text
stringlengths
0
61.5k
ಬೆಂಗಳೂರು ಜಲಮಂಡಳಿಯಲ್ಲಿ ಎಂಜಿನಿಯರ್‌ ಹುದ್ದೆಯಲ್ಲಿದ್ದು ನಿವೃತ್ತರಾಗಿರುವ ಬಿ.ಟಿ. ಜವರಪ್ಪ ಅವರ ಪುತ್ರ ವೆಂಕಟೇಶ್‌ ಕೂಡ ಎಂಜಿನಿಯರ್‌. ಅವರ ಮತ್ತೊಬ್ಬ ಪುತ್ರ ಅನಂತಪ್ರಭು ಆಸ್ಟ್ರೇಲಿಯಾದಲ್ಲಿ ಎಂಜಿನಿಯರ್. ಬಿ.ಎಚ್‌. ಶಿವಯ್ಯ ಕೂಡ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ ಆಗಿದ್ದವರು. ಇವರ ಸಹೋದರ ನಾರಾಯಣಸ್ವಾಮಿ ಅವರೂ ಎಂಜಿನಿಯರ್‌. ಇವರ ಮಗಳು ಪ್ರಭಾವತಿ ಮಂಡ್ಯ ನಗರದಲ್ಲಿ ಹೆಸರಾಂತ ವೈದ್ಯ...
ಇದೇ ಊರಿನ ನಂಜುಂಡೇಗೌಡ ಬೆಂಗಳೂರಿನಲ್ಲಿ ಅಬಕಾರಿ ಇನ್‌ಸ್ಪೆಕ್ಟರ್‌ ಹುದ್ದೆಯಲ್ಲಿದ್ದವರು. ಅವರ ಪುತ್ರ ಚಂದ್ರಶೇಖರ್‌ ಕೆಎಎಸ್‌ ಅಧಿಕಾರಿಯಾಗಿದ್ದಾರೆ. ಶಂಕರೇಗೌಡ ಎಂಬವರು ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು. ಪ್ರೊ.ಜವರೇಗೌಡ ಮಂಡ್ಯ ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇದೇ ಗ್ರಾಮದ ಡಾ.ಕುಮಾರ್‌ ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ...
ಗೋಪಾಲ್‌ (ಗ್ರಾಮ ಲೆಕ್ಕಿಗ), ನಾರಾಯಣಸ್ವಾಮಿ (ನಿವೃತ್ತ ವಿಎ), ಕೆಂಪೇಗೌಡ ಆರೋಗ್ಯ ಇಲಾಖೆಯಲ್ಲಿದ್ದು ನಿವೃತ್ತರಾಗಿದ್ದು, ಚಿಕ್ಕರಸು ಸಮಾಜ ಕಲ್ಯಾಣ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕರಾಗಿದ್ದ ಚಂದ್ರಾಚಾರ್‌ ಉತ್ತಮ ಸೇವೆಗಾಗಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಶಂಕರೇಗೌಡ (ಸರ್ವೆ ಅಧೀಕ್ಷಕ), ಲಕ್ಷ್ಮಣಗೌಡ ಮತ್ತು ಪ್ರಭಾಕರ್‌ ಕೆಎಸ್‌ಆರ್‌ಟಿಸಿಯ...
ಹೋಬಳಿ ಕೇಂದ್ರ ಅರಕೆರೆಗೆ ಒಂದೂವರೆ ಕಿ.ಮೀ. ದೂರದಲ್ಲಿರುವ ಬಳ್ಳೇಕೆರೆ ತಾಲ್ಲೂಕಿನಲ್ಲಿಯೇ ಹೆಚ್ಚು ಸರ್ಕಾರಿ ನೌಕರರನ್ನು ಕೊಟ್ಟಿರುವ ಗ್ರಾಮ. ಈ ಊರಿನ 8 ಜನರು ಎಂಜಿನಿಯರ್‌ ಆಗಿರುವುದು ಹೆಗ್ಗಳಿಕೆ. ಪ್ರಸಿದ್ಧ ಹಿನ್ನೆಲೆ ಗಾಯಕ ಮತ್ತು ಸಂಗೀತ ನಿರ್ದೇಶಕ ನವೀನ್‌ ಸಜ್ಜು ಬಳ್ಳೇಕೆರೆ ಗ್ರಾಮದವರು ಎಂಬುದು ಮತ್ತೊಂದು ವಿಶೇಷ.
'ನಮ್ಮೂರಿನ ವಿದ್ಯಾರ್ಥಿಗಳು ಹಲವು ದಶಕಗಳಿಂದ ಪ್ರತಿಭಾವಂತರು ಎಂದು ಕರೆಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿತರೂ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದ್ದಾರೆ. ಸರ್ಕಾರಿ ನೌಕರಿ ಕಾರಣಕ್ಕೆ ಕೆಲವು ಕುಟುಂಬಗಳು ಮೈಸೂರು, ಬೆಂಗಳೂರು ಇತರ ನಗರಗಳಿಗೆ ವಲಸೆ ಹೋಗಿವೆ. ಅವರನ್ನು ಒಂದೇ ವೇದಿಕೆಗೆ ಕರೆತಂದು ಬಳ್ಳೇಕೆರೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸುವ ಪ...
'); $('#div-gpt-ad-536812-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-536812').addClass('inartprocessed'); } else $('#in-article-536812').hide(); } else { // Text ad googletag.cmd.push(function() { googletag.display('gpt-text-300x20-ad-536812'); }); g...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-536812 .field-name-body .field-items div.field-item > p'); if(x1 != null && x1.length != 0) { $('#node-536812 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-536812').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಸಿರಿಭೂವಲಯಸಾರ: ಓದುಗರೊಂದಿಗೆ ಕೃತಿಕರ್ತ ಸುಧಾರ್ಥಿ, ಹಾಸನ
ಕುಮುದೇಂದುಮುನಿ, ಕರ್ಲಮಂಗಲಂ ಶ್ರೀಕಂಠಯ್ಯನವರು ಹಾಗೂ ಕೆ. ಅನಂತಸುಬ್ಬರಾಯರಂಥವರ ಅನನ್ಯವಾದ ಕನ್ನಡಾಭಿಮಾನದಿಂದ ಪ್ರೇರಿತನಾಗಿ ನಾನು ಈ ಸಿರಿಭೂವಲಯ ಎಂಬ ಅಚ್ಚರಿಯ ಗ್ರಂಥದ ಪ್ರಭಾವಕ್ಕೆ ಒಳಗಾದಮೇಲೆ, ಕಳೆದ ಅರುವತ್ತು ವರ್ಷಗಳ ಅವಧಿಯಲ್ಲಿ ಕನ್ನಡನಾಡಿನ ಸಾರಸ್ವತಲೋಗದ ದಿಗ್ಗಜಗಳು ಈ ಮಹಾನ್ ಗ್ರಂಥದ ವಿಚಾರವಾಗಿ ತಳೆದಿರುವ ಉದಾಸೀನ ಮನೋಭಾವದಿಂದ ಬಹಳ ಬೇಸಗೊಂಡದ್ದು ಸಹಜ ಸಂಗತಿ. ಕಬ್ಬಿಣದ ಕಡಲೆ ಎಂ...
ಸಿರಿಭೂವಲಯದ ಸಂಶೋಧನೆಗೆ ಸಂಬಂಧಿಸಿದಂತೆ ಇಲ್ಲದ ಇತಿಹಾಸವನ್ನು ನಿರೂಪಿಸುವ ಅನುಚಿತ ಪ್ರಯತ್ನದ ಯಶಸ್ಸನ್ನು ಗಮನಿಸಿ ನನಗೆ ಖೇದವಾಯಿತು. ಸಂಬಂಧಿಸಿದ ವಿದ್ವಾಂಸರ ಸಮೂಹವು ಸಿರಿಭೂವಲಯವನ್ನು ಸಮರ್ಪಕವಾಗಿ ಅಧ್ಯಯನಮಾಡದೇ, ನಾನಾರೀತಿಯ ಒತ್ತಡಗಳಿಗೆ ಸಿಲುಕಿ, ಸಿರಿಭೂವಲಯದ ಘನತೆಗೆ ಕುಂದುತರುತ್ತಿರುವರೆಂಬ ಅಸಮಾಧಾನ ನನ್ನಲ್ಲಿ ಉಂಟಾಯಿತು. ಈ ಕಾರಣದಿಂದಾಗಿ ನಾನು ಸಿರಿಭೂವಲಯಸಾರದಲ್ಲಿ ಸಂಬಂಧಿಸಿದ ವಿ...
