪಸರಿಸುವುದರ ಆಚೆಗೂ ವಿಸ್ತರಿಸಿತ್ತು. ಭಾರತ ಧಾರ್ಮಿಕ ಪ್ರಧಾನ ರಾಷ್ಟ್ರವಾಗಿದ್ದರೂ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯ ಮಹತ್ವವನ್ನೂ ಅದು ಅರ್ಥ ಮಾಡಿಕೊಳ್ಳಬೇಕು ಎಂಬ ಕಾಳಜಿ ಅವರಿಗಿತ್ತು.
ಭಾರತೀಯರು ಅಜ್ಞಾನ ಮತ್ತು ಮೂಢನಂಬಿಕೆಯಲ್ಲಿ ಹುದುಗಿಹೋಗಿದ್ದು, ಇದು ಅವರ ದೈಹಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಅಡ್ಡಗಾಲಾಗಿದೆ ಎಂಬ ಕಳವಳ ಅವರನ್ನು ಕಾಡುತ್ತಿತ್ತು.
ಪ್ರಯೋಗಕ್ಕೆ ಒಳಪಡಿಸದೇ ಯಾವುದನ್ನೂ ಒಪ್ಪಿಕೊಳ್ಳಬೇಡಿ ಎಂದು ವಿವೇಕಾನಂದರು ತಮ್ಮ ಅನುಯಾಯಿಗಳಿಗೆ ಪದೇ ಪದೇ ಹೇಳುತ್ತಲೇ ಇದ್ದರು. ಯಾವುದನ್ನೇ ಆಗಲಿ ಒಪ್ಪಿಕೊಳ್ಳುವ ಅಥವಾ ನಿರಾಕರಿಸುವ ಮುನ್ನ ಅದನ್ನು ಸಂಪೂರ್ಣ ಪರಾಮರ್ಶೆಗೆ ಒಳಪಡಿಸಬೇಕು ಎಂಬುದು ಅವರ ಬಲವಾದ ಪ್ರತಿಪಾದನೆಯಾಗಿತ್ತು.
`ಯಾವ ವಿಷಯನ್ನಾಗಲಿ ಸೂಕ್ತವಾಗಿ ಪರಿಶೀಲಿಸದೇ ಅದನ್ನು ಸಾರಾಸಗಟಾಗಿ ತಿರಸ್ಕರಿಸುವುದು ಸ್ವಸ್ಥ ಮನಸ್ಸಿನ ಸಂಕೇತ ಅಲ್ಲ, ವಿಶೇಷ ಮಾನಸಿಕ ಪ್ರಕ್ರಿಯೆಗಳ ವಿವರ ಕೊಡಲು ವಿಫಲರಾಗಿರುವ ಭೌತಿಕ ವಿಜ್ಞಾನಿಗಳು, ತಮ್ಮದೇ ಅಸ್ತಿತ್ವವನ್ನು ನಿರಾಕರಿಸಲು ಸಹ ಹೆಣಗಾಡುತ್ತಾರೆ~ ಎಂದು ಅವರು ಹೇಳುತ್ತಿದ್ದರು.
ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಅಸ್ತಿತ್ವಕ್ಕೆ ಬರುವಲ್ಲಿ ವಿವೇಕಾನಂದರ ಕೊಡುಗೆಯೂ ಇದೆ ಎಂಬ ವಿಷಯ ಕೆಲವರಿಗಷ್ಟೇ ತಿಳಿದಿದೆ. 1893ರಲ್ಲಿ ವಿವೇಕಾನಂದರು ಮೊದಲ ಬಾರಿಗೆ ಸರ್ ಜಮ್‌ಷೆಡ್‌ಜಿ ಟಾಟಾ ಅವರನ್ನು ಭೇಟಿ ಮಾಡಿದ್ದರು.