ಸಿರಿಭೂವಲಯದ ನಿಜವಾದ ಕಠಿಣತೆ, ಅದನ್ನ ಸರಳವಾಗಿ ಓದಲು ಸಾಧ್ಯವಿರದ ವಿಚಾರ, ತಮ್ಮ ವೃತ್ತಿ, ಪ್ರವೃತ್ತಿಗಳೊಂದಿಗೆ ವಿದ್ವಾಂಸರು ಇದನ್ನು ಸರಿಯಾಗಿ ತಿಳಿಯಲು ಅವಕಾಶವಾಗದೆ ಹೋದುದು ಸಹಜ ಎಂಬ ವಿಚಾರ ನನಗೆ ಈಗ ಮನವರಿಕೆಯಾಗಿದೆ. ಏಕೆಂದರೆ, ಎಲ್ಲರೂ ಎಲ್ಲವಿಚಾರಗಳಲ್ಲೂ ಸಮಾನವಾದ ಆಸಕ್ತಿ ಹೊಂದಿರುವು ಅಸಂಭವ. ನನ್ನ ವಿಚಾರವನ್ನೇ ತೆಗೆದುಕೊಂಡರೂ ಸಿರಿಭೂವಲಯದ ವಿಚಾರದಲ್ಲಿ ನನಗಿರುವಷ್ಟು ತೀವ್ರವಾದ ಆಸ...
ವ್ಯಕ್ತಿಜೀವನದ ಸಾರ್ಥಕತೆಯ ದಿಸೆಯಲ್ಲಿ ಸಾಹಿತ್ಯದ ಪಾತ್ರವು ಬಹಳ ಪ್ರಮುಖವಾದುದೆಂಬುದು ನಿರ್ವಿವಾದ. ಪ್ರತಿಯೊಂದು ಸಾಹಿತ್ಯಕೃತಿಗೂ ತನ್ನದೇಆದ ನೆಲೆಬೆಲೆ ಇರುತ್ತದೆ. ಈ ಕಾರಣದಿಂದಾಗಿಯೇ ವೇದಮಂತ್ರಗಳು, ಉಪನಿಷತ್ತುಗಳು, ಸಹಸ್ರನಾಮಗಳು ಮುಂತಾದುವು ರಚನೆಯಾಗಿವೆ, ಇಂಥ ಸಾರ್ಥಕ ಸಾಹಿತ್ಯಕೃತಿಗಳ ನಿಜವಾದ ಪ್ರಯೋಜನ ನಮಗೆ ದೊರೆಯಬೇಕಾದರೆ ನಾವು ಓದಿದ ಸಾಹಿತ್ಯಕೃತಿ ನಮಗೆ ಅರ್ಥವಾಗಬೇಕು! ಅಂದರೆ, ಸಾ...
ಸಿರಿಭೂವಲಯದ ಪರಿಚಯಕ್ಕೆ ಸೇರಿದ ಐದು ಕೃತಿಗಳ ಪ್ರಕಟಣೆಯಾದಮೇಲೆ, ಬೆಂಗಳೂರಿಗೆ ಹೋಗಿದ್ದಾಗ ನಾಡಿನ ಸಾಹಿತ್ಯಕ್ಷೇತ್ರದ ಹಿರಿಯ ಚೇತನ ಶ್ರೀ ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಲು ಹೋದೆ. ನನ್ನ ಸಾಹಿತ್ಯಿಕ ಚಟುವಟಿಕೆಯ ವಿಚಾರದಲ್ಲಿ ಸುಮಾರು ನಲವತು ವರ್ಷಗಳಿಂದ ಪರಿಚಿತರಾಗಿ ಹಿತೈಷಿಯಾಗಿರುವ ಈ ಮಹನೀಯರನ್ನು ಕಳೆದ ಸುಮಾರು ೧೪ ವರ್ಷಗಳಿಂದ ಸಂಪರ್ಕಿಸಿರಲಿಲ್ಲ! ಸಿರಿಭೂವಲಯಸಾರ ದಲ್ಲಿನ ನನ್ನ ನಿ...
ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ನನ್ನ ಮುಂದಿನ ಹೆಜ್ಜೆಯಾಗಿ ಸಿರಿಭೂವಲಯಸಾಗರರತ್ನಮಂಜೂಷ ವನ್ನು ನಿರೂಪಿಸಿರುವ ವಿಚಾರ ತಿಳಿಸಿ, ಅದರ ಪ್ರಮುಖ ಮಾಹಿತಿಗಳನ್ನು ಅವರಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಿ, ಓದಲು ಸಲ್ಲಿಸಿ, ಈ ಪ್ರಯತ್ನಕ್ಕೆ ನಿಮ್ಮಿಂದ ಮುನ್ನುಡಿಯಾಗಬೇಕೆಂದು ವಿನಂತಿಸಿದೆ. ಸಂತೋಷದ ಮುಗುಳ್ನಗೆ ಸೂಸಿದ ಈ ಶತಾಯುಷಿಯು ಯಾವುದೇ ಆಕ್ಷೇಪ ಸೂಚಿಸದೇ ನನ್ನ ವಿಂತಿಗೆ ಸಮ್ಮತಿಸಿದರು! ಸಿರಿಭೂವಲ...
ಸಿರಿಭೂವಲಯ ಕುರಿತು ಸುಧಾರ್ಥಿಯು ನಿರೂಪಿಸಿರುವ ಪರಿಚಯ ಕೃತಿಗಳಲ್ಲಿ ಕಿರೀಟಪ್ರಾಯವಾದ ಸಿರಿಭೂವಲಯಸಾಗರರತ್ನಮಂಜೂಷವು ಈ ಮಹನೀಯರ ಮುನ್ನುಡಿಯಿಂದಾಗಿ ತನ್ನದೆ ಆದ ಘನತೆ, ಗಾಂಭೀರ್ಯವನ್ನು ಪಡೆದಂತಾಗಿದೆ. ನನ್ನ ಪಾಲಿಗೆ ಇದು ಜಗತ್ತಿನ ಯಾವುದೇ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗಿಂತಲೂ ಮಿಗಿಲಾದುದು. ಯಾವುದೇ ಪ್ರತಿಷ್ಠಿತ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಪ್ರಶಸ್ತಿಗಿಂತಲೂ ಉನ್ನತವಾದುದು. ನನ್ನ ...
ಸಿರಿಭೂವಲಯವು ಮೂಲತಃ ಒಂದು ಪದ್ಧತಿಗ್ರಂಥ. ಅಂದರೆ, ಕನ್ನಡ; ಪ್ರಾಕೃತ; ಸಂಸ್ಕೃತಭಾಷಾ ಮಿಶ್ರಿತ ಕಾವ್ಯವೆಂಬ ಆಧಾರದಲ್ಲಿ ಅಶ್ವಗತಿಯ ಅಂತರ್ಸಾಹಿತ್ಯವನ್ನು ಪ್ರತ್ಯೇಕಿಸುವಾಗ, ಅಲ್ಲಿನ ಶಬ್ದಗಳ ಆಧಾರದಲ್ಲಿ ಕನ್ನಡ,ಪ್ರಾಕೃತ,ಸಂಸ್ಕೃತಭಾಷಾ ಅಂತರ್ಸಾಹಿತ್ಯಎಂದು ಸೂಚಿಸಲಾಗಿದೆ. ಆದಾಗ್ಯೂ ಅಲ್ಲಿ ಮಾಗಧಿ, ಅರ್ಧಮಾಗಧಿ, ಶೂರಸೇನಿ, ಪೈಶಾಚಿಕ, ಅಪಭ್ರಂಶ ಇತ್ಯಾದಿ ಬೇರೆಬೇರೆ ಭಾಷೆಗಳ ಶಬ್ದಗಳೂ ಅಡಕವಾಗಿರ...
ಕೆ. ಅನಂತಸುಬ್ಬರಾಯರ ಸಮರ್ಪಕ ಮಾರ್ಗದರ್ಶನದ ನೆರವಿದ್ದೂ, ಸಿರಿಭೂವಲಯದ ೧೯೫೩ರ ಪ್ರಥಮ ಮುದ್ರಣದ ೩೩ ಅಧ್ಯಾಯಗಳನ್ನು ಓದಿ ಅರ್ಥಮಾಡಿಕೊಂಡು, ಅದರಿಂದ ಪುನರುತ್ಪತ್ತಿಯಾಗುವ ಅಂತರ್ಸಾಹಿತ್ಯವನ್ನು ಕ್ರಮವರಿತು ಪ್ರತ್ಯೇಕವಾಗಿ ನಿರೂಪಿಸಿ, ಮುದ್ರಣಮಾಡಿಸುವ ಕಾರ್ಯಕ್ಕೆ ಸುಮಾರು ೨೭ ವರ್ಷಗಳ ಕಾಲಾವಧಿ ಹಿಡಿದಿತ್ತು. ಈಗ ಮುಂದಿನ ೨೬ ಅಧ್ಯಾಯಗಳ ಕಾರ್ಯವನ್ನು ಕೈಗೆತ್ತಿಕೊಂಡಾಗ, ಅಸಮರ್ಪಕವಾದ ಕೈಬರಹದ ಕರ...
ಈ ಕಾರ್ಯವನ್ನು ಸಾಧಿಸಲೇಬೇಕೆಂಬ ಛಲದಿಂದ, ನನ್ನಿಂದ ಸಾಧ್ಯವಾದಷ್ಟು ಕಾರ್ಯಪ್ರಗತಿಯನ್ನು ಸಾಧಿಸಿದ್ದೇನೆ. ಈ ಕಾರ್ಯಸಾಧಿಸಲು ಸಿರಿಭೂವಲಯಸಾರ ನಿರೂಪಣೆಯ ಕಾಲಾವಧಿಯಂತೆಯೇ ಲೆಕ್ಕಹಾಕಿದರೆ, ೧೫-೨೦ ವರ್ಷಗಳ ಕಾಲಾವಧಿಯಾದರೂ ಬೇಕೇನೋ ಎನಿಸಿತ್ತು. ಆದರೆ ಜೀವನಾವಧಿಯು ಕೊನೆಯಾಗುವುದರೊಳಗೆ ಈ ಕಾರ್ಯಕ್ಕೆ ಒಂದು ಖಚಿತ ಸ್ವರೂಪವನ್ನು ನೀಡಲೇಬೇಕೆಂಬ ಆತಂರಿಕ ಒತ್ತಡದ ಕಾರಣದಿಂದಾಗಿ, ಹಗಲು ಇರುಳಿನ ಪರಿವೆಯ...
ಸಿರಿಭೂವಲಯಸಾರವನ್ನು ನೋಡಿದ, ಓದಿದ ಕೆಲವು ಅಭಿಮಾನಿಗಳು ನನ್ನ ಬರವಣಿಗೆಯ ವಿಚಾರವಾಗಿ ಮೆಚ್ಚುಗೆಯ ಮಾತುಗಳನ್ನು ಸೂಚಿಸಿರುವುದಿದೆ. ಅಲ್ಲಿನ ವಿಷಯವ್ಯಪ್ತಿಯನ್ನು ಗಮನಿಸಿದ ಕೆಲವರು ನೀವು ಎಷ್ಟೊಂದು ಕಷ್ಟಪಟ್ಟು ಈ ಗ್ರಂಥ ರಚಿಸಿದ್ದೀರಿ ಎಂದಿರುವುದಿದೆ. ಇನ್ನು ಕೆಲವರು ನೀವಾಗುವ ಹೊತ್ತಿಗೆ ಈ ಗ್ರಂಥ ರಚಿಸಿದ್ದೀರಿ, ನಮಗೆ ಸಾಧ್ಯವಿಲ್ಲ ಎಂದಿರುವುದುಂಟು. ಮತ್ತೆ ಕೆಲವರು ಕಾಲೇಜು ಶಿಕ್ಷಣವೂ ಇಲ್ಲ...
ಈ ಸಿರಿಭೂವಲಯದ ಸಾಗರದಲ್ಲಿ ಸುಳಿವು ಸಿಗದಂತೆ ಒಳಗೆ ಅಡಗಿಕುಳಿತ ಒಂದೊಂದೇ ಅಕ್ಷರದ ಜಾಡನ್ನು ಹಿಡಿದು ಅವುಗಳನ್ನು ಒಂದೆಡೆ ಕಲೆಹಾಕಿ, ಅವುಗಳನ್ನು ವಿಂಗಡಿಸಿ, ಅರ್ಥಪೂರ್ಣವಾಗಿ ಸರಳವಾಗಿ ಪರಿಚಯಿಸುವ ಕಾರ್ಯವು ಸುಲಭವಾದುದಲ್ಲ; ನಿಜ. ಆದರೆ ಆಸಕ್ತಿಯಿದ್ದು, ಇಚ್ಛಾಶಕ್ತಿಯನ್ನು ಹೊಂದಿ, ಕ್ರಿಯಾಶಕ್ತಿಯನ್ನು ಸೂಕ್ತವಾಗಿ ಬಳಸಿಕೊಳ್ಳುವ ಜ್ಞಾನಶಕ್ತಿ ಉಳ್ಳವರಾದರೆ, ಅವರು ಸುಧಾರ್ಥಿಗಿಂತಲೂ ಸಾಮಾನ್ಯವ...
೧೯೫೩ ರಲ್ಲಿ ಸರ್ವಾರ್ಥಸಿದ್ಧಿಸಂಘವು ಸಿರಿಭೂವಲಯದ ಅಕ್ಷರ ಅವತರಣಿಕೆಯನ್ನು ರೂಪಿಸಿದಾಗ, ಕರ್ಲಮಂಗಲಂ ಶ್ರೀಕಂಠಯ್ಯನವರ ಅಪಾರ ವಿದ್ವತ್ತು ಹಾಗೂ ಯುಗಾಂತರ ಮುದ್ರಣಾಲಯದವರ ತಾಳ್ಮೆ, ಶ್ರದ್ಧೆ ಹಾಗೂ ಕೌಶಲ್ಯದ ಪರಿಣಾಮವಾಗಿ ಮೂಲಸಾಹಿತ್ಯದಲ್ಲಿ ಸಂಸ್ಕೃತ; ಪ್ರಾಕೃತ ಇತ್ಯಾದಿ ಅನ್ಯ ಭಾಷೆಗಳ ಸಾಹಿತ್ಯವನ್ನು ಗುರುತಿಸಲು ಓದುಗರಿಗೆ ಸುಲಭವಾಗುವಂತೆ ಹಲವಾರು ಲೇಖನ ಚಿಹ್ನೆಗಳನ್ನು ಬಳಸಿ, ಬಹಳ ಸುಂದರವಾಗಿ...
ಸಿರಿಭೂವಲಯವನ್ನು ಕುರಿತು ಕನ್ನಡ ನಾಡಿನಲ್ಲೇ ಸಾಕಷ್ಟು ಅನಾದರಣೆಯಿರುವುದು ವಾಸ್ತವ ವಿಚಾರ. ವಿಶ್ವವಿದ್ಯಾಲಯಗಳೂ ಈ ಅಚ್ಚರಿಯ ಕೃತಿಯಿಂದ ದೂರವುಳಿದಿವೆ. ಇಂಥ ಪರಿಸರದಲ್ಲಿ ಹಂಪಿಯ ಕನ್ನಡವಿಶ್ವವಿದ್ಯಾಲಯದವರು ಈ ವಿಚಾರದಲ್ಲಿ ಈಚೆಗೆ ಆಸಕ್ತಿವಹಿಸಿರುವುದು ಸಂತೋಷದ ಸಂಗತಿಯಾಗಿದೆ. ಇಲ್ಲಿನ ಆಡಳಿಯವು ಸಿರಿಭೂವಲಯ ಕುರಿತು ಮಹಾಪ್ರಬಂಧ ರಚಿಸುವವರಿಗೆ ಸೂಕ್ತ ಅವಕಾಶಕಲ್ಪಿಸಿರುವುದು ಹೆಮ್ಮೆಯ ವಿಚರ. ಉ...
ಈ ಪರಿಚಯಕೃತಿಯ ರಚನೆಯಲ್ಲಿ ನೆರವಾದವರಿಗೆ ಕೃತಜ್ಞತೆಯನ್ನರ್ಪಿಸುವುದು ಕೃತಿಕರ್ತೃವಿನ ಆದ್ಯಕರ್ತವ್ಯ. ಈ ದಿಸೆಯಲ್ಲಿ ನಾನು ಕೃತಜ್ಞತೆ ಸೂಚಿಬೇಕಾದುದು ನನ್ನ ಈ ಪ್ರತ್ನಕ್ಕೆ ಮೂಲಕರಣರಾಗಿ, ನನಗೆ ಸಿರಿಭೂವಲಯದ ಮೂಲಕೃತಿಯ ಝೆರಾಕ್ಸ್ ಪ್ರತಿಯನ್ನು ಅನಿರೀಕಿತವಾಗಿ, ಅಯಾಚಿತವಾಗಿ ತಂದು ತಲುಪಿಸಿದ ಅಪರಿಚಿತ ಮಿತ್ರರೊಬ್ಬರಿಗೆ. -ಅವರು ಅಪರಿಚಿತರಾಗಿಯೇ ಉಳಿಯುವಂತಾದುದು ನನಗೆ ಖೇದದ ಸಂಗತಿಯಾದರೂ- ನನ್...