ಯೊಕೊಹಾಮದಿಂದ ವ್ಯಾಂಕೋವರ್‌ಗೆ ತೆರಳುತ್ತಿದ್ದ ಹಡಗಿನಲ್ಲಿ ಇಬ್ಬರೂ ಒಟ್ಟಿಗೇ ಪ್ರಯಾಣಿಸುತ್ತಿದ್ದರು. ಹಿಂದುತ್ವವನ್ನು ವಿಶ್ವದಾದ್ಯಂತ ಪ್ರಚುರಪಡಿಸುವ ತಮ್ಮ ಜೀವನದ ಧ್ಯೇಯ ಹೊತ್ತು ಸ್ವಾಮಿ ಅಮೆರಿಕಕ್ಕೆ ಹೊರಟಿದ್ದರು. ದೇಶದ ಕೈಗಾರಿಕಾ ಕ್ಷೇತ್ರದ ಪ್ರಮುಖರಾಗಿದ್ದ ಜಮ್‌ಷೆಡ್‌ಜಿ, ತಮ್ಮ ಉಕ್ಕು ಘಟಕಕ್ಕೆ ಅಗತ್ಯವಾಗಿದ್ದ ಸಲಕರಣೆಗಳು ಮತ್ತು ತಂತ್ರಜ್ಞಾನದ ಶೋಧನೆಗಾಗಿ ಅಮೆರಿಕಕ್ಕೆ ತೆರಳುತ್ತಿದ್...
ದೇಶಾಭಿಮಾನಿಗಳಾಗಿದ್ದ ಈ ಇಬ್ಬರೂ ಅಸಾಧಾರಣ ಗಣ್ಯರು ತಮ್ಮ ದೇಶವಾಸಿಗಳ ಕಲ್ಯಾಣದ ಬಗ್ಗೆ ಅಪಾರ ಕಾಳಜಿ ಹೊಂದಿದವರಾಗಿದ್ದರು. ಬಳಿಕ ಇಬ್ಬರ ನಡುವೆ ಮಾತುಕತೆ ಆರಂಭವಾಯಿತು. ಜಮ್‌ಷೆಡ್‌ಜಿ ಅವರನ್ನು ಆಶೀರ್ವದಿಸಿದ ವಿವೇಕಾನಂದರು, ಪಶ್ಚಿಮದ ವೈಜ್ಞಾನಿಕ, ತಾಂತ್ರಿಕ ಸಾಧನೆಗಳನ್ನು ಭಾರತದ ಸಂನ್ಯಾಸ ತತ್ವ ಮತ್ತು ಮಾನವೀಯತೆಯ ಜೊತೆ ಮಿಳಿತ ಮಾಡಿದರೆ ಎಷ್ಟು ಅದ್ಭುತವಾಗಿರುತ್ತದೆ ಎಂದು ಹೇಳಿದರು.
ವೈಜ್ಞಾನಿಕ ಮತ್ತು ತಾಂತ್ರಿಕ ಪರಿಣತಿ ಹೊಂದಿದ ಮಾನವ ಸಂಪನ್ಮೂಲ ಸೃಷ್ಟಿಸುವ ಸಂಸ್ಥೆಯೊಂದನ್ನು ನೀವು ಸೃಷ್ಟಿಸಬಾರದೇಕೆ ಎಂದು ಸಹ ಟಾಟಾ ಅವರನ್ನು ಕೇಳಿದರು. ಈ ಭೇಟಿಯ ಬಳಿಕ ಪರಸ್ಪರರು ಮತ್ತೊಮ್ಮೆ ಭೇಟಿ ಆಗಲೇ ಇಲ್ಲವಾದರೂ ಸ್ವಾಮೀಜಿ ಅವರ ಮಾತುಗಳು ಮಾತ್ರ ಜಮ್‌ಷೆಡ್‌ಜಿ ಅವರ ಹೃದಯಕ್ಕೆ ನಾಟಿದ್ದವು. ಐದು ವರ್ಷಗಳ ಬಳಿಕ ಇದಕ್ಕೆ ಜಮ್‌ಷೆಡ್‌ಜಿ ಅವರ ಉತ್ತರ, ಪತ್ರದ ರೂಪದಲ್ಲಿ ವಿವೇಕಾನಂದರ ಕೈಸೇರ...