ಈ ಅಪರಿಚಿತ ಮಿತ್ರನಿಂದ ದೊರೆತ ಅಸಮರ್ಪಕವಾದ ಪ್ರತಿಯನ್ನು ಸುವ್ಯವಸ್ಥಿತಗೊಳಿಸುವಲ್ಲಿ ನೆರವಾಗುವುದರೊಂದಿಗೆ, ತಮ್ಮ ಸಂಶೋಧನಾ ಪ್ರಬಂಧ ರಚನೆಗಾಗಿ, ತಾವು ಅಧಿಕೃತವಾಗಿ ನಿಗಧಿತ ಶುಲ್ಕತೆತ್ತು ದೆಹಲಿಯ ಪಾಚ್ಯಪತ್ರಾಗಾರದಿಂದ ಸಂಗ್ರಹಿದ ಸಿರಿಭೂವಲಯದ ಮೂಲಪ್ರತಿಯ ಝೆರಾಕ್ಸ್ ನಕಲನ್ನು ನನ್ನ ಪರಿಶೀಲನೆಯ ಕಾರ್ಯಕ್ಕೆ ಕೆಲವು ಸಮಯ ಎರವಲು ನೀಡಿದ ಆತ್ಮೀಯ ಮಿತ್ರ ಶ್ರೀ ಎಚ್. ಎಂ. ಸದಾನಂದರಿಗೆ, ತಾವು ಇಂ...
ಹಿರಿಯಮಿತ್ರ ಶ್ರೀ ವೆಂಕಟರಮಣಯ್ಯನವರಿಗೆ; ಬೆಳಗಾವಿಯ ಶ್ರೀ ಧರಣೇಂದ್ರಕುಮಾರ್, ಹಾಗೂ ಪತ್ರಿಕೋದ್ಯೋಗಿ ಮಿತ್ರರು- ಮೂಲತಃ ವಕೀಲರಾದ ಗೆಳೆಯ ಶ್ರೀ ಎಂ.ವಿ.ಆರ್. ಅವರಿಗೆ, ವೈದ್ಯರೂ ಬರಹಗಾರರೂ ಆದ ಡಾ|| ಪ್ರದೀಪಕುಮಾರ್ ಹೆಬ್ರಿ ಅವರಿಗೆ, ಶ್ರೀ ಡಿ. ಎನ್. ಅಕ್ಕಿ ಮಾಸ್ತರಿಗೆ, ಕೊಕ್ಕರಣೆ ಅರಮನೆಯ ಶ್ರೀ ಗುಣವರ್ಮರಾಜಾ ಅವರಿಗೆ, ಬೆಳಗಾವಿಯ ಭರತೇಶ ಶಿಕ್ಷಣ ಸಮೂಹದ ಪದಾಧಿಕಾರಿಗಳಿಗೆ, ಶ್ರೀ ಹರಿಹರಪುರ ...
ಸಿರಿಭೂವಲಯಸಾರದಲ್ಲಿ ಪ್ರಥಮ ಖಂಡದ ೧ ರಿಂದ ೩೩ ಅಧ್ಯಾಯಗಳ ಅಂತರ್ಸಹಿತ್ಯ ಹಾಗೂ ಅದಕ್ಕೆ ಪೂರಕವಾದ ಕೆಲವರು ಮಾಹಿತಿಗಳನ್ನು ಅಳವಡಿಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಸಿರಿಭೂವಲಯಸಾರ ೨ ಎಂಬ ಹೆಸರಿನಿಂದ ೩೪ ರಿಂದ ೫೯ನೇ ಅಧ್ಯಾಯದ ವರೆಗಿನ ಮೂಲಸಾಹಿತ್ಯ, ಅವುಗಳ ಅಂತರ್ಸಾಹಿತ್ಯ ಹಾಗೂ ಪೂರಕವಾದ ಕೆಲವಾರು ಮಾಹಿತಿಗಳನ್ನು ನಿರೂಪಿಸಿ, ಪ್ರಕಟಿಸುವ ನಿರ್ಧಾರವಾಗಿತ್ತು. ವಿವಿಧ ಮೂಲಗಳಿಂದ ಲಭ್ಯವಾದ ...
ತಂದೆಯಮಾತಿಗೆ ಪ್ರತಿಯಾಡದೇ ತಾಯಿಯ ಶಿರವನ್ನೇ ತರಿದೊಗೆದ ಕೊಡಲಿಯಾಯುಧನ (ಪರಶುರಾಮನ) ತಂದೆಯಗೋತ್ರದಲ್ಲಿ ಜನಿಸಿದ ಈ ಮುಂಗೋಪಿ ಗಂಡನ ಕೈಹಿಡಿದಂದಿನಿಂದಲೂ ನೆರಳಿನಂತೆ ಸಹಚರಳಾಗಿದ್ದು, ಮಾತೃಸ್ವರೂಪಳಾಗಿ ಇಲ್ಲಿಯವರೆವಿಗೂ ನನ್ನನ್ನು ತಾಳ್ಮೆಯಿಂದ ಸಹಿಸಿರುವುದರೊಂದಿಗೆ, ಈಗ ಸಿರಿಭೂವಲಯದ ಅಂತರ್ಸಾಹಿತ್ಯದ ಅಕ್ಷರಸರಪಣಿಯನ್ನು ಹೊರತೆಗೆಯುವಲ್ಲಿ ನನಗಿಂತ ಹೆಚ್ಚು ಉತ್ಸಾಹದಿಂದ ಮುನ್ನುಗ್ಗಿ, ಈ ಕೃತಿರ...
ಫಾಸ್‌ಟ್ಯಾಗ್‌‌ನಲ್ಲಿನ ಸಮಸ್ಯೆ ನಿವಾರಿಸಿ - Janathavani - Davanagere
ಫಾಸ್‌ಟ್ಯಾಗ್‌‌ನಲ್ಲಿನ ಸಮಸ್ಯೆ ನಿವಾರಿಸಿ
April 6, 2021April 7, 2021By janathavani
ಕಳೆದ ಜನವರಿಯಿಂದ ಎಲ್ಲ ಮಾದರಿಯ ವಾಹನಗಳಿಗೆ ಫಾಸ್‌ಟ್ಯಾಗ್‌ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ ಸ್ವಾಗತಾರ್ಹ. ಆದರೆ ಫಾಸ್‌ಟ್ಯಾಗ್‌ ನಿಯಮ ಜಾರಿಗೆ ಬಂದಾಗಿನಿಂದಲೂ ಫಾಸ್‌ಟ್ಯಾಗ್‌ ಎನ್ನುವುದೇ ಗೊಂದಲದ ಗೂಡಾಗಿದೆ. ಯಾಕೆಂದರೆ ಕಾರುಗಳು ಚಲಿಸದಿದ್ದರೂ ಅಥವಾ ಮನೆಯಲ್ಲಿ ಇದ್ದರೂ ಕೂಡ ಫಾಸ್‌ಟ್ಯಾಗ್‌‌ನಿಂದ ಹಣ ಕಡಿತವಾಗುತ್ತಿದ್ದು ಈ ಬಗ್ಗೆ ಕಾರು ಮಾಲೀಕರು ರೋಸಿ ಹೋಗಿ...
ಈ ಸಮಸ್ಯೆಯಿಂದ ರಾಜ್ಯದಾದ್ಯಂತ ಈವರೆಗೂ ಪೊಲೀಸ್ ಠಾಣೆಗೆ ಅನೇಕ ದೂರುಗಳು ಹೋಗಿವೆ. ಜೊತೆಗೆ ಟೋಲ್ ಸಿಬ್ಬಂದಿ ಜೊತೆ ಪ್ರತಿ ನಿತ್ಯ ಜಗಳ ಉಂಟಾಗುತ್ತಲೇ ಇರುತ್ತವೆ. ಕೆಲವೊಮ್ಮೆ ಟೋಲ್ ಗಳಲ್ಲಿ ಫಾಸ್‌ಟ್ಯಾಗ್‌ ಇದ್ದರೂ ಬಾರ್ಕೋಡ್ ಸರಿಯಾಗಿ ರೀಡಾಗದೆ ಹಣ ಕಡಿತ ವಾಗುವುದಿಲ್ಲ ಇದರಿಂದ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿರುವ ಉದಾಹರಣೆಗಳು ಇವೆ.
ಫಾಸ್ಟ್ಯಾಗ್ ನಲ್ಲಿ ಹಣ ಇಲ್ಲದಿದ್ದರೆ ಡಬಲ್ ರೇಟ್ ವಸೂಲಿ ಮಾಡುವ ಸಿಬ್ಬಂದಿ ಇಂತಹ ತಾಂತ್ರಿಕ ಸಮಸ್ಯೆ ಬಗೆಹರಿಸುವುದಲ್ಲವೇ, ಇವೆಲ್ಲವುಗಳನ್ನು ನೋಡುತ್ತಿದ್ದರೆ ಹಣ ಕೊಟ್ಟು ಪಾವತಿ ಮಾಡುವ ಹಿಂದಿನ ನಿಯಮವೇ ಉತ್ತಮ ಎನಿಸುತ್ತದೆ, ಕೇಂದ್ರ ಸರ್ಕಾರ ತುರ್ತಾಗಿ ಇತ್ತ ಗಮನಹರಿಸಿ ಗೊಂದಲದ ಗೂಡಾಗಿರುವ ಫಾಸ್ಟ್ಯಾಗ್ ನಲ್ಲಿ ಉಂಟಾಗಿರುವ ತಾಂತ್ರಿಕ ಲೋಪವನ್ನು ಬಗೆಹರಿಸಬೇಕಾಗಿದೆ.
ಅಧಿಕಾರದ ಚುಕ್ಕಾಣಿ ಜೆಡಿಎಸ್‌ಗೆ | Prajavani
ಅಧಿಕಾರದ ಚುಕ್ಕಾಣಿ ಜೆಡಿಎಸ್‌ಗೆ
ಗಜೇಂದ್ರಗಡ: ಕಾಂಗ್ರೆಸ್ ಮತ್ತು ಬಿಜೆಪಿ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ, ಉತ್ತಮ ಆಡಳಿತಕ್ಕೆ ವೇದಿಕೆ ಒದಗಿಸಿಕೊಡಲಿದ್ದಾರೆ ಎಂದು ರಾಜ್ಯ ಯುವ ಘಟಕದ ಉಪಾಧ್ಯಕ್ಷ ಡಾ.ಮಂಜುನಾಥ ವಿಶ್ವಬ್ರಾಹ್ಮಣ ವಿಶ್ವಾಸ ವ್ಯಕ್ತಪಡಿಸಿದರು.
ರೋಣ ಮತ ಕ್ಷೇತ್ರದ ಜೆಡಿಎಸ್ ಪಕ್ಷ ಸಂಘಟನೆಗೆ ಶುಕ್ರವಾರ ಸಮೀಪದ ಮ್ಯಾಕಲ್ ಝರಿ ಗ್ರಾಮದಲ್ಲಿ ಅಧಿಕೃತ ಚಾಲನೆ ನೀಡಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಡಳಿತಾವಧಿಯಲ್ಲಿ ಕೈಗೊಂಡ ಜನಪ್ರಿಯ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಭೂತ ಪೂರ್ವ ಅಭಿವೃದ್ದಿ ಕಾರ್ಯಗಳು ನಡೆದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ ಜನತೆ ಬಿಜೆಪಿ ಮತ್ತು ಕಾಂಗ...
ಪಕ್ಷ ಸಂಘಟನೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿರುವ ತಾಲ್ಲೂಕಿನ ನಿಷ್ಠಾವಂತ ಕಾರ್ಯಕರ್ತರಿಗೆ ತಪ್ಪ ಸಂದೇಶಗಳನ್ನು ರವಾನಿಸುವ ಕಾರ್ಯವನ್ನು ಕೆಲ ದುಷ್ಟ ಶಕ್ತಿಗಳು ನಿರಂತವಾಗಿ ನಡೆಸಿವೆ. ಇಂಥ ನಿರುಪಯುಕ್ತ ಕಾರ್ಯಗಳತ್ತ ಗಮನ ಹರಿಸದಂತೆ ಪಕ್ಷದ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಪಕ್ಷ ಸೇರ್ಪಡೆ: ಪರಸಪ್ಪ ಕರಡಿ, ದುರಗಪ್ಪ ತಾತಲ, ಕಂಠೆಪ್ಪ ಅಂಗಡಿ, ಶಿವನಗೌಡ ಪಾಟೀಲ, ಮಲ್ಲಪ್ಪ ನಾಯಕ, ಯಮನೂರಪ್ಪ ಧಮ್ಮೂರ, ಲಕ್ಷ್ಮಪ್ಪ ಜೂಲಗುಡ್ಡ, ಯಂಕಪ್ಪ ದಿವಾಣದ, ಮಲ್ಲಿಕಾರ್ಜುನ ಗೋನಾಳ, ಶರಣಪ್ಪ ತಳವಾರ, ಯಮನಪ್ಪ ಕುಂಕುಬಾವಿ, ಮುದುಕಪ್ಪ ಡೊಣ್ಣೆಗುಡ್ಡ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅನೇಕ ಕಾರ್ಯಕರ್ತರು ಜೆಡಿಎಸ್‌ಗೆ ಅಧಿಕೃವಾಗಿ ಸೇರ್ಪಡೆಗೊಂಡರು.
ಮುಖಂಡರಾದ ಅಮರೇಶ ಬೂದಿಹಾಳ, ಮಹಾದೇವಪ್ಪ ನವಲಗುಂದ, ನಾರಾಯಣಪ್ಪ ವಡ್ಡಟ್ಟಿ, ನಾಗಭೂಷಣ, ಡಾ.ಹೇಮಂತ, ಬಾಳು ಗುಳೇದ, ಮಂಜು ರಾಠೋಡ್, ದೊಡ್ಡಬಸಪ್ಪ ನವಲಗುಂದ, ಗುರುರಾಜ ಮಾಳೆಕಟ್ಟಿ, ಪ್ರಕಾಶ ಚಿಣಿ, ಯಮನಪ್ಪ ಕುಕನೂರ ಉಪಸ್ಧಿತರಿದ್ದರು.
ವಂಚನೆ: ಪ್ರಕರಣ ದಾಖಲು
ಶಿರಹಟ್ಟಿ: ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಹಣ ಪಡೆದ ಆರೋಪದ ಮೇಲೆ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಹಾಲಿ ಸದಸ್ಯ ಶಿವನಗೌಡ ರಾಮನಗೌಡ ಪಾಟೀಲ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲಕ್ಷ್ಮಣ ತಳವಾರ ವಿರುದ್ದ ತಾಲ್ಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಶುಕ್ರವಾರ ಸ್ಥಳಿಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2006-09 ನೇ ಸಾಲಿನ ಅವಧಿಯಲ್ಲಿ ಗ್ರಾಮ ಪಂಚಾಯಿತಿ ವಿವಿಧ ವಸತಿ ಮತ್ತು ನಿವೇಶನ ಯೋಜನೆಗಳನ್ನು ಅನುಷ್ಟಾನ ಗೊಳಿಸುವಲ್ಲಿ ಸರ್ಕಾರದ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಜೊತೆಗೆ ಸುಳ್ಳು ದಾಖಲೆಗಳನ್ನು ನೀಡಿ 7 ಮನೆಗಳ ಫಲಾನುಭವಿಗಳು ಮನೆಗಳನ್ನು ನಿರ್ಮಿಸಿಕೊಳ್ಳದಿದ್ದರೂ ಸರ್ಕಾರಕ್ಕೆ ಸುಳ್ಳು ಮಾಹಿತಿ ಸಲ್ಲಿಸಿ ಬ್ಯಾಂಕ್‌ಗಳ ಮೂಲಕ ಸರ್ಕಾರಕ್ಕೆ 2.35ಸಾವಿರ ರೂಗಳನ್ನು ವಂಚಿಸಿದ ಬಗ್ಗೆ ಪ್ರಕ...
ಕೊರೋನಾ ಆಸ್ಪತ್ರೆಗೆ ಸುಧಾಮೂರ್ತಿ ನೆರವು : ಶಿವಾಜಿನಗರ ಬಳಿ ನಿರ್ಮಾಣ | Coronavirus infosys Foundation Helps To Build Hospital In Bengaluru
Bengaluru, First Published 18, Mar 2020, 9:42 AM IST
ಬೆಂಗಳೂರು [ಮಾ.18]: ಶಿವಾಜಿನಗರದ ಬ್ರಾಡ್‌ವೇ ರಸ್ತೆ ಬಳಿ ಬಿಬಿಎಂಪಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಬೃಹತ್‌ ಆಸ್ಪತ್ರೆ ಕಟ್ಟಡವನ್ನು 150-200 ಹಾಸಿಗೆಯ ಕೊರೋನಾ ವಿಶೇಷ ಆಸ್ಪತ್ರೆಯನ್ನಾಗಿಸಲು ಅಗತ್ಯವಿರುವ ಮೂಲ ಸೌಲಭ್ಯ ಒದಗಿಸಲು ಇಸ್ಫೋಸಿಸ್‌ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸುಧಾ ಮೂರ್ತಿ ಅವರು ಮುಂದೆ ಬಂದಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌, ಬಿಬಿಎಂಪಿಯಿಂದ 300 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಟ್ಟಡವನ್ನು ಶಿವಾಜಿನಗರದಲ್ಲಿ ನಿರ್ಮಿಸಲಾಗಿದೆ. ಇದೀಗ ಇಸ್ಫೋಸಿಸ್ಟ್‌ ಪ್ರತಿಷ್ಠಾನದ ವತಿಯಿಂದ ಡಾ. ಸುಧಾ ಮೂರ್ತಿ ಅವರು ಮುಂದೆ ಬಂದಿದ್ದು, 200 ಹಾಸಿಗೆಯ ವ್ಯವಸ್ಥೆ ಹಾಗೂ ವೆಂಟಿಲೇಟರ್‌, ಮೂಲಸೌಕರ್ಯ ಕಲ್ಪಿಸುವುದಾಗಿ ಹೇಳಿದ್ದಾ...