ಬೆಂಗಳೂರಿನಲ್ಲಿ ಅಂತಹ ಸಂಸ್ಥೆಯೊಂದನ್ನು ಹುಟ್ಟುಹಾಕಲು ತಾವು ಬಯಸಿದ್ದು, ಅದರ ನೇತೃತ್ವವನ್ನು ವಹಿಸಿಕೊಳ್ಳುವಿರಾ ಎಂದು ವಿವೇಕಾನಂದರನ್ನು ಜಮ್‌ಷೆಡ್‌ಜಿ ಕೇಳಿದ್ದರು.
ಈ ಆಹ್ವಾನವನ್ನು ವಿವೇಕಾನಂದರು ವಿನೀತರಾಗೇ ತಳ್ಳಿಹಾಕಿದರಾದರೂ ಟಾಟಾ ಅವರ ಪ್ರಯತ್ನವನ್ನು ಮಾತ್ರ ಉತ್ತೇಜಿಸಿದರು. ಈ ಸಂಗತಿ ಮತ್ತು ಇಬ್ಬರ ನಡುವಿನಇಂತಹ ಸಂವಾದವೇ ಬೆಂಗಳೂರಿನಲ್ಲಿ ಸಂಸ್ಥೆಯನ್ನು ಕಟ್ಟಲು ಸಾಧನವಾಯಿತು ಎಂಬುದು ಈಗ ಕೆಲವರ ನೆನಪಿನಲ್ಲಷ್ಟೇ ಇದೆ.
ವಿವೇಕಾನಂದರು 1902ರ ಜುಲೈನಲ್ಲಿ ನಿಧನರಾದರು. ನಂತರ ಜಮ್‌ಷೆಡ್‌ಜಿ ಸಹ ಹೆಚ್ಚು ಕಾಲ ಬದುಕುಳಿಯಲಿಲ್ಲ. 1904ರಲ್ಲಿ ಅವರು ನಿಧನರಾದಾಗ ಇನ್ನು ಐದು ವರ್ಷಗಳ ಬಳಿಕ ತಮ್ಮ ದೃಷ್ಟಿಕೋನ ಸಾಕಾರಗೊಳ್ಳುತ್ತದೆ ಎಂಬ ಅರಿವೂ ಅವರಿಗಿರಲಿಲ್ಲ.
ಹೀಗೆ ಟಾಟಾ ಸಮೂಹದ ಕೊಡುಗೆಯಾಗಿ 1909ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತೀಯ ವಿಜ್ಞಾನ ಸಂಸ್ಥೆ ಇಂದು ರಾಷ್ಟ್ರದ ಹೆಮ್ಮೆಯ ಸಂಸ್ಥೆಯಾಗಿದೆ.
ಈ ಒಂದು ಸಂಸ್ಥೆಯ ಕಾರಣಕ್ಕಷ್ಟೇ ಸ್ವಾಮಿ ವಿವೇಕಾನಂದರು ಸ್ಮರಣಾರ್ಹರಲ್ಲ. ಭಾರತದ ಬೆಳವಣಿಗೆಗೆ ವೈಜ್ಞಾನಿಕ ಮನೋಭಾವ ಪೂರಕ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. `ಮಾಂತ್ರಿಕ ಲಾಟೀನಿನ~ ರೀತಿಯಲ್ಲಿ ಹಳ್ಳಿಹಳ್ಳಿಗೆ ಹೋಗಿ ಗ್ರಾಮೀಣ ಸಹೋದರರಲ್ಲಿ ವಿಜ್ಞಾನದ ಮಹತ್ವವನ್ನು ಬೋಧಿಸಿ ಎಂದು ಅವರು ತಮ್ಮ ಅನುಯಾಯಿಗಳನ್ನು ಪ್ರೇರೇಪಿಸುತ್ತಿದ್ದರು. ಭಾರತದ ಸಮಸ್ಯೆಗಳ ಪರಿಹಾರಕ್ಕೆ ವೈಜ್ಞಾನಿಕ ಹಿನ್ನೆಲೆ...