ರಾಜ್ಯದಲ್ಲಿ 2572 ಮಂದಿ ಕೊರೋನಾ ಪ್ರತ್ಯೇಕ ನಿಗಾದಲ್ಲಿ!...
ಡೆಡ್ಲಿ ವೈರಸ್‌ ಎನ್ನಬೇಡಿ, ಗುಣಪಡಿಸಬಹುದು:
ಕೊರೋನಾ ವೈರಾಣುವನ್ನು ಅನಗತ್ಯವಾಗಿ ಡೆಡ್ಲಿ, ಕಿಲ್ಲರ್‌ ವೈರಸ್‌ ಎಂದು ಬಿಂಬಿಸಲಾಗುತ್ತಿದೆ. ಇದರಿಂದ ಸೋಂಕು ತಗುಲಿರುವವರು ಮಾನಸಿಕವಾಗಿ ಖಿನ್ನತೆ ಒಳಗಾಗುವ ಸಾಧ್ಯತೆ ಇದೆ. ಕೊರೋನಾ ವೈರಸ್‌ಗೆ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ. ಕೆಲವರು ಚಿಕಿತ್ಸೆಯೇ ಇಲ್ಲದೆ ಗುಣಮುಖರಾದ ಉದಾಹರಣೆಗಳೂ ಇವೆ. ಹೀಗಾಗಿ ವಿನಾಕಾರಣ ತಪ್ಪು ಮಾಹಿತಿ ನೀಡಿ ಆತಂಕ ಸೃಷ್ಟಿಸಬಾರದು ಎಂದು ಇದೇ ವೇಳೆ ಮನವಿ ಮಾಡಿದ...
ಸಿರಿಗನ್ನಡಂ ಗೆಲ್ಗೆ: May 2008
ವರದಿ : ಗುರು [Guru] at Saturday, May 24, 2008 1 comment:
ಬೆಂಗಳೂರು ಮೇ ೧೬: ಬೆಂಗಳೂರು ಐಟಿ ಸಿಟಿ, ಸಿಲಿಕಾನ್ ಹಬ್..........ಮುಂತಾದ ಹೆಸರಿನಿಂದ ಕರೆಯುವವರು ಇನ್ನೊಂದು ಹೆಸರೂ ಸೇರಿಸಿಕೊಳ್ಳುವುದು ಒಳ್ಳೆಯದು, ಅದು ಹಗಲುದರೋಡೆಕೋರರ ನಗರ.
ಇದಕ್ಕೆ ಕಾರಣ ಇದೆ. ಇಲ್ಲೇ ವಾಸವಾಗಿರುವವರಿಗೆ ಇದರ ಅನುಭವ ಈಗಾಗಲೇ ಆಗಿರಬಹುದು. ಇಲ್ಲಿದ್ದಾರೆ ದರೋಡೆಕೋರರು
ಬೆಳಗ್ಗೆ ಎದ್ದಕೂಡಲೇ ಮನೆ ಬಾಗಿಲಿಗೆ ಕಸ ಒಯ್ಯುವ ವ್ಯಾನ್ ಬರುತ್ತದೆ. ತಿಂಗಳ ಮೊದಲ ದಿನವೇ..."ಸಾರ್ ಕಾಫಿಗೆ ಕಾಸ್ ಕೊಡಿ.." ಎಂದು ಅಂಗಾಲಾಚುತ್ತಾರೆ. "ಇಲ್ಲ" ಎಂದರೆ "ನಾಳೆಯಿಂದ ಕಸ ಹಾಕಬೇಡಿ" ಎಂದು ಮುಖಕ್ಕೆ ಹೊಡೆವ ಹಾಗೆ ಹೇಳುತ್ತಾರೆ. ಸರಕಾರಿ ಸಂಬಳ ಅಲ್ಲದೆ ಪ್ರತೀ ಮನೆಯಿಂದ ತಿಂಗಳಿಗೆ ಹತ್ತು ರೂಪಾಯಿ ಹಫ್ತಾ ವಸೂಲಿ ಮಾಡುತ್ತಾರೆ. ಮಾಡುವುದು ಮಾತ್ರ ಕಸ ಸಂಗ್ರಹಿಸುವ ಕೆಲಸ, ಆದರೆ ಎಲ್ಲರಿ...
ಬೆಂಗಳೂರಿನ ಟ್ರಾಫಿಕ್ ಪೋಲಿಸರು ಮತ್ತೊಂದು ರೀತಿಯ ಹಗಲು ದರೋಡೆ. ಸುಮ್ಮನೆ ಸಿಗ್ನಲ್ ಜಂಪ್, ಅದು ಇದು ಒನ್ ವೇ ಎಂದು ಪ್ರತೀ ದಿನಾ ಜನರ ದರೋಡೆ ಮಾಡುವುದೇ ಇವರ ಕಾಯಕವಾಗಿದೆ.
ಪ್ರತೀ ತಿಂಗಳೂ ಮನೆಗೆ ಒಬ್ಬ ಗೂರ್ಖಾ ಬರುತ್ತಾನೆ. ಕೈಯಲ್ಲಿ ಪ್ರತೀ ಮನೆಯಿಂದ ಸಂಗ್ರಹಿಸಿದ ಹತ್ತು, ಇಪ್ಪತ್ತರ ನೋಟು ತೋರಿಸುತ್ತಾ..."ಸಾಬ್! ಮಾಮೂಲಿ ದೇದೋ...." ಎಂದು ಅರಚುತ್ತಾನೆ. ಇಲ್ಲ ಎಂದರೆ ಗೊಣಗುತ್ತಾ ಹೋಗುತ್ತಾನೆ.
ಇನ್ನು ಟ್ರಾಫಿಕ್ ಸಿಗ್ನಲ್ ಬಂದರೆ ಈ ಶಿಖಂಡಿ( ಖೋಜಾ)ಗಳ ಕಾಟ. ಕೆಂಪು ಸಿಗ್ನಲ್ ಬರುವುದನ್ನೇ ಕಾಯುತ್ತಿರುವ ಇವರು ಕೂಡಲೇ ದ್ವಿಚಕ್ರ ವಾಹನದವರ ದರೋಡೆಗಿಳಿಯುತ್ತಾರೆ. ಕೊಡದಿದ್ದಲ್ಲಿ, ಮುಖಕ್ಕೆ ಉಗುಳುವುದು, ಶಾಪ ಹಾಕುವುದು, ಕೆಟ್ಟ ಪದ ಉಪಯೋಗಿಸುವುದು...ಮಾಡಿ ಹಣ ಕೀಳುತ್ತಾರೆ.
ರೇಶನ್ ಅಂಗಡಿಗೆ ಹೋದರೆ ಎಲ್ಲ ಮಿಕ್ಸಿಂಗ್....ಅಕ್ಕಿಯಲ್ಲಿ ಕಲ್ಲು, ತೂಕದಲ್ಲಿ ಮೋಸ, ಬಾಯಿಗೆ ಬಂದ ಬೆಲೆ ಹೇಳಿ ನಮ್ಮನ್ನು ಹಗಲು ದರೋಡೆ ಮಾಡುವುದೇ ಇವರ ಕಾಯಕ.
ಇದಷ್ಟೇ ಅಲ್ಲ......ಇನ್ನೆಷ್ಟೋ ಬಿಟ್ಟು ಹೋಗಿವೆ. ಈ ದರೋಡೆಕೋರರಿಂದ ನಮ್ಮನ್ನು...ಮುಖ್ಯವಾಗಿ ಮಧ್ಯಮವರ್ಗದವರನ್ನು ರಕ್ಷಿಸುವವರಾರು?.........ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ, ನಮ್ಮ ಗೋಳು ಕೇಳುವವರಾರು?.
ವರದಿ : ಗುರು [Guru] at Friday, May 16, 2008 No comments:
ವರದಿ : ಗುರು [Guru] at Sunday, May 11, 2008 2 comments:
ಬೆಂಗಳೂರು ಮೇ ೧೦: ಅರೆರೇ...ನಮ್ಮ ಕರ್ನಾಟಕದ ಮಂದ ಬುದ್ದಿಯ ಮತದಾರರಿಗೆ ಬಹುಪರಾಕ್ ....ಮೊದಲ ಹಂತದ ಮತದಾನ ಮುಗಿದಿದೆ. ಆದರೆ ಕೇವಲ ಶೇಕಡಾ ೫೯ರಷ್ಟು ಮಾತ್ರ ಮತದಾನವಾಗಿದೆ. ಇದು ಖಂಡಿತಾ ತುಂಬಾ ಗಂಭೀರ ವಿಷಯ.
ಪಕ್ಕದ ತಮಿಳುನಾಡು, ಕೇರಳದ ಮಂದಿಗೆ ಇರುವ ಕನಿಷ್ಟ ಜ್ನಾನವೂ ನಮ್ಮ ಕನ್ನಡಿಗರಿಗಿಲ್ಲದಿರುವುದು ನಮ್ಮ ನಾಡಿನ ದೌರ್ಭಾಗ್ಯ. ಇದರಿಂದಲೇ ನಾವು ಕರ್ನಾಟಕದಲ್ಲಿ ಇರುವ ವಿದ್ಯಾವಂತರನ್ನು, ಅಂದರೆ ಕರ್ನಾಟಕದಲ್ಲಿ ವಿದ್ಯಾವಂತರ ಕೊರತೆ ಕಾಣಬಹುದು. ಖಂಡಿತಾ ನಮ್ಮ ರಾಜ್ಯ ಶಿಕ್ಷಣದಲ್ಲಿ ತುಂಬಾ ಹಿಂದುಳಿದಿದೆ. ದಕ್ಷಿಣ ಭಾರತದಲ್ಲೇ ಶಿಕ್ಷಣದಲ್ಲಿ ಅತೀ ಹಿಂದುಳಿದಿರುವ ರಾಜ್ಯವಾಗಿದೆ. ಭಾರತ ಸರಕಾರ ಖಂಡಿತಾ ...
ಈ ಬಾರಿ ಕೂಡಾ ಕಿಚಡಿ ಸರಕಾರವೇ ಗತಿ. ಏಕೆಂದರೆ ಕೇವಲ ಶೇಕಡಾ ೮೦ ಮತದಾನವಾದರೆ ಮಾತ್ರ ನಾವು ಒಂದು ಪಕ್ಷದ ಸರಕಾರವನ್ನು ನಿರೀಕ್ಷಿಸಬಹುದು. ಆದರೆ ಈಗ ಮೊದಲ ಹಂತದ ಚುನಾವಣೆ ಮುಗಿದಿರುವುದರಿಂದ ಇನ್ನು ಮತ್ತೆ ರಾಷ್ಟ್ರಪತಿ ಆಡಳಿತದ ಕರಿನೆರಳು ಮತ್ತೆ ನಮ್ಮ ಮೇಲೆ ತೂಗುತ್ತಿದೆ. ಖಂಡಿತಾ ಈ ಬಾರಿ ಕೂಡಾ ಕಿಚಡಿ ಸರಕಾರ ಬರಲಿದೆ. ಇದು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರಕಾರ...ಮತ್ತೆ ಕಿಚಡಿ...ಮತ್ತ...
ವರದಿ : ಗುರು [Guru] at Saturday, May 10, 2008 No comments:
ವರದಿ : ಗುರು [Guru] at Thursday, May 08, 2008 3 comments:
ವರದಿ : ಗುರು [Guru] at Sunday, May 04, 2008 5 comments:
ಬೆಂಗಳೂರು ಮೇ.೨: ಎಲ್ಲ ಕನ್ನಡಿಗರಿಗೂ ನನ್ನ ನಮಸ್ಕಾರ. ಇತ್ತೀಚೆಗೆ ಬೆಂಗಳೂರಿನಲ್ಲಿ ಒಂದು ಬ್ಲಾಗಿಸ್ಟ್ ಸಮ್ಮೇಳನ ನಡೆಯಿತು. ಅದು ತುಂಬಾ ಯಶಸ್ವಿಯಾಗಿ ನಡೆದದ್ದು ಎಲ್ಲ ಬ್ಲಾಗಿಗರಿಗೂ ಸಂತೋಷ ತಂದ ವಿಚಾರ. ಆದರೆ ಅಲ್ಲೇನೋ ಕೊರತೆ ಇತ್ತು ಅನಿಸಿತ್ತು...ಅಲ್ವಾ?. ಎಲ್ಲರೂ ತಮ್ಮ ಕೈಯಿಂದಾದ ಸಹಾಯ ಮಾಡಿ...ಒಂದು ದೊಡ್ಡ ಸಮ್ಮೇಳನವನ್ನೇ ಮಾಡಿದರೆ ಹೇಗೆ?.
ಈ ವಿಚಾರದಲ್ಲಿ ನಾನು ತುಂಬಾ ತಲೆಕೆಡಿಸಿಕೊಂಡು ಈ ಒಂದು ಪ್ರಸ್ತಾಪ ತಮ್ಮ ಮುಂದಿಡುತ್ತಿದ್ದೇನೆ. ಎಲ್ಲಾ ಕನ್ನಡ ಬ್ಲಾಗಿಗರು ಒಂದಾಗಿ ಸೇರಿ, ತಮ್ಮ ಬಲಪ್ರದರ್ಶನ ಮಾಡಿ, ಬ್ಲಾಗ್ ಜಗತ್ತಿನಲ್ಲಿ ಕನ್ನಡಿಗರ ಪ್ರಾಬಲ್ಯವನ್ನು ಎತ್ತಿ ಹಿಡಿದು, ತಾವೇನೂ ಯಾರಿಗೂ ಕಮ್ಮಿ ಇಲ್ಲ ಎಂದು ಇತರರಿಗೆ ತೋರಿಸುವ ಹಾಗೆ...ಹ್ಯಾಗೆ?. ಇದನ್ನು ರಾಷ್ಟ್ರೀಯವಾಗಿ, ಅಂತರರಾಷ್ಟ್ರೀಯವಾಗಿಯೂ ಮಾಡಬಹುದಲ್ಲ?.
ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..? | Who is Ivanka Trump? Here is a brief profile - Kannada Oneindia
» ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..?
Updated: Tuesday, November 28, 2017, 19:13 [IST]
ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..? | Oneindia Kannada
ಇವಾಂಕಾ ಟ್ರಂಪ್ ಯಾರು? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಅಂತ ಒಂದೇ ವಾಕ್ಯದಲ್ಲಿ ಹೇಳಿಮುಗಿಸಿದರೆ ಸಾಕಾ..? ಖಂಡಿತ ಇಲ್ಲ, ಈ ಚೆಂದುಳ್ಳಿ ಚೆಲುವೆ ಮೂರು ಮಕ್ಕಳ ತಾಯಿ ಅಂದ್ರೆ ಹಲವರು ನಂಬಲಿಕ್ಕಿಲ್ಲ!
ಗ್ಯಾಲರಿ : ಸುಂದರಿ ಇವಾಂಕಾಗೆ ಸಿಂಗಾರಗೊಂಡ ಮುತ್ತಿನ ನಗರಿ
ಅಮೆರಿಕದ ಟೆಲಿವಿಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಇವಾಂಕಾ ಫ್ಯಾಶನ್ ಡಿಸೈನರ್ ಆಗಿಯೂ ಪ್ರಸಿದ್ಧಿ ಪಡೆದವರು. ಪ್ರಸ್ತುತ ಭಾರತದ ಪ್ರವಾಸದಲ್ಲಿರುವ ಇವಾಂಕಾ ಹೈದರಾಬಾದಿಗೆ ಕಾಲಿಟ್ಟು, ಮುತ್ತಿನ ನಗರಿಯ ಮತ್ತೇರಿಸಿದ್ದಾರೆ. ಹೈದರಾಬಾದಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜಾಗತಿಕ ಉದ್ಯಮಶೀಲತೆ ಶೃಂಗಸಭೆ (ಜಿಇಎಸ್) ಗೆ ಆಗಮಿಸಿರುವ ಅವರ ಸಂಕ್ಷಿಪ್ತ ವ್ಯಕ್ತಿ ಪರಿಚಯ ಇಲ್ಲಿದೆ.
ಚಹಾವಾಲಾನಿಂದ ಪ್ರಧಾನಿ, ನಿಮ್ಮ ಪರಿವರ್ತನೆ ಅಮೋಘ: ಇವಾಂಕಾ
ಒಂದಷ್ಟು ಗ್ಲಾಮರ್, ಸಾಕಷ್ಟು ಬುದ್ಧಿಮತ್ತೆ, ವ್ಯವಹಾರ ಕೌಶಲ್ಯ, ಸೌಂದರ್ಯ, ಪ್ರಖ್ಯಾತಿ ಎಲ್ಲವುಗಳ ಮಿಶ್ರಣ ಇವಾಂಕಾ ಟ್ರಂಪ್. ತಂದೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗುವಲ್ಲಿ ಇವಾಂಕಾರ ಅವಿರತ ಪ್ರಚಾರ, ಶ್ರಮವನ್ನು ಅಲ್ಲಗಳೆಯುವಂತಿಲ್ಲ.