'); $('#div-gpt-ad-82887-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-82887').addClass('inartprocessed'); } else $('#in-article-82887').hide(); } else { _taboola.push({article:'auto', url:'https://www.prajavani.net/article/ಭಾರತೀಯ-ವಿಜ್ಞಾನ-ಸಂಸ್ಥೆಯ-ಹಿಂದೆ...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-82887 .field-name-body .field-items div.field-item > p'); if(x1 != null && x1.length != 0) { $('#node-82887 .field-name-body ....
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-82887 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-82887'); }); } else { $('#in-article-mob-82887').hide(); $('#in-article-mob-3rd-82887').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಕರ್ನಾಟಕದ ರಸ್ತೆಗಳಿಗೆ ರಂಗು ತುಂಬಲು ಕೇಂದ್ರದಿಂದ 2545 ಕೋಟಿ | Centre clears Karnataka road projects - Kannada Oneindia
11 min ago ರಾಜ್ಯದಲ್ಲಿ ಎಚ್‌1ಎನ್‌1ನಿಂದ 39 ಮಂದಿ ಸಾವು: ಸೋಂಕಿತರ ಸಂಖ್ಯೆ 1428
ಕರ್ನಾಟಕದ ರಸ್ತೆಗಳಿಗೆ ರಂಗು ತುಂಬಲು ಕೇಂದ್ರದಿಂದ 2545 ಕೋಟಿ
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ 3285 ಕಿ.ಮೀ ವ್ಯಾಪ್ತಿಯ ರಸ್ತೆ ಅಭಿವೃದ್ದಿ
ಬೆಂಗಳೂರು: ರಾಜ್ಯದ ಐದು ರಾಷ್ಟೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲು, ಕೇಂದ್ರ ಸರಕಾರ 2545 ಕೋಟಿ ರೂ.ಗಳ ಯೋಜನೆಗೆ ಅನುಮತಿ ನೀಡಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ಟಿ.ಆರ್‌.ಬಾಲು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಾಹಿತಿ ತಂತ್ರಜ್ಞಾನದ ಪ್ರಗತಿಗೆ ಪೂರಕವಾಗಲು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿವರೆಗೆ 9 ಕಿ.ಮೀ ಉದ್ದದ ಮೇಲು ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರದೊಂದಿಗೆ ಕೇಂದ್ರ ಕೈಸೇರಿಸಲಿದೆ ಎಂದರು.
ಐ.ಟಿ.ಉದ್ಯಮದ ಸಹಭಾಗಿತ್ವದ ಈ ಯೋಜನೆ ಕಾಮಗಾರಿ 2005ರ ಏಪ್ರಿಲ್‌ ತಿಂಗಳಲ್ಲಿ ಆರಂಭಗೊಳ್ಳಲಿದೆ. ಈಗಿರುವ ಹೆದ್ದಾರಿಯ ಮಧ್ಯ ಭಾಗದಿಂದ ಏಕ ಸ್ತಂಭ ಅಧಾರದ ಮೇಲೆ ಸೇತುವೆಯನ್ನು ನಿರ್ಮಿಸಲಾಗುವುದು.
ರಾಜ್ಯದಲ್ಲಿ 360 ಕಿ.ಮೀ ಉದ್ದದ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲು ಅನುಮೋದನೆ ನೀಡಿರುವುದಾಗಿ ತಿಳಿಸಿದರು.
ರಸ್ತೆ ಅಭಿವೃದ್ದಿ : ರಾಜ್ಯದ ಕುಂದಾಪುರ-ಸುರತ್ಕಲ್‌(ಎನ್‌.ಎಚ್‌.17) ನಡುವಿನ 74 ಕಿ.ಮೀ ಹೆದ್ದಾರಿಯನ್ನು ಚತುಷ್ಪಥಗೊಳಿಸಲು 5ಂಂ ಕೋಟಿ, ಬೆಂಗಳೂರು-ಕೋಲಾರ (ರಾಷ್ಟ್ರೀಯ ಹೆದ್ದಾರಿ 4)ನಡುವಿನ 85 ಕಿ.ಮೀ ವ್ಯಾಪ್ತಿಯ ರಸ್ತೆಯನ್ನು 400 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ.
ನೆಲಮಂಗಳ-ಹಾಸನವರೆಗಿನ(ರಾಷ್ಟೀಯ ಹೆದ್ದಾರಿ 48) 157 ಕಿ.ಮೀ ರಸ್ತೆಯನ್ನು 620 ಕೋಟಿವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿ, ಬೆಂಗಳೂರು-ಹೊಸೂರು(ರಾಷ್ಟ್ರೀಯ ಹೆದ್ದಾರಿ) ನಡುವಿನ 25 ಕಿ.ಮೀ ರಸ್ತೆಯನ್ನು 620 ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುವುದು. ಬೆಂಗಳೂರಿನಿಂದ ಎಲೆಕ್ಟ್ರಾನಿಕ್‌ ಸಿಟಿವರೆಗಿನ 16 ಕಿ.ಮೀ ರಸ್ತೆಯನ್ನು ಆರು ಮಾರ್ಗಗಳಾಗಿ ಪರಿವರ್ತಿಸಲಾಗುವುದು. ಬೆಂಗಳೂರಿನಿಂದ ನೆಲಮಂಗ...
ದೇಶದ ನಾಲ್ಕು ಪ್ರಮುಖ ನಗರಗಳನ್ನು ಸಂಪರ್ಕಿಸುವ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಂದಿ ನ ಜುಲೈ ಒಳಗೆ ಮುಕ್ತಾಯವಾಗಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ರಸ್ತೆನಿಧಿಯಿಂದ ಕರ್ನಾಟಕ್ಕೆ 279 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದೆ. ಆಮೂಲಕ 3285 ಕಿ.ಮೀ ವ್ಯಾಪ್ತಿ ರಸ್ತೆಯನ್ನು ಅಭಿವೃದ್ದಿಗೊಳಿಸಲಾಗಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ಟಿ.ಆರ್‌.ಬಾಲು ತಿಳಿಸಿದರು.
ಅಫ್ಘಾನ್‌ : ಭಾರತೀಯ ರಾಜತಾಂತ್ರಿಕರು ವಾಪಸ್‌ | Udayavani – ಉದಯವಾಣಿ
ಅಫ್ಘಾನ್‌ : ಭಾರತೀಯ ರಾಜತಾಂತ್ರಿಕರು ವಾಪಸ್‌
Team Udayavani, Jul 11, 2021, 7:20 AM IST
ಕಾಬೂಲ್‌ : ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಉಗ್ರರ ಕೈ ಮೇಲಾಗುತ್ತಿರುವಂತೆ ಭಾರತ ಸರಕಾರವು ಕಂದಹಾರ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಯಿಂದ 50ಕ್ಕೂ ಹೆಚ್ಚು ರಾಜತಾಂತ್ರಿಕ ಸಿಬಂದಿ ಮತ್ತು ಅಧಿಕಾರಿಗಳನ್ನು ತೆರವುಗೊಳಿಸುವ ಎಚ್ಚರಿಕೆಯ ಹೆಜ್ಜೆ ಇರಿಸಿದೆ.