ಇವಾಂಕಾ ತಾಯಿ ಯಾರು..?
ಇವಾಂಕಾ ಟ್ರಂಪ್, ಡೊನಾಲ್ಡ್ ಟ್ರಂಪ್ ಮತ್ತು ಇವಾನಾ ಜೆನಿಕೊವಾ ಅವರ ಪುತ್ರಿ. ಇವಾನಾ ಅವರು ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ. 1991 ರಲ್ಲಿ ಟ್ರಂಪ್ ಜೊತೆ ಇವಾನಾ ವಿಚ್ಛೇದನ ಪಡೆದ ಮೇಲೂ ಇವಾಂಕಾ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಬಾಂಧವ್ಯ ಮಾತ್ರ ಮೊದಲಿನ ಹಾಗೇ ಇತ್ತು. ಇಂದಿಗೂ ಡೊನಾಲ್ಡ್ ಟ್ರಂಪ್ ಗೆ ಇವಾಂಕಾ ಮೇಲೆ ಎಲ್ಲಿಲ್ಲದ ಪ್ರೀತಿ. ಇವಾಂಕಾಗೂ ತಂದೆ ಎಂದರೆ ಪ್ರಾಣ.
ಇವಾಂಕಾಗೆ ಶಾಲೆ ಅಂದ್ರೆ ಜೈಲು!
ಇವಾಂಕಾ ಟ್ರಂಪ್ ಹುಟ್ಟಿದ್ದು 1981, ಅಕ್ಟೋಬರ್ 30 ರಂದು ಅಮೆರಿಕದ ನ್ಯೂಯಾರ್ಕ್ ನ ಮ್ಯಾನ್ಹಟ್ಟನ್ ನಲ್ಲಿ. ತಂದೆ ತಾಯಿಯ ವಿಚ್ಛೇದನದ ನಂತರ ಬೋರ್ಡಿಂಗ್ ಶಾಲೆಯಲ್ಲೇ ಓದಿದ ಇವಾಂಕಾ ತನ್ನ ಶಾಲೆಯನ್ನು ಕೆಲವೆಡೆ 'ಜೈಲು' ಎಂದು ವ್ಯಾಖ್ಯಾನಿಸಿದ್ದೂ ಇದೆ! ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ ಪಡೆದ ಇವಾಂಕಾ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಯನ್ನು ಅಸ್ಖಲಿತವಾಗಿ ಮಾತನಾಡಬಲ್ಲರು.
ಜಿಇಎಸ್ 2017: ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿರುವ ಟ್ರಂಪ್ ಪುತ್ರಿ
ಇವಾಂಕಾರ ವ್ಯವಹಾರ ಕೌಶಲ್ಯ
ಕುಟುಂಬದ ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳುವ ಮೊದಲು ಇವಾಂಕಾ ಫಾರೆಸ್ಟ್ ಸಿಟಿ ಎಂಟರ್ ಪ್ರೈಸಸ್ ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ 2007 ರಲ್ಲಿ ವಜ್ರ ಮತ್ತು ಚಿನ್ನದ ವ್ಯಾಪಾರ ಶುರುಮಾಡಿದರು. ಕೆನಡಾ, ಕುವೈತ್, ಸೌದಿ ಅರೇಬಿಯಾ ಸೇರಿದಮತೆ ಹಲವು ದೇಶಗಳೊಂದಿಗೆ ವ್ಯವಹಾರ ಮಾಡುವಲ್ಲಿ ಅವರು ಸಫಲರಾದರು.
ರೂಪದರ್ಶಿಯಾಗಿ ಮಿಂಚಿದ ಇವಾಂಕಾ
ಚಿಕ್ಕ ವಯಸ್ಸಿನಿಂದಲೂ ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಸಾಕಷ್ಟು ಒಲವು ಹೊಂದಿದ್ದ ಇವಾಂಕಾ ಬೋರ್ಡಿಂಗ್ ಶಾಲೆಯಲ್ಲಿ ಓದುವಾಗಲೇ ಮಾಡೆಲಿಂಗ್ ಆರಂಭಿಸಿದ್ದರು. ಡೊನಾಲ್ಡ್ ಟ್ರಂಪ್ ಆರ್ಗನೈಸೇಶನ್ ಗೆ ಸೇರಿಕೊಳ್ಳುವವರೆಗೂ ಇವಾಂಕಾ ಮಾಡೆಲಿಂಗ್ ಮಾಡುತ್ತಲೇ ಇದ್ದರು. ನಂತರ ತಾವೇ ವಿನ್ಯಾಸಗೊಳಿಸಿದ ಆಭರಣ ಮತ್ತು ಬಟ್ಟೆಗಳ ಜಾಹೀರಾತುಗಳ ಪ್ರಚಾರಕ್ಕಷ್ಟೇ ರೂಪದರ್ಶಿಯಾದರು.
ಟಿವಿ ಕಾರ್ಯಕ್ರಮದಲ್ಲೂ ಭಾಗಿ
ಡೊನಾಲ್ಡ್ ಟ್ರಂಪ್ ರ ಟಿವಿ ಕಾರ್ಯಕ್ರಮಗಳಲ್ಲೊಂದಾಗ ದಿ ಎಪ್ರಂಟೈಸ್ 5 ನ ಕೆಲವು ಎಪಿಸೋಡ್ ಗಳಲ್ಲೂ ಅವರು ಕೆಲಸ ಮಾಡಿದ್ದಾರೆ. ಬಾರ್ನ್ ರಿಚ್ ಎಂಬ ಸಾಕ್ಷ್ಯಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಹಲವು ಪುಸ್ತಕಗಳನ್ನೂ ಬರೆದಿರುವ ಇವರ ಕೃತಿಗಳಲ್ಲಿ he Trump Card: Playing to Win in Work and Life, Women Who Work: Rewriting the Rules for Success ಮುಂತಾದವು ಪ್ರಸಿದ್ಧವಾದವು.
ಟ್ರಂಪ್ ಆಪ್ತ ಸಲಹೆಗಾರ್ತಿಯಾಗಿ ಇವಾಂಕಾ
2016 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಹಗಲಿರುಳೂ ಶ್ರಮಿಸಿದ್ದು ಇದೇ ಇವಾಂಕಾ ಟ್ರಂಪ್. ಅಪ್ಪನ ಗೆಲುವಿಗಾಗಿ ಹಲವು ಅತ್ಯುತ್ತಮ ಸಲಹೆಗಳನ್ನೂ ನೀಡಿ ತಂದೆಗೆ ಮತ್ತಷ್ಟು ಆಪ್ತ ಮಗಳಾದವರು ಇವಾಂಕಾ. ಸದ್ಯಕ್ಕೆ ಅಮೆರಿಕ ಅಧ್ಯಕ್ಷರ ಸಲಹಾಗಾರ್ತಿಯಾಗಿ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಮನಮೆಚ್ಚಿದ ಹುಡುಗ
ಇವಾಂಕಾ ಟ್ರಂಪ್ ಕಾಲೇಜು ದಿನಗಳಲ್ಲಿ ಆತ್ಮೀಯವಾಗಿ ಓಡಾಡುತ್ತಿದ್ದರೂ, ಕೊನೆಗೆ ಇಷ್ಟಪಟ್ಟಿದ್ದು ಮಾತ್ರ ಜುರೆಡ್ ಕುಶ್ನರ್ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು. ಆದರೆ ಕುಶ್ನರ್ ಮನೆಯಲ್ಲಿ ಅವರಿಬ್ಬರ ಮದುವೆಗೆ ಒಪ್ಪದ ಕಾರಣ ಕೆಲದಿನಗಳ ಒಬ್ಬರೂ ಬೇರೆಯೇ ಉಳಿದರು. ಆದರೆ 2008 ರಲ್ಲಿ ಮತ್ತೆ ಒಂದಾದ ಜೋಡಿ, 2009 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಯೊಂದಿಗೆ ಇದೀಗ ಒಬ್ಬ ಮಗಳು ಮತ್ತು ...
ಇವಾಂಕಾ ಯಾಯಿಲ್ ಆದ ಕತೆ ಗೊತ್ತೆ?
ಪ್ರೆಸ್ಬಿತೆರಿಯನ್ ಕ್ರೈಸ್ತಳಾಗಿ ಹುಟ್ಟಿದ ಇವಾಂಕಾ 2009ರಲ್ಲಿ ಯಹೂದಿ ಮತಕ್ಕೆ ಮತಾಂತರವಾದರು. ಯಹೂದಿ ತತ್ತ್ವಗಳನ್ನೂ, ಅಲ್ಲಿನ ಉಪವಾಸ ಆಚರಣೆಗಳನ್ನು ಇಂದಿಗೂ ಇವಾಂಕಾ ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.