ಶನಿವಾರವೇ ವಾಯುಪಡೆಯು ವಿಶೇಷ ವಿಮಾನವನ್ನು ಕಳುಹಿಸಿ ಭಾರತೀಯ ಅಧಿಕಾರಿಗಳನ್ನು ಸ್ವದೇಶಕ್ಕೆ ಕರೆತರಲಾಗಿದೆ. ಅಫ್ಘಾನ್‌ ಸೇನೆ ಮತ್ತು ತಾಲಿಬಾನ್‌ ಉಗ್ರರ ನಡುವೆ ಕಂದಹಾರ್‌ ಸಮೀಪವೇ ಹೋರಾಟ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದು ತಾತ್ಕಾಲಿಕ ಕ್ರಮ. ಅಫ್ಘಾನ್‌ ನ ಭಾರತದ ರಾಜತಾಂತ್ರಿಕ ಕಚೇರಿಗಳನ್ನು ಮುಚ್ಚುವ ಪ್ರಸ್ತಾವ ಇಲ್ಲ. ಸದ್ಯ ಸ್ಥಳೀಯ ಸಿಬಂದಿಯನ್ನು ಬಳಸಿಕೊಂಡು ದೂತಾವಾಸ ಕಚೇರಿಗಳು ಕಾರ್ಯಾಚರಿಸಲಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಗಚಿ ಹೇಳಿದ್ದಾರೆ. ಯುದ್ಧಗ್ರಸ್ಥ ರಾಷ್ಟ್ರದಲ್ಲಿರುವ ಭಾರತೀಯ ಮೂಲದವರು ಅನಗತ್ಯವಾಗಿ ಮನೆಯಿಂದ ಹೊರಕ್ಕೆ ಬರಬಾರದು ಎಂದು ಸಲಹೆ ನೀಡಿದ್ದಾರೆ.
ಪಾಕ್‌ ವಾಯುಪ್ರದೇಶ ಬಳಕೆ ಇಲ್ಲ
ಭಾರತೀಯ ರಾಜತಾಂತ್ರಿಕರನ್ನು ಕರೆತರಲು ಕಳುಹಿಸಲಾಗಿದ್ದ ವಿಶೇಷ ವಿಮಾನವು ಪಾಕ್‌ ವಾಯುಪ್ರದೇಶವನ್ನು ಬಳಸದೆಯೇ ಸಂಚರಿಸಿದೆ. ಪಾಕಿಸ್ಥಾನವು ತಾಲಿಬಾನಿ ಉಗ್ರರಿಗೆ ಆಶ್ರಯ ನೀಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪಾಕ್‌ ವಾಯು ಪ್ರದೇಶದಿಂದ ದೂರ ಉಳಿಯಲಾಯಿತು ಎಂದು ಮೂಲಗಳು ತಿಳಿಸಿವೆ.
ಇಫ್ತಾರ್ - ಭಾರತೀಯ ರಾಜತಾಂತ್ರಿಕರನ್ನು ಹೀನಾಯವಾಗಿ ನಡೆಸಿಕೊಂಡು ಉದ್ದಟತನ ಮೆರೆದ ಪಾಕ್
Mon, Jun 3 2019 10:42:27 AM
ಇಸ್ಲಾಮಾಬಾದ್ , ಜೂ 03 (Daijiworld News/MSP): ರಂಜಾನ್‌ ನಿಮಿತ್ತ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರ ಕಚೇರಿ ಆಯೋಜಿಸಿದ್ದ ಇಫ್ತಾರ್‌ ಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭಾರತೀಯ ಅತಿಥಿಗಳಿಗೆ ಭದ್ರತೆ ನೆಪದಲ್ಲಿ ಪಾಕಿಸ್ತಾನದ ಯೋಧರು ಹಾಗೂ ಪೊಲೀಸರು ಕಿರುಕುಳ ನೀಡಿ ಅವಮಾನಿಸಿ ವಾಪಾಸ್ ಕಳುಹಿಸುವ ಮೂಲಕ ಪಾಕಿಸ್ತಾನ ಉದ್ಧಟತನದಿಂದ ನಡೆದುಕೊಂಡಿದೆ.
ಭಾರತದ ರಾಯಭಾರಿ ಅಜಯ್‌ ಬಿಸಾರಿಯಾ ಅವರು ಇಸ್ಲಾಮಾಬಾದ್‌ನ ಸೆರೆನಾ ಹೋಟೆಲ್‌ನಲ್ಲಿ ಶನಿವಾರ ಇಫ್ತಾರ್‌ ಕೂಟವನ್ನು ಹಮ್ಮಿಕೊಂಡಿದ್ದರು. ಈ ಕೂಟಕ್ಕೆ ಲಾಹೋರ್‌ ಹಾಗೂ ಕರಾಚಿಯಿಂದ ನೂರಾರು ಗಣ್ಯ ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು.ಸರ್ಕಾರಿ ಅಧಿಕಾರಿಗಳು, ಸಂಸದರು, ಮಾಧ್ಯಮ ಪ್ರತಿನಿಧಿಗಳು, ನಿವೃತ್ತ ಸೇನಾ ಅಧಿಕಾರಿಗಳು, ಉದ್ಯಮಿಗಳು ಮುಂತಾದವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅಲ್ಲಿ ಭದ್ರತೆಗೆ...
ಒಂದಷ್ಟು ಭಾರತೀಯ ಅತಿಥಿಗಳಿಗೆ ಒಳಹೋಗಲು ಬಿಡದೆ, ಕಾರ್ಯಕ್ರಮಕ್ಕೆ ನೀವು ಹಾಜರಾಗಬಾರದು ಎಂದು ಬೆದರಿಸಿ ವಾಪಸ್‌ ಕಳುಹಿಸಲಾಗಿದೆ. ಕೆಲವು ಅತಿಥಿಗಳ ಕೈಯ್ಯಲ್ಲಿದ್ದ ಮೊಬೈಲ್ ಫೋನುಗಳನ್ನೂ ಕಿತ್ತುಕೊಳ್ಳಲಾಗಿದೆ. ಇನ್ನು ಕೆಲವರಿಗೆ ಇಫ್ತಾರ್ ರದ್ದುಪಡಿಸಿಲಾಗಿದೆ ಎಂದು ವಾಪಾಸ್ ಕಳುಹಿಸಿದರೆ ಇನ್ನು ಕೆಲವರು ಒತ್ತಾಯ ಮಾಡಿ ಕೇಳಿದಾಗ ಮತ್ತೊಂದು ಗೇಟ್‌ ಮೂಲಕ ಬರುವಂತೆ ತಿಳಿಸಲಾಗಿದೆ. ಅಲ್ಲಿಗೆ ಹೋದರೆ...
ಈ 4 ಹೂಡಿಕೆ ಮೇಲೆ ಬರುವ ಆದಾಯಕ್ಕೆ ಭಾರತದಲ್ಲಿ ತೆರಿಗೆ ಇಲ್ಲ | 4 Tax Free Income On Investments In India - Kannada Goodreturns
30 min ago ಭಾರತ, ಚೀನಾದಂತೆ ನಮ್ಮನ್ನು ಅಭಿವೃದ್ಧಿ ಶೀಲ ರಾಷ್ಟ್ರವನ್ನಾಗಿ ನೋಡುತ್ತಿಲ್ಲ-WTO ವಿರುದ್ಧ ಟ್ರಂಪ್ ಆರೋಪ
| Published: Friday, December 6, 2019, 12:57 [IST]
ಹಣ ಹೂಡಿಕೆ ಮಾಡುವಾಗ ಏನೆಲ್ಲ ಗಮನಿಸಬೇಕು? ಮುಖ್ಯವಾಗಿ ನಾವು ಹಾಕುವ ಹಣ ಸುರಕ್ಷಿತವಾಗಿರಬೇಕು, ಅದರ ಮೇಲೆ ರಿಟರ್ನ್ಸ್ ಚೆನ್ನಾಗಿ ಬರಬೇಕು ಹಾಗೂ ಆ ಆದಾಯಕ್ಕೆ ಯಾವುದೇ ತೆರಿಗೆ ಇರಬಾರದು. ಹೀಗೆಲ್ಲ ಲೆಕ್ಕಾಚಾರ ಬಂದುಬಿಡುತ್ತದೆ. ಆದರೆ ಕೆಲವೇ ಹೂಡಿಕೆಗಳ ಮೇಲಿನ ಆದಾಯಕ್ಕೆ ಮಾತ್ರ ಭಾರತದಲ್ಲಿ ತೆರಿಗೆ ಇಲ್ಲ.
ಬ್ಯಾಂಕ್ ಡೆಪಾಸಿಟ್ ಇರಲಿ, ಷೇರುಗಳಿಂದ ಬರುವ ಆದಾಯ ಇರಲಿ ತೆರಿಗೆ ಬಿದ್ದೇ ಬೀಳುತ್ತದೆ. ಬ್ಯಾಂಕ್ ಠೇವಣಿ ಮೇಲಿನ ಆದಾಯಕ್ಕೂ ತೆರಿಗೆ ಇದೆ. ಅದೇ ರೀತಿ ಷೇರುಗಳ ಮಾರಾಟದಿಂದ ಬರುವ ಆದಾಯವನ್ನು ಕ್ಯಾಪಿಟಲ್ ಗೇಯ್ನ್ಸ್ ಎಂದು ತೋರಿಸಬೇಕಾಗುತ್ತದೆ. ಆದರೆ ಇಲ್ಲಿ ನೀಡಲಾಗುತ್ತಿರುವ ನಾಲ್ಕು ಆದಾಯಕ್ಕೆ ತೆರಿಗೆ ಇಲ್ಲ. ಅವು ಯಾವುದು ಎಂದು ತಿಳಿಯುವುದಕ್ಕೆ ಮುಂದೆ ಓದಿ.
ಭಾರತದಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನ ಆದಾಯಕ್ಕೆ ತೆರಿಗೆ ಇಲ್ಲ. ಸೆಕ್ಷನ್ 80C ಅಡಿಯಲ್ಲಿ PPFಗೆ ಅವಳಿ ಅನುಕೂಲ ಇದೆ. ಜತೆಗೆ ಹೂಡಿಕೆ ದೃಷ್ಟಿಯಿಂದ ನೋಡಿದರೆ ಪಿಪಿಎಫ್ ಮೇಲೆ ಬಡ್ಡಿ ದರ ಕೂಡ ಚೆನ್ನಾಗಿದೆ. ಒಂದು ಸಮಸ್ಯೆ ಏನೆಂದರೆ, ಹೂಡಿಕೆ ಮೊತ್ತದ ಮೇಲೆ ಮಿತಿ ಇದೆ. 1.5 ಲಕ್ಷ ರುಪಾಯಿ ತನಕ ಮಾತ್ರ ಹಣ ಹೂಡಬಹುದು. ದೀರ್ಘಾವಧಿಗೆ ಹೂಡಿಕೆ ಮಾಡುವಂತಿದ್ದರೆ ಅತ್ಯುತ್ತಮ ಆಯ್ಕೆ ಆಗುತ್ತದೆ....
ಸುಕನ್ಯಾ ಸಮೃದ್ಧಿಯಿಂದ ಬರುವ ಆದಾಯಕ್ಕೂ ತೆರಿಗೆ ಇಲ್ಲ. ಆದಾಯ ಮಾತ್ರವಲ್ಲ, ಜತೆಗೆ ಹೂಡಿಕೆ ಮಾಡುವ ಮೊತ್ತಕ್ಕೂ ಆದಾಯ ತೆರಿಗೆ ಕಾಯ್ದೆ 80C ಅಡಿಯಲ್ಲಿ ವಿನಾಯಿತಿ ದೊರೆಯುತ್ತದೆ. ಇನ್ನು ಬಡ್ಡಿ ದರವು 8.40 ಪರ್ಸೆಂಟ್ ಇದೆ. ಅಂದ ಹಾಗೆ ಈ ಬಡ್ಡಿ ದರವನ್ನು ಸರ್ಕಾರ ಬದಲಾವಣೆ ಮಾಡುತ್ತಿರುತ್ತದೆ. ಈ ಖಾತೆಯನ್ನು ಹೆಣ್ಣುಮಗುವಿನ ಹೆಸರಿನಲ್ಲಿ ಮಾತ್ರ ತೆರೆಯಲು ಸಾಧ್ಯ. ಆ ಹೆಣ್ಣುಮಗುವಿಗೆ 18 ವರ್ಷ ...
ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್)